ಐಪಿಎಲ್​​ಗಾಗಿ ಕಾಯುತ್ತಿದ್ದಾರೆ ರಾಮ್ ಚರಣ್, ಕಾರಣ ಏನು ಗೊತ್ತೆ? – Kannada News | Ram Charan waiting for IPL 2026 to promote his upcoming Peddi movie

ಆರ್​​ಆರ್​​ಆರ್ ಸಿನಿಮಾದ ಬಳಿಕ ರಾಮ್ ಚರಣ್ (Ram Charan) ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾ ಅಟ್ಟರ್ ಫ್ಲಾಫ್ ಆಗಿವೆ. ಆರ್​​ಆರ್​​ಆರ್ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ಅಟ್ಟರ್ ಫ್ಲಾಫ್ ಆಗಿವೆ. ಇದೀಗ ಹೊಸ ಸಿನಿಮಾದ ಬಿಡುಗಡೆಗೆ ರಾಮ್ ಚರಣ್ ರೆಡಿ ಆಗುತ್ತಿದ್ದು, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ, ಆದರೆ ರಾಮ್ ಚರಣ್ ಐಪಿಎಲ್ 2026ಗಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ.

ರಾಮ್ ಚರಣ್ ನಟಿಸಿರುವ ‘ಪೆದ್ದಿ’ ಸಿನಿಮಾ ಕ್ರಿಕೆಟ್ ಆಟದ ಕುರಿತಾದ ಕತೆಯನ್ನು ಹೊಂದಿದ್ದು, ಸಿನಿಮಾನಲ್ಲಿ ನಾಯಕ ರಾಮ್ ಚರಣ್ ಹಳ್ಳಿಯೊಂದರ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿಯೇ ಸಿನಿಮಾದ ಪ್ರಚಾರವನ್ನು ಭಾರತದ ಕ್ರಿಕೆಟ್ ಹಬ್ಬವೇ ಆಗಿರುವ ಐಪಿಎಲ್​​ನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಇದೇ ಐಪಿಎಲ್ ಅನ್ನು ಗುರಿಯಾಗಿಸಿಕೊಂಡು ಹಲವು ಪ್ರಚಾರದ ಯೋಜನೆಗಳನ್ನು ಚಿತ್ರತಂಡ ಮಾಡಿಕೊಂಡಿದೆ.

ಮೂಲಗಳ ಪ್ರಕಾರ ಐಪಿಎಲ್​​ನ ಮುಖ್ಯ ಇವೆಂಟ್​​ನಲ್ಲಿಯೇ ‘ಪೆದ್ದಿ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಇದೆಯಂತೆ. ಅದರ ಜೊತೆಗೆ ರಾಮ್ ಚರಣ್ ಸಹ ಹಲವು ಐಪಿಎಲ್ ಪಂದ್ಯಗಳಿಗೆ ತೆರಳಿ ಅಲ್ಲಿಂದಲೇ ಸಿನಿಮಾದ ಪ್ರಚಾರ ಮಾಡಲಿದ್ದಾರೆ. ಹೈದರಾಬಾದ್ ತಂಡದ ಜೊತೆಗೆ ‘ಪೆದ್ದಿ’ ತಂಡ ಪ್ರಚಾರದ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಾರೆ ಐಪಿಎಲ್ ಅನ್ನು ಸಂಪೂರ್ಣವಾಗಿ ತಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ:‘ಪೆದ್ದಿ’ ಚಿತ್ರದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್; ರಾಮ್ ಚರಣ್ ಸ್ಟೆಪ್ಸ್ ಸೂಪರ್

‘ಪೆದ್ದಿ’ ಸಿನಿಮಾವು ಕ್ರಿಕೆಟಿಗನೊಬ್ಬನ ಕತೆಯನ್ನು ಒಳಗೊಂಡಿದೆ. ಕ್ರಿಕೆಟ್ ಅನ್ನು ಅತಿಯಾಗಿ ಪ್ರೀತಿಸುವ ಹಳ್ಳಿ ಯುವಕನೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಕನ್ನಡದ ಶಿವಣ್ಣ ಸಹ ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರು ‘ಉಪ್ಪೆನ’ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಇದು ನಮ್ಮ ದೌರ್ಭಾಗ್ಯ’; ನಟಿಯರನ್ನು ಅಸಭ್ಯ ಕೋನಗಳಲ್ಲಿ ತೋರಿಸಿದ ಬಗ್ಗೆ ಶಿವಣ್ಣ ಬೇಸರ – Kannada News | Kannada Actresses Objectified: Shivanna’s Outrage and Industry Call for Respect, Dignity

ಸಿನಿಮಾ ಈವೆಂಟ್​​​ಗಳಿಗೆ ಬರುವ ಕೆಲವು ಪಾಪರಾಜಿಗಳು ನಟಿಯರನ್ನು ಅಸಭ್ಯ ಕೋನದಿಂದ ಚಿತ್ರೀಕರಿಸಿ ಅದನ್ನು ಪೋಸ್ಟ್ ಮಾಡುತ್ತಿರುವ ಬಗ್ಗೆ ವಿರೋಧದ ಅಲೆ ಎದ್ದಿದೆ. ಅನೇಕ ನಟಿಯರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನಟಿ ಸಪ್ತಮಿ ಗೌಡ (Saptami Gowda) ಅವರು ಈ ಬಗ್ಗೆ ಮೊದಲು ಪ್ರಶ್ನೆ ಮಾಡಿದ್ದರು. ಆ ಬಳಿಕ ರಮ್ಯಾ ಸೇರಿದಂತೆ ಅನೇಕರು ಅವರಿಗೆ ಬೆಂಬಲ ಸೂಚಿಸಿದರು. ಈಗ ಶಿವರಾಜ್​​ಕುಮಾರ್ ಕೂಡ ಈ ಆಂದೋಲನದಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾ ಈವೆಂಟ್​​​​ಗಳನ್ನು ಕವರ್ ಮಾಡೋಕೆ ಬರುವ ಕೆಲವರು ಅಸಭ್ಯ ರೀತಿಯಲ್ಲಿ ನಟಿಯರ ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಅದು ಸಾಮಾನ್ಯ ಎಂಬ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಕೆಲಸ ಆಗಿದೆ. ನಟಿಯರನ್ನು ಕೆಟ್ಟ ರೀತಿಯಲ್ಲಿ ತೋರಿಸಿ ವೀವ್ಸ್ ಪಡೆದುಕೊಳ್ಳುತ್ತಿರುವುದಕ್ಕೆ ಸಪ್ತಮಿ ಗೌಡ, ರಮ್ಯಾ ಮೊದಲಾದವರು ಅಸಮಾಧಾನ ಹೊರಹಾಕಿದ್ದರು. ಕನ್ನಡ ಚಿತ್ರರಂಗದಲ್ಲಿ ಇದು ಆಂದೋಲನವಾಗಿ ಬದಲಾಯಿತು. ಇದಕ್ಕೆ ಶಿವಣ್ಣ ಬೆಂಬಲ ಸೂಚಿಸಿದ್ದಾರೆ.

‘ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳ ಗೌರವಕ್ಕೆ ಚ್ಯುತಿ ತರಬೇಡಿ’ ಎಂದು ಶಿವರಾಜ್​​ಕುಮಾರ್ ಅವರು ಕೋರಿಕೊಂಡಿದ್ದಾರೆ.

ನಟಿಯರು ಹೇಳಿದ್ದು ಏನು?

‘ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್‌ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ’ ಎಂದು ನಟಿಯರು ಹೇಳಿದ್ದಾರೆ.

ಇದನ್ನೂ ಓದಿ: ಅಸಭ್ಯವಾಗಿ ನಟಿಯರ ಫೋಟೋ, ವಿಡಿಯೋ ತೆಗೆದಿದ್ದಕ್ಕೆ ಕನ್ನಡ ಚಿತ್ರರಂಗ ಗರಂ

‘ಇಂತಹ ವರ್ತನೆ, ಕೆಲವರಿಂದ ನಡೆಯುತ್ತಿರುವುದಾದರೂ ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್‌ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ’ ಎಂದು ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಾನು ಸುಳ್ಳು ಆರೋಪ ಮಾಡಿದ್ದರೆ ಇಷ್ಟೆಲ್ಲಾ ಕ್ರಮ ಯಾಕೆ?’: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ – Kannada News | Snehamayi Krishna Challenges Girish Mattannavar on Soujanya Case through Facebook Post

‘ನಾನು ಸುಳ್ಳು ಆರೋಪ ಮಾಡಿದ್ದರೆ ಇಷ್ಟೆಲ್ಲಾ ಕ್ರಮ ಯಾಕೆ?’: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿ

ಮೈಸೂರು, ಮಾರ್ಚ್​ 05: ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ ಮಾಡಿ ಪೇಚೆಗೆ ಸಿಲುಕಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ. ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕಿಡಿಕಾರಿರುವ ಕೃಷ್ಣ, ನಾನು ಯಾವಾಗಲೂ ದಾಖಲೆಗಳ ಆಧಾರದಲ್ಲೇ ವಿಷಯಗಳನ್ನು ಬಹಿರಂಗಪಡಿಸುತ್ತೇನೆ. ಆದ್ದರಿಂದಲೇ ಹಲವು ಪ್ರಕರಣಗಳಲ್ಲಿ ಇಷ್ಟೆಲ್ಲಾ ಕ್ರಮ ಕೈಗೊಂಡಿರುವುದು ಎಂದಿದ್ದಾರೆ.

ಗಿರೀಶ್ ಮಾಡಿದ್ದು ಸರಿಯಲ್ಲ ಎಂದ ಸ್ನೇಹಮಯಿ

ತಮ್ಮ ಪೋಸ್ಟ್‌ನಲ್ಲಿ ಅವರು ಹೇಳಿರುವಂತೆ, ಶಾಲಿನಿ ರಜನೀಶ್ ಅವರ ಹೆಸರು ಉಲ್ಲೇಖಿಸಿದ ಬಗ್ಗೆ ನಾನು ಈಗಾಗಲೇ ಕ್ಷಮೆ ಕೇಳಿದ್ದೇನೆ. ಆದರೆ ಅದನ್ನೇ ಆಧಾರವಾಗಿಟ್ಟುಕೊಂಡು ನಾನು ಯಾವಾಗಲೂ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತೇನೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಸೌಜನ್ಯ ಪ್ರಕರಣದ ಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಗಿರೀಶ್ ಮಟ್ಟಣ್ಣನವರ್ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

ನಾನು ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದರೆ, ನಾನು ಮೊಕದ್ದಮೆ ದಾಖಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಹೆಸರಿನಲ್ಲಿ ಪಡೆದಿದ್ದ ಸುಮಾರು 60 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳನ್ನು ಏಕೆ ವಾಪಸ್ ಮಾಡಿದರು? ಎಂದು ಕೃಷ್ಣ ಪ್ರಶ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ (ED) ಇದುವರೆಗೆ ಸುಮಾರು 460 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದರ ಜೊತೆಗೆ ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್ ಕುಮಾರ್ ಸುಮಾರು 70 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವುದನ್ನೂ ತಮ್ಮ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ ಸ್ನೇಹಮಯಿ ಕೃಷ್ಣ ದಿಢೀರ್ ಬಂಧನದಿಂದ ಹಲವು ಅನುಮಾನ: ಕೋರ್ಟ್​ಗೆ ಆಡಿಯೋ ಸಲ್ಲಿಸುವ ಮುನ್ನವೇ ಅರೆಸ್ಟ್ ಮಾಡಿದ್ದೇಕೆ?

ಸೌಜನ್ಯ ಸಾವಿಗೆ ಯಾರು ಕಾರಣ ಎಂದು ಖಚಿತಪಡಿಸುತ್ತೇನೆ:ಸ್ನೇಹಮಯಿ ಕೃಷ್ಣ

ನಾನು ದೂರು ದಾಖಲಿಸಿದ ಕೇವಲ ಒಂದೂವರೆ ವರ್ಷದಲ್ಲಿ ಇಷ್ಟೆಲ್ಲಾ ಕ್ರಮಗಳು ನಡೆದಿವೆ. ಆದರೆ ಗಿರೀಶ್ ಮಟ್ಟಣ್ಣನವರ್ ರೀತಿಯಲ್ಲಿ 13 ವರ್ಷಗಳಿಂದ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಕೇವಲ ಹೇಳಿಕೆ ನೀಡುವುದರಲ್ಲಿ ನಾನು ನಿಲ್ಲುವುದಿಲ್ಲ. ಇದೇ ವೇಳೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸವಾಲು ಹಾಕಿರುವ ಅವರು, ಸರ್ಕಾರ ಸೌಜನ್ಯ ಪ್ರಕರಣದ ತನಿಖೆಗೆ ಅಧಿಕೃತ ಆದೇಶ ಹೊರಡಿಸಿದರೆ, ಆ ಸಾವಿಗೆ ಯಾರು ಕಾರಣ ಎಂಬುದನ್ನು ಖಚಿತಪಡಿಸುತ್ತೇನೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್​​​​ ಹೊತ್ತಿ ಉರಿಯಲು ಈ ಹುಡುಗಿಯೇ ಕಾರಣ: 2024ರ ಈ ವಿಡಿಯೋ ನೆನಪಿದ್ಯಾ? – Kannada News | Ahoo Daryaei’s Bold Protest: The Spark for Iran’s Women’s Freedom Movement

ಕೆಲವೊಂದು ಹೋರಾಟ ಒಂದು ಬದಲಾವಣೆಗಳನ್ನು ತರುತ್ತದೆ. ಇರಾನ್​​​ನಲ್ಲಿ ಇದೀಗ ನಡೆಯುತ್ತಿರುವುದು ಅದೇ, ಇರಾನ್​​ನಲ್ಲಿ ಭಾರೀ ದೊಡ್ಡ ಸಂಘರ್ಷ ಶುರುವಾಗಿದೆ. ಒಂದು ಕಡೆ ಇಸ್ರೇಲ್​​​ , ಅಮೆರಿಕ ದಾಳಿ ಮಾಡಿದ್ರೆ ಮತ್ತೊಂದು ಕಡೆ ಇರಾನ್​​​​ನ ಮಹಿಳೆಯರೇ ತಮ್ಮ ಮೇಲಿನ ದಬ್ಬಾಳಿಕೆ ಬಗ್ಗೆ ದಂಗೆ ಎದ್ದಿದ್ದಾರೆ. ಈ ದಂಗೆ ಪ್ರಾರಂಭವಾಗಿರುವುದೇ ಅಹೂ ದರ್ಯಾಯೀ ಎಂಬ ಹುಡುಗಿಯಿಂದ, ಇಡೀ ಜಗತ್ತು ಇದೀಗ ಇರಾನ್​ ಕಡೆ ನೋಡಲು ಈ ಹುಡುಗಿಯೇ ಕಾರಣ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹೇಳಲಾಗುತ್ತಿದೆ.  ಅಂದು ಈ ಹುಡುಗಿ ನಡೆಸಿದ ಹೋರಾಟದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ 2024 ನವೆಂಬರ್​​​​ 3ರಂದು ನಡೆದ ಘಟನೆ ಏನು? ಟೆಹ್ರಾನ್‌ನ ರಸ್ತೆಯ ಮಧ್ಯದಲ್ಲಿ ಈ ಅಹೂ ದರ್ಯಾಯೀ ಮಾಡಿದ್ದೇನು? ಇಂದು ಇರಾನ್​​ ಈ ಸ್ಥಿತಿಗೆ ಬರಲು ಈ ಮಹಿಳೆ ಕಾರಣವೇ ಎಂಬೆಲ್ಲ ಪ್ರಶ್ನೆಗಳು ಮೂಡಿದೆ. ಇದೀಗ ಮತ್ತೆ ಈ ಹುಡುಗಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದಾಳೆ.

2024 ನವೆಂಬರ್ 3 ರ ಭಾನುವಾರದಂದು ಟೆಹ್ರಾನ್‌ನ ರಸ್ತೆಯ ಮಧ್ಯದಲ್ಲಿ ತನ್ನ ಬಟ್ಟೆಗಳನ್ನು ತೆಗೆದು ಬಿಕಿನಿಯಲ್ಲಿ ಪ್ರತಿಭಟಿಸಿದ ಇರಾನ್‌ನ ಅಹೂ ದರಾಯೈ ಎಂಬ ಹುಡುಗಿ, ದೇಶದ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟನೆ ನಡೆಸಿದ್ದಳು. ಅಹೂ ದರಾಯೈ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ನಿಯಮ ಹಾಗೂ ಹಿಂಸೆಯನ್ನು ವಿರೋಧಿಸಲು ತನ್ನ ಬಟ್ಟೆಗಳನ್ನು ತೆಗೆದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು ಈ ಹುಡುಗಿ ಎಂದು ವರದಿಗಳು ಹೇಳುತ್ತದೆ. ಇಲ್ಲಿಂದಲ್ಲೇ ಈ ಇರಾನ್​​​​​ ಪತನಕ್ಕೆ ಕಾರಣವಾಗಿದ್ದು ಎಂದು ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಟೆಹ್ರಾನ್‌ನ ರಸ್ತೆಯ ಮಧ್ಯ ತನ್ನ ಬಟ್ಟೆಗಳು ಎಸೆದು, ಸಾರ್ವಜನಿಕವಾಗಿ ಸರ್ಕಾರ ಹಾಗೂ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ಮಾಡಿದ್ದಳು. ಇದನ್ನು ನೋಡಿದ ಅಲ್ಲಿನ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇನ್ನು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್​​ಗಳು ಈಕೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ಸುದ್ದಿ ಕೂಡ ಹರಡಿತು. ಆದರೆ ಈ ಸುದ್ದಿಯನ್ನು ಅಲ್ಲಿನ ಪೊಲೀಸರು ತಳ್ಳಿಹಾಕಿದ್ದರು. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ಬಿಬಿಸಿ (BBC) ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ, ಆಕೆಯನ್ನು ಪೊಲೀಸರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕವು ಭಾರತದ ಬಂದರುಗಳನ್ನು ಬಳಸುತ್ತಿದೆಯೇ? ನಿಜಾಂಶವೇನು?

ವೈರಲ್​​ ಪೋಸ್ಟ್​​​:

ಇರಾನ್‌ನ ನ್ಯಾಯಾಂಗ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಆಕೆಗೆ ಯಾವುದೇ ಶಿಕ್ಷೆ ವಿಧಿಸದೆ ಆಕೆಯ ಕುಟುಂಬದ ಜೊತೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಇರಾನ್‌ನಂತಹ ದೇಶಗಳಲ್ಲಿ ಇಂತಹ ಮಾಹಿತಿಗಳ ಪಾರದರ್ಶಕತೆಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಇಂದಿಗೂ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮಗಳ ವಿರುದ್ಧದ ಹೋರಾಟಕ್ಕೆ ಆಹೂ ದರ್ಯಾಯಿ ಈಗ ಒಂದು ಪ್ರಬಲ ಶಕ್ತಿಯಾಗಿದ್ದಾರೆ ಎಂದು ಅನೇಕ ಮಹಿಳೆಯರು ಹೇಳಿದ್ದಾರೆ. ಇನ್ನು ಇರಾನ್​​ನಲ್ಲಿ ಇಂದಿಗೂ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮದ ಬಗ್ಗೆ ಹೋರಾಟಗಳು ನಡೆಯುತ್ತಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್​​​ ಕೂಡ ಅಲ್ಲಿನ ಮಹಿಳೆ ಹಕ್ಕಿಗಾಗಿ ಹಾಗೂ ರಕ್ಷಣೆಗಾಗಿ ಈ ಯುದ್ಧ ಎಂದು ಹೇಳಿದ್ದರು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಿಗೆ ತಂಪು ಪಾನೀಯ ಕೊಡಿಸೋ ಮುನ್ನ ಎಚ್ಚರ: ಕೂಲ್ ಡ್ರಿಂಕ್ಸಲ್ಲಿ ವಿಷಾಂಶ ಪತ್ತೆ ಆರೋಪ – Kannada News | Toxic Substances Alleged in Soft Drinks: Karnataka Child Rights Panel Flags Health Risk for Children

ಬೆಂಗಳೂರು, ಮಾರ್ಚ್ 5: ಬೇಸಿಗೆ ಕಾಲದಲ್ಲಿ ತಂಪುಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದು ಸಾಮಾನ್ಯ. ಆದರೆ, ಮಕ್ಕಳಿಗೆ ಕೂಲ್ ಡ್ರಿಂಕ್ಸ್ ನೀಡುವ ಮೊದಲು ಪೋಷಕರು ಎಚ್ಚರಿಕೆ ವಹಿಸಬೇಕು. ತಂಪುಪಾನೀಯಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದಿದೆ. ತಂಪುಪಾನೀಯಗಳಲ್ಲಿ ವಿಷಕಾರಿ ಅಂಶಗಳ ಇರುವಿಕೆ ಮಕ್ಕಳ ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಔಷಧ ನಿಯಂತ್ರಣ ಇಲಾಖೆಗೆ ಮನವಿ ಮಾಡಿದೆ. ಮಕ್ಕಳ ಆರೋಗ್ಯದ ರಕ್ಷಣೆಗಾಗಿ ಈ ತನಿಖೆ ಅನಿವಾರ್ಯವಾಗಿದೆ ಎಂದು ಆಯೋಗ ತಿಳಿಸಿದೆ. ತಂಪುಪಾನೀಯಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಇಲಾಖೆಯು ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೇಗಿದೆ ನೋಡಿ ರಶ್ಮಿಕಾ ಹಾಗೂ ವಿಜಯ್ ಕುಟುಂಬ – Kannada News | Vijay Devarakonda And Rashmika Mandanna Family In Newly Married reception

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಕಾರ್ಯ ಫೆಬ್ರವರಿ 26ರಂದು ನಡೆಯಿತು. ಮಾರ್ಚ್ 4ರಂದು ಹೈದರಾಬಾದ್ ಅಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಜಯ್ ಹಾಗೂ ರಶ್ಮಿಕಾ ಕುಟುಂಬ ಹಾಜರಿ ಹಾಕಿತ್ತು. ಈ ವಿಡಿಯೋ ಗಮನ ಸೆಳೆದವು. ರಶ್ಮಿಕಾ ಕುಟುಂಬದವರನ್ನು ಕಂಡರೆ ವಿಜಯ್​​ಗೆ ಅಪಾರ ಗೌರವ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಸಂಘರ್ಷ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆ, 8 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ನಿಷೇಧ – Kannada News | Belagavi Sambra Airport Declared Red Zone; Drone Flights Banned Within 8 KM Radius Amid Security Alert

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆImage Credit source: tv9

ಬೆಳಗಾವಿ, ಮಾರ್ಚ್ 5: ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣವನ್ನು ‘ರೆಡ್ ಝೋನ್’ ಎಂದು ಘೋಷಿಸಲಾಗಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಮಾರ್ಗಸೂಚಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದ ಸುತ್ತಮುತ್ತ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಹಾಗೂ ಅನ್​ಮ್ಯಾನ್ಡ್ ಏರಿಯಲ್ ವಾಹನಗಳ (UAV) ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರೆಡ್ ಝೋನ್ ಮತ್ತು ಯೆಲ್ಲೋ ಝೋನ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಈ ಕ್ರಮ ಅತ್ಯಾವಶ್ಯಕವಾಗಿದ್ದು, ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್

ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲೇನಿದೆ?

ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣವನ್ನು ಹಾಗೂ ನಿಲ್ದಾಣದ ಸುತ್ತಮುತ್ತಲಿನ 08 ಕಿಲೋಮೀಟರ್ ವ್ಯಾಪ್ತಿಯನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (DGCA) ಈಗಾಗಲೇ ರೆಡ್ ಜೋನ್ (Red Zone) ಎಂದು ಘೋಷಿಸಿರುತ್ತಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ 08 ಕಿಲೋಮೀಟರ್ ವ್ಯಾಪ್ತಿಯಲ್ಲಿ (Red Zone/ Yellow Zone) ಯಾವುದೇ ರೀತಿಯ ಪ್ರೋನ್ /ಅನ್​​ಮ್ಯಾನಡ್ ಏರಿಯಲ್ ವಾಹನ (UAV/Drone) ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:45 am, Thu, 5 March 26

Source link

ಮಧ್ಯಪ್ರಾಚ್ಯ ಸಂಘರ್ಷ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆ, 8 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ನಿಷೇಧ – Kannada News | Belagavi Sambra Airport Declared Red Zone; Drone Flights Banned Within 8 KM Radius Amid Security Alert

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ‘ರೆಡ್ ಝೋನ್’ ಘೋಷಣೆImage Credit source: tv9

ಬೆಳಗಾವಿ, ಮಾರ್ಚ್ 5: ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣವನ್ನು ‘ರೆಡ್ ಝೋನ್’ ಎಂದು ಘೋಷಿಸಲಾಗಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಮಾರ್ಗಸೂಚಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದ ಸುತ್ತಮುತ್ತ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಹಾಗೂ ಅನ್​ಮ್ಯಾನ್ಡ್ ಏರಿಯಲ್ ವಾಹನಗಳ (UAV) ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ರೆಡ್ ಝೋನ್ ಮತ್ತು ಯೆಲ್ಲೋ ಝೋನ್ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸುವುದು ಕಾನೂನುಬಾಹಿರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಈ ಕ್ರಮ ಅತ್ಯಾವಶ್ಯಕವಾಗಿದ್ದು, ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್

ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲೇನಿದೆ?

ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣವನ್ನು ಹಾಗೂ ನಿಲ್ದಾಣದ ಸುತ್ತಮುತ್ತಲಿನ 08 ಕಿಲೋಮೀಟರ್ ವ್ಯಾಪ್ತಿಯನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (DGCA) ಈಗಾಗಲೇ ರೆಡ್ ಜೋನ್ (Red Zone) ಎಂದು ಘೋಷಿಸಿರುತ್ತಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ 08 ಕಿಲೋಮೀಟರ್ ವ್ಯಾಪ್ತಿಯಲ್ಲಿ (Red Zone/ Yellow Zone) ಯಾವುದೇ ರೀತಿಯ ಪ್ರೋನ್ /ಅನ್​​ಮ್ಯಾನಡ್ ಏರಿಯಲ್ ವಾಹನ (UAV/Drone) ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಚ್ ನೋಡಿ ಭಾರತಕ್ಕೆ ಆತಂಕ… ಇಂಗ್ಲೆಂಡ್ ಫುಲ್ ಹ್ಯಾಪಿ ಯಾಕೆ? – Kannada News | IND vs ENG: The pitch at Wankhede has a green tinge

T20 World Cup 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಮಾ.5) ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿದೆ. ಟಿ20 ವಿಶ್ವಕಪ್​ನ ಈ ನಿರ್ಣಾಯಕ ಪಂದ್ಯಕ್ಕಾಗಿ ನಿರ್ಮಿಸಲಾಗಿರುವುದು ಗ್ರೀನ್ ಪಿಚ್. ಅಂದರೆ ಪಿಚ್ ಮೇಲ್ಮೈ ಮೇಲೆ ಹಸಿರು ಹುಲ್ಲುಗಳಿವೆ. ಇದುವೇ ಈಗ ಭಾರತ ತಂಡದ ಆತಂಕಕ್ಕೆ ಕಾರಣವಾಗಿದೆ.  ಏಕೆಂದರೆ…

ಹಸಿರು ಪಿಚ್​ನಲ್ಲಿ ವೇಗಿಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಬಲ್ಲರು. ಅದರಲ್ಲಿ ಇಂಗ್ಲೆಂಡ್ ಬೌಲರ್​ಗಳು ನಿಸ್ಸೀಮರು. ಇಂಗ್ಲೆಂಡ್​ನ ಬಹುತೇಕ ಪಿಚ್​ ಮೇಲ್ಮೈ ಹಸಿರು ಹುಲ್ಲಿನಿಂದ ಕೂಡಿರುತ್ತದೆ. ಹೀಗಾಗಿ ಅಂತಹ ಪಿಚ್​ನಲ್ಲಿ ಹೇಗೆ ದಾಳಿ ಸಂಘಟಿಸಬೇಕೆಂಬುದು ಆಂಗ್ಲ ಬೌಲರ್​ಗಳಿಗೆ ಚೆನ್ನಾಗಿ ಗೊತ್ತಿದೆ.

ಹಾಗೆಯೇ ಗ್ರೀನ್ ಪಿಚ್​ನಲ್ಲಿ ಆಡಿದ ಅನುಭವ ಕೂಡ ಇಂಗ್ಲೆಂಡ್ ಆಟಗಾರರ ಜೊತೆಗಿದೆ. ಇದರಿಂದ ಅವರು ಬ್ಯಾಟಿಂಗ್​ನಲ್ಲೂ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಇತ್ತ ಟೀಮ್ ಇಂಡಿಯಾ ಆಟಗಾರರಿಗೆ ಗ್ರೀನ್ ಪಿಚ್​ನಲ್ಲಿ ಆಡಿದ ಅನುಭವ ತುಂಬಾ ಕಡಿಮೆ. ಹೀಗಾಗಿಯೇ ವಾಂಖೆಡೆ ಮೈದಾನದಲ್ಲಿ ನಿರ್ಮಿಸಲಾಗಿರುವ ಹೊಸ ಪಿಚ್ ಭಾರತೀಯರ ಆತಂಕಕ್ಕೆ ಕಾರಣವಾಗಿದೆ.

ಗ್ರೀನ್ ಪಿಚ್ ವಿಶೇಷತೆ:

  • ಹಸಿರು ಹೊದಿಕೆ: ಪಿಚ್ ಮೇಲೆ ಹೆಚ್ಚಿನ ಪ್ರಮಾಣದ ಹಸಿರು ಹುಲ್ಲು ಇದೆ. ಇದು ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸ್ವಿಂಗ್ ನೀಡುತ್ತದೆ.
  • ಕೆಂಪು ಮಣ್ಣಿನ ಗುಣ: ವಾಂಖೆಡೆ ಪಿಚ್ ಕೆಂಪು ಮಣ್ಣಿನಿಂದ ಕೂಡಿದ್ದು, ಇದು ಪಂದ್ಯದ ಉದ್ದಕ್ಕೂ ಉತ್ತಮ ಬೌನ್ಸ್ ಮತ್ತು ವೇಗವನ್ನು ಕಾಪಾಡಿಕೊಳ್ಳುತ್ತದೆ.

ಇಂಗ್ಲೆಂಡ್ ತಂಡವು ಮೂಲತಃ ಇಂತಹ ಹಸಿರು ಮತ್ತು ವೇಗದ ಪಿಚ್‌ಗಳಲ್ಲಿ ಆಡಿ ರೂಢಿ ಮಾಡಿಕೊಂಡಿದೆ. ಅವರ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೇಮಿ ಓವರ್ಟನ್ 145-150 kmph ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಪಿಚ್‌ನಲ್ಲಿ ಹುಲ್ಲು ಇರುವುದರಿಂದ ಅವರಿಗೆ ಸ್ವಿಂಗ್ ಮತ್ತು ಸೀಮ್ ಮೂವ್‌ಮೆಂಟ್ ಹೆಚ್ಚು ಸಿಗುತ್ತದೆ.

ಇಂಗ್ಲೆಂಡ್ ತಂಡದ ಬ್ಯಾಟರ್‌ಗಳಾ ಫಿಲ್ ಸಾಲ್ಟ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ವಿಲ್ ಜ್ಯಾಕ್ಸ್​ ಚೆಂಡು ವೇಗವಾಗಿ ಬ್ಯಾಟ್‌ಗೆ ಬರುವ ಪಿಚ್‌ಗಳನ್ನು ಇಷ್ಟಪಡುತ್ತಾರೆ. ಹಸಿರು ಪಿಚ್‌ಗಳಲ್ಲಿ ಚೆಂಡು ನಿಲ್ಲದೆ ನೇರವಾಗಿ ಬ್ಯಾಟ್‌ಗೆ ಬರುವುದರಿಂದ ಅವರಿಗೆ ದೊಡ್ಡ ಹೊಡೆತಗಳನ್ನು ಹೊಡೆಯಲು ಸುಲಭವಾಗುತ್ತದೆ.

ವಾಂಖೆಡೆಯಲ್ಲಿ ನಿರ್ಮಿಸಲಾಗಿರುವ ಗ್ರೀನ್ ಪಿಚ್​  ಇಂಗ್ಲೆಂಡ್‌ನ ಲಾರ್ಡ್ಸ್ ಅಥವಾ ಓವಲ್ ಮೈದಾನದ ಪರಿಸ್ಥಿತಿಯನ್ನು ಹೋಲುತ್ತದೆ. ಇದು ಅವರ ಆಟಗಾರರಿಗೆ ತಮ್ಮ ದೇಶದಲ್ಲೇ ಆಡುತ್ತಿರುವಂತಹ ಆತ್ಮವಿಶ್ವಾಸ ನೀಡುತ್ತದೆ.

ಸಾಮಾನ್ಯವಾಗಿ ಭಾರತೀಯ ಪಿಚ್‌ಗಳು ಒಣಗಿದ್ದರೆ ನಮ್ಮ ಸ್ಪಿನ್ನರ್‌ಗಳು ಟೀಮ್ ಇಂಡಿಯಾ ಸ್ಪಿನ್ನರ್​ಗಳು ಪಂದ್ಯವನ್ನು ನಿಯಂತ್ರಿಸುತ್ತಾರೆ. ಆದರೆ ಹುಲ್ಲು ಹೆಚ್ಚಿದ್ದರೆ ಸ್ಪಿನ್ನರ್‌ಗಳಿಗೆ ಅಷ್ಟಾಗಿ ತಿರುವು ಸಿಗುವುದಿಲ್ಲ. ಇದು ಭಾರತದ ಪ್ರಮುಖ ಅಸ್ತ್ರವಾದ ಸ್ಪಿನ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಬಹುದು.

ಇನ್ನು ಗ್ರೀನ್ ಪಿಚ್​ ಬೌಲರ್‌ಗಳಿಗೆ ಸಹಾಯ ಮಾಡಿದರೂ, ಬ್ಯಾಟರ್‌ಗಳು ಒಮ್ಮೆ ನೆಲೆಯೂರಿದರೆ ರನ್ ಗಳಿಸುವುದು ಸುಲಭ. ಆದರೆ ಅದಕ್ಕೆ ತಾಳ್ಮೆ ಇರಬೇಕಾಗುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.

ಗ್ರೀನ್ ಪಿಚ್ ಮಾಡಿದ್ದೇಕೆ?

ಮುಂಬೈನ ತಾಪಮಾನಕ್ಕೆ ಪಿಚ್ ಬೇಗನೆ ಒಣಗಿ ಬಿರುಕು ಬಿಡಬಾರದು ಎಂಬ ಕಾರಣಕ್ಕೆ ಐಸಿಸಿ ಕ್ಯುರೇಟರ್‌ಗಳು ಈ ಬಾರಿ ಹೆಚ್ಚಿನ ಹುಲ್ಲನ್ನು ಉಳಿಸಿಕೊಂಡಿದ್ದಾರೆ. ಇದರಿಂದಾಗಿ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಗ್ರೀನ್ ಪಿಚ್ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್

ಟಾಸ್ ಫ್ಯಾಕ್ಟರ್:

ಗ್ರೀನ್ ಪಿಚ್ ಇಂಗ್ಲೆಂಡ್​ಗೆ ಅನುಕೂಲವಾಗಿದ್ದರೂ ಮುಂಬೈನಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ದ್ವಿತೀಯ ಇನಿಂಗ್ಸ್ ಆಡುವ ವೇಳೆ ಇಬ್ಬನಿ ಕಂಡು ಬರುತ್ತವೆ. ಇದರಿಂದ ಒದ್ದೆ ಚೆಂಡಿನ ಮೇಲೆ ಬೌಲರ್​ಗಳಿಗೆ ಗ್ರಿಪ್ ಸಿಗುವುದಿಲ್ಲ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದೆ.

Source link

ಬಾಗಲಕೋಟೆ: ಲೋಕಾಯುಕ್ತ ದಾಳಿ ವೇಳೆ ಮನೆಗೆ ನುಗ್ಗಿದ ಹಾವು! – Kannada News | Snake Slithers into House During Lokayukta Raid in Bagalkote; Video Goes Viral

ಬಾಗಲಕೋಟೆ, ಮಾರ್ಚ್​ 5: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆಯಲ್ಲಿ ನಡೆಸಿದ ದಾಳಿಯ ವೇಳೆ ಅಚ್ಚರಿಯ ಘಟನೆ ನಡೆದಿದೆ. ಮನೆಯೊಂದರಲ್ಲಿ ಶೋಧ ಕಾರ್ಯ ನಡೆಯುತ್ತಿದ್ದಾಗ ಕೆಳಮಹಡಿಗೆ ಕೆರೆ ಹಾವು ನುಗ್ಗಿ ಕೆಲಕಾಲ ಗೊಂದಲ ಉಂಟುಮಾಡಿತು. ಬಳಿಕ ಮನೆಯವರು ಹಾವನ್ನು ಹೊಡೆದು ದೂರ ಸಾಗಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದಲ್ಲಿ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿದರು. ಬಾಗಲಕೋಟೆಯ ಪೋಸ್ಟಲ್ ಕಾಲೋನಿಯಲ್ಲಿರುವ ವಸಂತ್ ಅವರ ಸಹೋದರ ಭೀಮಸಿಂಗ್ ನಾಯಕ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡರು.

ಭೀಮಸಿಂಗ್ ನಾಯಕ್ ಬಾಗಲಕೋಟೆ ಡಿಎಆರ್‌ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದ ಮನೆಯಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ವಸಂತ್ ಅವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದಲ್ಲಿ ಈ ದಾಳಿ ನಡೆದಿದೆ. ಆಸ್ತಿ, ದಾಖಲೆಗಳು ಮತ್ತು ಬ್ಯಾಂಕ್ ವ್ಯವಹಾರಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version