World Breastfeeding Week: ಮಗುವಿಗಷ್ಟೇ ಅಲ್ಲ, ತಾಯಿಯ ಆರೋಗ್ಯಕ್ಕೂ ಸ್ತನ್ಯಪಾನ ಅಮೂಲ್ಯ ವರ – Kannada News | Breastfeeding Myths vs Facts: What Every New Mother Should Know

ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ನವಜಾತ ಶಿಶುವಿಗೆ ತಾಯಿಯ ಹಾಲು ಅತ್ಯುತ್ತಮ ಮತ್ತು ಸಂಪೂರ್ಣ ಪೌಷ್ಟಿಕ ಆಹಾರವೆಂದು ವೈದ್ಯರು ಪರಿಗಣಿಸುತ್ತಾರೆ. ಇದು ಮಗುವಿನ ಬೆಳವಣಿಗೆ, ರೋಗನಿರೋಧಕ ಶಕ್ತಿ ಹಾಗೂ ಮೆದುಳಿನ ಅಭಿವೃದ್ಧಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ, ಸ್ತನ್ಯಪಾನದ ಪ್ರಯೋಜನ ಕೇವಲ ಮಗುವಿಗೆ ಮಾತ್ರವಲ್ಲ. ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ಅನೇಕ ರೀತಿಯಲ್ಲಿ ಸಹಕಾರಿಯಾಗುತ್ತದೆ. ಸ್ತನ್ಯಪಾನದ ಕುರಿತು ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳು ಇನ್ನೂ ಇದ್ದು, ಹೊಸ ತಾಯಂದಿರಲ್ಲಿ ಗೊಂದಲ ಮೂಡಿಸುತ್ತವೆ. ಆದ್ದರಿಂದ ಕೆಲವು ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.

ಸ್ತನ್ಯಪಾನದ ಬಗ್ಗೆ ಇರುವ ಸಾಮಾನ್ಯ ಮಿಥ್ಯೆ ಮತ್ತು ಸತ್ಯಗಳು

ಮಿಥ್ಯೆ: ಸ್ತನ್ಯಪಾನದಿಂದ ಪ್ರಯೋಜನ ಮಗುವಿಗೆ ಮಾತ್ರ

ಸತ್ಯ: ಅಮೆರಿಕನ್ ಕಾಲೇಜ್ ಆಫ್ ಆಬ್ಸ್ಟೆಟ್ರಿಷಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ (ACOG) ಪ್ರಕಾರ, ಸ್ತನ್ಯಪಾನದಿಂದ ತಾಯಿಯ ದೇಹವೂ ಶೀಘ್ರ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಭವಿಷ್ಯದಲ್ಲಿ ಕೆಲವು ಗಂಭೀರ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡಬಹುದು.

ಮಿಥ್ಯೆ: ಸ್ತನ್ಯಪಾನದಿಂದ ತಾಯಿ ದುರ್ಬಲರಾಗುತ್ತಾರೆ

ಸತ್ಯ: ಪೌಷ್ಟಿಕ ಆಹಾರ, ಸಾಕಷ್ಟು ನೀರು ಮತ್ತು ಸಮರ್ಪಕ ವಿಶ್ರಾಂತಿ ಪಡೆದರೆ ಸ್ತನ್ಯಪಾನದಿಂದ ದೇಹ ದುರ್ಬಲವಾಗುವುದಿಲ್ಲ. ಇದು ದೇಹದ ಸಹಜ ಪ್ರಕ್ರಿಯೆಯಾಗಿದೆ.

ಮಿಥ್ಯೆ: 6 ತಿಂಗಳ ನಂತರ ತಾಯಿಯ ಹಾಲಿಗೆ ಯಾವುದೇ ಪ್ರಯೋಜನವಿಲ್ಲ

ಸತ್ಯ: ಆರು ತಿಂಗಳ ನಂತರ ಪೂರಕ ಆಹಾರ ಆರಂಭಿಸಿದರೂ, ತಾಯಿಯ ಹಾಲು ಮಗುವಿಗೆ ಪೌಷ್ಟಿಕಾಂಶ ಮತ್ತು ರೋಗನಿರೋಧಕ ಶಕ್ತಿ ನೀಡುತ್ತಲೇ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ತನ್ಯಪಾನ ಮುಂದುವರಿಸಲು ಶಿಫಾರಸು ಮಾಡುತ್ತದೆ.

ಮಿಥ್ಯೆ: ಹಾಲು ಕಡಿಮೆ ಬರುತ್ತಿದ್ದರೆ ತಕ್ಷಣ ಫಾರ್ಮುಲಾ ಹಾಲು ನೀಡಬೇಕು

ಸತ್ಯ: ಆರಂಭದಲ್ಲಿ ಹಾಲು ಕಡಿಮೆ ಬರುತ್ತಿರುವಂತೆ ಅನಿಸಬಹುದು. ಆದರೆ ವೈದ್ಯರು ಅಥವಾ ಲ್ಯಾಕ್ಟೇಶನ್ ತಜ್ಞರ ಸಲಹೆ ಪಡೆದರೆ ಹೆಚ್ಚಿನ ಸಂದರ್ಭಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಸ್ತನ್ಯಪಾನದಿಂದ ತಾಯಿಯ ಆರೋಗ್ಯಕ್ಕೆ ದೊರೆಯುವ ಲಾಭಗಳು:

ಹೆರಿಗೆಯ ನಂತರ ಗರ್ಭಾಶಯ ಬೇಗ ಸಹಜ ಸ್ಥಿತಿಗೆ ಮರಳುತ್ತದೆ: ಸ್ತನ್ಯಪಾನದಿಂದ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗಿ ಗರ್ಭಾಶಯ ಕುಗ್ಗಲು ಸಹಾಯ ಮಾಡುತ್ತದೆ. ಇದರಿಂದ ಹೆರಿಗೆಯ ನಂತರದ ರಕ್ತಸ್ರಾವ ಕಡಿಮೆಯಾಗಬಹುದು.

ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ ಅಪಾಯ ಕಡಿಮೆಯಾಗಬಹುದು: ಅಧ್ಯಯನಗಳ ಪ್ರಕಾರ ದೀರ್ಘಕಾಲ ಸ್ತನ್ಯಪಾನ ಮಾಡಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯ ಕ್ಯಾನ್ಸರ್ ಅಪಾಯ ಕಡಿಮೆಯಾಗುವ ಸಾಧ್ಯತೆ ಇದೆ.

ಟೈಪ್-2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ: ಸ್ತನ್ಯಪಾನವು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವ ಮೂಲಕ ಕೆಲವು ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಹೆರಿಗೆಯ ನಂತರ ತೂಕ ನಿಯಂತ್ರಣಕ್ಕೆ ಸಹಕಾರಿ: ಸ್ತನ್ಯಪಾನ ಮಾಡುವಾಗ ಹೆಚ್ಚುವರಿ ಕ್ಯಾಲೊರಿ ಬರ್ನ್ ಆಗುವುದರಿಂದ ಹೆರಿಗೆಯ ನಂತರದ ತೂಕ ಇಳಿಕೆಗೆ ಸಹಾಯವಾಗಬಹುದು.

ಇದನ್ನೂ ಓದಿ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾಲಿಸಬೇಕಾದ ಸರಳ ಅಭ್ಯಾಸಗಳು!

ತಾಯಿ-ಮಗುವಿನ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ: ಚರ್ಮದಿಂದ ಚರ್ಮಕ್ಕೆ ಸಂಪರ್ಕ (Skin-to-Skin Contact) ತಾಯಿ ಮತ್ತು ಮಗುವಿನ ನಡುವಿನ ಪ್ರೀತಿ ಹಾಗೂ ಭದ್ರತೆಯ ಭಾವನೆಯನ್ನು ಹೆಚ್ಚಿಸುತ್ತದೆ.

ಮಗುವಿಗೆ ಎಷ್ಟು ಕಾಲ ಸ್ತನ್ಯಪಾನ ಮಾಡಿಸಬೇಕು?

  • ಮೊದಲ 6 ತಿಂಗಳು ಕೇವಲ ತಾಯಿಯ ಹಾಲು ಮಾತ್ರ ನೀಡಬೇಕು.
  • 6 ತಿಂಗಳ ನಂತರ ಪೂರಕ ಆಹಾರ ಆರಂಭಿಸಿ, ಜೊತೆಗೆ ಸ್ತನ್ಯಪಾನ ಮುಂದುವರಿಸಬೇಕು.
  • 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ತಾಯಿಯ ಹಾಗೂ ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಸ್ತನ್ಯಪಾನ ಮುಂದುವರಿಸಬಹುದು.

ಸ್ತನ್ಯಪಾನ ಮಾಡುವ ತಾಯಂದಿರು ಗಮನಿಸಬೇಕಾದ ವಿಷಯಗಳು

  • ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಿ.
  • ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
  • ಸಮರ್ಪಕ ವಿಶ್ರಾಂತಿ ಪಡೆಯಿರಿ.
  • ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ಸೇವಿಸಬೇಡಿ.
  • ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ.
  • ಹಾಲುಣಿಸುವಾಗ ಸರಿಯಾದ ಭಂಗಿ (Position) ಅನುಸರಿಸಿ.
  • ಸ್ತನಗಳಲ್ಲಿ ನೋವು, ಬಿರುಕು ಅಥವಾ ಊತ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಸ್ತನ್ಯಪಾನ ಹೆಚ್ಚಿಸಲು ಸಹಾಯ ಮಾಡುವ ಸಲಹೆಗಳು

  • ಮಗು ಹುಟ್ಟಿದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು ಉತ್ತಮ.
  • ಮಗುವಿಗೆ ಬೇಕಾದಾಗಲೆಲ್ಲ ಹಾಲುಣಿಸಿ (On-demand Feeding).
  • ತಾಯಿಗೆ ಒತ್ತಡ ಕಡಿಮೆ ಇದ್ದರೆ ಹಾಲಿನ ಉತ್ಪಾದನೆ ಉತ್ತಮವಾಗಿರುತ್ತದೆ.
  • ಶತಾವರಿ, ಮೆಂತ್ಯೆ, ಜೀರಿಗೆ, ಸೊಪ್ಪುಗಳು, ಹಾಲು ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದು ಸಹಾಯಕವಾಗಬಹುದು. (ವೈದ್ಯರ ಸಲಹೆಯೊಂದಿಗೆ)
  • ಸಾಕಷ್ಟು ನಿದ್ರೆ ಹಾಗೂ ಕುಟುಂಬದ ಬೆಂಬಲ ತಾಯಿಯ ಆರೋಗ್ಯಕ್ಕೆ ಅತ್ಯಂತ ಮುಖ್ಯ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ವೈಯಕ್ತಿಕ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಲ್ಯಾಕ್ಟೇಶನ್ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಹಲ್ಗಾಮ್​​ನಂತೆ ಕುಲ್ಗಾಮ್​ನಲ್ಲೂ ಜಾತಿ, ಧರ್ಮ ಕೇಳಿ ಗುಂಡು ಹಾರಿಸಿದ ಉಗ್ರರು! – Kannada News | Terrorists shot and killed Migrant Workers after asking caste and community in Kulgam

ಕುಲ್ಗಾಮ್, ಆಗಸ್ಟ್ 1: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ (Terror Attack) ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಆ ಕಾರ್ಮಿಕರನ್ನು ಜಾತಿ ಮತ್ತು ಸಮುದಾಯದ ಬಗ್ಗೆ ವಿಚಾರಿಸಿದ ನಂತರವೇ ಕೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ದಾಳಿಯಲ್ಲಿ ಕೊಲೆಯಾದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಲ್ಲಿ ದೀಪಕ್ ರಾತ್ರೆ ಕೂಡ ಒಬ್ಬರಾಗಿದ್ದಾರೆ. 1 ವರ್ಷದಿಂದ ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್, ಇಡೀ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ದೀಪಕ್ ಅವರಿಗೆ ಪತ್ನಿ, 4 ತಿಂಗಳ ಮಗು, ವಿಧವೆ ತಾಯಿ ಮತ್ತು ವಿಕಲಚೇತನ ಸಹೋದರನಿದ್ದಾರೆ. ಅವರ ತಂದೆ 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಈ ದಾಳಿಯಲ್ಲಿ ಛತ್ತೀಸ್‌ಗಢದ ಸಾರಂಗಢ್‌ ಜಿಲ್ಲೆಯ ಭೂಪೇಂದ್ರ ಎಂಬ ಮತ್ತೊಬ್ಬ ಕಾರ್ಮಿಕನೂ ಮೃತಪಟ್ಟಿದ್ದಾರೆ.

ಮೃತರಾದ ಛತ್ತೀಸ್‌ಗಢ ಮೂಲದ ದೀಪಕ್ ರಾತ್ರೆ ಮತ್ತು ಭೂಪೇಂದ್ರ ಭೈನಾ ಇಬ್ಬರೂ ಕುಲ್ಗಾಮ್‌ನ ಕೆಲಾಮ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ದೀಪಕ್ ಅವರ ಸಂಬಂಧಿ ಹಲ್ಧರ್ ರಾತ್ರೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ಉಗ್ರರು ಗುಂಡು ಹಾರಿಸುವ ಮುನ್ನ ಕಾರ್ಮಿಕರ ಜಾತಿ, ಸಮುದಾಯ ಮತ್ತು ಗುರುತನ್ನು ವಿಚಾರಿಸಿದ್ದರು. ಗುರುತು ಖಚಿತಪಡಿಸಿಕೊಂಡ ನಂತರವೇ ಅವರ ಮೇಲೆ ಕ್ರೂರವಾಗಿ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿದ್ದಾರೆ. ದೀಪಕ್ ಅವರು ತಮ್ಮ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದರು. ಅವರಿಗೆ ಪತ್ನಿ, 4 ತಿಂಗಳ ಮಗು, ವಯಸ್ಸಾದ ತಾಯಿ ಮತ್ತು ವಿಕಲಚೇತನ ಸಹೋದರನಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ದಾಳಿ; ಓರ್ವ ಸಾವು, ಒಬ್ಬರ ಸ್ಥಿತಿ ಗಂಭೀರ

ಸರ್ಕಾರದಿಂದ ಪರಿಹಾರ ಘೋಷಣೆ:

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಈ ದಾಳಿಯನ್ನು ಖಂಡಿಸಿದ್ದು, ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಮತ್ತು ಉನ್ನತ ಮಟ್ಟದ ಭದ್ರತಾ ಪರಿಶೀಲನೆ ಆರಂಭಿಸಿವೆ.

ಅನಂತನಾಗ್‌ನಲ್ಲಿ ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆಶಿಕ್ ಹುಸೇನ್ ಖುರೇಷಿ ಅವರನ್ನು ಉಗ್ರರು ಕೊಂದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ – Kannada News | Eating these foods daily will increase skin glow

ಪ್ರತಿಯೊಬ್ಬರೂ ತಮ್ಮ ತ್ವಚೆ (skin) ಆಕರ್ಷಕವಾಗಿರಬೇಕು, ಮೊಡವೆ, ಯಾವುದೇ ಕಲೆಗಳಿಲ್ಲದೆ ಕಾಂತಿಯುತವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೊರಿಯನ್ನರಂತೆ ಫಳ ಫಳನೇ ಹೊಳೆಯುವ ಗ್ಲಾಸ್‌ ಸ್ಕಿನ್‌ ನಮ್ಮದಾಗಬೇಕೆಂದು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಹಲವರು ದುಬಾರಿ ಬ್ಯೂಟಿ ಪ್ರಾಡಕ್ಟ್ ಸ್ಕಿನ್‌ಕೇರ್‌ಗಳ ಮೊರೆ ಹೋಗುತ್ತಿದ್ದಾರೆ. ಇವು ಬಾಹ್ಯವಾಗಿ ತ್ವಚೆಗೆ ಆರೈಕೆಯನ್ನು ನೀಡಬಹುದು. ಆದರೆ ನಿಜವಾಗಿಯೂ ತ್ವಚೆಯ ಆರೋಗ್ಯ ನಾವು ಏನು ಸೇವನೆ ಮಾಡುತ್ತೇವೆಯೋ ಅದರ ಮೇಲೆ ನಿಂತಿದೆ. ನಾವು ಸೇವಿಸುವ ಆಹಾರದ ಫಲಿತಾಂಶ ಮುಖದ ಮೇಲೆ ಗೋಚರಿಸುತ್ತದೆ, ಅದಕ್ಕಾಗಿಯೇ ಯಾವಾಗಲೂ ಆರೋಗ್ಯಕರ ಆಹಾರಗಳನ್ನೇ ಸೇವನೆ ಮಾಡಬೇಕು. ಅದರಲ್ಲೂ ತ್ವಚೆಯ ಹೊಳಲು ಹೆಚ್ಚಾಗಲೂ ಪ್ರತಿನಿತ್ಯ ಈ ಕೆಲವು ಆಹಾರಗಳನ್ನು ತಪ್ಪದೇ ಸೇವನೆ ಮಾಡಲೇಬೇಕು. ಅವು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.

ಮುಖದ ಹೊಳಪನ್ನು ಹೆಚ್ಚಿಸಲು ಏನೆಲ್ಲಾ ತಿನ್ನಬೇಕು?

ನೆಲ್ಲಿಕಾಯಿ: ಆಮ್ಲಾ ಅಂದರೆ ನೆಲ್ಲಿಕಾಯಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದು ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್‌ ಅನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಥವಾ ಹಸಿ ನೆಲ್ಲಿಕಾಯಿ ತಿನ್ನುವುದರಿಂದ ದೇಹದಿಂದ ವಿಷವನ್ನು ಹೊರಹಾಕಬಹುದು ಮತ್ತು ಇದು ತ್ವಚೆಯ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಾಲ್ನಟ್ಸ್ ಮತ್ತು ಬಾದಾಮಿ: ಈ ಡ್ರೈ ನಟ್ಸ್‌ಗಳುಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿವೆ. ಬಾದಾಮಿ ಮತ್ತು ವಾಲ್ನಟ್ಸ್ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಒಣ ಚರ್ಮದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿಯಿಡೀ 4 ರಿಂದ 5 ನೆನೆಸಿದ ಬಾದಾಮಿ ಮತ್ತು 2 ವಾಲ್ನಟ್ಸ್ ತಿನ್ನಿ, ಇದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ.

ಟೊಮ್ಯಾಟೋ: ಟೊಮ್ಯಾಟೋ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತವೆ, ಇದು ಸೂರ್ಯನ ಹಾನಿಕಾರಕ ಯು.ವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ಕಪ್ಪು ಕಲೆಗಳು, ಟ್ಯಾನಿಂಗ್ ಮತ್ತು ತೆರೆದ ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯ ಟೊಮೆಟೋ ಸೇವಿಸಿ. ಪದಾರ್ಥಕ್ಕೂ ಟೊಮೆಟೊ ಹಾಕಬಹುದು ಅಲ್ಲದೆ ಸಲಾಡ್‌, ಜ್ಯೂಸ್‌  ರೂಪದಲ್ಲೂ ಸೇವಿಸಬಹುದು.

ಕ್ಯಾರೆಟ್: ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ತಿನ್ನುವುದರಿಂದ ಮೊಡವೆಗಳು ಕಡಿಮೆ ಮಾಡಬಹುದು ಮತ್ತು ಇದು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕ್ಯಾರೆಟ್‌ ಅನ್ನು ನೀವು ಸಲಾಡ್‌ ಅಥವಾ ಜ್ಯೂಸ್‌ ರೂಪದಲ್ಲಿ ನಿತ್ಯ ಸೇವನೆ ಮಾಡಿ.

ಇದನ್ನೂ ಓದಿ: ಮಹಿಳೆಯರೇ… ಬೆಳಗೆದ್ದು ಅಡುಗೆ ಮನೆ ಸ್ವಚ್ಛಗೊಳಿಸುವಾಗ ಕ್ರಮಗಳನ್ನು ಅನುಸರಿಸಿ

ದ್ವಿದಳ ಧಾನ್ಯಗಳು: ಕಾಲಜನ್ ಸ್ವತಃ ಒಂದು ಪ್ರೋಟೀನ್, ಆದ್ದರಿಂದ ದೇಹವು ಅದನ್ನು ಉತ್ಪಾದಿಸಲು ಅಮೈನೋ ಆಮ್ಲಗಳ ಅಗತ್ಯವಿದೆ. ಕಿಡ್ನಿ ಬೀನ್ಸ್, ಕಡಲೆ, ಹೆಸರುಕಾಳು ಮತ್ತು ಇತರ ದ್ವಿದಳ ಧಾನ್ಯಗಳು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿವೆ. ಇವು ನಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಚರ್ಮದ ಕೋಶಗಳನ್ನು ಸರಿಪಡಿಸಿ, ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಸರು:  ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ನಿಮ್ಮ ಕರುಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕರುಳು ತ್ವಚೆಯಲ್ಲಿ ಮೊಡವೆಗಳನ್ನು ಮೂಡುವುದನ್ನು ತಡೆಯುತ್ತದೆ. ಪ್ರತಿದಿನ ಒಂದು ಬೌಲ್‌  ತಾಜಾ ಮೊಸರು ತಿನ್ನುವುದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು ಮತ್ತು ಇದು ತ್ವಚೆಯ ಹೊಳಪನ್ನು ಸಹ ಹೆಚ್ಚಿಸುತ್ತದೆ.

ಇದಲ್ಲದೆ ಹಣ್ಣುಗಳು, ಆರೋಗ್ಯಕರ ಸಮತೋಲಿತ ಆಹಾರ ಮತ್ತು ಪ್ರತಿನಿತ್ಯ ಸಾಕಷ್ಟು ನೀರನ್ನು ಕುಡಿಯಬೇಕು. ಆದಷ್ಟು ಎಣ್ಣೆಯುಕ್ತ ಆಹಾರಗಳು ಮತ್ತು ಜಂಕ್‌ಫುಡ್‌ ಸೇವನೆಯನ್ನು ತಪ್ಪಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿನ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಗೆ ಡಿಸಿಎಂ ಪರಮೇಶ್ವರ್ ಸೂಚನೆ – Kannada News | DCM G. Parameshwara Directs Land Purchase for ‘A’ and ‘B’ Category Temples Across Karnataka

ಡಿಸಿಎಂ ಡಾ.ಜಿ.ಪರಮೇಶ್ವರ್​​ ನೇತೃತ್ವದಲ್ಲಿ ನಡೆದ ಮೀಟಿಂಗ್
Image Credit source: tv9 kannada

ಬೆಂಗಳೂರು, ಆಗಸ್ಟ್​​ 01: ‘ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ ‘ಎ’ ವರ್ಗ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಬೇಕು. ಈ ಆಸ್ತಿ ಶಾಶ್ವತವಾಗಿ ದೇವಸ್ಥಾನಕ್ಕೆ ಉಳಿಯುತ್ತದೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ದೇವಸ್ಥಾನದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ‌’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ (Dr. G Parameshwara) ಹೇಳಿದ್ದಾರೆ.

ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಕೆಗೆ ಆಗಸ್ಟ್ ತಿಂಗಳು ಡೆಡ್​ಲೈನ್​

ವಿಧಾನಸೌಧದಲ್ಲಿ ಇಂದು ಡಿಸಿಎಂ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ಮಾಡಲಾಗಿದ್ದು, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬಳಿಕ ಕೆಲ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ‘ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಇದನ್ನು ಆಗಸ್ಟ್ ಕೊನೆಯ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಹಗುರವಾಗಿ ಪರಿಗಣಿಸುವುದು ಬೇಡ‌’ ಎಂದಿದ್ದಾರೆ.

ಡಿಸಿಎಂ ಡಾ. ಜಿ. ಪರಮೇಶ್ವರ ಟ್ವೀಟ್​

‘ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ನಾನು ಭೇಟಿ ನೀಡಿ ಪರಿಶೀಲಿಸಿದ ದೇವಸ್ಥಾನಗಳಲ್ಲಿ ‘ನಾವು ಯಾವ ಯುಗದಲ್ಲಿದ್ದೇವೆ’ ಎಂಬ ಪ್ರಶ್ನೆ‌ ಮೂಡುತ್ತದೆ. ಯಾರೊಬ್ಬರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ‌. ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಕಾಪಾಡದೆ ಹೋದರೆ ಹೇಗೆ’ ಎಂದು ಪ್ರಶ್ನಿಸಿದರು.

ಅನುದಾನದಲ್ಲಿ ಶೇ. 10ರಷ್ಟನ್ನು ಅಭಿವೃದ್ಧಿಗೆ ಬಳಕೆಗೆ ಸೂಚನೆ

‘ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ.‘ಸಿʼ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ. ‘ಎ’ ವರ್ಗದ ದೇವಸ್ಥಾನಗಳ ಅನುದಾನದಲ್ಲಿ ಶೇ. 10ರಷ್ಟನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು’ ಎಂದಿದ್ದಾರೆ.

‘ದೇವಸ್ಥಾನಗಳ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ದೇವಸ್ಥಾನಗಳ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ’ ಸೂಚಿಸಿದ್ದಾರೆ.

ಇದನ್ನೂ ಓದಿ: ದೇವಸ್ಥಾನ ನಿರ್ಮಾಣಕ್ಕೆ ಟೊಂಕ ಕಟ್ಟಿದ ಗೃಹಲಕ್ಷ್ಮಿಯರು: ಗ್ಯಾರಂಟಿ ಹಣ ದೇಣಿಗೆ ನೀಡಿದ ಮಹಿಳೆಯರು

ಇನ್ನು ‘ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ’ ಡಿಸಿಎಂ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:46 pm, Sat, 1 August 26

Source link

Duleep Trophy: ಆರ್​ಸಿಬಿ ನಾಯಕ ರಜತ್​ಗೆ ಕೇಂದ್ರ ವಲಯದ ನಾಯಕತ್ವ; ರಿಂಕುಗೆ ಉಪನಾಯಕತ್ವ – Kannada News | Duleep Trophy 2026 27: Patidar, Gaikwad, Kishan Lead Zones; Season Begins Aug 23

ದುಲೀಪ್ ಟ್ರೋಫಿ (Duleep Trophy) ಆರಂಭದೊಂದಿಗೆ 2026-27ರ ಭಾರತೀಯ ದೇಶೀಯ ಕ್ರಿಕೆಟ್ ಸೀಸನ್ ಕೂಡ ಪ್ರಾರಂಭವಾಗಲಿದೆ. ಆಗಸ್ಟ್ 23 ರಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಆರು ವಲಯ ತಂಡಗಳ ನಡುವೆ ಪುರುಷರ ದುಲೀಪ್ ಟ್ರೋಫಿಗೆ ಚಾಲನೆ ಸಿಗಲಿದೆ. ಈ ಪಂದ್ಯಾವಳಿ ಆಗಸ್ಟ್ 23 ರಿಂದ ಆರಂಭವಾಗಿ ಸೆಪ್ಟೆಂಬರ್ 10 ರವರೆಗೆ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಮೆಂಟ್‌ಗಾಗಿ ಇತ್ತೀಚೆಗೆ ಕೇಂದ್ರ ವಲಯ, ಪಶ್ಚಿಮ ವಲಯ ಮತ್ತು ಪೂರ್ವ ವಲಯ ತಂಡಗಳನ್ನು ಪ್ರಕಟಿಸಲಾಗಿದೆ.

ಕೇಂದ್ರ ವಲಯಕ್ಕೆ ರಜತ್ ಕ್ಯಾಪ್ಟನ್

ದುಲೀಪ್ ಟ್ರೋಫಿಗಾಗಿ ಕೇಂದ್ರ ವಲಯ ತಂಡದ ನಾಯಕರಾಗಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಪಾಟಿದಾರ್​ ಮೇಲೆ ಆಯ್ಕೆ ಮಂಡಳಿ ನಂಬಿಕೆ ಇರಿಸಿದೆ. ಹಾಗೆಯೇ ರಿಂಕು ಸಿಂಗ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಆಫ್-ಸ್ಪಿನ್ ಆಲ್‌ರೌಂಡರ್ ಸಾರಂಶ್ ಜೈನ್ ಕೂಡ ತಂಡದಲ್ಲಿದ್ದಾರೆ. ಆದರೆ ಲಂಕಾ ಸರಣಿಯ ಕಾರಣದಿಂದಾಗಿ ಅವರು ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.

ದುಲೀಪ್ ಟ್ರೋಫಿಗೆ ಕೇಂದ್ರ ವಲಯ ತಂಡ: ರಜತ್ ಪಾಟಿದಾರ್ (ನಾಯಕ), ರಿಂಕು ಸಿಂಗ್ (ಉಪನಾಯಕ), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಸರನ್ಶಾ ಜೈನ್, ಅಮನ್ ಮೊಖಾಡೆ, ಕುನಾಲ್ ಚಾಂಡೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ಸಿಂಗ್ ರಾಥೋಡ್, ಯಶ್ ರಾಥೋಡ್, ಪರ್ವ್ ರಾಥೋಡ್, ಯಶ್ ಠಾಕೂರ್, ನಚಿಕೇತ್ ಭೂತೆ,

ಸ್ಟ್ಯಾಂಡ್‌ಬೈ ಆಟಗಾರರು: ಅಮನದೀಪ್ ಖರೆ, ಮಯಾಂಕ್ ಮಿಶ್ರಾ, ಸೌರಭ್ ರಾವತ್, ಭಾರ್ಗವ್ ಮೆರಾಯ್, ಕುನಾಲ್ ಯಾದವ್, ಕುಮಾರ್ ಕಾರ್ತಿಕೇಯ.

ಪಶ್ಚಿಮ ವಲಯಕ್ಕೆ ರುತುರಾಜ್, ಪೂರ್ವ ವಲಯಕ್ಕೆ ಕಿಶನ್

ಮತ್ತೊಂದೆಡೆ, ಆಯ್ಕೆ ಸಮಿತಿಯು ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ಪಶ್ಚಿಮ ವಲಯ ತಂಡದ ನಾಯಕನನ್ನಾಗಿ ನೇಮಿಸಿದೆ. ಹಿರಿಯ ಸ್ಪಿನ್ ಆಲ್‌ರೌಂಡರ್ ಶಮ್ಸ್ ಮುಲ್ಲಾನಿ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಪೂರ್ವ ವಲಯ ತಂಡವನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುನ್ನಡೆಸಲಿದ್ದು, ವೈಭವ್ ಸೂರ್ಯವಂಶಿ ಉಪನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ.

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

ಇರಾನಿ ಕಪ್, ರಣಜಿ ಟ್ರೋಫಿ ವೇಳಾಪಟ್ಟಿ

ದುಲೀಪ್ ಟ್ರೋಫಿ ನಂತರ, ಅಕ್ಟೋಬರ್ 1 ರಿಂದ ಪ್ರತಿಷ್ಠಿತ ಇರಾನಿ ಕಪ್ ನಡೆಯಲಿದೆ. ಇದರಲ್ಲಿ, ರೆಸ್ಟ್ ಆಫ್ ಇಂಡಿಯಾ ತಂಡವು ಪ್ರಸ್ತುತ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಅದರ ನಂತರ, ಅಕ್ಟೋಬರ್ ನಿಂದ ಎರಡು ಹಂತಗಳಲ್ಲಿ ರಣಜಿ ಟ್ರೋಫಿ ನಡೆಯಲಿದೆ. ಇದರಲ್ಲಿ, 32 ತಂಡಗಳು ಎಲೈಟ್ ಗುಂಪಿನಲ್ಲಿ ಮತ್ತು 6 ತಂಡಗಳು ಪ್ಲೇಟ್ ಗುಂಪಿನಲ್ಲಿ ಸ್ಪರ್ಧಿಸಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ಗೆ ರಣ್ವೀರ್ ಸಿಂಗ್ ಅನ್ನೇ ಆಯ್ಕೆ ಮಾಡಿದ್ದು ಏಕೆ? – Kannada News | Dhurandhar producer explains why they choose Ranveer Singh as main lead

ರಣವೀರ್ ಸಿಂಗ್ (Ranveer Singh) ನಾಯಕನಾಗಿ ನಟಿಸಿದ್ದ ‘ಧುರಂಧರ್’ ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ‘ಧುರಂಧರ್ 2’ ಇದೇ ವರ್ಷ ಬಿಡುಗಡೆ ಆಗಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವ ಭಾರತೀಯ ಗೂಢಚಾರನಾಗಿ ನಟಿಸಿದ್ದಾರೆ. ಈ ಚಿತ್ರವು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ₹1300 ಕೋಟಿಗೂ ಅಧಿಕ ಹಣ ಗಳಿಸಿತು. ಸಿನಿಮಾದ ಎರಡೂ ಭಾಗಗಳ ಒಟ್ಟು ಕಲೆಕ್ಷನ್ 3000 ಕೋಟಿ ದಾಟಿದೆ. ‘ಧುರಂಧರ್’ ಚಿತ್ರದ ಸಹ-ನಿರ್ಮಾಪಕಿ ಹಾಗೂ ಜಿಯೋ ಸ್ಟುಡಿಯೋಸ್ ಸಿಇಒ ಜ್ಯೋತಿ ದೇಶಪಾಂಡೆ ಅವರು ‘ಧುರಂಧರ್’ ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡಿದ್ದು ರಣವೀರ್ ಸಿಂಗ್ ಅವರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.

ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸುವ ಕುರಿತು ಮಾತನಾಡಿದ ಜ್ಯೋತಿ, ‘ಧುರಂಧರ್ ಎನ್ನುವುದು ಬಜೆಟ್ ಮಿತಿಮೀರಿ ಹೋದ ಪ್ರಾಜೆಕ್ಟ್. ನಾನು ಪ್ರತಿ ಬಾರಿಯೂ ಅದಕ್ಕೆ ಅವಕಾಶ ನೀಡಿದೆ ಮತ್ತು ಅದನ್ನು ಹೊಸ ರೂಪಕ್ಕೆ ತರಲು ಯತ್ನಿಸಿದೆ. ಒಂದು ಭಾಗವಿರಬೇಕಾದ ಸಿನಿಮಾ ಎರಡು ಭಾಗವಾಯಿತು. ಆರಂಭದಲ್ಲಿ ಆದಿತ್ಯ ಧರ್, ಹಾಗೆಯೇ ರಣವೀರ್ ಸಿಂಗ್, ಚಿತ್ರೀಕರಣದ ಪೂರ್ತಿ ಅವಧಿಯಲ್ಲಿ ಬೇರೆ ಯಾವುದೇ ಕೆಲಸ ಮಾಡದೆ ಸಂಪೂರ್ಣವಾಗಿ ಈ ಚಿತ್ರಕ್ಕಾಗಿಯೇ ತಮ್ಮನ್ನು ತೊಡಗಿಸಿಕೊಂಡರು. ಛಾಯಾಗ್ರಹಣ, ಸೌಂಡ್ ಡಿಸೈನ್, ಎಡಿಟಿಂಗ್ ಹೀಗೆ ಆ ಚಿತ್ರದ ಭಾಗವಾಗಿದ್ದ ಪ್ರತಿಯೊಬ್ಬ ತಂತ್ರಜ್ಞರೂ ಸಂಪೂರ್ಣವಾಗಿ ಶ್ರಮಿಸಿದರು. ಹಿಂದೆಂದೂ ನೋಡಿರದ, ಹಿಂದೆಂದೂ ಮಾಡಿರದಷ್ಟು ಉದ್ದೇಶಪೂರ್ವಕವಾದ, ಭಾವನಾತ್ಮಕವಾದದ್ದನ್ನು ನಾವು ಮಾಡುತ್ತಿದ್ದೇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿತ್ತು. ಇದು ಹೇಗಿತ್ತೆಂದರೆ, ನಾವು ಇದನ್ನು ಮಾಡದಿದ್ದರೆ ಬದುಕಿದ್ದೂ ವ್ಯರ್ಥ ಎನ್ನುವಂತಿತ್ತು ಎಂದರು.

ಇದನ್ನೂ ಓದಿ:ರಣವೀರ್ ಸಿಂಗ್ ಎಕ್ಸಿಟ್ ಎಫೆಕ್ಟ್: ಅಧಿಕೃತವಾಗಿ ‘ಡಾನ್ 3’ ಕೈಬಿಟ್ಟ ಫರ್ಹಾನ್ ಅಖ್ತರ್?

ರಣವೀರ್ ಅವರ ಆಯ್ಕೆಯ ಕುರಿತು ಮಾತನಾಡಿದ ಜ್ಯೋತಿ, ‘ಈಗಾಗಲೇ ಚಿತ್ರೀಕರಣಕ್ಕೆ ಹೆಚ್ಚು ಖರ್ಚಾಗುತ್ತಿದ್ದರಿಂದ ನಾವೇನೂ ಸುರಕ್ಷಿತವಾದ ಅಥವಾ ಸುಲಭವಾದ ದಾರಿಯನ್ನು ಆಯ್ಕೆ ಮಾಡಲು ಸಾಧ್ಯವಿರಲಿಲ್ಲ. ಇನ್ನು ಇದಕ್ಕೆ ದುಬಾರಿ ನಟರನ್ನೂ ಸೇರಿಸಿದ್ದರೆ, ಚಿತ್ರವು ಮೊದಲ ದಿನವೇ ಆರ್ಥಿಕವಾಗಿ ವಿಫಲಗೊಳ್ಳುತ್ತಿತ್ತು. ಹಾಗಾಗಿ ನಮಗೆ ಹೆಸರಿಗೆ ಮಾತ್ರ ಇರುವ ಸ್ಟಾರ್‌ಗಳ ಬದಲಿಗೆ ಉತ್ತಮ ನಟನೆ ನೀಡುವ ಕಲಾವಿದರು ಬೇಕಿದ್ದರು. ರಣವೀರ್ ಈ ಮಟ್ಟಕ್ಕೆ ಬೆಳೆಯುವ ಮುಂಚೆ ನಾನು ಅವರೊಂದಿಗೆ ‘ರಾಮ್-ಲೀಲಾ’ ಮತ್ತು ‘ಬಾಜಿರಾವ್ ಮಸ್ತಾನಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದ ಆರಂಭದ ದಿನಗಳಲ್ಲೇ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ ಮತ್ತು ರಣವೀರ್ ಅವರ ಆ ಚಿತ್ರಗಳು ಇಂದಿಗೂ ನನ್ನ ಅತ್ಯಂತ ಮೆಚ್ಚಿನ ಚಿತ್ರಗಳಾಗಿವೆ. ಅವರು ತಮ್ಮ ಸರ್ವಸ್ವವನ್ನೂ ಧಾರೆಯೆರೆಯುವ ಅತ್ಯುತ್ತಮ ನಟ ಎಂದು ನನಗೆ ಗೊತ್ತಿತ್ತು. ಅವರು ಸಂಪೂರ್ಣವಾಗಿ ಪಾತ್ರವಾಗಿ ಬದಲಾಗುತ್ತಾರೆ. ಅವರಲ್ಲಿ ನನಗೆ ಅತಿ ಹೆಚ್ಚು ಇಷ್ಟವಾಗುವ ಸಂಗತಿಯೆಂದರೆ, ಆ ಸಿನಿಮಾದಲ್ಲಿ ಅವರು ರಣವೀರ್ ಸಿಂಗ್ ಆಗಿ ಕಾಣುವುದಿಲ್ಲ. ಅವರು ಬಾಜಿರಾವ್ ಆಗಬೇಕಾದಾಗ ಬಾಜಿರಾವ್ ಆಗುತ್ತಾರೆ, ಖಿಲ್ಜಿ ಆಗಬೇಕಾದಾಗ ಖಿಲ್ಜಿ ಆಗುತ್ತಾರೆ, ಗಲ್ಲಿ ಬಾಯ್ ಆಗಬೇಕಾದಾಗ ಗಲ್ಲಿ ಬಾಯ್ ಆಗುತ್ತಾರೆ. ಅವರು ಕೇವಲ ರಣವೀರ್ ಸಿಂಗ್ ಪಾತ್ರವನ್ನು ಅಭಿನಯಿಸುವುದಿಲ್ಲ, ಬದಲಿಗೆ ಪಾತ್ರವಾಗಿಯೇ ಪರಿವರ್ತನೆಗೊಳ್ಳುತ್ತಾರೆ’ ಎಂದರು.

‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ‘ಧುರಂಧರ್ 2’ ಈ ವರ್ಷದ ಮಾರ್ಚ್ 19ರಂದು ಬಿಡುಗಡೆಯಾಯಿತು. ಈ ಎರಡು ಚಿತ್ರಗಳಲ್ಲಿ ರಣವೀರ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್ ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಗೌರವ್ ಗೆರಾ ಮತ್ತು ದಾನಿಶ್ ಪಂಡೋರ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಾಕ್ವೆಲಿನ್ ವೈರಲ್ ವಿಡಿಯೋ ಬಗ್ಗೆ ದೂರು ನೀಡಿದ ಗಾಯಕ – Kannada News | Singer files police complaint over Jacqueline Fernandez’s viral clip from Jugni song

ಇತ್ತೀಚೆಗಷ್ಟೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ (jacqueline fernandez) ನಟಿಸಿರುವ ‘ಜುಗ್ನಿ’ ಹೆಸರಿನ ಆಲ್ಬಂ ಹಾಡು ಬಿಡುಗಡೆ ಆಯ್ತು. ಜಾಕ್ವೆಲಿನ್ ಎಂದಿನಂತೆ ಆ ಹಾಡಿನಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಭಿನ್ನ ಭಿನ್ನ ರೀತಿಯ ಉಡುಗೆಗಳನ್ನು ತೊಟ್ಟು ಮಾದಕವಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ಅದೇ ಹಾಡಿನ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಡಿನಲ್ಲಿ ಡ್ಯಾನ್ಸ್ ಮಾಡುವಾಗ ಒಂದು ದೃಶ್ಯದಲ್ಲಿ ಜಾಕ್ವೆಲಿನ್ ಅವರ ಒಳಾಂಗ ಕಾಣಿಸುತ್ತಿದೆ ಎಂಬ ಒಕ್ಕಣೆಯೊಂದಿಗೆ ಆ ವಿಡಿಯೋ ವೈರಲ್ ಆಗಿತ್ತು.

ಆದರೆ ಇದೀಗ ‘ಜುಗ್ನಿ’ ಹಾಡಿನ ಗಾಯಕ, ಜಾಕ್ವೆಲಿನ್ ಅವರ ವಿಡಿಯೋ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯಕ ಸೋನು ಟುಕ್ರಾಲ್ ಅವರು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಯಾರೋ ಕೆಲವರು ಎಐ ಬಳಸಿ ವಿಡಿಯೋ ಸೃಷ್ಟಿಸಿ ಜಾಕ್ವೆಲಿನ್ ಅವರಿಗೆ ಹಾಗೂ ‘ಜುಗ್ನಿ’ ಹಾಡು ಮಾಡಿರುವವರಿಗೆ ಕಳಂಕ ತರಬೇಕೆಂಬ ಉದ್ದೇಶಿಸಿ ಈ ಕೃತ್ಯ ಎಸಗಿದ್ದು, ನಕಲಿ ವಿಡಿಯೋ ಹರಿಯ ಬಿಟ್ಟಿದ್ದಾರೆ ಎಂದು ದೂರು ನೀಡಿದ್ದಾರೆ.

‘ಜುಗ್ನಿ’ ಹಾಡಿನಲ್ಲಿ ಬಿಪರಾಖ್ ಜೊತೆಗೆ ಸೋನು ಟುಕ್ರಾಲ್ ಸಹ ದನಿಗೂಡಿಸಿದ್ದಾರೆ. ಹಾಡಿನಲ್ಲಿ ನಟಿ ಜಾಕ್ವೆಲಿನ್ ಅವರ ಖಾಸಗಿ ಅಂಗ ಕಾಣುವಂಥಹಾ ದೃಶ್ಯ ಇದೆಯೆಂಬ ಆರೋಪದಿಂದ ಬೇಸರಗೊಂಡು ಇದೀಗ ಸೋನು ಅವರು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸೋನು ಹೇಳಿರುವಂತೆ, ‘ಜುಗ್ನಿ’ ಹಾಡಿನಲ್ಲಿ ಜಾಕ್ವೆಲಿನ್ ಅವರ ಖಾಸಗಿ ಅಂಗ ಕಾಣುವಂಥ ಯಾವ ದೃಶ್ಯವೂ ಇಲ್ಲವಂತೆ. ಆದರೆ ಉದ್ದೇಶಪೂರ್ವಕವಾಗಿ ಕೆಲವರು ಎಐ ಇನ್ನಿತರೆ ತಂತ್ರಜ್ಞಾನ ಬಳಸಿ ಕೆಟ್ಟ ವಿಡಿಯೋ ಸೃಷ್ಟಿಸಿದ್ದಾರೆ ಎಂದಿದ್ದಾರೆ ಸೋನು.

ಇದನ್ನೂ ಓದಿ:ಪೋಲ್ ಡ್ಯಾನ್ಸ್ ಮಾಡಿದ ಜಾಕ್ವೆಲಿನ್ ಫರ್ನಾಂಡೀಸ್: ಇಲ್ಲಿದೆ ವಿಡಿಯೋ

ಇತ್ತೀಚೆಗೆ ಈ ಎಐ ವಿಡಿಯೋ ಹಾವಳಿ ಜೋರಾಗಿದೆ. ಹಲವು ನಟಿಯರಿಗೆ ಇದರಿಂದ ಸಮಸ್ಯೆಗಳಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಎಐ ವಿಡಿಯೋ ಸಖತ್ ವೈರಲ್ ಆಗಿತ್ತು. ಆ ವಿಡಿಯೋ ಅನ್ನು ವಿರೋಧಿಸಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿದ್ದರು. ಇತ್ತೀಚೆಗಷ್ಟೆ ನಟಿ ರುಕ್ಮಿಣಿ ವಸಂತ್ ಅವರ ಎಐ ವಿಡಿಯೋ ಅನ್ನು ವೈರಲ್ ಮಾಡಲಾಗಿತ್ತು. ಯಾರದ್ದೋ ವಿಡಿಯೋಕ್ಕೆ ಎಐ ಸಹಾಯದಿಂದ ನಟಿ ರುಕ್ಮಿಣಿ ವಸಂತ್ ಮುಖ ಸೇರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸಹ ದೂರುಗಳು ದಾಖಲಾಗಿದ್ದವು. ಇದೀಗ ಜಾಕ್ವೆಲಿನ್​​ಗೆ ಸಹ ಅದೇ ಸಮಸ್ಯೆ ಎದುರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಭುಜ ತಟ್ಟಿ ಕೈಹಿಡಿದ ಮೋದಿ: ಪ್ರಧಾನಿ ಕಿವಿಯಲ್ಲಿ ಸಿಎಂ ಹೇಳಿದ್ದೇನು? – Kannada News | Narendra Modis Mysuru Visit: Viveka Smaraka Inauguration and CM DK Shivakumar Meet

ಮೈಸೂರು, ಆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿ, ನಗರದಲ್ಲಿ ನಿರ್ಮಿಸಲಾಗಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮದ ಆವರಣದಲ್ಲಿ, ದೇವರಾಜ ಮೊಹಲ್ಲಾದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕವು ನಗರದ ಒಂದು ಮಹತ್ವದ ಹೆಗ್ಗುರುತಾಗಿದೆ. ಈ ಉದ್ಘಾಟನಾ ಸಮಾರಂಭವು ರಾಜ್ಯದ ಜನತೆಗೆ ಹೊಸ ಆಶಯಗಳನ್ನು ಮೂಡಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ಮೋದಿ ಅವರು, ಉದ್ಘಾಟನೆಯ ನಂತರ ಮಾಡಿದ ಭಾಷಣದಲ್ಲಿ ವಿವೇಕ ಸ್ಮಾರಕದ ಮಹತ್ವವನ್ನು ವಿವರಿಸಿದರು. ಭಾಷಣ ಮುಗಿದ ನಂತರ, ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಧಾನಿ ಮೋದಿ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಕ್ಷಣವು ಸಾರ್ವಜನಿಕವಾಗಿ ಹೆಚ್ಚಿನ ಗಮನ ಸೆಳೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭುಜ ತಟ್ಟಿ, ಸೌಹಾರ್ದಯುತವಾಗಿ ಕೈ ಹಿಡಿದು ವೇದಿಕೆಯಿಂದ ಕೆಳಗೆ ಕರೆದುಕೊಂಡು ಹೋದರು. ಈ ಘಟನೆಯು ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು. ಪ್ರಧಾನಮಂತ್ರಿಗಳ ಈ ನಡೆ ಉಭಯ ನಾಯಕರ ನಡುವಿನ ಸೌಹಾರ್ದಯುತ ಬಾಂಧವ್ಯವನ್ನು ಎತ್ತಿ ತೋರಿಸುವಂತಿತ್ತು. ಮೈಸೂರು ಭೇಟಿಯ ಈ ಪ್ರಮುಖ ಘಟನೆಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾಲಿಸಬೇಕಾದ ಸರಳ ಅಭ್ಯಾಸಗಳು! – Kannada News | Daily Habits to Keep Your Eyes Healthy for Years

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಟಿವಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಕಣ್ಣಿನ ಆಯಾಸ, ಒಣಗುವಿಕೆ, ಮಸುಕಾದ ದೃಷ್ಟಿ ಮತ್ತು ತಲೆನೋವು ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಲ್ಲದೆ ವಯಸ್ಸಿನ ಹೆಚ್ಚಳ, ಅಸಮತೋಲಿತ ಆಹಾರ ಪದ್ಧತಿ, ಧೂಳು-ಮಾಲಿನ್ಯ, ಅತಿಯಾದ ಸೂರ್ಯನ ಬೆಳಕು ಹಾಗೂ ಕಣ್ಣಿನ ಆರೈಕೆಯ ಕೊರತೆಯೂ ದೃಷ್ಟಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕೆಲವು ಸರಳ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಕಣ್ಣಿನ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ಪಾಲಿಸಿ:

20-20-20 ನಿಯಮ ಅನುಸರಿಸಿ: ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ದೀರ್ಘ ಸಮಯ ಬಳಸುವವರು ಪ್ರತಿ 20 ನಿಮಿಷಗಳಿಗೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು ಕನಿಷ್ಠ 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ.

ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ: ದೃಷ್ಟಿಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಯಾದರೆ ತಡೆಗಟ್ಟುವುದು ಸುಲಭವಾಗುತ್ತದೆ.

ಯುವಿ ರಕ್ಷಣೆ ಇರುವ ಸನ್‌ಗ್ಲಾಸ್ ಧರಿಸಿ: ಬಿಸಿಲಿನಲ್ಲಿ ಹೊರಗೆ ಹೋಗುವಾಗ UV-A ಮತ್ತು UV-B ಕಿರಣಗಳಿಂದ ರಕ್ಷಿಸುವ ಗುಣಮಟ್ಟದ ಸನ್‌ಗ್ಲಾಸ್ ಬಳಸುವುದು ಕಣ್ಣಿನ ಸುರಕ್ಷತೆಗೆ ಸಹಕಾರಿ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವವರು ಎಚ್ಚರಿಕೆ ವಹಿಸಿ: ಲೆನ್ಸ್ ಹಾಕುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ. ಲೆನ್ಸ್ ಧರಿಸಿ ಮಲಗುವುದು ಅಥವಾ ಈಜುವುದು ತಪ್ಪಿಸಿ. ಲೆನ್ಸ್‌ಗಳನ್ನು ವೈದ್ಯರ ಸೂಚನೆಯಂತೆ ಮಾತ್ರ ಬಳಸಿ.

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆ ಇದ್ದವರು ಯಾವ ರೀತಿಯ ಆಹಾರ ಸೇವಿಸಬೇಕು, ಯಾವುದನ್ನು ಸೇವನೆ ಮಾಡಬಾರದು?

ಕಣ್ಣುಗಳನ್ನು ಅನಗತ್ಯವಾಗಿ ಉಜ್ಜಬೇಡಿ: ಕೈಗಳಲ್ಲಿ ಇರುವ ಬ್ಯಾಕ್ಟೀರಿಯಾ ಅಥವಾ ವೈರಸ್ ಕಣ್ಣಿಗೆ ಹರಡುವ ಸಾಧ್ಯತೆ ಇರುವುದರಿಂದ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ.

ಧೂಮಪಾನದಿಂದ ದೂರವಿರಿ: ಧೂಮಪಾನದಿಂದ ಕ್ಯಾಟರಾಕ್ಟ್, ಮ್ಯಾಕ್ಯುಲರ್ ಡಿಜನರೇಷನ್ ಹಾಗೂ ದೃಷ್ಟಿ ಹಾನಿಯ ಅಪಾಯ ಹೆಚ್ಚಾಗಬಹುದು.

ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಆಹಾರಗಳು

  • ಕ್ಯಾರೆಟ್
  • ಪಾಲಕ್ ಹಾಗೂ ಹಸಿರು ಸೊಪ್ಪುಗಳು
  • ಸಿಹಿ ಆಲೂಗಡ್ಡೆ
  • ಕಿತ್ತಳೆ, ಸೀಬೆಹಣ್ಣು
  • ಮೊಟ್ಟೆ
  • ಮೀನು (ಒಮೆಗಾ-3 ಸಮೃದ್ಧ)
  • ಬಾದಾಮಿ, ಅಖ್ರೋಟ್
  • ಕುಂಬಳಕಾಯಿ ಬೀಜ
  • ನೆಲ್ಲಿಕಾಯಿ

ಈ ಆಹಾರಗಳಲ್ಲಿ ವಿಟಮಿನ್ ಎ, ಸಿ, ಈ, ಲ್ಯೂಟಿನ್, ಜಿಯಾಕ್ಸಾಂಥಿನ್ ಮತ್ತು ಒಮೆಗಾ-3 ಕೊಬ್ಬು ಅಮ್ಲಗಳು ಸಮೃದ್ಧವಾಗಿದ್ದು ಕಣ್ಣಿನ ಆರೋಗ್ಯವನ್ನು ಬೆಂಬಲಿಸುತ್ತವೆ.

ಕಣ್ಣುಗಳನ್ನು ಆರೋಗ್ಯವಾಗಿಡಲು ಇನ್ನೇನು ಮಾಡಬೇಕು?

  • ದಿನಕ್ಕೆ 7–8 ಗಂಟೆಗಳ ನಿದ್ರೆ ಪಡೆಯಿರಿ.
  • ಸಾಕಷ್ಟು ನೀರು ಕುಡಿಯುವುದರಿಂದ ಕಣ್ಣು ಒಣಗುವುದು ಕಡಿಮೆಯಾಗುತ್ತದೆ.
  • ಓದುವಾಗ ಅಥವಾ ಕೆಲಸ ಮಾಡುವಾಗ ಸರಿಯಾದ ಬೆಳಕಿರಲಿ.
  • ಮಧುಮೇಹ ಹಾಗೂ ರಕ್ತದೊತ್ತಡ ಇರುವವರು ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು.
  • ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸುವುದು ಉತ್ತಮ.
  • ಪರದೆ ಬಳಸುವಾಗ ಆಗಾಗ ಕಣ್ಣು ಮಿಟುಕಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಕಣ್ಣಿನ ಸಮಸ್ಯೆಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ನೇತ್ರ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಸ್ನೇಹಿತರು ಎಷ್ಟೇ ಒಳ್ಳೆಯವರಾಗಿದ್ದರೂ, ಅವರೊಂದಿಗೆ ಈ ವಿಚಾರಗಳನ್ನು ಹಂಚಿಕೊಳ್ಳುವುದು ಸರಿಯಲ್ಲ – Kannada News | You should not share these secrets of yours even with close friends

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು (friends) ಇದ್ದೇ ಇರುತ್ತಾರೆ. ಹೆಚ್ಚಿನವರು ತಮ್ಮ ಜೀನವದಲ್ಲಿ ನಡೆಯುವ ಸುಖ ದುಃಖಗಳನ್ನೆಲ್ಲಾ ಮೊದಲು ಸ್ನೇಹಿತರ ಬಳಿಯೇ ಶೇರ್‌ ಮಾಡುತ್ತಾರೆ. ಎಂತಹ ಸೀಕ್ರೆಟ್‌ ವಿಚಾರಗಳನ್ನು ಸಹ ಬೆಸ್ಟ್‌ಫ್ರೆಂಡ್‌ ಬಳಿ ಹೇಳಿಕೊಳ್ಳುತ್ತಾರೆ. ಹೀಗೆ ಸ್ನೇಹಿತರೊಂದಿಗೆ ಸುಖ-ದು:ಖಗಳನ್ನು ಹಂಚಿಕೊಳ್ಳುವುದು ಒಳ್ಳೆಯದು, ಆದರೆ ಎಲ್ಲಾ ವಿಚಾರಗಳನ್ನು ಹೇಳಬಾರದು. ನಿಮ್ಮ ಒಳಿತಿನ ದೃಷ್ಟಿಯಿಂದ ಕೆಲವೊಂದು ಸಂಗತಿಗಳನ್ನು ಎಲ್ಲರಿಂದ ಗೌಪ್ಯವಾಗಿ ಇಟ್ಟುಕೊಳ್ಳುವುದೇ ಒಳ್ಳೆಯದು. ಅದರಲ್ಲೂ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಇತರರು ಮಾತ್ರವಲ್ಲ ನಿಮ್ಮ ಕ್ಲೋಸ್‌ ಫ್ರೆಂಡ್‌ ಬಳಿಯೂ ಹಂಚಿಕೊಳ್ಳಬಾರದು. ಸ್ನೇಹಿತರ ಜೊತೆಯೂ ಹಂಚಿಕೊಳ್ಳಬಾರದ ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬೆಸ್ಟ್‌ಫ್ರೆಂಡ್‌ ಬಳಿಯೂ ಸಹ ಈ ವಿಚಾರಗಳನ್ನು ಶೇರ್‌ ಮಾಡಬಾರದು:

ಸಂಗಾತಿಯೊಂದಿಗಿನ ಜಗಳದ ಬಗ್ಗೆ: ಕೆಲವರು ತಮ್ಮ ಹೆಂಡತಿ ಅಥವಾ ಗರ್ಲ್‌ಫ್ರೆಂಡ್‌ ಜೊತೆ ಜಗಳ ಮಾಡಿಕೊಂಡಾಗ, ಈ ವಿಚಾರವನ್ನು ನೇರವಾಗಿ ಬೆಸ್ಟ್‌ಫ್ರೆಂಡ್‌ ಬಳಿ ಹೇಳಿಬಿಡುತ್ತಾರೆ. ಆದರೆ ಹೀಗೆ ಸಂಗಾತಿಯೊಂದಿಗೆ ನಡೆದ ಜಗಳದ ಬಗ್ಗೆ ಹೇಳಿಕೊಳ್ಳುವುದು ಸರಿಯಲ್ಲ. ನಿಮ್ಮಿಬ್ಬರ ವಿವಾದವು ನಂತರದ ದಿನಗಳಲ್ಲಿ ಬಗೆಹರಿದರೂ ಸಹ, ನೀವು ನಿಮ್ಮ ಸಂಗಾತಿಯ ಬಗ್ಗೆ ಹೇಳಿದ ಮಾತು  ಸ್ನೇಹಿತರ ಮನಸ್ಸಿನಲ್ಲಿ ನಕಾರಾತ್ಮಕ ಚಿತ್ರಣವನ್ನು ಉಂಟುಮಾಡಬಹುದು. ಹಾಗಾಗಿ ಈ ವೈಯಕ್ತಿಕ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಳ್ಳಬೇಡಿ, ನೀವು ನೀವೇ ಪರಿಹರಿಸಿಕೊಳ್ಳಿ.

ಪಾಸ್‌ವರ್ಡ್‌ಗಳು ಮತ್ತು ಬ್ಯಾಂಕಿಂಗ್ ಮಾಹಿತಿ: ನಿಮ್ಮ ಫೋನ್ ಪಾಸ್‌ವರ್ಡ್, UPI ಪಿನ್, ಇಮೇಲ್ ಪಾಸ್‌ವರ್ಡ್ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ಎಂದಿಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ವ್ಯಕ್ತಿ ಎಷ್ಟೇ ವಿಶ್ವಾಸಾರ್ಹನಾಗಿದ್ದರೂ, ಅಂತಹ ಮಾಹಿತಿ ಯಾವಾಗಲೂ ಖಾಸಗಿಯಾಗಿರಿಸಬೇಕು. ಇದಲ್ಲದೆ ಇತರರ ರಹಸ್ಯಗಳನ್ನು ಸಹ ಫ್ರೆಂಡ್ಸ್‌ ಬಳಿ ಶೇರ್‌ ಮಾಡಬಾರದು.

ಭವಿಷ್ಯದ ಯೋಜನೆಗಳು: ಹೊಸ ಉದ್ಯೋಗಗಳು, ವಿದೇಶಕ್ಕೆ ತೆರಳುವ ಯೋಜನೆಗಳು ಅಥವಾ ಇತರ ಪ್ರಮುಖ ನಿರ್ಧಾರಗಳನ್ನು, ಅವು ಸಂಪೂರ್ಣ ಕಾರ್ಯರೂಪಕ್ಕೆ ಬಂದ ಬಳಿಕವೇ ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು. ಈ ವಿಚಾರಗಳನ್ನು ಮೊದಲೇ ಹಂಚಿಕೊಂಡರೇ ಅವರು ಈ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಯೋಜನೆಗಳು ನನಸಾಗದಿದ್ದರೆ, ಅವರು ಅನಗತ್ಯ ಒತ್ತಡವನ್ನು ಅನುಭವಿಸುತ್ತಾರೆ. ಆದ್ದರಿಂದ ಮೊದಲು ನಿಮ್ಮ ಗುರಿಗಳ ಮೇಲೆ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಸಾಧಿಸಿದ ಬಳಿಕವಷ್ಟೇ ಅದನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಗಿಫ್ಟ್‌ಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ

ನಿಮ್ಮ ದೌರ್ಬಲ್ಯಗಳು ಮತ್ತು ಭಯಗಳು: ಪ್ರತಿಯೊಬ್ಬರಿಗೂ ದೌರ್ಬಲ್ಯಗಳು ಮತ್ತು ಭಯಗಳು ಇರುತ್ತವೆ. ನೀವು ಬೆಂಬಲ ಅಥವಾ ಸಲಹೆಯನ್ನು ಬಯಸುವುದರಿಂದ ಇವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಸರಿ ಎಂದು ಅನಿಸಬಹುದು, ಆದರೆ ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ಬಹಿರಂಗಪಡಿಸುವುದು ಕೆಲವೊಮ್ಮೆ ವಿರುದ್ಧವಾಗಿ ಪರಿಣಮಿಸಬಹುದು.  ಇದಲ್ಲದೆ ನಿಮ್ಮ ಕುಟುಂಬದಲ್ಲಿನ ದೌರ್ಬಲ್ಯ, ಕಲಹಗಳ ಬಗ್ಗೆ ನೀವು ಎಂದಿಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಈ ವಿಚಾರಗಳನ್ನು ತಿಳಿದು ಅವರು ನಿಮ್ಮನ್ನು ಕೀಳಾಗಿ ಕಾಣುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version