ಬಾಗಲಕೋಟೆಯಲ್ಲಿ ನದಿಗಳು ಖಾಲಿ ಖಾಲಿ, ಕುಸಿಯುತ್ತಿರುವ ಅಂತರ್ಜಲ: 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ – Kannada News | Bagalkote Water Crisis: Krishna and Malaprabha Rivers Reach Dead Storage; 114 Villages Face Water Scarcity Amid Heat wave

ಬಾಗಲಕೋಟೆ ನದಿಗಳಲ್ಲಿ ನೀರು ಕಡಿಮೆಯಾಗಿರುವುದುImage Credit source: tv9

ಬಾಗಲಕೋಟೆ, ಏಪ್ರಿಲ್ 20: ಬಾಗಲಕೋಟೆಯಲ್ಲಿ (Bagalkot) ಸೂರ್ಯನ ತಾಪ (Heat wave) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಜಲಮೂಲಗಳು ಬತ್ತುತ್ತಿದ್ದು, ಜನರಲ್ಲಿ ಜಲಕ್ಷಾಮದ ಭೀತಿ ಆವರಿಸಿದೆ. ಜಿಲ್ಲೆಯ ಜೀವನದಿಗಳಾದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕೆ ಕುಸಿದಿದೆ.

ಬತ್ತಿದ ಜಲಮೂಲಗಳು

ಆಲಮಟ್ಟಿ ಹಿನ್ನೀರು ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ನೀರು ಸಂಪೂರ್ಣವಾಗಿ ತಳ ಸೇರಿದೆ. ನದಿಯ ಒಡಲು ಖಾಲಿಯಾಗುತ್ತಿದ್ದು, ಪಕ್ಷಿಗಳು ಆಹಾರಕ್ಕಾಗಿ ಮತ್ತು ಕುರಿಗಳು ದಾಹ ತಣಿಸಿಕೊಳ್ಳಲು ಕೆಸರು ಮಿಶ್ರಿತ ಅಲ್ಪ ನೀರಿನಲ್ಲೇ ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತದ ಮುನ್ನೆಚ್ಚರಿಕೆ

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಈಗಾಗಲೇ ಎರಡು ಬಾರಿ ತುರ್ತು ಸಭೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 114 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ 52 ಮತ್ತು ಮೇ ತಿಂಗಳಲ್ಲಿ 62 ಗ್ರಾಮಗಳಲ್ಲಿ ತೀವ್ರ ಅಭಾವ ಉಂಟಾಗುವ ಸಾಧ್ಯತೆ ಇದೆ.

ಈಗಾಗಲೇ ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ತಾಂಡಾ ಮತ್ತು ಗುಳೇದಗುಡ್ಡದ ಒಂದು ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಗಳಿಗೆ ನೀರು ಬಿಡಲಾಗಿದ್ದು, ಏಪ್ರಿಲ್ 2 ರಂದು ಘಟಪ್ರಭಾ ನದಿಗೆ 1.10 ಟಿಎಂಸಿ ಹಾಗೂ ಏಪ್ರಿಲ್ 10 ರಂದು ಮಲಪ್ರಭಾ ನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಬಿಸಿಲ ಝಳಕ್ಕೆ ಬೆಂದ ಕರ್ನಾಟಕ: ಆಸ್ಪತ್ರೆಗೆ ಫ್ಯಾನ್ ತಂದ ಪೋಷಕರು, ಪೊಲೀಸ್ ಶ್ವಾನಗಳಿಗೂ ಕೂಲರ್-ಎಳನೀರು ಭಾಗ್ಯ!

‘ಮೇ ಅಂತ್ಯದವರೆಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗದಂತೆ ಕ್ರಮ ವಹಿಸಲಾಗಿದೆ. ಹಳ್ಳಿಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಇರಿಸಿಕೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಪೋಲು ಮಾಡದೆ ಮಿತವ್ಯಯವಾಗಿ ಬಳಸಬೇಕು’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಮೂರು ನದಿಗಳು ಹರಿಯುತ್ತಿದ್ದರೂ ಕೆರೆ ತುಂಬಿಸುವ ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ ಅಂತರ್ಜಲ ಕುಸಿಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ದೇವಾಲಯಗಳಲ್ಲಿರುವ ಚಿನ್ನವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿ: ಫಾದರ್ ಪೌಲ್ – Kannada News | Church vs Temple Assets: FCRA Bill Fuels Religious Controversy Over Foreign Funds

ಕೊಚ್ಚಿ, ಏ.20: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ಮಸೂದೆಗೆ ಸಂಬಂಧಿಸಿದಂತೆ ಸಿರೋ-ಮಲಬಾರ್ ಚರ್ಚಿನ ಧರ್ಮಗುರು ಫಾದರ್ ಪಾಲ್ ತೇಲಕ್ಕಾಟ್ ನೀಡಿರುವ ಹೇಳಿಕೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. “ಕ್ರೈಸ್ತ ಚರ್ಚ್‌ಗಳು ದೇವಸ್ಥಾನಗಳಂತೆ ಹಣ ಅಥವಾ ಆಸ್ತಿಯನ್ನು ಕೂಡಿಡುವುದಿಲ್ಲ” ಎಂಬ ಅವರ ಹೇಳಿಕೆ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫಾದರ್ ಪಾಲ್ ತೇಲಕ್ಕಾಟ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಚರ್ಚ್‌ಗಳು ತಮ್ಮಲ್ಲಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಗೆ ಬಳಸುತ್ತವೆ. ಸಾಯಿಬಾಬಾ ಮತ್ತು ಮಾತಾ ಅಮೃತಾನಂದಮಯಿ ಅವರ ಸಂಸ್ಥೆಗಳು ಸಹ ಇದೇ ರೀತಿಯ ಸೇವಾ ಮನೋಭಾವ ಹೊಂದಿವೆ. ದೇವಸ್ಥಾನಗಳಲ್ಲಿ ಎಷ್ಟು ಪ್ರಮಾಣದ ಚಿನ್ನವನ್ನು ಕೂಡಿಡಲಾಗಿದೆ ಎಂಬುದನ್ನು ನೋಡಿ. ಈ ಚಿನ್ನವನ್ನು ಜನರ ಏಳಿಗೆಗಾಗಿ ಬಳಸಬೇಕೇ ಹೊರತು ನೆಲಮಾಳಿಗೆಗಳಲ್ಲಿ ಲಾಕ್ ಮಾಡಿ ಇಡಬಾರದು.

ಮಧುರೈ ಮೀನಾಕ್ಷಿ ದೇವಸ್ಥಾನ ಮತ್ತು ತಿರುಪತಿ ದೇವಸ್ಥಾನಗಳ ಆದಾಯ ಮತ್ತು ಚಿನ್ನದ ಸಂಗ್ರಹದ ಕುರಿತು ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಅವರು ಉಲ್ಲೇಖಿಸಿ, “ಜನಸೇವೆಯೇ ಜನಾರ್ದನ ಸೇವೆ” ಎನ್ನುವುದು ನಮ್ಮ ಆದರ್ಶ ಎಂದರು. ಎನ್‌ಜಿಒಗಳಿಗೆ ಬರುವ ವಿದೇಶಿ ದೇಣಿಗೆಯನ್ನು ತಡೆಯುವ ಉದ್ದೇಶದ FCRA ಮಸೂದೆಯು ಕ್ರೈಸ್ತರು ಸೇವೆ ಮಾಡಬಾರದು ಎಂಬ ಒತ್ತಾಯದ ಹೇರಿಕೆಯಾಗಿದೆ ಎಂದು ಅವರು ಕಿಡಿಕಾರಿದರು.

ಫಾದರ್ ಪಾಲ್ ಅವರ ಹೇಳಿಕೆಗೆ ಹಿಂದೂ ಐಕ್ಯ ವೇದಿ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ಪ್ರತಿಕ್ರಿಯೆ ನೀಡಿವೆ. ದೇವಸ್ಥಾನದ ಆಸ್ತಿಗಳು ಭಕ್ತರು ನೀಡಿದ ಕಾಣಿಕೆಗಳೇ ಹೊರತು ವಿದೇಶದಿಂದ ಅಕ್ರಮವಾಗಿ ತಂದಿದ್ದಲ್ಲ. ಅದನ್ನು ಏನು ಮಾಡಬೇಕು ಎಂಬುದು ಹಿಂದೂಗಳಿಗೆ ಬಿಟ್ಟ ವಿಚಾರ” ಎಂದು ಐಕ್ಯ ವೇದಿಯ ಅಧ್ಯಕ್ಷ ಆರ್.ವಿ. ಬಾಬು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: “ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ

ಕೋಟ್ಯಂತರ ರೂಪಾಯಿಗಳ ವಿದೇಶಿ ದೇಣಿಗೆ ಮತ್ತು ಅಕ್ರಮ ಹಣವನ್ನು ಬಳಸಿ ಹಿಂದೂಗಳನ್ನು ಮತಾಂತರಿಸುವುದನ್ನು ಮೊದಲು ನಿಲ್ಲಿಸಲಿ. ಕ್ರೈಸ್ತ ಧಾರ್ಮಿಕ ಮೂಲಭೂತವಾದಿಗಳು ಮತ್ತು ಜಿಹಾದಿಗಳು ದೇವಸ್ಥಾನದ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಹಿಂದೂ ಸಂಘಟನೆಗಳನ್ನು ತಮ್ಮ ಹಾದಿಗೆ ಅಡ್ಡಿ ಎಂದು ಭಾವಿಸುವ ಗುಂಪುಗಳು ಪೋರ್ಚುಗೀಸ್ ಮತ್ತು ಮೊಘಲ್ ಸಂಪ್ರದಾಯಗಳನ್ನು ಮುಂದುವರಿಸಲು ಬಯಸುತ್ತಿವೆ ಎಂದು ಸಂಘಟನೆಗಳು ಟೀಕಿಸಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ಸರ್ಕಾರ ಅಲ್ಲ, ಸಚಿವ ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ ಹೀಗೆ ಹೇಳಿದ್ಯಾಕೆ? – Kannada News | Im Not a Minister, no power Says Congress MLA Basavaraj rayareddy In Koppal

ಕೊಪ್ಪಳ, (ಏಪ್ರಿಲ್ 20): ಇತ್ತೀಚೆಗೆ ಕೊಪ್ಪಳದಲ್ಲಿ ಜಿಲ್ಲೆಗಯಲ್ಲಿ ಮೂರ್ತಿಗಳ ಭಗ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಹಾಗೂ ದೇವರುಗಳ ಮೂರ್ತಿಗಳಿಗೆ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದಾರೆ. ಮೂರ್ತಿಗಳ ಬಳಿ ಸಿಸಿ ಟಿವಿ ಅಳವಡಿಸಲು ನಿರ್ದೇಶನ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj rayareddy) ,ನಾನ ಮಾಡಲ್ಲ, ಸರ್ಕಾರ ಮಾಡಬೇಕು. ಶಾಸಕರಿಗೆ ಅಧಿಕಾರ ಇರಲ್ಲ. ಮಂತ್ರಿಗೆ ಅಧಿಕಾರ ಇರತ್ತೆ. ನಾನು ಸಲಹೆಗಾರ ಮಾತ್ರ. ಮಂತ್ರಿ ಅಲ್ಲ. ನನನೆ ಸಚಿವ ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ. ಆದ್ರೆ ನಾನು ಸರ್ಕಾರ ಅಲ್ಲ, ಸರ್ಕಾರ ಅಂದ್ರೆ ಮಂತ್ರಿ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಗುಲಕ್ಕೆ ಬರುವ ಭಕ್ತರನ್ನ ಬಿಸಿಲಿನಿಂದ ರಕ್ಷಿಸಲು ಗ್ರೀನ್ ಮ್ಯಾಟ್ ಅಳವಡಿಕೆ – Kannada News | Mailara Mallanna Temple Battles Heat: Green Mats Ensure Devotee Comfort and Darshan

ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಗ್ರೀನ್ ‌ಮ್ಯಾಟ್ ಅಳವಡಿಕೆImage Credit source: tv9 kannada

ಬೀದರ್, ಏಪ್ರಿಲ್​ 20: ಜಿಲ್ಲೆಯಲ್ಲಿ ಬಿಸಿಲಿನ (heat) ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಇದರಿಂದ ಹೆದರಿ ಜನರು ಮನೆಯಿಂದ ಹೊರಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 36ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇನ್ನು ದೇವಸ್ಥಾನಕ್ಕೂ ಭಕ್ತರು ಹೋಗಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ಭಕ್ತರಿಗೆ ನೆರಳು ಒದಗಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಲಾಗಿದೆ. ಆ ಮೂಲಕ  ಭಕ್ತರ ಖುಷಿ ಹೆಚ್ಚಿಸುವಂತೆ ಮಾಡಿದೆ.

ಬಿಸಿಲ ತಾಪಕ್ಕೆ ಇಳಿಕೆಯಾದ ಭಕ್ತರ ಸಂಖ್ಯೆ

ಬಿದರ್ ಜಿಲ್ಲೆಯಲ್ಲಿ ಬರುವ ಐತಿಹಾಸಿ ಪುರಾತನ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ತೆಲಂಗಾಣ-ಮಹಾರಾಷ್ಟ್ರ, ಕರ್ನಾಟದ ವಿವಿಧೆಡೆಯಿಂದ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುಣಿತರಾಗುತ್ತಾರೆ. ಆದರೆ ಈಗ ಕಳೆದೆರಡು ವಾರದಿಂದ ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು

ಹೀಗಾಗಿ ಜಿಲ್ಲೆಯಲ್ಲಿರುವ ದೇವಸ್ಥಾನಕ್ಕೆ ಭಕ್ತರು ಬರುವುದು ಕಡಿಮೆಯಾಗುತ್ತಿದಂತೆ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಆವರಣದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಿದ್ದಾರೆ. ಆ ಮೂಲಕ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಕ್ಕೆ ಭಕ್ತರು ಸಂಸತ ವ್ಯಕ್ತಪಡಿಸಿದ್ದಾರೆ.

ಗ್ರೀನ್ ಮ್ಯಾಟ್ ಆಸರೆ

ಇನ್ನು ಬಿಸಿಲಿನ ಝಳ ಜಾಸ್ತಿಯಿರುವ ಕಾರಣ ಇಲ್ಲಿಗೆ ಬರುವ ಭಕ್ತರು ದೇವಸ್ಥಾನವನ್ನ ಪ್ರದಕ್ಷಿಣೆ ಹಾಕಲು ಸಾಧ್ಯವಾಗುತ್ತಿರಲಿಲ್ಲ, ಅದಕ್ಕೆ ಕಾರಣವೆಂದರೆ ದೇವಸ್ಥಾನ ಆವರಣದಲ್ಲಿ ಹಾಕಿದ ಕಲ್ಲುಗಳು ಕಾದು ಕೆಂಡವಾಗುತ್ತಿದ್ದವು. ದೇವಸ್ಥಾನವನ್ನ ಒಂದು ಸುತ್ತು ಕೂಡ ಪ್ರದಕ್ಷಿಣೆ ಹಾಕಲು ಸಾಧ್ಯವಾಗದ ಭಕ್ತರು ದೂರಿನಿಂದಲೇ ನಮಸ್ಕಾರ ಮಾಡಿ ಹೋಗುತ್ತಿದ್ದರು. ಹೀಗಾಗಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ದೇವಸ್ಥಾನದ ಆವರಣ ತುಂಬಾ ಗ್ರೀನ್ ಮ್ಯಾಟ್ ಹಾಕಿದ್ದಾರೆ.

ಮೈಲಾರ ಮಲ್ಲಣ್ಣ ದೇವಸ್ಥಾನಕ್ಕಿದೆ ಐತಿಹಾಸಿಕ ಹಿನ್ನೆಲೆ

ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ. ಜನರಿಗೆ ಎಲ್ಲಿಲ್ಲದ ತೊಂದರೆ ಕೊಡುತ್ತಿದ್ದ ಮಣಿಕಂಠ ಹಾಗೂ ಮಲ್ಲ ಎನ್ನುವ ಅಸುರರನ್ನು ಸಂಹರಿಸಲು ಮಾರ್ತಾಂಡ ಭೈರವನ ರೂಪ ತಳೆದ ಶಿವ (ಮಲ್ಲಣ್ಣ) ನಂತರ ಇಲ್ಲಿ ನೆಲೆಸಿದ ಎನ್ನುವ ಉಲ್ಲೇಖ ಪುರಾಣಗಳಲ್ಲಿ ಇದೆ.

ಇದನ್ನೂ ಓದಿ: ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಮಂಡ್ಯ ಜಿಲ್ಲಾಡಳಿತ: ಕಾರಣ ಇಲ್ಲಿದೆ

ದ್ವಾಪರ ಯುಗದಲ್ಲಿ ಈ ಘಟನೆ ನಡೆದಿದೆ ಎಂದು ಮರಾಠಿಯ ಮಲ್ಹಾರಿ ಮಹಾತ್ಮೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಿರುಪತಿಯ ತಿಮ್ಮಪ್ಪನಿಗೆ ಮಲ್ಲಣ್ಣ ದೇವರು ಸಾಲ ನೀಡಿದ್ದರು. ಏಳು ಕೋಟಿ ರೂ ಸಾಲ ಪಡೆದುಕೊಂಡಿದ್ದ ತಿಮ್ಮಪ್ಪ ಅದನ್ನು ಮರಳಿ ನೀಡಲಿಲ್ಲ. ಹೀಗಾಗಿ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಏಳು ಕೋಟಿ, ಏಳು ಕೋಟಿ ಎನ್ನುವ ಪ್ರತೀತಿ ಇದೆ ಎಂದು ಅರ್ಚಕರಾದ ಆಕಾಸ್ ಹಿರಿವಗ್ಗೆ ಮಾಹಿತಿ ನೀಡಿದ್ದಾರೆ.

ಸದ್ಯ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ನೆರಳು, ತಂಪು ನೀರಿನ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೆ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದು, ಇದು ಭಕ್ತರ ಖುಷಿಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:14 pm, Mon, 20 April 26

Source link

ETPL 2026: ಟಿ20 ತಂಡ ಖರೀದಿಸಿದ ಕ್ರಿಸ್ ಗೇಲ್ – Kannada News | Chris Gayle Buys Glasgow Team in ETPL

ಟಿ20 ಕ್ರಿಕೆಟ್ ಲೀಗ್​ಗೆ ಮತ್ತೊಂದು ಟೂರ್ನಿ ಸೇರ್ಪಡೆಯಾಗುತ್ತಿದೆ. ಹೊಸ ಟೂರ್ನಿ ಆಯೋಜನೆಗೊಳ್ಳಲಿರುವುದು ದೂರದ ಯುರೋಪಿನಲ್ಲಿ. ಅದರಂತೆ ಶೀಘ್ರದಲ್ಲೇ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಚಾಲನೆ ದೊರೆಯಲಿದೆ.  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಈ ಲೀಗ್‌ನಲ್ಲಿ, ಗ್ಲ್ಯಾಸ್ಗೋ ಫ್ರಾಂಚೈಸಿಯನ್ನು ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಖರೀದಿಸಿದ್ದಾರೆ.

 ‘ಗ್ಲ್ಯಾಸ್ಗೋ ಮುಗಾಫಿಯನ್ಸ್’

ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಕೇವಲ ಈ ತಂಡದ ಸಹ-ಮಾಲೀಕರಷ್ಟೇ ಅಲ್ಲದೆ, ಗ್ಲ್ಯಾಸ್ಗೋ ಮುಗಾಫಿಯನ್ಸ್ ತಂಡದ ಜಾಗತಿಕ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡದ ಮಾಲೀಕತ್ವದ ಜವಾಬ್ದಾರಿಯನ್ನು ತನ್ಶಾ ಬಾತ್ರಾ ವಹಿಸಿಕೊಂಡಿದ್ದು, ವಿಪುಲ್ ಅಗರ್ವಾಲ್ ನೇತೃತ್ವದ ‘ಮುಗಾಫಿ ಗ್ರೂಪ್’ ತಂಡದ ಡಿಜಿಟಲ್ ಮತ್ತು ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲಿದೆ.

ಲೀಗ್‌ನ ಕುರಿತಾದ ಮಾಹಿತಿ:

  • ಸ್ಥಾಪಕರು: ಈ ಲೀಗ್ ಅನ್ನು ಅಭಿಷೇಕ್ ಬಚ್ಚನ್ ಸೇರಿದಂತೆ ಸೌರವ್ ಬ್ಯಾನರ್ಜಿ, ಪ್ರಿಯಾಂಕಾ ಕೌಲ್ ಮತ್ತು ಧೀರಜ್ ಮಲ್ಹೋತ್ರಾ ಅವರು ಜೊತೆಗೂಡಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ (ETPL) ಸ್ಥಾಪಿಸಿದ್ದಾರೆ.
  • ದಿನಾಂಕ: ಚೊಚ್ಚಲ ಸೀಸನ್ ಆಗಸ್ಟ್ 26, 2026 ರಿಂದ ಸೆಪ್ಟೆಂಬರ್ 20, 2026 ರವರೆಗೆ ನಡೆಯಲಿದೆ.
  • ತಂಡಗಳು: ಗ್ಲ್ಯಾಸ್ಗೋ ಸೇರಿದಂತೆ ಆಮ್‌ಸ್ಟರ್‌ಡ್ಯಾಮ್, ಎಡಿನ್‌ಬರ್ಗ್, ಡಬ್ಲಿನ್, ಬೆಲ್‌ಫಾಸ್ಟ್ ಮತ್ತು ರೊಟರ್‌ಡ್ಯಾಮ್ ನಗರಗಳ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ.
  • ಐಸಿಸಿ ಮಾನ್ಯತೆ: ಇದು ಐಸಿಸಿ (ICC) ಮಾನ್ಯತೆ ಪಡೆದ ಯುರೋಪ್‌ನ ಮೊದಲ ಫ್ರಾಂಚೈಸಿ ಆಧಾರಿತ ಟಿ20 ಲೀಗ್ ಆಗಿದೆ.

ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ:

ಕ್ರಿಸ್ ಗೇಲ್ ಅವರಂತಹ ದಿಗ್ಗಜರು ಲೀಗ್‌ಗೆ ಸೇರ್ಪಡೆಗೊಂಡಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಘಟಾನುಘಟಿ ಆಟಗಾರರು ವಿವಿಧ ತಂಡಗಳ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಈ ಕೂಟದ ಮೆರುಗನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದ ಪೌರತ್ವದ ಆಫರ್ ತಿರಸ್ಕರಿಸಿದ್ದ ರಶೀದ್ ಖಾನ್!

ಇದೀಗ ಕ್ರಿಸ್ ಗೇಲ್ ‘ಗ್ಲ್ಯಾಸ್ಗೋ ಮುಗಾಫಿಯನ್ಸ್’ ತಂಡದ ಸಹ ಮಾಲೀಕರಾಗಿರುವ ಕಾರಣ ನಿಕೋಲಸ್ ಪೂರನ್ ಸೇರಿದಂತೆ ವೆಸ್ಟ್ ಇಂಡೀಸ್​ನ ಸ್ಟಾರ್ ಕ್ರಿಕೆಟಿಗರು ಕೂಡ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Source link

ಕೊನೆಗೂ ಹುಡುಗಿ ಯಾರೆಂದು ಪರಿಚಯಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ – Kannada News | Gicchi Giligili Fame Prashanth Gowda Reveals Bride Kruthi Gowda: Wedding and Engagement News

‘ಗಿಚ್ಚಿ ಗಿಲಿ ಗಿಲಿ’, ‘ಕ್ವಾಟ್ಲೆ ಕಿಚನ್’ ರೀತಿಯ ಶೋಗಳ ಮೂಲಕ ಗಮನ ಸೆಳೆದ ಪ್ರಶಾಂತ್ ಗೌಡ ಅವರಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರು ಕಳೆದ ಕೆಲ ದಿನಗಳಿಂದ ಹೆಣ್ಣು ನೋಡವ ಶಾಸ್ತ್ರದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದರು. ಆದರೆ, ಎಲ್ಲಿಯೂ ಅವರು ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಹೊಸ ವಿಡಿಯೋ ಹಂಚಿಕೊಂಡು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಹುಡುಗಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದ್ದು, ಶುಭಾಶಯ ತಿಳಿಸಿದ್ದಾರೆ.

ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ ಸೀಸನ್ 3ರವರೆಗೆ ಇದ್ದರು. ಅವರು ವಿವಿಧ ರೀತಿಯ ರೀಲ್ಸ್ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅವರು ‘ಕ್ವಾಟ್ಲೆ ಕಿಚನ್’ ಶೋ ಅಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಅವಾರ್ಡ್ ಪಡೆದರು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಪ್ರಶಾಂತ್ ಮಿಂಚಿದ್ದರು. ಈಗ ಪ್ರಶಾಂತ್ ಗೌಡ ವಿವಾಹ ಆಗುತ್ತಿದ್ದಾರೆ.

ಪ್ರಶಾಂತ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೃತಿ ಗೌಡ. ಅವರು ಕೂಡ ಕಲಾವಿದೆ. ಈ ಮೊದಲು ‘ಬ್ರೇಕ್ ಫೆಲ್ಯೂವರ್’ ಹೆಸರಿನ ಸಿನಿಮಾ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋ ಹಾಗೂ ರೀಲ್ಸ್​​​ಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈಗ ಪ್ರಶಾಂತ್ ಅವರನ್ನು ವರಿಸಲು ಕೃತಿ ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ಜನವರಿ 31ರಿಂದ ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್: ಈ ಬಾರಿ ಮಕ್ಕಳದ್ದೇ ಹವಾ

ಪ್ರಶಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ‘ಟ್ಯಾಲೆಂಟೆಂಡ್ ಕಲಾವಿದ’ ಎಂದು ಕರೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಟಾಟಾ ಕರ್ವ್ ಕಾರನ್ನು ಖರೀದಿ ಮಾಡಿದ್ದರು. ವಿವಾಹ ಸಮೀಪಿಸಿದ್ದರಿಂದಲೇ ಈ ಕಾರನ್ನು ಅವರು ಖರೀದಿ ಮಾಡಿದರೇ ಎನ್ನುವ ಪ್ರಶ್ನೆಕೂಡ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!

ಮಂಡ್ಯ, ಏಪ್ರಿಲ್ 20: ಜಿಲ್ಲೆಯ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಒದಗಿಸಲು ಖತರ್ನಾಕ್ ತಂತ್ರವನ್ನು ಬಳಸಲಾಗುತ್ತಿದೆ. ಜೈಲಿನಲ್ಲಿ ಮಾದಕವಸ್ತು ಮತ್ತು ನಿಷಿದ್ಧ ವಸ್ತುಗಳ ಪೂರೈಕೆ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇದೀಗ ಹೊಸ ರೀತಿಯ ಕಳ್ಳಾಟವೊಂದು ಬಯಲಾಗಿದೆ. ದುಷ್ಕರ್ಮಿಗಳು ಕ್ರಿಕೆಟ್ ಬಾಲ್ ಒಳಗೆ ಗಾಂಜಾ ಮತ್ತು ಮೊಬೈಲ್ ಫೋನ್ ಇರಿಸಿ, ಅದನ್ನು ಜೈಲಿನ ಕಾಂಪೌಂಡ್ ಒಳಗೆ ಎಸೆದು ಪರಾರಿಯಾಗಿದ್ದಾರೆ.

ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೈದಿಗಳ ಕಳ್ಳಾಟ ಬಯಲಿಗೆ ಬಂದಿದೆ. ಬಾಲ್ ಎಸೆದ ನಂತರ, ಜೈಲಿನೊಳಗಿನ ಕೈದಿ ನಾಗ ಅಲಿಯಾಸ್ ಹಂದಿನಾಗ ಅದನ್ನು ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ. ಬಾಲ್ ಅನ್ನು ಕತ್ತರಿಸಿ ಪರಿಶೀಲಿಸಿದಾಗ, ಅದರೊಳಗೆ 10 ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಜೈಲಿಗೆ ನಿಷಿದ್ಧ ವಸ್ತುಗಳನ್ನು ಪೂರೈಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಮತ್ತು ಈ ಜಾಲದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ! – Kannada News | Bitcoin Scam: Did a Rs 10 Lakh Transaction Trigger ED Raids on Mohammed Nalapad? 2020 Fraud Case Investigation

ಬೆಂಗಳೂರು, ಏಪ್ರಿಲ್ 20: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ನಿವಾಸ ಸೇರಿದಂತೆ 12 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಈ ಪರಿಶೀಲನೆ ಈಗಲೂ ಮುಂದುವರಿದಿದೆ. ಅಂದಹಾಗೆ, 10 ಲಕ್ಷ ರೂ. ವಹಿವಾಟಿಗೆ ಸಂಬಂಧಿಸಿ ಈ ದಾಳಿ ನಡೆದಿದೆಯಾ ಎಂಬ ಪ್ರಶ್ನೆ ಈಗ ಮೂಡಿದೆ. ಅದಕ್ಕೆ ಕಾರಣ 2020ರಲ್ಲಿ ದಾಖಲಾಗಿದ್ದ ದೂರು. 2020ರಲ್ಲಿ ಯಶೋದಾದೇವಿ ಎಂಬುವವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಿಂದ ತನಿಖೆ ಪ್ರಾರಂಭವಾಗಿತ್ತು. ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕಿ (ಶ್ರೀಕೃಷ್ಣ), ರಾಬಿನ್ ಖಂಡೇಲ್ವಾಲ ಮತ್ತು ಅಜಿತ್ ಖಂಡೇಲ್ವಾಲ ವಿರುದ್ಧ, ‘28 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 45 ಲಕ್ಷ ರೂಪಾಯಿ ಲಾಭ ಗಳಿಸಬಹುದು’ ಎಂದು ಭರವಸೆ ನೀಡಿ ವಂಚಿಸಿದ ಆರೋಪವಿತ್ತು. ಯಶೋದಾದೇವಿ ಅಜಿತ್ ಖಾತೆಗೆ 28 ಲಕ್ಷ ರೂಪಾಯಿ ಜಮಾ ಮಾಡಿದ್ದರು. ಆದರೆ ಲಾಭವೂ ಸಿಗದೆ, ಹೂಡಿಕೆ ಮಾಡಿದ ಹಣವೂ ಮರಳದೆ ವಂಚನೆಗೆ ಒಳಗಾಗಿದ್ದರು.

ಈ ಪ್ರಕರಣದ ತನಿಖೆ ವೇಳೆ 10 ಲಕ್ಷ ರೂ. ವಹಿವಾಟು ಸಂಬಂಧ ನಲಪಾಡ್ ಹೆಸರು ಕೂಡ ಕೇಳಿಬಂದಿತ್ತು. ಸರ್ಕಾರ ರಚಿಸಿದ ಎಸ್ಐಟಿ ಈ ವಂಚನೆ ಮತ್ತು ಎನ್ಡಿಪಿಎಸ್ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿತ್ತು. ಬಿಟ್‌ಕಾಯಿನ್ ಹ್ಯಾಕಿಂಗ್ ಮತ್ತು ಕ್ರಿಪ್ಟೋ ವಂಚನೆಗಳ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪವಿದೆ. ಇದೇ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಿಎಂಎಲ್‌ಎ ಕಾಯ್ದೆಯಡಿ ತನಿಖೆಯನ್ನು ಪ್ರಾರಂಭಿಸಿದೆ. ಇದೀಗ ನಲಪಾಡ್ ಮನೆ ಮೇಲೆ ದಾಳಿಗೆ ಈ ವಹಿವಾಟೇ ಕಾರಣವಾಯ್ತೇ ಎಂಬ ಪ್ರಶ್ನೆ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಂಧ್ರಪ್ರದೇಶ: ಸಿಎಂ ಚಂದ್ರಬಾಬು ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಎನ್​ಎಸ್​ಜಿ ಕಮಾಂಡೋ – Kannada News | NSG Commando Collapses During CM Chandrababu Naidu’s Public Interaction Amid Heat

ಆಂಧ್ರಪ್ರದೇಶ, ಏಪ್ರಿಲ್ 20: ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹುಟ್ಟುಹಬ್ಬ. ಈ ಪ್ರಯುಕ್ತ ನಾಯ್ಡು ದಂಪತಿ ವಿಜಯವಾಡದಲ್ಲಿರುವ ಪಟಮಟ ಅನ್ನ ಕ್ಯಾಂಟೀನ್‌ಗೆ ಬಂದಿದ್ದರು.ಅಲ್ಲಿ ಅವರು ಬಡವರಿಗೆ ಉಪಾಹಾರ ಬಡಿಸಿದರು. ಈ ಭೇಟಿಯ ಸಮಯದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತ್ತು. ಕಾರ್ಯಕ್ರಮದ ನಂತರ ಸಿಎಂ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಅವರ ಸುರಕ್ಷತಾ ತಂಡದ ಭಾಗವಾಗಿದ್ದ ಎನ್‌ಎಸ್‌ಜಿ ಕಮಾಂಡೋ ವಿಪರೀತ ಸೆಕೆಯಿಂದಾಗಿ ಕುಸಿದುಬಿದ್ದಿದ್ದಾರೆ. ಮಾಹಿತಿ ತಿಳಿದ ಇತರ ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರು. ತೀವ್ರ ಬಿಸಿಲಿನಿಂದಾಗಿ ಸುಸ್ತಾಗಿ ಬಿದ್ದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Source link

“ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ – Kannada News | Bengaluru’s Nidhi Goes Viral: ‘Work Isn’t Life’ Post Layoff Experience Resonates with Many

ಬೆಂಗಳೂರು ಕೆಲಸದ ಒತ್ತಡ ಯುವತಿ ಹೇಳಿದೆ ಸತ್ಯ

ಬೆಂಗಳೂರು, ಏ.20: ಅದೆಷ್ಟೋ ಜನ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಸ್ವಂತ ಅಥವಾ ಊರಿಗೆ ಹೋಗಿ ಬದುಕುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಇತ್ತೀಚೆಗೆ ಭಾರೀ ವೈರಲ್​ ಆಗುತ್ತಿದೆ. ಇದೀಗ ಇಲ್ಲೊಬ್ಬ ಯುವತಿ ಕೂಡ ಅಂತಹದೇ ಹಾದಿಯನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ. ಕೆಲಸದ ಒತ್ತಡದಿಂದಾಗಿ ತನ್ನ ವೈಯಕ್ತಿಕ ಜೀವನವನ್ನೇ ಬಲಿ ಕೊಟ್ಟಿದ್ದ ಬೆಂಗಳೂರಿನ ನಿಧಿ ಎಂಬ ಯುವತಿ, ಕೆಲಸ ಕಳೆದುಕೊಂಡ ನಂತರ ತನಗಾದ ಅನುಭವಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗವೇ ಜೀವನವಲ್ಲ ಎಂಬ ಅವರ ಮಾತುಗಳು ಈಗ ಲಕ್ಷಾಂತರ ಉದ್ಯೋಗಿಗಳ ಮನ ಗೆದ್ದಿವೆ.

“ನಾನು ಕೆಲಸದಿಂದ ವಜಾಗೊಂಡಿದ್ದೇನೆ. ಕೆಲಸ ಹೋದ ನಂತರ ನನಗೆ ಅರಿವಾದ ವಿಷಯಗಳು ನಿಜಕ್ಕೂ ಭಯಾನಕವಾಗಿವೆ” ಎಂದು ನಿಧಿ ಹೇಳಿದ್ದಾರೆ. “ನಾನು ನನ್ನ ಉದ್ಯೋಗವನ್ನೇ ನನ್ನ ಇಡೀ ಜೀವನ ಎಂದು ಭಾವಿಸಿದ್ದೆ. ನನ್ನ ಇಡೀ ಪ್ರಪಂಚ ಕೇವಲ ಮೀಟಿಂಗ್‌ಗಳು, ಡೆಡ್‌ಲೈನ್‌ಗಳು ಮತ್ತು ಒತ್ತಡದ ಸುತ್ತಲೇ ಸುತ್ತುತ್ತಿತ್ತು.ಕೆಲಸದ ಅಮಲಿನಲ್ಲಿ ನಾನು ನನ್ನ ಬಗ್ಗೆ ಕಾಳಜಿ ವಹಿಸುವುದನ್ನೇ ನಿಲ್ಲಿಸಿದೆ. ಗೆಳೆಯರನ್ನು ಭೇಟಿ ಮಾಡುವುದು, ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಹೊರಗಡೆ ಓಡಾಡುವುದನ್ನೆಲ್ಲಾ ಮರೆತುಬಿಟ್ಟಿದ್ದೆ.ಬೆಳಿಗ್ಗೆ ಆಫೀಸ್‌ಗೆ ಹೋಗುವುದು, ರಾತ್ರಿ ಮನೆಗೆ ಬರುವುದು ಮತ್ತು ಪುನಃ ಕೆಲಸ ಮಾಡುವುದು ಇದೇ ನನ್ನ ದಿನಚರಿಯಾಗಿತ್ತು. ನಮ್ಮಲ್ಲಿ ಅನೇಕರು ಇದೇ ರೀತಿ ರೋಬೋಟ್‌ಗಳಂತೆ ಬದುಕುತ್ತಿದ್ದಾರೆ. ಆದರೆ ನಿಜಕ್ಕೂ ನಮಗೆ ಇಂತಹ ಬದುಕು ಬೇಕಾ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಐಷಾರಾಮಿ ‘ಪೋರ್ಷೆ’ ಕಾರಿನ ಬಾನೆಟ್ ಮೇಲೆ ಸಿಮೆಂಟ್ ಮಿಶ್ರಣ! ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿದ ಉದ್ಯಮಿಯ ವೀಡಿಯೋ ವೈರಲ್

ಇಲ್ಲಿದೆ ನೋಡಿ ವಿಡಿಯೋ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ನಾವೆಲ್ಲರೂ ಆಟೋಪೈಲಟ್ ಮೋಡ್‌ನಲ್ಲಿ ಬದುಕುತ್ತಿದ್ದೇವೆ, ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಆರೋಗ್ಯ ಮತ್ತು ಸಂತೋಷಕ್ಕಿಂತ ಡೆಡ್‌ಲೈನ್‌ಗಳು ಮುಖ್ಯವಲ್ಲ” ಎಂದು ಬರೆದಿದ್ದಾರೆ. “ಕೆಲಸ ಎಂಬುದು ಜೀವನದ ಒಂದು ಭಾಗ ಮಾತ್ರ, ಅದೇ ಪೂರ್ಣ ಜೀವನವಲ್ಲ ಎಂದು ಅರಿವಾಗಲು ನಮಗೆ ಇಂತಹ ಹೊಡೆತಗಳೇ ಬೇಕು” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version