ಆಸ್ತಿ ವರ್ಗಾವಣೆಗೆ 9,950 ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ – Kannada News | Hagaraga Gram Panchayat Secretary Vedang Arrested by Lokayukta in Kalaburagi Bribe Case

ಕಲಬುರಗಿ ಆ. 4: ಖಾಲಿ ನಿವೇಶನದ ಆಸ್ತಿ ವರ್ಗಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇದಾಂಗ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್‌ ಆಗಿ ಬಿದ್ದಿದ್ದಾರೆ. ಕಿಶನ್ ಪವಾರ್ ಅವರ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಅವರ ಮರಣದ ನಂತರ ಕುಟುಂಬದವರ ಹೆಸರಿಗೆ ವರ್ಗಾಯಿಸಲು ಅರ್ಜಿ ಸಲ್ಲಿಸಲಾಗಿತ್ತು. ಮರಣ ಪ್ರಮಾಣಪತ್ರ ಹಾಗೂ ಅಗ್ರಿಕಲ್ಚರಲ್/ಸ್ಟಾಂಪ್ ಪತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ಕಾರ್ಯದರ್ಶಿ ವೇದಾಂಗ್ ಅವರು ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಸಂಜೀವ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಚರಣೆ ರೂಪಿಸಿದ್ದರು. ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೂರುದಾರರಿಂದ 9,950 ರೂ. ಲಂಚ ಸ್ವೀಕರಿಸುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅಧಿಕಾರಿಯನ್ನು ಕೈಯಾರೆ ಬಂಧಿಸಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ರವಿ ಪವಾರ್ ಅವರ ನೇತೃತ್ವದ ತಂಡ ಈ ಯಶಸ್ವಿ ದಾಳಿ ನಡೆಸಿದ್ದು, ಆರೋಪಿ ವೇದಾಂಗ್ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆನ್​ ಜಿ ಸ್ಟೈಲ್ ಕಾಪಿ ಮಾಡಿದ ಅನುಪಮ್ ಖೇರ್ ರೀಲ್ಸ್​ಗೆ 100 ಮಿಲಿಯನ್​ ವೀವ್ಸ್ – Kannada News | Anupam Kher and Khosla Ka Ghosla 2 Cast Go Viral with Mere Mehboob Reel

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ‘ರೀಲ್ಸ್’ ಮಾಡುವ ಕ್ರೇಜ್ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯಾರನ್ನೂ ಬಿಟ್ಟಿಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶ್ರೀ ಫೈಜು ‘ಮೇರೆ ಮೆಹಬೂಬ್ ಕಯಾಮತ್ ಹೋಗಿ’ ಹಾಡಿಗೆ ಮಾಡಿದ ರೀಲ್ ವಿಪರೀತ ವೈರಲ್ ಆಗಿತ್ತು. ಈ ಒಂದೇ ವಿಡಿಯೊ ಫೈಜು ಅವರನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತು. ಅಲ್ಲಿಂದ ಶುರುವಾದ ಈ ಟ್ರೆಂಡ್ ನಂತರ ನೀಟ್ ಪರೀಕ್ಷೆಯ ಕುರಿತು ಜೆನ್-ಜೀ ಯುವಜನತೆ ನಡೆಸಿದ ಪ್ರತಿಭಟನೆಯ ವೇಳೆಯೂ ಮರುಜೀವ ಪಡೆದುಕೊಂಡಿತ್ತು. ಹಲವು ಇನ್ಫ್ಲುಯೆನ್ಸರ್‌ಗಳು ಈ ಹಾಡನ್ನು ಬಳಸಿ ರೀಲ್ಸ್ ಮಾಡಿ ಟ್ರೆಂಡಿಂಗ್ ಸೃಷ್ಟಿಸಿದ್ದರು.

ಈಗ ಈ ಪ್ರಸಿದ್ಧ ಟ್ರೆಂಡ್‌ಗೆ ಹಿರಿಯ ನಟ ಅನುಪಮ್ ಖೇರ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಮುಂಬರುವ ‘ಖೋಸ್ಲಾ ಕಾ ಘೋಸ್ಲಾ 2’ ಚಿತ್ರದ ಸಹನಟರಾದ ಬೋಮನ್ ಇರಾನಿ, ರಣವೀರ್ ಶೋರೆ ಮತ್ತು ಪರ್ವೀನ್ ದಬಾಸ್ ಅವರೊಂದಿಗೆ ಸೇರಿ ಅವರು ‘ಮೇರೆ ಮೆಹಬೂಬ್ ಕಯಾಮತ್ ಹೋಗಿ’ ಹಾಡಿಗೆ ಮಜವಾದ ರೀಲ್ ಮಾಡಿದ್ದಾರೆ. ಹಿರಿಯ ನಟರ ಈ ಅದ್ಭುತ ವಿಡಿಯೊ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ 138 ಮಿಲಿಯನ್‌ಗಿಂತಲೂ ಹೆಚ್ಚು (13.8 ಕೋಟಿಗೂ ಅಧಿಕ) ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೊಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾದ ನಟ ರಣವೀರ್ ಶೋರೆ ತಮ್ಮ ಎಕ್ಸ್ (X) ಖಾತೆಯಲ್ಲಿ ಅನುಪಮ್ ಖೇರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ನಮ್ಮನ್ನು 100 ಮಿಲಿಯನ್ ವೀಕ್ಷಣೆಗಳ ಕ್ಲಬ್‌ಗೆ ಸೇರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ರಣವೀರ್ ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ಹಂಚಿಕೊಂಡಿದ್ದ ಅನುಪಮ್ ಖೇರ್, ‘ಖೋಸ್ಲಾ ಮತ್ತು ಖುರಾನಾ ಎಂದಿಗೂ ಒಂದಾಗಲು ಸಾಧ್ಯವಿಲ್ಲ, ಇಲ್ಲೂ ಕೂಡ! ಜೈ ಹೋ!’ ಎಂದು ತಮಾಷೆಯಾಗಿ ಕ್ಯಾಪ್ಷನ್ ನೀಡಿದ್ದರು.

ಇದನ್ನೂ ಓದಿ: ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಎಂಟ್ರಿ; ಇಲ್ಲಿದೆ ‘ರಾಮಾಯಣ’ ಕಲಾವಿದರ ಫುಲ್ ಲಿಸ್ಟ್

ಅಂದಹಾಗೆ, ಈ ನಟರೆಲ್ಲರೂ ಒಟ್ಟಿಗೆ ಅಭಿನಯಿಸಿರುವ ‘ಖೋಸ್ಲಾ ಕಾ ಘೋಸ್ಲಾ 2’ ಸಿನಿಮಾ ಆಗಸ್ಟ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2006 ರಲ್ಲಿ ಸೂಪರ್ ಹಿಟ್ ಆಗಿದ್ದ ‘ಖೋಸ್ಲಾ ಕಾ ಘೋಸ್ಲಾ’ ಚಿತ್ರದ ಸೀಕ್ವೆಲ್ ಆಗಿದೆ. ಪ್ರಶಾಂತ್ ಬಾಂಗಿಯಾ ನಿರ್ದೇಶನದ ಈ ಸಿನಿಮಾದಲ್ಲಿ ಹಳೆಯ ತಾರಾಗಣದ ಜೊತೆಗೆ ಹಲವು ಹೊಸ ಕಲಾವಿದರೂ ಕಾಣಿಸಿಕೊಂಡಿದ್ದಾರೆ. ಅನುಪಮ್ ಖೇರ್, ಬೋಮನ್ ಇರಾನಿ, ರಣವೀರ್ ಶೋರೆ, ಪರ್ವೀನ್ ದಬಾಸ್, ತಾರಾ ಶರ್ಮಾ ಮತ್ತು ಕಿರಣ್ ಜುನೇಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ; ವಿಶೇಷ ಪೂಜೆಗಳ ಸಂಭ್ರಮ – Kannada News | Chamundeshwari Vardhanti: Mysurus Grand Temple Celebrations

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಇಂದು ವಿಜೃಂಭಣೆಯಿಂದ ನಡೆಯುತ್ತಿದೆ. ಜನ್ಮೋತ್ಸವ ಎಂದೂ ಕರೆಯಲ್ಪಡುವ ಈ ದಿನವನ್ನು ದೇವಿಯ ಹುಟ್ಟುಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳಿಗೆ ಹುಟ್ಟುಹಬ್ಬವನ್ನು ಆಚರಿಸುವಂತೆಯೇ, ತಾಯಿ ಚಾಮುಂಡೇಶ್ವರಿಗೂ ಈ ವಿಶೇಷ ದಿನದಂದು ವೈಭವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.

ದೇವಿಯ ವರ್ಧಂತಿ ಮಹೋತ್ಸವದ ಭಾಗವಾಗಿ, ಬೆಳಗ್ಗೆ ಅಭ್ಯಂಜನ ಸ್ನಾನದಿಂದ ಪೂಜೆಗಳು ಪ್ರಾರಂಭವಾದವು. ನಂತರ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕ ಪಂಚಾಮೃತ ಅಭಿಷೇಕ, ಮತ್ತು ಅನೇಕ ದ್ರವ್ಯಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಕ್ಷೀರಾನ್ನದಿಂದಲೂ ಅಭಿಷೇಕ ಮಾಡಲಾಯಿತು. ಈ ದಿನದ ಪ್ರಮುಖ ಆಕರ್ಷಣೆ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ. ಬೆಳಿಗ್ಗೆ 9:30ಕ್ಕೆ ಮಹಾ ಮಂಗಳಾರತಿ ನಡೆದ ನಂತರ, 10:30ಕ್ಕೆ ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವವು ಆರಂಭಗೊಂಡಿತು. ಪ್ರತಿ ವರ್ಷದಂತೆ, ಮೈಸೂರು ರಾಜವಂಶಸ್ಥರು ಈ ಭವ್ಯ ಉತ್ಸವಕ್ಕೆ ಚಾಲನೆ ನೀಡಿದರು. ಆಷಾಢ ಕೃಷ್ಣ ಪಕ್ಷದ ರೇವತಿ ನಕ್ಷತ್ರದಂದು ತಾಯಿ ಚಾಮುಂಡೇಶ್ವರಿಯ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಶ್ವಿನ್​ಗೆ ಬಹಿರಂಗವಾಗಿಯೇ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್ – Kannada News | Arshdeep Singh Apologizes to R Ashwin After Ranking Him 5th

ಭಾರತ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ಅನುಭವಿ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮಾತನಾಡಿಸುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಹೆಸರಿಸಿದ ಟಾಪ್-5 ಬೌಲರ್​ಗಳು.

ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಭಾರತದ ಅತ್ಯಂತ ಪ್ರತಿಭಾವಂತ ಅಥವಾ ನೆಚ್ಚಿನ 5 ಬೌಲರ್‌ಗಳನ್ನು ಶ್ರೇಯಾಂಕದ  ಆಧಾರದಲ್ಲಿ ಹೆಸರಿಸಲು ಕೇಳಲಾಯಿತು. ವೇಗದ ಬೌಲರ್‌ಗಳ ಬಗ್ಗೆ ಕೊಂಚ ಹೆಚ್ಚು ಒಲವು ಹೊಂದಿದ್ದ ಅರ್ಷದೀಪ್ , ಆರಂಭದಲ್ಲೇ ಅಗ್ರ ಸ್ಥಾನಗಳನ್ನು ಭರ್ತಿ ಮಾಡಿದರು. ಕೊನೆಗೆ ಉಳಿದ ಏಕೈಕ ಸ್ಥಾನಕ್ಕೆ ಅಶ್ವಿನ್ ಅವರ ಹೆಸರನ್ನು ಇರಿಸಬೇಕಾಯಿತು.

ಅರ್ಷದೀಪ್ ಸಿಂಗ್​ರ ಟಾಪ್ 5 ಬೌಲರ್‌ಗಳು:

  1. ಭುವನೇಶ್ವರ್ ಕುಮಾರ್: ತಮ್ಮ ವೈಯಕ್ತಿಕ ನೆಚ್ಚಿನ ಬೌಲರ್ ಎಂದು ಮೊದಲ ಸ್ಥಾನ ನೀಡಿದರು.
  2. ಮೊಹಮ್ಮದ್ ಶಮಿ: ಚೆಂಡನ್ನು ಸೀಮ್ ಮಾಡುವ ಅದ್ಭುತ ಕಲೆಗಾಗಿ ಎರಡನೇ ಸ್ಥಾನ ನೀಡಿದರು.
  3.  ಕುಲ್ದೀಪ್ ಯಾದವ್: ವಿಶಿಷ್ಟ ಎಡಗೈ ಚೈನಾಮನ್ ಶೈಲಿಗಾಗಿ ಮೂರನೇ ಸ್ಥಾನದಲ್ಲಿರಿಸಿದರು.
  4. ಯುಜ್ವೇಂದ್ರ ಚಹಲ್: ಪಂಜಾಬ್ ದೇಶಿ ತಂಡದ ಆಟಗಾರ ಹಾಗೂ ವಿಕೆಟ್ ಟೇಕರ್ ಆಗಿರುವುದರಿಂದ ನಾಲ್ಕನೇ ಸ್ಥಾನ ನೀಡಿದರು.
  5. ರವಿಚಂದ್ರನ್ ಅಶ್ವಿನ್: ಕೊನೆಯಲ್ಲಿ ಬೇರೆ ಸ್ಥಾನಗಳಿಲ್ಲದ ಕಾರಣ ಅಶ್ವಿನ್ ಅವರಿಗೆ 5ನೇ ಸ್ಥಾನ ನೀಡಿದ್ದರು.

ಕ್ಷಮೆಯಾಚಿಸಲು ಮುಖ್ಯ ಕಾರಣವೇನು?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ದಿಗ್ಗಜ ಆಟಗಾರನನ್ನು ಕೊನೆಯ ಸ್ಥಾನದಲ್ಲಿ ಇರಿಸಿದ್ದನ್ನು ಅರಿತ ಅರ್ಷದೀಪ್ ಸಿಂಗ್ ತಕ್ಷಣವೇ ನಗುತ್ತಾ ಗೌರವಪೂರ್ವಕವಾಗಿ ಕ್ಷಮೆ ಕೇಳಿದರು.

ಇದನ್ನೂ ಓದಿ: ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಅಶ್ವಿನ್ ಅವರೊಂದಿಗೆ ತಮಗಿರುವ ವಿಶೇಷ ಬಾಂಧವ್ಯವನ್ನು ನೆನೆದ ಅರ್ಷದೀಪ್ ಸಿಂಗ್, “2019 ರಲ್ಲಿ ನಾನು ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಪಾದಾರ್ಪಣೆ ಮಾಡಿದಾಗ ಆರ್. ಅಶ್ವಿನ್ ಅವರೇ ನನ್ನ ಮೊದಲ ನಾಯಕರಾಗಿದ್ದರು. ಅಶ್ವಿನ್ ಭಾಯ್ ಅವರನ್ನು ಕೊನೆಯ ಸ್ಥಾನದಲ್ಲಿ ಇರಿಸಲು ನನಗೆ ಇಷ್ಟವಿರಲಿಲ್ಲ. ಆದರೆ ಬೇರೆ ಯಾವುದೇ ಸ್ಥಾನಗಳು ಬಾಕಿ ಇರಲಿಲ್ಲ. ಕ್ಷಮಿಸಿ ಅಶ್ವಿನ್ ಭಾಯ್, ನಾನು ನಿಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡುತ್ತೇನೆ,” ಎಂದು ಹಾಸ್ಯಭರಿತವಾಗಿ ಹೇಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Published On – 11:16 am, Tue, 4 August 26

Source link

‘ಸಿಟಿ ಲೈಟ್ಸ್’ ಬಿಡುಗಡೆಗೆ ಸೇಫ್ ದಿನ ನಿಗದಿ ಮಾಡಿದ ದುನಿಯಾ ವಿಜಿ – Kannada News | Vinay Rajkumar and Duniya Vijay’s City Lights movie release date announced

ದುನಿಯಾ ವಿಜಯ್ (Duniya Vijay), ಯಶಸ್ವಿ ನಾಯಕನ ಜೊತೆಗೆ ಯಶಸ್ವಿ ನಿರ್ದೇಶಕ ಸಹ. ಈ ವರೆಗೆ ಅವರು ನಿರ್ದೇಶನ ಮಾಡಿರುವ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ದುನಿಯಾ ವಿಜಿ ನಿರ್ದೇಶಿಸಿದ ಎರಡೂ ಸಿನಿಮಾಗಳಲ್ಲಿ ಅವರೇ ನಾಯಕರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತೊಬ್ಬ ನಾಯಕನಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ ‘ಸಿಟಿ ಲೈಟ್ಸ್’. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಸಿನಿಮಾದ ಹೆಸರನ್ನೇ ಇರಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ದುನಿಯಾ ವಿಜಿ, ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್ ನಾಯಕ ಮತ್ತು ದುನಿಯಾ ವಿಜಯ್ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

‘ಸಿಟಿ ಲೈಟ್ಸ್’ ಸಿನಿಮಾ ಸೆಪ್ಟೆಂಬರ್ 18ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇದು ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ ಆಗಿದ್ದು, ವಿನಯ್ ರಾಜ್​ಕುಮಾರ್ ಮತ್ತು ದುನಿಯಾ ವಿಜಯ್ ಪುತ್ರಿ ಮೊನಿಷಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮೊನಿಷಾ ಅವರಿಗೆ ಇದು ಮೊಟ್ಟ ಮೊದಲ ಸಿನಿಮಾ ಆಗಿದೆ. ವಿಜಿ ಅವರ ಮತ್ತೊಬ್ಬ ಪುತ್ರಿ ರಿತನ್ಯಾ ಈಗಾಗಲೇ ಲ್ಯಾಂಡ್ ಲಾರ್ಡ್ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇದೀಗ ‘ಸಿಟಿ ಲೈಟ್ಸ್’ ಮೂಲಕ ಮತ್ತೊಬ್ಬ ಪುತ್ರಿಯನ್ನೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ನಗರ ಬದುಕಿನ ಹಲವು ಮುಖಗಳನ್ನು ತೋರಿಸುವ ಕತೆಯನ್ನು ‘ಸಿಟಿ ಲೈಟ್ಸ್’ ಸಿನಿಮಾ ಒಳಗೊಂಡಿದೆ. ಬೆಂಗಳೂರಿನ ಸ್ಲಂಗಳು ಇನ್ನಿತರೆ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ‘ಸಿಟಿ ಲೈಟ್ಸ್’ ನೈಜತೆಯನ್ನು ಒಳಗೊಂಡಿರುವ ಪ್ರೇಮಕತೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ದುನಿಯಾ ವಿಜಿ ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಮಾಸ್ತಿ ಅವರ ಸಂಭಾಷಣೆ ಇದೆ. ಸಿನಿಮಾನಲ್ಲಿ ಕಾಕ್ರೂಚ್ ಸುಧಿ ಸಹ ನಟಿಸಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ. ಆನಂದ್ ಆಡಿಯೋ ಸಂಗೀತದ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರ ಮತ ಬೇಕು, ಅಧಿಕಾರ ಕೊಡಲು ಮನಸಿಲ್ಲ: ಸಂಪುಟದಲ್ಲಿ ಸ್ತ್ರೀಯರಿಗೆ ಅವಕಾಶ ಕೊಡದ ಬಗ್ಗೆ ಜೆಡಿಎಸ್ ಆಕ್ರೋಶ – Kannada News | Karnataka Cabinet Expansion: JDS Slams Congress Over Zero Women Representation

ಬೆಂಗಳೂರು, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕಿಗೂ ಮಂತ್ರಿ ಸ್ಥಾನ ದೊರೆತಿಲ್ಲ. ಈ ಬೆಳವಣಿಗೆಯನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ವ್ಯಂಗ್ಯವಾಡಿದೆ. ಬರೀ ಮಾತಿನಲ್ಲಿ ಮಹಿಳಾ ಸಬಲೀಕರಣ ತೋರಿಸಿದರೆ ಆಗುವುದಿಲ್ಲ, ಸಂಪುಟದಲ್ಲಿ ತೋರಿಸಬೇಕಾಗಿತ್ತು ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ​ಚುನಾವಣೆ ಸಮಯದಲ್ಲಿ ಮಹಿಳೆಯರ ಮತ ಬೇಕು, ಆದರೆ ಅಧಿಕಾರದ ಹಂಚಿಕೆ ಬಂದಾಗ ಸ್ಥಾನ ಕೊಡಲು ಮನಸ್ಸಿಲ್ಲ. ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಮಹಿಳೆಯರಿಗೆ ಶೂನ್ಯ ಪ್ರಾತಿನಿಧ್ಯ‌ ರಾಜ್ಯದ ನಾರೀಶಕ್ತಿಗೆ ಮಾಡಿದ ಅಪಮಾನ. ಇದುವೇನಾ ನೀವು ಮಹಿಳೆಯರಿಗೆ ನೀಡುವ ಗೌರವ ಎಂದು ಜೆಡಿಎಸ್ ಪ್ರಶ್ನಿಸಿದೆ.

​ರಾಜ್ಯದ ಶೇಕಡಾ 50ರಷ್ಟಿರುವ ಮಹಿಳಾ ಸಮುದಾಯಕ್ಕೆ ಅಧಿಕಾರದ ಪಾಲು ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲವೇ? ಮಹಿಳಾ ಸಬಲೀಕರಣದ ಬಗ್ಗೆ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುವವರು, ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕಾಂಗ್ರೆಸ್ ಪಕ್ಷದ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ. ​ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಅರ್ಹತೆ ಮತ್ತು ಸಾಮರ್ಥ್ಯವಿರುವ ಮಹಿಳಾ ಜನಪ್ರತಿನಿಧಿಗಳಿದ್ದರೂ ಅವಕಾಶ ನಿರಾಕರಿಸಿರುವುದು ತಾರತಮ್ಯದ ನೀತಿಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತಕ್ಷಣವೇ ಈ ತಪ್ಪನ್ನು ಸರಿಪಡಿಸಿ, ಸಂಪುಟದಲ್ಲಿ ಮಹಿಳೆಯರಿಗೆ ಮನ್ನಣೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀಗೆ ಮಾಡಿದ್ರೆ ಸರಿ ಇರಲ್ಲ; ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್ – Kannada News | Mrunal Thakur Condemns Viral Deepfake Photos, Warns of Strict Legal Action  

ಖಾಸಗಿ ಫೋಟೋ ವೈರಲ್ ಆದಾಗ ಅಥವಾ ಕೆಲವರು ಎಡಿಟ್ ಮಾಡಿದ ಫೋಟೋ ಹರಿದಾಡಿದಾಗ ನಟಿಯರು ಸುಮ್ಮನೆ ಇರೋದಿಲ್ಲ. ಈಗ ನಟಿ ಮೃಣಾಲ್ ಠಾಕೂರ್ (Mrunal Thakur) ಕೂಡ ಇದನ್ನೇ ಮಾಡಿದ್ದಾರೆ. ಅವರ ಎಐ ಫೋಟೋಗಳು ಸೋಶಿಶಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೈಬರ್ ಅಪರಾಧಿಗಳ ವಿರುದ್ಧ ಕಾನೂನು ಸಮರ ಸಾರಲು ಅವರು ಸಜ್ಜಾಗಿದ್ದಾರೆ. ತಿರುಚಲಾದ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳು ಕೂಡ ನಟಿಯ ಬೆಂಬಲಕ್ಕೆ ನಿಂತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸೋಶಿಯಲ್ ಮೀಡಿಯಾದ ಎಕ್ಸ್ ಖಾತೆಯೊಂದರಲ್ಲಿ ಮೃಣಾಲ್ ಅವರದ್ದು ಎನ್ನಲಾದ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡು ನಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಫೋಟೊ ಹಂಚಿಕೊಳ್ಳುವುದು ಸಂಪೂರ್ಣವಾಗಿ ಕಾನೂನುಬಾಹಿರ. ತಕ್ಷಣವೇ ಈ ಪೋಸ್ಟ್ ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಸೈಬರ್ ಪೊಲೀಸ್ ದೂರು ನೀಡುವುದಾಗಿ ಮೃಣಾಲ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಚಿತ್ರರಂಗದ ನಟಿಯರಿಗೆ ಎಐ ತಂತ್ರಜ್ಞಾನದ ದುರ್ಬಳಕೆ ದೊಡ್ಡ ತಲೆನೋವಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ಇದೇ ರೀತಿಯ ಡಿಜಿಟಲ್ ಕಿರುಕುಳಕ್ಕೆ ಒಳಗಾಗಿದ್ದರು. ಎಚ್ಚರಿಕೆ ನೀಡಿದ ಮೇಲೆಯೂ ಈ ಚಿತ್ರಗಳು ಜಾಲತಾಣದಲ್ಲಿ ಇವೆ. ಹೀಗಾಗಿ ಮುಂದಿನ ಕಾನೂನು ಕ್ರಮಗಳ ಮೇಲೆ ಎಲ್ಲರ ಕಣ್ಣಿದೆ.

ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಹುಟ್ಟಿದೆ ವದಂತಿ

ಇತ್ತೀಚೆಗೆ ‘ಹೇ ಜವಾನಿ ತೋ ಇಷ್ಕ್ ಹೊನಾ ಹೇ’ ಮತ್ತು ‘ಡಕಾಯತ್’ ಸಿನಿಮಾಗಳ ಮೂಲಕ ಮೃಣಾಲ್ ಗಮನ ಸೆಳೆದಿದ್ದಾರೆ. ಸದ್ಯ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅಲ್ಲು ಅರ್ಜುನ್ ಅವರ ಮುಂದಿನ ‘ರಾಕಾ’ ಸಿನಿಮಾದಲ್ಲೂ ಅವರು ಅಭಿನಯಿಸಲಿದ್ದಾರೆ ಎನ್ನಲಾಗಿದೆ. ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟಿಗೆ ಈಗ ಈ ನಕಲಿ ಫೋಟೊಗಳ ಕಿರಿಕಿರಿ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Planetary Transits: ಆಗಸ್ಟ್​​ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ! – Kannada News | August Planetary Transits: Rare Rajyoga to Bring House and Vehicle Luck to 4 Zodiac Signs

ಹೊಸ ಮನೆ, ವಾಹನ ಖರೀದಿ ಭಾಗ್ಯ
Image Credit source: Getty Images

ಆಗಸ್ಟ್ ತಿಂಗಳು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ತಿಂಗಳಲ್ಲಿ ಜ್ಯೋತಿಷ್ಯದ ಪ್ರಮುಖ ಗ್ರಹಗಳಾದ ಗುರು, ಶನಿ ಮತ್ತು ಶುಕ್ರ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಚಾರದಿಂದಾಗಿ ಬಲವಾದ ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಈ ಗ್ರಹಗಳ ವಿಶೇಷ ಶುಭ ದೃಷ್ಟಿಯಿಂದಾಗಿ ನಾಲ್ಕು ರಾಶಿಚಕ್ರಗಳ ಭಾಗ್ಯವೇ ಬದಲಾಗಲಿದ್ದು, ಅವರು ಅಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಲಿವೆ. ವಿಶೇಷವಾಗಿ ಈ ಅವಧಿಯಲ್ಲಿ ಹೊಸ ಮನೆ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗ ಈ ರಾಶಿಯವರಿಗಿದೆ.

ಮೇಷ ರಾಶಿ:

ಮೇಷ ರಾಶಿಯವರಿಗೆ ಆಗಸ್ಟ್ ತಿಂಗಳು ಅತ್ಯಂತ ಲಾಭದಾಯಕವಾಗಿರಲಿದೆ. ಅನಿರೀಕ್ಷಿತ ಮಾರ್ಗಗಳಿಂದ ಹಣದ ಹರಿವು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿದೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸ-ಕಾರ್ಯಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ಸಂತೋಷ ಹಾಗೂ ಗೌರವದ ವಾತಾವರಣ ನಿರ್ಮಾಣವಾಗಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯ ಜಾತಕದವರಿಗೆ ಈ ಗ್ರಹಗಳ ಸಂಚಾರವು ಅತ್ಯಂತ ಶುಭ ಫಲಗಳನ್ನು ತರಲಿದೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಹೊಸ ಮನೆ ಅಥವಾ ಕನಸಿನ ವಾಹನವನ್ನು ಖರೀದಿಸುವ ಉತ್ತಮ ಅವಕಾಶಗಳು ಸಿಗಲಿವೆ. ವಿವಿಧ ಮೂಲಗಳಿಂದ ನಿರೀಕ್ಷಿತ ಹಾಗೂ ಅನಿರೀಕ್ಷಿತ ಹಣ ಹರಿದುಬರಲಿದ್ದು, ಆರ್ಥಿಕವಾಗಿ ಹೆಚ್ಚಿನ ಭದ್ರತೆ ಸಿಗಲಿದೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಮಕರ ರಾಶಿ:

ಮಕರ ರಾಶಿಯವರಿಗೆ ಈ ಸಮಯವು ಕಾನೂನು ಹಾಗೂ ಆಸ್ತಿ ವಿಚಾರಗಳಲ್ಲಿ ಜಯ ತಂದುಕೊಡಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ನಿಮಗೇ ಅನುಕೂಲಕರ ತೀರ್ಪು ಬರಲಿದೆ. ಹಿರಿಯರಿಂದ ಅಥವಾ ಅಜ್ಜ-ಅಜ್ಜಿಯಂದಿರಿಂದ ಬರಬೇಕಾಗಿದ್ದ ಆಸ್ತಿ ಕೈಸೇರಲಿದೆ. ಹೊಸ ವ್ಯಾಪಾರ-ವಹಿವಾಟು ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿದ್ದು, ಹೊಸ ವಾಹನ ಖರೀದಿಯ ಯೋಗವೂ ಇದೆ.

ಮೀನ ರಾಶಿ:

ಮೀನ ರಾಶಿಯವರಿಗೆ ಆಗಸ್ಟ್ ತಿಂಗಳು ಆರ್ಥಿಕ ಹಾಗೂ ಮಾನಸಿಕ ನೆಮ್ಮದಿಯನ್ನು ನೀಡಲಿದೆ. ಈ ಹಿಂದೆ ನೀವು ಬೇರೆಯವರಿಗೆ ನೀಡಿದ್ದ ಹಣ ಅಥವಾ ಬರಬೇಕಾಗಿದ್ದ ಹಳೆಯ ಬಾಕಿ ಮೊತ್ತ ನಿಮ್ಮ ಕೈಸೇರಲಿದೆ. ಅನಗತ್ಯ ಖರ್ಚುಗಳು ಗಣನೀಯವಾಗಿ ಕಡಿಮೆಯಾಗಿ ಉಳಿತಾಯ ಹೆಚ್ಚಾಗಲಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗಲಿದ್ದು, ಆದಾಯದ ಹೊಸ ಬಾಗಿಲುಗಳು ತೆರೆಯಲಿವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಬೆಂಗಳೂರು ಉತ್ತರ ಮತ್ತು ದಕ್ಷಿಣ ವಲಯದಲ್ಲಿ ಶೇ100 ಡಿಜಿಟಲೀಕರಣ ಪೂರ್ಣ! – Kannada News | Bengaluru SIR Voter Verification: BBMP North and South Record 100 Percent Digitization

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆImage Credit source: The economic times

ಬೆಂಗಳೂರು, ಆಗಸ್ಟ್ 04: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಮನೆ ಮನೆ ಸಮೀಕ್ಷೆ ಪೂರ್ಣಗೊಳ್ಳಲು ಕೇವಲ ಐದು ದಿನಗಳು ಬಾಕಿ ಇರುವಂತೆಯೇ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯು ಬಿಬಿಎಂಪಿ ಉತ್ತರ ಮತ್ತು ದಕ್ಷಿಣ ವಲಯ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಶೇ. 100 ರಷ್ಟು ಫಾರ್ಮ್‌ಗಳ ಡಿಜಿಟಲೀಕರಣ ಸಾಧಿಸಿರುವುದಾಗಿ ತಿಳಿಸಿದೆ. ಆಗಸ್ಟ್ 8 ರ ಗಡುವಿನೊಳಗೆ ಗೈರುಹಾಜರಿ, ಸ್ಥಳಾಂತರಗೊಂಡ, ಮೃತಪಟ್ಟ ಹಾಗೂ ನಕಲಿ ಮತದಾರರ (ASDDO) ಮಾಹಿತಿ ಸೇರಿದಂತೆ ಎಲ್ಲಾ ಫಾರ್ಮ್‌ಗಳ ಡಿಜಿಟಲೀಕರಣವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಸಿಇಒ ಕಚೇರಿ ವ್ಯಕ್ತಪಡಿಸಿದೆ.

ರಾಜಧಾನಿಯ ವಿವಿಧ ವಲಯಗಳ ಪ್ರಗತಿ ವರದಿ

ಆರಂಭದಲ್ಲಿ ಫಾರ್ಮ್‌ಗಳ ವಿತರಣೆ ಹಾಗೂ ಡಿಜಿಟಲೀಕರಣದಲ್ಲಿ ಹಿಂದುಳಿದಿದ್ದ ಬೆಂಗಳೂರು ನಗರದ ವಲಯಗಳು ಇದೀಗ ಗಣನೀಯ ಪ್ರಗತಿ ಸಾಧಿಸಿವೆ.

  • ಬಿಬಿಎಂಪಿ ದಕ್ಷಿಣ: ಒಟ್ಟು 21,44,784 ಮತದಾರರಿದ್ದು, ಶೇ 47.54ರಷ್ಟು ಮತದಾರರು ಫಾರ್ಮ್ ಸಹಿ ಮಾಡಿ ಸಲ್ಲಿಸಿದ್ದಾರೆ. ಉಳಿದ ಶೇ 52.46ರಷ್ಟು ಮತದಾರರು ASDDO ಪಟ್ಟಿಗೆ ಸೇರಿದ್ದು, ಇದು ರಾಜ್ಯದಲ್ಲೇ ಗರಿಷ್ಠವಾಗಿದೆ.
  • ಬಿಬಿಎಂಪಿ ಉತ್ತರ: ಒಟ್ಟು 23,32,621 ಮತದಾರರ ಪೈಕಿ ಶೇ 51.68ರಷ್ಟು ಜನರು ಫಾರ್ಮ್ ಹಿಂತಿರುಗಿಸಿದ್ದು, ಶೇ 48.32ರಷ್ಟು ಮತದಾರರು ASDDO ವರ್ಗಕ್ಕೆ ಸೇರಿದ್ದಾರೆ.
  • ಬೆಂಗಳೂರು ನಗರ ಜಿಲ್ಲೆ: ಒಟ್ಟು 40,21,039 ಮತದಾರರಿದ್ದು, ಶೇ 99.99ರಷ್ಟು ಫಾರ್ಮ್‌ಗಳು ಡಿಜಿಟಲೀಕರಣಗೊಂಡಿವೆ (ಶೇ 45.85 ASDDO).
  • ಬೆಂಗಳೂರು ಸೆಂಟ್ರಲ್: 18,89,919 ಮತದಾರರ ಪೈಕಿ ಶೇ 50.61ರಷ್ಟು ಫಾರ್ಮ್‌ಗಳು ಸ್ವೀಕೃತವಾಗಿದ್ದು, ಶೇ 49.38ರಷ್ಟು ASDDO ದಾಖಲಾಗಿದೆ.
  • ಬೆಂಗಳೂರು ಗ್ರಾಮಾಂತರ: ಶೇ 99.86 ರಷ್ಟು ಮಾಹಿತಿ ಡಿಜಿಟಲೀಕರಣಗೊಂಡಿದೆ.

ಇದನ್ನೂ ಓದಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ 3.49 ಲಕ್ಷ ರೂ. ವಂಚನೆ: ಖದೀಮರ ಪ್ಲ್ಯಾನ್​​ ಹೇಗಿತ್ತು ಗೊತ್ತಾ?

ಆಗಸ್ಟ್ 8 ರ ಗಡುವು, ರಾಜಕೀಯ ಪಕ್ಷಗಳ ಪರಿಶೀಲನೆ

ರಾಜ್ಯಾದ್ಯಂತ ಒಟ್ಟಾರೆಯಾಗಿ ಶೇ 99.56 ರಷ್ಟು ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಒಟ್ಟು 1,10,59,288 (ಶೇ 19.95) ಮತದಾರರು ASDDO ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅಂತಿಮ ಪರಿಶೀಲನೆ ಮತ್ತು ತಿದ್ದುಪಡಿಗಾಗಿ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ ASDDO ಪಟ್ಟಿಯ ಸಾಫ್ಟ್ ಹಾಗೂ ಹಾರ್ಡ್ ಕಾಪಿಗಳನ್ನು ಆಗಸ್ಟ್ 8 ರ ಗಡುವಿಗಿಂತ ಮುಂಚಿತವಾಗಿ ಹಂಚಿಕೊಳ್ಳಲಾಗುತ್ತಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಆರಂಭದಲ್ಲಿ ಸಂಗ್ರಹಿಸಿದ ಫಾರ್ಮ್‌ಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದ್ದರಿಂದ ಬೆಂಗಳೂರು ಹಿಂದುಳಿದಿತ್ತು, ಆದರೆ ಈಗ ಗಡುವು ಸಮೀಪಿಸುತ್ತಿದ್ದಂತೆ ವೇಗವಾಗಿ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಜೈವಿಕ ಇಂಧನ ಮಾದರಿಗೆ ಅಮೆರಿಕ ಮೆಚ್ಚುಗೆ: ರಾಜ್ಯಕ್ಕೆ ಭೇಟಿ ನೀಡುವಂತೆ ಗವರ್ನರ್ ವೆಸ್ ಮೂರ್‌ಗೆ ಆಹ್ವಾನ – Kannada News | India US Bioenergy and Clean Energy Collaboration: KSBDB Meets Maryland Governor

ಬೆಂಗಳೂರು, ಆ.4: ಭಾರತ ಮತ್ತು ಅಮೆರಿಕ (India-US) ನಡುವೆ ಸ್ವಚ್ಛ ಇಂಧನ (Clean Energy) ಹಾಗೂ ಜೈವಿಕ ಇಂಧನ (Bioenergy) ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಅಧ್ಯಕ್ಷ ಎಸ್.ಇ. ಸುಧೀಂದ್ರ ಅವರು ಅಮೆರಿಕದ ಮ್ಯಾಪಿಲ್ಯಾಂಡ್ (Maryland) ರಾಜ್ಯದ ಗವರ್ನರ್ ವೆಸ್ ಮೂರ್ (Wes Moore) ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.

ಅಮೆರಿಕನ್ ತೆಲುಗು ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಅಮೆರಿಕದ ತೆಲುಗು-ಇಂಡಿಯನ್ ಸಮುದಾಯದ ಪ್ರಮುಖ ನಾಯಕರು ಈ ಉನ್ನತ ಮಟ್ಟದ ಭೇಟಿಯಲ್ಲಿ ಭಾಗವಹಿಸಿದ್ದರು.

ಜೈವಿಕ ಇಂಧನ ಹಂಚಿಕೆಗೆ ಕರ್ನಾಟಕ ಹಾಗೂ ಮ್ಯಾಪಿಲ್ಯಾಂಡ್ ನಡುವೆ ಚರ್ಚೆ

ಜಾಗತಿಕ ಇಂಧನ ಭದ್ರತೆ ಹಾಗೂ ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸುವಲ್ಲಿ ಜೈವಿಕ ಇಂಧನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಗವರ್ನರ್ ವೆಸ್ ಮೂರ್ ಈ ವೇಳೆ ಪ್ರತಿಪಾದಿಸಿದರು. ಸ್ವಚ್ಛ ಇಂಧನ ನೀತಿಗೆ ಬದ್ಧತೆ ವ್ಯಕ್ತಪಡಿಸಿದ ಅವರು, ಕರ್ನಾಟಕದೊಂದಿಗೆ ಪಾಲುದಾರಿಕೆ ಹೊಂದಲು ತೀವ್ರ ಆಸಕ್ತಿ ವ್ಯಕ್ತಪಡಿಸಿದರು.

ಕೃಷಿ ತ್ಯಾಜ್ಯ ಹಾಗೂ ಜೈವಿಕ ಭಸ್ಮವನ್ನು (Biomass) ಮೌಲ್ಯಯುತ ಶಕ್ತಿ ಸಂಪನ್ಮೂಲವಾಗಿ ಪರಿವರ್ತಿಸುವಲ್ಲಿ ಕರ್ನಾಟಕವು ಭಾರತದಲ್ಲೇ ಮುಂಚೂಣಿಯಲ್ಲಿದೆ ಎಂದು KSBDB ಅಧ್ಯಕ್ಷ ಎಸ್.ಇ. ಸುಧೀಂದ್ರ ವಿವರಣೆ ನೀಡಿದರು. ಈ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಇಂಧನ ಭದ್ರತೆಗೆ ಕೊಡುಗೆ ನೀಡುತ್ತಿವೆ ಎಂದರು.

ಇದನ್ನೂ ಓದಿ: ಕೆಆರ್‌ಎಸ್, ಆಲಮಟ್ಟಿಗೆ ಬೃಹತ್‌ ಒಳಹರಿವು! ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿರುವ ಜೈವಿಕ ಇಂಧನ ಯೋಜನೆಗಳನ್ನು ಹತ್ತಿರದಿಂದ ವೀಕ್ಷಿಸಲು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಲು ಗವರ್ನರ್ ವೆಸ್ ಮೂರ್ ಹಾಗೂ ಅವರ ಉನ್ನತ ನಿಯೋಗಕ್ಕೆ ಸುಧೀಂದ್ರ ಅವರು ಕರ್ನಾಟಕಕ್ಕೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version