ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ – Kannada News | Bheema River Swells to Dangerous Levels in Yadgir After Heavy Rains in Maharashtra

ಯಾದಗಿರಿ, ಆಗಸ್ಟ್​ 06: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಜನಿ ಹಾಗೂ ವೀರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಬಳಿಯ ಭೀಮಾ ನದಿಯು ಮೈದುಂಬಿ ಭೋರ್ಗರೆಯುತ್ತಿದೆ. ಗುರುಸುಣಗಿ ಬ್ಯಾರೇಜ್‌ನ 24 ಕ್ರಸ್ಟ್ ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ತೆರೆದು ನದಿಗೆ ಸುಮಾರು 1.20 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು, ನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವೀರಾಂಜನ ದೇವಸ್ಥಾನಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮುಂಬರುವ ದಿನಗಳಲ್ಲಿ ನದಿಗೆ ನೀರು ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರೈತರ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದ್ದು, ನದಿ ತೀರಕ್ಕೆ ಸಾರ್ವಜನಿಕರು ಹಾಗೂ ಜಾನುವಾರುಗಳು ತೆರಳದಂತೆ ಮತ್ತು ನೀರೆತ್ತುವ ಪಂಪ್‌ಸೆಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌? – Kannada News | Most of the items are prices end in 99; Know the psychology behind this pricing strategy

ನಾವು ಮಾಲ್, ಮಾರುಕಟ್ಟೆ ಅಥವಾ ಆನ್‌ಲೈನ್ ಶಾಪಿಂಗ್ ಸೈಟ್‌ಗೆ ಭೇಟಿ ನೀಡಿದಾಗಲೆಲ್ಲಾ, ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಬೆಲೆ (prices) ಎಷ್ಟಿದೆ ಎಂದು ಪರಿಶೀಲಿಸುತ್ತೇವೆ. ಹೀಗೆ ಬೆಲೆ ನೋಡುವಾಗ ಬಹುತೇಕ ಹೆಚ್ಚಿನ ಉತ್ಪನ್ನಗಳ ಬೆಲೆ 99 ಸಂಖ್ಯೆಯಲ್ಲಿ ಕೊನೆಗೊಳ್ಳುವುದನ್ನು ನೋಡಿರುತ್ತೀರಿ ಅಲ್ವಾ.  ಕಂಪನಿಗಳು ಸಾಮಾನ್ಯವಾಗಿ ಉತ್ಪನ್ನಗಳ ಬೆಲೆಯನ್ನು ₹100 ಅಥವಾ ₹1,000 ಬದಲಿಗೆ ₹99 ಅಥವಾ ₹999 ಕ್ಕೆ ನಿಗದಿಪಡಿಸುತ್ತವೆ. ಉದಾಹರಣೆಗೆ ₹99, ₹199, ₹499, ₹10,999 ಈ ರೀತಿ ಬೆಲೆ ಇರುತ್ತವೆ. ಕಂಪನಿಗಳು ಈ ರೀತಿ ವಸ್ತುಗಳ ಬೆಲೆಯನ್ನು ನಿಗದಿಪಡಿಸುತ್ತವೆ, ಇದರ ಹಿಂದಿರುವ ಮಾರ್ಕೆಟಿಂಗ್‌ ತಂತ್ರವೇನು ಎಂಬುದನ್ನು ತಿಳಿಯಿರಿ.

ಹೆಚ್ಚಿನ ಉತ್ಪನ್ನಗಳ ಬೆಲೆ ʼ99ʼ ಸಂಖ್ಯೆಯೊಂದಿಗೆ ಏಕೆ ಕೊನೆಗೊಳ್ಳುತ್ತವೆ?

ಮೆದುಳಿನ ಆಟ: ನಮ್ಮ ಮೆದುಳು ಯಾವಾಗಲೂ ಯಾವುದೇ ಬೆಲೆಯನ್ನು ಎಡದಿಂದ ಬಲಕ್ಕೆ ಓದುತ್ತದೆ. ನಾವು ಯಾವುದೇ ವಸ್ತುವಿನ ಬೆಲೆಯನ್ನು ನೋಡಿದಾಗ ಆ ವಸ್ತುವಿನ ಬೆಲೆ ₹499 ಇದ್ದಾಗ, ನಮ್ಮ ಮನಸ್ಸು ಮೊದಲ ಸಂಖ್ಯೆಯಾದ 4 ರ ಮೇಲೆ ಕೇಂದ್ರೀಕರಿಸುತ್ತದೆ, ಇದು 500 ರೂ. ಗಿಂತ  ಕೇವಲ ಒಂದು ರೂಪಾಯಿ ಕಡಿಮೆ ಇದ್ದರೂ ಸಹ, ಆ ವಸ್ತುವು 400 ರೂ. ಮೌಲ್ಯದ್ದಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ. ಆ ವಸ್ತು 500 ರೂ. ಗಿಂತ ತುಂಬಾ ಅಗ್ಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಆ ವಸ್ತುವನ್ನು ಖರೀದಿ ಮಾಡುವಂತೆ ಪ್ರಚೋದಿಸುತ್ತದೆ.

ಸಂಖ್ಯೆ 9 ಮ್ಯಾಜಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ:

ಮಾರ್ಕೆಟಿಂಗ್‌ ಜಗತ್ತಿನಲ್ಲಿ,  ಸಂಖ್ಯೆ 9 ರಲ್ಲಿ ಕೊನೆಗೊಳ್ಳುವ ದರಗಳನ್ನು ‘ಚಾರ್ಮ್ ಪ್ರೈಸಿಂಗ್’ ಎಂದು ಕರೆಯಲಾಗುತ್ತದೆ. ಅನೇಕ ಅಧ್ಯಯನಗಳು ಎರಡು ಒಂದೇ ರೀತಿಯ ವಸ್ತುಗಳನ್ನು ಇಟ್ಟುಕೊಂಡು, ಅವುಗಳಲ್ಲಿ ಒಂಕ್ಕೆ 200 ರೂ. ಮತ್ತು ಇನ್ನೊಂದಕ್ಕೆ 199 ರೂ. ಬೆಲೆ ನಿಗದಿಪಡಿಸಿದರೆ, ಜನರು 199 ರೂ. ಬೆಲೆಯ ವಸ್ತುವನ್ನೇ  ಖರೀದಿಸಲು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿವೆ. ಮಾಲ್‌ನಲ್ಲಿ 999 ರೂ.ಗಳ ಯಾವುದೇ ಉಡುಪನ್ನು  ನೋಡಿದಾಗ, ನಮ್ಮ ಮೆದುಳಿನ ಒಂದು ಭಾಗವು ತಕ್ಷಣವೇ ಅದರ ಬೆಲೆ 1000 ರೂ.ಗಳಿಗಿಂತ ಕಡಿಮೆ ಎಂದು ಸಂಕೇತಿಸುತ್ತದೆ. ಈ ಸಣ್ಣ ಮಾನಸಿಕ ಸಂಕೇತವು ಹೆಚ್ಚು ಯೋಚಿಸದೆ ಬೆಲೆ ತುಂಬಾನೇ ಕಡಿಮೆಯಿದೆ ಎಂದು ಆ ಬಟ್ಟೆಯನ್ನು ಖರೀದಿಸುವಂತೆ ಒತ್ತಾಯಿಸುತ್ತದೆ.

ಇದನ್ನೂ ಓದಿ: ನಾಯಿಗಳು ಚಪ್ಪಲಿ, ಶೂಗಳನ್ನು ಅಗಿಯೋದೇಕೆ? ಇದರ ಹಿಂದಿನ ಕಾರಣವೇನು?

ಇದು ಮಾನಸಿಕ ಬೆಲೆ ನಿಗದಿ ತಂತ್ರ; ಕಂಪನಿಗಳು ಉತ್ಪನ್ನಗಳ ಇಂತಹ ಬೆಲೆಗಳನ್ನು ಮಾನಸಿಕ ಬೆಲೆ ನಿಗದಿ ತಂತ್ರದಡಿಯಲ್ಲಿ ಇಡುತ್ತವೆ. ₹500 ಅಥವಾ ₹1,000 ರೂ. ನಂತಹ ಅಂಕಿಗಳು ಗ್ರಾಹಕರಿಗೆ ಮಾನಸಿಕವಾಗಿ ದುಬಾರಿ ಎನಿಸುತ್ತವೆ, ಅದೇ ಬೆಲೆಯನ್ನು ರೂ.99 ಅಥವಾ ರೂ.999 ನಲ್ಲಿ ಇರಿಸಿದರೆ, ಸರಕುಗಳ ಮಾರಾಟ ಹೆಚ್ಚಾಗುತ್ತದೆ ಎಂದು ಕಂಪನಿಗಳಿಗೆ ತಿಳಿದಿದೆ.  ವಾಸ್ತವವಾಗಿ, ನೀವು ಯಾವುದೇ ಉತ್ಪನ್ನದ ಬೆಲೆಯನ್ನು 9 ರ ಅಂಕಿ ಅಂಶದಲ್ಲಿ ನೋಡಿದಾಗಲೆಲ್ಲಾ ಅದು ನಿಮಗೆ ಕಡಿಮೆ ಎಂದು ತೋರುತ್ತದೆ. ಯಾವುದೇ ಉತ್ಪನ್ನದ ಬೆಲೆ ರೂ.599 ಆಗಿದ್ದರೆ, ಅದು ರೂ.600  ಕ್ಕೆ ಹತ್ತಿರದಲ್ಲಿದೆ ಎಂದು ಭಾಸವಾಗುವುದಿಲ್ಲ ಅದು ರೂ.500 ಕ್ಕೆ ಹತ್ತಿರದಲ್ಲಿದೆ ಎಂದು ತೋರುತ್ತದೆ. ಕಂಪನಿಗಳು ಗ್ರಾಹಕರ ಗಮನವನ್ನು ತಮ್ಮ ಉತ್ಪನ್ನದ ಕಡೆಗೆ ಸೆಳೆಯಲು ಈ ಮಾನಸಿಕ ಬೆಲೆ ನಿಗದಿ ತಂತ್ರವನ್ನು ಅಳವಡಿಸಿಕೊಳ್ಳುತ್ತವೆ.

ಹಣ ಉಳಿಸುವ ಭಾವನೆ: ₹199 ಬೆಲೆಯ ವಸ್ತುವನ್ನು ನಾವು ಕಂಡುಕೊಂಡಾಗ, ನಮ್ಮ ಮನಸ್ಸು ಅದು ರಿಯಾಯಿತಿ ಡೀಲ್ ಅಥವಾ ವಿಶೇಷ ಕೊಡುಗೆ ಎಂದು ಭಾವಿಸುತ್ತದೆ. ಕಂಪನಿಯು ಕಡಿಮೆ ಬೆಲೆಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದೆ ಎಂದು ನಮಗೆ ಅನಿಸುತ್ತದೆ. ಅದೇ ಸಮಯದಲ್ಲಿ, ಅದೇ ವಸ್ತುವಿನ ಬೆಲೆ 200 ರೂ. ಇದ್ದರೆ, ನಮ್ಮ ಮನಸ್ಸು ತಕ್ಷಣವೇ ಅದನ್ನು ದುಬಾರಿ ಎಂದು ಪರಿಗಣಿಸುತ್ತದೆ. ಈ 1 ರೂ. ಕಡಿತವು ಗ್ರಾಹಕರಿಗೆ ಉಳಿತಾಯದ ತಪ್ಪು ಅರ್ಥವನ್ನು ನೀಡುತ್ತದೆ. ಈ ಸಣ್ಣ ಆನಂದವು ಅನೇಕ ಜನರು ತಕ್ಷಣ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಲು ಕಾರಣವಾಗುತ್ತದೆ. ಇದೆಲ್ಲವೂ ಸ್ಮಾರ್ಟ್ ಮಾರ್ಕೆಟಿಂಗ್‌ ತಂತ್ರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ – Kannada News | Nagpur class 12 student Kidnapped, harassed By Instagram Frien Food Order Helped police to Save Her

ನಾಗ್ಪುರ, ಆಗಸ್ಟ್ 6: ಸಾಮಾಜಿಕ ಜಾಲತಾಣದಲ್ಲಿ ಕಾಣುವುದಿಲ್ಲವೂ ನಿಜ ಎನ್ನಲಾಗದು. ಇನ್​ಸ್ಟಾಗ್ರಾಂನಲ್ಲಿ 20 ವರ್ಷದ ಯುವಕನೊಂದಿಗೆ ಫ್ರೆಂಡ್​ ಆಗಿದ್ದ 12ನೇ ತರಗತಿಯ ಬಾಲಕಿ ಫ್ರೆಂಡ್‌ಶಿಪ್ ದಿನ (Friendship Day) ಆತನಿಗೆ ಸಿಗುವುದಾಗಿ ತಿಳಿಸಿದ್ದಳು. ಆದರೆ, ಅದೇ ದಿನ ಆತ ಆಕೆಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ, 2 ದಿನ ರಹಸ್ಯವಾದ ಸ್ಥಳದಲ್ಲಿ ಬಚ್ಚಿಟ್ಟು ಚಿತ್ರಹಿಂಸೆ ನೀಡಿದ್ದ. ಹಿರಿಯ ಅಧಿಕಾರಿಯ ಮಗಳಾದ ಆಕೆ ಮನೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ತೆರಳಿದ್ದಳು. ಆದರೆ, ಆಕೆ ರಾತ್ರಿಯಾದರೂ ಮನೆಗೆ ಹಿಂತಿರುಗದಿದ್ದಾಗ ಕುಟುಂಬಸ್ಥರು ಫೋನ್ ಮಾಡಿದರೂ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆ ಬಾಲಕಿ ಯಾವುದೇ ಸ್ನೇಹಿತರನ್ನು ಭೇಟಿಯಾಗಿಲ್ಲ ಎಂಬುದು ತಿಳಿದುಬಂದ ನಂತರ, ಗಾಬರಿಯಿಂದ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದರು.

ಪೊಲೀಸರು ಬಾಲಕಿಯ ಕಾಲ್ ಡಿಟೇಲ್ಸ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯ ಮೇಲೆ ಶಂಕೆ ವ್ಯಕ್ತವಾಯಿತು.

ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು ಹೇಗೆ?:

ತನಿಖೆಯ ವೇಳೆ ಆರೋಪಿಯನ್ನು ಮಹಾರಾಷ್ಟ್ರದ ಠಾಣೆ ನಿವಾಸಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಖರೆ ಎಂದು ಗುರುತಿಸಲಾಗಿದೆ. ಈತ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ನಾಗಪುರದಲ್ಲಿ ಬಾಡಿಗೆ ಫ್ಲಾಟ್‌ ಒಂದರಲ್ಲಿ ವಾಸಿಸುತ್ತಿದ್ದ. ಈತನ ತಾಯಿ ಪ್ರಸಿದ್ಧ ವೈದ್ಯೆಯಾಗಿದ್ದಾರೆ. ಈತನ ಸಂಬಂಧಿಯೊಬ್ಬರು ಹಿರಿಯ ಐಪಿಎಸ್ ಅಧಿಕಾರಿ ಎನ್ನಲಾಗಿದೆ. ಪೊಲೀಸರು ಆತನ ಮೊಬೈಲ್ ಸಂಖ್ಯೆಯನ್ನು ಪಡೆದು ಆತನ ಕುಟುಂಬವನ್ನು ಸಂಪರ್ಕಿಸಿದರು. ಪೊಲೀಸ್ ತಂಡವೊಂದು ಆರೋಪಿಯ ಮನೆಗೆ ತೆರಳಿ, ಆತನ ತಾಯಿಗೆ ಮಗನಿಗೆ ಕರೆ ಮಾಡುವಂತೆ ಸೂಚಿಸಿತು.

ಇದನ್ನೂ ಓದಿ: 2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ

ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಾಯಿಯೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಆತ ಗಾಬರಿಗೊಂಡು, ತಾನು ಸೇಫ್ ಆಗಿದ್ದೇನೆ ಎಂದು ಪೋಷಕರಿಗೆ ತಿಳಿಸುವಂತೆ ಬಾಲಕಿಯ ಮೇಲೆ ಒತ್ತಡ ಹೇರಿದನು. ಆಕೆ ಕಾಲ್ ಮಾಡಿದಾಗ ಅದರ ಲೊಕೇಷನ್ ಎಲ್ಲಿದೆ ಎಂಬುದು ಪೊಲೀಸರಿಗೆ ಗೊತ್ತಾಯಿತು. ಇದಾದ ಸ್ವಲ್ಪ ಸಮಯದ ನಂತರ ಆರೋಪಿಯು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು. ತಕ್ಷಣ ಪೊಲೀಸರು ಆ ಡೆಲಿವರಿ ಬಾಯ್ ಜೊತೆ ತೆರಳಿ ಆರೋಪಿ ಹಾಗೂ ಕಿಡ್ನಾಪ್ ಆದ ಬಾಲಕಿ ಇದ್ದ ಸ್ಥಳವನ್ನು ಪತ್ತೆಹಚ್ಚಿದರು.

ಮಂಚಕ್ಕೆ ಕಟ್ಟಿಹಾಕಿ ಚಾಕುವಿನಿಂದ ಇರಿತ:

ಆ ಬಾಲಕಿಯನ್ನು ಬಚ್ಚಿಟ್ಟಿದ್ದ ರೂಂನ ಬಾಗಿಲನ್ನು ಪೊಲೀಸರು ಮುರಿದು ಒಳನುಗ್ಗಿದಾಗ, ಆಕೆಯನ್ನು ಬೆತ್ತಲೆಯಾಗಿ ಮಂಚಕ್ಕೆ ಕಟ್ಟಿಹಾಕಲಾಗಿತ್ತು. ಆಕೆಯ ಮೈತುಂಬ ಗಾಯಗಳಾಗಿತ್ತು. ಆರೋಪಿ ಯುವಕ ಕೈಯಲ್ಲಿ ಚಾಕು ಹಿಡಿದುಕೊಂಡಿದ್ದ. ಬಾಲಕಿಯ ದೇಹದಾದ್ಯಂತ ಹಲವು ಚಾಕು ಇರಿತದ ಗಾಯಗಳಾಗಿದ್ದವು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಪೊಲೀಸರು ತಲುಪುವುದು ಸ್ವಲ್ಪ ತಡವಾಗಿದ್ದರೂ ಆರೋಪಿಯು ಬಾಲಕಿಯನ್ನು ಕೊಲ್ಲುವ ಸಾಧ್ಯತೆಯಿತ್ತು.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ಆ ಬಾಲಕಿಯ ಮೇಲೆ 2 ದಿನಗಳ ಕಾಲ ಆತ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದ. ಆಕೆಯ ಕೈ ತುಂಡಾಗಿತ್ತು. ಘಟನಾ ಸ್ಥಳದಲ್ಲಿ ತೀಕ್ಷ್ಣವಾದ ಚಾಕು ಪತ್ತೆಯಾಗಿದ್ದು, ಆರೋಪಿಯು ಆಕೆಯನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆ ಬಾಲಕಿಯ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ ಆಕೆಯ ಇಡೀ ಕುಟುಂಬವನ್ನು ಕೊಲ್ಲುವುದಾಗಿಯೂ ಹೆದರಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಪೊಲೀಸರು ತನ್ನ ಮೇಲೆ ಅನುಮಾನಗೊಂಡು ಮನೆಗೆ ಹೋಗಿ ವಿಚಾರಿಸಿದ್ದು ತಿಳಿಯುತ್ತಿದ್ದಂತೆ ಆತ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.

ಆದರೆ, ಆರೋಪಿಯ ಪರ ವಕೀಲರು, ‘ಇಬ್ಬರ ನಡುವೆ ಪ್ರೇಮಸಂಬಂಧವಿತ್ತು. ಆ ಬಾಲಕಿಯೇ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಾಳೆ. ಆಕೆ ತನ್ನ ಸ್ವಂತ ಇಷ್ಟದಿಂದ ಆತನ ಜೊತೆ ಬಂದಿದ್ದಳು’ ಎಂದು ವಾದಿಸಿದ್ದು, ಅಪಹರಣದ ಆರೋಪವನ್ನು ನಿರಾಕರಿಸಿದ್ದಾರೆ. ಆರೋಪಿಯು ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ತನಗೆ ಮಲಗಲು ಆರಾಮದಾಯಕ ಹಾಸಿಗೆ ಮತ್ತು ಸೊಳ್ಳೆ ನಿವಾರಕ ಬೇಕು ಎಂದು ಬೇಡಿಕೆಯಿಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಪಡೆಯುತ್ತಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಓಪಿ ಗಣೇಶ ಮೂರ್ತಿ ನಿಷೇಧ, ಶಬ್ಧ ಮಾಲೀನ್ಯಕ್ಕೂ ಅವಕಾಶವಿಲ್ಲ: ಈಶ್ವರ್​​​​ ಖಂಡ್ರೆ ಸೂಚನೆ – Kannada News | Minister Eshwar Khandre directs gram panchayats to permit only eco friendly clay Ganesh idols

ಬೆಂಗಳೂರು, (ಆಗಸ್ಟ್ 06): ಸೆಪ್ಟೆಂಬರ್ 14ರಂದು ನಾಡಿನಾದ್ಯಂತ ಆಚರಿಸಲಾಗುವ ಗಣೇಶ ಹಬ್ಬದ (Ganesh Festival) (Ganesh Festival) ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿರ್ಮಿತ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ(Ganesh Idol) ವಿಸರ್ಜನೆಗೆ ಅವಕಾಶ ನೀಡದೆ, ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪತಿ ಪೂಜಿಸಲು ಪ್ರೇರೇಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಅಲ್ಲದೇ ಗಣೇಶ ಉತ್ಸವ ವೇಳೆ ಶಬ್ಧ ಮಾಲೀನ್ಯಕ್ಕೆ ಅವಕಾಶವಿಲ್ಲ ಎಂದು ಖಡಕ್ ಆಗಿ ಹೇಳಿದ್ದು, ಕಾನೂನು ಪ್ರಕಾರ ಕಡಿಮೆ ಡೆಸಿಬಲ್ ಸ್ಪೀಕರ್ ಬಳಸಬೇಕು ಎಂದಿದ್ದಾರೆ.

ಇಲಾಖೆಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಗಣೇಶ ಪರಿಸರದಿಂದ (ಮಣ್ಣಿನಿಂದ) ಹುಟ್ಟಿದ ದೇವರಾಗಿದ್ದು, ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅವಕಾಶ ನೀಡುವಂತೆ ಕ್ರಮ ವಹಿಸಲು ತಿಳಿಸಿದ್ದಾರೆ.

ಇದನ್ನೂ ಓದಿ: ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?

ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ರಾಜ್ಯ ಘನ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿರುತ್ತದೆ ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಲ ಮೂಲಗಳ ಹಾಗೂ ಪರಿಸರ ರಕ್ಷಣೆಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈಗಿನಿಂದಲೇ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆಯುವಂತೆ ಸೂಚಿಸಿರುವ ಅವರು, ಸಾರ್ವಜನಿಕರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯತಿಗಳ ಮಟ್ಟದಲ್ಲಿ ಮಾಡಲು ಆದೇಶ ನೀಡಿದ್ದಾರೆ.

ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸುವ ಮೂರ್ತಿಗಳಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುವುದರ ಜೊತೆಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ ಎಂದೂ ಲಿಖಿತ ಸೂಚನೆಯಲ್ಲಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಪಿಓಪಿ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಜಲ ಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ.

Source link

ಸಚಿವ ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ – Kannada News | Siddaramaiah Fan Arrested for Derogatory Comments Against Minister Byrati Suresh on Social Media

ಬೆಂಗಳೂರು, ಆಗಸ್ಟ್​ 06: ಸಚಿವ ಭೈರತಿ ಸುರೇಶ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿ ಜಯಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭೈರತಿ ಸುರೇಶ್ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗಿದೆ ಎಂಬ ದೂರಿನ ಅನ್ವಯ ಆರ್.ಟಿ.ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಿವಾಸಿಯಾದ ಜಯಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ, ಜಯಕುಮಾರ್ ಪೊಲೀಸರ ವಿಚಾರಣೆಗೆ ಒಳಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ – Kannada News | Zepto, BookMyShow and other 7 digital platforms penalized for Dark Patterns

ನವದೆಹಲಿ, ಆಗಸ್ಟ್ 6: ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ಡಾರ್ಕ್ ಪ್ಯಾಟರ್ನ್ (Dark Patterns) ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ (CCPA – Central Consumer Protection Authority) “ಡಾರ್ಕ್ ಪ್ಯಾಟರ್ನ್‌” ಬಳಸಿದ್ದಕ್ಕಾಗಿ ಜೆಪ್ಟೋ, ಬುಕ್‌ಮೈಶೋ, ಸ್ಪೈಸ್‌ಜೆಟ್, ಇಂಡಿಗೋ ಸೇರಿದಂತೆ 9 ಪ್ರಮುಖ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ದಂಡ ವಿಧಿಸಿದೆ. ಸರ್ಕಾರವು ರಾಜ್ಯಸಭೆಗೆ ನೀಡಿದ ಮಾಹಿತಿಯಂತೆ, ಈ ಕಂಪನಿಗಳಿಂದ ಒಟ್ಟು ₹20 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಯಾವ ಕಂಪನಿಗೆ ಎಷ್ಟು ದಂಡ ಮತ್ತು ಕಾರಣಗಳು?

  1. Zepto (ಜೆಪ್ಟೋ): ₹7 ಲಕ್ಷ ದಂಡ ವಿಧಿಸಲಾಗಿದೆ. ಆರಂಭದಲ್ಲಿ ಕಡಿಮೆ ದರ ತೋರಿಸಿ, ನಂತರ ಹ್ಯಾಂಡ್ಲಿಂಗ್ ಶುಲ್ಕ ಮತ್ತು ಸದಸ್ಯತ್ವ ಶುಲ್ಕಗಳನ್ನು ಆಟೋಮ್ಯಾಟಿಕ್ ಆಗಿ ಸೇರಿಸಲಾಗುತ್ತಿತ್ತು (Drip Pricing & Basket Sneaking).
  2. Physics Wallah (ಫಿಸಿಕ್ಸ್ ವಾಲಾ): ₹5 ಲಕ್ಷ ದಂಡ ಹಾಕಲಾಗಿದೆ. ಆನ್​ಲೈನ್ ಶಿಕ್ಷಣ ಸಂಸ್ಥೆಯಾದ ಇದು ಚೆಕ್​ಔಟ್ ಸಂದರ್ಭದಲ್ಲಿ ತನ್ನ ಪಿಡಬ್ಲ್ಯು ಫೌಂಡೇಶನ್​ಗೆಂದು ₹10 ದೇಣಿಗೆಯನ್ನು ಪೂರ್ವಭಾವಿಯಾಗಿ ಆಯ್ಕೆ (Pre-selected) ಮಾಡುತ್ತಿದ್ದುದು ಕಂಡು ಬಂದಿದೆ. ಉಚಿತ ಕೋರ್ಸ್‌ಗಳಿಗೆ ವೈಯಕ್ತಿಕ ಮಾಹಿತಿ ನೀಡಲು ಕಡ್ಡಾಯಗೊಳಿಸಿತ್ತು. ಹೀಗಾಗಿ ದಂಡ ಹಾಕಲಾಗಿದೆ.
  3. BookMyShow (ಬುಕ್‌ಮೈಶೋ): ಗ್ರಾಹಕರು ಹಣ ಪಾವತಿಸುವಾಗ ‘BookASmile’ ನಿಧಿಗೆ ₹1 ದೇಣಿಗೆಯನ್ನು ಪೂರ್ವಭಾವಿಯಾಗಿ ಟಿಕ್ (Pre-ticked) ಮಾಡಿಡುವುದು ಕಂಡು ಬಂದಿತ್ತು. ಇದನ್ನು ತೆಗೆದುಹಾಕಲು ಸೂಚಿಸಲಾಗಿದೆ.
  4. IndiGo (ಇಂಡಿಗೋ): ಆ್ಯಪ್‌ನಲ್ಲಿ ವಿಮೆ ಪಡೆಯದಿದ್ದಾಗ ಗ್ರಾಹಕರನ್ನು ಹೆದರಿಸುವಂತಹ “No, I will take risk” ಎಂಬ ಸಂದೇಶ ಬಳಸುವುದು (Confirm Shaming). ಇದನ್ನು ಬದಲಾಯಿಸಲು ಸೂಚಿಸಲಾಗಿದೆ.
  5. SpiceJet (ಸ್ಪೈಸ್‌ಜೆಟ್): ₹1 ಲಕ್ಷ ದಂಡ ಹಾಕಲಾಗಿದೆ. ಆಟೋಮ್ಯಾಟಿಕ್ ಲಾಯಲ್ಟಿ ಪ್ರೋಗ್ರಾಮ್ ನೋಂದಣಿ ಮತ್ತು ಪ್ರಚಾರ ಸಂದೇಶಗಳಿಗೆ ಬಲವಂತದ ಸಮ್ಮತಿ ಪಡೆಯಲಾಗುತ್ತಿತ್ತು.
  6. ಅನುಜ್ ಜಿಂದಾಲ್ (Anuj Jindal): ₹3 ಲಕ್ಷ ದಂಡ
  7. ಫರ್ಸ್ಟ್ ಕ್ರೈ (FirstCry): ₹2 ಲಕ್ಷ ದಂಡ
  8. ಫಾರ್ಮ್‌ಈಸಿ (PharmaEasy): ₹1 ಲಕ್ಷ ದಂಡ
  9. ಮೆಕಾಫಿ (McAfee): ₹1 ಲಕ್ಷ ದಂಡ

ಇದನ್ನೂ ಓದಿ: ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್

ಏನಿದು ‘ಡಾರ್ಕ್ ಪ್ಯಾಟರ್ನ್’?

ಡಿಜಿಟಲ್ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳು ಗ್ರಾಹಕರಿಗೆ ಗೊತ್ತಿಲ್ಲದಂತೆ ಹೆಚ್ಚುವರಿ ಹಣ ಪಾವತಿಸುವಂತೆ ಮಾಡುವುದು, ಸಮ್ಮತಿಯಿಲ್ಲದೆ ವೈಯಕ್ತಿಕ ಮಾಹಿತಿ ಪಡೆಯುವುದು ಅಥವಾ ಅನಗತ್ಯ ಸಬ್​ಸ್ಕ್ರಿಪ್ಷನ್ಸ್ (Subscriptions) ಹೇರುವುದಕ್ಕೆ ಬಳಸುವ ತಂತ್ರಗಳನ್ನು ‘ಡಾರ್ಕ್ ಪ್ಯಾಟರ್ನ್’ (Dark Patterns) ಎನ್ನಲಾಗುತ್ತದೆ.

ಕೇಂದ್ರ ಸರ್ಕಾರವು 2023 ರಲ್ಲಿ 13 ರೀತಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 2:13 pm, Thu, 6 August 26

Source link

ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್: ಹೊಸ ‘ಫಿಟ್​ನೆಸ್​ ಟೆಸ್ಟ್’ ಜಾರಿ! – Kannada News | BCCI’s Fitness Shock: No More Soft Targets for Senior Indian Players

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾ ಆಟಗಾರರ ಫಿಟ್‌ನೆಸ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇದುವರೆಗೆ ಹಿರಿಯ ಆಟಗಾರರಿಗೆ ನೀಡಲಾಗಿದ್ದ ಸುಲಭ ಮತ್ತು ಸಡಿಲವಾದ ವೈಯಕ್ತಿಕ ಫಿಟ್‌ನೆಸ್ ಗುರಿಗಳನ್ನು ಮಂಡಳಿಯು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇಂಗ್ಲೆಂಡ್​, ಐರ್ಲೆಂಡ್ ಪ್ರವಾಸದ ಹಿನ್ನಡೆ ಹಾಗೂ ಆಟಗಾರರ ನಿರಂತರ ಗಾಯದ ಸಮಸ್ಯೆಗಳಿಂದ ಎಚ್ಚೆತ್ತಿರುವ ಬಿಸಿಸಿಐ, ಇನ್ಮುಂದೆ ಜೂನಿಯರ್-ಸೀನಿಯರ್ ಎನ್ನದೆ ಎಲ್ಲರಿಗೂ ಏಕರೂಪದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಬೆಂಗಳೂರಿನಲ್ಲಿರುವ ಬಿಸಿಸಿಐನ ಹೊಸ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಇನ್ನು ಮುಂದೆ ಯಾವುದೇ ತಾರತಮ್ಯವಿಲ್ಲದ ಕಠಿಣ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲಿದೆ.

ಸುಲಭ ಗುರಿಗಳ ದುರುಪಯೋಗ:

ಕಳೆದ ಕೆಲವು ಸಮಯದಿಂದ CoE ವತಿಯಿಂದ ಆಟಗಾರರ ದೇಹಪ್ರಕೃತಿಗೆ ತಕ್ಕಂತೆ ‘ಕಸ್ಟಮೈಸ್ಡ್’ ಫಿಟ್‌ನೆಸ್ ಗುರಿಗಳನ್ನು ನೀಡಲಾಗುತ್ತಿತ್ತು. ಆದರೆ, ಕೆಲವು ಹಿರಿಯ ಆಟಗಾರರು ಇದರ ದುರುಪಯೋಗ ಪಡಿಸಿಕೊಂಡು ಸುಲಭವಾಗಿ ಪರೀಕ್ಷೆ ಪಾಸ್ ಮಾಡುತ್ತಿದ್ದರು ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಇದರಿಂದಾಗಿ ಮೈದಾನದಲ್ಲಿ ಆಟಗಾರರ ಚುರುಕುತನ ಗಣನೀಯವಾಗಿ ಕಡಿಮೆಯಾಗಿದ್ದು, ತಂಡದಲ್ಲಿ “ಸ್ಲೋ ಫೀಲ್ಡರ್ಸ್” ಸಂಖ್ಯೆ ಹೆಚ್ಚಾಗಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪ್ರಮುಖ ಆಕ್ಷೇಪಣೆಗಳು:

  • ಮೈದಾನದಲ್ಲಿ ಆಲಸ್ಯ: ದೀರ್ಘ ಇನಿಂಗ್ಸ್ ಆಡುವಾಗ ಹಿರಿಯ ಬ್ಯಾಟರ್‌ಗಳು ರನ್‌ಗಾಗಿ ಓಡಲು ಕಷ್ಟಪಡುತ್ತಿರುವುದು ಮತ್ತು ವಿಕೆಟ್‌ಗಳ ನಡುವಿನ ವೇಗ ಕುಸಿದಿರುವುದು ಮಂಡಳಿಯ ಗಮನಕ್ಕೆ ಬಂದಿದೆ.
  • ಪದೇ ಪದೇ ಸ್ನಾಯು ಸೆಳೆತ: ಇಂಗ್ಲೆಂಡ್‌ನಂತಹ ಅನುಕೂಲಕರ ಹವಾಮಾನದಲ್ಲೂ ಆಟಗಾರರು ಪದೇ ಪದೇ ಸ್ನಾಯು ಸೆಳೆತಕ್ಕೆ ಒಳಗಾಗುತ್ತಿರುವುದಕ್ಕೆ ಬಿಸಿಸಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಫಿಸಿಯೋಗೆ ಕಟ್ಟುನಿಟ್ಟಿನ ಸೂಚನೆ:

ಟೀಮ್ ಇಂಡಿಯಾ ಫಿಸಿಯೋ ಕಮಲೇಶ್ ಜೈನ್ ಅವರಿಗೆ ಬಿಸಿಸಿಐ ಕಠಿಣ ಸಂದೇಶ ರವಾನಿಸಿದ್ದು, ಆಟಗಾರನ ಖ್ಯಾತಿ ಅಥವಾ ಹಿರಿತನ ಏನೇ ಇರಲಿ, ಫಿಟ್‌ನೆಸ್ ಕಳಪೆಯಾಗಿದ್ದರೆ ಮುಲಾಜಿಲ್ಲದೆ ರಿಪೋರ್ಟ್ ಮಾಡಲು ಆದೇಶಿಸಿದೆ.

ಹರ್ಷಿತ್ ರಾಣಾ ಪ್ರಕರಣ:

ವೇಗದ ಬೌಲರ್ ಹರ್ಷಿತ್ ರಾಣಾ ಯುಕೆ ಪ್ರವಾಸಕ್ಕೆ ಆಯ್ಕೆಯಾಗುವಾಗ 97 ಕೆಜಿ ಇದ್ದರು. ಆದರೆ ಮ್ಯಾನೇಜ್‌ಮೆಂಟ್ ಅವರು 4 ಕೆಜಿ ಅತಿ ತೂಕ ಹೊಂದಿದ್ದಾರೆ ಎಂದು ಗುರುತಿಸಿ ತಂಡದಿಂದ ಪಕ್ಕಕ್ಕಿಟ್ಟಿತ್ತು. ಪ್ರಸ್ತುತ ಅವರ ತೂಕವನ್ನು 96 ಕೆಜಿಗಿಂತ ಕಡಿಮೆ ಇಟ್ಟುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಹೊಸ ಫಿಟ್‌ನೆಸ್ ಮಾನದಂಡಗಳು:

ಹೊಸ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆಡ್ರಿಯನ್ ಲೆ ರಾಕ್ಸ್ ಅವರ ಮಾರ್ಗದರ್ಶನದಲ್ಲಿ, ಹಳೆಯ ಯೋ-ಯೋ ಟೆಸ್ಟ್ ಬದಲಿಗೆ ಈಗ ಬ್ರಾಂಕೋ ಟೆಸ್ಟ್ ಅನ್ನು ಪ್ರಮುಖ ಮಾನದಂಡವನ್ನಾಗಿ ಮಾಡಲಾಗಿದೆ. ಇನ್ಮುಂದೆ ಪ್ರತಿಯೊಬ್ಬ ಆಟಗಾರನೂ ಈ ಕೆಳಗಿನ ಏಕರೂಪ ಸಮಯದ ಮಿತಿಯೊಳಗೆ ಪರೀಕ್ಷೆ ಪಾಸಾಗಬೇಕಿರುವುದು ಕಡ್ಡಾಯ.

ಟೆಸ್ಟ್ ಮಾದರಿ ಉದ್ದೇಶ  ಸಮಯದ ಮಿತಿ
ಬ್ರಾಂಕೋ ಟೆಸ್ಟ್  ಆಟಗಾರನ ಶಟಲ್ ರನ್ನಿಂಗ್ ಸಾಮರ್ಥ್ಯ, ಚುರುಕುತನ ಮತ್ತು ಆಯಾಸದಿಂದ ಚೇತರಿಸಿಕೊಳ್ಳುವ ವೇಗವನ್ನು ಅಳೆಯುತ್ತದೆ. 5.15 ರಿಂದ 5.20 ನಿಮಿಷಗಳು
2K ಟೆಸ್ಟ್  2 ಕಿಲೋಮೀಟರ್ ದೂರದ ಓಟದ ಮೂಲಕ ಆಟಗಾರನ ಒಟ್ಟಾರೆ ಪಂದ್ಯದ ಫಿಟ್‌ನೆಸ್ ಅನ್ನು ನಿರ್ಣಯಿಸುತ್ತದೆ. 9 ರಿಂದ 10 ನಿಮಿಷಗಳು

ಇದನ್ನೂ ಓದಿ: ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ

ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ನಡೆದಿರುವ ಈ ಬದಲಾವಣೆಯು ಮುಂಬರುವ ಸರಣಿಗಳಿಗೆ ಆಟಗಾರರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಿಯಮ ಉಲ್ಲಂಘಿಸುವ ಅಥವಾ ಫಿಟ್‌ನೆಸ್ ಕಾಪಾಡಿಕೊಳ್ಳದ ಆಟಗಾರರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ತಂಡದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Published On – 2:19 pm, Thu, 6 August 26

Source link

ಬೆಳಗಾವಿ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಮಗು ಸೇರಿ ಮೂವರು ಸಾವು – Kannada News | Belagavi KSRTC Bus Collides with Motorcycle, Three death Including Child

ಬೆಳಗಾವಿ, ಆಗಸ್ಟ್​​ 06: ಕೆಎಸ್‌ಆರ್‌ಟಿಸಿ (KSRTC) ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವಂತಹ (death) ದಾರುಣ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದಿದೆ. ಸೈಫ್ ಮುಲ್ಲಾ (29), ಅವರ ನಾಲ್ಕು ವರ್ಷದ ಪುತ್ರಿ ಸಿಜಾ ಸೈಫ್ ಮುಲ್ಲಾ ಹಾಗೂ ಸ್ನೇಹಿತ ಇಮ್ತಿಯಾಜ್ ಬಡಗಾಂವ್ (35) ಮೃತ ದುರ್ದೈವಿಗಳು.

ನಡೆದಿದ್ದೇನು? 

ಹಿಡಕಲ್‌ನಿಂದ ಗೋಕಾಕ್ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಗೋಕಾಕ್ ಫಾಲ್ಸ್‌ನಿಂದ ಕೊಣ್ಣೂರಿನತ್ತ ಬೈಕ್‌ನಲ್ಲಿ ತಂದೆ, ಮಗಳು ಮತ್ತು ಸ್ನೇಹಿತ ಪ್ರಯಾಣಿಸುತ್ತಿದ್ದರು. ಈ ವೇಳೆ ಕೊಣ್ಣೂರು ಪಟ್ಟಣದ ಕರೆಮ್ಮಾ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ನುಗ್ಗಿದ ಆಗಂತುಕರು: ಚಾಕು ಹಿಡಿದು ಓಡಾಟ, CCTVಯಲ್ಲಿ ದೃಶ್ಯ ಸೆರೆ

ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಸ್ಥಳದಲ್ಲೇ ಬಸ್​​ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಗೋಕಾಕ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್, ಬೊಲೆರೊ, ಬೈಕ್ ನಡುವೆ ಸರಣಿ ಅಪಘಾತ: ಯುವಕ ಸಾವು; ಇಬ್ಬರಿಗೆ ಗಂಭೀರ ಗಾಯ

ಬಸ್, ಬೊಲೆರೊ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಮೇಲ್ಕುಂಟೆ ಗೇಟ್ ಬಳಿ ನಡೆದಿದೆ. ಶಿರಾ ಪಟ್ಟಣದ ಕೋಟೆ ನಿವಾಸಿ ಇಮ್ರಾನ್ (23) ಮೃತ ದುರ್ದೈವಿ. ಘಟನೆಯಲ್ಲಿ ನವಾಜ್ ಹಾಗೂ ಅಲ್ಲಾಭಕ್ಷ್ ತೀವ್ರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ಮೇಲ್ಕುಂಟೆ ಗೇಟ್ ಬಳಿ ಬಸ್, ಬೊಲೆರೊ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ​ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇನ್ನು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:49 pm, Thu, 6 August 26

Source link

ಕಲಾಸಿಪಾಳ್ಯ ಗ್ಯಾಂಗ್‌ವಾರ್ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕಾರಣ ಬಯಲು – Kannada News | Twist in Kalasipalya Gang War Case: Police Investigation Reveals Real Motive

ಬೆಂಗಳೂರು, ಆಗಸ್ಟ್ 06: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ (gangwar) ಮಿತಿಮೀರಿದೆ. ಕಲಾಸಿಪಾಳ್ಯ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಿ‌ವಂಶ ಮತ್ತು ವಿನೋಬನಗರದ ಮೌಲಾನ ಗ್ಯಾಂಗ್ ನಡುವೆ ಲಾಂಗು, ಮಚ್ಚುಗಳಿಂದ ಮಾರಾಮಾರಿ ನಡೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮಾಡಿದ ಪೊಲೀಸರಿಗೆ ಗಲಾಟೆಯ ಹಿಂದಿನ ಅಸಲಿ ಕಾರಣ ತಿಳಿದುಬಂದಿದೆ. ಅಂಗಡಿ ಮಾಲಿಕ ಹಾಗೂ ಬಾಡಿಗೆದಾರನ ನಡುವೆ ಬ್ಯಾಂಕ್ ಲೋನ್ ವಿಚಾರವಾಗಿ ನಡೆದ ಮಾರಾಮಾರಿ ಎಂಬುದು ಬಯಲಾಗಿದೆ.

ಬಯಲಾದ ಅಸಲಿಯತ್ತು ಏನು?

ಮಹಮ್ಮದ್ ಮೌಲಿ ಎಂಬಾತ ಅಂಗಡಿಯ ಮಾಲಿಕನಾಗಿದ್ದು, ತನ್ನ ಮಳಿಗೆಯನ್ನು ಅಜ್ಜು ಎಂಬ ವ್ಯಕ್ತಿಗೆ ಬಾಡಿಗೆಗೆ ನೀಡಿದ್ದ. ಆದರೆ, ಬಾಡಿಗೆಗೆ ಕೊಟ್ಟಿದ್ದ ಅದೇ ಅಂಗಡಿಗೆ ತನ್ನ ಹೆಸರಿನ ಬೋರ್ಡ್ ಹಾಕಿ ಬ್ಯಾಂಕ್ ಲೋನ್ ಪಡೆಯಲು ಮಾಲಿಕ ಮೌಲಿ ಮುಂದಾಗಿದ್ದ. ಇದನ್ನು ಪ್ರಶ್ನಿಸಿದ್ದ ಬಾಡಿಗೆದಾರ ಅಜ್ಜು, ‘ನಾನು ಬಾಡಿಗೆಗೆ ಇದ್ದೇನೆ, ನೀನ್ಯಾಕೆ ನನ್ನ ಅಂಗಡಿ ಮೇಲೆ ಬೋರ್ಡ್ ಹಾಕಿ ಲೋನ್ ತಗೊಳ್ತೀಯಾ? ಒಂದು ವೇಳೆ ನೀನು ಲೋನ್ ಕಟ್ಟದಿದ್ದರೆ ಆ ಹೊರೆ ನನ್ನ ಮೇಲೆ ಬೀಳುತ್ತದೆ’ ಎಂದು ಗಲಾಟೆ ಮಾಡಿದ್ದ.

ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಕ್ವಾರ್ಟರ್ಸ್‌ಗೆ ನುಗ್ಗಿದ ಆಗಂತುಕರು: ಚಾಕು ಹಿಡಿದು ಓಡಾಟ, CCTVಯಲ್ಲಿ ದೃಶ್ಯ ಸೆರೆ

ಇನ್ನು ಮಾತುಕತೆ ವಿಕೋಪಕ್ಕೆ ತಿರುಗಿದ್ದು, ಮಹಮ್ಮದ್ ಮೌಲಿ, ಅಜ್ಜುಗೆ ಕಪಾಳಮೋಕ್ಷ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಅಜ್ಜು ತಕ್ಷಣವೇ ತನ್ನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಅಂಗಡಿಯಲ್ಲಿದ್ದ ಕಬ್ಬಿಣ ಕತ್ತರಿಸುವ ಕತ್ತರಿ, ರಾಡ್ ಹಾಗೂ ಇತರ ಮಾರಕಾಸ್ತ್ರಗಳಿಂದ ಮೌಲಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಮೌಲಿ ಮುಖ ಕಟ್ ಆಗಿ ತೀವ್ರ ಗಾಯಗೊಂಡಿದ್ದು, ಮೌಲಿ ಹಾಗೂ ಅಬ್ರಹಾರ್ ಎಂಬ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರು ಪೊಲೀಸ್​ ವಶಕ್ಕೆ 

ಸದ್ಯ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಕಲಾಸಿಪಾಳ್ಯ ಠಾಣೆ ಪೊಲೀಸರು, ಪ್ರಕರಣದ ಮುಖ್ಯ ಆರೋಪಿಗಳಾದ ಅಜ್ಜು, ಅಮಜ್ದ್, ಅಸ್ಗರ್ ಸೇರಿದಂತೆ ಒಟ್ಟು ಐವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಈಜಿ ಮಾಡ್ಯುಲರ್ ಸಾರ್ವಜನಿಕ ಶೌಚಾಲಯಗಳು: ಏನೆಲ್ಲ ಆಧುನಿಕ ವ್ಯವಸ್ಥೆ? – Kannada News | Bengaluru Gets ‘Eeze’ Modular Public Toilets: Free Access with Dedicated Facilities for Transgenders and Differently Abled

ಬೆಂಗಳೂರು, ಆಗಸ್ಟ್​​ 06: ಸಾರ್ವಜನಿಕರಿಗೆ ಸ್ವಚ್ಛ, ಸುರಕ್ಷಿತ ಹಾಗೂ ಸುಲಭವಾಗಿ ಬಳಸಬಹುದಾದ ಶೌಚಾಲಯಗಳ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ನಗರದಲ್ಲಿ ಈಜಿ ಹೆಸರಿನ ಮಾಡ್ಯುಲರ್ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಆರಂಭಿಸಿದೆ. ಈ ಶೌಚಾಲಯಗಳು ಸಂಪೂರ್ಣ ಉಚಿತವಾಗಿದ್ದು, ಸಾಂಪ್ರದಾಯಿಕ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಸ್ವಚ್ಛತೆ, ಸುಲಭ ನಿರ್ವಹಣೆ ಮತ್ತು ಉತ್ತಮ ಪ್ರವೇಶ ವ್ಯವಸ್ಥೆಯನ್ನು ಹೊಂದಿವೆ.

35 ಶೌಚಾಲಯಗಳ ನಿರ್ಮಾಣ ಯೋಜನೆ

ಬೆಂಗಳೂರು ನಗರದಲ್ಲಿ ಒಟ್ಟು 35 ಮಾಡ್ಯುಲರ್ ಶೌಚಾಲಯಗಳನ್ನು ನಿರ್ಮಿಸಲು ಬಿಎಸ್‌ಡಬ್ಲ್ಯುಎಂಎಲ್ ಯೋಜನೆ ರೂಪಿಸಿದೆ. ಆ ಪೈಕಿ 34 ಸ್ಥಳಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೊನೆಯ ಶೌಚಾಲಯದ ಕಾಮಗಾರಿ ಬಸವನಗುಡಿಯಲ್ಲಿ ಆರಂಭವಾಗಿದ್ದು, ಮೊದಲ ಶೌಚಾಲಯವನ್ನು ಮೆಜೆಸ್ಟಿಕ್‌ನಲ್ಲಿ ಸೋಮವಾರ ಉದ್ಘಾಟಿಸಲಾಗಿದೆ. ಬ್ಯಾಟರಾಯನಪುರದಲ್ಲಿ 3 ಹಾಗೂ ಯಶವಂತಪುರದಲ್ಲಿ 4 ಶೌಚಾಲಯಗಳು ಉದ್ಘಾಟನೆಗೆ ಸಿದ್ಧವಾಗಿವೆ.

ಇದನ್ನೂ ಓದಿ: ಬಿಎಂಟಿಸಿಯಲ್ಲಿ ಡಿಜಿಟಲ್ ಕ್ರಾಂತಿ: ಯುಪಿಐನಿಂದಲೇ ಶೇ.51ಕ್ಕೂ ಹೆಚ್ಚು ಟಿಕೆಟ್ ಆದಾಯ!

ಆಧುನಿಕ ತಂತ್ರಜ್ಞಾನ

15 ಅಡಿ × 40 ಅಡಿ ಗಾತ್ರದ ಈ ಮಾಡ್ಯುಲರ್ ಶೌಚಾಲಯಗಳನ್ನು ಇಂದಿರಾ ಕ್ಯಾಂಟೀನ್ ಮಾದರಿಯ ಪ್ರೀಕಾಸ್ಟ್ ಘಟಕಗಳಿಂದ ನಿರ್ಮಿಸಲಾಗಿದೆ. ಇದರಿಂದ ಸ್ಥಳದಲ್ಲೇ ಕಡಿಮೆ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಸೆನ್ಸರ್ ಆಧಾರಿತ ಸ್ವಯಂಚಾಲಿತ ಫ್ಲಷ್ ವ್ಯವಸ್ಥೆ, ನೈಸರ್ಗಿಕ ಗಾಳಿ ಸಂಚಾರಕ್ಕೆ ವಿಶೇಷ ಲೋಹದ ಜಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಎಸ್‌ಡಬ್ಲ್ಯುಎಂಎಲ್ ಉಪ ಮಹಾಪ್ರಬಂಧಕ ಭೀಮೇಶ್ ಅವರ ಪ್ರಕಾರ, ಪ್ರತಿ ಶೌಚಾಲಯದ ನಿರ್ವಹಣೆಗೆ ತಿಂಗಳಿಗೆ ಸುಮಾರು 50,000 ರೂ. ವೆಚ್ಚವಾಗಲಿದ್ದು, ಇದರಲ್ಲಿ ಸಿಬ್ಬಂದಿ ವೇತನ, ವಿದ್ಯುತ್ ಮತ್ತು ನೀರಿನ ಶುಲ್ಕ ಸೇರಿವೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version