ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ, ಕಾರಣವೇನು? – Kannada News | Karnataka Governmnet Bans sale of junk food in schools And College surroundings

ಬೆಂಗಳೂರು, (ಜುಲೈ 31): ಕರ್ನಾಟಕದ Karnataka) ಶಾಲೆಗಳ ಸುತ್ತಮುತ್ತ ಮಕ್ಕಳನ್ನ ಜಂಕ್ ಫುಡ್ ಗಳು (junk food) ಕೈ ಬೀಸಿ ಕರೆಯುತ್ತವೆ. ಇನ್ನು ಮಕ್ಕಳೂ (Children)  ಕೂಡ ಬಾಯಿ ಚಪ್ಪರಿಸಿಕೊಂಡು ಹಿಂದೆ ಮುಂದೆ ನೋಡದೆ ಖರೀದಿ ಮಾಡ್ತಾರೆ. ಆದರೆ ಇನ್ಮುಂದೆ ಸರ್ಕಾರ ಇದಕ್ಕೆ ಅವಕಾಶ ಕೊಡಲ್ಲ. ಶಾಲೆ ಹಾಗೂ ಪಿಯು ಕಾಲೇಜುಗಳ 50 ಮೀಟರ್ ಸುತ್ತಳತೆಯಲ್ಲಿ ಜಂಕ್ ಫುಡ್​ಗಳ ಮಾರಾಟವನ್ನ ಆಹಾರ ಸುರಕ್ಷತಾ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಈ ಕುರಿತಾಗಿ ಇಂದು (ಜುಲೈ 31) ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ (UT Khader) ಮಹತ್ವದ ಘೋಷಣೆ ಮಾಡಿದ್ದಾರೆ.

ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಉತ್ಪನ್ನಗಳ ನಿಷೇಧ

ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಅಂಶಗಳಿರುವ ಆಹಾರ ಉತ್ಪನ್ನಗಳನ್ನ ಮಾರಾಟವನ್ನ ಇನ್ಮುಂದೆ ಸಹಿಸಲ್ಲ ಎಂದಿದ್ದಾರೆ. 134 ಶಾಲೆಗಳಿಗೆ ಭೇಟಿ ನೀಡಿ ಸರ್ವೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರವನ್ನ ಪ್ರಕಟಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಕ್ಯಾಂಟೀನ್​ಗಳಿಗೂ ಈ ನಿಯಮ ಅನ್ವಯವಾಗಲಿದೆ.

ಇದನ್ನೂ ಓದಿ: KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ‌ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ?

ನಿಯಮಗಳನ್ನ ಉಲ್ಲಂಘಿಸಿದ್ರೆ ದಂಡ

ಇನ್ನು ಈ ನಿಯಮಗಳನ್ನ ಉಲ್ಲಂಘನೆ ಮಾಡಿ ಜಂಕ್ ಫುಡ್​ಗಳನ್ನ ಮಕ್ಕಳಿಗೆ ನೀಡಿದರೆ, ಅಂಗಡಿಗಳಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದು ಮಾಡಿಸುವ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ ಆಳು ಮೂಳು ಅಂತಾ ಜಂಕ್ ಫುಡ್​ಗಳನ್ನ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಮಕ್ಕಳನ್ನ ಕಾಪಾಡಬೇಕಿದೆ. ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿ.

ಆಹಾರ ಸಚಿವ ಯುಟಿ ಖಾದರ್ ಹೇಳಿದ್ದೇನು?

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಆರೋಗ್ಯ ಸಚಿವ ಯುಟಿ ಖಾದರ್, ರೋಗ ಬರುವುದಕ್ಕಿಂತ ಮೊದಲು ಅದನ್ನು ತಡೆಗಟ್ಟಬೇಕು. ಅವರವರ ಆರೋಗ್ಯ ಅವರವರ ಜವಾಬ್ದಾರಿ, ರೋಗ ಬಂದರೆ ಔಷಧ ಕೊಡೋದು ನಮ್ಮ ಕೆಲಸ. ನಾವು ಏನು ತಿನ್ನುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಇರುತ್ತೆ. ಸಣ್ಣ ಮಕ್ಕಳಾದರೂ ಕೂಡ ಆರೋಗ್ಯವಂತ ಸಮಾಜ ನೋಡಬೇಕು.

ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೆ ತರುತ್ತೇವೆ

ಅನಾರೋಗ್ಯ ಆದರೆ ಕೆಲವರಿಗೆ ವ್ಯಾಪಾರ ಆಗುತ್ತೆ. ಶಾಲೆಯಲ್ಲಿ ಮತ್ತು ಸುತ್ತಮುತ್ತ 50 ಮೀಟರ್ ವ್ಯಾಪ್ತಿ ಜಂಕ್ ಫುಡ್ ನಿಷೇಧ ಹಾಗೂ ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಉತ್ಪನ್ನಗಳ ನಿಷೇಧ ಮಾಡಲಾಗಿದೆ. ಹಲವು ಕಡೆಗಳಲ್ಲಿ ನಾವು ಸರ್ವೇ ಮಾಡಿದ್ದೇವೆ. ಶಾಲೆಯ ಕ್ಯಾಂಟೀನ್ ಗಳಲ್ಲೇ ಜಂಕ್ ಫುಡ್ ಕೊಡಲಾಗುತ್ತಿದೆ. ಪಿಯುಸಿ ವರೆಗಿನ ಶೈಕ್ಷಣಿಕ ಸಂಸ್ಥೆಗಳ 50 ಮೀಟರ್ ಆವರಣದಲ್ಲಿ ಜಂಕ್ ಫುಡ್ ನಿಷೇಧಿಸಲಾಗಿದ್ದು, ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೆ ತರುತ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಂಧ್ರದ ಭೋಗಾಪುರಂನಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು; 13,000 ವಿದ್ಯಾರ್ಥಿಗಳಿಂದ ಧಿಂಸಾ ನೃತ್ಯ ತಾಲೀಮು – Kannada News | 13,000 students to welcome PM Narendra Modi with Dhimsa Tribal dance in Andhra Pradesh Bhogapuram

ವಿಜಯನಗರ, ಜುಲೈ 31: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಉದ್ಘಾಟನೆಗಾಗಿ ಆಗಸ್ಟ್ 1ರಂದು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅತ್ಯಂತ ಭವ್ಯ ಸ್ವಾಗತ ಕೋರಲು ಆಂಧ್ರಪ್ರದೇಶ ರಾಜ್ಯ ಸರ್ಕಾರವು ಸಮಗ್ರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಾಳೆ ಸುಮಾರು 13,000 ಮಕ್ಕಳು ಸಾಂಪ್ರದಾಯಿಕ ಬುಡಕಟ್ಟು ಜನಪದ ನೃತ್ಯವಾದ ಧಿಂಸಾವನ್ನು ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಿದ್ಯಾರ್ಥಿಗಳು ವಿಶೇಷ ರಿಹರ್ಸಲ್ ನಡೆಸಿದರು.

ಉತ್ತರ ಆಂಧ್ರದ ಬುಡಕಟ್ಟು ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಇಡೀ ದೇಶಕ್ಕೆ ಸಾರುವ ಉದ್ದೇಶದಿಂದ ಈ ಬೃಹತ್ ‘ಧಿಂಸಾ’ ಸಮೂಹ ನೃತ್ಯವನ್ನು ಆಯೋಜಿಸಲಾಗಿದೆ. ಪ್ರಧಾನಿ ಮೋದಿ ನಾಳೆ ಭೋಗಾಪುರಂ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ ತೆರೆದ ವಾಹನದಲ್ಲಿ ಸಾಗುವಾಗ ಈ ಬೃಹತ್ ನೃತ್ಯ ಪ್ರದರ್ಶನದ ಮೂಲಕ ಅವರನ್ನು ಸ್ವಾಗತಿಸಲಾಗುವುದು.

ಧಿಂಸಾ ಎಂಬುದು ಮುಖ್ಯವಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಭಾಗದಲ್ಲಿರುವ ಅರಕು ಕಣಿವೆ ಹಾಗೂ ವಿಶಾಖಪಟ್ಟಣಂ, ವಿಜಯನಗರ, ಕೊರಾಪುಟ್ ಪ್ರದೇಶಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದವರು ಪ್ರದರ್ಶಿಸುವ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಸಮೂಹ ನೃತ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದೇವಸ್ಥಾನದ 3 ಕೋಟಿ ಹಣ, 5 ಕೆಜಿ ಚಿನ್ನದ ವಿವಾದ: ಎರಡು ಗುಂಪುಗಳ ನಡುವೆ ಮಾರಾಮಾರಿ – Kannada News | Durgadevi Account Dispute Turns Violent; Axe Attack Shocks Locality

ಬಾಗಲಕೋಟೆ, ಜುಲೈ 31: ಬಾಗಲಕೋಟೆ (bagalkot) ತಾಲ್ಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನ ಪ್ರಸಿದ್ಧ ದೇವಸ್ಥಾನ. ಇನ್ನೂ ಮೂರು ತಿಂಗಳಲ್ಲೇ ದೇವಿಯ ಜಾತ್ರೆ ಕೂಡ ನಡೆಯಲಿದೆ. ಆದರೆ ಇದೇ ಸಂದರ್ಭದಲ್ಲಿ ಕೆಲವರು ದೇವಸ್ಥಾನದ ಲೆಕ್ಕ ಕೇಳಿದ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಕೊಡಲಿ, ರಾಡ್‌ನಿಂದ ಮಾರಾಮಾರಿ ಉಂಟಾಗಿದೆ. ಸದ್ಯ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?

ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನದ ಲೆಕ್ಕ ಹಾಗೂ ಹಳೆ ದ್ವೇಷ ಹಿನ್ನೆಲೆ ಭೋಜಪ್ಪ ರಾಠೋಡ್ ಮತ್ತು ಮಂಜುನಾಥ್ ರಾಠೋಡ್​​ ಎಂಬುವವರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕೊಡಲಿ, ರಾಡ್‌ನಿಂದ ಬಡಿದಾಡಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಮಂಜುನಾಥ್​ ಹಾಗೂ ಅವರ ಗುಂಪಿನ ಏಕನಾಥ್ ರಾಠೋಡ್, ಕಿರಣ್ ರಾಠೋಡ್ ಮೇಲೆ ಹಲ್ಲೆ ಮಾಡಲಾಗಿದೆ. ದೇವಸ್ಥಾನದ ಐದಾರು ಕೆಜಿ ಚಿನ್ನ ಹಾಗೂ ಮೂರು ಕೋಟಿ ರೂ ಹಣದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಹಾಗೂ ಹಳೆ ದ್ವೇಷ ಹಿನ್ನೆಲೆ ಹಲ್ಲೆ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: 40 ಲಕ್ಷ ರೂ ವರದಕ್ಷಿಣೆ, ಸಂಬಳಕ್ಕಾಗಿ ಗಲಾಟೆ: ಚೇಂಬರ್​​​ಗೆ ನುಗ್ಗಿ ಹೆತ್ತ ಮಗಳಿಗೆ ಚಾಕುವಿನಿಂದ ಇರಿದ ತಂದೆ!

ಗದ್ದನಕೇರಿ ತಾಂಡಾದ ದುರ್ಗಾದೇವಿ ದೇವಸ್ಥಾನ ಬಹಳ ಪ್ರಸಿದ್ಧ ದೇವಸ್ಥಾನ. ಮೂರು ವರ್ಷಕ್ಕೊಮ್ಮೆ ದೇವಿಯ ಜಾತ್ರೆ ನಡೆಯುತ್ತದೆ. ಇನ್ನೇನು ಮೂರು ತಿಂಗಳಲ್ಲಿ ಅದ್ದೂರಿಯಾಗಿ ದುರ್ಗಾದೇವಿ ಜಾತ್ರೆ ನಡೆಯುತ್ತದೆ. ಜಾತ್ರೆ ಹಿನ್ನೆಲೆ ಎದುರಾಳಿ ಗುಂಪಿನ ಭೋಜಪ್ಪ ರಾಠೋಡ್ ದೇವಸ್ಥಾನಕ್ಕೆ ಬಣ್ಣ ಹಚ್ಚುತ್ತಿದ್ದರು. ಇದಕ್ಕೆ ನಿನ್ನೆ ಮಂಜುನಾಥ್ ಹಾಗೂ ಅವರ ಸಹಚರರು ಅಡ್ಡಿಪಡಿಸಿದ್ದಾರೆ.

ಮಾತಿಗೆ ಮಾತು ಬೆಳೆದು ಶುರುವಾದ ಜಗಳ

‘ನಿಮ್ಮ ಅಣ್ಣ ಹಾಗೂ ಕೆಲವರು ದೇವಸ್ಥಾನದ ಲೆಕ್ಕವನ್ನು ಕೊಡಬೇಕು. ಕೆಲಸ‌ ಮಾಡಬೇಡ’ ಎಂದು ತಡೆದಿದ್ದಾರೆ. ಇಂದು ಬೆಳಗ್ಗೆ ಪುನಃ ದೇವಸ್ಥಾನ ಕಡೆ ಬಂದಾಗ ಮಾತಿಗೆ ಮಾತು ಬೆಳೆದು ಶುರುವಾದ ಜಗಳ ಮಾರಾಮಾರಿಗೆ ತಲುಪಿದೆ. ಹೊಡೆದಾಟದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಹೋದರ ಭೋಜಪ್ಪ ರಾಠೋಡ್, ದಾಸು, ಸೋಮಿಬಾಯಿ, ಪಾಪಿಬಾಯಿ, ಕಿರಣ ರಾಠೋಡ್, ವಿಶಾಲ್ ರಾಠೋಡ್ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಭೋಜಪ್ಪ ರಾಠೋಡ್​ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಗುಂಪಿನ ಗಾಯಾಳುಗಳನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯನ್ನ ಎಳೆಎಳೆಯಾಗಿ ವಿವರಿಸಿದ ಹೂವಪ್ಪ ರಾಠೋಡ್

ಈ ಬಗ್ಗೆ ಮಾತಾಡಿದ ಹೂವಪ್ಪ ರಾಠೋಡ್, ‘ನಮ್ಮ ಸಹೋದರ ಭೋಜಪ್ಪ ಸ್ವಂತ ಹಣದಿಂದ ದೇವಸ್ಥಾನಕ್ಕೆ ಬಣ್ಣ ಹಚ್ಚಿಸುತ್ತಿದ್ದರು. ನಮ್ಮ ತಾಂಡಾದ ದುರ್ಗಾದೇವಿ ಮಹಿಮೆ ಶಕ್ತಿ ದೊಡ್ಡದು‌. ದೇವಿಯ ಹಣ ಆಗಲಿ, ಬಂಗಾರ ಆಗಲಿ ಲಪಟಾಯಿಸಿದವರಿಗೆ ಎಂದು ಒಳ್ಳೆಯದಾಗುವುದಿಲ್ಲ. ಆ ದೇವಿಯ ಆಭರಣಗಳನ್ನು ಎಲ್ಲಾ ಗುರುಹಿರಿಯರೇ ಜೋಪಾನವಾಗಿ ಇಟ್ಟುಕೊಳ್ಳಿ ಎಂದು ನಮಗೆ ಕೊಟ್ಟಿದ್ದಾರೆ. ಆ ಪ್ರಕಾರ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ. ಯಾವುದೇ ಹಣದ ವ್ಯವಹಾರ ಕೂಡ ನಡೆದಿಲ್ಲ. ಸುಮ್ಮನೆ ಕೆಲಸಕ್ಕೆ ಅಡ್ಡಪಡಿಸಿದರು. ದುರುದ್ದೇಶ ಇಟ್ಟುಕೊಂಡು ಬೆಳ್ಳಂಬೆಳಿಗ್ಗೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ. ನಾನು ಪೊಲೀಸರಿಗೆ ವಿನಂತಿ ಮಾಡಿಕೊಳ್ಳುತ್ತೇನೆ ನಮ್ಮದು ತಪ್ಪಿದ್ದರೆ, ನಮಗೂ ಶಿಕ್ಷೆ ಕೊಡಿ. ಇವರ ಮೇಲೆ ಕ್ರಮಕೈಗೊಳ್ಳಿ’ ಎಂದಿದ್ದಾರೆ.

ಇದನ್ನೂ ಓದಿ: ಶಾಂತವಾಗಿದ್ದ ಕರಾವಳಿಯಲ್ಲಿ ಗುಂಡಿನ ಸದ್ದು: ಹರಿಯಿತು ಉದ್ಯಮಿಯ ನೆತ್ತರ ಕೋಡಿ

ಒಟ್ಟಿನಲ್ಲಿ ದೇವಸ್ಥಾನದ ಲೆಕ್ಕ ಹಾಗೂ ಹಳೆ ದ್ವೇಷ ಎರಡು ಗುಂಪಿನ ಮಧ್ಯೆ ಮಾರಾಮಾರಿಗೆ ಕಾರಣವಾಗಿದೆ. ಜಾತ್ರೆ ಸಮೀಪ ಇರುವ ದಿನದಲ್ಲಿ ಇಂತಹ ಗಲಾಟೆ ನಡೆದಿದೆ‌. ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KSRTC, BMTC ಸೇರಿದಂತೆ 4 ನಿಗಮಗಳ ಬಸ್ ಟಿಕೆಟ್ ‌ದರ ಏರಿಕೆ ಫಿಕ್ಸ್: ಎಷ್ಟು, ಯಾವಾಗಿನಿಂದ? – Kannada News | BMTC And KSRTC Bus fare hike looms as Karnataka government forms regulatory panel

ಬೆಂಗಳೂರು, (ಜುಲೈ 31): ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌ ಹಿನ್ನೆಲೆಯಲ್ಲಿ ಈಗಾಗಲೇ ಡಿಸೇಲ್ (diesel ) ಲೀಟರ್ ಮೇಲೆ ಸುಮಾರು 8 ರೂಪಾಯಿ ಏರಿಕೆ ಆಗಿದೆ.ಇದರಿಂದ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಕ್ಕೆ ಕೋಟ್ಯಂತರ ರೂಪಾಯಿ ಹೆಚ್ಚಿನ ಹೊರೆ ಬೀಳುತ್ತಿದೆ. ಹೀಗಾಗಿ ಸಂಕಷ್ಟದಿಂದ ಪಾರಾಗಲು ಬಸ್ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಕೆಎಸ್​​​ಆರ್​​​ಟಿಸಿ, ಬಿಎಂಟಿಸಿ, NWKRTC, KKRTC ಒಟ್ಟು ನಾಲ್ಕು‌ ನಿಗಮಗಳು ಮನವಿ ಮಾಡಿವೆ. ಕೆಎಸ್ಆರ್ಟಿಸಿ- 33% ರಷ್ಟು, ಬಿಎಂಟಿಸಿ- 44% ರಷ್ಟು ಟಿಕೆಟ್ ದರ ಏರಿಕೆಗೆ ಮನವಿ ಮಾಡಿವೆ ಎನ್ನಲಾಗಿದೆ.

ಡಿಸೇಲ್ ದರ ಏರಿಕೆಯಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC, KKRTC ಗೆ ನಿಗಮಕ್ಕೆ ಒಂದು ತಿಂಗಳಿಗೆ 40 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದೇ ಆವರೇಜ್ ಮುಂದುವರಿದ್ರೆ ವಾರ್ಷಿಕವಾಗಿ 480 ಕೋಟಿ ರೂ. ನಷ್ಟ ಆಗುವ ಸಾಧ್ಯತೆ ಇದೆ. ಇದರಿಂದ ಕೆಎಸ್ಆರ್ಟಿಸಿ,ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ ಟಿಕೆಟ್ ದರ ಏರಿಕೆ ಮಾಡಿಲ್ಲ ‌ಅಂದರೆ, ನಿಗಮಗಳನ್ನು ನಡೆಸುವುದು ಕಷ್ಟ ಎಂದು ಸಿಎಂಗೆ, ನಾಲ್ಕು ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:  319 KAS ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಅರ್ಜಿ ಸಲ್ಲಿಕೆ ಯಾವಾಗಿನಿಂದ? ಇಲ್ಲಿದೆ ವಿವರ

ದರ ಏರಿಕೆಗೆ ತಜ್ಞರ ಸಮಿತಿ ನೇಮಕ

ತ್ತ ರಾಜ್ಯ ಸರ್ಕಾರ ಟಿಕೆಟ್ ದರ ಏರಿಕೆ ಮಾಡಲು ದರ ಏರಿಕೆ ಸಮಿತಿ ರಚನೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇನ್ನೂ ಈಗಾಗಲೇ ಬಸ್ ದರ ಏರಿಕೆಗೆ ಸಾರಿಗೆ ನಿಗಮಗಳು ಪಟ್ಟು ಹಿಡಿದಿದ್ದು, ಎಲ್ಲಾ ನಿಗಮಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ದರ ಏರಿಕೆ ಬಗ್ಗೆ ಶಿಫಾರಸ್ಸು ಮಾಡಲು ಈ ಸಮಿತಿಗೆ ಸೂಚನೆ ನೀಡಲಾಗಿದೆ.

ಈ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ, ಸಮಿತಿಯ ಅಧ್ಯಕ್ಷ ದ್ವಾರಕನಾಥ್ ಬಾಬು, ಸರ್ಕಾರದ ಕಾರ್ಯದರ್ಶಿ ( ನಿವೃತ್ತ) ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆ (ಸಮಿತಿ ಸದಸ್ಯ)ಡಾ. ಅಬ್ದುಲ್ ಪಿಂಜರಿ, (ಸಮಿತಿ ಸದಸ್ಯ) ಇರಲಿದ್ದಾರೆ. ಇದರಿಂದ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಖಚಿತ ಎನ್ನಲಾಗುತ್ತಿದ್ದು, ಎಷ್ಟು ಏನು ಎನ್ನುವುದು ಮಾತ್ರ ಸರ್ಕಾರ ಸುತ್ತೋಲೆ ಹೊರಡಿಸಿದ ಬಳಿಕವೇ ತಿಳಿಯಲಿದೆ.

ಒಟ್ಟಿನಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಫಿಕ್ಸ್ ಆಗಿದ್ದು, ಎಷ್ಟು ಏನು ಎನ್ನುವುದು ಮಾತ್ರ ನಿಗೂಢವಾಗಿದೆ.

ಕರ್ನಾಟಕದಲ್ಲಿ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ವಾಣಿಜ್ಯ ಹಡಗು, ನಾವಿಕರ ಮೇಲಿನ ದಾಳಿ ತಡೆಯಿರಿ’; ಇರಾನ್ ವಿದೇಶಾಂಗ ಸಚಿವರ ಜೊತೆ ಭಾರತ ಮಾತುಕತೆ – Kannada News | Avoid attacks on commercial shipping Minister S Jaishankar conveys Indias concern in call with Iran FM Abbas Araghchi

ನವದೆಹಲಿ, ಜುಲೈ 31: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S Jaishankar) ಇಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘಚಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಸಂಭಾಷಣೆ ನಡೆಸಿದ್ದು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಸಂಘರ್ಷಗಳ ಕುರಿತು ಭಾರತಕ್ಕಿರುವ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ವಾಣಿಜ್ಯ ಹಡಗುಗಳು ಮತ್ತು ನಾವಿಕರನ್ನು ಟಾರ್ಗೆಟ್ ಮಾಡಬಾರದು ಎಂದು ಸಚಿವ ಜೈಶಂಕರ್ ಇರಾನ್‌ಗೆ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಸಚಿವ ಜೈಶಂಕರ್, “ಇಂದು ಸಂಜೆ ಇರಾನ್ ವಿದೇಶಾಂಗ ಸಚಿವ ಅರಾಘಚಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರದ ಕುರಿತು ನಮ್ಮ ತೀವ್ರ ಕಳವಳವನ್ನು ಅವರಿಗೆ ತಿಳಿಸಿದೆ. ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ತಕ್ಷಣವೇ ತಡೆಯಬೇಕು ಎಂದು ಬಲವಾಗಿ ಆಗ್ರಹಿಸಿದೆ. ಯಾವುದೇ ಕಡೆಯಿಂದ ಇಂತಹ ದಾಳಿಗಳು ನಡೆದರೂ ಅದನ್ನು ಭಾರತ ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು

ಪಶ್ಚಿಮ ಏಷ್ಯಾ ಮತ್ತು ಹಾರ್ಮುಜ್ ಜಲಸಂಧಿ ಭಾಗದಲ್ಲಿ ಜಾಗತಿಕ ಕಡಲ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದ್ದು, ಹಲವು ಹಡಗುಗಳ ಮೇಲಿನ ದಾಳಿಯಿಂದಾಗಿ ಭಾರತೀಯ ನಾವಿಕರು ಸೇರಿದಂತೆ ಹಲವರ ಜೀವಕ್ಕೆ ಅಪಾಯ ಉಂಟಾಗಿದೆ. ಜಾಗತಿಕ ವಾಣಿಜ್ಯ ಸರಕು ಸಾಗಣೆಗೆ ಪ್ರಮುಖವಾಗಿರುವ ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು ಮತ್ತು ಯಾವುದೇ ಸಂಘರ್ಷದಲ್ಲೂ ನಾಗರಿಕ ವಾಣಿಜ್ಯ ಹಡಗುಗಳನ್ನು ಅಥವಾ ನಾವಿಕರನ್ನು ಎಳೆದು ತರಬಾರದು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.

ಇದನ್ನೂ ಓದಿ: ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ

ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಭಾರತವು ಯಾವಾಗಲೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಬೆಂಬಲಿಸುತ್ತದೆ ಎಂಬುದನ್ನು ಭಾರತದ ವಿದೇಶಾಂಗ ಸಚಿವರು ಈ ಮಾತುಕತೆಯ ವೇಳೆ ಒತ್ತಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಜೂಡೋದಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ; ಬಂಗಾರಕ್ಕೆ ಮುತ್ತಿಕ್ಕಿದ ಹರ್ಷ್ ಸಿಂಗ್ – Kannada News | India’s Historic Judo Gold! Asmita Day and Harsha Singh Shine at 2026 CWG Day 9

2026ರ ಕಾಮನ್‌ವೆಲ್ತ್ ಗೇಮ್ಸ್ (Commonwealth Games 2026) ಕ್ರೀಡಾಕೂಟದ 9ನೇ ದಿನದಂದು ಭಾರತ ಕೆಲವೇ ನಿಮಿಷಗಳ ಅಂತರದಲ್ಲಿ ಎರಡೆರಡು ಬಂಗಾರದ ಪದಕಗಳನ್ನು ಗೆದ್ದುಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ಎರಡು ಚಿನ್ನದ ಪದಕಗಳು ಒಂದೇ ಗೇಮ್​ನಲ್ಲಿ ಅಂದರೆ ಜೂಡೋದಲ್ಲಿ ಬಂದಿದೆ. ಮೊದಲಿಗೆ ಮಹಿಳೆಯರ ಜೂಡೋ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ (Asmita Day) ಕೆನಡಾದ ಆಟಗಾರ್ತಿ ಹೈಡಿ ಕ್ವಾಚ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ, ಈ ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ನಡೆದ ಪುರುಷರ 60 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್ಷ್ ಸಿಂಗ್ (Harsh Singh) ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು 10-0 ಅಂತರದಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು.

ಭಾರತಕ್ಕೆ 5ನೇ ಚಿನ್ನದ ಪದಕ

ಅಸ್ಮಿತಾ ಡೇ ಮತ್ತು ಹರ್ಷ್ ಸಿಂಗ್ ಜೂಡೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಏಕೆಂದರೆ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಮತ್ತು ಪುರುಷ ಜೂಡೋ ಪಟುಗಳು ಎಂಬ ಹೆಗ್ಗಳಿಕೆಗೆ ಅಸ್ಮಿತಾ ಡೇ ಹಾಗೂ ಹರ್ಷ್ ಸಿಂಗ್ ಪಾತ್ರರಾಗಿದ್ದಾರೆ. ಇದರೊಂದಿಗೆ, ಪ್ರಸ್ತುತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ 5 ಕ್ಕೇರಿದೆ. ಹಾಗೆಯೇ ಭಾರತದ ಒಟ್ಟು ಪದಕಗಳ ಸಂಖ್ಯೆ 19 ಕ್ಕೆ ತಲುಪಿದೆ.

ಹರ್ಷ್ ಸಿಂಗ್ ಫೈನಲ್‌ ಪ್ರಯಾಣ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹರ್ಷ್ ಅವರ ಪ್ರಯಾಣವನ್ನು ನೋಡುವುದಾದರೆ.. 16 ನೇ ಸುತ್ತಿನಲ್ಲಿ ಮಲಾವಿಯ ಚಿಕೊಂಡಿ ಕಥೆವೆರಾ ಅವರನ್ನು ಸೋಲಿಸಿದ ಹರ್ಷ್​, ಕ್ವಾರ್ಟರ್ ಫೈನಲ್‌ನಲ್ಲಿ ವನವಾಟುವಿನ ಅಲನ್ ಮಂತುಲಿಯನ್ನು ಸೋಲಿಸಿದರು. ನಂತರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಆಂಟೂನ್ ನೆಟೊ ಅವರನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರು. ಫೈನಲ್‌ನಲ್ಲಿ ಹರ್ಷ್, ಆಸ್ಟ್ರೇಲಿಯಾದ ಒಲಿಂಪಿಕ್ಸ್ ಚಾಂಪಿಯನ್ ಜೋಶುವಾ ಕಾಟ್ಜ್ ಅವರನ್ನು ಎದುರಿಸಿದರು.

CWG 2026: ಭಾರತಕ್ಕೆ 4ನೇ ಚಿನ್ನ; ಜೂಡೋದಲ್ಲಿ ಬಂಗಾರ ಗೆದ್ದ ಅಸ್ಮಿತಾ ಡೇ

ಪಂದ್ಯದ ಆರಂಭದಲ್ಲಿ, ಆಸ್ಟ್ರೇಲಿಯಾದ ಜೋಶುವಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಹರ್ಷ್ ಶಾಂತಯುತ ಆಟವನ್ನು ಪ್ರದರ್ಶಿಸುವ ಮೂಲಕ ಆಸೀಸ್ ಆಟಗಾರನಿಗೆ ಮುನ್ನಡೆ ಸಾಧಿಸಲು ಬಿಡಲಿಲ್ಲ. ಪಂದ್ಯ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ, ಹರ್ಷ್ ‘ಥ್ರೋ ಮತ್ತು ಪಿನ್’ ಮೂವ್ ಮಾಡುವ ಮೂಲಕ 10-0 ಅಂತರದಿಂದ ಪಂದ್ಯವನ್ನು ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:01 pm, Fri, 31 July 26

Source link

ಕರಾಚಿಯಲ್ಲಿ ಗ್ಯಾಂಗ್‌ಸ್ಟರ್ ಸಹೋದರನ ಮೇಲೆ ಗುಂಡಿನ ದಾಳಿ: ‘ಧುರಂಧರ್’ ಸಿನಿಮಾಗೆ ಇದೆ ನಂಟು – Kannada News | Karachi Gangster Uzair Baloch brother Zubair shot What is Dhurandhar movie connection

ಪಾಕಿಸ್ತಾನದ ಕರಾಚಿಯ ಲಿಯಾರಿ (Lyari) ಪ್ರದೇಶದಲ್ಲಿ ಗುರುವಾರ (ಜುಲೈ 30) ಸಂಜೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಜೈಲಿನಲ್ಲಿರುವ ಮಾಜಿ ಗ್ಯಾಂಗ್‌ಸ್ಟರ್ ಹಾಗೂ ಪೀಪಲ್ಸ್ ಅಮ್ನ್ ಕಮಿಟಿ ಮಾಜಿ ಮುಖ್ಯಸ್ಥ ಉಜೈರ್ ಬಲೋಚ್ ಅವರ ಸಹೋದರ ಜುಬೈರ್ ಬಲೋಚ್ (Zubair Baloch) ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಗೂ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ (Dhurandhar) ಸಿನಿಮಾಗೂ ಪ್ರಮುಖ ನಂಟಿರುವುದರಿಂದ ಭಾರಿ ಚರ್ಚೆ ಆಗುತ್ತಿದೆ.

40 ವರ್ಷದ ಜುಬೈರ್ ಬಲೋಚ್ ಕರಾಚಿಯ ಲಿಯಾರಿಯ ಸಿಂಗು ಲೇನ್‌ನಲ್ಲಿರುವ ಮನೆಯ ಹೊರಗೆ ಕುಳಿತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದಿಢೀರ್ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಜುಬೈರ್ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಗುಂಡುಗಳು ತಾಗಿದ್ದು, ಆತನನ್ನು ತಕ್ಷಣವೇ ಕರಾಚಿಯ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

ಜುಬೈರ್ ಬಲೋಚ್ ಸ್ಥಿತಿ ಚಿಂತಾಜನಕ:

ಈ ಫೈರಿಂಗ್ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರು ಹಾದಿಹೋಕರಿಗೂ ಗುಂಡುಗಳು ತಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಜುಬೈರ್ ಬಲೋಚ್ ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡ ಆತನ ಸ್ಥಿತಿ ಚಿಂತಾಜನಕ ಆಗಿದೆ ಎಂದು ವರದಿ ಆಗಿದೆ. ಜುಬೈರ್ ಬಲೋಚ್ ವಿರುದ್ಧ 2012ರಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದು, 2025ರ ಜನವರಿಯಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಹಳೆಯ ಗ್ಯಾಂಗ್ ವೈರತ್ವವೇ ಈ ದಾಳಿಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ಧುರಂಧರ್’ ಸಿನಿಮಾದ ನಂಟು ಏನು?

ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದ ‘ಧುರಂಧರ್’ ಹಾಗೂ ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಕಥೆಯು ಕರಾಚಿಯ ಲಿಯಾರಿ ಗ್ಯಾಂಗ್‌ಸ್ಟರ್‌ಗಳ ನೆಟ್‌ವರ್ಕ್ ಸುತ್ತಲೇ ಸಾಗುತ್ತದೆ. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಈ ಸಿನಿಮಾದಲ್ಲಿ ಜುಬೈರ್ ಬಲೋಚ್ ಅವರ ಸಹೋದರ ಉಜೈರ್ ಬಲೋಚ್ ಪಾತ್ರವೂ ಇದೆ. ನಟ ಡ್ಯಾನಿಶ್ ಪಂಡೋರ್ ಅವರು ಈ ಪಾತ್ರದಲ್ಲಿ ನಟಿಸಿದ್ದಾರೆ. ಉಜೈರ್ ಬಲೋಚ್‌ನ ನಿಕಟವರ್ತಿಯಾಗಿದ್ದ ರೆಹಮಾನ್ ಡಕಾಯಿತ್​ನ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ ಮೋಡಿ ಮಾಡಲು ‘ಧುರಂಧರ್ 2’ ವಿಫಲ; ಮೊದಲ ದಿನವೇ ಮುಗ್ಗರಿಸಿದ ಚಿತ್ರ

ಏನಿದು ‘ಧುರಂಧರ್’ ಕಥಾಹಂದರ?

2000ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಲಿಯಾರಿ ಪ್ರದೇಶದಲ್ಲಿದ್ದ ಅಪರಾಧ ಜಾಲದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಭಾರತದ ಮೇಲೆ ಬೆದರಿಕೆ ಒಡ್ಡುತ್ತಿದ್ದ ಭಯೋತ್ಪಾದಕರ ಜಾಲವನ್ನು ಧ್ವಂಸಗೊಳಿಸಲು ಲಿಯಾರಿಯ ಗ್ಯಾಂಗ್‌ಸ್ಟರ್ ಜಗತ್ತಿಗೆ ನುಗ್ಗುವ ಭಾರತೀಯ ಗೂಢಚಾರಿ ಜಸ್ಕಿರತ್ ಸಿಂಗ್ ರಂಗಿ (ರಣವೀರ್ ಸಿಂಗ್) ಪಾತ್ರದ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ – Kannada News | Will No appeal to Supreme Court Says Dharwad Yogesh Gowda Wife after Vinay Kulkarni Bail

ಬೆಂಗಳೂರು/ಧಾರವಾಡ, (ಜುಲೈ 31): ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ (Yogesh Gowda) ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Vinay Kulkarni) ಬಿಗ್‌ ರಿಲೀಫ್‌ ಸಿಕ್ಕಿದೆ. ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹೈಕೋರ್ಟ್ (High Court) ವಿಭಾಗೀಯ ಪೀಠ, ಜೀವಾವಧಿ ಶಿಕ್ಷೆಯನ್ನೂ ಅಮಾನತ್ತಿನಲ್ಲಿಟ್ಟಿದೆ. ಇನ್ನೊಂದೆಡೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗುವುದಾಗಿ ಮೃತ ಯೋಗೇಶ್​​ ಗೌಡ ಸಹೋದರ ಗುರನಾಥ್​ ಗೌಡ ಹೇಳಿದ್ದಾರೆ. ಆದ್ರೆ, ಯೋಗೇಶ್​​ ಗೌಡ ಪತ್ನಿ ಮಲ್ಲಮ್ಮ ಸುಪ್ರೀಂ ಕೋರ್ಟ್​​​ಗೆ ಹೋಗುವುದಿಲ್ಲ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಮ್ಮ, ನಾನು ಯಾರಿಗೂ ಬೆಂಬಲ ನೀಡಲ್ಲ. ನಾನು ಜಮೀನಿನ ಕೆಲಸ ಮಾಡಿ ಬದುಕುತ್ತಿರುವೆ. ಕೆಲವರು ನನ್ನ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ದೇವರು ಒಳ್ಳೆದು ಮಾಡಿದವರಿಗೆ ಒಳ್ಳೆದಾಗಿದೆ. ಕೆಟ್ಟದನ್ನು ಮಾಡಿದವರಿಗೆ ಕೆಟ್ಟದ್ದು ಆಗತ್ತೆ. ಹಲವರು ಮಲ್ಲಮ್ಮ ದುಡ್ಡು ತಿಂದಾಳು ಎಂದು ಆರೋಪ ಮಾಡಿದ್ದರು. ಈ ಆದೇಶ ಅವರಿಗೆ ತಕ್ಕ ಪಾಠ, ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ, ಹಣ ಪಡೆದಿದ್ರೆ ಹಗಲು ರಾತ್ರಿ ದುಡಿಯುತ್ತಿರಲಿಲ್ಲ. ನಾನು ಸುಪ್ರೀಂ ಕೋರ್ಟ್ ಮೊರೆ ಹೋಗಲ್ಲ, ಪಕ್ಷದಿಂದ ಗುರುನಾಥಗೌಡ ಹಾಗೂ ಬಸವರಾಜ ಕೊರವರ ಹಣ ತೆಗೆದುಕೊಂಡಿದ್ದಾರೆ. ಅದಕ್ಕೆ ಮುಂದೆ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್​ಗೆ ನಾನು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಭಾರತಕ್ಕೆ 4ನೇ ಚಿನ್ನ; ಜೂಡೋದಲ್ಲಿ ಬಂಗಾರ ಗೆದ್ದ ಅಸ್ಮಿತಾ ಡೇ – Kannada News | Asmita Dey Secures Historic Judo Gold for India at CWG 2026 Glasgow, 4th Medal!

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟದ 9ನೇ ದಿನದಂದು ಭಾರತದ ಮಹಿಳಾ ಜೂಡೋ ಆಟಗಾರ್ತಿ ಅಸ್ಮಿತಾ ಡೇ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಡಾದ ಆಟಗಾರ್ತಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕವಾಗಿದ್ದು, ಈ ಮೂಲಕ ಅಸ್ಮಿತಾ ಡೇ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿದೆ.

ಅಸ್ಮಿತಾ ಕಾಮನ್‌ವೆಲ್ತ್ ಪ್ರಯಾಣ

ಅಸ್ಮಿತಾ ಡೇ ಅವರ ಕಾಮನ್‌ವೆಲ್ತ್ ಗೇಮ್ಸ್ ಪ್ರಯಾಣವನ್ನು ನೋಡುವುದಾದರೆ.. ಮೊದಲಿಗೆ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಇವಾ ಎವಿಂಗ್ ಅವರನ್ನು ಸೋಲಿಸಿದ್ದ ಅಸ್ಮಿತಾ, ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಜೂಡೋ ಆಟಗಾರ್ತಿ ಸಮ್ಮರ್ ಶಾ ಅವರನ್ನು ಮಣಿಸಿದ್ದರು. ಇದೀಗ ಫೈನಲ್​ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಯಾರು ಈ ಅಸ್ಮಿತಾ ಡೇ?

ತ್ರಿಪುರಾದ ಬೆಲೋನಿಯಾದವರಾದ ಅಸ್ಮಿತಾ ಡೇ ಜೂಡೋ ಆಟಗಾರ್ತಿಯಾಗುವ ಮೊದಲು ಓಟದಲ್ಲಿ ಆಸಕ್ತಿ ಹೊಂದಿದ್ದರು. 800 ಮೀಟರ್ ಓಟದಲ್ಲಿ ತಮ್ಮ ಛಾಪು ಮೂಡಿಸಿದ್ದ ಅಸ್ಮಿತಾಗೆ ಆ ನಂತರ, ಜಿಲ್ಲಾ ಟ್ರಯಲ್ಸ್ ಸಮಯದಲ್ಲಿ ಜೂಡೋ ಮೇಲೆ ಆಸಕ್ತಿ ಬೆಳೆಯಿತು. ಹೀಗಾಗಿ ಭೋಪಾಲ್‌ನ SAI ಪ್ರಾದೇಶಿಕ ಕೇಂದ್ರದಲ್ಲಿ ತರಬೇತುದಾರ ಯಶ್ಪಾಲ್ ಸೋಲಂಕಿ ಅವರ ಅಡಿಯಲ್ಲಿ ತರಬೇತಿ ಪಡೆದು ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಅಸ್ಮಿತಾ ಡೇ ಪದಕಗಳ ಭೇಟೆ

ಅಸ್ಮಿತಾ ಡೇ ಈ ಹಿಂದೆ 2025 ರಲ್ಲಿ ಮೊರಾಕೊದಲ್ಲಿ ನಡೆದ ಕಾಸಾಬ್ಲಾಂಕಾ ಆಫ್ರಿಕನ್ ಓಪನ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಹಾಗೆಯೇ ಮಕಾವುದಲ್ಲಿ ನಡೆದ 2023 ರ ಜೂನಿಯರ್ ಏಷ್ಯಾಕಪ್‌ನಲ್ಲಿಯೂ ಚಿನ್ನ ಗೆದ್ದಿದ್ದರು. ನಂತರ 2023 ರ ಏಷ್ಯನ್ ಓಪನ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದ ಅಸ್ಮಿತಾ, ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಹಲವಾರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದರು. ಇದರ ಜೊತೆಗೆ ಅಸ್ಮಿತಾ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಮಂದಿರ ಕಾಣಿಕೆ ಕಳವು; ಕೇಸರಿ ಬಟ್ಟೆ ಧರಿಸಿ ಸಂಸತ್ ಹೊರಗೆ ಪಪ್ಪು ಯಾದವ್ ಪ್ರತಿಭಟನೆ – Kannada News | Dressed as a priest MP Pappu Yadav Enacts Donation Theft outside the Parliament Rahul Gandhi joins

ಅಯೋಧ್ಯೆ, ಜುಲೈ 31: ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು (Ram Temple Donation Theft) ಆರೋಪವನ್ನು ಖಂಡಿಸಿ ವಿರೋಧ ಪಕ್ಷಗಳ ನಾಯಕರು ಇಂದು ಸಂಸತ್ತಿನ ಹೊರಗೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರಿಂದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ಮುಂದುವರಿಯಿತು. ಸಂಸತ್ತಿನ ಒಳಗೆ ಈ ವಿಷಯದ ಕುರಿತು ಚರ್ಚೆಗೆ ಒತ್ತಾಯಿಸಿ ಪುರ್ನಿಯಾ ಸಂಸದ ಪಪ್ಪು ಯಾದವ್ ಕೇಸರಿ ಬಟ್ಟೆ ಧರಿಸಿ, ಸನ್ಯಾಸಿಯ ವೇಷದಲ್ಲಿ ಕಾಣಿಕೆ ಹುಂಡಿಯನ್ನು ಹಿಡಿದು ಪ್ರತಿಭಟನೆಯ ನೇತೃತ್ವ ವಹಿಸಿದರು. ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ಹುಂಡಿಗೆ ಸಾಂಕೇತಿಕವಾಗಿ ಕಾಣಿಕೆ ಹಾಕುವ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಸಾಂಕೇತಿಕ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಸಂಸತ್ ಚಲೋ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿರೋಧ ಪಕ್ಷಗಳು ತಮ್ಮ ಪ್ರತಿಭಟನಾ ಅಭಿಯಾನವನ್ನು ಮುಂದುವರಿಸಿರುವ ಬೆನ್ನಲ್ಲೇ ಈ ಸಾಂಕೇತಿಕ ಪ್ರತಿಭಟನೆ ನಡೆದಿದೆ. ಸತತ ಎರಡನೇ ದಿನವೂ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದೊಳಗೆ ಅಮಿತ್ ಶಾ ಅವರ ಗೈರುಹಾಜರಿಯನ್ನು ಪ್ರಶ್ನಿಸುವ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version