ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ – Kannada News | Sarvam AI releases advanced document intelligence model for Indic languages, gets praises from critical reviewers
ನವದೆಹಲಿ, ಫೆಬ್ರುವರಿ 8: ಭಾರತದ ಎಐ ಸ್ಟಾರ್ಟಪ್ ಸರ್ವಮ್ ಎಐ (Sarvam AI) ಇದೀಗ ಹೊಸ ಹೊಸ ಮಲ್ಟಿಮೋಡಲ್ ಎಐ ಮಾಡಲ್ವೊಂದನ್ನು ಅನಾವರಣಗೊಳಿಸಿದೆ. ಸರ್ವಮ್ ವಿಶನ್ (Sarvam Vision) ಎಂದು ಕರೆಯಲಾಗಿರುವ ಈ ಮಾಡಲ್ ಭಾರತೀಯ ಭಾಷೆಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಆಪ್ಟಿಕಲ್ ಕ್ಯಾರೆಕ್ಟರ್ ರೆಗಗ್ನಿಶನ್ (ಒಸಿಆರ್) ಮತ್ತು ವಿಶುವಲ್ ಲ್ಯಾಂಗ್ವೇಜ್ ಗ್ರಹಿಕೆಯ (Visual Language Understanding) ಪರಿಣಿತಿ ಹೊಂದಿದೆ. ಅಂದರೆ, ಭಾರತೀಯ ಭಾಷೆಗಳ ವಿಡಿಯೋ, ಪಠ್ಯ ಮತ್ತು ದಾಖಲೆಗಳನ್ನು ಇದು ಗ್ರಹಿಸಿ, ನಿಮಗೆ ಬೇಕಾದ ಹೂರಣವಾಗಿ ಸಿದ್ದಪಡಿಸಬಲ್ಲುದು….