ಬೆಂಗಳೂರಿನಲ್ಲಿ ಕ್ರೂರ ಸ್ವಭಾವದ ನಾಯಿಗಳ ಸೆರೆಗೆ ಮುಂದಾದ ಜಿಬಿಎ: ಶೆಲ್ಟರ್ ನಿರ್ಮಾಣಕ್ಕೆ ಜಾಗ ಹುಡುಕಾಟ – Kannada News | GBA to Shelter 2,500 Aggressive Stray Dogs in Bengaluru: Land Hunt On

ಬೆಂಗಳೂರು, ಫೆಬ್ರವರಿ 22: ನಗರದಲ್ಲಿ ಬೀದಿ ನಾಯಿಗಳ (Stray Dogs) ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಬೀದಿನಾಯಿಗಳ‌ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಸುಪ್ರೀಂಕೋರ್ಟ್ ಕೂಡ ಸೂಚನೆ ನೀಡಿತ್ತು. ಅದರಂತೆ ಇದೀಗ ಜಿಬಿಎ ಕ್ರೂರ ಸ್ವಭಾವವುಳ್ಳ ನಾಯಿಗಳಿಗೆ ಶೆಲ್ಟರ್ (Shelter) ನಿರ್ಮಾಣ ಮಾಡಲು ಜಾಗದ ಹುಡುಕಾಟಕ್ಕೆ ಮುಂದಾಗಿದೆ.

ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಾಗ ಹುಡುಕಾಟ

ಬೆಂಗಳೂರಿನಲ್ಲಿ‌ ಸರಿಸುಮಾರು 2 ಲಕ್ಷ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿದ್ದು, ಅದರಲ್ಲಿ 2,500ಕ್ಕೂ ಹೆಚ್ಚು ಕ್ರೂರ ಸ್ವಭಾವವುಳ್ಳ ಬೀದಿನಾಯಿಗಳನ್ನ‌ ಗುರುತು ಮಾಡಲಾಗಿದೆ. ಇವುಗಳನ್ನ ರಕ್ಷಣೆ ಮಾಡಿ ಸಾಕುವ ಉದ್ದೇಶಕ್ಕಾಗಿ‌ ಶೆಲ್ಟರ್ ನಿರ್ಮಾಣಕ್ಕೆ 5 ಪಾಲಿಕೆ ವ್ಯಾಪ್ತಿಯಲ್ಲೂ ಜಿಬಿಎ ಜಾಗ ಹುಡುಕಾಟ ನಡೆಸುತ್ತಿದೆ. ಈಗಾಗಲೇ ನಗರದ  ಭಂಗೀಪುರ, ಬೆಟ್ಟಹಳ್ಳಿ ಹಾಗೂ ಮಹದೇವಪುರ ಹೊರವಲಯದಲ್ಲಿ ಜಾಗ ಗುರುತು ಮಾಡಲಾಗಿದೆ.

7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣ

ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಜಿಬಿಎ ಮುಂದಾಗಿದೆ. ಒಂದೊಂದು ಪಾಲಿಕೆಯಲ್ಲಿ ನಿರ್ಮಾಣ ಮಾಡಲಾಗುವ ಶೆಲ್ಟರ್‌ಗಳಲ್ಲಿ ಸರಿಸುಮಾರು 500 ರಿಂದ 600 ಕ್ರೂರ ಬೀದಿನಾಯಿಗಳ ಸಂರಕ್ಷಣೆ ಮಾಡಲು ಪ್ರಾಣಿ ಕಾಯ್ದೆಯಡಿ ಜಿಬಿಎ ಪ್ಲಾನ್ ನಡೆಸಿದೆ. ಈ ಕ್ರೂರ ಸ್ವಭಾವವುಳ್ಳ ನಾಯಿಗಳ ಉಪಚಾರವನ್ನ‌ ಸಂಪೂರ್ಣವಾಗಿ ಜಿಬಿಎ ನೋಡಿಕೊಳ್ಳಲಿದೆ. ಅವುಗಳಿಗೆ ಬೇಕಾದ ಆಹಾರ, ರೇಬಿಸ್ ಇಂನ್ಜೆಕ್ಷನ್, ಸಂತಾನಹರಣ ಚಿಕಿತ್ಸೆ ಸೇರಿದಂತೆ ಪ್ರತಿಯೊಂದನ್ನು ಜಿಬಿಎ ನಿರ್ವಹಿಸಲಿದೆ.

ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

ಇನ್ನು ನಾಯಿಗಳ ಕಡಿತಕ್ಕೆ ಅನೇಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಆದರೆ ಇದೀಗ ಜಿಬಿಎ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಜನರಲ್ಲಿ ಒಂದು ಮಟ್ಟಿಗೆ ಸಮಾಧಾನ ಉಂಟುಮಾಡಿದೆ.

ಇದನ್ನೂ ಓದಿ: ನಾಯಿಗಳ ಹಾವಳಿ: ವಿಧಾನಸೌಧದೊಳಗೆ ಶ್ವಾನಗಳಿಗೆ ಶೆಲ್ಟರ್, ಇತಿಹಾಸದಲ್ಲೇ ಮೊದಲ

ಒಟ್ಟಿನಲ್ಲಿ ಜಿಬಿಎ ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಷ್ಟು ಪ್ರಯತ್ನ ಮದ್ಯ ಇದೀಗ ಕ್ರೂರ ಸ್ವಭಾವದ ಬೀದಿನಾಯಿಗಳಿಗೆ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SA T20 WC Live Score: ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ – Kannada News | India vs South Africa T20 World Cup 2026 Live Cricket Score IND vs SA Today Match highlights latest news in Kannada

ಟಿ20 ವಿಶ್ವಕಪ್ 2026 ರ ಗುಂಪು ಹಂತದ ಪಂದ್ಯಗಳು ಮುಗಿದಿದ್ದು ಸೂಪರ್ 8 ಸುತ್ತು ಪ್ರಾರಂಭವಾಗಿದೆ. ಈ ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖಿಯಾಗಿವೆ. ಇದು ಸೂಪರ್ 8 ನಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಕುತೂಹಲಕಾರಿಯಾಗಿ, ಎರಡೂ ತಂಡಗಳು ಪಂದ್ಯಾವಳಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿವೆ. ಆದ್ದರಿಂದ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾರೇ ಸೋತರೂ ಅದು ಪಂದ್ಯಾವಳಿಯ ಮೊದಲ ಸೋಲಾಗಲಿದೆ.

Source link

ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು: ಹವಾಮಾನ ಇಲಾಖೆ ಎಚ್ಚರಿಕೆ ಏನು? – Kannada News | Karnataka Summer Forecast: IMD Predicts Intense Heatwaves and Rising Temperatures for Bengaluru

ಬೆಂಗಳೂರು, (ಫೆಬ್ರವರಿ 22): ಕರ್ನಾಟಕದಲ್ಲಿ (Karnataka) ಈಗಾಗಲೇ ಬೇಸಿಗೆ (Summer)  ಶುರುವಾಗಿದ್ದು, ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಅದರಲ್ಲೂ ಬೆಂಗಳೂರಿನ (Bengaluru) ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ , ಕಚೇರಿಗಳಲ್ಲಿ ಏರ್ ಕೂಲರ್‌ಗಳನ್ನ ಹಾಕಿಕೊಂಡು ಕೂರುವ ಪರಿಸ್ಥಿತಿ ಇದೆ ಹೀಗಿರುವಾಗ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾಗಲಿದೆ. ಹೌದು…ಮಾರ್ಚ್‌ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬೇಸಿಗೆ (summer) ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಸಿಲಿಕಾನ್ ಸಿಟಿ ಜನ್ರೇ ಎಚ್ಚರ ಎಚ್ಚರದಿಂದ ಇರಿ, ಕೂಲ್ ಸಿಟಿ ಅಂತಾನೇ ಕರೆಸಿಕೊಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ.ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ತಾಪಮಾನ ಏರಿಕೆ ಹಿನ್ನಲೆ ಎಂಥ ಶೆಕೆಯಪ್ಪ ಅಂತ ಸಿಟಿ ಜನ ಶಾಪ್ ಹಾಕೋಕ್ಕೆ ಶುರು ಮಾಡಿದ್ದಾರೆ. ಮಾರ್ಚ್ 2ನೇ ವಾರದ ಬಳಿಕ ಬೆಂಗಳೂರಿನ ತಾಪಮಾನ 38-39* ಡಿಗ್ರಿ ತಲುಪಲಿದೆ. ಈ ಹಿನ್ನೆಲೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಜನರ ನೆತ್ತಿ ಸುಡಲಿದೆ. ಇತ್ತ ಹವಮಾನ ಇಲಾಖೆ ಸೂಚನೆ ಬೆನ್ನಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆ ಹೆಚ್ಚಳ ಆತಂಕ ಶುರವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮುಂದಾಗಿದ್ದು, ಹೀಟ್ ಸ್ಟೋಕ್ ಬಗ್ಗೆ ವೈದ್ಯರ ಎಚ್ಚರಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಸಾರ್ವಜನಿಕರಿಗೆ ಎಚ್ಚರಿಕೆ

ಅಂದುಕೊಂಡದಕ್ಕಿಂದ ಈ ಸಲ ಬಿಸಲು ಶೆಖೆ ಜಾಸ್ತಿನೇ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಿದೆ.

ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟೋಕ್ ಕೂಡಾ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ವೈದ್ಯರ ಸಲಹೆ ನೀಡುತ್ತಿದ್ದಾರೆ. ಜೊತೆಗೆ ಹೆಚ್ಷಾಗಿ ನೀರು, ತಂಪು ಪಾನೀಯಗಳು ಸೇರಿದಂತೆ ಡಿಹೈಡ್ರೇಟ್ ಆಗದಂತದ ಆಹಾರವನ್ನ ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ವರ್ಷವೂ ಕೂಡ ಬೆಂಗಳೂರು ಮಂದಿಗೆ ಬೇಸಿಗೆಯ ಧಗೆ ಕಾಡಲಿದ್ದು, ಜನರು ಬಿಸಿಲಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಯಿಂದ ದೂರ ಇರಲು ಹೆಚ್ಚು ಗಮನ ಹರಿಸಬೇಕಿದೆ. ಜೊತೆಗೆ ಆರೋಗ್ಯ ಇಲಾಖೆಯಿಂದಲೂ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

HPCL Recruitment 2026: HPCLನಲ್ಲಿ 608 ಅಪ್ರೆಂಟಿಸ್ ಟ್ರೈನಿ ನೇಮಕಾತಿ; ತರಬೇತಿಯ ಜೊತೆಗೆ ಆಕರ್ಷಕ ವೇತನ – Kannada News | HPCL Recruitment 2026: 608 Graduate Apprentice Trainee Jobs Apply Now!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅವಕಾಶವು ನಿರ್ದಿಷ್ಟವಾಗಿ ಪ್ರತಿಷ್ಠಿತ ಸಾರ್ವಜನಿಕ ವಲಯದ ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಹೊಸಬರಿಗೆ ಆಗಿದೆ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆಯನ್ನು ಆಧರಿಸಿರುತ್ತದೆ ಮತ್ತು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

HPCL ಒಟ್ಟು 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮವು ಯುವಜನರಿಗೆ ಪ್ರಾಯೋಗಿಕ ಉದ್ಯಮ ಅನುಭವವನ್ನು ಒದಗಿಸುತ್ತದೆ. ಈ ಅನುಭವವು PSU ಗಳು ಅಥವಾ ಖಾಸಗಿ ಕಂಪನಿಗಳಲ್ಲಿ ಭವಿಷ್ಯದಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ.

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್ ಪದವಿಯನ್ನು ಹೊಂದಿರಬೇಕು. ಏಪ್ರಿಲ್ 1, 2023 ರಂದು ಅಥವಾ ನಂತರ ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಹರಾಗಿರುತ್ತಾರೆ.

ಸಾಮಾನ್ಯ, ಒಬಿಸಿ (ಎನ್‌ಸಿಎಲ್) ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ ಕನಿಷ್ಠ ಶೇ.60 ಅಂಕಗಳು ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶೇ. 50 ಅಂಕಗಳು ಕಡ್ಡಾಯವಾಗಿದೆ. ಮಾರ್ಚ್ 2, 2026 ರಂತೆ ಅಭ್ಯರ್ಥಿಗಳು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು. ಮೀಸಲು ವರ್ಗಗಳಿಗೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಸ್ಟೈಫಂಡ್ ಮತ್ತು ಆಯ್ಕೆ ಪ್ರಕ್ರಿಯೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000ರೂ. ಸ್ಟೈಫಂಡ್ ಸಿಗಲಿದ್ದು, ಇದರಲ್ಲಿ HPCL ನಿಂದ 20,500ರೂ. ಮತ್ತು ಕೇಂದ್ರ ಸರ್ಕಾರದ DBT ಯೋಜನೆಯ 4,500ರೂ. ಸೇರಿದೆ. ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾತ್ರ ಆಯ್ಕೆ ನಡೆಯಲಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಅರ್ಜಿಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತವೆ ಮತ್ತು ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ hindustanpetroleum.com ಅಥವಾ jobs.hpcl.co.in ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸುವ ಮೊದಲು NATS 2.0 ಪೋರ್ಟಲ್‌ನಲ್ಲಿ ನೋಂದಯಿಸಿಕೊಳ್ಳಿ. ಆನ್‌ಲೈನ್ ಅರ್ಜಿ ಸಲ್ಲಿಕೆ ಫೆಬ್ರವರಿ 16ರಿಂದ ಪ್ರಾರಂಭವಾಗಿದ್ದು,ಮಾರ್ಚ್ 2ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ? – Kannada News | Bengaluru Summer Food Alert: Watermelon, Ice Cream Safety Doubts and health department Tests

ಬೆಂಗಳೂರು, ಫೆಬ್ರವರಿ 22: ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು (watermelon), ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್​ ಮಾಡಿದ್ದರೆ ಎಚ್ಚರವಾಗಿರಿ. ಏಕೆಂದರೆ ನೀವು ತಿನ್ನುವ ಕಲ್ಲಂಗಡಿ ಹಣ್ಣು, ಖುಷ್​ ಖುಷಿಯಿಂದ ಸವಿಯುವ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಎಷ್ಟು ಸುರಕ್ಷಿತ? ಹೀಗಂತ ನಾವಲ್ಲ, ಖುದ್ದು ಆರೋಗ್ಯ ಇಲಾಖೆ (health department) ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಸದ್ಯದಲ್ಲೇ ಸ್ಯಾಂಪಲ್ ಟೆಸ್ಟ್ ಕೂಡ ನಡೆಯಲಿದೆ.

ಬೇಸಿಗೆ ಕಾಲದ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಕಲ್ಲಂಗಡಿ ಹಣ್ಣು ನಿಜಕ್ಕೂ ಸುರಕ್ಷಿತನಾ ಎನ್ನುವ ಅನುಮಾನ ಮೂಡಿದೆ. ಕಳೆದ ಸಲ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಉಪಯೋಗಿಸುವ ಆತಂಕ ಎದುರಾದ ಬೆನ್ನಲ್ಲೇ ಈ ವರ್ಷನೂ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಪಡೆಯುವುದಕ್ಕೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕಲ್ಲಂಗಡಿ ಹಣ್ಣಿನ ಜೊತೆಗೆ ಐಸ್ ಕ್ರೀಂ, ಜ್ಯೂಸ್​​ಗಳ ಸ್ಯಾಂಪಲ್ ಪಡೆಯುವುದಕ್ಕೂ ತೀರ್ಮಾನಿಸಲಾಗಿದೆ.

ಕಲ್ಲಂಗಡಿಗೆ ಎರಿಥ್ರೋಸಿನ್ ಬಳಕೆ?

ಬೇಸಿಗೆ ದಿನದಲ್ಲಿ ಕಲ್ಲಂಗಡಿಗೆ ಭಾರೀ ಬೇಡಿಕೆ ಇದ್ದು, ಹೆಚ್ಚೆ ಮಾರಾಟ ಮಾಡಲು ಹಾಗೂ ಜನರನ್ನು ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಕೆ ಮಾಡುವ ಪ್ರಕರಣಗಳು ಪತ್ತೆಯಾಗಿವೆ. ಕಲ್ಲಂಗಡಿ ಹಣ್ಣಿನ ಬಳ್ಳಿಗೆ ಎರಿಥ್ರೋಸಿನ್ ಇಂಜೆಕ್ಟ್ ಮಾಡುವ ಸುಳಿವು ಸಿಕ್ಕಿದೆ. ಹೀಗಾಗಿ ಮಾರ್ಚ್ ತಿಂಗಳ ಆರಂಭದಲ್ಲಿಯೇ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್ ಟೆಸ್ಟ್ ನಡೆಸಲು ಆಹಾರ ಮತ್ತು ಸುರಕ್ಷಿತಾ ಇಲಾಖೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಇಂಜೆಕ್ಷನ್ ಕೊಟ್ಟ ಕಲ್ಲಂಗಡಿ ಹಣ್ಣಿನಲ್ಲಿ ನೈಟ್ರೇಟ್ ಮತ್ತು ಕೃತಕ ಡೈ(ಕ್ರೋಮೇಟ್, ಮೆಥನಾಲ್ ಹಳದಿ, ಸುಡಾನ್ ಕೆಂಪು) ಕಾರ್ಬೈಡ್, ಆಕ್ಸಿಟಾಸಿನ್ ಇರಬಹುದು. ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಡೇಂಜರ್.

ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್​? ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ

ಕಲ್ಲಂಗಡಿ ಹಣ್ಣು ಬೇಗನೆ ಬೆಳೆಯಲು ನಿಟ್ರೋಜನ್ ಬಳಸಲಾಗುತ್ತದೆ. ನಿಟ್ರೋಜನ್ ದೇಹದೊಳಗೆ ಹೋದರೆ ಅದು ತುಂಬಾ ಹಾನಿಕರ ಮತ್ತು ಇದರಲ್ಲಿ ವಿಷಕಾರಿ ಅಂಶಗಳಿವೆ. ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಕಲ್ಲಂಗಡಿಗೆ ಗಾಢವಾದ ಬಣ್ಣ ನೀಡಲು ಬಳಸುತ್ತಾರೆ. ಕಾರ್ಬೈಡ್ ಕಿಡ್ನಿ ಮತ್ತು ಯಕೃತ್​ಗೆ ತುಂಬಾ ಅಪಾಯಕಾರಿ. ಇದರಿಂದ ಕಿಡ್ನಿಯು ತೀವ್ರವಾಗಿ ಹಾನಿಗೀಡಾಗಬಹುದು. ಮೆಂಥಾಲ್ ಯಲ್ಲೋ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯವೂ ಇದೆ ಎಂದು ಆಹಾರ ತಜ್ಞೆ ಡಾ.ಕೀರ್ತಿ ಹಿರಿಸಾವೆ ಹೇಳುತ್ತಾರೆ. ಇನ್ನು ಗ್ರಾಹಕರು ಮಾತ್ರ ಇತ್ತೀಚೆಗೆ ಯಾವ ಆಹಾರ ತಿನ್ನುವುದು, ಯಾವುದು ಬಿಡುವುದು ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎನ್ನುತ್ತಾರೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಇಂಜೆಕ್ಷನ್ ನೀಡಿರುವ ಕಲ್ಲಂಗಡಿ ಹಣ್ಣು ತುಂಬಾ ಕೆಂಪಾಗಿರುತ್ತದೆ. ಕಲ್ಲಂಗಡಿ ಹಣ್ಣಿನ ಪರೀಕ್ಷೆಯನ್ನ ಮನೆಯಲ್ಲೇ ಮಾಡಬಹುದು. ಕಲ್ಲಂಗಡಿ ಹಣ್ಣನ್ನು ಎರಡು ಹೋಳಾಗಿ ಮಾಡಿ ಟಿಶ್ಯೂ ಅಥವಾ ಕಾಟನ್ ಪೇಪರ್​​ಗೆ ಕೆಂಪು ಬಣ್ಣ ಹತ್ತಿದರೆ ಅದಕ್ಕೆ ಕೃತಕ ಬಣ್ಣ ಬಳಕೆ ಮಾಡಿದ್ದಾರೆ ಎಂಬುದು ಧೃಡಪಡುತ್ತದೆ. ಒಟ್ಟಿನಲ್ಲಿ ಮತ್ತೊಮ್ಮೆ ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಂ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಬೇಸಿಗೆ ಮುನ್ನವೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ – Kannada News | Two Sisters in Jodhpur die on the day of marriage after consuming poison

ನವದೆಹಲಿ, ಫೆಬ್ರುವರಿ 22: ಇಬ್ಬರು ಹೆಣ್ಮಕ್ಕಳ ಮದುವೆ ಸಂಭ್ರಮದಲ್ಲಿದ್ದ ಮನೆಗೆ ದಿಢೀರನೇ ಸೂತಕದ ಛಾಯೆ ಒತ್ತರಿಸಿಬಂತು. ರಾಜಸ್ಥಾನದ ಗ್ರಾಮವೊಂದರಲ್ಲಿ ಒಂದೇ ದಿನದಂದು ಮದುವೆಯಾಗಬೇಕಿದ್ದ ಇಬ್ಬರು ಸಹೋದರಿಯರು ಮಸಣಕ್ಕೆ ಸೇರಬೇಕಾದ ಘಟನೆ ನಡೆದಿದೆ. ಜೋಧಪುರದ ಮನಾಯ್ ಎನ್ನುವ ಗ್ರಾಮದಲ್ಲಿ ಸಹೋದರಿಯರಾದ ಶೋಭಾ (25) ಮತ್ತು ವಿಮಲಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವಾಹಿನಿಯಲ್ಲಿ ವರದಿಯಾಗಿದೆ.

ಈ ಇಬ್ಬರು ಅಕ್ಕ ತಂಗಿಯರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಶನಿವಾರ (ಫೆ. 21) ಇಬ್ಬರದ್ದೂ ಮದುವೆ ಕಾರ್ಯಕ್ರಮ ಇತ್ತು. ಶುಕ್ರವಾರ ರಾತ್ರಿ ವಿವಾಹ ಕಾರ್ಯಕ್ರಮಗಳು ಸಂಭ್ರಮದಿಂದಲೇ ನಡೆದಿದ್ದವು. ಈ ಇಬ್ಬರೂ ಸಹೋದರಿಯರು ಮಧ್ಯರಾತ್ರಿ ಮಲಗಿಕೊಂಡಿದ್ದಾರೆ. ಬೆಳಗಿನ ಜಾಗ 4 ಗಂಟೆಗೆ ಇವರ ಆರೋಗ್ಯದಲ್ಲಿ ಏರುಪೇರಾಗುವುದನ್ನು ಇತರರು ಗಮನಿಸಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಮದುವೆಗೆ ಸಾಕ್ಷಿಯಾಗಬೇಕಿದ್ದ ಅವರ ಕುಟುಂಬ ಅಂತ್ಯಕ್ರಿಯೆಗೆ ಅಣಿಗೊಳ್ಳಬೇಕಾಯಿತು. ಆಸ್ಪತ್ರೆಯಿಂದ ಈ ಹೆಣ್ಮಕ್ಕಳ ಶವವನ್ನು ಮನೆಗೆ ವಾಪಸ್ ತೆಗೆದುಕೊಂಡು, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು. ಪೊಲೀಸರಿಗೆ ಇದು ಆತ್ಮಹತ್ಯೆ ಎನ್ನುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ, ಅಂತ್ಯಕ್ರಿಯೆ ನಿಲ್ಲಿಸಿ, ದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿಕೊಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಮರಳಿಸಲಾಗಿದೆ.

ಇದನ್ನೂ ಓದಿ: Love Tragedy: ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಯಸಿ ಸಾವನ್ನಪ್ಪಿದ ಬೆನ್ನಲ್ಲೇ ವಿಷ ಕುಡಿದು ನೇಣಿಗೆ ಶರಣಾದ ಟೆಕ್ಕಿ

ಈ ಇಬ್ಬರು ಅಕ್ಕ ತಂಗಿಯರ ಸಾವಿಗೆ ವಿಷ ಪದಾರ್ಥಗಳ ಸೇವನೆ ಕಾರಣ ಎನ್ನಲಾಗಿದೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದು ಗೊತ್ತಾಗಿಲ್ಲ. ಇಬ್ಬರೂ ಕೂಡ ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್: ಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತಕ್ಕೆ ಚಾಂಪಿಯನ್ ಕಿರೀಟ – Kannada News | India Dominates Bangladesh to Lift Women’s Asia Cup Rising Stars Trophy in Thrilling Final

ಥೈಲ್ಯಾಂಡ್‌ನ ಬ್ಯಾಂಕಾಕ್‌ನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ (Women Asia Cup Rising Stars) ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತ (India vs Bangladesh) ಮಹಿಳಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ತೇಜಲ್ ಹಸಬ್ನಿಸ್ ಅವರ 34 ಎಸೆತಗಳಲ್ಲಿ ಅಜೇಯ 51 ರನ್‌ಗಳ ನೆರವಿನಿಂದ 134 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಎ ತಂಡ 19.1 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟ್ ಆಗುವ ಮೂಲಕ 46 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಪ್ರೇಮಾ ರಾವತ್ ತಮ್ಮ ನಾಲ್ಕು ಓವರ್‌ಗಳ ಖೋಟಾದಲ್ಲಿ ಕೇವಲ 12 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು.

ರಾಧಾ- ತೇಜಲ್ ಜೊತೆಯಾಟ

ಬಾಂಗ್ಲಾದೇಶವು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಇತ್ತ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಟಿಕೆಟ್ ಪಡೆದಿತ್ತು. ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಅಗ್ರ ನಾಲ್ಕು ಆಟಗಾರ್ತಿಯರು 50 ರನ್‌ಗಳ ಒಳಗೆ ಔಟಾದರು. ಆದಾಗ್ಯೂ, ನಾಯಕಿ ರಾಧಾ ಯಾದವ್ ಮತ್ತು ತೇಜಲ್ ಹಸಬ್ನಿಸ್ ನಡುವಿನ ಅರ್ಧಶತಕದ ಪಾಲುದಾರಿಕೆಯು ತಂಡದ ಸ್ಕೋರ್ ಅನ್ನು 100 ರ ಗಡಿ ದಾಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಕೊನೆಯವರೆಗೂ ಅಜೇಯರಾಗಿ ಉಳಿದ ತೇಜಲ್ ಹಸಬ್ನಿಸ್ 34 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 51 ರನ್ ಬಾರಿಸಿದರೆ, ರಾಧಾ ಯಾದವ್ 30 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 36 ರನ್ ಗಳಿಸಿದರು. ಈ ಇಬ್ಬರ ಇನ್ನಿಂಗ್ಸ್​ಗಳು ಭಾರತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ ಗಳಿಸಲು ಸಹಾಯ ಮಾಡಿತು. ಇತ್ತ ಬಾಂಗ್ಲಾದೇಶ ಪರ ಫಾಹಿಮಾ ಖತುನ್ ನಾಲ್ಕು ಓವರ್​ಗಳಲ್ಲಿ 25 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.

ಬಾಂಗ್ಲಾದೇಶಕ್ಕೆ 46 ರನ್‌ ಸೋಲು

ಫೈನಲ್‌ ಗೆಲ್ಲಲು 135 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 100 ರನ್‌ ಗಳಿಸಲು ಸಹ ವಿಫಲವಾಯಿತು. ಭಾರತದ ವಿರುದ್ಧದ ಅಂತಿಮ ಪಂದ್ಯದಲ್ಲಿ , ಬಾಂಗ್ಲಾದೇಶ ಕೇವಲ 88 ರನ್‌ಗಳಿಗೆ ಆಲೌಟ್ ಆಗಿ, 46 ರನ್‌ಗಳ ಸೋಲು ಕಂಡಿತು. ಆರಂಭಿಕ ಆಟಗಾರ್ತಿ ಶಮಿಮಾ ಸುಲ್ತಾನ 20 ರನ್‌ ಬಾರಿಸುವ ಮೂಲಕ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸರ್ಮಿನ್ ಸುಲ್ತಾನ ಕೂಡ 18 ರನ್‌ ಬಾರಿಸಿದರು.

ಮಿಂಚಿದ ಭಾರತೀಯ ಬೌಲರ್‌ಗಳು

ಭಾರತದ ಪರ ಪ್ರೇಮಾ ರಾವತ್ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 4 ಓವರ್‌ಗಳಲ್ಲಿ 12 ರನ್‌ಗಳಿಗೆ 3 ವಿಕೆಟ್ ಪಡೆದರೆ, ಸೋನಿಯಾ ಮೆಂಧಿಯಾ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ನಾಯಕಿ ರಾಧಾ ಯಾದವ್ ಮತ್ತು ಸೈಮಾ ಠಾಕೂರ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:27 pm, Sun, 22 February 26

Source link

ಪ್ರತಿದಿನ ವಾಕಿಂಗ್‌ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ? – Kannada News | All these benefits can be obtained by walking every day

ನಮ್ಮ ಕಾರ್ಯನಿರತ ಮತ್ತು ಒತ್ತಡದ ಜೀವನದಲ್ಲಿ ನಮಗಾಗಿ ಸಮಯ ಕಂಡುಕೊಳ್ಳುವುದು, ನಮ್ಮನ್ನು ನಾವು ಫಿಟ್‌ ಆಗಿ ಇಟ್ಟುಕೊಳ್ಳುವುದೇ ಕಷ್ಟಸಾಧ್ಯವಾಗಿದೆ.  ಹೆಚ್ಚಿನ ಜನರು ಜಿಮ್‌ಗೆ ಹೋಗುವುದರಿಂದ ಮತ್ತು ವ್ಯಾಯಾಮ ಮಾಡುವುದರಿಂದ ಮಾತ್ರ ದೇಹವು ಆರೋಗ್ಯವಾಗಿ ಮತ್ತು ಫಿಟ್‌ ಆಗಿರುತ್ತೆ ಎಂದು ನಂಬುತ್ತಾರೆ, ಆದರೆ ಪ್ರತಿದಿನ 30 ರಿಂದ 1 ಗಂಟೆಗಳ ಕಾಲ ನಡೆಯುವುದರಿಂದಲೂ (walking) ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬಹುದು. ಹೌದು ವ್ಯಾಯಾಮ ಮಾಡಲು ಸಾಧ್ಯವಾಗೋಲ್ಲ ಎನ್ನುವವರು ಪ್ರತಿದಿನ 1 ಗಂಟೆಗಳ ಕಾಲ ವಾಕಿಂಗ್‌ ಮಾಡಿ, ಈ ಅಭ್ಯಾಸ ಖಂಡಿತವಾಗಿಯೂ ದೇಹದಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತದೆ. ಹಾಗಿದ್ರೆ ವಾಕಿಂಗ್‌ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯಿರಿ.

ಪ್ರತಿನಿತ್ಯ ವಾಕಿಂಗ್‌ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ: ಪ್ರತಿದಿನ ನಡೆಯುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ಒಂದು ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿದಿನ ಅರ್ಧ ಗಂಟೆ ನಡೆದರೆ, ಪಾರ್ಶ್ವವಾಯು ಅಪಾಯವನ್ನು ಶೇಕಡಾ 20 ರಿಂದ 40 ರಷ್ಟು ಕಡಿಮೆಯಾಗುತ್ತದೆ.

ತೂಕ ಇಳಿಸಿಕೊಳ್ಳಲು ಸಹಕಾರಿ: ಜಿಮ್‌ಗೆ ಹೋಗದೆ ಸುಲಭವಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಪ್ರತಿನಿತ್ಯ ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಪ್ರತಿದಿನ ಒಂದು ಗಂಟೆ ಚುರುಕಾದ ನಡಿಗೆ ಕ್ಯಾಲೊರಿಗಳನ್ನು ಸುಡಲು ಉತ್ತಮ ಮಾರ್ಗವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ: ಪ್ರತಿದಿನ ನಡೆಯುವುದರಿಂದ ಕಾಲುಗಳು, ಸೊಂಟ ಮತ್ತು ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೆ ಇದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಕೀಲು ನೋವನ್ನು ನಿವಾರಿಸುತ್ತದೆ.

ಉಸಿರಾಟದ ಸಮಸ್ಯೆಗಳಿಂದ ಪರಿಹಾರ: ನಾವು ವೇಗವಾಗಿ ನಡೆಯುವಾಗ, ನಮ್ಮ ಉಸಿರಾಟದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಾಗಿ, ಆಮ್ಲಜನಕವು ರಕ್ತವನ್ನು ವೇಗವಾಗಿ ತಲುಪುತ್ತದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಮಾನಸಿಕ ಶಾಂತಿ ಮತ್ತು ಉತ್ತಮ ನಿದ್ರೆ: ನಡಿಗೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿದಿನ ನಡೆಯುವವರಲ್ಲಿ ನಿದ್ರಾಹೀನತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ನಡಿಗೆ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಬಗ್ಗೆ ಏನೆನ್ನುತ್ತಾರೆ

ಒತ್ತಡವನ್ನು ಕಡಿಮೆ ಮಾಡುತ್ತದೆ: ನಡಿಗೆಯು ಎಂಡಾರ್ಫಿನ್‌ಗಳನ್ನು ಸಕ್ರಿಯಗೊಳಿಸುತ್ತದೆ, ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಬೆಳಗಿನ ನಡಿಗೆಯು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ.

ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ: ನಿಯಮಿತ ನಡಿಗೆಯು ಟೈಪ್ 2 ಮಧುಮೇಹ, ಕೆಲವು ರೀತಿಯ ಕ್ಯಾನ್ಸರ್ ಮತ್ತು ಆಲ್ಝೈಮರ್ ಕಾಯಿಲೆಯಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ: ನಡಿಗೆಯು ದೇಹದಾದ್ಯಂತ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಮೂಲಕ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಜನಾದ್ರಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಮುಹೂರ್ತದ ಚಿತ್ರಗಳು ಇಲ್ಲಿವೆ ನೋಡಿ – Kannada News | Jai Hanuman movie Muhurtha in Hampi’s Anjanadree here is the pics

ಟೀ ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದರು. ವಿತರಕ ಅನಿಲ್ ಥಡಾನಿ ಕ್ಯಾಮೆರಾಗೆ ಚಾಲನೆ ನೀಡಿದರು. ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ, ನಿರ್ದೇಶಕ‌ ಪ್ರಶಾಂತ್ ವರ್ಮಾ, ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್, ನಟ ತೇಜ್ ಸಜ್ಜಾ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.‌ ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಸಿನಿಮಾಗೆ ಪೂಜೆ ಮಾಡಿರುವುದು ವಿಶೇಷ.

Source link

ಧೂಮಪಾನ ಮಾಡುವುದರಿಂದ ನಿಜಕ್ಕೂ ಒತ್ತಡ ಕಡಿಮೆಯಾಗುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ – Kannada News | Is it true that smoking cigarettes gives mental peace? Know the truth behind it

ಸಿಗರೇಟ್‌ (cigarettes) ಸೇದುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂಬುದು ಗೊತ್ತಿದ್ದರೂ ಸಹ ಸಿಗರೇಟದ ಸೇದುದ್ದಾರೆ. ಅದರಲ್ಲೂ ಕೆಲವರಂತೂ ತಮ್ಮ ಮನಸ್ಸಿಗೆ ಏನಾದ್ರೂ ನೋವಾದಾಗ, ಒತ್ತಡದಲ್ಲಿದ್ದಾಗ ಸಿಗರೇಟ್‌ ಸೇದುತ್ತಾರೆ. ಹೌದು ಒತ್ತಡದಲ್ಲಿದ್ದಾಗ ಸಿಗರೇಟ್‌ ಸೇದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಒತ್ತಡ ದೂರವಾಗುತ್ತದೆ ಎಂದು ಹೇಳಿ ಧೂಮಪಾನ ಮಾಡುತ್ತಾರೆ. ಅನೇಕ ಜನರು ಈ ರೀತಿ ಹೇಳುವುದನ್ನು ನೀವು ಸಹ ಕೇಳಿರುತ್ತೀರಿ ಅಲ್ವಾ. ಹಾಗಿದ್ರೆ ನಿಜಕ್ಕೂ ಸಿಗರೇಟ್‌ ಸೇದುವುದರಿಂದ ಒತ್ತಡ ದೂರವಾಗುತ್ತದೆಯೇ, ಮನಸ್ಸಿಗೆ ನೆಮ್ಮದಿ ಸಿಗುತ್ತಾ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಧೂಮಪಾನ ನಿಜಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆಯೇ?

ತಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕವಿದ್ದು, ಇದು ಸೌಮ್ಯವಾದ ಉತ್ತೇಜಕ ಮತ್ತು ಕೆಲವು ನಿಮಿಷಗಳ ಕಾಲ ಇರುವ ಪರಿಹಾರದ ಭಾವನೆಯನ್ನು ಉತ್ಪಾದಿಸುತ್ತದೆ. ಈ ನಿಕೋಟಿನ್ ದೇಹದಲ್ಲಿ ಡೋಪಮೈನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಸಂತೋಷದ ಭಾವನೆಯನ್ನು ಮೂಡಿಸುವ ಹಾರ್ಮೋನ್‌ ಆಗಿದ್ದು, ಈ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾದಾಗ, ಮನಸ್ಸಿಗೆ ಖುಷಿ ಉಂಟಾಗುತ್ತದೆ. ಈ ಕಾರಣದಿಂದಲೇ ಅನೇಕ ಜನರು ಸಿಗರೇಟ್ ಸೇದಿದ ಬಳಿಕ ತಮ್ಮ ಒತ್ತಡ ನಿವಾರಣೆಯಾಗಿದೆ ಎಂದು ಹೇಳುತ್ತಾರೆ.

ನಿಕೋಟಿನ್ ಮನಸ್ಥಿತಿಯನ್ನು ಸುಧಾರಿಸಬಹುದು, ಆದರೆ ಅದು ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಮಾತ್ರ ಇರುತ್ತದೆ. ಧೂಮಪಾನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ, ಕಾಲಾನಂತರದಲ್ಲಿ, ದೇಹವು ನಿಕೋಟಿನ್ ಅನ್ನು ಕಳೆದುಕೊಂಡಂತೆ, ಅದು ಚಡಪಡಿಕೆ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ನಿಕೋಟಿನ್ ಮಟ್ಟ ಕಡಿಮೆಯಾದಾಗ, ವ್ಯಕ್ತಿಯು ಮತ್ತೆ ಧೂಮಪಾನ ಮಾಡುವ ಹಂಬಲವನ್ನು ಅನುಭವಿಸುತ್ತಾನೆ. ಈ ಚಕ್ರವು ದೇಹ ಮತ್ತು ಮನಸ್ಸಿನ ಮೇಲೆ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ ಇದು ಆತಂಕ, ಕಿರಿಕಿರಿ, ನಿದ್ರಾಹೀನತೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೀರ್ಘಕಾಲದವರೆಗೆ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಶ್ವಾಸಕೋಶ ಸಂಬಂಧಿಕ ಕಾಯಿಲೆ, ಉಸಿರಾಟದ ತೊಂದತೆ, ಕೆಮ್ಮು ಮತ್ತು ಕ್ಯಾನ್ಸರ್‌ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯೆ ಇದೆ.

ಒಟ್ಟಾರೆಯಾಗಿ ಧೂಮಪಾನವು ಒತ್ತಡದಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ, ಆದರೆ ದೀರ್ಘಾವಧಿಯಲ್ಲಿ, ಇದು ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಮಾನಸಿಕ, ದೈಹಿಕ ಆರೋಗ್ಯ ಎರಡನ್ನೂ ಹಾನಿಗೊಳಿಸುತ್ತದೆ. ಹಾಗಾಗಿ  ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ನಿರಾಳಗೊಳಿಸಲು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಯಾವಾಗಲೂ ಉತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ.

ಇದನ್ನೂ ಓದಿ: ಹೆಲ್ತಿ, ಸೂಪರ್‌ ಫಿಟ್‌ ಆಗಿರಲು ಬೆಳಗಿನ ದಿನಚರಿಯಲ್ಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಒತ್ತಡದಿಂದ ಮುಕ್ತಿ ಪಡೆಯಲು ಆರೋಗ್ಯಕರ ಮಾರ್ಗಗಳು ಯಾವುವು?

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಧೂಮಪಾನಕ್ಕೆ ಕೆಲವು ಆರೋಗ್ಯಕರ ಪರ್ಯಾಯಗಳು ಇಲ್ಲಿವೆ:

ವ್ಯಾಯಾಮ ಮತ್ತು ಯೋಗ: ಇದು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ.

ಧ್ಯಾನ ಮತ್ತು ಮೈಂಡ್‌ಫುಲ್‌ನೆಸ್: ಇದು ಮಾನಸಿಕ ಶಾಂತಿ, ನೆಮ್ಮದಿಯನ್ನು ನೀಡುತ್ತದೆ ಮತ್ತು ಗಮನವನ್ನು ಹೆಚ್ಚಿಸುತ್ತದೆ.

ಆರೋಗ್ಯಕರ ಆಹಾರ: ಸಕ್ಕರೆ ಮತ್ತು ಕೆಫೀನ್ ಸೇವನೆಯನ್ನು ನಿಯಂತ್ರಿಸುವುದರಿಂದ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡುವುದು ನಿಮ್ಮ ಮನಸ್ಥಿತಿಯನ್ನು ಸಮತೋಲನಗೊಳಿಸಲು ಸಹಾಯವಾಗುತ್ತದೆ.

ಸಾಮಾಜಿಕ ಬೆಂಬಲ: ಒಂಟಿಯಾಗಿ ಕುಳಿತು ಸಿಗರೇಟ್‌ ಸೇದುವ ಬದಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ. ಇದರಿಂದ  ಒತ್ತಡ ಕಡಿಮೆಯಾಗುತ್ತದೆ.

ಹವ್ಯಾಸಗಳು ಮತ್ತು ಸೃಜನಶೀಲ ಚಟುವಟಿಕೆಗಳು: ಚಿತ್ರಕಲೆ, ಪೇಂಟಿಂಗ್‌, ಗಾರ್ಡನಿಂಗ್‌ ಇತ್ಯಾದಿ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿಮ್ಮೊಳಗೆ ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:54 pm, Sun, 22 February 26

Source link

Exit mobile version