ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್ – Kannada News | Samsung Galaxy F70 Pro smartphone launched, know its price, battery, camera, features and other details

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊImage Credit source: samsung.com

ನವದೆಹಲಿ, ಆಗಸ್ಟ್ 3: ಸ್ಯಾಮ್​ಸಂಗ್ ಕಂಪನಿಯ ಹೊಚ್ಚಹೊಸ ಸ್ಮಾರ್ಟ್​ಫೋನ್ ಮಾಡಲ್ ಗ್ಯಾಲಕ್ಸಿ F70 ಪ್ರೊ 5G (Samsung Galaxy F70 Pro 5G) ಭಾರತದ ಮಾರುಕಟ್ಟೆಗೆ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಬಲವಾದ ಬ್ಯಾಟರಿ, ಉತ್ತಮ ಡಿಸ್‌ಪ್ಲೇ ಹಾಗೂ 6 ವರ್ಷಗಳ ಸಾಫ್ಟ್‌ವೇರ್ ಬೆಂಬಲದೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಂದಿದೆ. ಫ್ಲಿಪ್​ಕಾರ್ಟ್ ಮತ್ತು ಸ್ಯಾಮ್​ಸಂಗ್​ನ ವೆಬ್​​ಸೈಟ್​ನಲ್ಲಿ ಈ ಸ್ಮಾರ್ಟ್​ಫೋನ್ ಇವತ್ತಿನಿಂದಲೇ ಖರೀದಿಗೆ ಲಭ್ಯ ಇದೆ. ಇದರ ಮೂರು ವೇರಿಯೆಂಟ್​ಗಳು ಇದ್ದು, ಬೆಲೆ 25,999 ರೂನಿಂದ 34,999 ರೂ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಬೆಲೆ ವಿವರ

  • 6GB RAM + 128GB Storage: ₹25,999
  • 8GB RAM + 128GB Storage: ₹29,999
  • 8GB RAM + 256GB Storage: ₹34,999

ಗ್ಯಾಲಕ್ಸಿ F70 ಪ್ರೊ 5G ಪ್ರಮುಖ ಫೀಚರ್‌ಗಳು ಮತ್ತು ತಾಂತ್ರಿಕ ವಿವರಗಳು

  • ಡಿಸ್‌ಪ್ಲೇ: 6.7-ಇಂಚಿನ Full HD+ Super AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಹಾಗೂ ಸುರಕ್ಷತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ (Corning Gorilla Glass Victus+) ರಕ್ಷಣೆ ನೀಡಲಾಗಿದೆ.
  • ಪ್ರೊಸೆಸರ್: ಕ್ವಾಲ್ಕಾಮ್‌ನ ಸ್ನ್ಯಾಪ್‌ಡ್ರಾಗನ್ 6 ಜೆನ್ 3 (Snapdragon 6 Gen 3) ಚಿಪ್‌ಸೆಟ್ ಹೊಂದಿದೆ.
  • ಕ್ಯಾಮೆರಾ ಸೆಟಪ್: ಹಿಂಭಾಗದಲ್ಲಿ OIS (Optical Image Stabilization) ಬೆಂಬಲವಿರುವ 50MP ಪ್ರಮುಖ ಕ್ಯಾಮೆರಾ, 5MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಒಳಗೊಂಡ ತ್ರಿಪಲ್ ಕ್ಯಾಮೆರಾ ವ್ಯವಸ್ಥೆ ಇದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
  • ಬ್ಯಾಟರಿ ಮತ್ತು ಚಾರ್ಜಿಂಗ್: 6,000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 45W ವೇಗದ ವೈರ್ಡ್ ಚಾರ್ಜಿಂಗ್ (Fast Charging) ಬೆಂಬಲವಿದೆ.
  • ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 16 ಆಧಾರಿತ One UI 8.5 ನಲ್ಲಿ ಕಾರ್ಯನಿರ್ವಹಿಸಲಿದ್ದು, ಸಂಸ್ಥೆಯು ಈ ಫೋನ್‌ಗೆ 6 ವರ್ಷಗಳ OS ಅಪ್‌ಡೇಟ್ ಹಾಗೂ ಸೆಕ್ಯುರಿಟಿ ಪ್ಯಾಚ್‌ಗಳ ಭರವಸೆ ನೀಡಿದೆ.
  • ಬಣ್ಣ: ಈ ಸ್ಮಾರ್ಟ್​​ಫೋನ್ ಆಲ್ಫಾ ಬ್ಲ್ಯಾಕ್ (Alpha Black) ಮತ್ತು ಔರಾ ಗ್ರೀನ್ (Aura Green) ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ (Flipkart) ಮತ್ತು ಸ್ಯಾಮ್‌ಸಂಗ್ ಇಂಡಿಯಾ ಅಧಿಕೃತ ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಬಿಡುಗಡೆಯ ಅಂಗವಾಗಿ ಆಯ್ದ ಬ್ಯಾಂಕ್ ಕಾರ್ಡ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಮೂಲಕ ರಿಯಾಯಿತಿ ಬೆಲೆಯಲ್ಲಿ ಇದನ್ನು ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’; ಸಿನಿಮಾ ಬಗ್ಗೆ ಕೇಳಿದ್ದಕ್ಕೆ ನೇರವಾಗಿ ಹೇಳಿದ ಅಭಿಷೇಕ್ ಅಂಬರೀಷ್ – Kannada News | Abishek Ambareesh Labels Himself Ayogya at Movie Event; Video Goes Viral on Social Media

ಅಭಿಷೇಕ್ ಅಂಬರೀಷ್ (Abhishek Ambareesh) ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಖ್ಯಾತ ನಟ ಅಂಬರೀಷ್ ಅವರ ಮಗನಾಗಿದ್ದರೂ ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಅವರು ತಮ್ಮನ್ನು ತಾವು ಅಯೋಗ್ಯ ಎಂದು ಕರೆದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣ ಆಗಿದೆ. ಅನೇಕರು ಈ ವಿಡಿಯೋ ಹಂಚಿಕೊಳ್ಳುತ್ತಾ ಇದ್ದಾರೆ.

ಅಭಿಷೇಕ್ ಅವರು ಮೊದಲು ನಟಿಸಿದ್ದು 2019ರ ‘ಅಮರ್’ ಸಿನಿಮಾದಲ್ಲಿ. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆ ಬಳಿಕ 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡಿದರು. ಈ ಚಿತ್ರ ಕೂಡ ಫೇಲ್ ಆಯಿತು. ಸಿನಿಮಾ ಸಂಪೂರ್ಣವಾಗಿ ಸೋತಿತ್ತು. ಆ ಬಳಿಕ ಅಭಿಷೇಕ್ ಅಂಬರೀಷ್ ಅವರು ‘ಕಾಳಿ’ ಚಿತ್ರ ಒಪ್ಪಿಕೊಂಡರು. ಈ ಸಿನಿಮಾದ ಲುಕ್ 2022ರಲ್ಲೇ ರಿಲೀಸ್ ಆಗಿದ್ದರೂ ಸಿನಿಮಾ ಸೆಟ್ಟೇರಿಲಿಲ್ಲ.

ಅಭಿಷೇಕ್ ವೃತ್ತಿ ಜೀವನದಲ್ಲಿ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಹೀಗಾಗಿ, ಅವರ ಮುಂದಿನ ಸಿನಿಮಾ ಯಾವಾಗ ಎಂಬ ಪ್ರಶ್ನೆ ಮುಡೋದು ಸಹಜ. ಇತ್ತೀಚೆಗೆ ನಡೆದ ‘ಅಯೋಗ್ಯ 2’ ಸಿನಿಮಾ ಈವೆಂಟ್​​ನಲ್ಲಿ ಅಭಿಷೇಕ್ ಅಂಬರೀಷ್​​ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನಿಮ್ಮ ಮುಂದಿನ ಸಿನಿಮಾ ಯಾವಾಗ’ ಎಂದು ಆ್ಯಂಕರ್ ನಿರಂಜನ್ ದೇಶಪಾಂಡೆ ಕೇಳಿದರು. ಇದಕ್ಕೆ ಅಭಿಷೇಕ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.

ಇದನ್ನೂ ಓದಿ: ‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನೋದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್ ಹೀಗೆ ಹೇಳಿದ್ದೇಕೆ?

‘ನಾವಿಲ್ಲಿ ಅಯೋಗ್ಯ 2 ಸಿನಿಮಾ ಬಗ್ಗೆ ಮಾತನಾಡೋಕೆ ಬಂದಿದ್ದೇವೆ. ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’ ಎಂದು ನೇರವಾಗಿ ಹೇಳಿದರು. ಆಗ ಇದಕ್ಕೂ ಕೆಲವರು ಚಪ್ಪಾಳೆ ತಟ್ಟಿ,  ಶಿಳ್ಳೆ ಹೊಡೆದರು. ‘ಬಹುಶಃ ಹೆಚ್ಚಿನ ಹಣ ಕೊಟ್ಟಿದ್ದೇನೆ’ ಎಂದು ಅವರೇ ಒಪ್ಪಿಕೊಂಡರು. ಈ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರದ ಸಹರ್ಸಾದಲ್ಲಿ ಪ್ರಯಾಣಿಕರ ರೈಲಿನಲ್ಲಿ ಅಗ್ನಿ ಅವಘಡ, ಪ್ರಯಾಣಿಕರು ಸುರಕ್ಷಿತ – Kannada News | Passengers Escape Unhurt After Early Morning Fire Breaks Out on Bihar Train

ಸಹರ್ಸಾ, ಆಗಸ್ಟ್​ 03: ಬಿಹಾರದ ಸಹರ್ಸಾದಲ್ಲಿ ಇಂದು ಬೆಳಗಿನ ಜಾವ ಪ್ರಯಾಣಿಕರ ರೈಲೊಂದರಲ್ಲಿ ಭೀಕರ ಅಗ್ನಿ ಅವಘಡ(Fire Accident) ಸಂಭವಿಸಿದೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಮಷ್ಟಿಪುರ ಮತ್ತು ಸಹರ್ಸಾ ನಡುವೆ ಚಲಿಸುವ ‘ರೈಲು ಸಂಖ್ಯೆ 63344 ಸಿಮ್ರಿ ಭಕ್ತಿಯಾರ್ಪುರ್ ರೈಲು ನಿಲ್ದಾಣದಲ್ಲಿ ನಿಂತಿದ್ದಾಗ, ಬೆಳಗಿನ ಜಾವ ಸುಮಾರು 3 ಗಂಟೆಗೆ ರೈಲಿನ ಎಂಜಿನ್ ಮತ್ತು ಅದನ್ನು ಹೊಂದಿಕೊಂಡಿದ್ದ ಬೋಗಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿಕೊಂಡಾಗ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಆದರೆ ಬೆಂಕಿಯ ಜ್ವಾಲೆ ಮತ್ತು ಹೊಗೆಯನ್ನು ಕಂಡ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಪ್ರಯಾಣಿಕರನ್ನು ಎಚ್ಚರಿಸಿ ಹೊರತರಲು ಯಶಸ್ವಿಯಾದರು. ಬೆಂಕಿಯ ಕೆನ್ನಾಲಗೆಗೆ ಇಡೀ ಬೋಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ರೈಲ್ವೆ ಸುರಕ್ಷತಾ ಪಡೆ (RPF) ಸಿಬ್ಬಂದಿ ಸುಮಾರು ಎರಡೂವರೆ ಗಂಟೆಗಳ ಕಾಲ ಸತತ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಈ ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲವು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹಾನಿಗೊಳಗಾದ ಬೋಗಿಯನ್ನು ಬೇರ್ಪಡಿಸಿದ ನಂತರ, ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಮಾರ್ಗವನ್ನು ಸುಸ್ಥಿತಿಗೆ ತರಲಾಯಿತು.

ಮತ್ತಷ್ಟು ಓದಿ: ಧಗಧಗಿಸಿದ ಮಲೆ ಮಹದೇಶ್ವರ ಬೆಟ್ಟಡ ಒಡಲು: 100 ಎಕರೆಗೂ ಅಧಿಕ ವನಸಂಪತ್ತು ನಾಶ

ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆಯೇ ಎಂಬ ಕೋನದಲ್ಲಿ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಮೆಮು’ (MEMU) ಮತ್ತು ‘ಡೆಮು’ (DEMU) ಪ್ಯಾಸೆಂಜರ್ ರೈಲುಗಳಲ್ಲಿ ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್‌ಗಳಿಂದ ಬೆಂಕಿ ಬೀಳುವ ಘಟನೆಗಳು ಹೆಚ್ಚುತ್ತಿದ್ದು, ಪೂರ್ವ ಮಧ್ಯ ರೈಲ್ವೆ ಆಡಳಿತ ಮಂಡಳಿಯು ಈ ಘಟನೆಯ ಜಂಟಿ ಪರಿಶೀಲನೆಗೆ ಆದೇಶಿಸಿದೆ.

ಬೆಳಗಿನ ಜಾವ ನಿಲ್ದಾಣಗಳಲ್ಲಿ ನಿಲ್ಲುವ ರೈಲುಗಳಲ್ಲಿ ತುರ್ತು ನಿರ್ಗಮನ ವ್ಯವಸ್ಥೆ ಮತ್ತು ಅಗ್ನಿಶಾಮಕ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಆದೇಶಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾನಾ ಪಟೋಲೆ ಪಾದ ತೊಳೆಯುವ ವಿಡಿಯೋ ವೈರಲ್: ಬಿಜೆಪಿ ವಾಗ್ದಾಳಿ, ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ – Kannada News | Nana Patole’s Foot Washing Video Ignites Political Row in Maharashtra

ಮುಂಬೈ, ಆಗಸ್ಟ್​ 03: ಮಹಾರಾಷ್ಟ್ರ (Maharashtra)ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸ್ಪೀಕರ್ ನಾನಾ ಪಟೋಲೆ (Nana Patole) ಅವರ ಪಾದಗಳನ್ನು ಇಬ್ಬರು ವ್ಯಕ್ತಿಗಳು ತೊಳೆದು ಹೂವುಗಳನ್ನು ಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಬಿಜೆಪಿ ಇದೇ ಕಾಂಗ್ರೆಸ್ ಸಂಸ್ಕೃತಿ ಎಂದು ಲೇವಡಿ ಮಾಡಿದ್ದರೆ, ನಾನಾ ಪಟೋಲೆ ಅವರು ಬಿಜೆಪಿಯ ಆಪಾದನೆಗಳನ್ನು ತಳ್ಳಿಹಾಕಿದ್ದಾರೆ.

ವಿಡಿಯೋದಲ್ಲಿ ನಾನಾ ಪಟೋಲೆ ಅವರು ಸೋಫಾದಲ್ಲಿ ಕುಳಿತಿದ್ದು, ಇಬ್ಬರು ಯುವಕರು ಅವರ ಪಾದಗಳನ್ನು ತೊಳೆದು, ಪಾದಗಳ ಮೇಲೆ ಹೂವುಗಳು ಮತ್ತು ಹಣ್ಣುಗಳನ್ನಿಟ್ಟು ಸಾಂಪ್ರದಾಯಿಕವಾಗಿ ಗುರು ಪೂಜೆ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆಯೇ ನೆಟ್ಟಿಗರು ಹಾಗೂ ಬಿಜೆಪಿ ನಾಯಕರು ಪಟೋಲೆ ಅವರ ವಿರುದ್ಧ ‘ವಿಐಪಿ ಸಂಸ್ಕೃತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬಾವಂಕುಳೆ ಅವರು ವಿಡಿಯೋ ಕುರಿತು ಪ್ರತಿಕ್ರಿಯಿಸಿದ್ದು, ಇದು ಕಾಂಗ್ರೆಸ್ ನಾಯಕರ ನೈಜ ಸಂಸ್ಕೃತಿಯನ್ನು ತೋರಿಸುತ್ತದೆ. ಇಂತಹ ಘಟನೆಗಳಿಂದ ಅವರು ಪಾಠ ಕಲಿಯಬೇಕಿತ್ತು. ಸಾರ್ವಜನಿಕವಾಗಿ ನಕಾರಾತ್ಮಕ ಪ್ರಚಾರ ತಂದುಕೊಡುವ ಇಂತಹ ಅಭ್ಯಾಸಗಳಲ್ಲಿ ತೊಡಗಿಕೊಳ್ಳುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಓದಿ: Video: ಮಹಾರಾಷ್ಟ್ರದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಆಭರಣದಂಗಡಿ ದರೋಡೆ

ವಿವಾದದ ಕುರಿತು ಸ್ಪಷ್ಟನೆ ನೀಡಿರುವ ನಾನಾ ಪಟೋಲೆ, ಬಿಜೆಪಿಯ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ: ಅದು ಗುರು ಪೂರ್ಣಿಮೆಯ ದಿನವಾಗಿತ್ತು. ನನ್ನ ಕುಟುಂಬದ ಇಬ್ಬರು ಕಿರಿಯ ಸದಸ್ಯರು ನನ್ನನ್ನು ತಮ್ಮ ‘ಗುರು’ ಎಂದು ಭಾವಿಸಿ ಗೌರವದ ಸಂಕೇತವಾಗಿ ಪಾದ ಪೂಜೆ ಮಾಡಲು ಬಯಸಿದ್ದರು. ಇದನ್ನು ಮಾಡಲು ನಾನು ಯಾರನ್ನೂ ಬಲವಂತಪಡಿಸಿಲ್ಲ ಎಂದು ಹೇಳಿದ್ದಾರೆ.

ವಿಡಿಯೋ

ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಉಪದೇಶ ನೀಡುವ ಹಕ್ಕು ಬಿಜೆಪಿಗೆ ಇಲ್ಲ. ಶ್ರೀರಾಮ ಮಂದಿರದ ದೇಣಿಗೆಯಲ್ಲೇ ಅಕ್ರಮ ಎಸಗಿರುವವರಿಗೆ ನಮಗೆ ಸಲಹೆ ನೀಡುವ ಅರ್ಹತೆಯಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂಬರುವ ಸಾಲು ಸಾಲು ಚುನಾವಣಾ ಕಣ ಕಾವೇರುತ್ತಿರುವ ಬೆನ್ನಲ್ಲೇ, ನಾನಾ ಪಟೋಲೆ ಅವರ ಈ ವಿಡಿಯೋವನ್ನು ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ವಿಡಿಯೋದಲ್ಲಿದ್ದ ಕಾರ್ಯಕರ್ತರು ಅನಿಲ್ ಪಾಟೀಲ್ ಚಿಮೇಗಾಂವ್ಕರ್ ಮತ್ತು ಮಾಧವರಾವ್ ಪವಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಪಟೋಲೆ ಅವರು ಪಾದ ತೊಳೆಯಲು ಕೇಳಿರಲಿಲ್ಲ, ತಾವೇ ಸ್ವತಃ ನಂಬಿಕೆಯಿಂದ ಪಾದ ಪೂಜೆ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

Source link

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ! – Kannada News | Kodagu Rain Update: Bhagamandala Triveni Sangama Submerged, Roads Cut Off Amid Heavy Rainfall

ಕೊಡಗು, ಆಗಸ್ಟ್ 03: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದ್ದು, ಪ್ರವಾಹದ ಕಾರಣ ಸ್ನಾನಘಟ್ಟದಲ್ಲಿ ಪಿಂಡಪ್ರದಾನ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ ರಸ್ತೆ ಹಾಗೂ ಮಡಿಕೇರಿ ತಾಲೂಕಿನ ಹೊದವಾಡ ರಸ್ತೆ ಸಂಪೂರ್ಣ ಮುಳುಗಡೆಯಾಗಿವೆ. ಮೂರ್ನಾಡು-ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಜಿಲ್ಲೆಯ ಹಲವೆಡೆ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಚಾರ ಹಾಗೂ ದಿನನಿತ್ಯದ ಚಟುವಟಿಕೆಗಳಿಗೆ ತೀವ್ರ ತೊಡಕು ಉಂಟಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ 171… ಈ ಬಾರಿ ಅತ್ಯಧಿಕ ಪದಕ ಗೆದ್ದ ದೇಶ ಯಾವುದು ಗೊತ್ತಾ? – Kannada News | Commonwealth games 2026 Medal tally Full List

ವಿಶ್ವದ ಪ್ರಮುಖ ಹಾಗೂ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್​ವೆಲ್ತ್ ಗೇಮ್ಸ್ 2026 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಸ್ಕಾಟ್​ಲ್ಯಾಂಡ್​ನಲ್ಲಿ ಜುಲೈ 23 ರಿಂದ ಆಗಸ್ಟ್ 2 ರವರೆಗೆ ನಡೆದ ಈ ಜಾಗತಿಕ ಕ್ರೀಡಾಕೂಟದಲ್ಲಿ, ಜಗತ್ತಿನ ನಾನಾ ರಾಷ್ಟ್ರಗಳ ಸಾವಿರಾರು ಅಥ್ಲೀಟ್‌ಗಳು ತಮ್ಮ ಅದ್ಭುತ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಇನ್ನು ಇಡೀ ಕ್ರೀಡಾಕೂಟದಲ್ಲಿ ಎಂದಿನಂತೆ ಈ ಬಾರಿಯೂ ಆಸ್ಟ್ರೇಲಿಯಾ ತನ್ನ ಸಾಂಪ್ರದಾಯಿಕ ಪ್ರಾಬಲ್ಯವನ್ನು ಮುಂದುವರಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವುದು ವಿಶೇಷ.

ಆಸ್ಟ್ರೇಲಿಯಾ ಅಧಿಪತಿ:

ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಅತ್ಯಧಿಕ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಆಸ್ಟ್ರೇಲಿಯಾ, ಈ ಬಾರಿಯ ಗ್ಲಾಸ್ಗೋ ಕ್ರೀಡಾಕೂಟದಲ್ಲೂ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. ಒಟ್ಟು 171 ಪದಕಗಳನ್ನು (70 ಚಿನ್ನ, 45 ಬೆಳ್ಳಿ, 56 ಕಂಚು) ಮುಡಿಗೇರಿಸಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಇಂಗ್ಲೆಂಡ್ 110 ಪದಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಕೆನಡಾ 62 ಪದಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ.

ಭಾರತದ ಪಾರುಪತ್ಯ:

ಈ ಬಾರಿಯ ಕಾಮನ್​ವೆಲ್ತ್ ಗೇಮ್ಸ್ ಭಾರತಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಏಕೆಂದರೆ ಭಾರತಕ್ಕೆ ಸಾಮಾನ್ಯವಾಗಿ ಅತಿ ಹೆಚ್ಚು ಪದಕಗಳನ್ನು ತಂದುಕೊಡುತ್ತಿದ್ದ ಕುಸ್ತಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಶೂಟಿಂಗ್ ಮತ್ತು ಹಾಕಿಯಂತಹ ಪ್ರಮುಖ ಕ್ರೀಡೆಗಳನ್ನು ಈ ಬಾರಿಯ ಗೇಮ್ಸ್‌ನಿಂದ ಕೈಬಿಡಲಾಗಿತ್ತು.

ಇಷ್ಟೆಲ್ಲಾ ಹಿನ್ನಡೆಗಳಿದ್ದರೂ, ಭಾರತೀಯ ಅಥ್ಲೀಟ್‌ಗಳು ಎದೆಗುಂದದೆ ಅಭೂತಪೂರ್ವ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಭಾರತವು ಒಟ್ಟು 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು) ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.

ಕಾಮನ್​ವೆಲ್ತ್ ಗೇಮ್ಸ್​ 2026 ಪದಕ ಪಟ್ಟಿ:

ಶ್ರೇಯಾಂಕ  ದೇಶ  ಚಿನ್ನ  ಬೆಳ್ಳಿ  ಕಂಚು ಒಟ್ಟು ಪದಕಗಳು
1 ಆಸ್ಟ್ರೇಲಿಯಾ 70 45 55 171
2 ಇಂಗ್ಲೆಂಡ್ 29 45 36 110
3 ಕೆನಡಾ 19 20 23 62
4 ಭಾರತ 13 17 9 39
5 ಸ್ಕಾಟ್ಲೆಂಡ್ 13 9 17 39
6 ನ್ಯೂಝಿಲ್ಯಾಂಡ್ 10 14 12 36
7 ನೈಜೀರಿಯಾ 10 7 7 24
8 ಜಮೈಕಾ 10 4 5 19
9 ವೇಲ್ಸ್ 9 10 12 31
10 ಮಲೇಷ್ಯಾ 8 3 5 16
11 ಸೌತ್ ಆಫ್ರಿಕಾ 7 11 11 29
12 ನಾರ್ತ್ ಐರ್ಲೆಂಡ್ 7 4 10 21
13 ಕೀನ್ಯಾ 6 5 8 19
14 ಸೈಪ್ರಸ್ 5 1 8 14
15 ಬಹಾಮಾಸ್ 4 1 2 7
16 ಟ್ರಿನಿಡಾಡ್ ಅ್ಯಂಡ್ ಟೊಬಾಗೊ 3 2 5 10
17 ಯುಗಾಂಡಾ 3 1 3 7
18 ಸಿಂಗಾಪುರ 2 6 3 11
19 ಸಮೋವಾ 2 3 3 8
20 ಫಿಜಿ 2 2 2 6

ಒಟ್ಟಾರೆಯಾಗಿ ಹೇಳುವುದಾದರೆ, ಗ್ಲಾಸ್ಗೋ 2026ರ ಕಾಮನ್​ವೆಲ್ತ್ ಗೇಮ್ಸ್‌ನ ಪದಕ ಪಟ್ಟಿಯನ್ನು ಗಮನಿಸಿದರೆ ಜಾಗತಿಕ ಕ್ರೀಡಾರಂಗದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಸಾಮ್ರಾಜ್ಯ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ಈ ಬಾರಿಯ ಪದಕ ಪಟ್ಟಿಯಲ್ಲಿ ನೂರಕ್ಕೂ ಅಧಿಕ ಮೆಡಲ್ ಗೆದ್ದಿರುವುದು ಕೇವಲ 2 ದೇಶಗಳು ಮಾತ್ರ. ಅದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್.

ಇದನ್ನೂ ಓದಿ: ಮೊದಲು ಶ್ರೀಲಂಕಾ ವಿರುದ್ಧ ಗೆಲ್ಲಿ, ಫೈನಲ್ ಆಮೇಲೆ ನೋಡೋಣ!

ಉಳಿದ ಯಾವುದೇ ರಾಷ್ಟ್ರಗಳು ಕನಿಷ್ಠ 70ರ ಗಡಿಯನ್ನೂ ದಾಟಲು ಸಾಧ್ಯವಾಗದಿರುವುದು ಈ ಎರಡು ದೇಶಗಳ ಅಪ್ರತಿಮ ಕ್ರೀಡಾ ಶಕ್ತಿಗೆ ಸಾಕ್ಷಿ. ಇಂತಹ ಬಲಿಷ್ಠ ಪೈಪೋಟಿಯ ನಡುವೆಯೂ ಭಾರತವು 39 ಪದಕಗಳೊಂದಿಗೆ 4ನೇ ಸ್ಥಾನ ಕಾಯ್ದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

Published On – 9:50 am, Mon, 3 August 26

Source link

ನಾಮಿನಿ ಇಲ್ಲದೇ ಹೋದ್ರೆ ಮೃತ ವ್ಯಕ್ತಿಯ ಹೆಸರಿನಲ್ಲಿಟ್ಟ ಎಫ್‌ಡಿ ಹಣವು ಯಾರ ಕೈ ಸೇರುತ್ತದೆ? – Kannada News | Fixed Deposit: If you have these documents, the fixed deposit money will reach you even without a nominee….

ಕೆಲವರು ತಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಉಳಿಸಿ ಸ್ಥಿರ ಠೇವಣಿ (fixed deposit) ಇಡುತ್ತಾರೆ. ಈ ಹೂಡಿಕೆಯಿಂದ ಖಚಿತ ಆದಾಯ, ಸುರಕ್ಷಿತ ಬಂಡವಾಳ ಹಾಗೂ ಸಾಲದ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಒಂದು ವೇಳೆ ಠೇವಣಿ ಇಟ್ಟ ಹಣಕ್ಕೆ ನಾಮಿನಿ ಹೆಸರನ್ನು ಸೇರಿಸದೇ ಹೋದರೆ ಆ ಮೊತ್ತವು ಯಾರ ಕೈ ಸೇರುತ್ತದೆ ಎಂಬ ಗೊಂದಲವಿರಬಹುದು. ಆದರೆ ಸ್ಥಿರ ಠೇವಣಿ ಇಟ್ಟ ವೇಳೆ ನಾಮಿನಿ ಹೆಸರನ್ನು ಉಲ್ಲೇಖಿಸಿ.  ನಾಮಿನಿ ಇಲ್ಲದೆ ಹೋದಲ್ಲಿ ಆ ಮೊತ್ತವು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳ (Legal Heirs) ಕೈ ಸೇರುತ್ತದೆ.

ನಾಮಿನಿ ಇಲ್ಲದಿದ್ರೆ ಸ್ಥಿರ ಠೇವಣಿ ಮೊತ್ತ ಯಾರ ಕೈ ಸೇರುತ್ತದೆ?

ಸ್ಥಿರ ಠೇವಣಿಯಿರಲಿ, ಬ್ಯಾಂಕ್ ಸಾಲವೇ ಇರಲಿ, ನಾಮಿನಿ ಹೆಸರನ್ನು ಉಲ್ಲೇಖಿಸುವುದು ಬಹಳ ಮುಖ್ಯ. ಒಂದು ವೇಳೆ ನಾಮಿನಿ ಹೆಸರು ಉಲ್ಲೇಖಿಸಿದ ಪಕ್ಷದಲ್ಲಿ ಠೇವಣಿ ಇಟ್ಟ ವ್ಯಕ್ತಿ ಮೃತ ಪಟ್ಟರೆ, ಆ ಎಲ್ಲಾ ಮೊತ್ತವು ಆ ವ್ಯಕ್ತಿಯ ಪತ್ನಿ, ಮಕ್ಕಳು ಅಥವಾ ತಂದೆ ತಾಯಿಗೆ ಸೇರುತ್ತದೆ. ಒಂದು ವೇಳೆ ಮೃತ ಪಟ್ಟ ವ್ಯಕ್ತಿಗೆ ಮದುವೆಯಾಗದೆ ಹೋದಲ್ಲಿ ಈ ಸ್ಥಿರ ಠೇವಣಿಯ ಮೊತ್ತವು ಒಡಹುಟ್ಟಿದವರಿಗೆ ಸೇರುತ್ತದೆ.

ಹಣ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

  • ಖಾತೆದಾರರ ಮರಣ ಪ್ರಮಾಣ ಪತ್ರ
  • ಕಾನೂನು ಉತ್ತರಾಧಿಕಾರಿ ಪ್ರಮಾಣ ಪತ್ರ
  • ಖಾತೆದಾರರ ಜತೆಗಿನ ಸಂಬಂಧವನ್ನು ಸಾಬೀತುಪಡಿಸುವ ಗುರುತಿನ ಚೀಟಿಗಳು

ಪರಿಶೀಲನೆ ಪ್ರಕ್ರಿಯೆ ಹೇಗಿರುತ್ತದೆ?

ಹಂತ 1: ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಮೃತ ಪಟ್ಟ ವ್ಯಕ್ತಿಯ ವಾರಸುದಾರ ನೀಡಿರುವ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತದೆ.

ಹಂತ 2: ಯಾವುದೇ ವಿವಾದಗಳಿಲ್ಲದಿದ್ದರೆ, ವಾರಸುದಾರ ನೀಡಿರುವ ದಾಖಲೆಗಳು ಸರಿಯಾಗಿದ್ದರೆ, ಹಣವನ್ನು ಕಾನೂನುಬದ್ಧ ವಾರಸುದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ಹಂತ 3: ಮೃತ ವ್ಯಕ್ತಿ ಇಟ್ಟ ಸ್ಥಿರ ಠೇವಣಿ ಮೊತ್ತವು ತುಂಬಾ ಹೆಚ್ಚಾಗಿದ್ದರೆ, ಸಿವಿಲ್ ಕೋರ್ಟ್‌ನಿಂದ ಸಕ್ಸೆಷನ್ ಸರ್ಟಿಫಿಕೇಟ್ ತಂದು ಬ್ಯಾಂಕ್ ಗೆ ನೀಡುವುದು ಕಡ್ಡಾಯ.

ಇದನ್ನೂ ಓದಿ: ತಿಳಿವಳಿಕಸ್ಥರಿಗೆ ಪಿಎಫ್ ಸಾಕು ಎನ್ನುತ್ತಿದೆ ಇಪಿಎಫ್​ಒ; ಇಪಿಎಫ್ ಮತ್ತು ವಿಪಿಎಫ್ ಸಂಯೋಜನೆಯಿಂದ ಕೋಟಿ ಗಳಿಕೆ ಹೇಗೆ ಸಾಧ್ಯ?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ನಾಮಿನಿ ಇಲ್ಲದೆ ಹೋದಲ್ಲಿ ಫಿಕ್ಸೆಡ್ ಡೆಪಾಸಿಟ್ ಹಣ ಯಾರಿಗೆ ಸೇರುತ್ತದೆ?

ಉತ್ತರ: ಒಂದು ವೇಳೆ ನಾಮಿನಿ ಹೆಸರು ಇಲ್ಲದೆ ಹೋದರೆ ಹಣವು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ.

ಪ್ರಶ್ನೆ: ಮೃತ ವ್ಯಕ್ತಿ ಠೇವಣಿ ಇಟ್ಟ ಹಣ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಖಾತೆದಾರರ ಮರಣ ಪ್ರಮಾಣ ಪತ್ರ, ಕಾನೂನು ಉತ್ತರಾಧಿಕಾರಿ ಪ್ರಮಾಣ ಪತ್ರ ಹಾಗೂ ಖಾತೆದಾರರ ಜತೆಗಿನ ಸಂಬಂಧವನ್ನು ಸಾಬೀತುಪಡಿಸುವ ಗುರುತಿನ ಚೀಟಿ ಈ ದಾಖಲೆಗಳನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ನೀಡಬೇಕು.

ಪ್ರಶ್ನೆ: ಸ್ಥಿರ ಠೇವಣಿ ಇಡುವುದರಿಂದ ಆಗುವ ಪ್ರಯೋಜನಗಳೇನು?

ಉತ್ತರ: ಸ್ಥಿರ ಠೇವಣಿ ಇಡುವುದರಿಂದ ಖಚಿತ ಆದಾಯ, ಸುರಕ್ಷಿತ ಬಂಡವಾಳ ಹಾಗೂ ಸಾಲದ ಸೌಲಭ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೇದಿಕೆ ಏರಲು ನಿರಾಕರಿಸಿದ್ದಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ! – Kannada News | Police Constable Assaulted in Bhadravathi After Refusing Stage Invite

ಪೊಲೀಸ್ ಸಿಬ್ಬಂದಿ ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್

ಶಿವಮೊಗ್ಗ, ಆಗಸ್ಟ್ 03: ಭದ್ರಾವತಿ ಪಟ್ಟಣದ ಜನ್ನಾಪುರದಲ್ಲಿರುವ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಘಟನೆಯ ಹಿನ್ನೆಲೆ

ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಮಲ್ಲೇಶ್ವರ ಸಭಾಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಅವರು ಸಾರ್ವಜನಿಕರಿಗೆ ಅನ್ನದಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಭದ್ರಾವತಿ ಶಾಸಕರ ಮಗ ಗಣೇಶ್ ಅವರು ಕೂಡ ವೇದಿಕೆಯಲ್ಲಿದ್ದರು.

ಅನ್ನದಾನ ಮಾಡುತ್ತಿದ್ದ ಉಮೇಶ್ ಅವರನ್ನು ವೇದಿಕೆ ಮೇಲೆ ಬರುವಂತೆ ಆಯೋಜಕರು ಹಾಗೂ ಶಾಸಕರ ಮಗ ಗಣೇಶ್ ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನವನ್ನು ಉಮೇಶ್ ಸಮ್ಮತಿಸಲಿಲ್ಲ. ಭ್ರಷ್ಟರ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿ ಉಮೇಶ್ ವೇದಿಕೆ ಏರಲು ನೇರವಾಗಿ ನಿರಾಕರಿಸಿದರು ಎನ್ನಲಾಗಿದೆ.

ಶಾಸಕರ ಬೆಂಬಲಿಗರಿಂದ ಹಲ್ಲೆ

ಉಮೇಶ್ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಶಾಸಕ ಗಣೇಶ್ ಅವರ ಬೆಂಬಲಿಗರು ಮತ್ತು ಉಮೇಶ್ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಶಾಸಕರ ಬೆಂಬಲಿಗರು ಪೊಲೀಸ್ ಉಮೇಶ್ ಹಾಗೂ ಅವರ ಜೊತೆಯಲ್ಲಿದ್ದ ಸಹೋದರನ ಮಗ ಸುಹಾಸ್ ಮೇಲೆ ಕರುಣೆಯಿಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯ ಕುರಿತಂತೆ ಸಂತ್ರಸ್ತರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆಯೇ ನಡೆದ ಈ ಪುಂಡಾಟಿಕೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು! – Kannada News | KRS Dam Water Level Reaches 100 Feet After 6 TMC Inflow in Three Days

ಮಂಡ್ಯ, ಆಗಸ್ಟ್ 3: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಜಲಾಶಯದಲ್ಲಿ ಸುಮಾರು 8 ಅಡಿಯಷ್ಟು ನೀರು ಏರಿಕೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಕೇವಲ 17 ಟಿಎಂಸಿ ಇದ್ದ ನೀರಿನ ಸಂಗ್ರಹ ಈಗ 23 ಟಿಎಂಸಿ ತಲುಪಿದೆ. ಪ್ರಸ್ತುತ ಕೆಆರ್‌ಎಸ್ ಜಲಾಶಯಕ್ಕೆ 32,048 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 1,821 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಮಂಡ್ಯ ಭಾಗದ ರೈತರಿಗೆ ಆಶಾಭಾವನೆ ಮೂಡಿಸಿದೆ. ಹಿಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದ್ದ ಸಂದರ್ಭದಲ್ಲಿ, ಈಗ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂಬ ಖುಷಿಯಲ್ಲಿದ್ದಾರೆ.

ಆದರೆ, ಈ ಖುಷಿಯ ನಡುವೆಯೂ ಮಂಡ್ಯ ಜಿಲ್ಲೆಯಲ್ಲಿ ಮಳೆಯ ಕೊರತೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆ ಆಶ್ರಿತ ಬೆಳೆಗಳಿಗೆ ನೀರು ಸಿಗದೆ ಇರುವ ಭೀತಿ ರೈತರಲ್ಲಿ ಇನ್ನೂ ಇದೆ. ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನೂ 10-15 ದಿನ ಉತ್ತಮ ಮಳೆಯ ಅಗತ್ಯವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version