ಬಿಹಾರದ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ; ಹೊಸ ಸರ್ಕಾರಕ್ಕೆ ಪೂರ್ಣ ಬೆಂಬಲದ ಪ್ರತಿಜ್ಞೆ – Kannada News | Nitish Kumar resigns as Bihar chief minister says New Government Will Have My Full Cooperation

ಪಾಟ್ನಾ, ಏಪ್ರಿಲ್ 14: ಬಿಹಾರದ ರಾಜಕೀಯದಲ್ಲಿ ನಿತೀಶ್ ಕುಮಾರ್ (Nitish Kumar) ಯುಗ ಇಂದು ಅಂತ್ಯಗೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಇಂದು ತಮ್ಮ ಅಂತಿಮ ಸಚಿವ ಸಂಪುಟ ಸಭೆ ನಡೆಸಿದರು. ಈ ವೇಳೆ ಅವರು ತುಂಬಾ ಭಾವುಕರಾದರು. ಸಂಪುಟ ಸಭೆಯ ನಂತರ ನಿತೀಶ್ ಕುಮಾರ್ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಬಿಹಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೊಸ ಮುಖ್ಯಮಂತ್ರಿಯ ಜೊತೆಗೆ, ಇತರ ಇಬ್ಬರು ಉಪಮುಖ್ಯಮಂತ್ರಿಗಳು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂತಿಮ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾವುಕರಾದರು. ಅವರು ಹೊಸ ಸರ್ಕಾರಕ್ಕೆ ತಮ್ಮ ಶುಭಾಶಯಗಳನ್ನು ಸಹ ಸಲ್ಲಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಿಹಾರದಲ್ಲಿ ಹೊಸ ಸರ್ಕಾರ ರಚಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೊಸ ಸರ್ಕಾರ ನಾಳೆ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ರಾಜೀನಾಮೆ ನೀಡಿರುವುದರಿಂದ ಬಿಜೆಪಿಯ ಅಭ್ಯರ್ಥಿ ಸಿಎಂ ಆಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Video: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

ರಾಜ್ಯಸಭಾ ಸಂಸದರಾಗಿ ನಿತೀಶ್ ಪ್ರಮಾಣವಚನ ಸ್ವೀಕರಿಸಿದ್ದಾರೆ. 2 ದಶಕಗಳ ಕಾಲ ಬಿಹಾರ ಸಿಎಂ ಆಗಿ ಸೇವೆ ಸಲ್ಲಿಸಿದ ನಂತರ ನಿತೀಶ್ ಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಅವರು ಏಪ್ರಿಲ್ 11ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಅವರು ಮಾರ್ಚ್ 30ರಂದು ಬಿಹಾರದ ವಿಧಾನಸಭೆಯ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಿತೀಶ್ ಕುಮಾರ್ ಮಾರ್ಚ್ 16ರಂದು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ನಿಯಮದ ಪ್ರಕಾರ, ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದ 14 ದಿನಗಳ ಒಳಗೆ ಚುನಾಯಿತ ಸದಸ್ಯರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹೀಗಾಗಿ, ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:03 pm, Tue, 14 April 26

Source link

ವಿದ್ಯಾ ಬಾಲನ್ ಕಂಡರೆ ಬೆಚ್ಚಿ ಬೀಳುತ್ತಿದ್ದ ಅಕ್ಷಯ್ ಕುಮಾರ್ ಮಗ; ಕಾರಣ ಏನು? – Kannada News | Akshay Kumar says Aarav Bhatia was scared of Vidya Balan Manjulika character for 6 Years

ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರು ಈಗ ‘ಭೂತ್ ಬಂಗ್ಲ’ (Bhooth Bangla) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಮಗ ಆರವ್ ಭಾಟಿಯಾಗೆ ಸಂಬಂಧಿಸಿದ ಒಂದು ಸ್ವಾರಸ್ಯಕರ ಹಾಗೂ ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. 2007ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ (Vidya Balan) ಅವರು ಮಾಡಿದ್ದ ಮಂಜುಲಿಕಾ ಪಾತ್ರವನ್ನು ಕಂಡು ಆರವ್ ಎಷ್ಟು ಭಯಬಿದ್ದಿದ್ದರೆಂದರೆ, ಬರೋಬ್ಬರಿ 6 ವರ್ಷಗಳ ಕಾಲ ಅವರು ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ.

ಅಕ್ಷಯ್ ಕುಮಾರ್ ಈ ಕುರಿತು ಮಾತನಾಡುತ್ತಾ, ‘ಆರವ್ ಸುಮಾರು 6 ವರ್ಷಗಳ ಕಾಲ ವಿದ್ಯಾ ಬಾಲನ್ ಅವರನ್ನು ಕಂಡು ಹೆದರುತ್ತಿದ್ದ. ವಿದ್ಯಾ ಅವರು ನಮ್ಮ ಮನೆಗೆ ಬಂದಾಗಲೆಲ್ಲಾ ಅವರನ್ನು ಆರವ್ ಭೇಟಿಯಾಗದೇ ತಪ್ಪಿಸಿಕೊಳ್ಳುತ್ತಿದ್ದ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕೂಡ ಆತನಿಗೆ ಧೈರ್ಯವಿರಲಿಲ್ಲ. ತನ್ನ ಎದುರಿಗಿರುವುದು ಮಂಜುಲಿಕಾ ಎಂಬ ಭೂತವೇ ಹೊರತು ನಟಿ ವಿದ್ಯಾ ಬಾಲನ್ ಅಲ್ಲ ಎಂದು ಆತ ಗಾಬರಿಪಡುತ್ತಿದ್ದ’ ಎಂದು ಹಳೆಯ ನೆನಪನ್ನು ಸ್ಮರಿಸಿದ್ದಾರೆ.

ತಮ್ಮ ಮಗನ ಭಯವನ್ನು ಹೋಗಲಾಡಿಸಲು ಅಕ್ಷಯ್ ಸಾಕಷ್ಟು ಪ್ರಯತ್ನಪಟ್ಟಿದ್ದರಂತೆ. ‘ಅವಳು ಮಂಜುಲಿಕಾ ಅಲ್ಲ, ವಿದ್ಯಾ. ಅವಳು ತುಂಬಾ ಒಳ್ಳೆಯವಳು ಎಂದು ನಾನು ಎಷ್ಟೇ ವಿವರಿಸಿದರೂ ಆರವ್ ಸಮಾಧಾನ ಆಗುತ್ತಿರಲಿಲ್ಲ’ ಎಂದು ಅಕ್ಷಯ್ ಹೇಳಿದ್ದಾರೆ. ಅಷ್ಟರಮಟ್ಟಿಗೆ ವಿದ್ಯಾ ಬಾಲನ್ ಅಭಿನಯವು ಆರವ್ ಭಾಟಿಯಾ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು.

‘ಭೂತ್ ಬಂಗ್ಲ’ ಚಿತ್ರವು ‘ಭೂಲ್ ಭುಲಯ್ಯ’ ಸಿನಿಮಾ ರೀತಿಯೇ ಇರಬಹುದಾ ಎಂಬ ಪ್ರಶ್ನೆಗೆ ಅಕ್ಷಯ್ ಕುಮಾರ್ ಅವರು ಉತ್ತರಿಸಿದ್ದಾರೆ. ‘ಇದು ಸಂಪೂರ್ಣವಾಗಿ ವಿಭಿನ್ನವಾದ ಸಿನಿಮಾ. ಇದು ಡಿಸ್ನಿ ಶೈಲಿಯ ಹಾರರ್-ಫ್ಯಾಂಟಸಿ ಚಿತ್ರವಾಗಿದ್ದು, ಮಕ್ಕಳು ಕೂಡ ಇದನ್ನು ಇಷ್ಟಪಡುತ್ತಾರೆ. ಇದರಲ್ಲಿ ನಿಜವಾದ ಭೂತಗಳ ಕಥೆಯಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಆರ್ಭಟಕ್ಕೆ ಬೆದರಿದ ‘ಭೂತ್ ಬಂಗ್ಲ’: ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ಮುಂದೂಡಿಕೆ

ನಿರ್ದೇಶಕ ಪ್ರಿಯದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಭೂಲ್ ಭುಲಯ್ಯ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿತ್ತು. ಆದರೆ ಭೂತ್ ಬಂಗ್ಲ ಒಂದು ಫ್ಯಾಂಟಸಿ ಲೋಕದ ಕಥೆ. ಎರಡನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರವು ಏಪ್ರಿಲ್ 17ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ; ಮೇ.29ರಿಂದ ಶಾಲೆ ಆರಂಭ, ಈ ಬಾರಿ ದಸರಾ ರಜೆ ಎಷ್ಟು ಗೊತ್ತಾ? – Kannada News | Karnataka Government Released 2026 27 School Academic year schedule, here Is working days And Holidays details

ಬೆಂಗಳೂರು, (ಏಪ್ರಿಲ್ 14) : 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ  ( School Academic year schedule) ಪ್ರಕಟವಾಗಿದೆ. ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಯನ್ನು ನಿಗದಿಪಡಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಮೇ 29ರಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ.

ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್ 3ರಿಂದ 21, 2026ರವರೆಗೆ ದಸರಾ ರಜೆ ಹಾಗೂ ಏಪ್ರಿಲ್ 11, 2027ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ. 2027ರ ಜೂನ್ ಮೊದಲ ವಾರದಲ್ಲೇ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಗೆ ಆದೇಶಿಸಿರುವ ಇಲಾಖೆಯು, ದಾಖಲಾತಿ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ಒತ್ತು ನೀಡಿದೆ.

ಇದನ್ನೂ ಓದಿ: Karnataka Government Jobs: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಗಮನಕ್ಕೆ; KEAಯಿಂದ ನೇಮಕಾತಿ ಪರೀಕ್ಷೆಗಳ ದಿನಾಂಕ ಪ್ರಕಟ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಅಕ್ಟೋಬರ್ .3 ರಿಂದ ಅ.21ರವರೆಗೆ ದಸರಾ ರಜೆ

ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅ.2 ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ .22 ರಿಂದ 2027ರ ಏಪ್ರಿಲ್.10ರವರೆಗೆ ನಡೆಯಲಿದೆ. ಇನ್ನು ಅಕ್ಟೋಬರ್ .3 ರಿಂದ ಅ.21ರವರೆಗೆ ದಸರಾ ರಜೆ ಇರಲಿದೆ. . ಹೀಗಾಗಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರ ಒಳಗೆ ಪೂರ್ಣಗೊಳಿಸಬೇಕು, ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ತಿಳಿಸಲಾಗಿದೆ.

ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳು

ಶೈಕ್ಷಣಿಕ ವರ್ಷದ ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳಿರಲಿದ್ದು, 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳು, ಪಠ್ಯೇತರ ಚಟುವಟಿಕೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆ 4 ದಿನಗಳು ಮತ್ತು ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡಲಾಗಿದೆ. ಇನ್ನುಳಿದಂತೆ ದಾಖಲಾತಿ ಆಂದೋಲನ, ಶಾಲಾ ಪ್ರಾರಂಭೋತ್ಸವ ಕುರಿತು ಎಂದಿನಂತೆ ಚಟುವಟಿಕೆಯನ್ನು ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಹಿತಿಂಡಿಗಳ ಮಹಾರಾಜ ಸ್ವಾದಿಷ್ಟಮಯ “ಮೈಸೂರು ಪಾಕ್‌” – Kannada News | Do you know why Mysore Pak is called the king of sweets? Here is the information

ಭಾರತೀಯ ಹಬ್ಬ ಹರಿದಿನಗಳು, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಿಹಿತಿನಿಸು ಇರಲೇಬೇಕು. ಈ ಸಿಹಿ ಖಾದ್ಯಗಳು ಎಂದಾಕ್ಷಣ ನೆನಪಾಗುವುದೇ ಮೈಸೂರ್‌ ಪಾಕ್‌ (Mysore Pak), ಗುಲಾಬ್‌ ಜಾಮೂನ್‌, ರಸಗುಲ್ಲಾ. ಇದಲ್ಲದೇ ಪ್ರದೇಶದಿಂದ ಪ್ರದೇಶಕ್ಕೆ  ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕಾರು ಸಿಹಿ ಖಾದ್ಯಗಳಿವೆ. ಈ ಎಲ್ಲಾ ಸಿಹಿ ತಿನಿಸುಗಳ ರಾಜನೆಂದು ಮೈಸೂರ್‌ ಪಾಕನ್ನು ಕರೆಯಲಾಗುತ್ತದೆ. ಹೌದು ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುವಂತೆ ಮೈಸೂರ್‌ ಪಾಕನ್ನು ಸಿಹಿ ತಿಂಡಿಗಳ ರಾಜ ಎಂದು ಕರೆಯಲಾಗುತ್ತದೆ.  ವಿಶೇಷವಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾಗಿರುವ ಈ ಖಾದ್ಯವನ್ನೇ ಏಕೆ ಸಿಹಿತಿಂಡಿಗಳ ರಾಜ ಎಂದು ಕರೆಯೋದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಮೈಸೂರು ಪಾಕನ್ನೇ  ಸಿಹಿತಿಂಡಿಗಳ ರಾಜ ಎಂದು ಕರೆಯೋದೇಕೆ?

ಮೈಸೂರು ಪಾಕನ್ನು “ಸಿಹಿಗಳ ರಾಜ” ಎಂದು ಕರೆಯಲಾಗುತ್ತದೆ. ಕಡಲೆ ಹಿಟ್ಟು, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಲಾದ ಈ ಸಿಹಿತಿಂಡಿಯು ಮೈಸೂರಿನ ರಾಜಮನೆತನದ ಪಾಕಶಾಲೆಯೊಂದಿಗೆ ಸಂಬಂಧ ಹೊಂದಿದೆ. ಹೀಗೆ ಮೈಸೂರ್‌ ಪಾಕ್‌ನ  ರಾಜಮನೆತನದ ಹಿನ್ನೆಲೆ, ಅದರ ಶ್ರೀಮಂತ ರುಚಿ ಮತ್ತು ರಾಷ್ಟ್ರೀಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿಹಿ ಖಾದ್ಯವನ್ನು ಸಿಹಿ ತಿಂಡಿಗಳ ರಾಜ ಎಂದು ಕರೆಯಲಾಗುತ್ತದೆ

ಮೈಸೂರು ಪಾಕ್ ಇತಿಹಾಸ:

ಮೈಸೂರು ಪಾಕ್ ಅನ್ನು ಮೊದಲು ಒಡೆಯರ್ ರಾಜವಂಶದ ಆಳ್ವಿಕೆಯಲ್ಲಿ ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ತಯಾರಿಸಲಾಯಿತು.  ಸುಮಾರು 1930 ರ ದಶಕದಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳ್ವಿಕೆಯ ಸಮಯದಲ್ಲಿ ಕಡಲೆ ಹಿಟ್ಟು, ಸಕ್ಕರೆ ಮತ್ತು ತುಪ್ಪದ ಸಮ್ಮಿಲನವಾದ ಮೈಸೂರ್‌ ಪಾಕನ್ನು ಮೊದಲ ಬಾರಿಗೆ   ತಯಾರಿಸಲಾಯಿತು. ಸರಳ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಈ ಈ ಸಿಹಿತಿಂಡಿಯ ಸೃಷ್ಟಿಯ ಶ್ರೇಯಸ್ಸು ಅರಮನೆಯ ಮುಖ್ಯ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪ ಅವರಿಗೆ ಸಲ್ಲುತ್ತದೆ.   ಸರಳ ಪದಾರ್ಥಗಳನ್ನು ಬಳಸಿ ತಯಾರಿಸಿದ ಈ ಸಿಹಿತಿಂಡಿ ರಾಜಮನೆತನದವರಿಗೆ ಬಲು ಇಷ್ಟವಾಯಿತು.  ಈ ಖಾದ್ಯ ಅರಮನೆಯಲ್ಲಿ ಮೊದಲು ತಯಾರಿಸಲಾದ ಕಾರಣ ಬಾಣಸಿಗ ಮಾದಪ್ಪ ಇದಕ್ಕೆ ಮೈಸೂರ್‌ ಪಾಕ್‌ ಎಂದು ಹೆಸರಿಟ್ಟರು. ಇಂದು ಕರ್ನಾಟಕದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾಗಿರುವ ಈ ಸಿಹಿ ಖಾದ್ಯ ವಿಶ್ವಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಹಣ್ಣು ತರಕಾರಿಗಳಲ್ಲಿ ಅಂಟಿಕೊಂಡಿರುವ ಕೀಟನಾಶಕಗಳನ್ನು ತೆಗೆದು ಹಾಕಲು ಸರಳ ವಿಧಾನ ಅನುಸರಿಸಿ

ಮೈಸೂರು ಪಾಕ್ ಏಕೆ ಇಷ್ಟೊಂದು ಜನಪ್ರಿಯವಾಗಿದೆ?

ಮೈಸೂರು ಪಾಕ್ ತನ್ನ ಶ್ರೀಮಂತ ರುಚಿ ಮತ್ತು ಸುಲಭವಾಗಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಸರಳ ವಿಧಾನದಿಂದಾಗಿ ಜನಪ್ರಿಯವಾಗಿದೆ. ಮೃದುವಾದ ಮತ್ತು ಸ್ವಲ್ಪ ಪುಡಿಪುಡಿಯಾದ ವಿನ್ಯಾಸವನ್ನು ಹೊಂದಿರುವ, ಬಾಯಿಯಲ್ಲಿಟ್ಟರೆ ಸುಲಭವಾಗಿ ಕರಗುವ ಈ ಸಿಹಿ ಖಾದ್ಯ ಎಲ್ಲಾ ವಯೋಮಾನದ ಜನರಿಗೆ ಇಷ್ಟವಾಗುತ್ತದೆ. ಇತರ ಅನೇಕ ಸಿಹಿತಿಂಡಿಗಳಿಗೆ ಹೋಲಿಸಿದರೆ ಇದು ಸುದೀರ್ಘ ಬಾಳಿಕೆ ಬರುತ್ತದೆ. ಹೀಗೆ ಇದರ ರುಚಿ ಇದರ ರಾಜಮನೆತನದ ಮೂಲ ಮತ್ತು ಸಾಂಪ್ರದಾಯಿಕ ತಯಾರಿಕೆಯ ಶೈಲಿಯು ಭಾರತದಾದ್ಯಂತ ಇದರ ಖ್ಯಾತಿಯನ್ನು ಹೆಚ್ಚಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಸಿಹಿತಿಂಡಿ ಉತ್ಪಾದಿಸುವ ರಾಜ್ಯ ಯಾವುದು?

ಭಾರತದಲ್ಲಿ ಅತಿ ಹೆಚ್ಚು ಸಿಹಿತಿನಿಸುಗಳನ್ನು ಉತ್ಪಾದಿಸುವ ರಾಜ್ಯ ಉತ್ತರ ಪ್ರದೇಶವನ್ನು ಕರೆಯಲಾಗುತ್ತದೆ.  ಏಕೆಂದರೆ ಈ ರಾಜ್ಯ ಹೆಚ್ಚಿನ ಸಂಖ್ಯೆಯ ಸಿಹಿತಿಂಡಿ ಅಂಗಡಿಗಳನ್ನು ಹೊಂದಿದೆ ಮತ್ತು ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಅಪಾರ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಆಗ್ರಾ ಮತ್ತು ಕಾನ್ಪುರದಂತಹ ನಗರಗಳು ವಿಶೇಷವಾಗಿ ದೊಡ್ಡ ಸಿಹಿ ಮಾರುಕಟ್ಟೆಗಳು ಮತ್ತು ಉತ್ಪಾದನಾ ಘಟಕಗಳಿಗೆ ಹೆಸರುವಾಸಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Wisden 2026: ಪ್ರತಿಷ್ಠಿತ ‘ವಿಸ್ಡನ್’ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – Kannada News | Wisden 2026: The Year of Indian Cricket’s Global Hegemony

ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ (Wisden Cricketers of the Year) 2026ರ ಸಾಲಿನ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಇಂಗ್ಲೆಂಡ್‌ನ ಬೇಸಿಗೆಯ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಐವರು ಆಟಗಾರರನ್ನು ಗುರುತಿಸುವ ಈ ಗೌರವದಲ್ಲಿ, ಈ ಬಾರಿ ಭಾರತೀಯ ಆಟಗಾರರು ಅಭೂತಪೂರ್ವ ಪ್ರಾಬಲ್ಯ ಮೆರೆದಿರುವುದು ವಿಶೇಷ.

ಈ ಮೂಲಕ ಇದೇ ಮೊದಲ ಬಾರಿಗೆ ಭಾರತದ ನಾಲ್ವರು ಆಟಗಾರರು ಜೊತೆಯಾಗಿ  ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2022ರಲ್ಲಿ ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್​ ಬುಮ್ರಾ ಇಬ್ಬರು ಜೊತೆಯಾಗಿ ಐವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇ ದೊಡ್ಡ ಸಾಧನೆಯಾಗಿತ್ತು. ಆದರೆ ಈ ಬಾರಿ ಐವರ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ.

2026ರ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗರು:

2025ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಟೆಸ್ಟ್ ಸರಣಿಯನ್ನು 2-2 ರಿಂದ ಡ್ರಾ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಭಾರತೀಯ ಆಟಗಾರರು ತೋರಿದ ಅಪ್ರತಿಮ ಪ್ರದರ್ಶನವೇ ಈ ಬಾರಿಯ ವಿಸ್ಡನ್ ಗೌರವದಲ್ಲಿ ಭಾರತದ ಪಾರುಪತ್ಯಕ್ಕೆ ಮುಖ್ಯ ಕಾರಣ. ಅದರಂತೆ ಈ ವರ್ಷದ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಮತ್ತು ಒರ್ವ ಇಂಗ್ಲೆಂಡ್ ಆಟಗಾರ ಸ್ಥಾನ ಪಡೆದಿದ್ದಾರೆ. ಅವರೆಂದರೆ…

ಶುಭಮನ್ ಗಿಲ್ (ಭಾರತ): ಟೀಮ್ ಇಂಡಿಯಾದ ‘ಪ್ರಿನ್ಸ್’ ಎಂದೇ ಕರೆಯಲ್ಪಡುವ ಗಿಲ್, ಇಂಗ್ಲೆಂಡ್ ಸರಣಿಯಲ್ಲಿ ರನ್ ಮಳೆ ಹರಿಸಿದ್ದರು.

  • ಪ್ರಮುಖ ಸಾಧನೆ: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ದಾಖಲೆಯ 430 ರನ್ (ಎರಡೂ ಇನಿಂಗ್ಸ್ ಸೇರಿ) ಗಳಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ಕಠಿಣ ಇಂಗ್ಲಿಷ್ ಪರಿಸ್ಥಿತಿಯಲ್ಲಿ ಅವರ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ಮತ್ತು ಸತತವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ವಿಸ್ಡನ್ ಶ್ಲಾಘಿಸಿದೆ.

ರಿಷಭ್ ಪಂತ್ (ಭಾರತ): ಅಪಘಾತದ ನಂತರ ಕಮ್‌ಬ್ಯಾಕ್ ಮಾಡಿದ ಪಂತ್, ಇಂಗ್ಲೆಂಡ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದರು.

  • ಪ್ರಮುಖ ಸಾಧನೆ: ಸರಣಿಯ ನಿರ್ಣಾಯಕ ಘಟ್ಟಗಳಲ್ಲಿ ವೇಗವಾಗಿ ಅರ್ಧಶತಕ ಮತ್ತು ಶತಕಗಳನ್ನು ಸಿಡಿಸಿ ಪಂದ್ಯದ ಗತಿಯನ್ನು ಬದಲಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ವಿಕೆಟ್ ಕೀಪಿಂಗ್‌ನಲ್ಲಿನ ಚುರುಕುತನ ಮತ್ತು ಒತ್ತಡದ ಸಮಯದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಅವರ ಧೈರ್ಯಕ್ಕೆ ಈ ಗೌರವ ಸಂದಿದೆ.

ರವೀಂದ್ರ ಜಡೇಜಾ (ಭಾರತ): ವಿಶ್ವದ ನಂಬರ್ 1 ಟೆಸ್ಟ್ ಆಲ್‌ರೌಂಡರ್ ಆಗಿರುವ ಜಡೇಜಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಜಿಕ್ ಮಾಡಿದ್ದರು.

  • ಪ್ರಮುಖ ಸಾಧನೆ: ಸರಣಿಯಲ್ಲಿ 20ಕ್ಕೂ ಹೆಚ್ಚು ವಿಕೆಟ್ ಪಡೆಯುವುದರ ಜೊತೆಗೆ, ಕೆಳಕ್ರಮಾಂಕದಲ್ಲಿ ಬಂದು ಉಪಯುಕ್ತ ರನ್ ಸೇರಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ಜಡೇಜಾ ಅವರ ಫೀಲ್ಡಿಂಗ್ ಮತ್ತು ಪಂದ್ಯದ ಯಾವುದೇ ಹಂತದಲ್ಲಿ ಬ್ರೇಕ್-ಥ್ರೂ ನೀಡುವ ಅವರ ಚಾಕಚಕ್ಯತೆಯನ್ನು ವಿಶೇಷವಾಗಿ ಗುರುತಿಸಲಾಗಿದೆ.

ಮೊಹಮ್ಮದ್ ಸಿರಾಜ್ (ಭಾರತ): ಭಾರತದ ವೇಗದ ದಾಳಿಯ ಆಧಾರಸ್ತಂಭವಾಗಿರುವ ಸಿರಾಜ್, ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದರು.

  • ಪ್ರಮುಖ ಸಾಧನೆ: ಲಾರ್ಡ್ಸ್ ಮತ್ತು ಓವಲ್ ಮೈದಾನಗಳಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.
  • ವಿಸ್ಡನ್ ಮೆಚ್ಚುಗೆ: ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಮತ್ತು ಸುದೀರ್ಘ ಸ್ಪೆಲ್ ಎಸೆಯುವ ಅವರ ಎನರ್ಜಿಯನ್ನು ವಿಸ್ಡನ್ ಕೊಂಡಾಡಿದೆ.

ಹಸೀಬ್ ಹಮೀದ್ (ಇಂಗ್ಲೆಂಡ್):  ಈ ಪಟ್ಟಿಯಲ್ಲಿರುವ ಏಕೈಕ ಇಂಗ್ಲಿಷ್ ಆಟಗಾರ ಹಸೀಬ್. ಇಂಗ್ಲೆಂಡ್ ಆಟಗಾರನನ್ನು ಕಮ್‌ಬ್ಯಾಕ್ ಹೀರೊ ಎಂದೇ ಇವರನ್ನು ಕರೆಯಬಹುದು.

  • ಪ್ರಮುಖ ಸಾಧನೆ: ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ 1,258 ರನ್ ಗಳಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು.
  • ವಿಸ್ಡನ್ ಮೆಚ್ಚುಗೆ: ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ಅವರು ತೋರಿದ ಸ್ಥಿರ ಪ್ರದರ್ಶನ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಮರಳಲು ಅವರು ನಡೆಸಿದ ಹೋರಾಟವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತರ ಪ್ರಮುಖ ಪ್ರಶಸ್ತಿಗಳು (2026):

ವಿಸ್ಡನ್‌ನ ಈ 163ನೇ ಆವೃತ್ತಿಯಲ್ಲಿ ಭಾರತದ ಇತರ ಆಟಗಾರರಿಗೂ ದೊಡ್ಡ ಗೌರವಗಳು ಸಂದಿವೆ. ಅವರೆಂದರೆ…

  • ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್: ದೀಪ್ತಿ ಶರ್ಮಾ (ಭಾರತ) – 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಗೆ ಈ ಗೌರವ ನೀಡಲಾಗಿದೆ..
  • ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ: ಅಭಿಷೇಕ್ ಶರ್ಮಾ (ಭಾರತ) – ಒಂದೇ ವರ್ಷದಲ್ಲಿ 1,000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಸಾಧನೆಗೆ ಈ ಗೌರವ ಸಲ್ಲಿಸಲಾಗಿದೆ.
  • ವಿಶ್ವದ ಪ್ರಮುಖ ಪುರುಷ ಕ್ರಿಕೆಟಿಗ: ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 2025ರಲ್ಲಿ 17.32 ಸರಾಸರಿಯಲ್ಲಿ 55 ಟೆಸ್ಟ್ ವಿಕೆಟ್ ಪಡೆದಿದ್ದಕ್ಕಾಗಿ ಈ ಗೌರವ ನೀಡಲಾಗಿದೆ.

ವಿರಾಟ್ ಕೊಹ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರಾ?

ವಿರಾಟ್ ಕೊಹ್ಲಿ ಹಲವು ಬಾರಿ ವಿಸ್ಡನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ಅವರು 2010 ರಲ್ಲಿ ದಶಕದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು ಎಂಬುದು ವಿಶೇಷ. ಅದರಂತೆ ಕೊಹ್ಲಿ ಯಾವಾಗೆಲ್ಲಾ ವಿಸ್ಡನ್  ಗೌರವಕ್ಕೆ ಪಾತ್ರರಾಗಿದ್ದಾರೆ ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ…

  • ದಶಕದ ಏಕದಿನ ಕ್ರಿಕೆಟಿಗ (2010s): 2021 ರಲ್ಲಿ, ವಿಸ್ಡನ್ ಅಲ್‌ಮನ್ಯಾಕ್ ವಿರಾಟ್ ಕೊಹ್ಲಿ ಅವರನ್ನು 2010-2019ರ ದಶಕದ ಅತ್ಯುತ್ತಮ ಏಕದಿನ (ODI) ಕ್ರಿಕೆಟಿಗ ಎಂದು ಗೌರವಿಸಿತು.
  • ವರ್ಷದ ಮುಂಚೂಣಿ ಕ್ರಿಕೆಟಿಗ: ಕೊಹ್ಲಿ ಸತತವಾಗಿ ಮೂರು ಬಾರಿ (2016, 2017, ಮತ್ತು 2018) ವಿಸ್ಡನ್‌ನ ‘ವರ್ಷದ ಮುಂಚೂಣಿ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
  • ವಿಸ್ಡನ್ ವರ್ಷದ ಕ್ರಿಕೆಟಿಗರು: 2018ರ ಅವರ ಅದ್ಭುತ ಪ್ರದರ್ಶನಕ್ಕಾಗಿ (ಇಂಗ್ಲೆಂಡ್ ಪ್ರವಾಸ ಸೇರಿದಂತೆ) ವಿರಾಟ್ ಕೊಹ್ಲಿ ಅವರನ್ನು ವಿಸ್ಡನ್‌ನ ವರ್ಷದ ಐವರು ಕ್ರಿಕೆಟಿಗರ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಆಯ್ಕೆಯ ಮುಖ್ಯ ಮಾನದಂಡವೇನು?

ವಿಸ್ಡನ್ ‘ವರ್ಷದ ಐವರು ಕ್ರಿಕೆಟಿಗರು’ ಪ್ರಶಸ್ತಿಯನ್ನು ಮುಖ್ಯವಾಗಿ ಕಳೆದ ಇಂಗ್ಲೆಂಡ್ ಕ್ರಿಕೆಟ್ ಸೀಸನ್‌ನಲ್ಲಿ (English Summer) ಆಟಗಾರರು ತೋರಿದ ಪ್ರದರ್ಶನದ ಆಧಾರದ ಮೇಲೆ ನೀಡಲಾಗುತ್ತದೆ. ಇದಕ್ಕಾಗಿ ಮೂರು ವಿಭಾಗಗಳಲ್ಲಿ ಮೂಲಕ ಆಟಗಾರರ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅವೆಂದರೆ…

  • ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡ ತಂಡಗಳು: ಇಂಗ್ಲೆಂಡ್ ನೆಲದಲ್ಲಿ ಆ ಸೀಸನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ವಿದೇಶಿ ತಂಡದ ಆಟಗಾರರು. (ಉದಾಹರಣೆಗೆ: ಈ ಬಾರಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಆಡಿದ ಕಾರಣ ಭಾರತೀಯರಿಗೆ ಹೆಚ್ಚು ಅವಕಾಶ ಸಿಕ್ಕಿದೆ).
  • ಇಂಗ್ಲೆಂಡ್ ದೇಶೀಯ ಕ್ರಿಕೆಟ್ (ಕೌಂಟಿ ಕ್ರಿಕೆಟ್​): ಇಂಗ್ಲೆಂಡ್‌ನ ಆಟಗಾರರು ಅಥವಾ ಅಲ್ಲಿನ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ವಿದೇಶಿ ಆಟಗಾರರು ಆ ಸೀಸನ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಲಾಗುತ್ತದೆ. (ಉದಾಹರಣೆಗೆ: ಈ ಪಟ್ಟಿಯಲ್ಲಿರುವ ಹಸೀಬ್ ಹಮೀದ್ ಅವರು ಕೌಂಟಿ ಕ್ರಿಕೆಟ್ ಸಾಧನೆಯ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ).
  • ವಿಶ್ವದ ಪ್ರಮುಖ ಕ್ರಿಕೆಟಿಗ: ವಿಸ್ಡನ್ ನೀಡುವ ‘ವಿಶ್ವದ ಪ್ರಮುಖ ಕ್ರಿಕೆಟಿಗ’  ಎಂಬ ಪ್ರತ್ಯೇಕ ಪ್ರಶಸ್ತಿಗೆ ಜಗತ್ತಿನಾದ್ಯಂತ ನಡೆದ ಎಲ್ಲಾ ಪಂದ್ಯಗಳ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಈ ಬಾರಿ ಆ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಪಡೆದಿದ್ದಾರೆ.

Source link

ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್ – Kannada News | Actor Thalapathy Vijay emotional reaction to wife Sangeeta photo amid divorce process

ಇನ್ನೇನು ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಈ ರಾಜಕೀಯ ಅಬ್ಬರದ ನಡುವೆ ವಿಜಯ್ (Thalapathy Vijay) ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮಿಂದ ದೂರವಾಗಿರುವ ಪತ್ನಿ ಸಂಗೀತಾ (Sangeeta Sornalingam) ಅವರ ಫೋಟೋ ಕಂಡು ವಿಜಯ್ ನೀಡಿದ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆ ಕುರಿತ ಪೂರ್ಣ ವಿವರ ಇಲ್ಲಿದೆ.

ಚುನಾವಣಾ ಪ್ರಚಾರದ ನಡುವೆ ಈ ಘಟನೆ ನಡೆದಿದೆ. ರ‍್ಯಾಲಿ ವೇಳೆ ಅಭಿಮಾನಿಯೊಬ್ಬ ವಿಜಯ್ ಅವರ ವಾಹನದ ಬಳಿ ಫ್ರೇಮ್ ಮಾಡಿದ ಫೋಟೋವೊಂದನ್ನು ಹಿಡಿದು ನಿಂತಿದ್ದನು. ಆ ಫೋಟೋದಲ್ಲಿ ದಿವಂಗತ ನಟ-ರಾಜಕಾರಣಿ ವಿಜಯಕಾಂತ್ ಅವರು ವಿಜಯ್ ಮತ್ತು ವಧುವಿನ ಅಲಂಕಾರದಲ್ಲಿದ್ದ ಸಂಗೀತಾ ಅವರ ಕೈ ಹಿಡಿದುಕೊಂಡಿರುವ ಚಿತ್ರವಿತ್ತು.

ಅನೇಕ ಅಭಿಮಾನಿಗಳು ಬೇರೆ ಬೇರೆ ಫೋಟೋಗಳನ್ನು ಹಿಡಿದಿದ್ದರೂ, ವಿಜಯ್ ಕಣ್ಣು ಬಿದ್ದಿದ್ದು ಮಾತ್ರ ಸಂಗೀತಾ ಅವರಿದ್ದ ಆ ಫೋಟೋದ ಮೇಲೆ! ಕೂಡಲೇ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿ, ಆ ಫೋಟೋವನ್ನು ತಮ್ಮ ಬಳಿ ತರಿಸಿಕೊಂಡರು. ಫೋಟೋವನ್ನು ಕೈಗೆತ್ತಿಕೊಂಡ ವಿಜಯ್, ಅದನ್ನು ಎಲ್ಲರಿಗೂ ತೋರಿಸಿದರು. ಆದರೆ ಆ ಚಿತ್ರವನ್ನು ನೋಡುವಾಗ ಅವರ ಮುಖದಲ್ಲಿ ಒಂದು ಕ್ಷಣ ಭಾವುಕತೆ ಮತ್ತು ಹಳೆಯ ನೆನಪುಗಳು ಮೇಳೈಸಿದಂತೆ ಕಂಡಿತು.

ಈ ಕ್ಷಣದ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ‘ವಿಜಯ್ ಅವರು ಸಂಗೀತಾ ಮೇಲಿನ ಪ್ರೀತಿಯಿಂದ ಆ ಫೋಟೋ ತರಿಸಿಕೊಂಡರಾ ಅಥವಾ ತಮ್ಮ ಗುರು ವಿಜಯಕಾಂತ್ ಅವರ ಮೇಲಿನ ಗೌರವದಿಂದ ಆ ರೀತಿ ಮಾಡಿದ್ದಾರಾ’ ಎಂಬ ಬಗ್ಗೆ ಅಭಿಮಾನಿಗಳು ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರು ಪತ್ನಿಯ ಫೋಟೋ ಕಂಡು ಪ್ರತಿಕ್ರಿಯಿಸಿದ ರೀತಿ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ: ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ಫೆಬ್ರವರಿಯಲ್ಲಿ ಸಂಗೀತಾ ಅವರು ಚೆನ್ನೈನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಈ ಅರ್ಜಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಜಯ್ ಅವರು ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ಆ ಬಳಿಕ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರು ಮದುವೆಯೊಂದರಲ್ಲಿ ಒಂದೇ ರೀತಿಯ ಉಡುಪು ಧರಿಸಿ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಚಿತ ಎಲ್‌ಪಿಜಿ, ಮಹಿಳೆಯರಿಗೆ 2,000 ರೂ.; ತಮಿಳುನಾಡಿಗೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ – Kannada News | Free LPG, Rs 2,000 for women; BJP released Tamil Nadu manifesto for Assembly Elections

ಚೆನ್ನೈ, ಏಪ್ರಿಲ್ 14: ಬಿಜೆಪಿ ತಮಿಳುನಾಡಿನಲ್ಲಿ ಇಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಮ್ಮ ಪಕ್ಷದ ಭರವಸೆಗಳನ್ನು ಅನಾವರಣಗೊಳಿಸಿದರು. ಬಿಜೆಪಿಯ ಪ್ರಣಾಳಿಕೆಯಲ್ಲಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ತೆರಿಗೆ ಹೆಚ್ಚಳ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಪ್ರತಿ ಮನೆಗೆ ಒಂದು ಬಾರಿ 10,000 ರೂ. ಪಾವತಿಯನ್ನು ಭರವಸೆ ನೀಡಲಾಗಿದೆ. ಪ್ರಮುಖ ದೇವಾಲಯಗಳಲ್ಲಿ ಪ್ರತಿದಿನ ಎರಡು ಗಂಟೆಗಳ ದರ್ಶನ ಸ್ಥಳಗಳನ್ನು ಸ್ಥಳೀಯ ನಿವಾಸಿಗಳಿಗೆ ಮೀಸಲಿಡುವುದು ಮತ್ತು ತಿರುಪರಾನುಕುಂದ್ರಂ ಬೆಟ್ಟದ ಮೇಲೆ ದೀಪ ಹಚ್ಚುವುದು ಸೇರಿದಂತೆ ಕಾರ್ತಿಗೈ ದೀಪ ಆಚರಣೆಗಳ ಮುಂದುವರಿಕೆಯನ್ನು ಸಹ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸುರಕ್ಷತೆ ಮತ್ತು ಕಣ್ಗಾವಲು ಸುಧಾರಿಸಲು ಶೂನ್ಯ ಎಫ್‌ಐಆರ್ ಅನುಷ್ಠಾನ, ಘೋರ ಅಪರಾಧಗಳಿಗೆ ತ್ವರಿತ ನ್ಯಾಯಾಲಯಗಳು ಮತ್ತು ಬಸ್‌ಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವುದು ಸೇರಿದಂತೆ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಗಳನ್ನು ಬಿಜೆಪಿ ಘೋಷಿಸಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆಗೆ ಬಿಜೆಪಿ ‘ಮಹಾ’ ಪ್ರಣಾಳಿಕೆ: ಮಹಿಳೆಯರಿಗೆ 3,000 ರೂ. ಮಾಸಾಶನ, 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 4ರಂದು ನಡೆಯಲಿದೆ. ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಸುಮಾರು 5.67 ಕೋಟಿ ನೋಂದಾಯಿತ ಮತದಾರರಿದ್ದಾರೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ 44 ಪರಿಶಿಷ್ಟ ಜಾತಿಗಳಿಗೆ ಮತ್ತು 2 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ.

ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಪಕ್ಷಗಳಲ್ಲಿ ಡಿಎಂಕೆ, ಎಐಎಡಿಎಂಕೆ, ಬಿಜೆಪಿ, ವಿಜಯ್ ಅವರ ಟಿವಿಕೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿವೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಎನ್​ಡಿಎ ಪ್ರಣಾಳಿಕೆ ಬಿಡುಗಡೆ, ಉಚಿತ ವಿದ್ಯುತ್, ಮೆಟ್ರೋ, ಸರ್ಕಾರಿ ನೌಕರರ ನೇಮಕ ಸೇರಿ ಹಲವು ಭರವಸೆಗಳು

ಬಿಜೆಪಿಯ ತಮಿಳುನಾಡು ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು ಇಲ್ಲಿವೆ:

  1. ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ಸಹಾಯ.
  2. ಪ್ರತಿ ಮನೆಗೆ ಒಂದು ಬಾರಿ ಆರ್ಥಿಕ ನೆರವು.
  3. ಮನೆಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು.
  4. ಶೂನ್ಯ ಎಫ್‌ಐಆರ್ ವರದಿ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು.
  5. ಘೋರ ಅಪರಾಧಗಳಿಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
  6. ಬಸ್‌ಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬ್ಲೈಂಡ್ ಸ್ಪಾಟ್‌ಗಳನ್ನು ತೆಗೆದುಹಾಕಲು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುವುದು.
  7. ಇ-ಸ್ಕೂಟರ್‌ಗಳನ್ನು ಖರೀದಿಸಲು ಅರ್ಹ ಮಹಿಳೆಯರಿಗೆ 25,000 ರೂ. ಬೆಂಬಲ.
  8. ಸ್ವಸಹಾಯ ಗುಂಪುಗಳು ಮತ್ತು ಎಂಎಸ್‌ಎಂಇಗಳಿಗೆ 50 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ.
  9. ರೈತರಿಗೆ 3,000 ರೂ. ಹೆಚ್ಚುವರಿ ಬೆಂಬಲ (ಕೇಂದ್ರ ಯೋಜನೆ ಸೇರಿದಂತೆ ಒಟ್ಟು 9,000 ರೂ.).
  10. ಜಲ್ಲಿಕಟ್ಟು ಹೋರಿ ಸಾಕಣೆದಾರರಿಗೆ ಆರ್ಥಿಕ ಸಹಾಯವಾಗಿ ತಿಂಗಳಿಗೆ 2,000 ರೂ.
  11. ಜಲ್ಲಿಕಟ್ಟು ಕಾರ್ಯಕ್ರಮಗಳ ಸಮಯದಲ್ಲಿ ಭಾಗವಹಿಸುವವರು ಸಾವನ್ನಪ್ಪಿದರೆ 10 ಲಕ್ಷ ರೂ. ಪರಿಹಾರ.
  12. ಮನೆಗಳನ್ನು ಖರೀದಿಸುವ ಮಹಿಳೆಯರಿಗೆ ಶೇ. 3ರಷ್ಟು ಸ್ಟಾಂಪ್ ಡ್ಯೂಟಿ ರಿಯಾಯಿತಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಏ 15ಕ್ಕೆ ಬೆಂಗಳೂರಿಗೆ ಬಂದಿಳಿಯಲಿರುವ ಮೋದಿ: ಪ್ರಧಾನಿ ಮಂಡ್ಯ ಪ್ರವಾಸದ ವಿವರ ಹೀಗಿದೆ – Kannada News | PM Narendra Modi Adichunchanagiri Visit on april 15: Here are the details of the PM Mandya visit

ಭೈರವೈಕ್ಯ ಮಂದಿರ, ಪ್ರಧಾನಿ ಮೋದಿImage Credit source: tv9 kannada

ಮಂಡ್ಯ, ಏಪ್ರಿಲ್​ 14: ಆದಿಚುಂಚನಗಿರಿಯಲ್ಲಿ (Adichunchanagiri) ಸುಮಾರು 80 ಕೋಟಿ ರೂ ವೆಚ್ಚದಲ್ಲಿ ಬೈರವೈಕ್ಯ ಮಂದಿರ ನಿರ್ಮಾಣವಾಗಿದ್ದು, ಸದ್ಯ ಉದ್ಘಾಟನೆಗೆ ಸಜ್ಜಾಗಿದೆ. ಚಾಲುಕ್ಯ, ಹೊಯ್ಸಳ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮದೊಂದಿಗೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ನಾಳೆ ಅಂದರೆ ಏಪ್ರಿಲ್​ 15ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಹಿನ್ನೆಲೆ ನಾಳೆ ಬೆಳಗ್ಗೆ 10.05ಕ್ಕೆ HAL ಏರ್​ಪೋರ್ಟ್​ಗೆ ಪ್ರಧಾನಿ ಮೋದಿ ಆಗಮಿಸಿಲಿದ್ದಾರೆ. 10.10ಕ್ಕೆ ಬೆಂಗಳೂರಿನ ಹೆಚ್​​ಎಎಲ್​ನಿಂದ ತೆರಳುವ ಅವರು, ಬೆಳಗ್ಗೆ 10.50ಕ್ಕೆ ಆದಿಚುಂಚನಗಿರಿ ತಪೋವನ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಬಳಿಕ ರಸ್ತೆ ಮೂಲಕ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಮೊದಲು ಗೋರಕ್ಷಕನಾಥರು ತಪಸ್ಸು ಮಾಡಿದ ಜ್ವಾಲಾಪೀಠ ದರ್ಶನ ಮಾಡಲಿರುವ ಪ್ರಧಾನಿ ಮೋದಿ, ನಂತರ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಶ್ರೀಗಿರಿ ತಪೋವನದಿಂದ 1.5 ಕಿ.ಮೀ. ದೂರದಲ್ಲಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ HAL ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ: 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಇನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದಿಚುಂಚನಗಿರಿ ಕ್ಷೇತ್ರದಾದ್ಯಂತ ಫ್ಲೆಕ್ಸ್, ಕಟೌಟ್ಸ್ ರಾರಾಜಿಸುತ್ತಿವೆ. ಮಠದ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಆದಿಚುಂಚನಗಿರಿಯಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ನಾಳೆ ಮದ್ಯ ಮಾರಾಟ ನಿಷೇಧ

ಆದಿಚುಂಚನಗಿರಿ ಸುತ್ತಮುತ್ತ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಯ 8 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿ ಮಂಡ್ಯ ಡಿಸಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:15 pm, Tue, 14 April 26

Source link

ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್​ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ? – Kannada News | OMCs losing Rs 18 and 35 on the sale of 1 ltr Petrol and Diesel, report says

ನವದೆಹಲಿ, ಏಪ್ರಿಲ್ 14: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದರೂ, ದೇಶದಲ್ಲಿ ಇಂಧನ ದರವನ್ನು ಸ್ಥಿರವಾಗಿಟ್ಟಿರುವುದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಸ್ತುತ ತೈಲ ಮಾರಾಟ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ರೂ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 35 ರೂ ನಷ್ಟ ಅನುಭವಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ದಶಕದ ಹಿಂದೆಯೇ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳಿಗೆ ಮಾರುಕಟ್ಟೆ ಆಧಾರಿತವಾದ ಬೆಲೆ ವ್ಯವಸ್ಥೆ ಮಾಡಿತ್ತು. ಅಂದರೆ ತೈಲ ಬೆಲೆ (crude oil prices) ಏರಿಕೆಯಾದಾಗ ಪೆಟ್ರೋಲ್, ಡೀಸಲ್ ಬೆಲೆ ಏರಿಸುವ ಅವಕಾಶ ಇತ್ತು. ಆದರೂ ಕೂಡ ಸರ್ಕಾರದ ನಿರ್ದೇಶನದ ಮೇರೆಗೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆ ಏರಿಸಿಲ್ಲ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳು ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸಲ್​ನ ಚಿಲ್ಲರೆ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಷ್ಯಾ-ಉಕ್ರೇನ್ ಯುದ್ಧದ ನಂತರ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಭಾರತದಲ್ಲಿ ಜನರ ಹಿತದೃಷ್ಟಿಯಿಂದ ದರ ಏರಿಕೆ ಮಾಡಲಾಗಿಲ್ಲ.

ಮ್ಯಾಕ್ವಾರಿ ಗ್ರೂಪ್ ವರದಿಯ ಪ್ರಕಾರ, “ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 135-165 ಡಾಲರ್ ತಲುಪಿದಾಗ, ತೈಲ ಕಂಪನಿಗಳ ನಷ್ಟವು ಒಂದು ಲೀಟರ್ ಪೆಟ್ರೋಲ್​ಗೆ 18 ರೂ, ಹಾಗೂ ಡೀಸಲ್​ಗೆ 35 ರೂನಷ್ಟು ಹೆಚ್ಚಾಗುತ್ತದೆ.”

ಇದನ್ನೂ ಓದಿ: ಬ್ಯಾಟರಿ ಸ್ವಾವಲಂಬನೆಗೆ 3.5 ಲಕ್ಷ ಕೋಟಿ ರೂ ಯೋಜನೆ; ಬ್ಯಾಟರಿ ತಯಾರಕರ ಪಟ್ಟಿ ರೂಪಿಸಲು ಸರ್ಕಾರ ಸಜ್ಜು

ಅಬಕಾರಿ ಸುಂಕ ಇಳಿಸಿದ್ದರಿಂದ ಏನು ಉಪಯೋಗ?

ಕಳೆದ ತಿಂಗಳು ತೈಲ ಕಂಪನಿಗಳು ದಿನಕ್ಕೆ ಸುಮಾರು 2,400 ಕೋಟಿ ರೂನಂತೆ ನಷ್ಟ ಅನುಭವಿಸುತ್ತಿದ್ದವು. ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹10 ರಷ್ಟು ಕಡಿತಗೊಳಿಸಿದ ನಂತರ, ಈ ನಷ್ಟದ ಪ್ರಮಾಣ ದಿನಕ್ಕೆ 1,600 ಕೋಟಿ ರೂಗೆ ಇಳಿಕೆಯಾಗಿದೆ.

ಸರ್ಕಾರ ಕಡಿತಗೊಳಿಸಿದ ₹10 ಸುಂಕದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ, ಕಂಪನಿಗಳ ನಷ್ಟವನ್ನು ಸರಿದೂಗಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೂ ನಷ್ಟದ ಪ್ರಮಾಣ ಸಂಪೂರ್ಣವಾಗಿ ತಗ್ಗಿಲ್ಲ.

ಏಪ್ರಿಲ್ ಕೊನೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ?

ಇನ್ನು, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ಪ್ರಮುಖ ರಾಜ್ಯಗಳ ಚುನಾವಣೆಗಳು ಚಾಲನೆಯಲ್ಲಿವೆ. ಇವು ಮುಗಿದು, ಏಪ್ರಿಲ್ ಅಂತ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಅಂದಾಜಿಸುತ್ತಿದ್ದಾರೆ. 2022ರಿಂದಲೂ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದೇ ಇರುವ ಸರ್ಕಾರಕ್ಕೆ ಈಗ ತೈಲ ಬೆಲೆ ಒತ್ತಡದಿಂದ ಪೆಟ್ರೋಲ್ ಬೆಲೆ ಏರಿಸುವುದು ಅನಿವಾರ್ಯವಾಗಬಹುದಾ?

ಇದನ್ನೂ ಓದಿ: ಫೆಬ್ರುವರಿಯಲ್ಲಿ ಶೇ. 3.21 ಇದ್ದ ರೀಟೇಲ್ ಹಣದುಬ್ಬರ ಮಾರ್ಚ್​ನಲ್ಲಿ ಶೇ. 3.4ಕ್ಕೆ ಏರಿಕೆ

ಪೆಟ್ರೋಲ್ ಬೆಲೆ ಏರಿಕೆಯಿಂದ ಆರ್ಥಿಕತೆಯ ಮೇಲೆ ಪರಿಣಾಮ

ಭಾರತವು ತನ್ನ ತೈಲ ಅಗತ್ಯದ ಶೇ. 88 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಪ್ರತಿ 10 ಡಾಲರ್ ಏರಿಕೆಯಾದಾಗ, ಭಾರತದ ಚಾಲ್ತಿ ಖಾತೆ ಕೊರತೆ (Current Account Deficit) ಹೆಚ್ಚಾಗುತ್ತದೆ. ಅಲ್ಲದೆ, ಸಂಪೂರ್ಣ ಅಬಕಾರಿ ಸುಂಕವನ್ನು ತೆಗೆದುಹಾಕಿದರೂ ಸಹ ಪ್ರಸ್ತುತ ಜಾಗತಿಕ ಬೆಲೆಗೆ ಹೋಲಿಸಿದರೆ ತೈಲ ಕಂಪನಿಗಳ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಮುಂದಿನ ದಿನಗಳಲ್ಲಿ ಜಾಗತಿಕ ಪರಿಸ್ಥಿತಿ ಸುಧಾರಿಸದಿದ್ದರೆ ಅಥವಾ ದೇಶೀಯ ದರಗಳಲ್ಲಿ ಬದಲಾವಣೆ ಮಾಡದಿದ್ದರೆ, ಈ ತೈಲ ಕಂಪನಿಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ-ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯ ಈಗ ಕೇವಲ ಎರಡೂವರೆ ಗಂಟೆ, ಆರ್ಥಿಕ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | Faster Roads Ahead: Modi Launches Delhi Dehradun Expressway, Travel Time Slashed

ಡೆಹ್ರಾಡೂನ್, ಏಪ್ರಿಲ್ 14: ದೇಶದ ಮೂಲಸೌಕರ್ಯ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ಬಹುನಿರೀಕ್ಷಿತ 213 ಕಿ.ಮೀ. ಉದ್ದದ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ ಅನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಕೇವಲ ರಸ್ತೆಯಲ್ಲ, ಇದು ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಅಭಿವೃದ್ಧಿಯ ವೇಗಕ್ಕೆ ಹೊಸ ಶಕ್ತಿ ನೀಡಲಿರುವ ‘ವೇಗದ ಪಥ’ ಎಂದರು.

ಈ ಮೊದಲು ದೆಹಲಿಯಿಂದ ಡೆಹ್ರಾಡೂನ್ ತಲುಪಲು ಕನಿಷ್ಠ 6 ಗಂಟೆಗಳ ಕಾಲ ಬೇಕಾಗುತ್ತಿತ್ತು. ಆದರೆ, ಈ ಪ್ರವೇಶ-ನಿಯಂತ್ರಿತ (Access-controlled) ಹೆದ್ದಾರಿಯಿಂದಾಗಿ ಈಗ ಪ್ರಯಾಣದ ಸಮಯ ಕೇವಲ 2.5 ಗಂಟೆಗೆ (150 ನಿಮಿಷ) ಇಳಿಕೆಯಾಗಲಿದೆ. ಇದು ಪ್ರವಾಸಿಗರಿಗೆ ಮತ್ತು ನಿತ್ಯ ಪ್ರಯಾಣಿಕರಿಗೆ ವರದಾನವಾಗಲಿದೆ.

ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಯೋಜನೆಯಲ್ಲಿ ವಿಶೇಷ ಗಮನ ಹರಿಸಲಾಗಿದೆ. ಏಷ್ಯಾದಲ್ಲೇ ಅತಿ ಉದ್ದವಾದ 12 ಕಿ.ಮೀ. ಎತ್ತರದ (Elevated) ವನ್ಯಜೀವಿ ಕಾರಿಡಾರ್ ಅನ್ನು ಇಲ್ಲಿ ನಿರ್ಮಿಸಲಾಗಿದೆ. ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ರಸ್ತೆಯ ಅಡೆತಡೆಯಿಲ್ಲದೆ ಸಂಚರಿಸಲು ಮೀಸಲಾದ ಅಂಡರ್‌ಪಾಸ್‌ಗಳು ಮತ್ತು ಸುರಂಗಗಳನ್ನು ನಿರ್ಮಿಸಲಾಗಿದೆ. ಇದು ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಲು ಸಹಕಾರಿ. ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯು ಸಂಚಾರದ ಹರಿವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.

ಈ ಕಾರಿಡಾರ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳೊಂದಿಗೆ ಸಂಪರ್ಕ ಸಾಧಿಸುವುದರಿಂದ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತದೆ. 100ಕ್ಕೂ ಹೆಚ್ಚು ಅಂಡರ್‌ಪಾಸ್‌ಗಳು, ಸೇತುವೆಗಳು ಮತ್ತು ವಿಶ್ವದರ್ಜೆಯ ಮಾರ್ಗ ಬದಿಯ ಸೌಲಭ್ಯಗಳನ್ನು ಇದು ಹೊಂದಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿಗಾಗಿ ಸಿದ್ಧವಾದ ನಾಲ್ವಡಿ ಒಡೆಯರ್ ಮಾದರಿ ಪೇಟದ ವಿಶೇಷಗಳೇನು ಗೊತ್ತಾ? ಇಲ್ಲಿದೆ ನೋಡಿ

ಸುಮಾರು 11,800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆರು ಪಥಗಳ ಹೆದ್ದಾರಿಯು ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಟೋಲ್ ದರಗಳು ಸ್ವಲ್ಪ ಹೆಚ್ಚಿದ್ದರೂ, ಇಂಧನ ಉಳಿತಾಯ ಮತ್ತು ಸಮಯದ ಲಾಭವು ಪ್ರಯಾಣಿಕರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ದೆಹಲಿ-ಡೆಹ್ರಾಡೂನ್ ಕಾರಿಡಾರ್ ಭಾರತದ ರಸ್ತೆ ಸಾರಿಗೆ ವ್ಯವಸ್ಥೆಯು ಜಾಗತಿಕ ಮಟ್ಟಕ್ಕೆ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version