Headlines

ಕೇವಲ 85 ರನ್‌ಗಳಿಗೆ ಆಲೌಟ್ ಆದರೂ ಚಾಂಪಿಯನ್ಸ್!  – Kannada News | The Guyana Amazon Warriors are champions of the Global Super League 2026

ಕ್ರಿಕೆಟ್ ಇತಿಹಾಸದಲ್ಲಿ ನಂಬಲಸಾಧ್ಯವಾದ ಪಂದ್ಯಗಳು ಹಲವು ನಡೆದಿವೆ. ಆದರೆ, 2026ರ ಗ್ಲೋಬಲ್ ಸೂಪರ್ ಲೀಗ್ (GSL) ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡ ತೋರಿದ ಪ್ರದರ್ಶನವು ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಅತ್ಯುತ್ತಮ ರೋಚಕ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ. ಕೇವಲ 85 ರನ್‌ಗಳಿಗೆ ಆಲೌಟ್ ಆದ ಹೊರತಾಗಿಯೂ, ಗಯಾನಾ ವಾರಿಯರ್ಸ್ ತಂಡ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಬೌಲರ್​ಗಳ ಪರಾಕ್ರಮ: ತಮ್ಮದೇ ತವರು ಮೈದಾನವಾದ…

Read More

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಬರೆದ ಭಾರತೀಯ ಯೋಧ! – Kannada News | Indian Soldier Scripts History At Commonwealth Games

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಇತಿಹಾಸ ನಿರ್ಮಿಸಿದ್ದು ಮತ್ಯಾರೂ ಅಲ್ಲ, ಭಾರತೀಯ ಯೋಧ ಗುಲ್ವೀರ್ ಸಿಂಗ್. ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಾಂಗ್ ಡಿಸ್ಟೆನ್ಸ್ ರನ್ನರ್ ಆಗಿ ಕಣಕ್ಕಿಳಿದಿದ್ದ ಗುಲ್ವೀರ್ ಸಿಂಗ್ ಎರಡು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಟ್ರ್ಯಾಕ್ ಆಂಡ್ ಫೀಲ್ಡ್​ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಗುಲ್ವೀರ್ ಸಿಂಗ್ ತಮ್ಮದಾಗಿಸಿಕೊಂಡಿದ್ದಾರೆ. 10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ:…

Read More

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: ಬೆಂಗಳೂರಿನ ಆಸ್ಪತ್ರೆಯಲ್ಲಿ 3,000 ರೋಬೋಟಿಕ್ ಶಸ್ತ್ರಚಿಕಿತ್ಸೆ ಪೂರ್ಣ! – Kannada News | Bengaluru Fortis Hospital Completes 3000 Robotic Surgeries Landmark Achievement

ಬೆಂಗಳೂರು, ಆಗಸ್ಟ್ 02: ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರು ಮತ್ತೊಮ್ಮೆ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ‘ಡಾ ವಿಂಚಿ ಎಕ್ಸ್‌ಐ’ (Da Vinci Xi) ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಳಸಿ ಯಶಸ್ವಿಯಾಗಿ 3,000 ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು (Robotic Surgeries) ಪೂರ್ಣಗೊಳಿಸುವ ಮೂಲಕ ದೇಶದಲ್ಲೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 12 ವೈದ್ಯಕೀಯ ವಿಭಾಗಗಳಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಕೆ 2018ರಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸಾ ಯೋಜನೆಯನ್ನು ಪ್ರಾರಂಭಿಸಿದ…

Read More

Pooja Room: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ – Kannada News | Pooja Room Cleaning Rules: Right Time, Days, and Vastu Tips You Must Know

ಹಿಂದೂ ಧರ್ಮದಲ್ಲಿ ಮನೆಯ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಅದು ದೇವರ ಕೋಣೆ. ಇದು ಬರಿ ಪೂಜೆ ಮಾಡುವ ಜಾಗ ಮಾತ್ರವಲ್ಲ, ಸಾಕ್ಷಾತ್ ಈಶ್ವರನ ವಾಸಸ್ಥಾನವೂ ಆಗಿದೆ. ಗರುಡ ಪುರಾಣದ ‘ಆಚಾರ ಖಂಡ’ ಮತ್ತು ‘ಪೂಜಾ ವಿಧಿ’ ಅಧ್ಯಾಯಗಳಲ್ಲಿ ದೇವರ ಕೋಣೆಯ ನೈರ್ಮಲ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಹಾಗೂ ಪೂಜೆಯ ಸಂಪೂರ್ಣ ಫಲವನ್ನು ಪಡೆಯಲು ದೇವರ ಕೋಣೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿಡುವುದು ಅಗತ್ಯವಾಗಿದೆ. ಬೆಳಗಿನ ಜಾವದ ಶುಚಿಗೊಳಿಸುವಿಕೆ ಮತ್ತು ಅದರ ಮಹತ್ವ:…

Read More

ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲದಲ್ಲಿ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಮುಳುಗಡೆ – Kannada News | Heavy Rains Lead to Widespread Flooding in Bhagamandala, Madikeri

ಮಡಿಕೇರಿ, ಆಗಸ್ಟ್​​ 02: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಡಿಕೇರಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಭಾಗಮಂಡಲ ಗ್ರಾಮ ಕೇಂದ್ರ ಸಂಪೂರ್ಣವಾಗಿ ಜಲಾವೃತವಾಗಿದೆ. ತ್ರಿವೇಣಿ ಸಂಗಮವು ಸಂಪೂರ್ಣವಾಗಿ ನೀರಿನಿಂದ ಆವೃತಗೊಂಡಿದ್ದು, ಸಂಗಮದ ಪಕ್ಕದಲ್ಲಿರುವ ಸ್ನಾನಘಟ್ಟಗಳು ಹಾಗೂ ಉದ್ಯಾನವನಗಳು ಸಹ ಮುಳುಗಡೆಯಾಗಿವೆ. ಮಳೆಯ ತೀವ್ರತೆಗೆ ಭಾಗಮಂಡಲ-ತಲಕಾವೇರಿ ಮಾರ್ಗದ ರಸ್ತೆಯು ಸಹ ನೀರಿನಿಂದ ಆವರಿಸಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಫ್ಲೈ ಓವರ್ ಮೂಲಕ ಓಡಾಡುತ್ತಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​…

Read More

ಜಗತ್ತಿನ ಭವಿಷ್ಯದ ಹಿತಕ್ಕಾಗಿ ಇರಾನ್ ಮೇಲಿನ ದಾಳಿ ರದ್ದು: ಡೊನಾಲ್ಡ್ ಟ್ರಂಪ್ ಘೋಷಣೆ, ಹಾರ್ಮುಜ್ ಜಲಸಂಧಿ ತೆರೆಯಲು ಸಮ್ಮತಿ – Kannada News | Trump Halts Iran Attack for Global Peace; Strait of Hormuz Opens

ವಾಷಿಂಗ್ಟನ್, ಆಗಸ್ಟ್​ 02: ಇರಾನ್ ಹಾಗೂ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳ ಸತತ ಕೋರಿಕೆಯ ಮೇರೆಗೆ, ಇರಾನ್ ವಿರುದ್ಧ ಯೋಜಿಸಲಾಗಿದ್ದ ಸರಣಿ ಮಿಲಿಟರಿ ದಾಳಿಗಳನ್ನು ಅಮೆರಿಕ ಮತ್ತು ಇಸ್ರೇಲ್ ತಡೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)  ಪ್ರಕಟಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದಾರೆ. ನೂತನ ಒಪ್ಪಂದದಂತೆ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ಸಂಪೂರ್ಣವಾಗಿ ತೆರೆಯಲಾಗುವುದು…

Read More

ಸಲ್ಮಾನ್ ಖಾನ್ ಸಂಭಾವನೆಯಲ್ಲಿ ಭಾರಿ ಇಳಿಕೆ; 120 ಕೋಟಿ ರೂಪಾಯಿ ಬದಲು 70 ಕೋಟಿ ರೂ.? – Kannada News | Salman Khan takes massive Pay Cut reduces Fees to 70 Crores for SVC 63 Vamsi Paidipally film

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಮತ್ತು ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಕೇಳಿಬಂದಿದೆ. ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ‘SVC63’ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಚಿತ್ರರಂಗದಲ್ಲಿ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಲ್ಮಾನ್ ಖಾನ್ ತೆಗೆದುಕೊಂಡಿರುವ ಸಂಭಾವನೆ (Salman…

Read More

ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ – Kannada News | Rain Havoc in Karnataka: Heavy Flooding in Dakshina Kannada, Tree Fall in Shivamogga

ಬಂಟ್ವಾಳದ ಹಲವು ಗ್ರಾಮಗಳು ಜಲಾವೃತImage Credit source: Tv9 Kannada ಮಂಗಳೂರು/ಶಿವಮೊಗ್ಗ ಆಗಸ್ಟ್​​ 02: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಜೊತೆಗೆ ಎಎಂಆರ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ಬಂಟ್ವಾಳ ತಾಲೂಕಿನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಜನ ಪರದಾಟ ನಡೆಸಿದ್ದಾರೆ. ಪಾಣೆಮಂಗಳೂರು ಬಳಿಯ ಅಲಡ್ಕ,…

Read More

ನೀವು ಯಾವಾಗ ಬೇಕಾದರೂ ಬನ್ನಿ, ನಿಮ್ಮ ಭದ್ರತೆಯ ಜವಾಬ್ದಾರಿ ನಮ್ಮದು, ತಸ್ಲೀಮಾ ನಸ್ರೀನ್​ಗೆ ಸಿಎಂ ಸುವೇಂದು ಭರವಸೆ – Kannada News | Taslima Nasreen Returns: CM Suvendu Adhikari Guarantees Full Security in Kolkata

ಕೋಲ್ಕತ್ತಾ, ಆಗಸ್ಟ್ 02: ಸುಮಾರು 19 ವರ್ಷಗಳ ಗಡಿಪಾರು ಬಳಿಕ ಕೋಲ್ಕತ್ತಾಗೆ ಮರಳಿರುವ ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen) ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಪೂರ್ಣ ಭದ್ರತೆಯ ಭರವಸೆ ನೀಡಿದ್ದಾರೆ. ಶನಿವಾರ ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ತಸ್ಲೀಮಾ ಅವರು ಇನ್ಮುಂದೆ ಬಯಸಿದಾಗಲೆಲ್ಲಾ ಬಂಗಾಳಕ್ಕೆ ಭೇಟಿ ನೀಡಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಪೊಲೀಸ್ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಯಾಗಿ ನಿಮಗೆ ಸೂಕ್ತ…

Read More

ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ತೀರ್ಥಹಳ್ಳಿಯಲ್ಲಿ ದುರಂತ: ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ – Kannada News | Malnad Rain Havoc: 3 of a Family Died in Thirthahalli Landslide

ಮಳೆ ಅಬ್ಬರಕ್ಕೆ ಗುಡ್ಡ ಕುಸಿದು ದುರಂತImage Credit source: Tv9 Kannada ಶಿವಮೊಗ್ಗ, ಆಗಸ್ಟ್​​ 02: ಮಲೆನಾಡು ಭಾಗದಲ್ಲಿ ಮಳೆ ಅವಾಂತರಕ್ಕೆ ಸಾಲು ಸಾಲು ಅನಾಹುತಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ ಎನ್ನಲಾಗಿದ್ದು, ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪಕ್ಕದ ಶೆಡ್​​ನಲ್ಲಿದ್ದವರಿಗೂ…

Read More