IND vs SL: ಗಾಲೆ ಟೆಸ್ಟ್ 2ನೇ ದಿನದಾಟದ ಸಮಯ ಬದಲಾವಣೆ – Kannada News | Galle Test Day 1: India Dominates SL with Padikkal 131*, Revised Day 2 Schedule

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ಭಾರತ ತಂಡದ ಪರವಾಗಿತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹಾಕಿದರು. ಇದರ ಫಲವಾಗಿ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿ ಪಂದ್ಯದಲ್ಲಿ ಭಿಗಿ ಹಿಡಿತ ಸಾಧಿಸಿದೆ. ಆದಾಗ್ಯೂ, ಮಧ್ಯಂತರ ಮಳೆಯಿಂದಾಗಿ ಆಟಕ್ಕೆ ಹಲವಾರು ಬಾರಿ ಅಡ್ಡಿಯುಂಟಾಯಿತು. ಇದರ ಪರಿಣಾಮವಾಗಿ ಮೊದಲ ದಿನ ಪೂರ್ಣ 90 ಓವರ್​ಗಳನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟವನ್ನು ನಿಗದಿತ ಸಮಯಕ್ಕೂ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.

ಮೊದಲ ದಿನ 73 ಓವರ್​ಗಳ ಆಟ

ಮೊದಲ ದಿನದಂದು ಗಾಲೆಯಲ್ಲಿ ಹವಾಮಾನವು ಆಗಾಗ್ಗೆ ಬದಲಾಗುತ್ತಿತ್ತು. ಎರಡನೇ ಸೆಷನ್ ಆರಂಭಕ್ಕೂ ಮುನ್ನ ಮಳೆಯಿಂದಾಗಿ ಆಟಗಾರರು ಮತ್ತು ಅಭಿಮಾನಿಗಳು ಬಹಳ ಸಮಯ ಕಾಯಬೇಕಾಯಿತು. ಆದಾದ ನಂತರೂ ಮಳೆಯಿಂದಾಗಿ ಕೊನೆಯ ಸೆಷನ್​ಗೂ ಅಡ್ಡಿಯುಂಟಾಯಿತು. ಇದರ ಪರಿಣಾಮವಾಗಿ ಪೂರ್ಣ 90 ಓವರ್‌ಗಳ ಆಟ ನಡೆಯಲಿಲ್ಲ. ಬದಲಿಗೆ ಮೊದಲ ದಿನ 73 ಓವರ್​ಗಳ ಆಟ ನಡೆಯಿತು. ಹೀಗಾಗಿ ಬಾಕಿ ಉಳಿದಿರುವ 17 ಓವರ್​ಗಳನ್ನು ಎರಡನೇ ದಿನದಂದು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಪಂದ್ಯದ ಅಧಿಕಾರಿಗಳು ಎರಡನೇ ದಿನದ ವೇಳಾಪಟ್ಟಿಯನ್ನು ಮರು ನಿಗದಿಪಡಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಮೊದಲ ದಿನದ ಆಟ ಬೆಳಿಗ್ಗೆ 10:00 ಗಂಟೆಗೆ ಆರಂಭವಾಗಿತ್ತು. ಆದರೆ, ಎರಡನೇ ದಿನದ ಆಟ ಬೆಳಿಗ್ಗೆ 9:45 ಕ್ಕೆ ಆರಂಭವಾಗಲಿದೆ. ಹೆಚ್ಚುವರಿಯಾಗಿ, ಓವರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೊದಲ ದಿನದ ನಷ್ಟವನ್ನು ಸರಿದೂಗಿಸಲು ಎರಡನೇ ದಿನಕ್ಕೆ ಒಟ್ಟು 98 ಓವರ್‌ಗಳನ್ನು ಯೋಜಿಸಲಾಗಿದೆ. ಎರಡನೇ ದಿನದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮೂರನೇ ದಿನದ ಆಟ ಕೂಡ ಬೇಗನೇ ಆರಂಭವಾಗಬಹುದು.

IND vs SL: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದ ಜೈಸ್ವಾಲ್

ಮೊದಲ ದಿನ ಭಾರತದ ಮೇಲುಗೈ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ಎರಡು ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ತಂಡದ ಪರ ದೇವದತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿ 131 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೆಎಲ್ ರಾಹುಲ್ ಕೂಡ 77 ರನ್ ಗಳಿಸಿ ಗಾಯದಿಂದಾಗಿ ಆಟದಿಂದ ನಿವೃತ್ತರಾಗಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್ 32 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರೆ, ರಿಷಭ್ ಪಂತ್ 27 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದೀಗ ಟೀಂ ಇಂಡಿಯಾ ಪಂದ್ಯದ ಎರಡನೇ ದಿನದಂದು ದೊಡ್ಡ ಮೊತ್ತವನ್ನು ಕಲೆಹಾಕುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯೋತ್ಸವ ಅಂಗವಾಗಿ HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ – Kannada News | HMT Independence Day Watch: New Model Launch Sparks Rush Among Buyers

ಬೆಂಗಳೂರು, ಆಗಸ್ಟ್​ 15: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಗಂಡಭೇರುಂಡ ಲಾಂಛನ ಹಾಗೂ ಕನ್ನಡ ಅಂಕಿಗಳನ್ನು ಒಳಗೊಂಡ ವಿಶೇಷವಾದ ಹೆಚ್‌ಎಂಟಿ (HMT) ನೂತನ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಕೇಂದ್ರದಲ್ಲಿ ಈ ವಾಚ್‌ಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದರು. ಈ ವಿಶೇಷ ವಾಚ್‌ಗಳನ್ನು ಖರೀದಿಸಲು ಜನರು ಮುಂಜಾನೆಯಿಂದಲೇ ಬರೋಬ್ಬರಿ 2 ಕಿ.ಮೀಗೂ ಅಧಿಕ ಉದ್ದದ ಕ್ಯೂನಲ್ಲಿ ನಿಂತಿದ್ದು, ಭಾರೀ ಬೇಡಿಕೆ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

20 ವರ್ಷ ಕಿರಿಯ ಯುವತಿಯೊಟ್ಟಿಗೆ ಪ್ರೀತಿ, ಮದುವೆ ಬಗ್ಗೆ ಅನುರಾಗ್ ಮಾತು – Kannada News | Anurag Kashyap talks about marriage plans with 20 year younger girl friend

ಅನುರಾಗ್ ಕಶ್ಯಪ್ (Anurag Kashyap) ಬಾಲಿವುಡ್​​ನ ಸ್ಟಾರ್ ನಿರ್ದೇಶಕ. ಆದರೆ ಅವರು ಬಾಲಿವುಡ್​ ಬಿಟ್ಟು ದಕ್ಷಿಣಕ್ಕೆ ಬಂದಿದ್ದಾರೆ. ಕಳೆದ ಕೆಲ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅನುರಾಗ್ ಕಶ್ಯಪ್, ಬಾಲಿವುಡ್​ ಬಗ್ಗೆ ಅಲ್ಲಿನ ಕೆಟ್ಟ ಪದ್ಧತಿಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅನುರಾಗ್ ಕಶ್ಯಪ್ ಅವರು ತಮ್ಮ ‘ಗರ್ಲ್​​ಫ್ರೆಂಡ್’ ಜೊತೆಗೆ ಲಿವಿನ್​​ನಲ್ಲಿದ್ದಾರೆ. ಅನುರಾಗ್ ಕಶ್ಯಪ್ ಅವರು ತಮಗಿಂತಲೂ 20 ವರ್ಷ ಕಿರಿಯವರಾದ ಶುಭ್ರತಾ ಶೆಟ್ಟಿಯ ಜೊತೆಗೆ ಪ್ರೀತಿಯಲ್ಲಿದ್ದಾರೆ. ಕಳೆದ ಒಂದು ದಶಕದಿಂದಲೂ ಇವರಿಬ್ಬರು ಒಟ್ಟಿಗಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಅವರು ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್, ತಮ್ಮ ಹಾಗೂ ಶುಭ್ರತಾ ನಡುವಿನ ವಯಸ್ಸಿನ ಅಂತರದಿಂದಾಗಿ ಎದುರಿಸಿರುವ ಟೀಕೆ, ವ್ಯಂಗ್ಯ, ಮದುವೆಯಾಗುವ ಯೋಚನೆ, ಶುಭ್ರತಾರ ಭೇಟಿಯ ಬಳಿಕ ತಮ್ಮಲ್ಲಾದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.

ಅನುರಾಗ್ ಕಶ್ಯಪ್ ಅವರು ಶುಭ್ರಾ ಶೆಟ್ಟಿಯ ಜೊತೆಗಿನ ಸಂಬಂಧದಿಂದ ತಾವು ಶಾಂತವಾಗಿರುವುದಾಗಿ ಹೇಳಿದ್ದಾರೆ. ಮದುವೆಯಾಗುವ ಯೋಜನೆಗಳ ಬಗ್ಗೆ ಕೇಳಿದಾಗ, ಶುಭ್ರಾಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾನು ಶುಭ್ರಾ ಜೊತೆಗೆ ಇದ್ದಾಗ ತುಂಬಾ ಸಂತೋಷವಾಗಿರುತ್ತೇನೆ. ನಾನು ಶುಭ್ರ ಜೊತೆ ಇರಲು ಬಯಸುತ್ತೇನೆ. ಅದಕ್ಕೆ ಏನಾದರೂ ಸರಿ, ಮದುವೆಯಾದರೂ ಸರಿ, ಲಿವಿನ್ ಆದರೂ ಸರಿ ಎಂದಿದ್ದಾರೆ.

ಇದನ್ನೂ ಓದಿ:‘ಸತ್ಲುಜ್’ ಸಿನಿಮಾ ನೋಡದೆಯೇ ನಿಷೇಧ ಹೇರಿದ ಸೆನ್ಸಾರ್ ಮಂಡಳಿ ಅಧ್ಯಕ್ಷ? ಅನುರಾಗ್ ಕಶ್ಯಪ್ ಆರೋಪ

ಶುಭ್ರಾ ಅನ್ನು ಭೇಟಿಯಾಗುವ ಮೊದಲು, ತನಗೆ ಸಾಯುವ ಭಯವಿರಲಿಲ್ಲ ಮತ್ತು ಅಪಘಾತವಾದರೂ ತನಗೆ ಕಾಳಜಿಯಿರಲಿಲ್ಲ, ಆದರೆ ಮೊದಲ ಬಾರಿಗೆ, ಬದುಕಲು ಯೋಗ್ಯವಾದದ್ದನ್ನು ಕಂಡುಕೊಂಡಿದ್ದರಿಂದ ಸಾಯಲು ಬಯಸುವುದಿಲ್ಲ, ಈಗ ಸಾವಿನ ಬಗ್ಗೆ ಭಯ ಮೂಡಿದೆ, ಬದುಕುವ ಆಸೆ ಮೂಡಿದೆ ಎಂದು ಹೇಳಿದರು.

ವಯಸ್ಸಿನ ಅಂತರದ ಕಾರಣಕ್ಕೆ ಸಾಕಷ್ಟು ಟೀಕೆ ಅನುಭವಿಸಿರುವುದಾಗಿ ಅನುರಾಗ್ ಕಶ್ಯಪ್ ಹೇಳಿದರು. ಅನುರಾಗ್ ಕಶ್ಯಪ್ ಅವರು ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಾರೆ. ಮೊದಲಿಗೆ ಎಡಿಟರ್ ಆಗಿದ್ದ ಆರತಿ ಬಜಾಜ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಹೆಣ್ಣು ಮಗಳಿದ್ದು, ಅವರು ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಬಳಿಕ ಅವರು ನಟಿ ಕಲ್ಕಿ ಜೊತೆ ವಿವಾಹವಾದರು. 2013 ರಲ್ಲಿ ಇಬ್ಬರೂ ಬೇರಾದರು. ಬಳಿಕ ಅವರು 2016ರಲ್ಲಿ ಶುಭ್ರ ಜೊತೆಗೆ ರಿಲೇಷನ್​​ಶಿಪ್ ಆರಂಭಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ಈ ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ನಿದ್ರೆ ಕ್ವಾಲಿಟಿ ಸುಧಾರಿಸಬಹುದು – Kannada News | Better Sleep Naturally: Simple Nighttime Habits You Should Follow

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಒತ್ತಡ, ತಡರಾತ್ರಿಯವರೆಗೆ ಮೊಬೈಲ್ ಬಳಕೆ, ಅನಿಯಮಿತ ಆಹಾರ ಪದ್ಧತಿ ಮತ್ತು ಬದಲಾಗಿರುವ ನಿದ್ರೆಯ ಸಮಯದಿಂದಾಗಿ ಹಲವರ ನಿದ್ರೆಯ ಗುಣಮಟ್ಟ ಕುಸಿಯುತ್ತಿದೆ. ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಕೇವಲ ಮರುದಿನದ ಆಯಾಸಕ್ಕೆ ಕಾರಣವಾಗುವುದಿಲ್ಲ ಮನಸ್ಥಿತಿ ಮತ್ತು ದೈನಂದಿನ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ನಿದ್ರೆ ಚೆನ್ನಾಗಿ ಬರಲು ಕೇವಲ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರುವುದು ಸಾಕಾಗುವುದಿಲ್ಲ. ನಿಯಮಿತ ನಿದ್ರೆಯ ಸಮಯ ಮತ್ತು ಮಲಗುವ ಮುನ್ನದ ಅಭ್ಯಾಸಗಳಿಗೂ ಹೆಚ್ಚಿನ ಮಹತ್ವವಿದೆ.

ನಿದ್ರೆ ಉತ್ತಮವಾಗಲು ರಾತ್ರಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳುವುದಕ್ಕೆ ಪ್ರಯತ್ನಿಸಿ: ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗುವುದು ಮತ್ತು ಬೆಳಗ್ಗೆ ಏಳುವುದು ದೇಹದ ನೈಸರ್ಗಿಕ ಬಾಡಿ ಕ್ಲಾಕ್ ಅನ್ನು ನಿಯಮಿತವಾಗಿಡಲು ಸಹಾಯ ಮಾಡಬಹುದು. ವಾರಾಂತ್ಯದಲ್ಲೂ ನಿದ್ರೆಯ ಸಮಯದಲ್ಲಿ ಹೆಚ್ಚಿನ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ಉತ್ತಮ.

ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡಿ: ರಾತ್ರಿ ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ನಂತಹ ಸ್ಕ್ರೀನ್‌ಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ. ಸ್ಕ್ರೀನ್ ಬಳಕೆ ಮನಸ್ಸನ್ನು ಹೆಚ್ಚು ಸಕ್ರಿಯವಾಗಿರಿಸಬಹುದು. ಆದ್ದರಿಂದ ಮಲಗುವ ಸಮಯ ಹತ್ತಿರವಾದಂತೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ರಾತ್ರಿ ಅತಿಯಾಗಿ ಆಹಾರ ಸೇವಿಸಬೇಡಿ: ಮಲಗುವ ಮುನ್ನ ತುಂಬಾ ಹೊಟ್ಟೆ ತುಂಬುವಂತೆ ಅಥವಾ ಭಾರವಾದ ಆಹಾರ ಸೇವಿಸಿದರೆ ಹೊಟ್ಟೆ ಭಾರವಾಗಬಹುದು ಮತ್ತು ಕೆಲವರಿಗೆ ನಿದ್ರೆಗೆ ತೊಂದರೆಯಾಗಬಹುದು. ರಾತ್ರಿ ಸಾಧ್ಯವಾದಷ್ಟು ಹಗುರವಾದ ಆಹಾರ ಸೇವಿಸುವುದು ಉತ್ತಮ.

ಸಂಜೆ ನಂತರ ಚಹಾ-ಕಾಫಿ ಕಡಿಮೆ ಮಾಡಿ: ಚಹಾ ಮತ್ತು ಕಾಫಿಯಲ್ಲಿರುವ ಕ್ಯಾಫೀನ್ ಕೆಲವರಲ್ಲಿ ಹೆಚ್ಚು ಸಮಯ ಎಚ್ಚರವಾಗಿರುವಂತೆ ಮಾಡಬಹುದು. ವಿಶೇಷವಾಗಿ ಸಂಜೆ ಅಥವಾ ರಾತ್ರಿ ಕ್ಯಾಫೀನ್ ಇರುವ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ನಿದ್ರೆಗೆ ಸಹಾಯಕವಾಗಬಹುದು.

ಹಗಲಿನಲ್ಲಿ ದೈಹಿಕ ಚಟುವಟಿಕೆ ಇರಲಿ: ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಟ್ಟಾರೆ ಆರೋಗ್ಯದ ಜೊತೆಗೆ ನಿದ್ರೆಯ ಗುಣಮಟ್ಟಕ್ಕೂ ಸಹಾಯ ಮಾಡಬಹುದು. ಆದರೆ ಮಲಗುವ ಸಮಯಕ್ಕೆ ತೀರಾ ಹತ್ತಿರದಲ್ಲಿ ತೀವ್ರ ವ್ಯಾಯಾಮ ಮಾಡುವುದನ್ನು ತಪ್ಪಿಸುವುದು ಉತ್ತಮ.

ಮಲಗುವ ಕೋಣೆಯನ್ನು ಆರಾಮದಾಯಕವಾಗಿಡಿ: ಮಲಗುವ ಕೋಣೆ ಶಾಂತ, ಕತ್ತಲೆ ಮತ್ತು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಸೂಕ್ತ ತಾಪಮಾನ, ಆರಾಮದಾಯಕ ಹಾಸಿಗೆ ಮತ್ತು ಸರಿಯಾದ ದಿಂಬು ಕೂಡ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.

ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸಿ: ಮಲಗುವ ಮುನ್ನ ಪುಸ್ತಕ ಓದುವುದು, ನಿಧಾನವಾದ ಸಂಗೀತ ಕೇಳುವುದು ಅಥವಾ ಕೆಲವು ನಿಮಿಷ ವಿಶ್ರಾಂತಿ ಪಡೆಯುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು. ಒತ್ತಡ ಮತ್ತು ಚಿಂತೆ ಹೆಚ್ಚಿದ್ದರೆ ನಿದ್ರೆ ಬರುವುದಕ್ಕೂ ತೊಂದರೆಯಾಗಬಹುದು.

ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡಬೇಡಿ: ದೀರ್ಘ ಸಮಯ ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಅಗತ್ಯವಿದ್ದರೆ ಸಣ್ಣ ಅವಧಿಯ ನಿದ್ರೆ ಮಾಡಬಹುದು. ಆದರೆ ರಾತ್ರಿ ನಿದ್ರೆ ಬರಲು ತೊಂದರೆಯಾಗುತ್ತಿದ್ದರೆ ಹಗಲಿನ ನಿದ್ರೆಯ ಅವಧಿಯನ್ನು ಗಮನಿಸಿಕೊಳ್ಳುವುದು ಮುಖ್ಯ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಕೆಲವೊಮ್ಮೆ ಒತ್ತಡ, ಪ್ರಯಾಣ ಅಥವಾ ದಿನಚರಿಯ ಬದಲಾವಣೆಯಿಂದ ನಿದ್ರೆ ಹಾಳಾಗಬಹುದು. ಆದರೆ ನಿರಂತರವಾಗಿ ನಿದ್ರೆ ಬರದಿರುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ತುಂಬಾ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಬರದಿರುವುದು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ರಾತ್ರಿ ಜೋರಾಗಿ ಗೊರಕೆ ಹೊಡೆಯುವುದರ ಜೊತೆಗೆ ಉಸಿರಾಟ ನಿಲ್ಲುವಂತೆ ಆಗುವುದು, ಹಠಾತ್ ಉಸಿರು ತೆಗೆದುಕೊಳ್ಳಲು ಎಚ್ಚರವಾದರೆ ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಮತ್ತು ಆಯಾಸ ಇದ್ದರೂ ವೈದ್ಯಕೀಯ ಸಲಹೆ ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್‌ ನಡೆದಿರುವ ಶಂಕೆ: ಯಾವುದು ನಿಜ? ಯಾವುದು ಸುಳ್ಳು? – Kannada News | Karnataka Guarantee Schemes: R. Ashoka Seeks White Paper on Fund Discrepancies

ಆರ್​​. ಅಶೋಕ್​, ಡಿಕೆ ಶಿವಕುಮಾರ್​Image Credit source: tv9 kannada

ಬೆಂಗಳೂರು, ಆಗಸ್ಟ್​ 15: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ವೆಚ್ಚದ ಅಂಕಿ-ಅಂಶಗಳಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಆಗ್ರಹಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್ (DK Shivakumar)​ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿರುವ ಅಂಕಿ-ಅಂಶಗಳಿಗೂ ಹಾಗೂ ಸರ್ಕಾರದ ಹಿಂದಿನ ಪ್ರಕಟಣೆಗಳಿಗೂ ಯಾವುದೇ ತಾಳೆಯಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಕಳೆ ಗಟ್ಟಿತ್ತು. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿಕೆ ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಡಿಕೆ ಶಿವಕುಮಾರ್​ ಅಭಿವೃದ್ಧಿಯೇ ನಮ್ಮ ಗುರಿ ಎಂದಿದ್ದರು. ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಿರುವ ಕೆಲ ಅಂಕಿ ಸಂಖ್ಯೆ ತಾಳೆ ಆಗುತ್ತಿಲ್ಲ ಎಂದು ಆರ್​ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ: ಡಿಕೆ ಶಿವಕುಮಾರ್​ ವಿರುದ್ಧ ಅಶೋಕ್​ ಕಿಡಿ

ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ವೇದಿಕೆಯಲ್ಲೂ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಲೆಕ್ಕಗಳನ್ನು ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರು 7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ ಮಾಡಿದ್ದಾರೆ’ ಎಂದಿದ್ದಾರೆ.

ಆರ್​​ ಅಶೋಕ್​ ಟ್ವೀಟ್​

ಶಕ್ತಿ ಯೋಜನೆಯ ವೆಚ್ಚದಲ್ಲಿ ಭಾರೀ ಗೊಂದಲವಿದೆ ಎಂದಿರುವ ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಿಎಂ ಅವರು 3.5 ಕೋಟಿ ಮಹಿಳೆಯರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಮೂರು ವರ್ಷಗಳಲ್ಲಿ 14,875 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದಿದ್ದಾರೆ. ಆದರೆ ಜೂನ್ 11ರಂದು ಸಿಎಂ ಅಧಿಕೃತ ‘ಎಕ್ಸ್’ ಖಾತೆಯಲ್ಲಿ 753.7 ಕೋಟಿ ಪ್ರಯಾಣಕ್ಕೆ 19,771 ಕೋಟಿ ರೂ. ವೆಚ್ಚವಾಗಿದೆ ಎಂದು ಮತ್ತು ಮೇ 25ರ ಪೋಸ್ಟ್‌ನಲ್ಲಿ 726 ಕೋಟಿ ಪ್ರಯಾಣಕ್ಕೆ 18,943 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಇವುಗಳನ್ನು ತಾಳೆ ನೋಡಿದರೆ ಸುಮಾರು 5 ರಿಂದ 6 ಸಾವಿರ ಕೋಟಿ ರೂ ವ್ಯತ್ಯಾಸ ಕಂಡುಬರುತ್ತಿದೆ. ಹಿಂದೆ ಹೆಚ್ಚಿದ್ದ ಒಟ್ಟು ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.

ಯಾರ ಖಾತೆಗೆ ಹಣ ಹೋಗುತ್ತಿದೆ?

ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಅಂಕಿ-ಅಂಶಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ‘ನಿಮ್ಮದೇ ಸರ್ಕಾರ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹಾಗೂ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿರುವ ಅಧಿಕೃತ ಪ್ರಕಟಣೆಯಲ್ಲಿ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದಿದೆ. ಕಾಂಗ್ರೆಸ್ ಸರ್ಕಾರ 3 ವರ್ಷ ಪೂರೈಸಿದ ಸಂದರ್ಭದಲ್ಲಿ ಮೇ 25, 2026ರಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್​ ಖಾತೆಯ ಪೋಸ್ಟ್ ಒಂದರಲ್ಲಿಯೂ ಸಹ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದು ಹೇಳಲಾಗಿದೆ. ಆದರೆ, ಇಂದಿನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು 1.28 ಕೋಟಿ ಎಂದು ಹೇಳುತ್ತಾರೆ. ಈ 4 ಲಕ್ಷ ಹೆಚ್ಚುವರಿ ಫಲಾನುಭವಿಗಳು ಯಾರು? ಯಾರ ಖಾತೆಗೆ ಹಣ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ಇಲ್ಲಿ ಯಾರು ಹೇಳುತ್ತಿರುವುದು ಸತ್ಯ? ಯಾರು ಹೇಳುತ್ತಿರುವುದು ಸುಳ್ಳು?

‘ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳಾ? ಹಾಲಿ ಸಿಎಂ ಡಿಕೆ ಶಿವಕುಮಾರ್​ ಹೇಳುತ್ತಿರುವುದು ಸುಳ್ಳಾ? ಅಥವಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೇಳುತ್ತಿರುವುದು ಸುಳ್ಳಾ? ಸಾರ್ವಜನಿಕರ ತೆರಿಗೆ ಹಣದಲ್ಲಿ ‘ಗ್ಯಾರಂಟಿ ಅನುಷ್ಠಾನ ಸಮಿತಿ’ ಎಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಿ, ಅವರಿಗೆ ಕಾರು, ಭತ್ಯೆ, ಆಡಂಬರದ ಸೌಲಭ್ಯಗಳನ್ನು ನೀಡಿದ್ದೀರಿ. ಸರ್ಕಾರಿ ಇಲಾಖೆಗಳು ಒಂದು ಲೆಕ್ಕ ನೀಡಿದರೆ, ಈ ಸಮಿತಿ ಇನ್ನೊಂದು ಲೆಕ್ಕ ಕೊಡುತ್ತದೆ, ಸಚಿವರು ಮತ್ತೊಂದು ಸುಳ್ಳು ಹೇಳುತ್ತಾರೆ. ಈ ಗೊಂದಲ ಸೃಷ್ಟಿಸಲೆಂದೇ ಅನುಷ್ಠಾನ ಸಮಿತಿಗಳನ್ನು ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಯುವಜನತೆಗೆ ಎಐ ಶಿಕ್ಷಣದ ಕೊಡುಗೆ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ

ಇನ್ನು ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ ಅಶೋಕ್​, ‘ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ತಕ್ಷಣವೇ ನಿಲ್ಲಿಸಿ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸುಳ್ಳು ಲೆಕ್ಕ ನೀಡಿ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು’. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಗ್ಯಾರಂಟಿ ಯೋಜನೆಗಳ ಪ್ರತಿಯೊಂದು ಪೈಸೆ ವೆಚ್ಚ ಹಾಗೂ ಫಲಾನುಭವಿಗಳ ನಿಜವಾದ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು’ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:30 pm, Sat, 15 August 26

Source link

ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ – Kannada News | One year for Darshan bail reject, what happened in this one year

ನಟ ದರ್ಶನ್ (Darshan)​​ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿ ಇಂದಿಗೆ (ಆಗಸ್ಟ್ 15) ಒಂದು ವರ್ಷ. ಈ ಒಂದು ವರ್ಷದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಬೆನ್ನು ನೋವು, ಜೈಲಿನ ಪರಿಸ್ಥಿತಿ, ಅನಾರೋಗ್ಯ, ಸಮಿತಿಯಿಂದ ಜೈಲು ಭೇಟಿ, ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ, ಸಾಕ್ಷಿಗಳ ವಿಚಾರಣೆ, ಬೆದರಿಕೆ, ಮಾಫಿ ಸಾಕ್ಷಿ ಇನ್ನೂ ಏನೇನೋ ನಡೆದಿವೆ. ಅವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ. ದರ್ಶನ್ ಜಾಮೀನು ರದ್ದಾಗಿ ಅವರು ಮತ್ತೆ ಜೈಲು ಸೇರಿದ ಬಳಿಕ ಈ ಒಂದು ವರ್ಷ ಅವಧಿಯಲ್ಲಿ ಪ್ರಕರಣದಲ್ಲಿ ಏನೇನಾಯ್ತು ಎಂಬುದನ್ನು ವಿಡಿಯೋನಲ್ಲಿ ವಿವರಿಸಲಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ – Kannada News | Bigg Boss Kannada season 13, new promo released

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಡಬಹುದಾಗಿದೆ. ಯಾರು ಬಿಗ್​​ಬಾಸ್ ಮನೆಯ ಒಳಗೆ ಹೋಗುತ್ತಾರೆ ಎಂಬುದನ್ನು ಜಡ್ಜ್​​ಗಳು ನಿರ್ಧರಿಸುತ್ತಾರೆ. ಶ್ರುತಿ, ಚಂದನ್ ಶೆಟ್ಟಿ, ಸಂಗೀತಾ, ವಿನಯ್ ಅವರುಗಳು ಆಕಾಂಕ್ಷಿಗಳಿಗೆ ಪ್ರಶ್ನೆಗಳನ್ನು ಕೇಳಿ ಅರ್ಹರನ್ನು ಆಯ್ಕೆ ಮಾಡುತ್ತಾರೆ. ಇದೀಗ ಅಪ್ಪ-ಮಗ ಇಬ್ಬರೂ ಒಟ್ಟಿಗೆ ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಂದಿದ್ದರು. ಆದರೆ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಕಳಿಸಲು ಅವಕಾಶ ಇದೆ ಎಂದಾಗ ಬಿಗ್​​ಬಾಸ್ ವೇದಿಕೆಯಲ್ಲೇ ಅಪ್ಪ-ಮಗನ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

IND vs SL: ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದ ಜೈಸ್ವಾಲ್ – Kannada News | India vs Sri Lanka Test: Yashasvi Jaiswal’s Tragic Run Out on Galle Day 1

ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 288 ರನ್ ಕಲೆಹಾಕಿದೆ. ದಿನವಿಡೀ ಟೀಂ ಇಂಡಿಯಾ ಬ್ಯಾಟರ್​ಗಳು ಶ್ರೀಲಂಕಾ (India vs Sri Lanka ) ಬೌಲರ್​ಗಳನ್ನು ಕಾಡಿದರಾದರೂ ದಿನದಂತ್ಯಕ್ಕೆ 2 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಒಂದು ವಿಕೆಟ್ ಅನ್ನು ಶ್ರೀಲಂಕಾ ಬೌಲರ್​ಗಳು ಪಡೆದರು ಎನ್ನುವುದಕ್ಕಿಂತ ಟೀಂ ಇಂಡಿಯಾ ಬ್ಯಾಟರ್​ಗಳು ಉಚಿತವಾಗಿ ನೀಡಿದರು ಎನ್ನಬಹುದು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ನಡುವಿನ ಸಂವಹನದ ಕೊರತೆಯಿಂದಾಗಿ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾಗಬೇಕಾಯಿತು.

5 ಬೌಂಡರಿಗಳ ಸಹಿತ 32 ರನ್

ಶ್ರೀಲಂಕಾ 11 ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಫಾರ್ಮ್​ಗೆ ಮರಳಿದ್ದ ಜೈಸ್ವಾಲ್ ಅದೇ ಫಾರ್ಮ್​ ಅನ್ನು ಮೊದಲ ಟೆಸ್ಟ್ ಪಂದ್ಯದಲ್ಲೂ ಮುಂದುವರೆಸಿದರು. ಹೀಗಾಗಿ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 32 ರನ್ ಬಾರಿಸಿದ್ದರು. ಆರಂಭದಲ್ಲೇ ಜೈಸ್ವಾಲ್ ಅಪಾಯಕಾರಿಯಾಗಿದ್ದು ಲಂಕಾ ತಂಡವನ್ನು ಚಿಂತೆಗೀಡುಮಾಡಿತ್ತು. ಆದರೆ ಪಂದ್ಯದ 11ನೇ ಓವರ್​ನಲ್ಲಿ ನಡೆದ ಘಟನೆ ಲಂಕಾ ತಂಡವನ್ನು ನಿರಾಳಗೊಳಿಸಿತು.

ಜೈಸ್ವಾಲ್​​ಗೆ ಡಿಕ್ಕಿ ಹೊಡೆದ ಬೌಲರ್

ಭಾರತದ ಮೊದಲ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಪತನವಾಯಿತು. 11 ನೇ ಓವರ್‌ನಲ್ಲಿ, ಕೇಶರ ನುವಾಂತ ಅವರ ಬೌಲಿಂಗ್‌ನಲ್ಲಿ ಸ್ಟ್ರೈಕ್​ನಲ್ಲಿದ್ದ ಕೆಎಲ್ ರಾಹುಲ್, ಮಿಡ್-ಆನ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಹೀಗಾಗಿ ಆ ಚೆಂಡನ್ನು ಬೌಲರ್ ಕೇಶರ ನುವಾಂತ ಅವರೇ ಹಿಡಿಯಲು ಮುಂದಾದರು. ಈ ಪ್ರಯತ್ನದಲ್ಲಿ, ನಾನ್-ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಯಶಸ್ವಿಗೆ ನುವಾಂತ ಡಿಕ್ಕಿ ಹೊಡೆದರು.

ನುವಾಂತ ಡಿಕ್ಕಿ ಹೊಡೆದಿದ್ದರಿಂದ ರನ್​ಗಾಗಿ ಓಡಲು ಯತ್ನಿಸುತ್ತಿದ್ದ ಯಶಸ್ವಿಗೆ ಓಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ರನ್​ಗಾಗಿ ಓಡಲಾರಂಭಿಸಿದರು. ಆದರೆ ಜೈಸ್ವಾಲ್ ಸ್ಟ್ರೈಕರ್‌ ತುದಿಗೆ ಓಡುವ ಬದಲು ಮತ್ತೆ ನಾನ್-ಸ್ಟ್ರೈಕರ್‌ ತುದಿಗೆ ಹಿಂತಿರುಗಿದರು. ಏತನ್ಮಧ್ಯೆ, ಕೆಎಲ್ ರಾಹುಲ್ ಕೂಡ ನಾನ್-ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಈ ನಡುವೆ ಪ್ರಭಾತ್ ಜಯಸೂರ್ಯ ಚೆಂಡನ್ನು ಫೀಲ್ಡಿಂಗ್ ಮಾಡಿ ವಿಕೆಟ್ ಕೀಪರ್ ಡಿಕ್ವೆಲ್ಲಾಗೆ ಪಾಸ್ ಮಾಡಿದರು. ಚೆಂಡನ್ನು ಹಿಡಿದ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರು.

IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಬೇಸರದಿಂದಲೇ ಹೆಜ್ಜೆಹಾಕಿದ ಜೈಸ್ವಾಲ್

ಹೀಗಾಗಿ ಜೈಸ್ವಾಲ್ ತನ್ನದಲ್ಲದ ತಪ್ಪಿಗೆ ರನ್ ಔಟ್​ಗೆ ಬಲಿಯಾಗಬೇಕಾಯಿತು. ಉತ್ತಮ ಲಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಜೈಸ್ವಾಲ್ ಭಾರವಾದ ಹೃದಯದಿಂದ ಕ್ರೀಸ್‌ನಿಂದ ಹೊರಹೋಗಬೇಕಾಯಿತು. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದ ರೀತಿ ನೋಡಿದರೆ, ಅವರು ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕ ದಾಖಲಿಸುವ ಸಾಧ್ಯತೆಗಳಿದ್ದವು. ಆದರೆ ಅದು ಈ ದುರಾದೃಷ್ಟಕರ ರನೌಟ್​ನಿಂದ ನೆರವೇರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೇಲೆ ಮಾಡಿದ್ದಕ್ಕೆ ಕೊಲೆ: ರೀಲ್ಸ್ ನೋಡಿಕೊಂಡು ಗೆಳೆಯನಿಗೆ ಕೀಟಲೆ ಮಾಡಿದವನ ಹೆಣ ಬಿತ್ತು! – Kannada News | Big Twist T0 suhel Murder Case: A Youth Kills His Friend For Doing Joke at Tumakuru

ತುಮಕೂರು, (ಆಗಸ್ಟ್ 15): ಕಳೆದ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ (Tumakuru) ನಡೆದಿದ್ದ ಸುಹೇಲ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆದ್ರೆ ತಿಲಕ್ ಪಾರ್ಕ್ ಪೊಲೀಸರ ತನಿಖೆಯಲ್ಲಿ ಬಯಲಾದ ಸಂಗತಿಯೇ ಬೇರೆ ಕಥೆ. ಹೌದು, ತುಮಕೂರಿನ ಹೆಗಡೆ ಕಾಲೋನಿಯಲ್ಲಿ ಇದೇ ತಿಂಗಳ 11ರ ರಾತ್ರಿ ಗೆಳೆಯರ ಜೊತೆ ಕುಳಿತಿದ್ದ ಸುಹೇಲ್ ಚಾಕು ಇರಿತಕ್ಕೊಳಗಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸುಹೇಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ.. ಘಟನೆ ಬಳಿಕ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಮೃತನ ಕುಟುಂಬ ಆರೋಪಿಸಿದ್ದರು.. ಪ್ರಕರಣ ದಾಖಲಿಸಿಕೊಂಡ ತಿಲಕ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದು, ರೀಲ್ಸ್ ನೋಡಿ ಗೇಲಿ ಮಾಡಿದ ಕಥೆಯೊಂದು ಬಯಲಾಗಿದೆ.

ಕೊಲೆಗೀಡಾದ ಸುಹೇಲ್ ಮತ್ತು ಆರೋಪಿ ರಬ್ಬಾನ್ ಇಬ್ಬರೂ ಸ್ನೇಹಿತರೇ ಆಗಿದ್ದರು. ಬರೋಬ್ಬರಿ ಮೂರು ವರ್ಷದಿಂದ ಇಬ್ಬರೂ ಒಟ್ಟಿಗೆ ಓಡಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಕೂಡ ಇಬ್ಬರು ಕೆಲ ಸ್ನೇಹಿತರ ಜೊತೆ ಸೇರಿ ಹೆಗಡೆ ಕಾಲೋನಿಯ ಅಂಗಡಿಯೊಂದರ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ ರೀಲ್ಸ್ ನೋಡುತ್ತಿದ್ದ ಸುಹೇಲ್, ರಬ್ಬಾನ್‌ನನ್ನು ಗೇಲಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಆರಂಭದಲ್ಲಿ ಸುಮ್ಮನಿದ್ದ ರಬ್ಬಾನ್ ನಂತರದಲ್ಲಿ ಸ್ನೇಹಿತನ ಗೇಲಿಗೆ ಕೋಪಗೊಂಡಿದ್ದ. ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತನ್ನ ಬಳಿ ಇದ್ದ ಚಾಕುವಿನಿಂದ ಸುಹೇಲ್ ಮೇಲೆ ರಬ್ಬಾನ್ ಹಲ್ಲೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದ.ಅಸಲಿಗೆ ಕೊಲೆ ನಡೆದ ವೇಳೆ ಜೊತೆಯಲ್ಲಿದ್ದ ಇತರೆ ಸ್ನೇಹಿತರ ಮಾಹಿತಿ ಆಧರಿಸಿ ಬಲೆ ಬೀಸಿದ್ದ ತಿಲಕ್ ಪಾರ್ಕ್ ಪೊಲೀಸರು ಆರೋಪಿ ರಬ್ಬಾನ್ ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:01 pm, Sat, 15 August 26

Source link

ಅರಣ್ಯಾಧಿಕಾರಿಗಳ ಗುಂಡೇಟಿಗೆ ಮೂವರು ಬಲಿ: ಕೊನೆಗೂ ದಾಖಲಾಯ್ತು FIR – Kannada News | Three Killed In Forest Encounter In Chamrajnagar: FIR Booked Against Forest Staff

ಚಾಮರಾಜನಗರ, (ಆಗಸ್ಟ್ 15): ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವಾಪ್ತಿಯ ಹೊಳೆದಟ್ಟಿ ಅರಣ್ಯದಲ್ಲಿ ಮರಿಯ ಮಂಗಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ (Chamrajnagar Encounter) ಸಂಬಂಧಿಸಿದಂತೆ ಕೊನೆಗೂ ಎಫ್​​​​ಐಆರ್ ದಾಖಲಾಗಿದೆ. ಪ್ರಾಣಿ ಬೇಟೆಗೆ ಬಂದಿದ್ದಾರೆಂದು ಅರಣಾಧ್ಯಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್​​​ಐಆರ್ ದಾಖಲಾಗಿದೆ.

ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ, ಚಾಮರಾಜನಗರ ಎಸ್ಪಿ ಮುತ್ತುತಾಜು ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಿ ಕೇಸ್‌ ದಾಖಲಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಎಂದು ಎಫ್​​​ಐಆರ್​​​​​ನಲ್ಲಿ ನಮೂದಿಸಲಾಗಿದೆ. ಬಿಎನ್ ಎಸ್ 103(1) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ

ದೂರಿನಲ್ಲಿ ಏನಿದೆ?

ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. 14.08.2026 ರಂದು ನಮ್ಮ ಹಸುಗಳು‌‌ ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ.ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ (ಆಗಸ್ಟ್ 14) ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಿಗ್ಗೆ ಆದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ‌ನಾವು‌ ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಿಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು‌. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ರು. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಿಷ್ಟು

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಪ್ರತಿಕ್ರಿಯಿಸಿದ್ದು, ಕಾವೇರಿ ವನ್ಯಧಾಮದ ಕರಡಿ ಕಲ್ಲು ಒಡ್ಡು ಬಳಿ ಘಟನೆ ನಡೆದಿದೆ. ಪೈರಿಂಗ್ ನಿಂದ ಮೂವರು ಸಾವನ್ನಪ್ಪಿರುವುದಾಗಿ ಅರಣ್ಯಧಿಕಾರಿಗಳು ಮಾಹಿತಿ ನೀಡಿದರು. ಫೈರಿಂಗ್ ನಿಂದ ಮೂರು ಜನರ ಸಾವು,ಒಬ್ಬರು ಎಸ್ಕೇಪ್ ಆಗಿದ್ದರು.
ಜೀವ ಉಳಿಸಲು ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ದಿದ್ದಾಗಿ ಮಾಹಿತಿ ನೀಡಿದರು. ಮೂವರು ಮೃತಪಟ್ಟಿದ್ದರಿಂದ ಅಂಥೋಣಿ ಸಾಮಿ,ಜಾನ್ ಪೀಟರ್,ಸೆಬಾಸ್ಟಿಯನ್ ಕುಮಾರ್ ಮೃತದೇಹದ ‌ಮೈಸೂರಿನ ಕೆಆರ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು. ಈಗ ಮೃತನ ಕುಟುಂಬಸ್ಥರ ದೂರು‌ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟ ಅರಣ್ಯ ಸಚಿವ ರಾಮಲಿಂಗಾರೆಡ್ಡಿ

ನಾಲ್ವರು ಬೇಟೆಯಾಡಲು ಬಂದಿದ್ರು ಎಂದ ಸಿಬ್ಬಂದಿ

ನಾಲ್ಕು ಜನರು ದನ ಕಾಯಲು ಹೋಗಿದ್ದರು. ಅರಣ್ಯ ಸಿಬ್ಬಂದಿ ಅವರ ಮೇಲೆ ಫೈರಿಂಗ್ ಮಾಡಿದ್ದಾರೆಂದು ದೂರು ಕೊಟ್ಟಿದ್ದಾರೆ. ಇನ್ನು ನಾಲ್ವರು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಅದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಸತ್ಯಾಸತ್ಯತೆ ಹೊರತರುವ ಕೆಲಸವಾಗುತ್ತದೆ.ನಾಡಬಂದೂಕು ಕೂಡ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್ ಮಾಂಸ ಸಿಕ್ಕಿದೆ ಅಂತಾ ಹೇಳಿದ್ದಾರೆ ಎಂದು ವಿವರಿಸಿದರು.

ಸತ್ತವರ ವಿರುದ್ಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಗೊತ್ತಾಗುತ್ತದೆ. ಅರಣ್ಯ ಬಾರ್ಡರ್ ಗೂ ಹಾಗೂ ಘಟನೆ ನಡೆದಿರುವ ಸ್ಥಳಕ್ಕೆ ದೂರವಿದೆ. ಈಗ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಅರಣ್ಯಧಿಕಾರಿಗಳು ಯಾವುದೇ ದೂರನ್ನ ನೀಡಿಲ್ಲ. ಅವರು ಸಹ ದೂರನ್ನು ಕೊಡಬಹುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version