ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ – Kannada News | Delhi riots; Former AAP leader Tahir Hussain gets life term in IB official Ankit Sharma murder case

ನವದೆಹಲಿ, ಜುಲೈ 31: 2020ರ ಈಶಾನ್ಯ ದೆಹಲಿ ದಂಗೆಯ (Delhi Riots) ವೇಳೆ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ (Ankit Sharma) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಮಾಜಿ ನಾಯಕ ತಾಹಿರ್ ಹುಸೇನ್ ಮತ್ತು ಇತರ ನಾಲ್ವರಿಗೆ ದೆಹಲಿಯ ನ್ಯಾಯಾಲಯ ಇಂದು (ಶುಕ್ರವಾರ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜುಲೈ 13ರಂದು ಕರ್ಕರ್ಡೂಮಾ ನ್ಯಾಯಾಲಯವು ಅಂಕಿತ್ ಶರ್ಮಾ ಅವರ ಕೊಲೆ ಮತ್ತು ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ತಾಹಿರ್ ಹುಸೇನ್, ನಾಜಿಮ್, ಖಾಸಿಮ್, ಜಾವೇದ್ ಮತ್ತು ಅನಾಸ್ ಅವರನ್ನು ಅಪರಾಧಿಗಳು ಎಂದು ಘೋಷಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, “ಈ ಅಪರಾಧವನ್ನು ಎಸಗಿದ ರೀತಿ ಅತ್ಯಂತ ಕ್ರೂರತೆಯಿಂದ ಕೂಡಿತ್ತು. ಕೇವಲ ಧರ್ಮದ ಆಧಾರದ ಮೇಲೆಯೇ ಇದನ್ನು ಮಾಡಲಾಗಿದೆ” ಎಂದು ಹೇಳಿದೆ. ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯವು ಕೊಲೆಯ ಭೀಕರತೆಯ ಬಗ್ಗೆ ವಿವರಿಸಿದ್ದು, “ಅಂಕಿತ್ ಶರ್ಮಾ ಅವರ ಮೃತದೇಹವನ್ನು ಪ್ರಾಣಿಯಂತೆ ಎಳೆಯಲಾಯಿತು” ಎಂದು ಹೇಳಿದೆ.

ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ನಡುವೆ ಚರಂಡಿಯಲ್ಲಿ ಅಂಕಿತ್ ಶರ್ಮಾ ಅವರ ಮೃತದೇಹ ಪತ್ತೆಯಾಗಿತ್ತು. ಈ ಕೊಲೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಇತರ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ ನಂತರ ಈ ಶಿಕ್ಷೆ ಹೊರಬಿದ್ದಿದೆ. 26 ವರ್ಷದ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿಯ ಭೀಕರ ಕೊಲೆಯು ದಂಗೆಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾದ ಪ್ರಕರಣಗಳಲ್ಲಿ ಒಂದಾಗಿತ್ತು. ಅಂಕಿತ್ ಶರ್ಮಾ ಅವರ ಮೇಲೆ ಗುಂಪು ದಾಳಿ ನಡೆಸಿ ಕೊಲೆ ಮಾಡಿದೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದರೆ, ತಾಹಿರ್ ಹುಸೇನ್ ವಿಚಾರಣೆಯುದ್ದಕ್ಕೂ ತಾವು ನಿರಪರಾಧಿ ಎಂದು ಪ್ರತಿಪಾದಿಸುತ್ತಲೇ ಬಂದಿದ್ದರು.

ಇದನ್ನೂ ಓದಿ: ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್

ಚಾರ್ಜ್‌ಶೀಟ್ ಪ್ರಕಾರ, ಫೆಬ್ರವರಿ 25ರಂದು ಸಂಜೆ 5 ಗಂಟೆಗೆ ತಾಹಿರ್ ಹುಸೇನ್ ನಿವಾಸದ ಬಳಿ 2 ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಅಂಕಿತ್ ಶರ್ಮಾ ಯತ್ನಿಸುತ್ತಿದ್ದಾಗ, ಅವರನ್ನು ಗುಂಪೊಂದು ಸುತ್ತುವರಿದು ಈ ಕೃತ್ಯ ಎಸಗಿತ್ತು.

ತಾಹಿರ್ ಹುಸೇನ್ ಮೇಲಿದ್ದ ಆರೋಪಗಳು:

ದಂಗೆಯ ಸಮಯದಲ್ಲಿ ಶತ್ರುತ್ವವನ್ನು ಉತ್ತೇಜಿಸುವುದು, ಗಲಭೆ ಎಬ್ಬಿಸುವುದು, ಹಲ್ಲೆ ನಡೆಸುವುದು, ಕ್ರಿಮಿನಲ್ ಬಲಪ್ರಯೋಗ, ಕ್ರಿಮಿನಲ್ ಸಂಚು ರೂಪಿಸುವುದು ಮತ್ತು ಅಂಕಿತ್ ಶರ್ಮಾ ಅವರ ಕೊಲೆ ಮಾಡಿದ ಆರೋಪಗಳ ಅಡಿಯಲ್ಲಿ ನ್ಯಾಯಾಲಯವು ತಾಹಿರ್ ಹುಸೇನ್‌ ಅವರನ್ನು ಅಪರಾಧಿ ಎಂದು ಹೇಳಿದೆ. ತಾಹಿರ್ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣ ಆಮ್ ಆದ್ಮಿ ಪಕ್ಷವು ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ನ್ಯಾಯಾಲಯದ ಈ ತೀರ್ಪಿನ ನಂತರ ಅಮಾನತುಗೊಳಿಸಿದ ಕ್ಷಣದಿಂದಲೇ ಅವರೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲಾಗಿದೆ ಎಂದು ಆಪ್ ಪುನರುಚ್ಚರಿಸಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲೂ ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರ; ರಾಷ್ಟ್ರಪತಿಯ ಸಮ್ಮತಿ ಬಾಕಿ

ಏನಿದು ಪ್ರಕರಣ?:

ಕೋಮು ಹಿಂಸಾಚಾರದ ಸಮಯದಲ್ಲಿ ತಾಹಿರ್ ಹುಸೇನ್ ಮತ್ತು ಇತರ ಅಪರಾಧಿಗಳು ಕಾನೂನುಬಾಹಿರವಾಗಿ ಗುಂಪು ಕಟ್ಟಿಕೊಂಡು, ಅಂಕಿತ್ ಶರ್ಮಾ ಅವರನ್ನು ಅಪಹರಿಸಿ ಕೊಲೆ ಮಾಡಿದ್ದರು. ಅಂಕಿತ್ ಶರ್ಮಾ ಅವರ ತಂದೆ ರವೀಂದರ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ 2020ರ ಫೆಬ್ರವರಿ 26ರಂದು ಪ್ರಕರಣ ದಾಖಲಾಗಿತ್ತು. ಫೆಬ್ರವರಿ 25ರಂದು ತಮ್ಮ ಮಗ ಕೆಲಸ ಮುಗಿಸಿ ಮನೆಗೆ ಬಂದ ನಂತರ ಸಂಜೆ 5 ಗಂಟೆಗೆ ಗೃಹಬಳಕೆಯ ವಸ್ತುಗಳನ್ನು ತರಲು ಹೊರಗೆ ಹೋಗಿದ್ದನು ಎಂದು ತಿಳಿಸಿದ್ದರು. ಅವರು ಮನೆಗೆ ಹಿಂತಿರುಗದಿದ್ದಾಗ, ಕುಟುಂಬದವರು ಹತ್ತಿರದ ಪ್ರದೇಶಗಳು ಮತ್ತು ಆಸ್ಪತ್ರೆಗಳಲ್ಲಿ ಹುಡುಕಾಟ ನಡೆಸಿ ಮರುದಿನ ಬೆಳಿಗ್ಗೆ ದೂರು ದಾಖಲಿಸಿದ್ದರು.

ಇದಾದ ನಂತರ ಅಂಕಿತ್ ಶರ್ಮಾ ಅವರ ಮೃತದೇಹ ಹತ್ತಿರದ ಚರಂಡಿಯಲ್ಲಿ ಪತ್ತೆಯಾಗಿತ್ತು. ಗುರುತನ್ನು ಮರೆಮಾಚುವ ಉದ್ದೇಶದಿಂದ ಅಪರಾಧಿಗಳು ಅವರ ಮುಖ ಸೇರಿದಂತೆ ದೇಹದ ಭಾಗಗಳನ್ನು ಆಸಿಡ್‌ನಿಂದ ಸುಟ್ಟಿದ್ದರು ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೆಹಲಿ ಗಲಭೆಗೆ ಸಂಬಂಧಿಸಿದ ತನಿಖೆಗಳಲ್ಲಿ ಇದು ಅತ್ಯಂತ ಪ್ರಮುಖ ಮತ್ತು ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಒಂದಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲಾ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ’; ಕೋಚ್ ಸ್ಯಾಮಿ ಮೇಲೆ ಜೋಸೆಫ್ ಗಂಭೀರ ಆರೋಪ – Kannada News | West Indies Cricket Row: Alzarri Joseph Slams Daren Sammy Over Test Series Withdrawal Lies

ವೆಸ್ಟ್ ಇಂಡೀಸ್ ಕ್ರಿಕೆಟ್​ನಲ್ಲಿ ಕೋಚ್ ಹಾಗೂ ಆಟಗಾರರ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ (Daren Sammy) ವಿರುದ್ಧ ವೇಗಿ ಅಲ್ಜಾರಿ ಜೋಸೆಫ್ (Alzarri Joseph) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಸ್ಯಾಮಿ ಎಲ್ಲಾ ಗೊತ್ತಿದ್ದು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ವಾಸ್ತವವಾಗಿ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ತಂಡದ ಆಯ್ಕೆ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಸ್ಯಾಮಿ, ಜೋಸೆಫ್ ಅವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸ್ವತಃ ಜೋಸೆಫ್ ಅವರೇ ಈ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು ಎಂದಿದ್ದರು.

ಇದೀಗ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ನೀಡಿರುವ ಹೇಳಿಕಗೆ ಸ್ಪಷ್ಟನೆ ನೀಡಿರುವ ಅಲ್ಜಾರಿ ಜೋಸೆಫ್, ‘ವೈಯಕ್ತಿಕ ಕಾರಣಗಳಿಂದಾಗಿ ನಾನು ಈ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದು ಸ್ಯಾಮಿ ಅವರಿಗೂ ಗೊತ್ತಿತ್ತು ಆದಾಗ್ಯೂ ಸ್ಯಾಮಿ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ಡ್ಯಾರೆನ್ ಸ್ಯಾಮಿ ಹೇಳಿದ್ದೇನು?

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ, ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅಲ್ಜಾರಿ ಜೋಸೆಫ್ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆ ವೇಳೆ, ಸ್ವತಃ ಜೋಸೆಫ್ ಅವರೇ ಈ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದರು. ಜೋಸೆಫ್ ಅವರ ಈ ನಿರ್ಧಾರ ನನ್ನ ನಿಯಂತ್ರಣಕ್ಕೆ ಮೀರಿತ್ತು. ಮಂಡಳಿಯ ಒಪ್ಪಂದಕ್ಕೊಳಪಟ್ಟಿರುವ ಆಟಗಾರರು ತಂಡದ ಆಯ್ಕೆಯ ಸಮಯದಲ್ಲಿ ಆಡುವುದರಿಂದ ಹಿಂದೆ ಸರಿಯುವ ಈ ನಿರ್ಧಾರದ ಸಮಸ್ಯೆಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಗಳು ಆದಷ್ಟು ಬೇಗ ಪರಿಹರಿಸಬೇಕೆಂದು ಸ್ಯಾಮಿ ಹೇಳಿದ್ದರು.

ಅಲ್ಜಾರಿ ಜೋಸೆಫ್ ಹೇಳುವುದೇನು?

ಡ್ಯಾರೆನ್ ಸ್ಯಾಮಿ ಅವರ ಹೇಳಿಕೆಗೆ ಈಗ ಪ್ರತಿಕ್ರಿಯಿಸಿರುವ ಅಲ್ಜಾರಿ ಜೋಸೆಫ್,‘ಈ ಟೆಸ್ಟ್ ಸರಣಿಯಲ್ಲಿ ಆಡಲು ನಾನು ಸಂಪೂರ್ಣ ಫಿಟ್ ಆಗಿರಲಿಲ್ಲ. ನನ್ನ ಈ ಪರಿಸ್ಥಿತಿಯ ಬಗ್ಗೆ ನಾನು ಕೋಚ್ ಡ್ಯಾರೆನ್ ಸ್ಯಾಮಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದೆ. ಹಾಗೆಯೇ ನಾನು CWI ಜೊತೆಯೂ ಮಾತನಾಡಿದ್ದೇನೆ. ಇದರ ಹೊರತಾಗಿಯೂ CWI ಹೊರಡಿಸಿದ ಹೇಳಿಕೆಯಲ್ಲಿ ನಾನು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಈ ಸರಣಿಯಿಂದ ಹಿಂದೆ ಸರಿದೆ ಎಂದಿದೆ. ಇದರ ಹಿಂದೆ ಸ್ಯಾಮಿ ಅವರ ಕೈವಾಡವಿದೆ. ಏಕೆಂದರೆ ಸ್ಯಾಮಿ ಬಹಳ ಸಮಯದಿಂದ ತಂಡದಲ್ಲಿದ್ದಾರೆ.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸ್ಯಾಮಿ ಹೇಳಿಕೆಯ ಬಗ್ಗೆ ನಾನು ಹೇಳಲು ಏನೂ ಇಲ್ಲ. ನಾನು ಒಂದು ವರ್ಷ ಪೂರ್ಣವಾಗಿ ಆಟದಿಂದ ಹೊರಗುಳಿದಿದ್ದೆ. ಎರಡನೇ ಬಾರಿಗೆ ಮತ್ತೆ ಗಾಯಕ್ಕೆ ತುತ್ತಾದ ಕಾರಣ ನಾನು ಇಷ್ಟು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಲ್ಲ. ನನ್ನ ದೇಹವು ಮತ್ತೊಂದು ಟೆಸ್ಟ್ ಸರಣಿಯನ್ನು ಆಡಲು ಸಿದ್ಧವಾಗಿರಲಿಲ್ಲ. ಆದ್ದರಿಂದ ನಾನು ಈ ಸರಣಿಯಿಂದ ಹಿಂದೆ ಸರಿದೆ. ಆದರೆ ಡ್ಯಾರೆನ್ ಸ್ಯಾಮಿ ನೀಡಿರುವ ಈ ಹೇಳಿಕೆ ಸಂಪೂರ್ಣವಾಗಿ ವಿವಾದಾತ್ಮಕವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಝೀರೋ ಟ್ರಾಫಿಕ್​ನಲ್ಲೇ ಕೈಕೊಟ್ಟ ಆಂಬ್ಯುಲೆನ್ಸ್: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮಾರ್ಗ ಮಧ್ಯೆ ಸಾವು – Kannada News | Child with Breathing Difficulties Dies After Ambulance Breaks Down Despite Zero Traffic Corridor

ಪ್ರಾತಿನಿಧಿಕ ಚಿತ್ರImage Credit source: Getty images

ದಾವಣಗೆರೆ, ಜುಲೈ 31: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮೂರೂವರೆ ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗಾಗಿ ದಾವಣಗೆರೆಯಿಂದ (davanagere) ಉಡುಪಿಯ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜೀರೋ ಟ್ರಾಫಿಕ್​​ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ಟೈಯರ್​​ ಸ್ಪೋಟಗೊಂಡಿದ್ದು, ಮಗು ಸಾವನ್ನಪ್ಪಿದೆ. ಈ ಮನಕುಲುಕುವ ಘಟನೆಗೆ ದಾವಣಗೆರೆ ಸಾಕ್ಷಿಯಾಗಿದೆ.

ನಡೆದಿದ್ದೇನು?

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಮಗು ಹನ್ವಿಕಾ. ಹೆರಿಗೆಗಾಗಿ ದಾವಣಗೆರೆ ಜಿಲ್ಲೆಯ ಹರಿಹರದ ತಾಯಿ ಮನೆಗೆ ಬಂದಿದ್ದ ಪವಿತ್ರಾ, ಮೂರು ತಿಂಗಳ ಹಿಂದೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಹನ್ವಿಕಾಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮಾರ್ಗ ಮಧ್ಯದಲ್ಲೇ ಆಂಬ್ಯುಲೆನ್ಸ್ ಟೈಯರ್ ಸ್ಪೋಟ

ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ದಾವಣಗೆರೆ ಪೊಲೀಸ್ ಇಲಾಖೆಯ ಸಹಾಯ ಕೇಳಿದಾಗ ಜೀರೋ ಟ್ರಾಫಿಕ್ ನೀಡುವುದಾಗಿ ಭರವಸೆ ನೀಡಿದ್ದರು. ಮಗುವಿನ ಜೀವ ಅಮೂಲ್ಯವಾಗಿದ್ದು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್​​ಟಿ ಶೇಖರ್ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜಿಲ್ಲೆಯ ಗಡಿ ದಾಟುವ ಮೊದಲೇ ಆಂಬ್ಯುಲೆನ್ಸ್ ಟೈಯರ್ ಸ್ಪೋಟಗೊಂಡಿದೆ.

ಇದನ್ನೂ ಓದಿ: ಕಲಬುರಗಿ, ರಾಯಚೂರಿನ ವಸತಿ ಶಾಲೆಯಲ್ಲಿ ಪಲಾವ್, ಅವಲಕ್ಕಿ ತಿಂದಿದ್ದ ವಿದ್ಯಾರ್ಥಿಗಳು ಅಸ್ವಸ್ಥ

ಇನ್ನು ಈ ವೇಳೆ ಪೊಲೀಸರು ಹಾಗೂ ವೈದ್ಯರು ಹತ್ತಿರದ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಮಗುವಿನ ನಾಡಿ ಮಿಡಿತ ಕಡಿಮೆ ಆಗಿದೆ. ವೈದ್ಯರು ಹರಸಾಹಸ ಪಟ್ಟರು ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಪೊಲೀಸರು ಹಾಗೂ ವೈದ್ಯರ ಸತತ ಪ್ರಯತ್ನ ಮತ್ತು ಸಾವಿರಾರು ಜನರ ಪ್ರಾರ್ಥನೆಯ ನಡುವೆಯೂ ಮಗು ಉಳಿಯಲಿಲ್ಲ. ಕಣ್ಣೆದುರೇ ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಿನಿಮಮ್ ಬ್ಯಾಲನ್ಸ್ ದಂಡದಿಂದಲೇ ಬ್ಯಾಂಕುಗಳ ಖಜಾನೆಗೆ 7,100 ಕೋಟಿ ರೂ ಭರ್ತಿ – Kannada News | Banks got over Rs 7k crore from minimum balance penalties in 26fy

ಎಚ್‌ಡಿಎಫ್‌ಸಿ ಬ್ಯಾಂಕ್Image Credit source: Getty Images

ನವದೆಹಲಿ, ಜುಲೈ 31: ಬ್ಯಾಂಕ್ ಖಾತೆಗಳಲ್ಲಿ ನಿಗದಿತ ಕನಿಷ್ಠ ಸರಾಸರಿ ಶಿಲ್ಕು (Minimum Average Balance – MAB) ಕಾಯ್ದುಕೊಳ್ಳದ ಗ್ರಾಹಕರಿಂದ ದಂಡದ ರೂಪದಲ್ಲಿ ಬ್ಯಾಂಕುಗಳು ಕಲೆಹಾಕಿರುವ ಮೊತ್ತ ಬರೋಬ್ಬರಿ ₹7,000 ಕೋಟಿಗಿಂತಲೂ ಹೆಚ್ಚು. 2025-26ರ ಹಣಕಾಸು ವರ್ಷದಲ್ಲಿ ಭಾರತದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಒಟ್ಟು ₹7,098 ಕೋಟಿ ದಂಡವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿವೆ. ಹಿಂದಿನ ವರ್ಷದಲ್ಲಿ (2024-25) ಇದು ₹6,800 ಕೋಟಿ ಇತ್ತು.

ಮಿನಿಮಮ್ ಬ್ಯಾಲನ್ಸ್ ದಂಡ ವಸೂಲಿಯಲ್ಲಿ ಖಾಸಗಿ ಸಿಂಹಪಾಲು

ಒಟ್ಟು ದಂಡದ ಮೊತ್ತದಲ್ಲಿ 70% ರಷ್ಟು (ಸುಮಾರು ₹4,948 ಕೋಟಿ) ಬೃಹತ್ ಪಾಲು ಖಾಸಗಿ ಬ್ಯಾಂಕುಗಳಿಂದಲೇ (Private Banks) ಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್​ವೊಂದೇ (HDFC Bank) ಸುಮಾರು ₹1,800 ಕೋಟಿ ದಂಡ ವಸೂಲಿ ಮಾಡಿದ್ದು ಮೊದಲ ಸ್ಥಾನದಲ್ಲಿದೆ.

ನಂತರದ ಸ್ಥಾನಗಳಲ್ಲಿ ಆಕ್ಸಿಸ್ ಬ್ಯಾಂಕ್ (Axis Bank ₹1,081 ಕೋಟಿ), ಐಸಿಐಸಿಐ ಬ್ಯಾಂಕ್ (ICICI Bank ₹353 ಕೋಟಿ) ಮತ್ ಕೊಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank ₹290 ಕೋಟಿ) ಇವೆ.

ಸರ್ಕಾರಿ ಬ್ಯಾಂಕುಗಳಿಂದ ಎಷ್ಟು ವಸೂಲಿ?

ಪಬ್ಲಿಕ್ ಸೆಕ್ಟರ್ (ಸರ್ಕಾರಿ) ಬ್ಯಾಂಕುಗಳಿಂದ ಒಟ್ಟು ₹2,137 ಕೋಟಿ ದಂಡ ಸಂಗ್ರಹವಾಗಿದೆ. ಸರಕಾರ ತಿಳಿಸಿರುವಂತೆ, 12 ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ 10 ಬ್ಯಾಂಕುಗಳು ಸಾಮಾನ್ಯ ಉಳಿತಾಯ ಖಾತೆಗಳ ಮೇಲೆ (Savings Accounts) ಕನಿಷ್ಠ ಬ್ಯಾಲೆನ್ಸ್ ದಂಡವನ್ನು ರದ್ದುಗೊಳಿಸಿವೆ.

ಆದರೆ ಚಾಲ್ತಿ ಖಾತೆಗಳು (Current Accounts) ಮತ್ತಿತರ ವರ್ಗಗಳಿಂದ ಸಂಗ್ರಹಿಸಿದ ದಂಡದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ₹477 ಕೋಟಿ, ಬ್ಯಾಂಕ್ ಆಫ್ ಬರೋಡಾ (BoB) ₹394 ಕೋಟಿ ಹಾಗೂ ಇಂಡಿಯನ್ ಬ್ಯಾಂಕ್ ₹299 ಕೋಟಿ ವಸೂಲಿ ಮಾಡಿವೆ.

ಇದನ್ನೂ ಓದಿ: Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ

ಆರ್‌ಬಿಐ (RBI) ನಿಯಮಗಳು ಏನು ಹೇಳುತ್ತವೆ?

ಕನಿಷ್ಠ ಬ್ಯಾಲೆನ್ಸ್ ಕಡಿಮೆಯಾದ ತಕ್ಷಣವೇ ಬ್ಯಾಂಕುಗಳು ದಂಡ ವಿಧಿಸುವಂತಿಲ್ಲ. ಗ್ರಾಹಕರಿಗೆ SMS, ಇಮೇಲ್ ಅಥವಾ ಪತ್ರದ ಮೂಲಕ ಮುಂಚಿತವಾಗಿ ಸೂಚನೆ ನೀಡಿ, ಕನಿಷ್ಠ ಬ್ಯಾಲೆನ್ಸ್ ಅನ್ನು ಮರುಪೂರಣ (Restore) ಮಾಡಲು ಕಾಲಾವಕಾಶ ನೀಡಿದ ನಂತರವೇ ದಂಡ ವಿಧಿಸಬೇಕು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ವಿವಿಧ ಬ್ಯಾಂಕುಗಳಲ್ಲಿರುವ ಕನಿಷ್ಠ ಬ್ಯಾಲನ್ಸ್ ಮೊತ್ತ

ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಸಾಮಾನ್ಯ ಉಳಿತಾಯ ಖಾತೆಗಳಿಗೆ (Savings Accounts) ನಿಗದಿಪಡಿಸಲಾಗಿರುವ ಮಾಸಿಕ ಸರಾಸರಿ ಶೇಷ (Monthly Average Balance – MAB) ಅಥವಾ ತ್ರೈಮಾಸಿಕ ಸರಾಸರಿ ಶೇಷ (Quarterly Average Balance – QAB) ವಿವರಗಳು ಹಾಗೂ ನಿಯಮಗಳು ಈ ಕೆಳಗಿನಂತಿವೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): 0
  • ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank): 10,000 ರೂ
  • ಐಸಿಐಸಿಐ ಬ್ಯಾಂಕ್ (ICICI Bank): 50,000 ರೂ
  • ಆಕ್ಸಿಸ್ ಬ್ಯಾಂಕ್ (Axis Bank): 12,000 ರೂ
  • ಕೆನರಾ ಬ್ಯಾಂಕ್ (Canara Bank): 2,000 ರೂ
  • ಬ್ಯಾಂಕ್ ಆಫ್ ಬರೋಡಾ (BoB): 2,000 ರೂ
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 2,000 ರೂ

ಇದನ್ನೂ ಓದಿ: ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು

ಈ ಮೇಲಿನದು ನಗರ ಪ್ರದೇಶಗಳಲ್ಲಿ ಈ ಬ್ಯಾಂಕುಗಳು ಹೊಂದಿರುವ ಕನಿಷ್ಠ ಬ್ಯಾಲನ್ಸ್ ನಿಯಮ. SBI, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಬಹುತೇಕ ಸರ್ಕಾರಿ ಬ್ಯಾಂಕುಗಳು ಸಾಮಾನ್ಯ ಉಳಿತಾಯ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ವಿಧಿಸಲಾಗುತ್ತಿದ್ದ ದಂಡವನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ ಅಥವಾ ವಿನಾಯಿತಿ ನೀಡಿವೆ.

ಖಾಸಗಿ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಶಾರ್ಟ್‌ಫಾಲ್ (Shortfall) ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ (ಸಾಮಾನ್ಯವಾಗಿ ಕೊರತೆಯ ಶೇಕಡಾ 5% ರಿಂದ 6% ಅಥವಾ ₹250 ರಿಂದ ₹500 ವರೆಗೆ).

PMJDY (ಜನ್ ಧನ್ ಯೋಜನೆ) ಹಾಗೂ BSBDA (ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್) ಖಾತೆಗಳಲ್ಲಿ ಯಾವುದೇ ಬ್ಯಾಂಕ್‌ನಲ್ಲೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆ.13ರಂದು ಕರ್ನಾಟಕ ಬಂದ್​​ ದಿನ ಹೋಟೆಲ್ ಓಪನ್-ಕ್ಲೋಸ್ ಬಗ್ಗೆ ಗೌರವ ಅಧ್ಯಕ್ಷ ಹೇಳಿದ್ದಿಷ್ಟು – Kannada News | Cauvery Water Row: Bengaluru Hotel association Reacts On Karnataka bandh on August 13

ಬೆಂಗಳೂರು, (ಜುಲೈ 31): ಬರಗಾಲದ ಮಧ್ಯೆಯೂ ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water) ಹರಿಸುವಂತೆ ಆದೇಶಿಸಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ಇದೇ ಆಗಸ್ಟ್ 13ರಂದು ಕರ್ನಾಟಕ ಬಂದ್​​​ಗೆ (Karnataka bandh) ಕರೆ ನೀಡಿವೆ. ಇನ್ನು ಕರ್ನಾಟಕ ಬಂದ್​​ ಗೆ ಹೋಟೆಲ್ ಸಂಘ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಟಿವಿ9 ಜೊತೆ ಮಾತನಾಡಿದ್ದು, ಕರ್ನಾಟಕ ಬಂದ್​ಗೆ​ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಒಂದು ವಾರ ಇರುವಾಗ ನಾವೆಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. ಹೋಟೆಲ್ ಮಾಲೀಕರು, ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರು, ಬೇಕರಿ ಮಾಲೀಕರ ಜೊತೆಗೆ ಸಭೆ ನಡೆಸುತ್ತೇವೆ. ನಾಡು ನುಡಿ ವಿಚಾರದಲ್ಲಿ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಮ್ ಗೋಪಾಲ್ ವರ್ಮಾ ಜೊತೆ ಗುಟ್ಟಾಗಿ ಮದುವೆ ಆಗಿದ್ದರು ಬಾಲಿವುಡ್ ಸ್ಟಾರ್ ನಟಿ – Kannada News | Urmila Matondkar and Ram Gopal Varma married secretly said a journalist

ರಾಮ್ ಗೋಪಾಲ್ ವರ್ಮಾ (Ram Gopal Varma), ಒಂದು ಕಾಲದ ಸೂಪರ್ ಸ್ಟಾರ್ ನಿರ್ದೇಶಕ. ವರ್ಮಾ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದ್ದ ಸಮಯವೊಂದಿತ್ತು. ಸಿನಿಮಾ ನಿರ್ದೇಶನದಲ್ಲಿ ಹೊಸ ಭಾಷ್ಯವನ್ನೇ ಬರೆದ ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ ಈಗ ವರ್ಮಾ, ಸಾಫ್ಟ್ ಪಾರ್ನ್ ರೀತಿಯ ಸಿನಿಮಾಗಳು, ಪೊಲಿಟಿಕಲ್ ಸಟೈರ್ ಮಾದರಿಯ ಕ್ರಿಂಜ್ ಸಿನಿಮಾಗಳನ್ನಷ್ಟೆ ನಿರ್ದೇಶಿಸುತ್ತಿದ್ದಾರೆ. ಆದರೆ ವರ್ಮಾ, ಸ್ಟಾರ್ ಆಗಿದ್ದಾಗ ಆಗಿನ ಹಲವು ಸೂಪರ್ ಸ್ಟಾರ್ ನಟಿಯರೊಟ್ಟಿಗೆ ಕೆಲಸ ಮಾಡಿದ್ದರು. ಅವರಲ್ಲಿ ಒಬ್ಬರನ್ನು ಗುಟ್ಟಾಗಿ ಮದುವೆ ಸಹ ಆಗಿದ್ದರು ಎನ್ನಲಾಗುತ್ತದೆ. ಇದೀಗ ನಟಿಯೊಬ್ಬರು, ಆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಮೆಚ್ಚಿನ ನಾಯಕಿಯರಲ್ಲಿ ಊರ್ಮಿಳಾ ಮತೋಂಡ್ಕರ್ ಸಹ ಒಬ್ಬರು. ಅವರೊಟ್ಟಿಗೆ ಹಲವು ಸಿನಿಮಾಗಳನ್ನು ರಾಮ್ ಗೋಪಾಲ್ ವರ್ಮಾ ಮಾಡಿದ್ದಾರೆ. ಇಬರಿಬ್ಬರೂ ಗುಟ್ಟಾಗಿ ಮದುವೆ ಆಗಿದ್ದರು ಎಂಬ ಸುದ್ದಿ ಆಗ ಹರಿದಾಡಿತ್ತು. ಇಬ್ಬರ ಅಫೇರ್ ಸುದ್ದಿಗಳು ಸದಾ ಚರ್ಚೆಯಲ್ಲಿರುತ್ತಿದ್ದವು. ಆದರೂ, ಅವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಅಧಿಕೃತವಾಗಿ ಬಾಯಿಬಿಟ್ಟಿರಲಿಲ್ಲ. ಹಿರಿಯ ಪತ್ರಕರ್ತರೊಬ್ಬರು ರಾಮ್ ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಮತೋಂಡ್ಕರ್ ಗುಟ್ಟಾಗಿ ಮದುವೆ ಆಗಿದ್ದರು ಎಂದಿದ್ದಾರೆ. ಆ ಮೂಲಕ ಹಳೆಯ ಗಾಸಿಪ್​​ಗೆ ಮರು ಜೀವ ನೀಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಪತ್ರಕರ್ತ ಜ್ಯೋತಿ ವೆಂಕಟೇಶ್, ಉರ್ಮಿಳಾ ಮತ್ತು ರಾಮ್ ಗೋಪಾಲ್ ವರ್ಮಾ ಅವರ ಸಂಬಂಧದ ಬಗ್ಗೆ ಹೇಳಿದ್ದಾರೆ. ಆ ಕಾಲದಲ್ಲಿ ತಾವು ಆ ಇಬ್ಬರ ಸಂಬಂಧದ ಬಗ್ಗೆ ಬರೆಯುತ್ತಿದ್ದೆವು, ಆದರೆ ಈ ಸುದ್ದಿಯನ್ನು ಪ್ರಕಟಿಸದಂತೆ ಎರಡೂ ಕಡೆಯಿಂದಲೂ ಒತ್ತಡವಿತ್ತು ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೆ, ಒಮ್ಮೆ ತಮ್ಮ ಭೇಟಿ ನಟ ಚಿರಂಜೀವಿ ಅವರೊಂದಿಗೆ ಆಗಿತ್ತು. ಅವರು ‘ಜೆಂಟಲ್‌ಮನ್‘ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆಗ ಅವರು ನನಗೆ, ‘ನೀವು ರಾಮ್ ಗೋಪಾಲ್ ವರ್ಮಾ ಮತ್ತು ಉರ್ಮಿಳಾ ಬಗ್ಗೆ ಇಷ್ಟೆಲ್ಲಾ ಬರೆಯುತ್ತೀರಿ, ಆದರೆ ಅವರು ಮದುವೆಯಾಗಿದ್ದಾರೆ ಎಂದು ಏಕೆ ಬರೆಯುತ್ತಿಲ್ಲ?’ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:ರಣವೀರ್ ಸಿಂಗ್ ಬ್ಯಾನ್ ಮಾಡಿದ್ದಕ್ಕೆ ಗರಂ ಆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಇದನ್ನು ಕೇಳಿ ಜ್ಯೋತಿ ಅವರು, ನನಗೆ ಅಫೇರ್ ಬಗ್ಗೆ ಗೊತ್ತಿತ್ತು, ಆದರೆ ಮದುವೆ ಯಾವಾಗ ಮತ್ತು ಎಲ್ಲಿ ಆಯಿತು? ಎಂದು ಮರುಪ್ರಶ್ನಿಸಿದರು. ಅದಕ್ಕೆ ಚಿರಂಜೀವಿ, ಇಬ್ಬರೂ ಆಂಧ್ರಪ್ರದೇಶದ ಒಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎಂದು ಹೇಳಿದರು. ಅಷ್ಟೇ ಅಲ್ಲ, ಮದುವೆ ಮಾಡಿಸಿದ್ದ ವ್ಯಕ್ತಿಯ ಸಂಪರ್ಕ ಸಂಖ್ಯೆಯನ್ನೂ ಅವರು ನೀಡಿದ್ದರು ಎಂದು ಜ್ಯೋತಿ ವೆಂಕಟೇಶ್ ಉಲ್ಲೇಖಿಸಿದ್ದಾರೆ.

ಇದಾದ ಬಳಿಕ ಜ್ಯೋತಿ ವೆಂಕಟೇಶ್ ಅವರು ಒಂದು ಮ್ಯಾಗಜಿನ್‌ನಲ್ಲಿ ಇಬ್ಬರ ಮದುವೆಯ ಸುದ್ದಿಯನ್ನು ಪ್ರಕಟಿಸಿದರು. ಆದರೆ ಸುದ್ದಿ ಮುದ್ರಿಸುವ ಮುನ್ನ ಅವರು ಉರ್ಮಿಳಾ ಮಾತೋಂಡ್ಕರ್ ಅವರನ್ನು ಸಂಪರ್ಕಿಸಿದ್ದರು. ಜ್ಯೋತಿ ಅವರ ಪ್ರಕಾರ, ಫೋನ್‌ನಲ್ಲಿ ಉರ್ಮಿಳಾ ಭಾವುಕರಾಗಿ ಅಳಲು ಶುರು ಮಾಡಿದರು. ‘ನೀವು ನನ್ನನ್ನು ಇಷ್ಟು ವರ್ಷಗಳಿಂದ ಬಲ್ಲಿರಲ್ವಲ್ಲ, ಆದರೂ ನನ್ನ ಬಗ್ಗೆ ಹೀಗೆ ಹೇಗೆ ಬರೆಯಬಹುದು?’ ಎಂದು ಉರ್ಮಿಳಾ ಕೇಳಿದ್ದರಂತೆ.ನಂತರ ಅವರು ರಾಮ್ ಗೋಪಾಲ್ ವರ್ಮಾ ಅವರಿಗೂ ಫೋನ್ ಮಾಡಿದರು. ಆದರೆ ನಿರ್ದೇಶಕರು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ನನಗೆ ಇದರ ಬಗ್ಗೆ ಮಾತನಾಡಲು ಇಷ್ಟವಿಲ್ಲ” ಎಂದು ಅವರು ಹೇಳಿದ್ದಾಗಿ ಜ್ಯೋತಿ ತಿಳಿಸಿದ್ದಾರೆ.

ಊರ್ಮಿಳಾ ಮತೋಂಡ್ಕರ್ ಅವರು ಮೋಹ್ಸಿನ್ ಅಖ್ತರ್ ಅವರನ್ನು ವಿವಾಹವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯೆಯೂ ಆಗಿದ್ದಾರೆ. 2024 ರಲ್ಲಿ ಈ ಇಬ್ಬರು ವಿಚ್ಛೇದನ ಪಡೆದು ದೂರಾದರು. ರಾಮ್ ಗೋಪಾಲ್ ವರ್ಮಾ ಸಹ ಮದುವೆ ಆಗಿದ್ದರು. ಆದರೆ ಸಾಕಷ್ಟು ವರ್ಷಗಳ ಹಿಂದೆಯೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬದಲಾಗಲಿರುವ ‘ಸ್ಪೈಡರ್ ಮ್ಯಾನ್’, ಅಭಿಮಾನಿಗಳು ಒಪ್ಪಿಕೊಳ್ತಾರಾ? – Kannada News | Spider Man artist Tom Holland said Marvel planning to replace him

ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಇದು ‘ಸ್ಪೈಡರ್ ಮ್ಯಾನ್’ ಸರಣಿಯ ಒಂಬತ್ತನೇ ಸಿನಿಮಾ ಆಗಿದೆ. ಟಾಮ್ ಹಾಲೆಂಡ್ ಅವರಿಗೆ ಇದು ಸ್ಪೈಡರ್ ಮ್ಯಾನ್ ಆಗಿ ನಾಲ್ಕನೇ ಸಿನಿಮಾ. ಈ ವರೆಗೆ ‘ಸ್ಪೈಡರ್ ಮ್ಯಾನ್’ ಪಾತ್ರದಲ್ಲಿ ನಟಿಸಿರುವ ನಟರುಗಳಲ್ಲಿ ಟಾಮ್ ಹಾಲೆಂಡ್ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟ ಎನ್ನಲಾಗುತ್ತಿದೆ. ನಿನ್ನೆ ಬಿಡುಗಡೆ ಆಗಿರುವ ‘ಸ್ಪೈಡರ್ ಮ್ಯಾನ್’ ಸಹ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನೇ ಬರೆಯುತ್ತಿದೆ. ಇಷ್ಟೆಲ್ಲ ಯಶಸ್ಸು ಬೆನ್ನಿಗಿದ್ದರೂ ಸಹ ಇದೀಗ ಟಾಮ್ ಹಾಲೆಂಡ್ ಅನ್ನು ಕೈಬಿಟ್ಟು ಹೊಸ ಸ್ಪೈಡರ್ ಮ್ಯಾನ್ ಅನ್ನು ಪರಿಚಯಿಸಲು ಮಾರ್ವೆಲ್ ಸಜ್ಜಾಗಿದೆ.

ಚಿತ್ರದ ಪ್ರಚಾರದ ಸಂದರ್ಭದಲ್ಲಿ ‘ಹ್ಯಾಪಿ ಸ್ಯಾಡ್ ಕನ್ಫ್ಯೂಸ್ಡ್’ (Happy Sad Confused) ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಟಾಮ್ ಹಾಲ್ಯಾಂಡ್, ಸ್ಪೈಡರ್ ಮ್ಯಾನ್ ಫ್ರಾಂಚೈಸಿಯಿಂದ ತಮ್ಮ ನಿರ್ಗಮನದ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ ಎಂದು ಖುದ್ದು ಹೇಳಿದ್ದಾರೆ. ನಟನ ಪ್ರಕಾರ, ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (2021) ಚಿತ್ರ ಮುಗಿದ ತಕ್ಷಣವೇ ಇದರ ಮೂಲಭೂತ ತಯಾರಿಗಳು ಆರಂಭವಾಗಿದ್ದವು. ಆದರೆ ಹೇಗೋ ಈಗ ‘ಬ್ರ್ಯಾಂಡ್ ನ್ಯೂ ಡೇ’ ಸಹ ಬಿಡುಗಡೆ ಆಗಿದೆ. ಆದರೆ ಮುಂದಿನ ಸ್ಪೈಡರ್ ಮ್ಯಾನ್ ಸಿನಿಮಾನಲ್ಲಿ ಕಡ್ಡಾಯವಾಗಿ ಹೊಸ ನಟ ಇರಲಿದ್ದಾನಂತೆ.

ಆದರೆ ಈ ಬಗ್ಗೆ ತಮಗೆ ಬೇಸರ ಇಲ್ಲ ಎಂದಿರುವ ಟಾಮ್ ಹಾಲೆಂಡ್, ‘ನನಗೆ ಇದು ಬಹಳ ಖುಷಿ ಕೊಡುವ ವಿಷಯ ಆಗಿದೆ. ನಾನು ಸಂಸ್ಥೆಯವರ ಜೊತೆಗೆ ಈ ಬಗ್ಗೆ ಮಾತನಾಡಿದಾಗಲೆಲ್ಲ ಬಹಳ ಉತ್ಸಾಹಗೊಳ್ಳುತ್ತೇನೆ. ಹೊಸ ಮತ್ತು ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡಿ, ಆ ಮೂಲಕ ಸ್ಪೈಡರ್ ಮ್ಯಾನ್ ಪಾತ್ರದ ಭವಿಷ್ಯವನ್ನು ಭದ್ರಗೊಳಿಸುವುದು ನನ್ನ ಜವಾಬ್ದಾರಿ ಎಂದು ನಾನು ನಂಬಿದ್ದೇನೆ’ ಎಂದು ಟಾಮ್ ಹಾಲೆಂಡ್ ಹೇಳಿದ್ದಾರೆ.

ಇದನ್ನೂ ಓದಿ:‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

2016ರಲ್ಲಿ ಬಿಡುಗಡೆಯಾದ ‘ಕ್ಯಾಪ್ಟನ್ ಅಮೆರಿಕ: ಸಿವಿಲ್ ವಾರ್’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಪೈಡರ್ ಮ್ಯಾನ್ ಆಗಿ ಟಾಮ್ ಹಾಲ್ಯಾಂಡ್ ಕಾಣಿಸಿಕೊಂಡಿದ್ದರು. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ (MCU) ಹಲವಾರು ಸ್ಪೈಡರ್ ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. ಟೋಬಿ ಮ್ಯಾಗೈರ್ ಮತ್ತು ಆಂಡ್ರ್ಯೂ ಗಾರ್ಫೀಲ್ಡ್ ನಂತರ ಪೀಟರ್ ಪಾರ್ಕರ್ ಪಾತ್ರವನ್ನು ನಿರ್ವಹಿಸಿದ ಮೂರನೇ ನಟ ಇವರಾಗಿದ್ದಾರೆ. ತಮ್ಮ ಸ್ವಂತ ಅನುಭವವನ್ನು ಮೆಲುಕು ಹಾಕುತ್ತಾ, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್ ಪಾತ್ರಧಾರಿ) ಅವರು ತಮ್ಮ ಮೊದಲ ಮೂರು ಚಿತ್ರಗಳಲ್ಲಿ ತನಗೆ ಹೇಗೆ ಮಾರ್ಗದರ್ಶಕರಾಗಿದ್ದರೋ, ಅದೇ ರೀತಿಯಲ್ಲಿ ಮುಂದಿನ ಪಾತ್ರಕ್ಕೆ ಬರುವ ನಟನಿಗೂ ತಾನು ಸಹಾಯ ಮಾಡಲು ಬಹಳ ಖುಷಿಪಡುತ್ತೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ನಂತರ ಸ್ಪೈಡರ್ ಮ್ಯಾನ್ ಉಡುಪನ್ನು ಧರಿಸಲು ಯಾರನ್ನು ಬಯಸುತ್ತೀರಿ ಎಂದು ಕೇಳಿದಾಗ, ನೆಟ್‌ಫ್ಲಿಕ್ಸ್ ಸರಣಿ ‘ಅಡೋಲೆಸೆನ್ಸ್’ ನಲ್ಲಿನ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ಯುವ ನಟ ಓವನ್ ಕೂಪರ್ ಅವರ ಹೆಸರನ್ನು ಟಾಮ್ ಹಾಲೆಂಡ್ ಸೂಚಿಸಿದ್ದರು. ಓವನ್ ಕೂಪರ್, ತನ್ನ ಅದ್ಭುತ ನಟನೆಯಿಂದ ಈಗಾಗಲೇ ಗ್ರಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Sanatana Culture: ಮುತ್ತೈದೆಯರು ಕೊಟ್ಟ ಅರಿಶಿನ-ಕುಂಕುಮ, ಮಂಗಳ ದ್ರವ್ಯಗಳನ್ನು ಬೇರೆಯವರಿಗೆ ನೀಡಬಾರದು ಏಕೆ? ಶಾಸ್ತ್ರ ಹೇಳುವುದೇನು? – Kannada News | Arishina Kumkuma Rules: Why Re Gifting Sacred Offerings Brings Bad Luck

ನಮ್ಮ ದಿನನಿತ್ಯದ ಜೀವನದಲ್ಲಿ ಧಾರ್ಮಿಕ ಆಚಾರ-ವಿಚಾರಗಳಿಗೆ ಅತ್ಯಂತ ಮಹತ್ವವಿದೆ. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು, ಹಿರಿಯರಿಗೆ ಗೌರವ ನೀಡುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಮೂಲ ತತ್ವ. ಅದರಲ್ಲೂ ವಿಶೇಷವಾಗಿ ಮನೆಗೆ ಬಂದ ಮುತ್ತೈದೆಯರಿಗೆ (ಸುಮಂಗಲಿಯರಿಗೆ) ಅರಿಶಿನ-ಕುಂಕುಮ, ತಾಂಬೂಲ, ರವಿಕೆ, ಹಣ್ಣು-ಕಾಯಿ ನೀಡಿ ಗೌರವಿಸುವುದು ಕಾಲಕಾಲದಿಂದ ಬೆಳೆದುಬಂದ ಶ್ರೇಷ್ಠ ಪದ್ಧತಿ.

ಆದರೆ, ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಮೂಡಿರುವ ಒಂದು ದೊಡ್ಡ ಗೊಂದಲವೆಂದರೆ— ಬೇರೆಯವರ ಮನೆಯಿಂದ ನಮಗೆ ಸಿಕ್ಕ ಅರಿಶಿನ, ಕುಂಕುಮ, ತೆಂಗಿನಕಾಯಿ ಅಥವಾ ಮಂಗಳ ದ್ರವ್ಯಗಳನ್ನು ನಮ್ಮ ಮನೆಗೆ ಬಂದ ಬೇರೆಯವರಿಗೆ ಯಥಾವತ್ತಾಗಿ ಕೊಡಬಹುದೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ದೇವತಾ ಭಾವನೆಯಿಂದ ನೀಡುವ ಮಂಗಳ ದ್ರವ್ಯಗಳು:

ಮನೆಗೆ ಬಂದ ಮುತ್ತೈದೆಗೆ ಅರಿಶಿನ-ಕುಂಕುಮ ನೀಡುವಾಗ, ಅವರನ್ನು ಕೇವಲ ಸಾಧಾರಣ ವ್ಯಕ್ತಿಯಾಗಿ ನೋಡದೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಹಾಗೂ ಪಾರ್ವತಿ ದೇವಿಯ ಸ್ವರೂಪ ಎಂದು ಭಾವಿಸಲಾಗುತ್ತದೆ. “ನಿಮ್ಮ ಪಾದಸ್ಪರ್ಶದಿಂದ ನಮ್ಮ ಮನೆಗೆ ಶುಭವಾಗಲಿ” ಎಂಬ ಪವಿತ್ರ ಭಾವನೆಯಿಂದ ಆ ವಸ್ತುಗಳನ್ನು ಅರ್ಪಿಸಲಾಗಿರುತ್ತದೆ. ಆದ್ದರಿಂದ ಬೇರೆಯವರಿಂದ ಆಶೀರ್ವಾದ ರೂಪದಲ್ಲಿ ಪಡೆದ ವಸ್ತುಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವುದು ಶುಭವಲ್ಲ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಯಾವ ದೇವತಾ ಭಾವನೆಯಿಂದ ವಸ್ತುಗಳನ್ನು ನೀಡಲಾಗಿದೆಯೋ, ಅದನ್ನು ಬೇರೆಯವರಿಗೆ ಕೊಡುವುದರಿಂದ ಆ ಭಾವನೆಗೆ ಹಾಗೂ ದೇವಿಗೆ ಅಪಚಾರವೆಸಗಿದಂತಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನನಾಶ, ಅನಾರೋಗ್ಯ, ಕೈಗೊಂಡ ಕೆಲಸಗಳಲ್ಲಿ ನಷ್ಟ-ಕಷ್ಟಗಳು ಹಾಗೂ ಕುಟುಂಬದಲ್ಲಿ ಅಶಾಂತಿ ಅಥವಾ ಕಲಹಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದೊಂದಿಗೆ ನೇರ ಮಾತುಕತೆ ಬೇಡ: ಸಿಎಂ ವಿಜಯ್​​​​ಗೆ ಪಳನಿಸ್ವಾಮಿ ಸಲಹೆ – Kannada News | Cauvery Water Dispute: No Direct Talks with Karnataka, Palaniswami Advises CM Vijay

ಸಿಎಂ ವಿಜಯ್​, ಮಾಜಿ ಸಿಎಂ ಪಳನಿಸ್ವಾಮಿ Image Credit source: google

ಬೆಂಗಳೂರು, ಜುಲೈ 31: ‘ಕಾವೇರಿ ನೀರು ಹಂಚಿಕೆ (Cauvery water Dispute) ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ನೇರ ಮಾತುಕತೆ ಬೇಡ. ಮಾತುಕತೆ ನಡೆಸುವುದರಿಂದ ತಮಿಳುನಾಡಿಗೆ ಹಿನ್ನಡೆ ಆಗುತ್ತದೆ’ ಎಂದು ಸಿಎಂ ವಿಜಯ್​ಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (Edappadi K. Palaniswami) ಸಲಹೆ ನೀಡಿದ್ದಾರೆ.

ಕಾವೇರಿ, ಮೇಕೆದಾಟು ಯೋಜನೆಯಲ್ಲಿ ರಾಜೀ ಮಾಡಿಕೊಳ್ಳಬಾರದು: ಪಳನಿಸ್ವಾಮಿ

ಸೇಲಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ, ‘ಕರ್ನಾಟಕ ಸರ್ಕಾರದೊಂದಿಗೆ ಸಿಎಂ ಜೋಸೆಫ್ ನೇರ ಮಾತುಕತೆ ನಡೆಸುವುದು ಬೇಡ, ಇದರಿಂದ ತಮಿಳುನಾಡಿಗೆ ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹಿನ್ನಡೆಯಾಗಲಿದೆ. ಕೋರ್ಟ್ ಆದೇಶದ ಮೂಲಕವೇ ಕಾವೇರಿ ನೀರು ಪಡೆದುಕೊಳ್ಳಬೇಕೆ ಹೊರತು ಮಾತುಕತೆಯಿಂದಲ್ಲ. ಕಾವೇರಿ ನೀರು ಹಾಗೂ ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು. ತಮಿಳುನಾಡು ಸಿಎಂ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ’ ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಪಳನಿಸ್ವಾಮಿ ವಾಗ್ದಾಳಿ 

ಕರ್ನಾಟಕ ಸರ್ಕಾರದ ಧೋರಣೆ ವಿರುದ್ಧ ವಾಗ್ದಾಳಿ ಮಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ, ‘ತಮಿಳುನಾಡು ಮುಖ್ಯಮಂತ್ರಿಗೆ ಕರ್ನಾಟಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವುದಾಗಿ ಹೇಳಿರುವ ಕರ್ನಾಟಕ ಸರ್ಕಾರದ ಆಫರ್‌ನಿಂದ ತಮಿಳುನಾಡಿಗೆ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕಕ್ಕೆ ಭೇಟಿ ನೀಡುವ ಆಹ್ವಾನ ಎಂದರೆ ತಮಿಳುನಾಡಿಗೆ ನೀರು ನೀಡುವುದಿಲ್ಲ ಎಂದೇ ಅರ್ಥ’ ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆ ಶಿವಕುಮಾರ್, ಕಾರಣವೇನು?

‘ತಮಿಳುನಾಡಿನ 20 ಜಿಲ್ಲೆಗಳಿಗೆ ಕಾವೇರಿ ನದಿಯೇ ಮುಖ್ಯ ಕುಡಿಯುವ ನೀರಿನ ಆಧಾರವಾಗಿದೆ. ಒಂದು ವೇಳೆ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ತಮಿಳುನಾಡಿನ ಫಲವತ್ತಾದ ಡೆಲ್ಟಾ ಜಿಲ್ಲೆಗಳು ಸಂಪೂರ್ಣವಾಗಿ ಮರುಭೂಮಿಯಾಗಲಿವೆ. ಆದರೆ ಕರ್ನಾಟಕ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಕೈಬಿಡುವುದಿಲ್ಲ, ಅಣೆಕಟ್ಟು ಕಟ್ಟೇ ತೀರುತ್ತೇವೆ ಎಂದು ಹೇಳುತ್ತಿರುವುದು ತಮಿಳುನಾಡಿನ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಆದ್ದರಿಂದ ತಮಿಳುನಾಡು ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಲಾಗಿದೆ.

ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಎಂದ ಪಳನಿಸ್ವಾಮಿ 

‘ಇನ್ನು ತಮಿಳುನಾಡಿನ ರೈತರ ಹಕ್ಕನ್ನು ಕಾಪಾಡಲು ರಾಜ್ಯದಲ್ಲಿ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಮತ್ತು ಡೆಲ್ಟಾ ಭಾಗದ ಮುಖ್ಯ ರೈತ ಸಂಘಟನೆಗಳನ್ನೂ ಈ ಸಭೆಗೆ ಆಹ್ವಾನಿಸಬೇಕು ಎಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ಆಗ್ರಹಿಸಿದ್ದಾರೆ. ಮೇಕೆದಾಟು ಹಾಗೂ ಕಾವೇರಿ ವಿಷಯದಲ್ಲಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಹಾಗೂ ಕಾವೇರಿ ನೀರಿಗಾಗಿ ಕಾನೂನು ಹೋರಾಟದ ಜೊತೆಗೆ ರಾಜಕೀಯ ಒತ್ತಡವನ್ನು ತರಲು ಎಐಎಡಿಎಂಕೆ ಒತ್ತಾಯಿಸಿದೆ.’

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:40 pm, Fri, 31 July 26

Source link

Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ – Kannada News | Patanjali Ayurved entering insurance sector through a deal to acquire Magma

ನವದೆಹಲಿ, ಜುಲೈ 31: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ (Patanjali Ayurved) ಕಂಪನಿಯು ವಿಮಾ ಕ್ಷೇತ್ರಕ್ಕೆ ಕಾಲಿಡಲು ಮಹತ್ವದ ಹೆಜ್ಜೆ ಇಟ್ಟಿದೆ. ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯ (Magma General Insurance) ಸ್ವಾಧೀನಕ್ಕೆ ಪತಂಜಲಿ ಮುಂದಾಗಿದೆ. ವಿಮಾ ನಿಯಂತ್ರಕ ಸಂಸ್ಥೆಯಾದ IRDAI ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಡಿಎಸ್ ಗ್ರೂಪ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗಳು ಜಂಟಿಯಾಗಿ ಈ ಖರೀದಿ ಮಾಡುತ್ತಿವೆ. ಒಪ್ಪಂದದ ಒಟ್ಟು ಮೌಲ್ಯ ಅಂದಾಜು ₹4,500 ಕೋಟಿಯಷ್ಟಿದೆ.

ಪತಂಜಲಿ ಪಾಲು 73%

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ಸೀರಂ ಇನ್ಸ್​ಟಿಟ್ಯೂಟ್​ನ ಸಿಇಒ ಅದಾರ್ ಪೂನಾವಾಲಾ ಅವರ ಒಡೆತನ ಸನೋತಿ ಪ್ರಾಪರ್ಟೀಸ್ (Sanoti Properties) ಮೊದಲಾದವರು ಪ್ರಮುಖ ಷೇರುದಾರರಿದ್ದಾರೆ. ಪತಂಜಲಿ ಆಯುರ್ವೇದ ಸಂಸ್ಥೆಯು ಮ್ಯಾಗ್ಮಾದಲ್ಲಿ 73.56% ಷೇರುಪಾಲು ಪಡೆದು ಪ್ರಮುಖ ಪ್ರೊಮೋಟರ್ ಎನಿಸಲಿದೆ. ರಜನಿಗಂಧ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಡಿಎಸ್ ಗ್ರೂಪ್ ಸಂಸ್ಥೆಯು ಮ್ಯಾಗ್ಮಾ ಇನ್ಷೂರೆನ್ಸ್ ಕಂಪನಿಯಲ್ಲಿ 24.5% ಪಾಲು ಪಡೆಯುತ್ತದೆ. ಮ್ಯಾಗ್ಮಾದ ಈಗಿರನ ಶೇ. 98ರಷ್ಟು ಷೇರುಗಳನ್ನು ಪತಂಜಲಿ ಮತ್ತು ಡಿಎಸ್ ಗ್ರೂಪ್ ಖರೀದಿಸುತ್ತಿವೆ.

ಇದನ್ನೂ ಓದಿ: ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು

ಆಯುರ್ವೇದದಿಂದ ವಿಮಾ ವಲಯಕ್ಕೆ ಪತಂಜಲಿ ಪ್ರವೇಶ

ಎಫ್‌ಎಂಸಿಜಿ (FMCG) ಮತ್ತು ಆಯುರ್ವೇದ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗಿರುವ ಪತಂಜಲಿ ಸಂಸ್ಥೆ ಈ ಒಪ್ಪಂದದೊಂದಿಗೆ ಅಧಿಕೃತವಾಗಿ ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಕ್ಕೆ (Financial Services & Insurance Sector) ಕಾಲಿಟ್ಟಂತಾಗಿದೆ.

ಪತಂಜಲಿ ವಿಸ್ತೃತವಾದ ರೀಟೇಲ್ ನೆಟ್ವರ್ಕ್ ಮತ್ತು ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ (Retail & Distribution Network) ಹೊಂದಿದೆ. ಗ್ರಾಮೀಣ ಮಾರುಕಟ್ಟೆಯಲ್ಲೂ ಆಳವಾಗಿ ಬೇರೂರಿದೆ. ಈ ಶಕ್ತಿಯನ್ನು ಬಳಸಿ ದೇಶದ ಮೂಲೆ ಮೂಲೆಗೆ ವಿಮಾ ಸೇವೆ ತಲುಪಿಸುವ ಗುರಿ ಹೊಂದಿದೆ.

ಈ ಒಪ್ಪಂದಕ್ಕೆ ಐಆರ್​ಡಿಎಐ ನೀಡಿರುವ ಸಮ್ಮತಿಯು ಮೂರು ತಿಂಗಳವರೆಗೆ ಸಿಂಧು ಇರುತ್ತದೆ. ಅಂದರೆ, ಈ ಮೂರು ತಿಂಗಳೊಳಗೆ ಪತಂಜಲಿ ಆಯುರ್ವೇದ ಮತ್ತು ಡಿಎಸ್ ಗ್ರೂಪ್ ಸಂಸ್ಥೆಗಳು ಮ್ಯಾಗ್ಮಾವನ್ನು ಖರೀದಿಸಬೇಕು. ಇಲ್ಲವಾದರೆ, ಒಪ್ಪಂದವು ಅನೂರ್ಜಿತಗೊಳ್ಳುತ್ತದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯು ಜೀವ ವಿಮೆ ಬಿಟ್ಟು ಇತರ ಇನ್ಷೂರೆನ್ಸ್ ಸೆಗ್ಮೆಂಟ್​ಗಳಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ವಾಹನ ವಿಮೆ, ಆರೋಗ್ಯ ವಿಮೆ, ಆಸ್ತಿ ವಿಮೆ, ವಾಣಿಜ್ಯ ವಿಮೆ ಇತ್ಯಾದಿ ಸೆಗ್ಮೆಂಟ್​ಗಳಲ್ಲಿ ಇದು ವಿಮೆ ಮಾಡುತ್ತದೆ. 2025-26ರಲ್ಲಿ ಈ ಕಂಪನಿಯು 3,615 ಕೋಟಿ ರೂ ಮೊತ್ತದ ಪ್ರೀಮಿಯಮ್​ಗಳನ್ನು ಪಡೆದಿತ್ತು.

ಮಾರುಕಟ್ಟೆಯಲ್ಲಿ ಸಾಕಷ್ಟು ಗುರುತು ಮಾಡಿರುವ ಮ್ಯಾಗ್ಮಾ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡರೆ ಪತಂಜಲಿ ಸಂಸ್ಥೆ ಸುಲಭವಾಗಿ ಮಾರುಕಟ್ಟೆ ಪ್ರವೇಶಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version