120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ – Kannada News | Bengaluru 120 Cr Math Land Grab: Naresh Gowda Grilled on Forged Documents

ಬೆಂಗಳೂರು ಆ 5: ಬೆಂಗಳೂರು ಹೊರವಲಯದ ಕಂಬೀಪುರದಲ್ಲಿ ಶ್ರೀ ಆದಿಚುಂಚನಗಿರಿ ಮಠಕ್ಕೆ ಸೇರಿದ ಸುಮಾರು 120 ಕೋಟಿ ರೂಪಾಯಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ನೆಲಮಂಗಲದ ನರೇಶ್ ಗೌಡ ಕೊನೆಗೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.

ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಆತ, ಕೆಂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಅವರ ಮುಂದೆ ವಿಚಾರಣೆಗೆ ಹಾಜರಾಗಿ ತನಗೇನೂ ತಿಳಿಯದಂತೆ ಹೇಳಿಕೆ ನೀಡಿದ್ದಾನೆ. ವಿಚಾರಣೆ ವೇಳೆ ನರೇಶ್ ಗೌಡ, “ನಾನೊಬ್ಬ ಬ್ರೋಕರ್ ಅಷ್ಟೇ. ಜಮೀನು ಮಾರಾಟ ಮಾಡಿಸಿ ಕಮಿಷನ್ ಪಡೆಯಲು ಮುಂದಾಗಿದ್ದೆ. ಜಮೀನು ಮಾರುವವರು ಮತ್ತು ಕೊಳ್ಳುವವರು ಇದ್ದರು, ಅದನ್ನು ಬಿಟ್ಟು ನನಗೂ ಈ ನಕಲಿ ದಾಖಲೆಗಳಿಗೂ ಯಾವುದೇ ಲಿಂಕ್ ಇಲ್ಲ” ಎಂದು ತನಗೇನೂ ಸಂಬಂಧವಿಲ್ಲದಂತೆ ಕಥೆ ಹೇಳಿದ್ದಾನೆ.

1975ರಲ್ಲಿ ದಾನವಾಗಿ ಮಠಕ್ಕೆ ಬಂದಿದ್ದ ಒಟ್ಟು 45 ಎಕರೆ ಜಮೀನಿನಲ್ಲಿ 6 ಎಕರೆ ಜಮೀನಿಗೆ ಸತ್ತ ವ್ಯಕ್ತಿಯ ಮಗನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಅಕ್ರಮ ಪಹಣಿ (RTC) ಹಾಗೂ ನಕಲಿ ದಾಖಲೆ ಸೃಷ್ಟಿಸಲು ಆರೋಪಿಗಳಾದ ಆರೋಗ್ಯಸ್ವಾಮಿ ಮತ್ತು ಫ್ರಾನ್ಸಿಸ್‌ಗೆ ಹಣ ನೀಡಿ, ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಕೆಲಸ ಮಾಡಿಸಿದ್ದು ಇದೇ ನರೇಶ್ ಗೌಡ ಎಂಬುದು ಈ ಹಿಂದಿನ ತನಿಖೆಯಲ್ಲಿ ಸಾಬೀತಾಗಿದೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕನಿಗೆ ಹೃದಯಾಘಾತ, ಜೀವ ಉಳಿಸಿದ ಚಾಲಕ

ಈ ಜಮೀನು ಕಬಳಿಕೆ ಜಾಲದಲ್ಲಿ ಇಬ್ಬರು ಡೆಪ್ಯುಟಿ ತಹಶೀಲ್ದಾರ್‌ಗಳು, ಇಬ್ಬರು ವಿಲೇಜ್ ಅಕೌಂಟೆಂಟ್‌ಗಳು ಸೇರಿದಂತೆ ಒಟ್ಟು 6 ಜನ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದು, ಈವರೆಗೆ ಪ್ರಕರಣದಲ್ಲಿ 17 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ನರೇಶ್ ಗೌಡನನ್ನು ಒಂದು ದಿನ ವಿಚಾರಣೆ ನಡೆಸಿರುವ ಕೆಂಗೇರಿ ಪೊಲೀಸರು, ಮತ್ತಷ್ಟು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದ್ದಕ್ಕಿದ್ದಂತೆ ತಂಡದ ತೊರೆದ ಸೂಪರ್‌ಜೈಂಟ್ಸ್ ನಾಯಕ ಐಡೆನ್ ಮಾರ್ಕ್ರಾಮ್

Source link

ನಾಳೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ: ಹೂವುಗಳಲ್ಲಿ ಅರಳಲಿದೆ ಗಂಗರ ಸಾಮ್ರಾಜ್ಯ! – Kannada News | Lalbagh Independence flower show Start From August 6th in Bengaluru to showcase glory of Ganga Empire

ಬೆಂಗಳೂರು, (ಆಗಸ್ಟ್ 05): ಸ್ವಾತಂತ್ರ್ಯೋತ್ಸವದ (Independence Day) ಅಂಗವಾಗಿ ನಗರದ ಐತಿಹಾಸಿಕ ಲಾಲ್‌ಬಾಗ್‌ ಉದ್ಯಾನದಲ್ಲಿ ಆಗಸ್ಟ್‌ 6ರಿಂದ 17ರವರೆಗೆ 220ನೇ ಫಲಪುಷ್ಪ ಪ್ರದರ್ಶನ (Lalbagh Flower Show 2026) ಆಯೋಜಿಸಲಾಗಿದೆ. ಈ ಬಾರಿಯ ಪ್ರದರ್ಶನದ ವಿಶೇಷತೆ ಎಂದರೆ, ಗಂಗ ರಾಜವಂಶದ ವೈಭವ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೂಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ. ಈ ಹೂಗಳ ಹಬ್ಬದಲ್ಲಿ 1,000 ವರ್ಷಗಳ ಗಂಗ ಸಾಮ್ರಾಜ್ಯದ ಗತವೈಭವ ಹೂಗಳ ಮೂಲಕ ಅನಾವರಣಗೊಳ್ಳಲಿದೆ. ಶ್ರವಣಬೆಳಗೊಳದ ಬಾಹುಬಲಿಯಿಂದ ಹಿಡಿದು ತಲಕಾಡಿನ ಪುರಾತನ ದೇವಾಲಯಗಳವರೆಗೆ ಇತಿಹಾಸದ ಸುವರ್ಣ ಪುಟಗಳನ್ನು ಲಾಲ್‌ಬಾಗ್ ಅಂಗಳದಲ್ಲಿ ಮರುಸೃಷ್ಟಿಸಲಾಗಿದೆ.

12 ದಿನಗಳ ಕಾಲ ಫಲಪುಷ್ಪ ಪ್ರದರ್ಶನ

ಆಗಸ್ಟ್ 6ರಿಂದ ಅಂದರೆ ನಾಳೆಯಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ 220ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿಯ ಪ್ರದರ್ಶನವು ಗಂಗ ಸಾಮ್ರಾಜ್ಯದ ವೈಭವವನ್ನು ಕೇಂದ್ರ ವಿಷಯವಾಗಿ ಇಟ್ಟುಕೊಂಡು ರೂಪುಗೊಂಡಿದೆ. ಐತಿಹಾಸಿಕ ಗಾಜಿನ ಮನೆಯಲ್ಲಿ ಬಣ್ಣ ಬಣ್ಣದ ಹೂಗಳ ಅಲಂಕಾರದ ನಡುವೆ ಗಂಗರ ಸಾಹಸ ಹಾಗೂ ಸಂಸ್ಕೃತಿ ಜೀವಂತವಾಗಲಿದೆ. ನಾಳೆ (ಆಗಸ್ಟ್ 06) ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಫಲಪುಷ್ಪ ಪ್ರದರ್ಶನವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ‘ಫ್ರೀಡಂ ಹಬ್ಬ’ ಘೋಷಣೆ: ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಬೃಹತ್ ಸ್ವಾತಂತ್ರ್ಯೋತ್ಸವ ಸಂಭ್ರಮ

ಪ್ರದರ್ಶನದಲ್ಲಿ ಗಂಗ ದೊರೆಗಳ ಬಲಿಷ್ಠ ಗಜಸೇನೆ, ಯುದ್ಧದ ರೋಮಾಂಚನಕಾರಿ ದೃಶ್ಯಗಳು, ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಪ್ರತಿಮೆ ಹಾಗೂ ತಲಕಾಡಿನ ದೇವಾಲಯಗಳ ಪ್ರತಿಕೃತಿಗಳು ಹೂವಿನ ಕಲಾಕೃತಿಗಳಾಗಿ ಮೂಡಿಬಂದಿವೆ. ಜೊತೆಗೆ ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ಮತ್ತು ಶಿಲ್ಪಕಲೆಗೆ ಗಂಗರ ಕೊಡುಗೆಯನ್ನು ಬಿಂಬಿಸುವ ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಲಿವೆ.

130ಕ್ಕೂ ಹೆಚ್ಚು ಅಪರೂಪದ ಹೂವಿನ ಚಿತ್ತಾರ

ಈ ಬಾರಿಯ ಪುಷ್ಪ ಪ್ರದರ್ಶನಕ್ಕಾಗಿ ತೋಟಗಾರಿಕೆ ಇಲಾಖೆಯು ಸುಮಾರು 2.75 ಕೋಟಿ ರೂಪಾಯಿ ವೆಚ್ಚ ಮಾಡಿದೆ. ದೇಶದ ನಾಲ್ಕು ವಿಭಿನ್ನ ರಾಜ್ಯಗಳಿಂದ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ತರಿಸಲಾಗಿದೆ. ಸಾರ್ವಜನಿಕರ ಮನಸೊರೆಗೊಳ್ಳಲು ಲಾಲ್‌ಬಾಗ್ ಕೆರೆ ಬಳಿ ಕೃತಕ ಜಲಪಾತ ಹಾಗೂ ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಲಕ್ಷಾಂತರ ವೀಕ್ಷಕರು ಆಗಮಿಸುವ ನಿರೀಕ್ಷೆಯಿರುವುದರಿಂದ ಟ್ರಾಫಿಕ್ ಹಾಗೂ ಗೊಂದಲ ತಡೆಯಲು ಆನ್‌ಲೈನ್ ಟಿಕೆಟ್ ವ್ಯವಸ್ಥೆ, ಹೆಚ್ಚುವರಿ ಪಾರ್ಕಿಂಗ್, 136 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಗೂ ತುರ್ತು ಸೇವೆಗಾಗಿ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಆಂಬುಲೆನ್ಸ್ ಮತ್ತು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನನ್ನು ಕೊಲ್ಲಬಹುದು, ಜೈಲಿಗೆ ಹಾಕಬಹುದು, ಆದರೂ ಬಾಂಗ್ಲಾದೇಶಕ್ಕೆ ಹೋಗುತ್ತೇನೆ’; ಶೇಖ್ ಹಸೀನಾ ಶಪಥ – Kannada News | Sheikh hasina vows to return to bangladesh says she may be killed or jailed

ನವದೆಹಲಿ, ಆಗಸ್ಟ್​ 5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ತಾವು ಮತ್ತೆ ಸ್ವದೇಶಕ್ಕೆ ಮರಳುವುದಾಗಿ ಇಂದು ಘೋಷಿಸಿದ್ದು, ಈ ಹಾದಿಯಲ್ಲಿ ಎದುರಾಗಬಹುದಾದ ಬಂಧನ, ಜೈಲು ಶಿಕ್ಷೆ ಅಥವಾ ಜೀವ ಬೆದರಿಕೆ ಸೇರಿದಂತೆ ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಬಾಂಗ್ಲಾದೇಶವನ್ನು ತೊರೆದ ನಂತರ ನವದೆಹಲಿಯಿಂದ ವರ್ಚುವಲ್ ಆಗಿ ಭಾಗವಹಿಸಿದ ತಮ್ಮ ಮೊದಲ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಶೇಖ್ ಹಸೀನಾ, ತಮ್ಮ ಬೆಂಬಲಿಗರು ಮತ್ತು ಬಾಂಗ್ಲಾದೇಶದ ಜನತೆ ಸಂಕಷ್ಟದಲ್ಲಿರುವಾಗ ತಾವು ದೇಶದಿಂದ ದೂರವಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇಂದು ನವದೆಹಲಿಯಲ್ಲಿ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶೇಖ್ ಹಸೀನಾ ವರ್ಚುವಲ್ ಆಗಿ ಮಾತನಾಡಿದ್ದಾರೆ. 2024ರ ಆಗಸ್ಟ್‌ನಲ್ಲಿ ಅಧಿಕಾರದಿಂದ ಪದಚ್ಯುತಗೊಂಡ ನಂತರ ಭಾರತದ ರಾಜಧಾನಿ ದೆಹಲಿಯಲ್ಲಿ ಆಶ್ರಯ ಪಡೆದಿರುವ ಅವರು ನಡೆಸಿದ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.

ಇದನ್ನೂ ಓದಿ: ಕೊಲೆಯ ಭೀತಿಯಿದೆ, ತಾಯ್ನಾಡಲ್ಲೇ ಸಾಯುತ್ತೇನೆ; ಬಾಂಗ್ಲಾದೇಶಕ್ಕೆ ಹೋಗುತ್ತೇನೆಂದ ಶೇಖ್ ಹಸೀನಾ

“ಅವರು ನನ್ನನ್ನು ಕೊಲ್ಲಬಹುದು, ಜೈಲಿಗೆ ತಳ್ಳಬಹುದು… ನನ್ನನ್ನು ಬಂಧಿಸಬಹುದು, ಜೈಲಿಗೆ ಕಳುಹಿಸಬಹುದು, ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳನ್ನು ಹೂಡಲು ಪ್ರಯತ್ನಿಸಬಹುದು ಎಂಬುದು ನನಗೆ ತಿಳಿದಿದೆ. ಆದರೆ ಈ ಭಯವು ಜನರ ಮೇಲಿನ ನನ್ನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಜೀವನವು ಬಹಳ ಹಿಂದೆಯೇ ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಗಳನ್ನು ಮೀರಿ ಬೆಳೆದಿದೆ” ಎಂದು ಶೇಖ್ ಹಸೀನಾ ಹೇಳಿದರು.

ಈ ರೀತಿಯ ಬಾಂಗ್ಲಾದೇಶಕ್ಕೆ ಪ್ರಾಣತ್ಯಾಗ ಬೇಕಿತ್ತಾ?:

“ನನ್ನ ದೇಶವನ್ನು ತೊರೆಯಲು ನನ್ನನ್ನು ಬಲವಂತಪಡಿಸಲಾಯಿತು, ಆದರೆ ನನ್ನ ಜನರಿಂದ ನಾನು ಎಂದಿಗೂ ದೂರವಾಗಿರಲಿಲ್ಲ. ಬಾಂಗ್ಲಾದೇಶದ ಜನರೊಂದಿಗೆ ನಮ್ಮ ಜೀವನವನ್ನೇ ಕಳೆದ ವ್ಯಕ್ತಿಯಾಗಿ ನಾನು ಮಾತನಾಡುತ್ತಿದ್ದೇನೆ. ಕಳೆದ 2 ವರ್ಷಗಳಲ್ಲಿ ಬಾಂಗ್ಲಾದೇಶವು ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ನಾನು ಗಮನಿಸುತ್ತಿದ್ದೇನೆ. ನಾವು ನಿರ್ಮಿಸಿದ ಬಾಂಗ್ಲಾದೇಶ ಇದಲ್ಲ. 1971ರಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ಬಾಂಗ್ಲಾದೇಶಕ್ಕಾಗಿ ಅಲ್ಲ” ಎಂದು ಶೇಖ್ ಹಸೀನಾ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ಶೇಖ್ ಹಸೀನಾ ಅವರ ನಾಳೆಯ ಸುದ್ದಿಗೋಷ್ಠಿಗೂ ನಮಗೂ ಸಂಬಂಧವಿಲ್ಲ’; ಭಾರತ ಸ್ಪಷ್ಟನೆ

2024ರ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಶೇಖ್ ಹಸೀನಾ, ಅದು ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ ಎಂದು ಪ್ರತಿಪಾದಿಸಿದರು. ತಮ್ಮ ಸರ್ಕಾರವು ಆರಂಭದಲ್ಲಿ ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಪರಿಸ್ಥಿತಿಯನ್ನು ಬಗೆಹರಿಸಲು ಯತ್ನಿಸಿತ್ತು. ಆದರೂ ಸುಧಾರಣೆಯ ನೆಪದಲ್ಲಿ ಕೆಲವು ಸಂಘಟಿತ ಗುಂಪುಗಳು ವಿದ್ಯಾರ್ಥಿಗಳ ಬೇಡಿಕೆಗಳನ್ನು ಹಿಂಸಾತ್ಮಕ ರಾಜಕೀಯ ಅಸ್ತ್ರವನ್ನಾಗಿ ಮಾಡಲು ಯತ್ನಿಸಿದವು” ಎಂದು ಅವರು ಆರೋಪಿಸಿದರು.

“ಬಾಂಗ್ಲಾದೇಶದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರ ಹೆಸರನ್ನುಳಿಸದಂತೆ ಅಳಿಸಿಹಾಕಲು ತಮ್ಮ ರಾಜಕೀಯ ವಿರೋಧಿಗಳು ಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು. “ನನ್ನ ಮರಳುವಿಕೆಯ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಬಾಂಗ್ಲಾದೇಶವನ್ನು ಮತ್ತೆ ಅಭಿವೃದ್ಧಿ ಮತ್ತು ಜಾತ್ಯತೀತತೆಯ ಹಾದಿಗೆ ತರುವುದಾಗಿದೆ” ಎಂದು ಶೇಖ್ ಹಸೀನಾ ಹೇಳಿದರು.

ಶೇಖ್ ಹಸೀನಾ ಪದಚ್ಯುತಿ:

78 ವರ್ಷದ ಶೇಖ್ ಹಸೀನಾ ಅವರು 2024ರ ಜೆನ್​-ಜಿ ದಂಗೆಯ ಸಮಯದಲ್ಲಿ ಪದಚ್ಯುತಗೊಂಡು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲೇ ವಾಸಿಸುತ್ತಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಈ ತೀರ್ಪನ್ನು ಅವರು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ. ದೇಶ ತೊರೆಯಲು ತಮಗೆ ಕೆಲವೇ ನಿಮಿಷಗಳ ಕಾಲಾವಕಾಶವಿದ್ದಿದ್ದರಿಂದ ಅನಿವಾರ್ಯವಾಗಿ ಹೊರಡಬೇಕಾಯಿತು ಎಂದು ಶೇಖ್ ಹಸೀನಾ ಹೇಳಿದ್ದಾರೆ. ಮತ್ತೊಂದೆಡೆ, ಭಾರತದಿಂದ ಸ್ವದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಬಾಂಗ್ಲಾದೇಶ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ವ್ಯಕ್ತಿಯ ಜೀವನವನ್ನು ನಾಶ ಮಾಡುವ ನಾಲ್ಕು ಪ್ರಮುಖ ಕೆಟ್ಟ ಅಭ್ಯಾಗಳು – Kannada News | Chanakya Niti: Four major bad habits that destroy a person’s life

ಜೀವನದಲ್ಲಿ (Life) ಸಕಾರಾತ್ಮಕವಾಗಿ ಮುಂದುವರೆಯಬೇಕು, ಯಶಸ್ಸನ್ನು ಸಾಧಿಸಬೇಕು ಎಂದು ಪ್ರತಿಯೊಬ್ಬರು ಸಹ ಬಯಸುತ್ತಾರೆ. ಆದರೆ ಈ ಕೆಲವೊಂದು ಅಭ್ಯಾಸಗಳಿದ್ದರೆ ಜೀವನದಲ್ಲಿ ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹೌದು ಈ ಕೆಲವೊಂದು ಅಭ್ಯಾಸಗಳನ್ನು ಬೆಳೆಸಿಕೊಂಡರೆ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಂಡತೆ, ಆ ತಪ್ಪುಗಳೇ ಸಾಕು ಜೀವನ ಹಾಳಾಗಲು ಎಂದು ಹೇಳಿದ್ದಾರೆ. ಹಾಗಿದ್ದರೆ ಅಭ್ಯಾಸಗಳಿಂದ ಜೀವನ ಹಾಳಾಗುತ್ತದೆ, ಜೀವನದಲ್ಲಿ ಮುಂದುವರೆಯಲು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ವ್ಯಕ್ತಿಯ ಜೀವನವನ್ನು ಹಾಳು ಮಾಡುವ ತಪ್ಪುಗಳು:

ಸೋಮಾರಿತನ: ಸೋಮಾರಿತನವು ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ಸೋಮಾರಿತನವು ವ್ಯಕ್ತಿಯ ಬಹುದೊಡ್ಡ ಶತ್ರುವಾಗಿದ್ದು, ಇದು ಇದು ಪ್ರಗತಿಯಲ್ಲಿರುವ ಕೆಲಸವನ್ನು ಸಹ ಹಾಳುಮಾಡುತ್ತದೆ, ವ್ಯಕ್ತಿಯನ್ನು ಜೀವನದಲ್ಲಿ ಮುಂದುವರೆಯಲು ಸಹ ಬಿಡುವುದಿಲ್ಲ.  ಜೀವನದಲ್ಲಿ ಯಶಸ್ವಿಯಾಗಲು ಮತ್ತು ಇತರರನ್ನು ಮೀರಿ ಬೆಳೆಯಲು ಬಯಸಿದರೆ ಸಾಧ್ಯವಾದಷ್ಟು ಸೋಮಾರಿತನದಿಂದ ದೂರವಿದ್ದು, ಸಮಯಕ್ಕೆ ಸರಿಯಾಗಿ ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಿ.

ಯೋಚಿಸದೆ ವರ್ತಿಸುವುದು: ಯಾವುದೇ ಕೆಲಸವನ್ನು ಯೋಚಿಸದೆ ಕೈಗೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ಯೋಚಿಸದೆ ಯಾವುದೇ ಕೆಲಸವನ್ನು ಕೈಗೊಂಡರೆ, ಅದರ ಫಲಿತಾಂಶ ಕೂಡ ನಕಾರಾತ್ಮಕವಾಗಿರುತ್ತದೆ. ಇದರಿಂದ ದೊಡ್ಡ ಪ್ರಮಾಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಆಚಾರ್ಯ ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದರ ಸರಿ ತಪ್ಪುಗಳನ್ನು ಯೋಚಿಸಬೇಕು ಆ ಬಳಿಕವೇ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಕೆಟ್ಟವರ ಸಹವಾಸ: ಕೆಟ್ಟವರ ಸಹವಾಸ, ಕೆಟ್ಟ ಅಭ್ಯಾಸಗಳಿದ್ದರೂ ಜೀವನದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಕೆಟ್ಟವರ ಸಹವಾಸದಲ್ಲಿದ್ದರೆ ನೀವು ಕೂಡ ತಿಳಿದೋ ತಿಳಿಯದೆಯೋ ಅವರ ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳುತ್ತೀರಿ. ಈ ಕೆಟ್ಟ ಗುಣಗಳಿದ್ದರೆ ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಮುಂದುವರೆಯಲು ಕೆಟ್ಟ ಅಭ್ಯಾಸದಿಂದ ದೂರವಿರಬೇಕು, ಯಾವಾಗಲೂ ಒಳ್ಳೆಯವರ ಸಂಘದಲ್ಲಿರಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ.

ಸಮಯ ವ್ಯರ್ಥ ಮಾಡುವುದು: ಆಚಾರ್ಯ ಚಾಣಕ್ಯರು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ. ಕಳೆದು ಹೋದ ಸಮಯವನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ಸಮಯವನ್ನು ವ್ಯರ್ಥ ಮಾಡುವವರು ಜೀವನದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ. ಹಾಗಾಗಿ ಯಾವತ್ತಿಗೂ ಟೈಮ್‌ ವೇಸ್ಟ್‌ ಮಾಡುವ ಬಹುದೊಡ್ಡ ತಪ್ಪನ್ನು ಮಾಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮೊದಲ ಬಾರಿಗೆ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ: ಏನಿದರ ವಿಶೇಷತೆ? – Kannada News | White topped roads in Gandhinagar get Bengaluru’s first integrated fire hydrant system

ಬೆಂಗಳೂರು, (ಆಗಸ್ಟ್ 05): ಇತ್ತಿಚ್ಚಿಗೆ ರಾಜಧಾನಿಯ ಚಿಕ್ಕದಾದ ರಸ್ತೆಗಳಲ್ಲಿ ಅಗ್ನಿ (Fire) ಅವಘಡ  ನಡೆದಾಗ ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಸಂಚಾರ ಮಾಡಲು ಕಷ್ಟವಾಗಿದೆ. ಹೀಗಾಗಿ ಬೆಂಗಳೂರಿನ ಜನನಿಬಿಡ ವಾಣಿಜ್ಯ ಪ್ರದೇಶಗಳಿಗೆ ಮೊದಲ ಬಾರಿಗೆ ಹೊಸ ಸುರಕ್ಷತಾ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ. ನಗರದ ಮೊದಲ ವೈಟ್‌ಟಾಪಿಂಗ್ ರಸ್ತೆಯೊಂದಿಗೆ ಇಂಟಿಗ್ರೇಟೆಡ್ ಫೈರ್ ಹೈಡ್ರಂಟ್ (integrated fire hydrant system,) ವ್ಯವಸ್ಥೆ ನಿರ್ಮಾಣ ಮಾಡಿದ್ದು, ಅಗ್ನಿ ಅವಘಡಗಳಿಗೆ ತ್ವರಿತ ಸ್ಪಂದನೆ ನೀಡಲು ಮುಂದಾಗಿದ್ದಾರೆ.. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಆರ್.ಟಿ. ಸ್ಟ್ರೀಟ್‌ನಲ್ಲಿ ಮೊದಲ ಬಾರಿಗೆ ಪೈರ್ ಹೈಡ್ರಂಟ್ ವ್ಯವಸ್ಥೆ ನಿರ್ಮಾಣ ಮಾಡಿದ್ದು, ಈ ವ್ಯವಸ್ಥೆಯಿಂದ ಅಗ್ನಿ ಅವಘಡಗಳ ಸಂದರ್ಭದಲ್ಲಿ ತಕ್ಷಣವೇ ನೀರು ದೊರೆಯಲಿದೆ. ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವೇಗವಾಗಲಿದ್ದು ಅಗ್ನಿ ಅವಘಡದಿಂದ ಎದುರಾಗವ ಅಪಾಯ ನಿಯಂತ್ರಣ ಮಾಡಬಹುದಾಗಿದೆ.

ನಿರ್ಮಾಣವಾಗುವ ರಸ್ತೆಗಳಲ್ಲಿ ಪ್ರಮುಖವಾಗಿ ಕಿರಿದಾದ ಇಕ್ಕಟ್ಟಿನ ರಸ್ತೆಗಳಲ್ಲಿ ಎಸ್.ಎಸ್.ಬಿ. ಕುಡಿಯುವ ನೀರು ಮತ್ತು ಒಳಚರಂಡಿ ಪೈಪ್‌ಲೈನ್‌, ಮಳೆನೀರು ಚರಂಡಿ, ಪಾದಚಾರಿಗಳಿಗೆ ಅನುಕೂಲಕರ ಫುಟ್‌ಪಾತ್ ಹಾಗೂ ಆಧುನಿಕ ಬೀದಿ ದೀಪಗಳನ್ನು ಜೊತೆಗೆ ಫೈರ್ ಹೈಡ್ರಂಟ್ ವ್ಯವಸ್ಥೆ ಅಳವಡಿಕೆಗೂ ಸರ್ಕಾರ ಮುಂದಾಗಿದೆ. ಅಗ್ನಿ ಅವಘಡದ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ನೇರವಾಗಿ ನೀರು ಪಡೆದು ಬೆಂಕಿ ನಂದಿಸಲು ಸಾಧ್ಯವಾಗಲಿದೆ. ಪೇಟೆ ಪ್ರದೇಶದ ಕಿರಿದಾದ ರಸ್ತೆಗಳಲ್ಲಿ ಅಗ್ನಿಶಾಮಕ ವಾಹನಗಳು ಸುಲಭವಾಗಿ ತಲುಪಲಾಗದ ಸಮಸ್ಯೆಗೆ ಇದು ಮಹತ್ವದ ಪರಿಹಾರವಾಗಲಿದೆ ಅಂತಿದ್ದಾರೆ ಮಾಜಿ ಸಚಿವ ದಿನೇಶ್ ಗುಂಡೂರಾವ್.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ: ಕರ್ನಾಟಕದಲ್ಲಿ ಪತ್ತೆಯಾಗದ 16.3 ಲಕ್ಷ ಮತದಾರರು, ಬೆಂಗಳೂರಲ್ಲಿ ಅತಿ ಹೆಚ್ಚು?

ರಾಜಧಾನಿಯಲ್ಲಿ ಮೊದಲ ಹಂತದಲ್ಲಿ ನಗರದಲ್ಲಿ 196 ಕಿಲೋಮೀಟರ್ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 120 ಕಿಲೋಮೀಟರ್ ರಸ್ತೆ ನಿರ್ಮಾಣ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ 60 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಮುಗಿಸುವ ಗುರಿಯನ್ನ ಜಿಬಿಎ ಹೊಂದಿದೆ. ಸದ್ಯ 418 ಮೀಟರ್ ಉದ್ದದ ಟ್ಯಾಂಕ್ ಬಂಡ್ ರಸ್ತೆಯನ್ನು 8.74 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು. 10.5 ಮೀಟರ್ ಅಗಲದ ರಸ್ತೆ, ಮಳೆನೀರು ಚರಂಡಿ, ಯುಟಿಲಿಟಿ ಡಕ್ಟ್ ಮತ್ತು ಪಾದಚಾರಿ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣದ ಸಮೀಪ ಪುರುಷರು, ಮಹಿಳೆಯರು, ತೃತೀಯಲಿಂಗಿಗಳು ಹಾಗೂ ದಿವ್ಯಾಂಗರಿಗೆ ಅನುಕೂಲವಾಗುವ ಆಧುನಿಕ ಸಾರ್ವಜನಿಕ ಶೌಚಾಲಯವನ್ನೂ ನಿರ್ಮಿಸಲಾಗಿದೆ.

ಒಟ್ನಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫೈರ್ ಹೈಡ್ರಂಟ್ ವ್ಯವಸ್ಥೆ ಅಳವಡಿಸಿರುವುದರಿಂದ ಅಗ್ನಿ ಅವಘಡ ನಿಯಂತ್ರಣಕ್ಕೆ ಸಾಕಷ್ಟ ಅನಕೂಲವಾಗಲಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಸ್ಥಳದಲ್ಲೇ ನೀರು ದೊರೆಯಲಿದೆ. ಈ ಮಾದರಿಯನ್ನು ನಗರದ ಇತರೆ ಭಾಗಗಳಿಗೂ ವಿಸ್ತರಿಸಿದರೆ ಅಗ್ನಿ ಅವಘಡಗಳ ಹಾನಿಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರದೀಪ್ ರಾವತ್ ಅಂತ್ಯಕ್ರಿಯೆ: ಅಂತಿಮ ದರ್ಶನ ಪಡೆದು ಭಾವುಕರಾದ ಆಮಿರ್ ಖಾನ್ – Kannada News | Actor Pradeep Rawat Passes Away Aamir Khan and Lagaan Team attend funeral in Mumbai

ಬಾಲಿವುಡ್, ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಖಳನಟ ಮತ್ತು ಪೋಷಕ ನಟನಾಗಿ ಖ್ಯಾತಿ ಪಡೆದಿದ್ದ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು ಕ್ಯಾನ್ಸರ್ ಮರುಕಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ (ಆಗಸ್ಟ್ 4) ಸಂಜೆ ನಿಧನರಾದರು. ಬುಧವಾರ ಮುಂಬೈನಲ್ಲಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಬಾಲಿವುಡ್ ಸ್ಟಾರ್ ಆಮಿರ್ ಖಾನ್ (Aamir Khan) ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ಕಂಬನಿ ಮಿಡಿದರು. ‘ಲಗಾನ್’ ಚಿತ್ರತಂಡದವರು ಬಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಬುಧವಾರ ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ‘ಲಗಾನ್’ ಚಿತ್ರದ ನಿರ್ದೇಶಕ ಅಶುತೋಷ್ ಗೋವಾರಿಕರ್, ನಟ ಆಮಿರ್ ಖಾನ್, ಯಶ್‌ಪಾಲ್ ಶರ್ಮಾ, ದಯಾ ಶಂಕರ್ ಪಾಂಡೆ ಹಾಗೂ ರಾಜೇಂದ್ರ ಗುಪ್ತಾ ಭಾಗವಹಿಸಿದ್ದರು. ‘ಲಗಾನ್’ ಚಿತ್ರದಲ್ಲಿ ದೇವ್ ಸಿಂಗ್ ಸೋಧಿ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಪ್ರದೀಪ್ ರಾವತ್ ಅವರಿಗೆ ತಂಡವು ಅಂತಿಮ ನಮನ ಸಲ್ಲಿಸಿತು. ಆಮಿರ್ ಖಾನ್ ಅವರು ಪ್ರದೀಪ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಲ್ಮಾನ್ ಖಾನ್ ಕಂಬನಿ:

1990ರ ‘ಬಾಘಿ’ ಚಿತ್ರದಲ್ಲಿ ಪ್ರದೀಪ್ ರಾವತ್ ಅವರೊಂದಿಗೆ ನಟಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಳೆಯ ಫೋಟೋ ಹಂಚಿಕೊಂಡು, ‘ನಿಮ್ಮೊಂದಿಗೆ ಕಳೆದ ಅನೇಕ ಉತ್ತಮ ಕ್ಷಣಗಳು ನೆನಪಿನಲ್ಲಿವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ’ ಎಂದು ಕಂಬನಿ ಮಿಡಿದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರದೀಪ್ ರಾವತ್ ಅವರ ವ್ಯಕ್ತಿತ್ವದ ಗುಣಗಾನ ಮಾಡಿದ್ದಾರೆ.

ಪ್ರಮುಖ ನಟರ ಸಂತಾಪ:

ನಟ ಯಶ್‌ಪಾಲ್ ಶರ್ಮಾ ಅವರು ಪ್ರದೀಪ್ ರಾವತ್ ಅಗಲಿಕೆಗೆ ಕಂಬನಿ ಮಿಡಿದಿದ್ದು, ‘ನನ್ನ ಬಳಿ ಹೇಳಲು ಮಾತುಗಳೇ ಸಿಗುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರು ನಮ್ಮ ನೆನಪುಗಳಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ’ ಎಂದಿದ್ದಾರೆ. ಹಿರಿಯ ನಟ ಸುರೇಂದ್ರ ಪಾಲ್ ಮಾತನಾಡಿ, ‘ಪ್ರದೀಪ್ ನನಗೆ ಅತ್ಯಂತ ಆಪ್ತರಾಗಿದ್ದರು. ನಾವಿಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದೆವು. ಅವರು ಕೇವಲ ಅದ್ಭುತ ನಟನಷ್ಟೇ ಅಲ್ಲ, ಉತ್ತಮ ಮನುಷ್ಯರಾಗಿದ್ದರು’ ಎಂದು ಸ್ಮರಿಸಿದರು.

ಇದನ್ನೂ ಓದಿ: ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಕೂಡ ಸಂತಾಪ ಸೂಚಿಸಿದ್ದು, ತಮ್ಮ ‘ಸರ್ದಾರ್ ಗಬ್ಬರ್ ಸಿಂಗ್’ ಮತ್ತು ‘ಕಾಟಮರಾಯುಡು’ ಚಿತ್ರಗಳಲ್ಲಿ ಪ್ರದೀಪ್ ರಾವತ್ ಅವರು ವಹಿಸಿದ್ದ ಪ್ರಮುಖ ಪಾತ್ರಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರದೀಪ್ ರಾವತ್ ಅವರು ಪತ್ನಿ ಕಲ್ಯಾಣಿ ರಾವತ್ ಮತ್ತು ಮಗ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ. ‘ಮಹಾಭಾರತ’ ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಮನೆಮಾತಾಗಿದ್ದ ಅವರು, ‘ಸರ್ಫರೋಷ್’, ‘ಲಗಾನ್’, ‘ಸೈ’, ‘ನಾಯಕ್’ ಹಾಗೂ ಘಜಿನಿ’ಯಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಕದಿನ ವಿಶ್ವಕಪ್ 2027 ರ ಅರ್ಹತಾ ಪಂದ್ಯಗಳ ವೇಳಾಪಟ್ಟಿ ಪ್ರಕಟ – Kannada News | ICC 2027 Cricket World Cup: Qualification Dates, Hosts and New 14 Team Format

2027 ರ ಏಕದಿನ ವಿಶ್ವಕಪ್​ಗೆ ( 2027 World Cup) ಆಫ್ರಿಕಾ ಖಂಡದ ಮೂರು ದೇಶಗಳು ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಈ ಮೂರು ದೇಶಗಳ ಯಾವ್ಯಾವ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ ಎಂಬುದನ್ನು ಐಸಿಸಿ ಖಚಿತಪಡಿಸಿತ್ತು. ಇದೀಗ ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆಯಲಿರುವ ಅರ್ಹತಾ ಸುತ್ತಿನ ಬಗ್ಗೆ ಐಸಿಸಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಏಕದಿನ ವಿಶ್ವಕಪ್ 2027 ರ ಅರ್ಹತಾ ಸುತ್ತಿನ ಪಂದ್ಯಗಳು ಯಾವಾಗ ನಡೆಯಲಿವೆ ಎಂಬುದನ್ನು ಐಸಿಸಿ ಬಹಿರಂಗಪಡಿಸಿದೆ.

10 ತಂಡಗಳ ನಡುವೆ ಅರ್ಹತಾ ಸುತ್ತು

10 ತಂಡಗಳ ನಡುವೆ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳು ಫೆಬ್ರವರಿ 22 ರಿಂದ ಮಾರ್ಚ್ 23, 2027 ರವರೆಗೆ ನಡೆಯಲಿವೆ. ಪ್ರಸ್ತುತ ಐಸಿಸಿ, ಅರ್ಹತಾ ಸುತ್ತಿನ ದಿನಾಂಕವನ್ನು ಮಾತ್ರ ಬಹಿರಂಗಪಡಿಸಿದ್ದು, ಈ ಸುತ್ತು ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 10 ತಂಡಗಳ ನಡುವೆ ನಡೆಯಲಿರುವ ಈ ಅರ್ಹತಾ ಸುತ್ತಿನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಪಂದ್ಯಾವಳಿಗೆ ಅರ್ಹತೆ ಪಡೆಯುತ್ತವೆ.

2027 ರ ಏಕದಿನ ವಿಶ್ವಕಪ್ ಹೊಸ ಸ್ವರೂಪದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಲಿವೆ. ಇದರಲ್ಲಿ 8 ತಂಡಗಳು ಐಸಿಸಿ ಏಕದಿನ ರ್ಯಾಂಕಿಂಗ್ ಆಧಾರದ ಮೇಲೆ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿಕೊಂಡರೆ, ಉಳಿದ ಎರಡು ತಂಡಗಳು ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಆತಿಥೇಯ ರಾಷ್ಟ್ರಗಳಾಗಿ ನೇರ ಪ್ರವೇಶ ಪಡೆದುಕೊಳ್ಳಲಿವೆ. ಇನ್ನು ಅರ್ಹತಾ ಸುತ್ತಿನಿಂದ ಬಂದ 4 ತಂಡಗಳು ಈ 10 ತಂಡಗಳ ಜೊತೆಗೆ ಸೇರಿಕೊಳ್ಳಲಿವೆ.

ಸೂಪರ್ ಸಿರೀಸ್ ಪಂದ್ಯಗಳು

ಈ 14 ತಂಡಗಳ ಪೈಕಿ ಕೊನೆಯ 3 ಸ್ಥಾನಗಳನ್ನು ಅಂದರೆ 12, 13 ಮತ್ತು 14 ನೇ ಸ್ಥಾನ ಪಡೆಯುವ ತಂಡಗಳು ಮೊದಲ ಹಂತದಲ್ಲಿ ಸೂಪರ್ ಸಿರೀಸ್ ಪಂದ್ಯಗಳನ್ನು ಆಡಲಿವೆ. ಇದರಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡರೆ, ಉಳಿದೆರಡು ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಇದಾದ ಬಳಿಕ 12 ತಂಡಗಳ ನಡುವೆ ಏಕದಿನ ವಿಶ್ವಕಪ್ ಪಂದ್ಯಾವಳಿ ಶುರುವಾಗಲಿದೆ.

2027 ರ ಏಕದಿನ ವಿಶ್ವಕಪ್​ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ

3 ದೇಶಗಳಲ್ಲಿ ವಿಶ್ವಕಪ್

ಮೇಲೆ ಹೇಳಿದಂತೆ 2027 ರ ಏಕದಿನ ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆಯೋಜಿಸಲಿವೆ. ಎಲ್ಲಾ ಪಂದ್ಯಗಳು 12 ವಿಭಿನ್ನ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾ ಅತಿ ಹೆಚ್ಚು ಪಂದ್ಯಗಳನ್ನು ಅಂದರೆ 8 ಪಂದ್ಯಗಳನ್ನು ಆಯೋಜಿಸಲಿದೆ. ಉಳಿದ 3 ಪಂದ್ಯಗಳು ಜಿಂಬಾಬ್ವೆಯಲ್ಲಿ ಮತ್ತು ಒಂದು ಪಂದ್ಯ ನಮೀಬಿಯಾದಲ್ಲಿ ನಡೆಯಲಿದೆ. ವಿಶ್ವಕಪ್ ಅಕ್ಟೋಬರ್ 4, 2027 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ತಿಂಗಳ ಸಂಚು, 27 ಬಾರಿ ಇರಿತ; ಫರೀದಾಬಾದ್ ಶಿಕ್ಷಕಿಯ ಭೀಕರ ಕೊಲೆಯ ಹಿಂದಿನ ಸತ್ಯ ಬಯಲು – Kannada News | Stabbed 27 times 2 months of preperation Chilling details of Faridabad teacher Sandhya Sharmas murder

ಫರೀದಾಬಾದ್, ಆಗಸ್ಟ್ 5: ಹರಿಯಾಣದ ಫರೀದಾಬಾದ್‌ನಲ್ಲಿ ಸೋಮವಾರ ನಡೆದ 28 ವರ್ಷದ ಖಾಸಗಿ ಶಾಲಾ ಶಿಕ್ಷಕಿ ಸಂಧ್ಯಾ ಶರ್ಮಾ ಅವರ ಕೊಲೆಗೆ (Faridabad Teacher Killing) 2 ತಿಂಗಳುಗಳ ಮುಂಚಿತವಾಗಿಯೇ ಸಂಚು ರೂಪಿಸಲಾಗಿತ್ತು. ಈ ಕೃತ್ಯ ಎಸಗಲೆಂದೇ ಆರೋಪಿ ವಿಶೇಷವಾಗಿ ಚಾಕುವನ್ನು ಖರೀದಿಸಿದ್ದು, ದಾಳಿ ನಡೆಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ನಡೆದ ಈ ಕೃತ್ಯದಲ್ಲಿ ಸಂಧ್ಯಾ ಶರ್ಮಾ ಅವರ ಕುತ್ತಿಗೆ ಮತ್ತು ಎದೆಗೆ 27ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ಅಮಿತ್‌ ಸಂಧ್ಯಾಳ ಬಳಿ ಪ್ರೇಮನಿವೇನದಮೆ ಮಾಡಿಕೊಂಡಿದ್ದ. ಆದರೆ ಸಂಧ್ಯಾ ಅದನ್ನು ನಿರಾಕರಿಸಿದ್ದರು. ಈ ಹಿಂದೆ ಸಂಧ್ಯಾ ಆತನ ವಿರುದ್ಧ ಕಿರುಕುಳದ ದೂರು ಕೂಡ ನೀಡಿದ್ದರು. ಇದಾದ ಬಳಿಕ ಆರೋಪಿ ಅಮಿತ್ ಕ್ಷಮೆಯಾಚಿಸಿದ್ದ. ನಂತರ ಸಂಧ್ಯಾ ತಮ್ಮ ಶಾಲೆಯನ್ನು ಮತ್ತು ಮನೆಯನ್ನು ಬದಲಾಯಿಸಿದ್ದು, ಇದರಿಂದ ಆತ ತೀವ್ರ ಆಕ್ರೋಶಗೊಂಡಿದ್ದ. ಸೋಮವಾರ ಬೆಳಿಗ್ಗೆ ಸುಮಾರು 9.30ಕ್ಕೆ ಸಿಕ್ರೋನಾ ಗ್ರಾಮದ ಶಾಲೆಗೆ ಮಾಸ್ಕ್ ಧರಿಸಿ ಬಂದ ಅಮಿತ್, ಸಂಧ್ಯಾ ಅವರ ಪತಿಯ ಹೆಸರು ಹೇಳಿ ಅವರನ್ನು ತರಗತಿಯಿಂದ ಹೊರಗೆ ಕರೆಸಿಕೊಂಡಿದ್ದ. ಆಕೆ ಹೊರಗೆ ಬರುತ್ತಿದ್ದಂತೆ ಅವರ ಕೂದಲು ಹಿಡಿದು ಮೈತುಂಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಇದನ್ನೂ ಓದಿ: ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ!

ಚಾಕುವಿನ ದಾಳಿ ನಡೆದ 2 ಗಂಟೆಗಳ ಒಳಗಾಗಿ ಕೋಟ್ ಗ್ರಾಮದ ನಿವಾಸಿಯಾದ ಆರೋಪಿ ಅಮಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ನಗರದ ನ್ಯಾಯಾಲಯವು ಆತನನ್ನು ಮೂರು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಶಿಕ್ಷಕಿ ಸಂಧ್ಯಾ ಶಾಲೆಗೆ ಹೋಗುವಾಗ ಅಥವಾ ಹಿಂತಿರುಗುವಾಗ ದಾಳಿ ಮಾಡಲು ಮೊದಲು ಯೋಜಿಸಿದ್ದೆ. ಆದರೆ, ಸಿಕ್ಕಿಬೀಳುವ ಭಯದಿಂದ ಶಾಲೆಯ ಒಳಗೇ ಹೋಗಿ ದಾಳಿ ಮಾಡಲು ನಿರ್ಧರಿಸಿದ್ದಾಗಿ ತನಿಖೆಯ ವೇಳೆ ಆರೋಪಿ ಹೇಳಿದ್ದಾನೆ.

“ಆರೋಪಿ ಎಷ್ಟೊಂದು ಆಕ್ರೋಶದಲ್ಲಿದ್ದನೆಂದರೆ, ಚಾಕು ಬಾಗಿದ ಮೇಲೆಯೂ ದಾಳಿ ಮಾಡುವುದನ್ನು ಮುಂದುವರಿಸಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕೊಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ಬೈಕ್ ಮತ್ತು ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಯುತ್ತಿದೆ. ಈ ಕೊಲೆಯ ಸಂಪೂರ್ಣ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡೆಯಲು ಬಂದ ಶಾಲೆಯ ಸಿಬ್ಬಂದಿಗೂ ಹಂತಕ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಹೆಂಡತಿಯ ಕೊಲೆಯ ಬಗ್ಗೆ ಗಂಡ ಹೇಳಿದ್ದೇನು?:

ಈ ಘಟನೆಯ ಬಗ್ಗೆ ಸಂಧ್ಯಾ ಅವರ ಪತಿ ವಿಕಿ ಗುರ್ಜರ್ ಮಾತನಾಡಿ, ಸಂಧ್ಯಾ ಈ ಹಿಂದೆ ಸಿರೋಹಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ಅಮಿತ್ ಪರಿಚಯವಾಗಿದ್ದ ಎಂದು ತಿಳಿಸಿದ್ದಾರೆ. ಈ ಹಿಂದೆ ದೂರು ನೀಡಿದಾಗಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಈ ಕೊಲೆಯನ್ನು ತಡೆಯಬಹುದಿತ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ. “ನಾವು ದೂರು ನೀಡಿದಾಗಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ, ಸಂಧ್ಯಾ ಇಂದು ಜೀವಂತವಾಗಿರುತ್ತಿದ್ದಳು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಿರೋಜ್‌ಪುರ ಗ್ರಾಮದ ವಿಕಾಸ್ ಮತ್ತು ಸಂಧ್ಯಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 7 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೂನ್‌ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | Know how good it is to eat food with your hands?

ನಮ್ಮಲ್ಲಿ ಅನಾದಿ ಕಾಲದಿಂದಲೂ ಕೈಯಲ್ಲಿಯೇ ಆಹಾರ (food) ಸೇವಿಸುವ ಪದ್ಧತಿಯಿದೆ. ಆದರೆ ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ನಮ್ಮಲ್ಲಿ ಇಂದು ಅನೇಕರು ಕೈ ಬದಲು ಸ್ಪೂನ್‌, ಫೋರ್ಕ್‌ ಬಳಕೆ ಮಾಡುತ್ತಾರೆ. ಇನ್ನೂ ತಮಾಷೆಯ ವಿಷಯ ಏನಪ್ಪಾ ಅಂದ್ರೆ ಕೆಲವರು ಯಾರು ಏನೆನ್ನುತ್ತಾರೆ ಅನ್ನೋ ಕಾರಣಕ್ಕೆ ಕೈಯಲ್ಲಿ ಊಟ ಸವಿಯಲು ನಾಚಿಕೆ ಪಟ್ಟು, ಸ್ಟೈಲ್‌ ಆಗಿ ಸ್ಫೂನ್‌ ಬಳಸಿ ಊಟ ಸೇವಿಸುತ್ತಾರೆ.  ಆದ್ರೆ ಏನು ಗೊತ್ತಾ ಸ್ಪೂನ್‌ಗಿಂತ ಕೈಯಲ್ಲಿ ಆಹಾರ ಸೇವಿಸೋದು ಬೆಸ್ಟ್‌ ಅಂತೆ. ಏಕೆಂದರೆ ಇದು ಆಹಾರವನ್ನು ಆನಂದಿಸಲು ಅನುವು ಮಾಡಿಕೊಡುವುದಲ್ಲದೆ, ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಹಾಗಿದ್ದರೆ ಕೈಗಳಿಂದ ಆಹಾರವನ್ನು ಸೇವಿಸುವ ಅಭ್ಯಾಸದಿಂದ ದೊರಕುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಕೈಗಳಿಂದ ಆಹಾರ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು?

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಆಯುರ್ವೇದದ ಪ್ರಕಾರ, ನಿಮ್ಮ ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ದೇಹದ ಐದು ಅಂಶಗಳು (ಅಗ್ನಿ, ನೀರು, ಗಾಳಿ, ಭೂಮಿ ಮತ್ತು ಆಕಾಶ) ಸಮತೋಲನಗೊಳ್ಳುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ಕೈಗಳಿಂದ ಊಟ ಮಾಡುವ ಈ ಅಭ್ಯಾಸವು ನಿಧಾನವಾಗಿ ತಿನ್ನುವುದನ್ನು ಮತ್ತು ಉತ್ತಮವಾಗಿ ಅಗಿಯುವುದನ್ನು ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ: ಬೆರಳುಗಳಿಂದ ಆಹಾರವನ್ನು ಸ್ಪರ್ಶಿಸುವುದರಿಂದ ಮೆದುಳಿಗೆ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಸಂಕೇತಗಳು ರವಾನೆಯಾಗುತ್ತವೆ. ನಿಮ್ಮ ಕೈಗಳಿಂದ ತಿನ್ನುವುದರಿಂದ ಆಹಾರದ ಪ್ರಮಾಣ ಮತ್ತು ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು, ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ದೈಹಿಕ ಮತ್ತು ಮಾನಸಿಕ ಸಮತೋಲನ: ಆಯುರ್ವೇದದಲ್ಲಿ, ಕೈಗಳಿಂದ ತಿನ್ನುವುದು ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಏಕೆಂದರೆ ಬೆರಳುಗಳ ಸ್ಪರ್ಶವು ಮೆದುಳಿಗೆ ಸಂಕೇತ ನೀಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಆಹಾರದ ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೆದುಳು ಮತ್ತು ಆಹಾರದ ಸಂಪರ್ಕ:  ಕೈಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚುವುದಲ್ಲದೆ,  ಕೈಗಳಿಂದ ತಿನ್ನುವುದರಿಂದ ಮೆದುಳಿಗೆ ಆಹಾರದ ವಿನ್ಯಾಸ, ತಾಪಮಾನ ಮತ್ತು ನೋಟವನ್ನು ಚೆನ್ನಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಆಹಾರದ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುತ್ತದೆ, ಇದು ಮೆದುಳಿನ ಜೀರ್ಣಕಾರಿ ಸಂಕೇತಗಳನ್ನು ಸಕ್ರಿಯಗೊಳಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೂರ ಪ್ರಯಾಣ ಮಾಡುವಾಗ ವಾಂತಿ ಬರದಂತೆ ತಡೆಯಲು ಸಲಹೆಯನ್ನು ಪಾಲಿಸುವುದು ಉತ್ತಮ

ರಕ್ತ ಪರಿಚಲನೆ ಸುಧಾರಿಸುತ್ತದೆ: ಕೈಯಿಂದ ಊಟ ಮಾಡುವುದರಿಂದ ಕೈಗಳ ಸ್ನಾಯುಗಳಿಗೆ ವ್ಯಾಯಾಮವಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಲ್ಲದೆ, ಕೈಗಳ ಸರಾಗ ಚಲನೆಯು ರಕ್ತದ ಹರಿವನ್ನು ಹೆಚ್ಚು ಸರಾಗಗೊಳಿಸುತ್ತದೆ. ಅಲ್ಲದೆ ಕೈಗಳಿಂದ ಆಹಾರ ಸೇವಿಸುವಾಗ ಎಲ್ಲಾ ಬೆರಳುಗಳು ಮುದ್ರೆಯಾಕಾರ ಪಡೆಯುತ್ತದೆ. ಇದನ್ನು ರಮಣ ವಾಯು ಮುದ್ರೆ ಎಂದು ಕರೆಯುತ್ತಾರೆ. ಈ ಮುದ್ರೆ ದೇಹದಲ್ಲಿ ಕಾಣಿಸಿಕೊಳ್ಳುವ ಹಲವು ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ: ನಾವು ನಮ್ಮ ಕೈಗಳಿಂದ ಊಟ ಮಾಡಿದಾಗ, ನಮ್ಮ ಬಾಯಿ ಮತ್ತು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ನಮ್ಮನ್ನು ಆರೋಗ್ಯವಾಗಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version