ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌ ಡಾ.ವಹೀದಾ ಸುಲ್ತಾನಾ ನಿಧನ – Kannada News | Mangaluru university retired professor dr Waheeda Sultan Passes Away From heart attack On August 6th In Mysuru

ಮಂಗಳೂರು, (ಆಗಸ್ಟ್ 06): ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್‌ ಡಾ.ವಹೀದಾ ಸುಲ್ತಾನಾ (70) ನಿಧನರಾಗಿದ್ದಾರೆ. ಮೈಸೂರು ಕಲ್ಯಾಣಗಿರಿ ನಿವಾಸಿಯಾಗಿರುವ ಡಾ.ವಹೀದಾ ಸುಲ್ತಾನಾ ಅವರಿಗೆ ಇಂದು (ಆಗಸ್ಟ್ 06) ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಸುಮಾರು 3 ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದು, ವಿಭಾಗ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು. ಅವರು ಪತಿ, ಇಬ್ಬರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ(ಆಗಸ್ಟ್ 07) ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಂಗಳೂರು ವಿವಿ ಮಹಿಳಾ ಹಾಸ್ಟೆಲ್‌ ವಾರ್ಡನ್‌ ಆಗಿ, ಅಲ್ಪಸಂಖ್ಯಾತರು, ಇತರ ಒಬಿಸಿ ವಿದ್ಯಾರ್ಥಿಗಳ ಐಎಎಸ್‌ ಕೆಎಎಸ್‌ ಕೋಚಿಂಗ್‌ ಕೋಆರ್ಡಿನೇಟರ್‌ ಆಗಿ ಸೇವೆ ಸಲ್ಲಿಸಿದ್ದರು. ಮಾಧ್ಯಮ, ಆರೋಗ್ಯ, ತಂತ್ರಜ್ಞಾನ, ಮಹಿಳಾ ವಿಚಾರಗಳು ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಲೇಖನಗಳನ್ನು ಬರೆದಿರುವುದಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಪಡಿಸಿದ್ದಾರೆ.

ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಹಾಂಗ್‌ ಕಾಂಗ್‌ ಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿಯಾಗಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಾರ್ಪೊರೇಟ್‌ ಕಮ್ಯುನಿಕೇಶನ್ಸ್‌, ಮಹಿಳೆ ಮತ್ತು ಮೀಡಿಯಾ, ಆರೋಗ್ಯ ಸಂವಹನ ಮತ್ತು ಮಹಿಳೆ ಇತ್ಯಾದಿ ವಿಚಾರಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದರು. ಏಷ್ಯನ್‌ ಕಾಂಗ್ರೆಸ್‌ ಫಾರ್‌ ಮೀಡಿಯಾ ಆ್ಯಂಡ್ ಕಮ್ಯುನಿಕೇಶನ್‌ ಇದರ ರಾಷ್ಟ್ರೀಯ ಸಮಿತಿಯ ಉಪ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರ ನಿಧನಕ್ಕೆ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮಾಮ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಸಿರು ಮಾರ್ಗದ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಆ.7ರಂದು ರೈಲು ಸಂಚಾರದಲ್ಲಿ ಬದಲಾವಣೆ – Kannada News | Changes In Namma Metro Green Line services, train run Every 20 minutes instead of 10 mnt On August 7th

ಬೆಂಗಳೂರು, (ಆಗಸ್ಟ್ 06): ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ  (Green Line Namma Metro) ಸಂಚಾರದಲ್ಲಿ ನಾಳೆ (ಆಗಸ್ಟ್ 7) ಮಹತ್ವದ ಬದಲಾವಣೆ ಆಗಲಿದೆ. ನಿತ್ಯ ಸಾವಿರಾರು ಜನರು ಸಂಚರಿಸುವ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಆರ್‌ಆರ್‌ಸಿ (CRRC) ಸಂಸ್ಥೆಯ ನೂತನ ರೈಲುಗಳನ್ನು ಮೆಟ್ರೋ ನಿಗಮದ ಕಾರ್ಯಾಚರಣೆಗೆ ಸೇರ್ಪಡೆಗೊಳಿಸಲಾಗುತ್ತದೆ. ಹಾಗೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಮುಖ್ಯ ತಪಾಸಣೆಗೆ ಪೂರ್ವಭಾವಿಯಾಗಿ, ಬಿಎಂಆರ್‌ಸಿಎಲ್ ಹಾಗೂ ಸಿಎಂಆರ್‌ಎಸ್ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಶುಕ್ರವಾರ ಈ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್​​​ಸಿಎಲ್ ತಿಳಿಸಿದೆ.

ಬದಲಾವಣೆ ಏನು?

ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30ರಿಂದ 11:00 ಗಂಟೆಯವರೆಗೆ, ಪ್ರಯಾಣಿಕ ಸೇವೆ ಮುಕ್ತಾಯಗೊಳ್ಳುವವರೆಗೆ, ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

ಇದನ್ನೂ ಓದಿ: ಪಿಓಪಿ ಗಣೇಶ ಮೂರ್ತಿ ನಿಷೇಧ, ಶಬ್ಧ ಮಾಲೀನ್ಯಕ್ಕೂ ಅವಕಾಶವಿಲ್ಲ: ಈಶ್ವರ್​​​​ ಖಂಡ್ರೆ ಸೂಚನೆ

ಅದೇ ರೀತಿ ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ರಾಜಧಾನಿ ಬೆಂಗಳೂರಿನ ಮೆಟ್ರೋ ಜಾಲವು 96 ಕಿಲೋ ಮೀಟರ್ ವಿಸ್ತರಿಸಿದೆ. ಹೆಚ್ಚಿನ ಪ್ರಯಾಣಿಕರ ನಿರ್ವಹಣೆಗೆ ಹಾಲಿ ರೈಲುಗಳು ಸಾಲುತ್ತಿಲ್ಲ. ಇದರಿಂದ ನಿತ್ಯ ದಟ್ಟಣೆ, ನೂಕು ನುಗ್ಗಲು ಉಂಟಾಗಿದೆ. ಇದರ ನಿಯಂತ್ರಣ, ಸಮಸ್ಯೆ ಪರಿಹಾರಾರ್ಥವಾಗಿ ಚೀನಾದಲ್ಲಿ ನಿರ್ಮಿಸಿದ ಸುಮಾರು 21 ರೈಲುಗಳು ಆಗಮಿಸಲಿವೆ. ಇದರಲ್ಲಿ ಮೂರು ರೈಲುಗಳು ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ. ಇದರ ನಿಮಿತ್ತ ಒಂದಷ್ಟು ತಪಾಸಣೆ ಕೈಗೊಳ್ಳಲಾಗುತ್ತದೆ. ಹೀಗಾಗಿ ಶುಕ್ರವಾರ ಒಂದು ದಿನ ರಾತ್ರಿ ಹಸಿರು ಮಾರ್ಗದ ರೈಲುಗಳ (ಯಶವಂತಪುರ-ಮಾದಾವರ) ಸಂಚಾರದಲ್ಲಿ ಬದಲಾವಣೆ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ದಿನದ ಈ ತಾತ್ಕಾಲಿಕ ಅಡಚಣೆಗೆ ಸಹಕರಿಸುವಂತೆ ಬಿಎಂ ಆರ್ ಸಿ ಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದು, ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಅದಕ್ಕನುಗುಣವಾಗಿ ಪ್ರಯಾಣ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಕುರುಡು ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ – Kannada News | ‘Gen Z Is Not Anti National, I trust them blindly,; RSS Chief Mohan Bhagwat Says

ನವದೆಹಲಿ, ಆಗಸ್ಟ್ 6: ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜೆನ್​-ಜಿಗಳು ಈ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪೊಲೀಸರ ಲಾಠಿಚಾರ್ಜ್ ರುಚಿಯನ್ನೂ ನೋಡಿದ್ದರು. ಈ ಪ್ರತಿಭಟನೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದರ ಬೆನ್ನಲ್ಲೇ ಇಂದು ಬೃಹತ್ ಯುವ ಸಮಾವೇಶವೊಂದರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂವಾದದಲ್ಲಿ ಮಾತನಾಡಿದ ಅವರು ಜೆನ್​ ಜಿ ಕುರಿತಾಗಿ ಬಹಳ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪ್ರತಿಭಟನೆ ನಡೆಸಿದವರನ್ನು ‘ದೇಶವಿರೋಧಿಗಳು’ ಎಂದು ಕರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜೆನ್-ಜಿ ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಅವರು ದೇಶವಿರೋಧಿಗಳಲ್ಲ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ. ಹೊಸ ಪೀಳಿಗೆ ಅಂದರೆ ಜೆನ್ ಜಿ ಮತ್ತು ಜೆನ್ ಆಲ್ಫಾ ನಮ್ಮ ಪ್ರಸ್ತುತ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ದೇಶಭಕ್ತಿ ಮತ್ತು ಸೇವೆಯ ಪ್ರಾಮಾಣಿಕ ಕರೆಗೆ ಅವರು ಸ್ಪಂದಿಸುತ್ತಾರೆ” ಎಂದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮಾತುಕತೆಯ ಕುರಿತು ಮಾತನಾಡಿದ ಮೋಹನ್ ಭಾಗವತ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಹ ಸರ್ವಸಮ್ಮತಿಯನ್ನು ತಲುಪುವ ಒಂದು ಮಾರ್ಗವಾಗಿದೆ. ಹಲವು ಅಭಿಪ್ರಾಯಗಳು ಒಂದೆಡೆ ಸೇರಿ ಚರ್ಚೆಯ ನಂತರ ಸರ್ವಸಮ್ಮತಿ ರೂಪುಗೊಳ್ಳುತ್ತದೆ. ಆ ಚರ್ಚೆಯು ಮಾತುಕತೆಯ ಮೂಲಕವೂ ನಡೆಯಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಒಂದು ನಿಯಮಗಳಿರುತ್ತವೆ. ಆ ನಿಯಮಗಳನ್ನು ನಾವು ಮೀರಬಾರದು. ಯುವಜನರ ಸಂಕಷ್ಟಗಳು ನಿಜವಾದುದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ” ಎಂದು ಅವರು ಹೇಳಿದರು.

ಜುಲೈ 20ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪ್ರತಿಭಟನೆಯ ಕೇಂದ್ರಸ್ಥಳವಾದ ಜಂತರ್ ಮಂತರ್‌ನಲ್ಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ಕೆಲವರ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಿದ ದೃಶ್ಯಗಳು ಕಂಡುಬಂದಿದ್ದವು.

Source link

IND vs SL: ಪ್ಲೇಯಿಂಗ್ 11 ಇರಲ್ಲ, ರನ್, ವಿಕೆಟ್ ಲೆಕ್ಕಕ್ಕಿಲ್ಲ; ಅಭ್ಯಾಸ ಪಂದ್ಯದ ನಿಯಮಗಳಿವು – Kannada News | Ind vs SL Test Warm up: Unpack Practice Match Rules and Why Stats Don’t Count

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಟೆಸ್ಟ್ ತಂಡ ಶ್ರೀಲಂಕಾ (India vs Sri Lanka) ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ ಆರಂಭವಾಗಲಿದೆ. ಆದರೆ ಆ ಪಂದ್ಯಕ್ಕೂ ಮುನ್ನ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ವಾಸ್ತವವಾಗಿ ಈ ಅಭ್ಯಾಸ ಪಂದ್ಯವನ್ನು ಈ ಮೊದಲು 4 ದಿನಗಳಿಗೆ ನಿಗದಿಪಡಿಸಲಾಗಿತ್ತು. ಆದರೆ 4 ದಿನಗಳನ್ನು 3 ದಿನಗಳಿಗೆ ಇಳಿಸಲಾಗಿದೆ. ಇದರರ್ಥ ಆಗಸ್ಟ್ 7 ರಿಂದ ಆರಂಭವಾಗುವ ಈ ಅಭ್ಯಾಸ ಪಂದ್ಯ ಆಗಸ್ಟ್ 9 ಕ್ಕೆ ಮುಗಿಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ಇಲೆವೆನ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದ ನಿಯಮಗಳೇನು? ಈ ಪಂದ್ಯದಲ್ಲಿ ಪ್ಲೇಯಿಂಗ್ 11 ಇರುವುದಿಲ್ಲ ಏಕೆ? ಬೌಲರ್​ಗಳು ಪಡೆದ ವಿಕೆಟ್​ಗಳು ಲೆಕ್ಕಕ್ಕಿಲ್ಲ ಏಕೆ? ಹಗೆಯೇ ಬ್ಯಾಟರ್​ಗಳು ಬಾರಿಸಿದ ರನ್​ಗಳು ಲೆಕ್ಕಕ್ಕಿಲ್ಲ ಏಕೆ ಎಂಬುದನ್ನು ನೋಡೋಣ.

ಪ್ಲೇಯಿಂಗ್ 11 ಇರುವುದಿಲ್ಲ

ಮೊದಲಿಗೆ ಈ ಅಭ್ಯಾಸ ಪಂದ್ಯಕ್ಕೆ ಪ್ಲೇಯಿಂಗ್ 11 ಏಕೆ ಇರುವುದಿಲ್ಲ ಎಂಬುದನ್ನು ನೋಡುವುದಾದರೆ.. ಹೆಸರೇ ಹೇಳುವಂತೆ ಇದು ಅಭ್ಯಾಸ ಪಂದ್ಯ. ಮುಖ್ಯ ಪಂದ್ಯಕ್ಕೂ ಮುನ್ನ ಆಟಗಾರರು ತಮ್ಮ ಲಯ ಕಂಡುಕೊಳ್ಳಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಈ ಅಭ್ಯಾಸ ಪಂದ್ಯ ಅನುವು ಮಾಡಿಕೊಡುತ್ತದೆ. ಹೀಗಾಗಿ ಅಭ್ಯಾಸ ಪಂದ್ಯದಲ್ಲಿ ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್ ಮಾಡಬಹುದು. ಅಂದರೆ ಈ ಪಂದ್ಯಕ್ಕೆ ನಿರ್ದಿಷ್ಟ ಪ್ಲೇಯಿಂಗ್ ಇಲೆವೆನ್ ಇರುವುದಿಲ್ಲ. ಈ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡದ ಎಲ್ಲಾ 15 ಆಟಗಾರರು ಬ್ಯಾಟಿಂಗ್ ಮಾಡಬಹುದು. ಹಾಗೆಯೇ ನಾಯಕನಿಗೆ ಸಾಕೆನಿಸಿದಾಗ ಕ್ರೀಸ್​ನಲ್ಲಿರುವ ಬ್ಯಾಟ್ಸ್‌ಮನ್​ನ ಮತ್ತೆ ವಾಪಸ್ ಪೆವಿಲಿಯನ್​ಗೆ ಕರೆಸಿಕೊಳ್ಳಬಹುದು. ಅವನ ಬದಲಿಗೆ ಬೇರೆ ಆಟಗಾರನಿಗೆ ಬ್ಯಾಟಿಂಗ್‌ ಮಾಡಲು ಅವಕಾಶ ನೀಡಬಹುದು. ಹಾಗೆಯೇ ನಾಯಕನು ಬಯಸಿದರೆ ಎಲ್ಲಾ ಆಟಗಾರರು ಬೌಲಿಂಗ್ ಮಾಡುಬಹುದು.

ದಾಖಲೆಗಳಲ್ಲಿ ದಾಖಲಾಗಲ್ಲ

ಇನ್ನು ಈ ಅಭ್ಯಾಸ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ರನ್ ಗಳಿಸಿದರೆ, ಬೌಲರ್ ವಿಕೆಟ್ ಪಡೆದರೆ ಅದ್ಯಾವುದು ದಾಖಲೆ ಪುಸ್ತಕದಲ್ಲಿ ದಾಖಲಾಗಲ್ಲ. ಒಬ್ಬ ಬ್ಯಾಟ್ಸ್‌ಮನ್ ಎಷ್ಟೇ ರನ್ ಗಳಿಸಿದರೂ ಅದು ಅಭ್ಯಾಸಕ್ಕಾಗಿ ಮಾತ್ರ. ಈ ರನ್‌ಗಳು ಅಥವಾ ವಿಕೆಟ್‌ಗಳು ಅವರ ದಾಖಲೆಯಲ್ಲಿ ಎಣಿಕೆಯಾಗುವುದಿಲ್ಲ. ಆಡಿದ ಪಂದ್ಯಗಳ ಸಂಖ್ಯೆಯನ್ನು ಸಹ ಲೆಕ್ಕಿಸಲಾಗುವುದಿಲ್ಲ. ಯಾರಾದರೂ ಶತಕ ಗಳಿಸಿದರೆ, ಒಬ್ಬ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದರೆ ಅದನ್ನು ದಾಖಲೆ ಪುಸ್ತಕಗಳಲ್ಲಿ ಎಣಿಸಲಾಗುವುದಿಲ್ಲ ಅಥವಾ ಅವರ ಅಂಕಿಅಂಶಗಳಲ್ಲಿ ಸೇರಿಸಲಾಗುವುದಿಲ್ಲ. ಇದರರ್ಥ ಅದು ಅವರ ಶ್ರೇಯಾಂಕಗಳ ಮೇಲೆ ಪರಿಣಾಮ ಬೀರುವುದಿಲ್ಲ.

WTC Final: ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ಗೇರಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು?

ಪಿಚ್​ನಲ್ಲಿ ವ್ಯತ್ಯಾಸವಿರಲ್ಲ

ಅಭ್ಯಾಸ ಪಂದ್ಯಗಳಿಗೂ ಪಿಚ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗುತ್ತದೆ, ಅಂತರರಾಷ್ಟ್ರೀಯ ಪಂದ್ಯಕ್ಕೆ ಸಿದ್ಧಪಡಿಸುವ ರೀತಿಯಲ್ಲಿಯೇ ಮೈದಾನವನ್ನು ಸಿದ್ಧಪಡಿಸಲಾಗುತ್ತದೆ. ಇದು ಅಭ್ಯಾಸ ಪಂದ್ಯವಾಗಿದ್ದರೂ, ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಪಿಚ್ ಅನ್ನು ಮಾನದಂಡಗಳ ಪ್ರಕಾರವೇ ರೂಪಿಸಲಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ – Kannada News | Monisha talks about experience on City Lights movie shooting

ದುನಿಯಾ ವಿಜಯ್ (Duniya Vijay) ನಿರ್ದೇಶನ ಮಾಡಿ, ವಿನಯ್ ರಾಜ್​​ಕುಮಾರ್ ಮತ್ತು ದುನಿಯಾ ವಿಜಿ ಪುತ್ರಿ ಮೋನಿಷಾ ನಟಿಸಿರುವ ‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣವೆಲ್ಲ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತು. ಈ ಸಂದರ್ಭದಲ್ಲಿ ಸಿನಿಮಾದ ನಟ, ನಟಿಯರು ಇತರೆ ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಂಡರು. ಮೊದಲ ಬಾರಿ ನಾಯಕಿ ಆಗಿರುವ ಮೋನಿಷಾ, ಚಿತ್ರೀಕರಣದಲ್ಲಿ ಕಂಡ ಬೆಂಗಳೂರಿನ ಭಿನ್ನ ಮುಖದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Source link

Monsoon Laundry Tips: ಮಳೆಗಾಲದಲ್ಲಿ ಒಗೆದ ಬಟ್ಟೆಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ತಂತ್ರ ಪಾಲಿಸಿ – Kannada News | Laundry tricks to keep clothes smelling fresh

ಬಟ್ಟೆಗಳನ್ನು ಒಣಗಿಸುವುದು ಮತ್ತು ಒಗೆದ ಬಟ್ಟೆಗಳು ವಾಸನೆ (smell) ಬರದಂತೆ, ಫ್ರೆಶ್‌ ಆಗಿ ಇಟ್ಟುಕೊಳ್ಳುವುದು ಮಳೆಗಾಲದಲ್ಲಿ ದೊಡ್ಡ ಸವಾಲಿನ ಕೆಲಸವಾಗಿದೆ. ಬಿಸಿಲಿನ ಕೊರತೆ, ಮತ್ತು ಗಾಳಿಯಲ್ಲಿ ಅತಿಯಾದ ಆರ್ದ್ರತೆಯಿಂದಾಗಿ, ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಕೆಲವೊಮ್ಮೆ, ಉತ್ತಮ ಡಿಟರ್ಜೆಂಟ್‌ನಿಂದ ಡ್ರೆಸ್‌ ವಾಶ್‌ ಮಾಡಿದ್ರೂ, ಬಟ್ಟೆಗಳಿಂದ ದುರ್ವಾಸನೆ ಹೊರಸೂಸಲು ಪ್ರಾರಂಭಿಸುತ್ತವೆ. ಈ ವಾಸನೆ ಬರುವ ಬಟ್ಟೆಯನ್ನು ಧರಿಸಿದರೆ ಖಂಡಿತ ಮುಜುಗರ ಉಂಟಾಗುತ್ತದೆ. ಆದ್ದರಿಂದ ಈ ಕೆಲವೊಂದು ಪದಾರ್ಥಗಳ ಸಹಾಯದಿಂದ ಬಟ್ಟೆ ಒಗೆಯುವ ಮೂಲಕ ಒಗೆದ ಬಟ್ಟೆಗಳು ವಾಸನೆ ಬರದಂತೆ, ತಾಜಾ ಮತ್ತು ಪರಿಮಳಯುಕ್ತವಾಗಿರುವಂತೆ ನೋಡಿಕೊಳ್ಳಬಹುದು.

ಒಗೆದ ಬಟ್ಟೆಗಳು ವಾಸನೆ ಬರದಂತೆ ತಡೆಯಲು  ಈ ಟಿಪ್ಸ್‌ ಪಾಲಿಸಿ:

ಬಿಳಿ ವಿನೆಗರ್ ಬಳಕೆ: ಬಿಳಿ ವಿನೆಗರ್ ಬಟ್ಟೆಗಳಿಂದ ಕೊಳೆತ ವಾಸನೆಯನ್ನು ತೆಗೆದುಹಾಕಲು ತುಂಬಾನೇ ಸಹಕಾರಿಯಾಗಿದೆ. ಬಟ್ಟೆಗಳನ್ನು ಒಗೆಯುವಾಗ, ಕೊನೆಯಲ್ಲಿ ವಾಶ್‌ಟಬ್ ಅಥವಾ ಬಕೆಟ್‌ಗೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿ ಅದರಲ್ಲಿ ಸ್ವಲ್ಪ ಹೊತ್ತು ಬಟ್ಟೆಯನ್ನು ನೆನೆಸಿಡಿ. ಇದು ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಒಣಗಿದ ನಂತರ, ವಿನೆಗರ್ ವಾಸನೆ ಮಾಯವಾಗುತ್ತದೆ, ಬಟ್ಟೆಗಳು ತಾಜಾವಾಗಿರುತ್ತವೆ.

ಅಡಿಗೆ ಸೋಡಾ: ಅಡಿಗೆ ಸೋಡಾ ತನ್ನದೇ ಆದ ವಾಸನೆಯನ್ನು ಹೊಂದಿಲ್ಲದಿದ್ದರೂ, ಇದು ಬೆವರು, ತೇವಾಂಶ ಮತ್ತು ಬಟ್ಟೆಗಳಿಂದ ಇತರ ವಾಸನೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ವಾಸನೆಯನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಬಟ್ಟೆ ಒಗೆಯುವ ಡಿಟೆರ್ಜಂಟ್‌ಗೆ  ಸ್ವಲ್ಪ ಅಡುಗೆ ಸೋಡಾ ಸೇರಿಸುವುದರಿಂದ ಹೊಲಸು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು.

ನಿಂಬೆ ರಸ: ಲಾಂಡ್ರಿ ಡಿಟರ್ಜೆಂಟ್‌ಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಅದರಲ್ಲಿ ಬಟ್ಟೆಗಳನ್ನು ಒಗೆಯುವುದರಿಂದ ಬಟ್ಟೆಗಳು ವಾಸನೆ ಬರುವುದನ್ನು ತಡೆಯಬಹುದು. ನಿಂಬೆಯ ಆಮ್ಲೀಯ ಅಂಶ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ಕೊಲ್ಲುತ್ತದೆ, ಬಟ್ಟೆ ವಾಸನೆ  ಬರದಂತೆ ತಡೆಯುತ್ತದೆ.

ಬೇವಿನ ಎಲೆ: ನಿಮ್ಮ ವಾರ್ಡ್ರೋಬ್‌ನಲ್ಲಿ ಬೇವಿನ ಎಲೆಗಳನ್ನು ಇಟ್ಟುಕೊಳ್ಳಬಹುದು. ಇದು ಮಳೆಗಾಲದಲ್ಲಿ ಬಟ್ಟೆಗಳ ದೀರ್ಘಕಾಲೀನ ಒದ್ದೆಯಾದ ವಾಸನೆ ಮತ್ತು ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

ಇದನ್ನೂ ಓದಿ: ಬಿಳಿ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಲು, ಡ್ರೆಸ್‌ ವಾಶ್‌ ಮಾಡುವಾಗ ಟಿಪ್ಸ್‌ ಪಾಲಿಸಿ

ಸಾರಭೂತ ತೈಲಗಳ ಬಳಕೆ: ಲ್ಯಾವೆಂಡರ್, ನಿಂಬೆ, ಮಲ್ಲಿಗೆ ಅಥವಾ ಶ್ರೀಗಂಧದಂತಹ ಸಾರಭೂತ ತೈಲಗಳು ಸಹ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದಕ್ಕಾಗಿ  ಸಣ್ಣ ಕರವಸ್ತ್ರದಂತಹ ಬಟ್ಟೆಯ ಮೇಲೆ 2-3 ಹನಿ ಸಾರಭೂತ ತೈಲವನ್ನು ಸುರಿಯಿರಿ ಮತ್ತು ಅದನ್ನು ಒಗೆದ ಬಟ್ಟೆಗಳ ನಡುವಿನ ಅಂತರದಲ್ಲಿ ಇರಿಸಿ. ಕರವಸ್ತ್ರದ ಬದಲಿಗೆ ಹತ್ತಿ ಉಂಡೆಯನ್ನು ಸಹ ಬಳಸಬಹುದು. ಇದು ವಾಸನೆ ಮತ್ತು ಬ್ಯಾಕ್ಟೀರಿಯಾ ಎರಡನ್ನೂ ತೆಗೆದುಹಾಕುತ್ತದೆ. ಇದಲ್ಲದೆ ಲ್ಯಾವೆಂಡರ್, ಗುಲಾಬಿ ಅಥವಾ ನಿಂಬೆ ಪರಿಮಳದ ಸಣ್ಣ ಸ್ಯಾಚೆಟ್‌ಗಳನ್ನು  ಅಥವಾ ಈ ಸಾರಭೂತ ತೈಲವನ್ನು ಹತ್ತಿ ಉಂಡೆಯಲ್ಲಿ ಅದ್ದಿ ನಿಮ್ಮ ವಾರ್ಡ್ರೋಬ್‌ನಲ್ಲಿ ಇಡಬಹುದು.

ಒಗೆದ ಬಟ್ಟೆ ವಾಸನೆ ಬರದಂತೆ ತಡೆಯಲು  ಈ ಕ್ರಮಗಳನ್ನು ಸಹ ಅನುಸರಿಸಿ:

  • ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ನಂತರವೇ ಅವುಗಳನ್ನು ಮಡಚಿಡಿ.
  • ಒಗೆದ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ಹೆಚ್ಚು ಹೊತ್ತು ಬಿಡಬೇಡಿ.
  • ಮಳೆಗಾಲದಲ್ಲಿ, ದಪ್ಪ ಹತ್ತಿ ಅಥವಾ ದಪ್ಪ ಬಟ್ಟೆಗಳಿಗಿಂತ ಬೇಗನೆ ಒಣಗುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಹಗುರವಾದ, ಬೇಗನೆ ಒಣಗುವ ಬಟ್ಟೆಗಳು ವಾಸನೆಯನ್ನು ಉಂಟುಮಾಡುವ ಸಾಧ್ಯತೆ ಕಡಿಮೆ.
  • ಹೆಚ್ಚು ಡಿಟರ್ಜೆಂಟ್ ಬಳಸುವುದರಿಂದ ಬಟ್ಟೆಗಳು ಸ್ವಚ್ಛವಾಗುತ್ತವೆ ಹೆಚ್ಚಿನವರು ಭಾವಿಸುತ್ತಾರೆ, ಆದರೆ ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾದ ತ್ವರಿತ ಬೆಳವಣಿಗೆಗೆ ಕಾರಣವಾಗಬಹುದು. ಹಾಗಾಗಿ ಬಟ್ಟೆಗಳನ್ನು ಒಗೆಯುವಾಗ ಸ್ವಲ್ಪ ಪ್ರಮಾಣದ ಡಿಟರ್ಜೆಂಟ್ ಬಳಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಾಂತ್ವನ ಯೋಜನೆ’: ಅಲ್ಪಸಂಖ್ಯಾತರ ಮನೆ, ಅಂಗಡಿ ಹಾನಿಯಾದರೆ 5 ಲಕ್ಷವರೆಗೆ ಆರ್ಥಿಕ ನೆರವು – Kannada News | Karnataka Govt’s ‘Santwana Scheme’: Up to 5 Lakh Financial Aid for Minorities Facing House or Shop Damage

ಬೆಂಗಳೂರು, ಆಗಸ್ಟ್​​ 06: ಪ್ರಕೃತಿ ವಿಕೋಪ ಅಥವಾ ಕೋಮು ಹಿಂಸಾಚಾರದಿಂದ ಮನೆ ಅಥವಾ ಅಂಗಡಿಗೆ ಹಾನಿಯಾದ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳು ಕರ್ನಾಟಕ ಸರ್ಕಾರ ‘ಸಾಂತ್ವನ ಯೋಜನೆ’ಯಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(KMDC)ದಿಂದ, ಸಾಲ ಹಾಗೂ ಸಹಾಯಧನ (ಸಬ್ಸಿಡಿ) ರೂಪದಲ್ಲಿ ನೆರವು ನೀಡಲಾಗುತ್ತದೆ.

ಯೋಜನೆಯಡಿ ದೊರೆಯುವ ಸೌಲಭ್ಯ

ಪ್ರತಿ ಫಲಾನುಭವಿಗೆ ಗರಿಷ್ಠ 5 ಲಕ್ಷವರೆಗೆ ಆರ್ಥಿಕ ನೆರವು ಸಿಗಲಿದ್ದು, ಮಂಜೂರಾಗುವ ಮೊತ್ತದಲ್ಲಿ ಶೇ.50 ಸಹಾಯಧನ (ಸಬ್ಸಿಡಿ) ಆಗಿರುತ್ತದೆ. ಉಳಿದ ಶೇ.50 ಮರುಪಾವತಿಸಬೇಕಾದ ಸಾಲ ರೂಪದಲ್ಲಿ ನೀಡಲಾಗುತ್ತದೆ. ಈ ಮೂಲಕ ಹಾನಿಗೊಳಗಾದ ಮನೆ ಅಥವಾ ಅಂಗಡಿಯನ್ನು ಮರುನಿರ್ಮಿಸಲು ಅಥವಾ ದುರಸ್ತಿ ಮಾಡಲು ಆರ್ಥಿಕ ನೆರವು ದೊರೆಯಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಈಜೀ ಮಾಡ್ಯುಲರ್ ಸಾರ್ವಜನಿಕ ಶೌಚಾಲಯಗಳು: ಏನೆಲ್ಲ ಆಧುನಿಕ ವ್ಯವಸ್ಥೆ?

ಅರ್ಹತಾ ಮಾನದಂಡಗಳು

  • ಕರ್ನಾಟಕದ ಮಾನ್ಯತೆ ಪಡೆದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  • ವಯಸ್ಸು 18 ರಿಂದ 55 ವರ್ಷಗಳೊಳಗೆ ಇರಬೇಕು
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ಮೀರಿರಬಾರದು
  • ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾಗಿರಬಾರದು
  • ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಯಾವುದೇ ಸಾಲ ಪಡೆದಿರಬಾರದು. (ಆದರೆ ಅರಿವು ಶಿಕ್ಷಣ ಸಾಲ ಯೋಜನೆ ಪಡೆದಿದ್ದರೆ ವಿನಾಯಿತಿ ಇದೆ.)

ಅಗತ್ಯ ದಾಖಲೆಗಳು

  • ಇತ್ತೀಚಿನ ಭಾವಚಿತ್ರ
  • ಜಾತಿ/ಅಲ್ಪಸಂಖ್ಯಾತರ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್ ಪ್ರತಿ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಜಾಮೀನುದಾರರ ಸ್ವಯಂ ಘೋಷಣಾ ಪತ್ರ
  • ಅರ್ಜಿದಾರರ ಸ್ವಯಂ ಘೋಷಣಾ ಪತ್ರ
  • ಮನೆ ಅಥವಾ ಅಂಗಡಿಗೆ ಹಾನಿಯಾಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಯಿಂದ ನೀಡಲಾದ ಪ್ರಮಾಣೀಕರಣ ವರದಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘Apply Online’ ಆಯ್ಕೆಯನ್ನು ಕ್ಲಿಕ್ ಮಾಡಿ. ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆಧಾರ್ ಸಂಖ್ಯೆ ದಾಖಲಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ OTP ಮೂಲಕ ದೃಢೀಕರಣ ಪೂರ್ಣಗೊಳಿಸಬೇಕು. ವೈಯಕ್ತಿಕ ಮಾಹಿತಿ, ವಿಳಾಸ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿದ ಬಳಿಕ ಸೃಷ್ಟಿಯಾಗುವ Application ID ಅನ್ನು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಟೈಮ್ಸ್​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೋಟೀನ್ ಕೊರತೆಯಿಂದ ಕೂದಲು ಉದುರುತ್ತದೆಯೇ? ತಜ್ಞರು ನೀಡಿದ ವಿವರಣೆ ಇಲ್ಲಿದೆ – Kannada News | Why Protein Matters for Healthy Hair Growth

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಯುವಜನರಲ್ಲಿ ಕೂಡ ವೇಗವಾಗಿ ಹೆಚ್ಚುತ್ತಿದೆ. ಹಲವರು ಇದಕ್ಕೆ ಒತ್ತಡ, ಮಾಲಿನ್ಯ ಅಥವಾ ಕೆಟ್ಟ ಹೇರ್ ಕೇರ್ ಅಭ್ಯಾಸಗಳೇ ಕಾರಣ ಎಂದು ಭಾವಿಸುತ್ತಾರೆ. ಆದರೆ ದೇಹದಲ್ಲಿ ಪ್ರೋಟೀನ್ ಕೊರತೆಯೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಪ್ರತಿಬಾರಿಯೂ ಕೂದಲು ಉದುರುವಿಕೆಯೂ ಪ್ರೋಟೀನ್ ಕೊರತೆಯಿಂದಲೇ ಆಗುವುದಿಲ್ಲ. ಹಾಗಾದರೆ ಪ್ರೋಟೀನ್ ಮತ್ತು ಕೂದಲಿಗಿರುವ ಸಂಬಂಧವೇನು, ಯಾವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೂದಲು ಮುಖ್ಯವಾಗಿ ಕೆರಾಟಿನ್ (Keratin) ಎಂಬ ಪ್ರೋಟೀನ್‌ನಿಂದ ನಿರ್ಮಿತವಾಗಿದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರೋಟೀನ್ ಸಿಗದಿದ್ದರೆ ದೇಹ ಮೊದಲು ಹೃದಯ, ಮೆದುಳು, ಯಕೃತ್ತು ಮೊದಲಾದ ಪ್ರಮುಖ ಅಂಗಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ನಿಧಾನವಾಗಬಹುದು ಮತ್ತು ಕೂದಲು ಹೆಚ್ಚಾಗಿ ಉದುರಲು ಆರಂಭಿಸಬಹುದು.

ಪ್ರೋಟೀನ್ ಕೊರತೆಯಿಂದಲೇ ಕೂದಲು ಉದುರುತ್ತದೆಯೇ?

Harvard Health Publishing ಪ್ರಕಾರ, ದೀರ್ಘಕಾಲ ಪ್ರೋಟೀನ್ ಕೊರತೆಯಿದ್ದರೆ ಕೂದಲಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ. ಆದರೆ ಪ್ರತಿಯೊಬ್ಬರಲ್ಲೂ ಕೂದಲು ಉದುರುವುದಕ್ಕೆ ಇದೇ ಕಾರಣವಾಗುವುದಿಲ್ಲ.

ಕೂದಲು ಉದುರುವಿಕೆಯ ಇತರ ಪ್ರಮುಖ ಕಾರಣಗಳು:

  • ಮಾನಸಿಕ ಒತ್ತಡ (Stress)
  • ಹಾರ್ಮೋನ್ ಬದಲಾವಣೆಗಳು
  • ಥೈರಾಯ್ಡ್ ಸಮಸ್ಯೆಗಳು
  • ಐರನ್ ಕೊರತೆ
  • ವಿಟಮಿನ್ ಡಿ ಹಾಗೂ ಬಿ12 ಕೊರತೆ
  • ಕೆಲವು ಔಷಧಿಗಳ ಅಡ್ಡ ಪರಿಣಾಮ
  • ಆನುವಂಶಿಕ ಕಾರಣಗಳು (Genetics)
  • Autoimmune ಕಾಯಿಲೆಗಳು

ಆದ್ದರಿಂದ ಕೂದಲು ನಿರಂತರವಾಗಿ ಉದುರುತ್ತಿದ್ದರೆ ಸ್ವಯಂ ಔಷಧಿ ಸೇವಿಸುವ ಬದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಪ್ರೋಟೀನ್ ಕೊರತೆಯ ಲಕ್ಷಣಗಳು ಯಾವುವು?

ದೇಹದಲ್ಲಿ ಪ್ರೋಟೀನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಬಹುದು.

  • ಕೂದಲು ಹೆಚ್ಚಾಗಿ ಉದುರುವುದು
  • ಸ್ನಾಯುಗಳ ದುರ್ಬಲತೆ
  • ಬೇಗ ಆಯಾಸವಾಗುವುದು
  • ಗಾಯಗಳು ನಿಧಾನವಾಗಿ ಗುಣವಾಗುವುದು
  • ದೇಹದಲ್ಲಿ ಊತ
  • ಆಗಾಗ ಸೋಂಕುಗಳು ಕಾಣಿಸಿಕೊಳ್ಳುವುದು
  • ಉಗುರುಗಳು ದುರ್ಬಲವಾಗುವುದು
  • ಚರ್ಮ ಒಣಗುವುದು

ಇದನ್ನೂ ಓದಿ: ಕೂದಲು ಬೇಗ ಬಿಳಿಯಾಗುವುದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು!

ಪ್ರೋಟೀನ್ ಕೊರತೆ ನಿವಾರಿಸಲು ಯಾವ ಆಹಾರ ಸೇವಿಸಬೇಕು?

ಪ್ರೋಟೀನ್ ಸಮೃದ್ಧ ಆಹಾರವನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳುವುದು ಮುಖ್ಯ.

  • ಬೇಳೆಕಾಳುಗಳು
  • ರಾಜ್ಮಾ
  • ಕಡಲೆ
  • ಸೋಯಾ ಚಂಕ್ಸ್
  • ಹಾಲು
  • ಮೊಸರು
  • ಪನೀರ್
  • ಮೊಟ್ಟೆ
  • ಮೀನು
  • ಚಿಕನ್
  • ಬಾದಾಮಿ, ವಾಲ್‌ನಟ್
  • ಕುಂಬಳಕಾಯಿ ಹಾಗೂ ಚಿಯಾ ಬೀಜಗಳು

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

  • ಹಲವು ವಾರಗಳವರೆಗೆ ನಿರಂತರ ಕೂದಲು ಉದುರುವುದು
  • ತಲೆಯ ಮೇಲೆ ಖಾಲಿ ಜಾಗ ಕಾಣಿಸಿಕೊಳ್ಳುವುದು
  • ಏಕಾಏಕಿ ಅತಿಯಾಗಿ ಕೂದಲು ಉದುರುವುದು
  • ತೀವ್ರ ಆಯಾಸ
  • ತೂಕ ಕಡಿಮೆಯಾಗುವುದು
  • ಸ್ನಾಯು ದುರ್ಬಲತೆ
  • ಥೈರಾಯ್ಡ್ ಅಥವಾ ಇತರ ಆರೋಗ್ಯ ಸಮಸ್ಯೆಗಳ ಲಕ್ಷಣಗಳು

ವೈದ್ಯರು ಅಗತ್ಯವಿದ್ದರೆ ರಕ್ತ ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷೆಗಳನ್ನು ಮಾಡಿ ನಿಖರ ಕಾರಣವನ್ನು ಪತ್ತೆಹಚ್ಚುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:12 pm, Thu, 6 August 26

Source link

ಕಾಕ್ರೋಚ್ ಜನತಾ ಪಾರ್ಟಿಯಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ದೇಶವ್ಯಾಪಿ ಅಭಿಯಾನ ಘೋಷಣೆ – Kannada News | Kya Bolti Public CJP announces nationwide campaign to highlight unemployment and education reforms

ನವದೆಹಲಿ, ಆಗಸ್ಟ್ 6: ಕಾಕ್ರೋಚ್ ಜನತಾ ಪಾರ್ಟಿ (CJP) ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ (ಜನರು ಏನು ಹೇಳುತ್ತಾರೆ?) ಎಂಬ ಅಭಿಯಾನ ಆರಂಭಿಸಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಕೋರ್ ಟೀಮ್‌ನ ಎರಡು ದಿನಗಳ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಸಂಘಟನೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

ಅಭಿಜೀತ್ ದಿಪ್ಕೆ ಅವರು “ಕ್ಯಾ ಬೋಲ್ತಿ ಪಬ್ಲಿಕ್” ಎಂಬ ಅಭಿಯಾನವನ್ನು ಘೋಷಿಸಿದ್ದು, ಇದು ಭಾರತದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ. ಸಿಜೆಪಿ ಪ್ರತಿನಿಧಿಗಳು ನಾಗರಿಕರೊಂದಿಗೆ ಮಾತನಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಕುರಿತು ಅವರ ಅಭಿಪ್ರಾಯಗಳನ್ನು ತಿಳಿಯಲಿದ್ದಾರೆ. “ಈ ‘ಕ್ಯಾ ಬೋಲ್ತಿ ಪಬ್ಲಿಕ್’ ಅಭಿಯಾನದ ಸಮಯದಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರು ಏನು ಯೋಚಿಸುತ್ತಾರೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಾತನಾಡಿ, “ನಮ್ಮ ದೇಶದಲ್ಲಿ ಇಂದು ಸಂಸ್ಥೆಗಳ ಹೊಣೆಗಾರಿಕೆಯು ಅಪಾಯಕಾರಿ ಸ್ಥಿತಿಯಲ್ಲಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯದ ಮುನ್ಸೂಚನೆ. ಈ ಹಿಂದೆ ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಯಾರು ಮತ ಹಾಕಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತಿದೆ. ಪ್ರಜಾಪ್ರಭುತ್ವ ಹೀಗೆ ಕೆಲಸ ಮಾಡುವುದು ಸರಿಯಲ್ಲ. ನಾವು ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ. ನಾವು ಈ ಕೆಲಸ ಮಾಡುವವರೆಗೆ ದೇಶದಲ್ಲಿ ಚುನಾವಣಾ ಅಕ್ರಮಗಳು ಮುಂದುವರಿಯುತ್ತಲೇ ಇರುತ್ತವೆ” ಎಂದಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಅತಿದೊಡ್ಡ ಸಾಧನೆ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಜೀತ್ ದಿಪ್ಕೆ, ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ವಿದ್ಯಾರ್ಥಿಗಳ ಹೋರಾಟದ ಅತಿದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. ಜಂತರ್ ಮಂತರ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಉದ್ಯೋಗವಿಲ್ಲದ ಯುವಕರೂ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು. ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ ಅವರು, ತಮ್ಮ ಸಂಘಟನೆಯು ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುತ್ತದೆ ಮತ್ತು ಶಾಲಾ ಮಟ್ಟದಿಂದಲೇ ಶಿಕ್ಷಣವು ಕೈಗೆಟುಕದಂತಾಗಿರುವುದರಿಂದ ಶಿಕ್ಷಣ ಸುಧಾರಣೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಶಿಕ್ಷಣವನ್ನು ಲಾಭ ಗಳಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮಗೆ ಅದನ್ನು ಬದಲಾಯಿಸುವ ಆಸೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಮದುವೆ ಬಗ್ಗೆ ಭಾರೀ ಚರ್ಚೆ; ಭಾವೀ ಸೊಸೆ ಕುರಿತು ತಾಯಿ ಹೇಳಿದ್ದೇನು?

ಸಿಜೆಪಿ ರಾಜಕೀಯ ಪಕ್ಷವಲ್ಲ;

“ಸಿಜೆಪಿ ರಾಜಕೀಯ ಪಕ್ಷವಲ್ಲ. ಸದ್ಯಕ್ಕೆ ಸಿಜೆಪಿ ಒಂದು ಒತ್ತಡದ ಗುಂಪಾಗಿ ಕೆಲಸ ಮಾಡುತ್ತದೆ. ಏಕೆಂದರೆ ಭಾರತಕ್ಕೆ ಈಗ ಅತ್ಯಂತ ತುರ್ತಾಗಿ ಬೇಕಿರುವುದು ಒಂದು ಒತ್ತಡದ ಗುಂಪು. ಸಿಜೆಪಿಯು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಆಡಳಿತ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಾಪಕ ವಿಷಯಗಳನ್ನು ಕೈಗೆತ್ತಿಕೊಳ್ಳಲಿದೆ” ಎಂದು ದಿಪ್ಕೆ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SLC XI ಪಂದ್ಯ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ – Kannada News | India vs SL XI: Match Timing and Squads

ಭಾರತ ಮತ್ತು ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ, ಟೀಮ್ ಇಂಡಿಯಾ ಶ್ರೀಲಂಕಾ ಇಲೆವೆನ್ ವಿರುದ್ಧ ಮೂರು ದಿನಗಳ ಪ್ರಮುಖ ಅಭ್ಯಾಸ ಪಂದ್ಯವನ್ನು ಆಡಲು ಸಜ್ಜಾಗಿದೆ. ಆಗಸ್ಟ್ 7 ರಿಂದ 9 ರವರೆಗೆ ಕೊಲಂಬೊದ ನೊಂಡೆಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ (NCC) ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲಿದೆ.

ಈ ಪಂದ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈಗಾಗಲೇ ತನ್ನ 15 ಸದಸ್ಯರ ಬಲಿಷ್ಠ ‘ಶ್ರೀಲಂಕಾ XI’ ತಂಡವನ್ನು ಪ್ರಕಟಿಸಿದೆ. ಮತ್ತೊಂದೆಡೆ, ಇದು ಅಧಿಕೃತ ಪ್ರಥಮ ದರ್ಜೆ ಪಂದ್ಯವಲ್ಲದ ಕಾರಣ ಭಾರತ ತಂಡವು ತನ್ನ ಸ್ಕ್ವಾಡ್‌ನಲ್ಲಿರುವ ಎಲ್ಲಾ ಆಟಗಾರರನ್ನು ಸರದಿಯ ಆಧಾರದ ಮೇಲೆ ಕಣಕ್ಕಿಳಿಸಿ ಬ್ಯಾಟಿಂಗ್ ಹಾಗೂ ಬೌಲಿಂಗ್ ತಾಲೀಮು ನಡೆಸಲಿದೆ.

ಜಸ್​ಪ್ರೀತ್ ಬುಮ್ರಾ ಔಟ್:

ಭಾರತ ತಂಡಕ್ಕೆ ಪಂದ್ಯ ಆರಂಭಕ್ಕೂ ಮುನ್ನವೇ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಈ ಪ್ರವಾಸದಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಕಾಶ್ಮೀರದ ಭರವಸೆಯ ವೇಗಿ ಆಖಿಬ್ ನಬಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಪಾದದ ಗಾಯದಿಂದ ಬಳಲುತ್ತಿರುವ ಸಾಯಿ ಸುದರ್ಶನ್ ಅವರ ಫಿಟ್‌ನೆಸ್ ಪರೀಕ್ಷೆಯ ಬಳಿಕವಷ್ಟೇ ಅವರು ಆಡುವ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಶ್ರೀಲಂಕಾ ಇಲೆವೆನ್​ ನಡುವಿನ ಈ ಅಭ್ಯಾಸ ಪಂದ್ಯವು ಭಾರತೀಯ ಕಾಲಮಾನ (IST) ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಆರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ಪಂದ್ಯ?

ಈ ಅಭ್ಯಾಸ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ ಹಾಗೂ ಸೋನಿ ಲಿವ್ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು.

ಉಭಯ ತಂಡಗಳು:

ಶ್ರೀಲಂಕಾ  XI ತಂಡ (SLC XI): ಸೋನಾಲ್ ದಿನುಷಾ (ನಾಯಕ), ನಿಶಾನ್ ಮದುಷ್ಕ, ಅಂಜಲಾ ಬಂಡಾರ (ವಿಕೆಟ್ ಕೀಪರ್), ರವಿಂದು ರಶಾಂಥ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ನಿಪುನ್ ಧನಂಜಯ, ಲಹೀರು ಕುಮಾರ, ವಿಶ್ವ ಫೆರ್ನಾಂಡೋ, ಅಸಂಕ ಮನೋಜ್, ಇಸಿತ ವಿಜೇಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ ಮತ್ತು ದಿಲುಮ್ ಸುದೀರ.

ಇದನ್ನೂ ಓದಿ: ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Source link

Exit mobile version