ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್​ನಿಂದ ಹಲ್ಲೆಗೆ ಯತ್ನ: ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ; ಬಂಧನ – Kannada News | Actress Antara Banerjee allegedly stripped and attacked RPF official with razor blade during train travel

ಭಾರತೀಯ ರೈಲ್ವೆImage Credit source: Jaromir/Moment/Getty Images

ಮುಂಬೈ, ಆಗಸ್ಟ್ 16: ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ (Antara Banerjee) ಅವರು ರೈಲಿನಲ್ಲಿ ಸೀಟು ವಿಚಾರವಾಗಿ ಗಲಾಟೆ ನಡೆಸಿ, ಆರ್‌ಪಿಎಫ್ (RPF) ಭದ್ರತಾ ಸಿಬ್ಬಂದಿ ಹಾಗೂ ಟಿಕೆಟ್ ಪರೀಕ್ಷಕರ (TC) ಮೇಲೆ ರೇಜರ್ ಬ್ಲೇಡ್‌ನಿಂದ ದಾಳಿ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಆಗಸ್ಟ್ 12 ರಂದು ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಮುಂಬೈನಿಂದ ಸೂರತ್‌ಗೆ ‘ಅರಾವಳಿ ಎಕ್ಸ್‌ಪ್ರೆಸ್’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂತರಾ ಬ್ಯಾನರ್ಜಿ, ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಸಿ (AC) ಕೋಚ್‌ಗೆ ಪ್ರವೇಶಿಸಿ ರಿಸರ್ವ್ಡ್ ಸೀಟ್‌ನಲ್ಲಿ ಕುಳಿತಿರುತ್ತಾರೆ. ಸೀಟ್ ತೆರವುಗೊಳಿಸುವಂತೆ ಸಹಪ್ರಯಾಣಿಕರು ಕೇಳಿದಾಗ, ಅಂತರಾ ಅದಕ್ಕೆ ಒಪ್ಪುವುದಿಲ್ಲ. ಆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ವಿಷಯ ತಿಳಿಸುತ್ತಾರೆ. ಟಿಸಿ ಮೂಲಕ ರೈಲ್ವೆ ಪೊಲೀಸ್ ಪಡೆಗೆ ಮಾಹಿತಿ ಹೋಗುತ್ತದೆ. ಸನ್ನಿವೇಶ ತಿಳಿಗೊಳಿಸಲು ಬಂದ ಆರ್‌ಪಿಎಫ್ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಯಾಮಿನಿ ಕಾಂತ್ ಮಿಶ್ರಾ ಹಾಗೂ ಕಾನ್‌ಸ್ಟೇಬಲ್ ಜೊತೆ ಅಂತರಾ ಗಲಾಟೆ ಮಾಡುತ್ತಾರೆ.

ಇದನ್ನೂ ಓದಿ: RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 3,993 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಕೆ ಬಟ್ಟೆ ಕಳಚಿ, ರೇಜರ್ ಬ್ಲೇಡ್​ನಿಂದ ಹಲ್ಲೆ ಮಾಡಲು ಯತ್ನಿಸುತ್ತಾರೆ. ಸ್ವತಃ ತಮ್ಮ ಮೇಲೂ ಗಾಯ ಮಾಡಿಕೊಳ್ಳುತ್ತಾರೆ ಎಂದು ಆರ್​ಪಿಎಫ್ ಸಿಬ್ಬಂದಿ ಆರೋಪಿಸಿದ್ದಾರೆ. ಈ ಗಲಾಟೆಯ ನಡುವೆ ಆರ್‌ಪಿಎಫ್ ಅಧಿಕಾರಿಯ ಯುನಿಫಾರ್ಮ್, ಕನ್ನಡಕ ಮತ್ತು ಮೊಬೈಲ್ ಫೋನ್ ಹಾನಿಗೊಳಗಾಗಿದ್ದು, ರೈಲಿನ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ನಟಿ ಯತ್ನಿಸಿದ್ದಾರೆ ಎನ್ನಲಾಗಿದೆ. ಮುಂಬೈನ ಬೊರಿವಿಲಿ ಮತ್ತು ದಹಾಣು ರೈಲ್ವೆ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ.

ಬಂಧನ ಮತ್ತು ಜಾಮೀನು: ದಹಾಣು ರೈಲ್ವೆ ನಿಲ್ದಾಣದಲ್ಲಿ ನಟಿಯನ್ನು ಇಳಿಸಿ ಜಿಆರ್‌ಪಿಗೆ (GRP) ಒಪ್ಪಿಸಲಾಯಿತು. ಬೋರಿವಲಿ ರೈಲ್ವೆ ಪೊಲೀಸರು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ, ಪ್ರಾಣಕ್ಕೆ ಅಪಾಯ ತಂದೊಡ್ಡುವುದು ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ದೊರೆತಿದೆ.

ಇದನ್ನೂ ಓದಿ: ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ

ಅಂತರಾ ಬ್ಯಾನರ್ಜಿ ಅವರು ‘ಬಧೋ ಬಹು’, ‘ಕಸೌತಿ ಜಿಂದಗಿ ಕೆ’ ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ಮತ್ತು ಕೆಲವು ವೆಬ್ ಸೀರೀಸ್​ಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Naga Panchami 2026: ಆ. 17 ನಾಗರ ಪಂಚಮಿ; ಪೂಜಾ ಮುಹೂರ್ತ ಮತ್ತು ಸರ್ಪ ನಮಸ್ಕಾರ ಮಂತ್ರಗಳ ಮಹತ್ವ ತಿಳಿಯಿರಿ – Kannada News | Naga Panchami 2026: Date, Puja Timings, Mantras and Benefits for Sarpa Dosha

ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 17 ರಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗ ಪಂಚಮಿಯಂದು ಸರ್ಪ ದೇವರಿಗೆ ಅರ್ಪಿಸಲಾದ ಮಂತ್ರಗಳನ್ನು ಭಕ್ತಿಯಿಂದ ಪಠಿಸುವುದರಿಂದ ಸರ್ಪ ದೋಷಗಳು ನಿವಾರಣೆಯಾಗುತ್ತವೆ ಹಾಗೂ ನಾಗದೇವನ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ. ಈ ಶುಭ ದಿನದಂದು ಸರ್ಪ ದೇವರ ಜೊತೆಗೆ ಶಿವನನ್ನು ಪೂಜಿಸುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಪೂಜೆಯ ಶುಭ ಮುಹೂರ್ತ ಮತ್ತು ಸಮಯದ ವಿವರ:

ಪಂಚಮಿ ತಿಥಿಯು ಆಗಸ್ಟ್ 16 ರಂದು ಸಂಜೆ 4:52 ಕ್ಕೆ ಪ್ರಾರಂಭವಾಗಿ ಆಗಸ್ಟ್ 17 ರಂದು ಸಂಜೆ 5:00 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಹಬ್ಬದ ದಿನದಂದು ನಾಗ ಪಂಚಮಿ ಪೂಜೆಗೆ ಅತ್ಯಂತ ಸೂಕ್ತವಾದ ಶುಭ ಸಮಯ ಬೆಳಿಗ್ಗೆ 5:51 ರಿಂದ ಬೆಳಿಗ್ಗೆ 8:29 ರವರೆಗೆ ಇರಲಿದೆ. ಅಂದರೆ ಭಕ್ತರಿಗೆ ಪೂಜೆ ಸಲ್ಲಿಸಲು ಸುಮಾರು 2 ಗಂಟೆ 37 ನಿಮಿಷಗಳ ಕಾಲಾವಕಾಶ ಲಭ್ಯವಿರುತ್ತದೆ. ಈ ನಿಗದಿತ ಮುಹೂರ್ತದಲ್ಲಿ ಪೂಜೆ ಮತ್ತು ಮಂತ್ರ ಪಠಣ ಮಾಡುವುದು ಹೆಚ್ಚು ಫಲಪ್ರದವಾಗಿದೆ.

ನಾಗರಾಜ ಮತ್ತು ಸಾಮಾನ್ಯ ಸರ್ಪ ಪೂಜಾ ಮಂತ್ರಗಳು:

ನಾಗ ಪಂಚಮಿಯ ದಿನದಂದು ಮುಖ್ಯವಾಗಿ “ಓಂ ನಾಗರಾಜಾಯ ನಮಃ” ಎಂಬ ಶಕ್ತಿಶಾಲಿ ಮಂತ್ರವನ್ನು ಪಠಿಸುವುದು ವಾಡಿಕೆ. ಈ ಮಂತ್ರವನ್ನು ಜಪಿಸುವುದರಿಂದ ನಾಗದೇವನ ಕೃಪೆ ಲಭಿಸುವುದಲ್ಲದೆ, ಮನಸ್ಸಿನಲ್ಲಿರುವ ಹಾವುಗಳ ಭಯ ದೂರವಾಗುತ್ತದೆ. ಇದರೊಂದಿಗೆ ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕ ಪೂಜಾ ಮಂತ್ರವಾದ “ಓಂ ನಾಗಾಯ ನಮಃ” ಎಂದು ಜಪಿಸುವ ಮೂಲಕ ಭಕ್ತಿಯಿಂದ ಸರ್ಪ ದೇವರಿಗೆ ಪ್ರಣಾಮಗಳನ್ನು ಸಲ್ಲಿಸಬಹುದು.

ನಾಗ ಗಾಯತ್ರಿ ಮತ್ತು ಸರ್ಪ ನಮಸ್ಕಾರ ಮಂತ್ರಗಳ ಮಹತ್ವ:

ಈ ಶುಭ ಸಂದರ್ಭದಲ್ಲಿ ವಿಶೇಷ ಫಲ ಸಿದ್ಧಿಗಾಗಿ ನಾಗ ಗಾಯತ್ರಿ ಮಂತ್ರವಾದ ‘ಓಂ ಭುಜಂಗೇಶಾಯ ವಿದ್ಮಹೇ, ಸರ್ಪರಾಜಾಯ ಧೀಮಹಿ, ತನ್ನೋ ನಾಗಃ ಪ್ರಚೋದಯಾತ್’ ಎಂಬುದನ್ನು ಪಠಿಸಲಾಗುತ್ತದೆ. ಇದಲ್ಲದೆ, ಸಮಸ್ತ ಸೃಷ್ಟಿಯಲ್ಲಿರುವ ಸರ್ಪಗಳಿಗೆ ಗೌರವ ಸಲ್ಲಿಸಲು ‘ಓಂ ನಮೋಸ್ತು ಸರ್ಪೇಭ್ಯೋ ಯೇ ಕೇ ಚ ಪೃಥ್ವಿಮನು, ಯೇ ಅಂತರೇಷ್ಕೇ ಯೇ ದಿವಿ ತೇಭ್ಯಃ ಸರ್ಪೇಭ್ಯೋ ನಮಃ’ ಎಂಬ ಸರ್ಪ ನಮಸ್ಕಾರ ಮಂತ್ರವನ್ನು ಜಪಿಸುವುದು ವಿಶಿಷ್ಟವಾಗಿದೆ. ಈ ಮಂತ್ರದ ಮೂಲಕ ಭೂಮಿ, ಆಕಾಶ ಹಾಗೂ ಬಾಹ್ಯಾಕಾಶದಲ್ಲಿರುವ ಸಮಸ್ತ ಸರ್ಪ ಕುಲಕ್ಕೆ ಪ್ರಣಾಮಗಳನ್ನು ಅರ್ಪಿಸಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

Source link

ಅನುದಾನ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಖಾಲಿ ಖಾಲಿ – Kannada News | Government Hospitals Face Critical Medicine Shortage, Patients Suffer Amid Official Negligence

ಗದಗ ಸರ್ಕಾರಿ ಆಸ್ಪತ್ರೆImage Credit source: tv9 kannada

ಗದಗ, ಆಗಸ್ಟ್​ 16: ಸರ್ಕಾರಿ ಆಸ್ಪತ್ರೆ (government hospital) ಅಂದರೆ ಬಡವರ ಪಾಲಿನ ಸಂಜೀವಿನಿ ಎನ್ನುತ್ತಾರೆ. ಹೀಗಾಗಿ ಸಾಕಷ್ಟು ಜನರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ ಗದಗ (gadag) ಜಿಲ್ಲೆಯಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಸಂಪೂರ್ಣ ಹೆದಗೆಟ್ಟು ಹೋಗಿದೆ. ಔಷಧಿಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನುದಾನದ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಆಸ್ಪತ್ರೆಗಳಿಗೆ ಸಮರ್ಪಕ ಔಷಧಿಗಳು ಪೂರೈಕೆ ಆಗುತ್ತಲ್ಲವೆಂದು ಜನರು ಕಿಡಿಕಾರಿದ್ದಾರೆ. ಸದ್ಯ ಈ ಸಮಸ್ಯೆ ಆಸ್ಪತ್ರೆ ಸಿಬ್ಬಂದಿಗೆ ತಲೆನೋವಾಗಿದೆ.

ಔಷಧಿ ಸಿಗದೇ ರೋಗಿಗಳು ಗೋಳಾಟ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿಂದ ಔಷಧಿಗಳು ಸರಿಯಾಗಿ ಸಿಗುತ್ತಿಲ್ಲ ಅಂತ ರೋಗಿಗಳು ಗೋಳಾಡುತ್ತಿದ್ದಾರೆ. ಹೊಳೆಆಲೂರ ಸುತ್ತಮುತ್ತ 20 ಗ್ರಾಮಗಳ‌ ಬಡ ಜನರು ಏನೇ ಆರೋಗ್ಯ ಸಮಸ್ಯೆ ಇದ್ದರೂ ಇದೇ ಆಸ್ಪತ್ರೆಗೆ ಬರುತ್ತಾರೆ. ನಿತ್ಯ ನೂರಾರು ರೋಗಿಗಳು ಆಗಮಿಸುತ್ತಿದ್ದು, ವೈದ್ಯರು ಬರೆದುಕೊಟ್ಟ ಔಷಧಿಗಳು ಈ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುದಾನ ಕೊರತೆಯೋ, ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಅಂತ ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Gadag Government Hostel Raid: ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ

ಇನ್ನು ಈ ಆಸ್ಪತ್ರೆಗೆ ಎಷ್ಟು ಪ್ರಮಾಣದಲ್ಲಿ ಔಷಧಿಗಳು ಬೇಕು ಅಷ್ಟು ಪ್ರಮಾಣದಲ್ಲಿ ಸಮರ್ಪಕವಾಗಿ ಔಷಧಿ ಪೂರೈಕೆ ಆಗುತ್ತಿಲ್ಲವಂತೆ. ಜ್ವರ, ಮೈಕೈ ನೋವು ಸೇರಿ ಸಣ್ಣಪುಟ್ಟ ಕಾಯಿಲೆಗಳ ಕೆಲವು ಔಷಧಿಗಳು ಮಾತ್ರ ಲಭ್ಯವಿವೆ. ಸಾಕಷ್ಟು ಔಷಧಗಳ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ. ಮಕ್ಕಳ ಔಷಧಿಗಳು ಇಲ್ಲ ಅಂತ ತಾಯಂದಿರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಹಾಗೂ ರೋಗಿಗಳ ನಡುವೆ ವಾಗ್ವಾದ

ನಿತ್ಯ ಕೂಡ ಔಷಧ ವಿಭಾಗದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ವಾಗ್ವಾದ ಸಾಮಾನ್ಯವಾಗಿದೆ. ಟಿವಿ9ಗೆ ಲಭ್ಯವಾದ ಮಾಹಿತಿ ಪ್ರಕಾರ ಎಲ್ಲ ಪ್ರಕಾರದ ಆ್ಯಂಟಿ ಬಯೋಟಿಕ್ ಸೇರಿ ಹಲವು ಮಾತ್ರೆಗಳ ಕೊರತೆ ಇವೆಯಂತೆ. ಕೆಲ ಇಂಜೆಕ್ಷನ್​​ಗಳು‌ ಕೂಡ ಇಲ್ಲವಂತೆ. ಹೀಗಾಗಿ ಆಸ್ಪತ್ರೆಗೆ ಬಂದ ಬಡ ರೋಗಗಳು‌ ಕಂಗಾಲಾಗಿದ್ದಾರೆ. ನಾವು ಬಡವರು ಹಣ ಕೊಟ್ಟು ಔಷಧಿ ಖರೀದಿ ಮಾಡಲು ಆಗುತ್ತಾ ಅಂತ ಎನ್ನುತ್ತಿದ್ದಾರೆ. ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಏಕೆ ಬರಬೇಕು. ವೈದ್ಯರು ಬರೆದುಕೊಟ್ಟ ಕೆಲ ಔಷಧಿ ಇಲ್ಲ ಅಂತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಖಾಲಿಯಾಗಿವೆ. ಇಂಡೆಂಟ್ ಹಾಕಿದ ಅರ್ಧದಷ್ಟು ಔಷಧಿ ಮಾತ್ರ ಪೂರೈಕೆ ಆಗ್ತಾವೆ ಅಂತ ಆಸ್ಪತ್ರೆ ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ಬೇಕಾದಷ್ಟು ಔಷಧಿಗಳು ಅಧಿಕಾರಿಗಳು ಪೂರೈಕೆ ಮಾಡುತ್ತಿಲ್ಲ. ಆದರೆ ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೇಳಿದರೆ ಔಷಧಿ ಕೊರತೆ ಇಲ್ಲ. ನಮ್ಮ ಸರ್ಕಾರಿ ಸ್ಟೋರ್​ನಿಂದ ಪೂರೈಕೆ ಸಮಸ್ಯೆ ಇದೆ. ಹೀಗಾಗಿ ಹೊರಗಡೆಯಿಂದ ಖರೀದಿ ಮಾಡಿ ಪೂರೈಕೆ ಮಾಡ್ತಾಯಿದ್ದೇವೆ ಎಂದು ಗದಗ ಡಿಎಚ್ಓ ಡಾ. ಎಸ್ ಎಸ್ ನಿಲಗುಂದ ಹೇಳಿದ್ದಾರೆ.

ಮಕ್ಕಳ ಔಷಧಿಯೂ ಕೊರತೆ 

ಇನ್ನು ಮಕ್ಕಳ ಔಷಧಿಗಳು ಕೂಡ ಖಾಲಿಯಾಗಿವೆ. ಈಗಿನ ವಾತಾವರಣದಿಂದ ಮಕ್ಕಳ ಆರೋಗ್ಯದಲ್ಲಿ ವ್ಯಾತ್ಯಾಸ ಆಗ್ತಾಯಿದೆ. ಹಾಗಾಗಿ ಆಸ್ಪತ್ರೆಗೆ ಬಂದರೆ, ಆಸ್ಪತ್ರೆಯಲ್ಲಿ ಮಕ್ಕಳ ವಿವಿಧ ಪ್ರಕಾರದ ಸಿರಪ್, ಔಷಧಿಗಳ ಕೊರತೆ ಉಂಟಾಗಿದೆ. ರಾತ್ರಿ ಸಮಯದಲ್ಲಿ ಗರ್ಭಿಣಿಯರು ಹೆರಿಗೆ ಬಂದ್ರೆ ಯಾರೂ ಇರಲ್ಲ ಅಂತ ಕಿಡಿಕಾರಿದ್ದಾರೆ. ಸದ್ಯ ಈ ಔಷಧಿ ಕೊರತೆ ವೈದ್ಯರು, ಸಿಬ್ಬಂದಿಗೆ ತಲೆ ನೋವಾಗಿದೆ. ಇನ್ನಾದರೂ ರೋಣ ತಾಲೂಕಾ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆಗಳಿಗೆ ಅಗತ್ಯ ಔಷಧಿ ಪೂರೈಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್ 2’ ಬಳಿಕ ರಣ್ವೀರ್ ಹೊಸ ಸಿನಿಮಾ ಶೂಟಿಂಗ್ ಆರಂಭ: ಯಾವುದದು? – Kannada News | Ranveer Singh starts new movie shooting in Mumbai

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿವೆ. ಈ ಸಿನಿಮಾಗಳು ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನೇ ಬರೆದಿವೆ. ಈ ಎರಡು ಸಿನಿಮಾಗಳಿಂದ ರಣ್ವೀರ್ ಸಿಂಗ್, ಬಾಲಿವುಡ್​​ನ ಸ್ಟಾರ್ ಆಗಿದ್ದವರು ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ ಅವರಿಗೆ ಭಾರಿ ದೊಡ್ಡ ಯಶಸ್ಸನ್ನು ಈ ಸಿನಿಮಾಗಳು ತಂದುಕೊಟ್ಟಿವೆ. ಆದರೆ ಈ ಸಿನಿಮಾಗಳ ಬಳಿಕ ರಣ್ವೀರ್ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಇತ್ತು. ಧುರಂಧರ್ 2 ಸಿನಿಮಾದ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳಲು ಸಮಯ ತೆಗೆದುಕೊಂಡ ರಣ್ವೀರ್ ಸಿಂಗ್ ಇದೀಗ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ.

ರಣ್ವೀರ್ ಸಿಂಗ್ ಅವರು ‘ಪಾರ್ಲೆ’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ಇದೀಗ ಮುಂಬೈನಲ್ಲಿ ಶುರುವಾಗಿದೆ. ‘ಪಾರ್ಲೆ’ ಸಿನಿಮಾವು ಸೂಪರ್ ಹೀರೋ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದ್ದು, ಈ ಸಿನಿಮಾ ಸಹ ‘ಧುರಂಧರ್’ ರೀತಿ ದೇಶಪ್ರೇಮ ಜಾಗೃತಗೊಳಿಸುವ, ವಿದೇಶಿ ಕ್ಷುಧ್ರ ಶಕ್ತಿಗಳ ವಿರುದ್ಧ ಹೋರಾಟದ ಕತೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾನಲ್ಲಿ ಮಲಯಾಳಂ ಚಿತ್ರರಂಗದ ಸ್ಟಾರ್ ನಟಿ, ‘ಲೋಕಃ’ ಖ್ಯಾತಿಯ ಕಲ್ಯಾಣಿ ಪ್ರಿಯದರ್ಶನ್ ನಾಯಕಿ.

ಇದನ್ನೂ ಓದಿ:‘ಧುರಂಧರ್’ ಚೆಲುವೆ ಸಾರಾ ಅರ್ಜುನ್ ಕ್ಯೂಟ್ ವಿಡಿಯೋ

ರಣ್ವೀರ್ ಸಿಂಗ್ ಅವರ ಹೊಸ ಸಿನಿಮಾ ‘ಪಾರ್ಲೆ’ಯನ್ನು ಜಯ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ‘ಒಮೆಟ್ರಾ’ ಮತ್ತು ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಈ ಹಿಂದೆ ಬ್ರಿಜ್ ಮಾದರಿಯ, ಕಲಾತ್ಮಕ ಮಾದರಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಜಯ್ ಮೆಹ್ತಾ ಇದೀಗ ಸೂಪರ್ ಹೀರೋ ಮಾದರಿಯ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ರಣ್ವೀರ್ ಸಿಂಗ್ ಪಾಲಿಗೆ ಸಹ ಇದು ಅವರ ಮೊಟ್ಟ ಮೊದಲ ಸೂಪರ್ ಹೀರೋ ಮಾದರಿಯ ಸಿನಿಮಾ ಆಗಿದೆ.

ಅಸಲಿಗೆ ರಣ್ವೀರ್ ಸಿಂಗ್, ‘ಧುರಂಧರ್ 2’ ಬಳಿಕ ‘ಡಾನ್ 3’ ಸಿನಿಮಾನಲ್ಲಿ ನಟಿಸಬೇಕಿತ್ತು. ಆದರೆ ‘ಡಾನ್ 3’ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಫರ್ಹಾನ್ ಅಖ್ತರ್ ಅವರಿಗೂ ರಣ್ವೀರ್ ಸಿಂಗ್ ನಡುವೆಯೂ ಭಿನ್ನಾಭಿಪ್ರಾಯ ಮೂಡಿದ ಕಾರಣ ರಣ್ವೀರ್ ಸಿಂಗ್ ಆ ಸಿನಿಮಾದಿಂದ ಹೊರಬಂದರು. ಬಳಿಕ ‘ಪಾರ್ಲೆ’ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಮಾತ್ರವೇ ಅಲ್ಲದೆ ಬೇರೆ ಕೆಲ ದೇಶಗಳಲ್ಲಿಯೂ ಚಿತ್ರೀಕರಣ ಮಾಡಲಿದ್ದಾರೆ. ಅಂದಹಾಗೆ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಕನ್ನಡತಿ ರುಕ್ಮಿಣಿ ವಸಂತ್ ಅವರೂ ಸಹ ಆಡಿಷನ್ ನೀಡಿದ್ದರು ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಘಟನೆ ಇನ್​​​​ಸೈಡ್ ಮಾಹಿತಿ ಬಿಚ್ಚಿಟ್ಟ ಸಿಎಂ ಡಿಕೆಶಿ – Kannada News | CM DK Shuvakumar Talks about Chamarajanagara forest Department Staff Shootout case

ಕೊಡಗು, (ಆಗಸ್ಟ್ 16): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದ ಶೂಟೌಟ್‌ನಲ್ಲಿ ಮೂವರು ಹತ್ಯೆಯಾಗಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಮೃತರು ಪ್ರಾಣಿಗಳ ಬೇಟೆಗೆ ಬಂದಿದ್ದು, ಈ ದಾಳಿ ನಡೆಸಿದ್ದಕ್ಕೆ ಆತ್ಮ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರತಿ ದಾಳಿ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಘಟನೆಯಿಂದ ಎಸ್ಕೇಪ್ ಆಗಿ ಬಂದಿರುವ ಮತ್ತೋರ್ವ, ಇದನ್ನು ಅಲ್ಲಗಳೆದಿದ್ದು, ಹೀಗಾಗಿ ಅಸಲಿಗೆ ಆಗಿದ್ದೇನು ಎನ್ನುವುದೇ ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಲಾಗಿದೆ.

ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್,ಘಟನಾ ಸ್ಥಳದಲ್ಲಿ ಕೋವಿಗಳು ದೊರೆತ್ತಿವೆ. ಹಾಗೇ ಮಾಂಸ ಸಿಕ್ಕಿದೆ. ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಇನ್ನು ಮೃತರ ಕುಟುಂಬದವರಿಗೆ ಎಷ್ಟು ಪರಿಹಾರ ಕೊಡಬಹುದು ಎಂದು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕಕ್ಕೆ 2047ಕ್ಕೆ 3 ಟ್ರಿಲಿಯನ್ ಆರ್ಥಿಕತೆ ಗುರಿ; ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ, ಶಿಕ್ಷಣದಲ್ಲಿ ಎಐ ಇತ್ಯಾದಿ ಯೋಜನೆ ಪ್ರಕಟ – Kannada News | Karnataka economy target of 3 trillion USD by 2047, CM DK Shivakumar announces

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್Image Credit source: PTI

ಬೆಂಗಳೂರು, ಆಗಸ್ಟ್ 16: ಮುಂದಿನ ಎರಡು ದಶಕದಲ್ಲಿ ಕರ್ನಾಟಕದ ಆರ್ಥಿಕತೆಯನ್ನು (Karnataka GDP) ಆರು ಪಟ್ಟು ಹೆಚ್ಚಿಸುವ ಹೆಗ್ಗುರಿಯನ್ನು ಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಪ್ರಕಟಿಸಿದ್ದಾರೆ. ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಹತ್ವಾಕಾಂಕ್ಷಿ ಗುರಿಯನ್ನು ಬಿಚ್ಚಿಟಿದ್ದಾರೆ. 2047ಕ್ಕೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಜಿಡಿಪಿಯ ರಾಜ್ಯವನ್ನಾಗಿ ಮಾಡುವುದು ಸೇರಿದಂತೆ ವಿವಿಧ ಗುರಿ ಮತ್ತು ಯೋಜನೆಗಳನ್ನು ಸಿಎಂ ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.

ಒಂದು ಲಕ್ಷ ಉದ್ಯೋಗಸೃಷ್ಟಿ ನಿರೀಕ್ಷೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯ ನಿರ್ಮಾಣಕ್ಕೆ ಪೂರಕವಾಗುವ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ‘ಉದ್ಯೋಗ ಸಂಕಲ್ಪ’ ಮತ್ತು ‘ಉದ್ಯೋಗ ನಿಧಿ’ ಯೋಜನೆಗಳು. ಇವುಗಳ ಮೂಲಕ ರಾಜ್ಯದಲ್ಲಿ ಸದ್ಯೋಭವಿಷ್ಯದಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಆರ್ಥಿಕವಾಗಿ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಿಗೆ ಪ್ರತಿ ಉದ್ಯೋಗಕ್ಕೆ ₹2,500 ಪ್ರೋತ್ಸಾಹಧನ ನೀಡಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಮತ್ತು ಶಿಕ್ಷಣ

  • ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣವನ್ನು ಪರಿಚಯಿಸಲಾಗುವುದು.
  • ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪನೆ.
  • ರಾಜ್ಯದಾದ್ಯಂತ ತಂತ್ರಜ್ಞಾನ ಇಕೋಸಿಸ್ಟಂ ಬಲಪಡಿಸಲು AI ಕೇಂದ್ರಗಳನ್ನು (AI Hubs) ಸ್ಥಾಪಿಸಲಾಗುವುದು.

ಇದನ್ನೂ ಓದಿ: ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ

ಬೆಂಗಳೂರು ಹೊರಗಿನ ಅಭಿವೃದ್ಧಿ

‘ಬಿಯಾಂಡ್ ಬೆಂಗಳೂರು’ (Beyond Bengaluru) ಉಪಕ್ರಮದಡಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ 20,000 ಕೋಟಿ ರೂ ವೆಚ್ಚದಲ್ಲಿ ಸುಧಾರಿತ ತಯಾರಿಕಾ ಕ್ಲಸ್ಟರ್ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಒಂದು ಲಕ್ಷ ಉದ್ಯೋಗಸೃಷ್ಟಿಯ ನಿರೀಕ್ಷೆ ಇದೆ ಎಂದು ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

ಇತರೆ ಘೋಷಣೆಗಳು

  • ಬೆಂಗಳೂರು ಪೊಲೀಸ್ ಆಯುಕ್ತಾಲಯವನ್ನು ಐದು ಪ್ರತ್ಯೇಕ ಭಾಗಗಳಾಗಿ ಮಾಡಿ ನಗರದ ಪೊಲೀಸ್ ಆಡಳಿತ ವ್ಯವಸ್ಥೆಯನ್ನು ಪುನರ್ ಸಂಘಟಿಸುವುದು.
  • ರಾಜ್ಯ ಸರ್ಕಾರಿ ಸ್ವಾಮ್ಯದ ‘ಮೋಟಾರ್ ವಾಹನ ವಿಮಾ ನಿಗಮ’ ಸ್ಥಾಪಿಸುವ ಪ್ರಸ್ತಾವನೆ.
  • ಕೃಷಿ ವಲಯದಲ್ಲಿ ರೈತ ಚೈತನ್ಯ ಯೋಜನೆಯಲ್ಲಿ ಬೆಳೆ ಸಮೀಕ್ಷೆಗೆ ಡ್ರೋನ್ ಮತ್ತು ಇಮೇಜರಿ ಬಳಕೆ
  • ರೈತ ಮಿತ್ರ ಯೋಜನೆಯಡಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳಿಗೆ ಶೇ. 50 ಸಬ್ಸಿಡಿ.

ಇದನ್ನೂ ಓದಿ: ಭಾರತದ 5ನೇ ತಲೆಮಾರಿನ ಫೈಟರ್ ಜೆಟ್​ಗೆ ದೇಶೀಯ ಇಂಜಿನ್ ಅಭಿವೃದ್ಧಿ: ರಿಲಯನ್ಸ್, ರೋಲ್ಸ್ ರಾಯ್ಸ್ ಪಾಲುದಾರಿಕೆ

ಈ ಯೋಜನೆಯು ರಾಜ್ಯದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸಿದೆ. ಕರ್ನಾಟಕದ ಆರ್ಥಿಕತೆ ಸದ್ಯ 500 ಬಿಲಿಯನ್ ಡಾಲರ್ ಹತ್ತಿರ ಹತ್ತಿರ ಇದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇ. 9-10ರಷ್ಟು ಇದೆ. ಜಿಎಸ್​ಟಿ ಸಂಗ್ರಹ, ತಲಾದಾಯ ಇತ್ಯಾದಿಗಳಲ್ಲೂ ಕರ್ನಾಟಕ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಹೀಗಾಗಿ, ಕರ್ನಾಟಕ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇಟ್ಟಿರುವುದು ಅಸಾಧ್ಯದ ಗುರಿ ಎನಿಸುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Post Office Recruitment: ಮಂಡ್ಯ ಅಂಚೆ ಇಲಾಖೆಯಲ್ಲಿ ನೇಮಕಾತಿ; 10ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗಾವಕಾಶ – Kannada News | Mandya Postal Sakhi Recruitment 2026: 10th Pass Women Direct Interview on Aug 24

ಅಂಚೆ ಇಲಾಖೆಯಲ್ಲಿ ‘ಪೋಸ್ಟಲ್ ಸಖಿ’ ನೇಮಕಾತಿ

ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಮಹಿಳಾ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವೊಂದು ದೊರೆತಿದೆ. ಮಂಡ್ಯದಲ್ಲಿ 10ನೇ ತರಗತಿ ಉತ್ತೀರ್ಣರಾದ ಗ್ರಾಮೀಣ ಮಹಿಳೆಯರಿಗಾಗಿ ‘ಪೋಸ್ಟಲ್ ಸಖಿ’ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಆಗಸ್ಟ್ 24ರಂದು ನೇರ ಸಂದರ್ಶನ ಆಯೋಜಿಸಲಾಗಿದೆ. ಈ ನೇಮಕಾತಿಯ ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

10ನೇ ತರಗತಿ ಪಾಸಾದ ಮಹಿಳೆಯರಿಗೆ ಅವಕಾಶ:

‘ಪೋಸ್ಟಲ್ ಸಖಿ’ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಭಾಗದ ಅರ್ಹ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ನೇಮಕಾತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಹಾಗೂ ಇತರ ವಿವರಗಳನ್ನು ಅಭ್ಯರ್ಥಿಗಳು ಸಂದರ್ಶನಕ್ಕೂ ಮುನ್ನ ಪರಿಶೀಲಿಸುವುದು ಸೂಕ್ತ.

ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನದ ಮೂಲಕ ಆಯ್ಕೆ:

ಈ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ಸಂದರ್ಶನದ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಪರೀಕ್ಷೆಯ ಭಯವಿಲ್ಲದೆ ನಿಗದಿತ ದಿನಾಂಕದಂದು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

ಆಗಸ್ಟ್ 24ರಂದು ಸಂದರ್ಶನ:

ಅಭ್ಯರ್ಥಿಗಳ ಆಯ್ಕೆಗಾಗಿ ಆಗಸ್ಟ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಶೇಷ ಸಂದರ್ಶನ ನಡೆಯಲಿದೆ. ಮಂಡ್ಯ ಪ್ರಧಾನ ಅಂಚೆ ಕಚೇರಿಯಲ್ಲಿರುವ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸ್ಥಳಕ್ಕೆ ಆಗಮಿಸುವುದು ಉತ್ತಮ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಜಿಲ್ಲೆ;102 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾವ ದಾಖಲೆಗಳನ್ನು ತರಬೇಕು?

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಬರಬೇಕು. ಆಧಾರ್ ಕಾರ್ಡ್ ಪ್ರತಿ, ಅಂಚೆ ಕಚೇರಿಯ ಉಳಿತಾಯ ಖಾತೆಯ ಪ್ರತಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ಪ್ರತಿ ಹಾಗೂ ಸ್ವಸಹಾಯ ಸಂಘದ ಗುರುತಿನ ಚೀಟಿ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು.

ಆಸಕ್ತ ಅಭ್ಯರ್ಥಿಗಳಿಗೆ ಸಲಹೆ:

ಅರ್ಹತೆ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಯಾವುದೇ ಲಿಖಿತ ಪರೀಕ್ಷೆ ಇಲ್ಲದಿರುವುದರಿಂದ ನೇರ ಸಂದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು, ಮೂಲ ದಾಖಲೆಗಳು ಹಾಗೂ ಅವುಗಳ ಪ್ರತಿಗಳೊಂದಿಗೆ ಆಗಸ್ಟ್ 24ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಪ್ರಧಾನ ಅಂಚೆ ಕಚೇರಿಯ ಅಧೀಕ್ಷಕರ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಅಪಘಾತದಲ್ಲಿ ಯುವಕ-ಯುವತಿ ದುರ್ಮರಣ: ಆದಿಯೋಗಿ ದರ್ಶನ ಪಡೆದು ಮರಳುತ್ತಿದ್ದವರು ಮಸಣಕ್ಕೆ – Kannada News | Young Man and Woman Die in Road Accident While Returning from Adiyogi Visit

ಚಿಕ್ಕಬಳ್ಳಾಪುರ, ಆಗಸ್ಟ್​​ 16: ಲಾರಿ ಡಿಕ್ಕಿಯಾಗಿ (accident) ಬೈಕ್​​ನಲ್ಲಿ ತೆರಳುತ್ತಿದ್ದ ಯುವಕ, ಯುವತಿ ದುರ್ಮರಣ ಹೊಂದಿರುವಂತಹ (death) ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ನಡೆದಿದೆ. ಮೃತ ಯುವಕ-ಯುವತಿ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಸಮೀಪರುವ ಈಶಾ ಆದಿಯೋಗಿ ದರ್ಶನ ಪಡೆದು ಬೈಕ್‌ನಲ್ಲಿ ವಾಪಸ್ ಮರಳುತ್ತಿದ್ದರು. ಈ ವೇಳೆ ಲಿಂಗಶೆಟ್ಟಿಪುರ ಗೇಟ್ ಬಳಿ ವೇಗವಾಗಿ ಬಂದ ಲಾರಿಯೊಂದು ಇವರ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಗೆ ಕಾರು ಡಿಕ್ಕಿ: ಮಾಗಡಿ ಮೂಲದ ಇಬ್ಬರು ದುರ್ಮರಣ, 7 ಮಂದಿಗೆ ಗಾಯ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಎರ್ಟಿಗಾ ಕಾರು ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡಿದಿದ್ದು, ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ; ಬಾಡಿ ಶೇಮಿಂಗ್ ಮಾಡಿದ ನಾಲ್ವರ ವಿರುದ್ಧ FIR

ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಮಾಗಡಿ ಮೂಲದ ಶಿವಕುಮಾರ್ (37) ಹಾಗೂ ಮಲ್ಲಯ್ಯ (40) ಮೃತರು. ಕಾರಿನಲ್ಲಿದ್ದ ಉಳಿದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬೈಕ್‌ಗೆ ಕ್ಯಾಂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಕ್ಯಾಂಟರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನ ಕಾಲು ಕಟ್ಟ ಆದ ಘಟನೆ ಮೊನ್ನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುದುಕುಳ ಗೇಟ್‌ ಬಳಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: ಗೇಲೆ ಮಾಡಿದ್ದಕ್ಕೆ ಕೊಲೆ: ರೀಲ್ಸ್ ನೋಡಿಕೊಂಡು ಗೆಳೆಯನಿಗೆ ಕೀಟಲೆ ಮಾಡಿದವನ ಹೆಣ ಬಿತ್ತು!

ಬಂಗಾರಪೇಟೆ ತಾಲೂಕಿನ ಸೋರೇಗೌಡನ ಕೋಟೆ ನಿವಾಸಿ ಸಂದೀಪ್ ಕುಮಾರ್ (27) ಮೃತಪಟ್ಟಿದ್ದು, ರೆಡ್ಡಹಳ್ಳಿ ನಿವಾಸಿ ರಾಜು (26) ಗಾಯಾಳು. ಸದ್ಯ ಗಾಯಾಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇಹದಲ್ಲಿ ವಿಟಮಿನ್, ಮಿನರಲ್ಸ್ ಕೊರತೆ ಇದೆಯೇ? ಈ ಲಕ್ಷಣಗಳು ಕಾಣಿಸಿದರೆ ನಿರ್ಲಕ್ಷಿಸಬೇಡಿ! – Kannada News | Vitamin B12 to Iron Deficiency: Symptoms You Need to Know

ದೇಹ ಆರೋಗ್ಯವಾಗಿರಲು ವಿಟಮಿನ್‌ಗಳು ಮತ್ತು ಮಿನರಲ್ಸ್‌ಗಳು ಅತ್ಯಗತ್ಯ. ಆದರೆ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಕೆಲವು ಆರೋಗ್ಯ ಸಮಸ್ಯೆಗಳು ಅಥವಾ ಜೀವನಶೈಲಿಯಲ್ಲಿ ಮಾಡಿಕೊಂಡ ಕೆಲವು ಬದಲಾವಣೆಗಳಿಂದ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಮಟ್ಟ ಕಡಿಮೆಯಾಗಬಹುದು. ಆರಂಭದಲ್ಲಿ ಇದರ ಲಕ್ಷಣಗಳು ಸಾಮಾನ್ಯ ದಣಿವು ಅಥವಾ ದುರ್ಬಲತೆಯಂತೆ ಕಾಣಿಸಿಕೊಳ್ಳಬಹುದು. ಆದರೆ ಪದೇಪದೇ ದಣಿವು, ತಲೆಸುತ್ತುವಿಕೆ, ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಕೂದಲು ಉದುರುವುದು ಅಥವಾ ಸ್ನಾಯುಗಳ ದುರ್ಬಲತೆ ಕಂಡುಬಂದರೆ ದೇಹದಲ್ಲಿ ಯಾವುದಾದರೂ ವಿಟಮಿನ್ ಅಥವಾ ಮಿನರಲ್ ಕೊರತೆ ಇರಬಹುದೇ ಎಂಬುದನ್ನು ಪರಿಶೀಲಿಸುವುದು ಅಗತ್ಯ. ಹಾಗಾದರೆ ಯಾವ ಕೊರತೆಗೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಯಾವ ರೀತಿಯ ಪರೀಕ್ಷೆ ಮಾಡಿಸಬೇಕು ಜೊತೆಗೆ ಆಹಾರದ ಮೂಲಕ ಇದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ದೇಹದಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಕೊರತೆಯಾದರೆ ಕಾಣಿಸಿಕೊಳ್ಳುವ ಲಕ್ಷಣಗಳು

Cleveland Clinic ಪ್ರಕಾರ, ದೇಹದಲ್ಲಿ ಪೋಷಕಾಂಶಗಳ ಕೊರತೆಯಾದಾಗ ವಿವಿಧ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ಬಿ12 ಕೊರತೆ ಇದ್ದರೆ ದಣಿವು, ದುರ್ಬಲತೆ, ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಕಾಣಿಸಬಹುದು. Iron deficiency ಇದ್ದಾಗ ದಣಿವು, ತಲೆಸುತ್ತುವಿಕೆ, ದುರ್ಬಲತೆ ಮತ್ತು ಚರ್ಮ ಬಿಳಿಚಿಕೊಳ್ಳುವಂತಹ ಲಕ್ಷಣಗಳು ಕಾಣಿಸಬಹುದು. ವಿಟಮಿನ್ ಡಿ ಕೊರತೆಯಿಂದ ಮೂಳೆ ಮತ್ತು ಸ್ನಾಯುಗಳಲ್ಲಿ ನೋವು ಅಥವಾ ದುರ್ಬಲತೆ ಉಂಟಾಗಬಹುದು. ಜಿಂಕ್ ಕೊರತೆ ಇದ್ದರೆ ಕೂದಲು ಉದುರುವಿಕೆ ಹಾಗೂ ಗಾಯಗಳು ನಿಧಾನವಾಗಿ ಗುಣವಾಗುವ ಸಮಸ್ಯೆ ಕಾಣಿಸಬಹುದು. ಇದರ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ವಿಟಮಿನ್ ಸಿ ಕೊರತೆಯೂ ದೇಹದ ಮೇಲೆ ಪರಿಣಾಮ ಬೀರಬಹುದು. ಆದರೆ ಇದೇ ಲಕ್ಷಣಗಳು ಇತರ ಆರೋಗ್ಯ ಸಮಸ್ಯೆಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ಕೊರತೆ ಪತ್ತೆಹಚ್ಚಲು ಯಾವ ಪರೀಕ್ಷೆ ಮಾಡಿಸಬೇಕು?

ವಿಟಮಿನ್ ಮತ್ತು ಮಿನರಲ್ಸ್ ಕೊರತೆಯನ್ನು ಪತ್ತೆಹಚ್ಚಲು ಸಾಮಾನ್ಯವಾಗಿ ಬ್ಲಡ್ ಟೆಸ್ಟ್ ಮಾಡಲಾಗುತ್ತದೆ. ವ್ಯಕ್ತಿಯ ಲಕ್ಷಣಗಳು ಮತ್ತು ಆರೋಗ್ಯದ ಇತಿಹಾಸವನ್ನು ಆಧರಿಸಿ ವೈದ್ಯರು ಅಗತ್ಯವಿರುವ ಪರೀಕ್ಷೆಗಳನ್ನು ಸೂಚಿಸುತ್ತಾರೆ. ವೈದ್ಯರ ಸಲಹೆಯಿಲ್ಲದೆ ಅನಗತ್ಯ ಪರೀಕ್ಷೆಗಳು ಅಥವಾ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ.

ಆಹಾರದ ಮೂಲಕ ವಿಟಮಿನ್ ಮತ್ತು ಮಿನರಲ್ಸ್ ಕೊರತೆ ತಡೆಯುವುದು ಹೇಗೆ?

ಪೋಷಕಾಂಶಗಳ ಕೊರತೆ ತಪ್ಪಿಸಲು ಒಂದೇ ಆಹಾರವನ್ನು ಅವಲಂಬಿಸುವ ಬದಲು ಸಮತೋಲಿತ ಆಹಾರ ಸೇವಿಸುವುದು ಮುಖ್ಯ. ಹಣ್ಣು, ತರಕಾರಿ, ಬೇಳೆಕಾಳುಗಳು, ಬೀನ್ಸ್, ಸಂಪೂರ್ಣ ಧಾನ್ಯಗಳು, ನಟ್ಸ್, ಸೀಡ್ಸ್, ಮೊಟ್ಟೆ, ಮೀನು ಮತ್ತು ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಬಹುದು. ಸಪ್ಲಿಮೆಂಟ್‌ಗಳ ಅಗತ್ಯ ಎಲ್ಲರಿಗೂ ಇರುವುದಿಲ್ಲ. ಯಾವುದೇ ವಿಟಮಿನ್ ಅಥವಾ ಮಿನರಲ್ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳುವುದು ಉತ್ತಮ. ಕೆಲವು ಪೋಷಕಾಂಶಗಳನ್ನು ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ದಯವಿಟ್ಟು ಭಾರತಕ್ಕೆ ಹೋಗಬೇಡಿ; ವಿದೇಶಿ ಮಹಿಳೆ ಹೀಗೆನ್ನಲು ನೀಡಿದ ಕಾರಣ ನೋಡಿ – Kannada News | Please do not go to India: Why an American woman said this

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ಇಷ್ಟ ಪಟ್ಟು ಭಾರತಕ್ಕೆ ಬರುವ ವಿದೇಶಿಗರು ಇಲ್ಲಿ ಟ್ರಿಪ್ ಎಂಜಾಯ್ ಮಾಡ್ತಾರೆ. ಕೆಲವರು ಇಲ್ಲಿ ಜೀವನ ನಡೆಸಲು ಮುಂದಾಗುತ್ತಾರೆ. ಇಲ್ಲಿನ ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಜನರೊಂದಿಗೆ ಬೆರೆಯುತ್ತಾರೆ. ಇದೀಗ ಈ ಮಹಿಳೆಗೆ ಭಾರತಕ್ಕೆ ಬರಲೇಬೇಡಿ. ಒಂದು ವೇಳೆ ಇಲ್ಲಿಗೆ ಬಂದರೆ ನೀವು ಮತ್ತೆ ನಿಮ್ಮ ದೇಶಕ್ಕೆ ಮರಳಿ ಹೋಗಲ್ಲ ಎಂದಿದ್ದಾರೆ. ಇಲ್ಲಿನ ಊಟ ತಿಂಡಿ, ಜನರು, ಆಚಾರ ವಿಚಾರ ಹಾಗೂ ಸಂಸ್ಕೃತಿಗೆ ಫಿದಾ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಳ್ಳೆಯದ್ದನ್ನು ಹುಡುಕುವ ವಿದೇಶಿ ಮಹಿಳೆಯ ಗುಣಕ್ಕೆ ಮೆಚ್ಚಿಕೊಂಡಿದ್ದಾರೆ.

ಕ್ರಿಸ್ಟನ್ ಫಿಶ್ಚರ್ (Kristen Fischer) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಭಾರತಕ್ಕೆ ಹೋಗಬೇಡಿ, ನೀವು ಅದ್ಭುತ ಆಹಾರವನ್ನು ಸವಿಯುತ್ತೀರಿ, ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸುತ್ತೀರಿ, ಅದ್ಭುತ ಜನರನ್ನು ಭೇಟಿಯಾಗುತ್ತೀರಿ. ನಂತರ ದೇಶವನ್ನು ಬಿಟ್ಟು ಹೋಗಲು ಇಚ್ಛೆಯಾಗುವುದೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಭಾರತಕ್ಕೆ ಭೇಟಿ ನೀಡಿ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯ್ನಾಡಿಗೆ ಹೊರಟ ಭಾರತೀಯ ಕುಟುಂಬ ಕಂಡು ಕಣ್ಣೀರಿಟ್ಟ ಅಮೆರಿಕನ್ ಅಜ್ಜಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮತ್ತೆ ಭಾರತಕ್ಕೆ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ಭಾರತದ ಬಗ್ಗೆ ಧನಾತ್ಮಕ ಅಂಶಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತಕ್ಕೆ ಬನ್ನಿ, ಪ್ರೀತಿಯನ್ನು ಹಂಚಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version