ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್: ಶಾಸಕ ಸ್ಥಾನದ ಅನರ್ಹತೆ ಆದೇಶ ರದ್ದುಗೊಳಿಸಿದ ವಿಧಾನಸಭೆ ಸಚಿವಾಲಯ – Kannada News | Vinay kulkarnis mla disqualification revoked by assembly high court grants bail

ಬೆಂಗಳೂರು ಆ.3: ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್ ಸಿಕ್ಕ ಬೆನ್ನಲ್ಲೇ, ಅವರ ಶಾಸಕ ಸ್ಥಾನದ ಅನರ್ಹತೆ ಆದೇಶವನ್ನು ವಿಧಾನಸಭೆ ಸಚಿವಾಲಯ ಅಧಿಕೃತವಾಗಿ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಶಾಸಕರಾಗಿ ಕಾರ್ಯನಿರ್ವಹಿಸಲು ಇದ್ದ ಕಾನೂನು ಅಡಚಣೆಗಳು ನಿವಾರಣೆಯಾಗಿವೆ.

ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯವು ವಿನಯ್ ಕುಲಕರ್ಣಿ ಅವರ ಅನರ್ಹತೆಯನ್ನು ಹಿಂಪಡೆದು ನೂತನ ಸುತ್ತೋಲೆ ಹೊರಡಿಸಿದೆ. ಅನರ್ಹತೆ ಆದೇಶ ರದ್ದಾಗಿರುವುದರಿಂದ ವಿನಯ್ ಕುಲಕರ್ಣಿ ಅವರು ಶಾಸಕರಾಗಿ ತಮ್ಮ ಕರ್ತವ್ಯಗಳನ್ನು ಮರುಆರಂಭಿಸಲಿದ್ದಾರೆ.

ಹೈಕೋರ್ಟ್ ತೀರ್ಪು ಹಾಗೂ ವಿಧಾನಸಭೆ ಸಚಿವಾಲಯದ ಆದೇಶ ಹೊರಬಿದ್ದ ಬೆನ್ನಲ್ಲೇ ಧಾರವಾಡ ಹಾಗೂ ಬೆಳಗಾವಿ ಭಾಗದ ವಿನಯ್ ಕುಲಕರ್ಣಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜಾಮೀನು: ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆಂದ ಹೋರಾಟಗಾರ ಬಸವರಾಜ್ ಕೊರವರ್

ಯೋಗೀಶ್ ಗೌಡ ಕೊಲೆ ಪ್ರಕರಣ: ಹೈಕೋರ್ಟ್‌ನಿಂದ ತೀರ್ಪಿಗೆ ತಡೆಯಾಜ್ಞೆ, 10 ಜನರಿಗೆ ಜಾಮೀನು

ಧಾರವಾಡದ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಶುಕ್ರವಾರ ಪ್ರಮುಖ ತೀರ್ಪು ಹೊರಬಿದ್ದಿದೆ. ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ತಡೆಹಿಡಿದು, ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ವಿನಯ್ ಕುಲಕರ್ಣಿ ಅವರನ್ನು ದೋಷಿ ಎಂದು ಪ್ರಕಟಿಸಿದ್ದ ತೀರ್ಪಿಗೂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಜತೆಗೆ 5 ಲಕ್ಷ ರೂ. ಮೊತ್ತದ ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಹಾಗೂ ಜಿ. ಬಸವರಾಜ ಅವರಿದ್ದ ದ್ವಿಪೀಠ ಆದೇಶಿಸಿದೆ. ವಿನಯ್ ಕುಲಕರ್ಣಿ ಅವರೊಂದಿಗೆ ಚಂದ್ರಶೇಖರ ಇಂಡಿ (ಚಂದು ಮಾಮ), ದಿನೇಶ್, ಅಶ್ವತ್ಥ್‌, ಸುನಿಲ್, ನಜೀರ್ ಅಹ್ಮದ್, ಷಾನವಾಜ್, ನೂತನ, ಹರ್ಷಿತ್ ಹಾಗೂ ಚನ್ನಕೇಶವ ಟಿಂಗರಿಕರ್‌ಗೂ ಜಾಮೀನು ಲಭಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಾರೂ ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆಯಂತಹ ನಿರ್ಧಾರ ಕೈಗೊಳ್ಳಬಾರದು’: ಶಾಸಕರಿಗೆ ಬಿಕೆ ಹರಿಪ್ರಸಾದ್ ಮನವಿ – Kannada News | Karnataka Cabinet Expansion: B.K. Hariprasad Urges MLAs Not to Resign in a Fit of Emotion

ಬೆಂಗಳೂರು, ಆಗಸ್ಟ್​​ 03: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ (congress) ಶಾಸಕರನ್ನು ಸಮಾಧಾನಪಡಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (bk hariprasad)​ ಮುಂದಾಗಿದ್ದಾರೆ. ‘ಶಾಸಕರ ನೋವು ಮತ್ತು ಭಾವನೆಗಳನ್ನು ಪಕ್ಷವು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಯಾರೂ ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆಯಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.

ಶಾಸಕರು  ಅಸಮಾಧಾನ ವ್ಯಕ್ತಪಡಿಸಿದ್ದು ನನ್ನ ಗಮನಕ್ಕೆ ಬಂದಿದೆ ಎಂದ ಬಿಕೆ ಹರಿಪ್ರಸಾದ್​

ಈ ಕುರಿತಾಗಿ ಟ್ವೀಟ್ ಮಾಡಿರುವ ಬಿ.ಕೆ.ಹರಿಪ್ರಸಾದ್​, ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನಲೆಯಲ್ಲಿ ನಮ್ಮ ಶಾಸಕರು ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರದಲ್ಲಿ ಜವಾಬ್ದಾರಿ ವಹಿಸಬೇಕೆಂಬ ಅಪೇಕ್ಷೆ ಇರುವುದು ಸಹಜ. ಅವರ ಭಾವನೆಗಳನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ, ಪ್ರತಿಯೊಬ್ಬರ ಸೇವೆ, ಅನುಭವ ಮತ್ತು ಕೊಡುಗೆಯನ್ನು ಗೌರವದಿಂದಲೇ ಪರಿಗಣಿಸುತ್ತದೆ’ ಎಂದರು.

ಬಿಕೆ ಹರಿಪ್ರಸಾದ್​ ಟ್ವೀಟ್ 

‘ಸಚಿವ ಸಂಪುಟದ ಸ್ಥಾನಗಳು ಸೀಮಿತವಾಗಿರುತ್ತವೆ. ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ವಿವಿಧ ಸಮುದಾಯಗಳ ಪ್ರಾತಿನಿಧ್ಯ, ಅನುಭವ, ಹೊಸ ನಾಯಕತ್ವ ಹಾಗೂ ಆಡಳಿತದ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ರಾಜ್ಯದ ನಾಯಕತ್ವ ಒಟ್ಟಾಗಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಜನಸೇವೆ ಮಾಡಲು ಅನೇಕ ಅವಕಾಶಗಳಿವೆ

‘ಸಚಿವ ಸ್ಥಾನ ಸಿಗದಿರುವುದು ಯಾರೊಬ್ಬರ ರಾಜಕೀಯ ಸೇವೆಯ ನಿರಾಕರಣೆಯೂ ಅಲ್ಲ, ಅವರ ಸಾಮರ್ಥ್ಯದ ಮೇಲಿನ ಅನುಮಾನವೂ ಅಲ್ಲ. ಅಧಿಕಾರವೇ ಪಕ್ಷಸೇವೆಯ ಏಕೈಕ ಮಾನದಂಡವಲ್ಲ. ಸರ್ಕಾರದೊಳಗೆ, ಪಕ್ಷದ ಸಂಘಟನೆಯಲ್ಲಿ ಹಾಗೂ ವಿವಿಧ ಜವಾಬ್ದಾರಿಗಳ ಮೂಲಕ ಜನಸೇವೆ ಮಾಡಲು ಅನೇಕ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಪಕ್ಷದ ಪ್ರತಿಯೊಬ್ಬ ಅರ್ಹ ನಾಯಕರಿಗೂ ಅವರ ಅನುಭವ ಮತ್ತು ಸಾಮರ್ಥ್ಯಕ್ಕೆ ತಕ್ಕ ಗೌರವ ದೊರೆಯಲಿದೆ’ ಎಂದಿದ್ದಾರೆ.

ರಾಜೀನಾಮೆ ತೀರ್ಮಾನ ಕೈಗೊಳ್ಳಬಾರದು 

‘ಭಾವೋದ್ವೇಗದಲ್ಲಿ ರಾಜೀನಾಮೆಯಂತಹ ತೀರ್ಮಾನಗಳನ್ನು ಕೈಗೊಳ್ಳಬಾರದು. ವೈಯಕ್ತಿಕವಾಗಿ ಮಾತನಾಡಿ, ನಿಮ್ಮ ನೋವು ಮತ್ತು ಅಭಿಪ್ರಾಯಗಳನ್ನು ಪಕ್ಷದ ರಾಷ್ಟ್ರೀಯ ನಾಯಕತ್ವದ ಗಮನಕ್ಕೆ ತರಲಾಗುವುದು. ಮಾತುಕತೆ ಮತ್ತು ಪರಸ್ಪರ ವಿಶ್ವಾಸದ ಮೂಲಕ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುವ ವಿಶಾಲ ಮನಸ್ಸು ಕಾಂಗ್ರೆಸ್ ಪಕ್ಷಕ್ಕಿದೆ’ ಎಂದು ಹೇಳಿದ್ದಾರೆ.

‘ಸಚಿವರಾಗಿ ಆಯ್ಕೆಯಾಗಿರುವವರು ಪಕ್ಷದ ನಿಷ್ಠಾವಂತರು, ಸಮರ್ಥರು ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವವರು. ಅವರ ಆಯ್ಕೆಯನ್ನು ಎಲ್ಲರೂ ಗೌರವಿಸಿ, ಆಡಳಿತದಲ್ಲಿ ಯಶಸ್ವಿಯಾಗಲು ಸಹಕಾರ ನೀಡಬೇಕು. ನಮ್ಮ ಮುಂದೆ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಮತ್ತು ಜನಪರ ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ದೊಡ್ಡ ಜವಾಬ್ದಾರಿಯಿದೆ’ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ ಪಕ್ಷದ ಲೆಟರ್​​ ಹೆಡ್​​ನಲ್ಲಿ ಸಾಂವಿಧಾನಿಕ ಹುದ್ದೆಗಳ ನೇಮಕದ ಬಗ್ಗೆ ಉಲ್ಲೇಖ: ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಕಿಡಿ

‘ವೈಯಕ್ತಿಕ ಆಕಾಂಕ್ಷೆಗಳಿಗಿಂತ ಪಕ್ಷದ ಹಿತ, ಸರ್ಕಾರದ ಸ್ಥಿರತೆ ಮತ್ತು ಕರ್ನಾಟಕದ ಜನರ ನಿರೀಕ್ಷೆಗಳು ಮುಖ್ಯವಾಗಬೇಕು. ಎಲ್ಲ ಶಾಸಕರು ಹಾಗೂ ನೂತನ ಸಚಿವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಕಾಂಗ್ರೆಸ್ ಪಕ್ಷದ ಮೇಲಿರುವ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು’ ಎಂದು ಬಿ.ಕೆ.ಹರಿಪ್ರಸಾದ್​ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಚೀನಾದ 250 ಫಿರಂಗಿಗಳ ನಿಯೋಜನೆ – Kannada News | Pakistan deployed 250 SH 15 Chinese howitzers along Indian border

ಇಸ್ಲಾಮಾಬಾದ್, ಆಗಸ್ಟ್ 3: ಭಾರತದ ಗಡಿ ಭಾಗದಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನ (Pakistan) ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಚೀನಾದಿಂದ ಖರೀದಿಸಿದ ಅತ್ಯಾಧುನಿಕ SH-15 ವೀಲ್ಡ್ ಸೆಲ್ಫ್-ಪ್ರೊಪೆಲ್ಡ್ ಫಿರಂಗಿಗಳನ್ನು ಭಾರತೀಯ ಗಡಿಯುದ್ದಕ್ಕೂ ಬೃಹತ್ ಪ್ರಮಾಣದಲ್ಲಿ ನಿಯೋಜಿಸಿದೆ. ಗಡಿ ನಿಯಂತ್ರಣ ರೇಖೆ (LoC) ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಕೆನಾನ್ ಮತ್ತು ಫಿರಂಗಿ ಪಡೆಯನ್ನು ಬಲಪಡಿಸುವ ಉದ್ದೇಶದಿಂದ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಉನ್ನತ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಏನಿದು SH-15 ಫಿರಂಗಿ ಪಡೆ?:

SH-15 ಎಂಬುದು ಚೀನಾದ ನೋರಿಂಕೋ (NORINCO) ಸಂಸ್ಥೆಯು ಅಭಿವೃದ್ಧಿಪಡಿಸಿದ 155mm ವೀಲ್ಡ್ ಹೌವಿಟ್ಜರ್ ಫಿರಂಗಿಯಾಗಿದೆ. ಇದು 6×6 ಟ್ರಕ್ ಆಧಾರಿತ ವ್ಯವಸ್ಥೆಯಾಗಿದ್ದು, ಯಾವುದೇ ರೀತಿಯ ಕಠಿಣ ಹಾಗೂ ಪರ್ವತದ ಭೂಪ್ರದೇಶಗಳಲ್ಲಿ ಕೂಡ ಅತ್ಯಂತ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಫಿರಂಗಿಗಳು ಸಾಮಾನ್ಯ ಗುಂಡುಗಳ ಮೂಲಕ ಸುಮಾರು 30ರಿಂದ 39 ಕಿ.ಮೀ. ಹಾಗೂ ರಾಕೆಟ್ ಅಸಿಸ್ಟೆಡ್ ಗನ್‌ಗಳ ಮೂಲಕ 53 ಕಿ.ಮೀ.ವರೆಗಿನ ದೂರದಲ್ಲಿರುವ ಶತ್ರುಗಳ ನೆಲೆಗಳನ್ನು ಧ್ವಂಸ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದು ಡಿಜಿಟಲ್ ಫೈರ್-ಕಂಟ್ರೋಲ್ ಸಿಸ್ಟಮ್, ರಾಡಾರ್ ಹಾಗೂ ಲೇಸರ್ ರೇಂಜ್ ಫೈಂಡರ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು

ಪಾಕಿಸ್ತಾನವು ಚೀನಾದಿಂದ ಒಟ್ಟು 236ಕ್ಕೂ ಹೆಚ್ಚು SH-15 ಫಿರಂಗಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಅವುಗಳಲ್ಲಿ ಭಾರಿ ಪ್ರಮಾಣದ ಫಿರಂಗಿಗಳನ್ನು ಭಾರತೀಯ ಗಡಿಗೆ ಹತ್ತಿರವಿರುವ ಪ್ರಮುಖ ಸೇನಾ ವಿಭಾಗಗಳಿಗೆ ಹಸ್ತಾಂತರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ಗಡಿ ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಸಮೀಪ ಇವುಗಳನ್ನು ನಿಯೋಜಿಸಲಾಗಿದೆ.

ಮೇ 2025ರಲ್ಲಿ ಭಾರತವು ಗಡಿ ನಿಯಂತ್ರಣ ರೇಖೆ (LoC) ಮತ್ತು ಪಾಕಿಸ್ತಾನದ ಒಳಗಿನ ಉಗ್ರರ ನೆಲೆಗಳ ಮೇಲೆ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನಂತರ, ಪಾಕಿಸ್ತಾನ ತನ್ನ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಮುಂದಾಗಿದೆ.

ಇದನ್ನೂ ಓದಿ: ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಗಡಿಗಳಲ್ಲಿ ಪ್ರಬಲ ರೈಲು ಜಾಲ ಅಳವಡಿಕೆಗೆ ಭಾರತ ಯೋಜನೆ; 45,000 ಕೋಟಿ ರೂ ಹೂಡಿಕೆ ಸಾಧ್ಯತೆ

ಭಾರತೀಯ ಸೇನೆಯ ಸಿದ್ಧತೆ:

ಪಾಕಿಸ್ತಾನದ ಈ ನಡೆಯನ್ನು ಭಾರತೀಯ ರಕ್ಷಣಾ ಪಡೆಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿವೆ. ಭಾರತೀಯ ಸೇನೆಯು ಈಗಾಗಲೇ ಗಡಿ ಪ್ರದೇಶಗಳಲ್ಲಿ ತನ್ನದೇ ಆದ ಕೌಂಟರ್-ಆರ್ಟಿಲರಿ ವ್ಯವಸ್ಥೆಯನ್ನು ಸಜ್ಜುಗೊಳಿಸಿದೆ. ಭಾರತವು ತನ್ನ ಗಡಿಯಲ್ಲಿ 155mm ಸ್ವಯಂಚಾಲಿತ ಕೆ-9 ವಜ್ರ ಫಿರಂಗಿಗಳನ್ನು ನಿಯೋಜಿಸಿದೆ. ಅಮೆರಿಕ ನಿರ್ಮಿತ M777 ಫಿರಂಗಿಗಳನ್ನು ಎತ್ತರದ ಪರ್ವತ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ತಕ್ಷಣವೇ ರವಾನಿಸುವ ಸಾಮರ್ಥ್ಯ ಭಾರತಕ್ಕಿದೆ. ಸ್ವದೇಶಿ ನಿರ್ಮಿತ ಧನುಷ್ ಫಿರಂಗಿ ಪಡೆ ಮತ್ತು ‘ಪಿನಾಕಾ’ ರಾಕೆಟ್ ಲಾಂಚರ್ ಸಿಸ್ಟಮ್‌ಗಳು ಭಾರತದ ಗಡಿಯಲ್ಲಿ ಎಲ್ಲ ರೀತಿಯ ಸವಾಲನ್ನು ಎದುರಿಸಲು ಸಂಪೂರ್ಣ ಸಜ್ಜಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರಿಜ್‌ಭೂಷಣ್ ಸಿಂಗ್​ಗೆ ಬಿಗ್ ರಿಲೀಫ್; ಹೋರಾಟ ನಿಲ್ಲಿಸಲ್ಲ ಎಂದ ವಿನೇಶ್ ಫೋಗಟ್ – Kannada News | Brijbhushan Acquitted: Wrestlers Vow to Appeal physical Harassment Verdict

ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ (Brijbhushan Sharan Singh) ಮತ್ತು ಸಹ ಆರೋಪಿ ವಿನೋದ್ ತೋಮರ್ ಅವರನ್ನು ಖುಲಾಸೆಗೊಳಿಸಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು ಈ ತೀರ್ಪು ನೀಡಿದ್ದಾರೆ.

ಹೈಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ

ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ ಬ್ರಿಜ್ ಭೂಷಣ್ ವಿರುದ್ಧ ಆಂದೋಲನದ ನೇತೃತ್ವ ವಹಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ವಿನೇಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ, ‘ನ್ಯಾಯಾಲಯದ ತೀರ್ಪಿನಿಂದ ತಾನು ಅಸಮಾಧಾನಗೊಂಡಿದ್ದೇನೆ. ಈ ನಿರ್ಧಾರವನ್ನು ನಾವು ಹೈಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ. ಆಡಳಿತ ಪಕ್ಷದ ಪ್ರಬಲ ನಾಯಕನ ವಿರುದ್ಧ ಬೀದಿಗಿಳಿದು ಎಫ್‌ಐಆರ್ ದಾಖಲಿಸಲು ನಮಗೆ ಸಾಕಷ್ಟು ಧೈರ್ಯ ಬೇಕಾಯಿತು. ತಮ್ಮ ಅಧಿಕಾರ ಮತ್ತು ಗಾಂಭೀರ್ಯವನ್ನು ಬಳಸಿಕೊಂಡು, ಬ್ರಿಜ್‌ಭೂಷಣ್ ಅನೇಕ ಹುಡುಗಿಯರನ್ನು ಬೆದರಿಸಿ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು. ಆದರೆ ಅನೇಕ ಮಹಿಳಾ ಕುಸ್ತಿಪಟುಗಳು ಮುಂದೆ ಬಂದು ನ್ಯಾಯಾಲಯದಲ್ಲಿ ಬ್ರಿಜ್‌ಭೂಷಣ್ ವಿರುದ್ಧ ಹೋರಾಡುತ್ತಲೇ ಇದ್ದರು.

ತೀವ್ರ ದುಃಖ ತಂದಿದೆ

ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪಗಳಲ್ಲಿ ನ್ಯಾಯಾಲಯವು ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಶಿಕ್ಷೆಗೆ ಒಳಪಡಿಸದಿರುವುದು ನಮಗೆ ತೀವ್ರ ದುಃಖ ತಂದಿದೆ. ಆರಂಭದಿಂದಲೂ, ಇಡೀ ವ್ಯವಸ್ಥೆ, ಸರ್ಕಾರ ಮತ್ತು ವ್ಯವಸ್ಥೆಯು ಬ್ರಿಜ್‌ಭೂಷಣ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಮಹಿಳಾ ಕುಸ್ತಿಪಟುಗಳು ತಮ್ಮ ವಕೀಲರಿಗೆ ಸೂಚಿಸಿದ್ದಾರೆ ಮತ್ತು ಇದನ್ನು ಶೀಘ್ರದಲ್ಲೇ ಮಾಡಲಾಗುತ್ತದೆ. ನಾವು ಭರವಸೆಯನ್ನು ಬಿಟ್ಟುಕೊಟ್ಟಿಲ್ಲ. ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

ವಿನೇಶ್ ಫೋಗಟ್ ಜೊತೆಗೆ ತೀರ್ಪಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಬಜರಂಗ್ ಪುನಿಯಾ, ‘ಇಂದಿನ ತೀರ್ಪು ಎಲ್ಲಾ ಅಧಿಕಾರವು ಬ್ರಿಜ್ ಭೂಷಣ್ ಅವರ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಅವರು ಸಾಕ್ಷಿಗಳನ್ನು ತಮ್ಮ ಪರವಾಗಿ ಮಾಡಿಕೊಂಡಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ಯಾವ ಆಧಾರದ ಮೇಲೆ ಖುಲಾಸೆಗೊಳಿಸಲಾಯಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ.

ಏನಿದು ಪ್ರಕರಣ?

2023 ರಂದು ಅಂದಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ 6 ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ಆರೋಪ ತೀವ್ರ ಸ್ವರೂಪ ಪಡೆದು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ಬ್ರಿಜ್‌ಭೂಷಣ್ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ತಿಂಗಳುಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ನಂತರ ದೆಹಲಿ ಪೊಲೀಸರು 2023 ರಲ್ಲಿ ಎಫ್‌ಐಆರ್ ದಾಖಲಿಸಿ ಸುಮಾರು 1500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೆಸ್ಟ್ ಸರಣಿ ನಂತರ ಹೊಸ ಟಿ20 ಲೀಗ್​ನಲ್ಲಿ ಕಣಕ್ಕಿಳಿಯಲಿರುವ ಶುಭ್​ಮನ್ ಗಿಲ್ – Kannada News | Shubman Gill Joins Share e Punjab T20 League to Maintain Form for Team India

ಶೇರ್-ಎ-ಪಂಜಾಬ್ ಟಿ20 ಲೀಗ್‌ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಿಲ್, ‘ಶೇರ್-ಎ-ಪಂಜಾಬ್ ಟಿ20 ಲೀಗ್ ಯುವ ಕ್ರಿಕೆಟಿಗರಿಗೆ ಪಂಜಾಬ್ ಮತ್ತು ಭಾರತಕ್ಕಾಗಿ ಆಡುವತ್ತ ತಮ್ಮ ಪ್ರತಿಭೆ ಮತ್ತು ಪ್ರಗತಿಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಪಂಜಾಬ್ ಯಾವಾಗಲೂ ಅತ್ಯುತ್ತಮ ಕ್ರಿಕೆಟಿಗರನ್ನು ಉತ್ಪಾದಿಸಿದೆ, ಮತ್ತು ಈ ಲೀಗ್ ಇನ್ನೂ ಅನೇಕರನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ(PC-PTI).

Source link

Minister Vijayanand Kashappanavar Oath: ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ – Kannada News | DK Shivakumar Cabinet: Minister Vijayanand Kashappanavar Takes Oath in the Name of Panchapithadheeshwara

ಬೆಂಗಳೂರು, ಆಗಸ್ಟ್​ 03: ಸಿಎಂ ಡಿಕೆ ಶಿವಕುಮಾರ್​ ಸಂಪುಟದಲ್ಲಿ 19 ಸಚಿವರ ಪೈಕಿ ವಿಜಯಾನಂದ ಕಾಶಪ್ಪನವರ್​​​ ಕೂಡ ಒಬ್ಬರು. ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದ ಕಾಶಪ್ಪನವರ್, ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ವೇಳೆ ತಡಬಡಾಯಿಸಿದ ಕಾಶಪ್ಪನವರ್, ಕೂಡಲಸಂಗಮೇಶ್ವರ, ಪಂಚಪೀಠಾದೀಶ್ವರರು, ಬುದ್ಧ, ಬಸವ, ಅಂಬೇಡ್ಕರ್‌ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೀಗೆ ದೇವರ ಸಾಲು ಹೆಚ್ಚಾಗ್ತಿದ್ದಂತೆ ರಾಜ್ಯಪಾಲರಿಂದ ಸೂಚನೆ ಬಂತು. ಕೊನೆಗೆ ಸಂವಿಧಾನದ ಹೆಸರು ಹೇಳಿ ತಮ್ಮ ಪದಗ್ರಹಣ ಮುಗಿಸಿದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ ಉಪೇಂದ್ರ – Kannada News | Priyanka Upendra Reveals Marrying Early Cost Her Movies with Top Actors

ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಆದರೂ ಕೂಡ ಕೆಲವು ಹೀರೋಗಳ ಜೊತೆ ನಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಆ ದಿನಗಳನ್ನು ನೆನಪಿಸಿಕೊಂಡರು. ‘ನಾನು ಬೇಗ ಮದುವೆ ಆದೆ. ತುಂಬ ಹೀರೋಗಳ ಜೊತೆ ನಟಿಸೋಕೆ ಆಗಲಿಲ್ಲ. ಆ ಸಂದರ್ಭದಲ್ಲಿ ಸುದೀಪ್, ದರ್ಶನ್ ಹೀರೋ ಆಗಿದ್ದರು. ಅವರ ಜೊತೆ ನಟಿಸೋಕೆ ಅವಕಾಶ ಸಿಗಲಿಲ್ಲ. ನಂತರ ಗಣೇಶ್ ಬಂದರು. ತಮಿಳಿನಲ್ಲಿ ಅರ್ಜುನ್ ಜೊತೆ ನಾನು ಸಿನಿಮಾ ಮಾಡಬೇಕಿತ್ತು. ಅದು ಕೂಡ ಆಗಲಿಲ್ಲ. ಒಂದು ವೇಳೆ ಟೈಮ್ ಟ್ರಾವೆಲ್ ಮಾಡುವ ಹಾಗಿದ್ದರೆ ಎಲ್ಲ ಹೀರೋಗಳು ನನಗೆ ಇಷ್ಟ. ಡಾ. ರಾಜ್​ಕುಮಾರ್, ಶಂಕರ್​ನಾಗ್ ನನಗೆ ಬಹಳ ಇಷ್ಟ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿ ಇರುತ್ತಿತ್ತು’ ಎಂದು ಪ್ರಿಯಾಂಕಾ ಉಪೇಂದ್ರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು – Kannada News | RBI bringing new Fixed Deposit rules from October 1st

ಫಿಕ್ಸೆಡ್ ಡಿಪಾಸಿಟ್ (Fixed Deposit) ಅಥವಾ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಠೇವಣಿದಾರರ ಹಿತರಕ್ಷಣೆಗಾಗಿ ಆರ್‌ಬಿಐ ಠೇವಣಿ ಬಡ್ಡಿದರದ ನಿರ್ದೇಶನಗಳು, 2026 (Interest Rate on Deposits Directions, 2026) ಅಡಿಯಲ್ಲಿ ಹೊಸ ನಿಯಮಗಳನ್ನು ಪರಿಷ್ಕರಿಸಿದ್ದು, ಇವು 2026 ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಬದಲಾಗಲಿರುವ ಪ್ರಮುಖ ಬ್ಯಾಂಕ್ ಡೆಪಾಸಿಟ್ ನಿಯಮಗಳು ಈ ಕೆಳಕಂಡಂತಿವೆ:

ಎಲ್ಲಾ ಶಾಖೆಗಳಲ್ಲೂ ಒಂದೇ ರೀತಿಯ ಬಡ್ಡಿದರ

ಹೊಸ ನಿಯಮದಂತೆ, ಬ್ಯಾಂಕ್‌ಗಳು ಒಂದೇ ದಿನದಂದು ಸ್ವೀಕರಿಸುವ ಒಂದೇ ರೀತಿಯ ಠೇವಣಿಗಳಿಗೆ (ಸಮಾನ ಮೊತ್ತ ಮತ್ತು ಅವಧಿ) ತಮ್ಮ ಎಲ್ಲಾ ಶಾಖೆಗಳಲ್ಲಿ ಒಂದೇ ರೀತಿಯ ಬಡ್ಡಿದರವನ್ನು (Uniform Interest Rate) ನೀಡಬೇಕು. ಬ್ರ್ಯಾಂಚ್​ನಿಂದ ಬ್ರ್ಯಾಂಚ್​ಗೆ ಬಡ್ಡಿದರದಲ್ಲಿ ಬದಲಾವಣೆ ಇರಕೂಡದು ಎಂಬುದು ಆರ್​ಬಿಐನ ಹೊಸ ಕಟ್ಟಳೆ.

ಅಂದರೆ, ಗ್ರಾಹಕರು ಬೇರೆ ಬೇರೆ ಶಾಖೆಗೆ ಹೋದರೂ ಅಥವಾ ಚೌಕಾಶಿ (Negotiation) ಮಾಡಿದರೂ ವಿಭಿನ್ನ ಬಡ್ಡಿದರಗಳನ್ನು ಪಡೆಯಲು ಇನ್ನು ಮುಂದೆ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ

ಬಲ್ಕ್ ಡಿಪಾಸಿಟ್‌ಗಳಿಗೆ ಹೆಚ್ಚಿನ ನಮ್ಯತೆ

₹2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬೃಹತ್ ಠೇವಣಿಗಳಿಗೆ (Bulk Deposits) ಬ್ಯಾಂಕ್‌ಗಳು ಲಿಕ್ವಿಡಿಟಿ ಕವರೇಜ್ ರೇಶಿಯೋ (LCR) ಚೌಕಟ್ಟನ್ನು ಆಧರಿಸಿ ಪ್ರತ್ಯೇಕ ಬಡ್ಡಿದರಗಳನ್ನು ನಿಗದಿಪಡಿಸಲು ಆರ್‌ಬಿಐ ಅವಕಾಶ ನೀಡಿದೆ.

ಪಾರದರ್ಶಕತೆ ಮತ್ತು ಜಾಲತಾಣದಲ್ಲಿ ಪ್ರಕಟಣೆ

ಪ್ರತಿಯೊಂದು ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರಗಳನ್ನು ಆನ್‌ಲೈನ್‌ನಲ್ಲಿ ಮುಂಚಿತವಾಗಿಯೇ ಸಾರ್ವಜನಿಕವಾಗಿ ಪ್ರಕಟಿಸಬೇಕು.

ಬೃಹತ್ ಠೇವಣಿಗಳ ಬಡ್ಡಿದರಗಳನ್ನು ಪ್ರತಿದಿನ ಬೆಳಿಗ್ಗೆ 10:00 ರಿಂದ 10:10 ರೊಳಗೆ ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

ಸಾಮಾನ್ಯ ಎಫ್‌ಡಿ ಹೂಡಿಕೆದಾರರ ಮೇಲಾಗುವ ಪರಿಣಾಮಗಳೇನು?

ಸಾಮಾನ್ಯ ರಿಟೇಲ್ ಹೂಡಿಕೆದಾರರಿಗೆ ಬಡ್ಡಿದರಗಳ ಹೋಲಿಕೆ ಮಾಡುವುದು ಮತ್ತು ಮಾಹಿತಿ ಪಡೆಯುವುದು ಅತ್ಯಂತ ಸರಳ ಹಾಗೂ ಪಾರದರ್ಶಕವಾಗಲಿದೆ.

ಆರ್​ಬಿಐನ ಈ ನೂತನ ನಿಯಮಗಳು ಬ್ಯಾಂಕ್‌ಗಳು ಬಡ್ಡಿದರವನ್ನು ನಿಗದಿಪಡಿಸುವ ಮತ್ತು ಪ್ರಕಟಿಸುವ ವಿಧಾನಕ್ಕೆ ಸಂಬಂಧಿಸಿವೆ. ಇದರಿಂದ ಎಫ್‌ಡಿ ಬಡ್ಡಿದರಗಳು ದಿಢೀರನೇ ಹೆಚ್ಚಾಗುವುದಿಲ್ಲ ಅಥವಾ ಕಡಿಮೆಯಾಗುವುದಿಲ್ಲ.

ಈಗಾಗಲೇ ಚಾಲ್ತಿಯಲ್ಲಿರುವ ಎಫ್‌ಡಿಗಳಿಗೆ ಅವುಗಳ ಮುಕ್ತಾಯದ ಅವಧಿಯವರೆಗೆ (Maturity) ಒಪ್ಪಂದದ ಪ್ರಕಾರವೇ ಬಡ್ಡಿ ಸಿಗಲಿದೆ. ಆದರೆ ಅಕ್ಟೋಬರ್ 1 ರ ನಂತರ ನವೀಕರಿಸುವ ಅಥವಾ ಹೊಸದಾಗಿ ಮಾಡುವ ಎಫ್‌ಡಿಗಳಿಗೆ ಮಾತ್ರ ಹೊಸ ನಿಯಮ ಅನ್ವಯಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲಾಹ್ ಹೆಸರಲ್ಲಿ ಪ್ರಮಾಣ ವಚನ: ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು, ಆ.3: ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕ ರಾಜ್ಯದ ನೂತನ ಸಚಿವರಾಗಿ ಇಂದು ಅಧಿಕಾರ ಮತ್ತು ಗೋಪ್ಯತಾ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಮೀರ್ ಅಹ್ಮದ್ ಖಾನ್ ಅವರು ಅಲ್ಲಾಹ್ ಮತ್ತು ತಮ್ಮ ತಾಯಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಎತ್ತಿಹಿಡಿಯುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿ ಮತ್ತು ಕರ್ನಾಟಕ ರಾಜ್ಯದ ಸಚಿವರಾಗಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸುವುದಾಗಿ ಅವರು ಅಚಲವಾಗಿ ಘೋಷಿಸಿದರು. ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ, ಪ್ರೀತಿ ಅಥವಾ ದ್ವೇಷವಿಲ್ಲದೆ, ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ ಎಲ್ಲಾ ಜನರಿಗೆ ನ್ಯಾಯಯುತವಾಗಿ ನಡೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು. ಅಲ್ಲದೆ, ಕರ್ನಾಟಕ ರಾಜ್ಯದ ಸಚಿವರಾಗಿ ತಮಗೆ ತಿಳಿದುಬರುವ ಯಾವುದೇ ವಿಷಯಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಯಾರೊಂದಿಗೂ ಸಂವಹನ ಮಾಡುವುದಿಲ್ಲ ಅಥವಾ ಬಹಿರಂಗಪಡಿಸುವುದಿಲ್ಲ ಎಂದು ಅವರು ಗೋಪ್ಯತಾ ಪ್ರಮಾಣವಚನ ಸ್ವೀಕರಿಸಿದರು. ಈ ಪ್ರಮಾಣವಚನ ಸಮಾರಂಭವು ನೂತನ ಸಚಿವರ ಅಧಿಕೃತ ಪಯಣಕ್ಕೆ ಸಾಕ್ಷಿಯಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Duleep Trophy 2026: ದುಲೀಪ್ ಟ್ರೋಫಿಗೆ ಉತ್ತರ ವಲಯ ತಂಡ ಪ್ರಕಟ – Kannada News | Duleep Trophy 2026: North Zone Squad Announced; Kanhaiah Wadhawan to Lead

2026 ರ ದುಲೀಪ್ ಟ್ರೋಫಿಗಾಗಿ (Duleep Trophy 2026) ಉತ್ತರ ವಲಯ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ, ತಂಡದ ನಾಯಕತ್ವವನ್ನು ಜಮ್ಮು ಮತ್ತು ಕಾಶ್ಮೀರದ ಉದಯೋನ್ಮುಖ ಆಟಗಾರ 24 ವರ್ಷದ ಕನ್ಹಯ್ಯಾ ವಾಧವನ್ (Kanhaiya Wadhawan) ಅವರಿಗೆ ಹಸ್ತಾಂತರಿಸಲಾಗಿದೆ. ಹಾಗೆಯೇ ಆಯುಷ್ ಬಡೋನಿ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ಈ ಪ್ರಥಮ ದರ್ಜೆ ಪಂದ್ಯಾವಳಿ ಆಗಸ್ಟ್ 23 ರಂದು ಪ್ರಾರಂಭವಾಗಲಿದ್ದು ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯ, ಉತ್ತರ ವಲಯ, ಈಶಾನ್ಯ ವಲಯ ಮತ್ತು ಕೇಂದ್ರ ವಲಯ ತಂಡಗಳು ಕಣಕ್ಕಿಳಿಯಲಿವೆ.

ವಾಧವನ್ ಜೊತೆಗೆ, ಆರಂಭಿಕ ಕಮ್ರಾನ್ ಇಕ್ಬಾಲ್, ಆಲ್‌ರೌಂಡರ್ ಅಬ್ದುಲ್ ಸಮದ್, ಎಡಗೈ ಸ್ಪಿನ್ನರ್ ಅಬಿದ್ ಮುಷ್ತಾಕ್, ವೇಗದ ಬೌಲರ್‌ಗಳಾದ ಸುನಿಲ್ ಕುಮಾರ್ ಮತ್ತು ಯುಧ್ವೀರ್ ಸಿಂಗ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ಜಮ್ಮು ಮತ್ತು ಕಾಶ್ಮೀರದ ನಾಯಕ ಮತ್ತು 41 ವರ್ಷದ ಅನುಭವಿ ಬ್ಯಾಟ್ಸ್‌ಮನ್ ಪರಾಸ್ ಡೋಗ್ರಾ ಅವರನ್ನು ತಂಡದಲ್ಲಿ ಸೇರಿಸಲಾಗಿಲ್ಲ.

ಕನ್ಹಯ್ಯಾ ವಾಧ್ವಾನ್ ಯಾರು?

ಕನ್ಹಯ್ಯಾ ವಾಧವನ್ ಜಮ್ಮು ಮತ್ತು ಕಾಶ್ಮೀರದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ಅವರು ಜಮ್ಮು ಮತ್ತು ಕಾಶ್ಮೀರ ರಣಜಿ ಟ್ರೋಫಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಳೆದ ವರ್ಷ, ಶುಭಮನ್ ಗಿಲ್‌ಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದಾಗ್ಯೂ, ಗಾಯದಿಂದಾಗಿ ಅವರು ಆಡಲು ಸಾಧ್ಯವಾಗಲಿಲ್ಲ. ಈ ವರ್ಷ, ದುಲೀಪ್ ಟ್ರೋಫಿಯ ಸಮಯದಲ್ಲಿ ಭಾರತ ತಂಡದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪ್ರವಾಸವನ್ನು ನಿಗದಿಪಡಿಸಲಾಗಿದ್ದು, ಶುಭಮನ್ ಗಿಲ್ ಮತ್ತು ಆಕಿಬ್ ನಬಿಯಂತಹ ಆಟಗಾರರು ಟೂರ್ನಿಗೆ ಲಭ್ಯವಿರುವುದಿಲ್ಲ. ಅದಕ್ಕಾಗಿಯೇ ಈ ಬಾರಿ ಕನ್ಹಯ್ಯಾ ವಾಧವನ್‌ಗೆ ತಂಡದ ನಾಯಕತ್ವ ವಹಿಸಲಾಗಿದೆ.

ಅರ್ಷದೀಪ್ ಸಿಂಗ್ ಬೌಲಿಂಗ್ ಬಲ

15 ಸದಸ್ಯರ ಉತ್ತರ ವಲಯ ತಂಡದಲ್ಲಿ ದೆಹಲಿ (ಡಿಡಿಸಿಎ), ಜಮ್ಮು ಮತ್ತು ಕಾಶ್ಮೀರ (ಜೆಕೆಸಿಎ) ಮತ್ತು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ಆಟಗಾರರು ಇದ್ದಾರೆ. ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡದ ಆರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.

15 ಸದಸ್ಯರ ಉತ್ತರ ವಲಯ ತಂಡ: ಕನ್ಹಯ್ಯಾ ವಾಧವಾನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಾಂಬೋಜ್, ಯುಧ್‌ವೀರ್ ಸಿಂಗ್ ಮತ್ತು ನಿಖಿಲ್ ಕವಿಶ್ಯಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:54 pm, Mon, 3 August 26

Source link

Exit mobile version