Vastu Tips: ಸ್ನಾನಗೃಹದ ವಾಸ್ತು ದೋಷ ಕಡಿಮೆ ಮಾಡಲು ಈ ಒಂದು ವಸ್ತು ಇಡಿ – Kannada News | Bathroom Vastu Tips: Why Keeping Salt in the Bathroom Is Considered Auspicious

ಸ್ನಾನಗೃಹದಲ್ಲಿ ಉಪ್ಪು Image Credit source: iStock

ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಮಹತ್ವವಿದೆ. ಮನೆ ನಿರ್ಮಾಣದಿಂದ ಹಿಡಿದು ಮನೆಯೊಳಗಿನ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರವರೆಗೆ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಜನರು ಮುಖ್ಯ ಬಾಗಿಲು, ಅಡುಗೆಮನೆ ಮತ್ತು ಮಲಗುವ ಕೋಣೆಯ ವಾಸ್ತುವಿನ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಸ್ನಾನಗೃಹದ ವಾಸ್ತುಗೂ ವಿಶೇಷ ಮಹತ್ವವಿದೆ ಎಂಬುದನ್ನು ಅನೇಕರು ಗಮನಿಸುವುದಿಲ್ಲ.

ಸ್ನಾನಗೃಹದ ವಾಸ್ತು ಏಕೆ ಮುಖ್ಯ?

ವಾಸ್ತು ಶಾಸ್ತ್ರದ ನಂಬಿಕೆಯ ಪ್ರಕಾರ, ಸ್ನಾನಗೃಹದಲ್ಲಿ ಉಂಟಾಗುವ ವಾಸ್ತು ದೋಷಗಳು ಮನೆಯ ಆರ್ಥಿಕ ಸ್ಥಿತಿ, ಆರೋಗ್ಯ ಹಾಗೂ ಕುಟುಂಬದ ನೆಮ್ಮದಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಸ್ನಾನಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸ್ನಾನಗೃಹದಲ್ಲಿ ಉಪ್ಪು ಇಡುವುದರಿಂದ ಏನು ಪ್ರಯೋಜನ?

ವಾಸ್ತು ನಂಬಿಕೆಯ ಪ್ರಕಾರ, ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ ಎಂದು ಹೇಳಲಾಗುತ್ತದೆ. ಸ್ನಾನಗೃಹದಲ್ಲಿ ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಇಡುವುದರಿಂದ ಅಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದರಿಂದ ಮನೆಯ ವಾತಾವರಣದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ವಾಸ್ತು ದೋಷ ಕಡಿಮೆ ಮಾಡಲು ಈ ಪರಿಹಾರ ಸಹಾಯಕವೇ?

ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹವು ಈಶಾನ್ಯ ದಿಕ್ಕಿನಲ್ಲಿ ಅಥವಾ ಮನೆಯ ಮುಖ್ಯ ಬಾಗಿಲಿನ ಎದುರು ಇದ್ದರೆ ಅದನ್ನು ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ನಾನಗೃಹದಲ್ಲಿ ಉಪ್ಪು ಇಡುವುದು ವಾಸ್ತು ದೋಷದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಯಾವ ಉಪ್ಪನ್ನು ಬಳಸಬೇಕು?

ವಾಸ್ತು ತಜ್ಞರ ಪ್ರಕಾರ ಸಾಮಾನ್ಯ ಅಡುಗೆ ಉಪ್ಪಿನ ಬದಲಿಗೆ ಕಲ್ಲುಪ್ಪು (Rock Salt) ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ.

ಉಪ್ಪು ಇಡುವ ಸರಿಯಾದ ವಿಧಾನ:

  • ಗಾಜಿನ ಪಾತ್ರೆಯಲ್ಲಿ ಸಮುದ್ರ ಉಪ್ಪನ್ನು ತುಂಬಿ ಸ್ನಾನಗೃಹದಲ್ಲಿ ಇಡಿ.
  • ಪ್ರತಿ ವಾರ ಅಥವಾ ಕನಿಷ್ಠ 15 ದಿನಗಳಿಗೊಮ್ಮೆ ಉಪ್ಪನ್ನು ಬದಲಾಯಿಸಿ.
  • ಹಳೆಯ ಉಪ್ಪನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿ ಅಥವಾ ಸುರಕ್ಷಿತವಾಗಿ ವಿಲೇವಾರಿ ಮಾಡಿ.
  • ನಂತರ ಹೊಸ ಉಪ್ಪನ್ನು ಪಾತ್ರೆಯಲ್ಲಿ ತುಂಬಿ ಮತ್ತೆ ಇಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧಾರವಾಡ ಹೈಕೋರ್ಟ್‌ನಲ್ಲಿಂದು ಮಹಿಳೆಯರದ್ದೇ ಪಾರುಪತ್ಯ! ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ – Kannada News | Dharwad High Court to Hold Special All Women Benches with Female Legal Officers

ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠImage Credit source: tv9

ಧಾರವಾಡ, ಆಗಸ್ಟ್ 1: ಕರ್ನಾಟಕ ಹೈಕೋರ್ಟ್​ನ (Karnataka High Court) ಧಾರವಾಡ ಪೀಠದಲ್ಲಿ ಇಂದು ನಡೆಯಲಿರುವ ವಿಶೇಷ ಎಲ್ಲಾ ಮಹಿಳಾ ನ್ಯಾಯಪೀಠಗಳ ವಿಚಾರಣೆಯಲ್ಲಿ, ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಲು ಸಂಪೂರ್ಣ ಮಹಿಳಾ ಕಾನೂನು ಅಧಿಕಾರಿಗಳ ತಂಡವನ್ನು ನೇಮಿಸಿ ಅಡ್ವೋಕೇಟ್ ಜನರಲ್ ಕಚೇರಿ ಆದೇಶ ಹೊರಡಿಸಿದೆ. ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿರುವ ಈ ವಿಶೇಷ ಶನಿವಾರದ ಕಲಾಪದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರಲಿದ್ದಾರೆ. ಒಂದು ಕಡೆ ಮಹಿಳಾ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದರೆ, ಮತ್ತೊಂದೆಡೆ ಸರ್ಕಾರದ ಪರವಾಗಿ ಸರ್ಕಾರಿ ಮಹಿಳಾ ವಕೀಲರು ವಾದ ಮಂಡಿಸಲಿದ್ದು, ಈ ವಕೀಲರ ತಂಡದ ನೇತೃತ್ವವನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ವಹಿಸಲಿದ್ದಾರೆ.

ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ಕಾರ್ಯಾಚರಿಸಲಿರುವ ಒಟ್ಟು ಏಳು ವಿಶೇಷ ಮಹಿಳಾ ನ್ಯಾಯಪೀಠಗಳ ಮುಂದೆ ಹಾಜರಾಗಿ ಸರ್ಕಾರದ ವಾದ ಮಂಡಿಸಲು ಮಹಿಳಾ ಅಪರ ಸರ್ಕಾರಿ ವಕೀಲರು ಹಾಗೂ ಹೈಕೋರ್ಟ್ ಸರ್ಕಾರಿ ವಕೀಲರಿಗೆ ಪ್ರತ್ಯೇಕವಾಗಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ.

ಸರ್ಕಾರಿ ಮಹಿಳಾ ವಕೀಲರ ಪಟ್ಟಿ

ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಪ್ರತಿಮಾ ಹೊನ್ನಾಪುರ, ಹೆಚ್ಚುವರಿ ಸರ್ಕಾರಿ ವಕೀಲರಾದ ನಂದಿನಿ ಸೋಮಾಪುರ, ಪ್ರಮೋಧಿನಿ ಕಿಶನ್, ಸಾವಿತ್ರಮ್ಮ, ಬಿ.ಪಿ.ರಾಧಾ, ಸುನಿತಾ ಸೆಕ್ವೇರಿಯಾ, ಮಮತಾ ಶೆಟ್ಟಿ, ಮಾಲಾ ಬಿ. ಭೂಟೆ, ವಿ. ಹೇಮಲತಾ, ಆರ್. ಕೆ. ಪ್ರತಿಭಾ, ಸರ್ಕಾರಿ ವಕೀಲರಾದ ವಿ. ಸ್ಫೂರ್ತಿ, ಗಿರಿಜಾ ಹಿರೇಮಠ, ರಶ್ಮಿ ಪಟೇಲ್, ರಶ್ಮಿ ರಾವ್, ಕೀರ್ತಿಲತಾ ಪಾಟೀಲ್, ರತ್ನಮಾಲಾ, ಎಸ್​. ಚಾಂದನಿ, ಆರ್. ಸೌಮ್ಯ, ವಹೀದಾ, ಮತ್ತು ದೀಪ್ತಿ ಅಲ್ವಾ ಅವರನ್ನು ನಿಯೋಜನೆ ಮಾಡಲಾಗಿದೆ.

ಸಂಪೂರ್ಣ ಮಹಿಳಾ ಪೀಠಗಳು ರಚನೆಯಾಗುವುದೇ ಅಪರೂಪ

ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಸಂಪೂರ್ಣ ಮಹಿಳಾ ಪೀಠಗಳು ರಚನೆಯಾಗುವುದೇ ಅಪರೂಪ. ಅಂಥದ್ದರಲ್ಲಿ, ಇಂದಿನ ಪ್ರತಿಯೊಂದು ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ಕೇವಲ ಮಹಿಳಾ ಅಧಿಕಾರಿಗಳೇ ಕಾಣಿಸಿಕೊಳ್ಳುತ್ತಿರುವುದು ನ್ಯಾಯಾಂಗ ಮತ್ತು ವಕೀಲರ ವಲಯದಲ್ಲಿ ಒಂದು ಮೈಲಿಗಲ್ಲಾಗಲಿದೆ.

ಏಳು ನ್ಯಾಯಪೀಠಗಳಿಂದ ಕಲಾಪ

ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಗಳು ಇಡೀ ದಿನದ ಕಲಾಪಗಳು ನಡೆಸಲಿವೆ. ಅದಕ್ಕಾಗಿ ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರತ್ಯೇಕ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ನ್ಯಾಯಪೀಠಗಳನ್ನು ರಚನೆ ಮಾಡಲಾಗಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾ.ಕೆ. ಜಿ. ಶಾಂತಿ ಅವರನ್ನೊಳಗೊಂಡ ಪೀಠವು ಎಲ್ಲ ವಿಭಾಗೀಯ ಪೀಠದದಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ಪ್ರಾಥಮಿಕ ವಿಚಾರಣೆ, ಅರ್ಜಿಗಳು, ಆದೇಶಗಳು ಹಾಗೂ ಅಂತಿಮ ವಿಚಾರಣೆಯನ್ನು ನಡೆಸಲಿದೆ.

ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಅಧಿಸೂಚನೆಯಂತೆ, ಹಿರಿಯ ನ್ಯಾ. ಅನು ಶಿವರಾಮನ್ ಹಾಗೂ ನ್ಯಾ. ಕೆ. ಜಿ. ಶಾಂತಿ, ನ್ಯಾ. ಜ್ಯೋತಿ ಮೂಲಿಮನಿ ಹಾಗೂ ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕೆನ್ನಾಗಂಟಿ ಹಾಗೂ ನ್ಯಾ. ಕೆ. ಎಸ್. ಹೇಮಲೇಖಾ ಅವರ ನೇತೃತ್ವದ ಮೂರು ವಿಭಾಗೀಯ ನ್ಯಾಯಪೀಠಗಳು ಕಲಾಪ ನಡೆಸಲಿವೆ. ಇದರ ಜೊತೆಗೆ ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾ ವಿತಸ್ತ ಗಂಜು, ನ್ಯಾ. ಕೆ. ಬಿ. ಗೀತಾ, ನ್ಯಾ. ರಾಜೇಶ್ವರಿ ಎನ್. ಹೆಗ್ಡೆ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠಗಳಲ್ಲಿ ಕಲಾಪಗಳು ನಡೆಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೇಪರ್ ಲೀಕ್ ತಡೆಗೆ ಐತಿಹಾಸಿಕ ಕಾನೂನು: ‘ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಕಾಯ್ದೆ 2026’ಕ್ಕೆ ರಾಷ್ಟ್ರಪತಿ ಅಂಕಿತ – Kannada News | Public Examinations Act 2026 Receives President Assent to Curb Paper Leaks

ನವದೆಹಲಿ, ಆಗಸ್ಟ್ 01: ಇತ್ತೀಚಿನ ನೀಟ್ (NEET) ಸೇರಿದಂತೆ ಪ್ರಮುಖ ಪರೀಕ್ಷಾ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪೇಪರ್ ಲೀಕ್, ನಕಲು ಹಾಗೂ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ‘ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ಕಾಯ್ದೆ, 2026’ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಈ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಗುವುದರೊಂದಿಗೆ, ಇದು ತಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ.

ಹೊಸ ಕಾಯ್ದೆಯ ಪ್ರಮುಖ ಮುಖ್ಯಾಂಶಗಳೇನು?

  • ಯಾವ ಪರೀಕ್ಷೆಗಳಿಗೆ ಅನ್ವಯ?: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿ (RRB), ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ನೀಟ್ (NEET), ಸಿಇಟಿ ಸೇರಿದಂತೆ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಈ ಕಾನೂನಿನ ವ್ಯಾಪ್ತಿಗೆ ಬರಲಿವೆ.
  • ಕಠಿಣ ಶಿಕ್ಷೆ ಮತ್ತು ದಂಡ: ಪರೀಕ್ಷಾ ಅಕ್ರಮ ನಡೆಸುವ ಸಂಘಟಿತ ಅಪರಾಧ ಗ್ಯಾಂಗ್‌ಗಳು, ತಂತ್ರಜ್ಞಾನ ದುರ್ಬಳಕೆ ಮಾಡಿಕೊಳ್ಳುವವರು, ಕೋಚಿಂಗ್ ಸೆಂಟರ್‌ಗಳು ಹಾಗೂ ಸೇವಾ ಪೂರೈಕೆದಾರರ ವಿರುದ್ಧ ಅತ್ಯಂತ ಕಠಿಣ ಜೈಲು ಶಿಕ್ಷೆ ಮತ್ತು ಕೋಟ್ಯಂತರ ರೂಪಾಯಿ ಭಾರಿ ದಂಡ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ: ಪರೀಕ್ಷಾ ಪ್ರಕ್ರಿಯೆಯಲ್ಲಿ ಸೈಬರ್ ದಾಳಿ, ತಾಂತ್ರಿಕ ಅಕ್ರಮ ಅಥವಾ ಯಾವುದೇ ಆಂತರಿಕ ನೆರವು ನೀಡುವುದನ್ನು ಪತ್ತೆಹಚ್ಚಲು ಮತ್ತು ತನಿಖೆ ನಡೆಸಲು ತನಿಖಾ ಸಂಸ್ಥೆಗಳಿಗೆ ವ್ಯಾಪಕ ಅಧಿಕಾರ ನೀಡಲಾಗಿದೆ.

ಲಕ್ಷಾಂತರ ಅಭ್ಯರ್ಥಿಗಳ ಹಿತರಕ್ಷಣೆ

ಕಳೆದ ಕೆಲವು ವರ್ಷಗಳಿಂದ ವಿವಿಧ ನೇಮಕಾತಿ ಪರೀಕ್ಷೆಗಳು ಹಾಗೂ ಪ್ರಸಕ್ತ ವರ್ಷದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾರಿ ಸಂಕಷ್ಟ ಎದುರಿಸಿದ್ದರು. ಹೊಸ ಕಾಯ್ದೆ ಜಾರಿಗೆ ಬಂದಿರುವುದರಿಂದ ಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನಡೆಯಲಿದ್ದು, ಪ್ರಾಮಾಣಿಕವಾಗಿ ತಯಾರಾಗುವ ಯುವಜನತೆಯಲ್ಲಿ ವಿಶ್ವಾಸ ಮೂಡಲಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನಷ್ಟು  ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ! – Kannada News | 12 Stadiums, 57 Clashes: New Format For World Cup 2027

ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್‌ಗಾಗಿ ಒಟ್ಟು 12 ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಸೌತ್ ಆಫ್ರಿಕಾದ 8, ಝಿಂಬಾಬ್ವೆಯ 3 ಹಾಗೂ ನಮೀಬಿಯಾದ 1 ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಆ ಕ್ರೀಡಾಂಗಣಗಳ ವಿವರ ಇಲ್ಲಿದೆ…

  • ಸೌತ್ ಆಫ್ರಿಕಾ
  • ವಾಂಡರರ್ಸ್ ಸ್ಟೇಡಿಯಂ – ಜೋಹಾನ್ಸ್​ಬರ್ಗ್​
  • ನ್ಯೂಲಾಂಡ್ಸ್ ಕ್ರಿಕೆಟ್ ಮೈದಾನ – ಕೇಪ್ ಟೌನ್
  •  ಕಿಂಗ್ಸ್​ಮೀಡ್ ಕ್ರಿಕೆಟ್ ಮೈದಾನ – ಡರ್ಬನ್
  • ಸೂಪರ್‌ಸ್ಪೋರ್ಟ್ ಪಾರ್ಕ್ – ಸೆಂಚುರಿಯನ್
  • ಸೇಂಟ್ ಜಾರ್ಜ್ ಪಾರ್ಕ್ – ಪೋರ್ಟ್ ಎಲಿಜಬೆತ್
  • ಮಂಗಾಂಗ್ ಓವಲ್ – ಬ್ಲೋಮ್‌ಫಾಂಟೈನ್
  • ಬೋಲ್ಯಾಂಡ್ ಪಾರ್ಕ್ – ಪಾರ್ಲ್
  • ಬಫಲೋ ಪಾರ್ಕ್ – ಈಸ್ಟ್ ಲಂಡನ್

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

  • ಝಿಂಬಾಬ್ವೆ
  • ಹರಾರೆ ಸ್ಪೋರ್ಟ್ಸ್ ಕ್ಲಬ್ – ಹರಾರೆ
  • ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ – ಬುಲವಾಯೊ
  • ಫಾಲೆ ಮೋಸಿ-ಓವಾ-ತುನ್ಯಾ ಕ್ರೀಡಾಂಗಣ – ವಿಕ್ಟೋರಿಯಾ ಫಾಲ್ಸ್
  • ನಮೀಬಿಯಾ 
  • ನಮೀಬಿಯಾ ಕ್ರಿಕೆಟ್ ಮೈದಾನ – ವಿಂಡ್‌ಹೋಕ್

12 ಸ್ಟೇಡಿಯಂ, 57 ಪಂದ್ಯಗಳು:

ಈ 12 ಸ್ಟೇಡಿಯಂಗಳಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿಯ ವಿಶ್ವಕಪ್ ನಡೆಯಲಿರುವುದು ಹೊಸ ಸ್ವರೂಪದಲ್ಲಿ ಎಂಬುದು ವಿಶೇಷ. ಅಂದರೆ ಹೊಸ ಫಾರ್ಮ್ಯಾಟ್​ ಮೂಲಕ ಒಟ್ಟು ನಾಲ್ಕು ಹಂತಗಳಲ್ಲಿ ಟೂರ್ನಿಯನ್ನು ಆಯೋಜಿಸಲು ರೂಪುರೇಷೆ ಸಿದ್ಧಪಡಿಸಿದೆ. ಹಾಗಾದರೆ ಈ ಬಾರಿ ಏನೆಲ್ಲಾ ಬದಲಾವಣೆಗಳಾಗಿವೆ? ಟೂರ್ನಿಯ ಮೂರು ಹಂತಗಳಾವುವು ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಹಂತ 1: ಸೂಪರ್ ಸೀರೀಸ್:

ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಆದರೆ ಈ ಹದಿನಾಲ್ಕು ತಂಡಗಳಲ್ಲಿ ಎರಡು ಟೀಮ್​ಗಳು ಮೊದಲ ಸುತ್ತಿನಲ್ಲೇ ಹೊರಬೀಳಲಿವೆ. ಅಂದರೆ ವಿಶ್ವಕಪ್‌ಗೆ ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಅತ್ಯಂತ ಕಡಿಮೆ ಶ್ರೇಯಾಂಕ ಹೊಂದಿರುವ ಕೊನೆಯ 3 ತಂಡಗಳ (12, 13 ಮತ್ತು 14ನೇ ಸ್ಥಾನ) ನಡುವೆ ಮಾತ್ರ ಈ ಆರಂಭಿಕ ಸುತ್ತು ನಡೆಯಲಿದೆ.

  • ಯಾರ ನಡುವೆ?: ಅರ್ಹತೆ ಪಡೆದ ಒಟ್ಟು 14 ತಂಡಗಳಲ್ಲಿ, ಐಸಿಸಿ ಶ್ರೇಯಾಂಕದಲ್ಲಿ ಅತ್ಯಂತ ಕೆಳಗಿರುವ ಕೊನೆಯ 3 ತಂಡಗಳು ಈ ಹಂತದಲ್ಲಿ ಸ್ಪರ್ಧಿಸುತ್ತವೆ. ಅಂದರೆ 11 ತಂಡಗಳು ನೇರ ಅರ್ಹತೆ ಪಡೆದರೆ, 3 ತಂಡಗಳು ಟೂರ್ನಿ ಆರಂಭಕ್ಕೂ ಮುನ್ನ ಸೂಪರ್ ಸಿರೀಸ್ ಆಡಿ ಅರ್ಹತೆ ಪಡೆಯಬೇಕಿದೆ.
  • ಮಾದರಿ: ಈ ಮೂರು ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ (ಮಿನಿ ಲೀಗ್).
  • ಫಲಿತಾಂಶ: ಈ ಮೂರು ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೇವಲ 1 ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ 2 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಹಂತ 2: ಗ್ರೂಪ್ ರೌಂಡ್:

ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆದ ಅಗ್ರ 11 ತಂಡಗಳು ಮತ್ತು ಮೊದಲ ಹಂತದ ಸೂಪರ್ ಸೀರೀಸ್‌ನಲ್ಲಿ ಗೆದ್ದು ಬರುವ 1 ತಂಡ ಸೇರಿ ಒಟ್ಟು 12 ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.

  • ಯಾರ ನಡುವೆ?: ಸೂಪರ್ ಸೀರೀಸ್‌ನಿಂದ ಗೆದ್ದು ಬಂದ 1 ತಂಡವು, ಉಳಿದ 11 ಉನ್ನತ ಶ್ರೇಯಾಂಕದ ತಂಡಗಳನ್ನು ಸೇರಿಕೊಳ್ಳುತ್ತದೆ. ಅದರಂತೆ ದ್ವಿತೀಯ ಹಂತದಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯಲಿವೆ.
  • ಮಾದರಿ: ಈ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ (ಗ್ರೂಪ್ A ಮತ್ತು ಗ್ರೂಪ್ B) ವಿಂಗಡಿಸಲಾಗುತ್ತದೆ. ಪ್ರತಿಯೊಂದು ತಂಡವು ತನ್ನ ಗುಂಪಿನಲ್ಲಿರುವ ಉಳಿದ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು (ಒಟ್ಟು 5 ಪಂದ್ಯಗಳು) ಆಡಲಿವೆ.
  • ಫಲಿತಾಂಶ: ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಹೋಗುತ್ತವೆ (ಒಟ್ಟು 6 ತಂಡಗಳು). ಇದರೊಂದಿಗೆ, ಎರಡೂ ಗುಂಪುಗಳಲ್ಲಿ ಉಳಿದ ತಂಡಗಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ಹೆಚ್ಚುವರಿ ತಂಡಕ್ಕೆ ಅವಕಾಶ ಸಿಗುತ್ತದೆ. ಹೀಗೆ ಒಟ್ಟು 7 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡುತ್ತವೆ.
  • 7ನೇ ತಂಡದ ಆಯ್ಕೆ ಹೇಗೆ?: ಗ್ರೂಪ್ ಹಂತದ 5 ಪಂದ್ಯಗಳ ಮುಕ್ತಾಯದ ನಂತರ, ಎರಡೂ ಗ್ರೂಪ್‌ಗಳ 4ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಯಾವ ತಂಡ ಅತಿ ಹೆಚ್ಚು ಅಂಕಗಳನ್ನು ಹೊಂದಿದೆಯೋ ಆ ತಂಡವು 7ನೇ ತಂಡವು ಮೂರನೇ ಹಂತಕ್ಕೆ ಪ್ರವೇಶಿಸುತ್ತದೆ.

ಹಂತ 3: ಸೂಪರ್ 7 ರೌಂಡ್:

ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿದ 12 ತಂಡಗಳಲ್ಲಿ ಮೂರನೇ ಸುತ್ತಿಗೆ 7 ತಂಡಗಳು ಮಾತ್ರ ಪ್ರವೇಶಿಸಲಿದೆ. ಅಂದರೆ ಇಲ್ಲಿ ಎರಡೂ ಗುಂಪುಗಳಿಂದ ತಲಾ 3 ಅತ್ಯುತ್ತಮ ತಂಡಗಳು (3 + 3 = 6) ಮತ್ತು ಎರಡೂ ಗುಂಪುಗಳನ್ನು ಒಟ್ಟಾರೆಯಾಗಿ ಪರಿಗಣಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡಕ್ಕೆ ಸೂಪರ್-7 ನಲ್ಲಿ ಅವಕಾಶ ಸಿಗಲಿದೆ.

  • ಮಾದರಿ: ಅರ್ಹತೆ ಪಡೆದ 7 ತಂಡಗಳು ಸಿಂಗಲ್ ರೌಂಡ್-ರಾಬಿನ್ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತವೆ. ಅಂದರೆ ಇಲ್ಲಿ ಯಾವುದೇ ಗುಂಪುಗಳಿರುವುದಿಲ್ಲ, ಪ್ರತಿ ತಂಡವೂ ಉಳಿದ 6 ತಂಡಗಳ ವಿರುದ್ಧ ಆಡಲೇಬೇಕು (ಒಟ್ಟು 21 ಪಂದ್ಯಗಳು ನಡೆಯಲಿವೆ).

ಹಂತ 4: ನಾಕೌಟ್ ರೌಂಡ್:

ಸೂಪರ್ 7 ಹಂತದ ಅಂತ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

  • ಸೆಮಿಫೈನಲ್ 1: ಸೂಪರ್ 7 ಅಂಕಪಟ್ಟಿಯಲ್ಲಿ ಮೊದಲ ಸ್ಥಾನ (ನಂ.1) ಪಡೆದ ತಂಡವು ನಾಲ್ಕನೇ ಸ್ಥಾನ (ನಂ.4) ಪಡೆದ ತಂಡದ ವಿರುದ್ಧ ಸೆಣಸಾಡಲಿದೆ.
  • ಸೆಮಿಫೈನಲ್ 2: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ (ನಂ.2) ಪಡೆದ ತಂಡವು ಮೂರನೇ ಸ್ಥಾನ (ನಂ.3) ಪಡೆದ ತಂಡದ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: CWG 2026: ಒಂದೇ ದಿನ 6 ಪದಕಗಳನ್ನು ಗೆದ್ದ ಭಾರತೀಯರು!

ಇನ್ನು ಸೆಮಿಫೈನಲ್​ಗಳಲ್ಲಿ ಗೆಲ್ಲುವ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

Source link

ಚಿತ್ರರಂಗದಲ್ಲಿ ನಾಯಕನಾಗಿ ಹತ್ತು ವರ್ಷ; ವಿಜಯ್ ದೇವರಕೊಂಡ ಭಾವುಕ ಪೋಸ್ಟ್ ವೈರಲ್ – Kannada News | Something Feels Very Heavy Vijay Deverakonda Pens Emotional Note As He Completes 10 Years As An Actor

ಚಿತ್ರರಂಗದಲ್ಲಿ ಹತ್ತು ವರ್ಷಗಳನ್ನು ಪೂರೈಸುವುದು ಸಾಮಾನ್ಯ ವಿಷಯವಲ್ಲ. ಸದ್ಯ ಹಲವು ನಿರೀಕ್ಷಿತ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಜಯ್ ದೇವರಕೊಂಡ ತಮ್ಮ ಸಿನಿಮಾ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಅವರ ನಾಯಕ ನಟನಾಗಿ ನಟಿಸಿದ ಮೊದಲ ಹಿಟ್ ಸಿನಿಮಾ ‘ಪೆಳ್ಳಿ ಚೂಪುಲು’ ಬಿಡುಗಡೆಯಾಗಿ ಹತ್ತು ವರ್ಷ ಸಂದಿದೆ. ಈ ವಿಶೇಷ ಸಂದರ್ಭದಲ್ಲಿ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ಇಡೀ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಹತ್ತು ವರ್ಷಗಳ ಯಶಸ್ವಿ ಜರ್ನಿಗೆ ಭಾವುಕರಾದ ವಿಜಯ್

‘ಪೆಳ್ಳಿ ಚೂಪುಲು’ ಚಿತ್ರದ ಶೂಟಿಂಗ್ ದಿನಗಳ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಹತ್ತು ವರ್ಷಗಳು ಕಳೆದು ಹೋಗಿರುವುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಪ್ರೇಕ್ಷಕರು ಅಂದು ಚಿತ್ರಮಂದಿರದಲ್ಲಿ ತೋರಿದ ಪ್ರೀತಿ ಇಂದಿಗೂ ನಮ್ಮನ್ನು ಒಂದುಗೂಡಿಸಿದೆ. ಈ ಸುದೀರ್ಘ ಪಯಣ ಮನಸ್ಸಿಗೆ ಭಾವುಕತೆ ತಂದಿದೆ ಎಂದು ವಿಜಯ್ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಸಿನಿಮಾ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿತ್ತು.

ನಿರ್ದೇಶಕ ತರುಣ್ ಭಾಸ್ಕರ್ ನೆನೆದ ನಟ

ಅಂದಿನ ದಿನಗಳು ಒಬ್ಬ ಯುವಕನ ಕನಸಿಗೆ ಶಕ್ತಿ ನೀಡಿದ್ದವು ಎಂದು ವಿಜಯ್ ನೆನಪಿಸಿಕೊಂಡಿದ್ದಾರೆ. ತೆಲುಗು ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ವಿಶೇಷವಾಗಿ ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಅವರನ್ನು ವಿಜಯ್ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತರುಣ್ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ ಎಂದು ಅವರು ಹೇಳಿದ್ದಾರೆ. ಹತ್ತು ವರ್ಷಗಳ ಹಿಂದೆ ಇದ್ದ ಮುಗ್ಧತೆ ಮತ್ತು ಅತಿಯಾದ ಸ್ವಾತಂತ್ರ್ಯ ಈಗ ಇಲ್ಲ ಎಂದು ವಿಜಯ್ ಒಪ್ಪಿಕೊಂಡಿದ್ದಾರೆ. ಈಗ ಹೆಗಲ ಮೇಲೆ ಜವಾಬ್ದಾರಿಯ ಭಾರ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯ್ ದೇವರಕೊಂಡ ಮುಂದಿನ ಸಿನಿಮಾಗಳು

ವಿಜಯ್ ದೇವರಕೊಂಡ ವೃತ್ತಿಜೀವನ ‘ನುವ್ವಿಲಾ’ ಮತ್ತು ‘ಯೆವಡೆ ಸುಬ್ರಹ್ಮಣ್ಯಂ’ ಚಿತ್ರಗಳ ಮೂಲಕ ಆರಂಭವಾಗಿತ್ತು. ಆದರೆ ‘ಪೆಳ್ಳಿ ಚೂಪುಲು’ ಚಿತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಆ ಬಳಿಕ ಬಂದ ‘ಅರ್ಜುನ್ ರೆಡ್ಡಿ’ ಮತ್ತು ‘ಗೀತ ಗೋವಿಂದಂ’ ಚಿತ್ರಗಳು ಅವರ ಸ್ಟಾರ್‌ಡಮ್ ಬದಲಾಯಿಸಿದವು. ಸದ್ಯ ಅವರು ಕೀರ್ತಿ ಸುರೇಶ್ ಜೊತೆ ‘ರೌಡಿ ಜನಾರ್ದನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ‘ರಣಬಾಲಿ’ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಶೌರ್ಯುವ್ ಜೊತೆಗೂ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

SEO Toolkit
English Title

Source link

ಅಣ್ಣನ ಮಗನ ಸಿನಿಮಾ ಬೆಂಬಲಕ್ಕೆ ನಿಲ್ಲದ ಮಹೇಶ್ ಬಾಬು; ಅಭಿಮಾನಿಗಳ ಬೇಸರ – Kannada News | Mahesh Babu Prioritizes Stardom Over Family Tollywood Slams Actor for Skipping Nephew Film Event

ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಸದ್ಯ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಸಿನಿಮಾದಿಂದಾಗಿ ಚರ್ಚೆಯಲ್ಲಿಲ್ಲ. ಬದಲಿಗೆ ತಮ್ಮದೇ ಕುಟುಂಬದ ನಟನಿಗೆ ಬೆಂಬಲ ನೀಡದ ಕಾರಣಕ್ಕೆ ಟೀಕೆಗೆ ಒಳಗಾಗಿದ್ದಾರೆ. ಮಹೇಶ್ ಬಾಬು ಅವರ ಈ ನಡವಳಿಕೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸ್ಟಾರ್‌ಡಮ್ ಹಾಗೂ ಸಂಬಂಧಗಳ ನಡುವಿನ ಲೆಕ್ಕಾಚಾರದ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.

ಸೋದರಳಿಯನ ಚಿತ್ರಕ್ಕೆ ಸಿಗದ ಸ್ಟಾರ್ ಬೆಂಬಲ

ಮಹೇಶ್ ಬಾಬು ಅವರ ಸ್ವಂತ ಅಣ್ಣ ದಿವಂಗತ ರಮೇಶ್ ಬಾಬು ಅವರ ಮಗ ಜಯ ಕೃಷ್ಣ ಘಟ್ಟಮನೇನಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಚೊಚ್ಚಲ ಸಿನಿಮಾ ‘ಶ್ರೀನಿವಾಸ ಮಂಗಾಪುರಂ’ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹೇಶ್ ಬಾಬು ತಮ್ಮ ಅಣ್ಣನ ಮಗನ ಸಿನಿಮಾಗೆ ಬೆಂಬಲವಾಗಿ ನಿಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಹೇಶ್ ಬಾಬು ಕೇವಲ ಒಂದು ವಿಡಿಯೋ ಹಾಗೂ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಅವರು ಚಿತ್ರದ ಪ್ರಿ-ರಿಲೀಸ್ ಈವೆಂಟ್‌ಗೆ ಗೈರಾಗಿದ್ದು ಸಿನಿಮಾದ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ.

ಚಿರು ಉದಾರತೆ ಮತ್ತು ಮಹೇಶ್ ಬಾಬು ಲೆಕ್ಕಾಚಾರ

ಮಹೇಶ್ ಬಾಬು ಅವರ ಆರಂಭಿಕ ವೃತ್ತಿಜೀವನಕ್ಕೆ ಅಣ್ಣ ರಮೇಶ್ ಬಾಬು ಸಾಕಷ್ಟು ಹಣ ಖರ್ಚು ಮಾಡಿದ್ದರು. ಅಣ್ಣನ ಮಗನಿಗೆ ಮಹೇಶ್ ಸೂಕ್ತ ಬೆಂಬಲ ನೀಡದಿರುವುದು ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರರಂಗದಲ್ಲಿ ಈಗ ಎಲ್ಲವೂ ಕಮರ್ಷಿಯಲ್ ಮತ್ತು ಲೆಕ್ಕಾಚಾರದ ಮಯವಾಗಿದೆ. ಇದಕ್ಕೆ ವಿರುದ್ಧವಾಗಿ ಮೆಗಾಸ್ಟಾರ್ ಚಿರಂಜೀವಿ, ಯುವ ನಟ ಕಿರಣ್ ಚಿತ್ರದ ಈವೆಂಟ್‌ಗೆ ಹೋಗಿ ದೊಡ್ಡತನ ಮೆರೆದಿದ್ದರು. ಚಿರಂಜೀವಿ ತಮ್ಮ ಕುಟುಂಬದ ಪ್ರತಿಯೊಬ್ಬ ಹೀರೋನ ಮೊದಲ ಚಿತ್ರಕ್ಕೂ ಬೆಂಬಲವಾಗಿ ನಿಂತಿದ್ದಾರೆ. ಆದರೆ ಮಹೇಶ್ ಬಾಬು ಸಣ್ಣ ಸಿನಿಮಾಗಳಿಂದ ದೂರ ಉಳಿಯುತ್ತಿರುವುದು ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಶ್ರೀರಾಮನ ಪಾತ್ರದಲ್ಲಿ ಮಹೇಶ್ ಬಾಬು, ಲೀಕ್ ಆಯ್ತೆ ‘ವಾರಣಾಸಿ’ ಲುಕ್

ರಾಜಮೌಳಿ ಸಿನಿಮಾದ ನೆಪ

ಮಹೇಶ್ ಬಾಬು ಸದ್ಯ ರಾಜಮೌಳಿ ಅವರ ‘ವಾರಣಾಸಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ಅವರು ಈವೆಂಟ್‌ಗೆ ಬಂದಿಲ್ಲ ಎನ್ನಲಾಗುತ್ತಿದೆ. ಆದರೆ ‘ಆರ್‌ಆರ್‌ಆರ್’ ಶೂಟಿಂಗ್ ಸಮಯದಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ‘ಶ್ರೀನಿವಾಸ ಮಂಗಾಪುರಂ’ ಬಿಡುಗಡೆಯ ಹಿಂದಿನ ದಿನ ಮಹೇಶ್ ಬಾಬು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಜೊತೆ ಎಎಂಬಿ ಸಿನಿಮಾಸ್‌ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಆ. 2ಕ್ಕೆ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್ – Kannada News | Zee Kannada Dance Karnataka Dance Super Mom Auditions in Bengaluru on August 2

ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋಗಳು ಬಂದು ಹೋಗಿವೆ. ಎಲ್ಲಾ ರಿಯಾಲಿಟಿ ಶೋಗಳು ಭಿನ್ನವಾಗಿವೆ. ಬಹುತೇಕ ರಿಯಾಲಿಟಿ ಶೋಗಳಲ್ಲಿ ಯುವ ಜನತೆಗೆ ಅವಕಾಶ ಸಿಗುತ್ತದೆ. ಈಗ ಪ್ರಮುಖ ರಿಯಾಲಿಟಿ ಶೋಗಳಲ್ಲೊಂದಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇದೀಗ ತಾಯಂದಿರಿಗಾಗಿ ವಿಶೇಷ ಸರಣಿಯನ್ನು ಆರಂಭಿಸುತ್ತಿದ್ದು, ಇದರ ಮೊದಲ ಹಂತದ ಆಡಿಷನ್ ಆಗಸ್ಟ್ 2ರ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. ಆಸಕ್ತಿ ಇರುವವರು ಇದರಲ್ಲಿ ಭಾಗವಹಿಸಬಹುದು.

ನೃತ್ಯದಲ್ಲಿ ಆಸಕ್ತಿ ಹೊಂದಿರುವ ಹಾಗೂ ಉತ್ತಮವಾಗಿ ಹೆಜ್ಜೆ ಹಾಕಬಲ್ಲ ಅಮ್ಮಂದಿರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಶೋ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ. ಗೃಹಿಣಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಸೇರಿದಂತೆ ಅರ್ಹ ತಾಯಂದಿರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ನಿತ್ಯ ಮಾಡುವ ಕಾಯಕವನ್ನೇ ಮಾಡುವ ಬದಲು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಇದು ಒಳ್ಳೆಯ ಅವಕಾಶ. ಬೆಂಗಳೂರು ಸೇರಿದಂತೆ ಉಳಿದ ಆಡಿಷನ್ ವಿವರ ಸೋಶಿಯಲ್ ಮೀಡಿಯಾ ಪೋಸ್ಟ್​ನಲ್ಲಿದೆ.

ಆಡಿಷನ್ ನಡೆಯುವ ಸ್ಥಳ ಮತ್ತು ಸಮಯ:

ಆಗಸ್ಟ್ 2ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಉತ್ತರಹಳ್ಳಿ ಹೋಬಳಿ, ಚಿಕ್ಕಲಸಂದ್ರದ ಹನುಮಗಿರಿ ಲೇಔಟ್‌ನಲ್ಲಿರುವ ಮಧು ಆರ್ಟ್ಸ್ ಸ್ಟುಡಿಯೋದಲ್ಲಿ (ಅಬ್ಬಯ್ಯ ನಾಯ್ಡು ಸ್ಟುಡಿಯೋ) ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: ಅಮ್ಮಂದಿರಿಗೆ ಸುವರ್ಣಾವಕಾಶ; ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್   ಸೂಪರ್ ಮಾಮ್

ಭಾಗವಹಿಸುವವರಿಗೆ ಸೂಚನೆಗಳು:

ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಬಯಸುವ ಸ್ಪರ್ಧಿಗಳು ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ವಿಳಾಸದ ಪುರಾವೆಯ ಜೆರಾಕ್ಸ್ ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ. ಈ ಆಡಿಷನ್ ಸಂಪೂರ್ಣ ಉಚಿತವಾಗಿದ್ದು, ಭಾಗವಹಿಸಲು ಜೀ ಕನ್ನಡ ವಾಹಿನಿಯು ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CWG 2026: ಒಂದೇ ದಿನ 6 ಪದಕಗಳನ್ನು ಗೆದ್ದ ಭಾರತೀಯರು! – Kannada News | CWG 2026: Indians Clinch 6 Medals In A Single Day

ಸ್ಕಾಟ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026 ರ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಭೂತಪೂರ್ವ ಪ್ರದರ್ಶನ ಮುಂದುವರೆಸಿದ್ದಾರೆ. ಜುಲೈ 31ರ ಶುಕ್ರವಾರದ ದಿನವು ಭಾರತೀಯ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ದಿನಗಳಲ್ಲಿ ಒಂದಾಗಿ ದಾಖಲಾಗಿದೆ. ಜೂಡೋ ಮತ್ತು ಅಥ್ಲೆಟಿಕ್ಸ್‌ನಲ್ಲಿ ಕಮಾಲ್ ಮಾಡಿದ ಭಾರತೀಯರು , ಒಂದೇ ದಿನ 2 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪದಕಗಳ ವಿವರ ಈ ಕೆಳಗಿನಂತಿದೆ…

ಅಸ್ಮಿತಾ ಡೇ (ಚಿನ್ನ – ಜೂಡೋ): ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಹೆಡಿ ಕ್ವಾಚ್ ಅವರನ್ನು ಸೋಲಿಸಿ ಅಸ್ಮಿತಾ ಡೇ ಕಾಮನ್‌ವೆಲ್ತ್ ಗೇಮ್ಸ್ ಜೂಡೋದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.

ಹರ್ಷ್ ಸಿಂಗ್ (ಚಿನ್ನ – ಜೂಡೋ): ಪುರುಷರ 60 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು ಸೋಲಿಸಿ ಹರ್ಷ್ ಸಿಂಗ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಜೂಡೋ ಆಟಗಾರ ಎನಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾ (ಬೆಳ್ಳಿ – ಜಾವೆಲಿನ್ ಥ್ರೋ): ಪುರುಷರ ಜಾವೆಲಿನ್ ಫೈನಲ್‌ನಲ್ಲಿ 85.83 ಮೀಟರ್ ದೂರ ಎಸೆದು ನೀರಜ್ ಚೋಪ್ರಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಯಾಮಿನಿ ಮೌರ್ಯ (ಬೆಳ್ಳಿ – ಜೂಡೋ): ಮಹಿಳೆಯರ 57 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್‌ನ ಅಸೆಲ್ಯಾ ಟೋಪ್ರಾಕ್ ವಿರುದ್ಧ ಕಠಿಣ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಾಮಿನಿ ಮೌರ್ಯ ಯಶಸ್ವಿಯಾಗಿದ್ದಾರೆ.

ಯಶ್ ವೀರ್ ಸಿಂಗ್ (ಕಂಚು – ಜಾವೆಲಿನ್ ಥ್ರೋ): ಜಾವೆಲಿನ್ ಫೈನಲ್‌ನಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ 85.41 ಮೀಟರ್ ಎಸೆದು ಯಶ್ ವೀರ್ ಸಿಂಗ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ತೇಜಸ್ವಿನ್ ಶಂಕರ್ (ಕಂಚು – ಡೆಕಾಥ್ಲಾನ್): ಡೆಕಾಥ್ಲಾನ್ ಸ್ಪರ್ಧೆಯಲ್ಲಿ 7,976 ಅಂಕಗಳನ್ನು ಗಳಿಸಿ ಕಾಮನ್‌ವೆಲ್ತ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಡೆಕಾಥ್ಲಾನ್ ಪದಕ ತಂದುಕೊಟ್ಟ ಕೀರ್ತಿಯನ್ನು ತೇಜಸ್ವಿನ್ ಶಂಕರ್ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ಈ ಆರು ಪದಕಗಳೊಂದಿಗೆ ಭಾರತ ಕಾಮನ್​ವೆಲ್ತ್ ಗೇಮ್ಸ್ ಮೆಡಲ್​ ಲಿಸ್ಟ್​ನಲ್ಲಿ 10ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇಂದು ಮತ್ತು ನಾಳೆ ನಡೆಯಲಿರುವ ಸ್ಪರ್ಧೆಗಳ ಮೂಲಕ ಭಾರತೀಯರು ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಈ ಮೂಲಕ ಟಾಪ್-10 ನಲ್ಲೇ ಉಳಿದುಕೊಳ್ಳುವ ನಿರೀಕ್ಷೆಯಿದೆ.

ಪದಕ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ (ಜುಲೈ 31ರ ತನಕ):

ಕ್ರ.ಸಂ. ಕ್ರೀಡಾಪಟು ಕ್ರೀಡೆ  ವಿಭಾಗ  ಪದಕ 
1 ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್ ಮಹಿಳೆಯರ 48 ಕೆಜಿ 🥇 ಚಿನ್ನ
2 ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪುಟ್ F57 🥇 ಚಿನ್ನ
3 ದಿಲೀಪ್ ಮಹಾದು ಗಾವಿತ್ ಪ್ಯಾರಾ ಅಥ್ಲೆಟಿಕ್ಸ್ ಪುರುಷರ 100 ಮೀಟರ್ T47 🥇 ಚಿನ್ನ
4 ಅಸ್ಮಿತಾ ಡೇ ಜೂಡೋ ಮಹಿಳೆಯರ 48 ಕೆಜಿ 🥇 ಚಿನ್ನ
5 ಹರ್ಷ್ ಸಿಂಗ್ ಜೂಡೋ ಪುರುಷರ 60 ಕೆಜಿ 🥇 ಚಿನ್ನ
6 ರಿಷಿಕಾಂತ ಸಿಂಗ್ ವೇಟ್‌ಲಿಫ್ಟಿಂಗ್ ಪುರುಷರ 60 ಕೆಜಿ 🥈 ಬೆಳ್ಳಿ
7 ರಾಜಾ ಮುತ್ತುಪಾಂಡಿ ವೇಟ್‌ಲಿಫ್ಟಿಂಗ್ ಪುರುಷರ 65 ಕೆಜಿ 🥈 ಬೆಳ್ಳಿ
8 ಜ್ಞಾನೇಶ್ವರ ಯಾದವ್ ವೇಟ್‌ಲಿಫ್ಟಿಂಗ್ ಮಹಿಳೆಯರ 53 ಕೆಜಿ 🥈 ಬೆಳ್ಳಿ
9 ವಲ್ಲೂರಿ ಅಜಯ್ ಬಾಬು ವೇಟ್‌ಲಿಫ್ಟಿಂಗ್ ಪುರುಷರ 79 ಕೆಜಿ 🥈 ಬೆಳ್ಳಿ
10 ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ ಮಹಿಳೆಯರ 69 ಕೆಜಿ 🥈 ಬೆಳ್ಳಿ
11 ಲವ್‌ಪ್ರೀತ್ ಸಿಂಗ್ ವೇಟ್‌ಲಿಫ್ಟಿಂಗ್ ಪುರುಷರ +110 ಕೆಜಿ 🥈 ಬೆಳ್ಳಿ
12 ಮೊಹಮ್ಮದ್ ಬಾಸಿಲ್ ಪ್ಯಾರಾ ಅಥ್ಲೆಟಿಕ್ಸ್ ಪುರುಷರ 100 ಮೀಟರ್ T47 🥈 ಬೆಳ್ಳಿ
13 ಸರ್ವೇಶ್ ಅನಿಲ್ ಕುಶಾರೆ ಅಥ್ಲೆಟಿಕ್ಸ್ ಪುರುಷರ ಹೈ ಜಂಪ್ 🥈 ಬೆಳ್ಳಿ
14 ಮುರಳಿ ಶ್ರೀಶಂಕರ್ ಅಥ್ಲೆಟಿಕ್ಸ್ ಪುರುಷರ ಲಾಂಗ್ ಜಂಪ್ 🥈 ಬೆಳ್ಳಿ
15 ಗುಲ್ವೀರ್ ಸಿಂಗ್ ಅಥ್ಲೆಟಿಕ್ಸ್ ಪುರುಷರ 10,000 ಮೀಟರ್ ಓಟ 🥈 ಬೆಳ್ಳಿ
16 ನೀರಜ್ ಚೋಪ್ರಾ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಥ್ರೋ 🥈 ಬೆಳ್ಳಿ
17 ಯಾಮಿನಿ ಮೌರ್ಯ ಜೂಡೋ ಮಹಿಳೆಯರ 57 ಕೆಜಿ 🥈 ಬೆಳ್ಳಿ
18 ಝಂಡು ಕುಮಾರ್ ಪ್ಯಾರಾ ಪವರ್‌ಲಿಫ್ಟಿಂಗ್ ಪುರುಷರ ಹೆವಿವೇಟ್ 🥉 ಕಂಚು
19 ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ ಮಹಿಳೆಯರ 58 ಕೆಜಿ 🥉 ಕಂಚು
20 ಶಿಲ್ಪಾ ಕೆ. ಶೈಲಾ ಪ್ಯಾರಾ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪುಟ್ F57 🥉 ಕಂಚು
21 ಸೀಮಾ ಕಲಿರಾಮ್ನಾ ಅಥ್ಲೆಟಿಕ್ಸ್ ಮಹಿಳೆಯರ ಡಿಸ್ಕಸ್ ಥ್ರೋ 🥉 ಕಂಚು
22 ತೇಜಸ್ವಿನ್ ಶಂಕರ್ ಅಥ್ಲೆಟಿಕ್ಸ್ ಪುರುಷರ ಡೆಕಾಥ್ಲಾನ್ 🥉 ಕಂಚು
23 ಯಶ್ ವೀರ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಥ್ರೋ 🥉 ಕಂಚು

Source link

Tradition Meets Science: ಹೆರಿಗೆಯಾದ ನಂತರ ಹಾಲುಣಿಸುವ ತಾಯಿ ಪೊರಕೆ ಏಕೆ ಮುಟ್ಟಬಾರದು? ಇಲ್ಲಿದೆ ಸಂಪ್ರದಾಯದ ಹಿಂದಿನ ರಹಸ್ಯ! – Kannada News | Why New Mothers Shouldn’t Touch a Broom: The Surprising Health Secrets Behind the Tradition

ಹಾಲುಣಿಸುವ ತಾಯಿ ಪೊರಕೆ ಏಕೆ ಮುಟ್ಟಬಾರದು?

ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆಯ ನಂತರದ ದಿನಗಳವರೆಗೆ, ನಮ್ಮ ಹಿರಿಯರು ಅನೇಕ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸುತ್ತಾರೆ. ಅಂತಹ ನಿಯಮಗಳಲ್ಲಿ ಪ್ರಮುಖವಾದದ್ದು ಹೆರಿಗೆಯ ನಂತರ ಮಹಿಳೆಯರು ಪೊರಕೆಯನ್ನು ಮುಟ್ಟಬಾರದು ಅಥವಾ ಮನೆ ಗುಡಿಸಬಾರದು ಎಂಬುದು. ಮೇಲ್ನೋಟಕ್ಕೆ ಇದು ಕೇವಲ ಮೂಢನಂಬಿಕೆಯಂತೆ ಕಂಡರೂ, ಇದರ ಹಿಂದೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ರಕ್ಷಿಸುವ ಆಳವಾದ ಆಯುರ್ವೇದಿಕ ಹಾಗೂ ವೈಜ್ಞಾನಿಕ ಕಾರಣಗಳಿವೆ. ನವಜಾತ ಶಿಶುವಿಗೆ ಜನ್ಮ ನೀಡಿದ ನಂತರ ಮಹಿಳೆಯ ದೇಹ ಮತ್ತು ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ನೀಡುವುದು ಅತ್ಯಗತ್ಯವಾಗಿದೆ.

ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳು:

ಭಾರತೀಯ ಸಂಸ್ಕೃತಿಯಲ್ಲಿ ಪೊರಕೆಯನ್ನು ಕೇವಲ ಕಸ ಗುಡಿಸುವ ವಸ್ತುವಾಗಿ ನೋಡದೆ, ಮನೆಗೆ ಐಶ್ವರ್ಯ ತರುವ ಲಕ್ಷ್ಮಿ ದೇವಿಯ ಸಂಕೇತ ಹಾಗೂ ಸ್ವಚ್ಛತೆಯ ಕುರುಹಾಗಿ ಪೂಜಿಸಲಾಗುತ್ತದೆ. ಹೆರಿಗೆಯ ಸಮಯದಲ್ಲಿ ತಾಯಿಯ ದೇಹದಿಂದ ಅತಿಯಾದ ಶ್ರಮ ಮತ್ತು ರಕ್ತಸ್ರಾವವಾಗುವುದರಿಂದ, ಆಧ್ಯಾತ್ಮಿಕವಾಗಿ ಶಕ್ತಿಯ ಅಸಮತೋಲನ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಬಾಣಂತಿ ಮನೆ ಗುಡಿಸುವುದರಿಂದ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹಿರಿಯರು ನಂಬುತ್ತಿದ್ದರು. ಇದಲ್ಲದೆ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನವಜಾತ ಶಿಶು ಮತ್ತು ತಾಯಿಯನ್ನು ದುಷ್ಟಶಕ್ತಿಗಳಿಂದ ರಕ್ಷಿಸುವ ಸಂಕೇತವಾಗಿ ಹಾಸಿಗೆಯ ಕೆಳಗೆ ಪೊರಕೆಯನ್ನು ಇಡುವ ಪದ್ಧತಿಯೂ ಚಾಲ್ತಿಯಲ್ಲಿದೆ.

ಆಯುರ್ವೇದದ ದೃಷ್ಟಿಕೋನ ಮತ್ತು ದೇಹದ ಆರೈಕೆ:

ಆಯುರ್ವೇದ ಶಾಸ್ತ್ರದಲ್ಲಿ ಹೆರಿಗೆಯ ನಂತರದ ಆರೈಕೆಗೆ ಅತ್ಯಂತ ಪ್ರಮುಖ ಸ್ಥಾನ ನೀಡಲಾಗಿದೆ. ಆಯುರ್ವೇದದ ಪ್ರಕಾರ ಹೆರಿಗೆಯ ನಂತರ ತಾಯಿಯ ದೇಹದಲ್ಲಿ ‘ವಾತ ದೋಷ’ ಹೆಚ್ಚಿರುತ್ತದೆ ಮತ್ತು ದೇಹದ ಭಾಗಗಳು ಸಡಿಲಗೊಂಡಿರುತ್ತವೆ. ಆದ್ದರಿಂದ ಹೆರಿಗೆಯ ನಂತರದ 40 ರಿಂದ 50 ದಿನಗಳವರೆಗೆ ತಾಯಿಗೆ ಸಂಪೂರ್ಣ ವಿಶ್ರಾಂತಿ ಕಡ್ಡಾಯವಾಗಿದೆ. ಈ ಸಮಯದಲ್ಲಿ ಪೊರಕೆಯಿಂದ ಮನೆ ಗುಡಿಸುವುದು, ಮುಂದೆ ಬಾಗುವುದು ಮತ್ತು ತೂಕದ ವಸ್ತುಗಳನ್ನು ಎತ್ತುವುದರಿಂದ ಗರ್ಭಾಶಯದ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಇದು ದೀರ್ಘಕಾಲದ ಬೆನ್ನು ನೋವು, ಹೆರಿಗೆಯ ನಂತರದ ಅತಿಯಾದ ರಕ್ತಸ್ರಾವ ಹಾಗೂ ಹರ್ನಿಯಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಆಧುನಿಕ ವೈದ್ಯಕೀಯ ವಿಜ್ಞಾನದ ಸ್ಪಷ್ಟನೆ:

ಆಧುನಿಕ ವೈದ್ಯಕೀಯ ವಿಜ್ಞಾನ ಕೂಡ ಹೆರಿಗೆಯ ನಂತರದ ಮೊದಲ 4 ರಿಂದ 6 ವಾರಗಳ ಕಾಲ ಬಾಣಂತಿಯರು ಯಾವುದೇ ರೀತಿಯ ಕಠಿಣ ಮನೆಕೆಲಸಗಳನ್ನು ಮಾಡಬಾರದೆಂದು ಸ್ಪಷ್ಟವಾಗಿ ಸಲಹೆ ನೀಡುತ್ತದೆ. ಪೊರಕೆಗಳಲ್ಲಿ ಕೋಟಿಗಟ್ಟಲೆ ಕಣ್ಣಿಗೆ ಕಾಣದ ಧೂಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು (Fungus) ಇರುತ್ತವೆ. ಹೆರಿಗೆಯ ನಂತರ ತಾಯಿಯ ಗರ್ಭಾಶಯ ಮತ್ತು ಶಸ್ತ್ರಚಿಕಿತ್ಸೆಯ ಗಾಯಗಳು (Stitches) ಇನ್ನು ಸಂಪೂರ್ಣವಾಗಿ ಒಣಗಿರುವುದಿಲ್ಲ. ಇಂತಹ ಸೂಕ್ಷ್ಮ ಸಮಯದಲ್ಲಿ ಧೂಳು ಮತ್ತು ಕ್ರಿಮಿಗಳ ಸಂಪರ್ಕಕ್ಕೆ ಬಂದರೆ ತಾಯಿ ಹಾಗೂ ನವಜಾತ ಶಿಶುವಿಗೆ ತೀವ್ರ ತರಹದ ಸೋಂಕುಗಳು (Infections) ತಗಲುವ ಅಪಾಯವಿರುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮಾನಸಿಕ ಆರೋಗ್ಯ ಮತ್ತು ಎದೆ ಹಾಲಿನ ಉತ್ಪಾದನೆ:

ಹೆರಿಗೆಯ ನಂತರದ ದಿನಗಳಲ್ಲಿ ತಾಯಿಗೆ ಪೂರ್ಣ ವಿಶ್ರಾಂತಿ ಸಿಕ್ಕಾಗ ಮಾತ್ರ ಆಕೆಯ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದು ತಾಯಂದಿರಲ್ಲಿ ಕಂಡುಬರುವ ಹೆರಿಗೆಯ ನಂತರದ ಖಿನ್ನತೆಯನ್ನು (Postpartum Depression) ತಡೆಯಲು ಸಹಕಾರಿಯಾಗಿದೆ. ತಾಯಿ ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಶ್ರಾಂತಿಯಲ್ಲಿದ್ದಾಗ ಮಾತ್ರ ಮಗುವಿಗೆ ಅಗತ್ಯವಿರುವ ಎದೆಹಾಲು ಚೆನ್ನಾಗಿ ಉತ್ಪತ್ತಿಯಾಗುತ್ತದೆ. ಜೊತೆಗೆ, ಈ ಆರಂಭಿಕ ದಿನಗಳು ಬೇರೆ ಕೆಲಸಗಳ ಒತ್ತಡವಿಲ್ಲದೆ ತಾಯಿ ಮತ್ತು ಮಗುವಿನ ನಡುವೆ ಆಳವಾದ ಭಾವನಾತ್ಮಕ ಬಾಂಧವ್ಯ ಬೆಳೆಯಲು ಅತ್ಯಂತ ಸೂಕ್ತವಾದ ಸಮಯವಾಗಿದೆ.

ನಮ್ಮ ಹಿರಿಯರು ರೂಪಿಸಿದ ಪ್ರತಿಯೊಂದು ಆಚಾರ-ವಿಚಾರಗಳ ಹಿಂದೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ರಕ್ಷಿಸುವ ದೊಡ್ಡ ಕಾಳಜಿಯಿತ್ತು. ಹೆರಿಗೆಯ ನಂತರ ಪೊರಕೆ ಮುಟ್ಟದಿರುವುದು ಕೇವಲ ಒಂದು ಸಾಂಪ್ರದಾಯಿಕ ನಿಯಮವಲ್ಲ, ಬದಲಿಗೆ ಬಾಣಂತಿಗೆ ಬಲವಂತವಾಗಿ ಸಂಪೂರ್ಣ ವಿಶ್ರಾಂತಿ ನೀಡಲು ರೂಪಿಸಿದ ಒಂದು ಜಾಣತನದ ವ್ಯವಸ್ಥೆಯಾಗಿದೆ. ಆಧ್ಯಾತ್ಮಿಕ ನಂಬಿಕೆಗಳ ಗೌರವದೊಂದಿಗೆ ವೈದ್ಯಕೀಯ ಸಲಹೆಗಳನ್ನು ಪಾಲಿಸಿ ಬಾಣಂತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ, ಏಕೆಂದರೆ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವೂ ಆರೋಗ್ಯವಾಗಿರಲು ಸಾಧ್ಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:38 am, Sat, 1 August 26

Source link

PM Modi Mysuru Visit: ಇಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ – Kannada News | PM Modi Mysuru Visit Today: Vivek Smarak Inauguration and Traffic Restrictions

ಇಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಮೈಸೂರು, ಆಗಸ್ಟ್ 01: ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು (ಆ. 1) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ನಗರದಲ್ಲಿ ಸಂಭ್ರಮ ಹಾಗೂ ಬಿಗಿ ಭದ್ರತೆಯ ವಾತಾವರಣ ನಿರ್ಮಾಣವಾಗಿದೆ. 1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ನೆನಪಿನಲ್ಲಿ ನಿರ್ಮಿಸಲಾಗಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ (ವಿವೇಕ ಸ್ಮಾರಕ) ವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಧಾನಿಯವರ ಈ ಪ್ರಮುಖ ಭೇಟಿಯ ನೇತೃತ್ವಕ್ಕೆ ಮೈಸೂರು ಸಜ್ಜಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿದ್ದು, ಅವರ ಪ್ರವಾಸದ ವೇಳಾಪಟ್ಟಿ ಹೀಗಿದೆ:

  • ಮಧ್ಯಾಹ್ನ 2:55: ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಆಗಮಿಸಲಿದ್ದಾರೆ.
  • ಮಧ್ಯಾಹ್ನ 3:15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
  • ಮಧ್ಯಾಹ್ನ 3:25: ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
  • ಮಧ್ಯಾಹ್ನ 3:30 – ಸಂಜೆ 5:15: ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ ಹಾಗೂ ವಿವೇಕ ಸ್ಮಾರಕ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
  • ಸಂಜೆ 5:20: ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದಾರೆ.
  • ಸಂಜೆ 5:55: ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.

ಮೈಸೂರಿಗೆ ಸಿಎಂ ಆಗಮನ

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದರ ಜೊತೆಗೆ, ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಸ್ವಾಗತಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ ‘ನಿಂದನೆಯಿಂದ ಏನೂ ಪರಿಹಾರವಾಗಲ್ಲ’: ನೋಯ್ಡಾ ಮಹಿಳೆಯ ಹೇಳಿಕೆ ವಿವಾದದ ನಡುವೆ ತಡರಾತ್ರಿ ಮತ್ತೊಂದು ವಿಡಿಯೋ ಹಂಚಿಕೊಂಡ ಮೋದಿ

ಡಿ.ಕೆ. ಶಿವಕುಮಾರ್ ಅವರ ಇಂದಿನ ಮೈಸೂರು ಪ್ರವಾಸದ ಪೂರ್ಣ ವೇಳಾಪಟ್ಟಿ

  • ಬೆಳಿಗ್ಗೆ 10:45: ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ.
  • ಬೆಳಿಗ್ಗೆ 11:30: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ.
  • ಮಧ್ಯಾಹ್ನ 3:15: ನಗರದ ಓವಲ್ ಗ್ರೌಂಡ್ ಹೆಲಿಪ್ಯಾಡ್‌ನಲ್ಲಿ ಮೈಸೂರಿಗೆ ಆಗಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ.
  • ಮಧ್ಯಾಹ್ನ 3:30: ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಐತಿಹಾಸಿಕ ‘ವಿವೇಕ ಸ್ಮಾರಕ’ ಹಾಗೂ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾಗಿ.
  • ಸಂಜೆ 4:25: ರಾಮಕೃಷ್ಣ ವಿದ್ಯಾಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾಗಿ.
  • ಸಂಜೆ 6:00: ಪ್ರಧಾನಿಯವರ ಕಾರ್ಯಕ್ರಮಗಳ ಮುಕ್ತಾಯದ ನಂತರ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಪ್ರಯಾಣ.

ನಗರದಲ್ಲಿ ರಸ್ತೆ ಸಂಚಾರ ಬಂದ್; ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ:

ಬಂದ್ ಆಗುವ ರಸ್ತೆಗಳು: ಕೆ.ಆರ್.ಬಿ ರಸ್ತೆ (ಡಿಸಿ ಆಫೀಸ್‌ನಿಂದ ಏಕಲವ್ಯ ಸರ್ಕಲ್), ಬೋಗಾದಿ ರಸ್ತೆ (ಮುಡಾ ಜಂಕ್ಷನ್‌ನಿಂದ ಡಾ.ಪದ್ಮ ವೃತ್ತ), ಪಡುವಾರಹಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ಸರ್ಕಲ್, ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಹಾಗೂ ದಿವಾನ್ಸ್ ರಸ್ತೆಗಳು.
ಪರ್ಯಾಯ ಮಾರ್ಗಗಳು: ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವವರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಹಾಗೂ ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕು. ಅಗ್ರಹಾರ, ಜೆ.ಪಿ.ನಗರ ಕಡೆಯಿಂದ ಬಸ್ ನಿಲ್ದಾಣಕ್ಕೆ ತೆರಳುವವರು ಸಿದ್ದಪ್ಪ ಸ್ಕ್ವೇರ್, ಎಂ.ಜಿ.ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್‌.ರಸ್ತೆ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQ)

ಪ್ರಧಾನಿ ಮೋದಿ ಯಾವ ಸಮಯಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ: ಪ್ರಧಾನಿ ಮೋದಿ ಆಗಸ್ಟ್ 1ರ ಬೆಳಗ್ಗೆ 10.45ಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?

ಪ್ರಶ್ನೆ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಎಲ್ಲಿದೆ?
ಉತ್ತರ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಮೈಸೂರಿನಲ್ಲಿದೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version