CSK ತಂಡಕ್ಕೆ ಬಿಗ್ ಶಾಕ್: ಯುವ ದಾಂಡಿಗ ಐಪಿಎಲ್​ನಿಂದ ಔಟ್

Source link

ಪಶ್ಚಿಮ ಬಂಗಾಳದಲ್ಲಿ ನಿರ್ದಿಷ್ಟ ಸಮುದಾಯದಲ್ಲಿ 4 ಮದುವೆ ನಿಷೇಧಿಸುತ್ತೇವೆ; ಅಮಿತ್ ಶಾ ಪ್ರತಿಜ್ಞೆ – Kannada News | Amit Shah vows to ban 4 marriages in certain community during West Bengal Rally

ಕೊಲ್ಕತ್ತಾ, ಏಪ್ರಿಲ್ 21: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಈ ಬಾರಿ ಬಿಜೆಪಿ ಸರ್ಕಾರವನ್ನು ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ (Amit Shah), ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯದ ಜನರು ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ನಿಷೇಧಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲಿದೆ. ನಾವು ಒಮ್ಮೆ ಅಧಿಕಾರಕ್ಕೆ ಬಂದ ನಂತರ ಬಂಗಾಳದಲ್ಲಿ ಯುಸಿಸಿ ಜಾರಿಗೊಳಿಸುವ ಮೂಲಕ ಒಂದು ನಿರ್ದಿಷ್ಟ ಸಮುದಾಯದಲ್ಲಿ 4 ವಿವಾಹಗಳನ್ನು ನಿಷೇಧಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ.

6 ತಿಂಗಳಲ್ಲಿ ಗೂರ್ಖಾಗಳ ಸಮಸ್ಯೆಗೆ ಪರಿಹಾರ:

ಬಂಗಾಳದ ಕುರ್ಸಿಯೊಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಡಾರ್ಜಿಲಿಂಗ್‌ನಲ್ಲಿ ಗೂರ್ಖಾ ಸಮುದಾಯಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದ ನಂತರ 6 ತಿಂಗಳೊಳಗೆ ಗೂರ್ಖಾಗಳಿಗೆ ಸರಿಯಾದ ಪರಿಹಾರವನ್ನು ನೀಡಲಾಗುವುದು. ಟಿಎಂಸಿ ಮತ್ತು ಕಾಂಗ್ರೆಸ್ ಸೇರಿದಂತೆ ಹಿಂದಿನ ಸರ್ಕಾರಗಳು ಗೂರ್ಖಾಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ; ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಮಿತ್ ಶಾ

“ಮಮತಾ ದೀದಿ ಗೂರ್ಖಾ ಇತಿಹಾಸವನ್ನು ನಿಗ್ರಹಿಸಲು ಪ್ರಯತ್ನಿಸಿದ್ದಾರೆ. ಈಗ ಗೂರ್ಖಾಗಳ ವಿರುದ್ಧದ ಅನ್ಯಾಯವನ್ನು ಕೊನೆಗೊಳಿಸುವ ಸಮಯ ಬಂದಿದೆ. ಡಾರ್ಜಿಲಿಂಗ್ ಜನರು ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಮಮತಾ ಬ್ಯಾನರ್ಜಿ ಅವರನ್ನು ದಂಡಿಸಬೇಕಾಗಿದೆ. ನಾವು ಗೂರ್ಖಾಗಳಿಗೆ ಆಗಿರುವ ಅನ್ಯಾಯವನ್ನು ಕೊನೆಗೊಳಿಸುತ್ತೇವೆ. ನಮ್ಮ ಗೂರ್ಖಾ ಸಹೋದರರ ವಿರುದ್ಧ ನೂರಾರು ಸುಳ್ಳು ಪ್ರಕರಣಗಳಿವೆ. ಜುಲೈ 31ರ ಮೊದಲು ನಾವು ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತೇವೆ” ಎಂದು ಅಮಿತ್ ಶಾ ಘೋಷಿಸಿದ್ದಾರೆ.

ಇದನ್ನೂ ಓದಿ: ಪ್ರತಿ ಚುನಾವಣೆಯಲ್ಲೂ ಮಹಿಳೆಯರ ಕೋಪ ಎದುರಿಸಬೇಕಾಗುತ್ತದೆ; ವಿರೋಧ ಪಕ್ಷಗಳಿಗೆ ಅಮಿತ್ ಶಾ ಎಚ್ಚರಿಕೆ

ಸಂದೇಶಖಾಲಿಯಲ್ಲಿ ನಡೆದಂತಹ ಘಟನೆಗಳನ್ನು ಉಲ್ಲೇಖಿಸಿದ ಅಮಿತ್ ಶಾ, ಪ್ರಸ್ತುತ ಟಿಎಂಸಿ ಸರ್ಕಾರದ ಅಡಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚಿವೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ರಚಿಸಿದರೆ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳುವ ಮೂಲಕ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಏಪ್ರಿಲ್ 23 ಮತ್ತು 29ರಂದು ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತ ಎಣಿಕೆಯನ್ನು ಮೇ 4ರಂದು ನಿಗದಿಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಿಂದಿ ಗೊಂದಲ: SSLC ಫಲಿತಾಂಶ ವಿಳಂಬ, ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? – Kannada News | SSLC Hindi Language Row: Madhu Bangarappa Reacts Over Karnataka High Court Halting Midway Grading Shift

ಬೆಂಗಳೂರು, (ಏಪ್ರಿಲ್ 21): ಎಸ್‌ಎಸ್‌ಎಲ್‌ಸಿ ಹಿಂದಿ (SSLC Hindi) ವಿಷಯಕ್ಕೆ ಗ್ರೇಡ್ ಬದಲಿಗೆ ಅಂಕ ನೀಡುವಂತೆ ಆದೇಶ ಸಂಬಂಧ ರಾಜ್ಯ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್​​ (Karnataka High Court) ಇತ್ಯರ್ಥಪಡಿಸಿದೆ. 2025-26ರಿಂದ ಹಿಂದಿ ವಿಷಯಕ್ಕೆ ಅಂಕ ನೀಡಬೇಕೆಂದು ಪೀಠ ಸ್ಪಷ್ಟಪಡಿಸಿದ್ದು, ನೀವು ಎಲ್ಲರನ್ನೂ ಪಾಸ್ ಮಾಡಬೇಕೆಂದಿದ್ದರೆ ಪರೀಕ್ಷೆಯನ್ನೇ ರದ್ದು ಮಾಡಿ. ನಿಯಮ ರೂಪಿಸುವ ಮುನ್ನ ಪರೀಕ್ಷಾ ಪದ್ಧತಿ ಬದಲಾವಣೆ ಸೂಕ್ತವಲ್ಲ ಎಂದು ತಿಳಿಸಿದೆ. ಇನ್ನು ಈ ಹೈಕೋರ್ಟ್ ಆದೇಶದ ಬಗ್ಗೆ ಸಿಎಂ ಜತೆ ಮಾತನಾಡುವುದಾಗಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಹೀಗಾಗಿ ಎಸ್​​ಎಸ್​ಎಲ್​​ಸಿ ಫಲಿತಾಂಶ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಇನ್ನು ಈ ಬಗ್ಗೆ ಟಿವಿ9ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಈ ಮೊದಲು ಹೈಕೋರ್ಟ್ ನಮ್ಮ ಪರವಾಗಿ ಹೇಳಿತ್ತು. ಯಾರು ಅರ್ಜಿ ಹಾಕಿದ್ದರು ಅವರಿಗೆ ದಂಡ ಹಾಕಿತ್ತು. ಈಗ ಯಾರೋ ಅರ್ಜಿ ಸಲ್ಲಿಸಿದ್ದು, ಅದರನ್ವಯ ಈ ವರ್ಷ ಬೇಡ, ಮುಂದಿನ ವರ್ಷ ನೀವು ಮಾಡಿ ಎಂದು ಆದೇಶ ನೀಡಿದೆ. ಈ ವರ್ಷ ಅಂಕ ನೀಡಿ ಎಂದಿದ್ದಾರೆ. ಆದ್ರೆ ನಾನು ಇನ್ನೂ ಆರ್ಡರ್ ನೋಡಿಲ್ಲ. ನನಗೆ ಎಜಿ ಮತ್ತು ಡಿಪಾರ್ಟ್ಮೆಂಟ್ ಅವರು ಹೇಳಿದ್ದರು. ನಾನು ಈ ಮಾಹಿತಿ ಯನ್ನ ಸಿಎಂ ಅವರಿಗೆ ಹೇಳಿದ್ದೇನೆ. ಅವರು ಈಗ ಮೈಸೂರಲ್ಲಿದ್ದಾರೆ, ಇಂದು (ಏಪ್ರಿಲ್ 21) ಸಂಜೆ ಬರ್ತಾರೆ. ನಾಳೆ (ಏಪ್ರಿಲ್ 22) ಅವರ ಬಳಿ ಮಾತಾಡಿ ಮುಂದೆ ಏನು ಮಾಡಬೇಕು ಎಂದು ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: SSLC ಹಿಂದಿ ವಿಷಯಕ್ಕೆ ಗ್ರೇಡ್​​ ಬದಲಿಗೆ ಅಂಕ: ಹೈಕೋರ್ಟ್ ಆದೇಶ ಮರುಪರಿಶೀಲನಾ ಅರ್ಜಿ ಇತ್ಯರ್ಥ

Source link

‘ರಾಜ ಶಿವಾಜಿ ಪಾತ್ರಕ್ಕೆ ರಿತೇಶ್ ದೇಶ್‌ಮುಖ್ ಸೂಕ್ತವಲ್ಲ’: ನೆಟ್ಟಿಗರಿಂದ ಟ್ರೋಲ್ ಆದ ನಟ – Kannada News | Riteish Deshmukh Raja Shivaji Trailer backlash netizens call him misfit

ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ (Riteish Deshmukh) ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ರಾಜ ಶಿವಾಜಿ’ (Raja Shivaji) ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಟ್ರೇಲರ್ ರಿಲೀಸ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಏಪ್ರಿಲ್ 20ರಂದು ಅದ್ದೂರಿಯಾಗಿ ಟ್ರೇಲರ್ ಲಾಂಚ್ ಆಗಿದ್ದರೂ, ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ರಿತೇಶ್ ಆಯ್ಕೆಯಾಗಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರೇಕ್ಷಕರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ರೆಡ್ಡಿಟ್ ಮತ್ತು ಇತರ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಿನಿಪ್ರಿಯರು ರಿತೇಶ್ ಅವರ ನಟನೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ‘ಈ ಪಾತ್ರಕ್ಕೆ ರಿತೇಶ್ ಅವರು ಹೊಂದಿಕೆಯಾಗುತ್ತಿಲ್ಲ. ಅವರ ಧ್ವನಿಯಲ್ಲಿ ಆ ಗಾಂಭೀರ್ಯ ಮತ್ತು ಶಕ್ತಿ ಇಲ್ಲ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಚಿತ್ರವು ಅಕ್ಷಯ್ ಕುಮಾರ್ ಅವರ ‘ಪೃಥ್ವಿರಾಜ್ ಚೌಹಾಣ್’ ಚಿತ್ರದಂತೆ ಸೋಲಬಹುದು ಎಂಬ ಆತಂಕವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

‘ರಿತೇಶ್ ದೇಶ್‌ಮುಖ್ ಅವರ ಸಂಭಾಷಣೆ ಮತ್ತು ಹಾವಭಾವಗಳಲ್ಲಿ ಶಿವಾಜಿ ಮಹಾರಾಜರಂತಹ ಮಹಾನ್ ವೀರನ ವ್ಯಕ್ತಿತ್ವ ಕಾಣಿಸುತ್ತಿಲ್ಲ. ಮೇಕಪ್ ಮಾಡಿದರೂ ಅವರು ಆ ಪಾತ್ರಕ್ಕೆ ಜೀವ ತುಂಬಲು ವಿಫಲರಾಗಿದ್ದಾರೆ’ ಎಂಬ ಕಮೆಂಟ್ ಕೂಡ ಬಂದಿದೆ. ಶಿವಾಜಿ ಮಹಾರಾಜರ ಪಾತ್ರಕ್ಕೆ ಶರದ್ ಕೇಳ್ಕರ್ ಅವರಂತಹ ಗಂಭೀರ ಧ್ವನಿಯ ನಟ ಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ದಕ್ಷಿಣ ಭಾರತದ ನಟರಾದ ರಾಮ್ ಚರಣ್ ಅಥವಾ ರಿಷಬ್ ಶೆಟ್ಟಿ ಅವರಂತಹ ನಟರು ಈ ಪಾತ್ರಕ್ಕೆ ಹೆಚ್ಚು ಸೂಕ್ತ ಎಂದು ಹೇಳುತ್ತಿದ್ದಾರೆ.

‘ರಾಜ ಶಿವಾಜಿ’ ಸಿನಿಮಾ ಟ್ರೇಲರ್:

ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಿತೇಶ್ ದೇಶ್‌ಮುಖ್ ಅವರು ಸಾಕಷ್ಟು ಭಾವುಕರಾದರು. ಚಿತ್ರವನ್ನು ತೆರೆಗೆ ತರಲು ತಾವು ಪಟ್ಟ ಶ್ರಮವನ್ನು ನೆನೆದು ಅವರು ವೇದಿಕೆಯ ಮೇಲೆ ಕಣ್ಣೀರಿಟ್ಟರು. ಈ ಕಷ್ಟದ ಸಮಯದಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಪತ್ನಿ ಜೆನಿಲಿಯಾ ಮತ್ತು ನಟ ಅಭಿಷೇಕ್ ಬಚ್ಚನ್ ಅವರಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ: ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ನಾಗರಾಜ್ ವಾರ್ನಿಂಗ್

‘ರಾಜ ಶಿವಾಜಿ’ ಸಿನಿಮಾಗೆ ರಿತೇಶ್ ದೇಶ್‌ಮುಖ್ ಅವರೇ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್ ಬಚ್ಚನ್, ಸಂಜಯ್ ದತ್, ಜೆನಿಲಿಯಾ ದೇಶ್‌ಮುಖ್, ಮಹೇಶ್ ಮಾಂಜ್ರೇಕರ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ರಿತೇಶ್ ಅವರ 10 ವರ್ಷದ ಪುತ್ರ ರಾಹಿಲ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್‌ಕೋಟ್ ಸೈಬರ್ ವಂಚನೆ: 2,500 ಕೋಟಿ ರೂ ಹಗರಣ ಬಯಲು, ಪ್ರಮುಖ ಬ್ಯಾಂಕ್ ಅಧಿಕಾರಿಗಳ ಬಂಧನ – Kannada News | Rajkot Cyber Fraud: Bank Officials Arrested in Rs 2500 Cr Scam | Gujarat Police Uncovers Mega Mule Account Racket

ಅಹ್ಮದಾಬಾದ್, ಏಪ್ರಿಲ್ 21: ಗುಜರಾತ್‌ನ ರಾಜ್‌ಕೋಟ್ ಗ್ರಾಮಾಂತರ ಪೊಲೀಸರು ದೇಶವನ್ನೇ ಬೆಚ್ಚಿಬೀಳಿಸುವಂತಹ ಬೃಹತ್ ಸೈಬರ್ ವಂಚನೆಯ (cyber crime) ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 20 ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಹೆಸರಾಂತ ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳೂ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ. 2,500 ಕೋಟಿ ರೂಗಳ ಈ ಮೆಗಾ ಸೈಬರ್ ವಂಚನೆಯಲ್ಲಿ ಇದುವರೆಗಿನ ಅತ್ಯಂತ ಆಘಾತಕಾರಿ ಕ್ರಮವಾಗಿದೆ. ಪೊಲೀಸರು ಮೂರು ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು HDFC ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ವಂಚಕರಿಗೆ ಅನುಕೂಲ ಮಾಡಿಕೊಡಲು ಮತ್ತು ಕೋಟ್ಯಂತರ ರೂಪಾಯಿಗಳ ದುರುಪಯೋಗಕ್ಕೆ ಅನುಕೂಲ ಮಾಡಿಕೊಡಲು ಅವರು ತಮ್ಮ ಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ಈ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಬ್ಯಾಂಕ್ ಅಧಿಕಾರಿಗಳು ಮೌಲಿಕ್ ಕಾಮಾಣಿ, ಕಲ್ಪೇಶ್ ದಂಗಾರಿಯಾ ಮತ್ತು ಅನುರಾಗ್ ಬಾಲ್ಡಾ. ಇದರಲ್ಲಿ ಮೌಲಿಕ್ ಅವರು ಪಡಧರಿಯ ಯೆಸ್ ಬ್ಯಾಂಕ್‌ನ ಪರ್ಸನಲ್ ಮ್ಯಾನೇಜರ್. ಕಲ್ಪೇಶ್ ದಂಗಾರಿಯಾ ಅವರು ಜಾಮ್‌ನಗರದ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್. ಅನುರಾಗ್ ಬಾಲ್ದಾ ಅವರು ರಾಜ್‌ಕೋಟ್‌ನ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಪರ್ಸನಲ್ ಬ್ಯಾಂಕರ್ ಆಗಿದ್ದಾರೆ.

ಇದನ್ನೂ ಓದಿ: ಆಪಲ್ ಸಾಮ್ರಾಜ್ಯದಲ್ಲಿ ಹೊಸ ಯುಗ: ಟಿಮ್ ಕುಕ್ ನಿರ್ಗಮನ, ಜಾನ್ ಟೆರ್ನಸ್ ನೂತನ ಸಾರಥಿ

ಖದೀಮರ ಕಾರ್ಯವೈಖರಿ ಹೀಗಿದೆ

ಈ ಬ್ಯಾಂಕ್ ಅಧಿಕಾರಿಗಳು ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ, ನಕಲಿ ದಾಖಲೆಗಳನ್ನು ಬಳಸಿ ಅಥವಾ ಅಮಾಯಕ ವ್ಯಕ್ತಿಗಳ ಹೆಸರಿನಲ್ಲಿ ಅವರ ಅರಿವಿಲ್ಲದೆಯೇ ಸುಮಾರು 85ಕ್ಕೂ ಹೆಚ್ಚು ‘ಮ್ಯೂಲ್ ಅಕೌಂಟ್’ಗಳನ್ನು (ಹಣ ವರ್ಗಾವಣೆಗೆ ಬಳಸುವ ನಕಲಿ ಖಾತೆಗಳು) ತೆರೆದಿದ್ದರು.

ಇವರು ಆರ್‌ಬಿಐ (RBI) ನಿಯಮಗಳನ್ನು ಗಾಳಿಗೆ ತೂರಿ, ಹೆಚ್ಚಿನ ಮೊತ್ತದ ವ್ಯವಹಾರಗಳು ನಡೆದಾಗ ಬರುವ ಆಂತರಿಕ ಎಚ್ಚರಿಕೆಗಳನ್ನು (Alerts) ನಿರ್ಲಕ್ಷಿಸಿ, ನಕಲಿ ದಾಖಲೆಗಳನ್ನು ಸಲ್ಲಿಸಿ ಆ ಖಾತೆಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು.

ಈ ಅಕ್ರಮ ಕೆಲಸಕ್ಕಾಗಿ ಇವರು ಅಪರಾಧಿಗಳಿಂದ ಭಾರಿ ಪ್ರಮಾಣದ ಕಮಿಷನ್ ಪಡೆಯುತ್ತಿದ್ದರು. ಆರೋಪಿ ಮೌಲಿಕ್ ಕಾಮಾಣಿಗೆ ಉಡುಗೊರೆಯಾಗಿ ಐಷಾರಾಮಿ ಫೋನ್ ನೀಡಲಾಗಿತ್ತು ಎಂಬ ವಿಷಯವೂ ತನಿಖೆಯಲ್ಲಿ ತಿಳಿದುಬಂದಿದೆ.

ಅಕ್ರಮವಾಗಿ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವಿತ್‌ಡ್ರಾ ಮಾಡಿ, ನಂತರ ಅದನ್ನು ಹವಾಲಾ ಮಾರ್ಗಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗುತ್ತಿತ್ತು.

ಹಗರಣ ಬಯಲಾಗಿದ್ದು ಹೇಗೆ?

ರಾಜ್‌ಕೋಟ್ ಪೊಲೀಸರು ಬ್ಯಾಂಕಿಂಗ್ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಗೊಂಡಲ್ ಮಾರ್ಕೆಟಿಂಗ್ ಯಾರ್ಡ್‌ನ ‘ಜ್ಯೋತ್ ಟ್ರೇಡಿಂಗ್ ಕಂಪನಿ’ ಹೆಸರಿನ ಖಾತೆಯಲ್ಲಿ ಸುಮಾರು 200 ಕೋಟಿ ರೂಪಾಯಿಗಳ ಸಂಶಯಾಸ್ಪದ ವ್ಯವಹಾರ ನಡೆದಿರುವುದು ಕಂಡುಬಂದಿತು. ಇದನ್ನು ಬೆನ್ನಟ್ಟಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್

ಹಗರಣದ ಪ್ರಮುಖ ಅಂಕಿಅಂಶಗಳು:

ಒಟ್ಟು ವಂಚನೆ ಮೊತ್ತ ಸುಮಾರು 2,500 ಕೋಟಿ ರೂಪಾಯಿಗಳಾಗಿವೆ. ಈ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೇಶಾದ್ಯಂತ 535 ದೂರುಗಳು ದಾಖಲಾಗಿವೆ. ಹಗರಣಕ್ಕೆ ಸಂಬಂಧಿಸಿದ 85 ಬ್ಯಾಂಕ್ ಖಾತೆಗಳು ಮತ್ತು 35 ನಕಲಿ ಸಂಸ್ಥೆಗಳನ್ನು ಪೊಲೀಸರು ಗುರುತಿಸಿದ್ದಾರೆ.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಅನೇಕರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ ಮತ್ತು ದಾಖಲೆಗಳ ಬಗ್ಗೆ ಎಚ್ಚರದಿಂದಿರಲು ಪೊಲೀಸರು ಸೂಚಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Points Table: ಗುಜರಾತ್​ ವಿರುದ್ಧ ಗೆದ್ದು ಕೊನೆಯ ಸ್ಥಾನದಿಂದ ಹೊರಬಂದ ಮುಂಬೈ – Kannada News | IPL 2026 Points Table: Mumbai Indians Stun GT, Tilak Varma Powers MI’s 10th to 7th Jump

ಐಪಿಎಲ್ 2026 (IPL 2026) ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಸೋಲಿನ ಸರಪಳಿಯನ್ನು ಮುರಿದಿದೆ. ನಿನ್ನೆ ನಡೆದ ಟೂರ್ನಿಯ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ (MI vs GT) ವಿರುದ್ಧ 99 ರನ್‌ಗಳ ಅದ್ಭುತ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ 199 ರನ್ ಗಳಿಸಿತು. ತಂಡದ ಪರ ತಿಲಕ್ ವರ್ಮಾ (Tilak Varma) ಒಬ್ಬರೇ 101 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 100 ರನ್​ಗಳಿಗೆ ಆಲೌಟ್ ಆಯಿತು. ಅಂದರೆ ತಿಲಕ್ ಬಾರಿಸಿದ ಮೊತ್ತವನ್ನು ಗುಜರಾತ್​ಗೆ ದಾಟಲು ಸಾಧ್ಯವಾಗಲಿಲ್ಲ. ಈ ಹಿಂದೆ ಸತತ ನಾಲ್ಕು ಪಂದ್ಯಗಳನ್ನು ಸೋತಿದ್ದ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ನಿನ್ನೆಯ ಗೆಲುವಿನೊಂದಿಗೆ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ 10 ರಿಂದ 7 ನೇ ಸ್ಥಾನಕ್ಕೇರಿದೆ.

ಮೂರು ಸ್ಥಾನ ಮೇಲೇರಿದ ಮುಂಬೈ

ಮೇಲೆ ಹೇಳಿದಂತೆ ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋತ ನಂತರ ಗೆಲುವು ಸಾಧಿಸಿತು. ಐಪಿಎಲ್ 2026 ರಲ್ಲಿ ಮುಂಬೈ ತಂಡಕ್ಕೆ ಇದು ಕೇವಲ ಎರಡನೇ ಗೆಲುವು. ಮುಂಬೈ ತಂಡವು ಈಗ ಆರು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಸರಿಗಟ್ಟಿದೆ. ಆದಾಗ್ಯೂ, ಮುಂಬೈ ಎರಡು ಅಂಕಗಳನ್ನು ಗಳಿಸಿದ್ದಲ್ಲದೆ, ತನ್ನ ನೆಟ್ ರನ್​ರೇಟ್​ನಲ್ಲಿ ಗಮನಾರ್ಹ ಸುಧಾರಣೆ ಸಾಧಿಸಿದೆ. ಈ ಪಂದ್ಯಕ್ಕೂ ಮೊದಲು, ಅದರ ರನ್ ರೇಟ್ -1.07 ರ ಆಸುಪಾಸಿನಲ್ಲಿತ್ತು, ಆದರೆ 99 ರನ್‌ಗಳ ಗೆಲುವಿನ ನಂತರ, ಅದರ ರನ್ ರೇಟ್ 0.067 ಕ್ಕೆ ಜಿಗಿದಿದೆ. ಇದರಿಂದಾಗಿ ಮುಂಬೈ 10 ರಿಂದ 7 ನೇ ಸ್ಥಾನಕ್ಕೆ ಜಿಗಿದಿದೆ.

ಜಾರಿದ 4 ತಂಡಗಳು

ಇತ್ತ ಮುಂಬೈ ವಿರುದ್ಧ ಹೀನಾಯವಾಗಿ ಸೋತ ಗುಜರಾತ್ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡು ಕೇವಲ ಆರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇದಲ್ಲದೆ, ಅದರ ರನ್ ರೇಟ್ ಕೂಡ ಗಮನಾರ್ಹವಾಗಿ -0.821 ಕ್ಕೆ ಇಳಿದಿದೆ. ಏತನ್ಮಧ್ಯೆ, ಮುಂಬೈ ಗೆಲುವಿನ ಪರಿಣಾಮಗಳನ್ನು ಇತರ ಮೂರು ತಂಡಗಳು ಸಹ ಅನುಭವಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಏಳನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಮತ್ತು ಲಕ್ನೋ ಎಂಟನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಏತನ್ಮಧ್ಯೆ, ಒಂದು ದಿನದ ಹಿಂದೆ ತಮ್ಮ ಮೊದಲ ಪಂದ್ಯವನ್ನು ಗೆದ್ದು ಮುಂಬೈಯನ್ನು ಕೊನೆಯ ಸ್ಥಾನಕ್ಕೆ ತಳ್ಳಿದ್ದ ಕೋಲ್ಕತಾ ನೈಟ್ ರೈಡರ್ಸ್ ಈಗ 10 ನೇ ಸ್ಥಾನಕ್ಕೆ ಕುಸಿದಿದೆ.

KKR vs RR: 19 ವರ್ಷಗಳ ಐಪಿಎಲ್‌ನಲ್ಲಿ ಇದೇ ಮೊದಲು; ಇತಿಹಾಸ ಸೃಷ್ಟಿಸಿದ ಆರ್ಚರ್

ಟಾಪ್ 4 ತಂಡಗಳಿವು

ಉಳಿದಂತೆ ಆಡಿರುವ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು ಅಜೇಯ ತಂಡ ಎನಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್​ಸಿಬಿ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 2 ರಲ್ಲಿ ಸೋತಿದೆ. ಆದಾಗ್ಯೂ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ಕೂಡ 6 ಅಂಕ ಹೊಂದಿದೆಯಾದರೂ ನೆಟ್ ರನ್​ರೇಟ್​ ವಿಚಾರದಲ್ಲಿ ಆರ್​​ಸಿಬಿಗಿಂತ ಹಿಂದಿದೆ. ಸನ್​ರೈಸರ್ಸ್​ ಹೈದರಾಬಾದ್ ತಂಡ ಮೂರು ಗೆಲುವುಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:01 pm, Tue, 21 April 26

Source link

‘ಕೆಜಿಎಫ್ 3’ ಸಿನಿಮಾ ಬಗ್ಗೆ ಮಾತನಾಡಿದ ಯಶ್: ಹೇಳಿದ್ದೇನು? – Kannada News | Yash talks about KGF 3, says he is talking with Prashanth Neel

ಯಶ್ (Yash) ನಟನೆಯ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಎರಡೂ ಸಿನಿಮಾಗಳು ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳು ಎನಿಸಿಕೊಂಡಿವೆ. ಅದರಲ್ಲೂ ಯಶ್ ಅವರ ‘ಟಾಕ್ಸಿಕ್’ ಬಿಡುಗಡೆ ಹತ್ತಿರದಲ್ಲೇ ಇದ್ದು, ಈ ಸಿನಿಮಾದ ಬಗ್ಗೆಯಂತೂ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ನಿರೀಕ್ಷೆ ಇದೆ. ‘ರಾಮಾಯಣ’ ಸಿನಿಮಾ ಸಹ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲು ಸಜ್ಜಾಗುತ್ತಿದೆ. ಇವುಗಳ ಜೊತೆಗೆ ಯಶ್ ಅವರ ಅಭಿಮಾನಿಗಳಿಗೆ, ಸದಾ ಒಂದು ಪ್ರಶ್ನೆ ಇದ್ದಿದ್ದೇ, ಅದುವೇ ‘ಕೆಜಿಎಫ್ 3’ನದ್ದು. ಹೊಂಬಾಳೆ ಫಿಲಮ್ಸ್ ಹಾಗೂ ಪ್ರಶಾಂತ್ ನೀಲ್ ಸಹ ಹಿಂದೆ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ್ದರು. ಇದೀಗ ಸ್ವತಃ ಯಶ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಕೆಜಿಎಫ್ 3’ ಸಿನಿಮಾ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಇದೀಗ ನಟ ಯಶ್ ಅವರು ‘ಕೆಜಿಎಫ್: ಚಾಪ್ಟರ್ 3’ ಸಿನಿಮಾ ಖಂಡಿತವಾಗಿಯೂ ನಡೆಯುತ್ತದೆ ಎಂದು ಭರವಸೆ ನೀಡಿದ್ದಾರೆ. ಆದರೆ ಅದು ಸನಿಹ ಭವಿಷತ್ನಲ್ಲಿ ಸಾಧ್ಯವಿಲ್ಲ ಎಂದು ಸಹ ಖಚಿತಪಡಿಸಿದ್ದಾರೆ. ಯಶ್ ಪ್ರಸ್ತುತ ತಮ್ಮ ಮುಂಬರುವ ಚಿತ್ರಗಳಾದ ‘ಟಾಕ್ಸಿಕ್’ ಮತ್ತು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಗಳ ಮೇಲೆ ಗಮನ ಹರಿಸುತ್ತಿದ್ದು, ‘ಕೆಜಿಎಫ್ 3’ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್

‘ಸದ್ಯಕ್ಕೆ ನಾನು ‘ಟಾಕ್ಸಿಕ್’, ‘ರಾಮಾಯಣ’ ಮತ್ತು ‘ರಾಮಾಯಣ 2’ ಸಿನಿಮಾಗಳ ಮೇಲೆ ಮಾತ್ರವೇ ಗಮನ ಹರಿಸಿದ್ದೇನೆ. ಅವುಗಳ ಹೊರತಾಗಿ ಇನ್ಯಾವುದೇ ಸಿನಿಮಾಗಳ ಬಗ್ಗೆ ನಾನು ಯೋಚಿಸುತ್ತಿಲ್ಲ. ಆದರೆ ನಾನು ಮತ್ತು ಪ್ರಶಾಂತ್ ನೀಲ್ ಹೊಸ ಸಿನಿಮಾ ಐಡಿಯಾಗಳ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ಯಾವುದಾದರೂ ಐಡಿಯಾ ಚೆನ್ನಾಗಿ ಅನಿಸಿದರೆ ನಾವು ‘ಕೆಜಿಫ್ 3’ ಮಾಡುತ್ತೇವೆ. ಕೇವಲ ಹಣ ಮಾಡುವ ಉದ್ದೇಶದಿಂದ ನಾವು ಈ ಸಿನಿಮಾ ಮಾಡುವುದಿಲ್ಲ. ಪ್ರೇಕ್ಷಕರು ನಮಗೆ ಸಾಕಷ್ಟು ಪ್ರೀತಿ ನೀಡಿದ್ದಾರೆ, ಅವರಿಗೆ ಹೆಮ್ಮೆ ಎನಿಸುವಂತಹ ಅದ್ಭುತವಾದ ಕಥೆ ಸಿದ್ಧವಾದಾಗ ಮಾತ್ರ ನಾವು ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಮಾಡಿದ ಸಿನಿಮಾ. ಅದು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದೊಡ್ಡ ದಾರಿಯನ್ನು ಹಾಕಿಕೊಟ್ಟ ಹಾಗೂ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಗುರುತು ಮೂಡಿಸಿದ ಸಿನಿಮಾ ಆಗಿದೆ. ‘ಕೆಜಿಎಫ್ 2’ ಸಿನಿಮಾದ ಅಂತ್ಯದಲ್ಲಿ ಕತೆ ಮುಂದುವರೆಯುವ ಸುಳಿವನ್ನು ನೀಡಲಾಗಿತ್ತು. ಅದೇ ಕಾರಣಕ್ಕೆ ಕಳೆದ ಕೆಲ ವರ್ಷಗಳಿಂದಲೂ ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mangaluru Walk-in Interview: ನಿರುದ್ಯೋಗಿಗಳಿಗೆ ಸಿಹಿಸುದ್ದಿ; ಮಂಗಳೂರಿನಲ್ಲಿ ಏಪ್ರಿಲ್ 22 ರಂದು ಬೃಹತ್ ಉದ್ಯೋಗ ಮೇಳ! – Kannada News | Mangaluru Walk in Interview: My G Future and Akshaya Patra Jobs on April 22nd!

ನಿರುದ್ಯೋಗಿಗಳಿಗೆ ಸಿಹಿಸುದ್ದಿImage Credit source: Pinterest

ಮಂಗಳೂರು: ಕರಾವಳಿ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಅವಕಾಶವೊಂದನ್ನು ಕಲ್ಪಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬರುವ ಏಪ್ರಿಲ್ 22 ರಂದು ನೇರ ಸಂದರ್ಶನ (Walk-in Interview) ನಡೆಯಲಿದ್ದು, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಯಾವೆಲ್ಲಾ ಸಂಸ್ಥೆಗಳಲ್ಲಿ ಅವಕಾಶ?

ಈ ಬಾರಿಯ ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಎರಡು ಸಂಸ್ಥೆಗಳು ಭಾಗವಹಿಸುತ್ತಿವೆ. ಮೊದಲನೆಯದಾಗಿ, ಪ್ರಸಿದ್ಧ ರಿಟೇಲ್ ಸಂಸ್ಥೆಯಾದ ‘ಮೈ ಜಿ ಫ್ಯೂಚರ್’ (My G Future) ಕಂಪನಿಯು ಮ್ಯಾನೇಜ್‌ಮೆಂಟ್ ಮತ್ತು ಸೇಲ್ಸ್ ವಿಭಾಗದಲ್ಲಿ ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಎರಡನೆಯದಾಗಿ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ‘ಅಕ್ಷಯಪಾತ್ರ ಫೌಂಡೇಶನ್’ ಸಂಸ್ಥೆಯು ತಾಂತ್ರಿಕ ಮತ್ತು ಅಡುಗೆ ವಿಭಾಗದ ಸಿಬ್ಬಂದಿಗಳ ಹುಡುಕಾಟದಲ್ಲಿದೆ.

ವಿದ್ಯಾರ್ಹತೆ ಮತ್ತು ಹುದ್ದೆಗಳ ವಿವರ:

ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೈ ಜಿ ಫ್ಯೂಚರ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಮ್ಯಾನೇಜರ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಶೋ ರೂಮ್ ಸೇಲ್ಸ್ ಮತ್ತು ಕಸ್ಟಮರ್ ಸರ್ವಿಸ್ ವಿಭಾಗಗಳಲ್ಲಿ ಕೆಲಸ ಮಾಡಲು ಪದವಿ ಅಥವಾ ಪಿಯುಸಿ ಮುಗಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಅಕ್ಷಯಪಾತ್ರ ಫೌಂಡೇಶನ್‌ನಲ್ಲಿ ಚಾಲಕರು, ಹೆಲ್ಪರ್ ಹಾಗೂ ಅಡುಗೆ ಕೆಲಸಗಾರರ ಹುದ್ದೆಗಳಿದ್ದು, ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸಂದರ್ಶನ ಎಲ್ಲಿ ಮತ್ತು ಯಾವಾಗ?

ಬರುವ ಏಪ್ರಿಲ್ 22 ರಂದು ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಕಟ್ಟಡದ ನೆಲಮಹಡಿಯಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ಈ ಸಂದರ್ಶನ ಆಯೋಜಿಸಲಾಗಿದೆ. ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಮ್ಮ ಅಪ್‌ಡೇಟೆಡ್ ಬಯೋಡಾಟಾ (Resume) ಮತ್ತು ಶೈಕ್ಷಣಿಕ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗಬಹುದು.

ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕ:

ಸರ್ಕಾರದ ಈ ಯೋಜನೆಯು ಸ್ಥಳೀಯರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು, ಯಾವುದೇ ಶುಲ್ಕವಿಲ್ಲದೆ ಅಭ್ಯರ್ಥಿಗಳು ಸಂದರ್ಶನ ಭಾಗಿಯಾಗಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿಯ ದೂರವಾಣಿ ಸಂಖ್ಯೆ 0824-2457139 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಕೆದಾಟು ಯೋಜನೆಗೆ ಅಡ್ಡಗಾಲು: ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ – Kannada News | Mekedatu Row: JD(S) Slams Congress for Aligning with Anti Project DMK

ಬೆಂಗಳೂರು, ಏಪ್ರಿಲ್​​ 21: ಮೇಕೆದಾಟು ಯೋಜನೆ ತಡೆಯುವ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಿದ್ದರೂ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್​​ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಎಲ್ಲಾ ಮಂತ್ರಿಗಳು ತಮಿಳುನಾಡಿಗೆ ಹೋಗಿ, ವಾರಗಟ್ಟಲೆ ಠಿಕಾಣಿ ಹೂಡಿ ಡಿಎಂಕೆ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಹೀಗಾಗಿ “ನಮ್ಮ ನೀರು ನಮ್ಮ ಹಕ್ಕು” ಎಂದು ಹೋರಾಟದ ಬೃಹತ್ ನಾಟಕವಾಡಿದ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್​​ ಕಿಡಿ ಕಾರಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ! – Kannada News | Heatwave Crisis in Karnataka: Minister Urges Caution, Govt Sets Up Special Wards

ಬೆಂಗಳೂರು, ಏ.21: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಬಿಸಿ ಗಾಳಿ (Heat Wave) ಹೆಚ್ಚಿರುವುದರಿಂದ ಜನರು ತೀವ್ರ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ನೆನ್ನೆ (ಏ.20) ಬೀದರ್‌ನಲ್ಲಿ 20 ವರ್ಷದ ಯುವಕ ಹೀಟ್‌ಸ್ಟ್ರೋಕ್‌ಗೆ ಬಲಿಯಾಗಿದ್ದಾನೆ. ಇದೀಗ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಎಂದೂ ಕಾಣದಂತಹ ದಾಖಲೆ ಮಟ್ಟದ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯೂ ಇಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ತಾಪಕ್ಕೆ ಈಗಾಗಲೇ ರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ ಎಂದು ಸಚಿವರು ಖಚಿತಪಡಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ವಿಪರೀತವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು

ಬಿಸಿಲಿನ ಹೊಡೆತಕ್ಕೆ (Heat Stroke) ಒಳಗಾಗುವವರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಮತ್ತು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ವೈದ್ಯರು ಸನ್ನದ್ಧರಾಗಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಬಿಸಿ ಗಾಳಿಯ ಪ್ರಭಾವ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಚಿವರು ತಿಳಿಸಿದ್ದಾರೆ.ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೂರ್ಯನ ಶಾಖ ವಿಪರೀತವಾಗಿದ್ದು, ಅಲ್ಲಿನ ಜನರು ಮನೆಯಿಂದ ಹೊರಬರುವಾಗ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ಅಗತ್ಯ ಔಷಧಿ ಮತ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೈಟೆಕ್ ‘ಹೀಟ್ ಸ್ಟ್ರೋಕ್ ವಾರ್ಡ್’ ಸಜ್ಜು

ಜಿಲ್ಲೆಯಲ್ಲಿ ಸೂರ್ಯನ ತಾಪಮಾನ ಏರುತ್ತಲೇ ಇದ್ದು, ಪ್ರಸ್ತುತ 40 ರಿಂದ 41 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಈ ಬಿಸಿ ಗಾಳಿ ಮತ್ತು ಉಷ್ಣಾಘಾತದ (Heat Stroke) ಭೀತಿಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ಹೊಡೆತಕ್ಕೆ ಒಳಗಾಗುವವರಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಅನ್ನು ಸಿದ್ಧಪಡಿಸಲಾಗಿದೆ. ಈ ವಾರ್ಡ್‌ನಲ್ಲಿ ಒಟ್ಟು 10 ಸುಸಜ್ಜಿತ ಬೆಡ್‌ಗಳಿದ್ದು, ಇವುಗಳನ್ನು ಐಸಿಯು (ICU) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ವಾರ್ಡ್‌ನ ನಿರ್ವಹಣೆಗಾಗಿ ಇಬ್ಬರು ನರ್ಸ್‌ಗಳು ಹಾಗೂ ಪ್ರತ್ಯೇಕ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

ನಿನ್ನೆಯಷ್ಟೇ ಆಸ್ಪತ್ರೆಯಲ್ಲಿ ಫ್ಯಾನ್ ಸೌಲಭ್ಯದ ಕೊರತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾದ ಬೆನ್ನಲ್ಲೇ, ಆಸ್ಪತ್ರೆ ಅಧೀಕ್ಷಕರು ಎಚ್ಚೆತ್ತುಕೊಂಡು ಈ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ ಜಿಲ್ಲಾ ಆಸ್ಪತ್ರೆಯ ಮುಖ್ಯ ಅಧೀಕ್ಷಕರಾದ ಡಾ. ಮಂಜುನಾಥ್ ಅವರು ಜನರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮಕ್ಕಳು ಮತ್ತು ವೃದ್ಧರು ಪ್ರತಿ ಒಂದು ಗಂಟೆಗೊಮ್ಮೆ ತಪ್ಪದೇ ನೀರು ಕುಡಿಯಬೇಕು. ಬಿಸಿ ಗಾಳಿಯ ಪ್ರಭಾವದಿಂದ ತಲೆಸುತ್ತು ಅಥವಾ ಸುಸ್ತು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version