ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ? – Kannada News | India signs declaration to join Pax Silica; know that is US led international alliance

ನವದೆಹಲಿ, ಫೆಬ್ರುವರಿ 20: ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ (Pax Silica) ಮೈತ್ರಿಕೂಟಕ್ಕೆ ಭಾರತ ಸೇರ್ಪಡೆಯಾಗುತ್ತಿದೆ. ಈ ಸಂಬಂಧ ಘೋಷಣೆಗೆ ಭಾರತ ಸಹಿ ಹಾಕಿದೆ. ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ (India AI Impact Summit) ವೇಳೆ ಈ ಡಿಕ್ಲರೇಶನ್​ಗೆ ಭಾರತ ಸಹಿ ಹಾಕಿದೆ. ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುತ್ತಿರುವುದು, ಹಲವು ಇತರ ಉಪಕ್ರಮಗಳು ಜಾರಿಗೆ ಬರುತ್ತಿರುವುದರ ಮಧ್ಯೆ ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆಯಾಗುತ್ತಿರುವ ಬೆಳವಣಿಗೆ ನಡೆದಿದೆ. ಈ ಬೆಳವಣಿಗೆಯನ್ನು ಅಮೆರಿಕ ಸ್ವಾಗತಿಸಿದೆ. ಪ್ಯಾಕ್ಸ್ ಸಿಲಿಕಾಗೆ ಭಾರತ ಪ್ರವೇಶ ಮಾಡಿರುವುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯತೆ ಸಾಧಿಸಲು ಸುಲಭವಾಗುತ್ತದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ಯಾಕ್ಸ್ ಸಿಲಿಕಾ?

ಪ್ಯಾಕ್ಸ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಶಾಂತಿ ಎಂದರ್ಥ. ಸಿಲಿಕಾ ಎಂಬುದು ಸಿಲಿಕಾನ್ ಚಿಪ್. ಪ್ಯಾಕ್ಸ್ ಸಿಲಿಕಾ ಎಂಬುದು ಅಮೆರಿಕ ಸರ್ಕಾರದಿಂದಲೇ ಆರಂಭಿಸಲಾಗಿರುವ ಒಂದು ಅಂತಾರಾಷ್ಟ್ರೀಯ ಮೈತ್ರಿಗುಂಪು. ಕೃತಕ ಬುದ್ಧಿಮತ್ತೆ ಮತ್ತು ಪೂರೈಕೆ ಸರಪಳಿ ಭದ್ರತೆಯನ್ನು ಪ್ರಬಲಗೊಳಿಸುವುದು ಇದರ ಗುರಿ. ಮುಂದಿನ ತಲೆಮಾರಿನ ಕೈಗಾರಿಕೆಗಳಿಗೆ ಬೇಕಾದ ಪ್ರಮುಖ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸಲು ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆ ಇದು. ಹಾಗೆಯೇ, ಪರಸ್ಪರ ತಂತ್ರಜ್ಞಾನ ಸಹಕಾರ ಹೆಚ್ಚಿಸುವುದು ಇದರ ಗುರಿ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

ಪ್ಯಾಕ್ಸ್ ಸಿಲಿಕಾದಲ್ಲಿ ಯಾವ್ಯಾವ ದೇಶಗಳಿವೆ…?

ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ ಗುಂಪಿನಲ್ಲಿ ಆಸ್ಟ್ರೇಲಿಯಾ, ಗ್ರೀಸ್, ಇಸ್ರೇಲ್, ಜಪಾನ್, ಕತಾರ್, ಸೌತ್ ಕೊರಿಯಾ, ಸಿಂಗಾಪುರ್, ಯುಎಇ ಮತ್ತು ಬ್ರಿಟನ್ (ಯುಕೆ) ದೇಶಗಳಿವೆ. ಈ ಗುಂಪಿನಲ್ಲಿ ಭಾರತವೂ ಒಂದು ಭಾಗವಾಗಿರುತ್ತದೆ.

ಪ್ಯಾಕ್ಸ್ ಸಿಲಿಕಾದಿಂದ ಭಾರತಕ್ಕೆ ಏನು ಉಪಯೋಗ?

ಎಐ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಲು ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆಯನ್ನು ಭಾರತ ಖಚಿತಪಡಿಸಿಕೊಳ್ಳಲು ಪ್ಯಾಕ್ಸ್ ಸಿಲಿಕಾ ಒಪ್ಪಂದ ಸಹಕಾರಿಯಾಗಬಹುದು. ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಇದು ಅನುಕೂಲ ಮಾಡಿಕೊಡುತ್ತದೆ. ಚೀನಾ ಪ್ರಾಬಲ್ಯ ಹೊಂದಿರುವ ಕ್ರಿಟಿಕಲ್ ಮಿನರಲ್​ಗಳಿಗೆ ಪರ್ಯಾಯ ಪೂರೈಕೆ ಜಾಲ ಸ್ಥಾಪಿಸಲು ಅಮೆರಿಕ ಪ್ರಯತ್ನಿಸುತ್ತಿದ್ದು, ಪ್ಯಾಕ್ಸ್ ಸಿಲಿಕಾ ಈ ನಿಟ್ಟಿನಲ್ಲಿ ಒಂದು ಪ್ರಮುಖ ಉಪಕ್ರಮವಾಗಿದೆ. ಇದರ ಲಾಭ ಭಾರತಕ್ಕೂ ಸಿಗುತ್ತದೆ.

ಇದನ್ನೂ ಓದಿ: Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?

ಭಾರತದಲ್ಲಿ ಈಗಾಗಲೇ 10 ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯಾಗಿವೆ ಮತ್ತು ಸ್ಥಾಪನೆಯಾಗುವ ಹಂತದಲ್ಲಿವೆ. ಮೊದಲ ಸೆಮಿಕಂಡಕ್ಟರ್ ಘಟಕದಲ್ಲಿ ಸದ್ಯದಲ್ಲೇ ಕಮರ್ಷಿಯಲ್ ಉತ್ಪಾದನೆ ಆರಂಭವಾಗಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಅನೇಕ ಘಟಕಗಳಲ್ಲಿ ಚಿಪ್​ಗಳನ್ನು ಕಮರ್ಷಿಯಲ್ ಆಗಿ ತಯಾರಿಸುವ ಕಾರ್ಯ ನಡೆಯಲಿದೆ. ಬಹಳ ಸಂಕೀರ್ಣವಾದ 2-ನ್ಯಾನೋಮೀಟರ್ ಚಿಪ್​ಗಳನ್ನು ಭಾರತದಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವುದರಿಂದ ಇಂಥ ಹೆಜ್ಜೆಗಳು ಸಲೀಸಾಗಿ ನಡೆದು ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗೀತು ಮೋಹನ್​​ದಾಸ್ ಯಾರು? ‘ಟಾಕ್ಸಿಕ್’ ನಿರ್ದೇಶನಕ್ಕೆ ಅವರು ಆಯ್ಕೆ ಆಗಿದ್ದೇಕೆ? – Kannada News | Who is Toxic movie director Geethu Mohandas and why she selected to direct Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಸಖತ್ ‘ಬ್ಲಡ್ಡಿ’ ಆಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ಸಹ ಸಖತ್ ವೈಲೆಂಟ್ ಆಗಿತ್ತು, ಈಗ ಬಿಡುಗಡೆ ಆಗಿರುವ ಸಿನಿಮಾ ಟೀಸರ್ ಸಹ ಬಹಳ ವೈಲೆಂಟ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರು, ‘ಟಾಕ್ಸಿಕ್’ ಅವರೇ ನಿರ್ದೇಶಿಸಿರುವ ಸಿನಿಮಾನಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗೀತು ಮೋಹನ್​​ದಾಸ್ ಸೂಕ್ಷ್ಮ, ಭಾವುಕ ಸಿನಿಮಾಗಳಿಂದ ಹೆಸರಾದವರು, ಆದರೆ ಅಂಥಹವರು ಮಾಸ್, ಕಮರ್ಶಿಯಲ್ ಹೀರೋ ಯಶ್​​ಗೆ ಜೊತೆಯಾಗಿದ್ದು ಹೇಗೆ? ಏಕೆ?

ಗೀತು ಮೋಹನ್​​ದಾಸ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ನಟಿಯಾಗಿ. ಆ ನಂತರ 2000 ರಲ್ಲಿ ಮೋಹನ್​​ಲಾಲ್ ಎದುರು ನಾಯಕಿಯಾಗಿ ನಟಿಸಿದರು. ಬಳಿಕ ಮುಂದಿನ ಒಂಬತ್ತು ವರ್ಷಗಳ ವರೆಗೆ ಹಲವಾರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಗೀತು ಮೋಹನ್​​ದಾಸ್ ನಟಿಸಿದರು. ಆದರೆ 2009 ರಲ್ಲಿ ನಟನೆಗೆ ವಿದಾಯ ಹೇಳಿ ಸಿನಿಮಾ ನಿರ್ದೇಶನಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ‘ಟಾಕ್ಸಿಕ್’ ಸಿನಿಮಾ ನಿರ್ದೇಶನಕ್ಕೂ ಮುನ್ನ ಗೀತು ಮೋಹನ್​​ದಾಸ್ ನಿರ್ದೇಶಿಸಿರುವುದು ಕೇವಲ ಎರಡೇ ಸಿನಿಮಾಗಳನ್ನು ಆ ಎರಡೂ ಸಿನಿಮಾಗಳು ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿಲ್ಲ ಆದರೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ಬಹಳ ಭಿನ್ನವಾಗಿಯೂ, ಮುಖ್ಯ ವಾಹಿನಿ ಪ್ರತ್ಯೇಕವಾಗಿಯೂ ಇವೆ. ತಮ್ಮ ಸಿನಿಮಾಗಳಿಂದ ಸೂಕ್ಷ್ಮ ಸಂವೇದನೆಯ ನಿರ್ದೇಶಕಿ ಎನಿಸಿಕೊಂಡಿದ್ದಾರೆ ಗೀತು ಮೋಹನ್​​ದಾಸ್ ಆದರೆ ಅವರು ‘ಟಾಕ್ಸಿಕ್’ ಅಂಥಹಾ ಮಾಸ್ ಮಸಾಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದೇ ಆಶ್ಚರ್ಯ ತಂದಿತ್ತು.

ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್

ಗೀತು ಮೋಹನ್​​ದಾಸ್ ಮೊದಲು ನಿರ್ದೇಶಿಸಿದ್ದ ನವಾಜುದ್ಧೀನ್ ಸಿದ್ಧಿಖಿ ‘ಲೈಯರ್ಸ್ ಡೈಸ್’ ಹೆಸರಿನ ಸಿನಿಮಾ ನಿರ್ದೇಶಿಸಿದ್ದರು. ಬಹಳ ಸೂಕ್ಷ್ಮ ಭಾವುಕತೆಗಳನ್ನು ಹೊಂದಿದ್ದ ಈ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು ಮತ್ತು ಭಾರತದಿಂದ ಆ ವರ್ಷ ಅಧಿಕೃತವಾಗಿ ಆಸ್ಕರ್​​ಗೆ ಸಹ ಆಯ್ಕೆ ಆಗಿತ್ತು. ಸಿನಿಮಾಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳ ಜೊತೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದೆ. ಹಿಮಾಚಲದ ಸಣ್ಣ ಹಳ್ಳಿಯಿಂದ ಪತಿಯನ್ನು ಹುಡುಕಿಕೊಂಡು ದೆಹಲಿಗೆ ಬರುವ ಮಹಿಳೆಯೊಬ್ಬಳ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಬಗ್ಗೆ ಹಾಲಿವುಡ್ ಪತ್ರಿಕೆ ವೆರೈಟಿ ಸಹ ಮೆಚ್ಚಿ ಕೊಂಡಾಡಿತ್ತು.

ಬಳಿಕ ‘ಮೂತನ್’ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶಿಸಿದರು ಗೀತು ಮೋಹನ್​​ದಾಸ್ ಈ ಸಿನಿಮಾ ಗ್ಯಾಂಗ್​​ಸ್ಟರ್ ಸಿನಿಮಾ ಆಗಿತ್ತು. ಹೆಸರಿಗೆ ಇದು ಗ್ಯಾಂಗ್​​ಸ್ಟರ್ ಸಿನಿಮಾ ಆಗಿದ್ದರೂ ಸಹ ನಿಜಕ್ಕೂ ಇದು ಲಿಂಗ ಭೇದ, ಸಲಿಂಗಕಾಮದ ಸೂಕ್ಷ್ಮಗಳನ್ನು ಸಹ ಸಿನಿಮಾ ಒಳಗೊಂಡಿತ್ತು. ಇವುಗಳನ್ನು ಒಂದು ಕಮರ್ಶಿಯಲ್ ಚೌಕಟ್ಟಿನಲ್ಲಿ ಗೀತು ಮೋಹನ್​​ದಾಸ್ ಅದ್ಭುತವಾಗಿ ಹಿಡಿದಿಟ್ಟಿದ್ದರು. ಈ ಸಿನಿಮಾನಲ್ಲಿನ ಕೆಲವು ಫ್ರೇಮ್​​ಗಳು ಅದ್ಭುತವಾಗಿದ್ದವು. ಈ ಸಿನಿಮಾ ಸಹ ಕೆಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ಮೂಲಗಳ ಪ್ರಕಾರ ‘ಮೂತನ್’ ಸಿನಿಮಾದಿಂದಾಗಿಯೇ ಯಶ್ ಅವರು ಗೀತು ಮೋಹನ್​​ದಾಸ್ ಅವರೊಟ್ಟಿಗೆ ಕೆಲಸ ಮಾಡುವ ನಿರ್ಧಾರ ಮಾಡಿದರು ಎನ್ನಲಾಗಿದೆ. ಗೀತು ಮೋಹನ್​​ದಾಸ್ ಬಳಿ ಕತೆ ಒಂದು ರೆಡಿಯಿತ್ತು, ಆದರೆ ಅದಕ್ಕೆ ಕಮರ್ಶಿಯಲೈಸ್ ಮತ್ತು ಮಾಸ್ ತನಗಳನ್ನು ಬೆರೆಸಿರುವುದು ಯಶ್ ಅವರೇ ಎನ್ನಲಾಗುತ್ತಿದೆ.

ಸಿನಿಮಾದ ಟೀಸರ್, ಟ್ರೈಲರ್​​ನಲ್ಲಿ ಅತಿಯಾದ ಹಿಂಸೆ, ಗ್ಲಾಮರ್ ಕಾಣುತ್ತಿದೆಯಾದರೂ ಸಿನಿಮಾದ ಒಟ್ಟು ಆಶಯ ಇದಕ್ಕೆ ವಿರುದ್ಧವಾಗಿಯೇ ಇರಲಿದೆ ಎಂಬುದು ಗೀತು ಮೋಹನ್​​ದಾಸ್ ಅವರ ಅಭಿಮಾನಿಗಳ ನಿರೀಕ್ಷೆ. ನಿಜ, ಸಿನಿಮಾ ಬಿಡುಗಡೆ ಆದ ಬಳಿಕವೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್ – Kannada News | Vintage Yash Is Back Rocking Star Yash Fans Happy After Toxic Teaser

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ರಿಲೀಸ್ ಆಗಿ ಧೂಳೆಬ್ಬಿಸಿದೆ. ಈ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಾಣುತ್ತಿದೆ. ಯಶ್ ಅಭಿಮಾನಿಗಳಂತೂ ಹಬ್ಬ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿ ರಾಕಿಂಗ್ ಸ್ಟಾರ್ಸ್ ಫ್ಯಾನ್ಸ್ ಖುಷ್ ಆಗಿದ್ದಾರೆ. ‘ವಿಂಟೇಜ್ ಯಶ್ ಮರಳಿದ’ ಎಂದು ಸಂಭ್ರಮಿಸುತ್ತಿದ್ದಾರೆ. ಹಾಗಾದರೆ, ಯಶ್ ಅಭಿಮಾನಿಗಳಿಗೆ ಇಷ್ಟ ಆದ ಅಂಶಗಳು ಯಾವವು? ಆ ಬಗ್ಗೆ ಇಲ್ಲಿದೆ ವಿವರ.

ಯಶ್ ಅವರು ಒಳ್ಳೆಯ ನಟ ಮಾತ್ರವಲ್ಲ, ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಸಖತ್ ಆ್ಯಕ್ಷನ್ ಮೆರೆದಿದ್ದರು. ಇಲ್ಲಿ ಡ್ಯಾನ್ಸ್ ಮಾಡೋಕೆ ಅಷ್ಟಾಗಿ ಅವಕಾಶ ಸಿಕ್ಕಿರಲಿಲ್ಲ. ಈಗ ‘ಟಾಕ್ಸಿಕ್’ ಟೀಸರ್​​ನಲ್ಲಿ ಒಂದು ಕಡೆ ಯಶ್ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ಸ್ಟೆಪ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್​​ನ ಜನರು ಬಹುವಾಗಿ ಮೆಚ್ಚಿಕೊಳ್ಳಲು ಇದು ಕೂಡ ಒಂದು ಕಾರಣ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್

‘ಟಾಕ್ಸಿಕ್’ ಟೀಸರ್​​ನಲ್ಲಿ ಬರೋ ಡೈಲಾಗ್​​ಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ‘ಹಠ ಬಿಟ್ಟುಬಿಡು’ ಎಂದು ಹೇಳಿದಾಗ ಅದು ಸಾಧ್ಯವೇ ಇಲ್ಲ ಎಂದು ಯಶ್ ಹೇಳುತ್ತಾರೆ. ಯಶ್ ಅವರು ಹುಟ್ಟುಗುಣ ಇದು. ಈ ಗುಣಕ್ಕೆ ಹೋಲಿಕೆ ಆಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಈ ಕಾರಣದಿಂದಲೂ ಟೀಸರ್ ಇಷ್ಟ ಆಗಿದೆ.

‘ಟಾಕ್ಸಿಕ್’ ಟೀಸರ್​​ನಲ್ಲಿ ರಕ್ತವನ್ನು ಹೆಚ್ಚೇ ತೋರಿಸಲಾಗಿದೆ. ಇದು ಕೆಲವರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಕೊಂಕು ತೆಗೆದಿದ್ದಾರೆ. ಈ ರೀತಿ ಕೊಂಕು ತೆಗೆಯೋ ಎಲ್ಲರಿಗೂ ಯಶ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ? – Kannada News | North Karnataka’s Savadatti Yellamma Temple: Waste Disaster Despite Millions

ಸವದತ್ತಿ, ಫೆ.20: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಭಕ್ತರ ಅತಿಯಾದ ಜನದಟ್ಟಣೆಯಿಂದಾಗಿ ಪರಿಸರ ಮಲಿನಗೊಂಡಿದ್ದು, ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೇವಿಯ ಸನ್ನಿಧಾನ ಇಂದು ಕಸ, ಪ್ಲಾಸ್ಟಿಕ್ ಮತ್ತು ಹಳೆಯ ಬಟ್ಟೆಗಳ ರಾಶಿಯಿಂದ ತುಂಬಿ ಹೋಗಿದೆ. ಕಾಯಿಲೆಗಳು ವಾಸಿಯಾಗಲಿ ಅಥವಾ ಹರಕೆ ತೀರಲಿ ಎಂದು ಭಕ್ತರು ತಮ್ಮ ಹಳೆಯ ಬಟ್ಟೆಗಳನ್ನು ಗುಡ್ಡದ ಮೇಲೆ ಬಿಟ್ಟು ಹೋಗುವ ಪದ್ಧತಿ ಇದೆ. ಈ ಬಟ್ಟೆಗಳು ಇಂದು ಬೆಟ್ಟದಾದ್ಯಂತ ಕಸದಂತೆ ಬಿದ್ದಿವೆ. ಕುಡಿಯುವ ನೀರಿನ ಬಾಟಲಿಗಳು ಮತ್ತು ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲಿ ಬೇಕೆಂದರೆ ಅಲ್ಲಿ ಎಸೆಯುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ, ಕಸ ವಿಲೇವಾರಿಗೆ ಶಾಶ್ವತ ವ್ಯವಸ್ಥೆ ಇಲ್ಲ ಎಂಬುದು ಭಕ್ತರ ದೂರಿದ್ದಾರೆ. ಹತ್ತಾರು ಟನ್ ಕಸ ಪ್ರತಿದಿನ ಉತ್ಪತ್ತಿಯಾಗುತ್ತಿದ್ದರೂ, ಅದನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಲು ಸಮಿತಿಯು ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸವದತ್ತಿ ಅಭಿವೃದ್ಧಿಗೆ 100 ರಿಂದ 200 ಕೋಟಿ ರೂ. ಅನುದಾನ ಘೋಷಿಸಿವೆ. ಅದರೂ ಈ ರೀತಿ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಕಿಭಾಯ್ ಅನ್ನು ಹೀಗೂ ನೋಡಬಹುದು: ಪುಟ್ಟ ಬಾಲಕನ ಮಾತು ಕೇಳಿ – Kannada News | Poor Boy words about KGF’s Rocky Bhai getting viral

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳಲ್ಲಿ ಯಶ್ (Yash) ನಿರ್ವಹಿಸಿರುವ ರಾಕಿಭಾಯ್ ಪಾತ್ರಕ್ಕೆ ಭಾರಿ ಜನಮನ್ನಣೆ ಸಿಕ್ಕಿದೆ. ರಾಕಿಭಾಯ್ ಅಭಿಮಾನಿಗಳು ರಾಷ್ಟ್ರದಾದ್ಯಂತ ಇದ್ದಾರೆ. ಯಶ್ ಅವರು ರಾಕಿಭಾಯ್ ಪಾತ್ರಕ್ಕೆ ಜೀವವೇ ತುಂಬಿದ್ದಾರೆ. ಆದರೆ ರಾಕಿಭಾಯ್ ಪಾತ್ರ ಅನುಕರಣೀಯ ಅಲ್ಲ, ಸಮಾಜಕ್ಕೆ ಮಾರಕ ಆಗುವಂಥಹಾ ಪಾತ್ರ ಅದು ಎಂಬ ಟೀಕೆ ಸಹ ವ್ಯಕ್ತವಾಗಿತ್ತು, ‘ಕೆಜಿಎಫ್’ ಸಿನಿಮಾ ನೋಡಿ ಯುವಕನೊಬ್ಬ ಕೊಲೆ ಮಾಡಿದ ಘಟನೆಯೂ ಸಹ ನಡೆದಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು. ರಾಕಿಭಾಯ್​​ಗೆ ಎರಡು ಮುಖವಿದೆ, ಒಂದು ಹಿಂಸೆಯ ಮುಖವಾದರೆ ಮತ್ತೊಂದು ಛಲಗಾರನದ್ದು. ಏನೂ ಇಲ್ಲದವನು ತನ್ನ ಛಲ, ಧೈರ್ಯದಿಂದ ಎಲ್ಲವನ್ನೂ ಗಳಿಸಬಲ್ಲ ಎಂಬುದನ್ನು ತೋರಿಸಿದ ಪಾತ್ರವದು. ಅದೇ ಆ ಪಾತ್ರದ ಆತ್ಮ ಸಹ. ಆದರೆ ಅದನ್ನು ಅರಿತುಕೊಂಡವರು ಬಹಳ ವಿರಳ.

ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಆ ಪುಟ್ಟ ಬಾಲಕ ರಾಕಿಭಾಯ್​​ನ ನಿಜವಾದ ಅಭಿಮಾನಿ. ರಾಕಿಭಾಯ್​ ಅನ್ನು ನಿಜವಾಗಿ ಅರ್ಥ ಮಾಡಿಕೊಂಡಿರುವಾತ. ಇದೀಗ ವೈರಲ್ ಆಗಿರುವ ರೀಲ್​​ನಲ್ಲಿ ಪುಟ್ಟ ಬಾಲಕನೊಬ್ಬ ರಸ್ತೆಯಲ್ಲಿ ಕ್ಯಾರಿ ಬ್ಯಾಗುಗಳನ್ನು ಮಾರಾಟ ಮಾಡುತ್ತಿದ್ದಾನೆ. ಯೂಟ್ಯೂಬರ್ ಒಬ್ಬ ಆತನ ಹತ್ತಿರ ಹೋಗಿ, ಏನಿದು? ಎಂದು ಕೇಳುತ್ತಾನೆ. ಹುಡುಗ ‘ಕ್ಯಾರಿ ಬ್ಯಾಗ್’ ಎನ್ನುತ್ತಾನೆ. ‘ಯಾಕಾಗಿ ಮಾರುತ್ತಿದ್ದೀಯ?’ ಎಂದು ಕೇಳುತ್ತಾನೆ ಯೂಟ್ಯೂಬರ್, ಆ ಪುಟ್ಟ ಬಾಲಕ ‘ಶ್ರೀಮಂತನಾಗಲು’ ಎನ್ನುತ್ತಾನೆ. ಆಗ ಯೂಟ್ಯೂಬರ್, ‘ನೀನು ದೊಡ್ಡವನಾದ ಮೇಲೆ ಯಾರ ರೀತಿ ಆಗಬೇಕು ಎಂದು ನಿನ್ನ ಆಸೆ?’ ಎಂದು ಕೇಳುತ್ತಾನೆ, ಅದಕ್ಕೆ ಆ ಬಾಲಕ ‘ರಾಕಿಭಾಯ್’ ಎನ್ನುತ್ತಾನೆ. ಅದ್ಯಾಕೆ ರಾಕಿಭಾಯ್ ಬಗ್ಗೆ ಆಗಬೇಕು? ಎಂದು ಕೇಳಿದ್ದಕ್ಕೆ, ‘ರಾಕಿಭಾಯ್, ತನ್ನ ತಾಯಿಗೆ ಇಡೀ ಪ್ರಪಂಚದ ಚಿನ್ನವನ್ನು ತಂದುಕೊಡುತ್ತೇನೆಂದು ಹೇಳಿದ್ದ, ನಾನು ಹಾಗೆಯೇ ತನ್ನ ತಾಯಿಗೆ ಚಿನ್ನ ತಂದುಕೊಡುತ್ತೇನೆ’ ಎನ್ನುತ್ತಾನೆ.

ಇದನ್ನೂ ಓದಿ:‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್

ವಿಡಿಯೋ ತುಸು ಹಳೆಯದ್ದಾದರೂ ಈಗ ಮತ್ತೆ ವೈರಲ್ ಆಗುತ್ತಿದೆ. ಪುಟ್ಟ ಬಡ ಬಾಲಕನಿಗೆ ದೊಡ್ಡದಾಗಿ ಯೋಚಿಸುವುದಕ್ಕೆ, ತನ್ನ ತಾಯಿಯನ್ನು ಪ್ರೀತಿಸುವುದಕ್ಕೆ, ಬಡತನದಿಂದ ಹೊರ ಬಂದು ಶ್ರೀಮಂತನಾಗುವುದಕ್ಕೆ ಸ್ಪೂರ್ತಿ ತುಂಬಿದ್ದಾನೆ ರಾಕಿಭಾಯ್. ಇದೀಗ ಈ ವಿಡಿಯೋಕ್ಕೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಆದರೆ ಕೆಲವರು ಈ ವಿಡಿಯೋ ಸ್ಕ್ರಿಪ್ಟೆಡ್, ಮೊದಲೇ ಹುಡುಗನಿಗೆ ಅದೇ ಉತ್ತರ ಕೊಡುವಂತೆ ಹೇಳಿಕೊಟ್ಟಿರಬಹುದು ಎಂಬ ಟೀಕೆಗಳೂ ಸಹ ವ್ಯಕ್ತವಾಗುತ್ತಿವೆ.

ಏನೇ ಆಗಲಿ, ರಾಕಿಭಾಯ್, ಹಲವಾರು ಯುವಕರಿಗೆ ಬದುಕಿನಲ್ಲಿ ಗೆಲುವು ಸ್ಪೂರ್ತಿ ತುಂಬಿರುವುದಂತೂ ನಿಜ. ಆದರೆ ಸ್ಪೂರ್ತಿ ಪಡೆದ ಯುವಕರು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಸಿನಿಮಾನಲ್ಲಿ ಕಮರ್ಶಿಯಲ್ ಕಾರಣಗಳಿಗಾಗಿಯೋ ಅಥವಾ ಮಾಸ್ ಅಂಶಗಳಿಗಾಗಿಯೋ ರಾಕಿಭಾಯ್ ಹಿಂಸೆಯ ದಾರಿ ಹಿಡಿಯುತ್ತಾನೆ ಆದರೆ ನಿಜ ಜೀವನದಲ್ಲಿ ರಾಕಿಭಾಯ್ ಅಭಿಮಾನಿಗಳು ಕಾನೂನಿನ ಗಡಿಯ ಒಳಗೆ ಗೆಲ್ಲುವ ಹೋರಾಟವನ್ನು ಮಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಕೈತಪ್ಪಿತಾ ಏರೋಸ್ಪೇಸ್ ಘಟಕ ಯೋಜನೆ?; ಬೆಳಗಾವಿ ಮೂಲದ ಏಕಸ್ ಗ್ರೂಪ್​ನಿಂದ ತಮಿಳುನಾಡಿನಲ್ಲಿ ಕ್ಲಸ್ಟರ್ ನಿರ್ಮಾಣ – Kannada News | Aequs Group of Belagavi to develop Aerospace and Defence cluster in Tamil Nadu’s Hosur

ಬೆಂಗಳೂರು, ಫೆಬ್ರುವರಿ 20: ಬೆಳಗಾವಿ ಮೂಲದ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯಾದ ಏಕಸ್ ಗ್ರೂಪ್ (Aequs Group) ತಮಿಳುನಾಡಿನಲ್ಲಿ ಬೃಹತ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ವೊಂದನ್ನು (Aerospace and Defence manufacturing cluster) ನಿರ್ಮಿಸಲಿದೆ. ಬೆಂಗಳೂರು ಪಕ್ಕದ ಹೊಸೂರಿನ ಶೂಲಗಿರಿಯಲ್ಲಿರುವ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಘಟಕಕ್ಕೆ 4,000 ಕೋಟಿ ರೂ ಹೂಡಿಕೆ ಆಗಲಿದೆ. ಏಕಸ್ ಕಂಪನಿ ತಾನೇ ಕೈಯಿಂದ 1,900 ಕೋಟಿ ರೂ ಹೂಡಿಕೆ ಮಾಡಲಿದೆ. ಉಳಿದ 2,100 ಕೋಟಿ ರೂ ಅನ್ನು ಅದರ ಪಾರ್ಟ್ನರ್ ಕಂಪನಿಗಳು ಹೂಡಿಕೆ ಮಾಡಲಿವೆ.

ಕರ್ನಾಟಕ ಮೂಲದ ಏಕಸ್ ಗ್ರೂಪ್ ಸಂಸ್ಥೆ ತಮಿಳುನಾಡಿನಲ್ಲಿ ಏರೋಸ್ಪೇಸ್ ಘಟಕ ನಿರ್ಮಿಸುತ್ತಿರುವುದು ಕುತೂಹಲದ ಸಂಗತಿಗಳಲ್ಲಿ ಒಂದೆನಿಸಬಹುದು. ಕೃಷ್ಣಗಿರಿ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಈ ಕ್ಲಸ್ಟರ್​ನಲ್ಲಿ ಭಾರತದ ಮೊದಲ ಪೂರ್ಣ ಅಂತರ್ನಿಮಿತ (Vertically Integrated) ಏರ್​ಕ್ರಾಫ್ಟ್ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಪ್ರಾಜೆಕ್ಟ್ ಕೂಡ ಸೇರಿರುತ್ತದೆ. ಇದರಲ್ಲಿ ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಯಾವುದೇ ಪೂರೈಕೆಗೂ ಬಾಹ್ಯ ಕಂಪನಿಗಳ ಮೇಲೆ ಅವಲಂಬನೆ ಇರುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ನಡೆಯುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ.

ಇದನ್ನೂ ಓದಿ: ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?

ಏಕಸ್ ಗ್ರೂಪ್ ಹೊಸೂರಿನಲ್ಲಿ ನಿರ್ಮಿಸಲಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್​ನಲ್ಲಿ ವಿಮಾನ ಎಂಜಿನ್ ಬಿಡಿಭಾಗಗಳು, ಲ್ಯಾಂಡಿಂಗ್ ಗೇರ್ ಸಿಸ್ಟಂಗಳು, ಅಲ್ಟ್ರಾ ಪ್ರಿಸಿಶನ್ ಮೆಷಿನಿಂಗ್, ಅಡ್ವಾನ್ಸ್ಡ್ ಏರೋಸ್ಪೇಸ್ ಸಿಸ್ಟಂ ಮತ್ತು ಸಬ್-ಅಸೆಂಬ್ಲಿಗಳ ಘಟಕಗಳು ಇರಲಿವೆ.

ಈ ಪ್ರಸ್ತಾವಿತ ಕ್ಲಸ್ಟರ್ ನಿರ್ಮಾಣದಿಂದ ಜಾಗತಿಕ ಏರೋ ಎಂಜಿನ್ ಸಪ್ಲೈ ಚೈನ್​ನಲ್ಲಿ ಒಂದು ಭಾಗವಾಗಿರಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಾವೀಣ್ಯತೆ ಬೇಡುವ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

ತಮಿಳುನಾಡಿನಲ್ಲಿ ಏರ್​ಕ್ರಾಫ್ಟ್ ಉದ್ಯಮ ಗಮನಾರ್ಹವಾಗಿ ಹೆಚ್ಚುತ್ತಿದೆ. ತಿರುಪ್ಪೂರ್​ನಲ್ಲಿ ಶಕ್ತಿ ಏರ್​ಕ್ರಾಫ್ಟ್ ಇಂಡಸ್ಟ್ರಿ ಪ್ರೈ ಲಿ ಸಂಸ್ಥೆಯು ನಾಲ್ಕು ಸೀಟ್​ಗಳ ಟ್ರೈನರ್ ಏರ್​ಕ್ರಾಫ್ಟ್ ಅನ್ನು ಅಸೆಂಬ್ಲಿಂಗ್ ಮಾಡುವ ಘಟಕ ಸ್ಥಾಪನೆ ಮಾಡಲಿದೆ. ಜಪಾನ್​ನ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಮೈನ್​ಬೀ ಮಿಟ್ಸುಮಿ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಐಜಿಬಿಟಿ ಮಾಡ್ಯೂಲ್ ಮತ್ತು ಹೈಪ್ರಿಸಿಶನ್ ಕಾಂಪೊನೆಂಟ್​ಗಳನ್ನು ತಯಾರಿಸುವ ಘಟಕ ಸ್ಥಾಪಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

March Born Numerology: ಸಂಖ್ಯಾಶಾಸ್ತ್ರದ ಪ್ರಕಾರ ಮಾರ್ಚ್‌ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತೆ ಗೊತ್ತಾ? – Kannada News | March Born Numerology: Unveiling Personality Traits, Luck and Success Secrets

ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರು

ಸಂಖ್ಯಾಶಾಸ್ತ್ರದಲ್ಲಿ ಮಾರ್ಚ್ ತಿಂಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಮಾರ್ಚ್ ತಿಂಗಳು ವರ್ಷದ ಮೂರನೇ ತಿಂಗಳಾಗಿದ್ದು, ಇದು ಸಂಖ್ಯೆ 3 ರ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಈ ಸಂಖ್ಯೆಯು ಜ್ಞಾನ ಮತ್ತು ಸಮೃದ್ಧಿಯ ಸಂಕೇತವಾದ ‘ಗುರು’ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಈ ತಿಂಗಳಲ್ಲಿ ಜನಿಸಿದವರು ಹುಟ್ಟುತ್ತಲೇ ಒಂದು ವಿಶೇಷವಾದ ಕಾಂತಿಯನ್ನು ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಹೊತ್ತು ಬಂದಿರುತ್ತಾರೆ.  ಕೇವಲ ಅದೃಷ್ಟವಂತರಷ್ಟೇ ಅಲ್ಲ, ಅಪಾರವಾದ ಆತ್ಮವಿಶ್ವಾಸ ಮತ್ತು ಛಲವನ್ನು ಮೈಗೂಡಿಸಿಕೊಂಡವರು. ಇವರ ಜೀವನದ ಪಯಣವನ್ನು ಗಮನಿಸಿದರೆ, ಇವರು ಶ್ರಮಜೀವಿಗಳೆಂಬುದು ಸ್ಪಷ್ಟವಾಗುತ್ತದೆ. ಒಮ್ಮೆ ಒಂದು ಕೆಲಸವನ್ನು ಕೈಗೆತ್ತಿಕೊಂಡರೆ ಅಥವಾ ಒಂದು ಗುರಿಯನ್ನು ನಿಶ್ಚಯಿಸಿದರೆ, ಅದು ಎಷ್ಟೇ ಕಷ್ಟವಾಗಿದ್ದರೂ ಪೂರ್ಣಗೊಳಿಸುವವರೆಗೂ ಇವರು ವಿಶ್ರಮಿಸುವುದಿಲ್ಲ. ಇವರ ಈ ಹಠ ಮತ್ತು ಕಠಿಣ ಪರಿಶ್ರಮವೇ ಇವರನ್ನು ಯಶಸ್ಸಿನ ಶಿಖರಕ್ಕೇರಿಸುತ್ತದೆ. ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಇವರು ಅಂದುಕೊಂಡಿದ್ದನ್ನು ಸಾಧಿಸುವುದು ಇತರರಿಗಿಂತ ಸ್ವಲ್ಪ ಸುಲಭ ಎನಿಸುತ್ತದೆ, ಏಕೆಂದರೆ ಇವರಲ್ಲಿ ಪ್ರಕೃತಿಯೇ ನೀಡಿದ ಒಂದು ವಿಶೇಷವಾದ ಆಕರ್ಷಣೆ ಮತ್ತು ಶಕ್ತಿ ಇರುತ್ತದೆ.

ಮಾರ್ಚ್ ವರ್ಷದ ಮೂರನೇ ತಿಂಗಳಾಗಿದ್ದು, ಈ ತಿಂಗಳಲ್ಲಿ ಹುಟ್ಟಿದವರ ಹೃದಯ ಅತ್ಯಂತ ಮೃದು ಮತ್ತು ಪಾರದರ್ಶಕವಾಗಿರುತ್ತದೆ. ಇವರು ಸ್ನೇಹಜೀವಿಗಳು ಮಾತ್ರವಲ್ಲದೆ, ಪರೋಪಕಾರ ಗುಣದಲ್ಲಿ ಸದಾ ಮುಂದಿರುತ್ತಾರೆ. ದಾನ ಧರ್ಮದಂತಹ ಸಾಮಾಜಿಕ ಕಾರ್ಯಗಳಲ್ಲಿ ಇವರು ತೋರುವ ಆಸಕ್ತಿ ಅಪಾರ. ಇವರ ಮಾತು ಮತ್ತು ಸ್ವಭಾವ ಎಷ್ಟು ಸಿಹಿಯಾಗಿರುತ್ತದೆ ಎಂದರೆ, ಜನರು ಇವರ ಸನಿಹದಲ್ಲಿ ಇರಲು ಸದಾ ಬಯಸುತ್ತಾರೆ. ಬುದ್ಧಿವಂತಿಕೆಯ ವಿಷಯಕ್ಕೆ ಬಂದರೆ, ಮಾರ್ಚ್ ಸಂಜಾತರು ಅತೀ ವೇಗವಾಗಿ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಯಾರೂ ಇವರನ್ನು ಸುಲಭವಾಗಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ; ಪ್ರತಿಯೊಂದು ನಿರ್ಧಾರವನ್ನೂ ಇವರು ಬಹಳ ಜಾಗರೂಕತೆಯಿಂದ ಮತ್ತು ಚಾಣಾಕ್ಷತನದಿಂದ ತೆಗೆದುಕೊಳ್ಳುತ್ತಾರೆ. ಯಾವುದೇ ಕ್ಷೇತ್ರದಲ್ಲಿರಲಿ, ಇವರ ಬುದ್ಧಿವಂತಿಕೆಯೇ ಇವರಿಗೆ ಮೇಲುಗೈ ತಂದುಕೊಡುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ನಾಯಕತ್ವದ ಗುಣಗಳು ಇವರ ರಕ್ತದಲ್ಲೇ ಇರುತ್ತವೆ. ಸಮಾಜದ ಏಳಿಗೆಗಾಗಿ ಶ್ರಮಿಸುವ ಹಂಬಲ ಇವರನ್ನು ಉನ್ನತ ಸ್ಥಾನದಲ್ಲಿರಿಸುತ್ತದೆ. ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕೆಲವು ಅಡೆತಡೆಗಳು ಎದುರಾದರೂ, ಇವರು ದೃತಿಗೆಡುವುದಿಲ್ಲ. ವಿಶೇಷವಾಗಿ 30 ವರ್ಷ ವಯಸ್ಸಿನ ನಂತರ ಇವರ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಆ ಹಂತದ ನಂತರ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಹುಡುಕಿಕೊಂಡು ಬರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಮಾರ್ಚ್ ತಿಂಗಳಲ್ಲಿ ಜನಿಸಿದವರು ತಮ್ಮ ನಂಬಿಕೆ, ನಾಯಕತ್ವ ಮತ್ತು ಅಚಲವಾದ ಪರಿಶ್ರಮದಿಂದ ಜೀವನದ ಪ್ರತಿ ಹಂತದಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಗನ ಕ್ಲಾಸ್ ಮಿಸ್ ಆಗುತ್ತೆ ಎಂದು ಸ್ಕೂಲ್ ಬಸ್ ಹಿಂದೆ ಓಡಿದ ತಾಯಿ, ವೈರಲ್‌ ಆಯ್ತು ದೃಶ್ಯ – Kannada News | Mother ran and put her son on the school bus

ತಾಯಿಗೆ (mother) ಮಕ್ಕಳೇ ಪ್ರಪಂಚ. ಹೀಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ಕಟ್ಟಿ ಕೊಡಲು ಒದ್ದಾಡುತ್ತಾಳೆ. ಹೀಗಾಗಿ ಅಮ್ಮ ಅಂದ್ರೆ ತ್ಯಾಗಮಯಿ. ಮಕ್ಕಳಿಗಾಗಿ ಎಲ್ಲಾ ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಗನ ಸ್ಕೂಲ್ ಬಸ್ (school bus) ಹೊರಟಿತೆಂದು ಬ್ಯಾಗ್ ಹೆಗಲಿಗೇರಿಸಿಕೊಂಡು ತಾಯಿಯೂ ಬಸ್ ಹಿಂದೆ ಓಡುತ್ತಿರುವ ದೃಶ್ಯವು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಟಿವಿ ಇಶಾ ಟ್ರಾವೆಲ್ ಡೈರಿ (tvishatraveldairy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಯೊಬ್ಬಳು ಮಗನ ಬ್ಯಾಗ್‌ನ್ನು ಹೆಗಲಿಗೇರಿಸಿಕೊಂಡು ಸ್ಕೂಲ್ ಬಸ್ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಮಗನು ತನ್ನ ತಾಯಿಯ ಜತೆಗೆ ಓಡಿ ಹೋಗುತ್ತಿದ್ದು, ಕೊನೆಗೂ ಸ್ಕೂಲ್ ಬಸ್ ನಿಲ್ಲಿಸಿ ಮಗನನ್ನು ಹತ್ತಿಸಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ತಾಯಿಗೆ ಈ ಜಗದಲ್ಲಿ ಸರಿಸಾಟಿ ಯಾರಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಕ್ಕಳ ಭವಿಷ್ಯಕ್ಕಾಗಿ ತಾಯಿಯ ಹೋರಾಟ, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಮಕ್ಕಳಿಗೆ ತಾಯಿ ಏನನ್ನು ಬೇಕಾದ್ರು ಮಾಡ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು, ವಿಡಿಯೋ ಇಲ್ಲಿದೆ – Kannada News | Speeding Car Hits Bike and Pedestrian in Maharashtra, Three Injured

ಸಾಂಗ್ಲಿ, ಫೆಬ್ರವರಿ 20: ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡು ಬೈಕ್​ಗಳು ನಿಂತಿದ್ದವು, ಒಂದು ಬೈಕ್​​ನಲ್ಲಿ ಓರ್ವ ಪುರುಷ ಮತ್ತೊಬ್ಬರು ಮಹಿಳೆ ಇದ್ದರೆ, ಮತ್ತೊಂದು ಬೈಕ್ ಪಕ್ಕದಲ್ಲಿ ಆ ಬೈಕ್ ಸವಾರ ನಿಂತಿದ್ದರು. ಇಬ್ಬರೂ ಮಾತನಾಡುತ್ತಿರುವಾಗ ಇಬ್ಬರು ಇದ್ದ ಬೈಕ್​ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಸಖ್ರಲೆ ಪ್ರದೇಶದ ಈಶ್ವರಪುರ-ಟಕಾರಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈಶ್ವರಪುರದ ನಿನೈನಗರ ನಿವಾಸಿ ನಿತಿನ್ ಶಿವಾಜಿ ಪವಾರ್ ತನ್ನ ತಾಯಿ ಛಾಯಾ ಪವಾರ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Namma Metro: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು! – Kannada News | Bengaluru Yellow Line Driverless Metro Derails: Safety Probe Launched by BMRC

ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!

ಬೆಂಗಳೂರು, ಫೆಬ್ರವರಿ 20: ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ಮೆಟ್ರೋ (Namma Metr0) ರೈಲು ಹಳಿ ತಪ್ಪಿದ ಘಟನೆ ಜನವರಿ- 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ.

ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಿದೆ. ಆರ್.ವಿ. ರೋಡ್–ಬೊಮ್ಮಸಂದ್ರವರೆಗೆ 19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ 8 ರೈಲುಗಳಿದ್ದು, 7 ರೈಲುಗಳು ಕಾರ್ಯಾಚರಣೆಯಲ್ಲಿವೆ. 8ನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದೆ. ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ನರೇಂದ್ರ ಮೋದಿ ಚಾಲನೆ ನೀಡಿದ್ದು, ಆಗಸ್ಟ್ 11ರಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.

(ಮಾಹಿತಿ ಅಪ್ಡೇಟ್ ಆಗುತ್ತಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version