‘ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’; ಧನಂಜಯ್ – Kannada News | Daali Dhananjay Says Ask Me about My food not about My Religion

ಲಿಂಗಾಯತ ಆಗಿ ಧನಂಜಯ್ ಅವರು ಮಾಂಸ ತಿಂದಿದ್ದು ಚರ್ಚೆಗೆ ಕಾರಣ ಆಯಿತು. ಈ ವಿಡಿಯೋ ಸಾಕಷ್ಟು ವೈರಲ್ ಆಯಿತು. ಆದರೆ ಆಹಾರ ಎನ್ನೋದು ಅವರವರ ಆಯ್ಕೆ ಎಂದು ಧನಂಜಯ್ ನಂಬುತ್ತಾರೆ. ಅವರ ಬಳಿ ಹೋಗಿ ಏನು ತಿಂತೀರಿ ಎಂದು ಕೇಳಿದರೆ ಅವರು ಖುಷಿಯಿಂದ ಅದನ್ನು ವಿವರಿಸುತ್ತಾರಂತೆ. ‘ಧನಂಜಯ್ ನಾನ್​​ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ, ಲಿಂಗಾಯುತರು, ಬ್ರಾಹ್ಮಣರೆಲ್ಲ ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಾನು ಸಾಯೋವರೆಗೂ ಚಿರಋಣಿ’; ಧನ್ಯವಾದ ಹೇಳಿದ ಆ್ಯಂಕರ್ ಅನುಶ್ರೀ – Kannada News | Anchor Anushree’s 20 Year Career Milestone: Thanks Zee Kannada for Success

ಅನುಶ್ರೀ (Anushree) ಅವರು ಈಗ ಆ್ಯಂಕರ್ ಅನುಶ್ರೀ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ವೃತ್ತಿ ಜೀವನ. ಅವರು ಆ್ಯಂಕರಿಂಗ್ ಮಾಡಿ, ಆ್ಯಂಕರ್ ಅನುಶ್ರೀ ಎಂದೇ ಫೇಮಸ್ ಆಗಿದ್ದಾರೆ. ಈಗ ಅನುಶ್ರೀ ಅವರು ವೃತ್ತಿ ಜೀವನಕ್ಕೆ 20 ವರ್ಷಗಳು ತುಂಬಿವೆ. ಈ ವಿಶೇಷ ಕ್ಷಣವನ್ನು ಜೀ ಕನ್ನಡದವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-2025 ಮತ್ತು ‘ಕಿಲಾಡಿ ಜೂನಿಯರ್ಸ್’ಮಹಾಸಂಗಮ’ದಲ್ಲಿ ಆಚರಿಸಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಅನುಶ್ರೀ ಅವರು ಈ ಸಂದರ್ಭದಲ್ಲಿ ಭಾವುಕರಾದರು.

ಅನುಶ್ರೀ ಅವರು ಆ್ಯಂಕರಿಂಗ್ ಮೂಲಕ ಗಮನ ಸೆಳೆದವರು. ಅವರು ನಟಿಯಾಗಿಯೂ ಪ್ರುತ್ನಿಸಿದರು. ಆದರೆ, ಅಷ್ಟಾಗಿ ಯಶಸ್ಸು ಕಾಣಲೇ ಇಲ್ಲ. ಅವರಿಗೆ ಹೊಸ ಬದುಕು ನೀಡಿದ್ದು ಜೀ ಕನ್ನಡ ವಾಹಿನಿ ಎಂದರೂ ತಪ್ಪಾಗಲಾರದರು. ಯಾವುದೇ ರಿಯಾಲಿಟಿ ಶೋ ಬಂದರು ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಒಂದು ಶೋಗೆ ಅವರು ಆ್ಯಂಕರಿಂಗ್ ಮಾಡಿಯೇ ಮಾಡುತ್ತಾರೆ. ಈಗ ಅನುಶ್ರೀ ಅವರ ವೃತ್ತಿ ಜೀವನಕ್ಕೆ 20 ವರ್ಷ ಆಗಿದ್ದನ್ನು ಸಂಭ್ರಮಿಸಲಾಗಿದೆ.

‘ನೂರಾರು ಕನಸು ಇತ್ತು. ಎಲ್ಲವನ್ನೂ ಕಟ್ಟಿಟ್ಟು, ದುಡಿಮೆಯನ್ನೇ ಕನಸನ್ನಾಗಿ ಮಾಡಿಕೊಂಡ ಆ ಅನುಶ್ರೀಗೆ ಧನ್ಯವಾದಗಳು. ನನಗೆ ನಾನೇ ಧನ್ಯವಾದ ಹೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು. ಆ ಬಳಿಕ ಅಕುಲ್ ಬಾಲಾಜಿ, ಕುರಿ ಪ್ರತಾಪ್, ಅನುಪಮಾ ಗೌಡ ಸೇರಿದಂತೆ ಅನೇಕರು ಅನುಶ್ರೀಗೆ ಅಭಿನಂದನೆ ತಿಳಿಸಿದರು. ಅವರ ಕೆಲಸವನ್ನು ಶ್ಲಾಘಿಸಿದರು.

ಇದನ್ನೂ ಓದಿ: ಬಡತನ ಇದ್ದರೆ ಡಿಕೆಡಿಲಿ ಚಾನ್ಸ್ ಸಿಗುತ್ತೆ ಎಂದವರಿಗೆ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಅನುಶ್ರೀ

‘ನಾನು ಸಾಯೋವರೆಗೂ ಚಿರಋಣಿ ಆಗಿ ಇರುತ್ತೇನೆ’ ಎಂದು ಜೀ ಕನ್ನಡ ವಾಹಿನಿಗೆ ಅನುಶ್ರೀ ಧನ್ಯವಾದ ತಿಳಿಸಿದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಅನುಶ್ರೀ ಅವರ ಆ್ಯಂಕರ್​​ನ ಕರ್ನಾಟಕದ ಜನತೆ ಮೆಚ್ಚಿದೆ. ಆದರೆ, ಒಂದು ಒಳ್ಳೆಯ ವೇದಿಕೆ ನೀಡಿದ್ದು ಜೀ ಕನ್ನಡ ವಾಹಿನಿ. ಹೀಗಾಗಿ, ಜೀ ವಾಹಿನಿಗೆ ಅವರು ಚಿರಋಣಿ ಆಗಿರೋದಾಗಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು! – Kannada News | Bengaluru Rural: 4 Assam Workers Dead in Hoskote Warehouse

ಹೊಸಕೋಟೆಯಲ್ಲಿ ನಾಲ್ವರು ಕಾರ್ಮಿಕರ ಅನುಮಾನಾಸ್ಪದ ಸಾವು!

ಬೆಂಗಳೂರು ಗ್ರಾಮಾಂತರ, ಜನವರಿ 31: ಜಿಲ್ಲೆಯ (Bengaluru Rural) ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲ್ ಚಲ್ ಎಬ್ಬಿಸಿದೆ. ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರು ಲೇಬರ್ ಶೆಡ್‌ನಲ್ಲಿ ಮಲಗಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ

ಮೃತರನ್ನು ಜಯಂತ್ ಸಿಂಧೆ (25), ನೀರೇಂದ್ರನಾಥ್ (24), ಡಾಕ್ಟರ್ ಟೈಡ್ (25) ಹಾಗೂ ಧನಂಜಯ್ ಟೈಡ್ (20) ಎಂದು ಗುರುತಿಸಲಾಗಿದೆ. ನಾಲ್ವರೂ ರಾತ್ರಿ ಶೆಡ್‌ನ ಕಿಟಕಿ ಹಾಗೂ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಅಡುಗೆ ಮಾಡಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಅವರು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ

ಘಟನೆಯ ಮಾಹಿತಿ ತಿಳಿದ ತಕ್ಷಣ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಕುರಿತು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಜೆ ರಾಯ್​ಗೆ ಪ್ರಭಾವಿ ಶಾಸಕರ ಲಿಂಕ್, ಚಿತ್ರರಂಗದ ಗಣ್ಯರ ಜತೆ ನಂಟು: ಡೈರಿಯಲ್ಲಿ ಸಿಕ್ತು ಮಹತ್ವದ ಮಾಹಿತಿ! – Kannada News | CJ Roy Death Case: Secret Diary Reveals Links with Prominent MLAs, MPs, and Actresses

ಸಿಜೆ ರಾಯ್ ಸಾವು ಮತ್ತು ತನಿಖೆImage Credit source: tv9

ಬೆಂಗಳೂರು, ಜನವರಿ 31: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ (CJ Roy) ಅವರ ಆತ್ಮಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ರಾಯ್ ಅವರ ಡೈರಿ (ದಿನಚರಿ ಪುಸ್ತಕ) ಈಗ ಪೊಲೀಸರ ತನಿಖೆಯ ಪ್ರಮುಖ ಭಾಗವಾಗಿದೆ. ಡೈರಿಯಲ್ಲಿ ಅವರು ಪ್ರಭಾವಿ ಶಾಸಕರ, ಚಿತ್ರ ರಂಗದ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.

ಸಿಜೆ ರಾಯ್ ಡೈರಿಯಲ್ಲಿ ಏನಿದೆ?

ಸಿಜೆ ರಾಯ್ ಅವರಿಗೆ ಪ್ರತಿನಿತ್ಯ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರು ಮತ್ತು ಒಬ್ಬರು ಮಾಜಿ ಸಂಸದರ ಹೆಸರು ಉಲ್ಲೇಖವಾಗಿದೆ ಎಂಬುದು ತಿಳಿದುಬಂದಿದೆ. ವಿಶೇಷವಾಗಿ ಬೆಂಗಳೂರಿನ ಪ್ರಭಾವಿ ಶಾಸಕರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಜೊತೆಗಿನ ವ್ಯವಹಾರಿಕ ಸಂಬಂಧಗಳ ಬಗ್ಗೆ ಮಾಹಿತಿಯಿದೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ, ಡೈರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಮಾಡೆಲ್‌ಗಳ ಹೆಸರುಗಳೂ ಉಲ್ಲೇಖವಾಗಿವೆ. ದುಬೈನಲ್ಲಿ ಅವರು ನಡೆಸುತ್ತಿದ್ದ ವ್ಯವಹಾರಗಳು ಮತ್ತು ಅಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕದ ಬಗ್ಗೆಯೂ ರಾಯ್ ಬರೆದಿದ್ದಾರೆ ಎನ್ನಲಾಗಿದೆ.

ಖ್ಯಾತ ನಟಿ ಜತೆ ಇದ್ದ ರಾಯ್?

ಈ ಘಟನೆಗೆ ಸಂಬಂಧಿಸಿದಂತೆ ಬರಹಗಾರ ಚಂದ್ರಚೂಡ್ ಅವರು ವಿಡಿಯೋ ಬಿಡುಗಡೆ ಮಾಡಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಸಿಜೆ ರಾಯ್ ಅವರು ಶೂಟೌಟ್ ಮಾಡಿಕೊಳ್ಳುವಂತಹ ಪರಿಸ್ಥಿತಿ ಏನಿತ್ತು? ಅವರು ದೇಶ ಬಿಟ್ಟು ಹೋಗುವಂತಹ ಅನಿವಾರ್ಯತೆ ಎದುರಾಗಿತ್ತೇ? ದೊಡ್ಡಬಳ್ಳಾಪುರದ ರೆಸಾರ್ಟ್ ಒಂದರಲ್ಲಿ ನಡೆದ ವಿಚಾರಗಳು ಮತ್ತು ಒಬ್ಬರು ಖ್ಯಾತ ನಟಿಯ ಜೊತೆಗಿನ ಅವರ ಲಿಂಕ್ ಬಗ್ಗೆ ತನಿಖೆಯಾಗಬೇಕು. ಅವರ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ಅಕ್ರಮಗಳ ಬಗ್ಗೆಯೂ ಪೊಲೀಸ್ ತನಿಖೆ ನಡೆಯಲಿ’ ಚಕ್ರವರ್ತಿ ಚಂದ್ರಚೂಡ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಸದ್ಯ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನ ಅಶೋಕನಗರ ಪೊಲೀಸರು ಈಗಾಗಲೇ ತನಿಖೆ ಚುರುಕುಗೊಳಿಸಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ ಅವರು ಕಮಿಷನರ್​ರಿಂದ ಮಾಹಿತಿ ಪಡೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಜೆ ರಾಯ್ ಸಾವು ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ: ಸಿಐಡಿ ತನಿಖೆ ಸಾಧ್ಯತೆ – Kannada News | CJ Roy Death Case: Karnataka Government May order CID Probe as Confident Group Founder’s Family Returns to Bengaluru

ಬೆಂಗಳೂರು, ಜನವರಿ 31: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಬೆಂಗಳೂರಿನ ಅಶೋಕನಗರ ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಐಟಿ ದಾಳಿಗೆ ಹೆದರಿ ನಡೆಸಿದ ಕೃತ್ಯವೇ ಎಂಬ ಪ್ರಶ್ನೆ ಮೂಡಿದೆ.

ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿದ್ದಾರೆ. ಡಿಜಿ ಮತ್ತು ಐಜಿಪಿ ಸಲೀಂ ಅವರು ಕಮಿಷನರ್​ರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಯಿದೆ. ಸಾವಿರಾರು ಕೋಟಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ರಾಯ್ ಅವರ ಈ ಹಠಾತ್ ನಿಧನಕ್ಕೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

ವಿದೇಶದಲ್ಲಿದ್ದ ರಾಯ್ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿಗೆ ಆಗಮಿಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಮೃತದೇಹ ವೀಕ್ಷಿಸಿ ದುಃಖಿತರಾಗಿದ್ದಾರೆ. ರ್ಜಾಪುರದಲ್ಲಿರುವ ತೋಟದಲ್ಲಿ ಭಾನುವಾರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹನುಮಂತಗೆ ಲಕ್ಷಲಕ್ಷ ಹಣ, ಪುನೀತ್​​ಗೆ ಪ್ರಾಪರ್ಟಿ ನೀಡಿದ್ದ ಉದ್ಯಮಿ ರಾಯ್

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ (CJ Roy) ಅವರು ಬೆಂಗಳೂರಿನಲ್ಲಿ ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಗನ್​​ನ ಎದೆ ಭಾಗಕ್ಕೆ ಇಟ್ಟುಕೊಂಡು ಶೂಟ್ ಮಾಡಿಕೊಂಡಿದ್ದಾರೆ. ಪದೇ ಪದೇ ಐಟಿ ದಾಳಿ ಆಗುತ್ತಿದ್ದರಿಂದ ಅವರು ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಾ ಇದೆ. ಸದ್ಯ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಇವೆ. ಸಿಜೆ ರಾಯ್ ಅವರಿಗೆ ಚಿತ್ರರಂಗ ಹಾಗೂ ಕಿರುತೆರೆ ಜೊತೆ ಒಳ್ಳೆಯ ನಂಟಿತ್ತು. ಈ ಮೊದಲು ಸಿಜೆ ರಾಯ್ ಅವರು ಹನುಮಂತಗೆ ಲಕ್ಷ ಲಕ್ಷ ಹಣ ನೀಡಿದ್ದರು. ಪುನೀತ್ ವ್ಯಕ್ತಿತ್ವವನ್ನು ಬಹುವಾಗಿ ಇಷ್ಟಪಟ್ಟಿದ್ದರು.

ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಮೂಲಕ ಕನ್ನಡ ಹಾಗೂ ಮಲಯಾಳಂ ಸಿನಿಮಾ ನಿರ್ಮಾಣ ಮಾಡಿದ್ದರು. ಅವರು ಕಿರುತೆರೆ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ಅದರಲ್ಲೂ ಹನುಮಂತ ಮೇಲೆ ವಿಶೇಷ ಪ್ರೀತಿ ಇತ್ತು. ‘ಬಿಗ್ ಬಾಸ್ ಕನ್ನಡ’ ವಿನ್ನರ್​​ಗಳಿಗೆ ರಾಯ್ 50 ಲಕ್ಷ​ ಸ್ಪಾನ್ಸರ್ ಮಾಡುತ್ತಿದ್ದರು. ಬಿಗ್ ಬಾಸ್ ಗೆದ್ದ ಹನುಮಂತಗೆ ರಾಯ್ 50 ಲಕ್ಷ ರೂಪಾಯಿ ನೀಡಿದ್ದರು.

ಹನುಮಂತ ಹಾಗೂ ರಾಯ್ ಪರಿಚಯ ಮೊದಲೇ ಇತ್ತು. ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಸರಿಗಮಪ’ ಶೋನಲ್ಲಿ ಹನುಮಂತ ರನ್ನರ್ ಅಪ್ ಆದರು. ಈ ವೇಳೆ ಹನುಮಂತ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದರು ರಾಯ್. ಆಗಲೂ ಅವರು ಹಣದ ಸಹಾಯ ಮಾಡಿದ್ದರು.

ಇದನ್ನೂ ಓದಿ: ಸಿನಿಮಾ, ಟಿವಿ ಕ್ಷೇತ್ರದೊಟ್ಟಿಗೆ ಜೆಸಿ ರಾಯ್​ ಅವರಿಗಿದ್ದ ಬಂಧ ಎಂಥದ್ದು?

ಪುನೀತ್ ಅವರ ಭೇಟಿ ಬಗ್ಗೆಯೂ ರಾಯ್ ಮಾತನಾಡಿದ್ದರು. ‘ಕೋರಮಂಗಲದಲ್ಲಿ ನಾನು ಮಗಳಿಗಾಗಿ ಒಂದು ಪ್ರಾಪರ್ಟಿ ಖರೀದಿ ಮಾಡಿದ್ದೆ. ನಾನು ಅದನ್ನು ಮಾರೋಕೆ ರೆಡಿ ಇದೀನಿ ಅಂತ ಬ್ರೋಕರ್ ಪುನೀತ್​ ಬಳಿ ಹೇಳಿದ್ದರು. ಅವರು ನೇರವಾಗಿ ನನ್ನ ಮನೆಗೆ ಬಂದರು. ಅವರ ವಿನಯತೆ ನೋಡಿ ಮಾರಬೇಕು ಎನಿಸಿತು. ನನಗೆ ಅದನ್ನು ಕೊಡಬೇಕು ಎಂದಿರಲಿಲ್ಲ’ ಎಂದು ‘ಆಲ್​​ರೌಂಡರ್ಸ್’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು. ‘ಕೆಲವರ ವ್ಯಕ್ತಿತ್ವ ನೋಡಿ ತುಂಬಾನೇ ಇಷ್ಟ ಆಗಿ ಬಿಡುತ್ತದೆ’ ಎಂದು ರಾಯ್ ಅವರು ಹೇಳಿದ್ದರು. ಈ ರೀತಿ ಇಷ್ಟ ಪಟ್ಟವರಲ್ಲಿ ಪುನೀತ್ ಕೂಡ ಒಬ್ಬರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಯಾವ ಲಗ್ನಕ್ಕೆ ಯಾವ ಅದೃಷ್ಟ ದೇವತೆ ಗೊತ್ತಾ? – Kannada News | Daily Devotional: Unlock Your Fortune, Discover Your Lucky Deity by Lagna

ಬೆಂಗಳೂರು, ಜನವರಿ 31: ಪ್ರತಿಯೊಬ್ಬರ ಜೀವನದಲ್ಲೂ ಅದೃಷ್ಟ ಮತ್ತು ಶುಭ ಫಲಗಳನ್ನು ಬಯಸುವುದು ಸಾಮಾನ್ಯ. ಜ್ಯೋತಿಷ್ಯದ ಪ್ರಕಾರ, ನಮ್ಮ ಜನ್ಮ ಲಗ್ನಕ್ಕೆ ಅನುಗುಣವಾಗಿ ನಮ್ಮ ಅದೃಷ್ಟ ದೇವತೆಯನ್ನು ಕಂಡುಕೊಳ್ಳಬಹುದು. ಲಗ್ನದಿಂದ ಐದನೇ ಸ್ಥಾನದ ಅಧಿಪತಿಯನ್ನು ಪಂಚಮಾಧಿಪತಿ ಎಂದು ಕರೆಯಲಾಗುತ್ತದೆ ಮತ್ತು ಈ ಪಂಚಮಾಧಿಪತಿಯೇ ನಿಮ್ಮ ಅದೃಷ್ಟ ದೇವತೆ ಆಗಿರುತ್ತಾನೆ. ಈ ದೇವತೆಯನ್ನು ಆರಾಧಿಸುವುದರಿಂದ ಜೀವನದಲ್ಲಿ ಅದೃಷ್ಟ ಮತ್ತು ಸಂತೋಷ ಕೂಡಿಬರುತ್ತದೆ.

ಉದಾಹರಣೆಗೆ, ಮೇಷ ಲಗ್ನದಲ್ಲಿ ಜನಿಸಿದವರಿಗೆ ಪಂಚಮ ಸ್ಥಾನವು ಸಿಂಹ ರಾಶಿಯಾಗಿರುತ್ತದೆ. ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ. ಆದ್ದರಿಂದ, ಮೇಷ ಲಗ್ನದವರು ನಿತ್ಯ ಸೂರ್ಯ ದೇವನನ್ನು ಆರಾಧಿಸುವುದರಿಂದ ಶುಭವಾಗುತ್ತದೆ. ಅದೇ ರೀತಿ, ವೃಷಭ ಲಗ್ನದವರಿಗೆ ಪಂಚಮ ಸ್ಥಾನವು ಕನ್ಯಾ ರಾಶಿಯಾಗಿದ್ದು, ಕನ್ಯಾ ರಾಶಿಯ ಅಧಿಪತಿ ಬುಧ. ಹೀಗಾಗಿ, ವೃಷಭ ಲಗ್ನದವರು ವಿಷ್ಣುವನ್ನು ಆರಾಧಿಸುವುದರಿಂದ ಅದೃಷ್ಟ ಒಲಿಯುತ್ತದೆ. ನಿಮ್ಮ ಲಗ್ನಕ್ಕೆ ಸಂಬಂಧಿಸಿದ ಅದೃಷ್ಟ ದೇವತೆಯನ್ನು ಅರಿತು ಆರಾಧಿಸುವುದು ಶುಭ ಫಲಗಳಿಗೆ ದಾರಿಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.

Source link

Horoscope Today 31 January: ಇಂದು ಈ ರಾಶಿಯ ಮಹಿಳೆಯರಿಗೆ ಆಭರಣದ ಯೋಗ!

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 31 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಶನಿವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ ತ್ರಯೋದಶಿ ಪುನರ್ವಸು ನಕ್ಷತ್ರದಲ್ಲಿ ಚಂದ್ರನ ಸಂಚಾರದ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ.

ಈ ದಿನ ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲದಿಂದ ಸಂಪತ್ತು ವೃದ್ಧಿ, ವ್ಯಾಪಾರದಲ್ಲಿ ಪ್ರಗತಿ ನಿರೀಕ್ಷಿಸಲಾಗಿದೆ. ವೃಷಭ ರಾಶಿಯವರಿಗೆ ಖರ್ಚು ಹೆಚ್ಚಾದರೂ ಸಂಕಲ್ಪಗಳು ಈಡೇರುತ್ತವೆ. ಮಿಥುನ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ರಾಜಕೀಯ ಪ್ರಗತಿ ಇರುತ್ತದೆ. ಕಟಕ ರಾಶಿಯವರಿಗೆ ಆಕಸ್ಮಿಕ ಕಾರ್ಯಸಿದ್ಧಿ ಮತ್ತು ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಪ್ರತಿಯೊಂದು ರಾಶಿಗಳಿಗೂ ಸೂಕ್ತವಾದ ಅದೃಷ್ಟ ಬಣ್ಣ, ಸಂಖ್ಯೆ ಮತ್ತು ಪಠಿಸಬೇಕಾದ ಮಂತ್ರಗಳನ್ನು ಗುರೂಜಿ ತಿಳಿಸಿದ್ದಾರೆ.

 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 31ರ ದಿನಭವಿಷ್ಯ – Kannada News | January 31 Numerology Prediction: Birth Numbers 7,8,9– What Awaits You Today?

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 31ರ ದಿನಭವಿಷ್ಯ

ಮನ್ಯುಸೂಕ್ತದ ಶ್ರವಣ ಮಾಡುವುದರಿಂದ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ದೊರೆಯಲಿದೆ. ಒಂದು ಕೆಲಸವನ್ನು ಪೂರ್ಣ ಮಾಡುವುದಕ್ಕೆ ನಾಲ್ಕೈದು ಬಾರಿ ಪ್ರಯತ್ನ ಮಾಡಬೇಕು ಎಂಬ ಪರಿಸ್ಥಿತಿ ಉದ್ಭವ ಆಗುವುದಿಲ್ಲ. ಇನ್ನು ಸರ್ಕಾರದಿಂದ ಬರಬೇಕಾದ ಹಣ ಏನಾದರೂ ಬಾಕಿ ಇದ್ದಲ್ಲಿ ಅದು ಕೈ ಸೇರುವ ಸಾಧ್ಯತೆ ಇದೆ. ಯಾವುದಾದರೂ ಮುಖ್ಯ ಕೆಲಸದ ಸಲುವಾಗಿ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಕಾರ್ತಿವೀರ್ಯಾರ್ಜುನನ ಸ್ಮರಣೆಯನ್ನು ಸಹ ಮಾಡಿಕೊಂಡು ಮುಂದುವರಿಯಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ನೀಡಿದ ಸಲಹೆ- ಸೂಚನೆಗಳಿಂದ ಉದ್ಯೋಗ ಸ್ಥಳದಲ್ಲಿ ಬಹಳ ಅನುಕೂಲಗಳು ಆಗಲಿವೆ. ಇದರಿಂದ ಮೇಲಧಿಕಾರಿಗಳು ಬಹಳ ಸಂತುಷ್ಟರಾಗಿ, ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಉತ್ತಮ ಸ್ಥಾನ- ಮಾನ, ವೇತನ ಹೆಚ್ಚಳ ಆಗುವ ಬಗ್ಗೆ ಸೂಚನೆಗಳು ದೊರೆಯಲಿವೆ. ಈ ಹಿಂದೆ ನೀವು ಶ್ರಮ ವಹಿಸಿ ಮಾಡಿದ್ದ ಕೆಲಸಕ್ಕೆ ಆಗ ಪ್ರತಿಫಲ ಸಿಕ್ಕಿಲ್ಲ ಎಂಬ ಬೇಸರ ಇದ್ದಲ್ಲಿ ಅದು ಕರಗಿ ಹೋಗುವಂಥ ಆಫರ್ ನಿಮ್ಮನ್ನು ಹುಡುಕಿಕೊಂಡು ಬರಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾರಿಗೋ ಸಂತೋಷ ಆಗುತ್ತದೆ ಅಂತಲೋ ಅಥವಾ ಮನವೊಲಿಸಬೇಕು ಎಂಬ ಕಾರಣಕ್ಕೋ ನೀವೇನಾದರೂ ಸುಳ್ಳನ್ನು ಹೇಳಿದಲ್ಲಿ ಆ ನಂತರ ಬಹಳ ಪರಿತಪಿಸುವಂತೆ ಆಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ರೆಫರೆನ್ಸ್ ಬರುವ ಯೋಗವಿದೆ. ದಿಢೀರನೇ ಪ್ರಯಾಣಗಳು ನಿಗದಿ ಆದಲ್ಲಿ ನೀವು ಯಾವ ಉದ್ದೇಶಕ್ಕೆ ತೆರಳುತ್ತಿದ್ದೀರಿ ಅದು ಪೂರ್ತಿ ಆಗುತ್ತದೆಯೇ ಎಂಬ ಬಗ್ಗೆ ಒಮ್ಮೆ ಅವಲೋಕನ ಮಾಡಿಕೊಂಡು, ಆ ನಂತರವೇ ಹೊರಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕ್ಯಾಟರಿಂಗ್ ಅಥವಾ ಅಡುಗೆ ಕಾಂಟ್ರಾಕ್ಟ್ ಅನ್ನು ವೃತ್ತಿಯಾಗಿ ತೆಗೆದುಕೊಂಡು ಇರುವಂಥವರು ಪಾತ್ರೆ- ಅಡುಗೆ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತವನ್ನು ಮೀಸಲಿಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಇದಕ್ಕಾಗಿ ಸಾಲ ಮಾಡುವ ಸಾಧ್ಯತೆಗಳು ಸಹ ಇವೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವಂಥವರು ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಯದಕ್ಕೆ ವರ್ಗಾವಣೆ ಆಗುವ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ! – Kannada News | CJ Roy Death Case: Top Suspicions and Unanswered Questions Surrounding Confident Group Founder’s Demise

ಬೆಂಗಳೂರು, ಜನವರಿ 31: ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ಒಡೆಯ ಸಿಜೆ ರಾಯ್‌ (CJ Roy) ಐಟಿ ದಾಳಿ (IT Raid) ನಡೆದ ಹೊತ್ತಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಐಟಿ ದಾಳಿಯಿಂದ ಹುಟ್ಟಿಕೊಂಡ ಭಯ ಆತ್ಮಹತ್ಯೆಗೆ ಕಾರಣ ಎಂದು ಅನುಮಾನಪಡಲಾಗಿದೆ. ಆದರೆ, ಈ ಸಾವಿನ ಹಿಂದೆ ಬೇರೆ ಕಾರಣವೂ ಇರಬಹುದು ಎನ್ನಲಾಗುತ್ತಿದೆ. ಶೂನ್ಯ ಸಾಲದ ಬ್ಯುಸಿನೆಸ್‌ ಮಾಡೆಲ್‌ನಿಂದ ಪ್ರಖ್ಯಾತಿ ಗಳಿಸಿದ್ದ ರಾಯ್‌ ಸಾವಿನ ಹಿಂದೆ ಅನುಮಾನದ ಹುತ್ತವೇ ಬೆಳೆದು ನಿಂತಿದೆ.

ಅನುಮಾನ ನಂ.1: ಐಟಿ ಟಾರ್ಚರ್‌ಗೆ ಆತ್ಮಹತ್ಯೆ?

ಸತತ ಮೂರು ತಿಂಗಳಿಂದಲೂ ಕಾನ್ಫಿಡೆಂಟ್‌ ಗ್ರೂಪ್‌ ಮೇಲೆ ಐಟಿ ಅಧಿಕಾರಿಗಳು ರೇಡ್‌ ನಡೆಸಿದ್ದಾರೆಂಬ ಮಾಹಿತಿ ಇದೆ. ಕಳೆದ ಡಿಸೆಂಬರ್‌ನಲ್ಲೂ ಕೇರಳದ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ರೇಡ್‌ ಮಾಡಿದ್ದರು ಎನ್ನಲಾಗಿದೆ. ಈಗ ಅದೇ ಡಿಸೆಂಬರ್‌ ರೇಡ್‌ನ ಮುಂದುವರಿದ ದಾಳಿ ಶುಕ್ರವಾರ ನಡೆದಿತ್ತು. ಬುಧವಾರ ಕೇರಳದ ಕೊಚ್ಚಿಯಿಂದ ಐಟಿ ಅಧಿಕಾರಿಗಳ ತಂಡ ಆಗಮಿಸಿತ್ತು. ಬುಧವಾರದಿಂದ ಪರಿಶೀಲನೆ ಬಳಿಕ ಕೆಲ ಸ್ಪಷ್ಟನೆ ಕೇಳಲು ಶುಕ್ರವಾರ ಮತ್ತೆ ಐಟಿ ತಂಡ, ಮಧ್ಯಾಹ್ನ 3ಗಂಟೆ ಸುಮಾರಿಗೆ ರಾಯ್‌ ಅಪಾರ್ಟ್‌ಮೆಂಟ್‌ ಕಚೇರಿಗೆ ಬಂದಿತ್ತು.

ಹೀಗಾಗಿ, ಐಟಿ ಅಧಿಕಾರಿಗಳ ಟಾರ್ಚರ್‌ ಸಹೋದರನ ಸಾವಿಗೆ ಕಾರಣ. ಐಟಿ ಅಧಿಕಾರಿ ಅಡಿಷನಲ್‌ ಕಮಿಷನರ್‌ ಕೃಷ್ಣಪ್ರಸಾದ್‌ ಎಂಬುವವರೇ ಸಾವಿಗೆ ಕಾರಣ ಎಂದು ರಾಯ್‌ ಸಹೋದರ ಬಾಬು ಸಿ ಜೋಸೆಫ್‌ ಆರೋಪ ಮಾಡಿದ್ದಾರೆ.

ರಾಯ್‌ ಸಹೋದರ ಹೇಳಿದಂತೆ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ 2 ಕಾರುಗಳಲ್ಲಿ 10 ಮಂದಿ ಕೊಚ್ಚಿಯ ಐಟಿ ಅಧಿಕಾರಿಗಳ ತಂಡ ಆನೆಪಾಳ್ಯದ ಅಪಾರ್ಟ್‌ಮೆಂಟ್‌ ಕಚೇರಿಗೆ ಬಂದಿತ್ತು. ಆದರೆ, ಆ ವೇಳೆ ಪ್ರತ್ಯೇಕವಾಗಿ ಕೊಠಡಿಗೆ ರಾಯ್‌ ಹೋಗಿದ್ದೇಕೆ ಎಂಬುದೇ ಈಗ ಅನುಮಾನಕ್ಕೆ ಕಾರಣವಾಗಿದೆ.

ಅನುಮಾನ ನಂ.2: ಪ್ರತ್ಯೇಕವಾಗಿ ಕೊಠಡಿಗೆ ರಾಯ್‌ ಹೋಗಿದ್ದೇಕೆ?

ಐಟಿ ದಾಳಿ ವೇಳೆ ಸಾಮಾನ್ಯವಾಗಿ ಆರೋಪಿ ಮುಂದೆಯೇ ಪರಿಶೀಲನೆ ನಡೆಯುತ್ತದೆ. ಆದರೆ, ಐಟಿ ರೇಡ್‌ ರೇಡ್‌ ವೇಳೆಯೇ ರಾಯ್‌ ಪ್ರತ್ಯೇಕವಾಗಿ ಕೊಠಡಿಗೆ ಹೋಗಿದ್ದೇಕೆ? ಯಾವ ದಾಖಲೆ ತರಲು ಹೋದರು? ಹೋದರೂ 15 ನಿಮಿಷಗಳ ಕಾಲ ಅವರನ್ನು ಒಳಗೆ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಅನುಮಾನ ನಂ.3: 15 ನಿಮಿಷ ಫೋನ್‌ ಕಾಲ್‌ ಮಾಡಿದ್ರಾ?

ಐಟಿ ಅಧಿಕಾರಿಗಳ ನೋಟಿಸ್‌ಗೆ ಸಹಿ ಮಾಡಿ ಸಿಜೆ ರಾಯ್‌ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಇದಾದ 15 ನಿಮಿಷಗಳ ಬಳಿಕ ಕೊಠಡಿಯಿಂದ ಗುಂಡಿನ ಸದ್ದು ಕೇಳಿಸಿತ್ತು. ಈ 15 ನಿಮಿಷಗಳ ಅವಧಿಯಲ್ಲಿ ರಾಯ್‌ ಯಾರಿಗೋ ಫೋನ್‌ ಕಾಲ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಫೋನ್ ಕಾಲ್‌ ಮಾಡಿದ್ಯಾರಿಗೆ? ಆ ಸಮಯದಲ್ಲಿ ಫೋನ್ ಮಾಡಿದ್ದೇಕೆ ಎಂಬ ಅನುಮಾನ ಈಗ ದಟ್ಟವಾಗಿದೆ.

ಅನುಮಾನ ನಂ.4: ಎರಡು ತಿಂಗಳಿಂದ ಎಲ್ಲಾ ಸಿಸಿಟಿವಿ ಆಫ್‌!

ಕಾನ್ಫಿಡೆಂಟ್‌ ಗ್ರೂಪ್‌ ದೊಡ್ಡ ಕಂಪನಿ. ಅದರಲ್ಲೂ ನಿತ್ಯವೂ ನೂರಾರು ಜನರು ಬಂದು ಹೋಗುವ ಅಪಾರ್ಟ್‌ಮೆಂಟ್‌ ಕಚೇರಿ. ಸಣ್ಣ ಅಂಗಡಿಗಳಿಗೂ ಸಿಸಿ ಕ್ಯಾಮರಾ ಆ್ಯಕ್ಟಿವ್‌ ಇಟ್ಟುಕೊಳ್ಳುತ್ತಾರೆ. ಆದರೆ, ಇಷ್ಟು ದೊಡ್ಡ ಕಚೇರಿಯ ಸಿಸಿಟಿವಿಗಳು ಎರಡು ತಿಂಗಳಿಂದ ಆಫ್‌ ಆಗಿವೆ ಎನ್ನಲಾಗುತ್ತಿದೆ. ಇದಕ್ಕೆ ತಾಂತ್ರಿಕ ಕಾರಣ ಇದೆಯಾ? ಅಥವಾ ಬೇರೆಯದ್ದೇ ಕಾರಣವೇ? ಉದ್ದೇಶಪೂರ್ವಕವಾಗಿ ಆಫ್‌ ಮಾಡಲಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.

ಅನುಮಾನ ನಂ.5: ಪೆನಾಲ್ಟಿ ಕಟ್ಟಲು ಕಷ್ಟವಾಗಿತ್ತಾ?

ಸಿಜೆ ರಾಯ್ ಐಟಿ ದಾಳಿಗೆ ಹೆದರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನವೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ದುಬೈ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಹೊಂದಿರುವ ಸಿಜೆ ರಾಯ್‌ ಸಾವಿರಾರು ಕೋಟಿ ರೂ.ಗಳ ಒಡೆಯ. ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ರಾಯ್‌ಗೆ ಒಂದು ವೇಳೆ ಐಟಿ ದಾಳಿಯಲ್ಲಿ ಲೋಪ ಕಂಡುಬಂದಿದ್ದರೂ ಪೆನಾಲ್ಟಿ ಕಟ್ಟುವುದು ಕಷ್ಟವಾಗಿರಲಿಲ್ಲ. ಕಾನೂನು ಹೋರಾಟದ ಆಪ್ಷನ್‌ ಕೂಡ ಇತ್ತು. ದೊಡ್ಡ ಕಂಪನಿಗಳ ಚಾರ್ಟರ್ಡ್‌ ಅಕೌಂಟೆಂಟ್‌ಗಳೇ ನಿಭಾಯಿಸಬಹುದಾದ, ವಕೀಲರು ನೋಡಿಕೊಳ್ಳಬಹುದಾದ ಕೇಸ್‌ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ..

ಅನುಮಾನ ನಂ.6: ಸಹೋದರನ ಜತೆ ಸಹಜವಾಗಿ ಮಾತು!

ಐಟಿ ಅಧಿಕಾರಿಗಳು ಟಾರ್ಚರ್‌ ಕೊಡುತ್ತಿದ್ದರು ಎಂದು ರಾಯ್ ಸಹೋದರ ಹೇಳಿದ್ದಾರೆ. ಆದರೆ, ಶುಕ್ರವಾರ ರೇಡ್‌ಗೆ ಮುನ್ನ ಬೆಳಗ್ಗೆ 11ಗಂಟೆಗೆ ಸಹೋದರ ಬಾಬುಗೆ ರಾಯ್‌ ಕರೆ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿ, ‘ಯಾವಾಗ ಬರುತ್ತೀ’ ಎಂದು ಸಹಜವಾಗಿಯೇ ಮಾತಾಡಿದ್ದಾರೆ. ಐಟಿ ಅಧಿಕಾರಿಗಳು ಬರಬಹುದು ಎಂದು ಯಾವುದೇ ಒತ್ತಡ ಇಲ್ಲದೆ ಮಾತಾನಾಡಿದ್ದರು. ಈ ವಿಚಾರವನ್ನು ಖುದ್ದು ಬಾಬು ಜೋಸೆಫ್‌ ‘ಟಿವಿ9’ಗೆ ಹೇಳಿದ್ದಾರೆ.

ಇದನ್ನೂ ಓದಿ: ಯಾರು ಈ CJ ರಾಯ್? ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?

ಇದಷ್ಟೇ ಅಲ್ಲ, ಜನವರಿ 26ರಂದು ಗಣರಾಜ್ಯೋತ್ಸವಕ್ಕೂ ಖುಷಿಯಿಂದಲೇ ರಾಯ್‌ ಪೋಸ್ಟ್‌ ಮಾಡಿಕೊಂಡು, ಶುಭ ಹಾರೈಸಿದ್ದಾರೆ. ಇವೆಲ್ಲವನ್ನು ನೋಡಿದರೆ 15 ನಿಮಿಷದಲ್ಲಿ ರಾಯ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಬಂದಿದ್ದೇಕೆ? ಸಾಮ್ರಾಜ್ಯ ಕಟ್ಟಿ ಬೆಳೆಸಿದ ರಾಯ್‌ ಅಷ್ಟರ ಮಟ್ಟಿಗೆ ಕುಸಿಯಲು ಕಾರಣವೇನು ಎಂಬುದೇ ಈಗ ನಿಗೂಢವಾಗಿದೆ. ಇದಕ್ಕೆ ಉತ್ತರಿಸಬೇಕಾದ ರಾಯ್‌ ಬದುಕಿಲ್ಲ. ತನಿಖೆಯಲ್ಲಷ್ಟೇ ನಿಜ ಸಂಗತಿ ಬಯಲಾಗಬೇಕಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version