ಕೋಪದಲ್ಲಿ ಒದ್ದ ಚೆಂಡಿನಿಂದ ಪಂದ್ಯವೇ ಟೈ ಆಯ್ತು! – Kannada News | Crazy DPL Finish: Accidental Footy Kick Saves Match Into Tie

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ರೋಚಕ ಹೋರಾಟಕ್ಕೆ ಡೆಲ್ಲಿ ಪ್ರೀಮಿಯರ್ ಲೀಗ್ ಸಾಕ್ಷಿಯಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂ ಡೆಲ್ಲಿ ಟೈಗರ್ಸ್ ಮತ್ತು ಔಟರ್ ಡೆಲ್ಲಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮೊದಲು ಬ್ಯಾಟ್ ಮಾಡಿದ ನ್ಯೂ ಡೆಲ್ಲಿ ಟೈಗರ್ಸ್ ತಂಡವು ನಿಗದಿತ 15 ಓವರ್​ಗಳಲ್ಲಿ 155 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡದ ಬ್ಯಾಟರ್​ಗಳು 14 ಓವರ್​ಗಳ ಮುಕ್ತಾಯದ ವೇಳೆಗೆ 147 ರನ್ ಗಳಿಸಿದ್ದರು. ಅದರಂತೆ ಅಂತಿಮ ಓವರ್​ನಲ್ಲಿ ಗೆಲುವಿಗೆ 9 ರನ್​ಗಳ ಅವಶ್ಯಕತೆಯಿತ್ತು.

ಕೊನೆಯ ಓವರ್​ನ ಮೊದಲ 5 ಎಸೆತಗಳಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ 8 ರನ್​ ಕಲೆಹಾಕಿತು. ಅದರಂತೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್​ ಬೇಕಿತ್ತು.

ಕ್ರೇಝಿ ರನೌಟ್!

ಲಕ್ಷ್ಮಣ್ ಎಸೆದ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಬ್ಯಾಟರ್ ಪ್ರಥಮ್ ಸಲೂಜಾ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ನ್ಯೂ ಡೆಲ್ಲಿ ಟೈಗರ್ಸ್ ನಾಯಕ ಹಿಮ್ಮತ್ ಸಿಂಗ್ ಓಡಿ ಬಂದು ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಕೈಯಿಂದ ಚೆಂಡು ಜಾರಿತು.

ಇತ್ತ ಚೆಂಡಿನೊಂದಿಗೆ ಪಂದ್ಯ ಕೂಡ ಕೈತಪ್ಪಿತು ಎಂಬ ತೀವ್ರ ಕೋಪ ಮತ್ತು ಹತಾಶೆಯಿಂದ ಹಿಮ್ಮತ್ ಸಿಂಗ್ ಚೆಂಡನ್ನು ಕಾಲಿನಿಂದ ಬಲವಾಗಿ ಒದ್ದರು.

ಹಿಮ್ಮತ್ ಸಿಂಗ್ ಒದ್ದ ಚೆಂಡು ನೇರವಾಗಿ ಹೋಗಿ ನಾನ್-ಸ್ಟ್ರೈಕರ್ ಎಂಡ್‌ನ ವಿಕೆಟ್‌ಗೆ ಬಡಿಯಿತು! ಈ ವೇಳೆ ಬ್ಯಾಟರ್ ಕ್ರೀಸ್‌ನಿಂದ ಬಹಳ ದೂರವಿದ್ದ ಕಾರಣ ರನ್-ಔಟ್ ಆದರು. ಹತಾಶೆಯ ಈ ಕಿಕ್​ನಿಂದ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತು.

ಗೆದ್ದಿದ್ದು ಯಾರು?

ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 6 ಎಸೆತಗಳಲ್ಲಿ ಬರೋಬ್ಬರಿ 20 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ನ್ಯೂ ಡೆಲ್ಲಿ ಟೈಗರ್ಸ್ 3 ಎಸೆತಗಳಲ್ಲಿ 6 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ಪಡೆ ಸೂಪರ್ ಓವರ್​ನಲ್ಲಿ ಸೂಪರ್ ಜಯವನ್ನು ತಮ್ಮದಾಗಿಸಿಕೊಂಡರು.

ನ್ಯೂ ಡೆಲ್ಲಿ  ಟೈಗರ್ಸ್ ಪ್ಲೇಯಿಂಗ್ 11: ಶಿವಂ ಗುಪ್ತಾ (ವಿಕೆಟ್ ಕೀಪರ್) ಲಕ್ಷಯ್ ತರೇಜಾ , ವೈಭವ್ ರಾವಲ್ , ಹಿಮ್ಮತ್ ಸಿಂಗ್ (ನಾಯಕ) , ತನುಜ್ ಪವಾರ್ , ಆರ್ಯನ್ ಶರ್ಮಾ , ಹೃತಿಕ್ ಶೋಕೀನ್ , ಮನೀಶ್ ಸೆಹ್ರಾವತ್ , ಯಶ್ಜೀತ್ , ಪ್ರದ್ಯುಮಾನ್ ಸನನ್ , ಲಕ್ಷ್ಮಣ್.

ಇದನ್ನೂ ಓದಿ: ರೋಹಿತ್ ಶರ್ಮಾ ಸೆಂಚುರಿಯಿಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು!

ಔಟರ್ ಡೆಲ್ಲಿ ವಾರಿಯರ್ಸ್ ಪ್ಲೇಯಿಂಗ್ 11: ಯಜಸ್ ಶರ್ಮಾ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ , ಅಕ್ಷಯ್ ಸೈನಿ , ಅಮನ್ ಚೌಧರಿ , ಮೋನು ಶುಕ್ಲಾ , ಹರ್ಷ್ ತ್ಯಾಗಿ , ಪ್ರಥಮ್ ಸಲೂಜಾ , ಶಿವಂ ಶರ್ಮಾ , ಸಿದ್ಧಾಂತ್ ಶರ್ಮಾ (ನಾಯಕ) , ಧನ್ಯಾ ನಕ್ರಾ ,ನವದೀಪ್ ಸೈನಿ.

Source link

Premanand Maharaj: ಆಪ್ತ ಸ್ನೇಹಿತನೇ ಶತ್ರುವಾದರೆ ಏನು ಮಾಡಬೇಕು? ಪ್ರೇಮಾನಂದ ಮಹಾರಾಜರ ಆಧ್ಯಾತ್ಮಿಕ ಸಲಹೆ! – Kannada News | What to Do When a Best Friend Turns into an Enemy? Premanand Maharaj Shares Spiritual Wisdom

ಜೀವನದ ಏರಿಳಿತಗಳಲ್ಲಿ ನಾವು ಅನೇಕ ಜನರ ಸಂಪರ್ಕಕ್ಕೆ ಬರುತ್ತೇವೆ. ಕೆಲವರು ನಮಗೆ ಆಪ್ತರಾಗುತ್ತಾರೆ, ಇನ್ನು ಕೆಲವರು ಆತ್ಮೀಯ ಸ್ನೇಹಿತರಾಗುತ್ತಾರೆ. ಆದರೆ, ಕರುಡರಂತೆ ನಂಬಿದ ಅದೇ ಆಪ್ತ ಸ್ನೇಹಿತ ಇದ್ದಕ್ಕಿದ್ದಂತೆ ಶತ್ರುವಾಗಿ ಬದಲಾಗಿ ಬೆನ್ನಿಗೆ ಚೂರಿ ಹಾಕಿದರೆ ಏನು ಮಾಡಬೇಕು? ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುತ್ತಾ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ವೃಂದಾವನದ ಜನಪ್ರಿಯ ಸಂತ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಪ್ರೇಮಾನಂದ ಮಹಾರಾಜ್ ಅವರು ಸರಳ ಮತ್ತು ಮಾರ್ಮಿಕ ಮಾರ್ಗವನ್ನು ತೋರಿಸಿದ್ದಾರೆ.

ಪ್ರತಿಕಾರಕ್ಕಿಂತ ದೂರವಿರುವುದೇ ಬುದ್ಧಿವಂತಿಕೆ:

ಪ್ರೇಮಾನಂದ ಮಹಾರಾಜರು ತಮ್ಮ ಧರ್ಮೋಪದೇಶಗಳಲ್ಲಿ ಜನರ ನಿಜ ಜೀವನದ ಸಂಕೀರ್ಣ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ನೀಡುತ್ತಾರೆ. ಇತ್ತೀಚೆಗೆ ಭಕ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಯಾರಾದರೂ ನಿಮಗೆ ಪ್ರತಿಕೂಲವಾಗಿದ್ದರೆ, ನೀವು ಪ್ರತಿಯಾಗಿ ಅವರಿಗೆ ಪ್ರತಿಕೂಲವಾಗಬೇಡಿ. ಹಿಂಸೆಗೆ ಪ್ರತಿಯಾಗಿ ಹಿಂಸೆ ಮಾಡುವುದರಿಂದ ಎಂದಿಗೂ ಶಾಂತಿ ಸಿಗುವುದಿಲ್ಲ. ಬದಲಿಗೆ, ಅಂತಹ ವ್ಯಕ್ತಿಯಿಂದ ಸಂಪೂರ್ಣವಾಗಿ ದೂರವಿರುವುದೇ ಬುದ್ಧಿವಂತ ಕೆಲಸ,” ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ಮದ ಮೇಲಿರಲಿ ನಂಬಿಕೆ:

ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ವಿವರಿಸಿದ ಮಹಾರಾಜರು, ಪ್ರತಿಯೊಬ್ಬ ವ್ಯಕ್ತಿಯ ಕರ್ಮವೇ ಅವನ ಹಣೆಬರಹವನ್ನು ನಿರ್ಧರಿಸುತ್ತದೆ ಎಂದಿದ್ದಾರೆ. ಒಬ್ಬ ಸ್ನೇಹಿತ ನಿಮಗೆ ಹಾನಿ ಮಾಡಲು ಯತ್ನಿಸಿದರೆ, ಅವನು ವಾಸ್ತವವಾಗಿ ತನ್ನ ಸ್ವಂತ ಕರ್ಮಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ನೀವು ಶಾಂತರಾಗಿರಿ, ದೇವರು ಹಾಗೂ ನಿಮ್ಮ ಒಳ್ಳೆಯ ಕಾರ್ಯಗಳಲ್ಲಿ ನಂಬಿಕೆ ಇಡಿ. ಯಾರಾದರೂ ತಪ್ಪು ಮಾಡಿದರೆ ಪ್ರಕೃತಿಯ ನಿಯಮದಂತೆ ಅವರಿಗೆ ಸೂಕ್ತ ಶಿಕ್ಷೆಯಾಗುತ್ತದೆ, ಅದಕ್ಕಾಗಿ ನೀವು ನಿಮ್ಮ ಕೈಗಳನ್ನು ಕೊಳಕು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಮೌನ ಮತ್ತು ನಾಲಿಗೆಯ ನಿಯಂತ್ರಣವೇ ದೊಡ್ಡ ಶಕ್ತಿ:

ಸಾಮಾನ್ಯವಾಗಿ ಸ್ನೇಹಿತನ ನಂಬಿಕೆದ್ರೋಹದಿಂದ ಕೋಪಗೊಂಡು ಜನರು ದುಃಖಿತರಾಗುತ್ತಾರೆ ಮತ್ತು ಸೇಡು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಆದರೆ ಮಹಾರಾಜರ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ ಮೌನವಾಗಿರುವುದು ಮತ್ತು ನಿಮ್ಮ ನಾಲಿಗೆಯನ್ನು ನಿಯಂತ್ರಿಸುವುದೇ ಅತ್ಯಂತ ದೊಡ್ಡ ಶಕ್ತಿ. “ಕೆಟ್ಟ ಪದಗಳನ್ನು ಮಾತನಾಡಬೇಡಿ ಅಥವಾ ಕೋಪದಲ್ಲಿ ಸೇಡು ತೀರಿಸಿಕೊಳ್ಳಬೇಡಿ. ನಿಮ್ಮ ಮೌನವೇ ಅವನಿಗೆ ತಲುಪುವ ಅತಿ ದೊಡ್ಡ ಉತ್ತರವಾಗಿರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ದ್ವೇಷವನ್ನು ಬಿಟ್ಟು ಜೀವನದಲ್ಲಿ ಮುನ್ನಡೆಯಿರಿ:

ಸೇಡಿನ ಬೆಂಕಿಯಲ್ಲಿ ಸುಡುವುದರಿಂದ ನಮಗೆ ನಾವೇ ಮಾನಸಿಕವಾಗಿ ಹಾನಿ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಮಹಾರಾಜರ ಸಲಹೆ ಏನೆಂದರೆ – ದ್ವೇಷ ಉಂಟುಮಾಡುವ ಸ್ನೇಹಿತನನ್ನು ಹಾಗೆಯೇ ಬಿಟ್ಟುಬಿಡಿ. ಅಸಮಾಧಾನಗೊಳ್ಳಬೇಡಿ, ನಿಮ್ಮ ತಪ್ಪುಗಳಿಂದ ಕಲಿಯಿರಿ, ಜೀವನದಲ್ಲಿ ಮುನ್ನಡೆಯಿರಿ ಮತ್ತು ನಿಮ್ಮ ಮನಸ್ಸನ್ನು ದೇವರ ಪಾದಗಳಿಗೆ ಒಪ್ಪಿಸಿ. ಏಕೆಂದರೆ, ಸರ್ವಶಕ್ತನು ಎಲ್ಲವನ್ನೂ ನೋಡುತ್ತಾನೆ ಮತ್ತು ಅವನೇ ಅಂತಿಮ ತೀರ್ಪು ನೀಡುವವನಾಗಿದ್ದಾನೆ ಎಂದು ಅವರು ಸಲಹೆ ನೀಡಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:57 am, Wed, 5 August 26

Source link

‘ಕರುಪ್ಪು’ ಸಿನಿಮಾಗಾಗಿ ಕೊನೆ ಕ್ಷಣದಲ್ಲಿ ಸಾಲ ಮಾಡಿದ್ದ ನಟ ಸೂರ್ಯ – Kannada News | Suriya Recalls Financial Crisis and Last Minute Loans Before Karuppu Movie Release

ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಸಿದ ದಾಖಲೆ ಸಣ್ಣದೇನಲ್ಲ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ ಈ ಚಿತ್ರ ಭಾರೀ ಯಶಸ್ಸು ಕಂಡಿತು. ಆದರೆ ಈ ಸಿನಿಮಾದ ಬಿಡುಗಡೆ ಮುನ್ನ ಎದುರಾದ ಆರ್ಥಿಕ ಸಂಕಷ್ಟ ಸಣ್ಣದಲ್ಲ. ಕೊನೆ ಕ್ಷಣದ ಸಾಲದ ಸುಳಿಗೆ ಸಿಲುಕಿದ್ದ ಸೂರ್ಯ, ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕೊನೆ ಕ್ಷಣದ ಆರ್ಥಿಕ ಬಿಕ್ಕಟ್ಟು

ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ದೊಡ್ಡ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು. ಎಲ್ಲಾ ತೊಂದರೆಗಳನ್ನು ಬಗೆಹರಿಸಿ ಮೇ 15 ರಂದು ಚಿತ್ರವನ್ನು ಯಶಸ್ವಿಯಾಗಿ ರಿಲೀಸ್ ಮಾಡಲಾಯಿತು.

ಸಾಲದ ಹೊರೆ ಹೊತ್ತ ಸೂರ್ಯ

ಇತ್ತೀಚಿನ ಸಂದರ್ಶನದಲ್ಲಿ ಸೂರ್ಯ ಈ ಕಷ್ಟದ ಸಮಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಸಮಯದಲ್ಲಿ ತಮಗೆ ಹೆಂಡತಿ ಜ್ಯೋತಿಕಾ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಕೊನೆ ಕ್ಷಣದಲ್ಲಿ ಸಾಲ ಪಡೆಯಲು ಜ್ಯೋತಿಕಾ ಧೈರ್ಯ ನೀಡಿದ್ದರು. ಈ ನಿರ್ಧಾರ ತಪ್ಪಾಗಿದ್ದರೆ ಕುಟುಂಬಕ್ಕೆ ದೊಡ್ಡ ಕಷ್ಟ ಎದುರಾಗುತ್ತಿತ್ತು.

ಕುಟುಂಬದ ಬೆಂಬಲ ಮತ್ತು ನಂಬಿಕೆ

ಚಿತ್ರರಂಗದಲ್ಲಿ ಎಷ್ಟೇ ವರ್ಷ ಅನುಭವ ಇದ್ದರೂ ಇಂತಹ ಕಷ್ಟಗಳು ಎದುರಾಗುತ್ತವೆ. ಆ ಸಮಯದಲ್ಲಿ ನಂಬಿಕೆಯೇ ನಮಗೆ ದೊಡ್ಡ ಶಕ್ತಿಯಾಯಿತು. ಕುಟುಂಬದ ಬೆಂಬಲ ಇದ್ದಿದ್ದರಿಂದಲೇ ಸಾಲ ಮಾಡಿ ಸಿನಿಮಾವನ್ನು ಹೊರತನ್ನಲು ಸಾಧ್ಯವಾಯಿತು.

ಇದನ್ನೂ ಓದಿ: ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ

ಒಗ್ಗಟ್ಟಿನಿಂದ ಸಿಕ್ಕ ಯಶಸ್ಸು

ಇದು ಕೇವಲ ತಮ್ಮೊಬ್ಬರ ಶ್ರಮವಲ್ಲ ಎಂದು ಸೂರ್ಯ ಸ್ಪಷ್ಟಪಡಿಸಿದ್ದಾರೆ. ಹಣಕಾಸುದಾರರು ಮತ್ತು ಥಿಯೇಟರ್ ಮಾಲೀಕರು ನಮಗೆ ಸಾಥ್ ನೀಡಿದರು. ಶೇಕಡಾ 25 ರಿಂದ 30 ರಷ್ಟು ಹಣವನ್ನು ಆಮೇಲೆ ಪಡೆಯಲು ಒಪ್ಪಿಕೊಂಡರು. ಎಲ್ಲರ ಸಹಕಾರದಿಂದ ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಕರ್ನಾಟಕದಲ್ಲಿ ಮಳೆ ಅಬ್ಬರ ಜೋರು: 7 ಜಿಲ್ಲೆಗಳಲ್ಲಿ ವರ್ಷಧಾರೆ ಸಾಧ್ಯತೆ, ಯೆಲ್ಲೋ ಅಲರ್ಟ್ – Kannada News | Karnataka Weather Forecast on August 5: Heavy Rain Alert for Coastal and Malnad Districts

ನೆಲಮಂಗಲದಲ್ಲಿ ಸುರಿದ ಭಾರಿ ಮಳೆImage Credit source: tv9

ಬೆಂಗಳೂರು, ಆಗಸ್ಟ್ 5: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಮುಂದುವರಿದಿದ್ದು, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 5ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ (Weather Forecast) ನೀಡಲಾಗಿದೆ. ಇದೇ ವೇಳೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಎಚ್ಚರಿಕೆ ಸಂದೇಶದಲ್ಲೂ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಕೆಲವೆಡೆ ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿಗೆ ಇಂದೂ ಮಳೆ ಮುನ್ಸೂಚನೆ

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಹಲವು ಕಡೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಆಗಸ್ಟ್ 6ರ ಹವಾಮಾನ ಮುನ್ಸೂಚನೆ

ಆಗಸ್ಟ್ 6ರಂದು ಕೂಡ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಹಿನ್ನೆಲೆಯಲ್ಲಿ ಜನರು, ವಿಶೇಷವಾಗಿ ಮಳೆ ಹಾಗೂ ಗಾಳಿ ಹೆಚ್ಚಾಗುವ ಸಾಧ್ಯತೆ ಇರುವ ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಮಂಗಳವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 16 ಸೆಂ.ಮೀ., ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 15 ಸೆಂ.ಮೀ., ದಕ್ಷಿಣ ಕನ್ನಡದ ಮಂಗಳೂರಿನಲ್ಲಿ 14 ಸೆಂ.ಮೀ. ಹಾಗೂ ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 14 ಸೆಂ.ಮೀ. ಮಳೆ ದಾಖಲಾಗಿದೆ. ಉತ್ತರ ಕನ್ನಡದ ಗೇರುಸೊಪ್ಪದಲ್ಲಿ 13 ಸೆಂ.ಮೀ. ಹಾಗೂ ದಕ್ಷಿಣ ಕನ್ನಡದ ಶಕ್ತಿ ನಗರ Obsyನಲ್ಲಿ 13 ಸೆಂ.ಮೀ. ಮಳೆಯಾಗಿದೆ. ಉಡುಪಿಯ ಕೊಲ್ಲೂರು ಮತ್ತು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ತಲಾ 11 ಸೆಂ.ಮೀ., ಬಂಟ್ವಾಳದಲ್ಲಿ 10 ಸೆಂ.ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ, ದಕ್ಷಿಣ ಕನ್ನಡದ ಪುತ್ತೂರು, ಮಾಣಿ, ಮುಡಬಿದ್ರೆ ಹಾಗೂ ಉತ್ತರ ಕನ್ನಡದ ಜಾಗಲಬೆಟ್‌ನಲ್ಲಿ ತಲಾ 9 ಸೆಂ.ಮೀ. ಮಳೆ ದಾಖಲಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್, ಸುದೀಪ್​​ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದ ಪ್ರದೀಪ್ ರಾವತ್ – Kannada News | Popular Villain Actor Pradeep Rawat Passes Away at 74 Due to Blood Cancer His Kannada Filmography

ದರ್ಶನ್ ನಟನೆಯ ‘ಗಜ’ ಹಾಗೂ ‘ಅಭಯ್’ ಸಿನಿಮಾ ನೋಡಿದವರಿಗೆ ಪ್ರದೀಪ್ ರಾವತ್ (Prdeep Rawat) ಪರಿಚಯ ಇದ್ದೇ ಇರುತ್ತದೆ. ಕನ್ನಡದಲ್ಲಿ ಕೆಲವೇ ಸಿನಿಮಾ ಮಾಡಿದ್ದರೂ ಅವರ ಮುಖ ಮರೆಯುವಂಥದ್ದಲ್ಲ. ವಿಲನ್ ಆಗಿ ಅವರು ಅಷ್ಟು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ್ದರು. ಈಗ ಅವರು ನಿಧನ ಹೊಂದಿದ್ದಾರೆ. ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರಿಗೆ 74 ವರ್ಷ ವಯಸ್ಸಾಗಿತ್ತು.

ದೂರದರ್ಶನದ ‘ಮಹಾಭಾರತ’ದಲ್ಲಿ ಅಶ್ವಥಾಮನಿಂದ ಪ್ರದೀಪ್ ರಾವತ್ ಪ್ರಯಾಣ ಆರಂಭ ಆಯಿತು. ಬಾಲಿವುಡ್‌ನ ‘ಗಜಿನಿ’ ಮತ್ತು ಟಾಲಿವುಡ್‌ನ ‘ಛತ್ರಪತಿ’, ಕನ್ನಡದ ‘ಗಜ’ ಅವರಿಗೆ ಬೇರೆಯದೇ ಖ್ಯಾತಿ ನೀಡಿತು. ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

‘ಅಶ್ವಥಾಮ’ನಾಗಿ ಕಿರುತೆರೆಯಿಂದ ಬಾಲಿವುಡ್‌ನತ್ತ ಬಿಗ್ ಎಂಟ್ರಿ

ಜಬಲ್ಪುರದ ಯುಕೋ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಪ್ರದೀಪ್ ರಾವತ್ ಅವರಿಗೆ ‘ಮಹಾಭಾರತ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದರಲ್ಲಿ ಅವರು ನಿರ್ವಹಿಸಿದ ‘ಅಶ್ವಥಾಮನ’ ಪಾತ್ರ ದೇಶಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಬಿಬಿಸಿಯಲ್ಲೂ ಪ್ರಸಾರವಾದ ಈ ಧಾರಾವಾಹಿಯ ಬಳಿಕ, ರಾಜ್ ಬಬ್ಬರ್, ಅನುಪಮ್ ಖೇರ್ ಹಾಗೂ ಅಲೋಕ್ ನಾಥ್ ಅವರಂತಹ ದೈತ್ಯ ಕಲಾವಿದರೊಂದಿಗೆ ಅನೇಕ ರಂಗಭೂಮಿ ನಾಟಕಗಳಲ್ಲಿ ಅವರು ವೇದಿಕೆ ಹಂಚಿಕೊಂಡರು.

1990ರಲ್ಲಿ ಸಲ್ಮಾನ್ ಖಾನ್ ಅವರ ‘ಬಾಘಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಇವರಿಗೆ, ನಂತರ ಹಿಂತಿರುಗಿ ನೋಡುವ ಅಗತ್ಯವೇ ಬರಲಿಲ್ಲ. ‘ಅಪರಾಧಿ’, ‘ಇನ್ಸಾನಿಯತ್’, ‘ಕೋಯಾಲಾ’, ‘ದೀವಾರ್’, ‘ಲಗಾನ್’ ಮತ್ತು ‘ಗಜಿನಿ’ಯಂತಹ ಹಿಟ್ ಚಿತ್ರಗಳಲ್ಲಿ ಇವರ ಅಭಿನಯ ಮೈಲಿಗಲ್ಲಾಗಿ ಉಳಿಯಿತು.

ಕನ್ನಡದಲ್ಲಿ ನಟನೆ

ಕನ್ನಡದಲ್ಲಿ ‘ಪರೋಡಿ’ ಹೆಸರಿನ ಸಿನಿಮಾದಲ್ಲಿ ಮೊದಲು ನಟಿಸಿದರು. ಉಪೇಂದ್ರ ಅವರು ಈ ಚಿತ್ರಕ್ಕೆ ಹೀರೋ. ಆ ಬಳಿಕ ಗಜ, ಅಭಯ್​ ಮಾಡಿದರು. ಸುದೀಪ್ ನಟನೆಯ ‘ಬಚ್ಚನ್’ ಚಿತ್ರಕ್ಕೂ ಇವರೇ ವಿಲನ್. ‘ಎಲೆಕ್ಷನ್’, ‘ಶಿವಲಿಂಗ’, ‘ಲಕ್ಷ್ಮಣ’ ಸಿನಿಮಾ ಮಾಡಿದರು. 2022ರಲ್ಲಿ ಬಂದ ‘ಚಾಂಪಿಯನ್’ ಅವರ ಕೊನೆಯ ಸಿನಿಮಾ.

ಟಾಲಿವುಡ್ ಅಂಗಳದಲ್ಲಿ ಮೆರೆದ ಬ್ಲಾಕ್‌ಬಸ್ಟರ್ ಖಳನಟ

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ‘ಲಗಾನ್’ ಚಿತ್ರದಲ್ಲಿ ಇವರ ನಟನೆಯನ್ನು ಮೆಚ್ಚಿ, ತಮ್ಮ ‘ಸಾಯಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕರೆತಂದರು. ‘ಸಾಯಿ’ ಚಿತ್ರದ ಅತ್ಯುತ್ತಮ ಖಳನಾಯಕ ಪಾತ್ರಕ್ಕಾಗಿ ಇವರಿಗೆ ಫಿಲ್ಮ್‌ಫೇರ್ ಹಾಗೂ ನಂದಿ ಪ್ರಶಸ್ತಿಗಳು ಒಲಿದುಬಂದವು.

ಇದನ್ನೂ ಓದಿ: ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

ಬಳಿಕ ರಾಜಮೌಳಿಯವರೇ ನಿರ್ದೇಶಿಸಿದ ‘ಛತ್ರಪತಿ’ ಚಿತ್ರದಲ್ಲಿ ಇವರು ನಟಿಸಿದ ವಿಲನ್ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿತು. ‘ದೇಶಮುದುರು’, ‘ರಾಜಣ್ಣ’, ‘ಬಾದ್‌ಶಾ’, ‘ಸರೈನೋಡು’, ‘ನಾಯಕ್’ ಮತ್ತು ‘ರಗಡ’ ಮುಂತಾದ ಸಿನಿಮಾಗಳು ಇವರ ಟಾಲಿವುಡ್ ಕೆರಿಯರ್‌ನಲ್ಲಿ ಮರೆಯಲಾಗದ ಹಿಟ್ ಎನಿಸಿಕೊಂಡವು.

ಪ್ರಶ್ನೆ: ಪ್ರದೀಪ್ ರಾವತ್ ಹೇಗೆ ನಿಧನ ಹೊಂದಿದರು?
ಉತ್ತರ:
ರಕ್ತದ ಕ್ಯಾನ್ಸರ್

ಪ್ರಶ್ನೆ: ಪ್ರದೀಪ್ ರಾವತ್​​ಗೆ ಎಷ್ಟು ವರ್ಷ ಆಗಿತ್ತು?
ಉತ್ತರ:
74 ವರ್ಷ

ಪ್ರಶ್ನೆ: ಪ್ರದೀಪ್ ರಾವತ್ ನಟಿಸಿದ ಕನ್ನಡದ ಸಿನಿಮಾಗಳು ಯಾವವು?
ಉತ್ತರ:
ಗಜ, ಅಭಯ್, ಬಚ್ಚನ್ ಮೊದಲಾದವು

Source link

ರೋಹಿತ್ ಶರ್ಮಾ ಸೆಂಚುರಿಯಿಂದ ಅಜಿತ್ ಅಗರ್ಕರ್ ಹುದ್ದೆಗೆ ಕುತ್ತು! – Kannada News | Laxman in Frame to Replace Agarkar as BCCI Chief Selector Amid Rohit Controversy

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ಕುತ್ತು ಬಂದಿದ್ದು, ಅವರ ಜಾಗಕ್ಕೆ ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸಲು ಮಂಡಳಿ ಗಂಭೀರ ಚಿಂತನೆ ನಡೆಸುತ್ತಿದೆ. ಇತ್ತೀಚಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ರೋಹಿತ್ ಶರ್ಮಾ ಅವರ ಭವಿಷ್ಯಕ್ಕೆ ಸಂಬಂಧಿಸಿದ ವಿವಾದಗಳ ಬೆನ್ನಲ್ಲೇ ಈ ಹೊಚ್ಚ ಹೊಸ ಬೆಳವಣಿಗೆ ಮುಂಚೂಣಿಗೆ ಬಂದಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಯ ಪುನರ್ರಚನೆಗೆ ತೆರೆಮರೆಯಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಈ ಪುನರ್ರಚನೆ ವೇಳೆಗೆ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನವನ್ನು ಬದಲಿಸಲು ಮುಂದಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ವಿವಾದ.

ವಿವಾದಕ್ಕೆ ಕಾರಣವೇನು?

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ನಂತರ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಎದ್ದುಕಂಡಿತ್ತು. 2027ರ ಏಕದಿನ ವಿಶ್ವಕಪ್‌ನಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡುವ ಅಥವಾ ಹಂತಹಂತವಾಗಿ ಹೊರಗಿಡುವ ಬಗ್ಗೆ ಅಗರ್ಕರ್ ನೇತೃತ್ವದ ಸಮಿತಿ ಯೋಚಿಸುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಸೋರಿಕೆಯಾಗಿತ್ತು.

ಆದರೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, “ರೋಹಿತ್ ಶರ್ಮಾ ನಮ್ಮ ಮುಂದಿನ ಯೋಜನೆಗಳ ಪ್ರಮುಖ ಭಾಗ” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಆಯ್ಕೆಗಾರರ ನಿರ್ಧಾರಕ್ಕೆ ವಿರುದ್ಧ ನಿಲುವು ತಳೆದಿದ್ದರು. ಇದಾದ ಬೆನ್ನಲ್ಲೇ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದು, ಅಗರ್ಕರ್ ಅವರ ಸ್ಥಾನವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ರೇಸ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಹೆಸರು:

ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಗೌರವ ಹೊಂದಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಮತ್ತು ಕಠಿಣ ನಿರ್ಧಾರಗಳನ್ನು ಒಪ್ಪಿಸಲು ಲಕ್ಷ್ಮಣ್ ಅವರಂತಹ ದಿಗ್ಗಜನ ಸಮ್ಮುಖ ಅತ್ಯಗತ್ಯ ಎಂದು ಬಿಸಿಸಿಐ ಭಾವಿಸಿದೆ.

ಹಾಗೆಯೇ ಯುವ ಪ್ರತಿಭೆಗಳನ್ನು ಬೆಳೆಸಿದ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುನ್ನಡೆಸಿದ ದೀರ್ಘ ಅನುಭವ ಲಕ್ಷ್ಮಣ್ ಅವರಿಗಿದೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.

ಎಜಿಎಂನಲ್ಲಿ ಅಂತಿಮ ತೀರ್ಮಾನ:

ಅಜಿತ್ ಅಗರ್ಕರ್ ಅವರ ಅಧಿಕೃತ ಅವಧಿ ಜೂನ್ 2026ಕ್ಕೆ ಮುಕ್ತಾಯಗೊಂಡಿತ್ತಾದರೂ, ಮಂಡಳಿಯು ಅವರಿಗೆ ಸೆಪ್ಟೆಂಬರ್ 2026ರವರೆಗೆ 3 ತಿಂಗಳ ಅಲ್ಪಾವಧಿ ವಿಸ್ತರಣೆ ನೀಡಿತ್ತು. ಮೊದಲು ಅವರನ್ನು 2027ರ ವಿಶ್ವಕಪ್‌ವರೆಗೂ ಮುಂದುವರಿಸುವ ಯೋಚನೆ ಇತ್ತಾದರೂ, ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

ಇದನ್ನೂ ಓದಿ: ಗೌತಮ್ ಗಂಭೀರ್ ವಿರುದ್ಧ ತಿರುಗಿ ನಿಂತ ಟೀಮ್ ಇಂಡಿಯಾ ಆಟಗಾರರು!

ಸೆಪ್ಟೆಂಬರ್ 2026ರಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (AGM) ಭಾರತದ ಮುಂದಿನ ಮುಖ್ಯ ಆಯ್ಕೆಗಾರ ಯಾರು ಎಂಬ ಬಗ್ಗೆ ಅಧಿಕೃತ ಮುದ್ರೆ ಬೀಳಲಿದೆ. ಲಕ್ಷ್ಮಣ್ ಜೊತೆಗೆ ರವಿಶಾಸ್ತ್ರಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳೂ ಕೂಡ ಹರಿದಾಡುತ್ತಿವೆ. ಹೀಗಾಗಿ ಬಿಸಿಸಿಐ ಅಂತಿಮವಾಗಿ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

Bengaluru Air Quality: ಬೆಂಗಳೂರಿಗರೇ ನೆಮ್ಮದಿಯಾಗಿ ಉಸಿರಾಡಿ! ನಗರದ ಎಕ್ಯೂಐನಲ್ಲಿ ಭಾರಿ ಸುಧಾರಣೆ – Kannada News | Bengaluru AQI Today August 5: Air Quality Improves Across Karnataka

ಬೆಂಗಳೂರಿಗರೇ ನೆಮ್ಮದಿಯಾಗಿ ಉಸಿರಾಡಿ

ಬೆಂಗಳೂರು, ಆಗಸ್ಟ್ 05: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇಂದಿನ ಗಾಳಿಯ ಗುಣಮಟ್ಟ (AQI) ಅತ್ಯಂತ ಉತ್ತಮ ಮಟ್ಟದಲ್ಲಿದೆ. ಸಕ್ರಿಯ ಮುಂಗಾರು ಮಳೆಯಿಂದಾಗಿ ಧೂಳು ಹಾಗೂ ಹೊಗೆಯ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 38 ರಿಂದ 41ರಷ್ಟಿದೆ. PM10 ಪ್ರಮಾಣವು ಸುಮಾರು 47 µg/m³ ಮತ್ತು PM2.5 ಪ್ರಮಾಣವು 20 µg/m³ ಮಟ್ಟದಲ್ಲಿದೆ. ಜಯನಗರ, ಮಲ್ಲೇಶ್ವರಂ ಮತ್ತು ಕೆಂಗೇರಿ ಭಾಗಗಳಲ್ಲಿ ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ. ಸಿಲ್ಕ್ ಬೋರ್ಡ್, ಹೆಬ್ಬಾಳ ಮತ್ತು ಟಿನ್‌ಫ್ಯಾಕ್ಟರಿ ಜಂಕ್ಷನ್‌ಗಳಲ್ಲೂ AQI 50 ರಿಂದ 68 ರ ನಡುವೆ ಇದ್ದು, ಸಾಧಾರಣ ಮಟ್ಟ ಕಾಯ್ದುಕೊಂಡಿದೆ.

ಕರ್ನಾಟಕದ ಪ್ರಮುಖ ನಗರಗಳ ಗಾಳಿಯ ಸ್ಥಿತಿಗತಿ

  • ಮೈಸೂರು ಮತ್ತು ಮಡಿಕೇರಿ: 30 ರಿಂದ 35 AQI ದಾಖಲಾಗಿದ್ದು, ರಾಜ್ಯದಲ್ಲೇ ಅತ್ಯಂತ ಶುದ್ಧ ಹಾಗೂ ಸೌಮ್ಯ ವಾತಾವರಣ ಇಲ್ಲಿದೆ.
  • ಕೋಲಾರ ಮತ್ತು ತುಮಕೂರು: 45 ರಿಂದ 50 AQI ನೊಂದಿಗೆ ಉತ್ತಮ ಶ್ರೇಣಿಯಲ್ಲಿದೆ.
  • ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ: 50 ರಿಂದ 65 AQI ನೊಂದಿಗೆ ಸಾಧಾರಣ ಮಟ್ಟದಲ್ಲಿದೆ.
  • ಮಂಗಳೂರು ಹಾಗೂ ಉಡುಪಿ: ಕರಾವಳಿ ಭಾಗದ ಮಳೆಯಿಂದಾಗಿ AQI 32 ಕ್ಕಿಂತ ಕಡಿಮೆಯಿದೆ.

ಗಾಳಿಯ ಗುಣಮಟ್ಟವು ಉತ್ತಮವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಹೊರಂಗಣ ಚಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ. ಮುಂಗಾರು ಮಳೆ ಮುಂದುವರಿಯುವ ಸೂಚನೆ ಇರುವುದರಿಂದ ಮುಂಬರುವ ದಿನಗಳಲ್ಲೂ ರಾಜ್ಯದ ವಾಯು ಗುಣಮಟ್ಟ ಇದೇ ರೀತಿ ಉತ್ತಮವಾಗಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸ್ಥಾನ ವಂಚಿತ ಶಾಸಕರು ರೆಬೆಲ್, ಸಿಎಂಗೆ ಟ್ರಬಲ್: 20ಕ್ಕೂ ಹೆಚ್ಚು ಅತೃಪ್ತ ಶಾಸಕರು ಪ್ರತ್ಯೇಕ ಸಭೆಗೆ ಪ್ಲ್ಯಾನ್ – Kannada News | Karnataka Congress Crisis: Dissident MLAs Plan Separate Meeting After Cabinet Expansion

ಸಚಿವರಾದ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರು ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.Image Credit source: tv9

ಬೆಂಗಳೂರು, ಆಗಸ್ಟ್ 5: ಕರ್ನಾಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ (Congress) ಅಸಮಾಧಾನವೂ ಹೆಚ್ಚಾಗಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲ ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದು, 20ಕ್ಕೂ ಹೆಚ್ಚು ಅತೃಪ್ತ ಶಾಸಕರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ. ಇದೇ ವೇಳೆ ಹಿರಿಯ ಹಾಗೂ ಕಿರಿಯ ಶಾಸಕರ ನಿಯೋಗವೊಂದು ಶೀಘ್ರದಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ಮತ್ತು ಬೇಡಿಕೆಗಳನ್ನು ತಿಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿ.ಬಿ. ಜಯಚಂದ್ರ ಹಂಗಾಮಿ ಸ್ಪೀಕರ್ ಹುದ್ದೆಯನ್ನೇ ತಿರಸ್ಕರಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ ಕೂಡ ರಾಜೀನಾಮೆ ಪತ್ರ ಸಿದ್ಧಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಶಾಸಕ ಗುಬ್ಬಿ ಶ್ರೀನಿವಾಸ್ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಆದರೆ, ಸಚಿವ ಸ್ಥಾನ ವಂಚಿತ ಶಾಸಕರ ರಾಜೀನಾಮೆ ಎಚ್ಚರಿಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜೀನಾಮೆ ನೀಡುವವರು ನೀಡಲಿ, ಅದನ್ನು ಕೂಡಲೇ ಅಂಗೀಕರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರತ್ಯೇಕ ಸಭೆಗೆ ಅತೃಪ್ತ ಶಾಸಕರ ಚಿಂತನೆ

ಸಂಪುಟ ವಿಸ್ತರಣೆಯಲ್ಲಿ ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ಯಶವಂತರಾಯಗೌಡ ವಿ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ, ಎಂ.ವೈ. ಗೋಪಾಲಕೃಷ್ಣ, ತನ್ವೀರ್ ಸೇಠ್, ಆರ್.ವಿ. ದೇಶಪಾಂಡೆ, ಅಪ್ಪಾಜಿ ನಾಡಗೌಡ, ಎಂ.ವೈ. ಪಾಟೀಲ್, ಕೆ. ವೆಂಕಟೇಶ್, ಎಸ್.ಆರ್. ಶ್ರೀನಿವಾಸ್, ಎಂ.ಸಿ. ಸುಧಾಕರ್, ವೆಂಕಟಶಿವಾರೆಡ್ಡಿ, ಬಸವರಾಜ ನೀಲಪ್ಪನವರ್, ರಹೀಂ ಖಾನ್, ಬಿ.ಕೆ. ಸಂಗಮೇಶ್ವರ, ಪ್ರಸಾದ್ ಅಬ್ಬಯ್ಯ, ಬೇಳೂರು ಗೋಪಾಲಕೃಷ್ಣ, ಹಂಪನಗೌಡ ಬಾದರ್ಲಿ, ಎಸ್.ಎನ್. ನಾರಾಯಣಸ್ವಾಮಿ, ಎಚ್.ಕೆ. ಪಾಟೀಲ್, ಆರ್.ಬಿ. ತಿಮ್ಮಾಪುರ, ಕೆ. ಷಡಕ್ಷರಿ ಹಾಗೂ ಕೆ.ವೈ. ನಂಜೇಗೌಡ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನದ ಕೊರತೆ ಇದೆ ಎಂಬ ಅಸಮಾಧಾನವೂ ಶಾಸಕರಲ್ಲಿದೆ ಎನ್ನಲಾಗಿದೆ. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಹಿರಿಯ ಹಾಗೂ ಕಿರಿಯ ಶಾಸಕರನ್ನೊಳಗೊಂಡ ನಿಯೋಗ ಭೇಟಿ ನೀಡುವ ಸಾಧ್ಯತೆಯಿದೆ. ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಸಾಮೂಹಿಕ ರಾಜೀನಾಮೆ ಸೇರಿದಂತೆ ಮುಂದಿನ ಕಠಿಣ ನಿರ್ಧಾರಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಅತೃಪ್ತರ ಮನವೊಲಿಕೆಗೆ ಸಿಎಂ ಡಿಕೆಶಿ ಕಸರತ್ತು

ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯ ಮೇರೆಗೆ ಸಚಿವರಾದ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರು ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ಎಂ. ಕೃಷ್ಣಪ್ಪ ಅವರು ನಮಗೆ ಹಿರಿಯಣ್ಣನಿದ್ದಂತೆ. ಎರಡು-ಮೂರು ಬಾರಿ ವ್ಯತ್ಯಾಸವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕೃಷ್ಣಪ್ಪ ಅವರೊಂದಿಗೆ ಖುದ್ದು ಮಾತನಾಡಿ ಗೊಂದಲ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು. ತಮ್ಮ ಗಮನಕ್ಕೆ ಬಾರದೇ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಕರೆಸಿ ಮಾತನಾಡುವುದಾಗಿ ಎಂ. ಕೃಷ್ಣಪ್ಪ ಹೇಳಿದ್ದಾರೆ.

ಟಿಬಿ ಜಯಚಂದ್ರ ನಿವಾಸಕ್ಕೂ ಭೇಟಿ

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಟಿ.ಬಿ. ಜಯಚಂದ್ರ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೂ ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಭೇಟಿ ನೀಡಿದರು. ಕೆಲವು ತಾಂತ್ರಿಕ ಕಾರಣಗಳಿಂದ ವ್ಯತ್ಯಾಸವಾಗಿದೆ. ಮುಖ್ಯಮಂತ್ರಿ ಅವರೇ ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಸರಿಪಡಿಸಲಿದ್ದಾರೆ ಎಂದು ಭೇಟಿ ಬಳಿಕ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮತ್ತೊಂದೆಡೆ, ಮಾಜಿ ಸಚಿವ ಎಂ.ಸಿ. ಸುಧಾಕರ್ ಅವರು ತಾವು ಸಿದ್ದರಾಮಯ್ಯ ಬೆಂಬಲಿಗ ಎಂಬ ಕಾರಣಕ್ಕೆ ದ್ವೇಷದಿಂದ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇದೇ ರೀತಿ ದ್ವೇಷ ಮುಂದುವರಿದರೆ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೂಡ ಸಿದ್ದರಾಮಯ್ಯ ತಮ್ಮನ್ನು ಮೋಸ ಮಾಡಿದ್ದಾರೆ ಹಾಗೂ ಡಿ.ಕೆ. ಶಿವಕುಮಾರ್ ತಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ

ಹೀಗಾಗಿ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಇದೀಗ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಂಗಳವಾರ ವಿಧಾನಸೌಧದಲ್ಲಿ ಕೆಲ ಶಾಸಕರೊಂದಿಗೆ ಒನ್‌-ಟು-ಒನ್ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂದು ಕೂಡ ಅಸಮಾಧಾನಗೊಂಡಿರುವ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವೊಲಿಸಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ಯಾರಿಸ್‌ನಲ್ಲಿ ಬಾಯ್‌ಫ್ರೆಂಡ್‌ ಪರಿಚಯಿಸಿದ ನಟಿ ಸ್ಪಂದನಾ ಸೋಮಣ್ಣ – Kannada News | Bigg Boss Fame Spandana Somanna Introduces Boyfriend in Paris, Post Goes Viral

ಬಾಯ್​​ಫ್ರೆಂಡ್ ಜೊತೆ ಸ್ಪಂದನಾ Image Credit source: Spandana Somanna Instagram

ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ವೈಯಕ್ತಿಕ ಜೀವನದ ಪ್ರಮುಖ ವಿಷಯವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಇವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಇವರ ಬಾಯ್‌ಫ್ರೆಂಡ್ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪ್ಯಾರಿಸ್‌ನಲ್ಲಿ ತಮ್ಮ ಪ್ರಿಯಕರನನ್ನು ಪರಿಚಯಿಸಿದ್ದಾರೆ.

ಪ್ಯಾರಿಸ್​ನಲ್ಲಿ ರೊಮ್ಯಾನ್ಸ್

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಐಫೆಲ್ ಟವರ್ ಎದುರು ನಿಂತು ತಮ್ಮ ಪ್ರಿಯಕರನ ಜೊತೆ ಕೈ-ಕೈ ಹಿಡಿದು ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳನ್ನು ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಅವರು ನೀಡಿದ ಕ್ಯಾಪ್ಷನ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ‘ಪ್ಲಾಟ್ ಟ್ವಿಸ್ಟ್: ಪ್ಯಾರಿಸ್ ಇಲ್ಲಿ ಮುಖ್ಯವಾದುದ್ದು ಅಲ್ಲ’ ಎಂದಿದ್ದಾರೆ. ಈ ಮೂಲಕ ಬಾಯ್​​ಫ್ರೆಂಡ್​ನ ನೋಡಿ ಎಂದು ಅವರು ಹೇಳಿದ್ದಾರೆ.

ಸಸ್ಪೆನ್ಸ್ ಕಾಯ್ದುಕೊಂಡ ನಟಿ

ಬಿಗ್ ಬಾಸ್‌ನಿಂದ ಆಚೆ ಬಂದ ಬಳಿಕ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದ ಸ್ಪಂದನಾ, ತಮ್ಮ ವೈಯಕ್ತಿಕ ಜೀವನದ ವಿಚಾರವನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು. ಇದೀಗ ಪ್ಯಾರಿಸ್‌ನಲ್ಲಿ ಫೋಟೋ ಹಂಚಿಕೊಂಡಿದ್ದರೂ, ಹುಡುಗನ ಮುಖ ಕಾಣಿಸದಂತೆ ಪೋಸ್ಟ್ ಹಾಕಿರುವುದರಿಂದ, ಆ ಲಕ್ಕಿ ಬಾಯ್ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.ಇನ್ನು, ಅವರು ಹೆಸರನ್ನು ಕೂಡ ಎಲ್ಲಿಯೂ ರಿವೀಲ್ ಮಾಡಿಲ್ಲ.

ಇದನ್ನೂ ಓದಿ: ಕ್ಯೂಟ್ ವಿಡಿಯೋ ಹಂಚಿಕೊಂಡ ಬಿಗ್​​ಬಾಸ್ ಸ್ಪಂದನಾ ಸೋಮಣ್ಣ: ವಿಡಿಯೋ ನೋಡಿ

ಪ್ರಸ್ತುತ ಸ್ಪಂದನಾ ಅವರ ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಕಿರುತೆರೆಯ ಸ್ನೇಹಿತರು ಶುಭಾಶಯಗಳ ಮಳೆ ಹರಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Horoscope Today, August 5, 2026: Daily Predictions for All 12 Zodiac Signs

ಇಂದು 5 ಆಗಸ್ಟ್, 2026 ಬುಧವಾರ, ಪರಾಭವ ನಾಮ ಸಂವತ್ಸರ, ಆಷಾಢ ಮಾಸದಲ್ಲಿ ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲೂ ಸಂಚಾರ ಮಾಡಲಿದ್ದಾರೆ. ಈ ಗ್ರಹ ಸ್ಥಿತಿಗಳು ವಿವಿಧ ರಾಶಿಗಳ ಮೇಲೆ ಬೀರುವ ಪ್ರಭಾವಗಳನ್ನು ಹಾಗೂ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Source link

Exit mobile version