6 ಸಾವಿರ ಕೊಟ್ರೆ ಒಂದು ವಿಷಯ ಪಾಸ್​​: ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು – Kannada News

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯImage Credit source: getmycollege.com

ಬಳ್ಳಾರಿ, ಜೂನ್​​ 11: ವಿಶ್ವ ವಿದ್ಯಾಲಯಗಳೆಂದರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರಗಳು. ಆದರೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಾತ್ರ ಮಾತಿಗೆ ವಿರುದ್ಧ ಎಂಬಂತಿದೆ. ಹಣ ಪಡೆದು ನಕಲಿ ಘಟಿಕೋತ್ಸವ ಸರ್ಟಿಫಿಕೇಟ್ ಕೊಡುತ್ತಿದ್ದ ಹಗರಣದ ಬೆನ್ನಲ್ಲೇ ಯೂನಿವರ್ಸಿಟಿಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಡಿಗ್ರಿ ಫೇಲ್ ಆದ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸ್ ಮಾಡುವ ದಂಧೆಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಯೇ ಭಾಗಿಯಾಗಿರೋದು ಹೌಹಾರುವಂತೆ ಮಾಡಿದೆ.

ಒಂದು ಸಬ್ಜೆಕ್ಟ್​​ಗೆ ಇಷ್ಟೆಂದು ಹಣ ಫಿಕ್ಸ್​​

ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಸಾಕು ಫೇಲ್​​ ಆದ ವಿದ್ಯಾರ್ಥಿಯನ್ನು ಇಲ್ಲಿನ ಸಿಬ್ಬಂದಿ ತೇರ್ಗಡೆ ಮಾಡುತ್ತಾರೆ. ಇದೇ ರೀತಿ ಹಣ ನೀಡಿ ಈಗಾಗಲೇ ಹಲವರು ಉತ್ತೀರ್ಣ ಕೂಡ ಆಗಿದ್ದಾರೆ. ಅಷ್ಟಕ್ಕೂ ಇದು ಈಗ ನಡೆಯುತ್ತಿರುವ ಹೊಸ ದಂಧೆಯಲ್ಲ. ಹಲವು ವರ್ಷಗಳಿಂದ ಯೂನಿವರ್ಸಿಟಿಯ ಕೆಲ ಸಿಬ್ಬಂದಿ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. UCMC ವಿಭಾಗದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಎನ್ನುವವರ ಮೇಲೆ ಈ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಲಭ್ಯವಾಗಿರುವ ಆಡಿಯೋವೊಂದರಲ್ಲಿ ಕೆಲ ಸಿಬ್ಬಂದಿ ವಿದ್ಯಾರ್ಥಿಗಳ ಬಳಿ ಹಣ ಕೇಳಿರೋದು ದೃಢಪಟ್ಟಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂಗಾರು ಮಳೆ ಅಬ್ಬರ, ಭಾರಿ ಅವಾಂತರ; ವಿಮ್ಸ್ ಆಸ್ಪತ್ರೆ, ಕೆಇಬಿ ಕಚೇರಿಗಳಿಗೆ ನುಗ್ಗಿದ ನೀರು

ತನಿಖೆಗೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ

ಇನ್ನು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಬ್ಬಂದಿಯ ಕಳ್ಳಾಟ ಬಯಲಾಗುತ್ತಿದ್ದಂತೆ ಈ ಬಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಆಕ್ರೋಶ ವ್ಯಕ್ತಪಡಿಸಿದೆ. ಈ ದಂಧೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ದಂಧೆಯಲ್ಲಿ ವಿವಿಯ ಪ್ರಮುಖರು ಭಾಗಿಯಾಗಿದ್ದು, ದೊಡ್ಡ ಮಟ್ಟದಲ್ಲಿ ತನಿಖೆ ಮಾಡುವಂತೆ ಒತ್ತಾಯಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:30 pm, Thu, 11 June 26

Source link

ಒಮಾನ್​ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ – Kannada News

ಮಸ್ಕತ್, ಜೂನ್ 11: ಒಮಾನ್​ನ ಶಿನಾಸ್ ಬಂದಿರಿನ ಬಳಿ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ(America) ಮತ್ತೊಂದು ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆರಿಕ ಹಾಗೂ ಇರಾನ್ ನಡುವಿನ ನಿರಂತರ ದಾಳಿಗಳ ನಂತರ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾದ ನಂತರ ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಈ ಹಡಗನ್ನು ಎಂಟಿ ಜಲವೀರ್ ಎಂದು ಗುರುತಿಸಲಾಗಿದ್ದು,ಇದು ಗಿನಿಯಾ ಧ್ವಜವನ್ನು ಹೊಂದಿರುವ ಹಡಗು. ಎಂಟಿ ಜಲವೀರ್​ನಲ್ಲಿ 20 ಭಾರತೀಯ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಹಡಗು 119.95 ಮೀಟರ್ ಉದ್ದ ಮತ್ತು 16.84 ಮೀಟರ್ ಅಗಲವಿರುವ ಟ್ಯಾಂಕರ್ ಆಗಿತ್ತು.

ಹಡಗಿನಿಂದ ಹೊಗೆ ಏರುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘಟನೆಯ ಬಗ್ಗೆ ತಿಳಿದಿದೆ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಂಡಿಯಾ ಟಿವಿ ಡಿಜಿಟಲ್ ವರದಿ ಮಾಡಿದೆ.
ಒಮಾನ್‌ನ ಶಿನಾಸ್ ಬಂದರಿನ ಬಳಿ ಇಂದು ಮುಂಜಾನೆ ಹಡಗೊಂದರ ಘಟನೆ ನಡೆದಿರುವ ಬಗ್ಗೆ ನಮಗೆ ತಿಳಿದುಬಂದಿದೆ.

ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ರಾಯಭಾರ ಕಚೇರಿಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ವಿಡಿಯೋ

ಅಮೆರಿಕದ ಪಡೆಗಳು ನಿಯಮ ಪಾಲಿಸದ ಎಂಟು ಹಡಗುಗಳನ್ನು ನಿಷ್ಕ್ರಿಯಗೊಳಿಸಿವೆ ಮತ್ತು 134 ಹಡಗುಗಳನ್ನು ಮರುನಿರ್ದೇಶಿಸಿವೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ. ಒಮಾನ್​ನಲ್ಲಿ ಭಾರತದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ. 24 ಮಂದಿ ಭಾರತೀಯರ ಪೈಕಿ, 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ಓದಿ: ಹಾರ್ಮುಜ್​ನಲ್ಲಿ ಭಾರಿ ಮಿಲಿಟರಿ ಸಂಘರ್ಷ, ಅಮೆರಿಕ ಇರಾನ್ ನಡುವೆ ದಾಳಿ, ಪ್ರತಿದಾಳಿ

ರಾಸಾಯನಿಕ ಮತ್ತು ತೈಲ ಉತ್ಪನ್ನಗಳ ಟ್ಯಾಂಕರ್ ಸೆಟ್ಟೆಬೆಲ್ಲೊ ಒಮಾನಿ ಕರಾವಳಿಯಲ್ಲಿ ಡಿಕ್ಕಿ ಹೊಡೆದಿದ್ದು, ಇದು ಅಮೆರಿಕದ ಕ್ಷಿಪಣಿ ದಾಳಿ ಎಂದು ಹೇಳಲಾಗುತ್ತಿದೆ. ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚು ಅಪಾಯಕಾರಿಯಾಗುತ್ತಿವೆ ಎಂದು ಭಾರತ ಎಚ್ಚರಿಸಿದೆ. ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ತುರ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಕರೆ ನೀಡಿದೆ. ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪುನೀತ್ ಒಡನಾಟ ನೆನೆದ ಮಲಯಾಳಂ ಹಿರಿಯ ನಟಿ – Kannada News

ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲಿ ಐದು ವರ್ಷಗಳಾಗುತ್ತಾ ಬಂತು, ಆದರೆ ಅವರ ನೆನಪು ಮಾಸಿಲ್ಲ. ಬೀದಿ-ಬೀದಿಗಳಲ್ಲಿ ಅವರ ಫ್ಲೆಕ್ಸ್​ಗಳು, ಫೋಟೊಗಳು ನೋಡಲು ಸಿಗುತ್ತವೆ. ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಕಡೆ ಪುನೀತ್ ಅವರನ್ನು ಅವರ ಸಿನಿಮಾಗಳನ್ನು, ಅವರು ಮಾಡಿದ ಸೇವೆಯನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹಳೆಯ ವಿಡಿಯೋಗಳು, ಚಿತ್ರಗಳು ಪದೇ ಪದೇ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಲಯಾಳಂ ಚಿತ್ರರಂಗದ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಊರ್ವಶಿ ಅವರು ಪುನೀತ್ ರಾಜ್​​ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಊರ್ವಶಿ, ಮೂಲತಃ ಮಲಯಾಳಂ ನಟಿಯಾಗಿದ್ದರೂ ಸಹ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ ರಾಜ್​​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇನ್ನೂ ಹಲವಾರು ಸ್ಟಾರ್ ನಟರುಗಳಿಗೆ ನಾಯಕಿಯಾಗಿ ನಟಿಸಿರುವ ಊರ್ವಶಿ ಅವರು ಹಲವಾರು ಸೂಪರ್ ಹಿಟ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ತಮಿಳಿನ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಊರ್ವಶಿ, ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡುತ್ತಾ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದರು. ಈ ವೇಳೆ, ‘ನಾನು ತಮಿಳಿನಲ್ಲಿ ನಟಿಸಿದೆ ಆದರೆ ಅಲ್ಲಿ ದೊಡ್ಡ ಹಿಟ್ ಸಿಗಲಿಲ್ಲ, ಹಾಗೆಯೇ ಕನ್ನಡಕ್ಕೆ ಹೋದೆ ಅಲ್ಲಿ ಡಾ ರಾಜ್​ಕುಮಾರ್ ಅವರ ಜೊತೆಗೆ ನಟಿಸಿದೆ ಆ ಸಿನಿಮಾ ದೊಡ್ಡ ಹಿಟ್ ಆಯ್ತು. ಆಗೆಲ್ಲ ಸೆಟ್​​ನಲ್ಲಿ ಅಪ್ಪು ಇರುತ್ತಿದ್ದ. ಚಿಕ್ಕ ಹುಡುಗ ಆತ, ನನಗೆ ಒಳ್ಳೆಯ ಫ್ರೆಂಡ್ ಆಗಿದ್ದ, ಪುನೀತ್ಗೆ ಆಗಿನ್ನೂ ಐದು ವರ್ಷ, ನನಗೆ ಹತ್ತು ವರ್ಷ. ಅವನೇ ನನಗೆ ಕನ್ನಡ ಹೇಳಿಕೊಡುತ್ತಿದ್ದಿದ್ದು ಪುನೀತ್, ‘ಅಕ್ಕ ಹೀಗೆ ಹೇಳು, ಹಾಗೆ ಹೇಳು’ ಎಂದು ಅವನೇ ಹೇಳಿಕೊಡುತ್ತಿದ್ದ. ಆಗ ಎಲ್ಲರೂ ಚೆನ್ನೈನಲ್ಲೆ ಇರುತ್ತಿದ್ದರು, ಪ್ರಸಾದ್ ಸ್ಟುಡಿಯೋನಲ್ಲಿ ಪದೇ ಪದೇ ಸಿಗುತ್ತಿದ್ದೆವು’ ಎಂದು ಊರ್ವಶಿ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ

ಊರ್ವಶಿ ಮಾತ್ರವಲ್ಲದೆ, ಮಲಯಾಳಂ ನಟಿ ಪಾರ್ವತಿ ಮೆನನ್ ಸಹ ಸಂದರ್ಶನವೊಂದರಲ್ಲಿ ತಮಗೆ ಕನ್ನಡ ಕಲಿಸಿಕೊಟ್ಟಿದ್ದು ಪುನೀತ್ ರಾಜ್​​ಕುಮಾರ್ ಎಂದು ಹೇಳಿದ್ದರು. ಅವರು ಬಹಳ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲವರಾಗಿದ್ದಾರೆ. ಸುಲಲಿತವಾಗಿ ಅವರು ಕನ್ನಡ ಭಾಷೆ ಮಾತನಾಡಬಲ್ಲರು, ಅದಕ್ಕೆ ಪುನೀತ್ ಅವರೇ ಕಾರಣ ಎಂದು ಹೇಳಿದ್ದರು ಪಾರ್ವತಿ.

ಊರ್ವಶಿ ಅವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಶ್ರಾವಣ ಬಂತು’, ‘ನಾನು ನನ್ನ ಹೆಂಡ್ತಿ’, ‘ಹಬ್ಬ’, ‘ನ್ಯೂ ಡೆಲ್ಲಿ’, ‘ಈ ಜೀವ ನಿನಗಾಗಿ’, ಕನ್ನಡದ ಕಲ್ಟ್ ಕ್ಲಾಸಿಕ್ ‘ರಾಮ ಶಾಮ ಭಾಮ’, ‘ಕುರಿಗಳು ಸಾರ್ ಕುರಿಗಳು’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್​ಕುಮಾರ್ ನಟನೆಯ ‘ರಾಜ್ ದಿ ಶೋಮ್ಯಾನ್’ ಸಿನಿಮಾದ ಹಾಡೊಂದರಲ್ಲಿ ಸಹ ಅವರು ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆ ಶಿವಕುಮಾರ್​ಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ – Kannada News

ತುಮಕೂರು, ಜೂನ್ 11: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಯಾವುದೇ ರೀತಿಯಾದ ಕಂಟಕವಿಲ್ಲ ಎಂದು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಭವಿಷ್ಯ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ಪಾದಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್‌ ಗುರುವಿನ ಆಶೀರ್ವಾದ ಪಡೆದಿದ್ದು, ನಿರಂತರವಾಗಿ ಶ್ರೀಮಠದ ಮಗನಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಗುರುವಿನ ಆಶೀರ್ವಾದ ಅವರಿಗೆ ರಕ್ಷಾಕವಚವಾಗಿದೆ. ಯಾವುದೇ ಕಂಟಕ ಬಂದರೂ ಅವರು ಜಯಶೀಲರಾಗುತ್ತಾರೆ. ಒಂಭತ್ತು ತಿಂಗಳ ಕಂಟಕದ ಬಗ್ಗೆ ಚಿಂತೆ ಬೇಡ. ಗುರುವಿನ ರಕ್ಷಣೆಯಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್‌ ರೈತರು, ಬಡವರು, ಸೈನಿಕರು, ವರ್ತಕರು ಮತ್ತು ಯುವಕರಿಗಾಗಿ ಕಂಕಣಬದ್ಧರಾಗಿ ಸೇವೆ ಸಲ್ಲಿಸಲಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಂತ್ರದೊಂದಿಗೆ ಶ್ರೀಮಠದಿಂದ ಅವರಿಗೆ ಧರ್ಮದ ದಂಡವನ್ನು ಹಸ್ತಾಂತರಿಸಲಾಗಿದೆ. ಅವರು ಸಮಾಜದ ಸೇವೆಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿಗೆ ಕಿಚ್ಚನ ಸಾಧನೆ – Kannada News

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಅತ್ಯಪೂರ್ವ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರು, ಭಾರತದಲ್ಲಿ ಅತಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೊದಲು ಈ ದಾಖಲೆ ಮಾಜಿ ಪ್ರಧಾನಿ ಜವಾಹರ್​​ಲಾಲ್ ನೆಹರು ಹೊಂದಿದ್ದರು.  ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ಸಾಧನೆಗೆ ದೇಶದ ಗಣ್ಯರು, ಜಾಗತಿಕ ನಾಯಕರು ಹಾಗೂ ಕೋಟ್ಯಂತರ ನಾಗರಿಕರು ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ಮೂಲಕ ಶುಭಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ (Sudeep) ಕೂಡ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ನೆಹರು 1952ರಲ್ಲಿ ಮೊದಲ ಬಾರಿಗೆ ಚುನಾಯಿತ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಒಟ್ಟು 4,398 ದಿನಗಳ ಕಾಲ ಆ ಹುದ್ದೆಯಲ್ಲಿದ್ದರು. ನರೇಂದ್ರ ಮೋದಿ, ಸದ್ಯ 4,399 ದಿನಗಳನ್ನು ಪೂರೈಸುವ ಮೂಲಕ ನೆಹರು ದಾಖಲೆಯನ್ನು
ಅಧಿಕೃತವಾಗಿ ಹಿಂದಿಕ್ಕಿದ್ದಾರೆ.

‘ಭಾರತದಲ್ಲಿ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ. ಈ ಅಪರೂಪದ ಸಾಧನೆಯನ್ನು ನಾವೆಲ್ಲರೂ ಒಂದು ಕ್ಷಣ ನಿಂತು ಗೌರವಿಸಲೇಬೇಕು. 12 ವರ್ಷಗಳು, ಅದೇ ಎನರ್ಜಿ, ಅದೇ ವೇಗ, ಎಲ್ಲೂ ಕಿಂಚಿತ್ತೂ ದಣಿವೇ ಇಲ್ಲ. ನರೇಂದ್ರ ಮೋದಿ ಅವರೇ ನಿಮ್ಮ ಈ ಅಪಾರ ಸಮರ್ಪಣಾ ಭಾವ ಹಾಗೂ ಸಾಧನೆಗೆ ನನ್ನ ಹೃದಯಪೂರ್ವಕ ಸಲ್ಯೂಟ್. ಇದೊಂದು ಹೆಮ್ಮೆಯ ಕ್ಷಣ ಸರ್. ನಿಮಗೆ ಮುಂದೆಯೂ ಸದಾ ಯಶಸ್ಸು ಸಿಗಲಿ. ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

ಕಳೆದ 12 ವರ್ಷಗಳಿಂದ ದಣಿವರಿಯಿಲ್ಲದೆ ದೇಶಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವಕ್ಕೆ ಮತ್ತು ಅವರ ಅಚಲವಾದ ಉತ್ಸಾಹಕ್ಕೆ ಸುದೀಪ್ ನೀಡಿರುವ ಈ ಗೌರವದ ನುಡಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್ – Kannada News

ನವದೆಹಲಿ, ಜೂನ್ 11: ಅಮೆರಿಕ ಮೂಲದ ರಿಯಲ್ ಎಸ್ಟೇಟ್ ಟೆಕ್ ಕಂಪನಿಯಾದ ‘ಓಪನ್‌ಡೋರ್’ (Opendoor) ತನ್ನ ಭಾರತದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರಿಂದ ಭಾರತದಲ್ಲಿನ ಅದರ ಸುಮಾರು 250 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಓಪನ್‌ಡೋರ್‌ನ ಸಿಇಒ ಕಾಜ್ ನೆಜಾಟಿಯನ್ (Kaz Nejatian) ಅವರ ಪ್ರಕಾರ, ಕಂಪನಿಯು ತನ್ನ ಕಾರ್ಯಾಚರಣೆಯನ್ನು ಅಮೆರಿಕದಲ್ಲಿರುವ ಗ್ರಾಹಕರಿಗೆ ಹತ್ತಿರವಾಗಿಸಲು ಈ ನಿರ್ಧಾರವನ್ನು ಕೈಗೊಂಡಿದೆ. ಕಂಪನಿಯ ಕೆಲಸದ ಪ್ರಕ್ರಿಯೆಗಳು ಅಮೆರಿಕದ ಗ್ರಾಹಕರೊಂದಿಗೆ ನೇರ ಸಂಪರ್ಕದಲ್ಲಿರುವುದು ಉತ್ತಮ ಎಂದು ಕಂಪನಿ ಭಾವಿಸಿದೆ.

ಈ ನಿರ್ಧಾರದಿಂದ ಭಾರತದಲ್ಲಿರುವ ಸುಮಾರು 250 ಮಂದಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಕಂಪನಿಯು ಈಗಾಗಲೇ ಕೆಲವು ಹುದ್ದೆಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಇದೇ ವೇಳೆ, ಈ ನಿರ್ಧಾರವು ಭಾರತದಲ್ಲಿನ ಉದ್ಯೋಗಿಗಳ ಕೆಲಸದ ಗುಣಮಟ್ಟದ ಮೇಲೆ ತೆಗೆದುಕೊಂಡಿದ್ದಲ್ಲ ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಉದ್ಯೋಗಿಗಳು ಕಂಪನಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಕೆಲಸ ಕಳೆದುಕೊಂಡವರಿಗೆ ಪರಿಹಾರ ಪ್ಯಾಕೇಜ್

ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ನೆರವಾಗಲು ಕಂಪನಿಯು ‘ಟ್ರಾನ್ಸಿಷನ್ ಪ್ಯಾಕೇಜ್’ (Transition Package) ನೀಡುತ್ತಿದೆ. ಇದರಲ್ಲಿ ಸೇವೆಯಿಂದ ಬಿಡುಗಡೆ ಹೊಂದಿದ ನಂತರದ ವೇತನ (Severance Pay), ಉದ್ಯೋಗ ಹುಡುಕಾಟಕ್ಕೆ ನೆರವು (Outplacement services) ಸೇರಿದಂತೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ.

ಓಪನ್​ಡೋರ್ ಸಿಇಒ ಅವರ ಟ್ವೀಟ್

ಮ್ಯಾನುಯಲ್ ವರ್ಕ್​ಗಳಿಗಾಗಿ ಭಾರತೀಯ ಉದ್ಯೋಗಿಗಳ ಬಳಕೆ

ಓಪನ್‌ಡೋರ್ ಭಾರತದ ತಂಡವನ್ನು ಮ್ಯಾನುವಲ್ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿತ್ತು. ಈಗ ಕಂಪನಿಯು ತನ್ನ ವ್ಯವಸ್ಥೆಗಳನ್ನು ಏಕೀಕೃತಗೊಳಿಸಿ (Unified Systems), ಅಮೆರಿಕದಲ್ಲಿ ಸಣ್ಣ ‘ಎಐ-ನೇಟಿವ್’ (AI-native) ತಂಡಗಳನ್ನು ನೇಮಿಸಿಕೊಳ್ಳುತ್ತಿರುವುದರಿಂದ ಭಾರತದ ಕಾರ್ಯಾಚರಣೆಯ ಅಗತ್ಯವಿಲ್ಲ ಎಂದು ನಿರ್ಧರಿಸಿದೆ. ಅಮೆರಿಕದ ಎಲ್ಲಾ ಕಡೆ ಓಪನ್​ಡೋರ್​ನ ಬಹಳ ಸಣ್ಣ ಸಣ್ಣ ತಂಡಗಳು ಇರಲಿವೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್​ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ

ಎಐ ನೇಟಿವ್ ವ್ಯವಸ್ಥೆಯನ್ನು ಕಂಪನಿ ಅಳವಡಿಸಿದೆ. ಅಂದರೆ, ಎಐ ಅನ್ನು ಮುಖ್ಯವಾಗಿಸಿಕೊಂಡು ಅದರ ಸುತ್ತ ವ್ಯವಸ್ಥೆ ನಿರ್ಮಿಸಲಾಗಿದೆ. ಇಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಎಐ ಪರಿಕರಗಳ ಬಲ ಇರುತ್ತದೆ.

ಒಟ್ಟಾರೆಯಾಗಿ, ಜಾಗತಿಕವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ ನಡೆಯುತ್ತಿರುವ ಬದಲಾವಣೆಗಳು ಮತ್ತು ಎಐ (AI) ಅಳವಡಿಕೆಯ ಕಾರಣದಿಂದ ಉದ್ಯೋಗ ಕಡಿತದ ಸರಣಿಯಲ್ಲಿ ಇದೂ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ, ನಾಪತ್ತೆಯಾಗಿದ್ದ ಮೂವರ ಸಾವು ದೃಢ – Kannada News

ಒಮಾನ್, ಜೂನ್ 11:ಹಾರ್ಮುಜ್ ಜಲಸಂಧಿ(Hormuz Strait)ಯ ಬಳಿ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ 3 ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಒಮಾನ್ ಕೊಲ್ಲಿಯಲ್ಲಿ ಪಲಾವ್ ಧ್ವಜದ ‘ಎಂ/ಟಿ ಸೆಟ್ಟೆಬೆಲ್ಲೊ’ (MT Settebello) ವಾಣಿಜ್ಯ ತೈಲ ಹಡಗಿನ ಮೇಲೆ ನಡೆದ ದಾಳಿಯ ಬಿಕ್ಕಟ್ಟಿನ ನಡುವೆಯೂ, ಅದರಲ್ಲಿದ್ದ ಬಹುತೇಕ ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಭಾರತ ಯಶಸ್ವಿಯಾಗಿದೆ. ತನ್ನ ನಾಗರಿಕರ ಹಿತರಕ್ಷಣೆಗೆ ಭಾರತ ಸರ್ಕಾರವು ಗರಿಷ್ಠ ಆದ್ಯತೆ ನೀಡಿದ್ದು, ಅಮೆರಿಕ ಸರ್ಕಾರದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ.

21 ಭಾರತೀಯ ಸಿಬ್ಬಂದಿಗಳ ಯಶಸ್ವಿ ರಕ್ಷಣೆ
ಹಡಗಿನ ಮೇಲೆ ದಾಳಿ ನಡೆದ ತಕ್ಷಣವೇ ಕೈಗೊಳ್ಳಲಾದ ತುರ್ತು ರಕ್ಷಣಾ ಕಾರ್ಯಾಚರಣೆಯು ದೊಡ್ಡ ಯಶಸ್ಸು ಕಂಡಿದೆ. ಹಡಗಿನಲ್ಲಿದ್ದ ಒಟ್ಟು 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಭಾರತೀಯರನ್ನು ಅತ್ಯಂತ ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಗಿದೆ.ಆದಾಗ್ಯೂ, ಈ ದಾಳಿಯಲ್ಲಿ ನಾಪತ್ತೆಯಾಗಿದ್ದ ಉಳಿದ ಮೂವರು ಭಾರತೀಯ ನಾವಿಕರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೊವಾಲ್ ಅವರು ಖಚಿತಪಡಿಸಿದ್ದಾರೆ. ಮೃತ ನಾವಿಕರ ಕುಟುಂಬಗಳಿಗೆ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ಘೋಷಿಸಿದೆ.

ವಿಡಿಯೋ

ತನ್ನ ನಾಗರಿಕರ ಮೇಲಿನ ದಾಳಿಯನ್ನು ಭಾರತ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಅಮೆರಿಕದ ವಿರುದ್ಧ ತಕ್ಷಣವೇ ಕಠಿಣ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ) ನಾಗರಾಜ್ ನಾಯ್ಡು ಅವರು ಭಾರತದಲ್ಲಿನ ಅಮೆರಿಕದ ಪ್ರಭಾರ ರಾಯಭಾರಿ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ತಕ್ಷಣವೇ ಸಮನ್ಸ್ ಜಾರಿಗೊಳಿಸಿ ಕಚೇರಿಗೆ ಕರೆಸಿದ್ದಾರೆ.

ಮತ್ತಷ್ಟು ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್​ನ ಹಲವು ಪ್ರದೇಶಗಳ ಮೇಲೆ ಮತ್ತೆ ಅಮೆರಿಕ ದಾಳಿ, ಹಾರ್ಮುಜ್ ಜಲಸಂಧಿ ಮತ್ತೆ ಬಂದ್

ಇರಾನ್ ವಿರುದ್ಧದ ಕಡಲ ದಿಗ್ಬಂಧನದ ಭಾಗವಾಗಿ ಜೂನ್ 9ರಂದು ರಾತ್ರಿ 11.14ಕ್ಕೆ ಈ ಕಾರ್ಯಾಚರಣೆ ನಡೆಸಿದ್ದಾಗಿ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತವಾಗಿ ದೃಢಪಡಿಸಿದೆ. ಅಮೆರಿಕದ ಮಿಲಿಟರಿ ಹೇಳಿಕೆಯ ಪ್ರಕಾರ, ಈ ಟ್ಯಾಂಕರ್ ಇರಾನ್‌ನಿಂದ ತೈಲವನ್ನು ಸಾಗಿಸುತ್ತಿತ್ತು. ಅಮೆರಿಕದ ಪಡೆಗಳು ನೀಡಿದ ಸುರಕ್ಷತಾ ಸೂಚನೆಗಳನ್ನು ಮತ್ತು ನಿಲ್ಲುವ ಆದೇಶಗಳನ್ನು ಹಡಗಿನ ಸಿಬ್ಬಂದಿ ಪದೇ ಪದೇ ಪಾಲಿಸಲು ವಿಫಲವಾದ ಕಾರಣ, ಅಮೆರಿಕದ ಯುದ್ಧ ವಿಮಾನವು ಹಡಗನ್ನು ನಿಷ್ಕ್ರಿಯಗೊಳಿಸಲು ದಾಳಿ ನಡೆಸಿದ್ದಾಗಿ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರವಾಸಿಗರೇ ಗಮನಿಸಿ, ಮಂಗಳೂರಿನ ಬೀಚ್​ಗಳಲ್ಲಿ ಹೈಅಲರ್ಟ್: ವಾಟರ್ ಸ್ಪೋರ್ಟ್ಸ್‌ ಸಂಪೂರ್ಣ ಸ್ಥಗಿತ, ಸಮುದ್ರಕ್ಕಿಳಿಯುವಂತಿಲ್ಲ – Kannada News

ಮಂಗಳೂರಿನ ಬೀಚ್​ಗಳಲ್ಲಿ ಹೈಅಲರ್ಟ್Image Credit source: tv9

ಮಂಗಳೂರು, ಜೂನ್ 11: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಮಾಡಲು ಯೋಜಿಸುತ್ತಿರುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಇಂದಿನಿಂದ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ (Monsoon) ಚುರುಕುಗೊಂಡಿದ್ದು, ಕಡಲ ತೀರದಲ್ಲಿ ಭಾರಿ ಪ್ರಮಾಣದ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರಿನ ಎಲ್ಲಾ ಪ್ರಮುಖ ಬೀಚ್​ಗಳಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಕಡಲ ತೀರದ ಮನರಂಜನಾ ಚಟುವಟಿಕೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ರೇಕ್ ಹಾಕಲಾಗಿದೆ.

ಮುಖ್ಯಾಂಶಗಳು

  • ಮುಂಗಾರು ಚುರುಕು; ಕಡಲ ತೀರದಲ್ಲಿ ಹೈಅಲರ್ಟ್.
  • ವಾಟರ್ ಸ್ಪೋರ್ಟ್ಸ್‌ಗಳು ಸಂಪೂರ್ಣ ಸ್ಥಗಿತ.
  • ಜೀವ ರಕ್ಷಕ ಸಿಬ್ಬಂದಿಯಿಂದ ನಿರಂತರ ಕಣ್ಗಾವಲು.

ತೇಲುವ ಸೇತುವೆ, ಬೋಟಿಂಗ್ ಸೇರಿದಂತೆ ಸಾಹಸ ಕ್ರೀಡೆಗಳು ಬಂದ್

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್ (Panambur Beach), ತಣ್ಣೀರುಬಾವಿ ಹಾಗೂ ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲಿ ಜನಪ್ರಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಮುಂಗಾರು ಮುಗಿಯುವವರೆಗೆ ಪ್ರವಾಸಿಗರ ಅತ್ಯಂತ ಆಕರ್ಷಣೆಯಾಗಿದ್ದ ತೇಲುವ ಸೇತುವೆ (Floating Bridge), ಬೋಟಿಂಗ್, ಜೆಟ್ ಸ್ಕೀ (Jet Ski) ಹಾಗೂ ಪ್ಯಾರಾ ಸೈಲಿಂಗ್ ಸೇರಿದಂತೆ ಯಾವುದೇ ಸಾಹಸ ಹಾಗೂ ಮನರಂಜನಾ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ. ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ.

ರಕ್ಷಣೆಗೆ ಹಗ್ಗದ ಬ್ಯಾರಿಕೇಡ್: ಪೊಲೀಸರ ಕಠಿಣ ನಿಗಾ

ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ತಡೆಯಲು ದಡದಲ್ಲೇ ಸುರಕ್ಷತಾ ಹಗ್ಗಗಳನ್ನು (Safety Ropes) ಕಟ್ಟಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರೂ ಸಮುದ್ರಕ್ಕೆ ಇಳಿಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಲೈಫ್ ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ (Coastal Security Police) ಹಾಗೂ ಸ್ಥಳೀಯ ಪೊಲೀಸರು ಬೀಚ್‌ಗಳಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ನಿರಂತರ ಕಾವಲು ಕಾಯುತ್ತಿದ್ದಾರೆ.

ದಡದಲ್ಲೇ ಕುಳಿತು ಅಲೆಗಳ ವೀಕ್ಷಣೆಗೆ ಮಾತ್ರ ಅವಕಾಶ

ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರದೇ ಇದ್ದರೂ, ಕಡಲಿಗೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರಾವಳಿಗೆ ಬರುವ ಪ್ರವಾಸಿಗರು ಕೇವಲ ದಡದ ಸುರಕ್ಷಿತ ಜಾಗದಲ್ಲಿ ಕುಳಿತು ಮುಂಗಾರು ಮಳೆಯ ಅಬ್ಬರದ ಅಲೆಗಳನ್ನು ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇಲಾಖೆಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತೀಯ..! – Kannada News

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಈ ತಂಡದಲ್ಲಿ ದೆಹಲಿ ಮೂಲದ ಆಲ್​ರೌಂಡರ್ ನಿಖಿಲ್ ಚೌಧರಿ (Nikhil Chaudhary) ಕಾಣಿಸಿಕೊಂಡಿದ್ದಾರೆ. ನಿಖಿಲ್ ಭಾರತೀಯ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದರು. ಇದೀಗ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಈ ಹಿಂದೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ನಿಖಿಲ್ ಚೌಧರಿ ಸ್ಥಾನ ಪಡೆದಿರಲಿಲ್ಲ. ಆದರೆ ವೈಯುಕ್ತಿಕ ಕಾರಣಗಳಿಮದಾಗಿ ಟ್ರಾವಿಸ್ ಹೆಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೀಗ ನಿಖಿಲ್ ಚೌಧರಿಯನ್ನು ಆಸೀಸ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.

62 ವರ್ಷಗಳ ಬಳಿಕ ಭಾರತೀಯನಿಗೆ ಸ್ಥಾನ!

ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಗುರಿಂದರ್ ಸಂಧು ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಇವರು ಯಾರು ಕೂಡ ಭಾರತದಲ್ಲಿ ಜನಿಸಿದವರಲ್ಲ. ಬದಲಾಗಿ ಅವರ ಪೋಷಕರು ಭಾರತೀಯರಾಗಿದ್ದರಿಂದ ಭಾರತೀಯ ಮೂಲದವರಾಗಿ ಗುರುತಿಸಿಕೊಂಡಿದ್ದರು.

ಆದರೆ ನಿಖಿಲ್ ಚೌಧರಿ ಪಂಜಾಬ್​ನಲ್ಲಿ ಜನಿಸಿ, ಪಂಜಾಬ್​ನಲ್ಲೇ ಕ್ರಿಕೆಟ್ ಆಡಿ ಬೆಳೆದ ಆಟಗಾರ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ನಿಖಿಲ್ ಆಯ್ಕೆಯು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ 62 ವರ್ಷಗಳ ಬಳಿಕ ಭಾರತೀಯ ಆಟಗಾರನೊಬ್ಬ ಸ್ಥಾನ ಪಡೆದಿರುವುದು ವಿಶೇಷ.

ಇದಕ್ಕೂ ಮುನ್ನ, ಅಂದರೆ 1960 ರ ದಶಕದಲ್ಲಿ ಗುಜರಾತ್ ಮೂಲದ ರುಸಿ ಸುರ್ತಿ ಭಾರತ ತಂಡದ ಪರ ಆಡಿದ ನಂತರ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿನ ಕ್ವೀನ್ಸ್‌ಲ್ಯಾಂಡ್ ದೇಶಿ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 6 ದಶಕಗಳ ಬಳಿಕ ಭಾರತೀಯ ಸಂಜಾತ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇದನ್ನೂ ಒದಿ: 200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್‌ಶಾ, ನಿಖಿಲ್ ಚೌಧರಿ, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆ್ಯಡಂ ಝಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಮತ್ತು ರೈಲಿ ಮೆರೆಡಿತ್.

Published On – 12:36 pm, Thu, 11 June 26

Source link

ದಕ್ಷಿಣದ ಸ್ಟಾರ್ ನಟನ ಜೊತೆ ಕೈ ಜೋಡಿಸಲಿದ್ದಾರೆ ‘ಧುರಂಧರ್’ ನಿರ್ದೇಶಕ – Kannada News

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು ಮಾತ್ರವಲ್ಲದೆ, ಸ್ಪೈ ಸಿನಿಮಾ ಹೇಗಿರಬೇಕು ಎಂಬುದಕ್ಕೆ ಹೊಸ ಹಾದಿಯನ್ನೇ ಹಾಕಿಕೊಟ್ಟಿದೆ. ನಿರ್ದೇಶಕ ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಮೂಲಕ ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಹೋಗಿ ಕೂತಿದ್ದಾರೆ. ಇದೀಗ ಅವರ ಮುಂದಿನ ಪ್ರಾಜೆಕ್ಟ್​​ಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅತೀವ ಕುತೂಹಲ ಮೂಡಿದೆ. ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರು ದಕ್ಷಿಣದ ಸ್ಟಾರ್ ನಟನ ಜೊತೆ ಕೈಜೋಡಿಸಲಿದ್ದಾರೆ.

ಆದಿತ್ಯ ಧರ್ ಅವರು ತಮ್ಮ ಮುಂದಿನ ಸಿನಿಮಾ ಅನ್ನು ಸ್ಟಾರ್ ನಟ ಪ್ರಭಾಸ್ ಜೊತೆಗೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದಿತ್ಯ ಧರ್ ಅವರು ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ‘ಧುರಂಧರ್’ ಸಿನಿಮಾಕ್ಕೆ ಮುಂಚೆಯೇ ಹೇಳಿದ್ದರು. ಆದರೆ ಬಜೆಟ್ ಹಾಗೂ ಇನ್ನಿತರೆ ಕಾರಣಗಳಿಗಾಗಿ ಆ ಸಿನಿಮಾ ಮುಂದೂಡಲಾಗಿತ್ತು. ಈಗ ‘ಧುರಂಧರ್’ ಸರಣಿಯ ದೊಡ್ಡ ಹಿಟ್ ಬಳಿಕ ಆದಿತ್ಯ ಧರ್ ಅವರಿಗೆ ಅಶ್ವತ್ಥಾಮ ಕುರಿತ ಸಿನಿಮಾವನ್ನು ತೆರೆಗೆ ತರುವ ಆತ್ಮವಿಶ್ವಾಸ ಮೂಡಿದ್ದು, ಅವರ ಮುಂದಿನ ಸಿನಿಮಾ ಅಶ್ವತ್ಥಾಮ ಕುರಿತಾದದ್ದೇ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅಶ್ವತ್ಥಾಮ ಕುರಿತಾದ ಕತೆಗಾಗಿಯೇ ಪ್ರಭಾಸ್ ಅವರನ್ನು ಆದಿತ್ಯ ಧರ್ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಜೊತೆಗೂ ಹೊಸದೊಂದು ಸಿನಿಮಾವನ್ನು ಆದಿತ್ಯ ಧರ್ ಮಾಡಲಿದ್ದು, ಆ ಸಿನಿಮಾದ ಬಳಿಕ ಪ್ರಭಾಸ್ ಜೊತೆಗಿನ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಪ್ರಭಾಸ್ ಸಹ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಕನಿಷ್ಟ ಎರಡು ವರ್ಷ ಅವರು ಹೊಸ ಸಿನಿಮಾ ಪ್ರಾರಂಭಿಸುವುದು ಬಹುತೇಕ ಸಾಧ್ಯವಿಲ್ಲ.

ಇದನ್ನೂ ಓದಿ:ಸಂಧಾನಕ್ಕೆ ಮುಂದಾಗಿದ್ದ ರಣ್ವೀರ್ ಸಿಂಗ್, ತಿರಸ್ಕರಿಸಿದ ಫರ್ಹಾನ್ ಅಖ್ತರ್

ಪ್ರಭಾಸ್ ಇದೀಗ ‘ಫೌಜಿ’ ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ. ಅದರ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಅತ್ತ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದ್ದು, ಪ್ರಭಾಸ್ ಅವರು ಶೀಘ್ರವೇ ಆ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿ ಆಗಲಿದ್ದಾರೆ. ಇವುಗಳು ಮುಗಿದ ಬಳಿಕ ‘ಸಲಾರ್ 2’ ಸಿನಿಮಾ ಆರಂಭಿಸಲಿದ್ದಾರೆ. ಅದಾದ ಬಳಿಕವಷ್ಟೆ ಪ್ರಭಾಸ್ ಅವರು ಆದಿತ್ಯ ಧರ್ ಸಿನಿಮಾ ಪ್ರಾರಂಭಿಸಬೇಕಿದೆ. ಅಷ್ಟರಲ್ಲಿ ಆದಿತ್ಯ ಧರ್ ಅವರು ರಣ್ವೀರ್ ಸಿಂಗ್ ಜೊತೆಗೆ ಮತ್ತೊಂದು ಸಿನಿಮಾ ಮುಗಿಸಿ ಬರಲಿದ್ದಾರೆ.

ಆದಿತ್ಯ ಧರ್, ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಒಂದೊಮ್ಮೆ ಅವರು ಪ್ರಭಾಸ್ ಜೊತೆ ಕೈಜೋಡಿಸಿದರೆ ಖಂಡಿತ ಅದು ಭಾರತದ ಬಹು ನಿರೀಕ್ಷಿತ ಸಿನಿಮಾ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version