ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ? – Kannada News | Rajinikanth writing his auto biography confirms his daughter

ರಜನೀಕಾಂತ್ (Rajinikantha) ಭಾರತದ ನಂಬರ್ 1 ಸೂಪರ್ ಸ್ಟಾರ್. ಹಲವು ದಶಕಗಳಿಂದಲೂ ರಜನೀಕಾಂತ್ ಅವರು ಸೂಪರ್ ಸ್ಟಾರ್ ಸ್ಥಾನದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ರಜನೀಕಾಂತ್ ಸಿನಿಮಾ ನಟನಾಗಿ ಅದ್ಭುತ ಕತೆಗಳ ಮೂಲಕ ಹಲವರಿಗೆ ಸ್ಪೂರ್ತಿ ತುಂಬಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನವೂ ಸಹ ಯಾವುದೇ ಸಿನಿಮಾ ಕತೆಗಿಂತಲೂ ಕಡಿಮೆ ಆಗಿದ್ದಲ್ಲ. ಬೆಂಗಳೂರಿನ ಸಣ್ಣ ಏರಿಯಾದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿ ರಜನೀ ಏರಿದ ಎತ್ತರ ಅಸಾಧಾರಣವಾದುದು. ಅಷ್ಟು ಎತ್ತರಕ್ಕೆ ಏರಿದ ಬಳಿಕವೂ ರಜನೀ ಕಾಯ್ದುಕೊಂಡ ಸರಳತೆ, ವಿನಮ್ರತೆ ಕೋಟ್ಯಂತರ ಜನರಿಗೆ ಸ್ಪೂರ್ತಿ. ಈ ಸ್ಪೂರ್ತಿದಾಯಕ ಕತೆ ಇದೀಗ ಪುಸ್ತಕ ರೂಪದಲ್ಲಿ ಬರೆಯಲಿದೆ.

ರಜನೀಕಾಂತ್ ಅವರು ತಮ್ಮ ಜೀವನದ ಘಟನೆಗಳನ್ನು ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ಅವರ ಸಿನಿಮಾದ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಜೀವನದ ವಿಷಯಗಳನ್ನು ಬಲು ರಸವತ್ತಾಗಿ ಹಂಚಿಕೊಳ್ಳುತ್ತಾರೆ. ಅದನ್ನು ಕೇಳುವುದೇ ಅಭಿಮಾನಿಗಳಿಗೆ ಖುಷಿ. ಇದೀಗ ರಜನೀಕಾಂತ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಪುಸ್ತಕವಾಗಿ ಹೊರ ತರುತ್ತಿದ್ದಾರೆ. ರಜನೀಕಾಂತ್ ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ.

ಈ ಕುರಿತು ಅವರ ಪುತ್ರಿ ಸೌಂದರ್ಯ ರಜನೀಕಾಂತ್ ಮಾತನಾಡಿದ್ದು, ‘ತಂದೆ ರಜನೀಕಾಂತ್ ತಮ್ಮ ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಬರವಣಿಗೆ ಪ್ರಸ್ತುತ ಚಾಲ್ತಿಯಲ್ಲಿದೆ. ಅದು ಬಿಡುಗಡೆ ಆದಾಗ ಅದೊಂದು ವಿಶ್ವದಲ್ಲೇ ಒಂದು ವಿದ್ಯಮಾನವಾಗಿ ಗುರುತಿಸಿಕೊಳ್ಳಲಿದೆ’ ಎಂದಿದ್ದಾರೆ. ತಾವೂ ಸಹ ತಂದೆಯವರ ಆತ್ಮಚರಿತ್ರೆ ಓದಲು ಕಾತರರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:37 ವರ್ಷದ ಹಿಂದೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆ ಆಗುತ್ತಿದೆ ರಜನೀಕಾಂತ್ ಸಿನಿಮಾ

ರಜನೀಕಾಂತ್ ಅವರ ಜೀವನ ಅಸಾಧಾರಣವಾದುದು. ಬೆಂಗಳೂರಿನ ಸಣ್ಣ ಕುಟುಂಬದಲ್ಲಿ ಜನಿಸಿ ಸಾಕಷ್ಟು, ನೋವು, ಅವಮಾನಗಳನ್ನು ಅನುಭವಿಸಿ ನಟನಾಗಿ, ಆ ನಂತರವೂ ಹಲವು ಅವಮಾನಗಳನ್ನು ಎದುರಿಸಿ ಸ್ಟಾರ್ ಆಗಿ ಬೆಳೆದ ಬಗೆ ಅಸಾಧಾರಣವಾದುದು. ರಜನೀಕಾಂತ್ ಅವರ ಅತ್ಮಚರಿತ್ರೆ ಕೋಟ್ಯಂತರ ಜನರಿಗೆ ಸ್ಪೂರ್ತಿಯನ್ನಂತೂ ನೀಡುವುದು ಖಾತ್ರಿ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ. ಅದಾದ ಬಳಿಕ ಪುತ್ರಿ ಸೌಂದರ್ಯ ನಿರ್ದೇಶನದ ಮತ್ತೊಂದು ಸಿನಿಮಾನಲ್ಲಿ ನಟಿಸುವ ಸಾಧ್ಯತೆ ಇದೆ. ‘ಕೂಲಿ 2’ ಸಹ ಬರಲಿದೆ ಎನ್ನಲಾಗುತ್ತಿದೆ ಆದರೆ ಖಾತ್ರಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಂದಲ್ಲಾರೀ, ಅಕ್ಷಯ್ ಕುಮಾರ್ ತಪ್ಪು; ‘ಹೇರಾ ಫೇರಿ 3’ ವಿಳಂಬಕ್ಕೆ ಕಾರಣ ಕೊಟ್ಟ ಪರೇಶ್ – Kannada News | Hera Pheri 3 Delays: Paresh Rawal Clarifies, Addresses Akshay Kumar Rumors

‘ಹೇರಾ ಫೇರಿ 3’ ಚಿತ್ರ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ನಟಿಸುತ್ತಿದ್ದಾರೆ. ಆದರೆ, ಮಧ್ಯದಲ್ಲಿ ಪರೇಶ್ ಅವರು ಸಿನಿಮಾದಿಂದ ಹೊರ ನಡೆದಿದ್ದರು. ಈಗ ಅವರು ಚಿತ್ರಕ್ಕೆ ಮರಳಿದ್ದಾರೆ. ಆದಾಗ್ಯೂ ಸಿನಿಮಾ ಸೆಟ್ಟೇರುತ್ತಿಲ್ಲ. ಇದಕ್ಕೆ ಪರೇಶ್ (Paresh Rawal) ಅವರೇ ಕಾರಣ ಎನ್ನಲಾಗಿತ್ತು. ಇದಕ್ಕೆ ಪರೇಶ್ ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ಎಳೆದು ತರಬೇಡಿ ಎಂದು ಅವರು ಹೇಳಿದ್ದಾರೆ.

‘ಹೇರಾ ಫೇರಿ 3’ ಸೆಟ್ಟೇರೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಉತ್ತರಿಸಿದ ಅವರು,‘ಖಂಡಿತವಾಗಿಯೂ ಹೇರಾ ಫೇರಿ 3 ಸಿನಿಮಾ ಸಿದ್ಧವಾಗುತ್ತದೆ. ಆ ಸಿನಿಮಾ ವಿಳಂಬ ಆಗುವುದಕ್ಕೆ ನಾನು ಕಾರಣ ಅಲ್ಲ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಸ್ಪಷ್ಟನೆ ಕೊಟ್ಟೊದ್ದಾರೆ.

‘ಅಕ್ಷಯ್ ಕುಮಾರ್ ಹಾಗೂ ಸಿನಿಮಾ ತಂಡದ ಮಧ್ಯೆ ಸಮಸ್ಯೆ ಆಗಿದೆ. ಸಿನಿಮಾಗೆ ಯಾವುದೇ ಕಾನೂನು ತೊಡಕು ಇಲ್ಲ. ಅಕ್ಷಯ್ ಕುಮಾರ್ ನನ್ನ ಮೇಲೆ 25 ಕೋಟಿ ರೂಪಾಯಿ ಕೇಸ್ ಹಾಕಿದ್ದರು ಎಂಬುದನ್ನು ಹೆಚ್ಚು ಉತ್ಪ್ರೇಕ್ಷಿಸಲಾಯಿತು’ ಎಂದು ಪರೇಶ್ ರಾವಲ್ ಹೇಳಿದ್ದಾರೆ.

‘ಒಂದೊಮ್ಮೆ ಬಾಬುರಾವ್ ಪಾತ್ರ ಇಲ್ಲದೆ ಅವರು ಸಿನಿಮಾ ಮಾಡಲು ಮುಂದಾದರು ಎಂದಿಟ್ಟುಕೊಳ್ಳಿ, ಖಂಡಿತವಾಗಿಯೂ ಅದು ದುರಂತ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಪರೇಶ್ ರಾವಲ್ ಅವರ ಮಾತು ಮಾತ್ರವಲ್ಲ. ಬಹುತೇಕರು ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್

‘ರಾಮ್ಜಿ ರಾವ್ ಸ್ಪೀಕಿಂಗ್’ ಹೆಸರಿನ 1989ರ ಮಲಯಾಳಂ ಚಿತ್ರವನ್ನು ‘ಹೇರಾ ಫೇರಿ’ ಆಧರಿಸಿದೆ. ‘ಹೇರಾ ಫೇರಿ’, ‘ಫಿರ್ ಹೇರಾ ಫೇರಿ’ ಸಿನಿಮಾಗಳು ರಿಲೀಸ್ ಆಗಿ ಗಮನ ಸೆಳೆದವು. ‘ಹೇರಾ ಫೇರಿ 3’ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ – Kannada News | Optical illusion: Can you find the loyal animal dog hidden in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಸಮಯ ಕಳೆಯಲು ಇಂತಹ ಒಗಟುಗಳನ್ನು ಬಿಡಿಸುವುದು ಒಳ್ಳೆಯದು. ಹೆಚ್ಚಿನವರು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಎಲ್ಲರಿಗೂ ಉತ್ತರ ಕಂಡು ಕೊಳ್ಳುವುದು ಕಷ್ಟವಾಗಬಹುದು. ಈ ಒಗಟಿನ ಚಿತ್ರದಲ್ಲಿ ಶ್ವಾನವೊಂದು (dog) ಅಡಗಿ ಕುಳಿತಿದೆ. ಈ ನಿಷ್ಠಾವಂತ ಪ್ರಾಣಿಯನ್ನು ನೀವು ಐದು ಸೆಕೆಂಡುಗಳಲ್ಲಿ ಪತ್ತೆ ಹಚ್ಚುವ ಸವಾಲು ಇದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ಈ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಉದ್ಯಾನವನದ ಸುಂದರ ನೋಟ. ಇಲ್ಲಿ ಸಾಲಾಗಿ ಮರಗಳಿದ್ದು, ನೆಲೆದ ಮೇಲೆ ಒಣಗಿದ ಎಲೆಗಳ ರಾಶಿಯಿದೆ. ಆದರೆ ಈ ಸ್ಥಳದಲ್ಲಿ ಶ್ವಾನವೊಂದು ಅಡಗಿ ಕುಳಿತಿದ್ದು ಈ ಪ್ರಾಣಿಯನ್ನು ಹುಡುಕುವುದೇ ನಿಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಟ್ರಿಕ್ಕಿ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ: ಗಿಳಿಗಳ ನಡುವೆ ಅಡಗಿದೆ ಬಣ್ಣದ ಚಿಟ್ಟೆ;‌ ಜಸ್ಟ್ 15 ಸೆಕೆಂಡುಗಳಲ್ಲಿ ಗುರುತಿಸಿ

ನಿಷ್ಠಾವಂತ ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿತೇ?

ಈ ಆಪ್ಟಿಕಲ್‌ ಇಲ್ಯೂಷನ್‌ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಹುಡುಕುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಕಣ್ಣಿಗೆ ಶ್ವಾನವು ಬಿದ್ದಿಲ್ಲವೇ. ನಾವೇ ನಿಮಗೆ ಉತ್ತರ ಹೇಳುತ್ತೇವೆ. ಒಣಗಿದ ಎಲೆಗಳ ಮೇಲೆ ಕುಳಿತಿರುವ ಶ್ವಾನವನ್ನು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Rose Plant: ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ – Kannada News | Rose Plant Vastu: Best Directions and Placement for Positive Energy at Home

ಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ಗುಲಾಬಿ ಗಿಡಗಳನ್ನು ನೆಡುವುದು ಮನೆಯ ಅಂದವವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತುಶಾಸ್ತ್ರ ಮತ್ತು ಫೆಂಗ್ ಶೂಯಿ ದೃಷ್ಟಿಕೋನದಿಂದ ನೋಡಿದರೆ, ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ವಿಷಯಕ್ಕೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವು ನಂಬಿಕೆಗಳು ಇದನ್ನು ಶುಭವೆಂದು ಹೇಳಿದರೆ, ಕೆಲವು ಅಶುಭ ಎಂದು ಸೂಚಿಸುತ್ತವೆ. ಒಟ್ಟಾರೆಯಾಗಿ ಗುಲಾಬಿ ಗಿಡ ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ ಎಂದು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ಪ್ರಕಾರ, ಮನೆಯ ಮುಖ್ಯ ಪ್ರವೇಶದ ಬಳಿ ಮುಳ್ಳಿನ ಸಸ್ಯಗಳನ್ನು ನೆಡುವುದು ಒಳ್ಳೆಯದಲ್ಲ. ಗುಲಾಬಿ ಗಿಡಕ್ಕೆ ಮುಳ್ಳುಗಳು ಇರುವುದರಿಂದ, ಮನೆಯ ಮುಂದೆ ಇದನ್ನು ನೆಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲಿ ಅನಾವಶ್ಯಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ವಾಸ್ತು ದೃಷ್ಟಿಯಿಂದ ಮನೆಯ ಮುಂದೆ ಗುಲಾಬಿ ಗಿಡ ನೆಡುವುದು ಅಶುಭ ಎಂದು ಹೇಳಲಾಗುತ್ತದೆ.

ಫೆಂಗ್ ಶೂಯಿ ಪ್ರಕಾರ:

ಇನ್ನೊಂದೆಡೆ, ಫೆಂಗ್ ಶೂಯಿ ಪ್ರಕಾರ ಗುಲಾಬಿ ಗಿಡವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯುಳ್ಳ ಸಸ್ಯವಾಗಿದೆ. ವಿಶೇಷವಾಗಿ ಕೆಂಪು ಗುಲಾಬಿಗಳು ಶಕ್ತಿ, ಪ್ರೀತಿ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿ ಗುಲಾಬಿಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ, ಸರಿಯಾದ ಸ್ಥಳದಲ್ಲಿ ಗುಲಾಬಿ ಗಿಡವನ್ನು ನೆಟ್ಟರೆ ಮನೆಯ ವಾತಾವರಣ ಹರ್ಷಭರಿತವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಗುಲಾಬಿ ಮರವನ್ನು ನೆಡಲು ಸೂಕ್ತ ಸ್ಥಳ:

ಗುಲಾಬಿ ಗಿಡಗಳನ್ನು ಮನೆಯ ಮುಂದೆ ಬದಲು, ಬಾಲ್ಕನಿಯಲ್ಲಿ ಮನೆಯ ನೈಋತ್ಯ ದಿಕ್ಕಿನಲ್ಲಿ
ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ. ಇದಲ್ಲದೆ, ಕೆಂಪು ಹೂವುಗಳನ್ನು ಹೊಂದಿರುವ ಸಸ್ಯಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಮನೆಯವರ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ ಹಾಗೂ ಕುಟುಂಬ ಸಂಬಂಧಗಳು ಬಲವಾಗುತ್ತವೆ ಎನ್ನಲಾಗುತ್ತದೆ.

ಒಟ್ಟಾರೆಯಾಗಿ ಗುಲಾಬಿ ಗಿಡವನ್ನು ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ. ಮನೆಯ ಮುಖ್ಯ ದ್ವಾರದ ಮುಂದೆ ನೆಡುವುದನ್ನು ತಪ್ಪಿಸಿ, ಸೂಕ್ತ ದಿಕ್ಕಿನಲ್ಲಿ ನೆಟ್ಟರೆ ಗುಲಾಬಿಯ ಸೌಂದರ್ಯವೂ, ಅದರ ಸಕಾರಾತ್ಮಕ ಪರಿಣಾಮವೂ ನಿಮ್ಮ ಮನೆಗೆ ಲಭಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ – Kannada News | We Have Boarded the Reform Express, Says PM Modi Ahead of Budget

ನವದೆಹಲಿ, ಜನವರಿ 29: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡಿದ್ದಾರೆ. ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೆಂದರೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆ, ಈಗ ನಾವು ಸುಧಾರಣಾ ಎಕ್ಸ್​ಪ್ರೆಸ್​ನಲ್ಲಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.  ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿರುವ ಅವರು, ಭಾಷಣವು 140 ಕೋಟಿ ಭಾರತೀಯರ ವಿಶ್ವಾಸದ ಅಭಿವ್ಯಕ್ತಿಯಾಗಿದೆ. ಅವರ ಸಾಮರ್ಥ್ಯ ಮತ್ತು ಅವರ ಆಕಾಂಕ್ಷೆಗಳ ರೇಖಾಚಿತ್ರವಾಗಿದೆ.

ವಿಶೇಷವಾಗಿ ಯುವಕರ ಬಗ್ಗೆ. ಎಲ್ಲಾ ಸಂಸದರಿಗೆ, ರಾಷ್ಟ್ರಪತಿ ಮಾರ್ಗದರ್ಶನ ನೀಡಲು ಹಲವಾರು ವಿಷಯಗಳನ್ನು ಹೇಳಿದ್ದರು, ಎಲ್ಲಾ ಸಂಸದರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸಮಗ್ರ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ ಮತ್ತು ಬಜೆಟ್ ಮಂಡಿಸುವ ಮೊದಲು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2026 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಇದು ಅವರ ಸತತ ಒಂಬತ್ತನೇ ಬಜೆಟ್ ಆಗಿದ್ದು, ಜಾಗತಿಕ ಅನಿಶ್ಚಿತತೆಯ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸರಿಪಡಿಸುವ ಕ್ರಮಗಳನ್ನು ಇದು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಕೊಲೆ – Kannada News | Karnataka Crime: Illicit Affair Leads to Brutal Murder of Contractor in Hassan

ಹಾಸನ, ಜ.29: ರಾಜ್ಯದಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣಕ್ಕೆ ಕೊಲೆಗಳು ಕೂಡ ನಡೆಯುತ್ತಿದೆ. ಇದೀಗ ಹಾಸನದಲ್ಲಿ (Hassan) ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನೆನ್ನೆ (ಜ.28) ತಡರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಅಡುಗೆ ಕಂಟ್ರಾಕ್ಟರ್​​​ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ್(48) ಎಂಬುವವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಧರ್ಮೇಂದ್ರ ಎಂಬ ವ್ಯಕ್ತಿ ಅಡುಗೆ ಗುತ್ತಿಗೆದಾರ ಆನಂದ್ ಎಂಬುವವರಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆನಂದ್ ಮೇಲೆ ಧರ್ಮೇಂದ್ರ ದಾಳಿ ಮಾಡಿದ್ದಾರೆ. ಒಂದೇ ಮಹಿಳೆ ಜತೆಗೆ‌ ಆನಂದ್​​ ಮತ್ತು ಧಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಆನಂದ್ ಮೇಲೆ ಧರ್ಮೇಂದ್ರ ನಡುವೆ ಜಗಳ ನಡೆದಿತ್ತು. ಇಬ್ಬರು ಕೂಡ ಬಾರ್​​​​ನಲ್ಲಿ ಭೇಟಿಯಾಗಿದ್ದು, ಮಹಿಳೆ ಜತೆಗಿನ ಸಂಬಂಧ ಬಗ್ಗೆ ಮಾತುಕತೆಯಾಗಿದೆ. ಅಲ್ಲಿಂದ ಆನಂದ್​​ ಮನೆಗೆ ಹೋಗಿದ್ದಾರೆ. ಆದರೆ ಮತ್ತೆ ಫೋನ್​​ ಮಾಡಿ ಧರ್ಮೇಂದ್ರ ಕರೆಸಿಕೊಂಡಿದ್ದಾರೆ. ಧರ್ಮೇಂದ್ರ ಫೋನ್ ಮಾಡಿದ ಕಾರಣ ಆನಂದ್​​​​ ವಾಪಸ್ಸು ಬಂದಿದ್ದಾರೆ.

ಇದನ್ನೂ ಓದಿ: ರಾಜಕಾರಣಿಗಳ ಮಗಳಂದಿರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ

ಈ ವೇಳೆ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಭರದಲ್ಲಿ ಧಮೇಂದ್ರ ಆನಂದ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಧರ್ಮೇಂದ್ರ ಅವರು ಮಹಿಳೆ ಜೊತೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಇದರ ನಡುವೆ ಮಹಿಳೆ ಆನಂದ ಜತೆಗೂ ಸಂಬಂಧ ಹೊಂದಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆನಂದ ಹಾಗೂ ಧರ್ಮೇಂದ್ರ ನಡುವೆ ಆಗ್ಗಾಗೆ ಜಗಳ ನಡೆಯುತ್ತಿತ್ತು. ನೆನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಧರ್ಮೇಂದ್ರ ಆನಂದ್​​ ಅವರನ್ನು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಧಮೇಂದ್ರ ಅಲ್ಲಿ ಪರಾರಿಯಾಗಿದ್ದಾನೆ. ಇದೀಗ ಹಾಸನ ನಗರದ ಕೆ.ಆರ್.ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:02 am, Thu, 29 January 26

Source link

Video: ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ – Kannada News | Driver Killed After Vehicle Catches Fire on National Highway in Andhra Pradesh

ಕಾಕಿನಾಡ, ಜನವರಿ 29: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಎರಡು ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವದಹನವಾಗಿದ್ದಾರೆ. ಕತಿಪುಡಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಚ್ಚು ವಾಹನಗಳು ಓಡಾಡುವ ಹೆದ್ದಾರಿ, ಪಕ್ಕದ ರಸ್ತೆಯಿಂದ ಟ್ರಕ್​ ಒಂದು ಯೂಟರ್ನ್​ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹರಡುವ ಮೊದಲೇ ಓರ್ವ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ಟ್ರಕ್​ನಲ್ಲಿದ್ದ ಚಾಲಕನಿಗೆ ಅದು ಸಾಧ್ಯವಾಗಲಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಾಕಿಸ್ತಾನದ್ದು ಬರೀ ನಾಟಕ ಅಷ್ಟೇ: ಮೊಹಮ್ಮದ್ ಕೈಫ್ – Kannada News | Mohammad Kaif Calls Out Pakistan’s World Cup Boycott Drama

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿಯಲಿದೆಯಾ? ಈ ಕುತೂಹಲಕಾರಿ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಲ್ಲದೆ ಈ ಪ್ರಶ್ನೆಗೆ ಉತ್ತರ ಕೂಡ ಸಿಗುವುದಿಲ್ಲ. ಏಕೆಂದರೆ ಇವೆಲ್ಲವೂ ಪಾಕಿಸ್ತಾನದ ನಾಟಕ ಅಷ್ಟೇ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್​ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡುತ್ತಿದೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಏಕೆಂದರೆ ಇದೆಲ್ಲಾ ಪಾಕಿಸ್ತಾನದ ನಾಟಕ. ಈ ರೀತಿ ಹೇಳಿಕೆ ನೀಡುವ ಮೂಲಕ ಅವರು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಅಷ್ಟೇ. ನೀವೇ ಕಾದು ನೋಡಿ ಪಾಕಿಸ್ತಾನ್ ಟಿ20 ವಿಶ್ವಕಪ್ ಆಡುತ್ತೆ ಎಂದು ಕೈಫ್ ಹೇಳಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯಲಿದೆ. ಈಗ ಅವರು ಸ್ವಲ್ಪ ಸಹಾನುಭೂತಿ ಪಡೆಯಲು ಬಾಂಗ್ಲಾದೇಶವನ್ನು ಬೆಂಬಲಿಸುವ ನಾಟಕ ಮಾಡುತ್ತಿದ್ದಾರೆ. ಬೇರೇನೂ ಅಲ್ಲ. ಇಲ್ಲಿಯವರೆಗೆ, ಅವರು ಹಾಗೆಯೇ ಮಾಡುತ್ತಾ ಬಂದಿದೆ. ಹೀಗಾಗಿ ವಿಶ್ವಕಪ್​ ಅನ್ನು ಬಹಿಷ್ಕರಿಸುತ್ತೇವೆ ಎನ್ನುವುದು ಪಾಕಿಸ್ತಾನದ ಗೊಡ್ಡು ಬೆದರಿಕೆ ಅಷ್ಟೇ. ಅದಕ್ಕೆ ಅಂತಹ ಮಹತ್ವ ನೀಡಬೇಕಿಲ್ಲ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾಗೆ ಪಾಕ್ ಬೆಂಬಲ:

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟ ಬೆನ್ನಲ್ಲೇ ಪಾಕ್ ತಂಡ ಮುಂದಿನ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪಾಕ್ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ನಿರ್ಧಾರ ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟದ್ದು. ಹೀಗಾಗಿ ಪಾಕಿಸ್ತಾನ್ ಸರ್ಕಾರ ಏನು ಹೇಳುತ್ತದೆಯೋ ಅದರ ಮೇಲೆ ಪಾಕ್ ತಂಡದ ವಿಶ್ವಕಪ್ ಭವಿಷ್ಯ ನಿಂತಿದೆ ಮೊಹ್ಸಿನ್ ನಖ್ವಿ ಹೇಳಿದ್ದರು.

ಈ ಮೂಲಕ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಬೆಂಬಲ ಸೂಚಿಸಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಪರೋಕ್ಷವಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದ್ದಾರೆ.

ಇತ್ತ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಟೂರ್ನಿಯು ಆರ್ಥಿಕ ನಷ್ಟ ಅನುಭವಿಸಲಿದೆ ಎಂಬ ಲೆಕ್ಕಾಚಾರವನ್ನು ಪಿಸಿಬಿ ಹಾಕಿಕೊಂಡಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದಿದ್ದರೆ ವಿಶ್ವಕಪ್ ಟೂರ್ನಿಯು ಬಹುತೇಕ ವಿಫಲವಾದಂತೆ. ಹೀಗಾಗಿಯೇ ಬಿಸಿಸಿಐ ಹಾಗೂ ಐಸಿಸಿಗೆ ಬಿಗ್ ಶಾಕ್ ನೀಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆರೆ ಮರೆಯ ಪ್ರಯತ್ನಕ್ಕೆ ಕೈ ಹಾಕಿದೆ.

ಐಸಿಸಿ ಎಚ್ಚರಿಕೆ:

ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ಗೆ ಕೈ ಕೊಡುವ ಸೂಚನೆ ನೀಡಿದ ಬೆನ್ನಲ್ಲೇ ಐಸಿಸಿ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದು ಕೂಡ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವ ಸೂಚನೆಯೊಂದಿಗೆ ಎಂಬುದು ವಿಶೇಷ.

ಅಂದರೆ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಕೈ ಬಿಡುವುದಾಗಿ ಐಸಿಸಿ ಎಚ್ಚರಿಸಿದೆ.

ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿ ಆಡಲು ಕೂಡ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.

ಇದರ ಜೊತೆಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್​ಒಸಿ ನೀಡುವುದಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದೆ.

ಇಷ್ಟೇ ಅಲ್ಲದೆ ಏಷ್ಯಾಕಪ್ ಟೂರ್ನಿಯಿಂದಲೂ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ರವಾನಿಸಲಾಗಿದೆ. ಅಂದರೆ ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮಾನ್ಯತೆ ರದ್ದಾಗಲಿದೆ.

ಹೀಗಾಗಿ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿಯುವಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂಬುದು ಖಚಿತ. ಇದಾಗ್ಯೂ ವಿಶ್ವಕಪ್ ಬಹಿಷ್ಕಾರದ ಹೇಳಿಕೆಗಳು ಮೊಹಮ್ಮದ್ ಕೈಫ್ ಹೇಳಿದಂತೆ ಪ್ರಚಾರ ತಂತ್ರ ಎಂದಷ್ಟೇ ಹೇಳಬಹುದು.

Source link

‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಕನ್ನಡದ ಮಹಿಳಾ ನಿರ್ದೇಶಕಿ – Kannada News | Yash Is Doing Right Thing Says Priya Hassan Over Toxic Teaser debate

‘ಟಾಕ್ಸಿಕ್’ ಸಿನಿಮಾ ಟೀಸರ್ ವಿಷಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ವಿಷಯದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಈಗ ಯಶ್ ಬೆಂಬಲಕ್ಕೆ ಕನ್ನಡದ ಮಹಿಳಾ ನಿರ್ದೇಶಕಿ ನಿಂತಿದ್ದಾರೆ. ಫಿಲ್ಮ್ ಚೇಂಬರ್​ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರಿಯಾ ಹಾಸನ್ ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಯಶ್ ಬೆಂಬಲಕ್ಕೆ ನಿಂತಿದ್ದಾರೆ. ‘ಸಿನಿಮಾಗೆ ಏನು ಅಗತ್ಯವಿದೆಯೋ ಅವರನ್ನು ಮಾಡುತ್ತಿದ್ದಾರೆ. ಅವರ ಸಿನಿಮಾಗೆ ಎಲ್ಲ ಕಡೆ ಮಾರುಕಟ್ಟೆ ಇರುವುದರಿಂದ ಅವರು ಭಿನ್ನ ಸಿನಿಮಾ ನೀಡುತ್ತಿದ್ದಾರೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Indian Press Day 2026: ಡಿಜಿಟಲ್‌ ಯುಗದಲ್ಲೂ ಕಡಿಮೆಯಾಗಿಲ್ಲ ಪತ್ರಿಕೆಗಳ ಮಹತ್ವ – Kannada News | Indian Press Day 2026: What is the purpose behind celebrating Indian Press Day?

ಇಂದಿನ ಈ ಡಿಜಿಟಲ್‌ ಜಗತ್ತಿನಲ್ಲಿ ಪ್ರತಿಯೊಂದು ಸುದ್ದಿಯೂ ಮೊಬೈಲ್ ಪರದೆಯಲ್ಲಿ ಸೆಕೆಂಡುಗಳಲ್ಲಿ ಲಭ್ಯವಿದ್ದರೂ ಸಹ ಪತ್ರಿಕೆಗಳು (Press) ಇನ್ನೂ ತಮ್ಮ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡು ಬಂದಿವೆ ಮತ್ತು ಜನರಿಗೆ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳ ಕುರಿತು ಓದುಗರಿಗೆ ವಿಶ್ವಾಸಾರ್ಹ ಮತ್ತು ಸಮತೋಲಿತ ಮಾಹಿತಿಯನ್ನು ಒದಗಿಸುತ್ತವೆ. ಇದೇ ಕಾರಣಕ್ಕಾಗಿ ಈ ಡಿಜಿಟಲ್‌ ಯುಗದಲ್ಲೂ ಲಕ್ಷಾಂತರ ಜನರು ಪತ್ರಿಕೆಯನ್ನು ಓದುತ್ತಿದ್ದಾರೆ. ಪತ್ರಿಕೆಗಳ ಈ ಪ್ರಾಮುಖ್ಯತೆ ಮತ್ತು ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಮಾಧ್ಯಮ ಸ್ವಾತಂತ್ರ್ಯ, ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಭಾರತೀಯ ಪತ್ರಿಕಾ ದಿನದ ಇತಿಹಾಸವೇನು?

ಭಾರತೀಯ ಪತ್ರಿಕಾ ದಿನದ ಇತಿಹಾಸವು ಹದಿನೆಂಟನೇ ಶತಮಾನದಷ್ಟು ಹಿಂದಿನದು. 1780 ಜನವರಿ 29 ರಲ್ಲಿ  ಐರಿಶ್ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕ್ಕಿ ಭಾರತದ ಮೊದಲ ಪತ್ರಿಕೆ “ಹಿಕಿಸ್ ಬೆಂಗಾಲ್ ಗೆಜೆಟ್” ಪತ್ರಿಕೆಯನ್ನು ಕೋಲ್ಕತ್ತಾದಿಂದ ಪ್ರಕಟಿಸಿದರು. ಈ ಪತ್ರಿಕೆಯು ವಾರಪತ್ರಿಕೆಯಾಗಿದ್ದು, ಏಷ್ಯಾದ ಮೊದಲ ಮುದ್ರಿತ ಪತ್ರಿಕೆ ಎಂದು ಪರಿಗಣಿಸಲಾಗಿದೆ. ಆರಂಭದಲ್ಲಿ, ಹಿಕ್ಕಿಯ ಪತ್ರಿಕೆಯು ಸಾರ್ವಜನಿಕ ಸುದ್ದಿ, ಸ್ಥಳೀಯ ಸಮಸ್ಯೆಗಳು ಮತ್ತು ಜಾಹೀರಾತುಗಳ ಮೇಲೆ ಕೇಂದ್ರೀಕರಿಸಿತ್ತು, ಆದರೆ ಕ್ರಮೇಣ, ಹಿಕ್ಕಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಅಧಿಕಾರಿಗಳ ನೀತಿಗಳನ್ನು ಬಹಿರಂಗವಾಗಿ ಟೀಕಿಸಲು ಪ್ರಾರಂಭಿಸಿದರು. ಇದು ಬ್ರಿಟಿಷ್ ಸರ್ಕಾರವು 1782 ರಲ್ಲಿ ಇದನ್ನು ಬೆದರಿಕೆ ಎಂದು ಪರಿಗಣಿಸಿ ಮುಚ್ಚಲು ಕಾರಣವಾಯಿತು.ಹಿಕಿಸ್ ಬೆಂಗಾಲ್ ಗೆಜೆಟ್ ಅಲ್ಪಾವಧಿಯಲ್ಲಿ ಕಾರ್ಯನಿರ್ವಹಿಸಿದರೂ  ಅದರ ಪ್ರಭಾವವು ಅಗಾಧವಾಗಿತ್ತು. ಇದು ಭಾರತದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕಿತು ಮತ್ತು ಇತರ ಅನೇಕ ಪತ್ರಿಕೆಗಳ ಪ್ರಕಟಣೆಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಭಾರತದ ಮೊದಲ ಪತ್ರಿಕೆ ಹಿಕಿಸ್ ಬೆಂಗಾಲ್ ಗೆಜೆಟ್‌ನ  ಪ್ರಕಟಣೆಯ ಗೌರವಾರ್ಥವಾಗಿ ಭಾರತದಲ್ಲಿ ಪ್ರತಿವರ್ಷ ಜನವರಿ 29 ರಂದು ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುವುದು? ಕುರಿತ ಇಂಟರೆಸ್ಟಿಂಗ್‌ ಸಂಗತಿ ಇಲ್ಲಿದೆ

ಭಾರತೀಯ ಪತ್ರಿಕಾ ದಿನವನ್ನು ಆಚರಿಸುವ ಉದ್ದೇಶವೇನು?

  • ಭಾರತೀಯ ಪತ್ರಿಕಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಪತ್ರಿಕೆಗಳ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
  • ಪತ್ರಿಕೆಗಳು ಕೇವಲ ಸುದ್ದಿಗಳನ್ನು ಓದುವ ಸಾಧನವಲ್ಲ, ಅವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿಯೂ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈ ದಿನ ನಮಗೆ ನೆನಪಿಸುತ್ತದೆ.
  • ಜನರು ನಿಯಮಿತವಾಗಿ ಪತ್ರಿಕೆಗಳನ್ನು ಓದುವಂತೆ ಪ್ರೋತ್ಸಾಹಿಸುವುದು, ಪತ್ರಿಕೋದ್ಯಮದ ಕೊಡುಗೆಗಳನ್ನು ಗೌರವಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿಹೇಳುವುದು ಈ ದಿನದ ಉದ್ದೇಶವಾಗಿದೆ.
  • ಸಮಾಜಕ್ಕೆ ಸತ್ಯ, ಪಾರದರ್ಶಕ ಮತ್ತು ಅಧಿಕೃತ ಮಾಹಿತಿಯನ್ನು ಒದಗಿಸಲು ಪ್ರತಿದಿನ ಶ್ರಮಿಸುವ ಪತ್ರಕರ್ತರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಈ ದಿನ ಗುರುತಿಸುತ್ತದೆ.
  • ಅಲ್ಲದೆ ಈ ದಿನವು ಮಾಧ್ಯಮ ಸ್ವಾತಂತ್ರ್ಯ, ಸತ್ಯ ಮತ್ತು ನಿಷ್ಪಕ್ಷಪಾತದ ಪ್ರಚಾರವನ್ನು ಸಂಕೇತಿಸುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕಾ ಪಾತ್ರವನ್ನು ಎತ್ತಿ ತೋರಿಸುತ್ತದೆ.
  • ಈ ದಿನ ದೇಶದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಪತ್ರಿಕೆಗಳು ಹೇಗೆ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ನೆನಪಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version