ಮಳೆ ಅಭಾವದಿಂದ ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ – Kannada News | Karnataka Drought: Farmers Uproot Crops, Mantralaya Faces Severe Water Scarcity
ರಾಯಚೂರು, ಆಗಸ್ಟ್ 04: ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲದ ಕರಿನೆರಳಿನಲ್ಲಿವೆ. ಕೆಲವೆಡೆ ಮಳೆ ಕರುಣೆ ತೋರಿದರೂ, ಬಹುತೇಕ ಕಡೆ ಮಳೆ ಕೈಕೊಟ್ಟಿದೆ. ಇದರ ಪರಿಣಾಮವಾಗಿ ರೈತರು ತಾವು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಯಿಲ್ಲದೆ ಹತಾಶರಾಗಿ ಹಲವೆಡೆ ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಕಿತ್ತೆಸೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಎಲ್ಲಿ ನೋಡಿದರೂ ಬಂಡೆಗಳೇ ಕಾಣುತ್ತಿವೆ. ಇದರಿಂದ ರಾಯಚೂರು-ಆಂಧ್ರ ಗಡಿ ಭಾಗದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ನದಿಯಿಲ್ಲದೆ ರೈತರು…