Headlines

ವಿದೇಶಗಳಿಗೆ ಪರಾರಿಯಾಗಿದ್ದ 274 ಆರ್ಥಿಕ ಅಪರಾಧಿಗಳು ಭಾರತಕ್ಕೆ ಹಸ್ತಾಂತರ: 2019-26ರಲ್ಲಾದ ಸಾಧನೆ ಇದು – Kannada News | India brings back 274 fugitive criminals from 36 countries in last 5 years

ಪೊಲೀಸರ ಸಾಂದರ್ಭಿಕ ಚಿತ್ರImage Credit source: PTI ನವದೆಹಲಿ, ಆಗಸ್ಟ್ 4: ವಿವಿಧ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಅಪರಾಧಿಗಳ (Fugitive criminals) ಪೈಕಿ 274 ಮಂದಿಯನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ (Extradition). 2019 ರಿಂದ 2026 ರ ನಡುವಿನ ಅವಧಿಯಲ್ಲಿ 36 ದೇಶಗಳಿಂದ 274 ಅಪರಾಧಿಗಳನ್ನು ಭಾರತಕ್ಕೆ ತರಲಾಗಿದೆ ಎನ್ನುವ ಮಾಹಿತಿಯನ್ನು ಸರ್ಕಾರ ನೀಡಿದೆ. ಪ್ರಸಕ್ತ ಕೇಂದ್ರ ಸರ್ಕಾರವು ಅಪರಾಧಿಗಳ ಹಸ್ತಾಂತರವನ್ನು ‘ರಾಷ್ಟ್ರೀಯ ಆದ್ಯತೆ’ಯನ್ನಾಗಿ (National Priority) ಮಾಡಿಕೊಂಡಿದೆ. ತ್ರಿಮುಖ…

Read More

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಣೆ – Kannada News | ‘Rututare’ Scheme Announced for Women’s Health: Actress Ramya Named Brand Ambassador for Menopause Awareness

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆImage Credit source: Getty Images ಬೆಂಗಳೂರು, ಆಗಸ್ಟ್​​ 04: ಮಹಿಳೆಯರಿಗಾಗಿ ‘ಋತುತಾರೆ’ ಎಂಬ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​ ಘೋಷಣೆ ಮಾಡಿದ್ದಾರೆ. ಮಹಿಳೆಯರು ಮಾನಸಿಕ ಒತ್ತಡ, ಸಮಸ್ಯೆ ಅನಭವಿಸುತ್ತಿದ್ದಾರೆ. ಹೀಗಾಗಿ ಮೆನೋಪಾಸ್ ಸಂಬಂಧ ಮಹಿಳಾ ತಜ್ಞೆ ಜೋಸ್ನಾ ಅಧ್ಯಕ್ಷೆತೆಯಲ್ಲಿ ಸಮಿತಿ ರಚಿಸಿದ್ದೇವೆ. ನಟಿ ರಮ್ಯಾ ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ಡೇಟಾ…

Read More

ಭರ್ತಿಯಾದ ಚಿಕ್ಲಿಹೊಳೆ ಕಿರು ಜಲಾಶಯ: ಅರ್ಧ ಚಂದ್ರಾಕೃತಿಯ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ಲಗ್ಗೆ – Kannada News | Kodagu’s Chiklihole Falls Becomes a Top Monsoon Tourist Attraction

ಕೊಡಗು, ಆಗಸ್ಟ್​​ 04: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ-ತೊರೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದು, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ಚಿಕ್ಲಿಹೊಳೆ ಕಿರು ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ 15 ದಿನಗಳ ಹಿಂದಷ್ಟೇ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಜಲಾಶಯ ಕಳೆದ ಒಂದು ವಾರದ ಸತತ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಜಲಾಶಯ ತುಂಬಿದಾಗ ಈ ಅರ್ಧ ಚಂದ್ರಾಕೃತಿಯ ಕಟ್ಟೆಯ ಮೇಲಿಂದ ನೀರು ಧುಮ್ಮಿಕುವುದನ್ನು ನೋಡುವುದೇ ಚಂದ….

Read More

ಮಳೆನೀರಲ್ಲಿ ಮೊಬೈಲ್‌ ಫೋನ್‌ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ – Kannada News | If your smartphone gets wet in the rain, follow these safety measures immediately

ಮಳೆಗಾಲದಲ್ಲಿ ವಾತಾವರಣ ತುಂಬಾನೇ ಆಹ್ಲಾದಕರವಾಗಿದ್ದರೂ, ಜೋರು ಮಳೆಗೆ ನೆರೆ, ಪ್ರವಾಹದಂತಹ ಸಮಸ್ಯೆಗಳು ಸಂಭವಿಸುತ್ತದೆ. ಇನ್ನೊಂದು ಕಡೆ ಭಾರೀ ಮಳೆಗೆ ನಾವೇನಾದರೂ ಮನೆಯಿಂದ ಹೊರಗೆ ಹೋದರೆ ಕೈಯಲ್ಲಿ ಹಿಡಿದುಕೊಂಡ, ಪಾಕೆಟ್‌ನಲ್ಲಿದ್ದ ಮೊಬೈಲ್‌ ಫೋನ್‌ (smartphone) ಒದ್ದೆಯಾಗುವ ಸಾಧ್ಯತೆ ಇರುತ್ತವೆ. ಕೆಲವೊಮ್ಮೆ ಫೋನ್‌ ಕೈಯಿಂದ ಜಾರಿ ನೀರಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಫೋನ್‌ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಏನು ಮಾಡೋದೆಂಬ ಟೆನ್ಷನ್‌ ಇರುತ್ತದೆ. ಹೀಗೆ ಮಳೆನೀರಲ್ಲಿ ಮೊಬೈಲ್‌ ಫೋನ್‌ ಒದ್ದೆಯಾದರೆ ಆತಂಕಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಕೆಲಸಗಳನ್ನು…

Read More

‘ನಾಗೇಂದ್ರರನ್ನು ಪುನಃ ಮಂತ್ರಿ ಮಾಡಿದ್ದು ಇದೇ ಕಾರಣಕ್ಕೆ’: ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ – Kannada News | ‘Inducted Out of Fear He Would Turn Approver’: Janardhana Reddy’s Explosive Charge Over B Nagendra’s Cabinet Return

ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ Image Credit source: PTI ಬಳ್ಳಾರಿ, ಆಗಸ್ಟ್​​ 04: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ನಿನ್ನೆಯಷ್ಟೇ (ಆ.03) ನಡೆದಿದ್ದು, 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಪೈಕಿ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣ ಸಂಬಂಧ ತಲೆದಂಡವಾಗಿದ್ದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಕೂಡ ಮಂತ್ರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಾಲ್ಮೀಕಿ…

Read More

ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ – Kannada News | MDR on UPI payments, will people stop using large UPI transactions, know what survey says

ನವದೆಹಲಿ, ಆಗಸ್ಟ್ 4: ಯುಪಿಐ (UPI) ವಹಿವಾಟುಗಳ ಮೇಲೆ ಮೆರ್ಚೆಂಟ್ ಡಿಸ್ಕೌಂಟ್ ರೇಟ್ (MDR – Merchant Discount Rate) ಶುಲ್ಕವನ್ನು ಸರ್ಕಾರ ಅಥವಾ ಆರ್‌ಬಿಐ ಮತ್ತೆ ಜಾರಿಗೆ ತಂದರೆ, ಶೇ. 53 ರಷ್ಟು ಗ್ರಾಹಕರು ₹3,000 ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡುವುದನ್ನೇ ನಿಲ್ಲಿಸಲಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸ್ಥಳೀಯ ಸಮೀಕ್ಷಾ ಸಂಸ್ಥೆಯಾದ ‘ಲೋಕಲ್ ಸರ್ಕಲ್ಸ್’ (LocalCircles) ನಡೆಸಿದ ಈ ಸಮೀಕ್ಷೆಯಲ್ಲಿ ಸಾವಿರಾರು ಡಿಜಿಟಲ್ ಪಾವತಿ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಏನಿದು…

Read More

ಬೀದಿ ದೀಪ ಅಳವಡಿಸದ ಹಿನ್ನೆಲೆ ಜಿಬಿಎ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಕ್ಲಾಸ್​​ – Kannada News | Minister Krishnabyregowda Slams Officials Over LED Street Light Data at GBA Meeting

ಬೆಂಗಳೂರು, ಆಗಸ್ಟ್​​ 04: ಜಿಬಿಎ ಮುಖ್ಯ ಕಚೇರಿಯಲ್ಲಿ ಅಧಿಕಾರಿಗಳ ಜತೆ ಕೃಷ್ಣ ಭೈರೇಗೌಡ ಸಭೆ ನಡೆಸಿದ್ದು, ನಗರದಲ್ಲಿ ಬೀದಿ ದೀಪ ಅಳವಡಿಸದ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಗರಂ ಆದ ಪ್ರಸಂಗ ನಡೆದಿದೆ. ಸಭೆಗೆ ಸಿದ್ಧತೆ ಇಲ್ಲದೆ ಬಂದಿದ್ದೀರೆಂದು ಅಧಿಕಾರಿಗಳಿಗೆ ಸಚಿವರು ತರಾಟೆಗೆ ಪಡೆದಿದ್ದು, ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಿದ್ಧತೆಯೊಂದಿಗೆ ಬರಲಾಗಲ್ವಾ? ಡೇಟಾ ಇಲ್ಲದೆ ಬಂದಿದ್ದೀರಿ, ಸರ್ಕಾರಿ ಕೆಲಸ ಅಂದ್ರೆ ಕೈಬೀಸಿ ಬಂದು ಹೋಗೋದಲ್ಲ ಎಂದು ಇಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ….

Read More

ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ – Kannada News | Bengaluru Police Restructuring: 5 New Commissionerates, 6,633 Posts Proposed

ಬೆಂಗಳೂರು, ಆಗಸ್ಟ್​​ 04: ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಕುರಿತಾಗಿ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು‌ ಕಮಿಷನರೇಟ್‌ (Bengaluru Police Commissionerate) ಅನ್ನು 5 ಹೊಸ ಕಮಿಷನರೇಟ್‌ ವಲಯಗಳಾಗಿ ವಿಭಜಿಸಲು ಮತ್ತು 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ  ಬೆಂಗಳೂರು ಪೊಲೀಸ್ ಕಮಿಷನರೇಟ್‌ ಅನ್ನು ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ…

Read More

‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ – Kannada News | Satish Neenasam shared video of Ayogya 2 movie behind the camera video

ಸತೀಶ್ ನೀನಾಸಂ (Satish Neenasam) ನಟನೆಯ ‘ಅಯೋಗ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಬಹುತೇಕ ಅದೇ ತಂಡ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ರಂಜಿಸಲು ಬರುತ್ತಿದೆ. ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ….

Read More

ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಧ್ಯಪ್ರದೇಶದ ಮಕ್ಕಳು; ವೈರಲ್ ವಿಡಿಯೋಗೆ ಭಾರೀ ಆಕ್ರೋಶ – Kannada News | Madhya Pradesh children risking lives to reach school in Rain Video goes Viral

ನವದೆಹಲಿ, ಆಗಸ್ಟ್ 4: ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಶಾಲೆಗೆ ಹೋಗಲು ಬೆಟ್ವಾ ನದಿಯ ಡ್ಯಾಂನ ಸಣ್ಣ ತಡೆಗೋಡೆ ಮೇಲೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ನದಿ ದಾಟುತ್ತಿರುವ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಕ್ಕಳು ಜಾಗರೂಕತೆಯಿಂದ ನದಿ ದಾಟುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಘಟನೆಯು ವಿದಿಶಾ ಜಿಲ್ಲೆಯ ಪಾಲೋಹ್ ಗ್ರಾಮದಲ್ಲಿ ನಡೆದಿದ್ದು, ಕರುವಾ ಗ್ರಾಮದ ಪಾಲೋಹ್‌ನಲ್ಲಿರುವ ಶಾಲೆಗೆ ತಲುಪಲು…

Read More