Video: ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ತನ್ನ ಪಾದರಕ್ಷೆ ಹುಡುಕಲು ಚಾಟ್ ಜಿಪಿಟಿ ಮೊರೆ ಹೋದ ವ್ಯಕ್ತಿ – Kannada News | Man finds a lost slipper in a pile of slippers using ChatGPT

ಪ್ರತಿಯೊಂದು ಸಮಸ್ಯೆಗೂ ಪರಿಹಾರಯಿದೆ. ಹೌದು, ಏನೇ ಸಮಸ್ಯೆ ಎದುರಾದ್ರೂ ಅದಕ್ಕೆ ಪರಿಹಾರ ಹುಡುಕೋದು ಬಹಳ ಮುಖ್ಯ. ತಮ್ಮ ಆತ್ಮೀಯರ ಸಲಹೆ ಪಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಚಾಟ್ ಜಿಪಿಟಿ (Chat GPT) ಮೂಲಕ ಪರಿಹಾರ ಸಾಧ್ಯ. ಹೌದು, ಈ ಚಾಟ್ ಜಿಪಿಟಿ ಹತ್ರ ಯಾವುದೇ ಸಮಸ್ಯೆಗೂ  ಶೀಘ್ರದಲ್ಲೇ ಪರಿಹಾರ ಸಿಗುತ್ತದೆ. ಈ ಚಾಟ್ ಜಿಪಿಟಿ ಸಲಹೆ ಪಡೆದು ವ್ಯಕ್ತಿಯೊಬ್ಬ ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ಚಪ್ಪಲಿ ಹುಡುಕಲು ಮುಂದಾಗಿದ್ದಾನೆ. ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಶುಭಾಂಗ್ ಬೋರಕರ್ (ShubhangBorkar) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಿತ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಚಪ್ಪಲಿಗಳ ರಾಶಿ ಕಂಡು ಬಂದಿದ್ದು, ಇದರಲ್ಲಿ ಕಳೆದುಹೋದ ತನ್ನ ಚಪ್ಪಲಿಯನ್ನು ಹುಡುಕಿ ಸುಸ್ತಾಗಿ ಹೋಗಿದ್ದಾನೆ. ಕೊನೆಗೆ ಚಪ್ಪಲಿ ಹುಡುಕಲು ಚಾಟ್ ಜಿಪಿಟಿ ಸಹಾಯ ಪಡೆದಿದ್ದಾನೆ. ಚಪ್ಪಲಿಗಳ ರಾಶಿಯ ಫೋಟೋ ತೆಗೆದು ಕಳೆದುಕೊಂಡ ಚಪ್ಪಲಿಯನ್ನು ಹುಡುಕಿಕೊಡುವಂತೆ ಚಾಟ್ ಜಿಪಿಟಿಗೆ ಕೇಳಿಕೊಂಡಿರುವುದನ್ನು ಕಾಣಬಹುದು. ಕೆಲವೇ ಕೆಲವು ಕ್ಷಣಗಳಲ್ಲಿ ಚಾಟ್ ಜಿಪಿಟಿ ಚಪ್ಪಲಿಯನ್ನು ಪತ್ತೆಹಚ್ಚಿದೆ. ಚಾಟ್ ಜಿಪಿಟಿ ಚಪ್ಪಲಿ ಹುಡುಕಿಕೊಟ್ಟದ್ದನ್ನು ಕೇಳಿ ನಗುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಖಕ್ಕೆ ಫೇಸ್ ಪ್ಯಾಕ್‌ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್‌ ಹಾಜರಾದ ಜೆನ್ ಝೆಡ್ ಉದ್ಯೋಗಿ

ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ಮಾರ್ಟ್ ಐಡಿಯಾ ಎಂದಿದ್ದಾರೆ. ಇನ್ನೊಬ್ಬರು, ಚಾಟ್ ಜಿಪಿಟಿ ಯನ್ನು ಹೀಗೂ ಬಳಸಬಹುದೆಂದು ತೋರಿಸಿಕೊಟ್ಟ ಮಹಾನುಭಾವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಜನ್ರು ಇಷ್ಟು ಅಪ್ಡೇಟ್ ಆಗಿದ್ದಾರೆ ಎಂದು ಗೊತ್ತೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಕೇಸ್: ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ – Kannada News | Hanur Forest Firing: Chamarajanagar DC Orders Magistrate Probe; Protests Intensify

ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶImage Credit source: Tv9 Kannada

ಚಾಮರಾಜನಗರ, ಆಗಸ್ಟ್​​ 16: ಹನೂರು ಬಳಿ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಕೇಸ್ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಸಿ 7 ದಿನದೊಳಗಾಗಿ ವರದಿ ನೀಡಲು ಆದೇಶಿಸಿದ್ದಾರೆ. ಇನ್ನು ಘಟನೆ ಬಗ್ಗೆ ಹನೂರಿನಲ್ಲಿ ಎಸಿ ದಿನೇಶ್ ಕುಮಾರ್ ಮೀನಾ ಪ್ರತಿಕ್ರಿಯೆ ನೀಡಿದ್ದು, ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ. ಮಹಜರು ಕಾರ್ಯ ಆಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ರಿಪೋರ್ಟ್​ ಸಲ್ಲಿಕೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.

ಮುಂದುವರಿದ ಪ್ರತಿಭಟನೆ

ಇನ್ನು ಮೂವರ ಸಾವಿನ ಸಂಬಂಧ ಹನೂರಿನಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ದಿಢೀರ್ ರಸ್ತೆ ತಡೆ ನಡೆಸಲಾಗಿದೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ವಾಗ್ವಾದ ನಡೆದಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಂತಿಮವಾಗಿ ಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹನೂರು ಠಾಣೆ ಎದುರು ಕೂಡ ಪ್ರತಿಭಟನೆ ನಡೆದಿದ್ದು, ಎನ್​ಕೌಂಟರ್ ಮಾಡಿದವರನ್ನು ಸ್ಥಳಕ್ಕೆ ಕರೆತನ್ನಿ. ನಮ್ಮವರನ್ನು ಕೊಂದವರಿಗೆ ನಾವೇ ಶಿಕ್ಷೆ ಕೊಡುತ್ತೇವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!

ಶವಾಗಾರದಲ್ಲಿ ಪಂಚನಾಮೆಗೆ ಸಿದ್ಧತೆ

ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ 3 ಮೃತದೇಹದ ಪಂಚನಾಮೆಗೆ ಸಿದ್ಧತೆ ನಡೆದಿದ್ದು, 3 ತಹಶೀಲ್ದಾರ್​ಗಳಿಗೆ ಜವಾಬ್ದಾರಿ ನೀಡಲಾಗಿದೆ. ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜುಗೆ ಸೆಬಾಸ್ಟಿಯನ್ ಡೇವಿಡ್ ಕುಮಾರ್, ಯಳಂದೂರು ತಹಶೀಲ್ದಾರ್ ನಯನಾಗೆ ಆಂಥೋಣಿ, ಚಾಮರಾಜನಗರ ತಹಶೀಲ್ದಾರ್ ಗಿರಿಜಾಗೆ ಪೀಟರ್ ಶವದ ಜವಾಬ್ದಾರಿ ನೀಡಲಾಗಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿಯೇ ಮೂರು ಶವಗಳಿದ್ದು, ಪೀಟರ್​​ ಕುಟುಂಬಸ್ಥರು ಶವಾಗಾರದ ಬಳಿಗೆ ಇನ್ನೂ ಬಂದಿಲ್ಲ ಎನ್ನಲಾಗಿದೆ.

ಹನೂರಿನಲ್ಲಿ ಐಜಿಪಿ ಮೊಕ್ಕಾಂ

ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಪ್ರವಾಸಿ ಮಂದಿರದಲ್ಲಿ ತನಿಖಾಧಿಕಾರಿ ದಿನೇಶ್ ಕುಮಾರ್ ಮೀನಾ, ಚಾಮರಾಜನಗರ ಎಸ್ಪಿ ಮುತ್ತುರಾಜ್, ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಜೊತೆ ಸಭೆ ನಡೆಸಿದ್ದಾರೆ. ಘಟನೆ ಬಗ್ಗೆ ವಿವರ ಕಲೆಹಾಕುತ್ತಿರುವ ಅವರು, ನಿನ್ನೆಯಿಂದಲೂ ಹನೂರಿನಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:35 am, Sun, 16 August 26

Source link

‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್ – Kannada News | Toxic Movie star Yash reacts to Rashmika Mandanna Mr Show off comment in Aap Ki Adalat

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ‘ಮಿಸ್ಟರ್ ಶೋಆಫ್’ (Mr Show-off) ಎಂದು ಹೇಳಿ ಭಾರೀ ವಿವಾದಕ್ಕೀಡಾಗಿದ್ದರು. 2017ರಲ್ಲಿ ನಡೆದ ಈ ಹಳೆಯ ಘಟನೆಯ ಬಗ್ಗೆ ‘ಆಪ್ ಕಿ ಅದಾಲತ್’ ಶೋನಲ್ಲಿ ಮಾತನಾಡಿದ ‘ಟಾಕ್ಸಿಕ್’ ಹೀರೋ ಯಶ್ (Yash) ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರ ಹಳೆಯ ಹೇಳಿಕೆಯ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ಯಶ್, ಯಾರೊಬ್ಬರ ಅಭಿಪ್ರಾಯವೂ ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಯಾರಾದರೂ ನಮ್ಮ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ ಯಾರದ್ದೋ ಅಭಿಪ್ರಾಯ ನನ್ನ ವ್ಯಕ್ತಿತ್ವವಾಗಲು ಸಾಧ್ಯವಿಲ್ಲ. ನಾನು ಏನಾಗಿದ್ದೇನೋ, ಅದು ಇನ್ನೊಬ್ಬರ ದೃಷ್ಟಿಕೋನದಿಂದ ಬದಲಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಯಾವ ಅರ್ಥದಲ್ಲಿ ಹೇಳಿದ್ದಾರೋ ತಿಳಿಯದು:

‘ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಆಗ ಅವರು ಚಿತ್ರರಂಗಕ್ಕೆ ಹೊಸಬರಾಗಿದ್ದರು. ಕೆಲವೊಂದು ಟಿವಿ ಶೋಗಳಲ್ಲಿ ನಿರೂಪಕರು 3-4 ಆಯ್ಕೆಗಳನ್ನು ನೀಡುತ್ತಾರೆ. ಪ್ರಾಯಶಃ ನನಗೆ ಈ ಆಯ್ಕೆ ಸೂಕ್ತವಾಗಬಹುದು ಎಂದು ಆ ಹುಡುಗಿ ಯೋಚಿಸಿರಬಹುದು. ಆ ಸಂದರ್ಭದಲ್ಲಿ ಹಲವು ನಿರ್ದೇಶಕರು ಅಸಮಾಧಾನಗೊಂಡಿದ್ದರು’ ಎಂದಿದ್ದಾರೆ ಯಶ್.

ಅಭಿಮಾನಿಗಳಿಗೆ ಯಶ್ ನೀಡಿದ ಖಡಕ್ ಸಂದೇಶ:

ರಶ್ಮಿಕಾ ಅವರ ಈ ಹೇಳಿಕೆಯ ನಂತರ ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಯಶ್, ‘ನೀವು ಇನ್ನೊಬ್ಬ ನಟ ಅಥವಾ ನಟಿಗೆ ಗೌರವ ನೀಡದಿದ್ದರೆ, ನೀವು ನನ್ನ ಅಭಿಮಾನಿಯಾಗಲು ಸಾಧ್ಯವೇ ಇಲ್ಲ’ ಎಂದು ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮೊದಲು ಕೂಡ ಅನೇಕ ಬಾರಿ ಅವರು ಈ ಮಾತನ್ನು ಹೇಳಿದ್ದರು.

ಇದನ್ನೂ ಓದಿ:

ವಿವಾದಕ್ಕೆ ತೆರೆ ಎಳೆದಿದ್ದ ರಶ್ಮಿಕಾ:

2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ರಶ್ಮಿಕಾ, ಆನಂತರದ ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ರಶ್ಮಿಕಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಇದೀಗ ಯಶ್ ನೀಡಿದ ಈ ಶಾಂತ ಮತ್ತು ಪ್ರಬುದ್ಧ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

Source link

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಹಗರಣ: ಆಡಿಟ್‌ನಲ್ಲಿ ಕೋಟಿ ಕೋಟಿ ಲೂಟಿ ಬಯಲು! – Kannada News | Koppal Urban Development Authority Scam: Rs 8.43 Crore Fraud Unearthed

ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ರವೀಂದ್ರ

ಕೊಪ್ಪಳ, ಆಗಸ್ಟ್ 16: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅಕ್ರಮದ ಬೆನ್ನಲ್ಲೇ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ಬೃಹತ್ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಿವೇಶನ ಕೊಡುವುದಾಗಿ ನಂಬಿಸಿ ಪ್ರಾಧಿಕಾರದ ಅನಧಿಕೃತ ಬ್ಯಾಂಕ್ ಖಾತೆ ಸೃಷ್ಟಿಸಿ, ಬರೋಬ್ಬರಿ 8.43 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಹೊರಗುತ್ತಿಗೆ ನೌಕರನಿಂದ ಕೋಟಿ ಕೋಟಿ ವಂಚನೆ

ಪ್ರಾಧಿಕಾರದಲ್ಲಿ ಕಳೆದ 18 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ರವೀಂದ್ರ ಎಂಬಾತ ಈ ಹಗರಣದ ಮುಖ್ಯ ರೂವಾರಿ ಎನ್ನಲಾಗಿದೆ. ಕೊಪ್ಪಳ ಕಿಮ್ಸ್ ಹಿಂಭಾಗದ ಸರೋಜಾ ಬಡಾವಣೆಯಲ್ಲಿ ನಿವೇಶನ ಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ, ಪ್ರಾಧಿಕಾರದ ಹೆಸರಿನಲ್ಲೇ ಅನಧಿಕೃತ ಬ್ಯಾಂಕ್ ಖಾತೆ ತೆಗೆದು ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಇತ್ತೀಚೆಗೆ ನಡೆದ ಆಡಿಟ್ ವರದಿಯಲ್ಲಿ ಈ ಕೋಟಿ ಕೋಟಿ ಅಕ್ರಮ ಬಹಿರಂಗಗೊಂಡಿದ್ದು, ಪ್ರಸ್ತುತ ಆಯುಕ್ತ ಶರಣಪ್ಪ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರವೀಂದ್ರನನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಲಾಗಿದೆ.

ಉನ್ನತಾಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲು ಶಂಕೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, “ಇದು ಕೇವಲ ಒಬ್ಬ ಸಿಬ್ಬಂದಿಯ ಕೆಲಸವಲ್ಲ. ಪ್ರಾಧಿಕಾರದ ಒಳಗಿನವರು, ಹೊರಗಿನವರು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ. ನೌಕರ ರವೀಂದ್ರ ಕೆಲಸದಿಂದ ವಜಾಗೊಂಡ ಮೇಲೂ ಹಣ ವರ್ಗಾವಣೆಯಾಗಿದೆ. ಪ್ರಾಧಿಕಾರದ ಕೆಲ ಅಧಿಕಾರಿಗಳ ಸಹಿಗಳೂ ಪತ್ತೆಯಾಗಿದ್ದು, ಸಮಗ್ರ ಡಿಟೇಲ್ ರಿಪೋರ್ಟ್ ಸಿದ್ಧಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ‘ಎಟಿಎಂ’ ಆಗಿದೆ: ಆರ್. ಅಶೋಕ್ ವಾಗ್ದಾಳಿ

ಕೊಪ್ಪಳ ನಗರಾಭಿವೃದ್ಧಿ ಹಗರಣದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲದ ಇಲಾಖೆಯೇ ಇಲ್ಲ. ನಗರಾಭಿವೃದ್ಧಿ ಇಲಾಖೆಯು ಕಾಂಗ್ರೆಸ್ ನಾಯಕರ ಎಟಿಎಂ ಆಗಿದೆ. ಇದು ಕೇವಲ ಕೆಳಹಂತದ ಸಿಬ್ಬಂದಿಯ ಕೆಲಸವಲ್ಲ, ಸರ್ಕಾರದ ಸಾಂಸ್ಥಿಕ ಲೂಟಿ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣ ಜೈಲಿಗಟ್ಟಬೇಕು,” ಎಂದು ಸಿಎಂ  ಅವರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Varalakshmi Vrat: ಶ್ರಾವಣ ಮಾಸದಲ್ಲಿ ವರಲಕ್ಷ್ಮಿ ಪೂಜೆ, ವ್ರತಾಚರಣೆಯ ಫಲ ಇಲ್ಲಿ ತಿಳಿದುಕೊಳ್ಳಿ – Kannada News | Varalakshmi Vratam: Shravana Maasa Significance, Lakshmi Puja and Spiritual Meaning

ವರಲಕ್ಷ್ಮಿ ವ್ರತದ ಮಹತ್ವImage Credit source: Getty Images

ಶ್ರಾವಣ ಮಾಸದಲ್ಲಿ ಬರುವ ವರಲಕ್ಷ್ಮಿ ವ್ರತವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಮಂಗಳಕರ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲಾ ಶುಕ್ರವಾರಗಳು ಲಕ್ಷ್ಮಿ ದೇವಿಯ ಪೂಜೆಗೆ ಶುಭಕರವಾಗಿದ್ದರೂ, ಶ್ರಾವಣ ಮಾಸದ ಶುಕ್ರವಾರಕ್ಕೆ ವಿಶೇಷ ಮಹತ್ವವಿದೆ. ಈ ತಿಂಗಳು ಕೇವಲ ಪೂಜೆಗಷ್ಟೇ ಅಲ್ಲದೆ, ಆಧ್ಯಾತ್ಮಿಕ ಸಾಧನೆ ಮತ್ತು ಜ್ಞಾನ ಸಂಪಾದನೆಗೂ ಶ್ರೇಷ್ಠವಾದ ಸಮಯವಾಗಿದೆ. ‘ಶ್ರಾವಣ’ ನಕ್ಷತ್ರವು ಜ್ಞಾನದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಜ್ಞಾನದ ವೃದ್ಧಿಗೆ ಇದು ಅತ್ಯಂತ ಅನುಕೂಲಕರವಾಗಿದೆ.

ಶ್ರಾವಣ ಹುಣ್ಣಿಮೆಯ ಪ್ರಮುಖ ವಿಶೇಷತೆಗಳು:

ಸಮುದ್ರ ಮಂಥನದ ಸಮಯದಲ್ಲಿ ಮೊದಲು ಚಂದ್ರನು, ನಂತರ ಲಕ್ಷ್ಮಿ ದೇವಿಯು ಜನಿಸಿದ ಕಾರಣ ಇವರಿಬ್ಬರನ್ನು ‘ಚಂದ್ರ ಸಹೋದರರು’ (ಸಹೋದರಿ-ಸಹೋದರ) ಎಂದು ಕರೆಯಲಾಗುತ್ತದೆ. ಇದಲ್ಲದೆ, ಶ್ರಾವಣ ಹುಣ್ಣಿಮೆಯನ್ನು ‘ಹಯಗ್ರೀವ ಜಯಂತಿ’ ಎಂದೂ ಆಚರಿಸಲಾಗುತ್ತದೆ. ಶ್ರೀಮನ್ನಾರಾಯಣನು ಹಯಗ್ರೀವ ರೂಪದಲ್ಲಿ ರಾಕ್ಷಸನಿಂದ ವೇದಗಳನ್ನು ಮರಳಿ ತಂದು ಬ್ರಹ್ಮನಿಗೆ ನೀಡಿದ ದಿನ ಇದಾಗಿದೆ. ಈ ದಿನ ವೈದಿಕ ಬ್ರಾಹ್ಮಣರು ಯಜ್ಞೋಪವೀತವನ್ನು ಆಲಿಸಿ, ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ನಿಜವಾದ ಲಕ್ಷ್ಮಿಯ ತತ್ವ ಮತ್ತು ಅರ್ಥ:

‘ಲಕ್ಷ್ಮಿ’ ಎಂದರೆ ಕೇವಲ ಭೌತಿಕ ಸಂಪತ್ತು ಮಾತ್ರವಲ್ಲ, ತನ್ನ “ಗುರಿಯನ್ನು” ಸಾಧಿಸುವವಳೇ ನಿಜವಾದ ಲಕ್ಷ್ಮಿ ಎಂದು ಹಿರಿಯರು ಹೇಳುತ್ತಾರೆ. ಅವಳ ಆಶೀರ್ವಾದವು ಸಂತಾನ, ಆರೋಗ್ಯ, ಧನ, ಸೌಭಾಗ್ಯ ಮತ್ತು ಮಾಂಗಲ್ಯ ಲಕ್ಷ್ಮಿ ಎಂಬ ವಿವಿಧ ರೂಪಗಳಲ್ಲಿ ದೊರೆಯುತ್ತದೆ. ಕ್ಷೀರ ಸಾಗರದಲ್ಲಿ ಜನಿಸಿದ ಲಕ್ಷ್ಮಿಯು ವಿಷ್ಣುವನ್ನು ಎಂದಿಗೂ ಅಗಲಿರದ ಶಾಶ್ವತ ಶಕ್ತಿಯಾಗಿದ್ದಾಳೆ. ಪ್ರತಿಯೊಬ್ಬರೂ ಲಕ್ಷ್ಮಿಯ ಅನುಗ್ರಹ ಪಡೆಯಲು ಪರಮಾತ್ಮನ ಕೃಪೆಗೆ ಅರ್ಹರಾಗಬೇಕು. “ಇದು ನನ್ನಿಂದಲೇ ಆಯಿತು” ಎಂಬ ಅಹಂಕಾರ ನಮ್ಮಲ್ಲಿದ್ದರೆ ಲಕ್ಷ್ಮಿಯು ನಮ್ಮನ್ನು ತೊರೆಯುತ್ತಾಳೆ. ವರಲಕ್ಷ್ಮಿ ವ್ರತದಲ್ಲಿ ಬಾಹ್ಯ ಆಚರಣೆಗಿಂತ ಭಕ್ತಿಯ ‘ಭಾವನೆ’ಗೆ ಹೆಚ್ಚಿನ ಪ್ರಾಮುಖ್ಯತೆಯಿದೆ.

ವರಲಕ್ಷ್ಮಿ ದೇವಿಯನ್ನು ಸದ್ಭಾವನೆ ಹಾಗೂ ಭಕ್ತಿಯಿಂದ ಪೂಜಿಸುವ ಪ್ರತಿಯೊಬ್ಬರಿಗೂ ಸಂಪತ್ತು ಮತ್ತು ಸಮೃದ್ಧಿ ಖಂಡಿತವಾಗಿ ದೊರೆಯುತ್ತದೆ. ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರ ಸಾಧ್ಯವಾಗದಿದ್ದರೆ, ಈ ಮಾಸದ ಯಾವುದೇ ಶುಕ್ರವಾರದಂದೂ ಸಹ ಈ ವ್ರತವನ್ನು ಆಚರಿಸಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:07 am, Sun, 16 August 26

Source link

Gold Rates 16 Aug: ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 205 ರೂ ಏರಿಕೆ – Kannada News | Gold Price Today on 16th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 16: ಈ ವಾರ ಚಿನ್ನದ ಬೆಲೆ ಸತತ ಏರಿಳಿತಗಳನ್ನು ಕಾಣುತ್ತಿದೆ. ವಾರಾಂತ್ಯದಲ್ಲಿ ಆಭರಣ ಚಿನ್ನದ ಬೆಲೆ (Gold Price) ಗ್ರಾಮ್​ಗೆ 205 ರೂ ಏರಿ 14,220 ರೂ ಮುಟ್ಟಿದೆ. ಅಂತಾರಾಷ್ಟ್ರೀಯವಾಗಿಯೂ ಬಹಳ ಕಡೆ ಇದರ ಬೆಲೆ ಏರಿದೆ. ಸ್ಪಾಟ್ ಚಿನ್ನದ ಬೆಲೆ 139 ಡಾಲರ್​ನಿಂದ 140 ಡಾಲರ್​ಗೆ ಏರಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಭಾರತದಲ್ಲಿ ಇದರ ಬೆಲೆ ಗ್ರಾಮ್​ಗೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 16ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,513
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,220
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,635
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,220 ರೂ
  • ಚೆನ್ನೈ: 14,220 ರೂ
  • ಮುಂಬೈ: 14,220 ರೂ
  • ದೆಹಲಿ: 14,235
  • ಕೋಲ್ಕತಾ: 14,220 ರೂ
  • ಕೇರಳ: 14,220 ರೂ
  • ಅಹ್ಮದಾಬಾದ್: 14,225 ರೂ
  • ಜೈಪುರ್: 14,235
  • ಲಕ್ನೋ: 14,235
  • ಭುವನೇಶ್ವರ್: 14,220 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 140.71 ಡಾಲರ್ (13,430 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 2.080 ಡಾಲರ್ (198 ರುಪಾಯಿ)

ಇದನ್ನೂ ಓದಿ: ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,513 ರುಪಾಯಿ
  • ಮಲೇಷ್ಯಾ: 591 ರಿಂಗಿಟ್ (13,828 ರುಪಾಯಿ)
  • ದುಬೈ: 529.25 ಡಿರಾಮ್ (13,776 ರುಪಾಯಿ)
  • ಅಮೆರಿಕ: 144 ಡಾಲರ್ (13,767 ರುಪಾಯಿ)
  • ಸಿಂಗಾಪುರ: 190.10 ಸಿಂಗಾಪುರ್ ಡಾಲರ್ (14,208 ರುಪಾಯಿ)
  • ಕತಾರ್: 528 ಕತಾರಿ ರಿಯಾಲ್ (13,847 ರೂ)
  • ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,826 ರುಪಾಯಿ)
  • ಓಮನ್: 56.05 ಒಮಾನಿ ರಿಯಾಲ್ (13,918 ರುಪಾಯಿ)
  • ಕುವೇತ್: 43.85 ಕುವೇತಿ ದಿನಾರ್ (13,644 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 10:44 am, Sun, 16 August 26

Source link

‘ಕ್ವಾಟ್ಲೆ ಕಿಚನ್ 2’ ಟ್ರೋಫಿ ಗೆದ್ದ ಸೂರಜ್ ಸಿಂಗ್; ಶೆಫ್​ಗೆ ಸಿಕ್ಕಿತು ಜಯ – Kannada News | Suraj Singh Lifts Kwatle Kitchen 2 Trophy: Former Chef and Bigg Boss Wildcard Wins Heart

‘ಬಿಗ್ ಬಾಸ್’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ತಮ್ಮ ವಿಶಿಷ್ಟ ನಡೆ-ನುಡಿ ಹಾಗೂ ಮಾತುಗಳಿಂದ ವೀಕ್ಷಕರ ಗಮನ ಸೆಳೆದಿದ್ದರು ಸೂರಜ್ ಸಿಂಗ್. ಈಗ ಅವರು ರಿಯಾಲಿಟಿ ಶೋನಲ್ಲಿ ಕಪ್ ಗೆದ್ದು ಬೀಗಿದ್ದಾರೆ. ವೃತ್ತಿಯಲ್ಲಿ ಈ ಮೊದಲು ಶೆಫ್ ಆಗಿದ್ದ ಸೂರಜ್, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಅಡುಗೆ ಆಧಾರಿತ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಗೆಲುವಿನ ಟ್ರೋಫಿ ಹಿಡಿದು ಸಂತಸ ಹಂಚಿಕೊಂಡ ಸೂರಜ್ ಸಿಂಗ್, ತಮ್ಮ ಈ ಪಯಣದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

‘ಇದು ಕನಸೋ ಅಥವಾ ನಿಜವೋ ತಿಳಿಯುತ್ತಿಲ್ಲ’

‘ಈ ಗೆಲುವು ನನಗೆ ನಿಜಕ್ಕೂ ನಂಬಲಾಗುತ್ತಿಲ್ಲ. ಎಲ್ಲರೂ ನನ್ನ ಬಳಿ ‘ಹೇಗೆ ಅನಿಸುತ್ತಿದೆ?’ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಮಾತುಗಳೇ ಬರುತ್ತಿಲ್ಲ. ಕಲರ್ಸ್ ಕನ್ನಡ ತಂಡಕ್ಕೆ ಹಾಗೂ ‘ಕ್ವಾಟ್ಲೆ ಕಿಚನ್’ ಇಡೀ ಟೀಮ್‌ಗೆ ನಾನು ತುಂಬಾನೇ ಆಭಾರಿಯಾಗಿದ್ದೇನೆ. ಇಲ್ಲಿನ ‘ಕ್ವಾಟ್ಲೆ’ಗಳಾಗಿರಲಿ ಅಥವಾ ‘ಕುಕ್’ಗಳಾಗಿರಲಿ, ಪ್ರತಿಯೊಬ್ಬರ ಶ್ರಮ ಮತ್ತು ಶ್ರಮದ ಫಲವೇ ಈ ಗೆಲುವು’ ಎಂದು ಸೂರಜ್ ಹೇಳಿದ್ದಾರೆ.

ತೀರ್ಪುಗಾರರು ಹಾಗೂ ವೀಕ್ಷಕರಿಗೆ ಧನ್ಯವಾದ

ಶೋನಲ್ಲಿ ತಮಗೆ ಮಾರ್ಗದರ್ಶನ ನೀಡಿದ ತೀರ್ಪುಗಾರರನ್ನು ಸ್ಮರಿಸಿದ ಸೂರಜ್, ‘ನಮ್ಮ ಶೆಫ್ ಕೌಶಿಕ್ ಅವರು, ಮೇಘನಾ ಮೇಡಂ ಹಾಗೂ ಸುಷ್ಮಾ ಮೇಡಂ ಅವರು ನನಗೆ ನಿರಂತರವಾಗಿ ಬೆಂಬಲ ನೀಡಿದರು. ಕೊನೆಯ ಡಿಶ್‌ನ ಫೈನಲ್ ಟಚ್ ನೀಡುವವರೆಗೂ ಅವರ ಸಪೋರ್ಟ್ ಇತ್ತು. ಇದೊಂದು ಪರಿಪೂರ್ಣ ಟೀಮ್ ಎಫರ್ಟ್. ಅಡುಗೆ ಮಾಡುವುದು ನನಗೆ ಯಾವತ್ತೂ ಒಂದು ಪ್ಯಾಶನ್ ಆಗಿತ್ತು. ಈಗ ಅದನ್ನು ರಿಯಾಲಿಟಿ ಶೋ ಮಟ್ಟಕ್ಕೆ ತಂದು ಗೆದ್ದಿರುವುದು ಖುಷಿ ತಂದಿದೆ. ಇಲ್ಲಿಂದ ಮುಂದೆ ಸಾಗುವುದೊಂದೇ ನನ್ನ ಹಾದಿ’ ಎಂದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್

ತಮ್ಮನ್ನು ಬೆಂಬಲಿಸಿದ ವೀಕ್ಷಕರಿಗೂ ಧನ್ಯವಾದ ತಿಳಿಸಿದ ಅವರು, ‘ನನ್ನನ್ನು ನೋಡುತ್ತಿರುವ ಮತ್ತು ಪ್ರೀತಿಸುತ್ತಿರುವ ಪ್ರೇಕ್ಷಕರ ಬೆಂಬಲವೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನನ್ನ ಸ್ಪೆಷಲ್ ರೆಸಿಪಿಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲರೂ ಅದನ್ನು ಟ್ರೈ ಮಾಡಿ ಹೇಗೆ ಬಂದಿದೆ ಎಂದು ತಿಳಿಸಿ’ ಎಂದು ವೀಕ್ಷಕರಲ್ಲಿ ವಿನಂತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಗರಂ: ಅಧಿಕಾರಿಗಳಿಗೆ ಖಡಕ್​​ ಸೂಚನೆ – Kannada News | Minister Shivalingegowda Demands Immediate Crop Insurance Payouts for Hassan Farmers

ಹಾಸನ, ಆಗಸ್ಟ್​​ 16: ರೈತರ ಬೆಳೆ ವಿಮೆ ವಿಚಾರದಲ್ಲಿ ವಿಮಾ ಕಂಪನಿ ಹಾಗೂ ಕೃಷಿ ಅಧಿಕಾರಿಗಳ ವಿರುದ್ಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಗರಂ ಆದ ಪ್ರಸಂಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ. ರೈತರು ವಿಮೆ ಹಣ ಕಟ್ಟಿದ್ರೆ ಅವರಿಗೆ ಪರಿಹಾರವೇ ಸಿಗಲಿಲ್ಲ. ಬೆಳೆ ಚೆನ್ನಾಗಿರುವ ಕಡೆ ಸಮೀಕ್ಷೆ ನಡೆಸಿ ಬೆಳೆ ಹಾನಿಯೇ ಇಲ್ಲ ಎಂದು ಸುಳ್ಳು ವರದಿ ಕೊಡ್ತಿದ್ದರು. ಹಾಗಾಗಿ ರೈತರು ಈ ವಿಮೆ ಮೇಲೆ ಆಸಕ್ತಿಯನ್ನೇ ಬಿಟ್ಟರು. ಆದರೆ ಇನ್ಮುಂದೆ ಇದೆಲ್ಲ ನಡೆಯಲ್ಲ. ಈ ಬಾರಿ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದಾರೆ. ಬಿತ್ತನೆ ಆಗದಿರುವ ಕಡೆ ಶೇ.25ರಷ್ಟು ಪರಿಹಾರ ಕೊಡಬೇಕು. ವಿಮಾ ಕಂಪನಿಯವರನ್ನು ನಾನು ಕೇಳಲ್ಲ. ಕೃಷಿ ಇಲಾಖೆಯ ಅಧಿಕಾರಿಗಳೇ ಇದು ನಿಮ್ಮ ಜವಾಬ್ದಾರಿ. ನೀವೇ ಗಮನಹರಿಸಿ ಪರಿಹಾರ ಕೊಡಿಸಲು ಕ್ರಮವಹಿಸಿ ಎಂದು ಸಚಿವರು ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ! – Kannada News | Tumakuru Metro Project: Karnataka Writes to Centre After DPR Completion

ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ

ತುಮಕೂರು, ಆಗಸ್ಟ್ 16: ಜಿಲ್ಲೆಯ ನಿವಾಸಿಗಳ ದಶಕಗಳ ಕನಸಾದ ‘ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ’ ನನಸಾಗುವ ಹೊಸ್ತಿಲಿಗೆ ಬಂದು ತಲುಪಿದೆ. ಯೋಜನೆಯ ಯೋಜನಾ ವರದಿ (DPR) ಪೂರ್ಣಗೊಂಡ ಬೆನ್ನಲ್ಲೇ, ಮುಂದಿನ ಹಂತದ ಪ್ರಕ್ರಿಯೆಗಳಿಗಾಗಿ ರಾಜ್ಯ ಸರ್ಕಾರವು ಡಿಪಿಆರ್ ಸಹಿತ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಟ್ರೋ ಮಾರ್ಗ

ಪ್ರಸ್ತಾವಿತ ತುಮಕೂರು ಮೆಟ್ರೋ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯ ಮೀಡಿಯನ್ (ಮಧ್ಯಭಾಗ) ಹಾಗೂ ಮೇಲ್ಭಾಗದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಹೆದ್ದಾರಿ ಮೇಲ್ಭಾಗದಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ನಿರ್ಮಿಸಲು ಭಾರತ ಸರ್ಕಾರದ (ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ) ಅನುಮತಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ಪಿಪಿಪಿ ಮಾಡೆಲ್‌; ಹೂಡಿಕೆದಾರರ ಆಸಕ್ತಿ

ವಿಶೇಷವೆಂದರೆ, ಈ ಯೋಜನೆಯು ಕೇಂದ್ರ ಸರ್ಕಾರದ ಹಣಕಾಸಿನ ನೆರವನ್ನು ಅವಲಂಬಿಸದೇ ಸಂಪೂರ್ಣವಾಗಿ ಪಿಪಿಪಿ (Public-Private Partnership) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ಮೆಟ್ರೋ ನಿಲ್ದಾಣಗಳು ಹಾಗೂ ಹೆದ್ದಾರಿ ಪಕ್ಕದಲ್ಲಿ ವಾಣಿಜ್ಯ (Commercial) ಚಟುವಟಿಕೆಗಳನ್ನು ನಡೆಸಲು ಜಮೀನು ನೀಡಲು ನಿರ್ಧರಿಸಲಾಗಿದೆ. ಹೂಡಿಕೆದಾರರು ನೆಲಮಂಗಲ, ದಾಬಸ್‌ಪೇಟೆ ಹಾಗೂ ತುಮಕೂರು ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಮೂಲಕ ಆದಾಯ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ದೇಶ ಮತ್ತು ವಿದೇಶದ ಪ್ರಮುಖ ಕಂಪನಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿವೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಬಳಕೆಯ ಅನುಮತಿ ಸಿಗುತ್ತಿದ್ದಂತೆಯೇ, ಸರ್ಕಾರ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಹಂತದ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಸ್ಥಳದಲ್ಲಿ ಕಾಮಗಾರಿ ಆರಂಭವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version