ಧರ್ಮಸ್ಥಳ ಬುರುಡೆ ಪ್ರಕರಣ: ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ! – Kannada News | Dharmasthala Case Twist: Mask Man Chinnayya Files Life Threat Complaint After Jail Release

ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!

ಮಂಗಳೂರು, ಡಿಸೆಂಬರ್ 20: ಧರ್ಮಸ್ಥಳ ಪ್ರಕರಣಕ್ಕೆ (dharmasthala mass burial case ) ಹೊಸ ತಿರುವು ಸಿಕ್ಕಿದ್ದು, ಮಾಸ್ಕ್​ ಮ್ಯಾನ್ ಚಿನ್ನಯ್ಯ (Mask man chinnayya) ಜೈಲಿನಿಂದ ಹೊರಬಂದಕೂಡಲೇ ಹೊಸ ಬುರುಡೆ ಬಿಡುತ್ತಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣವೇ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತಮಗೂ ಹಾಗೂ ಪತ್ನಿಗೂ ಜೀವ ಬೆದರಿಕೆ ಇರುವುದಾಗಿ ಹೋರಾಟಗಾರರ ವಿರುದ್ಧವೇ ದೂರು ನೀಡಿದ್ದಾನೆ.

ಮಹೇಶ್ ತಿಮರೋಡಿ ಸೇರಿ ಐವರ ವಿರುದ್ಧವೇ ದೂರು

ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ನವೆಂಬರ್ 24ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಇದೀಗ ಜಾಮೀನಿನಿಂದ ಹೊರಬಂದಿರುವ ಮಾಸ್ಕ್ ಮ್ಯಾನ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧವೇ ಜೀವ ಬೆದರಿಕೆಯ ದೂರು ನೀಡಿದ್ದಾನೆ.

ಇದನ್ನೂ ಓದಿ ಧರ್ಮಸ್ಥಳ ಕೇಸ್: ಕೊನೆಗೂ ಚಿನ್ನಯ್ಯನಿಗೆ ಜೈಲಿನಿಂದ ಬಿಡುಗಡೆ ಭಾಗ್ಯ, ಕೋರ್ಟಿಗೆ ಶ್ಯೂರಿಟಿ ಕೊಟ್ಟವರ್ಯಾರು?

ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಮಾಸ್ಕ್ ಮ್ಯಾನ್

ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಈ ಐವರು ಹೋರಾಟಗಾರರು ತನಗೆ ಹಾಗೂ ತನ್ನ ಹೆಂಡತಿಯ ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಉಲ್ಲೇಖಿಸಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ಮನವಿ ಸಲ್ಲಿಸಲು ಸೂಚಿಸಿದ್ದು, ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೋಕರ್ಣ ದೇಗುಲದಲ್ಲಿ ಡಿಕೆ ಶಿವಕುಮಾರ್​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟು ಆಶಿರ್ವದಿಸಿದ ಮಹಾಗಣಪತಿ – Kannada News | Gokarna Maha Ganapathi Blessing: Auspicious Sign During Special Prayer for Karnataka CM Aspirations

ಕಾರವಾರ, ಡಿಸೆಂಬರ್ 20: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇಗುಲಕ್ಕೆ ಭೇಟಿ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಪೂಜೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಗೋಕರ್ಣದ ಮಹಾಗಣಪತಿ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಪರ ಶುಭ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದ ವೇಳೆ, ಮಹಾಗಣಪತಿಗೆ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥನೆ ಸಲ್ಲಿಸಲಾಗಿತ್ತು. ಪೂಜೆ ವೇಳೆ ಮಹಾಗಣಪತಿ ಬಲಗಡೆಯಿಂದ ಹೂ ನೀಡಿದ್ದು, ಇದು ಭವಿಷ್ಯದ ಉತ್ತಮ ಬೆಳವಣಿಗೆಯ ಸಂಕೇತ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಆಂಡ್ಲೇ ಗ್ರಾಮದಲ್ಲಿರುವ ಪ್ರಸಿದ್ಧ ಶಕ್ತಿ ದೇವತೆ ಜಗದೀಶ್ವರಿ ದೇವಸ್ಥಾನದಲ್ಲಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಗದೀಶ್ವರಿ ದೇವಿಗೆ ಐದು ಬಾರಿ ಬೇಡಿಕೆ ಇಟ್ಟಾಗಲೂ ಪ್ರತಿಬಾರಿಯೂ ಒಳ್ಳೆಯ ಮುನ್ಸೂಚನೆ ದೊರೆತಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಟ್ಸ್​ಮನ್ ಸೂರ್ಯ ಕಾಣೆಯಾಗಿದ್ದಾರೆ: ಸೂರ್ಯಕುಮಾರ್ ಯಾದವ್ – Kannada News | Surya, the batter, is missing Says Surykumar Yadav

ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 30 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸರಣಿಯ ಆರಂಭದಿಂದಲೂ, ನಾವು ಒಂದು ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್‌ಗೆ ಅಂಟಿಕೊಳ್ಳಬೇಕೆಂದು ಬಯಸಿದ್ದೆವು. ಇದೀಗ ನಾವು ಅದನ್ನೇ ಮಾಡಿದ್ದೇವೆ. ನಾವು ವಿಭಿನ್ನವಾಗಿ ಏನನ್ನೂ ಮಾಡಲು ಪ್ರಯತ್ನಿಸಲಿಲ್ಲ. ನಾವು ಎಲ್ಲಾ ವಿಭಾಗಗಳಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಬಯಸಿದ್ದೆವು. ಇದೀಗ ಫಲಿತಾಂಶ ನಮ್ಮ ಮುಂದೆಯಿದೆ.

ಕಳೆದ ಕೆಲ ಸರಣಿಗಳಲ್ಲಿ ಟೀಮ್ ಇಂಡಿಯಾ ಕಡೆಯಿಂದ ಇಂತಹದೊಂದು ಪ್ರದರ್ಶನ ಮಾಯವಾಗಿತ್ತು. ನಾವು ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಲು ಬಯಸಿದ್ದೆವು. ಇದೀಗ ಈ ಯೋಜನೆಯು ಫಲ ನೀಡಿದೆ. ಇದಾಗ್ಯೂ ನನ್ನ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ ಎಂದು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ.

ಬಹುಶಃ ನಮಗೆ “ಸೂರ್ಯ ದಿ ಬ್ಯಾಟರ್” ಕಾಣಿಸದಿರುವುದು ಒಂದೇ ಕೊರತೆ. ಅವನು ಎಲ್ಲೋ ಕಾಣೆಯಾಗಿದ್ದಾನೆ ಅಂತ ನನಗೆ ಅನಿಸುತ್ತದೆ!. ಆದರೆ ಖಂಡಿತವಾಗಿಯೂ ಅವನು ಇನ್ನೂ ಬಲಿಷ್ಠನಾಗಿ ಕಂಬ್ಯಾಕ್ ಮಾಡಲಿದ್ದಾನೆ ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಒಂದು ತಂಡವಾಗಿ, ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಏಕೆಂದರೆ ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲಾ, ಯಾರಾದರೂ ಯಾವಾಗಲೂ ಕೊಡುಗೆ ನೀಡುತ್ತಾರೆ. ತಂಡದ ಇಂತಹ ಪ್ರದರ್ಶನದಿಂದ ನಾಯಕನಾಗಿ, ಅದು ತುಂಬಾ ತೃಪ್ತಿಕರವಾಗಿದೆ ಎಂದು ಸೂರ್ಯಕುಮಾರ್ ಯಾದವ್ ಇದೇ ವೇಳೆ ಹೇಳಿದರು.

ಇದನ್ನೂ ಓದಿ:  ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ

ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಕಡೆಯಿಂದ ಪಾಸಿಟಿವ್ ಪ್ರದರ್ಶನ ಮೂಡಿಬಂದಿದೆ. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಈ ವೈಫಲ್ಯದಿಂದ ಶೀಘ್ರದಲ್ಲೇ ಹೊರಬರಲಿದ್ದೇನೆ ಎಂದು ಖುದ್ದು ಸೂರ್ಯಕುಮಾರ್ ಯಾದವ್ ಅವರೇ ಹೇಳಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯನ ಕಡೆಯಿಂದ ಪ್ರಚಂಡ ಬ್ಯಾಟಿಂಗ್ ನಿರೀಕ್ಷಿಸಬಹುದು.

Published On – 9:32 am, Sat, 20 December 25

Source link

ಟೀಮ್ ಇಂಡಿಯಾದ ಮುಂದಿನ ಪಂದ್ಯ ಮುಂದಿನ ವರ್ಷ: ಇಲ್ಲಿದೆ ವೇಳಾಪಟ್ಟಿ – Kannada News | India vs New zealand Series Schedule

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿ ಮುಗಿದಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಸೌತ್ ಆಫ್ರಿಕಾ ತಂಡ ಗೆದ್ದುಕೊಂಡರೆ, ಮೂರು ಮ್ಯಾಚ್​ಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಇನ್ನು ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ವಶಪಡಿಸಿಕೊಂಡಿದೆ. ಹೀಗೆ ಮೂರು ಸರಣಿಗಳಲ್ಲಿ 2 ಸಿರೀಸ್ ಗೆದ್ದಿರುವ ಟೀಮ್ ಇಂಡಿಯಾ ಇನ್ನು ಕಣಕ್ಕಿಳಿಯುವುದು ಮುಂದಿನ ವರ್ಷ. ಅಂದರೆ ಜನವರಿ ತಿಂಗಳಲ್ಲಿ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 8 ಪಂದ್ಯಗಳ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಮೊದಲಿಗೆ ಮೂರು ಮ್ಯಾಚ್​ಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಭಾರತದಲ್ಲಿ ನಡೆಯಲಿರುವ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯ ಬೆನ್ನಲ್ಲೇ ಭಾರತ ತಂಡ ಟಿ20 ವಿಶ್ವಕಪ್ ಆಡಲಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ತನ್ನ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ.

ಅದರಲ್ಲೂ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ನ್ಯೂಝಿಲೆಂಡ್ ವಿರುದ್ಧದ ಸರಣಿ ಮೂಲಕ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿ ಪರಿಣಮಿಸಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ನ್ಯೂಝಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ – ಜನವರಿ 11 – ವಡೋದರಾ – ಮಧ್ಯಾಹ್ನ 1:30
  • ಎರಡನೇ ಏಕದಿನ ಪಂದ್ಯ – ಜನವರಿ 14 – ರಾಜ್‌ಕೋಟ್ – ಮಧ್ಯಾಹ್ನ 1:30
  • ಮೂರನೇ ಏಕದಿನ ಪಂದ್ಯ – ಜನವರಿ 18 – ಇಂದೋರ್ – ಮಧ್ಯಾಹ್ನ 1:30

ಇದನ್ನೂ ಓದಿ: ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ – ಜನವರಿ 21 – ನಾಗ್ಪುರ – ರಾತ್ರಿ 7:00
  • ಎರಡನೇ ಟಿ20 ಪಂದ್ಯ – ಜನವರಿ 23 – ರಾಯ್ಪುರ – ರಾತ್ರಿ 7:00
  • ಮೂರನೇ ಟಿ20 ಪಂದ್ಯ – ಜನವರಿ 25 – ಗುವಾಹಟಿ – ರಾತ್ರಿ 7:00
  • ನಾಲ್ಕನೇ ಟಿ20 ಪಂದ್ಯ – ಜನವರಿ 28 – ವಿಶಾಖಪಟ್ಟಣ – ರಾತ್ರಿ 7:00
  • ಐದನೇ ಟಿ20 ಪಂದ್ಯ – ಜನವರಿ 31 – ತಿರುವನಂತಪುರಂ – ರಾತ್ರಿ 7:00

Source link

ಈ ಗಂಡನ ಜತೆ ಸಂಸಾರ ಮಾಡಿದ್ದು ಸಾಕೆಂದು, ಹೊಸ ಗೆಳೆಯನ ಜತೆ ಸೇರಿ ಪತಿ ಹತ್ಯೆಗೆ ಸಂಚು, ಮಹಿಳೆಗೆ 19 ವರ್ಷ ಜೈಲು – Kannada News | UK Court Hands 19 Year Sentence to Woman for Plotting Husband’s Killing

ಲಂಡನ್, ಡಿಸೆಂಬರ್ 20: ಈ ಗಂಡನ ಜತೆ ಸಂಸಾರ ಮಾಡಿದ್ದು ಸಾಕೆಂದು ಹೊಸ ಗೆಳೆಯನ ಜತೆ ಸೇರಿ ಪತಿ ಹತ್ಯೆ(Murder)ಗೆ ಸಂಚು ರೂಪಿಸಿದ್ದ ಮಹಿಳೆಗೆ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗಾರ್ಡಿಯನ್ ಪ್ರಕಾರ, 46 ವರ್ಷದ ಮಿಚೆಲ್ ಮಿಲ್ಸ್​ ಮತ್ತು ಆಕೆಯ ಪ್ರೇಮಿ ಗೆರೈಂಟ್ ಬೆರ್ರಿ ಸೇರಿ ಕ್ರಿಸ್ಟೋಫರ್ ಮಿಲ್ಸ್ ಅವರ ಕೊಲೆಗೆ ಸಂಚು ರೂಪಿಸಿದ್ದರು. ಈ ಘಟನೆ ಯುಕೆಯಲ್ಲಿ ನಡೆದಿದೆ.

ಕಳೆದ ವರ್ಷ ಸೆಪ್ಟೆಂಬರ್ 20ರಂದು ದಾಳಿಯನ್ನು ನಡೆಸಲು ಸಹಾಯ ಮಾಡಲು ಬೆರ್ರಿ ಸ್ಟೀವನ್ ಥಾಮಸ್ ಎಂಬುವವನನ್ನು ಕೂಡ ತನ್ನೊಂದಿಗೆ ಸೇರಿಸಿಕೊಂಡಿದ್ದ. ಅಕ್ಟೋಬರ್‌ನಲ್ಲಿ ಸ್ವಾನ್ಸೀ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ಅವರು ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.

ಈ ಜೋಡಿ 2024ರಲ್ಲಿ ಪ್ರೀತಿಯಲ್ಲಿ ಬಿದ್ದಿತ್ತು, ತಮ್ಮ ಹೊಸ ಜೀವನ ಆರಂಭಿಸುವ ಹೆಬ್ಬಯಕೆಯಿಂದ ಗಂಡನನ್ನು ಕೊಲೆ ಮಾಡಲು ನಿರ್ಧರಿದ್ದಳು. ಮೂರು ತಿಂಗಳುಗಳ ಕಾಲ ಕ್ರಿಸ್ಟೋಫರ್​ ಅನ್ನು ಕೊಲ್ಲುವ ವಿವಿಧ ಮಾರ್ಗಗಳ ಬಗ್ಗೆ ಚರ್ಚಿಸಿ ಪರಸ್ಪರ ಸಂದೇಶಗಳನ್ನು ಕಳುಹಿಸಿಕೊಂಡಿದ್ದರು. ಗ್ರೇವಿಗೆ ಆಂಟಿಫ್ರೀಜ್‌ನಿಂದ ವಿಷ ಹಾಕುವುದು ಅಥವಾ ದಿಂಬಿನಿಂದ ಅವನನ್ನು ಉಸಿರುಗಟ್ಟಿಸಿ ಕೊಲ್ಲುವುದು ಕೂಡಾ ಅದರಲ್ಲಿ ಸೇರಿತ್ತು.

ಮತ್ತಷ್ಟು ಓದಿ: ಬಾಡಿಗೆಗಿದ್ದ ದಂಪತಿಯಿಂದ ಮನೆ ಮಾಲೀಕರ ಹತ್ಯೆ, ಸೂಟ್​ಕೇಸ್​ನಲ್ಲಿ ತುಂಡು ತುಂಡಾದ ದೇಹ ಪತ್ತೆ

ದಾಳಿ ನಡೆದಿದ್ದು ಯಾವಾಗ?
ಸೆಪ್ಟೆಂಬರ್ 20, 2024 ರಂದು, ಬೆರ್ರಿ ಮತ್ತು ಅವನ ಸಹಚರ ಸ್ಟೀವನ್ ಥಾಮಸ್, ಕಾರ್ಮಾರ್ಥೆನ್‌ಶೈರ್‌ನ ಸೆನಾರ್ಥ್‌ನಲ್ಲಿರುವ ಮನೆಗೆ ಮುಖವಾಡ ಧರಿಸಿ ದಾಳಿ ನಡೆಸಿದ್ದ. ಕ್ರಿಸ್ಟೋಫರ್‌ನನ್ನು ಕೊಂದು ಅವನ ಸಾವು ಆತ್ಮಹತ್ಯೆ ಎಂದು ತೋರಿಸುವುದು ಅವರ ಉದ್ದೇಶವಾಗಿತ್ತು. ದಾಳಿಕೋರರು ಬಂದೂಕುಗಳು, ಗ್ಯಾಸ್ ಮಾಸ್ಕ್‌ಗಳನ್ನು ಧರಿಸಿದ್ದರು ಮತ್ತು ಕೇಬಲ್ ಟೈಗಳನ್ನು ಹೊತ್ತಿದ್ದರು.

ನಿವೃತ್ತ ಯೋಧ ಕ್ರಿಸ್ಟೋಫರ್, ಮುಸುಕುಧಾರಿ ದಾಳಿಕೋರರ ವಿರುದ್ಧ ಹೋರಾಡಿದ್ದರು, ಮುಖಕ್ಕೆ ಹೊಡೆತ ಬಿದ್ದಿದ್ದರೂ ಅವರು ಬಂದೂಕುಗಳನ್ನು ಹಿಮ್ಮೆಟ್ಟಿಸಿದ್ದರು. ದಾಳಿಯ ನಂತರ, ಮಿಚೆಲ್ ಮಿಲ್ಸ್ 999 ಗೆ ಕರೆ ಮಾಡಿ, ತನ್ನ ಪತಿಯ ತಲೆಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದರು.

ಶಿಕ್ಷೆ 
ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಮಿಚೆಲ್ ಮಿಲ್ಸ್‌ಗೆ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೊತೆಗೆ ನ್ಯಾಯದ ಹಾದಿಯನ್ನು ತಿರುಚಿದ್ದಕ್ಕಾಗಿ 18 ತಿಂಗಳ ಏಕಕಾಲಿಕ ಶಿಕ್ಷೆಯನ್ನು ವಿಧಿಸಲಾಯಿತು. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಗೆರೈಂಟ್ ಬೆರ್ರಿ ಅವರಿಗೆ 19 ವರ್ಷಗಳ ಜೈಲು ಶಿಕ್ಷೆ ಮತ್ತು ಬಂದೂಕನ್ನು ಹೊಂದಿದ್ದಕ್ಕಾಗಿ 18 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸ್ಟೀವನ್ ಥಾಮಸ್ ಅವರನ್ನು ಖುಲಾಸೆಗೊಳಿಸಲಾಯಿತು ಆದರೆ ಬಂದೂಕು ಅಪರಾಧಕ್ಕಾಗಿ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Weekly Love Horoscope: ಡಿಸೆಂಬರ್​​ನ 4ನೇ ವಾರ ಈ ರಾಶಿಯ ಪ್ರೇಮ ಜೀವನಕ್ಕೆ ಮಹತ್ವದ ತಿರುವು ನೀಡುವ ವಾರ – Kannada News | December 4th Week Love Horoscope: Shukra’s Impact on Your Zodiac and Relationships

ಡಿಸೆಂಬರ್ ತಿಂಗಳ ನಾಲ್ಕನೇ ವಾರ ಪ್ರೀತಿ, ಪ್ರೇಮ, ವಿವಾಹ, ಆಕರ್ಷಣೆ, ಸುಖ, ಭೋಗಗಳಿಗೆ ಮೂಲನಾದ ಶುಕ್ರನು ಕೆಲವನ್ನು ಕೊಟ್ಟು ಕಸಿಯುವುದೂ ಕಸಿದು ಪುನಃ ಕೊಡುವುದೂ ಇದೆ. ಕಸಿದಾಗ ಉತ್ತಮವಾದುದನ್ನು ಕೊಡುತ್ತಾನೆ ಎಂಬ ಸಕಾರಾತ್ಮಕ ಚಿಂತನೆ ನಿಮ್ಮಲ್ಲಿ ಬಂದಾಗ ಮನಸ್ಸು ಹಗುರವಾಗಲಿದೆ. ದುಃಖದಿಂದ ದೂರವುಳಿಯಲು ಸಾಧ್ಯ. ದೈತ್ಯರ ಗುರುವಾದ ಶುಕ್ರನು ಎಲ್ಲರಿಗೂ ಬೇಕಾದ ಸುಖವನ್ನು ಮಾತ್ರ ಕೊಡಲಿ.

ಮೇಷ ರಾಶಿ:

ನಾಲ್ಕನೇ ವಾರ ಮೊದಲ ರಾಶಿಯವರಿಗೆ ಶುಕ್ರನ ಸಂಚಾರದಿಂದ ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹ ಮತ್ತು ತೀವ್ರತೆ ಕಡಿಮೆಯಾಗಲಿದೆ. ಆಕರ್ಷಣೆಯಿಂದ ತಕ್ಷಣ ಹುಟ್ಟುವ ಸ್ವಭಾವದಿಂದ ಹೊಸ ಸಂಬಂಧಗಳು ಆರಂಭವಾಗುವ ಸಾಧ್ಯತೆ ಇದೆ. ಆದರೆ ಅತಿಯಾದ ಆತುರ ಮತ್ತು ಸ್ವಾರ್ಥದಿಂದ ಪ್ರೇಮದಲ್ಲಿ ಸಣ್ಣ ಕಲಹಗಳು ಉಂಟಾಗಬಹುದು. ಈ ವಾರ ಪ್ರಿಯ ವ್ಯಕ್ತಿಯ ಭಾವನೆಗಳನ್ನು ಗೌರವಿಸಿದರೆ ಸಂಬಂಧ ಗಾಢವಾಗುತ್ತದೆ. ವಿವಾಹದ ವಿಚಾರದಲ್ಲಿ ಚರ್ಚೆಗಳು ನಡೆಯಬಹುದು.

ವೃಷಭ ರಾಶಿ:

ಶುಕ್ರನ ಆಧಿಪತ್ಯದ ಈ ರಾಶಿಗೆ ಶುಕ್ರನ ಅನುಗ್ರಹದಿಂದ ಪ್ರೇಮದಲ್ಲಿ ಸ್ಥಿರತೆ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಹೃದಯದಿಂದ ನೀಡಿದ ಪ್ರೀತಿ ಮತ್ತು ಮೃದುತ್ವ ತರುತ್ತದೆ. ಹಳೆಯ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳಿ. ಪ್ರೇಮ ವಿವಾಹ ಅಥವಾ ದಾಂಪತ್ಯ ಸುಖಕ್ಕೆ ಉತ್ತಮ ಕಾಲ. ಪ್ರಿಯರೊಂದಿಗೆ ಕಾಲ ಕಳೆಯಲು ಇದು ಅನುಕೂಲವಾದ ವಾರ.

ಮಿಥುನ ರಾಶಿ:

ನಾಲ್ಕನೇ ವಾರ ಪ್ರೇಮದಲ್ಲಿ ಮಾತುಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಶುಕ್ರನ ಸಂಚಾರದಿಂದ ನಿಮ್ಮ ಚತುರ ಮಾತುಗಳು ಆಕರ್ಷಣೆಯಾಗುತ್ತವೆ. ಆದರೆ ಅಜಾಗರೂಕ ಮಾತುಗಳು ದೂರವನ್ನೂ ಸೃಷ್ಟಿಸಬಹುದು. ಪ್ರೇಮ ಸಂಬಂಧದಲ್ಲಿ ಸ್ಪಷ್ಟತೆ ಅಗತ್ಯ. ಸಂದೇಶ ಅಥವಾ ಕರೆಗಳ ಮೂಲಕ ಹಳೆಯ ಪ್ರೀತಿ ಮತ್ತೆ ಜೀವ ಪಡೆಯುವ ಸೂಚನೆ.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ಡಿಸೆಂಬರ್ ನ ಈ ವಾರ ಭಾವನೆಗಳು ತುಂಬಾ ಆಳವಾಗಿ ಕೆಲಸ ಮಾಡಲಿದೆ. ಶುಕ್ರನ ಪ್ರಭಾವದಿಂದ ಮನಸ್ಸಿನೊಳಗೆ ಮರೆಮಾಚಿದ ಪ್ರೇಮ ಭಾವನೆಗಳು ಹೊರಬರುವ ಸಾಧ್ಯತೆ. ಹಳೆಯ ನೆನಪುಗಳು ಮತ್ತೆ ಕಾಡಬಹುದು. ನಿಮಗೆ ಪ್ರೇಮದಲ್ಲಿ ಭದ್ರತೆ ಬೇಕೆಂಬ ಆಸೆ ಹೆಚ್ಚಾಗುತ್ತದೆ. ಭಾವನಾತ್ಮಕ ಅವಲಂಬನೆ ಹೆಚ್ಚದಂತೆ ಎಚ್ಚರಿಕೆಯೂ ಅಗತ್ಯ.

ಸಿಂಹ ರಾಶಿ:

ಈ ವಾರ ಶುಕ್ರನ ಸಂಚಾರದಿಂದ ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗುತ್ತದೆ. ಪ್ರೇಮದಲ್ಲಿ ಗಮನ ನಿಮ್ಮ‌ ಮೇಲೆ ಕೇಂದ್ರೀಕೃತವಾಗಬೇಕು ಎಂಬ ಬಯಕೆ ಹೆಚ್ಚಬಹುದು. ಪ್ರಿಯ ವ್ಯಕ್ತಿಯಿಂದ ಗೌರವ ನಿರೀಕ್ಷೆ ಅಧಿಕವಾಗುತ್ತದೆ. ಅಹಂಕಾರವನ್ನು ಕಡಿಮೆ ಮಾಡಿ ಪ್ರೀತಿಯನ್ನು ಹಂಚಿಕೊಂಡರೆ ಸಂಬಂಧ ಇನ್ನಷ್ಟು ಹೊಳಪು. ಪ್ರೇಮವನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕಾಗಬಹುದು.

ಕನ್ಯಾ ರಾಶಿ:

ಈ ವಾರ ಪ್ರೇಮವನ್ನು ನೀವು ತರ್ಕದ ಕಣ್ಣಿನಿಂದ ನೋಡುವ ಪ್ರವೃತ್ತಿ ಹೆಚ್ಚಾಗುತ್ತದೆ. ಶುಕ್ರನ ಪ್ರಭಾವದಿಂದ ಹೃದಯ ಮತ್ತು ಬುದ್ಧಿಯ ನಡುವೆ ಸಂಘರ್ಷ ಉಂಟಾಗಬಹುದು. ಅತಿಯಾದ ವಿಮರ್ಶೆ ಪ್ರೀತಿಯ ಮಧುರತೆಯನ್ನು ಕಡಿಮೆ ಮಾಡಬಹುದು. ಸಣ್ಣ ತಪ್ಪುಗಳನ್ನು ಕ್ಷಮಿಸುವ ಮನೋಭಾವ ಬೆಳೆಸಿದರೆ ಸಂಬಂಧಕ್ಕೆ ಮಾರ್ಗ ಸುಗಮ.

ತುಲಾ ರಾಶಿ:

ಶುಕ್ರನ ಸ್ವಾಮಿತ್ವದ ರಾಶಿಯವರಿಗೆ ಅನುಕೂಲ ಸ್ಥಿತಿಯಲ್ಲಿ ಇರುವುದರಿಂದ ಪ್ರೇಮ ಜೀವನ ಅತ್ಯಂತ ಸುಂದರವಾಗಿ ಸಾಗಲು ಬೇಕಾದ ಅವಕಾಶಗಳು ಸಿಗಲಿದೆ. ಆಕರ್ಷಣೆ ಇಬ್ಬರಲ್ಲೂ ಸಮತೋಲನದಲ್ಲಿದ್ದು ಪರಸ್ಪರ ಗೌರವವನ್ನು ಕೊಟ್ಟರೆ ಮಧುರತೆ ಇಬ್ಬರಲ್ಲಿಯೂ ಹೆಚ್ಚಾಗುತ್ತದೆ. ಹೊಸ ಪ್ರೇಮ ಆರಂಭಕ್ಕೂ, ವಿವಾಹ ಸಂಬಂಧದ ಮಾತುಕತೆಗೆ ಅತ್ಯುತ್ತಮ ಕಾಲ. ಅತಿಪ್ರಿಯರೊಂದಿಗೆ ಸೌಂದರ್ಯ ಕ್ಷಣಗಳನ್ನು ಹಂಚಿಕೊಳ್ಳುವಿರಿ.

ವೃಶ್ಚಿಕ ರಾಶಿ:

ಈ ರಾಶಿಯವರಿಗೆ ಪ್ರೇಮದಲ್ಲಿ ಸ್ವಾಮ್ಯಭಾವ ಹೆಚ್ಚಾಗಬಹುದು. ಶುಕ್ರನ ಸಂಚಾರದಿಂದ ಆಂತರಿಕ ಅಸೂಯೆ ಮತ್ತು ಸಂಶಯಗಳು ಮೇಲಕ್ಕೆ ಬರಲಿದೆ. ಇದನ್ನು ನಿಯಂತ್ರಿಸಿದರೆ ಸಂಬಂಧ ಅತ್ಯಂತ ಆಳವಾಗಿ ರೂಪುಗೊಳ್ಳುತ್ತದೆ. ನಿಮ್ಮ ಮೇಲೆ ಗುಪ್ತ ಪ್ರೇಮ ಅಥವಾ ರಹಸ್ಯ ಸಂಬಂಧಗಳ ಸೂಚನೆಯೂ ಸಿಗಲಿದೆ.

ಧನು ರಾಶಿ:

ಇದು ಸ್ವಾತಂತ್ರ್ಯ ಮತ್ತು ಪ್ರೇಮ ಎರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಬೇಕಾದ ವಾರ. ಶುಕ್ರನು ನಿಮ್ಮ ರಾಶಿಯಲ್ಲಿಯೇ ಇರುವ ಕಾರಣ ದೂರದ ವ್ಯಕ್ತಿಯೊಂದಿಗೆ ಪ್ರೇಮ ಬೆಳೆಯಬಹುದು. ಪ್ರವಾಸ, ಅಧ್ಯಯನ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಪರಿಚಯವಾಗುವ ಸಾಧ್ಯತೆ. ಪ್ರೇಮದಲ್ಲಿ ತಾತ್ವಿಕ ಚರ್ಚೆಗಳು ಹೆಚ್ಚಾಗಿರುವುದು.

ಮಕರ ರಾಶಿ:

ಈ ವಾರ ಒಪ್ಪಿತ ಪ್ರೇಮದಲ್ಲಿ ಜವಾಬ್ದಾರಿ ಮತ್ತು ಭವಿಷ್ಯದ ಯೋಜನೆಗಳು ಮುಖ್ಯವಾಗುತ್ತವೆ. ಶುಕ್ರನ ಸಂಚಾರದಿಂದ ಗಂಭೀರ ಸಂಬಂಧಗಳು ಸ್ಥಿರ ರೂಪ ಪಡೆಯುತ್ತವೆ. ಪ್ರೇಮ ವಿವಾಹದ ಬಗ್ಗೆ ಕುಟುಂಬದೊಂದಿಗೆ ಮಾತುಕತೆ ನಡೆಯಲಿದ್ದು ಭಾವನೆಗಳನ್ನು ವ್ಯಕ್ತಪಡಿಸಲು ಸ್ವಲ್ಪ ಹಿಂಜರಿಕೆ ಕಾಣಬಹುದು, ಆದರೆ ಅಂತರಂಗ ಗಟ್ಟಿಯಾಗಿರಲಿ.

ಕುಂಭ ರಾಶಿ:

ಪ್ರೇಮದಿಂದ ಸ್ನೇಹಕ್ಕೆ ಬದಲಾವಣೆ ಆಗುವ ಸಾಧ್ಯತೆ ಇರುವ ವಾರ. ಶುಕ್ರನು ವಿಭಿನ್ನ ಆಲೋಚನೆಗಳಿರುವ ವ್ಯಕ್ತಿಯತ್ತ ಆಕರ್ಷಣೆ ಮಾಡಿಸುವನು. ಸಾಮಾಜಿಕ ಜಾಲತಾಣ ಅಥವಾ ಸಮೂಹ ಚಟುವಟಿಕೆಗಳಿಂದ ಪ್ರೇಮ ಆರಂಭ. ಸಂಪ್ರದಾಯ ಬದ್ಧತೆಯಿಂದ ಭಿನ್ನವಾದ ಸಂಬಂಧಗಳಲ್ಲಿ ಭಿನ್ನಮತ ಪ್ರಕಟ.

ಮೀನ ರಾಶಿ:

ಈ ವಾರ ಶುಕ್ರನ ಉನ್ನತ ಪ್ರಭಾವದಿಂದ ಪ್ರೇಮ ಅತ್ಯಂತ ಮೃದು, ಕರುಣಾಮಯ ಅನುಭವವಾಗುತ್ತದೆ. ಈ ವಾರ ಆಕಸ್ಮಿಕವಾಗಿ ಆದ ಪರಿಚಯ ಕಾರಣಾಂತರಗಳಿಂದ ಮುಂದುವರಿಯುವುದು. ಆರಂಭದಲ್ಲಿ ಯಾವ ಭಾವನೆಯೂ ಇಲ್ಲದೇ ಇರುವ ನಿಮಗೆ ಅನಂತರ ಸಂದೇಹ ಆರಂಭವಾಗಲಿದೆ. ಸಹವರ್ತಿಗಳೂ ಅದಕ್ಕೆ ಸಹಕಾರವನ್ನು ನೀಡುವರು. ಗುರು ಹಿರಿಯರ ಸಮಕ್ಷದಲ್ಲಿ ವಿವಾಹಕ್ಕೂ ನಿಶ್ಚಯವಾಗಲಿದೆ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

Video: ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ, ಮೂವರು ಸಾವು – Kannada News | Three Killed in Taiwan Knife Attack; Smoke Devices Thrown at Taipei Station

ತೈಪೆ, ಡಿಸೆಂಬರ್ 20: ತೈವಾನ್​ನಲ್ಲಿ ವ್ಯಕ್ತಿಯೊಬ್ಬ ತೈಪೆ ರೈಲು ನಿಲ್ದಾಣದ ಬಳಿ ಜನರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಂಕಿತನು ಮೊದಲು ತೈಪೆಯ ಮುಖ್ಯ ರೈಲು ನಿಲ್ದಾಣದ ಬಳಿ ಸ್ಮೋಕ್ ಬಾಂಬ್ ಎಸೆದಿದ್ದ.ಇದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡಿತು. ಜನರು ಆ ಪ್ರದೇಶದಿಂದ ಓಡಿ ಹೋಗಲು ಮುಂದಾದಾಗ ಆತ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಆ ವ್ಯಕ್ತಿ ಕಟ್ಟಡದ ಮೇಲಿನ ಮಹಡಿಯಿಂದ ಕೆಳಗೆ ಬಿದ್ದಿದ್ದು ಗಂಭೀರ ಗಾಯಗಳಾಗಿತ್ತು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆತನ ಒಬ್ಬನೇ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದು, ಇಲ್ಲಿಯವರೆಗೆ ಯಾವ ಸಹಚರನೂ ಪತ್ತೆಯಾಗಿಲ್ಲ. ದಾಳಿ ಮಾತ್ರ ಭಯಾನಕವಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Midday Naps: ಮಧ್ಯಾಹ್ನ ನಿದ್ರಿಸುವುದು ಗ್ರಹ ದೋಷಕ್ಕೆ ಕಾರಣವಾಗುತ್ತದೆಯೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Midday Naps: An Astrological and Spiritual Perspective on Daytime Sleep

ಮಧ್ಯಾಹ್ನದ ಹೊತ್ತು ನಿದ್ರಿಸುವುದು

ಪ್ರತಿಯೊಬ್ಬ ಮನುಷ್ಯನ ದೇಹಕ್ಕೆ ನಿದ್ರೆ ಅತ್ಯಗತ್ಯ. ನಿದ್ರೆಯು ದೇಹದ ಆರೋಗ್ಯ, ಆಯುಷ್ಯ ವೃದ್ಧಿ ಮತ್ತು ಮನಸ್ಸಿನ ಶಾಂತಿಗೆ ಅವಶ್ಯಕವಾಗಿದೆ. ಆದರೆ, ನಾವು ಮಾಡುವ ನಿದ್ರೆಯು ರಾತ್ರಿ ನಿದ್ರೆಯೇ ಅಥವಾ ಹಗಲು ನಿದ್ರೆಯೇ ಎಂಬುದನ್ನು ಅವಲಂಬಿಸಿ ಅದರ ಶುಭಾಶುಭ ಪರಿಣಾಮಗಳು ನಿರ್ಧಾರವಾಗುತ್ತವೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಒಳ್ಳೆಯದೇ, ಅಥವಾ ಕೆಟ್​ಟದೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ವೃದ್ಧರು, ರೋಗಿಗಳು, ಸಣ್ಣ ಮಕ್ಕಳು ಮತ್ತು ಮಕ್ಕಳನ್ನು ಹಡೆದಿರುವ ತಾಯಂದಿರು ಮಧ್ಯಾಹ್ನ ನಿದ್ರೆ ಮಾಡಬಹುದು. ಇವರು ತಮ್ಮ ಆರೋಗ್ಯ ಮತ್ತು ದೇಹದ ಅಗತ್ಯಗಳಿಗಾಗಿ ಹಗಲಿನಲ್ಲಿ ನಿದ್ರಿಸಬಹುದಾಗಿದೆ. ಆದರೆ, ದೇಹಪುಷ್ಟಿಯಿಂದ ಕೂಡಿದ್ದು, ಕರ್ಮನಿರತರಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು, ಕಾಯಕವೇ ಕೈಲಾಸ ಎಂಬ ಮಾತನ್ನು ಅನುಸರಿಸುವವರು ಹಗಲಿನಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ನಿದ್ರಿಸುವುದು ಸೂಕ್ತವಲ್ಲ ಎಂದು ಶಾಸ್ತ್ರಗಳು ತಿಳಿಸುತ್ತವೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಮಧ್ಯಭಾಗ, ನಿರ್ದಿಷ್ಟವಾಗಿ ಮಧ್ಯಾಹ್ನ 12 ರಿಂದ ಸಂಜೆ 3 ಗಂಟೆಯ ಅವಧಿಯಲ್ಲಿ ನಿದ್ರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ.

ಈ ಸಮಯದಲ್ಲಿ ನಿದ್ರಿಸುವುದರಿಂದ ಹಲವು ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಗ್ರಹಕಾಟ ಅಥವಾ ನವಗ್ರಹಗಳ ಅಶುಭ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ನಮ್ಮ ದೈನಂದಿನ ಕೆಲಸ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಋಣಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಸಾಧ್ಯತೆ, ದೈವಬಲ ಕಡಿಮೆಯಾಗುವುದು ಮತ್ತು ಮೆದುಳಿನ ಜಾಗರೂಕತೆ ಕುಗ್ಗುವ ಸಾಧ್ಯತೆ ಇರುತ್ತದೆ. ಇಂತಹ ನಿದ್ರೆಯಿಂದ ಪೂರ್ವಜರ ಅನುಗ್ರಹವೂ ದೊರೆಯುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಕೆಲವರು ಕಚೇರಿಗಳಲ್ಲಿ ತಮ್ಮ ಕುರ್ಚಿಯಲ್ಲಿ ಕುಳಿತು ನಿದ್ರೆಗೆ ಜಾರುವುದನ್ನು ನಾವು ನೋಡುತ್ತೇವೆ. ಇದು ಮಹಾದೋಷವೆಂದು ಪರಿಗಣಿಸಲಾಗುತ್ತದೆ. ಕಚೇರಿಯ ಕುರ್ಚಿ ಒಂದು ರೀತಿಯ ಸಿಂಹಾಸನವಿದ್ದಂತೆ; ರಾಜರು ಸಿಂಹಾಸನದ ಮೇಲೆ ನಿದ್ರಿಸುತ್ತಾರೆಯೇ? ಇಲ್ಲ. ಹಾಗೆಯೇ, ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ನಿದ್ರಿಸುವುದು ಸರಿಯಲ್ಲ. ಒಂದು ವೇಳೆ ನಿದ್ರೆ ಬಂದಲ್ಲಿ, ತಕ್ಷಣ ಎದ್ದು ಸ್ವಲ್ಪ ಓಡಾಡಿ, ಮುಖ ತೊಳೆದುಕೊಂಡು ಮತ್ತೆ ಕೆಲಸಕ್ಕೆ ಮರಳುವುದು ಉತ್ತಮ. ಕಚೇರಿಯಲ್ಲಿ ನಿದ್ರಿಸುವುದು ಅಶುಭ ಫಲಗಳನ್ನು ತರುತ್ತದೆ. ರಾಜಕೀಯ ನಾಯಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿದ್ರೆಗೆ ಜಾರುವುದೂ ಸಹ ಅಶಕ್ತತೆಯ ಸಂಕೇತವಾಗಿ ಅಶುಭ ಫಲಿತಾಂಶಗಳನ್ನು ತೋರಿಸುತ್ತದೆ. ಒಟ್ಟಾರೆ, ಮಧ್ಯಾಹ್ನದ ನಿದ್ರೆಯು ವೈಯಕ್ತಿಕ ನಂಬಿಕೆಗಳು ಮತ್ತು ಧರ್ಮಶಾಸ್ತ್ರಗಳ ದೃಷ್ಟಿಯಿಂದ ಶುಭವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:54 am, Sat, 20 December 25

Source link

ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಭೀತಿ; ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ಬ್ರೇಕ್ – Kannada News | Bengaluru Turf Club Halts Races: Glanders Disease Prompts Precautionary Measures

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ಬ್ರೇಕ್

ಬೆಂಗಳೂರು, ಡಿಸೆಂಬರ್ 20: ಹೈದರಾಬಾದ್‌ನಲ್ಲಿ ಕುದುರೆಗಳಿಗೆ ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆಯಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ (Bengaluru Turf Club) ಕಳೆದ ಎರಡು ವಾರಗಳಿಂದ ಎಲ್ಲಾ ರೇಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕುದುರೆಗಳಲ್ಲಿ ಜೀವಕ್ಕೆ ಅಪಾಯಕಾರಿಯಾದ ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇರುವುದರಿಂದ ಟರ್ಫ್ ಕ್ಲಬ್ ಆಡಳಿತ ಮಂಡಳಿ ಗಂಭೀರ ಕ್ರಮ ಕೈಗೊಂಡಿದೆ.

700ಕ್ಕೂ ಹೆಚ್ಚು ಕುದುರೆಗಳಿಗೆ ವೈದ್ಯಕೀಯ ಪರೀಕ್ಷೆ

ಹೈದರಾಬಾದ್‌ನಲ್ಲಿ ಮೊದಲಿಗೆ ಗ್ಲಾಂಡರ್ಸ್ ರೋಗದ ಪ್ರಕರಣಗಳು ವರದಿಯಾದ ತಕ್ಷಣ ಎಚ್ಚೆತ್ತ ಬಿಟಿಸಿ, ತನ್ನಲ್ಲಿರುವ 700ಕ್ಕೂ ಹೆಚ್ಚು ಕುದುರೆಗಳನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಕುದುರೆಗಳ ಸಲೈವಾ ಮಾದರಿಗಳನ್ನು ಹರಿಯಾಣದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಪ್ರಕಾರ ಒಂದು ಕುದುರೆಯಲ್ಲಿ ಮಾತ್ರ ಗ್ಲಾಂಡರ್ಸ್ ಪಾಸಿಟಿವ್ ಕಂಡುಬಂದಿದೆ. ಆ ಕುದುರೆಯನ್ನು ಈಗಾಗಲೇ ಸಂಪೂರ್ಣವಾಗಿ ಬೇರ್ಪಡಿಸಿ ಚಿಕಿತ್ಸೆಗೊಳಪಡಿಸಲಾಗಿದೆ. ಉಳಿದ ಎಲ್ಲಾ ಕುದುರೆಗಳು ಸುರಕ್ಷಿತವಾಗಿದ್ದು, ವಿಶೇಷ ಆರೈಕೆಯೊಂದಿಗೆ ಅವುಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತಿದೆ ಎಂದು ಬಿಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಬಿಎ ಅಧಿಕಾರಿಗಳು ಹಾಗೂ ಪಶುವೈದ್ಯಕೀಯ ಸಿಬ್ಬಂದಿ ಟರ್ಫ್ ಕ್ಲಬ್‌ಗೆ ನಿರಂತರ ಭೇಟಿ ನೀಡಿ ನೈರ್ಮಲ್ಯತೆ ಹಾಗೂ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕುದುರೆಗಳಿಗೆ ಸೋಂಕಿಲ್ಲವೆಂದು ತಿಳಿದ ನಂತರ ರೆಸ್ ಪುನರಾರಂಭ

ಕರ್ನಾಟಕ ಕುದುರೆಗಳ ಟ್ರೈನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ್ ಅಣ್ಣಯ್ಯ ಮಾತನಾಡಿ, ಯಾವುದೇ ವದಂತಿಗಳಿಗೆ ಆಸ್ಪದ ನೀಡಬೇಕಿಲ್ಲ. ವರದಿಗಳು ಸ್ಪಷ್ಟವಾಗಿದ್ದು, ಮುನ್ನೆಚ್ಚರಿಕೆಗಾಗಿ ಮಾತ್ರ ರೇಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ಕುದುರೆಯನ್ನು ನಿಗದಿತ ಅವಧಿಯಲ್ಲಿ ಮೂರು ಬಾರಿ ಪರೀಕ್ಷಿಸಿ ಯಾವುದೇ ಸೋಂಕಿಲ್ಲ ಎಂಬ ವರದಿ ಬಂದ ಬಳಿಕವೇ ರೇಸ್‌ಗಳನ್ನು ಪುನರಾರಂಭಿಸಲಾಗುವುದು ಎಂದು ಬೆಂಗಳೂರು ಟರ್ಫ್ ಕ್ಲಬ್ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊದಲ ದಿನ ಬಾಕ್ಸ್ ಆಫೀಸ್​​ನಲ್ಲಿ ಸೊರಗಿದ ‘ಅವತಾರ್ 3’; ‘ಧುರಂಧರ್’ ಮೇಲುಗೈ – Kannada News | Avatar 3 Fire and Ash Struggles Indian Box Office Amid Dhurandhar’s Rise

ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ‘ಅವತಾರ್’ ಹಾಗೂ ‘ಅವತಾರ್ 2’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಡಿಸೆಂಬರ್ 19ರಂದು ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಕಲೆಕ್ಷನ್ ಸೊರಗಿದೆ. ಈ ಸಿನಿಮಾದ ಭಾರತದ ಕಲೆಕ್ಷನ್ ಎಷ್ಟು? ಈ ಹಿಂದಿನ ಭಾಗ ಎಷ್ಟು ಗಳಿಕೆ ಮಾಡಿತ್ತು? ಧುರಂಧರ್ ಗಳಿಕೆ ವಿವರ ಇಲ್ಲಿದೆ.

‘ಅವತಾರ್ 2’ ಸಿನಿಮಾ ಭಾರತದಲ್ಲಿ ಮೊದಲ ದಿನ ಗಳಿಕೆ ಮಾಡಿದ್ದು 48 ಕೋಟಿ ರೂಪಾಯಿ. ಆದರೆ, ‘ಅವತಾರ್ 3’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇವಲ 20 ಕೋಟಿ ರೂಪಾಯಿ. ‘ಅವತಾರ್ 2’ ಸಿನಿಮಾ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇತ್ತು. ಈ ಚಿತ್ರ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಆದರೆ, ‘ಅವತಾರ್ 3’ ಸಿನಿಮಾ ಹೈಪ್ ಸೃಷ್ಟಿಸಲು ವಿಫಲವಾಗಿದೆ.

20 ಕೋಟಿ ರೂಪಾಯಿ ದೊಡ್ಡ ಮೊತ್ತವೇ ಎಂದು ಕೆಲವರು ಹೇಳಬಹುದು. ಆದರೆ, ‘ಅವತಾರ್’ ಸರಣಿ ಎಂದು ಪರಿಗಣಿಸಿದಾಗ ಈ ಗಳಿಕೆ ತುಂಬಾನೇ ಸಣ್ಣದು. ಈ ವೀಕೆಂಡ್, ಕ್ರಿಸ್​ಮಸ್ ಹಾಗೂ ಹೊಸ ವರ್ಷದ ರಜೆಗಳು ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರಿಲೀಸ್​ಗೂ ಮೊದಲೇ ವಿಮರ್ಶಕರಿಂದ ಕೆಟ್ಟ ವಿಮರ್ಶೆ ಪಡೆದ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’

‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಚಿತ್ರಕ್ಕೆ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ಡಿಸೆಂಬರ್ 5ರಂದು ತೆರೆಗೆ ಬಂದ ‘ಧುರಂಧರ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಬಹುತೇಕ ಶೋ ಹೌಸ್​ಫುಲ್ ಆಗುತ್ತಿದೆ. ಹೀಗಾಗಿ, ‘ಅವಾತಾರ್ 3’ ಚಿತ್ರಕ್ಕೆ ಸಿಗುತ್ತಿರೋ ಪರದೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಡಿಸೆಂಬರ್ 19ರಂದು ಈ ಚಿತ್ರ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಅವತಾರ್ ಚಿತ್ರಕ್ಕಿಂತ ಮೇಲುಗೈ ಸಾಧಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version