IND vs SL: ಲಂಕಾ ವಿರುದ್ಧ ಟೆಸ್ಟ್ ಸರಣಿ ಆಡ್ತಾರಾ ಬುಮ್ರಾ? ಫಿಟ್ನೆಸ್ ವರದಿಯಲ್ಲಿ ಏನಿದೆ? – Kannada News | Jasprit Bumrah Cleared Fit for India vs Sri Lanka Test Series; BCCI Confirms Availability

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಸರನ್ಶ್ ಜೈನ್ (PC-PTI).

Source link

ಅಕ್ವೇರಿಯಂ ಫಿಶ್​ ಸಾಕಲು ಬಿಟ್ಟಿಲ್ಲ ಎಂದು ನೊಂದು ಮನೆ ಬಿಟ್ಟ ಏಳನೇ ತರಗತಿಯ ಬಾಲಕ! – Kannada News | 13 Year Old Bengaluru Boy Goes Missing After Father Scolds Him Over Rearing Aquarium Fish

ನಾಪತ್ತೆಯಾಗಿರುವ ಬಾಲಕImage Credit source: Tv9 Kannada

ಬೆಂಗಳೂರು, ಜುಲೈ 31: ಸಣ್ಣಪುಟ್ಟ ವಿಚಾರಗಳಿಗೂ ಇಂದಿನ ಮಕ್ಕಳು ಮುನಿಸಿಕೊಳ್ಳೋದು ಮಾಮೂಲು. ಅದರಲ್ಲೂ ಹೆತ್ತವರ ಮಾತುಗಳಿಗೆ ಕೋಪ ತುಸು ಜಾಸ್ತಿಯೇ. ಇದೇ ಕಾರಣಕ್ಕೆ ತಂದೆ-ತಾಯಿಯ ಜೊತೆ ಮಾತು ಬಿಡುವ ಮಕ್ಕಳೂ ಇದ್ದಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಏಳನೇ ತರಗತಿಯ ಬಾಲಕನೋರ್ವ ತಂದೆ ಬೈದರು ಎಂಬ ಕಾರಣಕ್ಕೆ ಮನೆಯನ್ನೇ ಬಿಟ್ಟು ತೆರಳಿದ್ದಾನೆ. ಘಟನೆಗೆ ಕಾರಣವಾಗಿರೋದು ಆತನಿಗೆ ಮೀನುಗಳ ಮೇಲಿದ್ದ ಅಪಾರವಾದ ಪ್ರೀತಿ. ಮನೆ ಮಗನ ನಿರ್ಧಾರದಿಂದ ಕುಟುಂಬಸ್ಥರೀಗ ಕಂಗಾಲಾಗಿದ್ದು, ಆತನನ್ನು ಹುಡುಕಲು ಹರಸಾಹಸ ಪಡುತ್ತಿದ್ದಾರೆ.

ಹೌದು, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಗೌಡನಪಾಳ್ಯದ ನಿವಾಸಿ 13 ವರ್ಷದ ಬಾಲಕ ಕಿಶೋರ್​ ನಾಪತ್ತೆಯಾಗಿ ಬರೋಬ್ಬರಿ ನಾಲ್ಕು ದಿನಗಳು ಕಳೆದಿವೆ. ಜುಲೈ 27ರಂದು ಮನೆಯಿಂದ ಹೊರ ಹೋಗಿದ್ದ ಈತ ತಿರುಗಿಬಂದಿಲ್ಲ ಎನ್ನಲಾಗಿದ್ದು, ಸಂಬಂಧಿಕರು, ಸ್ನೇಹಿತರು, ಶಾಲೆಯಲ್ಲಿ ವಿಚಾರಿಸಿದಾಗಲು ಆತನ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪೊಲೀಸರಿಂದಲೂ ಬಾಲಕ ಕಿಶೋರ್​ಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಜೆಪ್ಟೋ ಡೆಲಿವರಿ ಪಾರ್ಟ್ನರ್​​ನಿಂದ ಕಿರುಕುಳ: ವಿಡಿಯೋ ಹಂಚಿಕೊಂಡು ಮಹಿಳೆ ಗಂಭೀರ ಆರೋಪ

ಸೈಕಲ್‌ನಲ್ಲಿ ಮನೆಯಿಂದ ಹೊರಹೋಗಿದ್ದ ಬಾಲಕ

ಏಳನೇ ತರಗತಿ ಓದುತ್ತಿದ್ದ ಕಿಶೋರ್​​ಗೆ ಅಕ್ವೇರಿಯಂ ಮೀನು ಸಾಕುವುದೆಂದರೆ ಅಪಾರ ಪ್ರೀತಿ. 15 ದಿನಗಳ ಹಿಂದೆ ಆತ ಮನೆಗೆ ಮೀನು ತಂದಿದ್ದಾಗ, ತಂದೆ ನಾಗೇಂದ್ರ ಹಣ ವ್ಯರ್ಥ ಮಾಡಬಾರದೆಂದು ಗದರಿ ಬುದ್ಧಿವಾದ ಹೇಳಿದ್ದರು. ಆಗಲೂ ಕೋಪಗೊಂಡು ಮನೆ ಬಿಟ್ಟಿದ್ದ ಆತನನ್ನು ಪೋಷಕರು ಹುಡುಕಿ ತಂದು ಮತ್ತೆ ಹೀಗೆ ಮಾಡದಂತೆ ತಿಳಿಹೇಳಿದ್ದರು. ಈ ನಡುವೆ ಇದೇ ತಿಂಗಳ 27ರಂದು ಶಾಲೆಯಿಂದ ಬರುವಾಗ ಕಿಶೋರ್ ಮತ್ತೆ ಮನೆಗೆ ಅಕ್ವೇರಿಯಂ ಮೀನು ತಂದಿದ್ದ. ಇದನ್ನು ನೋಡಿ ಕೋಪಗೊಂಡ ತಂದೆ ಆತನಿಗೆ ಹೊಡೆದು, ಟ್ಯೂಷನ್‌ಗೆ ಹೋಗುವಂತೆ ತಿಳಿಸಿ ಕೆಲಸಕ್ಕೆ ತೆರಳಿದ್ದರು. ಇದರಿಂದೀವ ತೀವ್ರ ಮನನೊಂದ ಬಾಲಕ, ಸಂಜೆ 5 ಗಂಟೆ ಸುಮಾರಿಗೆ ತನ್ನ ಸೈಕಲ್‌ನಲ್ಲಿ ಮನೆಯಿಂದ ಹೊರಟು ಹೋದವನು ಮತ್ತೆ ವಾಪಸ್ ಬಂದಿಲ್ಲ. ರಾತ್ರಿ ಹತ್ತು ಗಂಟೆಯಾದರೂ ಆತನ ಬಗ್ಗೆ ಸುಳಿವು ಸಿಗದ ಕಾರಣ ಕಿಶೋರ್​ ತಾಯಿ ಲಕ್ಷ್ಮೀ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾಗಿ 4 ದಿನ ಕಳೆದರೂ ಮಗ ಪತ್ತೆಯಾಗದ ಕಾರಣ ಪೋಷಕರು ಕಂಗಾಲಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:26 pm, Fri, 31 July 26

Source link

ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ – Kannada News | Meteorological Department Director CS Patil Give Big Update about Post monsoon In Karnataka

ಬೆಂಗಳೂರು, (ಜುಲೈ 31): ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ (Karnataka) ಮುಂಗಾರು ಕುಂಠಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಹಿಂಗಾರು ಮಳೆ (Post monsoon) ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಎಫೆಕ್ಟ್ ಮಹಾರಾಷ್ಟ್ರಕ್ಕೂ ತಟ್ಟಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕರಾವಳಿ, ಉಡುಪಿ, ಚಿಕ್ಕ ಮಂಗಳೂರು ಭಾಗದಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡುಗು, ಮೈಸೂರು ಭಾಗದಲ್ಲಿ ಸಾದಾರಣ ಮಳೆಯಾಗಲಿದೆ. ಇನ್ನು ಫೆಸಿಪಿಕ್ ಸಾಗರದಲ್ಲಿ ಉಷ್ನಾಂಶ ಹೆಚ್ಚಾಗಿದ್ದು, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಳುವಾದ ಮೊಬೈಲ್​​ಗಳ ರಿಕವರಿಯಲ್ಲಿ ಭಾರತದಲ್ಲೇ ಕರ್ನಾಟಕ ನಂಬರ್ 1: ದೆಹಲಿ ಲಾಸ್ಟ್! – Kannada News | Karnataka Police Ranks No. 1 in India for Stolen Mobile Phone Recovery; Delhi Places Last

ಬೆಂಗಳೂರು, ಜುಲೈ 31: ಸದ್ಯ ದೇಶದಲ್ಲಿಯೇ ಅತಿಹೆಚ್ಚು ಕಳ್ಳತನ ಆಗುವ ವಸ್ತು ಅಂದ್ರೆ ಅದು ಮೊಬೈಲ್​​ ಫೋನ್​​ಗಳು. ಈ ಬಗ್ಗೆ ಪ್ರತಿನಿತ್ಯವೂ ಸಾವಿರಾರು ದೂರುಗಳು ದಾಖಲಾಗುತ್ತವೆ. ಬಹುತೇಕರು ಕಳುವಾಗಿರುವ ತಮ್ಮ ಬೊಬೈಲ್​​ ಆಸೆಯನ್ನೇ ಬಿಟ್ಟಿರುತ್ತಾರೆ. ಆದರೆ ಕಳುವಾದ ಮೊಬೈಲ್​​ಗಳನ್ನು ಪತ್ತೆ ಮಾಡಿ ವಾಪಸ್​​ ಕೊಡಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾದ ಟಾಪ್ 5 ರಾಜ್ಯಗಳ ಪೈಕಿ, ರಿಕವರಿ ಶೇಕಡಾವಾರು ಆಧಾರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ.

ಕರ್ನಾಟಕದಲ್ಲಿ ಒಂದು ವರ್ಷಕ್ಕೆ 5 ಲಕ್ಷದ 71 ಸಾವಿರ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಭಾರತ ಸರ್ಕಾರದ ಸಿಇಐಆರ್ ಪೋರ್ಟಲ್​​ ಮೂಲಕ ರಿಕವರಿ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್​​ IMEI ನಂಬರ್​​ ಮೂಲಕ ಕಳುವಅದ ಮೊಬೈಲ್​​ಗಳ ಮೇಲೆ ನಿಗಾ ಇಡಲಾಗುವ ಕಾರಣ ಅವನ್ನು ಯಾರು ಬಳಸಿದರೂ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಅಲರ್ಟ್​​ ಆಗಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿರುವ ಮೊಬೈಲ್​​ಗಳ ಅಂಕಿ-ಅಂಶ ಗಮನಿಸಿದಾಗ ಕರ್ನಾಟಕವೇ ಮೊಬೈಲ್​​ಗಳ ರಿಕವರಿಯಲ್ಲಿ ಮುಂಚೂಣಿಯಲ್ಲಿರೋದು ಕಂಡುಬಂದಿದೆ.

ಇದನ್ನೂ ಓದಿ: ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ

ಕರ್ನಾಟಕ ಫಸ್ಟ್, ದೆಹಲಿ ಲಾಸ್ಟ್!

ರಾಜ್ಯ ದಾಖಲಾದ ಪ್ರಕರಣಗಳು ವಶಪಡಿಸಿಕೊಂಡ ಫೋನ್‌ಗಳು ರಿಕವರಿ ಪ್ರಮಾಣ
ದೆಹಲಿ 1024244 45931 7.09%
ಮಹಾರಾಷ್ಟ್ರ 689044 159068 39.74%
ಕರ್ನಾಟಕ 572972 155940 47.48%
ತೆಲಂಗಾಣ 526792 137049 44.16%
ಉತ್ತರ ಪ್ರದೇಶ 493678 493678 45.77%

ಭಾರತದಲ್ಲಿ ಅತಿಹೆಚ್ಚು ಮೊಬೈಲ್ ಕಳ್ಳತನ ಮೊಬೈಲ್ ಸ್ನಾಚಿಂಗ್ ಪ್ರಕರಣಗಳ ಸಂಖ್ಯೆ ಸಹ ಇದೇ ಐದು ರಾಜ್ಯಗಳಲ್ಲಿ ಹೆಚ್ಚಿದ್ದು, ಸದ್ಯ ಒಂದು ಹಂತಕ್ಕೆ ಪೊಲೀಸರು ರಿಕವರಿ ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಿ ಕೆಲಸ ಮಾಡುತಿದ್ದಾರೆ. ಇದು ಖುಷಿಯ ವಿಚಾರವಾದರೂ ಈ ಮಾದರಿಯ ಕಳ್ಳತನ ಪ್ರಕರಣಗಳ ತಡೆಯುವಲ್ಲಿ ಪೊಲೀಸರು ವಿಫಲರಾಗಿರುವ ಆರೋಪಗಳೂ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್ – Kannada News | After Ramayana Trailer release Kangana Ranaut shares her Photo as Sita and takes a dig at Liberals

ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರ ಲುಕ್ ಹಾಗೂ ಹಿಂದಿ ಉಚ್ಚಾರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಶಾಲಾ ದಿನಗಳಲ್ಲಿ ತಾವು ಸೀತೆಯ ವೇಷ ಧರಿಸಿದ್ದ ಹಳೆಯ ಫೋಟೋ ಒಂದನ್ನು ಹಂಚಿಕೊಂಡು ಜೆನ್​ ಜಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಶಾಲಾ ದಿನಗಳ ಸೀತೆಯ ಅವತಾರ!

ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಬಾಲ್ಯದ ಅಪರೂಪದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಕಂಗನಾ ಕೆಂಪು ಬಣ್ಣದ ಸೀರೆ ಉಟ್ಟು ಸೀತೆಯ ರೂಪದಲ್ಲಿದ್ದರೆ, ಅವರ ಪಕ್ಕದಲ್ಲಿದ್ದ ಮತ್ತೊಬ್ಬ ಬಾಲಕಿ ಶ್ರೀರಾಮನ ವೇಷ ಧರಿಸಿದ್ದಳು. ಕಾಲಿನ ಬಳಿ ಮಂಡಿಯೂರಿ ಕುಳಿತಿದ್ದ ಮತ್ತೊಬ್ಬ ಬಾಲಕ ಹನುಮಂತನ ವೇಷದಲ್ಲಿದ್ದನು.

ಮತ್ತೊಂದು ಫೋಟೋದಲ್ಲಿ ಕಂಗನಾ ತಮ್ಮ ಮುಖದ ಕ್ಲೋಸ್​ ಅಪ್ ದೃಶ್ಯವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಕೈಯೆತ್ತಿ ಆಶೀರ್ವಾದ ಮಾಡುವಂತೆ ಪೋಸ್ ನೀಡಿದ್ದಾರೆ. ಈ ಫೋಟೋಗೆ ವ್ಯಂಗ್ಯದ ರೀತಿಯಲ್ಲಿ ಕ್ಯಾಪ್ಷನ್ ಬರೆದಿರುವ ಕಂಗನಾ, ‘ನನ್ನ ಎಲ್ಲಾ ಲಿಬರಲ್‌ಗಳಿಗೆ ಆಶೀರ್ವಾದಗಳು’ ಎಂದು ನಗುವಿನ ಇಮೋಜಿಗಳೊಂದಿಗೆ ಬಳಸಿದ್ದಾರೆ.

ಜೆನ್ ಜಿ ವಿದ್ಯಾರ್ಥಿಗಳ ಪ್ರತಿಭಟನೆಯ ವಿರುದ್ಧ ವಾಗ್ದಾಳಿ:

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಜೆನ್ ಜಿ ಯುವಕರ ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಮಾತನಾಡಿದ್ದ ಕಂಗನಾ, ‘ನನ್ನ ಜೀವನದಲ್ಲೇ ಇಷ್ಟೊಂದು ಅಸಹ್ಯಕರ ವಾತಾವರಣವನ್ನು ಎಲ್ಲೂ ನೋಡಿರಲಿಲ್ಲ. ಇವರು ಬಳಸುತ್ತಿರುವ ಭಾಷೆ ಮತ್ತು ಸಂಸ್ಕೃತಿ ಭಾರತದ ಘನತೆಗೆ ತಕ್ಕುದಾದುದಲ್ಲ. ನಮಗೆ ಇದರಿಂದ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ‘ಜೆನ್ ಜಿ’ಗಳನ್ನು ‘ಜನರೇಷನ್ ಗಟಾರ್’ ಎಂದಿದ್ದಕ್ಕೆ ಸ್ಪಷ್ಟನೆ ನೀಡಿದ ಕಂಗನಾ ರಣಾವತ್

ಕಂಗನಾಗೆ ತೀವ್ರ ತಿರುಗೇಟು ನೀಡಿದ ಸಿಜೆಪಿ:

ಕಂಗನಾ ಅವರ ಈ ಹೇಳಿಕೆಗೆ ಸಿಜೆಪಿ ವಕ್ತಾರ ಸೌರವ್ ದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಸೌರವ್, ‘ಅವರ ಸ್ವಂತ ಪಕ್ಷದವರೇ ಕಂಗನಾ ರಣಾವತ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಿರುವಾಗ ಸಾರ್ವಜನಿಕರು ಯಾಕೆ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು? ಹಿಮಾಚಲ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡುತ್ತಾ, ಸಂಸದರ ಕೆಲಸ ಇಷ್ಟೊಂದು ಕಷ್ಟ ಎಂದು ತಿಳಿದಿರಲಿಲ್ಲ ಎಂದಿದ್ದರು. ಇದು ಅವರ ಗಂಭೀರತೆಯನ್ನು ತೋರಿಸುತ್ತದೆ. ಈ ದೇಶಕ್ಕಾಗಿ ಜೆನ್ ಜಿ ಯುವಕರು ಕಂಗನಾಗಿಂತ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ – Kannada News | Job Future August 1st Week: Astrology Insights for Your Career Path

ಆಗಸ್ಟ್​​ ಮೊದಲ ವಾರದಲ್ಲಿ ಗ್ರಹಗಳ ಸಂಯೋಗ ಮತ್ತು ದೃಷ್ಟಿಯ ಕಾರಣದಿಂದ ಉದ್ಯೋಗದ ಮೇಲೆ ವಿಪರೀತ ಪರಿಣಾಮಗಳೂ ಬೀರಬಹುದು. ಯಾವುದಕ್ಕೆ ಎಷ್ಟು ಮಹತ್ತ್ವ ಎಂಬ ನಿರ್ಧಾರವನ್ನು ಅವರೇ ಮಾಡಿಕೊಂಡರೆ ಸುಲಭ. ಒತ್ತಡಕ್ಕೆ ಸಿಕ್ಕಿಬಿದ್ದರೆ ನಿಮ್ಮ ಯೋಜನೆ ಮಾರ್ಗವನ್ನು ತಪ್ಪಬಹುದು. ಶುಭವಾಗಲಿ.

ಮೇಷ ರಾಶಿ :

​ನಿಮ್ಮ ರಾಶ್ಯಾಧಿಪತಿ ಮಂಗಳ ಮಿಥುನದಲ್ಲಿದ್ದು ಗುರು-ಸೂರ್ಯ-ಬುಧರ ಉಪಸ್ಥಿತಿ ೪ನೇ ಮನೆಯಲ್ಲಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಬಡ್ತಿ ಅಥವಾ ಉನ್ನತ ಹುದ್ದೆ ಸಿಗುವ ಬಲವಾದ ಯೋಗವಿದೆ. ಹೊಸ ಸಾಹಸಗಳಿಗೆ ಕೈಹಾಕಲು ಇದು ಸೂಕ್ತ ಸಮಯ.

ವೃಷಭ ರಾಶಿ :

​ಚಂದ್ರನು ನಿಮ್ಮದೇ ರಾಶಿಯಲ್ಲಿ ಉಚ್ಛ ಸ್ಥಿತಿಗೆ ಬರಲ್ಲಿದ್ದಾನೆ. ನಿಮ್ಮ ಕೆಲಸದಲ್ಲಿ ಸ್ಥಿರತೆ ಮತ್ತು ಗೌರವ ಹೆಚ್ಚಾಗಲಿದೆ. ಸೃಜನಶೀಲ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅತ್ಯುತ್ತಮ ಪ್ರಗತಿ. ಆತುರದ ನಿರ್ಧಾರಗಳನ್ನು ತಳೆದು ಶಾಂತತೆಯಿಂದ ಕೆಲಸ ನಿರ್ವಹಿಸಿ.

ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿಯೇ ಮಂಗಳನಿದ್ದು, ಧನ ಭಾವದಲ್ಲಿ ಗ್ರಹಗಳ ಬಲವಿದೆ. ಶ್ರಮ ಹೆಚ್ಚಾಗಲಿದೆಯಾದರೂ ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ವಿದೇಶಿ ಸಂಪರ್ಕಗಳಿಂದ ಲಾಭ. ಕಚೇರಿಯಲ್ಲಿ ಕೋಪ ಮತ್ತು ವಾಗ್ವಾದಗಳನ್ನು ಹದ್ದುಬಸ್ತಿನಲ್ಲಿಡುವುದು ಒಳಿತು.

​ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಉಚ್ಚ. ಸೂರ್ಯ ಮತ್ತು ಬುಧ ಒಟ್ಟಿಗಿದ್ದಾರೆ. ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಸರ್ಕಾರಿ ಅಥವಾ ಪ್ರಭಾವಿ ರಂಗದಲ್ಲಿ ಇರುವವರಿಗೆ ಭಾರೀ ಯಶಸ್ಸು, ಹುದ್ದೆ ಬದಲಾವಣೆ ಅಥವಾ ದೊಡ್ಡ ಮಟ್ಟದ ಪ್ರಮೋಷನ್ ಕಾಯುತ್ತಿದೆ. ಅಹಂಕಾರವನ್ನು ದೂರವಿಟ್ಟು ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಿ.

ಸಿಂಹ ರಾಶಿ :

​ನಿಮ್ಮ ರಾಶಿಯಲ್ಲಿ ಕೇತು ಇದ್ದು, ರಾಶ್ಯಾಧಿಪತಿ ಸೂರ್ಯ ೧೨ನೇ ಮನೆಯಲ್ಲಿದ್ದಾನೆ. ಸ್ಥಳ ಬದಲಾವಣೆ ಅಥವಾ ಕಂಪನಿ ಬದಲಾವಣೆಯ ಸಾಧ್ಯತೆ ಹೆಚ್ಚು. ದೂರದೂರು ಅಥವಾ ವಿದೇಶಿ ಉದ್ಯೋಗಾವಕಾಶಗಳು ಒದಗಿಬರಲಿವೆ. ಕೆಲಸದ ಸ್ಥಳದಲ್ಲಿ ತಪ್ಪು ತಿಳುವಳಿಕೆಗಳಾಗದಂತೆ ಎಚ್ಚರವಹಿಸಿ.

ಕನ್ಯಾ ರಾಶಿ :

​ನಿಮ್ಮ ರಾಶಿಯಲ್ಲಿ ಶುಕ್ರನಿದ್ದು, ಲಾಭ ಸ್ಥಾನದಲ್ಲಿ ಗುರು-ಸೂರ್ಯ-ಬುಧರ ಬಲವಿದೆ. ಹೊಸ ಆದಾಯದ ಮೂಲಗಳು ತೆರೆಯಲಿವೆ. ಸ್ವಂತ ಉದ್ಯೋಗ ಮಾಡುವವರಿಗೆ ಸುವರ್ಣ ಅವಕಾಶಗಳು ಬರಲಿವೆ. ವೃತ್ತಿಜೀವನದಲ್ಲಿ ಜಾಣ್ಮೆಯ ನಿರ್ಧಾರಗಳು ಉತ್ತಮ ಫಲ ನೀಡಲಿವೆ.

ತುಲಾ ರಾಶಿ :

​ನಿಮ್ಮ ಕರ್ಮ ಸ್ಥಾನದಲ್ಲಿ ಗುರು, ಸೂರ್ಯ ಮತ್ತು ಬುಧ ಯೋಗ ಸಾಧಿಸುತ್ತಿದ್ದಾರೆ. ಉದ್ಯೋಗ ರಂಗದಲ್ಲಿ ಅತ್ಯಂತ ಸಕಾರಾತ್ಮಕ ಬದಲಾವಣೆ ಕಾಣಲಿದ್ದೀರಿ. ವೃತ್ತಿಯಲ್ಲಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಈ ಸಮಯವನ್ನು ನಿಮ್ಮ ವೃತ್ತಿ ಬೆಳವಣಿಗೆಗೆ ಗರಿಷ್ಠವಾಗಿ ಬಳಸಿಕೊಳ್ಳಿ.

ವೃಶ್ಚಿಕ ರಾಶಿ :

​ಭಾಗ್ಯ ಸ್ಥಾನದಲ್ಲಿ ಗುರು-ಸೂರ್ಯ ಸಂಯೋಗ ಇದೆ. ಉನ್ನತ ಶಿಕ್ಷಣ ಅಥವಾ ಹೊಸ ತರಬೇತಿಗಳ ಮೂಲಕ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ. ದೂರದ ಪ್ರಯಾಣ ಅಥವಾ ಹೊಸ ಪ್ರಾಜೆಕ್ಟ್‌ಗಳು ಸಿಗಲಿವೆ. ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯಿರಿ.

​ಧನು ರಾಶಿ :

​ಎಂಟನೇ ಮನೆಯಲ್ಲಿ ಗ್ರಹಗಳ ಒತ್ತಡವಿದ್ದರೂ, ಮೀನದಲ್ಲಿದ್ದ ಶನಿಯ ದೃಷ್ಟಿ ನಾಲ್ಕನೇ ಮನೆಯಲ್ಲಿ ಇದೆ. ಹಠಾತ್ ಬದಲಾವಣೆಗಳು ಅಥವಾ ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದಿದ್ದರೆ ಮುಂದೆ ಉತ್ತಮ ದಿನಗಳು ಬರಲಿವೆ. ಈಗಿರುವ ಕೆಲಸವನ್ನು ಆತುರಪಟ್ಟು ಬಿಡಬೇಡಿ.

​ಮಕರ ರಾಶಿ :

​ಸಪ್ತಮ ಭಾವದಲ್ಲಿ ಶುಭ ಗ್ರಹಗಳ ಸಂಚಾರವಿದೆ. ಪಾಲುದಾರಿಕೆ ವ್ಯವಹಾರ ಅಥವಾ ಕ್ಲೈಂಟ್ ಆಧಾರಿತ ಕೆಲಸಗಳಲ್ಲಿ ಸಫಲತೆ. ಹೊಸ ಉದ್ಯೋಗ ಒಪ್ಪಂದಗಳು ಕೈಗೂಡಲಿವೆ. ಕೆಲಸದಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಿ.

ಇದನ್ನೂ ಓದಿ: ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?

​ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಇದ್ದು, ೬ನೇ ಮನೆಯಲ್ಲಿ ಗುರು ಹಾಗೂ ಸೂರ್ಯರಿದ್ದಾರೆ. ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಶತ್ರುಗಳು ಅಥವಾ ಸವಾಲುಗಳನ್ನು ಮೆಟ್ಟಿ ನಿಂತು ಜಯಗಳಿಸುತ್ತೀರಿ. ಹೊಸ ಉದ್ಯೋಗಕ್ಕೆ ಸವಾಲಿನ ಹಾದಿ ಇರಲಿದೆ. ಆರೋಗ್ಯ ಹಾಗೂ ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ.

ಮೀನ ರಾಶಿ :

​ನಿಮ್ಮ ರಾಶಿಯಲ್ಲಿಯೇ ಶನಿಯು ವಕ್ರನಾಗಿದ್ದು, ೫ನೇ ಮನೆಯಲ್ಲಿ ಗುರು, ಸೂರ್ಯ, ಬುಧರಿದ್ದಾರೆ. ಕೌಶಲ್ಯ ಅಭಿವೃದ್ಧಿಗೆ ಸೂಕ್ತ ಸಮಯ. ಹಳೆಯ ಯೋಜನೆಗಳು ಪೂರ್ಣಗೊಳಿಸಿ ಹೊಸ ಸ್ಥಾನಮಾನ ಪಡೆಯಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದ್ದು, ಶಿಸ್ತು ಪಾಲಿಸಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ – Kannada News | Mother elephant helps a calf struggling to cross the river.

ಮೂಕ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಪ್ರೀತಿ, ಕಾಳಜಿ ತೋರುತ್ತವೆ. ಮರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಇದೀಗ ತಾಯಾನೆ (mother elephant) ತನ್ನ ಕಂದನ ಮೇಲೆ ಕಾಳಜಿ ತೋರಿದ ದೃಶ್ಯ ವೈರಲ್ ಆಗಿದೆ. ಆನೆಯೊಂದು ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಶೀಶ್ ಜೈನ್ (Ashish Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆನೆಗಳ ಹಿಂಡು ನದಿ ದಾಟುತ್ತಿವೆ. ಇದರಲ್ಲಿ ಮರಿಯಾನೆಯೊಂದು ನೀರಿನ ರಭಸಕ್ಕೆ ನದಿ ದಾಟಲು ಕಷ್ಟ ಪಡುತ್ತಿದ್ದು, ಇತ್ತ ತಾಯಾನೆ ಆಸರೆಯಾಗಿ ನಿಂತಿದೆ. ಕಂದಮ್ಮನನ್ನು ತನ್ನ ಜತೆಗೆ ನದಿ ದಾಟಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಓಡುತ್ತಿದ್ದ ಕಂದಮ್ಮನ ಬಾಲ ಹಿಡಿದು ಎಳೆದು ನಿಲ್ಲಿಸಿದ ತಾಯಾನೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ನವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅದ್ಭುತ ಹಾಗೂ ಅಪರೂಪದ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಸುಂದರವಾದ ದೃಶ್ಯ ಎಂದಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ ಕಮಾಂಡ್‌ಗಳಷ್ಟೇ ಸಾಲದು, ಶ್ವಾನದ ಮನಸ್ಸು ಅರ್ಥಮಾಡಿಕೊಳ್ಳಿ’: ಬೆಂಗಳೂರಿನಲ್ಲಿ ಹೆಚ್ಚಿದ ಶ್ವಾನ ತರಬೇತಿ ಕ್ರೇಜ್ – Kannada News | Dog Training in Bangalore: Canine Behavioral Experts Guide Apartment Owners

ಬೆಂಗಳೂರು, ಜು.31: ಮುಂಬೈನ ಅಪಾರ್ಟ್‌ಮೆಂಟ್‌ ಒಂದರ ಲಿಫ್ಟ್‌ನಲ್ಲಿ ಸಾಕುನಾಯಿಯೊಂದು ಮಹಿಳೆಯ ಮೇಲೆ ದಾಳಿ ನಡೆಸಿದ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಜವಾಬ್ದಾರಿಯುತ ಪೆಟ್ ಪೇರೆಂಟಿಂಗ್ (Responsible Pet Ownership) ಕುರಿತು ದೇಶಾದ್ಯಂತ ಭಾರಿ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಮಾಲೀಕರು ಕೇವಲ ನಾಯಿಗಳಿಗೆ ಸಿಟ್, ಸ್ಟ್ಯಾಂಡ್ ಶಿಕ್ಷಣ ನೀಡುವುದನ್ನು ಬಿಟ್ಟು, ಅವುಗಳ ನಡವಳಿಕೆ ಹಾಗೂ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ‘ಕ್ಯಾನೈನ್ ಬಿಹೇವಿಯರಲ್ ಎಕ್ಸ್‌ಪರ್ಟ್’ (Canine Behaviour Experts) ಅಥವಾ ಶ್ವಾನ ವರ್ತನಾ ತಜ್ಞರ ಮೊರೆ ಹೋಗುತ್ತಿದ್ದಾರೆ.

ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚುತ್ತಿರುವಂತೆ, ನಾಯಿಗಳ ನಡವಳಿಕೆಗೆ ಸಂಬಂಧಿಸಿದ ತರಬೇತಿ ಮತ್ತು ಕೌನ್ಸೆಲಿಂಗ್‌ಗೆ ಬೆಂಗಳೂರಿನಲ್ಲಿ ಬೇಡಿಕೆ ಗಣನೀಯವಾಗಿ ಏರಿಕೆಯಾಗಿದೆ. ‘ಡಾಗ್ಸ್ ಕ್ಯಾನ್ ಡೂ ಇಟ್’ ಸಂಸ್ಥಾಪಕ ವೈಭವ್ ಮುಂಗೋಲೆ ಅವರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಂತಹ ವಿಚಾರಣೆಗಳು ಶೇಕಡಾ 15-20 ರಷ್ಟು ಹೆಚ್ಚಿದ್ದರೆ, ಕಳೆದ 5 ವರ್ಷಗಳಲ್ಲಿ ಎರಡರಷ್ಟಾಗಿದೆ. ‘K9 ಗುರುಕುಲ’ ಸಂಸ್ಥೆಯ ವರುಣ್ ವಿಕ್ರಮನ್ ಪ್ರಕಾರ, ಕೊರೊನಾ ಸಾಂಕ್ರಾಮಿಕದ ಬಳಿಕ ಶೇ. 40-50 ರಷ್ಟು ವಿಚಾರಣೆಗಳು ಹೆಚ್ಚಾಗಿವೆ. ಕ್ಯಾನೈನ್ ತಜ್ಞ ಸಿ.ವಿ. ಫ್ರಾಂಕ್ಲಿನ್ ಪ್ರಕಾರ, ಅವರ ಬಳಿಗೆ ಬರುವ ಶೇ. 50 ರಷ್ಟು ಗ್ರಾಹಕರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಾಗಿದ್ದಾರೆ.

ನಗರ ಜೀವನ ಶೈಲಿ ಮತ್ತು ಅಪಾರ್ಟ್‌ಮೆಂಟ್‌ಗಳ ಕಿರಿದಾದ ಜಾಗದಲ್ಲಿ ನಾಯಿಗಳಿಗೆ ದೈಹಿಕ ವ್ಯಾಯಾಮ ಹಾಗೂ ಮಾನಸಿಕ ಶ್ರಮ ಕಡಿಮೆಯಾಗುತ್ತಿದೆ. ಇಡೀ ಮನೆಯನ್ನು ತಮ್ಮದೇ ಸಾಮ್ರಾಜ್ಯ ಎಂದು ಭಾವಿಸದಂತೆ ನಾಯಿಗಳಿಗೆ ಮನೆಯಲ್ಲೇ ನಿರ್ದಿಷ್ಟ ಗಡಿ ಹಾಗೂ ಜಾಗವನ್ನು ನಿಗದಿಪಡಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಅನೇಕ ಮಾಲೀಕರು ನಾಯಿಗೆ ‘sit’ ಅಥವಾ ‘stay’ ಎನ್ನಲು ಕಳಿಸಿಕೊಡುವುದನ್ನೇ ಉತ್ತಮ ನಡವಳಿಕೆ ಎಂದು ಭಾವಿಸುತ್ತಾರೆ. ಆದರೆ ನಿಜವಾದ ನಡವಳಿಕೆ ತರಬೇತಿಯು ಮಾಲೀಕರಿಗೂ ಶಿಕ್ಷಣ ನೀಡುವುದಾಗಿದೆ. ಮಾಲೀಕರು ಮನೆಯಲ್ಲಿ ಶಿಸ್ತು ಕಾಯ್ದುಕೊಂಡಾಗ ಮಾತ್ರ ನಾಯಿಯ ನಡವಳಿಕೆಯಲ್ಲಿ ಶಾಶ್ವತ ಬದಲಾವಣೆ ಸಾಧ್ಯ.ಹೊಸದಾಗಿ ನಾಯಿ ಸಾ ಸಾಕಲು ಬಯಸುವವರು ಈಗ ನಾಯಿಮರಿ ತರುವ ಮುಂಚೆಯೇ ತಜ್ಞರಿಂದ ಸಲಹೆ ಪಡೆಯುತ್ತಿದ್ದಾರೆ. ಇದು ತಪ್ಪು ನಡವಳಿಕೆಯನ್ನು ತಿದ್ದುವುದಕ್ಕಿಂತ, ತಪ್ಪು ನಡವಳಿಕೆ ಬರದಂತೆ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: ಅಕ್ವೇರಿಯಂ ಫಿಶ್​ ಸಾಕಲು ಬಿಟ್ಟಿಲ್ಲ ಎಂದು ನೊಂದು ಮನೆ ಬಿಟ್ಟ ಏಳನೇ ತರಗತಿಯ ಬಾಲಕ!

ಹಸ್ಕಿ ಅಥವಾ ಜರ್ಮನ್ ಶೆಫರ್ಡ್‌ನಂತಹ ಹೈ-ಎನರ್ಜಿ ಕೆಲಸದ ತಳಿಯ ನಾಯಿಗಳನ್ನು ಹೊಸಬರು ಸಾಕುವುದು ಸವಾಲಿನ ಕೆಲಸ. ಆದರೆ ಯಾವುದೇ ತಳಿಯನ್ನು ನೇರವಾಗಿ ಆಕ್ರಮಣಕಾರಿ ಎಂದು ನಿಂದಿಸುವುದು ತಪ್ಪು. ರೊಟ್‌ವೀಲರ್ ಹಾಗೂ ಪಿಟ್‌ಬುಲ್‌ಗಳನ್ನು ಕೂಡ ಅತ್ಯುತ್ತಮ ಥೆರಪಿ ನಾಯಿಗಳಾಗಿ ತರಬೇತಿ ನೀಡಬಹುದು, ಅದೇ ಸಮಯದಲ್ಲಿ ಲ್ಯಾಬ್ರಡಾರ್‌ನಂತಹ ಶಾಂತ ನಾಯಿಗಳೂ ಆಕ್ರಮಣಕಾರಿಯಾಗಬಹುದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧೂಮಪಾನ ಮಾತ್ರವಲ್ಲ! ಈ ದಿನನಿತ್ಯದ ಅಭ್ಯಾಸಗಳೂ ಶ್ವಾಸಕೋಶದ ಆರೋಗ್ಯ ಹಾಳು ಮಾಡಬಹುದು – Kannada News | Healthy Lungs: Everyday Habits That May Be Harming Your Respiratory Health

ಶ್ವಾಸಕೋಶ (Lungs) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ತಲುಪಿಸುವಲ್ಲಿ ಶ್ವಾಸಕೋಶದ ಪಾತ್ರ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಧೂಮಪಾನವೇ ಶ್ವಾಸಕೋಶದ ಆರೋಗ್ಯ ಹಾಳಾಗಲು ಪ್ರಮುಖ ಕಾರಣ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ಧೂಮಪಾನ ಮಾಡದವರಲ್ಲಿಯೂ ಕೆಲವು ದಿನನಿತ್ಯದ ಅಭ್ಯಾಸಗಳು ಹಾಗೂ ಪರಿಸರ ಸಂಬಂಧಿ ಕಾರಣಗಳಿಂದ ಶ್ವಾಸಕೋಶದ ಆರೋಗ್ಯ ನಿಧಾನವಾಗಿ ಹದಗೆಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಆದ್ದರಿಂದ ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸರಿಯಾದ ಜೀವನಶೈಲಿ, ಸ್ವಚ್ಛ ಪರಿಸರ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.

ಧೂಮಪಾನದ ಹೊರತಾಗಿಯೂ ಶ್ವಾಸಕೋಶಕ್ಕೆ ಹಾನಿ ಮಾಡುವ ಅಭ್ಯಾಸಗಳು:

ಪರೋಕ್ಷ ಧೂಮಪಾನ (Second-Hand Smoke): ಇತರರು ಸೇದುವ ಸಿಗರೇಟ್ ಅಥವಾ ಬೀಡಿ ಹೊಗೆಯನ್ನು ನಿರಂತರವಾಗಿ ಉಸಿರಾಡುವುದರಿಂದಲೂ ಶ್ವಾಸಕೋಶದ ಕ್ಯಾನ್ಸರ್, COPD ಹಾಗೂ ಇತರ ಉಸಿರಾಟದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.

ವಾಯು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವುದು: ಹೆಚ್ಚಿನ ಧೂಳು, ಹೊಗೆ ಮತ್ತು ವಾಹನಗಳ ಮಾಲಿನ್ಯ ಇರುವ ಪ್ರದೇಶಗಳಲ್ಲಿ ದೀರ್ಘಕಾಲ ವಾಸಿಸುವುದರಿಂದ ಶ್ವಾಸಕೋಶದ ಕಾರ್ಯಕ್ಷಮತೆ ಕುಗ್ಗಬಹುದು.

ಮನೆಯೊಳಗಿನ ಕಳಪೆ ಗಾಳಿಯ ಗುಣಮಟ್ಟ: ಅಡುಗೆ ಮಾಡುವಾಗ ಹೊರಬರುವ ಹೊಗೆ, ಸರಿಯಾದ ಗಾಳಿ ಸಂಚಾರವಿಲ್ಲದ ಮನೆಗಳು ಹಾಗೂ ಒಳಾಂಗಣ ಮಾಲಿನ್ಯ ಕೂಡ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುತ್ತವೆ.

ರಾಸಾಯನಿಕ ಕ್ಲೀನರ್‌ಗಳು ಮತ್ತು ಏರೋಸೋಲ್ ಸ್ಪ್ರೇಗಳ ಅತಿಯಾದ ಬಳಕೆ: ಬಲವಾದ ರಾಸಾಯನಿಕ ವಾಸನೆಗಳಿರುವ ಕ್ಲೀನಿಂಗ್ ಉತ್ಪನ್ನಗಳು, ರೂಮ್ ಫ್ರೆಶ್ನರ್‌ಗಳು ಮತ್ತು ಸ್ಪ್ರೇಗಳನ್ನು ನಿರಂತರವಾಗಿ ಬಳಸುವುದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು.

ಧೂಳು ಅಥವಾ ರಾಸಾಯನಿಕಗಳಿರುವ ಸ್ಥಳದಲ್ಲಿ ಮಾಸ್ಕ್ ಧರಿಸದಿರುವುದು: ಕಾರ್ಖಾನೆ, ನಿರ್ಮಾಣ ಸ್ಥಳ ಅಥವಾ ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಸುರಕ್ಷತಾ ಮಾಸ್ಕ್ ಬಳಸದೇ ಇದ್ದರೆ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು.

ದೈಹಿಕ ಚಟುವಟಿಕೆಯ ಕೊರತೆ: ನಿಯಮಿತ ವ್ಯಾಯಾಮ ಮಾಡದಿದ್ದರೆ ಶ್ವಾಸಕೋಶದ ಸಾಮರ್ಥ್ಯ ಕ್ರಮೇಣ ಕಡಿಮೆಯಾಗಬಹುದು. ದೇಹ ಚಟುವಟಿಕೆಯಿಂದ ಇದ್ದರೆ ಶ್ವಾಸಕೋಶ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಶ್ವಾಸಕೋಶವನ್ನು ಆರೋಗ್ಯವಾಗಿಡಲು ಅನುಸರಿಸಬೇಕಾದ ಕ್ರಮಗಳು:

  • ಧೂಮಪಾನದಿಂದ ಸಂಪೂರ್ಣ ದೂರವಿರಿ.
  • ಪರೋಕ್ಷ ಧೂಮಪಾನದಿಂದಲೂ ಸಾಧ್ಯವಾದಷ್ಟು ದೂರವಿರಿ.
  • ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಿ.
  • ಮನೆಯಲ್ಲಿ ಉತ್ತಮ ಗಾಳಿ ಸಂಚಾರ (Ventilation) ಇರಲಿ.
  • ಪ್ರತಿದಿನ ಕನಿಷ್ಠ 30 ನಿಮಿಷ ನಡೆಯಿರಿ ಅಥವಾ ವ್ಯಾಯಾಮ ಮಾಡಿ.
  • ಆಳವಾದ ಉಸಿರಾಟದ ವ್ಯಾಯಾಮ (Breathing Exercises) ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಿ.
  • ಹಣ್ಣು, ತರಕಾರಿ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧ ಆಹಾರ ಸೇವಿಸಿ.
  • ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಇದನ್ನೂ ಓದಿ: ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು

ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ

  • ಎರಡು ಅಥವಾ ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರಿದರೆ
  • ಉಸಿರಾಟದ ತೊಂದರೆ
  • ಎದೆನೋವು
  • ಉಸಿರಾಟದ ವೇಳೆ ಶಬ್ದ (Wheezing)
  • ಕೆಮ್ಮುವಾಗ ರಕ್ತ ಕಾಣಿಸಿಕೊಳ್ಳುವುದು
  • ಪದೇ ಪದೇ ಶ್ವಾಸಕೋಶದ ಸೋಂಕು
  • ಸಣ್ಣ ಕೆಲಸಕ್ಕೂ ಉಸಿರು ಬಿಗಿಯಾಗುವುದು
  • ಕಾರಣವಿಲ್ಲದೆ ಆಯಾಸವಾಗುವುದು

ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ಶ್ವಾಸಕೋಶದ ಆರೋಗ್ಯ ಹಾಳಾಗದಂತೆ ತಡೆಯಲು ಇಲ್ಲಿದೆ ಸಲಹೆಗಳು

ಪ್ರಾಣಾಯಾಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತದೆ: ಅನೂಲೋಮ-ವಿಲೋಮ, ಭ್ರಮರಿ ಹಾಗೂ ಡಯಾಫ್ರಾಗ್ಮ್ಯಾಟಿಕ್ ಬ್ರೀತಿಂಗ್‌ನಂತಹ ಉಸಿರಾಟದ ವ್ಯಾಯಾಮಗಳು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯಕವಾಗಬಹುದು.

ಲಸಿಕೆಗಳನ್ನು ಸಮಯಕ್ಕೆ ಪಡೆಯಿರಿ: ಇನ್‌ಫ್ಲೂಯೆಂಜಾ (Flu) ಮತ್ತು ನ್ಯುಮೋಕೋಕಲ್ ಲಸಿಕೆಗಳು ಕೆಲವರಲ್ಲಿ ಶ್ವಾಸಕೋಶದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ವಿಶೇಷವಾಗಿ ಹಿರಿಯರು ಹಾಗೂ ದೀರ್ಘಕಾಲದ ಶ್ವಾಸಕೋಶ ಸಮಸ್ಯೆಯಿರುವವರು ವೈದ್ಯರ ಸಲಹೆಯಂತೆ ಲಸಿಕೆ ಪಡೆಯುವುದು ಉತ್ತಮ.

ಆಂಟಿಆಕ್ಸಿಡೆಂಟ್ ಆಹಾರ ಸೇವಿಸಿ: ಕಿತ್ತಳೆ, ನೆಲ್ಲಿಕಾಯಿ, ಪಪ್ಪಾಯಿ, ಕ್ಯಾರೆಟ್, ಪಾಲಕ್, ಬ್ರೊಕೊಲಿ ಮುಂತಾದ ಆಹಾರಗಳು ಶ್ವಾಸಕೋಶದ ಆರೋಗ್ಯಕ್ಕೆ ನೆರವಾಗುತ್ತವೆ.

ಮನೆಯಲ್ಲಿ ಧೂಳು ನಿಯಂತ್ರಿಸಿ: ಬೆಡ್‌ಶೀಟ್, ಪರದೆಗಳು ಹಾಗೂ ಏರ್ ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಅಲರ್ಜಿ ಮತ್ತು ಧೂಳಿನ ಕಣಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಸಾಕಷ್ಟು ನೀರು ಕುಡಿಯಿರಿ: ದೇಹದಲ್ಲಿ ನೀರಿನ ಪ್ರಮಾಣ ಸಮರ್ಪಕವಾಗಿದ್ದರೆ ಶ್ವಾಸನಾಳದಲ್ಲಿರುವ ಲೋಳೆಯು (Mucus) ತೆಳುವಾಗಿ ಉಳಿದು ಉಸಿರಾಟ ಸುಲಭವಾಗುತ್ತದೆ.

ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಧೂಮಪಾನಿಗಳು, ಕಾರ್ಖಾನೆ ಕಾರ್ಮಿಕರು ಅಥವಾ ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವವರು ವೈದ್ಯರ ಸಲಹೆಯಂತೆ ನಿಯಮಿತ ಶ್ವಾಸಕೋಶ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ನಿಮ್ಮ ಹತ್ರ ಇರಲಿ – Kannada News | Marriage Certificate: How to apply for a marriage certificate?

ಸಾಂದರ್ಭಿಕ ಚಿತ್ರImage Credit source: Blend Images – Kyle Monk/Tetra images/ Getty Images

ಗಂಡು ಹೆಣ್ಣು ಸತಿ ಪತಿಗಳಾಗಿ ಜತೆಯಾಗಿ ಬದುಕಲು ಯೋಗ ಕೂಡಿ ಬರಬೇಕು. ಈ ಸುಂದರ ಬಾಂಧವ್ಯ ದೀರ್ಘಕಾಲ ಉಳಿಯಲು ನಂಬಿಕೆ ಇರಲೇ ಬೇಕು. ಅದಲ್ಲದೇ, ಈ  ಮದುವೆ ಎಂಬ ಸುಂದರ ಬಂಧವನ್ನು ದೃಢೀಕರಿಸಲು ವಿವಾಹ ಪ್ರಮಾಣ ಪತ್ರ (marriage certificate) ಅತ್ಯಗತ್ಯ. ಇದು ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆಯಾಗಿದೆ. ಇನ್ನು ಉಳಿದಂತೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ಕೆಲಸಗಳಿಗೆ ಅತ್ಯಗತ್ಯ ದಾಖಲೆಯಲ್ಲಿ ಒಂದು. ನಿಮ್ಮ ವೈಯುಕ್ತಿಕ ಹಾಗೂ ಮದುವೆಯಾಗಿರುವ ದಾಖಲೆಗಳು ಇದ್ದರೆ ಕರ್ನಾಟಕದಲ್ಲಿ ವಿವಾಹ ಪ್ರಮಾಣಪತ್ರ ಪಡೆಯಲು ಕಾವೇರಿ ಆನ್ಲೈನ್ ಸರ್ವಿಸಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಎಸ್.ಎಸ್.ಎಲ್.ಸಿ ಅಂಕಪಟ್ಟಿ
  • ಜನನ ಪ್ರಮಾಣ ಪತ್ರ ಅಥವಾ ಪಾಸ್‌ಪೋರ್ಟ್
  • ಆಧಾರ್ ಕಾರ್ಡ್, ವೋಟರ್ ಐಡಿ, ಅಥವಾ ಪಡಿತರ ಚೀಟಿ
  • ಮದುವೆಯ ಆಮಂತ್ರಣ ಪತ್ರಿಕೆ
  • ದಂಪತಿಗಳ ಜಂಟಿ ಫೋಟೋ ಹಾಗೂ ಮದುವೆ ಸಮಾರಂಭದ ಫೋಟೋ
  • ಮೂವರು ಸಾಕ್ಷಿಗಳ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್

ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಕಾವೇರಿ ಕರ್ನಾಟಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಹೊಸ ಬಳಕೆದಾರರಾಗಿ ನೋಂದಾಯಿಸಿ.

ಹಂತ 2: ಮದುವೆ ನೋಂದಣಿ ಆಯ್ಕೆಮಾಡಿ ಹಾಗೂ ವಿವರವಾದ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ವೈಯುಕ್ತಿಕ ಹಾಗೂ ಮದುವೆಯ  ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

ಹಂತ 4: ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

ಹಂತ 5: ಕೊನೆಗೆ ಅರ್ಡರ್ ರಶೀದಿ ಪ್ರಿಂಟ್ ಮಾಡಿಸಿ, ಮುಂದಿನ ಪರಿಶೀಲನೆಗಾಗಿ ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಸೂಕ್ತ.

ಇದನ್ನೂ ಓದಿ: Tech Tips: ಪಾರ್ಟ್ನರ್ ಜೊತೆ ಖಾಸಗಿ ಸಮಯ ಕಳೆಯುವಾಗ ಈ ಫೋನ್ ಸೆಟ್ಟಿಂಗ್ಸ್ ತಪ್ಪದೇ ಆಫ್ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಉತ್ತರ: ವಿವಾಹ ಪ್ರಮಾಣ ಪತ್ರಕ್ಕೆ ಆಫ್ ಲೈನ್ ಹಾಗೂ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ: ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಯಾವುದು?

ಉತ್ತರ: ಕಾವೇರಿ ಕರ್ನಾಟಕ ಅಧಿಕೃತ ವೆಬ್‌ಸೈಟ್‌ ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಇರುವ ವೆಬ್ಸೈಟ್ ಆಗಿದೆ

ಪ್ರಶ್ನೆ: ವಿವಾಹ ಪ್ರಮಾಣ ಪತ್ರ ಏಕೆ ಮುಖ್ಯ?

ಉತ್ತರ: ವಿವಾಹ ಪ್ರಮಾಣ ಪತ್ರ ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆ ಜತೆಗೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ಕೆಲಸಗಳಿಗೆ ಬಹಳ ಮುಖ್ಯ ದಾಖಲೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version