ಬಿಕಿನಿ ಬ್ಲೌಸ್ ಜೊತೆ ಸೀರೆ ಧರಿಸಿದ ನಟಿ ಆಕಾಂಕ್ಷಾ ಪುರಿ; ವಿಡಿಯೋ ನೋಡಿ ಸಿಕ್ಕಾಪಟ್ಟೆ ಟ್ರೋಲ್

ಬಿಕಿನಿ ಬ್ಲೌಸ್ ಜೊತೆ ಸೀರೆ ಧರಿಸಿದ ನಟಿ ಆಕಾಂಕ್ಷಾ ಪುರಿ; ವಿಡಿಯೋ ನೋಡಿ ಸಿಕ್ಕಾಪಟ್ಟೆ ಟ್ರೋಲ್

ನೇರ ಮಾತು ಹಾಗೂ ಗ್ಲಾಮರಸ್ ಶೈಲಿಯಿಂದಲೇ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ, ಇತ್ತೀಚೆಗೆ ನಡೆದ ಫ್ಯಾಷನ್ ವೀಕ್​ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಸೀರೆಗೆ ಬಿಕಿನಿ (Bikini) ಬ್ಲೌಸ್ ಧರಿಸಿ ಮಿಂಚಿದ್ದ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆದವು. ಆಕಾಂಕ್ಷಾ ಪುರಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅವರ ಫ್ಯಾಷನ್ ಸೆನ್ಸ್ ಬಗ್ಗೆ ಕಿಡಿಕಾರಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಟೀಕೆಗಳು ವ್ಯಕ್ತವಾಗಿವೆ. ಅವುಗಳಿಗೆಲ್ಲ ಆಕಾಂಕ್ಷಾ ಪುರಿ (Akanksha Puri) ಅವರು ತಿರುಗೇಟು ನೀಡಿದ್ದಾರೆ.

ಖ್ಯಾತ ವಿನ್ಯಾಸಕ ರೋಹಿತ್ ವರ್ಮಾ ಅವರ ಶೋಗಾಗಿ ಆಕಾಂಕ್ಷಾ ಈ ವಿಶಿಷ್ಟ ಉಡುಪು ಧರಿಸಿದ್ದರು. ಮಹಾರಾಷ್ಟ್ರದ ಸಂಪ್ರದಾಯದ ಸಂಕೇತವಾಗಿರುವ ಪೈಠಣಿ ಸೀರೆಯನ್ನು ಬಿಕಿನಿ ಬ್ಲೌಸ್ ಜೊತೆ ಧರಿಸುವ ಮೂಲಕ ಅವರು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದರು.

ಟಿವಿ9 ಹಿಂದಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಆಕಾಂಕ್ಷಾ, ‘ನನಗೆ ಈ ಉಡುಪಿಗಾಗಿ ಸಾಕಷ್ಟು ಮೆಚ್ಚುಗೆಗಳು ಸಿಕ್ಕಿವೆ. ಹೊಗಳಿಕೆ ಇರುವಲ್ಲಿ ಟ್ರೋಲ್‌ಗಳು ಇರುವುದು ಸಹಜ. ನಾನು ನಕಾರಾತ್ಮಕ ವಿಚಾರಗಳಿಗಿಂತ ಸಕಾರಾತ್ಮಕತೆ ಮೇಲೆ ಹೆಚ್ಚು ಗಮನ ಹರಿಸುತ್ತೇನೆ’ ಎಂದು ಶಾಂತವಾಗಿಯೇ ಉತ್ತರಿಸಿದ್ದಾರೆ.

ಆಕಾಂಕ್ಷಾ ಪುರಿ ವೈರಲ್ ವಿಡಿಯೋ:

ಅಲ್ಲದೆ, ಈ ಉಡುಪಿನ ಆಯ್ಕೆಯ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇದು ಸಂಪೂರ್ಣವಾಗಿ ಡಿಸೈನರ್ ರೋಹಿತ್ ವರ್ಮಾ ಅವರ ಕಲ್ಪನೆಯಾಗಿತ್ತು. ರೋಹಿತ್ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಏನನ್ನಾದರೂ ವಿನ್ಯಾಸಗೊಳಿಸಿದರೆ ಅದರ ಹಿಂದೆ ಒಂದು ಉದ್ದೇಶವಿರುತ್ತದೆ. ಒಬ್ಬ ಕಲಾವಿದೆಯಾಗಿ ಅವರ ವಿನ್ಯಾಸವನ್ನು ಗೌರವಿಸುವುದು ಮತ್ತು ಅದನ್ನು ಆತ್ಮವಿಶ್ವಾಸದಿಂದ ತೊಡುವುದು ನನ್ನ ಕೆಲಸ’ ಎಂದು ಆಕಾಂಕ್ಷಾ ಹೇಳಿದ್ದಾರೆ.

ಇದನ್ನೂ ಓದಿ: ಬಿಕಿನಿ ಧರಿಸಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಮಹಿಳೆ, ವಿಡಿಯೋ ವೈರಲ್​​

ಸದ್ಯ ಆಕಾಂಕ್ಷಾ ಅವರು ಅಶ್ಮಿತ್ ಪಟೇಲ್ ಜೊತೆಗಿನ ‘ಸಾಡಿ ಫರ್ಮಾಯಿಶ್’ ಹಾಡಿನ ಮೂಲಕ ಗಮನ ಸೆಳೆಯುತ್ತಿದ್ದಾರೆ. 2023ರಲ್ಲಿ ಬಿಗ್ ಬಾಸ್ ಒಟಿಟಿ ಮೂಲಕವೂ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಎಷ್ಟೇ ಟ್ರೋಲ್ ಆದರೂ ತಮ್ಮ ಫ್ಯಾಷನ್ ಆಯ್ಕೆಗಳ ಬಗ್ಗೆ ಅವರು ಎಂದಿಗೂ ಹಿಂಜರಿದಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ನಿಮ್ಮ ಕಾರ್ಯನಿರತ ಜೀವನಶೈಲಿಯು ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎಂಬುದರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಏನು ತಿನ್ನುತ್ತೀರಿ ಎಂಬುದು ನಿಮ್ಮ ನಿದ್ರೆ (sleep) ಮತ್ತು ಸಾಮಾನ್ಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ನಿದ್ರಿಸುವುದರಲ್ಲಿ ತೊಂದರೆ ಅನುಭವಿಸುವುದರಿಂದ ಮರುದಿನ ಜಂಕ್ ಫುಡ್ ಮತ್ತು ಅನಾರೋಗ್ಯಕರ ತಿಂಡಿಗಳನ್ನು ತಿನ್ನುವ ಹಂಬಲ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಆದ್ದರಿಂದ, ಮಲಗುವ ಮುನ್ನ ನಿಮ್ಮ ಆಹಾರವನ್ನು ಎಚ್ಚರಿಕೆಯಿಂದ ಆರಿಸಿ ಏಕೆಂದರೆ ಅದು ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಎಂದಿಗೂ ತಿನ್ನಬಾರದ ಕೆಲವು ಆಹಾರಗಳನ್ನು ಇಲ್ಲಿ ನಾವು ಪಟ್ಟಿ ಮಾಡುತ್ತಿದ್ದೇವೆ. ಈ ಲೇಖನದಲ್ಲಿ, ಮಲಗುವ ಮುನ್ನ ನೀವು ತಿನ್ನಬಹುದಾದ ಆಹಾರಗಳ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ.

ಕೆಫೀನ್‌ ಪದಾರ್ಥಗಳು: ಹೆಚ್ಚು ಕೆಫೀನ್ ಸೇವಿಸುವುದರಿಂದ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ ಮತ್ತು ಸರಿಯಾಗಿ ನಿದ್ರೆ ಮಾಡುವುದನ್ನು ತಡೆಯಬಹುದು. ನಿಮಗೆ ಪೂರ್ಣ, ಆಳವಾದ ನಿದ್ರೆ ಸಿಗುವುದಿಲ್ಲ. ಅದಕ್ಕಾಗಿಯೇ ನೀವು ಊಟದ ಸಮಯದಲ್ಲಿ ಕಾಫಿ, ಎನರ್ಜಿ ಡ್ರಿಂಕ್ಸ್‌ ಮತ್ತು ಕೆಫೀನ್‌ ಅಧಿಕವಾಗಿರುವ ಚೋಕೊಲೇಟ್‌ಗಳನ್ನು ಸೇವನೆ ಮಾಡಬಾರದು.

ನೀರಿನಾಂಶವಿರುವ ಆಹಾರಗಳು: ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ, ಸೌತೆಕಾಯಿ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ರಾತ್ರಿ ಊಟದಲ್ಲಿ ಇವುಗಳನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ರಾತ್ರಿ ಪದೇ ಪದೇ ಮೂತ್ರ ವಿಸರ್ಜಿಸಬೇಕಾಗುತ್ತದೆ. ಇದು ನಿಮ್ಮ ನಿದ್ರೆಗೆ ಅಡ್ಡಿಪಡಿಸಬಹುದು.

ಮಸಾಲೆಯುಕ್ತ ಆಹಾರ: ರಾತ್ರಿಯಲ್ಲಿ ಮಸಾಲೆಯುಕ್ತ ಆಹಾರಗಳು ಅಥವಾ ಹುರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಬಿಸಿಯಾಗಬಹುದು. ಇದು ಆಮ್ಲೀಯತೆ, ಎದೆಯುರಿ ಮತ್ತು ಎದೆಯಲ್ಲಿ ಭಾರವಾದ ಭಾವನೆಗೆ ಕಾರಣವಾಗಬಹುದು. ಇವೆಲ್ಲವೂ ದೇಹವು ವಿಶ್ರಾಂತಿ ಪಡೆಯಲು ಕಷ್ಟವಾಗುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ.

ಚಾಕೊಲೇಟ್: ಚಾಕೊಲೇಟ್ ರುಚಿಕರವಾಗಿರುತ್ತದೆ, ಆದರೆ ಮಲಗುವ ಮುನ್ನ ಇದು ಒಳ್ಳೆಯ ಆಯ್ಕೆಯಲ್ಲ. ಇದರಲ್ಲಿ ಕೆಫೀನ್ ಮತ್ತು ಸಕ್ಕರೆ ಎರಡೂ ಇರುವುದರಿಂದ ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿದ್ರೆಯನ್ನು ತಡೆಯುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿ ಕೆಫೀನ್ ಇನ್ನೂ ಹೆಚ್ಚಾಗಿರುತ್ತದೆ.

ಸಕ್ಕರೆಯುಕ್ತ ಆಹಾರಗಳು: ರಾತ್ರಿಯಲ್ಲಿ ಸಕ್ಕರೆಯಂಶವಿರುವ ಕೇಕ್‌, ಪೇಸ್ಟ್ರೀ ಮತ್ತು ಸಿಹಿ ತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಅದಕ್ಕಾಗಿಯೇ ನೀವು ರಾತ್ರಿಯಲ್ಲಿ ಸಕ್ಕರೆಯಂಶವಿರುವ ಆಹಾರಗಳನ್ನು ಸೇವನೆ ಮಾಡಬಾರದು.

ಆಮ್ಲೀಯ ವಸ್ತುಗಳು: ನಿಂಬೆ, ಕಿತ್ತಳೆ, ಸಿಹಿ ಗೆಣಸು, ಬಿಳಿ ವೈನ್‌ ಮತ್ತು ಟೊಮೆಟೋದಂತಹ ಆಮ್ಲೀಯ ಆಹಾರಗಳನ್ನು ರಾತ್ರಿ ಸೇವನೆ ಮಾಡುವುದರಿಂದ ಎದೆಯುರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳು ಉಂಟಾಗಬಹುದು.  ಇದು ನಿದ್ರಾಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಸಹದ್ಯೋಗಿಗಳೊಂದಿಗೆ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡದಿದ್ದರೆಯೇ ಒಳ್ಳೆಯದು

ಕ್ರೂಸಿಫೆರಸ್‌ ತರಕಾರಿಗಳು: ಬ್ರೋಕೊಲಿ, ಎಲೆಕೋಸು, ಹೂಕೋಸುಗಳಂತಹ ಕ್ರೂಸಿಫೆರಸ್‌ ತರಕಾರಿಗಳು ಹೆಚ್ಚಿನ ಫೈಬರ್‌ ಅಂಶವನ್ನು ಹೊಂದಿರುತ್ತವೆ. ಅವು ಹೊಟ್ಟೆಯಲ್ಲಿ ಅನಿಲವನ್ನು ಉಂಟುಮಾಡಬಹುದು. ಅದು ನಿದ್ರೆ ಮಾಡಲು ಕಷ್ಟಕರವಾಗಬಹುದು, ಆದ್ದರಿಂದ ಅವುಗಳನ್ನು ರಾತ್ರಿ ಊಟದೊಂದಿಗೆ ತಿನ್ನುವುದನ್ನು ತಪ್ಪಿಸಿ.

ಭಾರವಾದ ಮತ್ತು ಹುರಿದ ಆಹಾರಗಳು: ರಾತ್ರಿಯಲ್ಲಿ ಪನೀರ್, ಚೋಲೆ-ಭಾತುರೆ, ಪಿಜ್ಜಾ, ಬರ್ಗರ್‌ಗಳು, ಡೀಪ್‌ ಫ್ರೈಡ್‌ ಆಹಾರಗಳು ಮತ್ತು ಮಟನ್‌, ಹಂದಿಮಾಂಸ   ಸೇವಿಸುವುದರಿಂದ ಹೊಟ್ಟೆಯಲ್ಲಿ ಭಾರವಾದ ಭಾವನೆ ಉಂಟಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವಿರುತ್ತದೆ. ಇವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿದ್ರೆಯ ಸಮಯದಲ್ಲಿಯೂ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುತ್ತಲೇ ಇರುತ್ತದೆ. ಇದು ಆಳವಾದ ನಿದ್ರೆಯನ್ನು ತಡೆಯುತ್ತದೆ.

ಮದ್ಯ: ಮದ್ಯಪಾನ ಮಾಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಬಹುದು. ಆದರೆ ಅದು ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ನೀವು ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಅಥವಾ ಬಾಯಾರಿಕೆಯಾಗಲು ಎಚ್ಚರಗೊಳ್ಳಬಹುದು. ಇದು ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು. ಆದ್ದರಿಂದ ರಾತ್ರಿಯಲ್ಲಿ ಮದ್ಯಪಾನ ಮಾಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐತಿಹಾಸಿಕ ಭೂತನಾಳ ಕೆರೆಯಲ್ಲಿ ಘೋರ ದುರಂತ: ಒಬ್ರನ್ನ ಹಿಡಿಯಲು ಹೋಗಿ ಮೂವರು ದುರಂತ ಸಾವು

ವಿಜಯಪುರ, ಏಪ್ರಿಲ್​ 08: ಕೆರೆಯಲ್ಲಿ ಮುಳುಗಿ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿರುವಂತಹ (death) ಘಟನೆ ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಡೆದಿದೆ. ಮೊಹಮ್ಮದ್ ಹಯಾತ್(12), ಹೈದರ್ ಪಾಷಾ(32) ಮತ್ತು ಅಬ್ದುಲ್ ಖುದ್ದೂಸ್(35) ಮೃತರು. ಸದ್ಯ ಕೆರೆಯಿಂದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಡೆದಿದ್ದೇನು?

ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.

ಇದನ್ನೂ ಓದಿ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು: ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು

ಬಾಲಕ ಮೊಹಮ್ಮದ್ ಹಯಾತ್ ಮತ್ತು ಹೈದರ್ ಕೆರೆಯಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಬ್ದುಲ್ ಖುದ್ದೂಸ್ ಸಾವನ್ನಪ್ಪಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯಾಗಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಕ್ಯಾಬ್ ಚಾಲಕರ ಸಾವು

ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ಕ್ಯಾಬ್ ಚಾಲಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಬೆಂಗಳೂರು ಮೂಲದ ಕಿಶೋರ್ ಹಾಗೂ ಗಿರೀಶ್ ಮೃತರು. ಕಿಶೋರ್ ಹಾಗೂ ಗಿರೀಶ್ ಸೇರಿದಂತೆ 8 ಜನ ಸ್ನೇಹಿತರು, ತಮ್ಮ ಎರಡು ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತ ಜಗದೀಶ ಮನೆಗೆ ಜಾತ್ರೆಗೆ ಬಂದಿದ್ದರು.

ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ: ಈಜಲು ಹೋದ ನಾಲ್ವರು ಜಲಸಮಾಧಿ

ಜಾತ್ರೆಗೆ ಬಂದದವರು, ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿವಿಕೆ ಮುಖ್ಯಸ್ಥ ವಿಜಯ್ ರೋಡ್ ಶೋಗೆ ಸಾಗರದಂತೆ ಸೇರಿದ ಜನ

ನೆಲ್ಲೈ, ಏಪ್ರಿಲ್ 8: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ತಮಿಳುನಾಡು ವಿಕ್ಟರಿ ಪಕ್ಷದ (ಟಿವಿಕೆ) ನಾಯಕ ವಿಜಯ್ (Vijay) ಪ್ರತಿ ಜಿಲ್ಲೆಯಲ್ಲಿಯೂ ಪ್ರಚಾರ ನಡೆಸುತ್ತಿದ್ದಾರೆ. ಇಂದು ಸುಮಾರು 11 ಕಿಲೋಮೀಟರ್‌ಗಳ ಕಾಲ ನಡೆದ ಚುನಾವಣಾ ರ್ಯಾಲಿಯಲ್ಲಿ ನಟ ವಿಜಯ್ ಅವರನ್ನು ದಾರಿಯುದ್ದಕ್ಕೂ ಸಾರ್ವಜನಿಕರು ಉತ್ಸಾಹದಿಂದ ಸ್ವಾಗತಿಸಿದರು. ವಿಜಯ್ ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ತಮಿಳುನಾಡು ವಿಕ್ಟರಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಅವರು ತಮ್ಮ ಪ್ರಚಾರವನ್ನು ಮುಂದುವರೆಸುತ್ತಿದ್ದಾರೆ.

ಇಂದು ನೆಲ್ಲೈನಲ್ಲಿ ಸಾರ್ವಜನಿಕ ಸಭೆಗೆ ಅನುಮತಿ ನೀಡಿದ ನಂತರ ವಿಜಯ್ ಅವರು ಚೆನ್ನೈನಿಂದ ಬೆಳಗಿನ ವಿಮಾನದ ಮೂಲಕ ತೂತುಕುಡಿ ವಿಮಾನ ನಿಲ್ದಾಣವನ್ನು ತಲುಪಿದರು. ನಂತರ ಅವರು ನೆಲ್ಲೈ ಜಿಲ್ಲೆಯ ಕೆ.ಟಿ.ಸಿ. ನಗರ ಪ್ರದೇಶದ ಪಳಯಂಕೊಟ್ಟೈನಲ್ಲಿರುವ ಪ್ರಚಾರ ಸ್ಥಳಕ್ಕೆ ರಸ್ತೆ ಮೂಲಕ ಹೋದರು. ತಲೈಯುತ್ತು, ಥಚನಲ್ಲೂರು, ವಾಷರ್ಮನ್‌ಪೇಟೆ ಮತ್ತು ಪಳಯಂಕೊಟ್ಟೈ ಮೂಲಕ ಸುಮಾರು 11 ಕಿಲೋಮೀಟರ್ ದೂರವನ್ನು ಕ್ರಮಿಸಿ ರೋಡ್ ಶೋ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಹಾರ, ನೀರಿಲ್ಲದೇ 4 ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ? ವನವಾಸವನ್ನ ಬಿಚ್ಚಿಟ್ಟ ಶರಣ್ಯಾ

ಕೊಡಗು, (ಏಪ್ರಿಲ್ 08): ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯಾ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿಯನ್ನು ಏಪ್ರಿಲ್ 05ರಂದು ಪತ್ತೆ ಮಾಡಿ ಕಾಡಿನಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ಇನ್ನು ದಟ್ಟಾರಣ್ಯದಲ್ಲಿ ಶರಣ್ಯಾ ದಾರಿ ತಪ್ಪಿದ್ದಿದ್ಹೇಗೆ? ಒಂದೇ ಬಾಟಲಿ ನೀರಿನಿಂದ ನಾಲ್ಕು ದಿನ ಬದುಕುಳಿದಿದ್ಹೆಗೆ? ನಾಲ್ಕು ದಿನದ ವನವಾಸವನ್ನು ಶರಣ್ಯಾ ಟಿವಿ9ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಯುವತಿ ಪತ್ತೆ: ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ

Source link

ಹೆಲ್ತಿಯಾಗಿ ಕಾಣುವ ಈ ಆಹಾರಗಳಲ್ಲಿ ಹಿಡನ್ ಸೋಡಿಯಂ ಇರಬಹುದು ಎಚ್ಚರ! ಬಿಪಿ ರೋಗಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ

ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಹೆಚ್ಚಿರುವ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವೆಂಬುದು ತಿಳಿದಿರುವ ವಿಚಾರ. ವಿಶೇಷವಾಗಿ ಹೈ ಬ್ಲಡ್ ಪ್ರೆಷರ್ (High Blood Pressure) ಸಮಸ್ಯೆ ಇರುವವರಿಗೆ ಉಪ್ಪು ಕಡಿಮೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ನಮಗೆ ಆರೋಗ್ಯಕರವಾಗಿ ಕಾಣುವ ಕೆಲವು ಆಹಾರಗಳಲ್ಲಿ ಕೂಡ ‘ಹಿಡನ್ ಸೋಡಿಯಂ’ ಇರುವುದರಿಂದ ಇದು ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಗಾದರೆ ಯಾವ ಆಹಾರಗಳಲ್ಲಿ ಈ ರೀತಿಯ ಹಿಡನ್ ಸೋಡಿಯಂ ಇರುತ್ತದೆ, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪಿನ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹಿಡನ್ ಸೋಡಿಯಂ ಎಂದರೇನು?

ಎಲ್ಲಾ ಉಪ್ಪಿನ ರುಚಿ ಇರುವ ಆಹಾರಗಳಲ್ಲಿ ಮಾತ್ರ ಸೋಡಿಯಂ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ. ನಾವು ದಿನನಿತ್ಯ ಸೇವಿಸುವ ಕೆಲವು ಆಹಾರಗಳಲ್ಲಿ ಉಪ್ಪಿನ ರುಚಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದಿದ್ದರೂ, ಅವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು “ಹಿಡನ್ ಸೋಡಿಯಂ” ಎಂದು ಕರೆಯಲಾಗುತ್ತದೆ. ಇದು ನಿಧಾನವಾಗಿ ದೇಹದಲ್ಲಿ ಜಮೆಯಾಗುತ್ತಾ ಬಿಪಿ ಮತ್ತು ಹೃದಯ ಸಂಬಂಧಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಜನರು ಬ್ರೆಡ್ ಅನ್ನು ಲಘು ಮತ್ತು ಆರೋಗ್ಯಕರ ಆಹಾರವೆಂದು ಭಾವಿಸುತ್ತಾರೆ. ಆದರೆ, ಒಂದು ಬ್ರೆಡ್ ಸ್ಲೈಸ್‌ನಲ್ಲೇ 150 ರಿಂದ 230 ಮಿಲಿಗ್ರಾಂ ಸೋಡಿಯಂ ಇರಬಹುದು. ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರೆಡ್ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ರೀತಿ, ಸಂಸ್ಕರಿಸಿದ ತಿಂಡಿಗಳಲ್ಲಿ ಉಪ್ಪು ಇರುತ್ತದೆ. ಇವು ಆರೋಗ್ಯಕರವೆಂದು ಭಾವಿಸಿ ಹೆಚ್ಚು ಸೇವಿಸುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ಯಾಕೆಟ್ ಮೇಲಿರುವ ಸೋಡಿಯಂ ಪ್ರಮಾಣವನ್ನು ಗಮನಿಸಿ ಆಹಾರವನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ.

ಇದನ್ನೂ ಓದಿ: ಬಿಪಿ ಇರುವವರು ಬೇಸಿಗೆಯಲ್ಲಿ ಈ ವಿಷಯಗಳನ್ನು ಅಪ್ಪಿತಪ್ಪಿಯೂ ಮರೆಯಬೇಡಿ!

ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪುನ್ನು ಸೇವಿಸಬೇಕು?

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಸೇವಿಸಬಾರದು. ಆದರೆ ಜನರು ಅರಿವಿಲ್ಲದೆ ಇದಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಿದ್ದಾರೆ. ಬ್ರೆಡ್, ಸೀರಿಯಲ್‌ಗಳಂತಹ ಆಹಾರಗಳಿಂದಲೇ ಹೆಚ್ಚುವರಿ ಉಪ್ಪು ದೇಹಕ್ಕೆ ಸೇರುತ್ತಿದೆ. ಈ ರೀತಿ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಬಿಪಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಿದರೆ ಅವರ ಆರೋಗ್ಯ ಇನ್ನಷ್ಟು ಹದಗೆಡಬಹುದು. ಹೆಲ್ತಿಯಾಗಿ ಕಾಣುವ ಆಹಾರಗಳಲ್ಲಿಯೂ ಹಿಡನ್ ಸೋಡಿಯಂ ಇರುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಸೇವಿಸುವಾಗ ಜಾಗ್ರತೆ ವಹಿಸಿ, ಲೇಬಲ್ ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಗತ್ಯ. ಇದು ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs GT: 600 ಸಿಕ್ಸರ್​ಗಳು..! ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಜೋಸ್ ಬಟ್ಲರ್

ಐಪಿಎಲ್ 2026 ರ 14 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಪರ ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್‌ ಮಾಡಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ 600 ಸಿಕ್ಸರ್​ಗಳ ಗಡಿಯನ್ನು ದಾಟಿದರು.

ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ 52 ರನ್​ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ, ಬಟ್ಲರ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ತಲುಪಿದರು. 192.59 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಬಟ್ಲರ್ ಮೂರು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಹೊಡೆದರು.

ಈ ಇನ್ನಿಂಗ್ಸ್‌ನಲ್ಲಿ, ಜೋಸ್ ಬಟ್ಲರ್ ಮತ್ತೊಂದು ಪ್ರಮುಖ ದಾಖಲೆಯನ್ನು ಸೃಷ್ಟಿಸಿದರು. ಈ ಪಂದ್ಯದಲ್ಲಿ 5 ಸಿಕ್ಸರ್​ಗಳನ್ನು ಬಾರಿಸಿದ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 600 ಸಿಕ್ಸರ್‌ಗಳ ಗಡಿ ದಾಟಿದರು. ಈ ಸಾಧನೆಯೊಂದಿಗೆ, ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ತಲುಪಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ಮುಗಿದ ಖುಷಿಯಲ್ಲಿ ಪಾರ್ಟಿ ಮಾಡಲು ಹೋಗಿ ಹೆಣವಾದ ಕಾಲೇಜು ವಿದ್ಯಾರ್ಥಿ

ನೊಯ್ಡಾ, ಏಪ್ರಿಲ್ 8: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆತನ ಮೂವರು ಸ್ನೇಹಿತರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ಹರ್ಷಿತ್ ಭಟ್ ಎಂದು ಗುರುತಿಸಲಾಗಿದೆ.

ನೊಯ್ಡಾದ ಅಮಿಟಿ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ನಂತರ ಪಾರ್ಟಿಗಾಗಿ ಸೂಪರ್‌ನೋವಾ ಬಳಿಯ ನಿರ್ಜನ ಜಾಗಕ್ಕೆ ಹೋಗಿದ್ದರು. ಆಗ ಜಮೀನಿನಲ್ಲಿ ಹರ್ಷಿತ್ ಸ್ನಾನ ಮಾಡಲು ನೀರು ತುಂಬಿದ ಹೊಂಡದ ಬಳಿ ಹೋದ. ಆಗ ಇದ್ದಕ್ಕಿದ್ದಂತೆ ಆಳವಾದ ನೀರಿಗೆ ಜಾರಿ ಆತ ಮುಳುಗಲು ಪ್ರಾರಂಭಿಸಿದ. ಆತನನ್ನು ಉಳಿಸಲು ಇತರ ಮೂವರು ಸ್ನೇಹಿತರು ಸಹ ನೀರಿಗೆ ಇಳಿದರು.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ಅವರೆಲ್ಲರೂ ಜೋರಾಗಿ ಕಿರುಚಾಡಿದ್ದರಿಂದ ಅಕ್ಕಪಕ್ಕದ ಜಮೀನಿನವರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳೀಯ ಡೈವರ್‌ಗಳೊಂದಿಗೆ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗ್ನಿಶಾಮಕ ಇಲಾಖೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ಬಹು ಸಂಸ್ಥೆಗಳ ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಯಿತು. ಹರ್ಷಿತ್ ಭಟ್​ನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಕೊಲೆ ಮಾಡಿದ್ದು ಹೇಗೆ ಗೊತ್ತಾ?

ಆತನನ್ನು ಉಳಿಸುವ ಪ್ರಯತ್ನದಲ್ಲಿ ನೀರಿಗೆ ಇಳಿದಿದ್ದ ಮೂವರು ಸ್ನೇಹಿತರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ. ಈ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಶಾಂತಿ ಸದಾ ಉಳಿಯಲಿ ಎಂಬುದು ನಮ್ಮ ಆಶಯ, ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ

ನವದೆಹಲಿ, ಏಪ್ರಿಲ್ 08:ಅಮೆರಿಕ-ಇಸ್ರೇಲ್(Israel) ಮತ್ತು ಅಮೆರಿಕದ ನಡುವಿನ ಕದನ ವಿರಾಮದ ಕುರಿತು ಭಾರತ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ನಾವು ಕದನ ವಿರಾಮವನ್ನು ಸ್ವಾಗತಿಸುತ್ತೇವೆ ಮತ್ತು ಅದು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುತ್ತದೆ ಎಂದು ಆಶಿಸುತ್ತೇವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ನಾವು ಹಿಂದೆ ಪದೇ ಪದೇ ಹೇಳಿದಂತೆ, ನಡೆಯುತ್ತಿರುವ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಉದ್ವಿಗ್ನತೆಯನ್ನು ಕಡಿಮೆ ಮಾಡುವುದು, ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ಸಚಿವಾಲಯ ಹೇಳಿದೆ.

ಈ ಸಂಘರ್ಷ ಈಗಾಗಲೇ ಜನರಿಗೆ ಅಪಾರ ನೋವನ್ನುಂಟು ಮಾಡಿದೆ ಮತ್ತು ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳಿಗೆ ಅಡ್ಡಿಪಡಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಂಚಾರ ಮೊದಲಿನಂತೆಯೇ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ ಎಂದು ಭಾವಿಸಿದ್ದೇವೆ ಎಂದು ತಿಳಿಸಲಾಗಿದೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದಿಂದ ಮಧ್ಯಪ್ರಾಚ್ಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದ ಹೋರಾಟ ನಿಂತಿದೆ. ಇರಾನ್ ಐತಿಹಾಸಿಕ ವಿಜಯ ಸಾಧಿಸಿದೆ. ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆ ದಾಳಿಗಳಿಂದ ಹಿಂದೆ ಸರಿದು ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಇರಾನ್ ಈ ಹೇಳಿಕೆ ನೀಡಿದೆ.  ಟೆಹ್ರಾನ್ 10 ಅಂಶಗಳ ಪ್ರಸ್ತಾವನೆಯನ್ನು ಸಹ ಮಂಡಿಸಿದೆ, ಅದನ್ನು ಅಮೆರಿಕ ಅದನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ.

ಮತ್ತಷ್ಟು ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಗುಪ್ತಚರ ಮುಖ್ಯಸ್ಥ ಮಜೀದ್ ಸಾವು, ಇರಾನ್​​ಗೆ ದೊಡ್ಡ ಹಿನ್ನಡೆ

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರು ತಕ್ಷಣ ದೇಶವನ್ನು ತೊರೆಯುವಂತೆ ಸೂಚಿಸಿದೆ. ಇದಕ್ಕೂ ಮೊದಲು, ಏಪ್ರಿಲ್ 7 ರಂದು ಹೊರಡಿಸಲಾದ ಹಿಂದಿನ ಸಲಹೆಯಲ್ಲಿ, ಜನರು ಜಾಗರೂಕರಾಗಿರಿ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚಿಸಲಾಗಿತ್ತು.

ಭಾರತೀಯ ನಾಗರಿಕರು ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಅವರು ಸೂಚಿಸಿದ ಸುರಕ್ಷಿತ ಮಾರ್ಗಗಳ ಮೂಲಕ ಮಾತ್ರ ಇರಾನ್‌ನಿಂದ ಹೊರಡಬೇಕು ಎಂದು ರಾಯಭಾರ ಕಚೇರಿ ಹೇಳಿದೆ. ಯಾವುದೇ ಭಾರತೀಯ ನಾಗರಿಕರು ಪೂರ್ವ ಸಮಾಲೋಚನೆ ಇಲ್ಲದೆ ಯಾವುದೇ ಅಂತಾರಾಷ್ಟ್ರೀಯ ಗಡಿಯನ್ನು ದಾಟಲು ಪ್ರಯತ್ನಿಸಬಾರದು ಎಂದು ರಾಯಭಾರ ಕಚೇರಿ ಕಟ್ಟುನಿಟ್ಟಾಗಿ ಸೂಚಿಸಿದೆ. ಯಾವುದೇ ಗಡಿಯನ್ನು ದಾಟುವ ಮೊದಲು ರಾಯಭಾರ ಕಚೇರಿ ಸಂಪರ್ಕಿಸುವುದು ಒಳಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆ ಮನವಿ

ತುಮಕೂರು, (ಏಪ್ರಿಲ್ 08): ನಿವೇಶನ ಮಂಜೂರಾಗಿದ್ದರೂ ಸಹ ಹಕ್ಕುಪತ್ರ ನೀಡದ್ದಕ್ಕೆ ಮಹಿಳೆಯೋರ್ವಳು ಜಿಲ್ಲಾ ಉಸ್ತುವಾರಿ ಸಚಿವರ ಜನ ಸ್ಪಂದನಾ ಕಾರ್ಯಕ್ರಮದ ವೇದಿಕೆ ಮೇಲೆ ದಯಾಮರಣ ಕೋರಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಹಕ್ಕುಪತ್ರ ನೀಡದ್ದಕ್ಕೆ ವೇದಿಕೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಿರಾದ ರಾಬಿಯಾ ಅಸ್ಲಾಂ ಪಾಷ ಎಂಬ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾಳೆ. ಸಚಿವರು, ಡಿಸಿಗೆ , ಡಿಸಿ ಕಮಿಷನರ್ ಕಡೆಗೆ ಕಳುಹಿಸುತ್ತಾರೆ. ಹೀಗೆ 15 ದಿನಕ್ಕೊಮ್ಮೆ ಅಲೆದಾಡುತ್ತಿದ್ದೇನೆ. ಜನಸಂಪರ್ಕ ಸಭೆಯಲ್ಲಿ ಸ್ಪಂದನೆಯಿಲ್ಲ. ಹಕ್ಕುಪತ್ರಕ್ಕೆ 25 ಸಾವಿರ ರೂ ಕೇಳುತ್ತಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ.

ಇನ್ನು ಇದೇ ವೇಳೆ ಮಹಿಳೆ ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದ್ದಾಳೆ. ಬಾರಯ್ಯ ಸಿದ್ದಯ್ಯ, ಬಾರಯ್ಯ ರಾಮಯ್ಯ ನಮ್ಮ ಮನವಿ ಆಲಿಸಯ್ಯಾ. ಗೃಹಲಕ್ಷ್ಮಿ ಬೇಡಯ್ಯ ಗೃಹವನ್ನ ನೀಡಯ್ಯ ಎಂದು ಹಾಡಿನ ಮೂಲಕ ಸಿಎಂ ಸಿದ್ದರಾಮಯ್ಯಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾಳೆ. ಅಲ್ಲದೇ 2024ರಲ್ಲಿ ಸಿಎಂ ಸಿದ್ದರಾಮಯ್ಯನವರು ತುಮಕೂರಿಗೆ ಬಂದಿದ್ದ ವೆಳೆ ಇದೇ ಮಹಿಳೆಗೆ 20/30ಜಾಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ ಈವರೆಗೂ ಆ ಜಾಗ ಹೇಳಿಲ್ಲ. ಹಕ್ಕು ಪತ್ರ ನೀಡಿಲ್ಲ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version