ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ – Kannada News | PM Modi Mysuru Visit: Tight Security Arrangements in Place Ahead of Viveka Memorial Inauguration

ಮೈಸೂರು, ಆಗಸ್ಟ್ 1: ಸಾಂಸ್ಕೃತಿಕ ನಗರಿ ಮೈಸೂರು ಪ್ರಧಾನಿ ನರೇಂದ್ರ ಮೋದಿಯವರ ಆಗಮನಕ್ಕೆ ಸಜ್ಜಾಗಿದೆ. ರಾಮಕೃಷ್ಣ ಆಶ್ರಮದಲ್ಲಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಲು ಮೋದಿ ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ತಲುಪುವ ಪ್ರಧಾನಿ, ಅಲ್ಲಿಂದ ಸೇನಾ ಚಾಪರ್ ಮೂಲಕ ಓವಲ್ ಮೈದಾನಕ್ಕೆ ಬರಲಿದ್ದಾರೆ. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಓವಲ್ ಮೈದಾನದ ಸುತ್ತಮುತ್ತ, ರಾಮಕೃಷ್ಣ ಆಶ್ರಮದ ರಸ್ತೆಯುದ್ದಕ್ಕೂ ಮತ್ತು ಪ್ರಮುಖ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರ ನೇತೃತ್ವದಲ್ಲಿ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ ಒಬ್ಬ ಎಸ್‌ಪಿ, ಒಬ್ಬ ಕಮಿಷನರ್, ನಾಲ್ಕು ಅಡಿಷನಲ್ ಎಸ್‌ಪಿಗಳು, 18 ಇನ್ಸ್‌ಪೆಕ್ಟರ್‌ಗಳು, 40 ಸಬ್ ಇನ್ಸ್‌ಪೆಕ್ಟರ್‌ಗಳು, 550 ಪುರುಷ ಸಿಬ್ಬಂದಿ, 350 ಮಹಿಳಾ ಸಿಬ್ಬಂದಿ ಮತ್ತು 250 ಹೋಮ್ ಗಾರ್ಡ್‌ಗಳು ಸೇರಿದ್ದಾರೆ.

ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ವಿಐಪಿ, ವಿವಿಐಪಿ, ಶಾಸಕರು, ಸಚಿವರಂತಹ ಅನುಮತಿ ಹೊಂದಿದವರಿಗೆ ಮಾತ್ರ ಪ್ರವೇಶವಿರುತ್ತದೆ. ಉಳಿದ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೂಜೆ ಹೆಸರಿನಲ್ಲಿ ಆಂಧ್ರದ ಮಹಿಳೆಗೆ ₹2.5 ಕೋಟಿ ವಂಚನೆ: ದುಷ್ಟಶಕ್ತಿ ನೆಪದಲ್ಲಿ ಹಣ ಪಡೆದು ಎಸ್ಕೇಪ್! – Kannada News | Andhra Pradesh Woman Allegedly Cheated of Rs 2.5 Crore in Ritual Fraud in Bengaluru

ಬೆಂಗಳೂರು, ಆಗಸ್ಟ್ 1: ದುಷ್ಟಶಕ್ತಿ ನಿವಾರಣೆ ಹಾಗೂ ಪೂಜೆಯ ನೆಪದಲ್ಲಿ ಬೆಂಗಳೂರಿನ (Bengaluru) ಚಾಮರಾಜಪೇಟೆ ನಿವಾಸಿ ಮಹಿಳೆಯೊಬ್ಬರಿಂದ ಬರೋಬ್ಬರಿ 2.5 ಕೋಟಿ ರೂ. ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. 2.5 ಕೋಟಿ ರೂ. ನೀಡಿದರೆ 10 ಕೋಟಿ ರೂ. ಕೊಡಿಸುವುದಾಗಿ ನಂಬಿಸಿ ಹಣ ಪಡೆದ ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಮಗನ ಸಾವಿಗೆ ದುಷ್ಟಶಕ್ತಿಯೇ ಕಾರಣವೆಂದು ನಂಬಿಸಿ ಕೃತ್ಯ

ದೂರುದಾರ ಮಹಿಳೆ ಕುಮುದಾ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಕುಮುದಾ ಅವರ ಮನೆಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಮಗನಿಗೆ ಅನಾಹುತವಾಗಿದೆ ಆ ಘಟನೆ ಬಳಿಕ ಎಂದು ಆರೋಪಿಗಳು ನಂಬಿಸಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಕುಮುದಾ ಅವರಿಗೆ ಅಪ್ಸರ್ ಪಾಷಾ ಎಂಬಾತನನ್ನು ಬಾಬಾ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವ ನೆಪದಲ್ಲಿ ಆರಂಭದಲ್ಲಿ 8 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ.

2.5 ಕೋಟಿ ರೂ. ಕೊಟ್ಟರೆ 10 ಕೋಟಿ ರೂ. ನೀಡುವುದಾಗಿ ವಂಚನೆ

ನಂತರ ಆರೋಪಿಗಳು ಮತ್ತಷ್ಟು ಹಣ ನೀಡುವಂತೆ ಕುಮುದಾ ಅವರನ್ನು ನಂಬಿಸಿದ್ದಾರೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್‌ನಿಂದ 500 ಕೋಟಿ ರೂ. ಬರಲಿದೆ. ಆ ಹಣವನ್ನು ಪಡೆಯಲು ತಕ್ಷಣ ಹಣದ ಅಗತ್ಯವಿದೆ ಎಂದು ಹೇಳಿ, 2.5 ಕೋಟಿ ರೂ. ಸಾಲವಾಗಿ ನೀಡಿದರೆ ಬಳಿಕ 10 ಕೋಟಿ ರೂ. ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಮನೆ ಮಾರಾಟ ಮಾಡಿ ಆರೋಪಿಗಳಿಗೆ ಹಣ ನೀಡಿದ್ದ ಸಂತ್ರಸ್ತೆ

ಆರೋಪಿಗಳ ಮಾತನ್ನು ನಂಬಿದ ಕುಮುದಾ, ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಮನೆ ಮಾರಾಟದಿಂದ ಬಂದ ಹಣದಲ್ಲಿ 2.5 ಕೋಟಿ ರೂ.ಗಳನ್ನು ಆರೋಪಿಗಳಿಗೆ ನೀಡಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚನೆ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ

ಹಣವನ್ನು ವಾಪಸ್ ನೀಡುವಂತೆ ಕುಮುದಾ ಕೇಳಿದಾಗ ಆರೋಪಿಗಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ವಿವಿಧ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Medical courses: ಕೆಇಎ ವೈದ್ಯಕೀಯ ಪ್ರವೇಶಾತಿ; ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಆ.03 ಕೊನೆ ದಿನ – Kannada News | Karnataka NEET Counselling: KEA Updates State Merit List; Add Roll Number by August 3

ಬೆಂಗಳೂರು: ನೀಟ್ (NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದು ವೈದ್ಯಕೀಯ (MBBS), ದಂತವೈದ್ಯಕೀಯ (BDS) ಹಾಗೂ ಆಯುಷ್ (AYUSH) ಕೋರ್ಸ್‌ಗಳ ಪ್ರವೇಶಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಮುಖ ಸೂಚನೆಯೊಂದನ್ನು ನೀಡಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಸಿಇಟಿ (CET) ಅರ್ಜಿಯೊಂದಿಗೆ ನೀಟ್ ರೋಲ್ ನಂಬರ್ ಅನ್ನು ನಮೂದಿಸಲು ವೆಬ್‌ಸೈಟ್‌ನಲ್ಲಿ ಲಿಂಕ್ ಲಭ್ಯಗೊಳಿಸಲಾಗಿದೆ.

ಆಗಸ್ಟ್ 3ರೊಳಗೆ ರೋಲ್ ನಂಬರ್ ನಮೂದಿಸುವುದು ಕಡ್ಡಾಯ:

ಅರ್ಹ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ಯಾವುದೇ ತಪ್ಪುಗಳಿಲ್ಲದೆ ಅತ್ಯಂತ ನಿಖರವಾಗಿ ನಮೂದಿಸಬೇಕು. ರೋಲ್ ನಂಬರ್ ನಮೂದಿಸಿದ ನಂತರ, ಅಭ್ಯರ್ಥಿಗಳು ನವೀಕರಿಸಿದ ಅರ್ಜಿ (Updated Application Form) ಹಾಗೂ ಪರಿಶೀಲನಾ ಚೀಟಿಯನ್ನು (Verification Slip) ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 3 ಕೊನೆಯ ದಿನಾಂಕವಾಗಿದೆ. ಲಿಂಕ್ ಚಾಲನೆಯಾದ ಮೊದಲ ದಿನವೇ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ನೋಂದಾಯಿಸಿದ್ದಾರೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ವೆಬ್‌ಸೈಟ್‌ನಲ್ಲಿ ರಾಜ್ಯ ಮೆರಿಟ್ ಪಟ್ಟಿ ಪ್ರಕಟ:

ಮತ್ತೊಂದೆಡೆ, ರಾಜ್ಯ ಮೆರಿಟ್ ಪಟ್ಟಿ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಅರ್ಜಿ ವಿವರಗಳನ್ನು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಒಟ್ಟು 69,170 ಅರ್ಹ ಅಭ್ಯರ್ಥಿಗಳ ಅಂಕಗಳ ಪಟ್ಟಿಯನ್ನು ಮೆರಿಟ್ ಆಧಾರದಲ್ಲಿ (ಇಳಿಕೆ ಕ್ರಮದಲ್ಲಿ) ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಹೆಚ್. ತಿಳಿಸಿದ್ದಾರೆ.

ಆಲ್ ಇಂಡಿಯಾ ರ‍್ಯಾಂಕ್ 20 ಪಡೆದ ವಿದ್ಯಾರ್ಥಿಯೇ ರಾಜ್ಯಕ್ಕೆ ಪ್ರಥಮ:

ಈ ಬಾರಿಯ ರಾಜ್ಯ ಮೆರಿಟ್ ಪಟ್ಟಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ರ‍್ಯಾಂಕ್ (AIR 20) ಗಳಿಸಿರುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ತಕ್ಷಣವೇ KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:32 am, Sat, 1 August 26

Source link

ಇಬ್ಬರನ್ನು ಮುಂದಿಟ್ಟು ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ – Kannada News | IPL 2027: Delhi Capitals joined the race to acquire Hardik Pandya

ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್- 20 ಆರಂಭಕ್ಕೂ ಮುನ್ನವೇ ಹೊಸ ಸಂಚಲನ ಶುರುವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮದಾಗಿಸಿಕೊಳ್ಳಲು ಈಗ ಡೆಲ್ಲಿ ಕ್ಯಾಪಿಟಲ್ಸ್ (DC) ಭರ್ಜರಿ ಆಫರ್‌ನೊಂದಿಗೆ ರೇಸ್‌ಗೆ ಧುಮುಕಿದೆ. ಪ್ರಮುಖ ಮಾಧ್ಯಮಗಳ ವರದಿಯ ಪ್ರಕಾರ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ‘ಪ್ಲೇಯರ್ ಸ್ವಾಪ್’ (ಆಟಗಾರರ ಅದಲು-ಬದಲು) ಒಪ್ಪಂದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್  ‘ಮೆಗಾ ಆಫರ್’!

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಸೆಳೆಯಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್‌ಗೆ ಇಬ್ಬರು ಸ್ಟಾರ್ ಆಟಗಾರರು ಹಾಗೂ ಭಾರಿ ನಗದು ಒಳಗೊಂಡ ಮೆಗಾ ಆಫರ್ ನೀಡಿದೆ. ಆ ಆಫರ್ ಎಂದರೆ…

  • ಅಕ್ಷರ್ ಪಟೇಲ್ (ಸ್ಪಿನ್ ಆಲ್‌ರೌಂಡರ್)
  • ಪೃಥ್ವಿ ಶಾ (ಸ್ಫೋಟಕ ಆರಂಭಿಕ ಆಟಗಾರ)
  • ₹10 ಕೋಟಿ ಹೆಚ್ಚುವರಿ ನಗದು

ಅಂದರೆ ಅಕ್ಷರ್ ಪಟೇಲ್ ಹಾಗೂ ಪೃಥ್ವಿ ಶಾ ಅವರನ್ನು ನೀಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಿಳಿಸಿದೆ. ಇದರ ಜೊತೆಗೆ 10 ಕೋಟಿ ರೂ. ಹೆಚ್ಚುವರಿ ನಗದನ್ನು ಪಾವತಿಸುವುದಾಗಿ ಹೇಳಿಕೊಂಡಿದೆ.

ಮುಂಬೈ ಇಂಡಿಯನ್ಸ್ ಡಿಮ್ಯಾಂಡ್!

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಆಫರ್​ ಅನ್ನು ಮುಂಬೈ ಇಂಡಿಯನ್ಸ್ ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಬದಲಾಗಿ ಪೃಥ್ವಿ ಶಾ ಬದಲಿಗೆ ಯುವ ಆಟಗಾರ ಸಮೀರ್ ರಿಝ್ವಿ ಅವರನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಪೃಥ್ವಿ ಶಾ ಕಳೆದ ಎರಡು ಸೀಸನ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡದ ಕಾರಣ ಅವರ ಬಗ್ಗೆ ಮುಂಬೈ ಇಂಡಿಯನ್ಸ್​ ಆಸಕ್ತಿ ಹೊಂದಿಲ್ಲ. ಅದರ ಬದಲಿಗೆ 2026ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿಗ್-ಹಿಟ್ಟರ್ ಸಮೀರ್ ರಿಝ್ವಿ ಹಾಗೂ ಅಕ್ಷರ್ ಪಟೇಲ್ ಜೊತೆ ನೀಡಿದರೆ ಟ್ರೇಡ್ ಮಾಡಬಹುದು ಮುಂಬೈ ಇಂಡಿಯನ್ಸ್​ ತಿಳಿಸಿದೆ ಎನ್ನಲಾಗಿದೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯು ಸಮೀರ್ ರಿಝ್ವಿ ಅವರನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಹೀಗಾಗಿ ಈ ಟ್ರೇಡ್ ಪ್ರಕ್ರಿಯೆ ಏನಾಗಲಿದೆ ಎಂಬುದೇ ಸದ್ಯದ ಕುತೂಹಲ.

ರೇಸ್​ನಲ್ಲಿ CSK ಮತ್ತು KKR:

ಈ ಮೊದಲು ಹಾರ್ದಿಕ್ ಪಾಂಡ್ಯ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ತೆರೆಮರೆಯ ಪ್ರಯತ್ನ ನಡೆಸಿದ್ದರು. ಮುಂಬೈ ತಂಡವು ಸಿಎಸ್‌ಕೆಯಿಂದ ಶಿವಂ ದುಬೆ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಕೇಳಿತ್ತು. ಆದರೆ ಆರ್ಥಿಕ ಮೌಲ್ಯಮಾಪನ ಮತ್ತು ಹೆಚ್ಚುವರಿ ಹಣದ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಸಿಎಸ್‌ಕೆ ಜೊತೆಗಿನ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.

ಮತ್ತೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ನೇರ ನಗದು ಆಫರ್ ನೀಡಿತ್ತಾದರೂ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರಿಂಕು ಸಿಂಗ್ ಮತ್ತು ಕ್ಯಾಮರೋನ್ ಗ್ರೀನ್ ಅವರನ್ನು ಕೇಳಿದ್ದರಿಂದ ಮಾತುಕತೆ ಆರಂಭದಲ್ಲೇ ಮುರಿದುಬಿದ್ದಿದೆ. ಇದಾಗ್ಯೂ ಕೆಕೆಆರ್​ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊಸ ಯೋಜನೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ!

ಅಂದರೆ ಐಪಿಎಲ್ ಸೀಸನ್-20 ರಲ್ಲಿ ಹಾರ್ದಿಕ್ ಪಾಂಡ್ಯ ಹೊಸ ತಂಡದ ಪರ ಕಣಕ್ಕಿಳಿಯುವುದು ಖಚಿತ. ಆದರೆ ಅದು ಯಾವ ತಂಡದ ಪರ ಎಂಬುದೇ ಸದ್ಯ ಕುತೂಹಲ.

Source link

ITR Scam: ಐಟಿ ರಿಟರ್ನ್ ಸಲ್ಲಿಸುವಾಗ ಎಚ್ಚರ! ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ನಕಲಿ ಆದಾಯ ತೆರಿಗೆ ನೋಟಿಸ್ – Kannada News | Fake Income Tax Notices on WhatsApp Target ITR Filers: Malware Steals Banking Credentials

ಬೆಂಗಳೂರು, ಆಗಸ್ಟ್ 01: ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅವಧಿ ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ ಸೈಬರ್ ವಂಚಕರು ಸಕ್ರಿಯರಾಗಿದ್ದು, ತೆರಿಗೆದಾರರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್‌ನಲ್ಲಿ ನಕಲಿ ಆದಾಯ ತೆರಿಗೆ ನೋಟಿಸ್‌ಗಳನ್ನು ಕಳುಹಿಸುತ್ತಿದ್ದಾರೆ. ಸರ್ಕಾರಿ ಲಾಂಛನ ಹಾಗೂ ಅಧಿಕೃತ ದಾಖಲೆಗಳಂತೆ ಕಾಣುವ ನಕಲಿ ಪಿಡಿಎಫ್‌/ಫೈಲ್‌ಗಳನ್ನು ಕಳುಹಿಸಿ, ಬಳಕೆದಾರರ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಒಟಿಪಿ (OTP) ಕದಿಯುವ ತಂತ್ರಜ್ಞಾನ ಆಧಾರಿತ ಅತಿ ದೊಡ್ಡ ಸೈಬರ್ ವಂಚನೆ ಜಾಲ ಬೆಳಕಿಗೆ ಬಂದಿದೆ.

ವಂಚನೆಯ ಜಾಲ ಹೇಗಿದೆ ಗೊತ್ತಾ?

‘ITD.zip’ ಎಂಬ ಹೆಸರಿನ ಫೈಲ್ ಒಂದನ್ನು ವಾಟ್ಸಾಪ್ ಸಂದೇಶದ ಜೊತೆ ಕಳುಹಿಸಲಾಗುತ್ತಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 271(1)(c) ಅಡಿಯಲ್ಲಿ ನಿಮ್ಮ ಖಾತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ನಮೂದಿಸಲಾಗುತ್ತದೆ. 72 ಗಂಟೆಗಳ ಒಳಗೆ ಪ್ರತಿಕ್ರಿಯಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭೀತಿ ಹುಟ್ಟಿಸಲಾಗುತ್ತದೆ.

ಈ ಫೈಲ್ ಅಥವಾ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಅಪಾಯಕಾರಿ ‘ಮಾಲ್‌ವೇರ್’ ಸಾಫ್ಟ್‌ವೇರ್ ಇನ್‌ಸ್ಟಾಲ್ ಆಗುತ್ತದೆ. ಇದು ಸ್ಮಾರ್ಟ್‌ಫೋನ್‌ನಲ್ಲಿ ಬರುವ ಬ್ಯಾಂಕಿಂಗ್ ಒಟಿಪಿ, ಎಸ್‌ಎಮ್‌ಎಸ್ ಹಾಗೂ ರಹಸ್ಯ ಪಾಸ್‌ವರ್ಡ್‌ಗಳನ್ನು ನೇರವಾಗಿ ವಂಚಕರಿಗೆ ತಲುಪಿಸುತ್ತದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ರೀತಿಯಲ್ಲೇ ಕಾಣುವ ಪೋರ್ಟಲ್‌ಗಳನ್ನು ಸೃಷ್ಟಿಸಿ, ಅಲ್ಲಿ ಪಾನ್ (PAN), ಆಧಾರ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವಂತೆ ಪ್ರಚೋದಿಸಲಾಗುತ್ತಿದೆ.

ಸೈಬರ್ ತಜ್ಞರು ನೀಡಿದ ಮುನ್ನೆಚ್ಚರಿಕೆ ಹಾಗೂ ಸಲಹೆಗಳು

1. ವಾಟ್ಸಾಪ್‌ನಲ್ಲಿ ನೋಟಿಸ್ ಬರಲ್ಲ: ಆದಾಯ ತೆರಿಗೆ ಇಲಾಖೆಯು ಎಂದಿಗೂ ವಾಟ್ಸಾಪ್ ಅಥವಾ ವಯಕ್ತಿಕ ಮೆಸೇಜ್ ಮೂಲಕ ಅಧಿಕೃತ ನೋಟಿಸ್‌ಗಳನ್ನು ಕಳುಹಿಸುವುದಿಲ್ಲ.
2. ನೇರ ವೆಬ್‌ಸೈಟ್ ಬಳಸಿ: ಯಾವುದೇ ನೋಟಿಸ್ ಬಂದರೂ ನೇರವಾಗಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್ (incometax.gov.in) ಗೆ ಲಾಗಿನ್ ಆಗಿ ‘ಡಿಐಎನ್’ (Document Identification Number) ಪರಿಶೀಲಿಸಿ.
3. ಸಂದೇಹಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ: ವಾಟ್ಸಾಪ್‌ನಲ್ಲಿ ಬರುವ ZIP ಅಥವಾ EXE ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
4. ಸೈಬರ್ ದೂರು: ವಂಚನೆಗೆ ಒಳಗಾಗಿದ್ದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.

ಸೈಬರ್ ಭದ್ರತಾ ಸಂಸ್ಥೆ ‘ಕ್ಲೌಡ್‌ಸೆಕ್’ (CloudSek) ಈ ಕುರಿತು ತೀವ್ರ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ವಾಟ್ಸಾಪ್‌ನಲ್ಲಿ ಬರುವ ಇನ್-ಕಮ್ ಟ್ಯಾಕ್ಸ್ ನೋಟಿಸ್‌ಗಳನ್ನು ನಂಬಬೇಡಿ ಎಂದು ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 am, Sat, 1 August 26

Source link

ತಂದೆ ಜೊತೆ ಹಾಲಿವುಡ್ ಸಿನಿಮಾ ಮಾಡಬೇಕು; ಆಸೆ ಬಿಚ್ಚಿಟ್ಟ ವಿಜಯ್ ಮಗ ಜೇಸನ್ – Kannada News | Jason Sanjay Wants to Cast Father Vijay Opposite Jason Statham in Hollywood Movie

ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ ಅವರ ಮಗ ಜೇಸನ್ ಸಂಜಯ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅವರು ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿದ್ದಾರೆ. ಸುದೀಪ್ ಕಿಶನ್ ನಾಯಕನಾಗಿ ನಟಿಸುತ್ತಿರುವ ‘ಸಿಗ್ಮಾ’ ಚಿತ್ರದ ಮೂಲಕ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಜೇಸನ್ ಸಂಜಯ್ ತಮ್ಮ ಮೊದಲ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ತಂದೆಯ ಬಗ್ಗೆ ಒಂದು ದೊಡ್ಡ ಆಸೆಯನ್ನು ಹಂಚಿಕೊಂಡಿದ್ದಾರೆ.

ಹಾಲಿವುಡ್ ನಟ ಜೇಸನ್ ಸ್ಟೇಥಮ್ ಮತ್ತು ವಿಜಯ್ ಕಾಂಬಿನೇಷನ್

ಸಂದರ್ಶನದಲ್ಲಿ ಜೇಸನ್ ಸಂಜಯ್ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಕೇಳಲಾಗಿತ್ತು. ಹಾಲಿವುಡ್‌ನ ಖ್ಯಾತ ಆಕ್ಷನ್ ನಟ ಜೇಸನ್ ಸ್ಟೇಥಮ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ತಮಿಳು ಚಿತ್ರರಂಗದ ಯಾವ ನಟನನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ಜೇಸನ್ ಸಂಜಯ್ ತಕ್ಷಣವೇ ನನ್ನ ತಂದೆ ವಿಜಯ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅದ್ಭುತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಉತ್ತರ ಕೇಳಿ ಜನರು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಮಾಡಬಹುದು ಎಂದು ಅವರು ತಮಾಷೆಯಾಗಿ ನಕ್ಕಿದ್ದಾರೆ.

ನಟನೆಯ ಬದಲು ನಿರ್ದೇಶನ ಆಯ್ಕೆ ಮಾಡಿದ್ದೇಕೆ?

ದಳಪತಿ ವಿಜಯ್ ಅವರಂತಹ ಬಿಗ್ ಸ್ಟಾರ್ ಮಗನಾಗಿದ್ದರೂ ಜೇಸನ್ ನಟನೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇದಕ್ಕೆ ಕಾರಣ ಅವರ ಬಾಲ್ಯದ ದಿನಗಳು ಎಂದು ಅವರು ವಿವರಿಸಿದ್ದಾರೆ. ಜೇಸನ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಶೂಟಿಂಗ್ ಸೆಟ್‌ಗಳಿಗೆ ಹೋಗುವ ಅವಕಾಶ ಇತ್ತು. ಅಲ್ಲಿನ ವಾತಾವರಣ ನೋಡಿ ಅವರಿಗೆ ಸಿನಿಮಾದ ಮೇಲೆ ಆಸಕ್ತಿ ಮೂಡಿತು. ಆದರೆ ಆರಂಭದಲ್ಲಿ ಅವರಿಗೆ ಪೈಲಟ್ ಅಥವಾ ಕ್ರಿಕೆಟರ್ ಆಗಬೇಕು ಎಂಬ ಆಸೆ ಇತ್ತು. 11 ಮತ್ತು 12 ನೇ ತರಗತಿಯಲ್ಲಿದ್ದಾಗ ಅವರಿಗೆ ಚಿತ್ರಕಥೆ ಬರೆಯುವ ಹವ್ಯಾಸ ಶುರುವಾಯಿತು. ಆ ಬಳಿಕ ಅವರು ಕೆನಡಾಕ್ಕೆ ಹೋಗಿ ಸಿನಿಮಾ ನಿರ್ದೇಶನ ಕೋರ್ಸ್ ಮುಗಿಸಿದರು.

ಇದನ್ನೂ ಓದಿ: ಚಿತ್ರರಂಗದಲ್ಲಿ ನಾಯಕನಾಗಿ ಹತ್ತು ವರ್ಷ; ವಿಜಯ್ ದೇವರಕೊಂಡ ಭಾವುಕ ಪೋಸ್ಟ್ ವೈರಲ್

ಕೆನಡಾದಲ್ಲಿ ಕಲಿತ ಸಿನಿಮಾ ಪಾಠಗಳು

ಕೆನಡಾದಲ್ಲಿ ಓದುತ್ತಿದ್ದಾಗ ಜೇಸನ್ ಸಂಜಯ್ ಅವರಿಗೆ ಸಾಕಷ್ಟು ಅನುಭವ ಸಿಕ್ಕಿತು. ಅಲ್ಲಿನ ಪ್ರೊಫೆಸರ್‌ಗಳು ಇವರನ್ನು ಜಾಹೀರಾತು ಏಜೆನ್ಸಿಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಸ್ಟಾರ್ಟಪ್ ಕಂಪನಿಗಳಿಗೆ ಆಡ್ ಶೂಟ್ ಮಾಡುವ ಮೂಲಕ ಜೇಸನ್ ಆತ್ಮವಿಶ್ವಾಸ ಗಳಿಸಿಕೊಂಡರು. ಇದರ ಜೊತೆಗೆ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಾಲಂಟಿಯರ್ ಆಗಿ ಕೆಲಸ ಮಾಡಿದ್ದರು. ಅಲ್ಲಿ ಜಗತ್ತಿನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವ ಸುವರ್ಣ ಅವಕಾಶ ಸಿಕ್ಕಿತು. ಇದೇ ಸಮಯದಲ್ಲಿ ಅವರು ಮಲಯಾಳಂ ನಟ ನಿವಿನ್ ಪೌಲಿ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ – Kannada News | India Industrial Output Rises 7.3 percent in June 2026 on Strong Manufacturing and Electricity Growth

ನವದೆಹಲಿ, ಆಗಸ್ಟ್ 1: ಭಾರತದ ಕೈಗಾರಿಕಾ ವಲಯ ಜೂನ್‌ನಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿದ್ದು, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಆಧಾರಿತ ಉತ್ಪಾದನೆ ಶೇ ಸ7.3ರಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ ಪರಿಷ್ಕೃತ ಶೇ 5.1ರ ಬೆಳವಣಿಗೆಗೆ ಹೋಲಿಸಿದರೆ ಜೂನ್‌ನ ಅಂಕಿ ಗಮನಾರ್ಹ ಏರಿಕೆ ಕಂಡಿದೆ. ಉತ್ಪಾದನಾ ವಲಯದ ಚೇತರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿನ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

ಉತ್ಪಾದನಾ ವಲಯದ ಕೊಡುಗೆ

ಜೂನ್‌ನಲ್ಲಿ ಉತ್ಪಾದನಾ ವಲಯ ಶೇ 7.8ರಷ್ಟು ಬೆಳವಣಿಗೆ ದಾಖಲಿಸಿದೆ. ವಿದ್ಯುತ್ ಮತ್ತು ಅನಿಲ ಪೂರೈಕೆ ವಲಯದಲ್ಲಿ ಶೇ 10.6ರಷ್ಟು ಏರಿಕೆಯಾಗಿದ್ದು, ಒಟ್ಟಾರೆ ಕೈಗಾರಿಕಾ ಉತ್ಪಾದನೆಗೆ ಹೆಚ್ಚಿನ ಬೆಂಬಲ ನೀಡಿದೆ. ಇನ್ನು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದಲ್ಲಿ ಶೇ 1ರಷ್ಟು ಮಾತ್ರ ಬೆಳವಣಿಗೆಯಾಗಿದ್ದರೆ, ನೀರು ಪೂರೈಕೆ, ಒಳಚರಂಡಿ ಹಾಗೂ ತ್ಯಾಜ್ಯ ನಿರ್ವಹಣಾ ವಲಯವು ಶೇ 6.1ರಷ್ಟು ಏರಿಕೆ ದಾಖಲಿಸಿದೆ.

ಜೂನ್ 2026ರ IIP ತ್ವರಿತ ಅಂದಾಜು 123.1ರಷ್ಟಿದೆ. ಕಳೆದ ವರ್ಷದ ಜೂನ್‌ನಲ್ಲಿ ಇದು 114.7ರಷ್ಟಿತ್ತು.

ಎಲೆಕ್ಟ್ರಿಕಲ್ ಉಪಕರಣ, ವಾಹನ ತಯಾರಿಕೆಗೆ ಭರ್ಜರಿ ಬೇಡಿಕೆ

ಉತ್ಪಾದನಾ ವಲಯದ 23 ಇಂಡಸ್ಟ್ರೀ ಗ್ರೂಪ್​ಗಳ ಪೈಕಿ 19 ಗುಂಪುಗಳು ಜೂನ್‌ನಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಇವುಗಳಲ್ಲಿ ವಿದ್ಯುತ್ ಉಪಕರಣಗಳ ತಯಾರಿಕೆ ವಲಯವು ಶೇ 34ರಷ್ಟು ಬೆಳವಣಿಗೆಯೊಂದಿಗೆ ಮುಂಚೂಣಿಯಲ್ಲಿದೆ. ಮೋಟಾರು ವಾಹನಗಳು, ಟ್ರೇಲರ್‌ಗಳು ಮತ್ತು ಸೆಮಿ-ಟ್ರೇಲರ್‌ಗಳ ತಯಾರಿಕೆ ಶೇ 17.5ರಷ್ಟು ಹಾಗೂ ಆಹಾರ ಉತ್ಪನ್ನಗಳ ತಯಾರಿಕೆ ಶೇ 10.8ರಷ್ಟು ಬೆಳವಣಿಗೆ ದಾಖಲಿಸಿದೆ.

ವಿದ್ಯುತ್ ಉಪಕರಣಗಳ ವಿಭಾಗದಲ್ಲಿ ವಿದ್ಯುತ್ ಸರ್ಕ್ಯೂಟ್‌ಗಳ ಸ್ವಿಚಿಂಗ್ ಅಥವಾ ರಕ್ಷಣಾ ಸಾಧನಗಳು, ಯುಪಿಎಸ್ ಹಾಗೂ ಆಪ್ಟಿಕಲ್ ಫೈಬರ್ ಮತ್ತು ಕೇಬಲ್‌ಗಳಿಗೆ ಸಂಬಂಧಿಸಿದ ಉತ್ಪನ್ನಗಳು ಪ್ರಮುಖ ಕೊಡುಗೆ ನೀಡಿವೆ.

ವಾಹನ ವಲಯದಲ್ಲಿ ಆಟೋ ಬಿಡಿಭಾಗಗಳು, ಸ್ಪೇರ್‌ಗಳು, ಪ್ರಯಾಣಿಕ ಕಾರುಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಆಹಾರ ಉತ್ಪನ್ನಗಳ ವಿಭಾಗದಲ್ಲಿ ಚಹಾ, ಬಾಸುಮತಿ ಹೊರತುಪಡಿಸಿದ ಅಕ್ಕಿ ಮತ್ತು ಪಿಷ್ಟ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಿವೆ.

ಬಂಡವಾಳ ಸರಕುಗಳ ಉತ್ಪಾದನೆ ಶೇ 14.2ರಷ್ಟು ಏರಿಕೆ

ಬಳಕೆ ಆಧಾರಿತ ವರ್ಗೀಕರಣದಲ್ಲೂ ಕೈಗಾರಿಕಾ ವಲಯದ ಚೇತರಿಕೆ ಸ್ಪಷ್ಟವಾಗಿದೆ. ಬಂಡವಾಳ ಸರಕುಗಳ ಉತ್ಪಾದನೆ ಶೇ 14.2ರಷ್ಟು ಏರಿಕೆಯಾಗಿದ್ದು, ಹೂಡಿಕೆ ಚಟುವಟಿಕೆಗಳು ಮುಂದುವರಿದಿರುವ ಸೂಚನೆ ನೀಡಿದೆ.

ಮಧ್ಯಂತರ ಸರಕುಗಳ ಉತ್ಪಾದನೆ ಶೇ 9.3, ಮೂಲಸೌಕರ್ಯ ಮತ್ತು ನಿರ್ಮಾಣ ಸಂಬಂಧಿತ ಸರಕುಗಳು ಶೇ 7.5 ಹಾಗೂ ಗ್ರಾಹಕ ಬಾಳಿಕೆ ಬರುವ ಸರಕುಗಳು ಶೇ 7.7ರಷ್ಟು ಬೆಳವಣಿಗೆ ಕಂಡಿವೆ. ಪ್ರಾಥಮಿಕ ಸರಕುಗಳು ಮತ್ತು ಗ್ರಾಹಕ ಬಾಳಿಕೆ ಬಾರದ ಸರಕುಗಳು ತಲಾ ಶೇ 4.9ರಷ್ಟು ಏರಿಕೆ ದಾಖಲಿಸಿವೆ.

ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಒಟ್ಟಾರೆ ಬೆಳವಣಿಗೆಗೆ ಮಧ್ಯಂತರ ಸರಕುಗಳು, ಪ್ರಾಥಮಿಕ ಸರಕುಗಳು ಮತ್ತು ಬಂಡವಾಳ ಸರಕುಗಳು ಪ್ರಮುಖ ಕೊಡುಗೆ ನೀಡಿವೆ ಎಂದು ಸಚಿವಾಲಯ ತಿಳಿಸಿದೆ.

ಐಐಪಿ ಲೆಕ್ಕಾಚಾರದಲ್ಲೂ ಮಹತ್ವದ ಬದಲಾವಣೆ

ಜೂನ್‌ನ ಅಂಕಿಅಂಶಗಳ ಜೊತೆಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು ಲೆಕ್ಕ ಹಾಕುವ ವಿಧಾನದಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ IIP ಸರಣಿಗೆ 2022-23 ಅನ್ನು ಮೂಲ ವರ್ಷವಾಗಿ ಪರಿಗಣಿಸಲಾಗಿದ್ದು, ಬೆಲೆ ಬದಲಾವಣೆಗಳನ್ನು ಲೆಕ್ಕಾಚಾರ ಮಾಡಲು ಈ ಹಿಂದೆ ಬಳಸುತ್ತಿದ್ದ WPI ಬದಲಿಗೆ ಔಟ್​ಪುಟ್ ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್ (Output PPI) ಅನ್ನು ಡಿಫ್ಲೇಟರ್ ಆಗಿ ಅಳವಡಿಸಲಾಗಿದೆ. IIPನಲ್ಲಿರುವ 463 ಉತ್ಪನ್ನ ಗುಂಪುಗಳ ಪೈಕಿ 234 ಗುಂಪುಗಳಿಗೆ ಈ ಬದಲಾವಣೆ ಅನ್ವಯಿಸಲಿದ್ದು, ಒಟ್ಟಾರೆ ಸೂಚ್ಯಂಕದಲ್ಲಿ ಇವುಗಳ ತೂಕ ಶೇ 36.02ರಷ್ಟಿದೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ

ಉತ್ಪಾದನೆಯ ಮೌಲ್ಯವನ್ನು ಆಧರಿಸಿ ಮಾಹಿತಿ ನೀಡುವ ಉತ್ಪನ್ನಗಳ ನೈಜ ಉತ್ಪಾದನೆಯನ್ನು ಇನ್ನಷ್ಟು ನಿಖರವಾಗಿ ಅಳೆಯಲು ಹೊಸ ವಿಧಾನ ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳು ಹಾಗೂ IIP ಮೂಲ ವರ್ಷ ಪರಿಷ್ಕರಣೆಗೆ ಸಂಬಂಧಿಸಿದ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಿಗೂ ಈ ಬದಲಾವಣೆ ಹೊಂದಿಕೆಯಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

August Born Personality: ಆಗಸ್ಟ್‌ನಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ? ನಾಯಕತ್ವದಿಂದ ಹಿಡಿದು ಪ್ರೀತಿ ಸಂಬಂಧಗಳ ವರೆಗಿನ ಸಂಪೂರ್ಣ ಮಾಹಿತಿ – Kannada News | August Born Personality Traits: Career, Love, Money, Strengths and Challenges Explained

ಆಗಸ್ಟ್‌ನಲ್ಲಿ ಜನಿಸಿದವರ ವ್ಯಕ್ತಿತ್ವImage Credit source: Magnific

ವ್ಯಕ್ತಿಯ ಜೀವನವನ್ನು ಕೇವಲ ಜನ್ಮ ತಿಂಗಳು ಮಾತ್ರ ನಿರ್ಧರಿಸುವುದಿಲ್ಲ. ಆದರೆ ಕೆಲವು ಜ್ಯೋತಿಷ್ಯ ಮತ್ತು ವ್ಯಕ್ತಿತ್ವ ಅಧ್ಯಯನಗಳ ಪ್ರಕಾರ, ನಿರ್ದಿಷ್ಟ ತಿಂಗಳಲ್ಲಿ ಜನಿಸಿದವರಲ್ಲಿ ಕೆಲವು ಸಾಮಾನ್ಯ ಗುಣಲಕ್ಷಣಗಳು ಕಂಡುಬರುತ್ತವೆ ಎಂದು ನಂಬಲಾಗಿದೆ. ಅದೇ ರೀತಿಯಲ್ಲಿ, ಆಗಸ್ಟ್‌ನಲ್ಲಿ ಜನಿಸಿದವರು ಆತ್ಮವಿಶ್ವಾಸ, ನಾಯಕತ್ವ, ಪ್ರಾಮಾಣಿಕತೆ ಮತ್ತು ಗುರಿ ಸಾಧಿಸುವ ಛಲಕ್ಕೆ ಹೆಸರುವಾಸಿಯಾಗಿರುತ್ತಾರೆ ಎನ್ನಲಾಗುತ್ತದೆ.

ನಾಯಕತ್ವದ ಗುಣ ಸಹಜವಾಗಿಯೇ ಇರುತ್ತದೆ:

ಆಗಸ್ಟ್‌ನಲ್ಲಿ ಜನಿಸಿದವರು ಸ್ವಾಭಾವಿಕ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಕುಟುಂಬ, ಸ್ನೇಹಿತರ ವಲಯ ಅಥವಾ ಕೆಲಸದ ಸ್ಥಳದಲ್ಲಿ ಇವರ ಅಭಿಪ್ರಾಯಕ್ಕೆ ಹೆಚ್ಚಿನ ಗೌರವ ದೊರೆಯುತ್ತದೆ. ಕಠಿಣ ಸಂದರ್ಭಗಳಲ್ಲಿಯೂ ಆತ್ಮವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿರುತ್ತದೆ.

ಉದಾರತೆ ಮತ್ತು ಗೌರವಕ್ಕೆ ಹೆಚ್ಚಿನ ಮಹತ್ವ:

ಇವರು ಇತರರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಕುಟುಂಬ ಮತ್ತು ಸ್ನೇಹಿತರಿಗಾಗಿ ತಮ್ಮಿಂದಾದಷ್ಟು ಬೆಂಬಲ ನೀಡುತ್ತಾರೆ. ಆದರೆ ತಾವು ನೀಡುವ ಪ್ರೀತಿ ಮತ್ತು ಗೌರವಕ್ಕೆ ಪ್ರತಿಯಾಗಿ ಅದೇ ರೀತಿಯ ಗೌರವವನ್ನು ಇತರರಿಂದ ನಿರೀಕ್ಷಿಸುತ್ತಾರೆ. ಅದು ಸಿಗದಿದ್ದರೆ ಬೇಸರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ನೇರ ಮಾತು, ಪ್ರಾಮಾಣಿಕ ವ್ಯಕ್ತಿತ್ವ:

ಆಗಸ್ಟ್‌ನಲ್ಲಿ ಜನಿಸಿದವರು ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುವ ಸ್ವಭಾವ ಹೊಂದಿರುತ್ತಾರೆ. ಇದರಿಂದ ಕೆಲವರು ಅವರನ್ನು ಕಠಿಣ ವ್ಯಕ್ತಿಗಳೆಂದು ಭಾವಿಸಬಹುದು. ಆದರೆ ಅವರ ಉದ್ದೇಶ ಯಾರನ್ನೂ ನೋಯಿಸುವುದಲ್ಲ; ಸತ್ಯವನ್ನು ಹೇಳುವುದು ಅವರ ಪ್ರಮುಖ ಗುಣವಾಗಿದೆ.

ಹಣಕಾಸು ನಿರ್ವಹಣೆಯಲ್ಲಿ ಚಾಣಾಕ್ಷರು:

ಆರ್ಥಿಕ ವಿಷಯಗಳಲ್ಲಿ ಇವರು ದೂರದೃಷ್ಟಿಯಿಂದ ಯೋಜನೆ ರೂಪಿಸುತ್ತಾರೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಉಳಿತಾಯ, ಹೂಡಿಕೆ ಮತ್ತು ಆಸ್ತಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಇದರಿಂದ ಭವಿಷ್ಯದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಪ್ರೀತಿ ಮತ್ತು ಸಂಬಂಧಗಳಲ್ಲಿ ನಿಷ್ಠೆ:

ಸಂಬಂಧಗಳಿಗೆ ಆಗಸ್ಟ್‌ನಲ್ಲಿ ಜನಿಸಿದವರು ಹೆಚ್ಚಿನ ಮೌಲ್ಯ ನೀಡುತ್ತಾರೆ. ಒಮ್ಮೆ ಯಾರನ್ನಾದರೂ ಪ್ರೀತಿಸಿದರೆ, ಅವರಿಗೆ ನಿಷ್ಠೆಯಿಂದ ಬದ್ಧರಾಗಿರುತ್ತಾರೆ. ದ್ರೋಹ ಅಥವಾ ಮೋಸವನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ತಮ್ಮ ಸಂಗಾತಿ ಮತ್ತು ಸ್ನೇಹಿತರಿಂದಲೂ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತಾರೆ.

ವೃತ್ತಿಜೀವನದಲ್ಲಿ ಯಶಸ್ಸಿನತ್ತ ನಿರಂತರ ಪ್ರಯತ್ನ:

ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುವ ಗುರಿಯನ್ನು ಇವರು ಹೊಂದಿರುತ್ತಾರೆ. ಆಡಳಿತ, ಉದ್ಯಮಶೀಲತೆ, ಸರ್ಕಾರಿ ಸೇವೆ, ಶಿಕ್ಷಣ, ವ್ಯವಹಾರ ಮತ್ತು ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಸಾಮರ್ಥ್ಯ ಇವರಲ್ಲಿದೆ.

ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು ಮತ್ತು ಸಾಮಾನ್ಯ ವ್ಯಕ್ತಿತ್ವ ವಿಶ್ಲೇಷಣೆಗಳನ್ನು ಆಧರಿಸಿದೆ. ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸಬೇಕು ಎಂಬುದು ಕಡ್ಡಾಯವಲ್ಲ. ವೈಯಕ್ತಿಕ ಅನುಭವ ಮತ್ತು ಪರಿಸ್ಥಿತಿಗಳ ಆಧಾರದ ಮೇಲೆ ವ್ಯಕ್ತಿತ್ವದಲ್ಲಿ ವ್ಯತ್ಯಾಸಗಳಿರಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಲ್ಲರೂ ಫೈನಲ್​ಗೆ… 10 ಚಿನ್ನದ ಪದಕಗಳ ಮೇಲೆ ಭಾರತೀಯರ ಕಣ್ಣು! – Kannada News | All Into the Finals: 10 Indian Boxers Eye Golden Glory at CWG

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026 (CWG 2026) ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಮಿಫೈನಲ್ ತಲುಪಿದ್ದ ಎಲ್ಲಾ 10 ಭಾರತೀಯ ಬಾಕ್ಸರ್‌ಗಳು ಭರ್ಜರಿ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಅದ್ಭುತ ಪ್ರದರ್ಶನದಿಂದಾಗಿ ಎಲ್ಲರಿಗೂ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದ್ದು, ಭಾರತಕ್ಕೆ ಬಾಕ್ಸಿಂಗ್ ಒಂದರಲ್ಲೇ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಸುವರ್ಣ ಅವಕಾಶ ಒದಗಿಬಂದಿದೆ.

ಆಗಸ್ಟ್ 1 ರಂದು (ಶನಿವಾರ) ನಡೆಯಲಿರುವ ಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಮುಖಾಮುಖಿ ವಿವರ ಇಲ್ಲಿದೆ:

  1. ಪ್ರೀತಿ ಪವಾರ್ (ಮಹಿಳೆಯರ 54kg) vs ಸ್ಕಾರ್ಲೆಟ್ ಡೆಲ್ಗಾಡೊ (ಕೆನಡಾ) – ಮಧ್ಯಾಹ್ನ 3:30
  2. ಜಾಸ್ಮಿನ್ ಲ್ಯಾಂಬೋರಿಯಾ (ಮಹಿಳೆಯರ 57kg) vs ಮೈಕೆಲಾ ವಾಲ್ಷ್ (ನಾರ್ತ್ ಐರ್ಲೆಂಡ್) – ಮಧ್ಯಾಹ್ನ 3:45
  3. ಜಾದುಮಣಿ ಸಿಂಗ್ (ಪುರುಷರ 55kg) vs ಜೈ ಡಿಕ್ಸನ್ (ಆಸ್ಟ್ರೇಲಿಯಾ) – ಸಂಜೆ 4:15
  4. ಸಾಕ್ಷಿ ಚೌಧರಿ (ಮಹಿಳೆಯರ 51kg) vs ರೂಬಿ ವೈಟ್ (ಇಂಗ್ಲೆಂಡ್) – ರಾತ್ರಿ 9:00
  5. ಪ್ರಿಯಾ ಘಂಘಾಸ್ (ಮಹಿಳೆಯರ 60kg) vs ಮೇರಿ-ಬಾಥೌಲ್ ಅಲ್-ಅಹಮದಿಯಾ (ಕೆನಡಾ) – ರಾತ್ರಿ 9:15
  6. ಅರುಂಧತಿ ಚೌಧರಿ (ಮಹಿಳೆಯರ 70kg) vs ಚಾಂಟೆಲ್ ರೀಡ್ (ಇಂಗ್ಲೆಂಡ್) – ರಾತ್ರಿ 9:30.
  7. ಲವ್ಲಿನಾ ಬೊರ್ಗೊಹೈನ್ (ಮಹಿಳೆಯರ 75kg) vs ಎಮ್ಮಾ-ಸೂ ಗ್ರೀನ್‌ಟ್ರೀ (ಆಸ್ಟ್ರೇಲಿಯಾ) – ರಾತ್ರಿ 9:45
  8. ಸಚಿನ್ ಸಿವಾಚ್ (ಪುರುಷರ 60kg) vs ಟ್ರೈಅಗೇನ್ ಂದೆವೆಲೊ (ನಮೀಬಿಯಾ) – ರಾತ್ರಿ 10:00
  9. ಅಂಕುಶ್ ಪಾಂಗಲ್ (ಪುರುಷರ 80kg) vs ದಿಮೇಜಿ ಶಿಟ್ಟು (ಇಂಗ್ಲೆಂಡ್) – ರಾತ್ರಿ 10:15
  10. ನರೇಂದ್ರ ಬರ್ವಾಲ್ (ಪುರುಷರ +90kg) vs ಡ್ಯಾಮರ್ ಥಾಮಸ್ (ಇಂಗ್ಲೆಂಡ್) – ರಾತ್ರಿ 10:30

ಒಂದು ವೇಳೆ ಫೈನಲ್ ತಲುಪಿರುವ ಎಲ್ಲಾ 10 ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದರೆ, ಭಾರತದ ಚಿನ್ನದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಈ ಹದಿನೈದು ಪದಕಗಳೊಂದಿಗೆ ಭಾರತ ಕಾಮನ್​ವೆಲ್ತ್ ಗೇಮ್ಸ್​ನ ಮೆಡಲ್ ಲಿಸ್ಟ್​ನಲ್ಲಿ 4ನೇ ಸ್ಥಾನಕ್ಕೇರಬಹುದು.

ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್​ ಟೂರ್ನಿ!

ಅಂದರೆ, ಪ್ರಸ್ತುತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಭಾರತವು ಇಂದು ಬಾಕ್ಸಿಂಗ್ ಫೈನಲ್‌ಗಳಲ್ಲಿ ಗೆದ್ದು 10 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ ಮೆಡಲ್ ಲಿಸ್ಟ್​ನಲ್ಲಿ  ಏಕಾಏಕಿ 4ನೇ ಸ್ಥಾನಕ್ಕೇರಲಿದೆ! ಇದೇ ಕಾರಣಕ್ಕೆ ಇಂದಿನ ಈ ಐತಿಹಾಸಿಕ ಬಾಕ್ಸಿಂಗ್ ಹಣಾಹಣಿಯನ್ನು ಇಡೀ ಕ್ರೀಡಾಲೋಕವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದೆ.

Source link

‘ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ’; ಪ್ರಜ್ವಲ್​​ಗೆ ಗುರುದತ್ ತಿರುಗೇಟು

ಒಂದು ಸಿನಿಮಾ ಯಶಸ್ವಿಯಾಗಲು ನಿರ್ಮಾಪಕರಿಂದ ಹಿಡಿದು ತಂತ್ರಜ್ಞರು, ನಟರವರೆಗೆ ಎಲ್ಲರ ಸಾಮೂಹಿಕ ಶ್ರಮ ಮತ್ತು ಸಮರ್ಪಣಾ ಭಾವ ಅತ್ಯಗತ್ಯ ಎಂದು ಗುರುದತ್ ಗಾಣಿಗ ಒತ್ತಿ ಹೇಳಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿರ್ಮಾಪಕರು ಚಿತ್ರರಂಗದ ಅನ್ನದಾತರು, ಅವರ ಶ್ರಮವನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಅಣ್ಣಾವ್ರ ಮಾತುಗಳನ್ನು ನೆನಪಿಸಿದ್ದಾರೆ. ಪ್ರಜ್ವಲ್ ಹೆಚ್ಚಿನ ಸಂಭಾವನೆ ಪಡೆದರೂ, ಡಬ್ಬಿಂಗ್‌ಗೆ ಬಾರದಿರುವ ಬಗ್ಗೆ ಬೇಸರ ಹೊರಹಾಕಿದರು.

‘ಕೆವಿಎನ್ ಸುಪ್ರೀತ್, ಜಾಕ್ ಮಂಜಣ್ಣ, ಲೋಹಿತ್ ಸೇರಿದಂತೆ ಅನೇಕರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ, ಹಣ ಸಂದಾಯವಾಗುವವರೆಗೂ ಸಹಕರಿಸುವುದಿಲ್ಲ ಎಂಬ ನಿಲುವನ್ನು ಪ್ರಜ್ವಲ್ ತಾಳಿದ್ದರು. ಆಗಲೇ ನಾವು 85ರಷ್ಟು ಹಣವನ್ನು ಪಾವತಿಸಿದ್ದೆವು. ಪ್ರತಿಭೆ ಇರುವುದು ಎಷ್ಟು ಮುಖ್ಯವೋ, ಅಷ್ಟೇ ಡೆಡಿಕೇಶನ್ ಕೂಡ ಮುಖ್ಯ’ ಎಂದು ಗುರುದತ್ ಗಾಣಿಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಅನಗತ್ಯ ವಿವಾದಗಳು ಬರಬಾರದು ಎಂಬ ಕಾರಣಕ್ಕೆ ಅನೇಕ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿಲ್ಲ ಎಂದಿದ್ದಾರೆ. ‘ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ’ ಎಂದು ಗುರುದತ್ ಹೇಳಿದ್ದಾರೆ. ಸಂಪೂರ್ಣ ವಿವರ ವಿಡಿಯೋದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version