ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ! – Kannada News | Australia To Skip Practice Match For BGT 2027 In India

ಭಾರತದ ನೆಲದಲ್ಲಿ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಿನ್ನವಾದ ಹಾದಿ ತುಳಿಯಲು ಸಜ್ಜಾಗಿದೆ. ಭಾರತದ ಸ್ಥಳೀಯ ತಂಡಗಳ ವಿರುದ್ಧ ಯಾವುದೇ ಸಾಂಪ್ರದಾಯಿಕ ಅಭ್ಯಾಸ ಪಂದ್ಯಗಳನ್ನು ಆಡದೆ, ನೇರವಾಗಿ ಸರಣಿ ಆರಂಭಿಸಲು ಆಸ್ಟ್ರೇಲಿಯಾ ಪಡೆ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.

ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್, ಭಾರತದ ವಿರುದ್ಧದ ಸರಣಿಗೂ ಮುನ್ನ ನಾವು ಯಾವುದೇ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡುವುದಿಲ್ಲ. ಬದಲಿಗೆ ನಮ್ಮದೇ ಶಿಬಿರವನ್ನು ಆಯೋಜಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಅಭ್ಯಾಸ ಪಂದ್ಯವಾಡದಿರಲು ಕಾರಣವೇನು?

ಸ್ಥಳೀಯ ಪಿಚ್‌ಗಳಲ್ಲಿ ನೆಪಮಾತ್ರಕ್ಕೆ ಅಭ್ಯಾಸ ಪಂದ್ಯ ಆಡುವುದಕ್ಕಿಂತ, ನಿರ್ದಿಷ್ಟವಾಗಿ ಸಿದ್ಧಪಡಿಸಲಾದ ವಿಶೇಷ ತರಬೇತಿ ಶಿಬಿರ ಹೆಚ್ಚು ಪ್ರಯೋಜನಕಾರಿ ಎಂದು ಆಸ್ಟ್ರೇಲಿಯಾ ಮ್ಯಾನೇಜ್‌ಮೆಂಟ್ ನಂಬಿದೆ.

ಭಾರತದ ಪಿಚ್‌ಗಳ ಸ್ಪಿನ್ ತಂತ್ರವನ್ನು ಎದುರಿಸಲು ಸೆಂಟರ್-ವಿಕೆಟ್ ಸಿಮ್ಯುಲೇಶನ್ (ಕೃತಕವಾಗಿ ಸ್ಪಿನ್ ಪಿಚ್ ನಿರ್ಮಿಸಿ ಅಭ್ಯಾಸ ಮಾಡುವುದು) ಅತ್ಯುತ್ತಮ ಮಾರ್ಗ ಎಂಬುದು ಕ್ರಿಕೆಟ್ ಆಸ್ಟ್ರೇಲಿಯಾದ ಅಭಿಪ್ರಾಯವಾಗಿದೆ.

ಈ ಹಿಂದಿನ ಮಾಸ್ಟರ್ ಪ್ಲ್ಯಾನ್:

ಆಸ್ಟ್ರೇಲಿಯಾ ತಂಡವು ಈ ಹಿಂದೆ ಕೂಡ ಅಭ್ಯಾಸ ಪಂದ್ಯವಾಡದೇ ಸರಣಿಯಲ್ಲಿ ನೇರವಾಗಿ ಕಣಕ್ಕಿಳಿದಿತ್ತು. ಈ ವೇಳೆಯೂ ತಮ್ಮದೇ ಶಿಬಿರ ಆಯೋಜಿಸಿ ಅಭ್ಯಾಸ ನಡೆಸಿದ್ದರು.

  • 2023ರ ಭಾರತ ಪ್ರವಾಸ: ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ಮತ್ತು ನಾರ್ತ್ ಸಿಡ್ನಿ ಓವಲ್‌ನಲ್ಲಿ ಕೃತಕ ಸ್ಪಿನ್ ಪಿಚ್‌ಗಳನ್ನು ನಿರ್ಮಿಸಿ ಕಠಿಣ ತರಬೇತಿ ನಡೆಸಿತ್ತು.
  • ಶ್ರೀಲಂಕಾ ಪ್ರವಾಸ: ಉಪಖಂಡದ ವಾತಾವರಣಕ್ಕೆ ಹೊಂದಿಕೊಳ್ಳಲು ದುಬೈನಲ್ಲಿ ವಿಶೇಷ ಸಿದ್ಧತಾ ಶಿಬಿರವನ್ನು ಆಯೋಜಿಸಿತ್ತು.

ಆಸೀಸ್ ಪಡೆಗೆ ವಿಶೇಷ ಶಿಬಿರ:

ನಮಗೆ ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ. ನಾವು ಯಾವುದೇ ಅಭ್ಯಾಸ ಪಂದ್ಯವನ್ನು ಆಡುವುದಿಲ್ಲ. ಬದಲಿಗೆ ನಿರ್ದಿಷ್ಟ ಸ್ಥಳಗಳಲ್ಲಿ ತರಬೇತಿ ಶಿಬಿರ ನಡೆಸಲಿದ್ದೇವೆ ಎಂದು ಕೋಚ್ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

ಇದನ್ನೂ ಓದಿ: IND vs SL ಟೆಸ್ಟ್​ ಟೀಮ್ ಇಂಡಿಯಾ ಪಾಲಿಗೆ ಐತಿಹಾಸಿಕ ಪಂದ್ಯ

ಈ ಬಾರಿ ಸರಣಿಯ ಸಿದ್ಧತೆಗಾಗಿ ದುಬೈ ಅಥವಾ ಭಾರತದ ಯಾವುದಾದರೂ ಒಂದು ನಗರವನ್ನು ಆಯ್ಕೆ ಮಾಡಿಕೊಳ್ಳಲು ಆಸ್ಟ್ರೇಲಿಯಾ ಚಿಂತನೆ ನಡೆಸುತ್ತಿದೆ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಅಥವಾ ದುಬೈನಲ್ಲಿ ವಿಶೇಷ ಶಿಬಿರ ಆಯೋಜಿಸಿ ಕೃತಕವಾಗಿ ಸ್ಪಿನ್ ಪಿಚ್ ನಿರ್ಮಿಸಿ ಅಭ್ಯಾಸ ನಡೆಸಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ 2027ರ ಸಂಪೂರ್ಣ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ
ಮೊದಲ ಟೆಸ್ಟ್ ಜನವರಿ 21 – 25 ವಿಸಿಎ ಸ್ಟೇಡಿಯಂ, ನಾಗ್ಪುರ
ಎರಡನೇ ಟೆಸ್ಟ್ ಜನವರಿ 29 – ಫೆಬ್ರವರಿ 02 ಎಂ.ಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಮೂರನೇ ಟೆಸ್ಟ್ ಫೆಬ್ರವರಿ 11 – 15 ಎಸಿಎ ಸ್ಟೇಡಿಯಂ, ಗುವಾಹಟಿ
ನಾಲ್ಕನೇ ಟೆಸ್ಟ್ ಫೆಬ್ರವರಿ 19 – 23 ಜೆಎಸ್ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ, ರಾಂಚಿ
ಐದನೇ ಟೆಸ್ಟ್ ಫೆಬ್ರವರಿ 27 – ಮಾರ್ಚ್ 03 ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

Source link

Meet Nathan Thomas: 18ನೇ ವಯಸ್ಸಿನಲ್ಲೇ ಕಾಲೇಜು ಪ್ರೊಫೆಸರ್ ಆಗಿ ವಿಶ್ವ ದಾಖಲೆ ಬರೆದ ಯುವಕ – Kannada News | Meet Nathan Thomas: The 18 Year Old Who Became World’s Youngest Male Professor

18ನೇ ವಯಸ್ಸಿನಲ್ಲೇ ಕಾಲೇಜು ಪ್ರೊಫೆಸರ್

ಸಾಮಾನ್ಯವಾಗಿ ಯುವಕರು ತಮ್ಮ 18ನೇ ವಯಸ್ಸಿನಲ್ಲಿ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸುತ್ತಾರೆ. ಆದರೆ, ಅಮೆರಿಕದ ಫ್ಲೋರಿಡಾ ನಿವಾಸಿ ನಾಥನ್ ಥಾಮಸ್ ಇದೇ ವಯಸ್ಸಿನಲ್ಲಿ ಕಾಲೇಜು ಪ್ರಾಧ್ಯಾಪಕರಾಗಿ ತರಗತಿಯಲ್ಲಿ ಬೋಧನೆ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ತಮ್ಮ ಅಪಾರ ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರಾಧ್ಯಾಪಕರಾಗಿ ‘ಗಿನ್ನೆಸ್ ವಿಶ್ವ ದಾಖಲೆ‘ (Guinness World Record) ಬರೆದಿದ್ದಾರೆ. ಇವರ ಈ ಅಸಾಧಾರಣ ಸಾಧನೆಯು ವಯಸ್ಸಿಗಿಂತ ಕಲಿಯುವ ಹಂಬಲ ಮತ್ತು ಸಮರ್ಪಣಾ ಭಾವವೇ ಮುಖ್ಯ ಎಂಬುದನ್ನು ಜಗತ್ತಿಗೆ ಸಾರಿದೆ.

306 ವರ್ಷಗಳ ಸುದೀರ್ಘ ವಿಶ್ವ ದಾಖಲೆ ಧೂಳೀಪಟ:

ನಾಥನ್ ಥಾಮಸ್ ಕೇವಲ 18 ನೇ ವಯಸ್ಸಿನಲ್ಲಿ ಮಿಯಾಮಿ ಡೇಡ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಬೋಧಕರಾಗಿ ನೇಮಕಗೊಂಡರು. ಇದರೊಂದಿಗೆ ಅವರು ಬರೋಬ್ಬರಿ 306 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದ್ದಾರೆ. ಇದಕ್ಕೂ ಮೊದಲು, 1717 ರಲ್ಲಿ ಪ್ರಸಿದ್ಧ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ ಕಾಲಿನ್ ಮ್ಯಾಕ್ಲೌರಿನ್ ತಮ್ಮ 19 ನೇ ವಯಸ್ಸಿನಲ್ಲಿ ಪ್ರಾಧ್ಯಾಪಕರಾಗಿ ನಿರ್ಮಿಸಿದ್ದ ಸುದೀರ್ಘ ದಾಖಲೆಯನ್ನು ನಾಥನ್ ತಮ್ಮದಾಗಿಸಿಕೊಂಡಿದ್ದಾರೆ. ತನಗಿಂತ ಸಮಾನ ವಯಸ್ಸಿನ ಅಥವಾ ಹಿರಿಯ ವಿದ್ಯಾರ್ಥಿಗಳಿಗೆ ಇವರು ಪಾಠ ಮಾಡುವುದು ವಿಶೇಷ.

14ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ:

ನಾಥನ್ ಅವರ ಪೋಷಕರಿಬ್ಬರೂ ಎಂಜಿನಿಯರ್‌ಗಳಾಗಿದ್ದರಿಂದ, ಅವರಿಗೆ ಬಾಲ್ಯದಿಂದಲೇ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳಲ್ಲಿ ಅಪಾರ ಆಸಕ್ತಿ ಮೂಡಿತು. ತಮ್ಮ 10 ನೇ ವಯಸ್ಸಿನಲ್ಲೇ ಕಾಲೇಜು ಮಟ್ಟದ ಅಧ್ಯಯನ ಪ್ರಾರಂಭಿಸಿದ ಇವರು, ಕೇವಲ 14 ನೇ ವಯಸ್ಸಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಪೂರ್ಣಗೊಳಿಸಿದ್ದರು. ತರುವಾಯ, ಆಗಸ್ಟ್ 2023 ರಲ್ಲಿ ಮಿಯಾಮಿ ಡೇಡ್ ಕಾಲೇಜಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಬೋಧನೆಯ ಜೊತೆಗೆ ಈಗ ಕಾನೂನು ವ್ಯಾಸಂಗ:

ಪ್ರಸ್ತುತ 21 ವರ್ಷದ ನಾಥನ್, ಬೋಧನೆಯನ್ನು ನಿಲ್ಲಿಸದೇ ಆನ್‌ಲೈನ್ ಮೂಲಕ ಮುಂದುವರಿಸುತ್ತಲೇ ಮಿಯಾಮಿ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಜ್ಯೂರಿಸ್ ಡಾಕ್ಟರ್ (JD) ಪದವಿ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಬೌದ್ಧಿಕ ಆಸ್ತಿ ಕಾನೂನು (Intellectual Property Law) ಮತ್ತು STEM ನಾವೀನ್ಯತೆಯಲ್ಲಿ ಪರಿಣತಿ ಹೊಂದುವ ಗುರಿ ಹೊಂದಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರಾಧ್ಯಾಪಕನಾಗಿ ನಾಥನ್ ಥಾಮಸ್ ಮತ್ತು ಅತ್ಯಂತ ಕಿರಿಯ ಮಹಿಳಾ ಪ್ರಾಧ್ಯಾಪಕಿಯಾಗಿ ಅಲಿಯಾ ಸಬೂರ್ ದಾಖಲೆ ಬರೆದಿದ್ದು, ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:34 pm, Wed, 5 August 26

Source link

Gold Rates 05 Aug: ಚಿನ್ನದ ಬೆಲೆ ಭರ್ಜರಿ ಏರಿಕೆ; ಬೆಳ್ಳಿಯೂ ದುಬಾರಿ – Kannada News | Gold Price Today on 5th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 5: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಎರಡೂ ಕೂಡ ಇಂದು ಬುಧವಾರ ಹೆಚ್ಚಳವಾಗಿವೆ. ಚಿನ್ನದ ಬೆಲೆ ಒಂದು ಗ್ರಾಮ್​ಗೆ 160 ರೂ ಏರಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬಂಗಾರದ ದರ ಏರಿದೆ. ಬೆಳ್ಳಿ ಬೆಲೆ ಇಂದು ಐದು ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,575 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,360 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,931 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,575 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,360 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,360 ರೂ
  • ಚೆನ್ನೈ: 13,360 ರೂ
  • ಮುಂಬೈ: 13,360 ರೂ
  • ದೆಹಲಿ: 13,375 ರೂ
  • ಕೋಲ್ಕತಾ: 13,360 ರೂ
  • ಕೇರಳ: 13,360 ರೂ
  • ಅಹ್ಮದಾಬಾದ್: 13,365 ರೂ
  • ಜೈಪುರ್: 13,375 ರೂ
  • ಲಕ್ನೋ: 13,375 ರೂ
  • ಭುವನೇಶ್ವರ್: 13,360 ರೂ

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (12,792 ರುಪಾಯಿ)
  • ದುಬೈ: 492.25 ಡಿರಾಮ್ (12,744 ರುಪಾಯಿ)
  • ಅಮೆರಿಕ: 134.50 ಡಾಲರ್ (12,792 ರುಪಾಯಿ)
  • ಸಿಂಗಾಪುರ: 181 ಸಿಂಗಾಪುರ್ ಡಾಲರ್ (13,432 ರುಪಾಯಿ)
  • ಕತಾರ್: 493 ಕತಾರಿ ರಿಯಾಲ್ (12,862 ರೂ)
  • ಸೌದಿ ಅರೇಬಿಯಾ: 505 ಸೌದಿ ರಿಯಾಲ್ (12,789 ರುಪಾಯಿ)
  • ಓಮನ್: 52.35 ಒಮಾನಿ ರಿಯಾಲ್ (12,932 ರುಪಾಯಿ)
  • ಕುವೇತ್: 41.23 ಕುವೇತಿ ದಿನಾರ್ (12,769 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 240 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 240 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಹಾಲಿವುಡ್ ಅಬ್ಬರ, ಇದು ಎಚ್ಚರಿಕೆ ಗಂಟೆ – Kannada News | Recent Hollywood movies collects big money in Indian Box Office

ಸ್ಟಾರ್ ನಟರು ಎಂಥಹಾ ಸಿನಿಮಾ ಮಾಡಿದರೂ ದೊಡ್ಡ ಗಳಿಕೆ ಮಾಡುತ್ತವೆ. ಭಾರತೀಯ ಸಿನಿಮಾ ಪ್ರೇಕ್ಷಕರಿಗೆ ಕಮರ್ಶಿಯಲ್, ಮೈಂಡ್​​ಲೆಸ್ ಆಕ್ಷನ್ ಸಿನಿಮಾಗಳು, ಐಟಂ ಹಾಡುಗಳು (Item Song) ಬೇಕಷ್ಟೆ ಎನ್ನಲಾಗುತ್ತಿತ್ತು. ಭಾರತದ ಹಲವು ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರು ಇಂದಿಗೂ ಇದನ್ನೇ ನಂಬಿ ಕೊಂಡಿದ್ದಾರೆ. ಆದರೆ ಭಾರತೀಯ ಪ್ರೇಕ್ಷಕರು ನಿಧಾನವಾಗಿ ಗುಣಮಟ್ಟದ ಕಂಟೆಂಟ್, ಗುಣಮಟ್ಟದ ಪ್ರೊಡಕ್ಷನ್, ಒಳ್ಳೆಯ ಸ್ಟೋರಿ ಟೆಲ್ಲಿಂಗ್​​ನತ್ತ ಜಾರುತ್ತಿದ್ದಾರೆ. ಇದಕ್ಕೆ ಸಾಕ್ಷಿ, ಇತ್ತೀಚೆಗೆ ಬಿಡುಗಡೆ ಆದ ಮೂರು ಹಾಲಿವುಡ್ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಮಾಡಿರುವ ಅಭೂತಪೂರ್ವ ಕಲೆಕ್ಷನ್.

‘ಅಬ್​​ಸೆಷನ್ಸ್’, ‘ದಿ ಆಡಸ್ಸಿ’ ಮತ್ತು ವಾರದ ಹಿಂದೆ ಬಿಡುಗಡೆ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ಗಳಿಕೆ ಮಾಡಿವೆ. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ (MCU) ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಕಳೆದವಾರವಷ್ಟೆ ಭಾರತದಲ್ಲಿ ಬಿಡುಗಡೆ ಆಗಿದ್ದು, ಒಂದು ವಾರದಲ್ಲಿ ಈ ಸಿನಿಮಾ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಸಿನಿಮಾ, ಭಾರತದಲ್ಲಿ ಭಾರತೀಯ ಸೂಪರ್ ಸ್ಟಾರ್ ನಟರ ಹಿಟ್ ಸಿನಿಮಾಗಳ ದಾಖಲೆಯನ್ನೂ ಸಹ ಪುಡಿಗಟ್ಟಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸುವುದು ಖಾತ್ರಿ.

ಕ್ರಿಸ್ಟೋಫರ್ ನೋಲನ್ ಸಿನಿಮಾಗಳು ಹೈ ಐಕ್ಯೂ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವ ಸಿನಿಮಾಗಳು. ಅವರ ಸಿನಿಮಾಗಳಲ್ಲಿ ಕಮರ್ಶಿಯಲ್ ಅಂಶಗಳು ಇರುವುದಿಲ್ಲ. ಆದರೂ ಸಹ ಅವರ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಭಾರತದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಈಗಲೂ ಮಾಡುತ್ತಿದೆ. ಜುಲೈ ಮಧ್ಯ ಭಾಗದಲ್ಲಿ ಬಿಡುಗಡೆ ಆದ ಈ ಸಿನಿಮಾ ಈ ವರೆಗೆ ಭಾರತದಲ್ಲಿ 150 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾದಿಂದ ಇದರ ಗಳಿಕೆಗೆ ತುಸು ಬ್ರೇಕ್ ಬಿದ್ದಿತಾದರೂ, 150 ಕೋಟಿ ಕಡಿಮೆ ಮೊತ್ತವೇನಲ್ಲ. ಬೆಂಗಳೂರು ಸೇರಿದಂತೆ ಕೆಲವು ನಗರಗಳ ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾದ ಶೋಗಳು ಹೌಸ್​​ಫುಲ್ ಆಗುತ್ತಿವೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟ ರಣ್​​ಬೀರ್ ಕಪೂರ್

ಇನ್ನು ‘ಅಬ್​ಸೆಷನ್ಸ್’ ಸಿನಿಮಾನಲ್ಲಂತೂ ಯಾವ ದೊಡ್ಡ ಹಾಲಿವುಡ್ ಸ್ಟಾರ್ ಆಗಲಿ, ತಂತ್ರಜ್ಞರಾಗಲಿ ಇರಲಿಲ್ಲ. ಕೇವಲ ಕಂಟೆಂಟ್ ಅನ್ನಷ್ಟೆ ಹೊಂದಿದ್ದ ಸಿನಿಮಾ ಇದಾಗಿತ್ತು. ಈ ಸಿನಿಮಾ ಸಹ ಭಾರತದಲ್ಲಿ ಬಹಳ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ‘ಅಬ್ಸೆಷನ್’ ಹಾಲಿವುಡ್ ಹಾರರ್ ಸಿನಿಮಾ ಸರಿ ಸುಮಾರು 85 ಕೋಟಿಗೂ ಹೆಚ್ಚು ಮೊತ್ತವನ್ನು ಭಾರತದಲ್ಲಿ ಗಳಿಕೆ ಮಾಡಿದೆ.

ಈ ಮೂರೂ ಸಿನಿಮಾಗಳು ಇದೇ ವರ್ಷ ಭಾರತದಲ್ಲಿ ಬಿಡುಗಡೆ ಆಗಿದ್ದು, ಮೂರು ಸಿನಿಮಾಗಳ ಈ ವರೆಗಿನ ಒಟ್ಟು ಗಳಿಕೆ 500 ಕೋಟಿ ದಾಟಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆ ಆಗಿ ಒಂದು ವಾರವಷ್ಟೆ ಆಗಿದ್ದು, ಈ ಸಿನಿಮಾ ಏಕಾಂಗಿಯಾಗಿ 700 ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆ ಇದೆ. ಒಟ್ಟಾರೆ, ಭಾರತೀಯ ಪ್ರೇಕ್ಷಕ ಗುಣಮಟ್ಟದ ಕಂಟೆಂಟ್​​ ಕಡೆಗೆ ವಾಲುತ್ತಿದ್ದು, ಒಳ್ಳೆಯ ಸಿನಿಮಾ ನೋಡಲು ದೊಡ್ಡ ಮೊತ್ತವನ್ನು ನೀಡಲು ಸಹ ತಯಾರು ಎಂಬುದನ್ನು ಈ ಸಿನಿಮಾಗಳ ಕಲೆಕ್ಷನ್ ಲೆಕ್ಕಾಚಾರ ಹೇಳುತ್ತಿದೆ. ಜೊತೆಗೆ ಇದು ಭಾರತೀಯ ಚಿತ್ರರಂಗದ ಸಿನಿಮಾ ಕರ್ಮಿಗಳಿಗೆ ಎಚ್ಚರಿಕೆಯೂ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:20 pm, Wed, 5 August 26

Source link

IND vs SL ಟೆಸ್ಟ್​ ಟೀಮ್ ಇಂಡಿಯಾ ಪಾಲಿಗೆ ಐತಿಹಾಸಿಕ ಪಂದ್ಯ – Kannada News | Team India Ready for Historic 600th Test Against Sri Lanka

15 ಆಗಸ್ಟ್ 2026 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯವು ಭಾರತೀಯ ಕ್ರಿಕೆಟ್ ಇತಿಹಾಸದ ಒಟ್ಟಾರೆ 600ನೇ ಟೆಸ್ಟ್ ಪಂದ್ಯವಾಗಿದೆ. ಅಂದರೆ ಇದು ಭಾರತ ಆಡುತ್ತಿರುವ 600ನೇ ಟೆಸ್ಟ್ ಪಂದ್ಯ. ಹೀಗಾಗಿಯೇ ಈ ಪಂದ್ಯವು ಇದೀಗ ಭಾರತ ತಂಡದ ಪಾಲಿನ ಐತಿಹಾಸಿಕ ಪಂದ್ಯವಾಗಿ ಮಾರ್ಪಟ್ಟಿದೆ.

1932 ರಿಂದ 2026:

ಟೀಮ್ ಇಂಡಿಯಾ ತನ್ನ ಮೊದಲ ಅಧಿಕೃತ ಟೆಸ್ಟ್ ಪಂದ್ಯವನ್ನು ಆಡಿದ್ದು 1932 ರಲ್ಲಿ ಇಂಗ್ಲೆಂಡ್ ವಿರುದ್ಧ. ಅಲ್ಲಿಂದ ಆರಂಭವಾದ ಈ ಸುದೀರ್ಘ 94 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಭಾರತೀಯ ಕ್ರಿಕೆಟ್ ಹಲವು ಏಳು-ಬೀಳುಗಳನ್ನು ಕಂಡಿದೆ.

ಸಿ.ಕೆ. ನಾಯ್ಡು ಅವರ ಮೊದಲ ನಾಯಕತ್ವದಿಂದ ಹಿಡಿದು ಇಂದಿನ ಯುವ ಪೀಳಿಗೆಯವರೆಗೆ ಒಟ್ಟು 38 ದಿಗ್ಗಜ ನಾಯಕರು ಈ ತಂಡವನ್ನು ಮುನ್ನಡೆಸಿದ್ದಾರೆ.

ಈ ಎಲ್ಲಾ 38 ನಾಯಕರ ಶ್ರಮ, ನೂರಾರು ಆಟಗಾರರ ಬೆವರು ಮತ್ತು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯ ಫಲವಾಗಿ ಇಂದು ಭಾರತ ತನ್ನ 600ನೇ ಟೆಸ್ಟ್ ಪಂದ್ಯದ ಹೊಸ್ತಿಲಲ್ಲಿ ಬಂದು ನಿಂತಿದೆ.

ಭಾರತದ ಟೆಸ್ಟ್ ಮೈಲುಗಲ್ಲು:

  • 1ನೇ ಟೆಸ್ಟ್ (1932): ಸಿ.ಕೆ. ನಾಯ್ಡು (ಇಂಗ್ಲೆಂಡ್ ವಿರುದ್ಧ)
  • 100ನೇ ಟೆಸ್ಟ್ (1967): ಮನ್ಸೂರ್ ಅಲಿ ಖಾನ್ ಪಟೌಡಿ (ಇಂಗ್ಲೆಂಡ್ ವಿರುದ್ಧ)
  • 200ನೇ ಟೆಸ್ಟ್ (1982): ಸುನಿಲ್ ಗವಾಸ್ಕರ್ (ಪಾಕಿಸ್ತಾನ ವಿರುದ್ಧ)
  • 300ನೇ ಟೆಸ್ಟ್ (1996): ಸಚಿನ್ ತೆಂಡೂಲ್ಕರ್ (ಸೌತ್ ಆಫ್ರಿಕಾ ವಿರುದ್ಧ)
  • 400ನೇ ಟೆಸ್ಟ್ (2006): ರಾಹುಲ್ ದ್ರಾವಿಡ್ (ವೆಸ್ಟ್ ಇಂಡೀಸ್ ವಿರುದ್ಧ)
  • 500ನೇ ಟೆಸ್ಟ್ (2016): ವಿರಾಟ್ ಕೊಹ್ಲಿ (ನ್ಯೂಝಿಲೆಂಡ್ ವಿರುದ್ಧ)
  • 600ನೇ ಟೆಸ್ಟ್ (2026): ಶುಭ್‌ಮನ್ ಗಿಲ್ (ಶ್ರೀಲಂಕಾ ವಿರುದ್ಧ – ಗಾಲೆ)

ಐತಿಹಾಸಿಕ ಪಂದ್ಯಕ್ಕೆ ಗಿಲ್ ಸಾರಥ್ಯ:

ಭಾರತದ ಈ ಮಹತ್ವದ 600ನೇ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಮಹಾನ್ ಗೌರವ ಯುವ ಆಟಗಾರ ಶುಭ್‌ಮನ್ ಗಿಲ್ ಹೆಗಲಿಗೇರಿದೆ. ಕಪಿಲ್ ದೇವ್, ಎಂ.ಎಸ್. ಧೋನಿ, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿಯಂತಹ ದಿಗ್ಗಜರು ಅಲಂಕರಿಸಿದ್ದ ಸ್ಥಾನದಲ್ಲಿ ನಿಂತು ಗಿಲ್ ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ.

ಮತ್ತೊಂದೆಡೆ, ಭಾರತ ತಂಡವು ಬರೋಬ್ಬರಿ 9 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಶ್ರೀಲಂಕಾ ಮಣ್ಣಿನಲ್ಲಿ ಟೆಸ್ಟ್ ಸರಣಿ ಆಡುತ್ತಿರುವುದು, ಈ ಪಂದ್ಯದ ಮೇಲಿನ ಕುತೂಹಲ ಹಾಗೂ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: LPL ನಲ್ಲಿ ತಂಡ ಖರೀದಿಸಿದ ಝಹೀರ್ ಖಾನ್!

ಒಟ್ಟಾರೆಯಾಗಿ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದೇ ಆರಂಭವಾಗಲಿರುವ ಈ 600ನೇ ಟೆಸ್ಟ್ ಪಂದ್ಯವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಹೊಸ ಮೈಲಿಗಲ್ಲನ್ನು ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

Source link

ಅಸಮಾಧಾನಿತರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್​​: ಶಾಸಕರ ಜೊತೆ ನಾಯಕರ ಚರ್ಚೆ – Kannada News | CM DK Shivakumar and Senior Leaders Step In to Pacify Disgruntled Congress MLAs

ಅಸಮಾಧಾನಿತರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್​​Image Credit source: PTI

ಬೆಂಗಳೂರು, ಆಗಸ್ಟ್​​ 05: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್​​ ಪಾಳಯದಲ್ಲಿ ಭುಗಿಲೆದ್ದಿರುವ ಶಾಸಕರ ಅಸಮಾಧಾನ ಶಮನಕ್ಕೆ ಇದೀಗ ಸ್ವತಃ ಮುಖ್ಯಮಂತ್ರಿಗಳ ಆದಿಯಾಗಿ ಕೆಪಿಸಿಸಿ ಅಧ್ಯಕ್ಷರು ಕೂಡ ಅಖಾಡಕ್ಕೆ ಇಳಿದಿದ್ದಾರೆ. ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಹಿರಿಯ ಶಾಸಕ ದಿನೇಶ್ ಗುಂಡೂರಾವ್ ಜೊತೆ ನಿನ್ನೆಯೇ ಡಿಕೆಶಿ ಮಾತುಕತೆ ನಡೆಸಿದ್ದು, ಕೆಲವೊಮ್ಮೆ ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ. ಜೊತೆಗೆ ಯಶವಂತ ರಾಯಗೌಡಗೆ ಕರೆ ಮಾಡಿ ಸುಮಾರು 10 ನಿಮಿಷ ಮಾತಾಡಿದ್ದಾರೆ ಎನ್ನಲಾಗಿದೆ.

ನಿಮ್ಮ ನಿವಾಸಕ್ಕೆ ಬಂದು ಮಾತನಾಡ್ತೀನಿ ಎಂದು ಸಿಎಂ ಯಶವಂತ ರಾಯಗೌಡಗೆ ತಿಳಿಸಿದ್ದಾರೆ. ಸಚಿವ ಲಕ್ಷ್ಮಣ ಸವದಿ, ಮಹಂತೇಶ ಕೌಜಲಗಿ, ವಿನಯ್ ಕುಲಕರ್ಣಿ, ಬಿ. ಆರ್. ಪಾಟೀಲ್​​ರಿಂದಲೂ ಮನವೊಲಿಕೆ ಯತ್ನ ನಡೆದಿದೆ. ಮಾತುಕತೆ ವೇಳೆ ರಾಜೀನಾಮೆ ವಾಪಸ್​​ ಪಡೆಯುವಂತೆ ಸಚಿವ ಲಕ್ಷ್ಮಣ್​​ ಸವದಿ ಮನವಿ ಮಾಡಿದ್ದು, ತಮ್ಮ ಸ್ಥಾನವನ್ನೇ ಬೇಕಿದ್ದರೆ ಬಿಟ್ಟುಕೊಡೋದಾಗಿ ಹೇಳಿದ್ದಾರೆ. ಮತ್ತೊಂದೆಡೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​​ರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ಸುಬ್ಬಾರೆಡ್ಡಿ ಬೆಂಬಲಿಸಿ ಮೂರು ತಾಲೂಕುಗಳು ಬಂದ್: ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ

ಕೋಲಾರ ಶಾಸಕರ ಹೊಣೆ ಪರಮೇಶ್ವರ್​​ಗೆ?

ಸಚಿವ ಸ್ಥಾನ ಸಿಗದ ಸಂಬಂಧ ತೀವ್ರ ಅಸಮಾಧಾನ ಹೊರಹಾಕಿರುವ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಮಾಧಾನಪಡಿಸುವ ಹೊಣೆಯನ್ನು ಡಿಸಿಎಂ ಪರಮೇಶ್ವರ್​ಗೆ ನೀಡುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿಗಳು ಸದ್ಯ ಸದ್ಯ ವಿದೇಶದಲ್ಲಿದ್ದು, ಈ ಬಗ್ಗೆ ಅದಾಗಲೇ ಸಿಎಂ ಡಿ.ಕೆ.ಶಿವಕುಮಾರ್​ರಿಂದಲೂ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ಇದೆ.

‘ತನ್ನಿಂದಲೇ ಪಕ್ಷ ಎಂಬುದು ಸುಳ್ಳು’

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲ ಶಾಸಕರ ಜತೆ ವರಿಷ್ಠರು ವೈಯಕ್ತಿಕವಾಗಿ ಮಾತನಾಡ್ತಿದ್ದಾರೆ. ನಿನ್ನೆ ನಮ್ಮ ಸ್ನೇಹಿತರು ಕೆಲವು ಮಾತನಾಡಿರುವುದನ್ನು ನೋಡಿದೆ. ನಮ್ಮಿಂದ ಪಕ್ಷ ಇದೆಯೋ ಹೊರತು ಪಕ್ಷದಿಂದ ನಾವಿಲ್ಲ ಎಂದಿದ್ದಾರೆ. ಪಕ್ಷದ ಕಚೇರಿಗೆ ಅಲೆದಾಡಿದ್ದು, ಪಕ್ಷದ ಚಿಹ್ನೆ ಬಯಸಿದ್ದು ನಾವಲ್ಲವೇ? ನಮ್ಮನ್ನು ಗುರುತಿಸಿ ಬಿ ಫಾರಂ ಕೊಟ್ಟಿದ್ದು ಪಕ್ಷ. ಹೀಗಾಗಿ ಪಕ್ಷ ಹಾಗೂ ನಾಯಕರ ವಿರುದ್ಧ ಮಾತನಾಡುವುದು ಸರಿಯಲ್ಲ. ತನ್ನಿಂದಲೇ ಪಕ್ಷ ಎಂಬುದು ಸುಳ್ಳು. ಪಕ್ಷದ ಕಚೇರಿಯ ಬಾಗಿಲು ಕಾದಿದ್ದನ್ನು ಮರೆಯಬಾರದು ಎಂದು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Cauvery Dispute: ಮೇಕೆದಾಟು ಯೋಜನೆ ವಿರುದ್ಧ ತುರ್ತು ಚರ್ಚೆಗೆ ಡಿಎಂಕೆ ಆಗ್ರಹ, ರಾಜ್ಯಸಭೆಯಲ್ಲಿ ನಿಲುವಳಿ ಮಂಡನೆ – Kannada News | DMK Moves Adjournment Motion in Rajya Sabha Against Karnataka’s Mekedatu Project

ನವದೆಹಲಿ, ಆಗಸ್​ಟ್ 5: ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಎಂಕೆ ಪಕ್ಷವು ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯನ್ನು ಸಲ್ಲಿಸಿದೆ. ಡಿಎಂಕೆ ಸಂಸದ ತಿರುಚಿ ಶಿವ, ನಿಯಮ 267ರ ಅಡಿಯಲ್ಲಿ ಈ ವಿಚಾರವಾಗಿ ತುರ್ತು ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಡಿಎಂಕೆ, ಮೇಕೆದಾಟು ಯೋಜನೆ ತಡೆಯಲು ಮಧ್ಯಸ್ಥಿಕೆ ಮಂಡಳಿ ರಚಿಸುವಂತೆ ಆಗ್ರಹಿಸಿದೆ.

ತಮಿಳುನಾಡು ಹಲವು ಬಾರಿ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಲೇ ಬಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್, ಮೇಕೆದಾಟು ವಿಚಾರವನ್ನು ಕೇಂದ್ರ ಜಲ ಆಯೋಗ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಜಲಶಕ್ತಿ ಆಯೋಗ ಕೂಡ ಬೇರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಈಗಾಗಲೇ ಕರ್ನಾಟಕಕ್ಕೆ ಹೇಳಿದೆ. ಮೇಲಿನ ರಾಜ್ಯಗಳು ಅಣೆಕಟ್ಟನ್ನು ನಿರ್ಮಿಸಬಹುದು ಮತ್ತು ತಮಿಳುನಾಡಿಗೆ ಬರಬೇಕಾದ ನೀರಿನ ಪಾಲನ್ನು ಬಿಟ್ಟರೆ ಸಾಕು ಎಂದು ಸ್ಪಷ್ಟಪಡಿಸಿದೆ. ಈ ಸ್ಪಷ್ಟೀಕರಣದ ನಂತರವೂ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯ ಮೂಲಕ ಚರ್ಚೆಗೆ ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು – Kannada News | A young man set a condition that, in addition to being beautiful, a girl must possess these qualities.

ಈಗಿನ ಕಾಲದಲ್ಲಿ ಮದುವೆಯಾಗಲು (marriage) ಹೆಣ್ಣು ಸಿಗುವುದೇ ಕಷ್ಟ. ಆದರಲ್ಲಿಯೂ ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗ್ರಿರ್ ಎನ್ನುತ್ತೆ. ಇದೆಲ್ಲದರ ನಡುವೆ ಇಲ್ಲೊಬ್ಬ ಯುವಕನು ತನ್ನನ್ನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳು ಇರುವುದು ಕಡ್ಡಾಯ ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ. ನೋಡೋಕೆ ಸುಂದರವಾಗಿದ್ರೆ ಸಾಲದು ಈ ಗುಣಗಳು ಇರೋದು ಕಡ್ಡಾಯ ಎಂದು ಹೇಳಿದ್ದಾನೆ. ಯುವಕನ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನಿಗೆ ಮದ್ವೆ ಆಗೋದು ಡೌಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಆರ್ ಆರ್ (R-R) ಹೆಸರಿನ ಎಕ್ಸ್ ಖಾತೆಯಲ್ಲಿ ಯುವಕನು ತನ್ನನ್ನು ಮದುವೆಯಾಗುವ ಹುಡುಗಿಯಲ್ಲಿ ಈ ಗುಣಗಳಿರಬೇಕೆಂದು ಪೋಸ್ಟ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ಸುಂದರವಾಗಿರಬೇಕು, ಮೇಕಪ್ ಮಾಡಬಾರದು.

ವೈರಲ್ ಪೋಸ್ಟ್ ಇಲ್ಲಿದೆ

5.2 ಪರಿಪೂರ್ಣ ಎತ್ತರ, 45 ಕೆಜಿ ಹೊಂದಿರಬೇಕು. ರುಚಿಕರವಾಗಿ ಅಡುಗೆ ಮಾಡಲು ಬರಬೇಕು. ಸೋಷಿಯಲ್ ಮೀಡಿಯಾ ಬಳಸದೇ ಬಾರದು. ಸ್ನೇಹಿತರ ಲಿಸ್ಟ್ ನಲ್ಲಿ ಗಂಡು ಮಕ್ಕಳು ಇರಲೇಬಾರದು. ಹೊರಗೆ ಹೋಗುವ ಮುನ್ನ ಅನುಮತಿ ಕೇಳುವುದು ಕಡ್ಡಾಯ. ತನ್ನ ಲೈವ್ ಲೊಕೇಶನ್ ಶೇರ್ ಮಾಡಿಕೊಳ್ಳಬೇಕು. ತನ್ನ ಹೆತ್ತವರನ್ನು ಸ್ವಂತ ಹೆತ್ತವರಂತೆ ನೋಡಿಕೊಳ್ಳುವ ಮನಸ್ಥಿತಿ ಇರಬೇಕು ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ: ಹೆರಿಗೆ ನೋವಿನಲ್ಲಿದ್ದ ಹೆಂಡ್ತಿ ಮೊಗದಲ್ಲಿ ನಗು ತರಿಸಲು ಡ್ಯಾನ್ಸ್ ಮಾಡಿದ ಗಂಡ

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಸಿಂಗಲ್ ಆಗಿರುವುದೇ ಒಳ್ಳೆಯದು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಗುಣಗಳಿರುವ ಹುಡುಗಿಯನ್ನು ಹುಡುಕುವತ್ತ ಗಮನ ಕೊಡಿ, ಬೆಸ್ಟ್ ಆಫ್ ಲಕ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಮನೆ ಕೆಲಸದವಳು ಬೇಕು, ಹೆಂಡ್ತಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:44 am, Wed, 5 August 26

Source link

ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ! – Kannada News | Bengaluru Rapido Accident: Woman Left Bedridden Demands Justice and Compensation

ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!

ಬೆಂಗಳೂರು, ಆಗಸ್ಟ್ 05: ಮಹಿಳೆಯರ ಸುರಕ್ಷತೆಯಂತ ದೊಡ್ಡ ದೊಡ್ಡ ಜಾಹೀರಾತು ನೀಡಿ ಮಾರ್ಕೆಟಿಂಗ್ ಮಾಡ್ತಾರೆ, ಆದ್ರೆ ಅದೆಲ್ಲ ಬರೀ ಸುಳ್ಳು! ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ? ಇದು ರ್ಯಾಪಿಡೋ (Rapido) ಬೈಕ್ ಟ್ಯಾಕ್ಸಿ ಅಪಘಾತಕ್ಕೊಳಗಾಗಿ ಸಾವು-ಬದುಕಿನ ನಡುವೆ ಹೋರಾಡಿ ಬದುಕುಳಿದಿರುವ ಸಾನಿ ಕೃಷ್ಣ ಎಂಬ ಯುವತಿಯ ಆಕ್ರೋಶದ ನುಡಿಗಳು. ಸಾನಿ ಜೂನ್ 17ರಂದು ಭೀಕರ ಅಪಘಾತಕ್ಕೀಡಾಗಿದ್ದರು. ಈಗ ಸಾವನ್ನೇ ಗೆದ್ದು ಬಂದಿರುವ ಸಾನಿ ಕೃಷ್ಣ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಅಂದು ನಡೆದಿದ್ದೇನು?

ಬೆಂಗಳೂರಿನ ಬೈರಸಂದ್ರದ ನಿವಾಸಿಯಾಗಿರುವ ಸಾನಿ ಕೃಷ್ಣ, ದೊಮ್ಮಲೂರಿನಲ್ಲಿರುವ ತಮ್ಮ ಕಚೇರಿಗೆ ತೆರಳಲು ಜೂನ್ 17ರಂದು ಬೆಳಗ್ಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಆದರೆ, ಬಾಗಮನೆ ಟೆಕ್ ಪಾರ್ಕ್ ಬಳಿ ಸಂಚರಿಸುತ್ತಿದ್ದಾಗ, ರ್ಯಾಪಿಡೋ ಚಾಲಕ ಮುಂದಿದ್ದ ಟ್ರ್ಯಾಕ್ಟರ್ ಅನ್ನು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ ಸಂಭವಿಸಿದೆ.

ಆಸ್ಪತ್ರೆ ಬಿಲ್ 20 ಲಕ್ಷ ದಾಟಿದ್ರೂ ಚಿಕಿತ್ಸೆ ಮುಗಿದಿಲ್ಲ!

ಅಪಘಾತದ ತೀವ್ರತೆಗೆ ಸಾನಿ ಕೃಷ್ಣ ಅವರ ಮುಖ ತೀವ್ರವಾಗಿ ಜಜ್ಜುಹೋಗಿದ್ದು, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾಗಿ ಬಂತು. ಮೊದಲು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೇರಳದ ಕೋಯಿಕ್ಕೋಡ್‌ನ ಮಿತ್ರಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈವರೆಗೆ ಆಸ್ಪತ್ರೆಯ ಬಿಲ್ ಬರೋಬ್ಬರಿ 20 ಲಕ್ಷ ರೂಪಾಯಿ ದಾಟಿದ್ದು, ಯುವತಿ ಹಾಸಿಗೆ ಹಿಡಿಯುವಂತಾಗಿದೆ.

ಕನಿಷ್ಠ ಸೌಜನ್ಯವೂ ಇಲ್ಲದ ರ್ಯಾಪಿಡೋ, ಸಂತ್ರಸ್ತೆಯ ಹೋರಾಟ!

ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಉದ್ದುದ್ದ ಮಾತುಗಳನ್ನಾಡುವ ರ್ಯಾಪಿಡೋ ಸಂಸ್ಥೆ, ಈ ಭೀಕರ ಅಪಘಾತದ ನಂತರ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸಿಲ್ಲ ಹಾಗೂ ಸೂಕ್ತ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾರೆ. “ನನ್ನೊಬ್ಬಳ ಸ್ಥಿತಿ ಮಾತ್ರ ಹೀಗಾಗಿಲ್ಲ, ನನ್ನಂತೆ ಇನ್ನೂ ಹತ್ತಾರು ಮಂದಿ ಇಂತಹ ಸಂಸ್ಥೆಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ” ಎಂದು ಸಾನಿ ಕೃಷ್ಣ ಆಕ್ರೋಶ ಹೊರಹಾಕಿದ್ದು, ತಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ವರ: ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ – Kannada News | Hogenakkal Falls in Full Fury: A Majestic Spectacle Amidst Monsoon Rains

ಚಾಮರಾಜನಗರ, ಆಗಸ್ಟ್​​ 05: ಕಾವೇರಿ ಜಲಾನಯನ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಇದರ ಪರಿಣಾಮವಾಗಿ, ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಜಲಪಾತ ಭೋರ್ಗರೆಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಮಿಳುನಾಡು ಗಡಿಯಲ್ಲಿರುವ ಈ ಜಲಪಾತವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಳಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version