ಮಳೆ ಅಭಾವದಿಂದ ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ – Kannada News | Karnataka Drought: Farmers Uproot Crops, Mantralaya Faces Severe Water Scarcity

ರಾಯಚೂರು, ಆಗಸ್ಟ್​​ 04: ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲದ ಕರಿನೆರಳಿನಲ್ಲಿವೆ. ಕೆಲವೆಡೆ ಮಳೆ ಕರುಣೆ ತೋರಿದರೂ, ಬಹುತೇಕ ಕಡೆ ಮಳೆ ಕೈಕೊಟ್ಟಿದೆ. ಇದರ ಪರಿಣಾಮವಾಗಿ ರೈತರು ತಾವು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಯಿಲ್ಲದೆ ಹತಾಶರಾಗಿ ಹಲವೆಡೆ ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಕಿತ್ತೆಸೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಎಲ್ಲಿ ನೋಡಿದರೂ ಬಂಡೆಗಳೇ ಕಾಣುತ್ತಿವೆ. ಇದರಿಂದ ರಾಯಚೂರು-ಆಂಧ್ರ ಗಡಿ ಭಾಗದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ನದಿಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಮಂತ್ರಾಲಯದಲ್ಲಿ ಪುಣ್ಯಸ್ನಾನಕ್ಕೂ ನೀರಿಲ್ಲದೆ ಭಕ್ತರು ಪರದಾಡುತ್ತಿದ್ದಾರೆ. ಗದಗ ಜಿಲ್ಲೆಯಲ್ಲೂ ಮಳೆಯಿಲ್ಲದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಹೆಸರು ಬೆಳೆಗಳನ್ನು ನಾಶಪಡಿಸಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲೂ ಉದ್ದು, ಸೋಯಾಬೀನ್, ತೊಗರಿ ಬೆಳೆಗಳು ಕುಂಠಿತಗೊಂಡಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯ ಕ್ರಮ; ಗಡಿಯಲ್ಲಿ ಚೀನಿ ಫಿರಂಗಿ ನಿಯೋಜಿಸಿದ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ – Kannada News | Chinese Artillery Deployed Along Pakistan Border; India Says It Will Take Necessary Steps for National Interest

ನವದೆಹಲಿ, ಆಗಸ್ಟ್ 4: ಪಾಕಿಸ್ತಾನವು (Pakistan) ಭಾರತದ ಗಡಿಯ ಬಳಿ ಚೀನಾ ನಿರ್ಮಿತ ಸುಮಾರು 250 SH-15 ಸ್ವಯಂಚಾಲಿತ ಹಾಫಿಟ್ಜರ್ ಪಿರಂಗಿಗಳನ್ನು ನಿಯೋಜಿಸಿದೆ. ಈ ವರದಿಗಳಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, “ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸುರಕ್ಷತೆಯ ರಕ್ಷಣೆಗೆ ಅಗತ್ಯವಿರುವ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ” ಎಂದು ತಿಳಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿಯ ಭಯೋತ್ಪಾದನೆ ಮತ್ತು ದೇಶದ ಭದ್ರತೆಯ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಭಾರತೀಯ ಸೇನೆಯು ಯಾವಾಗಲೂ ಎಚ್ಚರಿಕೆಯಿಂದ ಇರುತ್ತದೆ ಎಂದು ಹೇಳಿದರು.

ಪಾಕಿಸ್ತಾನ ತನ್ನ ಸಶಸ್ತ್ರ ಪಡೆಗಳ ಆಧುನಿಕೀಕರಣದ ಭಾಗವಾಗಿ ಚೀನಾದ ನೋರಿಂಕೋ ಕಂಪನಿಯಿಂದ ಪಡೆದ 155mm ಕ್ಯಾಲಿಬರ್ SH-15 ಟ್ರಕ್ ಆಧಾರಿತ ಹಾಫಿಟ್ಜರ್‌ಗಳನ್ನು ಗಡಿ ಭಾಗಗಳಲ್ಲಿ ನಿಯೋಜಿಸಿದೆ. ಇವುಗಳನ್ನು ಪ್ರಮುಖವಾಗಿ ಭಾರತದ ಗಡಿಯ ಬಳಿ ಇರುವ ಗುಜರಾನ್‌ವಾಲಾ, ಸಿಯಾಲ್‌ಕೋಟ್ ಮತ್ತು ಜಲಾಲ್‌ಪುರ್ ಜಟ್ಟಾಂ ವಲಯಗಳಲ್ಲಿ ನಿಯೋಜಿಸಲಾಗಿದೆ. ಈ ಪಿರಂಗಿಗಳು ರಾಕೆಟ್-ಸಹಾಯದ ಶೆಲ್‌ಗಳನ್ನು ಬಳಸಿದರೆ 50 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ.

ಇದನ್ನೂ ಓದಿ: ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ

ಭಾರತದ ಪ್ರತಿಕ್ರಿಯೆ:

“ಗಡಿಯಲ್ಲಿನ ಭಯೋತ್ಪಾದನೆ ತಕ್ಷಣ ನಿಲ್ಲಬೇಕು. ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಏನು ಅಗತ್ಯವೋ ಅದನ್ನು ಭಾರತ ಮಾಡಲಿದೆ. ಅದಕ್ಕಾಗಿ ನಮ್ಮ ಪಡೆಗಳು ಸದಾ ಸಿದ್ಧವಾಗಿವೆ” ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದ ಪ್ರಚೋದನೆಗೆ ಭಾರತೀಯ ಪಡೆಗಳು ಸೂಕ್ತ ಪ್ರತ್ಯುತ್ತರ ನೀಡಿದ್ದನ್ನು ಅವರು ನೆನಪಿಸಿದರು.

ಪಾಕಿಸ್ತಾನದಿಂದ ದೌರ್ಜನ್ಯ:

ಜೂನ್‌ನಿಂದ ಇದುವರೆಗೆ ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಅಡಗಿಸಲು ಪಾಕಿಸ್ತಾನಿ ಪಡೆಗಳು ಕನಿಷ್ಠ 90 ನಾಗರಿಕನ್ನು ಹತ್ಯೆ ಮಾಡಿವೆ ಎಂದು ರಣಧೀರ್ ಜೈಸ್ವಾಲ್ ಆರೋಪಿಸಿದರು. ಪಾಕಿಸ್ತಾನವು ತನ್ನ ಮಣ್ಣಿನಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು ಎಂದು ಭಾರತ ಪುನರುಚ್ಚರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Heart-Kidney Health: ಉಗುರಿನ ಈ ಬಿಳಿ ಗುರುತು ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ? – Kannada News | Nail Half Moon (Lunula): Signs You Should Never Ignore About Your Health

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಬದಲಾವಣೆಗಳು ಆರೋಗ್ಯದ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಬಹುದು. ಅವುಗಳಲ್ಲಿ ಉಗುರಿನ ಕೆಳಭಾಗದಲ್ಲಿರುವ ಬಿಳಿ ಅರ್ಧಚಂದ್ರಾಕಾರದ ಗುರುತು (Lunula) ಕೂಡ ಒಂದು. ಕೆಲವರಿಗೆ ಇದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಬಹಳ ಚಿಕ್ಕದಾಗಿರಬಹುದು ಅಥವಾ ಕಾಣದೇ ಇರಬಹುದು. ಇದನ್ನು ಕೆಲವರು ಸಾಮಾನ್ಯ ಸಂಗತಿಯೆಂದು ಭಾವಿಸಿದರೆ, ಮತ್ತೊಂಡಷ್ಟು ಜನ ಧಾರ್ಮಿಕ ನಂಬಿಕೆಗಳೊಂದಿಗೆ ಕೂಡ ಸಂಪರ್ಕಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಲುನುಲಾದ ಬಣ್ಣ, ಗಾತ್ರ ಅಥವಾ ಕಾಣುವ ರೀತಿಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಆದರೆ ಉಗುರನ್ನು ನೋಡಿ ಮಾತ್ರ ಯಾವುದೇ ಕಾಯಿಲೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಹಾಗಾದರೆ ಹೃದಯ ಮತ್ತು ಕಿಡ್ನಿ ಆರೋಗ್ಯದೊಂದಿಗೆ ಇದರ ಸಂಬಂಧವೇನು, ತಜ್ಞರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ಲುನುಲಾ (Lunula) ಎಂದರೇನು?

ಉಗುರಿನ ಕೆಳಭಾಗದಲ್ಲಿ ಕಾಣುವ ಬಿಳಿ ಅರ್ಧಚಂದ್ರಾಕಾರದ ಭಾಗವನ್ನು ಲುನುಲಾ (Lunula) ಎಂದು ಕರೆಯಲಾಗುತ್ತದೆ. ಇದು ಉಗುರಿನ ಬೆಳವಣಿಗೆಯ ಸಹಜ ಭಾಗವಾಗಿದೆ. ಎಲ್ಲರಲ್ಲೂ ಇದು ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಹೃದಯ ಮತ್ತು ಕಿಡ್ನಿ ಆರೋಗ್ಯದೊಂದಿಗಿರುವ ಸಂಬಂಧವೇನು?

ತಜ್ಞ ವೈದ್ಯರ ಪ್ರಕಾರ, ದೀರ್ಘಕಾಲದ ಕಿಡ್ನಿ ಕಾಯಿಲೆ ಇರುವ ಕೆಲವರಲ್ಲಿ ಲುನುಲಾ ಚಿಕ್ಕದಾಗುವುದು ಅಥವಾ ಕಾಣಿಸದೇ ಹೋಗುವುದು ಕಂಡುಬರಬಹುದು. ಇದಕ್ಕೆ ಕಾರಣ, ಕಿಡ್ನಿ ಸಮಸ್ಯೆಯಿಂದ ರಕ್ತಸಂಚಾರ ಮತ್ತು ಉಗುರಿನ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗಬಹುದು. ಕೆಲವು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕೂಡ ಲುನುಲಾದ ಬಣ್ಣ ಅಥವಾ ಅದರ ಕಾಣುವ ವಿಧಾನದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ. ಆದರೆ ಉಗುರಿನ ಬದಲಾವಣೆ ಮಾತ್ರ ನೋಡಿ ಹೃದಯ ಅಥವಾ ಕಿಡ್ನಿ ಕಾಯಿಲೆ ಇದೆ ಎಂದು ನಿರ್ಧರಿಸುವುದು ಸರಿಯಲ್ಲ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.

ಈ ಲಕ್ಷಣಗಳು ಇದ್ದರೆ ನಿರ್ಲಕ್ಷಿಸಬೇಡಿ

ಉಗುರಿನ ಬದಲಾವಣೆಯ ಜೊತೆಗೆ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

  • ಕಾಲುಗಳಲ್ಲಿ ಊತ
  • ಉಸಿರಾಟದ ತೊಂದರೆ
  • ಎದೆನೋವು ಅಥವಾ ಎದೆ ಭಾರವಾಗಿರುವ ಅನುಭವ
  • ಅತಿಯಾದ ಆಯಾಸ
  • ಮೂತ್ರ ವಿಸರ್ಜನೆಯಲ್ಲಿ ತೊಂದರೆ
  • ರಕ್ತಹೀನತೆ (Anemia)
  • ಥೈರಾಯ್ಡ್ ಸಮಸ್ಯೆ
  • ವಿಟಮಿನ್ ಕೊರತೆ
  • ಮಧುಮೇಹ

ತಜ್ಞರ ಪ್ರಕಾರ, ಉಗುರಿನ ಬಣ್ಣ, ದಪ್ಪ, ಆಕಾರ ಅಥವಾ ಬೆಳವಣಿಗೆಯಲ್ಲಿ ಆಗುವ ಬದಲಾವಣೆಗಳು ಕೆಲವೊಮ್ಮೆ ಐರನ್ ಕೊರತೆ, ವಿಟಮಿನ್ ಬಿ12 ಕೊರತೆ, ಯಕೃತ್ತಿನ ಕಾಯಿಲೆ, ಶ್ವಾಸಕೋಶದ ಸಮಸ್ಯೆಗಳು ಅಥವಾ ರಕ್ತಸಂಚಾರ ಸಮಸ್ಯೆಗಳ ಸೂಚನೆಯಾಗಿರಬಹುದು. ಆದ್ದರಿಂದ ಉಗುರಿನಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಈ ಪರಿಸ್ಥಿತಿಗಳಲ್ಲಿ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

  • ಲುನುಲಾ ಏಕಾಏಕಿ ಕಾಣಿಸದೇ ಹೋದರೆ
  • ಬಣ್ಣದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದರೆ
  • ಉಗುರುಗಳು ದುರ್ಬಲವಾಗಿ ಮುರಿಯಲು ಆರಂಭಿಸಿದರೆ
  • ಹಲವು ವಾರಗಳವರೆಗೆ ಬದಲಾವಣೆ ಮುಂದುವರಿದರೆ
  • ಜೊತೆಗೆ ಹೃದಯ ಅಥವಾ ಕಿಡ್ನಿ ಸಮಸ್ಯೆಯ ಲಕ್ಷಣಗಳು ಕಂಡುಬಂದರೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಗಸ್ಟ್ 16ರಿಂದ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಶುರು; ಈ ಬಾರಿ ಅಗ್ನಿಪರೀಕ್ಷೆ – Kannada News | Bigg Boss Kannada Season 13 Agniparikshe Episodes Telecast from August 16 in Colors Kannada

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಇರುವ ಜನಪ್ರಿಯತೆ ಅಪಾರ. ಕನ್ನಡದಲ್ಲಿ ಈಗಾಗಲೇ 12 ಸೀಸನ್​ಗಳು ಯಶಸ್ವಿಯಾಗಿ ಮುಗಿದಿವೆ. 13ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕಾಗಿ ಕಾದಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಯಾವಾಗ ಪ್ರಾರಂಭ ಆಗಲಿದೆ ಎಂಬ ಪ್ರಶ್ನೆಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿ ಉತ್ತರ ನೀಡಿದೆ. ಹೊಸ ಪ್ರೋಮೋ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 16ರಿಂದ ‘ಬಿಗ್ ಬಾಸ್’ ಶುರು ಆಗಲಿದೆ.

ಈ ಬಾರಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಸಂಪೂರ್ಣ ಭಿನ್ನವಾಗಿ ಇರಲಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರಿಗೂ ದೊಡ್ಮನೆಗೆ ಕಾಲಿಡುವ ಅವಕಾಶವನ್ನು ನೀಡಲಾಗುತ್ತಿದೆ. ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಆಡಿಷನ್ ನೀಡುವಂತೆ ಈ ಹಿಂದೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಲಕ್ಷಾಂತರ ಜನರು ಆಸಕ್ತಿ ತೋರಿಸಿದ್ದಾರೆ.

ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ:

ಬಿಗ್ ಬಾಸ್ ಮನೆಗೆ ಬರುವ ಉತ್ಸಾಹದಲ್ಲಿ ಇರುವವರಿಗೆ ವೇದಿಕೆ ಸಜ್ಜುಗೊಳಿಸಲಾಗಿದೆ. ಆಡಿಷನ್ ನೀಡಿರುವವರಿಗೆ ಅಗ್ನಿಪರೀಕ್ಷೆ ಏರ್ಪಡಿಸಲಾಗುತ್ತದೆ. ಯಶಸ್ವಿಯಾಗಿ ಅಗ್ನಿಪರೀಕ್ಷೆ ಎದುರಿಸುವವರಿಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಸಿಗಲಿದೆ. ಈ ಅಗ್ನಿಪರೀಕ್ಷೆಯ ಸಂಚಿಕೆಗಳು ಆಗಸ್ಟ್ 16ರಿಂದ ಪ್ರಸಾರ ಆಗಲಿವೆ. ಅಂದು ರಾತ್ರಿ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಎಪಿಸೋಡ್​ಗಳು ಪ್ರಸಾರವಾಗಲಿದೆ.

ಬಿಗ್ ಬಾಸ್ ಕನ್ನಡ ಹೊಸ ಪ್ರೋಮೋ:

ವೀಕ್ಷಕರಿಗೂ ಇದು ಹೊಸ ಅನುಭವ:

ಈ ರೀತಿ ಅಗ್ನಿಪರೀಕ್ಷೆ ಮಾಡುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿರುವುದು ಬಿಗ್ ಬಾಸ್ ಶೋನಲ್ಲಿ ಹೊಸ ಕಾನ್ಸೆಪ್ಟ್. ಹಾಗಾಗಿ ವೀಕ್ಷಕರಿಗೆ ಸಖತ್ ಕುತೂಹಲ ಇದೆ. ಈ ಸಂಚಿಕೆಗಳು ಹೇಗಿರಲಿವೆ? ನಿರೂಪಣೆ ಯಾರು ಮಾಡಲಿದ್ದಾರೆ? ವಿಡಿಯೋ ಕಳಿಸಿದ ಎಷ್ಟು ಮಂದಿಗೆ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ? ಅಂತಿಮವಾಗಿ ಯಾರು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂಬುದನ್ನು ನೋಡಲು ಜನರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?

ಇತ್ತೀಚೆಗಷ್ಟೇ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಕಿಚ್ಚ ಸುದೀಪ್ ಅವರು ಎಂದಿನ ಗತ್ತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದರು. ಆ ಪ್ರೋಮೋದ ಬೆನ್ನಲ್ಲೇ ‘ಅಗ್ನಿಪರೀಕ್ಷೆ’ಯ ಪ್ರೋಮೋ ಅನಾವರಣ ಮಾಡಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಳೆಗಾಲದಲ್ಲಿ ಕೀಲು ನೋವು, ಬಿಗಿತ ಹೆಚ್ಚಾಗಲು ಕಾರಣವೇನು? ತಡೆಗಟ್ಟುವ ಸರಳ ಮಾರ್ಗಗಳು ಇಲ್ಲಿವೆ – Kannada News | Rainy Season Joint Pain: Causes, Risk Factors and Ways to Find Relief

ಮಳೆಗಾಲ ಆರಂಭವಾದ ಕೂಡಲೇ ಮೊಣಕಾಲು ನೋವು, ಸೊಂಟ ನೋವು, ಭುಜ ನೋವು, ಕೀಲುಗಳಲ್ಲಿ ಬಿಗಿತ (Joint Stiffness) ಹೆಚ್ಚಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದು ಕೇವಲ ವಯಸ್ಸಾದವರ ಸಮಸ್ಯೆಯಲ್ಲ, ಈಗಾಗಲೇ ಆಸ್ಟಿಯೋಆರ್ಥ್ರೈಟಿಸ್ (Osteoarthritis), ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis) ಅಥವಾ ಹಳೆಯ ಗಾಯಗಳಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಲವರು ಇದನ್ನು ಕೇವಲ “ಮಳೆಗಾಲದ ಪರಿಣಾಮ” ಎಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಇಂದು ರಾಷ್ಟ್ರೀಯ ಮೂಳೆ ಮತ್ತು ಕೀಲುಗಳ ದಿನ (National Bone and Joint Day) ಹಿನ್ನೆಲೆಯಲ್ಲಿ ಕೀಲುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ದೇಹದ ಇತರ ಅಂಗಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ನಾವು, ಕೀಲು ನೋವು ಮತ್ತು ಬಿಗಿತವನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತೇವೆ. ಆದರೆ ಸಮಯಕ್ಕೆ ಸರಿಯಾಗಿ ಆರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಡೆಯಲು, ಏಳಲು, ಮೆಟ್ಟಿಲೇರಲು ಕೂಡ ಕಷ್ಟವಾಗುವ ಸಾಧ್ಯತೆ ಇದೆ.

ಮಳೆಗಾಲದಲ್ಲಿ ಕೀಲು ನೋವು ಹೆಚ್ಚಾಗಲು ಕಾರಣವೇನು?

ಆರ್ಥೋಪೆಡಿಕ್ ತಜ್ಞ ಡಾ. ಸಿಮೋನ್ ಥಾಮಸ್ (Vice Chairman – Robotic Joint Replacement & Orthopedics, Max Hospital, Shalimar Bagh) ಅವರ ಪ್ರಕಾರ, ಮಳೆಗಾಲದಲ್ಲಿ ಬ್ಯಾರೋಮೆಟ್ರಿಕ್ ಒತ್ತಡ (Barometric Pressure) ಕಡಿಮೆಯಾಗುತ್ತದೆ. ವಾತಾವರಣದ ಒತ್ತಡ ಕಡಿಮೆಯಾದಾಗ ಕೀಲುಗಳ ಸುತ್ತಲಿನ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಕೀಲುಗಳಲ್ಲಿ ಉರಿಯೂತ ಅಥವಾ ಸಂಧಿವಾತ ಇರುವವರಲ್ಲಿ ನೋವು ತಿಳಿಸುವ ನರಗಳು ಹೆಚ್ಚು ಸಂವೇದನಾಶೀಲವಾಗುತ್ತವೆ. ಇದರ ಪರಿಣಾಮವಾಗಿ ನೋವು ಮತ್ತು ಬಿಗಿತ ಹೆಚ್ಚಾಗುತ್ತದೆ. ಅನೇಕರು ಮಳೆ ಶುರುವಾಗುವ ಮೊದಲೇ ಕೀಲುಗಳಲ್ಲಿ ಭಾರವಾದ ಅನುಭವ ಅಥವಾ ನೋವನ್ನು ಅನುಭವಿಸುತ್ತಾರೆ.

ಗಾಳಿಯಲ್ಲಿನ ತೇವಾಂಶವೂ ಪ್ರಮುಖ ಕಾರಣ

ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂಶ (Humidity) ಹೆಚ್ಚಾಗುತ್ತದೆ. ಇದರಿಂದ ಸ್ನಾಯುಗಳು ಮತ್ತು ಲಿಗಮೆಂಟ್‌ಗಳು ಹೆಚ್ಚು ಬಿಗಿಯಾಗಿರುವಂತೆ ಅನುಭವವಾಗಬಹುದು. ಪರಿಣಾಮವಾಗಿ ಕೀಲುಗಳ ಚಲನೆ ಕಡಿಮೆಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಮೊಣಕಾಲು, ಸೊಂಟ ಅಥವಾ ಭುಜಗಳಲ್ಲಿ ಬಿಗಿತ ಕಂಡುಬರುವುದು ಈ ಸಮಯದಲ್ಲಿ ಸಾಮಾನ್ಯವಾಗಿದೆ.

ದೈಹಿಕ ಚಟುವಟಿಕೆ ಕಡಿಮೆಯಾದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ

ಮಳೆಗಾಲದಲ್ಲಿ ಹೆಚ್ಚಿನವರು ಮನೆಯಲ್ಲೇ ಇರುತ್ತಾರೆ. ವ್ಯಾಯಾಮ ಮತ್ತು ನಡೆಯುವ ಅಭ್ಯಾಸ ಕಡಿಮೆಯಾಗುವುದರಿಂದ ಕೀಲುಗಳಿಗೆ ಬೆಂಬಲ ನೀಡುವ ಸ್ನಾಯುಗಳು ದುರ್ಬಲವಾಗುತ್ತವೆ. ಇದಲ್ಲದೆ, ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ವಿಟಮಿನ್-ಡಿ ಮಟ್ಟವೂ ಕಡಿಮೆಯಾಗಬಹುದು. ಇದು ಮೂಳೆ ಮತ್ತು ಸ್ನಾಯುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆಯೇ? ಡೆಂಗ್ಯೂ, ಮಲೇರಿಯಾದಿಂದ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ

ಯಾರಿಗೆ ಹೆಚ್ಚು ಅಪಾಯ?

ಈ ಕೆಳಗಿನವರಲ್ಲಿ ಮಳೆಗಾಲದಲ್ಲಿ ಕೀಲು ನೋವು ಹೆಚ್ಚಾಗುವ ಸಾಧ್ಯತೆ ಹೆಚ್ಚು.

  • ಆಸ್ಟಿಯೋಆರ್ಥ್ರೈಟಿಸ್ ಇರುವವರು
  • ರುಮಟಾಯ್ಡ್ ಆರ್ಥ್ರೈಟಿಸ್ ರೋಗಿಗಳು
  • ಹಳೆಯ ಮೂಳೆ ಮುರಿತ ಅಥವಾ ಕ್ರೀಡಾ ಗಾಯ ಹೊಂದಿರುವವರು
  • ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ (Knee Replacement) ಮಾಡಿಕೊಂಡವರು
  • ಹಿರಿಯ ನಾಗರಿಕರು
  • ವಿಟಮಿನ್-ಡಿ ಕೊರತೆ ಇರುವವರು

ಮಳೆಗಾಲದಲ್ಲಿ ಕೀಲುಗಳ ಆರೈಕೆ ಹೇಗೆ ಮಾಡಬೇಕು?

  • ಪ್ರತಿದಿನ 30–40 ನಿಮಿಷಗಳ ಕಾಲ ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡಿ.
  • ಒಂದೇ ಜಾಗದಲ್ಲಿ ದೀರ್ಘಕಾಲ ಕುಳಿತುಕೊಳ್ಳಬೇಡಿ.
  • ಕೀಲುಗಳನ್ನು ಚಳಿ ಮತ್ತು ತೇವಾಂಶದಿಂದ ರಕ್ಷಿಸಿ.
  • ಕ್ಯಾಲ್ಸಿಯಂ, ವಿಟಮಿನ್-ಡಿ ಮತ್ತು ಪ್ರೋಟೀನ್‌ಯುಕ್ತ ಸಮತೋಲನ ಆಹಾರ ಸೇವಿಸಿ.
  • ವೈದ್ಯರು ಸೂಚಿಸಿದರೆ ಫಿಸಿಯೋಥೆರಪಿಯನ್ನು ನಿಯಮಿತವಾಗಿ ಮುಂದುವರಿಸಿ.
  • ದೇಹದ ತೂಕವನ್ನು ನಿಯಂತ್ರಣದಲ್ಲಿಡಿ, ಏಕೆಂದರೆ ಅಧಿಕ ತೂಕ ಮೊಣಕಾಲಿನ ಮೇಲೆ ಒತ್ತಡ ಹೆಚ್ಚಿಸುತ್ತದೆ.
  • ಸಾಕಷ್ಟು ನೀರು ಕುಡಿಯಿರಿ ಮತ್ತು ಉತ್ತಮ ನಿದ್ರೆ ಮಾಡಿ.

ಮಳೆಗಾಲದಲ್ಲಿ ಕೀಲು ನೋವು ತಪ್ಪಿಸಲು ಈ ಅಭ್ಯಾಸಗಳು ಸಹಕಾರಿ

ತಜ್ಞರ ಪ್ರಕಾರ, ಯೋಗ, ಸ್ಟ್ರೆಚಿಂಗ್ ಮತ್ತು ಕಡಿಮೆ ಒತ್ತಡದ ವ್ಯಾಯಾಮಗಳು (Low-impact Exercises) ಕೀಲುಗಳ ಚಲನೆ ಸುಧಾರಿಸಲು ನೆರವಾಗುತ್ತವೆ. ಮನೆಯೊಳಗೆ ಮಾಡುವ ಸರಳ ವ್ಯಾಯಾಮಗಳೂ ಪ್ರಯೋಜನಕಾರಿ. ಹೆಚ್ಚು ನೋವು ಇರುವವರು ಸ್ವಯಂ ಔಷಧ ಸೇವನೆ ಮಾಡುವ ಬದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ – Kannada News | BDA Launches Twin Tunnel Project to Ease Traffic at Bengaluru’s Hebbal Junction

ಬೆಂಗಳೂರು, ಆಗಸ್ಟ್​​ 04: ಬೆಂಗಳೂರಿನ (Bangaluru) ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರತಿದಿನ ಎದುರಾಗುವ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಬಿಡಿಎ (BDA) ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಹೆಬ್ಬಾಳ ಜಂಕ್ಷನ್‌ನಿಂದ ಕೆವಿಎಎಫ್‌ಎಸ್‌ಯು ಕ್ಯಾಂಪಸ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಟ್ವಿನ್ ಟನಲ್ ಸುರಂಗ ಮಾರ್ಗದ ಕಾಮಗಾರಿಗಳಿಗೆ ಪ್ರಾಥಮಿಕ ಚಾಲನೆ ಸಿಕ್ಕಿದೆ. ಮುಂದಿನ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ.

2.2 ಕಿ.ಮೀ ಉದ್ದ: 1,130 ಕೋಟಿ ರೂ ಅಧಿಕ ವೆಚ್ಚ

ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಬಿಡಿಎ ಇಂದು ಹೆಬ್ಬಾಳ ಸುರಂಗ ಮಾರ್ಗ ಯೋಜನೆಗೆ ಚಾಲನೆ ನೀಡಿವೆ. ಹೆಬ್ಬಾಳ ಜಂಕ್ಷನ್‌ನಿಂದ ಕರ್ನಾಟಕ ಪಶು, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವರೆಗೆ ಒಟ್ಟು 2.2 ಕಿ.ಮೀ ಉದ್ದದ 3 ಪಥಗಳ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: ‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ

ಕಟ್ ಆ್ಯಂಡ್​ ಕವರ್ ಮಾದರಿಯಲ್ಲಿ ನಡೆಯಲಿರುವ ಈ ಯೋಜನೆಗೆ ಬರೋಬ್ಬರಿ 1,130 ಕೋಟಿ ರೂ ಅಧಿಕ ವೆಚ್ಚ ಅಂದಾಜಿಸಲಾಗಿದ್ದು, ಹೈದರಾಬಾದ್ ಮೂಲದ ರಿಷಿಕ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧ

ಇನ್ನು ಈ ಯೋಜನೆಗೆ ಸಾರ್ವಜನಿಕರ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಇದು ಅನಗತ್ಯ ಹಾಗೂ ಅತ್ಯಂತ ದುಬಾರಿ ಯೋಜನೆಯಾಗಿದ್ದು, ಬೆಂಗಳೂರಿನ ಸಂಚಾರ ಸಮಸ್ಯೆಗೆ ಇದು ದೀರ್ಘಕಾಲೀನ ಪರಿಹಾರವಲ್ಲ ಎಂದಿದ್ದಾರೆ. ಆದರೆ ಸಂಚಾರ ತಜ್ಞರು ಮತ್ತು ಪೊಲೀಸರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕವೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.

ಇದನ್ನೂ ಓದಿ: Safe Footpath Campaign: 750 ಕಿ.ಮೀ ಪಾದಚಾರಿ ಮಾರ್ಗ ಅತಿಕ್ರಮಣ ತೆರವು; ಪೀಣ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ನಿಷೇಧ!

ಬೃಹತ್ ಸುರಂಗ ಮಾರ್ಗ ಯೋಜನೆಯು ಹೆಬ್ಬಾಳ ಜಂಕ್ಷನ್‌ನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲಿದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ದುಬಾರಿ ವೆಚ್ಚದ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ. ಬಿಡಿಎ ನಿಗದಿಪಡಿಸಿದಂತೆ ಮುಂದಿನ 2 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಾಸಕ ಎಸ್​ಎನ್​​ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಭುಗಿಲೆದ್ದ ಆಕ್ರೋಶ: ನಾಳೆ 3 ತಾಲೂಕುಗಳ ಬಂದ್‌ಗೆ ಕರೆ! – Kannada News | Cabinet Expansion; Protests Erupt as SN Subba Reddy Misses Ministerial Post; Three Taluks to Observe Bandh

ಶಾಸಕ ಎಸ್.ಎನ್.ಸುಬ್ಬಾರೆಡ್ಡಿImage Credit source: tv9 kannada

ಚಿಕ್ಕಬಳ್ಳಾಪುರ, ಆಗಸ್ಟ್​​ 04: ಸಚಿವ ಸಂಪುಟ ವಿಸ್ತರಣೆಯಲ್ಲಿ (Cabinet Expansion) ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ (MLA Subbareddy) ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಾವಿರಾರು ಕಾರ್ಯಕರ್ತರು ಶಾಸಕರ ಮನೆ ಮುಂದೆ ಜಮಾಯಿಸಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಾಳೆ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಮೂರು ತಾಲೂಕುಗಳ ಬಂದ್‌ಗೆ ಕರೆ ನೀಡಲಾಗಿದೆ. ಮತ್ತೊಂದೆಡೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲಾಗುತ್ತಿದೆ.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ

ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಸಿಗದಕ್ಕೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನೋವು ಆಕ್ರೋಶವಾಗಿ ಹೊರಹೊಮ್ಮಿದೆ. ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಶಾಸಕರ ಮನೆ ಮುಂದೆ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

ಇದನ್ನೂ ಓದಿ: ಖಾಲಿ ಇರುವ ಒಂದು ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ: ರೇಸ್​​ನಲ್ಲಿ ಇರೋದು ಯಾರ್ಯಾರು?

ಇದೇ ವೇಳೆ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕುಗಳ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂರು ತಾಲೂಕುಗಳ ಬಂದ್‌ಗೆ ಕರೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಸತತ ಮೂರು ಬಾರಿ ಶಾಸಕರಾಗಿರುವ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್ ವರಿಷ್ಠರು ಅನ್ಯಾಯ ಮಾಡಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಎಂಟು ಶಾಸಕರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಸಚಿವ ಸ್ಥಾನ ವಿಚಾರ ಇದೀಗ ಸ್ಥಳಿಯ ಕಾಂಗ್ರೆಸ್ ಪದಾಧಿಕಾರಿಗಳ ರಾಜೀನಾಮೆ ಪರ್ವಕ್ಕೂ ತಿರುಗಿದೆ. ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎಸ್. ನರೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ಚೇಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ.ಆರ್. ಚಲಂ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವು ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದು, ಪಕ್ಷದ ವರಿಷ್ಠರು ತಕ್ಷಣವೇ ಮಧ್ಯಪ್ರವೇಶಿಸಿ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ

ಬಾಗೇಪಲ್ಲಿ ಕ್ಷೇತ್ರದಲ್ಲಿ ಸಚಿವ ಸ್ಥಾನ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಮೂರು ತಾಲೂಕುಗಳ ಬಂದ್‌ಗೆ ಕರೆ, ಮತ್ತೊಂದೆಡೆ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆಗಳು ಆರಂಭವಾಗಿರುವುದು ರಾಜಕೀಯ ಬೆಳವಣಿಗೆಗೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉದಯನಿಧಿ ಸ್ಟಾಲಿನ್‌ ಬಂಧಿಸಿದ್ದು ಉತ್ತಮ ನಿರ್ಧಾರ: ಖಡಕ್ ಆಗಿ ಹೇಳಿದ ಕಂಗನಾ ರಣಾವತ್‌ – Kannada News | Kangana Ranaut reacts to Udhayanidhi Stalin detention over Trisha Krishnan remarks

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್‌ (Trisha Krishnan) ಕುರಿತು ಸಾರ್ವಜನಿಕ ಸಭೆಯಲ್ಲಿ ಅಸಭ್ಯ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಇದೀಗ ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ (Kangana Ranaut) ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಸಾರ್ವಜನಿಕವಾಗಿ ಅಸಭ್ಯ ಮಾತುಗಳನ್ನು ಆಡುವುದು, ದ್ವಂದ್ವಾರ್ಥದ ಶೈಲಿಯಲ್ಲಿ ಅಶ್ಲೀಲ ಜೋಕ್‌ಗಳನ್ನು ಮಾಡುವುದನ್ನು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಈ ಅಪರಾಧಕ್ಕಾಗಿ ಉದಯನಿಧಿ ಸ್ಟಾಲಿನ್‌ ಅವರನ್ನು ಬಂಧಿಸಲಾಗಿತ್ತು, ಅವರು ಜಾಮೀನಿನ ಮೇಲೆ ಹೊರಬಂದಿರಬಹುದು, ಆದರೆ ಈ ಕ್ರಮವು ಒಂದು ಉತ್ತಮ ನಿರ್ಧಾರ ಹಾಗೂ ಮುನ್ನೆಚ್ಚರಿಕೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಕಾವೇರಿ ನೀರು ಹಂಚಿಕೆ ಕುರಿತು ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಮಾತನಾಡುತ್ತಿದ್ದಾಗ, ಪ್ರೇಕ್ಷಕರೊಬ್ಬರು ನಟಿ ತ್ರಿಷಾ ಹೆಸರನ್ನು ಕೂಗಿದ್ದರು. ಈ ವೇಳೆ ಉದಯನಿಧಿ ಅವರು ದ್ವಂದ್ವಾರ್ಥದ ಹೇಳಿಕೆ ನೀಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮಹಿಳಾ ವಿಭಾಗವು ಪೊಲೀಸರಿಗೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು.

ಉದಯನಿಧಿ ಮತ್ತು ಡಿಎಂಕೆ ಸ್ಪಷ್ಟನೆ:

ಚೆನ್ನೈನ ತಮ್ಮ ನಿವಾಸದಲ್ಲಿ ವಶಕ್ಕೆ ಒಳಗಾದ ಬಳಿಕ ಮಾತನಾಡಿದ ಉದಯನಿಧಿ ಸ್ಟಾಲಿನ್‌, ‘ನಾನು ಯಾರ ಹೆಸರನ್ನೂ ಹೇಳಿಲ್ಲ ಮತ್ತು ಅಸಭ್ಯವಾಗಿ ಮಾತನಾಡಿಲ್ಲ. ಇದೊಂದು ರಾಜಕೀಯ ಹಾಸ್ಯಾಸ್ಪದ ಸಂಗತಿ. ನಾನು ಕಾನೂನು ಹೋರಾಟ ಎದುರಿಸಲು ಸಿದ್ಧ’ ಎಂದಿದ್ದಾರೆ. ಡಿಎಂಕೆ ಹಿರಿಯ ನಾಯಕ ಟಿ.ಆರ್. ಬಾಲು ಕೂಡ ಇದನ್ನು ರಾಜಕೀಯ ದ್ವೇಷದಿಂದ ಕೂಡಿದ ಸುಳ್ಳು ದೂರು ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್

ಮದ್ರಾಸ್‌ ಹೈಕೋರ್ಟ್‌ ಸೂಚನೆ:

ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌, ವಿಚಾರಣೆ ಮುಗಿದ ತಕ್ಷಣವೇ ಉದಯನಿಧಿ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಉದಯನಿಧಿ ಅವರಿಗೆ ಹೈಕೋರ್ಟ್‌ ಸೂಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶೇಖ್ ಹಸೀನಾ ಅವರ ನಾಳೆಯ ಸುದ್ದಿಗೋಷ್ಠಿಗೂ ನಮಗೂ ಸಂಬಂಧವಿಲ್ಲ; ಭಾರತ ಸ್ಪಷ್ಟನೆ – Kannada News | Organised by private media India distances itself from Sheikh Hasina’s August 5 press conference

ನವದೆಹಲಿ, ಆಗಸ್ಟ್ 4: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಆಗಸ್ಟ್ 5ರಂದು ನಡೆಸಲಿರುವ ಮಾಧ್ಯಮ ಸಂವಾದಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ. 2024ರಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಂತರ ಅಧಿಕಾರ ಕಳೆದುಕೊಂಡು ದೇಶ ತೊರೆದಿದ್ದ ಶೇಖ್ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಿದ್ದರು. ಅದಾದ ಬಳಿಕ ಅವರ ಮೊದಲ ಮಾಧ್ಯಮ ಗೋಷ್ಠಿ ಇದಾಗಿದೆ. ಈ ಕಾರ್ಯಕ್ರಮವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದ್ದು, ಇದರಲ್ಲಿ ವ್ಯಕ್ತವಾಗುವ ಯಾವುದೇ ಅಭಿಪ್ರಾಯಗಳನ್ನು ಭಾರತ ಸರ್ಕಾರ ಬೆಂಬಲಿಸುವುದಿಲ್ಲ ಹಾಗೂ ಆ ಕಾರ್ಯಕ್ರಮದೊಂದಿಗೆ ಭಾರತ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

“ಶೇಖ್ ಹಸೀನಾ ದೆಹಲಿಯಲ್ಲಿ ನಡೆಸಿರುವ ಸಂವಾದವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದೆ. ಇದರಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ. ಈ ವೇದಿಕೆಯಲ್ಲಿ ವ್ಯಕ್ತಪಡಿಸಲಾಗುವ ಯಾವುದೇ ಅಭಿಪ್ರಾಯಗಳನ್ನು ಸರ್ಕಾರ ಬೆಂಬಲಿಸುವುದಿಲ್ಲ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: “ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ”; ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ

ಭಾರತದ ಭೂಪ್ರದೇಶವನ್ನು ಶೇಖ್ ಹಸೀನಾ ಮತ್ತು ಇತರ ಅವಾಮಿ ಲೀಗ್ ನಾಯಕರು ರಾಜಕೀಯ ಭಾಷಣಗಳಿಗೆ ಅಥವಾ ಬಾಂಗ್ಲಾದೇಶದ ಸ್ಥಿರತೆಗೆ ಧಕ್ಕೆ ತರುವ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಹಾಳುಮಾಡುವ ಕಾರ್ಯಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮನವಿಯ ಬೆನ್ನಲ್ಲೇ ಈ ಸ್ಪಷ್ಟನೆ ಬಂದಿದೆ.

ಶೇಖ್ ಹಸೀನಾ ಭಾಷಣ ಏಕೆ ಮುಖ್ಯ?:

ಆಗಸ್ಟ್ 2024ರಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಚಳವಳಿಯ ನಂತರ ಅಧಿಕಾರದಿಂದ ಕೆಳಗಿಳಿದು ಭಾರತದಲ್ಲಿ ತಲೆಮರೆಸಿಕೊಂಡಿರುವ ಶೇಖ್ ಹಸೀನಾ ಸುಮಾರು 2 ವರ್ಷಗಳ ನಂತರ ಆಗಸ್ಟ್ 5ರಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ನವದೆಹಲಿಯ ‘ಸರ್ ಮಾರ್ಕ್ ಟಲ್ಲಿ ಆಡಿಟೋರಿಯಂ’ನಲ್ಲಿ ನಡೆಯಲಿರುವ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ (FCC South Asia) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶೇಖ್ ಹಸೀನಾ ಆನ್‌ಲೈನ್ ಮೂಲಕ ಭಾಗವಹಿಸಿ ಮಾತನಾಡಲಿದ್ದಾರೆ. ಈ ವೇಳೆ ಅವರು ತಮ್ಮ ಭವಿಷ್ಯದ ಯೋಜನೆಗಳು ಮತ್ತು ಬಾಂಗ್ಲಾದೇಶಕ್ಕೆ ಮರಳುವ ಪ್ರಸ್ತಾವನೆಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು? ಸರ್ಕಾರದ ಉತ್ತರ ಇಲ್ಲಿದೆ

ಈ ಕಾರ್ಯಕ್ರಮದಲ್ಲಿ ಅವರ ಪುತ್ರ ಸಜೀಬ್ ವಾಜೆದ್ ಜೋಯ್, ಬಾಂಗ್ಲಾದೇಶದ ಮಾಜಿ ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧರಿ ನೌಫೆಲ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಹಮ್ಮದ್ ಅಲಿ ಕೂಡ ಭಾಗವಹಿಸಲಿದ್ದಾರೆ. ತಮ್ಮ 15 ವರ್ಷಗಳ ಆಡಳಿತ ಪತನಗೊಂಡು 2 ವರ್ಷಗಳು ಪೂರೈಸುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಭಾಷಣವು ಅವರು ಅಧಿಕಾರದಿಂದ ಕೆಳಗಿಳಿದ ನಂತರ ಭಾಗವಹಿಸುತ್ತಿರುವ ಅತ್ಯಂತ ಪ್ರಮುಖ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಬಹಳ ಮುಖ್ಯವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Better Sleep Tips: ಮಲಗುವ ಮುನ್ನ ಈ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು – Kannada News | Here are some tips to get good sleep

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ನೀರು ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಲು ನಿತ್ಯ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ (good sleep) ಪಡೆಯುವುದು ಸಹ ಅಷ್ಟೇ ಮುಖ್ಯ. ಹೌದು ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮನಸ್ಥಿತಿಯನ್ನು ಚೆನ್ನಾಗಿಡಲು, ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಇಂದಿನ ಒತ್ತಡದ ಹಾಗೂ ಅನಾರೋಗ್ಯಕರ ಜೀವನಶೈಲಿಯ ಕಾರಣ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ನಿಮಗೂ ಕೂಡ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ರೆ ಪ್ರತಿ ರಾತ್ರಿ ಮಲಗುವ ಮುನ್ನ ತಪ್ಪದೇ ಈ ಒಂದಷ್ಟು ಕೆಲಸಗಳನ್ನು ಮಾಡಿ, ಇವು ನಿಮಗೆ ನೆಮ್ಮದಿಯ ನಿದ್ರೆ ಪಡೆಯಲು ತುಂಬಾನೇ ಸಹಾಯ ಮಾಡುತ್ತವೆ.

ಉತ್ತಮ ನಿದ್ರೆ ಪಡೆಯಲು ರಾತ್ರಿ ಮಲಗುವ ಮುನ್ನ ಏನು ಮಾಡಬೇಕು?

ನಿಮ್ಮ ಮಲಗುವ ಸಮಯವನ್ನು ಸರಿಪಡಿಸಿಕೊಳ್ಳಿ: ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಲು ಮತ್ತು ಎಚ್ಚರಗೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ ರಾತ್ರಿ 9 ಗಂಟೆಗೆ ಮಲಗಿ ಬೆಳಗ್ಗೆ 5 ಗಂಟೆಗೆ ಎದ್ದೇಳಿ. ಪ್ರತಿನಿತ್ಯ ಇದೇ ಸಮಯಕ್ಕೆ ಮಲಗಿ. ಇದು ನಿಮ್ಮ ದೇಹದ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಮಲಗುವ ಒಂದು ಗಂಟೆ ಮೊದಲು ಮೊಬೈಲ್‌ನಿಂದ ದೂರವಿರಿ: ಇತ್ತೀಚಿನ ದಿನಗಳಲ್ಲಿ ಅನೇಕರು ಸೋಷಿಯಲ್‌ ಮೀಡಿಯಾ ನೋಡುತ್ತಾ, ಮೊಬೈಲ್‌ ಸ್ಕ್ರೋಲ್‌ ಮಾಡುತ್ತಾ ಕುಳಿತು ಬಿಡುತ್ತಾರೆ ಮತ್ತು ತಡ ರಾತ್ರಿಯವರೆಗೆ ಎಚ್ಚರಗೊಂಡಿರುತ್ತಾರೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳಿಂದ ಬರುವ ನೀಲಿ ಬೆಳಕು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ನಿದ್ರೆಯ  ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಮಲಗುವ ಒಂದು ಗಂಟೆಗೂ ಮುನ್ನ ಮೊಬೈಲ್‌, ಟಿವಿ ನೋಡುವುದನ್ನು ಸ್ಟಾಪ್‌ ಮಾಡಿ. ಸಾಧ್ಯವಾದರೆ ಈ ಸಮಯದಲ್ಲಿ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.

ಹಗುರವಾದ ಆಹಾರ ಸೇವಿಸಿ: ಮಲಗುವ ಸಮಯಕ್ಕೆ ಕನಿಷ್ಠ 2 ರಿಂದ 3 ಗಂಟೆಗಳ ಮೊದಲು ಊಟ ಮಾಡಿ. ಭಾರವಾದ, ಮಸಾಲೆಯುಕ್ತ ಅಥವಾ ಹುರಿದ ಆಹಾರಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ರಾತ್ರಿ ಹಗುರವಾದ ಊಟ ಮಾಡಿ.

ಇದನ್ನೂ ಓದಿ: ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ

ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ: ಸಂಜೆಯ ಬಳಿಕ ಚಹಾ, ಕಾಫಿ, ಎನರ್ಜಿ ಡ್ರಿಂಕ್ಸ್ ಅಥವಾ ಆಲ್ಕೋಹಾಲ್ ಸೇವಿಸುವುದು ಅಷ್ಟೇನೂ ಒಳ್ಳೆಯದಲ್ಲ. ಏಕೆಂದರೆ ಇವು ನಿದ್ರೆಯ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ನಿದ್ರೆಗೆ ಸಾಕಷ್ಟು ಅಡ್ಡಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ರಾತ್ರಿ ಹೊತ್ತು ಕೆಫೀನ್‌ ಸೇವನೆಯನ್ನು ತಪ್ಪಿಸಿ.

ಧ್ಯಾನ ಮಾಡಿ: ಉತ್ತಮ ನಿದ್ರೆ ಪಡೆಯಲು ಮಲಗುವ ಮುನ್ನ 5 10 ನಿಮಿಷಗಳ ಧ್ಯಾನ ಮಾಡಿ. ಆಳವಾದ ಉಸಿರಾಟದ ವ್ಯಾಯಾಮ, ಧ್ಯಾನ ಅಥವಾ ಲಘು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತಗೊಳ್ಳುತ್ತದೆ. ಇದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಧ್ಯಾನ ಮಾತ್ರವಲ್ಲದೆ ಪುಸ್ತಕ ಓದುವುದು, ಶಾಂತ ಸಂಗೀತವನ್ನು ಕೇಳುವ ಮೂಲಕವೂ ಉತ್ತಮ ನಿದ್ರೆಯನ್ನು ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version