ಮುಂದುವರಿದ ವರುಣನ ಅಬ್ಬರ, ಈ ಜಿಲ್ಲೆಗಳತಾಲೂಕುಗಳಲ್ಲಿ ಆ.3ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – Kannada News | Holiday declared for schools and colleges In Shivamogga And Uttara Kannada Some Taluk On August 3rd For Heavy Rain

ಶಿವಮೊಗ್ಗ, (ಆಗಸ್ಟ್ 02): ಕರ್ನಾಟಕದಲ್ಲಿ ಮುಂಗಾರು ಮಳೆ (monsson Rain) ಆರಂಭದಲ್ಲಿ ಕೈಕೊಟ್ಟಿದ್ದರೂ ಸಹ ಜುಲೈ ಅಂತ್ಯದಿಂದ ಚುರುಕುಗೊಂಡಿದೆ. ಅದರಲ್ಲೂ ಕರಾವಳಿ (Karavali) ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವರುಣ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೂ ಮಳೆ ಅಬ್ಬರ ಇಲ್ಲಿ ನಿಂತಿಲ್ಲ. ಮುಂದಿನ ದಿನಗಳಲ್ಲೂ ಸಹ ಮುಂದುವರಿಯಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ (Shivamogga) ಹಾಗೂ ಉತ್ತರ ಕನ್ನಡ  (Uttara Kannada) ಜಿಲ್ಲೆಯ ಕೆಲ ತಾಲೂಕುಗಳಲ್ಲಿ ನಾಳೆ (ಆಗಸ್ಟ್ 03) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರ ಕನ್ನಡ ಕೆಲ ತಾಲೂಕುಗಳಲ್ಲಿ ರಜೆ

ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಣೆ.
ನಾಳೆ (ಆಗಸ್ಟ್ 03) ದಾಂಡೇಲಿ, ಜೋಯಿಡಾ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ರಜೆ ಘೋಷಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

ಸಾಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಇನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಾಗರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜಿಗೆ ನಾಳೆ (ಆಗಸ್ಟ್ 03) ರಜೆ ಘೋಷಿಸಿ ತಹಶೀಲ್ದಾರ್ ಡಾ.ಪ್ರತಿಭಾ ಆದೇಶಿಸಿದ್ದಾರೆ. ಇನ್ನು ಮಳೆಯಿಂದಾಗುವ ಅನಾಹುತ, ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು, ತಾಲೂಕು ಕಚೇರಿಯಲ್ಲಿ 24 ಗಂಟೆಯೂ ಸಹಾಯವಾಣಿ ಆರಂಭ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಗೆ ರೆಡ್​​ ಅಲರ್ಟ್​​​

ಇನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿರುವುದರಿಂದ ಸಾಗರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜಿಗೆ ನಾಳೆ (ಆಗಸ್ಟ್ 03) ರಜೆ ಘೋಷಿಸಿ ತಹಶೀಲ್ದಾರ್ ಡಾ.ಪ್ರತಿಭಾ ಆದೇಶಿಸಿದ್ದಾರೆ. ಇನ್ನು ಮಳೆಯಿಂದಾಗುವ ಅನಾಹುತ, ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು, ತಾಲೂಕು ಕಚೇರಿಯಲ್ಲಿ 24 ಗಂಟೆಯೂ ಸಹಾಯವಾಣಿ ಆರಂಭ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಅನಾಹುತ ಸೃಷ್ಟಿಸಿದೆ. ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ತಡೆ ಗೋಡೆ, ಗುಡ್ಡ ಕುಸಿತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ತುಂಗಾ ನದಿ ತುಂಬಿ ಹರಿಯುತ್ತಿದ್ದು, ನದಿಪಾತ್ರದಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಇಷೆಲ್ಲಾ ಅವಾಂತರಗಳು ಸೃಷ್ಟಿಸಿದ ವರುಣನ ಅಬ್ಬರ ಮುಂದುವರೆಯಲಿದೆ. ಹೌದು…ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ರೆಡ್ ಅಲರ್ಟ್​​​ ಸಹ ಘೋಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು? – Kannada News | Priyanka Upendra talks about her 50th movie Detective Theekshna

ಪ್ರಿಯಾಂಕಾ ಉಪೇಂದ್ರ (Priyanka Upendra) ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿ 25 ವರ್ಷಗಳಾಗಿವೆ. ನಟ ಉಪೇಂದ್ರ ಅವರನ್ನು ವಿವಾಹವಾಗಿ ಇಲ್ಲೇ ಸೆಟಲ್ ಆಗಿದ್ದಾರೆ. ನಟನೆಗಾಗಿ ಬಂದ ಪ್ರಿಯಾಂಕಾ ಉಪೇಂದ್ರ 25 ವರ್ಷಗಳ ಬಳಿಕವೂ ಕನ್ನಡ ಸಿನಿಮಾಗಳಲ್ಲಿ ನಟನೆಯನ್ನು ಮುಂದುವರೆಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು, ಮಹಿಳಾ ಆಕ್ಷನ್, ಹಾರರ್ ಸಿನಿಮಾಗಳಲ್ಲಿ ಇತ್ತೀಚೆಗೆ ಪ್ರಿಯಾಂಕಾ ಉಪೇಂದ್ರ ಹೆಚ್ಚಾಗಿ ನಟಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಉಪೇಂದ್ರ ತಮ್ಮ 50ನೇ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ಡಿಡೆಕ್ಟಿವ್ ತೀಕ್ಷ್ಣ’. ಸಿನಿಮಾದ ಬಗ್ಗೆ ಟಿವಿ9 ಕನ್ನಡದ ಜೊತೆಗೆ ನಟಿ ಪ್ರಿಯಾಂಕಾ ಚೋಪ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್ ನೇಮಕಾತಿ ಪರೀಕ್ಷೆ ಯಶಸ್ವಿ: OMR, ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದ ಕೆಇಎ – Kannada News | Karnataka Police Recruitment Exam Successful: KEA Clarifies OMR Sheet and Question Paper Numbers Need Not Match

ಕರ್ನಾಟಕ ಪರೀಕ್ಷಾ ಪ್ರಾಧಿಕಾರImage Credit source: google

ಬೆಂಗಳೂರು, ಆಗಸ್ಟ್​​ 02: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3991 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ (Police Constable Exam) ಇಂದು ನಡೆದ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಜೊತೆಗೆ OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಕ್ರಮಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.

ಗೊಂದಲಗಳಿಗೆ ಕೆಇಎ ಸ್ಪಷ್ಟನೆ

ಪೊಲೀಸ್​ ಕಾನ್ಸ್​ಟೇಬಲ್ ಪರೀಕ್ಷೆ ವೇಳೆ ಗೊಂದಲ ವಿಚಾರವಾಗಿ ಇದೀಗ ಕೆಇಎ ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಮಾಧ್ಯಮ ಪ್ರಕರಣೆ ಹೊರಡಿಸಲಾಗಿದ್ದು, ‘ಪ್ರಾಧಿಕಾರವು ಯಾವುದೇ ಪ್ರಕಟಣೆ, ಸೂಚನೆ ಅಥವಾ ನಿಯಮಾವಳಿಗಳಲ್ಲಿ ಒಎಂಆರ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆ ಒಂದೇ ಆಗಿರಬೇಕು ಎಂದು ಎಲ್ಲಿಯೂ ಹೇಳಿಲ್ಲ. ಒಎಂಆರ್ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಅನ್ನು ಬರೆಯಲು ಪ್ರತ್ಯೇಕ ಅವಕಾಶ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಎರಡೂ ಸಂಖ್ಯೆಗಳು ಒಂದೇ ಇರಬೇಕಾಗಿದ್ದಲ್ಲಿ, ಒಎಂಆರ್‌ನಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆಯನ್ನು ಪ್ರತ್ಯೇಕವಾಗಿ ಬರೆಯಲು ಸೂಚಿಸುವ ಅಗತ್ಯವೇ ಇರುತ್ತಿರಲಿಲ್ಲ’ ಎಂದಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಿಷ್ಟು 

ಪರೀಕ್ಷೆ ಮುಕ್ತಾಯದ ಬಳಿಕ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಪ್ರಸನ್ನ, ‘ರಾಜ್ಯಾದ್ಯಂತ ಇಂದು ಬಹುನಿರೀಕ್ಷಿತ ಸಿವಿಲ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯು ಅತ್ಯಂತ ಯಶಸ್ವಿಯಾಗಿ ಮತ್ತು ಸುಗಮವಾಗಿ ನಡೆದಿದೆ. ಬೆಂಗಳೂರಿನ 149 ಕೇಂದ್ರಗಳು ಸೇರಿದಂತೆ ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ಉಳಿಕೆ ಮೂಲ ವೃಂದಕ್ಕೆ ಶೇ. 92.52 ರಷ್ಟು ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಶೇ. 94 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ಗೊಂದಲ: ಪ್ರಿಯಾಂಕ್​​ ಖರ್ಗೆ ರಾಜೀನಾಮೆಗೆ ಆಗ್ರಹ

‘ಇನ್ನು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ವೆಬ್‌ಕಾಸ್ಟಿಂಗ್ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಕೆಇಎ ಕಚೇರಿಯ ಕಮಾಂಡ್ ಸೆಂಟರ್ ಮೂಲಕ ಎಲ್ಲಾ ಕೊಠಡಿಗಳ ಮೇಲೂ ನಿರಂತರ ನಿಗಾ ವಹಿಸಲಾಗಿತ್ತು’ ಎಂದರು.

ಒಎಂಆರ್ ಪ್ರತಿ ಸ್ಕ್ಯಾನ್: ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಆರಂಭ

‘ಪಾರದರ್ಶಕತೆಯ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಆರಂಭಿಸಲಾಗಿದೆ. ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ನಗರಗಳಲ್ಲಿ ಒಎಂಆರ್ ಸ್ಕ್ಯಾನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಸಂಜೆ 7 ಗಂಟೆವರೆಗೆ ಬೆಳಗಿನ ಪರೀಕ್ಷೆಯ 20 ಜಿಲ್ಲೆಗಳ ಒಎಂಅರ್ ಪ್ರತಿಗಳನ್ನು ವೆಬ್​​ಸೈಟ್​ಗೆ ಅಪ್​​ಲೋಡ್ ಮಾಡುವ ಕೆಲಸ ಪೂರ್ಣಗೊಳಿಸಲಾಗಿದೆ. ಉಳಿದ ಜಿಲ್ಲೆಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡುವ ಕೆಲಸ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದ್ದಾರೆ.

ಪರೀಕ್ಷೆ ವೇಳೆ ವಿಜಯಪುರದಲ್ಲಿ ನಡೆದ ಪ್ರಕರಣ ಕುರಿತು ವರದಿ ಕೇಳಿದ ಕೆಇಎ

‘ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಬಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ‌ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ’ ಎಂದು ಹೆಚ್.ಪ್ರಸನ್ನ ಹೇಳಿದರು.

‘ಕೆಇಎ ನಿಯಮ ಪ್ರಕಾರ ಪ್ರಶ್ನೆ ಪತ್ರಿಕೆ‌ ಮತ್ತು ಒಎಂಆರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆ ಹೊಂದಾಣಿಕೆ ಆಗಬೇಕೆಂದೇನೂ ಇಲ್ಲ. ಈ ಬಗ್ಗೆ ಸ್ಥಳೀಯ ಸಿಬ್ಬಂದಿ ಮನEKದಟ್ಟು ಮಾಡಿದರೂ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ನಿಯಮ ಪ್ರಕಾರ ಪರೀಕ್ಷೆ ಮುಗಿದ‌ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು, ಆದರೆ ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅದೂ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧ’ ಎಂದಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಹೆಚ್.ಪ್ರಸನ್ನ

‘ಏನೇ ತಕರಾರು ಇದ್ದರೂ ಪರೀಕ್ಷಾ ಕೇಂದ್ರದೊಳಗೆ ಇದ್ದೇ ಅಭ್ಯರ್ಥಿಗಳು ಅಲ್ಲಿನ ಪ್ರಾಂಶುಪಾಲರು ಅಥವಾ‌ ಮೇಲಧಿಕಾರಿಗಳನ್ನು‌ ಕೇಳಬೇಕಿತ್ತು. ಪ್ರಶ್ನೆ ಪತ್ರಿಕೆ ಕೊಡುವುದು ತಡ ಆಗಿದ್ದರೆ ಹೆಚ್ಚುವರಿ ಸಮಯಕ್ಕೆ ಬೇಡಿಕೆ ಸಲ್ಲಿಸಬೇಕಿತ್ತು. ಅದು ಬಿಟ್ಟು ಪರೀಕ್ಷಾ ಸಾಮಾಗ್ರಿ ತೆಗೆದುಕೊಂಡು ಕಾಂಪೌಂಡ್ ಹಾರಿ ಓಡಿ‌ಹೋಗಿದ್ದು ಯಾವ ಉದ್ದೇಶಕ್ಕೆ? ನ್ಯಾಯ ಸಮ್ಮತವಾದ ಪರೀಕ್ಷೆ ನಡೆಸಬೇಕೆನ್ನುವ ಉದ್ದೇಶದಿಂದ ಸಿಎಂ ಹಾಗೂ ಗೃಹ ಸಚಿವರು ಮೂರುವರೆ ಗಂಟೆ ಅಧಿಕಾರಿಗಳ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದರು. ಅಲ್ಲದೆ, ಪರೀಕ್ಷೆಯನ್ನು ವಿವಾದಗಳು ಇಲ್ಲದೆ ಸುಗಮವಾಗಿ‌ ನಡೆಸಲು ಪ್ರಾಧಿಕಾರ ಕೂಡ ಅವಿರತ ಶ್ರಮ ಹಾಕಿತ್ತು. ಇದ್ಯಾವುದನ್ನೂ ಲೆಕ್ಕಿಸದೆ ವಿನಾಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೆಚ್.ಪ್ರಸನ್ನ ಎಚ್ವರಿಕೆ ನೀಡಿದರು.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ

ಕಷ್ಟ‌ಪಟ್ಟು‌ ಓದುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಈ ರೀತಿ ಗೊಂದಲ ಸೃಷ್ಟಿಸುವವರ ಉದ್ದೇಶ ಏನು ಎನ್ನುವುದು ತನಿಖೆ ಮೂಲಕ‌ ಗೊತ್ತಾಗಬೇಕು. ಇಷ್ಟರ‌‌‌ ನಡುವೆಯೂ ತಿಕೋಟಾ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:35 pm, Sun, 2 August 26

Source link

ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾವನ್ನು ಹಿಂದಿಕ್ಕಿದ ಸ್ಪೈಡರ್ ಮ್ಯಾನ್ – Kannada News | Spider Man Brand New Day movie breaks Dhurandhar, Pathaan movie records

ಸ್ಪೈಡರ್‌ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider Man) ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಭಾರತದಲ್ಲಿ ಈ ಸಿನಿಮಾ ಜುಲೈ 30ಕ್ಕೆ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆಯೇ ಭಾರಿ ಸಂಖ್ಯೆಯ ಟಿಕೆಟ್​​ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿತ್ತು. ಅದೂ ದುಬಾರಿ ಮೊತ್ತಕ್ಕೆ. ಇದೀಗ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿಯೇ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಲೆಕ್ಷನ್ ಅಲ್ಲಿ ಹಿಂದಿಕ್ಕಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತದ ಸೂಪರ್ ಹಿಟ್ ಸಿನಿಮಾಗಳಾದ ‘ಧುರಂಧರ್’ ಮತ್ತು ಶಾರುಖ್ ಖಾನ್ ನಟನೆಯ ‘ಪಠಾಣ್’ ಕಲೆಕ್ಷನ್ ದಾಖಲೆಯನ್ನೇ ಹಿಂದಿಕ್ಕಿದೆ ಈ ಸಿನಿಮಾ.

ಸ್ಪೈಡರ್‌ಮ್ಯಾನ್ ಪಾತ್ರದಲ್ಲಿ ಟಾಮ್ ಹಾಲಂಡ್ ನಟಿಸಿರುವ ನಾಲ್ಕನೇ ಸೋಲೋ ಚಿತ್ರವು ಭಾರತದಲ್ಲಿ 72 ಕೋಟಿ ರೂಪಾಯಿ ಕಲೆಕ್ಷನ್‌ನೊಂದಿಗೆ ಆರಂಭಗೊಂಡಿತು. ಇದು ಹಾಲಿವುಡ್ ಚಿತ್ರವೊಂದರ ಸಾರ್ವಕಾಲಿಕ ಅತ್ಯುತ್ತಮ ಓಪನಿಂಗ್ ಆಗಿದೆ. ಶುಕ್ರವಾರದಂದು ಈ ಚಿತ್ರವು 50 ಕೋಟಿಗೂ ಹೆಚ್ಚು ಮೊತ್ತ ಗಳಿಸಿತು. ಕೇವಲ ಎರಡೇ ದಿನಕ್ಕೆ ಈ ಸಿನಿಮಾ 130 ಕೋಟಿಗೂ ಹೆಚ್ಚು ಮೊತ್ತವನ್ನು ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿತು. ಹಾಲಿವುಡ್​​ನ ಯಾವ ಸಿನಿಮಾ ಸಹ ಭಾರತದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡಿಲ್ಲ.

ಹಾಲಿವುಡ್ ಮಾತ್ರವಲ್ಲ, ಭಾರತದ ದೊಡ್ಡ ಸ್ಟಾರ್ ನಟರ ಸಿನಿಮಾಗಳ ದಾಖಲೆಯನ್ನು ಸಹ ಈ ಸಿನಿಮಾ ಮೊದಲ ದಿನವೇ ಮುರಿದು ಹಾಕಿತ್ತು. ಮೊದಲ ದಿನವೇ ಈ ಸಿನಿಮಾ 72 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ ಗಳಿಸಿದ್ದು 67 ಕೋಟಿಯಷ್ಟೆ. 2025ರಲ್ಲಿ ಬಿಡುಗಡೆ ಆದ ‘ಧುರಂಧರ್’ ಸಿನಿಮಾದ ಮೊದಲ ದಿನದ ದಾಖಲೆಯನ್ನು ಸಹ ಈ ಸಿನಿಮಾ ಮುರಿದಿದೆ. ಆದರೆ ‘ಧುರಂಧರ್ 2’ ಸಿನಿಮಾದ ದಾಖಲೆ ಅಳಿಸಲಾಗಿಲ್ಲ.

ಇದನ್ನೂ ಓದಿ:‘ದಿ ಆಡಸ್ಸಿ’ ಅಡ್ವಾನ್ಸ್ ಬುಕಿಂಗ್: ಐಮ್ಯಾಕ್ಸ್ ಟಿಕೆಟ್​​ಗಳು ಸೋಲ್ಡ್ ಔಟ್

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಿಡುಗಡೆ ಆದ ನಾಲ್ಕು ದಿನಕ್ಕೆ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಕೇವಲ ಭಾರತದಲ್ಲಿ. ಭಾನುವಾರದ ಗಳಿಕೆಯನ್ನೂ ಸೇರಿ ‘ಸ್ಪೈಡರ್ ಮ್ಯಾನ್’ ಸಿನಿಮಾ 300 ಕೋಟಿ ಕ್ಲಬ್ ಸೇರಿಕೊಂಡಿದೆ. ಇನ್ನೂ ಒಂದು ವಾರ ಸ್ಪೈಡರ್ ಮ್ಯಾನ್ ಸಿನಿಮಾಕ್ಕೆ ಯಾವುದೇ ಎದುರಾಳಿ ಸಿನಿಮಾಗಳು ಸಹ ಇಲ್ಲ. ಹಾಗಾಗಿ ಈ ಗಳಿಕೆ ದುಪ್ಪಟ್ಟಾಗುವ ಸಂಭವ ಹೆಚ್ಚಾಗಿದೆ. ಮುಂದಿನ ವಾರದಲ್ಲಿ ಈ ಸಿನಿಮಾ ಇನ್ನಷ್ಟು ದಾಖಲೆಗಳನ್ನು ಪುಡಿಗಟ್ಟುವುದು ಖಾತ್ರಿ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ಗೆ ಮುಂಚೆ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಾಲಿವುಡ್ ಸಿನಿಮಾ ಎಂಬ ದಾಖಲೆ ‘ಅವೇಂಜರ್ಸ್: ಎಂಡ್ ಗೇಮ್’ ಹೆಸರಲ್ಲಿತ್ತು. ಆ ಸಿನಿಮಾದ ದಾಖಲೆಯನ್ನು ಕೇವಲ ಮೂರೇ ದಿನಕ್ಕೆ ‘ಸ್ಪೈಡರ್ ಮ್ಯಾನ್’ ಸಿನಿಮಾ ಮುರಿದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿದ ಇಂಡಿಯಾ ರಾಯಲ್ಸ್ – Kannada News | Indian Royals Edge Pakistan Panthers by 2 Wickets in Thrilling Asian Legends League Win

ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ( Asian Legends League) ಇಂದು ಇಂಡಿಯನ್ ರಾಯಲ್ಸ್ ತಂಡ ಪಾಕಿಸ್ತಾನ್ ಪ್ಯಾಂಥರ್ಸ್ (Indian Royals vs  Pakistan Panthers) ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ್ ಪ್ಯಾಂಥರ್ಸ್ ತಂಡವನ್ನು 2 ವಿಕೆಟ್​ಗಳಿಂದ ಮಣಿಸಿದ ಇಂಡಿಯನ್ ರಾಯಲ್ಸ್ ತಂಡ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 168 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಡಿಯನ್ ರಾಯಲ್ಸ್ 17.4 ಓವರ್​ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವು ದಾಖಲಿಸಿತು.

167 ರನ್ ಕಲೆಹಾಕಿದ ಪಾಕ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಆದಾಗ್ಯೂ ಯಾಸಿರ್ ಬಟ್ 18 ರನ್‌ಗಳಿಸಿ ಔಟಾದರು. ನಂತರ ಇಮ್ರಾನ್ ನಜೀರ್ ಮತ್ತು ಇಬ್ರಾರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಮ್ರಾನ್ 47 (29) ರನ್‌ಗಳಿಗೆ ಔಟಾದರೂ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಯಾಸಿರ್ ಬಟ್ 6 (12) ಗೆ ಔಟಾದರು. ಕೊನೆಯಲ್ಲಿ, ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿ ಪಾಕಿಸ್ತಾನವನ್ನು 167 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಸುಲಭವಾಗಿ ಗೆದ್ದ ಭಾರತ

168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಕಳಪೆ ಆರಂಭ ಸಿಕ್ಕಿತು. ನಮನ್ ಓಜಾ 4 (4) ರನ್‌ಗಳಿಗೆ ಔಟಾದರು. ಅಭಿಷೇಕ್ ಕೂಡ ಬೇಗನೇ ಔಟಾದರು. ಆ ನಂತರ ಬಂದ ಮೊಹಮ್ಮದ್ ಇರ್ಫಾನ್ ಕೂಡ ಹೆಚ್ಚಿನದನ್ನು ಮಾಡಲಿಲ್ಲ. ಹೀಗಾಗಿ ಭಾರತ ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು, ಆದರೆ ರಿಷಿ ಧವನ್ ಮತ್ತು ಸರುಲ್ ತಂಡದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾದ ನಂತರ, ಭಾರತವು ನಾಲ್ಕು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದಾಗ್ಯೂ, ಕೊನೆಯ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಹೊಡೆತಗಳನ್ನು ಆಡಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರ ಪರಿಣಾಮವಾಗಿ ಭಾರತ ಇನ್ನೂ 14 ಎಸೆತಗಳು ಬಾಕಿ ಇರುವಾಗ ಪಂದ್ಯವನ್ನು ಗೆದ್ದುಕೊಂಡಿತು.

ತಂಡದ ಪರ ರಿಷಿ ಧವನ್ 32 ಎಸೆತಗಳಲ್ಲಿ 50 ರನ್ ಗಳಿಸಿದರೆ, 29 ಎಸೆತಗಳಲ್ಲಿ 46 ರನ್ ಗಳಿಸಿ ಸರುಲ್ ಔಟಾದರು. ಈ ಇಬ್ಬರು ಆಟಗಾರರ ಔಟಾದ ನಂತರ ಭಾರತ ತಂಡ ಗೆಲುವಿಗಾಗಿ ಸಾಕಷ್ಟು ಕಷ್ಟಪಡಬೇಕಾಯಿತ್ತಾದರೂ ಕೊನೆಯಲ್ಲಿ ಗೆಲುವು ಸಾಧಿಸಿತು. ಈ ಪಂದ್ಯಾವಳಿಯಲ್ಲಿ ಇದು ಇಂಡಿಯನ್ ರಾಯಲ್ಸ್‌ ತಂಡದ ಎರಡನೇ ಗೆಲುವು. ಇದಕ್ಕೂ ಮೊದಲು ಭಾರತ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಟೈಗರ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:03 pm, Sun, 2 August 26

Source link

‘ಮೋದಿ ವಿಫಲರಾಗಿದ್ದಾರೆ…’ – ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಮುಸ್ಲಿಂ ನಾಯಕ ಶೆಹಜಾದ್ ಪೂನಾವಾಲಾ – Kannada News | Shehzad Poonawalla shares video message, gives sarcastic reason why Modi has failed

ನವದೆಹಲಿ, ಆಗಸ್ಟ್ 2: ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ (Shehzad Poonawalla) ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯಾತ್ಮಕ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರತಿಪಕ್ಷಗಳು ಮತ್ತು ಮೋದಿಯವರ ಟೀಕಾಕಾರರನ್ನು ಲೇವಡಿ ಮಾಡಿದ್ದಾರೆ. ಮೊನ್ನೆಯಷ್ಟೇ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ತಮ್ಮ ಟ್ವಿಟ್ಟರ್ ಬಯೋದಲ್ಲಿ ಬಿಜೆಪಿ ಪದದ ಉಲ್ಲೇಖವನ್ನು ತೆಗೆದುಹಾಕಿ, ಅವರು ಪಕ್ಷದಿಂದಲೇ ನಿರ್ಗಮಿಸುತ್ತಿರಬಹುದು ಎನ್ನುವ ಶಂಕೆಗೆ ಎಡೆ ಮಾಡಿಕೊಟ್ಟಿದ್ದರು. ಅದರ ಬೆನ್ನಲ್ಲೇ ಅವರು ಮೋದಿ ವಿಫಲರಾಗಿದ್ದಾರೆ ಎಂದು ಹೇಳಿ ವಿಡಿಯೋ ಮೆಸೇಜ್ ಹಾಕಿ ಕುತೂಹಲ ಮೂಡಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ‘ನೀಟ್’ (NEET) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಕೆಲವು ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಾಯಿಯವರ ವಿರುದ್ಧ ಶಬ್ದಕೋಶವಿಲ್ಲದ ದುರ್ಭಾಷೆ ಬಳಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಅವರೆಲ್ಲ ತಪ್ಪುದಾರಿ ತುಳಿದ ಮಕ್ಕಳು, ಅವರನ್ನು ಕ್ಷಮಿಸಿಬಿಡಿ” ಎಂದು ಸಾರ್ವಜನಿಕರಲ್ಲಿ ಮತ್ತು ಪೊಲೀಸರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಹೇಳಿಕೆಯನ್ನು ಉಲ್ಲೇಖಿಸಿ ಶೆಹಜಾದ್ ಪೂನಾವಾಲಾ ಪ್ರಧಾನಿ ಮೋದಿಯ ‘ವೈಫಲ್ಯ’ದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ವೀಡಿಯೋದಲ್ಲಿ ಪೂನಾವಾಲಾ ಹೇಳಿದ್ದೇನು?

ಮೋದಿ ಅವರು ಇಂದಿರಾ ಗಾಂಧಿಯವರಂತೆ ಸರ್ವಾಧಿಕಾರಿಯಾಗಲು ವಿಫಲರಾಗಿದ್ದಾರೆ ಎಂದಿದ್ದಾರೆ ಶೆಹಜಾದ್ ಪೂನಾವಾಲಾ. “ನನಗೆ ಪ್ರಧಾನಿ ಮೋದಿ ಅವರ ಮೇಲೆ ತೀವ್ರ ನಿರಾಶೆಯಾಗಿದೆ. ಅಧಿಕಾರಕ್ಕೆ ಬಂದು 12 ವರ್ಷಗಳಾದರೂ ಅವರಿಗೆ ಇನ್ನೂ ಸರಿಯಾದ ‘ಏಕಾಧಿಪತಿ’ (Dictator) ಆಗಲು ಸಾಧ್ಯವಾಗಿಲ್ಲ. ಪ್ರತಿಪಕ್ಷಗಳು ಮತ್ತು ಎಡಪಂಥೀಯ ಉದಾರವಾದಿಗಳು (Left Liberals) ಅವರ ಮೇಲೆ ಇಟ್ಟುಕೊಂಡಿದ್ದ ಆಶಯಕ್ಕೆ ಮೋದಿ ನೀರೆರೆಚಿದ್ದಾರೆ” ಎಂದು ವೀಡಿಯೋದಲ್ಲಿ ಪೂನಾವಾಲಾ ತಮಾಷೆ ಮಾಡಿದ್ದಾರೆ.

“ನಿಜವಾದ ಸರ್ವಾಧಿಕಾರಷಾಹಿ (Dictatorship) ಎಂದರೆ ಏನು ಎಂದು ತಿಳಿಯಲು ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರಿಂದ ಕಲಿಯಬೇಕು. ಪ್ರತಿಪಕ್ಷಗಳ ನಾಯಕರನ್ನು ಜೈಲಿಗಟ್ಟಿದ್ದು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದು ಕಾಂಗ್ರೆಸ್ ಆಡಳಿತದಲ್ಲಿ” ಎಂದು ಶೆಹಜಾದ್ ಆರೋಪಿಸಿದ್ದಾರೆ.

ಶೆಹಜಾದ್ ಅವರ ಎಕ್ಸ್ ಪೋಸ್ಟ್

ವಿಪಕ್ಷಗಳ ಆಡಳಿತದ ರಾಜ್ಯಗಳ ವಿರುದ್ಧ ಟೀಕೆ: ಪ್ರಧಾನಿ ಮೋದಿ ಅವರು ತಮ್ಮನ್ನು ನಿಂದಿಸಿದ ಮಕ್ಕಳನ್ನು ಕ್ಷಮಿಸಿ ಸರಿಯಾದ ದಾರಿಗೆ ತರಬೇಕು ಎನ್ನುತ್ತಿದ್ದರೆ, ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ (ಕೇರಳ, ಕರ್ನಾಟಕ) ಸಣ್ಣ ಸೋಶಿಯಲ್ ಮೀಡಿಯಾ ಪೋಸ್ಟ್ ಅಥವಾ ಪೋಸ್ಟರ್ ಹಾಕಿದ್ದಕ್ಕೂ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ವೀಡಿಯೋದಲ್ಲಿ ಪೂನಾವಾಲಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ, ಅರಾಜಕತೆಗಲ್ಲ: ನೀಟ್ ಪ್ರತಿಭಟನೆಗಳ ಕುರಿತು ಸ್ಮೃತಿ ಇರಾನಿ ಖಡಕ್ ಹೇಳಿಕೆ

ನೀಟ್ ಪರೀಕ್ಷಾ ಅಕ್ರಮದ ಪ್ರತಿಭಟನೆ ವೇಳೆ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿ ಸರ್ಕಾರವನ್ನು “ಏಕಾಧಿಪತಿ ಸರ್ಕಾರ” ಎಂದು ಕಟುವಾಗಿ ಟೀಕಿಸಿದ್ದರು. ಪ್ರತಿಪಕ್ಷಗಳ ಈ ಹೇಳಿಕೆಗೆ ತಿರುಗೇಟು ನೀಡಲು ಶೆಹಜಾದ್ ಪೂನಾವಾಲಾ ಈ ವ್ಯಂಗ್ಯಾತ್ಮಕ ವೀಡಿಯೋ ಹಂಚಿಕೊಂಡಿದ್ದಾರೆ.

ಯಾರು ಈ ಶೆಹಜಾದ್ ಪೂನಾವಾಲಾ?

ಕೆಲ ವರ್ಷಗಳ ಹಿಂದೆ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್​ನಿಂದ ಬಿಜೆಪಿ ಸೇರಿದ್ದರು. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ನಡೆಯುವ ಡಿಬೇಟ್​ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಚಿರಪರಿಚಿತರೆನಿಸಿದ್ದಾರೆ. ಮುಸ್ಲಿಮರಾಗಿರುವ ಇವರು ತಮ್ಮನ್ನು ಇಸ್ಲಾಮ್ ಮತದಲ್ಲಿ ಹುಟ್ಟಿದನವೆಂದು, ಹಿಂದೂ ಸಂಸ್ಕೃತಿಯನ್ನು ಅನುಸರಿಸುವವನೆಂದು ಹೇಳಿಕೊಳ್ಳುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ಗೊಂದಲ: ಪ್ರಿಯಾಂಕ್​​ ಖರ್ಗೆ ರಾಜೀನಾಮೆಗೆ ಆಗ್ರಹ – Kannada News | Karnataka Police Constable Exam Chaos: R Ashoka spark Government, Demands Priyank Kharge’s Resignation

ಆರ್. ಅಶೋಕ್​​, ಪ್ರಿಯಾಂಕ್​ ಖರ್ಗೆImage Credit source: tv9 kannada

ಬೆಂಗಳೂರು, ಆಗಸ್ಟ್​​ 02: ರಾಜ್ಯಾದ್ಯಂತ ಇಂದು ಬಹುನಿರೀಕ್ಷಿತ 3 ಸಾವಿರದ 991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ (Police Constable Exam) ಅಂತ್ಯವಾಗಿದೆ. ಆದರೆ ಒಂದೆಡೆ OMR ಶೀಟ್ ಅದಲು ಬದಲು, ಮತ್ತೊಂದೆಡೆ ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಭ್ಯರ್ಥಿಗಳು ರೊಚ್ಚಿಗೆದ್ದಿದ್ದರು. ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka), ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದಿದ್ದಾರೆ. ಅಷ್ಟೇ ಅಲ್ಲದೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆರ್.ಅಶೋಕ್ ವಾಗ್ದಾಳಿ 

ಈ ಕುರಿತಾಗಿ ಟ್ವೀಟ್ ಮಾಡಿರುವ ಆರ್.ಅಶೋಕ್, ‘ಮತ್ತೊಂದು ನೇಮಕಾತಿ ಪರೀಕ್ಷೆ, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ. ಮಗದೊಮ್ಮೆ ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿದ ರಾಜ್ಯ ಕಾಂಗ್ರೆಸ್ ಸರ್ಕಾರ’ ಎಂದು ಕಿಡಿಕಾರಿದ್ದಾರೆ.

ಆರ್.ಅಶೋಕ್ ಟ್ವೀಟ್

‘ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, OMR ಶೀಟ್‌ಗಳ ಗೊಂದಲ ಹಾಗೂ ಅಭ್ಯರ್ಥಿಗಳು ಪರೀಕ್ಷೆಯಿಂದ ಹೊರನಡೆಯುವಂತಾದ ಘಟನೆ ಆಡಳಿತದ ಸಂಪೂರ್ಣ ವೈಫಲ್ಯ ಮತ್ತು ಕ್ಷಮಿಸಲಾಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ’ ಎಂದಿದ್ದಾರೆ.

ಪ್ರಿಯಾಂಕ್​​ ಖರ್ಗೆ ತಕ್ಷಣ ರಾಜೀನಾಮೆ ನೀಡಬೇಕು

‘ಸಾವಿರಾರು ಅಭ್ಯರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಈ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ನೀಡಿದ್ದು ಗೊಂದಲ, ಅಸಮರ್ಥ ಆಡಳಿತ ಮತ್ತು ಭಗ್ನಗೊಂಡ ಕನಸುಗಳ ಗುಚ್ಛವನ್ನ. ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಗೊಂದಲವಾದ ಪರೀಕ್ಷೆಯನ್ನು ಸಂಬಂಧಿತ ಕೇಂದ್ರದಲ್ಲಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕು. ಜೊತೆಗೆ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಇನ್ನು ಯುವಕರ ಭವಿಷ್ಯ ಹಾಳು ಮಾಡಿದ ಸರ್ಕಾರಕ್ಕೆ ಉತ್ತರದಾಯಿತ್ವ ಯಾರು? ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರೇ ಗೃಹ ಸಚಿವರಿಂದ ತಕ್ಷಣವೇ ರಾಜೀನಾಮೆ ಪಡೆಯಿರಿ’ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

ಹಾಸನದಲ್ಲೂ ಎಡವಟ್ಟು: ನೇಮಕಾತಿ ಪರೀಕ್ಷೆಯ ಅವ್ಯವಸ್ಥೆಗೆ ಮತ್ತೊಂದು ಸಾಕ್ಷಿ!

‘ವಿಜಯಪುರ, ಹಾವೇರಿ ಬಳಿಕ ಹಾಸನದಲ್ಲೂ OMR ಶೀಟ್ ಮತ್ತು ಪ್ರಶ್ನೆಪತ್ರಿಕೆ ಬದಲಾವಣೆ ಕುರಿತು ಗಂಭೀರ ಗೊಂದಲ ನಡೆದಿದೆ ಎಂಬುದನ್ನು ಮಾಧ್ಯಮಗಳು ಸಾಕ್ಷಿ ಸಮೇತ ವರದಿ ಮಾಡುತ್ತಿವೆ. ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿರುವ ಈ ಅವ್ಯವಸ್ಥೆಗಳ ನಡುವೆಯೂ ಗೃಹ ಸಚಿವರು ಕಣ್ಮುಚ್ಚಿ ಕುಳಿತಿರುವುದು ಅತ್ಯಂತ ಖಂಡನೀಯ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ

‘ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವ ಈ ಸಂಪೂರ್ಣ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ತಕ್ಷಣ ರಾಜೀನಾಮೆ ನೀಡಬೇಕು. ಸಿಎಂ ಡಿಕೆ ಶಿವಕುಮಾರ್​ ಅವರೇ ಯುವಕರಿಗೆ ನ್ಯಾಯ ದೊರಕಿಸಿಕೊಡಿ. ರಾಜ್ಯ ಸರ್ಕಾರ ಕೂಡಲೇ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:22 pm, Sun, 2 August 26

Source link

ಮಗುವನ್ನು ಬಲಿಪಡೆದ ಕುರ್​​​​​​​​​​ಕುರೆ, ಇದ್ದ ಏಕೈಕ ಪುತ್ರನನ್ನ ಕಳೆದುಕೊಂಡ ಪೋಷಕರು – Kannada News | 3 year old Boy Dies After Swallowing Toy Ball Found Inside Chips Packet at Mysuru

ಮೈಸೂರು, (ಆಗಸ್ಟ್ 02): ಕುರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್​ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು (mysuru) ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಘಟನೆ ಶನಿವಾರ ನಡೆದಿದೆ. ಗೌರಿಪುರ ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದ್ದಾನೆ. ಕುರುಕುರೆಯೊಂದಿಗೆ ಆ ಪ್ಲಾಸ್ಟಿಕ್ ಬಾಲ್ ಅನ್ನು ಬಾಯಿಗೆ ಹಾಕಿ ನುಂಗಿದ್ದಾನೆ. ತಕ್ಷಣವೇ ಆ ಬಾಲ್ ಗಂಟಲಿಗೆ ಅಡ್ಡವಾಗಿ ಸಿಕ್ಕಿಕೊಂಡು ಮಗು ಉಸಿರಾಡಲು ಪರದಾಡಿ ಒದ್ದಾಡತೊಡಗಿದೆ. ​ಪರಿಸ್ಥಿತಿಯ ಗಂಭೀರತೆ ಅರಿತ ಮನೆಯವರು ಕೂಡಲೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಮಾರ್ಗಮಧ್ಯದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದೆ.

ಇದ್ದ ಒಂದೇ ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕ ಆವರಿಸಿದೆ. ಇನ್ನು ಈ ದುರ್ಘಟನೆಗೆ ನೇರ ಹೊಣೆಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಮಗುವಿನ ಅಕಾಲಿಕ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಮೃತನ ಮನೆ ಬಳಿಗೆ ಧಾವಿಸಿ ಕಂಬನಿ ಮಿಡಿದ್ದಾರೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

ಇನ್ಮುಂದೆಯಾದರೂ ಇಂತಹ ತಿಂಡಿ-ತಿನಿಸುಗಳ ಜೊತೆ ಕಂಪನಿಗಳು ಆಕರ್ಷಣೆಗಾಗಿ ಯಾವುದೇ ರೀತಿಯ ಆಟಿಕೆಗಳು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಹಾಕದಂತೆ ಕಠಿಣ ನಿಯಮ ಜಾರಿಗೆ ತರಬೇಕು. ಈ ಬಗ್ಗೆ ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಆಗ ಮಾತ್ರ ಇಂತಹ ಘಟನೆಗಳಿಗೆ ಬ್ರೇಕ್ ಹಾಕಬಹುದಾಗಿದೆ.

ಆಗಿದ್ದೇನು? ಶನಿವಾರ ಮಗು ಅಳುತ್ತಿದ್ದುದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ಕೊಡಿಸಿದ್ದಾರೆ. ಕುರ್ ಕುರೆ ಪ್ಯಾಕೆಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಇದ್ದ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್ ಕುರೆಯೊಂದಿಗೆ ನುಂಗಿದೆ. ಆಗ ಪ್ಲಾಸ್ಟಿಕ್ ಬಾಲ್ ಗಂಟಲಿಗೆ ಸಿಲುಕಿ ಮಗು ಒದ್ದಾಡಿದೆ. ಮಗು ಒದ್ದಾಡುವುದನ್ನು ಗಮನಿಸಿದ ಪೋಷಕರು ತಕ್ಷಣ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಪೋಷಕರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಕೃಷಿಕನಾದ ಸಂತೋಷ್ ಹಾಗೂ ಐಶ್ವರ್ಯ ದಂಪತಿಗೆ ಮದುವೆಯಾಗಿ, ಐದು ವರ್ಷದ ನಂತರ ಗಂಡು ಮಗು ಜನಿಸಿತ್ತು‌. ಎಲ್​ಕೆಜಿ ಓದುತ್ತಿದ್ದ 5 ವರ್ಷದ ಮುಕುಂದ್ ಮಯೂರ್, ತಾತನಾದ ಶಂಕರ್ ನಾಯಕ ಅವರ ಪತ್ನಿ ಸಹೋದರನಾದ ರಾಜನಾಯಕರ ಮನೆಯಲ್ಲಿ ಗುರುವಾರ ಕಾರ್ಯಕ್ರಮ ಇದ್ದುದರಿಂದ, ಅಂದು ಕುಟುಂಬ ಸಮೇತ ರಾಜನಾಯಕರ ಮನೆಯಲ್ಲಿ ಇದ್ದರು. ಗುರುವಾರ ಸಂಜೆ ಕಾರ್ಯ ಮುಗಿಸಿ ಸಂತೋಷ್ ಹಾಗೂ ಐಶ್ವರ್ಯ ಹುಣಸೂರಿನ ಗೌರಿಪುರಕ್ಕೆ ಹೋಗುವಾಗ, ರಾಜನಾಯಕ ಅವರು ಎರಡು ದಿವಸ ಮಗು ಇದ್ದು ಹೋಗಲಿ ಎಂದು ಉಳಿಸಿಕೊಂಡಿದ್ದರು. ಆದ್ರೆ, ವಿಧಿ ಬಾಲಿನಲ್ಲಿ ಬಂದು ಮಗುವನ್ನು ಬಲಿಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾಕಿ ತಂಡದ ಜೆರ್ಸಿ ಬಣ್ಣ ಬದಲಾವಣೆಯನ್ನು ಟೀಕಿಸಿದ ಕಾಂಗ್ರೆಸ್; ಹಾಕಿ ಇಂಡಿಯಾದ ಸಮರ್ಥನೆ ಏನು? – Kannada News | Hockey India Orange Jersey: Mallikarjun Kharge Criticizes Identity Shift, Team Cites Visibility

2026 ರ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ (Hockey India), ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಜೆರ್ಸಿ ಬಣ್ಣವನ್ನು ಬದಲಿಸಿದೆ. ಈ ಮೊದಲು ಭಾರತ ಹಾಕಿ ತಂಡ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡುತ್ತಿತ್ತು. ಹಾಗೆಯೇ ಬಿಳಿ ಮತ್ತು ಕೇಸರಿ ಮಿಶ್ರಿತ ಜೆರ್ಸಿಯನ್ನೂ ತೊಟ್ಟು ಆಡುತ್ತಿತ್ತು. ಇದೀಗ ಸಂಪೂರ್ಣ ಕೇಸರಿ ಬಣ್ಣದ ಜೆರ್ಸಿಯನ್ನು ತೊಟ್ಟು ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಣಕ್ಕಿಳಿಯಿವೆ. ಇದ್ದಕ್ಕಿದಂತೆ ಹಾಕಿ ತಂಡದ ಜೆರ್ಸಿ ಬಣ್ಣವನ್ನು ( Indian Hockey Jersey Controversy) ಬದಲಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಅದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ ಕೂಡ ಹಾಕಿ ಇಂಡಿಯಾದ ಈ ನಿರ್ಧಾರವನ್ನು ಪ್ರಶ್ನಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದನ್ನು ಕಟುವಾಗಿ ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಭಾರತೀಯ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ಬದಲಾಯಿಸುವ ನಿರ್ಧಾರವು ಕೇವಲ ಕ್ರೀಡಾ ನಿರ್ಧಾರವಲ್ಲ, ಬದಲಾಗಿ ಕೋಟ್ಯಂತರ ಭಾರತೀಯರ ಭಾವನೆಗಳು ಮತ್ತು ನಮ್ಮ ಕ್ರೀಡಾ ಸಂಪ್ರದಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಲವು ವರ್ಷಗಳಿಂದ ಭಾರತೀಯ ಆಟಗಾರರನ್ನು “ಮೆನ್ ಇನ್ ಬ್ಲೂ”, “ದಿ ಬ್ಲೂಸ್” ಅಥವಾ “ದಿ ಬ್ಲೂ ಟೈಗರ್ಸ್” ಎಂದು ಪ್ರಪಂಚದಾದ್ಯಂತ ಕರೆಯಲಾಗುತ್ತದೆ. ಈ ಗುರುತು ಕೇವಲ ಜೆರ್ಸಿಯ ಬಣ್ಣದ ಬಗ್ಗೆ ಅಲ್ಲ, ಬದಲಾಗಿ ಭಾರತೀಯ ಕ್ರೀಡೆಗಳ ಪರಂಪರೆಯಾಗಿದೆ.

ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆ

ಈ ಐತಿಹಾಸಿಕ ಗುರುತನ್ನು ಬದಲಾಯಿಸುವ ಅಗತ್ಯ ಇಂದು ಏಕೆ ಬಂತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಪ್ರಶ್ನೆ ಬಣ್ಣದ ಬಗ್ಗೆ ಅಲ್ಲ, ಬದಲಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಭಾವನೆಗಳಿಗೆ ಗೌರವದ ಬಗ್ಗೆ. ಇದರ ಜೊತೆಗೆ ರಾಷ್ಟ್ರೀಯ ಗುರುತು ಮತ್ತು ಚಿಹ್ನೆಗಳನ್ನು ಬದಲಾಯಿಸುವ ಪ್ರವೃತ್ತಿಯನ್ನು ಪ್ರಶ್ನಿಸಿದ ಖರ್ಗೆ, ಈ ರೀತಿಯ ನಿರ್ಧಾರಗಳನ್ನು ಸಾರ್ವಜನಿಕ ಒಪ್ಪಿಗೆಯಿಲ್ಲದೆ ಮಾಡಲಾಗಿದೆ. ಈ ಹಿಂದೆ ರಸ್ತೆ ಪಾದಚಾರಿ ಮಾರ್ಗಗಳಲ್ಲಿ, ಸಂಸತ್ತಿನ ಸಿಬ್ಬಂದಿಯ ಸಮವಸ್ತ್ರಗಳಲ್ಲಿ, ದೂರದರ್ಶನ ಲೋಗೋದಲ್ಲಿ ಮತ್ತು ಈಗ ಕ್ರೀಡಾ ಜೆರ್ಸಿಗಳಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಹೀಗಾಗಿ ರಾಷ್ಟ್ರೀಯ ಚಿಹ್ನೆಗಳು, ಕ್ರೀಡೆಗಳು ಮತ್ತು ಕ್ರೀಡಾಪಟುಗಳನ್ನು ಸಂಕುಚಿತ ಮನಸ್ಸಿನ ರಾಜಕೀಯ ಪ್ರಯೋಗದ ಸಾಧನವಾಗಿ ಬಳಸಬಾರದು. ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ತಕ್ಷಣವೇ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯ ಜ್ಞಾನ ಮತ್ತು ಒಪ್ಪಿಗೆಯಿಲ್ಲದೆ ಇಂತಹ ಮಹತ್ವದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಯಿತು ಎಂಬುದನ್ನು ವಿವರಿಸಬೇಕು ಎಂದಿದ್ದಾರೆ.

ಹಾಕಿ ಇಂಡಿಯಾದ ಸಮರ್ಥನೆ ಏನು?

ಇನ್ನು ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ಹಾಕಿ ಇಂಡಿಯಾ ಅಧ್ಯಕ್ಷ ಹಾಗೂ ಆಟಗಾರರು ಕೂಡ ಪ್ರತಿಕ್ರಿಯಿಸಿದ್ದು, ‘ಟೀಂ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ. ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.

ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

Source link

ಏಕದಿನ ವಿಶ್ವಕಪ್ ನಡೆಯುವ 12 ಮೈದಾನಗಳಲ್ಲಿ ಕೊಹ್ಲಿ ಪ್ರದರ್ಶನ ಹೇಗಿದೆ? – Kannada News | Virat Kohli’s 2027 World Cup Impact: Africa Performance and Team India’s Hopes

ಕೊಹ್ಲಿ ಇನ್ನೂ ನಮೀಬಿಯಾದ ಬಫಲೋ ಪಾರ್ಕ್, ಬ್ಲೂಮ್‌ಫಾಂಟೈನ್, ವಿಕ್ಟೋರಿಯಾ ಮತ್ತು ವಿಂಡ್‌ಹೋಕ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಆಡಿಲ್ಲ. ಆದಾಗ್ಯೂ, ಈ ಅಂಕಿಅಂಶಗಳು ಕೊಹ್ಲಿ 2027 ರ ವಿಶ್ವಕಪ್‌ನಲ್ಲಿ ಆಫ್ರಿಕನ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರನಾಗಬಹುದು ಎಂಬುದನ್ನು ತೋರಿಸುತ್ತವೆ.

Source link

Exit mobile version