ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ – Kannada News | 6 dead several injured in bus accident in Balotra
ಜೈಪುರ, ಫೆಬ್ರವರಿ 27: ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಸರ್ವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-25ರಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಸ್ಲೀಪರ್ ಬಸ್ ಓವರ್‌ಟೇಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರೇಲರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಬಸ್ ಜೋಧ್‌ಪುರದಿಂದ ಸಂಚೋರ್‌ಗೆ ಪ್ರಯಾಣಿಸುತ್ತಿದ್ದಾಗ, ಟ್ರೇಲರ್ ಜೋಧ್‌ಪುರದ ಕಡೆಗೆ ಹೋಗುತ್ತಿತ್ತು. ಬಸ್ನ ಕೆಲವು ಭಾಗಗಳಲ್ಲಿ ರಕ್ತ…