ಬಿಎಂಟಿಸಿಯಲ್ಲಿ ಡಿಜಿಟಲ್ ಕ್ರಾಂತಿ: ಯುಪಿಐನಿಂದಲೇ ಶೇ.51ಕ್ಕೂ ಹೆಚ್ಚು ಟಿಕೆಟ್ ಆದಾಯ!

ಬೆಂಗಳೂರು, ಆಗಸ್ಟ್​​ 06: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಯುಪಿಐ (UPI) ಮೂಲಕ ಟಿಕೆಟ್ ಖರೀದಿ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಥೆಯ ಒಟ್ಟು ಟಿಕೆಟ್ ಆದಾಯದ ಶೇ.50ಕ್ಕೂ ಹೆಚ್ಚು ಈ ಮೂಲಕವೇ ಸಂಗ್ರಹವಾಗುತ್ತಿದೆ. ಆದರೆ, ನೆಟ್‌ವರ್ಕ್ ಸಮಸ್ಯೆ ಮತ್ತು ವಹಿವಾಟು ವಿಫಲವಾಗುವ ಘಟನೆಗಳು ಇನ್ನೂ ಪ್ರಯಾಣಿಕರು ಹಾಗೂ ನಿರ್ವಾಹಕರಿಗೆ ತೊಂದರೆ ಉಂಟುಮಾಡುತ್ತಿವೆ ಎನ್ನಲಾಗಿದೆ.

UPI ಮೂಲಕ ಈ ವರ್ಷ 313.4 ಕೋಟಿ ಆದಾಯ

ಬಿಎಂಟಿಸಿ ಅಂಕಿಅಂಶಗಳ ಪ್ರಕಾರ, 2025ರ ಜನವರಿಯಲ್ಲಿ ಒಟ್ಟು ಆದಾಯದಲ್ಲಿ ಯುಪಿಐ ಪಾಲು ಶೇ.22.2 ಇದ್ದರೆ, ಡಿಸೆಂಬರ್ ವೇಳೆಗೆ ಅದು ಶೇ.50.9ಕ್ಕೆ ಏರಿಕೆಯಾಗಿದೆ. ಈ ವರ್ಷ ಜನವರಿ 1ರಿಂದ ಜುಲೈ 30ರವರೆಗೆ ಬಿಎಂಟಿಸಿಯ ಒಟ್ಟು 609.5 ಕೋಟಿ ಟಿಕೆಟ್ ಆದಾಯದಲ್ಲಿ 313.4 ಕೋಟಿ ಯುಪಿಐ ಮೂಲಕ ಬಂದಿದೆ. ಅಂದರೆ ಒಟ್ಟು ಆದಾಯದಲ್ಲಿ ಶೇ.51.4 ಡಿಜಿಟಲ್ ಪಾವತಿಯ ಪಾಲಾಗಿದೆ.

ಇದನ್ನೂ ಓದಿ: ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?

ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿ

ಟಿಕೆಟ್ ಖರೀದಿಯನ್ನು ಸುಲಭಗೊಳಿಸಲು ಹಾಗೂ ನಗದು ವಹಿವಾಟು ಕಡಿಮೆ ಮಾಡಲು ಬಿಎಂಟಿಸಿ ಸುಮಾರು ಆರು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳಲ್ಲಿ (ETM) ಡೈನಾಮಿಕ್ QR ಕೋಡ್ ವ್ಯವಸ್ಥೆ ಜಾರಿಗೆ ತಂದಿದೆ. ಈ ಮೊದಲು ಬಸ್‌ಗಳಲ್ಲಿ ಅಂಟಿಸಲಾಗಿದ್ದ ಸ್ಟ್ಯಾಟಿಕ್ QR ಕೋಡ್ ಮೂಲಕ ಪ್ರಯಾಣಿಕರು ಮುಂಚಿತವಾಗಿ ಪಾವತಿ ಮಾಡಬಹುದಾಗಿತ್ತು. ಆದರೆ ಕೆಲವರು ನಕಲಿ ಅಥವಾ ಎಡಿಟ್ ಮಾಡಿದ ಪಾವತಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ವಂಚನೆ ನಡೆಸಿದ ಹಿನ್ನೆಲೆಯಲ್ಲಿ ಆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.

ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆ

ಡಿಜಿಟಲ್ ಪಾವತಿ ಹೆಚ್ಚಾದರೂ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ನಿರ್ವಾಹಕರು ಪ್ರಯಾಣಿಕರ ಗಮ್ಯಸ್ಥಾನ ನಮೂದಿಸಿದ ಬಳಿಕವೇ QR ಕೋಡ್ ಸೃಷ್ಟಿಯಾಗುತ್ತದೆ. ಆದರೆ ನೆಟ್‌ವರ್ಕ್ ನಿಧಾನವಾಗಿದ್ದರೆ ಅಥವಾ ಸಿಗ್ನಲ್ ಇಲ್ಲದಿದ್ದರೆ QR ಕೋಡ್ ಸೃಷ್ಟಿಯಾಗಲು ವಿಳಂಬವಾಗುತ್ತದೆ. ನಗರದ ಹೊರವಲಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್‌ಗೆ ಉದಯನಿಧಿ ಸ್ಟಾಲಿನ್ ಸವಾಲು – Kannada News | Wearing black Shirt Udhayanidhi Stalin slams CM Vijay over farmers issues and Cauvery Dispute

ಚೆನ್ನೈ, ಆಗಸ್ಟ್ 6: ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2026-27ರ ಹಣಕಾಸು ವರ್ಷದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಬಜೆಟ್ ವರದಿಯನ್ನು ರೈತರಿಗೆ ಯಾವುದೇ ಪ್ರಯೋಜನವನ್ನು ನೀಡದ ನಿರಾಶಾದಾಯಕ ವರದಿ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin)  ಟೀಕಿಸಿದ್ದಾರೆ. ಎಲ್ಲಾ ಡಿಎಂಕೆ ಶಾಸಕರು ಇಂದು ವಿಧಾನಸಭೆಗೆ ಕಪ್ಪು ಶರ್ಟ್ ಧರಿಸಿ ಬಂದು, ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದ ನಂತರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳನ್ನು ಭೇಟಿಯಾದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸರ್ಕಾರದ ಕೃಷಿ ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, “ಕಳೆದ ಡಿಎಂಕೆ ಆಡಳಿತದಲ್ಲಿ ಪರಿಚಯಿಸಲಾದ ಕಲ್ಯಾಣ ಯೋಜನೆಗಳ ಹೆಸರುಗಳನ್ನು ಟಿವಿಕೆ ಸರ್ಕಾರ ಬದಲಾಯಿಸಿ, ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಪಕ್ಷವು ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸದೆ ನಿರಂತರವಾಗಿ ರೈತರನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು. “ಚುನಾವಣಾ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿಗಳು 5 ಎಕರೆವರೆಗೆ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ, ಅವರು ಆರಂಭದಲ್ಲಿ 50,000 ರೂ.ವರೆಗೆ ಮಾತ್ರ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ನಂತರ, ಡಿಎಂಕೆ ಮತ್ತು ರೈತರ ವಿರೋಧದ ನಂತರ, ಅವರು ಅದನ್ನು 75,000ಕ್ಕೆ ಹೆಚ್ಚಿಸಿದರು. ಚುನಾವಣಾ ಭರವಸೆಯಂತೆ ರೈತರು ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ಸರ್ಕಾರ ಈ ವಿಷಯದ ಬಗ್ಗೆ ಮೌನವಾಗಿದೆ” ಎಂದು ಉದಯನಿಧಿ ಆರೋಪಿಸಿದರು.

ಇದನ್ನೂ ಓದಿ: ‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಮೇಕೆದಾಟು ಮತ್ತು ಕಾವೇರಿ ನೀರಿನ ಕೊರತೆ:

ಕಳೆದ ಕೆಲವು ತಿಂಗಳುಗಳಲ್ಲಿ ತಮಿಳುನಾಡು ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಪರಿಹಾರವಿಲ್ಲ ಎಂದು ಅವರು ಟೀಕಿಸಿದರು. “ರಾಜ್ಯದಲ್ಲಿ ಕಾವೇರಿ ನೀರಿನ ಕೊರತೆಯಿಂದಾಗಿ, ರೈತರು ಕೃಷಿ ಮಾಡಲು ಸಾಧ್ಯವಾಗದೆ ಭಾರಿ ನಷ್ಟ ಅನುಭವಿಸಿದ್ದಾರೆ. ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸರ್ಕಾರ ತಮಿಳುನಾಡು ರೈತರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಅಸಮಾಧಾನ ಹೊರಹಾಕಿದರು.

ಕಳೆದ ಕೆಲವು ತಿಂಗಳುಗಳಿಂದ ಅನೇಕ ಕಷ್ಟಗಳನ್ನು ಎದುರಿಸುತ್ತಿರುವ ರೈತರ ಧ್ವನಿಯಾಗಿ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಮಾರ್ಗವಾಗಿ ಎಲ್ಲಾ ಡಿಎಂಕೆ ಶಾಸಕರು ಕಪ್ಪು ಶರ್ಟ್ ಧರಿಸಿ ಬಂದು ನಾಯಕನ ಆದೇಶದ ಮೇರೆಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಉದಯನಿಧಿ ಹೇಳಿದರು.

ಇದನ್ನೂ ಓದಿ: ‘ಟಿವಿಕೆ ಸರ್ಕಾರ ನನ್ನನ್ನು ಉಗ್ರನಂತೆ ನಡೆಸಿಕೊಂಡಿತು’; ಉದಯನಿಧಿ ಸ್ಟಾಲಿನ್ ಆರೋಪ

ಧೈರ್ಯವಿದ್ದರೆ ಉತ್ತರಿಸಿ:

ವಿಧಾನಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಮತ್ತು ರೈತರ ಮೇಲಿನ ಪರಿಣಾಮದ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿ ಮುಗಿದ ನಂತರ ಮುಂದೂಡಿಕೆ ನಿರ್ಣಯ ಮಂಡಿಸಲು ಸ್ಪೀಕರ್‌ಗೆ ಪತ್ರ ಸಲ್ಲಿಸಲಾಗಿದೆ. “ನಾಳೆ ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ, ಅವರು ಎದ್ದು ನಿಂತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ” ಎಂದು ಉದಯನಿಧಿ ಸ್ಟಾಲಿನ್ ಸವಾಲು ಹಾಕಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಬೆಂಗಳೂರಿಗೆ ಆಗಮಿಸಿದ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಅದ್ಧೂರಿ ಸ್ವಾಗತ – Kannada News | 2026 Commonwealth Games: Para Athlete Shilpa’s Grand Bengaluru Welcome

2026 ರ ಕಾಮನ್‌ವೆಲ್ತ್ ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದರು. ಈ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ಯಾರಾ ಅಥ್ಲೀಟ್ ಶಿಲ್ಪಾ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದೀಗ ತವರಿಗೆ ಮರಳಿದ ಶಿಲ್ಪಾ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ವಿಮಾನ ನಿಲ್ದಾಣದಲ್ಲಿ ಡೋಲು-ಕುಣಿತ ಹೂವಿನ ಸುರಿಮಳೆ ಸುರಿಸಿ ಜಯಘೋಷದ ನಡುವೆ ಶಿಲ್ಪಾ ಅವರನ್ನು ಸ್ವಾಗತಿಸಲಾಯಿತು. ಶಿಲ್ಪಾರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರೆಲ್ಲರೂ ಶಿಲ್ವಾ ಅವರಿಗೆ ಹೂಗುಚ್ಛ ನೀಡಿ ಅದ್ದೂರಿ ಸ್ವಾಗತ ನೀಡಿದರು. ಹಾಗೆಯೇ ಶಿಲ್ಪಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Source link

‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್​ಗೆ ಸಮನ್ಸ್ ಜಾರಿ – Kannada News | Salman Khan and sister Alvira summoned by Chandigarh Court in Being Human Cheating Case

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹಾಗೂ ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ಬ್ರ್ಯಾಂಡ್ ‘ಬೀಯಿಂಗ್ ಹ್ಯೂಮನ್’ (Being Human) ಜ್ಯುವೆಲ್ಲರಿ ವ್ಯವಹಾರಕ್ಕೆ ಸಂಬಂಧಿಸಿದ ಕೋಟಿಗಟ್ಟಲೆ ರೂಪಾಯಿ ವಂಚನೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಇದರಿಂದಾಗಿ ಹಳೆಯ ಉದ್ಯಮ ವಿವಾದವೊಂದು ಮತ್ತೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಪ್ರಾರಂಭಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ಎಂಬುವರು ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶೋರೂಮ್ ತೆರೆಯಲು ತಮ್ಮನ್ನು ಪ್ರಚೋದಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಉದ್ಯಮದ ಯಶಸ್ಸಿಗೆ ಅಗತ್ಯ ಬೆಂಬಲ ನೀಡುವುದಾಗಿ ಮತ್ತು ಭಾರಿ ಲಾಭ ಸಿಗಲಿದೆ ಎಂದು ಕಂಪನಿಯ ಪದಾಧಿಕಾರಿಗಳು ನೀಡಿದ ಭರವಸೆಯನ್ನು ನಂಬಿ ಸುಮಾರು 2ರಿಂದ 3 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾಗಿ ಗುಪ್ತಾ ದೂರಿದ್ದಾರೆ.

ಸುಳ್ಳಾದ ಭರವಸೆ, ಭಾರಿ ಆರ್ಥಿಕ ನಷ್ಟ:

ಉದ್ಯಮಿ ಅರುಣ್ ಗುಪ್ತಾ ಅವರ ಪ್ರಕಾರ, ಶೋರೂಮ್ ಆರಂಭವಾದ ಬಳಿಕ ಕಂಪನಿಯು ಒಪ್ಪಂದದಂತೆ ಯಾವುದೇ ಪ್ರಚಾರ ಅಥವಾ ವ್ಯಾಪಾರ ಬೆಂಬಲವನ್ನು ನೀಡಲಿಲ್ಲ. ಅಷ್ಟೇ ಅಲ್ಲದೆ, ಜ್ಯುವೆಲ್ಲರಿ ಆಭರಣಗಳ ಪೂರೈಕೆಯನ್ನೂ ಹಠಾತ್ತನೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ತಮ್ಮ ಶೋರೂಮ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿ, ಕೋಟಿಗಟ್ಟಲೆ ರೂಪಾಯಿ ಆರ್ಥಿಕ ನಷ್ಟ ಅನುಭವಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಸಲ್ಮಾನ್ ಖಾನ್ ಬದಲಿಗೆ ಆಯುಷ್ ಶರ್ಮಾ ಭೇಟಿ:

ಶೋರೂಮ್ ಉದ್ಘಾಟನೆಗೆ ಖುದ್ದು ನಟ ಸಲ್ಮಾನ್ ಖಾನ್ ಆಗಮಿಸಲಿದ್ದಾರೆ ಎಂದು ಕಂಪನಿಯ ಪ್ರತಿನಿಧಿಗಳು ಭರವಸೆ ನೀಡಿದ್ದರು ಎಂದು ಉದ್ಯಮಿ ತಿಳಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಸಲ್ಮಾನ್ ಖಾನ್ ಬದಲಿಗೆ ಅವರ ಭಾವ, ನಟ ಆಯುಷ್ ಶರ್ಮಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದರು. ಕೊಟ್ಟ ಮಾತು ತಪ್ಪಿದ್ದಕ್ಕೆ ಹಾಗೂ ವ್ಯವಹಾರದಲ್ಲಿ ಆದ ನಷ್ಟಕ್ಕೆ ಸಂಬಂಧಪಟ್ಟವರು ಸೂಕ್ತ ಸ್ಪಂದನೆ ನೀಡಲಿಲ್ಲ ಎಂಬುದು ಗುಪ್ತಾ ಅವರ ದೂರು.

ಇದನ್ನೂ ಓದಿ: ವಿಪರೀತ ತೂಕ ಕಡಿಮೆ ಆಗಿದ್ದರ ಬಗ್ಗೆ ಮೌನ ಮುರಿದ ನಟ ಸಲ್ಮಾನ್ ಖಾನ್

ಕಂಪನಿಯ ಸ್ಪಷ್ಟನೆ:

ಈ ವಿವಾದದ ಕುರಿತು ಹಿಂದೆ ಸ್ಪಷ್ಟನೆ ನೀಡಿದ್ದ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ವ್ಯವಹಾರದ ಲೈಸೆನ್ಸ್ ಹೊಂದಿರುವ ಕಂಪನಿಯು, ಫ್ರಾಂಚೈಸಿ ಒಪ್ಪಂದದಲ್ಲಿ ಸಲ್ಮಾನ್ ಖಾನ್ ಅಥವಾ ಅವರ ಸಹೋದರಿ ಅಲ್ವಿರಾ ಯಾವುದೇ ರೀತಿಯ ನೇರ ಪಾಲುದಾರರಲ್ಲ ಎಂದು ತಿಳಿಸಿತ್ತು. ಆದ್ದರಿಂದ ಈ ವ್ಯಾಪಾರ ವಿವಾದಕ್ಕೂ ಸಲ್ಮಾನ್ ಖಾನ್ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಕಂಪನಿ ಹೇಳಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ – Kannada News | Darshan’s lawyers saw Boss Kannada movie what were their opinion

ಬಾಸ್’ (Boss) ಸಿನಿಮಾ ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ವಿವಾದ ಸೃಷ್ಟಿಸಿದ ಕನ್ನಡ ಸಿನಿಮಾ. ನಟ ದರ್ಶನ್ ಜೀವನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸುದ್ದಿ ಹರಿದಾಡಿದ್ದ ಕಾರಣಕ್ಕೆ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಖುದ್ದು ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ ಚಿತ್ರತಂಡವು ಇದು ದರ್ಶನ್ ಕುರಿತ ಸಿನಿಮಾ ಅಲ್ಲ ಎಂದೇ ಹೇಳುತ್ತಾ ಬಂತು. ಆದರೆ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ರಿಲೀಸ್​​ಗೆ ಮುಂಚೆ, ದರ್ಶನ್ ಪರ ವಕೀಲರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ವಕೀಲರು ಹೇಳಿದ್ದೇನೆಂದು, ಸಿನಿಮಾದ ನಟ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು? – Kannada News | Congress Ahinda MLAs Upset On Siddaramaiah over Not recommended Names For Minister Post

ಬೆಂಗಳೂರು, (ಆಗಸ್ಟ್ 06): ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​​​​ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹಲವು ಹಿರಿಯ-ಕಿರಿಯ ಶಾಸಕರು ಬೇಸರಗೊಂಡಿದ್ದು, ಅವರನ್ನ ಮನವೊಲಿಸುವ ಯತ್ನವೂ ಸಹ ನಡೆದಿದೆ. ಇದರ ಮಧ್ಯೆ ಇನ್ನೊಂದೆಡೆ ಅಹಿಂದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ  (Siddaramaiah) ಮೇಲೆ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀವ್ರ ಬೇಸರಗೊಂಡಿರುವ ಹೆಚ್ ಸಿ ಮಹದೇವಪ್ಪ ಅವರು ದೆಹಲಿಗೆ ಹಾರಿದ್ದಾರೆ.

ಸಚಿವ ಸ್ಥಾನಕ್ಕೆ ಸಿದ್ದರಾಮಯ್ಯನವರು ತಮ್ಮ ಹೆಸರು ಶಿಫಾರಸು ಮಾಡಿದ್ದಾರೆ ಎಂದು ಹಲವು ಶಾಸಕರು ನಂಬಿದ್ದರು. ಆದ್ರೆ, ಸುರ್ಜೆವಾಲಾ ಜೊತೆಗೆ ಚರ್ಚೆ ವೇಳೆ ರಾಜ್ಯ ನಾಯಕರು ಶಿಫಾರಸು ಮಾಡಿದ್ದ ಹೆಸರುಗಳು ಬಹಿರಂಗವಾಗಿದ್ದು, ಆಂತರಿಕ ಚರ್ಚೆ ವೇಳೆ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ರೆಫರ್ ಮಾಡಿದ್ದ ಲಿಸ್ಟ್ ಬಿಚ್ಚಿಡಲಾಗಿದೆ. ಈ ವೇಳೆ ಸಿದ್ದರಾಮಯ್ಯ ಕೆಲವೇ ಕೆಲವು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಿದ್ದರು ಎನ್ನುವುದು ಗೊತ್ತಾಗಿದೆ. ಅಹಿಂದ ಶಾಸಕರ ಪರವಾಗಿ ಸಿದ್ದರಾಮಯ್ಯ ಪ್ರಬಲ ವಾದ ಮಂಡಿಸಿಲ್ಲ. ಸಿದ್ದರಾಮಯ್ಯ ತಮಗೆ ಸಚಿವ ಸ್ಥಾನ ಕೊಡಿಸುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದರು. ಆದ್ರೆ, ಇದೀಗ ಎಲ್ಲ ಸಚಿವ ಸ್ಥಾನಕ್ಕೆ ತಮ್ಮ ಹೆಸರುಗಳನ್ನ ಶಿಫಾರಸ್ಸು ಮಾಡಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಸಿದ್ದರಾಮಯ್ಯನವರ ನಡೆಗೆ ಅಸಮಾಧಾನಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಶಾಪ್​​ ದರೋಡೆಗೆ ಯತ್ನ: ಮಾಲೀಕನ ಮೇಲೆ ಗುಂಡಿನ ದಾಳಿ – Kannada News | Nelamangala Gold Shop Owner Shot During Robbery Attempt in Dabaspete

ನೆಲಮಂಗಲ, ಆಗಸ್ಟ್​ 06: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ (firing) ನಡೆಸಿ ದರೋಡೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ದಾಬಸ್‌ಪೇಟೆಯ ಪ್ರೇಮ್ ಶಿವ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಮಾಲೀಕ ಪುನ್ನಾರಾಮ್ ಗಾಯಗೊಂಡಿದ್ದಾರೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?

ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐದಾರು ಜನರ ತಂಡ, ಆಭರಣ ಖರೀದಿಸುವವರಂತೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದೆ. ಬಳಿಕ ಚಿನ್ನಾಭರಣಗಳನ್ನು ದರೋಡೆ ಮಾಡಲು ಯತ್ನಿಸಿದ್ದು, ಈ ವೇಳೆ ಮಾಲೀಕ ಪುನ್ನಾರಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ದರೋಡೆಕೋರರು ಅವರ ಮೇಲೆ ಏಕಾಏಕಿ ಫೈರಿಂಗ್ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಗುಂಡಿನ ಸದ್ದು: ಬೆಚ್ಚಿಬಿದ್ದ ಅಪಾರ್ಟ್‌ಮೆಂಟ್‌ ಜನರು; ನಡೆದಿದ್ದೇನು?

ಇನ್ನು ಘಟನಾ ಸ್ಥಳ ಪರಿಶೀಲನೆ ವೇಳೆ ಅಂಗಡಿಯಲ್ಲಿ 2 ಜೀವಂತ ಗುಂಡುಗಳು ಪತ್ತೆಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಪರಾರಿಯಾಗಿರುವ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ್ದ ಆಟೋ ಕದ್ದು ಪರಾರಿಯಾದ ಖದೀಮರು

ಮನೆ ಮುಂದೆ ನಿಲ್ಲಿಸಿದ್ದ ಆಟೋ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಜಕ್ಕಸಂದ್ರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಚಿಕ್ಕಮಗಳೂರು ನಿವಾಸಿ  ಸುನೀಲ್ ಅವರು 9 ತಿಂಗಳ ಹಿಂದಷ್ಟೇ ಹೊಸ ಆಟೋ ಖರೀದಿ ಮಾಡಿದ್ದರು.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ತಡರಾತ್ರಿ ಹೊಂಚುಹಾಕಿದ್ದ ಮೂವರು ಕಳ್ಳರು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆಟೋ ಕದ್ದು ಪರಾರಿ ಆಗಿದ್ದಾರೆ. ಕಳ್ಳರು ಆಟೋ ಕದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ?: ಮಂತ್ರಿಗಳಿಗೆ ಖಡಕ್​​ ಸೂಚನೆ ಕೊಟ್ಟಿದ್ದೇಕೆ ಹೈಕಮಾಂಡ್​​? – Kannada News | Portfolio Allocation for New Karnataka Ministers Today? Why the High Command Issued a Stern Directive

ಬೆಂಗಳೂರು, ಆಗಸ್ಟ್​​ 06: ಕರ್ನಾಟಕದಲ್ಲಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಇಂದು ಖಾತೆ ಹಂಚಿಕೆ ಆಗುವ ಸಾಧ್ಯತೆ ಇದೆ. ಇಂದು ರಾತ್ರಿಯೊಳಗೆ 19 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ.ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಹೀಗಿದ್ದರೂ ಮತ್ತೊಂದು ಸುತ್ತಿನ ಚರ್ಚೆ ಬಳಿಕ ಅಂತಿಮ ನಿರ್ಧಾರವಾಗಲಿದೆ. ನೂತನ ಸಚಿವರಿಗೆ ಖಾತೆ ಹಂಚಿದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇರುವ ಕಾರಣ ಹೀಗಾಗಿ ಯಾವುದೇ ಖಾತೆ ನೀಡಿದರೂ ಕಾರ್ಯ ನಿರ್ವಹಿಸುವಂತೆ ನೂತನ ಸಚಿವರಿಗೆ ಹೈಕಮಾಂಡ್ ನಾಯಕರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

892 ಕೋಟಿ: ಪತಿ ರಣ್​​ಬೀರ್ ಕಪೂರ್ ಅನ್ನೇ ಹಿಂದಿಕ್ಕಿದ ನಟಿ ಆಲಿಯಾ ಭಟ್ – Kannada News | Alia Bhatt’s brand value calculated around 892 crore rs higher than Ranbir Kapoor

ಇತ್ತೀಚೆಗಿನ ನಟ, ನಟಿಯರು ಕೇವಲ ನಟನಾ ವೃತ್ತಿಗೆ ಸೀಮಿತವಾಗಿಲ್ಲ. ಉದ್ಯಮಿಗಳು ಸಹ ಹೌದು. ಅದರಲ್ಲೂ ಬಾಲಿವುಡ್ (Bollywood) ನಟಿಯರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕೆಲವರು ಸ್ವಂತದ ಸಂಸ್ಥೆಗಳನ್ನು ಕಟ್ಟಿ ಬಲು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ಆಸ್ತಿ ಮೌಲ್ಯ ಅಥವಾ ಬ್ರ್ಯಾಂಡ್ ಮೌಲ್ಯ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ವೃತ್ತಿ ಹಾಗೂ ಉದ್ಯಮದಲ್ಲಿ ಹೆಚ್ಚು ಹೆಚ್ಚು ಯಶಸ್ಸು ಗಳಿಸುತ್ತಲೂ ಈ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತಲೇ ಸಾಗುತ್ತದೆ. ಕೆಲ ವರ್ಷಗಳ ಹಿಂದೆ ತಮ್ಮ ಬುದ್ಧಿಪತ್ತೆಯಿಂದಾಗಿ ‘ಪೆದ್ದಿ’ ಎನಿಸಿಕೊಂಡಿದ್ದ ಆಲಿಯಾ ಭಟ್ ಈಗ ಮೌಲ್ಯದಲ್ಲಿ ಹಲವು ಸ್ಟಾರ್ ನಟ, ನಟಿಯರನ್ನೇ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದ್ದಾರೆ.

ಕ್ರೋಲ್ ಹೆಸರಿನ ಸಂಸ್ಥೆ ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಮೌಲ್ಯಗಳ ಕುರಿತು ಮಾಹಿತಿ ಪ್ರಕಟಿಸಿದೆ. 2025 ರ ಮಾಹಿತಿ ಆಧರಿಸಿದ ಪಟ್ಟಿ ಇದಾಗಿದ್ದು ನಟ ಶಾರುಖ್ ಖಾನ್ ನಂ. 1 ಸ್ಥಾನವನ್ನು ಪಡೆದುಕೊಂಡಿದ್ದರೆ, ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿ ಭಾರತದ ಅತಿ ಹೆಚ್ಚು ಮೌಲ್ಯಯುತ ಮಹಿಳಾ ಸೆಲೆಬ್ರಿಟಿ ಬ್ರ್ಯಾಂಡ್‌ ಆಗಿ ಆಲಿಯಾ ಹೊರಹೊಮ್ಮಿದ್ದಾರೆ. ಕ್ರೋಲ್‌ನ ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ವರದಿ 2025 ರ ಪ್ರಕಾರ, ಆಲಿಯಾ ಭಟ್ ಅವರು 93.9 ಮಿಲಿಯನ್ ಡಾಲರ್ (ಸುಮಾರು 892 ಕೋಟಿ ರೂ.) ಬ್ರ್ಯಾಂಡ್ ಮೌಲ್ಯದೊಂದಿಗೆ ಶ್ರೇಯಾಂಕದಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎಲ್ಲಾ ಸೆಲೆಬ್ರಿಟಿಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಮಹಿಳೆಯಾಗಿ ಅವರು ಹೊರಹೊಮ್ಮಿದ್ದಾರೆ. ಅಲ್ಲದೆ, 80 ಮಿಲಿಯನ್ ಡಾಲರ್ (ಸುಮಾರು 761 ಕೋಟಿ ರೂ.) ಮೌಲ್ಯದೊಂದಿಗೆ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿರುವ ತಮ್ಮ ಪತಿ ರಣಬೀರ್ ಕಪೂರ್ ಸೇರಿದಂತೆ ಹಲವು ಪುರುಷ ನಟರಿಗಿಂತಲೂ ಉನ್ನತ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿರುವ ಮತ್ತೊಬ್ಬ ಏಕೈಕ ಮಹಿಳಾ ಸೆಲೆಬ್ರಿಟಿ ಎಂದರೆ 89.2 ಮಿಲಿಯನ್ ಡಾಲರ್ (ಸುಮಾರು 849.35 ಕೋಟಿ ರೂ) ಬ್ರ್ಯಾಂಡ್ ಮೌಲ್ಯದೊಂದಿಗೆ ಏಳನೇ ಸ್ಥಾನದಲ್ಲಿರುವ ದೀಪಿಕಾ ಪಡುಕೋಣೆ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ಜೊತೆ ಗುಟ್ಟಾಗಿ ಮದುವೆ ಆಗಿದ್ದರು ಬಾಲಿವುಡ್ ಸ್ಟಾರ್ ನಟಿ

ಆಲಿಯಾ ಭಟ್ ಅವರ ಈ ಹೆಚ್ಚಿದ ಬ್ರ್ಯಾಂಡ್ ಮೌಲ್ಯಕ್ಕೆ ಅವರ ಉದ್ಯಮವೇ ಕಾರಣ ಎನ್ನಲಾಗುತ್ತಿದೆ. ಆಲಿಯಾ ಭಟ್ ಅವರ ಇತ್ತೀಚೆಗಿನ ಎರಡು ಸಿನಿಮಾಗಳಾದ ‘ಆಲ್ಫಾ’ ಮತ್ತು ‘ಜಿಗ್ರಾ’ ಎರಡೂ ದೊಡ್ಡ ಯಶಸ್ಸು ಕಂಡಿಲ್ಲ ಆದರೂ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಒಪ್ಪಂದಗಳ ಪೋರ್ಟ್‌ಫೋಲಿಯೊವನ್ನು ಯಶಸ್ವಿಯಾಗಿ ಬಿಲ್ಡ್ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಫ್ಯಾಷನ್ ಉತ್ಸವಗಳು, ಇವೆಂಟ್​​ಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದಾರೆ. ಇದೆಲ್ಲದರ ಕಾರಣಕ್ಕೆ ಅವರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ.

ಆಲಿಯಾ ಭಟ್ ಪ್ರಸ್ತುತ ಪತಿ ರಣ್​​ಬೀರ್ ಕಪೂರ್ ಜೊತೆಗೆ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಅನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಒಂದು ತೆಲುಗು ಸಿನಿಮಾನಲ್ಲಿ ಆಲಿಯಾ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇವುಗಳ ಜೊತೆಗೆ ‘ತುಂಬಾಡ್ 2’ ಸಿನಿಮಾನಲ್ಲಿ ಸಹ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಕ್ರಿಕೆಟ್‌ನಲ್ಲಿ ಭಾರತ- ಪಾಕ್ ಮುಖಾಮುಖಿ ಯಾವಾಗ? – Kannada News | Asian Games 2026: India vs Pakistan Cricket Showdown Final Match Only?

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣ ಎರಡೂ ತಂಡಗಳು ಪರಸ್ಪರ ದ್ವಿಪಕ್ಷೀಯ ಸರಣಿಗಳನ್ನು ಆಡದೆ ಇರುವುದು. ಆದಾಗ್ಯೂ ಉಭಯ ತಂಡಗಳು ಐಸಿಸಿ (ICC) ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. ಈ ಈವೆಂಟ್​ಗಳು ಅಪರೂಪಕ್ಕೊಮ್ಮೆ ನಡೆಯುವುದರಿಂದ ಅಭಿಮಾನಿಗಳು ಎರಡು ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಸಾಕಷ್ಟು ಸಮಯ ಕಾಯಬೇಕು. ಇದೀಗ ಆ ಸಮಯ ಸನಿಹ ಬಂದಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಂಗಳದಲ್ಲಿ ಪರಸ್ಪರ ಎದುರುಬದುರಾಗಲಿವೆ.

ದಿಗ್ಗಜರಿಲ್ಲದೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಭಾರತ ಪರ ಆಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಏಕೆಂದರೆ ಏಷ್ಯನ್ ಕ್ರೀಡಾಕೂಟವು ಟಿ20 ಸ್ವರೂಪದಲ್ಲಿ ನಡೆಯಲಿದೆ. ಟಿ20 ಸ್ವರೂಪಕ್ಕೆ ಇವರಿಬ್ಬರು ವಿದಾಯ ಹೇಳಿರುವ ಕಾರಣ ಟೀಂ ಇಂಡಿಯಾ ಇವರಿಬ್ಬರಿಲ್ಲದೆ ಪಾಕ್ ತಂಡವನ್ನು ಎದುರಿಸಲಿದೆ.

ಏಷ್ಯನ್ ಕ್ರೀಡಾಕೂಟಕ್ಕಾಗಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪುರುಷರ ವಿಭಾಗದಲ್ಲಿ, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಶ್ರೇಯಾಂಕದ ಆಧಾರದ ಮೇಲೆ ನಾಕೌಟ್ ಹಂತಗಳಿಗೆ ನೇರವಾಗಿ ಅರ್ಹತೆ ಪಡೆದಿವೆ. ಉಳಿದ ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆಯುತ್ತವೆ.

ಭಾರತ- ಪಾಕ್ ಮುಖಾಮುಖಿ ಯಾವಾಗ?

ಪುರುಷರ ವಿಭಾಗದಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು, ಮಹಿಳೆಯರ ವಿಭಾಗದಲ್ಲಿ ಎಂಟು ತಂಡಗಳು ಸ್ಪರ್ಧಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಲಿವೆ. ಆದಾಗ್ಯೂ ಕ್ವಾರ್ಟರ್ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಎರಡೂ ತಂಡಗಳು ತಮ್ಮ ತಮ್ಮ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳನ್ನು ಗೆದ್ದ ನಂತರವೇ ಪರಸ್ಪರ ಮುಖಾಮುಖಿಯಾಗಬಹುದು. ಸರಳವಾಗಿ ಹೇಳುವುದಾದರೆ, ಚಿನ್ನದ ಪದಕ ಪಂದ್ಯ ಅಥವಾ ಫೈನಲ್ ಪಂದ್ಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬಹುದು. ಅದರಲ್ಲೂ ಎರಡು ತಂಡಗಳು ಫೈನಲ್​ಗೆ ಅರ್ಹತೆ ಪಡೆದರೆ ಮಾತ್ರ. ಇಲ್ಲದಿದ್ದರೆ, ಈ ಕ್ರೀಡಾಕೂಟದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುವುದಿಲ್ಲ. ಈ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 17 ರಿಂದ 22 ರವರೆಗೆ ನಡೆಯಲಿದ್ದು, ಪುರುಷರ ಸ್ಪರ್ಧೆಯು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಿ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version