Headlines

ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್ – Kannada News | Cabinet Expansion Row: Gubbi MLA SR Srinivas U turn after DK Shivakumar Call

ತುಮಕೂರು, (ಆಗಸ್ಟ್ 05): ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರು ಬೇಸರಗೊಂಡಿದ್ದು, ಪಕ್ಷದ ನಡೆಗೆ ಆಕ್ರೋಶಗೊಂಡಿದ್ದಾರೆ. ಈ ಸಾಲಿನಲ್ಲಿ ಗುಬ್ಬಿ ಶಾಸಕ ಎಸ್​​ಆರ್ ಶ್ರೀನಿವಾಸ್ ಸಹ ಒಬ್ಬರಾಗಿದ್ದು, ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಎಸ್​​​ಆರ್​​​​ಟಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಶ್ರೀನಿವಾಸ್ ಅವರಿಗೆ ಕರೆ ಮಾಡಿ ಮನವೊಲಿಸಿದ್ದು, ಇದೀಗ ಶ್ರೀನಿವಾಸ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೌದು…ಸಿಎಂ ಡಿಕೆ…

Read More

ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್ – Kannada News | How Pradeep Rawat Chose Aamir Khan Over Salman Khan for Historic Ghajini Remake

‘ಘಜಿನಿ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚಿತ್ರ. ಇದು 100 ಕೋಟಿ ರೂಪಾಯಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾದ ಯಶಸ್ಸಿನ ಹಿಂದೆ ಹಿರಿಯ ನಟ ದಿವಂಗತ ಪ್ರದೀಪ್ ರಾವತ್ ಅವರ ಬಹುಮುಖ್ಯ ಪಾತ್ರವಿತ್ತು. ಅವರ ನಿರ್ಧಾರವೇ ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲು ಕಾರಣವಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು. ಈ ಸಂದರ್ಭದಲ್ಲಿ ‘ಘಜಿನಿ ಸಿನಿಮಾ ದಿನಗಳನ್ನು…

Read More

ಹೆಚ್​ಕೆ ಪಾಟೀಲ್​ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ-ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ – Kannada News | Karnataka Cabinet Expansion: 22 Gadag Councillors Resign in Support of HK Patil

ಎಚ್.ಕೆ. ಪಾಟೀಲ್Image Credit source: HK Patil facebook page ಗದಗ, ಆಗಸ್ಟ್ 5: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ್ (HK Patil) ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗದಗ-ಬೆಟಗೇರಿ (Gadag) ನಗರಸಭೆಯ 22 ಕಾಂಗ್ರೆಸ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ….

Read More

‘ಕೈ’ ಮನೆಯಲ್ಲಿ ತಾರಕಕ್ಕೇರಿದ ಅಸಮಾಧಾನ: ವಿಪಕ್ಷದ ಸಾಲಿನಲ್ಲಿ ಆಸನ ಕೇಳಲು ಮುಂದಾದ ಜಯಚಂದ್ರ, ಹೆಚ್​ಡಿಕೆ ನಡೆ ಸ್ಮರಿಸಿದ ಎಸ್​ಆರ್ ಶ್ರೀನಿವಾಸ್​ – Kannada News | Karnataka Congress Rift Deepens:TB Jayachandra Demands Opposition Seat; SR Srinivas Hails HD Kumaraswamy

ಟಿ.ಬಿ.ಜಯಚಂದ್ರ ಮತ್ತು ಎಸ್​​.ಆರ್​​. ಶ್ರೀನಿವಾಸ್​​Image Credit source: SR Srinivas Facebook ಬೆಂಗಳೂರು, ಆಗಸ್ಟ್​​ 05: ಸಚಿವ ಸಂಪುಟ ವಿಸ್ತರಣೆ ಬಳಿಕ ಮಂತ್ರಿಸ್ಥಾನ ವಂಚಿತ ಆಕಾಂಕ್ಷಿ ಶಾಸಕರ ಅಸಮಾಧಾನ ಕಾಂಗ್ರೆಸ್​​​ನಲ್ಲಿ ತಾರಕಕ್ಕೇರಿದೆ. ಪಕ್ಷದ ವರಿಷ್ಠರ ಮನವೊಲಿಕೆ ಯತ್ನದ ಹೊರತಾಗಿಯೂ ಹಲವು ಶಾಸಕರು ಆಕ್ರೋಶ ಮುಂದುವರಿಸಿರೋದು ಪಕ್ಷಕ್ಕೀಗ ತಲೆನೋವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನಿತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​​ ಸಿಂಗ್​​ ಸುರ್ಜೆವಾಲಾ ಹೊರಟಿದ್ದು, ಅಸಮಾಧಾನಿತ ಶಾಕರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಲಿದ್ದಾರೆ…

Read More

ಸಖತ್ ತರ್ಲೆ, ಸಲ್ಮಾನ್ ಖಾನ್ ‘ಕವಿತೆ’ಗಳ ಬುಕ್ ಪ್ರಿಂಟ್ ಹಾಕಿಸಿದ ಜೆನ್ ಜಿಗಳು – Kannada News | ‘Bhai Ke Dohe’, the collection of the Salman Khan’s tweets

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಭಿನ್ನ ವ್ಯಕ್ತಿತ್ವದ, ಸಾಕಷ್ಟು ವಿವಾದಗಳನ್ನೂ ಹೊಂದಿರುವ ಆದರೆ ಅಷ್ಟೆ ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿರುವ ನಟ. ಟ್ರೋಲಿಗರಿಗಂತೂ ಬಲು ಪ್ರಿಯ ಸೆಲೆಬ್ರಿಟಿ ಸಲ್ಮಾನ್ ಖಾನ್. ಇತ್ತೀಚೆಗೆ ಜೆನ್ ಜಿಗಳ ಪ್ರತಿಭಟನೆಗೆ ಸಹ ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು, ಅಲ್ಲದೆ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸುವಂತೆ, ಸೋನಂ ವಾಂಕ್ಚುಕ್ ಉಪವಾಸ ನಿಲ್ಲಿಸುವಂತೆ ಟ್ವೀಟ್ ಸಹ ಮಾಡಿದ್ದರು. ಇತರೆ ಸೆಲೆಬ್ರಿಟಿಗಳಂತೆ ‘ಪೊಲಿಟಿಕಲಿ ಕರೆಕ್ಟ್’ ಆದ ಟ್ವೀಟ್​​ಗಳನ್ನು ಸಲ್ಮಾನ್ ಖಾನ್ ಮಾಡುವುದಿಲ್ಲ,…

Read More

ಟೀಮ್ ಇಂಡಿಯಾದ ಬೆಸ್ಟ್ ಕೋಚ್ ಯಾರೆಂದು ತಿಳಿಸಿದ ಶಮಿ – Kannada News | Not Dravid or Gambhir! Shami Picks Shastri as Best Coach

ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಹೆಡ್ ಕೋಚ್ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ದ್ರಾವಿಡ್ ಅಥವಾ ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ಬದಲಿಗೆ, ರವಿಶಾಸ್ತ್ರಿ ಅವರನ್ನು ತಮ್ಮ ಸಾರ್ವಕಾಲಿಕ ನೆಚ್ಚಿನ ಕೋಚ್ ಎಂದು ಹೆಸರಿಸಿದ್ದಾರೆ. ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಅವರಲ್ಲಿ ಯಾರು ಅತ್ಯುತ್ತಮ ಕೋಚ್ ಎಂಬ ಆಯ್ಕೆಯನ್ನು ಶಮಿ ಅವರಿಗೆ ನೀಡಲಾಗಿತ್ತು. ಇವರಲ್ಲಿ ಶಮಿ ಅವರ…

Read More

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಮೇಲೆ ನೂತನ ಸಚಿವರ ಕಣ್ಣು: ಸಮಾಜ ಕಲ್ಯಾಣ ಇಲಾಖೆಗಾಗಿ ಭಾರಿ ಪೈಪೋಟಿ – Kannada News | Karnataka Cabinet Expansion: New Ministers Compete for Key Portfolios, Social Welfare Department in High Demand

ಬೆಂಗಳೂರು, ಆಗಸ್ಟ್​ 05: ಸಂಪುಟ ವಿಸ್ತರಣೆಯಾದ ಎರಡು ದಿನಗಳ ನಂತರವೂ ಕರ್ನಾಟಕದಲ್ಲಿ ಖಾತೆ ಹಂಚಿಕೆ ಅಂತಿಮವಾಗಿಲ್ಲ. ಸಚಿವರು ಪ್ರಬಲ ಖಾತೆಗಳಿಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ವಿಶೇಷವಾಗಿ, ಸಮಾಜ ಕಲ್ಯಾಣ ಇಲಾಖೆಯ ಮೇಲೆ ಹಲವು ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ಹಾಲಿ ಖಾತೆಯನ್ನು ಬದಲಿಸಿ ಸಮಾಜ ಕಲ್ಯಾಣ ಇಲಾಖೆಯನ್ನು ಪಡೆಯಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಇದೇ ಖಾತೆಗೆ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಮಾಜಿ ಸಚಿವರಾದ ಶಿವರಾಜ್ ತಂಗಡಗಿ…

Read More

ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ! – Kannada News | Tamil Nadu Budget 2026: Government Hospital Newborns to Get 1 Gram Gold Ring

ಚೆನ್ನೈ, ಆಗಸ್ಟ್ 5: ತಮಿಳುನಾಡು ಟಿವಿಕೆ ಸರ್ಕಾರದ 2026ರ ಬಜೆಟ್ ಅನ್ನು ಹಣಕಾಸು ಸಚಿವ ಮಾರಿ ವಿಲ್ಸನ್ ಮಂಡಿಸಿದ್ದಾರೆ. ಇದು ಅವರ ಮೊದಲ ಆಯವ್ಯಯ ಮಂಡನೆಯಾಗಿದ್ದು, ಮಹಿಳೆಯರು ಹಾಗೂ ಯುವಜನತೆಗೆ ಗಮನಾರ್ಹ ಕೊಡುಗೆಗಳನ್ನು ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಘೋಷಿಸಲಾದ ಪ್ರಮುಖ ಯೋಜನೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಒಂದು ಗ್ರಾಂ ಚಿನ್ನದ ಉಂಗುರವನ್ನು ನೀಡುವ ಯೋಜನೆಯು ಸೇರಿದೆ. ಇದು ನವಜಾತ ಶಿಶುಗಳ ಕುಟುಂಬಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಇದಲ್ಲದೆ, ಮದುವೆಯಾಗುವ ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಲಾಗಿದೆ….

Read More

Tulunada Aati: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಕರಾವಳಿಯ ವೈಭವ; ಆ 09 ರಂದು ಬೃಹತ್ ‘ತುಳುನಾಡ ಆಟಿ’ ಉತ್ಸವ – Kannada News | Grand ‘Tulunada Aati’ Cultural Fest to Be Held in Bengaluru on August 9

ಕರಾವಳಿಯ ವಿಶಿಷ್ಟ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಗಳನ್ನು ರಾಜಧಾನಿ ಬೆಂಗಳೂರಿನ ಜನಮಾನಸಕ್ಕೆ ಪರಿಚಯಿಸುವ ಸದುದ್ದೇಶದಿಂದ ‘ಜೈ ತುಳುನಾಡ್ ಬೆಂಗಳೂರು (ರಿ.)’ ಸಂಸ್ಥೆಯು ಬೃಹತ್ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದೆ. ಬರುವ ಆಗಸ್ಟ್ 09, 2026 ರಂದು ಬೆಂಗಳೂರಿನ ಬಿಳೇಕಹಳ್ಳಿ ವಿಜಯ ಬ್ಯಾಂಕ್ ಕಾಲೋನಿಯಲ್ಲಿರುವ ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಂಗಣದಲ್ಲಿ ‘ತುಳುನಾಡ ಆಟಿ’ ಸಂಭ್ರಮವು ಅತ್ಯಂತ ವೈಭವದಿಂದ ಜರುಗಲಿದೆ. ತುಳುನಾಡಿನ ಮಣ್ಣಿನ ಸೊಗಡನ್ನು ಬಿಂಬಿಸುವ ಈ ಐತಿಹಾಸಿಕ ವೇದಿಕೆಯಲ್ಲಿ ಸುಮಾರು 10,000ಕ್ಕೂ ಅಧಿಕ ತುಳುನಾಡು ಮತ್ತು ಕರಾವಳಿ ಸಂಸ್ಕೃತಿ…

Read More

31 ಸಿಕ್ಸ್​, 445 ರನ್​ಗಳು: ದಿ ಹಂಡ್ರೆಡ್​ ಲೀಗ್​ನಲ್ಲಿ ಭರ್ಜರಿ ದಾಖಲೆ – Kannada News | Sunrisers Leeds Smash Record 241 in The Hundred

ಹೆಡಿಂಗ್ಲೇ ಮೈದಾನದಲ್ಲಿ ನಡೆದ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರನ್ ಹಾಗೂ ಸಿಕ್ಸರ್‌ಗಳ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಲಂಡನ್ ಸ್ಪಿರಿಟ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಅಬ್ಬರಿಸಿದ ಸನ್‌ರೈಸರ್ಸ್ ಲೀಡ್ಸ್ ತಂಡವು 100 ಎಸೆತಗಳಲ್ಲಿ ಬರೋಬ್ಬರಿ 241 ರನ್ ಪೇರಿಸಿದೆ. ಈ ಮೂಲಕ ದಿ ಹಂಡ್ರೆಡ್ ಲೀಗ್​ ಟೂರ್ನಿಯ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಟೀಮ್ ಸ್ಕೋರ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಡನ್ ಸ್ಪಿರಿಟ್ ತಂಡದ ನಾಯಕ ಲಿಯಾಮ್ ಲಿವಿಂಗ್​ಸ್ಟೋನ್ ಬೌಲಿಂಗ್ ಆಯ್ದುಕೊಂಡಿದ್ದರು….

Read More