ಉಚಿತ ಭಾಗ್ಯದ ಬಸ್‌ಗಳಿಗೆ ತಳ್ಳುವ ಭಾಗ್ಯ: ಚಿಕ್ಕಮಗಳೂರಿನಲ್ಲಿ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್, ಪ್ರಯಾಣಿಕರ ಆಕ್ರೋಶ – Kannada News | Public Outrage in Chikkamagaluru: Passengers Forced to Push Broken Down KSRTC Bus; Lack of Maintenance Amid Freebies

ಉಚಿತ ಭಾಗ್ಯದ ಬಸ್‌ಗಳಿಗೆ ತಳ್ಳುವ ಭಾಗ್ಯ: ಪೋಸ್ಟ್ ವೈರಲ್Image Credit source: tv9

ಚಿಕ್ಕಮಗಳೂರು, ಏಪ್ರಿಲ್ 20: ಸರ್ಕಾರದ ಉಚಿತ ಯೋಜನೆಗಳ ಆರ್ಭಟದ ನಡುವೆ ಸಾರಿಗೆ ಬಸ್‌ಗಳ ನಿರ್ವಹಣೆ ಅಧೋಗತಿಗೆ ತಲುಪಿದೆಯೇ? ಇಂತಹದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಮಗಳೂರು ನಗರದ ಮಧ್ಯರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC Bus) ಬಸ್‌ವೊಂದು ಕೆಟ್ಟು ನಿಂತಿದ್ದು, ಪ್ರಯಾಣಿಕರೇ ಬಸ್ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ‘ಕರ್ನಾಟಕ ಪೋರ್ಟ್​​ಫೋಲಿಯೋ’ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸದ್ಯ ಈ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದೆ.

ರಸ್ತೆಯಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್

ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ನಗರದ ಎನ್‌ಎಂಸಿ (NMC) ಸಿಗ್ನಲ್ ಬಳಿ ತಲುಪುತ್ತಿದ್ದಂತೆ ತಾಂತ್ರಿಕ ದೋಷದಿಂದ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಟ್ರಾಫಿಕ್ ದಟ್ಟಣೆ ಇರುವ ಪ್ರದೇಶದಲ್ಲೇ ಬಸ್ ನಿಂತಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ವೇಳೆ ಪ್ರಯಾಣಿಕರು ಅನಿವಾರ್ಯವಾಗಿ ಬಸ್‌ನಿಂದ ಕೆಳಗಿಳಿದು ರಸ್ತೆಯಲ್ಲೇ ಬಸ್ ತಳ್ಳುವ ಮೂಲಕ ಡಿಪೋಗೆ ಕಳುಹಿಸಿಕೊಟ್ಟಿದ್ದಾರೆ.

ಸಾರ್ವಜನಿಕರ ಆಕ್ರೋಶ

ಒಂದೆಡೆ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿದೆ. ಆದರೆ, ಬಸ್‌ಗಳ ಸುಸ್ಥಿತಿಯ ಬಗ್ಗೆ ಮಾತ್ರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ‘ಫ್ರೀ ಕೊಡುವುದು ಮುಖ್ಯವಲ್ಲ, ನಾವು ಪ್ರಯಾಣಿಸುವ ಬಸ್ ಸುರಕ್ಷಿತವಾಗಿರಬೇಕು. ರಸ್ತೆಯಲ್ಲಿ ಬಸ್ ಕೆಟ್ಟು ನಿಂತರೆ ಪ್ರಯಾಣಿಕರ ಸಮಯ ಮತ್ತು ಘನತೆಗೆ ಬೆಲೆ ಇಲ್ಲವೇ?’ ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಉಚಿತ ಯೋಜನೆಗಳ ಪ್ರಚಾರಕ್ಕೆ ನೀಡುವ ಆದ್ಯತೆಯನ್ನು ಬಸ್‌ಗಳ ನಿರ್ವಹಣೆಗೆ ನೀಡುತ್ತಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಬಗ್ಗೆಯೂ ‘ಕರ್ನಾಟಕ ಪೋರ್ಟ್​​ಫೋಲಿಯೋ’ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಬಸ್‌ಗಳ ಕಳಪೆ ನಿರ್ವಹಣೆಯಿಂದಾಗಿ ಪ್ರಯಾಣಿಕರು ಹೈರಾಣಾಗುತ್ತಿದ್ದು, ಸರ್ಕಾರ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಉಚಿತ ಯೋಜನೆಗಳನ್ನು ನೀಡದೆ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ ‘ಕೂಲ್’ ಟ್ರೀಟ್ಮೆಂಟ್! – Kannada News | Karnataka Police Dog Squad Gets Coolers and Coconut Water to Beat Scorching Heat

ಕಲಬುರಗಿ, ಏಪ್ರಿಲ್ 20: ರಾಜ್ಯದೆಲ್ಲೆಡೆ ಮೈ ಸುಡುವ ಬಿಸಿಲು ಕೇವಲ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನೂ ಕಾಡುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಪೊಲೀಸ್ ಇಲಾಖೆ ಮಾನವೀಯ ಕ್ರಮ ಕೈಗೊಂಡಿದ್ದು, ಹೀಟ್​ ಸ್ಟ್ರೋಕ್​ನಿಂದ ಶ್ವಾನದಳದ ರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದೆ. ಸಿಆರ್ ಮೈದಾನದಲ್ಲಿರುವ ಶ್ವಾನದಳ ಘಟಕದಲ್ಲಿ ಐದು ಪೊಲೀಸ್ ಶ್ವಾನಗಳಿಗೆ ತಂಪು ವಾತಾವರಣ ಕಲ್ಪಿಸಲು ಮೂರು ದೊಡ್ಡ ಏರ್ ಕೂಲರ್‌ಗಳನ್ನು ಅಳವಡಿಸಲಾಗಿದೆ. ರಣಬಿಸಿಲಿಗೆ ಕಂಗೆಟ್ಟಿದ್ದ ಶ್ವಾನಗಳಿಗೆ ತಂಪಾದ ಗಾಳಿ ಒದಗಿಸುವುದರ ಜೊತೆಗೆ, ದೇಹದ ತಾಪಮಾನ ಕಡಿಮೆ ಮಾಡಲು ಏಳನೀರು ಸಹ ನೀಡಲಾಗುತ್ತಿದೆ. ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಶ್ವಾನಗಳ ಆರೋಗ್ಯ ಕಾಪಾಡಲು ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ನಾಯಿಗೆ ಅನ್ನ ಹಾಕಿ ಪೇಚೆಗೆ ಸಿಲುಕಿದ ವ್ಯಕ್ತಿ; ಗ್ರಾಮ ಪಂಚಾಯತಿಯಿಂದ ಬಂತು ನೋಟಿಸ್! – Kannada News | Karwar Street Dog Bite: Man Who Fed It Held Responsible by Panchayat; Appeals DC

ಬೀದಿ ನಾಯಿಗೆ ಅನ್ನ ಹಾಕಿ ಪೇಚೆಗೆ ಸಿಲುಕಿದ ವ್ಯಕ್ತಿ!

ಕಾರವಾರ, ಏಪ್ರಿಲ್ 20: ಹಲವರು ಬೀದಿ ನಾಯಿಗಳಿಗೆ (Street Dog) ಆಹಾರ ಹಾಕುವ ಹವ್ಯಾಸ ಹೊಂದಿರುತ್ತಾರೆ. ದಿನಕ್ಕೆ ಒಮ್ಮೆಯಾಗಲಿ, ಮೂರು ಹೊತ್ತಾಗಲಿ ಮನೆಯಲ್ಲಿ ತಾವು ತಿನ್ನುವ ಆಹಾರದಲ್ಲೇ ಸ್ವಲ್ಪ ಪ್ರಮಾಣವನ್ನು ಬೀದಿ ನಾಯಿಗಳಿಗೂ ಹಾಕುತ್ತಾರೆ. ಅಂತೆಯೇ ಕಾರವಾರದಲ್ಲಿ ಬೀದಿ ನಾಯಿಯೊಂದಕ್ಕೆ ಆಹಾರ ಹಾಕುತ್ತಿದ್ದ ಯುವಕ ಪೇಚೆಗೆ ಸಿಲುಕಿರುವ ಘಟನೆ ನಡೆದಿದೆ. ಆ ನಾಯಿ ಊರಲ್ಲಿ ಕೆಲವರ ಮೇಲೆ ದಾಳಿ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ, ಅದರ ತಪ್ಪನ್ನು ಯುವಕನ ಮೇಲೆ ಹೊರಿಸಿದ್ದಾರೆ. ಇದನ್ನು ಪ್ರಶ್ನಿಸಿ ವ್ಯಕ್ತಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾನೆ.

ಹಲವರ ಮೇಲೆ ದಾಳಿ ಮಾಡಿರುವ ನಾಯಿ

ಬೈರಾ ಗ್ರಾಮದ ತುಶಾರ್ ಲೊಳೆಕರ ಅವರು ಬಸ್ ನಿಲ್ದಾಣದ ಬಳಿ ಇದ್ದ ಅನಾರೋಗ್ಯ ಪೀಡಿತ ಬಿದಿ ನಾಯಿಗೆ ಕಳೆದ ಕೆಲ ದಿನಗಳಿಂದ ನಿತ್ಯ ಆಹಾರ ನೀಡುತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಮಾಡಿದ ಈ ಕಾರ್ಯ ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ಆ ಶ್ವಾನದಲ್ಲಿ ಅಸಹಜ ವರ್ತನೆ ಕಾಣಿಸಿಕೊಂಡಿದ್ದು, ಕೆಲವರ ಮೇಲೆ ದಾಳಿ ಮಾಡಿದ ಘಟನೆಗಳೂ ವರದಿಯಾಗಿವೆ.

ವ್ಯಕ್ತಿ ಹೇಳಿದ್ದೇನು ಕೇಳಿ

ಜಿಲ್ಲಾಧಿಕಾರಿ ಮೊರೆ ಹೋದ ವ್ಯಕ್ತಿ

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯ್ತಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ಪಂಚಾಯ್ತಿ ಅಧಿಕಾರಿಗಳು, ಶ್ವಾನಕ್ಕೆ ಆಹಾರ ನೀಡುತ್ತಿದ್ದ ತುಶಾರ್ ಅವರನ್ನೇ ಅದರ ನಿರ್ವಹಣೆಗೆ ಹೊಣೆಗಾರರನ್ನಾಗಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಶ್ವಾನದ ಸಂಪೂರ್ಣ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಲಾಗದ ತುಶಾರ್, ತಾವು ಕೇವಲ ಮಾನವೀಯತೆಯಿಂದ ಆಹಾರ ನೀಡಿದ್ದಷ್ಟೇ ಹೊರತು ಶ್ವಾನದ ಮಾಲೀಕರಲ್ಲ ಎಂದು ಹೇಳಿ ಪಂಚಾಯ್ತಿಯ ಕ್ರಮ ಪ್ರಶ್ನಿಸಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸ್ಕೃತ ಕೇವಲ ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ: ಮೋಹನ್ ಭಾಗವತ್ – Kannada News | Mohan Bhagwat: Sanskrit is India’s Soul, Not Just a Language Pranav Inaugurated

ನವದೆಹಲಿ, ಏಪ್ರಿಲ್ 20: ಸಂಸ್ಕೃತ(Sanskrit) ಒಂದು ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ. ಅಕ್ಷಯ ತೃತೀಯದಂದು ಆರಂಭವಾಗುವ ಕಾರ್ಯಕ್ಕೆ ಎಂದೂ ಅಂತ್ಯವಿಲ್ಲ. ಭಾರತ ಎಂದರೆ ಕೇವಲ ಭೂಪಟವಲ್ಲ ಅಥವಾ ರಾಜಕೀಯ ಭೌಗೋಳಿಕ ಘಟಕವಲ್ಲ. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ತಿಳಿಯುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಅಂಗಸಂಸ್ಥೆ ಸಂಸ್ಕೃತ ಭಾರತಿಯ ನೂತನ ಕಾರ್ಯಾಲಯ ಮತ್ತು ಅಂತಾರಾಷ್ಟ್ರೀಯ ತರಬೇತಿ ಕೇಂದ್ರವಾದ ‘ಪ್ರಣವಃ’ ಅನ್ನು ಆರ್​ಎಸ್​ಎಸ್​ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಉದ್ಘಾಟಿಸಿದರು.ಅಕ್ಷಯ ತೃತೀಯದ ಶುಭ ದಿನದಂದು ದೆಹಲಿಯಲ್ಲಿ ಭಾರತೀಯ ಜ್ಞಾನ ಪರಂಪರೆಯ ಹೊಸ ಅಧ್ಯಾಯವೊಂದು ಆರಂಭವಾಯಿತು
ಈ ಸಮಾರಂಭವು ಕೇವಲ ಒಂದು ಕಚೇರಿಯ ಉದ್ಘಾಟನೆಯಾಗಿರದೆ, ದೇಶದ ಪ್ರಮುಖ ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಲ್. ಸಂತೋಷ್, ಅನುರಾಗ್ ಠಾಕೂರ್ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕ್ಷಣದಲ್ಲಿ ಉಪಸ್ಥಿತರಿದ್ದರು.

ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ, ಆದರೆ ಇವೆಲ್ಲವನ್ನೂ ಒಗ್ಗೂಡಿಸುವ ಶಕ್ತಿ ಇರುವುದು ಸಂಸ್ಕೃತಕ್ಕೆ ಮಾತ್ರ. ಸಂಸ್ಕೃತ ತಿಳಿದವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಂವಹನ ನಡೆಸಲು ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟರು.

ಮತ್ತಷ್ಟು ಓದಿ: ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್

ಸಂಘಟನೆಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, ನಾವು ನಿತ್ಯವೂ ಉಸಿರಾಡುವುದನ್ನು ಹೇಗೆ ಮರೆಯುವುದಿಲ್ಲವೋ ಅಥವಾ ಅದು ನಮಗೆ ಹೇಗೆ ಬೇಸರ ತರುವುದಿಲ್ಲವೋ, ಸಂಸ್ಕೃತದ ಕಾರ್ಯವೂ ನಮಗೆ ನಿತ್ಯವೂ ಹೊಸದಾಗಿರಬೇಕು. ಸಂಸ್ಕೃತವನ್ನು ಕೇವಲ ಭಾಷೆಯಾಗಿ ಕಲಿಸುವುದಲ್ಲ, ಅದನ್ನು ಭಾವವಾಗಿ ಮನಸ್ಸಿಗೆ ಇಳಿಸಬೇಕು” ಎಂದರು. ಕಳೆದ 15 ವರ್ಷಗಳಲ್ಲಿ ಸಂಸ್ಕೃತದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದನ್ನು ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮೈ ಹೋಮ್ (My Home) ಸಂಸ್ಥೆಯ ಎಂ.ಡಿ. ಜೆ. ರಂಜಿತ್ ರಾವ್ ಅವರನ್ನು ಮೋಹನ್ ಭಾಗವತ್ ಅವರು ವೇದಿಕೆಗೆ ಕರೆದು ಆತ್ಮೀಯವಾಗಿ ಸನ್ಮಾನಿಸಿದರು.

ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀಶ ದೇವಪುಜಾರಿ ಮಾತನಾಡಿ, ಈ ‘ಪ್ರಣವಃ’ ಕೇಂದ್ರವು ವಿಶ್ವದ 22 ದೇಶಗಳಲ್ಲಿ ಸಂಸ್ಕೃತವನ್ನು ಪಸರಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪ್ರಸ್ತುತ ದೇಶಾದ್ಯಂತ 4,000 ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲೂ ಸಂಸ್ಕೃತ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದರು. ‘ಪ್ರಣವಃ’ ಇನ್ನು ಮುಂದೆ ಕೇವಲ ಕಚೇರಿಯಾಗಿ ಉಳಿಯದೆ, ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳು ಮತ್ತು ತರಬೇತಿಗಳ ಮೂಲಕ ಭಾರತದ ಪ್ರಾಚೀನ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:01 pm, Mon, 20 April 26

Source link

ಕೋಟಿ ರೂಪಾಯಿ ಕಾರು ಖರೀದಿ ಮಾಡಿದ ಅರ್ಜುನ್ ಜನ್ಯ; ಇಲ್ಲಿದೆ ವಿಡಿಯೋ – Kannada News | Music Director Arjun Janya bought Toyota Vellfire Car video

ಅರ್ಜುನ್ ಜನ್ಯ ಅವರು ಕೋಟಿ ರೂಪಾಯಿ ಬೆಲೆಯ ಟೊಯಾಟೋ ವೆಲ್​​ಫೈಯರ್ ಕಾರು ಖರೀದಿ ಮಾಡಿದ್ದಾರೆ. ಈ ಕಾರನ್ನು ಖರೀದಿ ಮಾಡಲು ಅರ್ಜುನ್ ಜನ್ಯ ಕುಟುಂಬದ ಜೊತೆ ತೆರಳಿರುವ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ಅರ್ಜುನ್ ಜನ್ಯ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ. ಟೊಯಾಟೋ ತಯಾರಿಸುವ ಕಾರುಗಳ ಪೈಕಿ ಅತ್ಯಂತ ಐಷಾರಾಮಿ ಕಾರುಗಳಲ್ಲಿ ವೆಲ್​ಫೈರ್ ಕಾರು ಕೂಡ ಒಂದು. ಇದನ್ನು ತಮ್ಮ ಗ್ಯಾರೇಜಿಗೆ ಸೇರಿಸಿಕೊಂಡಿದ್ದಾರೆ ಅರ್ಜುನ್ ಜನ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

ಅಮೆರಿಕ ಇತಿಹಾಸದ ಅತಿದೊಡ್ಡ ರೀಫಂಡ್: ಟ್ರಂಪ್ ಸುಂಕದ ಹಣ ಇಂದಿನಿಂದ ವಾಪಸ್ – Kannada News | Historic Payback: US Begins Largest Tariff Refund in History as 166 Billion USD Returns to Businesses

ವಾಷಿಂಗ್ಟನ್, ಏಪ್ರಿಲ್ 20: ಅಮೆರಿಕದ ಸಾವಿರಾರು ಆಮದುದಾರರಿಗೆ (US importers) ಇಂದು ‘ಬಿಗ್ ಮಂಡೇ’. ಟ್ರಂಪ್ ಸರ್ಕಾರವು ವಿದೇಶಿ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಪ್ರಮಾಣದ ಸುಂಕವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ (US Supreme Court) ತೀರ್ಪು ನೀಡಿದ ನಂತರ, ಇಂದಿನಿಂದ ಆ ಹಣವನ್ನು ಮರಳಿ ಪಡೆಯಲು ಆನ್‌ಲೈನ್ ಪೋರ್ಟಲ್ ಕಾರ್ಯಾರಂಭ ಮಾಡಿದೆ.

ಕಳೆದ ವರ್ಷ ಅಧ್ಯಕ್ಷ ಟ್ರಂಪ್ ಅವರು ಅಮೆರಿಕದ ವ್ಯಾಪಾರ ಕೊರತೆಯನ್ನು (ಟ್ರೇಡ್ ಡೆಫಿಸಿಟ್) ಕಡಿಮೆ ಮಾಡಲು ತುರ್ತು ಪರಿಸ್ಥಿತಿ ಅಧಿಕಾರವನ್ನು ಬಳಸಿ ಚೀನಾ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳ ಮೇಲೆ ಭಾರಿ ಆಮದು ಸುಂಕ ವಿಧಿಸಿದ್ದರು. ಆದರೆ, ಫೆಬ್ರವರಿ 2026 ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, “ತೆರಿಗೆ ವಿಧಿಸುವ ಅಧಿಕಾರ ಸಂಸತ್ತಿಗೆ (Congress) ಇದೆಯೇ ಹೊರತು ಅಧ್ಯಕ್ಷರಿಗಲ್ಲ” ಎಂದು ಹೇಳಿ ಈ ಸುಂಕವನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಗ ವಸೂಲಿ ಮಾಡಲಾಗಿದ್ದ ಸುಂಕವನ್ನು ಸರ್ಕಾರ ಈಗ ವಾಪಸ್ ಮಾಡಬೇಕಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ

ರೀಫಂಡ್ ಪ್ರಕ್ರಿಯೆಯ ಪ್ರಮುಖ ಅಂಶಗಳು

ಸುಮಾರು 166 ಬಿಲಿಯನ್ ಡಾಲರ್ ಹಣವನ್ನು ಸರ್ಕಾರ ಉದ್ಯಮಿಗಳಿಗೆ ಮರಳಿ ನೀಡಬೇಕಿದೆ. ಸುಮಾರು 3,30,000 ಆಮದುದಾರರು ಈ ಹಣ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸಿದ 60 ರಿಂದ 90 ದಿನಗಳೊಳಗೆ ಕಂಪನಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.

ಇದಕ್ಕಾಗಿ ‘CAPE’ ಎಂಬ ವಿಶೇಷ ಡಿಜಿಟಲ್ ವ್ಯವಸ್ಥೆಯನ್ನು ಅಮೆರಿಕದ ಕಸ್ಟಮ್ಸ್ ಇಲಾಖೆ ಸಿದ್ಧಪಡಿಸಿದೆ.

ಸಾಮಾನ್ಯ ಜನರಿಗೆ ಲಾಭವೇನು?

ಈ ಸುಂಕದಿಂದಾಗಿ ಅಮೆರಿಕದಲ್ಲಿ ಎಲೆಕ್ಟ್ರಾನಿಕ್ಸ್, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಈಗ ಕಂಪನಿಗಳಿಗೆ ಸಾವಿರಾರು ಕೋಟಿ ಹಣ ವಾಪಸ್ ಸಿಗುತ್ತಿರುವುದರಿಂದ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇದೆ. ಫೆಡ್ಎಕ್ಸ್ (FedEx) ನಂತಹ ಕೆಲವು ಕಂಪನಿಗಳು ಈಗಾಗಲೇ ಗ್ರಾಹಕರಿಂದ ವಸೂಲಿ ಮಾಡಿದ್ದ ಸುಂಕದ ಹಣವನ್ನು ಮರಳಿ ನೀಡುವುದಾಗಿ ಘೋಷಿಸಿವೆ.

ಇದನ್ನೂ ಓದಿ: ‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು

ಮಾರುಕಟ್ಟೆಗೆ ಇಷ್ಟು ದೊಡ್ಡ ಮೊತ್ತದ ಹಣ ಹರಿಯುತ್ತಿರುವುದರಿಂದ ಅಮೆರಿಕದ ಆರ್ಥಿಕತೆಗೆ ದೊಡ್ಡ ಬೂಸ್ಟ್ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಬೆಳವಣಿಗೆಯು ಸಣ್ಣ ಉದ್ದಿಮೆಗಳಿಗೆ ದೊಡ್ಡ ಗೆಲುವು ಕೊಟ್ಟಿದೆ ಎಂದೂ ಹೇಳಲಾಗುತ್ತಿದೆ. ಅಕ್ರಮವಾಗಿ ವಸೂಲಿ ಮಾಡಿದ್ದ ಪ್ರತಿ ಪೈಸೆ ಈಗ ಜನರಿಗೆ ವಾಪಸ್ ಸಿಗುತ್ತಿದೆ ಎಂದು ಅಮೆರಿಕದ ಸಣ್ಣ ಉದ್ಯಮಿಗಳ ಒಕ್ಕೂಟ ಸಂತಸ ವ್ಯಕ್ತಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ಸೌಭಾಗ್ಯ ಸಿಗಲು ಬರೋಬ್ಬರಿ 15 ವರ್ಷ ಕಾಯಬೇಕಾಗಿತ್ತು: ಮೊದಲ ಹೆಜ್ಜೆಯನ್ನಿಟ್ಟ ಮಗಳನ್ನು ಕಂಡು ಭಾವುಕಳಾದ ತಾಯಿ!

ತಾಯ್ತನ ಎಂಬುದು ಪ್ರತಿಯೊಬ್ಬ ಮಹಿಳೆಯ ಪಾಲಿಗೆ ಒಂದು ಮರುಜನ್ಮ. ಆದರೆ ಇಲ್ಲೊಬ್ಬ ಮಹಿಳೆಗೆ ಆ ಸೌಭಾಗ್ಯ ಸಿಗಲು ಬರೋಬ್ಬರಿ 15 ವರ್ಷಗಳು ಬೇಕಾಯಿತು. ಗರ್ಭಾಶಯದ ಗಂಭೀರ ಸಮಸ್ಯೆಗಳಿಂದಾಗಿ ಹಲವು ವರ್ಷಗಳ ಕಾಲ ವೈದ್ಯಕೀಯ ಹೋರಾಟ ನಡೆಸಿದ ಈ ತಾಯಿಯ ಬದುಕಿನಲ್ಲಿ ಇಂದು ಸಂತೋಷದ ಕಣ್ಣೀರು ಕೋಡಿ ಹರಿದಿದೆ. ದಶಕಗಳ ಕಾಲ ಮಕ್ಕಳಿಲ್ಲದ ನೋವನ್ನು ಅನುಭವಿಸಿದ ಈ ತಾಯಿ, ಎಲ್ಲಾ ಅಡೆತಡೆಗಳನ್ನು ದಾಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇಂದು ಆ ಪುಟ್ಟ ಮಗಳು ತನ್ನ ಪುಟ್ಟ ಪಾದಗಳನ್ನು ನೆಲದ ಮೇಲೆ ಊರಿ, ಮೊದಲ ಹೆಜ್ಜೆಯನ್ನಿಟ್ಟ ಕ್ಷಣ ಇಡೀ ಕುಟುಂಬವನ್ನೇ ಭಾವುಕಗೊಳಿಸಿದೆ. ಮಗಳು ತತ್ತರಿಸುತ್ತಾ ಎದ್ದು ನಿಂತು, ಮೊದಲ ಹೆಜ್ಜೆ ಇಡಲು ಪ್ರಯತ್ನಿಸಿದಾಗ ಆ ತಾಯಿಯ ಕಣ್ಣುಗಳು ತುಂಬಿ ಬಂದವು. ಆ ಕಣ್ಣೀರಲ್ಲಿ ಕೇವಲ ಸಂತೋಷವಿರಲಿಲ್ಲ, ಬದಲಿಗೆ 15 ವರ್ಷಗಳ ಕಾಲ ಅನುಭವಿಸಿದ ಅವಮಾನ, ನೋವು ಮತ್ತು ಹತಾಶೆಗಳೆಲ್ಲವೂ ಕರಗಿ ಹೋಗಿದ್ದವು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಸಂಸ್ಕೃತ ಕೇವಲ ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ: ಮೋಹನ್ ಭಾಗವತ್ – Kannada News | Mohan Bhagwat: Sanskrit is India’s Soul, Not Just a Language Pranavah Inaugurated

ನವದೆಹಲಿ, ಏಪ್ರಿಲ್ 20: ಸಂಸ್ಕೃತ(Sanskrit) ಒಂದು ಭಾಷೆಯಲ್ಲ ಅದು ಸಂಸ್ಕಾರ, ಭಾರತದ ಆತ್ಮ ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ. ಅಕ್ಷಯ ತೃತೀಯದಂದು ಆರಂಭವಾಗುವ ಕಾರ್ಯಕ್ಕೆ ಎಂದೂ ಅಂತ್ಯವಿಲ್ಲ. ಭಾರತ ಎಂದರೆ ಕೇವಲ ಭೂಪಟವಲ್ಲ ಅಥವಾ ರಾಜಕೀಯ ಭೌಗೋಳಿಕ ಘಟಕವಲ್ಲ. ಭಾರತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತವನ್ನು ತಿಳಿಯುವುದು ಅತ್ಯಗತ್ಯ ಎಂದು ಒತ್ತಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್.) ಅಂಗಸಂಸ್ಥೆ ಸಂಸ್ಕೃತ ಭಾರತಿಯ ನೂತನ ಕಾರ್ಯಾಲಯ ಮತ್ತು ಅಂತಾರಾಷ್ಟ್ರೀಯ ತರಬೇತಿ ಕೇಂದ್ರವಾದ ‘ಪ್ರಣವಃ’ ಅನ್ನು ಆರ್​ಎಸ್​ಎಸ್​ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಉದ್ಘಾಟಿಸಿದರು.ಅಕ್ಷಯ ತೃತೀಯದ ಶುಭ ದಿನದಂದು ದೆಹಲಿಯಲ್ಲಿ ಭಾರತೀಯ ಜ್ಞಾನ ಪರಂಪರೆಯ ಹೊಸ ಅಧ್ಯಾಯವೊಂದು ಆರಂಭವಾಯಿತು
ಈ ಸಮಾರಂಭವು ಕೇವಲ ಒಂದು ಕಚೇರಿಯ ಉದ್ಘಾಟನೆಯಾಗಿರದೆ, ದೇಶದ ಪ್ರಮುಖ ಗಣ್ಯರ ಸಮಾಗಮಕ್ಕೆ ಸಾಕ್ಷಿಯಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಲ್. ಸಂತೋಷ್, ಅನುರಾಗ್ ಠಾಕೂರ್ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕ್ಷಣದಲ್ಲಿ ಉಪಸ್ಥಿತರಿದ್ದರು.

ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ, ಆದರೆ ಇವೆಲ್ಲವನ್ನೂ ಒಗ್ಗೂಡಿಸುವ ಶಕ್ತಿ ಇರುವುದು ಸಂಸ್ಕೃತಕ್ಕೆ ಮಾತ್ರ. ಸಂಸ್ಕೃತ ತಿಳಿದವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಂವಹನ ನಡೆಸಲು ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟರು.

ಮತ್ತಷ್ಟು ಓದಿ: ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್

ಸಂಘಟನೆಯ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಅವರು, ನಾವು ನಿತ್ಯವೂ ಉಸಿರಾಡುವುದನ್ನು ಹೇಗೆ ಮರೆಯುವುದಿಲ್ಲವೋ ಅಥವಾ ಅದು ನಮಗೆ ಹೇಗೆ ಬೇಸರ ತರುವುದಿಲ್ಲವೋ, ಸಂಸ್ಕೃತದ ಕಾರ್ಯವೂ ನಮಗೆ ನಿತ್ಯವೂ ಹೊಸದಾಗಿರಬೇಕು. ಸಂಸ್ಕೃತವನ್ನು ಕೇವಲ ಭಾಷೆಯಾಗಿ ಕಲಿಸುವುದಲ್ಲ, ಅದನ್ನು ಭಾವವಾಗಿ ಮನಸ್ಸಿಗೆ ಇಳಿಸಬೇಕು” ಎಂದರು. ಕಳೆದ 15 ವರ್ಷಗಳಲ್ಲಿ ಸಂಸ್ಕೃತದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದನ್ನು ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮೈ ಹೋಮ್ (My Home) ಸಂಸ್ಥೆಯ ಎಂ.ಡಿ. ಜೆ. ರಂಜಿತ್ ರಾವ್ ಅವರನ್ನು ಮೋಹನ್ ಭಾಗವತ್ ಅವರು ವೇದಿಕೆಗೆ ಕರೆದು ಆತ್ಮೀಯವಾಗಿ ಸನ್ಮಾನಿಸಿದರು.

ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಚಾರ ಪ್ರಮುಖರಾದ ಶ್ರೀಶ ದೇವಪುಜಾರಿ ಮಾತನಾಡಿ, ಈ ‘ಪ್ರಣವಃ’ ಕೇಂದ್ರವು ವಿಶ್ವದ 22 ದೇಶಗಳಲ್ಲಿ ಸಂಸ್ಕೃತವನ್ನು ಪಸರಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಪ್ರಸ್ತುತ ದೇಶಾದ್ಯಂತ 4,000 ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲೂ ಸಂಸ್ಕೃತ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ಅವರು ಘೋಷಿಸಿದರು. ‘ಪ್ರಣವಃ’ ಇನ್ನು ಮುಂದೆ ಕೇವಲ ಕಚೇರಿಯಾಗಿ ಉಳಿಯದೆ, ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳು ಮತ್ತು ತರಬೇತಿಗಳ ಮೂಲಕ ಭಾರತದ ಪ್ರಾಚೀನ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದ ಪೌರತ್ವದ ಆಫರ್ ತಿರಸ್ಕರಿಸಿದ್ದ ರಶೀದ್ ಖಾನ್! – Kannada News | Rashid Khan Rejects Indian Citizenship

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಐಪಿಎಲ್‌ನ ಸ್ಟಾರ್ ಬೌಲರ್ ರಶೀದ್ ಖಾನ್ (Rashid Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಭರ್ಜರಿ ಪ್ರದರ್ಶನದಿಂದ ಅಲ್ಲ. ಬದಲಾಗಿ ತಮ್ಮ ಮುಂಬರುವ ಆತ್ಮಕಥೆ “Rashid Khan: From Streets to Stardom” ನಿಂದ. ಈ ಆತ್ಮಕಥೆಯಲ್ಲಿ ರಶೀದ್ ಖಾನ್ ಹಲವು ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲೊಂದು ಭಾರತದ ಪೌರತ್ವದ ಆಫರ್​..!

ಹೌದು, ರಶೀದ್ ಖಾನ್​​​ ತಮಗೆ ಭಾರತದ ಪೌರತ್ವದ ಆಫರ್ ಬಂದಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಆಫರ್ ಹೊರತಾಗಿಯೂ ನಾನು ಅಫ್ಘಾನಿಸ್ತಾನ್ ಪರವೇ ಆಡಲು ನಿರ್ಧರಿಸಿದ್ದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾದಿಂದ ಆಫರ್:

2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ (BCCI) ಉನ್ನತ ಅಧಿಕಾರಿಯೊಬ್ಬರು ರಶೀದ್ ಖಾನ್ ಅವರನ್ನು ಭೇಟಿಯಾಗಿ ಭಾರತದ ಪೌರತ್ವ ಪಡೆಯುವಂತೆ ಮತ್ತು ಭಾರತದ ಪರವಾಗಿ ಆಡುವಂತೆ ಆಫರ್ ನೀಡಿದ್ರಂತೆ.

ಕೇವಲ ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ ಕೂಡ ಅವರಿಗೆ ಪೌರತ್ವ ನೀಡಲು ಮುಂದಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಆಫರ್ ಕೇಳಿ ನಿಜಕ್ಕೂ ನಾನು ಆಶ್ಚರ್ಯಗೊಂಡಿದ್ದೆ. ಅಲ್ಲದೆ “ನಾನು ನನ್ನ ಸ್ವಂತ ದೇಶಕ್ಕಾಗಿ ಮಾತ್ರ ಆಡುತ್ತೇನೆ,  ಇದರ ಹೊರತಾಗಿ ಬೇರೆ ಯಾವ ದೇಶಕ್ಕಾಗಿಯೂ ಆಡುವುದಿಲ್ಲ” ಎಂದು ಹೇಳುವ ಮೂಲಕ ಈ ಆಫರ್​ಗಳನ್ನು ನಿರಾಕರಿಸಿದ್ದೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ, ತಮ್ಮ ತಾಯ್ನಾಡಿನ ಮೇಲಿರುವ ನಿಷ್ಠೆಯಿಂದಾಗಿ ನಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಶೀದ್ ಖಾನ್ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.

2018ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ರಶೀದ್ ಖಾನ್ ಅವರ ಭರ್ಜರಿ ಪ್ರದರ್ಶನ ಕಂಡು ಅನೇಕ ಅಭಿಮಾನಿಗಳು ಅವರಿಗೆ ಭಾರತೀಯ ಪೌರತ್ವ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು.  ಆ ಸಂದರ್ಭದಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ರಶೀದ್ ಅಫ್ಘಾನಿಸ್ತಾನದ ಹೆಮ್ಮೆ ಎಂದು ಹೇಳಿಕೆ ನೀಡಿದ್ದರು.

ಇದೀಗ ಈ ಎಲ್ಲಾ ವಿಚಾರಗಳನ್ನು ರಶೀದ್ ಖಾನ್ ತಮ್ಮ “Rashid Khan: From Streets to Stardom”  ಆತ್ಮಕಥಾ ಪುಸ್ತಕದ ಮೂಲಕ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ

ಸದ್ಯ ಗುಜರಾತ್ ಟೈಟಾನ್ಸ್ ಪರ ಐಪಿಎಲ್ ಆಡುತ್ತಿರುವ ರಶೀದ್ ಖಾನ್ 5 ಪಂದ್ಯಗಳಿಂದ ಕೇವಲ 6 ವಿಕೆಟ್ ಮಾತ್ರ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಈವರೆಗೆ 141 ಮ್ಯಾಚ್​ಗಳನ್ನಾಡಿರುವ ಅಫ್ಘಾನ್ ಸ್ಪಿನ್ನರ್ 3309 ಎಸೆತಗಳಲ್ಲಿ 3920 ರನ್ ನೀಡಿ 164 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ 150+ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Source link

Video: ಕಲಾವಿದ ಕುಣಿಯುತ್ತಿದ್ದಂತೆ ಕೈ ನೋವಿದ್ರೂ ಪುಟ್ಟ ಹೆಜ್ಜೆಯಿಟ್ಟು ಹೆಜ್ಜೆ ಹಾಕಿದ ಪುಟಾಣಿ – Kannada News | A little girl danced Yakshagana in front of the stage

ಕರಾವಳಿ ಗಂಡು ಕಲೆ ಯಕ್ಷಗಾನಕ್ಕೆ (Yakshagana) ಬಹುದೊಡ್ಡ ಅಭಿಮಾನಿ ಬಳಗವಿದೆ. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಯಕ್ಷಗಾನ ಅಭಿಮಾನಿಗಳೇ. ಇದೀಗ ಯಕ್ಷಗಾನ ನೋಡಲು ಬಂದ ಪುಟಾಣಿಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ರಂಗದಲ್ಲಿ ಯಕ್ಷಗಾನ ಕಲಾವಿದ ಕುಣಿಯುತ್ತಿದ್ದರೆ, ಯಕ್ಷಗಾನ ನೋಡಲು ಬಂದ ಪುಟಾಣಿಯೂ ಕೈ ನೋವಿದ್ದರೂ ಕಲಾವಿದನಂತೆ ಹೆಜ್ಜೆ ಹಾಕಲು ಪ್ರಯತ್ನಿಸುತಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ.

ಜನಪ್ರತಿನಿಧಿ ಪತ್ರಿಕೆ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಮಗುವಿಗಿರುವ ಯಕ್ಷಗಾನ ಆಸಕ್ತಿಯನ್ನು ನೋಡಬಹುದು. ಈ ವಿಡಿಯೋಗೆ ಶೀರ್ಷಿಕೆಯಲ್ಲಿ ಮಕ್ಕಳಿಗೆ ಯಕ್ಷಗಾನ ಎಷ್ಟೊಂದು ಆಪ್ತ ಹಾಗೂ ಆಕರ್ಷಣೀಯ ಎನ್ನುವುದಕ್ಕೆ ಈ ಪುಟ್ಟ ವಿಡಿಯೋ ಸಾಕ್ಷಿ. ಕೈ ನೋವು ಇದ್ದರೂ ಕೂಡಾ ಈ ಮಗು ಯಕ್ಷಗಾನಕ್ಕೆ ಹೆಜ್ಜೆ ಹಾಕುತ್ತಿದೆ. ಪೋಷಕರೆ, ಯಕ್ಷಗಾನದಿಂದ ಮಕ್ಕಳನ್ನು ದೂರ ಮಾಡಬೇಡಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ಹೆತ್ತವರೊಂದಿಗೆ ಯಕ್ಷಗಾನ ನೋಡಲು ಬಂದಿದೆ. ರಂಗಸ್ಥಳದಲ್ಲಿ ಕಲಾವಿದ ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಮುಂಭಾಗದಲ್ಲಿ ನಿಂತ ಪುಟಾಣಿ ಕೈಗೆ ಬ್ಯಾಂಡೇಜ್ ಹಾಕಿದ್ದರೂ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ರಂಗದಲ್ಲಿ ಯಕ್ಷಗಾನ ಕಲಾವಿದನೊಂದಿಗೆ ಹೆಜ್ಜೆ ಹಾಕಿದ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಚೆಂದ ಚೆಂದ ಪುಟ್ಟ ಎಂದರೆ, ಮತ್ತೊಬ್ಬರು, ಮನತುಂಬಿ ಬಂತು, ಯಕ್ಷಗಾನ ಆಕರ್ಷಣೀಯ ಕಲೆ ಎಂದು ಬೇರೆ ಹೇಳಬೇಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬೆಳೆಯುವ ಸಿರಿ ಮೊಳಕೆಯಲ್ಲಿ, ಭವಿಷ್ಯದ ಮಗು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version