Headlines

ಭಾರೀ ಮಳೆಯಿಂದ ಉಕ್ಕಿ ಹರಿದ ತಮಿಳುನಾಡಿನ ಗುಂಡಾರ್ ಡ್ಯಾಂ ನೋಡಲು ಜನಸಾಗರ – Kannada News | Tamil Nadu Gundar Dam overflows after heavy rainfall watch video

ಚೆನ್ನೈ, ಆಗಸ್ಟ್ 1: ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈ ಬಳಿಯಿರುವ ಗುಂಡಾರ್ ಆಣೆಕಟ್ಟು ಭಾರಿ ಮಳೆಯಿಂದಾಗಿ ಭರ್ತಿಯಾಗಿ ಹರಿಯುತ್ತಿದ್ದು, ಡ್ಯಾಂನ ಸೌಂದರ್ಯ ಇಮ್ಮಡಿಗೊಂಡಿದೆ. ಈ ಅಣೆಕಟ್ಟನ್ನು ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಗುಂಡಾರ್ ಆಣೆಕಟ್ಟು ಭಾರತದ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಇರುವ ಒಂದು ಸುಂದರವಾದ, ಮಧ್ಯಮ ಗಾತ್ರದ ಜಲಾಶಯವಾಗಿದೆ. 1983ರಲ್ಲಿ ನಿರ್ಮಿಸಲಾದ ಈ ಡ್ಯಾಂ ಸ್ಥಳೀಯ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪಿಕ್ನಿಕ್, ಪ್ರಕೃತಿ ನಡಿಗೆ ಮತ್ತು ಬೋಟಿಂಗ್‌ಗಾಗಿ ಜನಪ್ರಿಯ ಪರಿಸರ…

Read More

ಹಾವೇರಿಯಲ್ಲಿ ಅಮಾನವೀಯ ಕೃತ್ಯ: 9ಕ್ಕೂ ಹೆಚ್ಚು ಶ್ವಾನಗಳನ್ನ ಹತ್ಯೆಗೈದು ವಾಮಾಚಾರ ಮಾಡಿದ ದುಷ್ಕರ್ಮಿಗಳು! – Kannada News | Miscreants kill over nine dogs and perform black magic rituals

ಪ್ರಾತಿನಿಧಿಕ ಚಿತ್ರImage Credit source: Getty images ಹಾವೇರಿ, ಆಗಸ್ಟ್​ 01: ಕೋಳಿ ಅಥವಾ ಕೋಳಿಯ ಮೊಟ್ಟೆಯನ್ನ ಬಳಸಿ ವಾಮಾಚಾರ (Black magic) ಮಾಡುವುದನ್ನ ನೋಡಿದ್ದೇವೆ. ಆದರೆ ಹಾವೇರಿ (haveri) ಜಿಲ್ಲೆಯ ಅದೊಂದು ಗ್ರಾಮದ ಬಳಿ 9ಕ್ಕೂ ಹೆಚ್ಚು ಶ್ವಾನಗಳನ್ನು ಹತ್ಯೆ ಮಾಡಿ ವಾಮಾಚಾರ ಮಾಡಲಾಗಿದೆ. ಈ ವಿಚಿತ್ರ ಘಟನೆಯಿಂದ ಜನರು ಅಕ್ಷರಶಃ ಬೆಚ್ಚಿಬಿದಿದ್ದಾರೆ. ಅಷ್ಟೇ ಅಲ್ಲದೆ ದುಷ್ಕರ್ಮಿಗಳ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಡೆದಿದ್ದೇನು? ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ…

Read More

CWG 2026: 51 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಬಾಕ್ಸರ್ ಸಾಕ್ಷಿ ಚೌಧರಿ – Kannada News | Sakshi Chaudhary Secures CWG Gold: India’s Boxing Sensation Shines in 51kg Final

ಸಾಕ್ಷಿ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2015 ರಲ್ಲಿ ನಡೆದಿದ್ದ AIBA ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ, 2017 ರಲ್ಲಿ ನಡೆದಿದ್ದ ವಿಶ್ವ ಯುವ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ, 2018 ರಲ್ಲಿ ನಡೆದಿದ್ದ ವಿಶ್ವ ಯುವ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ, 2021ರಲ್ಲಿ ನಡೆದಿದ್ದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಕಂಚು, 2025 ರಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಕಪ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದು, 8 ಬಾರಿ ರಾಷ್ಟ್ರೀಯ…

Read More

ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ – Kannada News | Donald Trump Wants Talks Secretly But Threatens War openly Iran Accuses US Of Playing Double Game

ಟೆಹ್ರಾನ್, ಆಗಸ್ಟ್ 1: ಅಮೆರಿಕವು ಇರಾನ್‌ನ ಗುರಿಗಳ ಮೇಲೆ ಮತ್ತೆ ಹೊಸದಾಗಿ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಉದ್ವಿಗ್ನತೆ ಗಗನಕ್ಕೇರಿದೆ. ಈ ನಡುವೆ, ಅಮೆರಿಕ ಒಂದು ಕಡೆ ಬಹಿರಂಗವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರೆ, ಮತ್ತೊಂದೆಡೆ ರಹಸ್ಯವಾಗಿ ಇರಾನ್ (Iran War) ಜೊತೆ ಸಂಧಾನದ ಮಾತುಕತೆಗೆ ಪ್ರಯತ್ನಿಸುತ್ತಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಸಂಸದ ಹಸನ್ ಘಷ್ಘವಿ ಅಮೆರಿಕದ ವಿರುದ್ಧ ಈ ಆರೋಪ ಮಾಡಿದ್ದು, ವಾಷಿಂಗ್ಟನ್ ಮತ್ತಷ್ಟು ಮಿಲಿಟರಿ ದಾಳಿಯ ಬೆದರಿಕೆಗಳನ್ನು…

Read More

ರಾಜ್ಯದಲ್ಲಿ ರಕ್ತದ ಕೊರತೆಗೆ ಬ್ರೇಕ್: 20 ಕೋಟಿ ರೂ. ವೆಚ್ಚದಲ್ಲಿ 4 ಪ್ರಾದೇಶಿಕ ರಕ್ತ ನಿಧಿ ಕೇಂದ್ರ ಸ್ಥಾಪನೆ – Kannada News | Free Blood for BPL/APL in Government Hospitals: Karnatakas Latest Health Initiative

ಬೆಂಗಳೂರು, ಆ.1: ಕರ್ನಾಟಕದಲ್ಲಿ ರಕ್ತದ ಕೊರತೆ ನೀಗಿಸಲು ಮತ್ತು ರಕ್ತದಾನವನ್ನು ಪ್ರೋತ್ಸಾಹಿಸಲು ಆರೋಗ್ಯ ಸಚಿವ ಯು. ಟಿ. ಖಾದರ್ ಅವರು ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಯುವಜನರು ಮತ್ತು ಸಂಘ ಸಂಸ್ಥೆಗಳನ್ನು ಉತ್ತೇಜಿಸಲಾಗುವುದು. ರಕ್ತದ ಕೊರತೆಯಿಂದಾಗಿ ಯಾವುದೇ ವ್ಯಕ್ತಿ ಅಥವಾ ಕುಟುಂಬ ತೊಂದರೆ ಅನುಭವಿಸಬಾರದು ಎಂಬುದು ಸರ್ಕಾರದ ಪ್ರಮುಖ ಕಾಳಜಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ರಕ್ತ ಬ್ಯಾಂಕ್‌ಗಳನ್ನು ಬಲಪಡಿಸಲಾಗುವುದು. ಇದರ ಜೊತೆಗೆ, ಸುಮಾರು 20…

Read More

‘ರಾಮಾಯಣ’: ಸೀತೆಯ ಪಾತ್ರದ ಅವಕಾಶ ಬಂದಿದ್ದು ಕನ್ನಡದ ನಟಿಗೆ – Kannada News | Srinidhi Shetty also auditioned for Ramayana movie Sita character

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ, ಪ್ರಸ್ತುತ ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿದೆ. ಎರಡೂ ಭಾಗಗಳಿಗೆ ಸೇರಿ 4000 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಭಾರಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿರುವುದು ಟ್ರೈಲರ್​​ನಿಂದ ಖಾತ್ರಿ ಆಗುತ್ತಿದೆ. ಟ್ರೈಲರ್ ನೋಡಿದವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸೀತೆಯ ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು…

Read More

ತಮಿಳು, ಹಿಂದಿ ಬಳಿಕ ತೆಲುಗಿಗೆ ಡಬ್ ಆದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ – Kannada News | Kannada movie Second case of Seetharam now available in Telugu also

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಸೀತಾರಾಮ್ ಬಿನೋಯಿ ಕೇಸ್ ನಂಬರ್ 18’ ಸಿನಿಮಾ ದೊಡ್ಡ ಯಶಸ್ಸು ಗಳಿಸಿತು. ವಿಜಯ್ ರಾಘವೇಂದ್ರ ಅವರ ನಟನೆ, ಸಿನಿಮಾದಲ್ಲಿದ್ದ ಸಸ್ಪೆನ್ಸ್ ಎಲ್ಲವೂ ಸಹ ಪ್ರೇಕ್ಷಕರನ್ನು ಸೆಳೆದಿತ್ತು. ಚಿತ್ರಮಂದಿರದಲ್ಲಿ ಸಾಧಾರಣ ಹಿಟ್ ಆದರೂ ಬಳಿಕ ಒಟಿಟಿಯಲ್ಲಿ ಸಿನಿಮಾಕ್ಕೆ ದೊಡ್ಡ ಯಶಸ್ಸು ದೊರಕಿತ್ತು. ಅದೇ ಸಿನಿಮಾದ ಮುಂದುವರೆದ ಭಾಗ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾಕ್ಕೂ ಒಟಿಟಿಯಲ್ಲಿ ಭರ್ಜರಿ ಪ್ರತಿಕ್ರಿಯೆ ದೊರಕುತ್ತಿದೆ. ಇದೀಗ ಸಿನಿಮಾಕ್ಕೆ ಬೇಡಿಕೆ ಹೆಚ್ಚಾದ…

Read More

Chanakya Niti: ಈ ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ – Kannada News | Chanakya Niti: These mistakes destroy peace and prosperity in the home

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ಮಾತ್ರವಲ್ಲ ಯಶಸ್ಸು, ಶ್ರೀಮಂತಿಕೆ ಹಾಗೂ ವೈಯಕ್ತಿಕ ಜೀವನಕ್ಕೆ ಸಹಕಾರಿಯಾದ ಹತ್ತು ಹಲವು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರು ಕುಟುಂಬ ಮತ್ತು ಮನೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಅವರ ಪ್ರಕಾರ, ಮನೆಯಲ್ಲಿ ನಿಜವಾದ ಶಾಂತಿ ಕೇವಲ ಹಣದಿಂದಲ್ಲ, ಬದಲಿಗೆ ಅಲ್ಲಿ ವಾಸಿಸುವ ಜನರ ಅಭ್ಯಾಸಗಳು ಮತ್ತು ಆಲೋಚನೆಗಳಿಂದ ಬರುತ್ತದೆ. ಹೀಗಿರುವಾಗ ನಾವು ನಮ್ಮ ದೈನಂದಿನ ಜೀವನದಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡಿದರೆ ಮನೆಯ ಶಾಂತಿ,…

Read More

World Breastfeeding Week: ಮಗುವಿಗಷ್ಟೇ ಅಲ್ಲ, ತಾಯಿಯ ಆರೋಗ್ಯಕ್ಕೂ ಸ್ತನ್ಯಪಾನ ಅಮೂಲ್ಯ ವರ – Kannada News | Breastfeeding Myths vs Facts: What Every New Mother Should Know

ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ನವಜಾತ ಶಿಶುವಿಗೆ ತಾಯಿಯ ಹಾಲು ಅತ್ಯುತ್ತಮ ಮತ್ತು ಸಂಪೂರ್ಣ ಪೌಷ್ಟಿಕ ಆಹಾರವೆಂದು ವೈದ್ಯರು ಪರಿಗಣಿಸುತ್ತಾರೆ. ಇದು ಮಗುವಿನ ಬೆಳವಣಿಗೆ, ರೋಗನಿರೋಧಕ ಶಕ್ತಿ ಹಾಗೂ ಮೆದುಳಿನ ಅಭಿವೃದ್ಧಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ, ಸ್ತನ್ಯಪಾನದ ಪ್ರಯೋಜನ ಕೇವಲ ಮಗುವಿಗೆ ಮಾತ್ರವಲ್ಲ. ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ಅನೇಕ ರೀತಿಯಲ್ಲಿ ಸಹಕಾರಿಯಾಗುತ್ತದೆ. ಸ್ತನ್ಯಪಾನದ ಕುರಿತು ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳು…

Read More

ಪಹಲ್ಗಾಮ್​​ನಂತೆ ಕುಲ್ಗಾಮ್​ನಲ್ಲೂ ಜಾತಿ, ಧರ್ಮ ಕೇಳಿ ಗುಂಡು ಹಾರಿಸಿದ ಉಗ್ರರು! – Kannada News | Terrorists shot and killed Migrant Workers after asking caste and community in Kulgam

ಕುಲ್ಗಾಮ್, ಆಗಸ್ಟ್ 1: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ (Terror Attack) ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಆ ಕಾರ್ಮಿಕರನ್ನು ಜಾತಿ ಮತ್ತು ಸಮುದಾಯದ ಬಗ್ಗೆ ವಿಚಾರಿಸಿದ ನಂತರವೇ ಕೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ದಾಳಿಯಲ್ಲಿ ಕೊಲೆಯಾದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಲ್ಲಿ ದೀಪಕ್ ರಾತ್ರೆ ಕೂಡ ಒಬ್ಬರಾಗಿದ್ದಾರೆ. 1 ವರ್ಷದಿಂದ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಇಡೀ ಕುಟುಂಬಕ್ಕೆ ಏಕೈಕ…

Read More