40 ನಿರ್ಮಾಪಕರು, 1000 ಸಭೆಗಳು: ಬಾಲಿವುಡ್​​ನಲ್ಲಿ ಹೀಗೊಂದು ಭಿನ್ನ ಪ್ರಯತ್ನ

ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ತಮ್ಮ ಹಳೆಯ ಕಳೆಯನ್ನು ಕಳೆದುಕೊಳ್ಳುತ್ತಿದೆ. ಆಗೊಂದು ಈಗೊಂದು ಹಿಟ್ ಬರುತ್ತಿವೆಯಾದರೂ ದಕ್ಷಿಣದ ಚಿತ್ರರಂಗಕ್ಕೆ ಹೋಲಿಸಿದರೆ, ಗೆಲುವಿನ ಸರಾಸರಿ ಕಡಿಮೆ. ಅಲ್ಲದೆ, ಬಾಲಿವುಡ್ ನಲ್ಲಿ ನೆಪೊಟಿಸಮ್ ಸಹ ಅತಿಯಾಗಿದ್ದು, ಹೊರಗಿನ ಪ್ರತಿಭಾವಂತರು ಬಾಲಿವುಡ್​ಗೆ ಕಾಲಿಡುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಇದೀಗ ಇದಕ್ಕೆಲ್ಲ ಇತಿಶ್ರೀ ಹಾಡಲು, ಬಾಲಿವುಡ್​​ನಲ್ಲಿ ಹೊಸದೊಂದು ಪ್ರಯೋಗ ಶುರುವಾಗಿದೆ.​​

ಬಾಲಿವುಡ್ ಚಿತ್ರರಂಗದ ಬಾಗಿಲು ಸದಾ ‘ಇನ್ಸೈಡರ್’ ಮಾತ್ರ ತೆರೆದಿರುತ್ತದೆ ಎನ್ನಲಾಗುತ್ತದೆ. ಇದನ್ನು ಸುಳ್ಳು ಮಾಡಲೆಂದು ಹಾಗೂ ಹೊಸ ರೀತಿಯ ಕತೆಗಾರರನ್ನು, ನಿರ್ದೇಶಕರನ್ನು ಹುಟ್ಟುಹಾಕಲು ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ (SWA) ಹಮ್ಮಿಕೊಂಡಿರುವ ಪ್ರಯತ್ನದಿಂದಾಗಿ, ಪ್ರತಿಭಾವಂತ ಕಥೆಗಾರರು ಮತ್ತು ಲೇಖಕರಿಗೆ ನೇರವಾಗಿ ದೊಡ್ಡ ನಿರ್ಮಾಣ ಸಂಸ್ಥೆಗಳನ್ನು ತಲುಪುವ ಅವಕಾಶ ಸಿಗುತ್ತದೆ.

ಮುಂಬೈನಲ್ಲಿ ನಡೆಯಲಿರುವ ಈ ಮೆಗಾ ಇವೆಂಟ್‌ನಲ್ಲಿ, ಬಾಲಿವುಡ್‌ನ ಸುಮಾರು 40 ಪ್ರಮುಖ ನಿರ್ಮಾಣ ಸಂಸ್ಥೆಗಳು ಭಾಗವಹಿಸಲಿವೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಈ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹೊಸ ಲೇಖಕರ ನಡುವೆ 1,000ಕ್ಕೂ ಹೆಚ್ಚು ಮುಖಾಮುಖಿ ಸಭೆಗಳು ನಡೆಯುತ್ತವೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ‘ಕತೆ ಹೇಳುವಿಕೆ’ (ಸ್ಟೋರಿ ಪಿಚ್ಚಿಂಗ್) ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್

ಬಾಲಿವುಡ್‌ನಲ್ಲಿ ಗಾಡ್‌ಫಾದರ್ ಇಲ್ಲದ ಅಥವಾ ಯಾವುದೇ ಸಂಪರ್ಕವಿಲ್ಲದ ಲೇಖಕರಿಗೆ ತಮ್ಮ ಕಥೆಗಳನ್ನು ದೊಡ್ಡ ನಿರ್ಮಾಪಕರಿಗೆ ವಿವರಿಸಲು ಇದು ಸುವರ್ಣಾವಕಾಶವಾಗಿತ್ತು. ಧರ್ಮಾ ಪ್ರೊಡಕ್ಷನ್ಸ್‌, ಎಕ್ಸೆಲ್ ಎಂಟರ್ಟೈನ್‌ಮೆಂಟ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ದೊಡ್ಡ ಸಂಸ್ಥೆಗಳ ಕ್ರಿಯೇಟಿವ್ ಹೆಡ್‌ಗಳು ಈ ಸಭೆಗಳಲ್ಲಿ ಭಾಗವಹಿಸಿ ಹೊಸ ಕಥೆಗಳನ್ನು ಆಲಿಸಿದ್ದಾರೆ. ಲೇಖಕರಿಗೆ ತಮ್ಮ ಕಥೆಯನ್ನು ಹೇಳಲು ನಿಗದಿತ ಸಮಯವನ್ನು ನೀಡಲಾಗಿತ್ತು . ಇದರಿಂದ ಪ್ರತಿ ಲೇಖಕರಿಗೂ ಸಮಾನ ಅವಕಾಶ ಸಿಕ್ಕಿತು.

ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಕಥೆಗಳ ಬರ ಎದುರಾಗಿದೆ ಎಂಬ ದೂರಿನ ನಡುವೆ, ಸ್ಕ್ರೀನ್‌ರೈಟರ್ಸ್ ಅಸೋಸಿಯೇಷನ್ ಈ ಹೆಜ್ಜೆ ಇಟ್ಟಿದೆ. ಕಥೆ ಆಯ್ಕೆಯಲ್ಲಿ ಪಾರದರ್ಶಕತೆ ತರುವುದು.
ಚಿತ್ರರಂಗದ ಬೆನ್ನೆಲುಬಾದ ಲೇಖಕರಿಗೆ ಸಿಗಬೇಕಾದ ಮನ್ನಣೆ ಮತ್ತು ಸಂಭಾವನೆಯನ್ನು ಕೊಡಿಸುವುದು. ಕೇವಲ ಸ್ಟಾರ್ ನಟರ ಮೇಲೆ ಅವಲಂಬಿತವಾಗದೆ, ಗಟ್ಟಿಯಾದ ಕಥೆಗಳ ಮೇಲೆ ಸಿನಿಮಾ ಮಾಡುವ ಸಂಸ್ಕೃತಿಯನ್ನು ಬೆಳೆಸುವುದು ಈ ಎಕ್ಸ್ಪೋನ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ನಂತರ ಹಲವಾರು ಹೊಸ ಲೇಖಕರು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿದ್ದಾರೆ. ಚಿತ್ರರಂಗದ ಈ ಬದಲಾವಣೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಮತ್ತು ನವೀನ ಕಥೆಗಳು ಬೆಳ್ಳಿತೆರೆಯ ಮೇಲೆ ಬರಲು ಸಹಕಾರಿಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನನ್ನನ್ನು ಕೆಟ್ಟದಾಗಿ ಮುಟ್ಟಿದರು: ಕನ್ನಡದಲ್ಲಿ ಅಭಿನಯಿಸಿದ ಬಾಲಿವುಡ್ ನಟಿಯಿಂದ ಆರೋಪ – Kannada News | Actress Daisy Shah reveals bad experience with South Filmmaker during audition

ಕನ್ನಡದ ‘ಭದ್ರ’, ‘ಬಾಡಿಗಾರ್ಡ್’ ಹಾಗೂ ಹಿಂದಿಯ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಡೈಸಿ ಶಾ (Daisy Shah) ಅವರು ಈಗ ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮರಾಠಿ, ಮಲಯಾಳಂ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ನಟಿ ಡೈಸಿ ಶಾ ಅವರು, ದಕ್ಷಿಣ ಭಾರತದ ನಿರ್ಮಾಪಕನಿಂದ (South Filmmaker) ತಮಗೆ ಎದುರಾದ ಅತ್ಯಂತ ಮುಜುಗರದ ಮತ್ತು ಕಹಿ ಘಟನೆಯೊಂದನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಆಡಿಷನ್ ವೇಳೆ ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರೊಬ್ಬ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಡೈಸಿ ಶಾ ಅವರು ಬಹಿರಂಗಪಡಿಸಿದ್ದಾರೆ. ‘ಫ್ರೀ ಪ್ರೆಸ್ ಜರ್ನಲ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡೈಸಿ ಶಾ ಅವರು ತಮಗಾದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ. ಆದರೆ, ಈ ಘಟನೆಗೆ ಕಾರಣವಾದ ಆ ದಕ್ಷಿಣದ ನಿರ್ಮಾಪಕ ಯಾರು ಎಂಬ ಹೆಸರನ್ನು ಮಾತ್ರ ಡೈಸಿ ಶಾ ಬಹಿರಂಗಪಡಿಸಿಲ್ಲ.

‘ದಕ್ಷಿಣದ ಚಿತ್ರ ನಿರ್ಮಾಪಕರೊಬ್ಬರು ಕಾಸ್ಟಿಂಗ್‌ಗಾಗಿ ಮುಂಬೈಗೆ ಬಂದಿದ್ದರು. ಸುಮಾರು 6-7 ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರು ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದರು. ನಾನು ಅವರನ್ನು ಭೇಟಿಯಾದಾಗ ಅವರು ನನ್ನನ್ನು ಕೆಟ್ಟದಾಗಿ ಸ್ಪರ್ಶಿಸಿದರು ಮತ್ತು ನನ್ನ ಕೈ ಹಿಡಿದುಕೊಂಡರು. ಅವರ ಆ ವರ್ತನೆ ನನಗೆ ಅಸಮಾಧಾನ ತರಿಸಿತು’ ಎಂದು ಡೈಸಿ ಶಾ ಹೇಳಿದ್ದಾರೆ.

‘ಯಾರಾದರೂ ನನ್ನನ್ನು ಮುಟ್ಟಿದರೆ ನನಗೆ ಇಷ್ಟವಾಗುವುದಿಲ್ಲ. ಆ ಕಾರಣಕ್ಕಾಗಿಯೇ ನಾನು ಮಸಾಜ್ ಕೂಡ ಮಾಡಿಸಿಕೊಳ್ಳುವುದಿಲ್ಲ. ಒಬ್ಬ ಮಹಿಳೆ ಮುಟ್ಟುವುದೇ ನನಗೆ ಇಷ್ಟವಿಲ್ಲದಿರುವಾಗ, ಒಬ್ಬ ಪುರುಷ ಅಸಭ್ಯವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವೇ ಇಲ್ಲ. ಆ ಘಟನೆಯಿಂದ ನಾನು ತುಂಬಾ ಬೇಸರಗೊಂಡೆ. ನಾನು ನಿಮ್ಮನ್ನು ನಂತರ ಸಂಪರ್ಕಿಸುತ್ತೇನೆ ಅಂತ ಅವರಿಗೆ ಹೇಳಿ ಅಲ್ಲಿಂದ ಹೊರಬಂದೆ. ಆದರೆ ಆಮೇಲೆ ಎಂದಿಗೂ ಅವರನ್ನು ಭೇಟಿಯಾಗಲಿಲ್ಲ’ ಎಂದು ಕಹಿ ಘಟನೆಯನ್ನು ಡೈಸಿ ಶಾ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ನಾನು ಬಿಗ್ ಬಾಸ್​ಗೆ ಬರಲ್ಲ’; ವದಂತಿಗೆ ಸ್ಪಷ್ಟನೆ ನೀಡಿದ ‘ಭದ್ರ’ ಸಿನಿಮಾ ನಟಿ  

ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಬಳಿ ಸಹಾಯಕಿಯಾಗಿ ವೃತ್ತಿಜೀವನ ಆರಂಭಿಸಿದ ಡೈಸಿ, ನಂತರ ಹಲವು ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ನಾಯಕಿಯಾಗಿ ಮೊದಲು ಗುರುತಿಸಿಕೊಂಡಿದ್ದೇ ಕನ್ನಡದಲ್ಲಿ. ಪ್ರಜ್ವಲ್ ದೇವರಾಜ್ ಅಭಿನಯದ ‘ಭದ್ರ’ ಮತ್ತು ಜಗ್ಗೇಶ್ ಅಭಿನಯದ ‘ಬಾಡಿಗಾರ್ಡ್’ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ನಂತರ ‘ಹೇಟ್ ಸ್ಟೋರಿ 3’ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾರ್ಯಾಚರಣೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದ ಕಾಡಾನೆ: ಸೆರೆ ಹಿಡಿದ ಕ್ಷಣಾರ್ಧದಲ್ಲೇ ಎಸ್ಕೇಪ್ – Kannada News | Belur Man Killed Elephant Escapes: Forest department Fails Capture Operation

ಪರಾರಿ ಆಗಿರುವ ಕಾಡಾನೆImage Credit source: tv9 kannada

ಹಾಸನ, ಏಪ್ರಿಲ್​ 16: ಏಪ್ರಿಲ್​ 12ರ ಭಾನುವಾರದಂದು ರೈತನನ್ನ ಬಲಿ ಪಡೆದಿದ್ದ ಒಂಟಿ ಸಲಗ (Elephant) ಸೆರೆಹಿಡಿಯಲು ನಡೆಸಿದ ಕಾರ್ಯಚರಣೆ ವಿಫಲವಾಗಿದೆ. ಇಡೀ ದಿನ ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ ಸೇರಿ ಆರು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಬೃಹತ್ ಒಂಟಿ ಸಲಗವನ್ನ ಸೆರೆಹಿಡಿದು ಎಳೆದುಕೊಂಡು ಹೋಗುವ ವೇಳೆ ಸಾಕಾನೆಗಳ ಜೊತೆ ರಣಭೀಕರ ಫೈಟ್ ನಡೆಸಿದ ಕಾಡಾನೆ ಕೊರಳು, ಕಾಲಿಗೆ ಕಟ್ಟಿದ್ದ ಹಗ್ಗವನ್ನ ತುಂಡರಿಸಿ ಶರವೇಗದಲ್ಲಿ ಕಾಫಿತೋಟದಲ್ಲಿ ಪರಾರಿಯಾಗಿದೆ. ಆ ಮೂಲಕ ಕಾರ್ಯಾಚರಣೆ ನಡೆಸಿದ್ದ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿದೆ. ಸದ್ಯ ಆತಂಕಗೊಂಡಿರುವ ಜನರು ಕಾಡಾನೆ ಸೆರೆಗೆ ಆಗ್ರಹಿಸಿದ್ದಾರೆ.

ಅರವಳಿಕೆ ನೀಡಿದ್ದರೂ ಪರಾರಿ ಆದ ಕಾಡಾನೆ

ಏಪ್ರಿಲ್​ 12ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ರೈತ ರಾಜಶೆಟ್ಟಿ ಎಂಬುವವರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನ ಸೆರೆಹಿಡಿಯುವಂತೆ ಜನರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಇಂದು ಕೊಡಗಿನ ಸಾಕಾನೆ ಶಿಬಿರಗಳಿಂದ ಆರು ಸಾಕಾನೆಗಳನ್ನ ಕರೆತಂದು ಬೇಲೂರು ತಾಲ್ಲೂಕಿನ ಕಿತ್ತಾವರ ಗ್ರಾಮದ ಕಾಫಿತೋಟದಲ್ಲಿ ಅಡಗಿದ್ದ ಸಲಗವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಡಿಸಿಎಫ್ ಸೌರಭ್ ಕುಮಾರ್, ಎಸಿಎಫ್ ಸೇರಿ 70ಕ್ಕೂ ಹೆಚ್ಚು ಸಿಬ್ಬಂದಿ, ವನ್ಯಜೀವಿ ವೈದ್ಯರು ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ನೀಡಿ ಸೆರೆಹಿಡಿಯಲಾಗಿತ್ತು.

ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತ; ಕಾವಾಡಿಗನ ಮೇಲೆ ದಾಳಿ ಮಾಡಿದ ಸಾಕಾನೆ ‘ಸುಗ್ರೀವ’!

ಕುತ್ತಿಗೆ, ಕಾಲುಗಳಿಗೆ ಹಗ್ಗ ಕಟ್ಟಿ ಎಳೆತಂದು ಲಾರಿಗೆ ಹತ್ತಿಸುತ್ತಿರುವ ವೇಳೆ ಕಾಫಿತೋಟದೊಳಗೆ ಸುಮಾರು ಒಂದು ಗಂಟೆ ಸಾಕಾನೆಗಳ ಜೊತೆಗೆ ಫೈಟ್ ನಡೆಸಿದ ಸಲಗ ಒಂದೇ ಒಂದು ಹೆಜ್ಜೆ ಮುಂದೆ ಇಡಲಿಲ್ಲ. ಏನೇ ಪ್ರಯತ್ನಪಟ್ಟರು ಜಗ್ಗದ ಸಲಗವನ್ನ ಸಾಕಾನೆಗಳು ಎಳೆದು ತರುತ್ತಿರುವ ವೇಳೆ ಒಂದೊಂದೇ ಹಗ್ಗವನ್ನ ಕಿತ್ತುಕೊಂಡ ಪರಾರಿ ಆಗಿದೆ. ಬಲಿಷ್ಟ ಸಲಗದ ಎದುರು ಸಾಕಾನೆಗಳು ಮಂಡಿಯೂರಿವೆ. ಕಾಡಾನೆ ತಪ್ಪಿಸಿಕೊಂಡು ಹೋಗಿರುವುದು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಮಾಡಿದ್ದು, ಶೀಘ್ರ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಬೆಳೆ ಹಾನಿ: ಜನರ ಜೀವಕ್ಕೂ ಕುತ್ತು

ಹಾಸನ ಜಿಲ್ಲೆಯ ಮಲೆನಾಡು ಭಾಗದವಾದ ಆಲೂರು ಬೇಲೂರು ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೀಡುಬಿಟ್ಟರುವ 80ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡುವುದರ ಜೊತೆಗೆ ಜನರ ಜೀವ ಹಾನಿಯೂ ಉಂಟು ಮಾಡುತ್ತಿವೆ. ಜಿಲ್ಲೆಯಲ್ಲಿ ಎರಡು ದಶಕದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಕೂಡ ಓರ್ವ ರೈತ ಬಲಿಯಾದಾಗ ಜನರು ಹೋರಾಟ ಮಾಡಿದ್ದರು. ಎಲ್ಲಾ ಆನೆಗಳನ್ನ ಸ್ಥಳಾಂತರ ಮಾಡುವ ಭರವಸೆ ನೀಡಿ ಎಂದು ಪಟ್ಟುಹಿಡಿದಿದ್ದರು. ಕಡೆಗೂ ಅರಣ್ಯ ಇಲಾಖೆ ಹಂತಕ ಆನೆ ಸೆರೆಗೆ ಅನುಮತಿ ನೀಡಿತ್ತು. ಹಾಗಾಗಿ ಇಂದು ಸುಗ್ರೀವ, ಅಯ್ಯಪ್ಪ, ಧನಂಜಯ, ಏಕಲವ್ಯ, ಶ್ರೀರಾಮ ಸೇರಿ ಆರು ಆನೆಗಳ ನೇತೃತ್ವದಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಆದ ಎಡವಟ್ಟಿನಿಂದ ಸೆರೆ ಹಿಡಿದಿದ್ದ ಬೃಹತ್ ಗಾತ್ರದ ಸಲಗ ಮತ್ತೆ ತಪ್ಪಿಸಿಕೊಂಡು ಕಾಫಿತೋಟದಲ್ಲಿ ಪರಾರಿ ಆಗಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಸಾವು: ದಾರುಣವಾಗಿ ಮೃತಪಟ್ಟ ಹಾಸನದ ರೈತ

ಜಿಲ್ಲೆಯ ಮನೆನಾಡು ಭಾಗದ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿರುವ ಕಾಡಾನೆ ಹಾವಳಿ ತಡೆಗೆ ಆನೆ ಸೆರೆ ಹಿಡಿದು ಸ್ಥಳಾಂತರ ಮಾಡುವುದು ಪರಿಹಾರ. ಹೀಗೆ ಸೆರೆ ಹಿಡುವ ಕಾರ್ಯಾಚರಣೆ ವೇಳೆ ಇದೇ ಮೊದಲ ಬಾರಿಗೆ ಸಾಕಾನೆಗಳನ್ನೆ ಮಣ್ಣು ಮುಕ್ಕಿಸಿದ ಸೆರೆಯಾಗಿದ್ದ ಸಲಗ ಎಸ್ಕೇಪ್ ಆಗಿದೆ. ಸದ್ಯ ಅರಣ್ಯ ಇಲಾಖೆಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಬೆಂಕಿ ಅವಘಡ: ಇಡ್ಲಿ ಸ್ಟೀಮರ್​​ನಿಂದ ಇಡೀ ಹೋಟೆಲ್ ಭಸ್ಮ – Kannada News | A massive fire brokes out in shuddha thindi Hotel Near sompura circle Bengaluru

ಬೆಂಗಳೂರು, (ಏಪ್ರಿಲ್ 16): ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಬೆಂಕಿ ಅವಘಡ ಸಂಭವಿಸಿದೆ. ಕಳೆದ ತಿಂಗಳು ನೈಸ್ ರಸ್ತೆಯ ಸೋಂಪುರ ಸರ್ಕಲ್ ನಲ್ಲಿರುವ ಶುದ್ಧ ತಿಂಡಿ ಹೋಟೆಲ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆಯೇ ಹೊತ್ತಿ ಉರಿದಿದೆ. ಕಳೆದ ತಿಂಗಳು ಅಂದರೆ ಮಾರ್ಚ್ ನಲ್ಲಿ ಅಷ್ಟೇ ಶುದ್ಧ ತಿಂಡಿ ಹೊಸದಾಗಿ ಆರಂಭವಾಗಿತ್ತು. ಆದ್ರೆ, ಇಂದು (ಏಪ್ರಿಲ್ 16) ಇಡ್ಲಿ ಸ್ಟೀಮರ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಹೋಟೆಲ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ, ಒಳಗಡೆ ಇದ್ದ ಸಿಬ್ಬಂದಿ ಬಚಾವ್ ಆಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Mark Mobius: ಎಮರ್ಜಿಂಗ್ ಮಾರ್ಕೆಟ್ಸ್ ಕ್ಷೇತ್ರದ ದಂತಕಥೆ ಮಾರ್ಕ್ ಮೋಬಿಯಸ್ ನಿಧನ – Kannada News | Mark Mobius, “Father of Emerging Markets” & Investment Legend, Dies at 89 in Singapore

ಸಿಂಗಾಪುರ್, ಏಪ್ರಿಲ್ 16: ಖ್ಯಾತ ಹೂಡಿಕೆದಾರ ಮತ್ತು ‘ಎಮರ್ಜಿಂಗ್ ಮಾರ್ಕೆಟ್ಸ್’ (ಉದಯೋನ್ಮುಖ ಮಾರುಕಟ್ಟೆ) ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ಮಾರ್ಕ್ ಮೋಬಿಯಸ್ (89) ಅವರು ಏಪ್ರಿಲ್ 15, ಬುಧವಾರದಂದು ಸಿಂಗಾಪುರದಲ್ಲಿ ನಿಧನರಾಗಿದ್ದಾರೆ. ಅವರ ನಿಧನವನ್ನು ಅವರ ಹೂಡಿಕೆ ಸಂಸ್ಥೆಯಾದ ‘ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್’ ಅಧಿಕೃತವಾಗಿ ದೃಢಪಡಿಸಿದೆ. ಭಾರತದ ಮಾರುಕಟ್ಟೆ ಮತ್ತು ಆರ್ಥಿಕತೆಯ ಸಾಮರ್ಥ್ಯದ ಬಗ್ಗೆ ಅತಿಹೆಚ್ಚು ನಂಬಿಕೆ ಇರಿಸಿದ ಕೆಲ ಜಾಗತಿಕ ಹೂಡಿಕೆದಾರರಲ್ಲಿ ಮೋಬಿಯಸ್ (Mark Mobius) ಕೂಡ ಒಬ್ಬರು.

‘ಇಂಡಿಯಾನಾ ಜೋನ್ಸ್’ ಎಂಬ ಖ್ಯಾತರಾಗಿದ್ದ ಮೋಬಿಯಸ್

ಸಾಮಾನ್ಯವಾಗಿ ಹೂಡಿಕೆದಾರರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹಣ ಹೂಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಮೋಬಿಯಸ್ ಅವರು ಸಾಹಸಿಯಂತೆ ಈ ದೇಶಗಳಿಗೆ ಭೇಟಿ ನೀಡುತ್ತಿದ್ದರು. ಹೆಚ್ಚಿನವರ ಕಣ್ಣಿಗೆ ಬೀಳದೇ ಇರುತ್ತಿದ್ದ ಮಾರುಕಟ್ಟೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದರು.

ಸಿನಿಮಾ ಪಾತ್ರ ‘ಇಂಡಿಯಾನಾ ಜೋನ್ಸ್’ನಂತೆ ಇವರು ಏಷ್ಯಾ, ಆಫ್ರಿಕಾ, ಪೂರ್ವ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ 100ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮಾರುಕಟ್ಟೆಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದರು. ಇದರಿಂದಾಗಿ ಇವರನ್ನು ಉದಯೋನ್ಮುಖ ಮಾರುಕಟ್ಟೆಗಳ ಇಂಡಿಯಾನಾ ಜೋನ್ಸ್ ಎಂದು ಬಣ್ಣಿಸಲಾಗುತ್ತಿತ್ತು.

ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

1997ರ ಏಷ್ಯನ್ ಆರ್ಥಿಕ ಬಿಕ್ಕಟ್ಟು ಮತ್ತು 1998ರ ರಷ್ಯಾದ ಮಾರುಕಟ್ಟೆ ಕುಸಿತದ ಸಮಯದಲ್ಲಿ ಅವರು ತೋರಿದ ಧೈರ್ಯ ಮತ್ತು ಹೂಡಿಕೆಯ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದವು.

2009ರ ‘ಬುಲ್ ಮಾರ್ಕೆಟ್’ ಆರಂಭವನ್ನು ಅವರು ಮೊದಲೇ ನಿಖರವಾಗಿ ಅಂದಾಜಿಸಿದ್ದರು. ಅಲ್ಲದೆ, ಆಫ್ರಿಕಾ ಖಂಡದ ಆರ್ಥಿಕ ಸಾಮರ್ಥ್ಯವನ್ನು ಗುರುತಿಸಿದ ಆರಂಭಿಕ ಹೂಡಿಕೆದಾರರಲ್ಲಿ ಇವರು ಪ್ರಮುಖರು.

ಮಾರ್ಕ್ ಮೋಬಿಯಸ್ ವೃತ್ತಿಜೀವನ ಮತ್ತು ಶಿಕ್ಷಣ

ಮಾರ್ಕ್ ಮೋಬಿಯಸ್ ಅವರು ಅಮೆರಿಕದ ಪ್ರತಿಷ್ಠಿತ MIT ಸಂಸ್ಥೆಯಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಸುಮಾರು ಮೂರು ದಶಕಗಳ ಕಾಲ ‘ಟೆಂಪಲ್ಟನ್ ಎಮರ್ಜಿಂಗ್ ಮಾರ್ಕೆಟ್ಸ್ ಗ್ರೂಪ್’ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೂಡಿಕೆಗೆ ಸಂಬಂಧಿಸಿದಂತೆ ‘ದ ಇನ್ವೆಸ್ಟರ್ಸ್ ಗೈಡ್ ಟು ಎಮರ್ಜಿಂಗ್ ಮಾರ್ಕೆಟ್ಸ್’ ಸೇರಿದಂತೆ ಹಲವು ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

ಮಾರ್ಕ್ ಮೋಬಿಯಸ್ ಅವರು ಮದುವೆಯಾಗಿರಲಿಲ್ಲ. ತಮ್ಮನ್ನು ತಾವು “ಪೂರ್ಣಾವಧಿ ಅಲೆಮಾರಿ” (Full-time nomad) ಎಂದು ಕರೆದುಕೊಳ್ಳುತ್ತಿದ್ದ ಅವರು, ನಿರಂತರ ಪ್ರಯಾಣ ಮತ್ತು ಹೊಸ ಸವಾಲುಗಳನ್ನು ಎದುರಿಸುವುದರಲ್ಲೇ ನೆಮ್ಮದಿ ಕಂಡುಕೊಂಡಿದ್ದರು.

ಅವರ ನಿಧನದ ನಂತರ, ಜಾನ್ ನಿನಿಯಾ ಮತ್ತು ಎರಿಕ್ ಎನ್ಗುಯೆನ್ ಅವರು ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಸಂಸ್ಥೆಯ ಹೂಡಿಕೆ ಕಾರ್ಯತಂತ್ರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ; ಅಖಿಲೇಶ್ ಯಾದವ್ ವಿರುದ್ಧ ಗುಡುಗಿದ ಅಮಿತ್ ಶಾ – Kannada News | Give all your tickets to Muslim women Amit Shah counters Akhilesh Yadav in Session

ನವದೆಹಲಿ, ಏಪ್ರಿಲ್ 16: ಮಹಿಳಾ ಮೀಸಲಾತಿ ಕಾಯ್ದೆಗೆ (Women’s Reservation Bill) ತಿದ್ದುಪಡಿಗಳನ್ನು ಅಂಗೀಕರಿಸಲು ನಡೆಯುತ್ತಿರುವ ಸಂಸತ್ತಿನ 3 ದಿನಗಳ ವಿಶೇಷ ಅಧಿವೇಶನದ ಮೊದಲ ದಿನವಾದ ಇಂದು ಕೇಂದ್ರ ಸರ್ಕಾರ 3 ಮಸೂದೆಗಳನ್ನು ಮಂಡಿಸಿತು. ಆದರೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಈ ಮಸೂದೆಗಳನ್ನು ವಿರೋಧಿಸಿದವು. ಪ್ರಸ್ತಾವನೆಗಳನ್ನು ಬೆಂಬಲಿಸಿ ಮತ ಚಲಾಯಿಸಿದ ನಂತರ, ಸದನವು ತನ್ನ ಚರ್ಚೆಯನ್ನು ಮುಂದುವರೆಸಿದೆ. ಈ ವೇಳೆ ಬಿಜೆಪಿ ಸಂಸದ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆಯಿತು. ನಿಮ್ಮ ಪಕ್ಷದಿಂದ ಎಷ್ಟು ಮಹಿಳಾ ಸಂಸದರಿದ್ದಾರೆ? ಎಷ್ಟು ಮಹಿಳೆಯರು ಮುಖ್ಯಮಂತ್ರಿಯಾಗಿದ್ದಾರೆ? ಎಂದು ಅಖಿಲೇಶ್ ಯಾದವ್ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಮಿತ್ ಶಾ, ನೀವು ಬೇಕಾದರೆ ನಿಮ್ಮ ಪಕ್ಷದ ಎಲ್ಲ ಟಿಕೆಟ್​​ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಿ, ನಮ್ಮ ತಕರಾರಿಲ್ಲ ಎಂದಿದ್ದಾರೆ.

ಇಂದು ನಡೆದ ಸಂಸತ್ತಿನ ಕಲಾಪದಲ್ಲಿ ಲೋಕಸಭೆಯಲ್ಲಿ ಸೀಮಾ ನಿರ್ಣಯ ಮತ್ತು ಮಹಿಳಾ ಕೋಟಾಕ್ಕೆ ಸಂಬಂಧಿಸಿದ ಮಸೂದೆಗಳನ್ನು ಪರಿಚಯಿಸಿದಾಗ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ರಾಜಕೀಯ ವಾಗ್ವಾದ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿ, ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಗಳ ಚರ್ಚೆಯ ವೇಳೆ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಲ್ಲಿ ಕೇಂದ್ರ ಸರ್ಕಾರದ ಆತುರವನ್ನು ಪ್ರಶ್ನಿಸಿದರು. ಸೀಮಾ ನಿರ್ಣಯಕ್ಕೆ ಸಂಬಂಧಿಸಿದ ಪ್ರಸ್ತಾಪಗಳೊಂದಿಗೆ ಮುಂದುವರಿಯುವ ಮೊದಲು ಜನಗಣತಿಯನ್ನು ಪೂರ್ಣಗೊಳಿಸಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ನಮ್ಮ ವಿರೋಧ ಮಹಿಳಾ ಮೀಸಲಾತಿಗಲ್ಲ; ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

“ಸಮಾಜವಾದಿ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯ ಪರವಾಗಿದೆ. ನಾವು ಹಿಂದಿನಿಂದಲೂ ಮಹಿಳೆಯರನ್ನು ಮುನ್ನಡೆಸಲು ಕೆಲಸ ಮಾಡಿದ್ದೇವೆ. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ನಾವು ಬೆಂಬಲಿಸುತ್ತೇವೆ. ಇಂದು, ಬಿಜೆಪಿ ಮಹಿಳೆಯರ ಮೀಸಲಾತಿಯನ್ನು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಸಂಘಟನೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳದವರು ಅವರ ಗೌರವಕ್ಕಾಗಿ ಹೇಗೆ ಕೆಲಸ ಮಾಡುತ್ತಾರೆ? ನೀವು ನಡೆದುಬಂದ ಸಂಘಟನೆಯಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂದು ನಮಗೆ ತಿಳಿಸಿ. ಬಿಜೆಪಿ ಅಧಿಕಾರದಲ್ಲಿರುವ 21 ರಾಜ್ಯಗಳಲ್ಲಿ ಎಷ್ಟು ಮಹಿಳೆಯರು ಮುಖ್ಯಮಂತ್ರಿಯಾಗಿದ್ದಾರೆ? ದೆಹಲಿಯಲ್ಲಿರುವ ಒಬ್ಬರು ಮಹಿಳಾ ಮುಖ್ಯಮಂತ್ರಿಗೆ ಎಷ್ಟು ಅಧಿಕಾರ ಕೊಟ್ಟಿದ್ದೀರಿ? ಲೋಕಸಭೆಯಲ್ಲಿ ಎಷ್ಟು ಮಹಿಳಾ ಬಿಜೆಪಿ ಸದಸ್ಯರಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಅಖಿಲೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಸಮಾಜವಾದಿ ಪಕ್ಷವು ತನ್ನ ಎಲ್ಲಾ ಸ್ಥಾನಗಳ ಅರ್ಧದಷ್ಟು ಮುಸ್ಲಿಂ ಮಹಿಳೆಯರಿಗೆ ನೀಡಬಹುದು. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ” ಎಂದು ಹೇಳಿದರು. ಇದರಿಂದ ಕೋಪಗೊಂಡ ಅಖಿಲೇಶ್ ಯಾದವ್, ಅಮಿತ್ ಶಾ ಅವರು ಅನವಶ್ಯಕವಾಗಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಯಾಕೆ ಮುಸ್ಲಿಂ ಮಹಿಳೆಯರು ಭಾರತೀಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Women Reservation Bill: ಗದ್ದಲದ ನಡುವೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

ಇದಾದ ಬಳಿಕ ಜನಗರಣತಿಯ ಆರೋಪಕ್ಕೆ ಉತ್ತರಿಸಿದ ಅಮಿತ್ ಶಾ, “ಮಹಿಳಾ ಮೀಸಲಾತಿ ಮಸೂದೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈ ಎರಡು ಕಾನೂನುಗಳು ಅವಶ್ಯಕ. ಅದಕ್ಕಾಗಿಯೇ ಸೀಮಾ ನಿರ್ಣಯ ಮತ್ತು ಮಹಿಳಾ ಮೀಸಲಾತಿ ಕಾನೂನುಗಳನ್ನು ಒಟ್ಟಿಗೆ ತರಲಾಗಿದೆ. ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸಲು ನಿರ್ಧರಿಸಿರುವುದರಿಂದ ಈ ಮಸೂದೆಗಳನ್ನು ವಿರೋಧಿಸುತ್ತಿವೆ” ಎಂದು ಹೇಳಿದರು.

“ಜನಗಣತಿಯನ್ನು ಏಕೆ ನಡೆಸುತ್ತಿಲ್ಲ ಎಂದು ಅಖಿಲೇಶ್ ಯಾದವ್ ಕೇಳಿದರು. ಜನಗಣತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ನಾನು ಇಡೀ ದೇಶಕ್ಕೆ ತಿಳಿಸಲು ಬಯಸುತ್ತೇನೆ. ಸರ್ಕಾರವು ಜಾತಿ ಜನಗಣತಿಯನ್ನು ನಡೆಸಲು ನಿರ್ಧಾರ ತೆಗೆದುಕೊಂಡಿದೆ ಮತ್ತು ಎಣಿಕೆಯನ್ನು ಜಾತಿ ದತ್ತಾಂಶದೊಂದಿಗೆ ನಡೆಸಲಾಗುತ್ತಿದೆ” ಎಂದು ಅಮಿತ್ ಶಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 2:58 pm, Thu, 16 April 26

Source link

ತಲೆಮರಿಸಿಕೊಳ್ಳುವಷ್ಟು ಸಾಲ ಆಗಿದ್ದೇಕೆ? ವಿವರಿಸಿದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ – Kannada News | Why Darshan Manager Mallikarjuna Hided for Several Years Reveal the Real thing

ನಟ ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಅವರು ತಲೆಮರಿಸಿಕೊಂಡಿದ್ದರು. ಅವರು ಕಾಣೆಯಾಗಿ 7-8 ವರ್ಷಗಳೇ ಕಳೆದಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಬಹಿರಂಗಪಡಸಿದ್ದಾರೆ. ಸಾಲದ ಕಾರಣದಿಂದ ಅವರು ಊರು ಬಿಡಬೇಕಾಯಿತು. 7-8 ಕೋಟಿ ರೂಪಾಯಿ ಸಾಲ ಮಾಡಿದ್ದರು ಅವರು. ಹೋಟೆಲ್ ಉದ್ಯಮ, ಸ್ಯಾನಿಟಸರಿ ಬಿಸ್ನೆಸ್, ನಿರ್ಮಾಣ, ಸಿನಿಮಾ ಹಂಚಿಕೆ ಹೀಗೆ ಹಲವು ಕಾರಣಗಳಿಂದ ಅವರು ಸಾಲ ಮಾಡಿಕೊಳ್ಳಬೇಕಾಯಿತು. ಈ ವಿಷಯವನ್ನು ಅವರು ಸುದ್ದಿಗೋಷ್ಠಿ ಕರೆದು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳ ಕುರಿತು, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ – Kannada News | All Eyes on PM: Modi Set to Address Women’s Quota, Delimitation Bills

ನವದೆಹಲಿ, ಏಪ್ರಿಲ್ 16: ಭಾರತೀಯ ಸಂಸದೀಯ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟವೊಂದು ಇಂದು ಲೋಕಸಭೆಯಲ್ಲಿ ಅನಾವರಣಗೊಳ್ಳುತ್ತಿದೆ. ಮಹಿಳಾ ಮೀಸಲಾತಿ ಮತ್ತು ದೇಶದ ಭವಿಷ್ಯದ ರಾಜಕೀಯ ಭೂಪಟವನ್ನೇ ಬದಲಿಸಬಲ್ಲ ಮಸೂದೆಗಳ ಕುರಿತು ಇಡೀ ದೇಶದ ಕಣ್ಣು ಈಗ ಸಂಸತ್ತಿನತ್ತ ನೆಟ್ಟಿದೆ. ಏಪ್ರಿಲ್ 16 ರಿಂದ 18 ರವರೆಗೆ ನಡೆಯುತ್ತಿರುವ ಮೂರು ದಿನಗಳ ಈ ವಿಶೇಷ ಸಂಸತ್ ಅಧಿವೇಶನವು ಈಗ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮಹಿಳಾ ಸಬಲೀಕರಣದ “ಐತಿಹಾಸಿಕ ಹೆಜ್ಜೆ” ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಅದರ ನೇರ ಪ್ರಸಾರ ಇಲ್ಲಿದೆ. ಈ ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕೇವಲ ಬಹುಮತ ಸಾಲದು, ಹಾಜರಿರುವ ಸದಸ್ಯರಲ್ಲಿ ಮೂರನೇ ಎರಡರಷ್ಟು (2/3rd majority) ಬಹುಮತದ ಅವಶ್ಯಕತೆಯಿದೆ.

 

 

Source link

Aries Horoscope: ಈ ದಶೆ ನಡೆಯುತ್ತಿದ್ದರೆ ನಿಮ್ಮ ದಿಕ್ಕೇ ಬದಲಾದಂತೆ… – Kannada News | Aries Horoscope April 2026: Planetary Shifts and Life Predictions

ಮೇಷ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳ ಗ್ರಹಗತಿಗಳ ಬದಲಾವಣೆಯಿಂದ ಯಾರಿಗೆ ಯಾವ ದಶೆ ಆಗಿಬರುತ್ತದೆ ಎನ್ನುವುದು ತಿಳಿಯಬಹುದು. ಭವಿಷ್ಯವನ್ನು ಗ್ರಹಗತಿಗಳ ಆಧಾರದ ಮೇಲೆ ವಿಶ್ಲೇಷಿಸಿದಾಗ, ಈ ತಿಂಗಳು ಮಿಶ್ರ ಫಲಗಳಿಂದ ಕೂಡಿದ್ದು, ಜೀವನದ ವಿವಿಧ ಆಯಾಮಗಳಲ್ಲಿ ಉತ್ತಮ, ಮಧ್ಯಮ ಹಾಗೂ ಅಧಮ ಫಲಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಸೂರ್ಯ ಹಾಗು ಕುಜ ದಶೆಯವರಿಗೆ ಹೆಚ್ಚಿನ ಪ್ರಯೋಜನನವಾಗಲಿದೆ‌

ಶುಭ ಫಲಗಳು:

ಉದ್ಯೋಗ ಮತ್ತು ಸಾಮಾಜಿಕ ಗೌರವ ಪ್ರಾಪ್ತಿಯಾಗುವುದು. ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ರಾಶ್ಯಾಧಿಪತಿ ಮಂಗಳನ ಶುಭ ದೃಷ್ಟಿ ಮತ್ತು ಸೂರ್ಯನ ಸಂಚಾರವು ನಿಮಗೆ ಕಾರ್ಯಕ್ಷೇತ್ರದಲ್ಲಿ ಹೊಸ ಚೈತನ್ಯವನ್ನು ನೀಡುತ್ತದೆ. ಕಚೇರಿಯಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು ಮತ್ತು ಮೇಲಧಿಕಾರಿಗಳಿಂದ ಮೆಚ್ಚುಗೆ ದೊರೆಯುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಸಮಯವಿದು. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಕೈಗೊಂಡ ಕೆಲಸಗಳು ಯಶಸ್ವಿಯಾಗುತ್ತವೆ.

ಮಿಶ್ರ ಫಲಗಳು:

ಆರ್ಥಿಕ ವ್ಯವಹಾರ ಮತ್ತು ಕುಟುಂಬದಲ್ಲಿ ನಿಮ್ಮ ಅಸ್ತಿತ್ವ ಕಡಿಮೆಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಈ ತಿಂಗಳು ಸರಾಸರಿ ಫಲಿತಾಂಶಗಳನ್ನು ನೀಡಲಿದೆ. ಆದಾಯದ ಹರಿವು ಉತ್ತಮವಾಗಿದ್ದರೂ, ಸಾಢೇ ಸಾಥ್ ನ ಪ್ರಭಾವದಿಂದಾಗಿ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕೈಗೆ ಬಂದ ಹಣವು ಉಳಿಯುವುದು ಸ್ವಲ್ಪ ಕಷ್ಟವಾಗಬಹುದು. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿಬರಬಹುದು, ಆದರೆ ಪರಸ್ಪರ ಚರ್ಚೆಯ ಮೂಲಕ ಇವುಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಹೂಡಿಕೆ ಮಾಡುವ ಮುನ್ನ ಅನುಭವೀ ವ್ಯಕ್ತಿಗಳ ಸಲಹೆ ಪಡೆಯುವುದು ಉತ್ತಮ.

ಅಶುಭ ಫಲಗಳು:

ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಎರಡೂ ನಿಮ್ಮ ಕೈಯಲ್ಲಿ ಇರದು. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯಿದೆ. ಶನಿ ಮತ್ತು ಇತರ ಪಾಪಗ್ರಹಗಳ ಗೋಚಾರದ ಪ್ರಭಾವದಿಂದ ಶಾರೀರಿಕ ಆಯಾಸ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಉಷ್ಣ ಸಂಬಂಧಿ ಕಾಯಿಲೆಗಳು ಅಥವಾ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೆಲಸದ ಒತ್ತಡದಿಂದಾಗಿ ರಾತ್ರಿ ನಿದ್ರೆಯಲ್ಲಿ ವ್ಯತ್ಯಯವಾಗಬಹುದು. ಅನಗತ್ಯ ಆತಂಕ ಅಥವಾ ಭಯ ನಿಮ್ಮನ್ನು ಕಾಡಬಹುದು, ಆದ್ದರಿಂದ ಧ್ಯಾನ ಮತ್ತು ಯೋಗದ ಕಡೆಗೆ ಗಮನ ಹರಿಸುವುದು ಅವಶ್ಯಕ.

ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳು ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಕಾಲವಾಗಿದೆ. ವೃತ್ತಿಯಲ್ಲಿ ಪ್ರಗತಿ ಇದ್ದರೂ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ದೈವಾನುಕೂಲದ ಪ್ರಾರ್ಥನೆಯ ಜೊತೆ ನಿಮ್ಮ ಯೋಜನೆಯೂ ಬೇಕು. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಆಹಾರ ಸೇವನೆಯನ್ನು ಮಾಡುವುದಹ ಬೇಡ.

– ಲೋಹಿತ ಹೆಬ್ಬಾರ್

Source link

ಯೋಗೀಶ್ ಗೌಡ ಕೊಲೆ ಕೇಸ್: ಯಾರಿಗೆ ಜೀವಾವಧಿ? ಯಾರಿಗೆ ರಿಯಾಯಿತಿ? ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಫೈನಲ್ – Kannada News | Yogesh Gowda Murder Verdict: Vinay Kulkarni and 16 Others Await Sentencing Tomorrow

ಬೆಂಗಳೂರು, ಏ.16: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. 17 ಜನರನ್ನು ಅಪರಾಧಿ ಎಂದು ಕೋರ್ಟ್​​​ ಘೋಷಣೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಏ.16) 17 ಶಿಕ್ಷೆ ಪ್ರಮಾಣ ನಿರ್ಧಾರವಾಗಬೇಕಿತ್ತು, ಆದರೆ ಇದೀಗ ಶಿಕ್ಷೆ ಪ್ರಮಾಣವನ್ನು ನಾಳೆ (ಏ.17) ತಿಳಿಸಲಾಗುವುದು ಎಂದು ಕೋರ್ಟ್​​ ಹೇಳಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಅಂತಿಮ ಘಟ್ಟ ತಲುಪಿದೆ.

ಇಂದು ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ-ಪ್ರತಿವಾದ ನಡೆಯಿತು. ಈ ವೇಳೆ ಪ್ರತಿಯೊಬ್ಬ ಅಪರಾಧಿಯೂ ತಮಗೆ ಕಡಿಮೆ ಶಿಕ್ಷೆ ನೀಡುವಂತೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. “ನಾನು ಕಳೆದ 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿದೆ” ಎಂದು ವಿನಯ್ ಕುಲಕರ್ಣಿ ಕೋರ್ಟ್‌ ಮುಂದೆ ಹೇಳಿದ್ದಾರೆ.

ಅಪರಾಧಿಗಳ ಅಳಲು: ಯಾರ‍್ಯಾರು ಶಿಕ್ಷೆ ಕಡಿಮೆ ಮಾಡಲು ಏನೆಂದು ವಾದಿಸಿದರು?

ಶಾಸಕ ವಿನಯ್ ಕುಲಕರ್ಣಿ (ಎ-15):

  • ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ.
  • ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ; ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ.
  • ನಾನೊಬ್ಬ ಕೃಷಿಕ, ಸುಮಾರು ಮೂರೂವರೆ ಸಾವಿರ ಹಸುಗಳನ್ನು ಸಾಕುತ್ತಿದ್ದೇನೆ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ.
  1. ಎ-4, ಎ-14: ಆಟೋ ಮತ್ತು ಕಾರ್ ಚಾಲಕರು; ವಯಸ್ಸಾದ ತಂದೆ-ತಾಯಿಯನ್ನು ಸಾಕುವ ಜವಾಬ್ದಾರಿ ನಮ್ಮ ಮೇಲಿದೆ.
  2. ಎ-5: ರಿಯಲ್ ಎಸ್ಟೇಟ್ ಉದ್ಯೋಗಿ; ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿಯನ್ನು ನೋಡಿಕೊಳ್ಳಬೇಕು.
  3. ಎ-9, ಎ-10, ಎ-11: ಪೋಷಕರಿಲ್ಲದ ಅನಾಥರು ಅಥವಾ ವಯಸ್ಸಾದ ತಾಯಿ ಮಾತ್ರ ಇರುವವರು; ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷೆ ಕಡಿಮೆ ಮಾಡಿ.
  4. ಎ-6, ಎ-12, ಎ-18: ಕೃಷಿಕರು, ಟೈಲರ್ ಮತ್ತು ಗುತ್ತಿಗೆದಾರರು; ಇವರಿಗೆ 4 ರಿಂದ 7 ವರ್ಷದ ಪುಟ್ಟ ಮಕ್ಕಳಿದ್ದಾರೆ ಹಾಗೂ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯಿದೆ.
  5. ಎ-13: ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ; ತೀವ್ರ ಅನಾರೋಗ್ಯವಿದೆ.
  6. ಎ-16: ದಂಪತಿಗಳಿಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ; ಇತ್ತೀಚೆಗಷ್ಟೇ ಮೊಮ್ಮಗನ ಸಾವಿನ ನೋವಿನಲ್ಲಿದ್ದಾರೆ.
  7. ಎ-7: ಆಟೋ ಚಾಲಕ; ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  8. ಎ-19 (ಟಿಂಗರಿಕರ್): ಈವರೆಗೆ ಯಾವುದೇ ಕೆಟ್ಟ ದಾಖಲೆಗಳಿಲ್ಲ (Black Mark); ಈ ಹಿಂದೆ ನಗದು ಪ್ರಶಸ್ತಿ ಕೂಡ ಲಭಿಸಿದೆ.
  9. ಎ-8: ತಂದೆ-ತಾಯಿ ಯಾರೂ ಇಲ್ಲ, ನಾನೊಬ್ಬನೇ ದುಡಿಯುವವನು.
  10. ಎ-17: ಈತ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ.

ಇದನ್ನೂ ಓದಿ: ಕೊಲೆ ಅಪರಾಧಿಯ ಶಾಸಕ ಸ್ಥಾನಕ್ಕೂ ಕುತ್ತು: ವಿನಯ್ ಕುಲಕರ್ಣಿ ಮುಂದಿರುವ ಕಾನೂನು ಆಯ್ಕೆಗಳೇನು?

ಮುಂದಿರುವ ಸಾಧ್ಯತೆಗಳೇನು?

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಕ್ಷಮೆಯಿಲ್ಲದ ಜೀವಿತಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಗಳ ಬಗ್ಗೆ ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ನಾಳೆ ಮಧ್ಯಾಹ್ನದ ವೇಳೆಗೆ ನ್ಯಾಯಾಧೀಶರು ಪ್ರತಿಯೊಬ್ಬರ ಪಾತ್ರಕ್ಕೆ ಅನುಗುಣವಾಗಿ ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version