ನಿಧಾನವಾಗಿ ನಡೆಯುವುದಕ್ಕೂ ಕಿವಿ ಸರಿಯಾಗಿ ಕೇಳಿಸದಿರುವುದಕ್ಕೂ ಸಂಬಂಧವಿದೆಯೇ? – Kannada News | Hearing Loss May Affect Balance And Walking Speed, Study Suggests

ಬಹಳ ಮಂದಿ ಕೇಳುವ ಶಕ್ತಿ ಕಡಿಮೆಯಾಗುವುದು ಅಥವಾ ಕಿವಿ ಸರಿಯಾಗಿ ಕೇಳಿಸದಿರುವುದು (Hearing Loss) ಕೇವಲ ಕಿವಿಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಕೇಳುವ ಶಕ್ತಿ ಕಡಿಮೆಯಾಗುವುದು ದೇಹದ ಸಮತೋಲನ, ನಡೆಯುವ ವೇಗ ಮತ್ತು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೈದರಾಬಾದ್‌ನ ಯಶೋದ ಆಸ್ಪತ್ರೆಯ ಎಂಡೋಸ್ಕೋಪಿಕ್ ಇ ಎನ್ ಟಿ ಸ್ಪೆಷಲಿಸ್ಟ್ ಡಾ. ಕೆವಿಎಸ್‌ಎಸ್‌ಆರ್‌ಕೆ ಶಾಸ್ತ್ರಿ ಅವರು ಹೇಳುವ ಪ್ರಕಾರ, ಕಿವಿಯ ಒಳಭಾಗದಲ್ಲಿರುವ ಸಮತೋಲನ ವ್ಯವಸ್ಥೆ (Inner Ear Balance System) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದ ಚಲನೆ ಮತ್ತು ಬ್ಯಾಲೆನ್ಸ್ ಮೇಲೆ ಪರಿಣಾಮ ಬೀಳುತ್ತದೆ ಎಂದಿದ್ದಾರೆ.

ಕೇಳುವ ಶಕ್ತಿ ಕಡಿಮೆಯಾದರೆ ಏನೆಲ್ಲಾ ಆಗುತ್ತದೆ?

ಸಮತೋಲನ ಕಳೆದುಕೊಳ್ಳುವ ಸಾಧ್ಯತೆ: ನಮ್ಮ ಒಳಕಿವಿಯಲ್ಲಿ ದೇಹದ ಸಮತೋಲನ ಕಾಪಾಡುವ ವಿಶೇಷ ವ್ಯವಸ್ಥೆ ಇರುತ್ತದೆ. ಕೇಳುವ ಶಕ್ತಿ ಕಡಿಮೆಯಾದಾಗ ಸುತ್ತಮುತ್ತಲಿನ ಪರಿಸರದ ಅರಿವು ಕಡಿಮೆಯಾಗುತ್ತದೆ. ಇದರಿಂದ ನಡೆಯುವಾಗ ತಡಕಾಡುವುದು, ಕೆಳಗೆ ಬೀಳುವ ಅಪಾಯ ಹೆಚ್ಚಾಗುತ್ತದೆ.

ಮೆದುಳಿನ ಮೇಲೆ ಹೆಚ್ಚುವರಿ ಒತ್ತಡ: ಸ್ಪಷ್ಟವಾಗಿ ಕೇಳಿಸದಿದ್ದರೆ ಎದುರಿನವರ ಮಾತು ಅರ್ಥಮಾಡಿಕೊಳ್ಳಲು ಮೆದುಳು ಹೆಚ್ಚು ಕೆಲಸ ಮಾಡಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ದಣಿವು ಉಂಟಾಗುತ್ತದೆ. ಕ್ರಮೇಣ ಇದು ಆತ್ಮವಿಶ್ವಾಸ ಮತ್ತು ದೈಹಿಕ ಚಟುವಟಿಕೆಗಳನ್ನೂ ಕಡಿಮೆ ಮಾಡುತ್ತದೆ.

ನಿಷ್ಕ್ರಿಯ ಜೀವನಶೈಲಿ: ಕೇಳುವ ಸಮಸ್ಯೆಯಿಂದ ಕೆಲವರು ಜನರು ಇರುವ ಕಡೆ ಹೋಗುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸ್ನಾಯುಗಳು ಮತ್ತು ಸಂಧಿಗಳು ದುರ್ಬಲವಾಗಿ ನಡೆಯುವ ವೇಗ ನಿಧಾನಗೊಳ್ಳುತ್ತದೆ.

ಇದನ್ನೂ ಓದಿ: ಪ್ರತಿದಿನ ನೀವೂ ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕಿವಿ ಕೇಳಿಸದಿರಬಹುದು ಎಚ್ಚರ!

ನಡೆಯುವ ವೇಗವೂ ಆರೋಗ್ಯದ ಸೂಚನೆ:

ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟು ವೇಗವಾಗಿ ನಡೆಯುತ್ತಾನೆ ಎಂಬುದು ಮೆದುಳು, ನರಮಂಡಲ, ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯ ಸೂಚಕವಾಗಿದೆ. ಸಂಶೋಧನೆಗಳ ಪ್ರಕಾರ, ಕೇಳುವ ಶಕ್ತಿ ಕಡಿಮೆಯಿರುವವರು ಸಾಮಾನ್ಯರಿಗಿಂತ ನಿಧಾನವಾಗಿ ನಡೆಯುವ ಸಾಧ್ಯತೆ ಹೆಚ್ಚು. ಜಾನ್ಸ್ ಹಾಪ್ಕಿನ್ಸ್ ಅಧ್ಯಯನದ ಪ್ರಕಾರ, ಸಣ್ಣ ಮಟ್ಟಿನ ಕೇಳುವ ಶಕ್ತಿ ಕುಂದಿದವರಲ್ಲಿಯೂ ಕೆಳಗೆ ಬೀಳುವ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ. ಕೇಳುವ ಶಕ್ತಿ ಇನ್ನಷ್ಟು ಕುಂದಿದಂತೆ ಈ ಅಪಾಯವೂ ಹೆಚ್ಚಾಗುತ್ತದೆ.

ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬೇಕು?

  • ನಿಯಮಿತವಾಗಿ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ
  • ಅಗತ್ಯವಿದ್ದರೆ ಹಿಯರಿಂಗ್ ಏಡ್ಸ್ ಬಳಸಿರಿ
  • ಹೆಚ್ಚು ಶಬ್ದ ಇರುವ ಸ್ಥಳಗಳಿಂದ ದೂರವಿರಿ
  • ದೈಹಿಕವಾಗಿ ಚುರುಕಾಗಿ ಇರಿ
  • ಸಮತೋಲನ ವ್ಯಾಯಾಮಗಳನ್ನು ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನಗಿಂತ ಕೆಟ್ಟವರು ಯಾರೂ ಇರುವುದಿಲ್ಲ; ಬಂಗಾಳದಲ್ಲಿ ಹಿಂಸಾಚಾರ ನಡೆಸುವವರಿಗೆ ಸಿಎಂ ಸುವೇಂದು ಅಧಿಕಾರಿ ಎಚ್ಚರಿಕೆ – Kannada News | West Bengal CM Suvendu Adhikaris tough warning on violence and vandalism in state

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಉಂಟಾದ ಭಾರಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಕೃತ್ಯಗಳ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ (Suvendu Adhikari) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ‘ಬಂಗಾಳದಲ್ಲೂ ಕಾಶ್ಮೀರದಂತೆ ಕಲ್ಲು ತೂರಾಟ ಅಂತ್ಯವಾಗಲಿದೆ’ ಎಂದು ಹಿಂಸಾಚಾರ ನಡೆಸುವವರಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಂಗಾಳದಲ್ಲಿ ನಡೆದ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದು, ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಈ ಘಟನೆಯಲ್ಲಿ 10 ಪೊಲೀಸರು ಮತ್ತು ಮೂವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸುವೇಂದು ಅಧಿಕಾರಿ ಕಠಿಣ ಕ್ರಮಗಳ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಹೊಸ ಇತಿಹಾಸ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಇಂದು ಪ್ರಮಾಣ ವಚನ

“ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಕಲ್ಲು ತೂರಾಟ ಮತ್ತು ಹಿಂಸಾಚಾರಗಳು ನಡೆಯುತ್ತಿದ್ದವು. ಆದರೆ ಈಗ ಅಲ್ಲಿ ಅಂತಹ ಕೃತ್ಯಗಳು ಸಂಪೂರ್ಣವಾಗಿ ನಿಂತಿವೆ. ಅದೇ ಮಾದರಿಯಲ್ಲಿ ಪಶ್ಚಿಮ ಬಂಗಾಳದಲ್ಲೂ ಇಂತಹ ಅರಾಜಕತೆ ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಶಾಶ್ವತವಾಗಿ ಕೊನೆಗಾಣಿಸಲಾಗುವುದು” ಎಂದು ಸುವೇಂದು ಅಧಿಕಾರಿ ಕಠಿಣ ಸಂದೇಶ ರವಾನಿಸಿದ್ದಾರೆ. “ತಪ್ಪು ಮಾಡಿದರೆ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆಲವರು ಭಾವಿಸಿದ್ದರು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಹೊಸ ಅಪರಾಧ ಕಾನೂನು (BNSS) ಚೌಕಟ್ಟಿನ ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಕೆಲಸ ಮಾಡಲಿವೆ. ಹಿಂಸಾಚಾರ ನಡೆಸಿದ ಯಾರೊಬ್ಬರನ್ನೂ ಬಿಡುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು

ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 40ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇತರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಕೊಲ್ಕತ್ತಾ ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು ಮತ್ತು ಅವರಿಗೆ ಉತ್ತಮ ಮೂಲಸೌಕರ್ಯ ಹಾಗೂ ಅತ್ಯಾಧುನಿಕ ತಾಂತ್ರಿಕ ಬೆಂಬಲವನ್ನು ಒದಗಿಸಲಾಗುವುದು. ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಶಕ್ತಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ (TMC) ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಅಶಾಂತಿಗೆ ಬಿಜೆಪಿ ನಾಯಕರ ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ ಎಂದು ಆರೋಪಿಸಿದ್ದು, ರಾಜ್ಯದಲ್ಲಿ ರಾಜಕೀಯ ಸಂಘರ್ಷ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Fri, 12 June 26

Source link

ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ – Kannada News | Ceiling Plaster Collapses During Class at Kalaburagi Government Girls PU College; 5 Injured

ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್Image Credit source: Tv9 Kannada

ಕಲಬುರಗಿ, ಜೂನ್​​ 12: ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿರುವ ಆಘಾತಕಾರಿ ಘಟನೆ ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆ ವೇಳೆ 80ಕ್ಕೂ ಅಧಿಕ ಯುವತಿಯರು ಕೊಠಡಿಯಲ್ಲಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಐವರು ವಿದ್ಯಾರ್ಥಿಗಳಿಗೆ ಈ ವೇಳೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಈ ಕಾಲೇಜಿನಲ್ಲಿ ಸುಮಾರು 2 ಸಾವಿರ ಜನ ವಿದ್ಯಾರ್ಥಿನಿಯರಿದ್ದು, ಬಹುತೇಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿದ್ದರೂ ಕಾಲೇಜಿನ ಕಟ್ಟಡವೇ ವಿದ್ಯಾರ್ಥಿನಿಗಳ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದೆ. ಇಂದು ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕ್ಲಾಸ್ ರೂಮ್​​ಗೆ ಬಂದಿದ್ದರು. ಕೊಠಡಿಗೆ ಬಂದ ಪ್ರಾಧ್ಯಾಪಕರೂ ಪಾಠ ಶುರುಮಾಡಿದ್ದರು. ಈ ವೇಳೆ ಏಕಾ ಏಕಿ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿದ್ದು, ಘಟನೆಯಲ್ಲಿ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಎಂಬ ಐದು ಜನ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್​​ಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್​ಐ, ಕಾನ್​ಸ್ಟೇಬಲ್

8 ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಕಟ್ಟಡ

ಇನ್ನು ಈ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಿ ಇನ್ನೂ 8 ವರ್ಷಗಳೂ ಕಳೆದಿಲ್ಲ. ಹೀಗಿದ್ದರೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ಹಿಂದೆಯೂ ಇದೇ ರೀತಿ ಪ್ಲಾಸ್ಟರ್​​ ಕುಸಿದಿತ್ತು. ಆದರೆ ಆ ಸಮಯದಲ್ಲಿ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿತ್ತು. ಈಗ ಅದೇ ರೂಂನ ಪಕ್ಕದ ಕೊಠಡಿಯಲ್ಲಿ ಘಟನೆ ನಡೆದಿದೆ. ಬಹುತೇಕ ಕ್ಲಾಸ್​​ ರೂಂಗಳ ಸ್ಥಿತಿ ಹೀಗೆ ಇರುವ ಕಾರಣ ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದೇ ಪಾಠ ಕೇಳಬೇಕಾದ ಸ್ಥಿತಿ ಇಲ್ಲಿನದು. ಹೀಗಾಗಿ ಸಂಬಂಧಪಟ್ಟವರು ಈ ಸಂಬಂಧ ತುರ್ತಾಗಿ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ತನಿಖೆಗೆ ಶಾಸಕರ ಆಗ್ರಹ

ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿರುವ ಶಾಸಕ ಅಲ್ಲಮಪ್ರಭು ಪಾಟೀಲ್‌, ಕಾಲೇಜು ಕಟ್ಟಡದ ಕಾಮಗಾರಿ ಸಂಬಂಧ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದ ಟೀಸರ್ ಬಿಡುಗಡೆ; ಸಿಕ್ತು ಕಥೆಯ ಸುಳಿವು – Kannada News | Boys Never Compromise Kannada movie teaser release Film in Cinemas on 10 July

ಈ ಹಿಂದೆ ‘ಜಸ್ಟ್ ಮದ್ವೇಲಿ’, ‘ರಾಜಣ್ಣನ ಮಗ’ ಸಿನಿಮಾಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ‘ಬಾಯ್ಸ್ ನೆವರ್ ಕಾಂಪ್ರಮೈಸ್’ (Boys Never Compromise) ಎಂಬ ಚಿತ್ರಕ್ಕೆ ಅವರೇ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹರೀಶ್ ಜಲಗೆರೆ ಅವರ ಹಿಂದಿನ ಎರಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಕೋಲಾರ ಸೀನು ಅವರು ಹರೀಶ್ ಅವರ ಹೊಸ ಪ್ರಯತ್ನಕ್ಕೆ ಜೊತೆಯಾಗಿದ್ದಾರೆ. ಹಾರರ್, ಕಾಮಿಡಿ ಕಥಾಹಂದರ ಒಳಗೊಂಡ ಈ ಚಿತ್ರದ ಟೀಸರ್ ಹಾಗೂ ಬಾಯ್ಸ್ ಆಂಥೆಮ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದಲ್ಲಿ ಸಾಮ್ರಾಟ್, ಸುಪ್ರಿತ್ ಕಾಟಿ, ಸೀತಾರಾಮ, ನಕ್ಷತ್ರಾ, ಮಂಡ್ಯ ಸಿದ್ದು, ಉಮೇಶ್ ಕಿನ್ನಾಳ, ರಾಜೀವ್ ರೆಡ್ಡಿ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸಬರೇ ನಟಿಸಿದ್ದಾರೆ. ‘ಮಾರಿ ಗೋಲ್ಡ್ ಸ್ಡುಡಿಯೋಸ್’ ಮೂಲಕ ಉಜ್ವಲ ನಾಗರಾಜ ಜಲಗೆರೆ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಲೋಕಿ ತವಸ್ಯ ಅವರು ಸಂಗೀತ ನೀಡಿದ್ದಾರೆ. ಎಂ.ಎಸ್. ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾರ್ತಿಕ್ ಈಶ್ವರಚಾರಿ ಅವರು ಸಂಕಲನ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹರೀಶ್ ಜಲಗೆರೆ ಅವರು ಮಾತನಾಡಿದರು. ‘ಇದೊಂದು ಹಾರರ್ ಕಾಮಿಡಿ ಸಿನಿಮಾ. ಜತೆಗೆ ಒಂದು ಸಂದೇಶ ಕೂಡ ಇದೆ. ಒಂದಷ್ಟು ಹುಡುಗರು ತರಲೆ ತುಂಟಾಟ ಮಾಡಲು ಹೋಗಿ ದೆವ್ವದ ಜತೆ ಹೇಗೆ ಕನೆಕ್ಟ್ ಆಗ್ತಾರೆ ಎಂಬುದೇ ಈ ಸಿನಿಮಾದ ಕಾನ್ಸೆಪ್ಟ್. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೇನೆ. ನನ್ನ ಪ್ರಯತ್ನಕ್ಕೆ ಸ್ನೇಹಿತ ಕೋಲಾರ ಸೀನು ಕೈಜೋಡಿಸಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಜುಲೈ 10ಕ್ಕೆ ನಮ್ಮ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಬಾಯ್ಸ್ ನೆವರ್ ಕಾಂಪ್ರಮೈಸ್’ ಚಿತ್ರದ ಟೀಸರ್:

‘15-20 ದಿನದಲ್ಲಿ ಐಟಂ ಸಾಂಗ್ ರಿಲೀಸ್ ಮಾಡಿ, ಜುಲೈ ಮೊದಲ ವಾರ ಕಿಚ್ಚ ಸುದೀಪ್ ಅವರಿಂದ ನಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸುತ್ತಿದ್ದೇವೆ. ಹುಡುಗರಲ್ಲೂ ಕೆಲವು ಅಗತ್ಯತೆಗಳು ಇರುತ್ತವೆ. ಅದರಲ್ಲಿ ಕೆಲವರು ಕಾಂಪ್ರಮೈಸ್ ಆದರೆ, ಕೆಲವರು ಆಗಲ್ಲ. ಆಗದಿದ್ದರೆ ಏನಾಗುತ್ತದೆ ಎಂಬುದನ್ನು ಒಂದು ಹಾರರ್ ಎಲಿಮೆಂಟ್ ಇಟ್ಟುಕೊಂಡು ಕಾಮಿಡಿಯಾಗಿ ಹೇಳಿದ್ದೇವೆ. ಎಲ್ಲರೂ ಒಟ್ಟಾಗಿ ಸೇರಿ ಮಾಡಿರುವ ಸಿನಿಮಾ ಇದು’ ಎಂದರು ನಿರ್ದೇಶಕರು.

ಇದನ್ನೂ ಓದಿ: ‘ಮಹಾನ್ ಕಿಲಾಡಿ’ ರಿಯಾಲಿಟಿ ಶೋ ಆರಂಭಿಸಿದ ಮಿಂಚು: ಏನಿದರ ವಿಶೇಷ?

ಮಾಡೆಲಿಂಗ್ ಅನುಭವ ಇರುವ ನಟಿ ನಕ್ಷತ್ರಾ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆ್ಯಂಟೊನಿ ದಾಸನ್, ಐಶ್ವರ್ಯಾ ರಂಗರಾಜನ್ ಹಾಡಿರುವ ಗೀತೆ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಸಂಗೀತ ನಿರ್ದೇಶಕ ಲೋಕಿ ತವಸ್ಯ ಹೇಳಿದರು. ರಾಜೀವ್ ರೆಡ್ಡಿ ಅವರು ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದ್ದಾರೆ. ಕೋಲಾರ ಸೀನು ಅವರ ಸಹ-ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರಿ ಮಳೆಗೆ ಬೆಂಗಳೂರಲ್ಲಿ ರಸ್ತೆಯಲ್ಲೇ ಹರಿದ ನೀರು: ದ್ವಿಚಕ್ರ ವಾಹನ ಸವಾರರ ಪರದಾಟ – Kannada News | Heavy Rains Lash Bengaluru, Two Wheeler Commuters Face Struggles

ಬೆಂಗಳೂರು, ಜೂನ್​​ 12: ಮಹಾನಗರದ ಹಲವೆಡೆ ಸಂಜೆ ಮಳೆ ಸುರಿದಿದೆ. ವಿಧಾನಸೌಧ, ಮೆಜೆಸ್ಟಿಕ್, ಕೆ.ಆರ್. ವೃತ್ತ, ಕೆ.ಆರ್. ಮಾರುಕಟ್ಟೆ, ಕಾರ್ಪೊರೇಷನ್, ಶಾಂತಿನಗರ, ಶಿವಾಜಿನಗರ, ಕೋರಮಂಗಲ, ರಿಚ್ಮಂಡ್ ಟೌನ್, ಆಡುಗೋಡಿ, ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರನಗರ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಂಡುಬಂತು. ಮಳೆ ಶುರುವಾಗುತ್ತಿದ್ದಂತೆ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮುಖ್ಯವಾಗಿ, ದ್ವಿಚಕ್ರ ವಾಹನ ಸವಾರರು ಮಳೆನೀರಿನಲ್ಲಿ ಪರದಾಡುತ್ತಿರುವ ದೃಶ್ಯಗಳು ಕಂಡುಬಂತು. ಸಂಜೆ ಕಚೇರಿ ಮುಗಿಸಿ ಮನೆಗೆ ಹೊರಟಿದ್ದ ಸಾರ್ವಜನಿಕರೂ ಸಹ ಮಳೆಯಿಂದಾಗಿ ತೊಂದರೆಗೊಳಗಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಕ್ರೆಬೈಲಿನಲ್ಲಿ ಒಡೆಯನಿಲ್ಲದೆ ‘ಭೀಷ್ಮ’ ಆನೆ ಅನಾಥ: ಹೆತ್ತ ಮಗನಂತೆ ಸಾಕಿ ಸಲಹುತ್ತಿದ್ದ ಮಾವುತ ಸಿದ್ದಿಕ್ ಪಾಷಾ ಇನ್ನಿಲ್ಲ – Kannada News | Siddique Pasha: Sakrebailu Elephant Camp Mourns Beloved Mahout’s Untimely Demise

ಶಿವಮೊಗ್ಗ, ಜೂ.12: ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದೇ ಹೆಸರಾಗಿರುವ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಕಳೆದ 16 ವರ್ಷಗಳಿಂದ ಕಾಡಾನೆಗಳನ್ನು ಅತ್ಯಂತ ಪ್ರೀತಿಯಿಂದ ಪಳಗಿಸಿ, ಸಲಹುತ್ತಿದ್ದ ಬಿಡಾರದ ದಕ್ಷ ಮಾವುತ ಸಿದ್ದಿಕ್ ಪಾಷಾ (39) ಅವರು ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ನೆಚ್ಚಿನ ಮಾವುತನ ಅಗಲಿಕೆಯಿಂದಾಗಿ ಇಡೀ ಆನೆ ಬಿಡಾರದಲ್ಲಿ ಸದ್ಯ ಮೌನ ನೆಲೆಸಿದೆ. ಸುತ್ತಲೂ ದಟ್ಟ ಅರಣ್ಯ, ತುಂಗಾ ನದಿಯ ಹಿನ್ನೀರಿನ ಪ್ರದೇಶದ ನಡುವೆ ಇರುವ ಸಕ್ರೆಬೈಲು ಬಿಡಾರದಲ್ಲಿ ಸದ್ಯ 22ಕ್ಕೂ ಹೆಚ್ಚು ಆನೆಗಳಿವೆ. ಇಲ್ಲಿನ ಬಲಿಷ್ಠ ‘ಭೀಷ್ಮ’ ಆನೆಯ ಸಂಪೂರ್ಣ ಜವಾಬ್ದಾರಿಯನ್ನು ಸಿದ್ದಿಕ್ ಪಾಷಾ ಅವರೇ ಹೊತ್ತಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿಕ್ ಅವರಿಗೆ ಮೆದುಳು ಜ್ವರ (Brain Fever) ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಶಿವಮೊಗ್ಗದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಆನೆ ಬಿಡಾರದಲ್ಲಿ ಮಾವುತ ಮತ್ತು ಆನೆಗಳ ನಡುವಿನ ಸಂಬಂಧ ಕೇವಲ ಪ್ರಾಣಿ ಮತ್ತು ಮನುಷ್ಯನ ಸಂಬಂಧವಾಗಿರದೆ, ಒಂದು ತಾಯಿ ಮತ್ತು ಮಗುವಿನ ಪವಿತ್ರ ಒಡನಾಟದಂತಿರುತ್ತದೆ. ಪ್ರತಿದಿನ ಬೆಳಗ್ಗೆ ಆನೆಯನ್ನು ಕಾಡಿನಿಂದ ಬಿಡಾರಕ್ಕೆ ಕರೆತಂದು ಆಹಾರ, ಆರೈಕೆ ನೀಡುವುದು, ನಂತರ ಪ್ರವಾಸಿಗರ ವೀಕ್ಷಣೆಗೆ ವ್ಯವಸ್ಥೆ ಮಾಡುವುದು, ಮಧ್ಯಾಹ್ನ ಮತ್ತೆ ಕಾಡಿಗೆ ಬಿಟ್ಟು ಬರುವುದು ಸೇರಿದಂತೆ ಸೂರ್ಯ ಮುಳುಗುವವರೆಗೂ ಮಾವುತರು ಆನೆಗಳ ಜೊತೆಯಲ್ಲೇ ಸಮಯ ಕಳೆಯುತ್ತಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್

ಮೃತ ಸಿದ್ದಿಕ್ ಪಾಷಾ ಅವರು ಆನೆಗಳ ಜೊತೆ ವಿಶೇಷ ಬಾಂಧವ್ಯ ಇಟ್ಟುಕೊಂಡಿದ್ದು, ಈಗಾಗಲೇ ಬಿಡಾರದ ಅನೇಕ ಕಾಡಾನೆಗಳನ್ನು ಅತ್ಯಂತ ಮಮತೆಯಿಂದ ಪಳಗಿಸಿ ಹೆಸರುವಾಸಿಯಾಗಿದ್ದರು. ಆನೆಗಳ ಮಾತುಗಳನ್ನು ಕಣ್ಣ ಸನ್ನಯಿಂದಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದ ಯಜಮಾನ ಸಿದ್ದಿಕ್ ಇನ್ನಿಲ್ಲ ಎಂಬ ಕಹಿ ಸತ್ಯ ಬಿಡಾರದ ಸಹೋದ್ಯೋಗಿ ಮಾವುತರಲ್ಲಿ ಭಾರೀ ಆಘಾತ ಮೂಡಿಸಿದೆ. ಇತ್ತ ಸಿದ್ದಿಕ್ ಪ್ರೀತಿಯಿಂದ ಸಾಕಿದ್ದ ಭೀಷ್ಮ ಆನೆಯೂ ತನ್ನ ಒಡೆಯನನ್ನು ಕಳೆದುಕೊಂಡು ಅನಾಥವಾಗಿದೆ. ಭೀಷ್ಮ ಆನೆ ಇನ್ನು ಮುಂದೆ ಹೊಸ ಮಾವುತನ ಜೊತೆ ಹೊಂದಾಣಿಕೆ ಆಗಬೇಕಾದರೆ ಸಾಕಷ್ಟು ದಿನಗಳು ಬೇಕಾಗುತ್ತವೆ ಎಂದು ಬಿಡಾರದ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ. ಸಿದ್ದಿಕ್ ಅವರ ನಿಧನಕ್ಕೆ ಇಡೀ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿಗಳ ಕಂಬನಿ ಮಿಡಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕ್ರೆಬೈಲಿನಲ್ಲಿ ಒಡೆಯನಿಲ್ಲದೆ ‘ಭೀಷ್ಮ’ ಆನೆ ಅನಾಥ: ಹೆತ್ತ ಮಗನಂತೆ ಸಾಕಿ ಸಲಹುತ್ತಿದ್ದ ಮಾವುತ ಸಿದ್ದಿಕ್ ಪಾಷಾ ಇನ್ನಿಲ್ಲ – Kannada News | Sakrebailu mahout siddique pashas demise elephants mourn loss at shivamogga camp

ಶಿವಮೊಗ್ಗ, ಜೂ.12: ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದೇ ಹೆಸರಾಗಿರುವ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಕಳೆದ 16 ವರ್ಷಗಳಿಂದ ಕಾಡಾನೆಗಳನ್ನು ಅತ್ಯಂತ ಪ್ರೀತಿಯಿಂದ ಪಳಗಿಸಿ, ಸಲಹುತ್ತಿದ್ದ ಬಿಡಾರದ ದಕ್ಷ ಮಾವುತ ಸಿದ್ದಿಕ್ ಪಾಷಾ (39) ಅವರು ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ನೆಚ್ಚಿನ ಮಾವುತನ ಅಗಲಿಕೆಯಿಂದಾಗಿ ಇಡೀ ಆನೆ ಬಿಡಾರದಲ್ಲಿ ಸದ್ಯ ಮೌನ ನೆಲೆಸಿದೆ. ಸುತ್ತಲೂ ದಟ್ಟ ಅರಣ್ಯ, ತುಂಗಾ ನದಿಯ ಹಿನ್ನೀರಿನ ಪ್ರದೇಶದ ನಡುವೆ ಇರುವ ಸಕ್ರೆಬೈಲು ಬಿಡಾರದಲ್ಲಿ ಸದ್ಯ 22ಕ್ಕೂ ಹೆಚ್ಚು ಆನೆಗಳಿವೆ. ಇಲ್ಲಿನ ಬಲಿಷ್ಠ ‘ಭೀಷ್ಮ’ ಆನೆಯ ಸಂಪೂರ್ಣ ಜವಾಬ್ದಾರಿಯನ್ನು ಸಿದ್ದಿಕ್ ಪಾಷಾ ಅವರೇ ಹೊತ್ತಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿಕ್ ಅವರಿಗೆ ಮೆದುಳು ಜ್ವರ (Brain Fever) ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಶಿವಮೊಗ್ಗದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಆನೆ ಬಿಡಾರದಲ್ಲಿ ಮಾವುತ ಮತ್ತು ಆನೆಗಳ ನಡುವಿನ ಸಂಬಂಧ ಕೇವಲ ಪ್ರಾಣಿ ಮತ್ತು ಮನುಷ್ಯನ ಸಂಬಂಧವಾಗಿರದೆ, ಒಂದು ತಾಯಿ ಮತ್ತು ಮಗುವಿನ ಪವಿತ್ರ ಒಡನಾಟದಂತಿರುತ್ತದೆ. ಪ್ರತಿದಿನ ಬೆಳಗ್ಗೆ ಆನೆಯನ್ನು ಕಾಡಿನಿಂದ ಬಿಡಾರಕ್ಕೆ ಕರೆತಂದು ಆಹಾರ, ಆರೈಕೆ ನೀಡುವುದು, ನಂತರ ಪ್ರವಾಸಿಗರ ವೀಕ್ಷಣೆಗೆ ವ್ಯವಸ್ಥೆ ಮಾಡುವುದು, ಮಧ್ಯಾಹ್ನ ಮತ್ತೆ ಕಾಡಿಗೆ ಬಿಟ್ಟು ಬರುವುದು ಸೇರಿದಂತೆ ಸೂರ್ಯ ಮುಳುಗುವವರೆಗೂ ಮಾವುತರು ಆನೆಗಳ ಜೊತೆಯಲ್ಲೇ ಸಮಯ ಕಳೆಯುತ್ತಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್

ಮೃತ ಸಿದ್ದಿಕ್ ಪಾಷಾ ಅವರು ಆನೆಗಳ ಜೊತೆ ವಿಶೇಷ ಬಾಂಧವ್ಯ ಇಟ್ಟುಕೊಂಡಿದ್ದು, ಈಗಾಗಲೇ ಬಿಡಾರದ ಅನೇಕ ಕಾಡಾನೆಗಳನ್ನು ಅತ್ಯಂತ ಮಮತೆಯಿಂದ ಪಳಗಿಸಿ ಹೆಸರುವಾಸಿಯಾಗಿದ್ದರು. ಆನೆಗಳ ಮಾತುಗಳನ್ನು ಕಣ್ಣ ಸನ್ನಯಿಂದಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದ ಯಜಮಾನ ಸಿದ್ದಿಕ್ ಇನ್ನಿಲ್ಲ ಎಂಬ ಕಹಿ ಸತ್ಯ ಬಿಡಾರದ ಸಹೋದ್ಯೋಗಿ ಮಾವುತರಲ್ಲಿ ಭಾರೀ ಆಘಾತ ಮೂಡಿಸಿದೆ. ಇತ್ತ ಸಿದ್ದಿಕ್ ಪ್ರೀತಿಯಿಂದ ಸಾಕಿದ್ದ ಭೀಷ್ಮ ಆನೆಯೂ ತನ್ನ ಒಡೆಯನನ್ನು ಕಳೆದುಕೊಂಡು ಅನಾಥವಾಗಿದೆ. ಭೀಷ್ಮ ಆನೆ ಇನ್ನು ಮುಂದೆ ಹೊಸ ಮಾವುತನ ಜೊತೆ ಹೊಂದಾಣಿಕೆ ಆಗಬೇಕಾದರೆ ಸಾಕಷ್ಟು ದಿನಗಳು ಬೇಕಾಗುತ್ತವೆ ಎಂದು ಬಿಡಾರದ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ. ಸಿದ್ದಿಕ್ ಅವರ ನಿಧನಕ್ಕೆ ಇಡೀ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿಗಳ ಕಂಬನಿ ಮಿಡಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಮು ಪ್ರಚೋದನಾ ಹೇಳಿಕೆ ಆರೋಪ; ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲು – Kannada News | FIR registered against Mamata Banerjee over communal remarks ahead of west Bengal Assembly elections

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ವೇಳೆ ಕೋಮು ಸಂಘರ್ಷ ಪ್ರಚೋದಿಸುವಂತಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರು ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಧರ್ಮದ ಆಧಾರದ ಮೇಲೆ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಸಾರ್ವಜನಿಕ ಸಭೆಯೊಂದರಲ್ಲಿ ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, “ನಿಮ್ಮ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಿ ಮತ್ತು ಒಗ್ಗಟ್ಟಾಗಿ ಟಿಎಂಸಿ ಪಕ್ಷಕ್ಕೆ ಮತ ಚಲಾಯಿಸಿ” ಎಂದು ಕರೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆಯು ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಮಾಡಿದ್ದಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮಾತ್ರ ನಮ್ಮ ನಾಯಕಿ, ಅಭಿಷೇಕ್ ಅಲ್ಲ; ಟಿಎಂಸಿ ಬಂಡಾಯದ ನಡುವೆ ಶತ್ರುಘ್ನ ಸಿನ್ಹಾ ಹೇಳಿಕೆ

ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಪ್ರಯತ್ನ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪಗಳ ಅಡಿಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. “ಇದು ಬಿಜೆಪಿಯ ರಾಜಕೀಯ ಪ್ರೇರಿತ ಪಿತೂರಿಯಾಗಿದೆ. ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿ, ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ಬಳಸಿಕೊಂಡು ಇಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ” ಎಂದು ಟಿಎಂಸಿ ನಾಯಕರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ನಾನು ಬೇಕಾ, ಅಭಿಷೇಕ್ ಬ್ಯಾನರ್ಜಿ ಬೇಕಾ ನಿರ್ಧರಿಸಿ; ಮಮತಾಗೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸವಾಲು

ಮೇ 20ರಂದು ದಕ್ಷಿಣ ಕೊಲ್ಕತ್ತಾದ ನೇತಾಜಿ ನಗರ ಪೊಲೀಸ್ ಠಾಣೆಗೆ ಸಲ್ಲಿಕೆಯಾಗಿದ್ದ ದೂರಿನ ಪ್ರಕಾರ, ಸ್ಥಳೀಯ ನಿವಾಸಿ ತುಷಾರ್ ಕಾಂತಿ ದಾಸ್ ಎಂಬುವವರು, ಸಾರ್ವಜನಿಕ ಸಭೆಯೊಂದರಲ್ಲಿ ಮಮತಾ ಬ್ಯಾನರ್ಜಿ ಅವರು ನೀಡಿದ ಹೇಳಿಕೆಯು ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಸಮುದಾಯಗಳ ನಡುವೆ ಭಯ, ತಪ್ಪು ತಿಳುವಳಿಕೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಭಾರತ- ಅಫ್ಘನ್ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs Afghanistan ODI Series 2026: Full Schedule, Squads and Match Details

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಇದೀಗ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜೂನ್ 13 ರಿಂದ ಆರಂಭವಾಗಲಿದೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಏಕದಿನ ಸರಣಿ ಉಭಯ ತಂಡಗಳಿಗೂ ಬಹುಮುಖ್ಯವಾಗಿದೆ. ಆದಾಗ್ಯೂ ಈ ಸರಣಿಯಲ್ಲಿ ಕೊಹ್ಲಿ (Virat Kohlli) ಆಡುತ್ತಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಆದರೆ ಮತ್ತೊಬ್ಬ ಅನುಭವಿ ಆಟಗಾರ ರೋಹಿತ್ ಶರ್ಮಾ ಆಡುತ್ತಿರುವುದು ಅಭಿಮಾನಿಗಳ ಬೇಸರವನ್ನು ಕೊಂಚ ಕಡಿಮೆ ಮಾಡಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಜೂನ್ 13 ರಂದು ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣ, ಧರ್ಮಶಾಲಾದಲ್ಲಿ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.

IND vs AFG: ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್

ಉಭಯ ತಂಡಗಳು

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಸ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಷಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ನಂಗ್ಯಾಲ್ ಖರೋಟೈ, ಎಎಮ್ ಗಜನ್ಫರ್, ಜಿಯಾ ಯು ರೆಹಮಾನ್ ಶರೀಫಿ, ಫರೀದ್ ಮಲಿಕ್, ಬಿಲಾಲ್ ಸಾಮಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್ – Kannada News | CM Vijays Devout Visit to Kollur Mookambika Temple Continues Political Tradition

ಉಡುಪಿ, ಜೂ.12: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಿಶ್ವಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇದೇ ವೇಳೆ ಅವರು ಮೂಕಾಂಬಿಕಾ ದೇವಿಗೆ ಭಕ್ತಿಯಿಂದ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು. ದೇಗುಲಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಸುಮಾರು 30 ನಿಮಿಷಗಳ ಕಾಲ ದೇವಾಲಯದ ಆವರಣದಲ್ಲಿ ಕಳೆದ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು ಎಂದು ಅಲ್ಲಿ ಅರ್ಚಕರು ಹೇಳಿದರು. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಎಂ.ಜಿ. ರಾಮಚಂದ್ರನ್ (MGR) ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು. ತಮಗಿಂತ ಮುಂಚೆ ತಮಿಳುನಾಡನ್ನು ಆಳಿದ ಧೀಮಂತ ನಾಯಕ ನೀಡಿದ್ದ ಆ ಐತಿಹಾಸಿಕ ಚಿನ್ನದ ಖಡ್ಗವನ್ನು ಸಿಎಂ ವಿಜಯ್ ಅವರು ಕುತೂಹಲದಿಂದ ವೀಕ್ಷಿಸಿ, ಅದರ ಹಿನ್ನೆಲೆಯನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡರು. ತಮಿಳುನಾಡು ಮುಖ್ಯಮಂತ್ರಿ ಬರುವ ವಿಷಯ ತಿಳಿದು ಕೊಲ್ಲೂರು ದೇಗುಲದ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version