ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ – Kannada News | IPL 2013 Clash: Umpire Recalls Kohli Gambhir Fight
ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ಹಳೇ ದಾಖಲೆಗಳು ಧೂಳೀಪಟವಾಗುತ್ತವೆ. ಆದರೆ, ಕೆಲವು ಆನ್-ಫೀಲ್ಡ್ ಘಟನೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಅಂತಹದ್ದೇ ಒಂದು ಹೈ-ವೋಲ್ಟೇಜ್ ಘಟನೆಯೇ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮುಖಾಮುಖಿ. 2013ರ ಆ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರು ದಿಲ್ಲಿ ಸಿಂಹಗಳು ಪರಸ್ಪರ ಅಬ್ಬರಿಸಿದ ಆ ಕ್ಷಣ, ಕ್ರಿಕೆಟ್ ಲೋಕದಲ್ಲಿ ಎಂದಿಗೂ ಮರೆಯಲಾಗದ ಇತಿಹಾಸ. ಈ ಐತಿಹಾಸಿಕ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್…