ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ? – Kannada News | Iran US Israel war aggression, how it affects gold, silver, stock markets this week
ಇರಾನ್ ಮೇಲೆ ಇಸ್ರೇಲ್ ಏರ್ಸ್ಟ್ರೈಕ್ ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳನ್ನು ಎಸಗಿರುವುದು ಈಗ ಪಶ್ಚಿಮ ಏಷ್ಯಾದಲ್ಲಿ (West Asia crisis) ದೊಡ್ಡ ಸಂಘರ್ಷ ವಾತಾವರಣ ಏರ್ಪಟ್ಟಿದೆ. ಈ ಯುದ್ದ ಅನಿರೀಕ್ಷಿತವಲ್ಲವಾದರೂ, ಮಾರುಕಟ್ಟೆಗಳಿಗೂ ಈ ಸಂದರ್ಭವು ಅನಿರೀಕ್ಷಿತವಲ್ಲವಾದರೂ, ಸಾಕಷ್ಟು ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಸ್ಟ್ರೇಟ್ಗೆ (Strait of Hormuz) ತಡೆಯಾಗುವ ಸಂಭವ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಇದೂ ಸೇರಿದಂತೆ ವಿವಿಧ…