ಹದಿಹರೆಯದವರ ನಡುವಿನ ಅರಿವಿನ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕುವಂತಹ ಘಟನೆಯೊಂದು ವರದಿಯಾಗಿದೆ. 14 ವರ್ಷದ ಬಾಲಕನೊಬ್ಬನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರ ಪ್ರಕಾರ, 14 ವರ್ಷದ ಬಾಲಕನೊಬ್ಬ ಇಬ್ಬರು ಬಾಲಕಿಯರ ಗರ್ಭಧಾರಣೆಗೆ ಕಾರಣನಾಗಿದ್ದಾನೆ ಎನ್ನಲಾಗಿದೆ. ಈ ಬಾಲಕಿಯರೂ ಸಹ ಅಪ್ರಾಪ್ತ ವಯಸ್ಕರಾಗಿದ್ದು, ಘಟನೆಯು ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ವಿದೇಶದ ವಿಡಿಯೋ ಎಂದು ಹೇಳಲಾಗಿದೆ.
ಹದಿಹರೆಯದವರಲ್ಲಿ ಲೈಂಗಿಕ ಶಿಕ್ಷಣದ ಕೊರತೆ, ಪೋಷಕರ ಮಾರ್ಗದರ್ಶನದ ವೈಫಲ್ಯ ಮತ್ತು ಹದಿಹರೆಯದ ವಯಸ್ಸಿನಲ್ಲಿ ಉಂಟಾಗುವ ಭಾವನಾತ್ಮಕ ಹಾಗೂ ದೈಹಿಕ ಬದಲಾವಣೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದು ಇಂತಹ ಘಟನೆಗಳಿಗೆ ಕಾರಣ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಈ ವಯಸ್ಸಿನಲ್ಲಿ ಗರ್ಭಧರಿಸುವುದು ಬಾಲಕಿಯರ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಕಾನೂನಾತ್ಮಕವಾಗಿ ಇದು ಬಾಲಾಪರಾಧ ಮತ್ತು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಈ ಘಟನೆಯು ಕುಟುಂಬಗಳು, ಶಾಲೆಗಳು ಮತ್ತು ಸಮಾಜವು ಯುವ ಪೀಳಿಗೆಗೆ ಸಂಬಂಧಗಳು ಮತ್ತು ಪ್ರಜನನ ಆರೋಗ್ಯದ ಬಗ್ಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.
ಮಂಗಳೂರು, ಮಾರ್ಚ್ 21: ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ (Police inspector Sandesh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಹಾಗೂ ಪ್ರೇರಿತ ಎಂಬುದು ಸಾಬೀತಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಮಂಗಳೂರೂ ನಗರ ಕಮಿಷನರೇಟ್ ವ್ಯಾಪ್ತಿಗೆ ಬರುವ ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಮೇಲೆ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪ ಕೇಳಿಬಂದಿತ್ತು. ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಸಿಎಂ, ಗೃಹ ಸಚಿವರು ಸೇರಿದಂತೆ ಮಹಿಳಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಿದ್ದರು. ಈ ಬೆನ್ನಲ್ಲೆ ಕೆಲ ಆಡಿಯೋ ಮತ್ತು ವಿಡಿಯೋ ಕೂಡ ವೈರಲ್ ಆಗಿದ್ದವು.
ಮಹಿಳಾ ಆಯೋಗ, ಮಕ್ಕಳ ರಕ್ಷಣಾ ಆಯೋಗ ಸೇರಿದಂತೆ ಸರ್ಕಾರದಿಂದ ತನಿಖೆ ಮಾಡಲು ಪೊಲೀಸ್ ಕಮಿಷನರ್ಗೆ ಸೂಚನೆ ಸಿಕ್ಕಿತ್ತು. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ರಿಂದ ತನಿಖೆಯನ್ನು ಮಾಡಿಸಲಾಯ್ತು. ಇನ್ಸ್ಪೆಕ್ಟರ್ ಸಂದೇಶ್ರನ್ನ ಅಮಾನತ್ತುಗೊಳಿಸಿ ತನಿಖೆ ಮುಂದುವೆರೆಸಿದ್ದರು. ಈಗ ಪ್ರಾಥಮಿಕ ತನಿಖೆ ವರದಿ ಬಂದಿದ್ದು, ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಮಾಡಿದ್ದ ಆರೋಪಗಳು ಸುಳ್ಳು ಎಂಬುವುದುಸಾಬೀತಾಗಿದೆ ಅಂತಾ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಹಲ್ಲೆ, ಕಿರುಕುಳ ಸುಳ್ಳು
ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರ ಮೇಲೆ ಹಲ್ಲೆ, ಕಿರುಕುಳ ನಡೆದಿದೆ ಎಂಬ ಆರೋಪಗಳು ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ. ಆಡಿಯೋ, ವಿಡಿಯೋದಲ್ಲಿರುವ ಮಹಿಳೆಯರು ಅದು ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಆ ಆಡಿಯೋ, ವಿಡಿಯೋವನ್ನು ವಿನೋದ್ ಪಿಂಟೋ, ಅವಿತಾ ಅವರಿಗೆ ಯಾರು ಕೊಟ್ಟರು?
ಆಡಿಯೋ ತುಂಬಾ ಹಳೆಯದು, ಅದರಲ್ಲಿ ಏನು ಮಾತನಾಡಿದ, ಹೇಗೆ ಮಾತನಾಡಿದ ಅನ್ನೋದು ಸ್ಪಷ್ಟವಾಗಿದೆ. ಆಗಲೇ ಕ್ರಮಕೈಗೊಳ್ಳಬೇಕಾಗಿತ್ತು, ಆದರೆ ಆಗ ತೆಗೆದುಕೊಳ್ಳಲಿಲ್ಲ. ಅದರಿಂದಲೇ ಅದು ಈಗ ಹೊರಬಂದಿದೆ. ಆ ವಿಡಿಯೋ ಕೂಡ ಅಷ್ಟೇ ಲಜ್ಜಾಸ್ಪದವಾಗಿದೆ. ಆ ಆಡಿಯೋ ಮತ್ತು ವಿಡಿಯೋ ಮಟ್ಟಿಗೆ ನೋಡಿದರೆ, ಅಸಭ್ಯ ವರ್ತನೆ ನಡೆದಿದೆ ಎಂಬುದು ಸ್ಪಷ್ಟ. ಮಹಿಳೆಯರು PI ವಿರುದ್ಧ ದೂರು ಕೊಡಲಿಲ್ಲ ಅನ್ನೋದರಿಂದ ಅದು ಸತ್ಯ ಅಲ್ಲ ಅನ್ನೋದಕ್ಕೆ ಆಗುವುದಿಲ್ಲ.
ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ಸತ್ಯ ಹೊರಬರುತ್ತೆ: ಸುಮತಿ ನಾಯಕ್
ಆಡಿಯೋದ ಸಂಭಾಷಣೆ ಆಧಾರದ ಮೇಲೆ ಅಮಾನತು ಮಾಡಿದ್ದಾಗಿ ವರದಿ ಹೇಳಿದೆ. ಆರೋಪ ಮಾಡಿದ ಮಹಿಳೆಯರು ಯಾರದ್ದೋ ಪ್ರೇರಣೆಯಿಂದ ಸುಳ್ಳು ಆರೋಪ ಮಾಡಿದ್ದಾರೆ ಅಂತಾ ವರದಿ ಬಂದಿದೆ. ಆದರೆ ಈ ವರದಿಯನ್ನು ದೂರುದಾರೆ ಸುಮತಿ ನಾಯಕ್ ಅಲ್ಲಗಳೆದಿದ್ದಾರೆ. ಎಸಿಪಿ ಶ್ರೀಕಾಂತ್ ಕೂಡ ಈ ಪ್ರಕರಣದಲ್ಲಿ ಆರೋಪಿ. ಆದರಿಂದ ಅವರನ್ನು ಅಮಾನತಿನಲ್ಲಿ ಇಡಬೇಕಿತ್ತು. ಆದರೆ ಕಮಿಷನರ್ ಸುಧೀರ್ ಕುಮಾರ್ ಅವರ ಬಳಿ ತನಿಖೆ ಮಾಡಿಸಿದ್ದಾರೆ. ಇವರು ಮೂವರದ್ದು ಚೈನ್ ಲಿಂಕ್. ಸಂದೇಶ್ ಮೇಲೆ ಎಫ್ಐಆರ್ ಹಾಕಿ, ಎಸಿಪಿ ಶ್ರೀಕಾಂತ್ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಮಟ್ಟದ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ಸತ್ಯ ಹೊರಬರುತ್ತೆ ಅಂತಾ ಸುಮತಿ ನಾಯಕ್ ಹೇಳಿದ್ದಾರೆ.
ಐಪಿಎಲ್ 2026 ಇದೇ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಆವೃತ್ತಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಪಂದ್ಯದ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಐಪಿಎಲ್ನ ಉದ್ಘಾಟನಾ ಪಂದ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವೀರೇಂದ್ರ ಸೆಹ್ವಾಗ್, ಈ ಪಂದ್ಯ ಕೇವಲ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೋರಾಟವಲ್ಲ. ಬದಲಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದು ಪರಿಗಣಿಸಬೇಕು ಎಂದಿದ್ದಾರೆ. ಇದರ ಜೊತೆಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೆಚ್ಚಿನ ಅಭಿಮಾನಿ ಬಳಗವಿಲ್ಲ ಎಂದಿರುವ ಸೆಹ್ವಾಗ್, ಇದು ಮಾರ್ಚ್ 28 ರಂದು ಕ್ರೀಡಾಂಗಣದಲ್ಲಿ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ವಾಸ್ತವವಾಗಿ ಸೆಹ್ವಾಗ್ ಈ ರೀತಿಯ ಹೇಳಿಕೆ ನೀಡುವುದಕ್ಕೆ ಕಾರಣವೂ ಇದೆ. ಅದೆನೆಂದರೆ ಕೆಲವೇ ದಿನಗಳ ಹಿಂದೆ ನಡೆದಿದ್ದ “ದಿ 100 ಲೀಗ್” ಹರಾಜಿನಲ್ಲಿ ಕಾವ್ಯಾ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿತ್ತು. ಹೀಗಾಗಿ ಕಾವ್ಯಾ ಮಾರನ್ ವಿರುದ್ಧ ಭಾರತೀಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಗಳಿಸಿದ ಹಣವನ್ನು ಪಾಕಿಸ್ತಾನಿ ಆಟಗಾರರಿಗಾಗಿ ಖರ್ಚು ಮಾಡಿದ್ದಕ್ಕಾಗಿ ಕಾವ್ಯ ಮಾರನ್ ಅವರನ್ನು ಟೀಕಿಸಲಾಗಿತ್ತು.
ಇದೀಗ ವೀರೇಂದ್ರ ಸೆಹ್ವಾಗ್ ಕೂಡ ಅದೇ ವಿಚಾರವನ್ನು ಮುಂದಿಟ್ಟು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಟೀಕಿಸಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಇನ್ನು ಕಾವ್ಯ ಮಾರನ್ ಫ್ರಾಂಚೈಸಿ, ಪಾಕ್ ಆಟಗಾರನನ್ನು ಖರೀದಿಸಿದರ ಬಗ್ಗೆ ಮೌನ ಮುರಿದಿದ್ದ ಬಿಸಿಸಿಐ, ವಿದೇಶಿ ಲೀಗ್ಗಳಲ್ಲಿ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಸ್ವಾತಂತ್ರ್ಯವಿದೆ. ಹೀಗಾಗಿ ಇದು ನಮ್ಮ ನಿಯಂತ್ರಣದಲಿಲ್ಲ ಎಂದಿತ್ತು.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಲೀಗ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದ ಇನ್ನು ಗುಣಮುಖರಾಗಿಲ್ಲ. ಹೀಗಾಗಿ ಫ್ರಾಂಚೈಸಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ಗೆ ನಾಯಕತ್ವದ ಜವಾಬ್ದಾರಿವಹಿಸಿದೆ. ಇದೇ ಮೊದಲ ಬಾರಿಗೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸುತ್ತಿರುವ ಕಿಶನ್, ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಹೈದರಾಬಾದ್, ಮಾರ್ಚ್ 21: ಯುವ ವೈದ್ಯೆಯೊಬ್ಬರು ತನ್ನ ತಂದೆ-ತಾಯಿ ಮನೆಯಲ್ಲಿ ಬೆಕ್ಕನ್ನು (Pet Cat) ಸಾಕುವಂತಿಲ್ಲ ಎಂದು ಹೇಳಿದರೆಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಸಾಕು ಬೆಕ್ಕನ್ನು ಸಾಕಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಬಿಬಿಎಸ್ ಮುಗಿಸಿದ 23 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ಸಾಕು ಬೆಕ್ಕನ್ನು ಸಾಕಲು ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಬಿಬಿಎಸ್ ನಂತರ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಆಕೆ ಕಳೆದ 3 ತಿಂಗಳಿನಿಂದ ಸಾಕು ಬೆಕ್ಕನ್ನು ಸಾಕುತ್ತಿದ್ದರು. ಆದರೆ, ಆಕೆಯ ಪೋಷಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ಸಾಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಮಾರ್ಚ್ 18ರಂದು, ಮೀರ್‌ಪೇಟ್‌ನಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ರೀತಿಯ ಸಣ್ಣಪುಟ್ಟ ಕಾರಣಗಳಿಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೋಹನ್ ಲಾಲ್ (Mohanlal) ನಟನೆಯ ಬಹುನಿರೀಕ್ಷಿತ ‘ದೃಶ್ಯಂ’, ಭಾರತದ ಅತ್ಯುತ್ತಮ ಸಸ್ಪೆನ್ಸ್ ಕ್ರೈಂ ಸಿನಿಮಾ. ಭಾರತದ ಬಹು ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಹ ಹೌದು. ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಸಿನಿಮಾ ಸಹ ಹೌದು. ‘ದೃಶ್ಯಂ’ ಸಿನಿಮಾದ ಎರಡನೇ ಭಾಗ ಈಗಾಗಲೇ ಬಿಡುಗಡೆ ಆಗಿ ಅದೂ ಸಹ ಹಿಟ್ ಆಗಿದೆ. ಇದೀಗ ಇದೇ ಸಿನಿಮಾದ ಮೂರನೇ ಭಾಗದ ಚಿತ್ರೀಕರಣ ನಡೆದಿದ್ದು, ಮೂರನೇ ಭಾಗ ಶೀಘ್ರವೇ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ.
ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾವು ಏಪ್ರಿಲ್ 2ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಆನ್‌ಲೈನ್ ವರದಿಗಳ ಪ್ರಕಾರ, ಚಿತ್ರತಂಡವು ಏಪ್ರಿಲ್ ಬದಲಿಗೆ ಮೇ ಅಥವಾ ಜೂನ್ 2026 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ.
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮ ಗಲ್ಫ್ ರಾಷ್ಟ್ರಗಳ ಮೇಲೂ ಸಹ ಆಗುತ್ತಿದ್ದು, ಚಿತ್ರದ ಬಿಡುಗಡೆಗೆ ಲಭ್ಯತೆ ಇಲ್ಲದಿರುವುದು ಈ ವಿಳಂಬಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಆದರೂ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ‘ದೃಶ್ಯಂ 3’ ಮುಂದೂಡಲ್ಪಟ್ಟರೆ, ಅದೇ ಸಮಯದಲ್ಲಿ ಬಿಡುಗಡೆಯಾಗಲಿರುವ ಜಯಸೂರ್ಯ ನಟನೆಯ ‘ಆಡು 3’, ನಿವಿನ್ ಪೌಲಿ ಅವರ ‘ಪ್ರತಿಚ್ಛಾಯ’ ಮತ್ತು ‘ವಾಳಾ 2’ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆಗೆ ಅನುಕೂಲವಾಗಲಿದೆ.
‘ದೃಶ್ಯಂ’ ಸರಣಿಯ ಮೊದಲ ಎರಡು ಭಾಗಗಳು ಭಾರಿ ಯಶಸ್ಸು ಕಂಡಿವೆ. ಮೂರನೇ ಭಾಗದಲ್ಲೂ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ಕಥೆ ಮುಂದುವರಿಯಲಿದ್ದು, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಸೇರಿದಂತೆ ಹಳೆಯ ತಾರಾಗಣವೇ ಇರಲಿದೆ. ಅಜಯ್ ದೇವಗನ್ ನಟನೆಯ ಹಿಂದಿ ‘ದೃಶ್ಯಂ 3’ ಅಕ್ಟೋಬರ್ 2 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಮೋಹನ್ ಲಾಲ್ ಅವರು ಸದ್ಯಕ್ಕೆ ತರುಣ್ ಮೂರ್ತಿ ನಿರ್ದೇಶನದ ‘L366’, ‘ಜೈಲರ್ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಉಡುಪಿ, ಮಾ.21: ಎಲ್ಲೋ ನಡೆಯುತ್ತಿರುವ ಯುದ್ಧವು ಕರಾವಳಿಯ ಮೀನುಗಾರರ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಇಂದು ಮೀನುಗಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೋಟೆಲ್‌ಗಳ ಮುಚ್ಚುಗಡೆ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಪಾತಾಳಕ್ಕೆ ಕುಸಿದಿದೆ.
ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 100 ರಿಂದ 200 ರೂಪಾಯಿ ಇಳಿಕೆಯಾಗಿದೆ. ಮೀನುಗಾರ ಮಹಿಳೆಯರಿಗೆ ಅಸಲು ಕೂಡ ಸಿಗದಂತಾಗಿದ್ದು, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.ಅಡುಗೆ ಅನಿಲದ (LPG) ವ್ಯತ್ಯಯ ಮತ್ತು ಯುದ್ಧದ ಪ್ರಭಾವದಿಂದಾಗಿ ಪ್ರತಿದಿನ ಮೀನು ಊಟದ ಹೋಟೆಲ್‌ಗಳು ಮುಚ್ಚುತ್ತಿವೆ. ಹೋಟೆಲ್ ಮಾಲೀಕರು ಮಾರುಕಟ್ಟೆಗೆ ಬಾರದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಹಿವಾಟು ಸ್ಥಗಿತಗೊಂಡಿದೆ.
ಮಲ್ಪೆಯಿಂದ ಕೇರಳದ ಹೋಟೆಲ್‌ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮೀನು ರಫ್ತಾಗುತ್ತಿತ್ತು. ಆದರೆ ಈಗ ಕೇರಳದಲ್ಲೂ ಹೋಟೆಲ್‌ಗಳು ಬಂದ್ ಆಗಿರುವುದರಿಂದ ಮೀನಿನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದು ಪರೋಕ್ಷವಾಗಿ ಮೀನುಗಾರಿಕಾ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.”ಯುದ್ಧ ಮುಗಿದರೆ ಸಾಕು, ಮರಳಿ ಜೀವನ ಮೊದಲಿನಂತಾಗಲಿ” ಎಂದು ಮೀನುಗಾರ ಮಹಿಳೆಯರು ಪ್ರಾರ್ಥಿಸುತ್ತಿದ್ದಾರೆ.
ಮೂಡಿಗೆರೆ , ಮಾ,21: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅನುಮತಿ ಪಡೆಯದೆ ಆಟವಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 7 ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ನಿಂದ ಥಳಿಸಲಾಗಿದೆ. ಶುಕ್ರವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ಸಿಟ್ಟಿನಲ್ಲಿದ್ದ ಪ್ರಿನ್ಸಿಪಾಲ್, ಶನಿವಾರ ಬೆಳಿಗ್ಗೆ ಅನುಮತಿ ಪಡೆಯದೆ ಮೈದಾನದಲ್ಲಿ ಆಟವಾಡುತ್ತಿದ್ದ 7 ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಸೇರಿ ವಿದ್ಯಾರ್ಥಿಗಳ ಕೈಕಾಲುಗಳಿಗೆ ಬಾಸುಂಡೆ ಬರುವಂತೆ ಪ್ಲಾಸ್ಟಿಕ್ ಪೈಪ್ ಹಾಗೂ ಬೆಲ್ಟ್‌ನಿಂದ ಮನಸೋಇಚ್ಛೆ ಹೊಡೆದಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ರೂಮಿನೊಳಗೆ ಹಾಕಿ ಬೀಗ ಹಾಕಿದ್ದಾರೆ. ವಸತಿ ಶಾಲೆಯ ರೂಮಿನೊಳಗಿಂದ ವಿದ್ಯಾರ್ಥಿಗಳ ಕಿರುಚಾಟ ಮತ್ತು ಅಳು ಕೇಳಿ ಪಕ್ಕದ ಕಾಫಿ ತೋಟದ ಕಾರ್ಮಿಕರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರೂಮಿನಲ್ಲಿದ್ದ 7 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಏಳು ವಿದ್ಯಾರ್ಥಿಗಳನ್ನು ಪೊಲೀಸರು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಅವರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದು, ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ, ಪಾಕಿಸ್ತಾನದ ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗೋದಿಲ್ಲ. ಇದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಆದಾಗ್ಯೂ ಭಾರತದ ಕೆಲವು ಸಿನಿಮಾಗಳನ್ನು ಪಾಕಿಸ್ತಾನದಲ್ಲಿ ಕದ್ದು ನೋಡಲಾಗುತ್ತದೆ. ‘ಧುರಂಧರ್’ ಸಿನಿಮಾ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು! ಅಲ್ಲಿನ ಜನರು ಪೈರಸಿ ಕಾಪಿಯನ್ನು ನೋಡಿದ್ದರು. ಈಗ ‘ಧುರಂಧರ್ 2’ ಚಿತ್ರದ ಪೈರಸಿ ಕಾಪಿಯನ್ನು ಪಾಕಿಸ್ತಾನದಲ್ಲಿ ನೋಡಲಾಗುತ್ತಿದೆ.
ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಭಾರತದ ಸಾಕಷ್ಟು ಸಿನಿಮಾಗಳನ್ನು ಅವರು ಪಾಕಿಸ್ತಾನದಲ್ಲಿ ನೋಡುತ್ತಾರೆ. ಪಾಕಿಸ್ತಾನಿ ರಿಪೋರ್ಟರ್ ಈಗ ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅದು ಕೂಡ ಪೈರಸಿ ಕಾಪಿಯನ್ನು. ಟಿವಿಯಲ್ಲಿ ‘ಧುರಂಧರ್ 2’ ಸಿನಿಮಾ ನೋಡಿದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ.
ಖಲೀದ್ ಮೆಹಮೂದ್ ಎಂಬ ವ್ಯಕ್ತಿ ವಿಡಿಯೀ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ‘ಧುರಂಧರ್ 2’ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಆರಂಭದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ‘ಧುರಂಧರ್ 2 ಚಿತ್ರವನ್ನು ಲಾಹೋರ್ನಲ್ಲಿ ನೋಡುತ್ತಿದ್ದೇನೆ’ ಎಂದಿದ್ದಾರೆ. ಅವರ ಬಯೋದಲ್ಲಿ ಪಾಕಿಸ್ತಾದ ಸುದ್ದಿ ಪತ್ರಿಕೆಯಲ್ಲಿ ಪತ್ರಕರ್ತ ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದ ಪೋಸ್ಟ್ ವೈರಲ್ ಆಗಿದೆ. ‘ಟಿವಿ ಸ್ಕ್ರಿನ್ ಅಲ್ಲಿ ಕ್ರ್ಯಾಕ್ ಕಾಣಿಸುತ್ತಿದೆ. ಟಿ20 ವಿಶ್ವಕಪ್ ಫಿನಾಲೆ ನೋಡಿದ್ರಾ’ ಎಂದು ಕೇಳಿದ್ದಾರೆ ಕೆಲವರು. ‘ಸಿನಿಮಾ ಎಷ್ಟು ಅದ್ಭುತವಾಗಿದೆ ಎಂದರೆ ಪಾಕಿಸ್ತಾನದವರೂ ಎಂಜಾಯ್ ಮಾಡುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ‘ಪಾಕಿಸ್ತಾನದಲ್ಲಿ ಭಾರತ ಸ್ಪೈ’ ಎಂದು ಕೆಲವರು ಬರೆದಿದ್ದಾರೆ.
‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಧುರಂಧರ್ ಚಿತ್ರವನ್ನು ಆದಿತ್ಯಧಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಗಮನ ಸೆಳೆಯುತ್ತಿದೆ.
ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 2026 ರ ಐಪಿಎಲ್ನಲ್ಲಿ ಮಾರ್ಚ್ 29 ರಿಂದ ತನ್ನ ಅಭಿಯಾನವನ್ನು ಶುರುಮಾಡಿದೆ. ಕೆಕೆಆರ್ ತಂಡ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಸಲುವಾಗಿ ಕೆಕೆಆರ್ ಫ್ರಾಂಚೈಸಿ ತಮ್ಮ ತಂಡದೊಳಗೆ ಎರಡೆರಡು ತಂಡಗಳನ್ನು ನಿರ್ಮಿಸಿ ಅಭ್ಯಾಸ ಪಂದ್ಯವನ್ನು ಆಡಿತು. ಅದರಲ್ಲಿ ತಂಡದಲ್ಲಿರುವ 21 ವರ್ಷದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಕೇವಲ 55 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮಾರ್ಚ್ 20 ರ ಶುಕ್ರವಾರದಂದು ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಿತು. ಇಡೀ ತಂಡವನ್ನು ಗೋಲ್ಡ್ ನೈಟ್ಸ್ ಮತ್ತು ಪರ್ಪಲ್ ನೈಟ್ಸ್ ಎಂಬ ಎರಡು ಪ್ರತ್ಯೇಕ ತಂಡಗಳಾಗಿ ವಿಂಗಡಿಸಲಾಗಿತ್ತು. ಈ ಪಂದ್ಯದಲ್ಲಿ ಗೋಲ್ಡ್ ನೈಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 199 ರನ್ ಕಲೆಹಾಕಿತು. ತಂಡದ ಪರ ರಿಂಕು ಸಿಂಗ್ 40 ರನ್ ಗಳಿಸಿದರೆ, ಹೊಸ ಆರಂಭಿಕ ಆಟಗಾರ ಟಿಮ್ ಸೀಫರ್ಟ್ 30 ರನ್ ಗಳಿಸಿದರು. ಯುವ ಬ್ಯಾಟ್ಸ್‌ಮನ್ ಸಾರ್ಥಕ್ ರಂಜನ್ ಕೂಡ 37 ರನ್ಗಳ ಕಾಣಿಕೆ ನೀಡಿದರು. ಇತ್ತ ಪರ್ಪಲ್ ನೈಟ್ಸ್ ತಂಡದ ಪರ ವೇಗಿ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದರು.
ರಘುವಂಶಿ ಸ್ಫೋಟಕ ಶತಕ
ಈ ಗುರಿ ಬೆನ್ನಟ್ಟಿದ ಪರ್ಪಲ್ ನೈಟ್ಸ್ ತಂಡಕ್ಕೆ ಫಿನ್ ಅಲೆನ್ ಸ್ಫೋಟಕ ಆರಂಭ ನೀಡಿದರು. ಆದರೆ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಬೇಗನೆ ಔಟಾದರು. ಆ ಬಳಿಕ ಕಣಕ್ಕಿಳಿದ 21 ವರ್ಷದ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಅಂಡರ್-19 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ರಘುವಂಶಿ ನಿಧಾನವಾಗಿ ಪ್ರಾರಂಭಿಸಿದರಾದರೂ ಆ ನಂತರ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿ, 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಕೇವಲ 55 ಎಸೆತಗಳಲ್ಲಿ ಶತಕದ ಗಡಿ ದಾಟಿದರು.
ತಂಡವನ್ನು ಗೆಲ್ಲಿಸಿದ ರಘುವಂಶಿ
ಇನ್ನಿಂಗ್ಸ್‌ನ 20 ನೇ ಓವರ್‌ನ ಎರಡನೇ ಎಸೆತದಲ್ಲಿ ಅವರು ಬೌಂಡರಿ ಬಾರಿಸಿ, ಶತಕ ಪೂರೈಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದ ರಘುವಂಶಿ, 187 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 103 ರನ್ ಕಲೆಹಾಕಿದರು. ಅವರ ಈ ಇನ್ನಿಂಗ್ಸ್ ಪರ್ಪಲ್ ನೈಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. ರಘುವಂಶಿ ಅವರ ಇನ್ನಿಂಗ್ಸ್ ಕೋಲ್ಕತ್ತಾದ ಬ್ಯಾಟಿಂಗ್ ವಿಭಾಗಕ್ಕೆ ಆನೆಬಲ ತಂದಿದೆ.
ಏಕೆಂದರೆ ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್ ವಿಭಾಗ ಬಲಹೀನವಾಗಿ ಕಾಣುತ್ತಿತ್ತು. ಆದರೆ ಈ ಬಾರಿ ಕೆಲವರ ಆಗಮನದ ಬಳಿಕ ಅದು ಬಲಿಷ್ಠವಾಗಿ ಕಾಣುತ್ತಿದೆ. ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿರುವ ರಘುವಂಶಿ, ಲೀಗ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 21: ಮೇ ತಿಂಗಳಲ್ಲಿ ಅರಮನೆ ಮೈದಾನದಲ್ಲಿ ಬೃಹತ್ ಮಠಾಧೀಶ್ವರ ಮಹಾಸಭೆ ವಿಚಾರವಾಗಿ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಡಿಸಿಎಂ ಡಿಕೆ ಶಿವಕುಮಾರ್ನ್ನ ಇಂದು ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿಕೆ ಶಿವಕುಮಾರ್ ಪರ ಮಾತಾಡಿದ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಬಜೆಟ್ನಲ್ಲಿ ಸ್ವಾಮೀಜಿಗಳಿಗೆ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಿಎಂ ಪರವಾಗಿ ಮಾತನಾಡಿದ ಸ್ವಾಮೀಜಿಗಳಿಗೆ ಭೂಮಿ ಕೊಟ್ಟಿದ್ದಾರೆ. ಬಡ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯಾಕೆ ಅನುದಾನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಬೇಕು. ಡಿಕೆ ಶಿವಕುಮಾರ್ನ್ನ ಸಿಎಂ ಮಾಡಬೇಕು ಎಂದು ವರಿಷ್ಠರಿಗೆ ಮನವಿ ಮಾಡ್ತೇವೆ ಎಂದಿದ್ದಾರೆ.