ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ – Kannada News | Supreme Court: Nodal Officer for Indian Families in Russia Ukraine War Casualties

ನವದೆಹಲಿ, ಜುಲೈ 31: ರಷ್ಯಾ-ಉಕ್ರೇನ್(Ukraine) ಯುದ್ಧದಲ್ಲಿ ಮೃತಪಟ್ಟ, ಗಂಭೀರವಾಗಿ ಗಾಯಗೊಂಡ ಹಾಗೂ ನಾಪತ್ತೆಯಾಗಿರುವ ಭಾರತೀಯ ನಾಗರಿಕರ ಕುಟುಂಬಗಳಿಗೆ ನೆರವಾಗಲು ವಿದೇಶಾಂಗ ಸಚಿವಾಲಯದಲ್ಲಿ (MEA) ತಕ್ಷಣವೇ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ಮಾಹಿತಿಗಳನ್ನು ಸ್ಥಳೀಯ ಪ್ರಾದೇಶಿಕ ಭಾಷೆಗಳಲ್ಲೇ ಒದಗಿಸಬೇಕು ಎಂದು ಪೀಠ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದೆ.

ರಷ್ಯಾದಲ್ಲಿ ಮೃತಪಟ್ಟ ಯೋಧರು,ನಾಗರಿಕರ ಗುರುತು ಪತ್ತೆಹಚ್ಚಲು ಕುಟುಂಬಸ್ಥರ ಡಿಎನ್‌ಎ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಮೃತದೇಹಗಳನ್ನು ಭಾರತಕ್ಕೆ ತರಲು ಅಥವಾ ಅಂತಿಮ ವಿಧಿವಿಧಾನ ನೆರವೇರಿಸಲು ಹಣಕಾಸಿನ ಪರಿಹಾರದ ಪ್ರಕ್ರಿಯೆಯ ನೆಪದಲ್ಲಿ ವಿಳಂಬ ಮಾಡಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ರಷ್ಯಾದಿಂದ ಪರಿಹಾರ ಪಡೆಯಲು ಹಾಗೂ ದಾಖಲೆಗಳನ್ನು ಸಲ್ಲಿಸಲು ಸಂತ್ರಸ್ತ ಕುಟುಂಬಗಳಿಗೆ ಉಚಿತ ಕಾನೂನು ನೆರವು ನೀಡಬೇಕು. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಖಾಂತರವೇ ನಷ್ಟ ಪರಿಹಾರದ ಹಕ್ಕುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಏಕೀಕೃತ ಮಾರ್ಗದರ್ಶಿ ಡಾಕೆಟ್’ಒಂದನ್ನು ಸಿದ್ಧಪಡಿಸಲು ಸಚಿವಾಲಯಕ್ಕೆ ಕೋರ್ಟ್ ತಿಳಿಸಿದೆ.

ರಷ್ಯಾ ಆಡಳಿತ ಮತ್ತು ಸೇನೆಯಿಂದ ಬರುವ ರಷ್ಯನ್ ಭಾಷೆಯ ಅಧಿಕೃತ ದಾಖಲೆಗಳನ್ನು ಹಿಂದಿ ಹಾಗೂ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಿ ಕುಟುಂಬಗಳಿಗೆ ತಲುಪಿಸುವ ಜವಾಬ್ದಾರಿಯನ್ನೂ ಎಂಇಎಗೆ ವಹಿಸಲಾಗಿದೆ. 2024 ಮತ್ತು 2025 ರ ಅವಧಿಯಲ್ಲಿ ಭಾರತದ ಹಲವಾರು ಯುವಕರಿಗೆ ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ, ನಿರ್ಮಾಣ ಹಾಗೂ ಸೇವಾ ವಲಯಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ರಷ್ಯಾ ತಲುಪಿದ ತಕ್ಷಣ ಖಾಸಗಿ ಏಜೆಂಟ್‌ಗಳು ಯುವಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವರನ್ನು ಬಲವಂತವಾಗಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸಿ ಯುದ್ಧಭೂಮಿಯಲ್ಲಿ ಬಿಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿ, ರಷ್ಯಾ ಸೇನೆಯಲ್ಲಿದ್ದ ಭಾರತೀಯರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ್ದರು. ಅನೇಕರನ್ನು ಮರಳಿ ಕರೆತರಲಾಗಿದೆಯಾದರೂ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಹಾಗೂ ಕೆಲವರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:38 pm, Fri, 31 July 26

Source link

ಕಾವೇರಿ ವಿವಾದ: ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ತಮಿಳು ಸಿನಿಮಾಗಳು – Kannada News | Some Tamil movies running in Bengaluru theaters

ಕಾವೇರಿ (Cauvery) ವಿವಾದ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಮಳೆ ಕಡಿಮೆ ಆದಾಗಲೆಲ್ಲ ಕಾವೇರಿ ನೀರಿನ ವಿವಾದ ಏಳುತ್ತದೆ. ಈ ಬಾರಿಯೂ ಅದೇ ಆಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ, 3500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಆದರೆ ರಾಜ್ಯದ ರೈತರು, ಕನ್ನಡ ಪರ ಸಂಘಟನೆಗಳವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದೆಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ತಮಿಳುನಾಡು ಸಿಎಂ ವಿರುದ್ಧವೂ ಆಕ್ರೋಶ ಕಟ್ಟೆ ಒಡೆದಿದೆ. ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರದರ್ಶನನ್ನು ಕೆಲವೆಡೆ ನಿಲ್ಲಿಸಲಾಗಿದೆ. ಇನ್ನೂ ಕೆಲವು ತಮಿಳು ಸಿನಿಮಾಗಳು ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿವೆ.

ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದಲೂ ಪ್ರದರ್ಶನ ಕಾಣುತ್ತಿದೆ. ನಿನ್ನೆ ಮಂಡ್ಯ ಜಿಲ್ಲೆಯಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇಂದು ಚಾಮರಾಜನಗರದಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಸಿನಿಮಾದ ಪ್ರದರ್ಶನ ಜಾರಿಯಲ್ಲಿದೆ. ಆದರೆ ಪ್ರತಿಭಟನಾಕಾರರು ಇಲ್ಲಿಯೂ ಸಿನಿಮಾದ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸುವ ಸಾಧ್ಯತೆ ಇದೆ.

‘ಜನ ನಾಯಗನ್’ ಮಾತ್ರವೇ ಅಲ್ಲದೆ ಇನ್ನೂ ಕೆಲವು ತಮಿಳು ಸಿನಿಮಾಗಳ ಪ್ರದರ್ಶನ ಬೆಂಬಗಳೂರಿನಲ್ಲಿ ಪ್ರಸ್ತುತ ಆಗುತ್ತಿದೆ. ತಮಿಳಿನ ‘ಅನ್ಬೆ ಡಯಾನ’ ಸಿನಿಮಾ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಶಾರದಾ ಚಿತ್ರಮಂದಿರದಲ್ಲಿ ದಿನಕ್ಕೆ ಎರಡು ಶೋ ಮಾತ್ರವೇ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಪರಿ ಇಳವಳಗನ್, ರಮ್ಯಾ ರಂಗನಾಥನ್, ಮಾಜಿ ಸಚಿವೆ ರೋಜಾ ಇನ್ನೂ ಕೆಲವರು ಈ ಸಿನಿಮಾನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ಹೋರಾಟ: ಮಂಡ್ಯದಲ್ಲಿ ರದ್ದಾಯ್ತು ‘ಜನ ನಾಯಗನ್’ ಶೋ

ಇದರ ಹೊರತಾಗಿ ಇತ್ತೀಚೆಗೆ ಬಿಡುಗಡೆ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಸಹ ಬೆಂಗಳೂರಿನಲ್ಲಿ ತಮಿಳು ಆವೃತ್ತಿಯ ಪ್ರದರ್ಶನ ಆಗುತ್ತಿದೆ. ಅರುಣಾ ಚಿತ್ರಮಂದಿರ, ಸ್ವಾಗತ್​​ನಲ್ಲಿ ಒಂದು ಶೋ, ವೈಟ್​​ಫೀಲ್ಡ್ ಪಿವಿಆರ್, ಅಲಸೂರು ಐನಾಕ್ಸ್, ಅಮೃತ್ ಡಿಜಿಟಲ್, ಬನ್ನೇರಘಟ್ಟ ಪಿವಿಆರ್​​ಗಳಲ್ಲಿ ‘ಸ್ಪೈಡರ್ ಮ್ಯಾನ್’ ಸಿನಿಮಾದ ತಮಿಳು ಆವೃತ್ತಿ ಪ್ರದರ್ಶನಗೊಳ್ಳುತ್ತಿದೆ.

ಕಾವೇರಿ ವಿವಾದ ಭುಗಿಲೆದ್ದಾಗೆಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಿಗುವಿನ ವಾತಾವರಣ ನಿರ್ಮಾಣ ಆಗುತ್ತದೆ. ತಮಿಳುನಾಡಿನ ವಾಹನಗಳಿಗೆ ಕರ್ನಾಟಕದಲ್ಲಿ ಕಲ್ಲು ಬಿದ್ದರೆ, ಕರ್ನಾಟಕದ ವಾಹನಗಳಿಗೆ ತಮಿಳುನಾಡಿನಲ್ಲಿ ಕಲ್ಲು ಬೀಳುತ್ತವೆ. ತಮಿಳು ಸಿನಿಮಾಗಳಿಗೆ ನಿಷೇಧ ಹೇರುವುದು ಸಹ ಸಾಮಾನ್ಯ. ಈ ಬಾರಿಯೂ ಸಹ ತಮಿಳು ಸಿನಿಮಾಗಳಿಗೆ ಕರ್ನಾಟಕದಲ್ಲಿ ಅನಧಿಕೃತ ನಿಷೇಧ ಹೇರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ! – Kannada News | Tumakuru Farmer Performs Grand Baby Shower for Pregnant Cow, Serves Holige Feast to Village

ತುಮಕೂರು, ಜುಲೈ 31: ಜಿಲ್ಲೆಯ ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದಲ್ಲಿ ರೈತ ಕರೇಗೌಡ ಎಂಬುವವರು ತಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ ‘ಲಕ್ಷ್ಮಿ’ ಎಂಬ ಗರ್ಭಿಣಿ ಹಸುವಿಗೆ ಅತ್ಯಂತ ಸಂಭ್ರಮದಿಂದ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಗ್ರಾಮದ ಮಹಿಳೆಯರು ಸಾಂಪ್ರದಾಯಿಕವಾಗಿ ಹಸುವಿಗೆ ಅರಿಶಿನ-ಕುಂಕುಮ ಹಚ್ಚಿ, ಆರತಿ ಬೆಳಗಿ, ಮಡಿಲು ತುಂಬಿ ಹಾರೈಸಿದರು. ಈ ಅಪರೂಪದ ಹಾಗೂ ವಿಶೇಷ ಕಾರ್ಯಕ್ರಮದ ನೆಪದಲ್ಲಿ ಇಡೀ ಊರಿನ ನೂರಾರು ಜನರಿಗೆ ಘಮಘಮಿಸುವ ಹೋಳಿಗೆ ಊಟದ ಸತ್ಕಾರ ಏರ್ಪಡಿಸಲಾಗಿತ್ತು. ರೈತನ ಈ ಗೋಪ್ರೇಮಕ್ಕೆ ತೋಟಸಾಗರ ಗ್ರಾಮಸ್ಥರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಾಧಿಕಾರದ ತೀರ್ಪು ಸ್ವಿಕರಿಸಿದ್ರೆ ಅದೇ ನಮ್ಮ ವೀಕ್ನೆಸ್ ಆಗುತ್ತೆ: ಡಿಕೆಶಿಗೊಂದು ಕುಮಾರಸ್ವಾಮಿ ಸಲಹೆ – Kannada News | HD Kumaraswamy Reacts On Cauvery water dispute And Protests In Karnataka

ಬೆಂಗಳೂರು, (ಜುಲೈ 31): ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ಭುಗಿಲೆದ್ದಿರುವ ರೈತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಹಾಗೂ ರೈತಸಂಘಟನೆಗಳು ಮುಂದಾಗಿವೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಆಗಸ್ಟ್‌ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಇನ್ನೊಂದೆಡೆ ಈಗಾಗಲೇ ವಿವಿಧ ಸಂಘಟನೆಗಳು, ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿವೆ. ಹಾಗೇ ವಿಪಕ್ಷ ಬಿಜೆಪಿ ಸಹ ಪ್ರತಿಭಟನೆ ನಡೆಸಿದ್ದು, ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹಾಕುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಹೆಚ್​​​​ಡಿ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ – Kannada News | PM Narendra Modi To Inaugurate Bhogapuram international Airport On August 1 In Andhra Pradesh

ನವದೆಹಲಿ, ಜುಲೈ 31: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ಸುಮಾರು 5,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಸ್ಟ್ 1ರಂದು ಉದ್ಘಾಟಿಸಲಿದ್ದಾರೆ. ಈ ಭೋಗಾಪುರಂ ವಿಮಾನ ನಿಲ್ದಾಣ ಇಡೀ ಉತ್ತರ ಆಂಧ್ರ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಲಿದೆ ಎನ್ನಲಾಗಿದೆ.

ನಾಳೆ ಬೆಳಗ್ಗೆ 10.45ಕ್ಕೆ ಪ್ರಧಾನಿ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಂಧ್ರಕ್ಕೆ ತೆರಳಲಿದ್ದು, ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಲಿದ್ದಾರೆ. ಬಳಿಕ ಮೋದಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ಪ್ರಮುಖ ಗಣ್ಯರೊಂದಿಗೆ ವೀಕ್ಷಣೆ ನಡೆಸಲಿದ್ದಾರೆ. ನಂತರ ತೆರೆದ ವಾಹನದಲ್ಲಿ ಸಾರ್ವಜನಿಕ ಸಭೆಯ ಸ್ಥಳಕ್ಕೆ ಪ್ರಯಾಣಿಸಲಿದ್ದು, ಅಲ್ಲಿ 13,500ಕ್ಕೂ ಹೆಚ್ಚು ಗಿರಿಜನ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ‘ಧಿಂಸಾ’ ನೃತ್ಯದ ಮೂಲಕ ಮೋದಿಯನ್ನು ಸ್ವಾಗತಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು; ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ, ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಒತ್ತು

ವಿಮಾನ ನಿಲ್ದಾಣದ ವಿಶೇಷತೆ:

ಮೊದಲ ಹಂತದಲ್ಲಿ ವರ್ಷಕ್ಕೆ 60 ಲಕ್ಷ ಪ್ರಯಾಣಿಕರ ಸಂಚಾರವನ್ನು ಕಾಯ್ದುಕೊಳ್ಳಲು ವಿನ್ಯಾಸಗೊಳಿಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ವರ್ಷಕ್ಕೆ 4 ಕೋಟಿಗೆ ಹೆಚ್ಚಿಸುವ ಮಾಸ್ಟರ್ ಪ್ಲಾನ್ ಹೊಂದಲಾಗಿದೆ. ಜಿಎಮ್‌ಆರ್ ವಿಶಾಖಪಟ್ಟಣಂ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP) 2,703.26 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಿದೆ. ಇದರಲ್ಲಿ 2,203 ಎಕರೆಯಲ್ಲಿ ವಿಮಾನ ನಿಲ್ದಾಣ, 500 ಎಕರೆಯಲ್ಲಿ ‘ಏವಿಯೇಷನ್ ಹಬ್’ ಹಾಗೂ 136 ಎಕರೆಯಲ್ಲಿ ‘ಏವಿಯೇಷನ್ ಯುನಿವರ್ಸಿಟಿ ಮತ್ತು ಎಡುಸಿಟಿ’ ಸೇರಿವೆ.

ಈ ವಿಮಾನ ನಿಲ್ದಾಣದ ವಿನ್ಯಾಸವು ಬಂಗಾಳ ಕೊಲ್ಲಿ ಮತ್ತು ಉತ್ತರ ಆಂಧ್ರದ ಕಡಲ ಪರಂಪರೆಯನ್ನು ಬಿಂಬಿಸುವ ‘ಹಾರುವ ಮೀನಿನ’ ಆಕಾರದಿಂದ ಪ್ರೇರಿತವಾಗಿದೆ. ಮೇಲ್ಛಾವಣಿಯಲ್ಲಿ ಸಾಂಪ್ರದಾಯಿಕ ರಂಗೋಲಿ ಶೈಲಿಯನ್ನು ಬಳಸಲಾಗಿದೆ. ಶೇಕಡಾ 30ರಷ್ಟು ನೀರಿನ ಅಗತ್ಯವನ್ನು ಮರುಬಳಕೆಯ ನೀರಿನಿಂದ ಪೂರೈಸಿಕೊಳ್ಳಲಾಗುತ್ತಿದ್ದು, ಇದು LEED ಪ್ಲಾಟಿನಂ ಉನ್ನತ ಮಟ್ಟದ ಪರಿಸರ ಮಾನದಂಡಗಳನ್ನು ಹೊಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಈ ಯೋಜನೆಗೆ ಆಂಧ್ರಪ್ರದೇಶ ಸರ್ಕಾರವು ಭೂಸ್ವಾಧೀನ, ನೀರು, ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಮೂಲಸೌಕರ್ಯಗಳಿಗಾಗಿ 1,583 ಕೋಟಿ ರೂ. ಹೂಡಿಕೆ ಮಾಡಿದೆ. ಈ ವಿಮಾನ ನಿಲ್ದಾಣವು ಅರಕು, ಲಂಬಸಿಂಗಿ, ವಿಶಾಖಪಟ್ಟಣಂ, ವಿಜಯನಗರ ಮತ್ತು ಶ್ರೀಕಾಕುಲಂ ಸೇರಿದಂತೆ ಇಡೀ ಉತ್ತರ ಆಂಧ್ರ ಪ್ರದೇಶದ ಪ್ರವಾಸೋದ್ಯಮ, ಐಟಿ, ಔಷಧ, ಉತ್ಪಾದನೆ ಮತ್ತು ರಫ್ತು ಕ್ಷೇತ್ರಗಳಿಗೆ ಹೊಸ ಉತ್ತೇಜನ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ: ಸಿಎಂ ಡಿಕೆ ಶಿವಕುಮಾರ್​​ – Kannada News | Karnataka bandh is not the solution under any circumstances cm dk shivakumar

ಸಿಎಂ ಡಿಕೆ ಶಿವಕುಮಾರ್​​Image Credit source: tv9 kannada

ಬೆಂಗಳೂರು, ಜುಲೈ 31: ಸದ್ಯ ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery Water Dispute) ಕಾವೇರಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀಡಿರುವ CWMA ಆದೇಶವನ್ನು ಖಂಡಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar), ‘ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಪರಿಹಾರ ಸಿಗಲ್ಲ. ದಯವಿಟ್ಟು ಬಂದ್ ಕೈಬಿಡಿ’ ಎಂದು ಮನವಿ ಮಾಡಿದ್ದಾರೆ.

ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ: ಡಿ.ಕೆ.ಶಿವಕುಮಾರ್

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬಂದ್‌ನಿಂದ ಪರಿಹಾರ ಸಿಗಲ್ಲ. ಅಖಂಡ ಕರ್ನಾಟಕ ಬಂದ್‌ನಿಂದ ಜನರಿಗೆ ತೊಂದರೆಯಾಗುತ್ತೆ’. ಹೀಗಾಗಿ ಆಗಸ್ಟ್‌ 13ರ ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ.

ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ವಿಚಾರವಾಗಿ ಮಾತನಾಡಿದ ಅವರು, ‘15 ದಿನಗಳ ಕಾಲ ಕಾವೇರಿ ನೀರು ಬಿಡುವಂತೆ CWMA ಆದೇಶಿಸಿದೆ. ಸಂಕಷ್ಟದ ಕಾಲದಲ್ಲಿ ಇಂತಹ ತೀರ್ಪು ಹೊರಬಿದ್ದಿದೆ. ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಹಾಗಾಗಿ ಹಿಂದಿನ ವರ್ಷ ತಮಿಳುನಾಡಿಗೆ 400ಕ್ಕೂ ಹೆಚ್ಚು ಟಿಎಂಸಿ ನೀರು ಹೋಗಿದೆ. ಸಿಡಬ್ಯುಆರ್‌ಸಿ ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಿದ್ದೆವು’ ಎಂದರು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಆ.13ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

‘CWMA ಸಭೆಗೆ ಯಾರೂ ಹೋಗಿಲ್ಲ ಅಂತಾ ವಿಪಕ್ಷಗಳು ಆರೋಪಿಸಿವೆ. ನಮ್ಮ ರಾಜ್ಯದ ಪರ ಮೂವರು ಹಿರಿಯ ಅಧಿಕಾರಿಗಳು ಹೋಗಿದ್ದರು. ನೀರು ಬಿಡುಗಡೆಗೆ ಕೆಲ ಸಮಯ ನೀಡುವಂತೆ ಮನವಿ ಮಾಡಿದ್ದೆವು. ತಮಿಳುನಾಡು ಅಧಿಕಾರಿಗಳೂ ಪ್ರಬಲ ವಾದ ಮಂಡಿಸಿದ್ದಾರೆ. ರಾಜ್ಯದ ಪರ ಎಸಿಎಸ್‌ ಗೌರವ್ ಗುಪ್ತಾ ಸಹ ಪ್ರಬಲ ವಾದ ಮಂಡಿಸಿದರು. ನಿಮಗೆ ಹೆಚ್ಚು ನೀರು ಬರುತ್ತಿದೆ ಎಂದು CWMAನವರು ಹೇಳಿದ್ದಾರೆ’.

ರಾಜ್ಯದ ಹಿತ ಕಾಪಾಡುವುದೇ ಸರ್ಕಾರದ ಮುಖ್ಯ ಉದ್ದೇಶ: ಸಿಎಂ 

‘ಇನ್ನು ಹೇಮಾವತಿ ಶೇ.67ರಷ್ಟು ತುಂಬಿದೆ, ಕೆಆರ್‌ಎಸ್‌ 36%, ಹಾರಂಗಿ 95%, ಕಬನಿ 83% ನೀರು ತುಂಬಿದೆ. ಎಲ್ಲರ ಬಳಿಯೂ ಈ ದಾಖಲೆ ಇದೆ. ಆದರೆ ಈಗ ಕೊಟ್ಟಿರುವ ಆದೇಶ ಪ್ರಕಾರ 4.5 ಟಿಎಂಸಿ ನೀರು ಬಿಡಲು ಹೇಳಿದೆ. ಈಗಾಗಲೇ ನಮಗೂ ಒಳಹರಿವು ಬರುತ್ತಿದೆ. ಆದರೂ ನನ್ನ ಮತ್ತು ಸರ್ಕಾರದ ಕರ್ತವ್ಯ ರಾಜ್ಯದ ಹಿತ ಕಾಪಾಡಬೇಕು. ಹಿಂದಿನ ಪರಿಸ್ಥಿತಿ ನಮಗೆ ಗೊತ್ತಿದೆ. ಈ ವರ್ಷವು ಶಾಸಕರ ಸಭೆ ಕರೆದು ಮಾತಾಡಿದ್ದೇನೆ. ರೈತರ ರಕ್ಷಣೆ ನಾವು ಮಾಡಿದ್ದೇವೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದೇವೆ. ರಾಜ್ಯದ ಹಿತಕ್ಕೆ ಎಲ್ಲಾ ರೀತಿಯ ರಕ್ಷಣೆಗೆ ನಾವು ಬದ್ಧತೆ ತೋರಿಸಿದ್ದೇವೆ. ಈಗಲೂ ರಾಜ್ಯದ ಹಿತ ಕಾಪಾಡುವ ಬದ್ಧತೆ ನಮಗೆ ಇದೆ’ ಎಂದಿದ್ದಾರೆ.

ಬೇರೊಂದು ದಿನ ರಾಜ್ಯಕ್ಕೆ ಬರುವಂತೆ ಸಿಎಂ ವಿಜಯ್‌ಗೆ ಡಿಕೆ ಶಿವಕುಮಾರ್​ ಮನವಿ

ತಮಿಳುನಾಡು ಸಿಎಂ ವಿಜಯ್‌ ಆಗಮನದ ವಿಚಾರವಾಗಿ ಮಾತನಾಡಿದ ಅವರು, ‘ಈ ಬಗ್ಗೆ ಪತ್ರ ಬರೆದಿದ್ದಾರೆ. ರಾಜ್ಯದ ಸಿಎಸ್‌ಗೆ ತಮಿಳುನಾಡು ಸಿಎಸ್‌ ಪತ್ರ ಬರೆಯುವ ಮೂಲಕ ಆಗಸ್ಟ್‌ 3ರಂದು ತಮಿಳುನಾಡು ಸಿಎಂ ವಿಜಯ್‌ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನೂ ಸಹ ಫೋನ್‌ನಲ್ಲಿ ಅವರೊಂದಿಗೆ ಚರ್ಚಿಸಿದ್ದೇನೆ. ಈಗ ಪರಿಸ್ಥಿತಿ ಸರಿ ಇಲ್ಲ, ಎರಡು ರಾಜ್ಯಗಳಿಗೂ ಒಳ್ಳೇದು ಆಗಬೇಕು. ಇಂತಹ ಸಂದರ್ಭದಲ್ಲಿ ತಮಿಳುನಾಡು ಸಿಎಂ ಬರೋದು ಬೇಡ. ಆಗಸ್ಟ್‌ 3ರ ಬದಲು ಬೇರೊಂದು ದಿನ ಬರುವಂತೆ ಮನವಿ ಮಾಡಿದ್ದೇನೆ. ಸೌಹಾರ್ದಯುತವಾಗಿ ಕಾವೇರಿ ವಿವಾದವನ್ನು ಬಗೆಹರಿಸಬೇಕಿದೆ. ರಾಜ್ಯದ ಹಿತ, ರೈತರ ಹಿತ ಕಾಪಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮಾಯಣ ಟ್ರೇಲರ್ ರಿಲೀಸ್ ಬಳಿಕ ಟ್ರೋಲ್ ಆದ ಸಾಯಿ ಪಲ್ಲವಿ; ಕಾರಣ ಏನು? – Kannada News | Sai Pallavi trolled for Sita role after Ramayana Trailer released

ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ (Ramayana) ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿವೆ. ಚಿತ್ರದ ದೃಶ್ಯ ವೈಭವ ಹಾಗೂ ವಿಎಫ್‌ಎಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವುದರ ನಡುವೆಯೇ, ನಟಿ ಸಾಯಿ ಪಲ್ಲವಿ (Sai Pallavi) ಅವರ ಬಗ್ಗೆಯೂ ಅನಗತ್ಯ ವಿವಾದ ಮತ್ತು ಟ್ರೋಲ್ ಆರಂಭವಾಗಿದೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಆಯ್ಕೆ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ರೀತಿಯ ಟೀಕೆ ಕೇವಲ ಬಾಲಿವುಡ್ ವಲಯದಿಂದ ಮಾತ್ರವಲ್ಲದೆ, ದಕ್ಷಿಣ ಭಾರತದ ಕೆಲವು ಸಿನಿರಸಿಕರಿಂದಲೂ ಕೇಳಿಬರುತ್ತಿದೆ. ಸಿನಿಮಾ ಬಿಡುಗಡೆಯಾಗಿ ಅವರ ಪೂರ್ಣ ನಟನೆಯನ್ನು ವೀಕ್ಷಿಸುವ ಮೊದಲೇ, ‘ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಸೂಕ್ತವಲ್ಲ’ ಎಂದು ತೀರ್ಪು ನೀಡಲು ಹಲವರು ಮುಂದಾಗಿದ್ದಾರೆ. ಇದರಿಂದ ಸಾಯಿ ಪಲ್ಲವಿ ಅವರ ಅಪ್ಪಟ ಅಭಿಮಾನಿಗಳಿಗೆ ಬೇಸರ ಆಗಿದೆ.

ಸಿನಿಮಾ ಬಿಡುಗಡೆಗೂ ಮುನ್ನವೇ ಟೀಕೆ:

‘ರಾಮಾಯಣ’ ಸಿನಿಮಾ ಇನ್ನೂ ಚಿತ್ರಮಂದಿರಕ್ಕೆ ಬಂದಿಲ್ಲ. ಸಾಯಿ ಪಲ್ಲವಿ ಅವರ ಅಭಿನಯ ಹೇಗಿರಲಿದೆ ಎಂಬುದು ಯಾರಿಗೂ ಪೂರ್ಣವಾಗಿ ತಿಳಿದಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಕೆಲವರು, ‘ಸಾಯಿ ಪಲ್ಲವಿ ಈ ಪಾತ್ರಕ್ಕೆ ಸೂಕ್ತವಲ್ಲ’, ‘ಅವರು ಸೀತೆಯಂತೆ ಕಾಣಿಸುತ್ತಿಲ್ಲ’, ಈ ಪಾತ್ರಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಬೇಕಿತ್ತು’ ಎಂಬಿತ್ಯಾದಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.

‘ರಾಮಾಯಣ’ ಟ್ರೇಲರ್:

ಗ್ಲಾಮರ್​ಗಿಂತ ಅಭಿನಯಕ್ಕೇ ಆದ್ಯತೆ ನೀಡಿದ ನಟಿ:

ಸಾಯಿ ಪಲ್ಲವಿ ಎಂದಿಗೂ ಗ್ಲಾಮರ್ ಅಥವಾ ಕೇವಲ ಅಂದಚೆಂದದ ಪ್ರದರ್ಶನದಿಂದ ಹೆಸರು ಮಾಡಿದವರಲ್ಲ. ತಮ್ಮ ಸಹಜವಾದ ಅಭಿನಯ, ಪಾತ್ರದ ಭಾವನಾತ್ಮಕ ಆಳವನ್ನು ಪರದೆಯ ಮೇಲೆ ತರುವ ಅದ್ಭುತ ಕೌಶಲ್ಯದಿಂದಲೇ ಅವರು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೀತೆಯಂತಹ ಪವಿತ್ರ ಹಾಗೂ ಭಾವನಾತ್ಮಕ ಪಾತ್ರಕ್ಕೆ ಸಾಯಿ ಪಲ್ಲವಿ ಅವರಂತಹ ನಟಿಯನ್ನು ಆಯ್ಕೆ ಮಾಡಿರುವುದು ಚಿತ್ರತಂಡದ ಸೃಜನಶೀಲ ನಿರ್ಧಾರ. ಟ್ರೇಲರ್‌ನಲ್ಲಿ ಕಾಣಿಸುವ ಕೆಲವೇ ಸೆಕೆಂಡುಗಳ ದೃಶ್ಯವನ್ನು ನೋಡಿ ಒಬ್ಬ ನಟಿಯ ಪ್ರತಿಭೆಯನ್ನು ನಿರ್ಧರಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದವರಿಗೆ ಹಳೆಯ ಸೀತಾ ಪಾತ್ರಧಾರಿ ತಿರುಗೇಟು

ದೀಪಾವಳಿ ಹಬ್ಬಕ್ಕೆ ರಾಮಾಯಣ ಬಿಡುಗಡೆ:

ಪೌರಾಣಿಕ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವುದು ನಟ-ನಟಿಯರು ಬೆಳ್ಳಿಪರದೆಯ ಮೇಲೆ ನೀಡುವ ಜೀವಂತ ಅಭಿನಯದಿಂದಲೇ ಹೊರತು, ಫಸ್ಟ್ ಲುಕ್ ಪೋಸ್ಟರ್‌ಗಳು ಅಥವಾ ಟ್ರೇಲರ್‌ನ ಕೆಲ ದೃಶ್ಯಗಳಿಂದ ಅಲ್ಲ. ತರಾತುರಿಯಲ್ಲಿ ತೀರ್ಮಾನಕ್ಕೆ ಬರುವ ಬದಲು, ಮುಂಬರುವ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ‘ರಾಮಾಯಣ’ ಚಿತ್ರವನ್ನು ವೀಕ್ಷಿಸಿದ ಬಳಿಕವಷ್ಟೇ ಸಾಯಿ ಪಲ್ಲವಿ ಅವರ ಅಭಿನಯವನ್ನು ನ್ಯಾಯಯುತವಾಗಿ ವಿಮರ್ಶಿಸುವುದು ಸೂಕ್ತ ಎಂದು ಅಭಿಮಾನಿಗಳು ನಟಿಯ ಪರ ವಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಥಿಯೇಟರ್​​​ ಬಿಸ್ನೆಸ್​ಗೆ ಎಂಟ್ರಿ ಕೊಡಲು ಸಜ್ಜಾದ ರಾಮ್ ಚರಣ್-ಎನ್​ಟಿಆರ್? – Kannada News | Ram Charan And Jr NTR Venture Into Multiplex Business; Hyderabad Theater Market Becomes Highly Competitive

ಟಾಲಿವುಡ್‌ನ ಸ್ಟಾರ್ ನಟರು ಬಣ್ಣದ ಲೋಕದ ಜೊತೆಗೆ ಈಗ ಬ್ಯುಸಿನೆಸ್ ಕ್ಷೇತ್ರದಲ್ಲೂ ಭರ್ಜರಿ ಪೈಪೋಟಿಗೆ ಇಳಿದಿದ್ದಾರೆ. ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಾಗಲೇ ಸ್ವಂತ ಚಿತ್ರಮಂದಿರಗಳನ್ನು ಓಪನ್ ಮಾಡುತ್ತಿರುವುದು ಸಿನಿರಸಿಕರಿಗೆ ನಿಜಕ್ಕೂ ಖುಷಿಯ ಸುದ್ದಿಯಾಗಿದೆ. ಈಗ ಇದೇ ಸಾಲಿಗೆ ಆರ್‌ಆರ್‌ಆರ್ ಖ್ಯಾತಿಯ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೊಸದಾಗಿ ಸೇರ್ಪಡೆಗೊಂಡಿದ್ದು, ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ ಎಂದು ವರದಿ ಆಗಿದೆ.

ಏಷ್ಯನ್ ಸಿನಿಮಾಸ್ ಜೊತೆ

ರಾಮ್ ಚರಣ್ ಅವರು ಪ್ರಸಿದ್ಧ ‘ಏಷ್ಯನ್ ಸಿನಿಮಾಸ್’ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಥಿಯೇಟರ್ ಬ್ಯುಸಿನೆಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಇಬ್ಬರ ಸಹಭಾಗಿತ್ವದಲ್ಲಿ ಹೈದರಾಬಾದ್‌ನಲ್ಲಿ ‘ಎಆರ್‌ಸಿ ಸಿನಿಮಾಸ್’ ಎಂಬ ಹೊಸ ಮಲ್ಟಿಪ್ಲೆಕ್ಸ್ ಚೈನ್ ಶೀಘ್ರದಲ್ಲೇ ಲಾಂಚ್ ಆಗಲಿದೆಯಂತೆ. ಈ ಮೂಲಕ ರಾಮ್ ಚರಣ್ ಅವರು ಉದ್ಯಮ ರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಎನ್‌ಟಿಆರ್ ಪ್ರೀಮಿಯಂ ಥಿಯೇಟರ್

ಇನ್ನೊಂದೆಡೆ ಜೂನಿಯರ್ ಎನ್‌ಟಿಆರ್ ಕೂಡ ಥಿಯೇಟರ್ ಉದ್ಯಮದಲ್ಲಿ ಬಂಡವಾಳ ಹೂಡಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಐಟಿ ಹಬ್ ಎಂದೇ ಹೆಸರಾಗಿರುವ ಗಚಿಬೌಲಿ ಏರಿಯಾದಲ್ಲಿ ಅತ್ಯಾಧುನಿಕ ಹಾಗೂ ಪ್ರೀಮಿಯಂ ಸೌಲಭ್ಯಗಳುಳ್ಳ ಭವ್ಯ ಮಲ್ಟಿಪ್ಲೆಕ್ಸ್ ನಿರ್ಮಿಸಲು ತಾರಕ್ ಮುಂದಾಗಿದ್ದಾರೆ. ಸದ್ಯದಲ್ಲೇ ಈ ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಲಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಕೊಯಮತ್ತೂರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಮ್ ಚರಣ್ ಭೇಟಿ

ಹೆಚ್ಚಿದ ಸ್ಟಾರ್ ನಟರ ಪೈಪೋಟಿ

ಟಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಈಗಾಗಲೇ ತಮ್ಮದೇ ಆದ ಐಷಾರಾಮಿ ಮಲ್ಟಿಪ್ಲೆಕ್ಸ್ ಚೈನ್‌ಗಳನ್ನು ಹೊಂದಿ ಯಶಸ್ವಿಯಾಗಿದ್ದಾರೆ. ಮಹೇಶ್ ಬಾಬು ಅವರ ‘ಎಎಂಬಿ ಸಿನಿಮಾಸ್’ (AMB), ಅಲ್ಲು ಅರ್ಜುನ್ ಅವರ ‘ಎಎಎ ಸಿನಿಮಾಸ್’ ಹಾಗೂ ‘ಅಲ್ಲು ಸಿನಿಮಾಸ್’, ವಿಜಯ್ ದೇವರಕೊಂಡ ಅವರ ‘ಏಷ್ಯನ್ ವಿಜಯ್ ದೇವರಕೊಂಡ ಸಿನಿಮಾಸ್’ ಈಗಾಗಲೇ ತೆಲುಗು ಭಾಗದಲ್ಲಿ ಗಟ್ಟಿಯಾಗಿ ನೆಲೆವೂರಿವೆ. ಈಗ ಇವುಗಳ ಸಾಲಿಗೆ ರಾಮ್ ಚರಣ್ ಮತ್ತು ಎನ್‌ಟಿಆರ್ ಮಲ್ಟಿಪ್ಲೆಕ್ಸ್‌ಗಳು ಸೇರ್ಪಡೆಯಾಗುತ್ತಿರುವುದರಿಂದ ಪ್ರದರ್ಶನ ಉದ್ಯಮದಲ್ಲಿ ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:50 pm, Fri, 31 July 26

Source link

ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು – Kannada News | Larsen Toubro India to invest Rs 5,000 crore in new electronics business in next 5 years

ನವದೆಹಲಿ, ಜುಲೈ 31: ಭಾರತದ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್ ಅಂಡ್ ಟೂಬ್ರೊ (L&T) ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬೃಹತ್ ಹೆಜ್ಜೆ ಇಟ್ಟಿದ್ದು, ₹5,000 ಕೋಟಿ ಹೂಡಿಕೆ ಯೊಂದಿಗೆ ಹೊಸ ಎಲೆಕ್ಟ್ರಾನಿಕ್ಸ್ ವ್ಯವಹಾರವನ್ನು ಪ್ರಾರಂಭಿಸಿದೆ. ತನ್ನ ‘L&T ಎಲೆಕ್ಟ್ರಾನಿಕ್ ಪ್ರೊಡಕ್ಟ್ಸ್ ಅಂಡ್ ಸಿಸ್ಟಮ್ಸ್ (EPS)’ ವಿಭಾಗದ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಹೂಡಿಕೆ ಮಾಡಲಿದೆ.

ಈ ಬಂಡವಾಳವನ್ನು ಅತ್ಯಾಧುನಿಕ ತಯಾರಿಕಾ ಘಟಕಗಳು (Manufacturing Hubs), ಸಂಶೋಧನೆ ಮತ್ತು ಅಭಿವೃದ್ಧಿ (R&D), ಪರೀಕ್ಷಾ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಒಪ್ಪಂದಗಳಿಗಾಗಿ ಬಳಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

$4.85 ಬಿಲಿಯನ್ ಮಾರುಕಟ್ಟೆ ಗುರಿ

ಕಂಪನಿಯು ಭಾರತದಲ್ಲಿ ಸದ್ಯ $2 ಬಿಲಿಯನ್ ಡಾಲರ್‌ನಷ್ಟಿದ್ದು, 2031ರ ವೇಳೆಗೆ $4.85 ಬಿಲಿಯನ್ (ಅಂದಾಜು ₹47,000 ಕೋಟಿಗೂ ಹೆಚ್ಚು) ಬೆಳೆಯುವ ನಿರೀಕ್ಷೆಯಿರುವ ಕೈಗಾರಿಕಾ B2B ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಈ ಹೊಸ ವಲಯಗಳಲ್ಲಿ 10% ರಿಂದ 15% ಮಾರುಕಟ್ಟೆ ಪಾಲನ್ನು (Market Share) ಗಳಿಸುವ ಗುರಿಯನ್ನು L&T ಹೊಂದಿದೆ.

ಪ್ರಮುಖ ಉತ್ಪನ್ನಗಳು ಹಾಗೂ ಕ್ಷೇತ್ರಗಳು

ಗ್ರಾಹಕ ಎಲೆಕ್ಟ್ರಾನಿಕ್ಸ್ (Consumer Electronics) ಬದಲು ಹೆಚ್ಚಿನ ಮೌಲ್ಯದ ಮತ್ತು ತಾಂತ್ರಿಕ ಎಲೆಕ್ಟ್ರಾನಿಕ್ಸ್ ವ್ಯವಹಾರಗಳ ಮೇಲೆ L&T ಗಮನಹರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ (EV) ಮೋಟಾರ್‌ಗಳು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), ಕನೆಕ್ಟೆಡ್ ವೆಹಿಕಲ್ ಟೆಕ್ನಾಲಜಿ, ಪವರ್ ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಆಟೊಮೇಷನ್, ರೋಬೋಟಿಕ್ಸ್, ನವೀಕರಿಸಬಹುದಾದ ಇಂಧನ ನಿಯಂತ್ರಣ ವ್ಯವಸ್ಥೆಗಳು, ಡಿಫೆನ್ಸ್/ಏರೋಸ್ಪೇಸ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನದ ಕಡೆ ಎಲ್ ಅಂಡ್ ಟಿ ಗಮನ ಹರಿಸಲು ನಿಶ್ಚಯಿಸಿದೆ.

ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಸೆಂಟರ್

ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಲ್ ಅಂಡ್ ಟಿಯ ಹೊಸ ಮ್ಯಾನುಫ್ಯಾಕ್ಚರಿಂಗ್ ಸೆಂಟರ್ ಮತ್ತು ಸರ್ಕಿಟ್ ಬೋರ್ಡ್ ಅಸೆಂಬ್ಲಿ ಲೈನ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಈ ಯೋಜನೆಯಿಂದ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಬೆಂಗಳೂರು, ಕೊಯಮತ್ತೂರಿನಲ್ಲಿರುವ ಅದರ ಸಂಶೋಧನಾ ಕೇಂದ್ರಗಳು ಮತ್ತು ಚೆನ್ನೈ ಬಳಿಯ ಬ್ಯಾಟರಿ ಎನರ್ಜಿ ಸ್ಟೋರೇಜ್ ಸೌಲಭ್ಯಗಳು ಈ ಯೋಜನೆಗೆ ಸಾಥ್ ನೀಡಲಿವೆ.

ಇದನ್ನೂ ಓದಿ: ದೊಡ್ಡ ಡೆಪಾಸಿಟ್​ಗಳಿಗೆ ತಮ್ಮದೇ ಬಡ್ಡಿದರ ನಿಗದಿ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ಅನುಮತಿ

ದೇಶೀಯ ಪೂರೈಕೆ ಜಾಲ ಬೇಕು

‘ವಾಹನ ಎಲೆಕ್ಟ್ರಾನಿಕ್ಸ್​ನ ಮುಖ್ಯ ತಂತ್ರಜ್ಞಾನವು ಭಾರತದಲ್ಲಿ ಇಲ್ಲದಿರುವುದು ಕಂಡು ಬಂತು. ಎಲ್ಲಾ ಟಿಯರ್-1 ಪೂರೈಕೆದಾರರು ಹೊರಗಿನಿಂದ ಟೆಕ್ನಾಲಜಿ ತರುವಂತಹ ಎಂಎನ್​ಸಿಗಳೇ ಆಗಿವೆ. ಭಾರತೀಯ ಮಾರುಕಟ್ಟೆಯ ಅಗತ್ಯಗಳಿಗೆ ಇವು ಪೂರ್ಣವಾಗಿ ಹೊಂದಿಕೆಯಾಗಿರುವುದಿಲ್ಲ’ ಎಂದು ಎಲ್ ಅಂಡ್ ಟಿ ವ್ಯೋಮಾದ ಎಂಡಿ ಪ್ರಶಾಂತ್ ಜೈನ್ ಹೇಳಿದ್ದಾರೆ.

ಈ ಹೂಡಿಕೆಯು L&T ಸಂಸ್ಥೆಯನ್ನು ಸಾಂಪ್ರದಾಯಿಕ ಇಪಿಸಿ (EPC) ಕಾಮಗಾರಿಗಳಿಂದ ಉನ್ನತ ತಂತ್ರಜ್ಞಾನದ ಹಾರ್ಡ್‌ವೇರ್ ತಯಾರಿಕಾ ಕ್ಷೇತ್ರಕ್ಕೆ ಪರಿವರ್ತಿಸುವ ಪ್ರಮುಖ ಕಾರ್ಯತಂತ್ರದ ಭಾಗವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಟ್ಟದ ಕಲ್ಲಿನ ಸೌಂದರ್ಯಕ್ಕೆ ಮಾರು ಹೋದ ನಟಿ ಮನ್ನಿಕಾ ವಿಶ್ವಕರ್ಮ – Kannada News | Actress Mannika Vishwakarma talks about beauty of Pattadakal

ಸಿಪಿ ಯೋಗೀಶ್ವರ್ (CP Yogeshwar) ಅವರ ಪುತ್ರ ಧ್ಯಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಒಟ್ಟಿಗೆ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಅವರ ನಟನೆಯ ‘ಕರ್ಣಾಟ ಬಲಂ’ ಸಿನಿಮಾದ ಚಿತ್ರೀಕರಣ ಪಟ್ಟದಕಲ್ಲಿನಲ್ಲಿ ನಡೆಯುತ್ತಿದೆ. ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ಪಟ್ಟದಕಲ್ಲಿನಲ್ಲಿ ಮಾಡಲಾಗುತ್ತಿದೆ. ಈ ವೇಳೆ ಸಿನಿಮಾದ ನಾಯಕಿ ಮನ್ನಿಕಾ ವಿಶ್ವಕರ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಪಟ್ಟದಕಲ್ಲಿನ ಅಂದಕ್ಕೆ ತಾವು ಮಾರು ಹೋಗಿರುವುದಾಗಿ ಹೇಳಿದ್ದಾರೆ. ನಟಿ ಮನ್ನಿಕಾ ವಿಶ್ವಕರ್ಮ ಹೇಳಿದ್ದೇನು? ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version