ಕಾವೇರಿ ನೀರು ವಿವಾದ: ಪ್ರಯೋಜನವಾಗಿಲಿಲ್ಲ ಕರ್ನಾಟಕದ ಮೇಲ್ಮನವಿ – Kannada News | Cauvery Row: CWMA Rejects Karnataka’s Appeal, Orders Water Release To Tamil Nadu as per CWRC

ನವದೆಹಲಿ, (ಜುಲೈ 30): ಕಾವೇರಿ ನದಿ ನೀರು ವಿವಾದ (Cauvery river water Dispute)ಮತ್ತೆ ಮುನ್ನೆಲೆಗೆ ಬಂದಿದೆ. ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶಿಸಿದ್ದು, ಆದ್ರೆ, ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಿದೆ. ಆದರೂ ಸಹ ಸಹ ಪ್ರಯೋಜನವಾಗಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಇಂದು (ಜುಲೈ 30) ತುರ್ತು ಸಭೆ ನಡೆಸಿ CWRC ಆದೇಶವನ್ನು ಎತ್ತಿ ಹಿಡಿದಿದ್ದು, 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ. ಇದರಿಂದ ಕರ್ನಾಟಕಕ್ಕೆ ಮತ್ತೆ ಆಘಾತವಾಗಿದೆ.

ಸಿಡಬ್ಲ್ಯೂಎಂಎ (CWMA) ಅಧ್ಯಕ್ಷ ಎಸ್. ಕೆ. ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ CWMA ಮುಂದೆ ಸುದೀರ್ಘ ವಾದ ಮಂಡಿಸಿತ್ತು. ರಾಜ್ಯದ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟು, ಆದೇಶ ಮರುಪರಿಶೀಲಿಸುವಂತೆ ಮನವೊಲಿಸಲು ಯತ್ನಿಸಿತ್ತು. ಆದರೆ, ಕರ್ನಾಟಕದ ಮೇಲ್ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, CWRC ಶಿಫಾರಸ್ಸನ್ನೇ ಆದೇಶವಾಗಿ ಮಾರ್ಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Shravan Fasting Food: ಶ್ರಾವಣ ಉಪವಾಸ ವ್ರತ ಮಾಡುವವರು ದಿನವಿಡೀ ಎನರ್ಜಿಯಿಂದ ಇರಲು ತಿನ್ನಬಹುದಾದ ಸಾಬುದಾನ ಭಕ್ಷ್ಯ – Kannada News | Shravan Fasting Food: These are the Sabudana dishes that can be consumed by those observing the Shravan fast

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಶಿವನ ಆರಾಧನೆಗಾಗಿ ಮೀಸಲಾದ ಈ ಪವಿತ್ರ ತಿಂಗಳಿನಲ್ಲಿ ಭಕ್ತರು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ (fasting) ವ್ರತಾಚರಣೆಯನ್ನು ಮಾಡುತ್ತಾರೆ. ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶುಕ್ರವಾರ, ಶ್ರಾವಣ ಶನಿವಾರದಂದು ಉಪವಾಸ ಮಾಡುತ್ತಾರೆ. ಉಪವಾಸದ ಸಮಯದಲ್ಲಿ ಹಣ್ಣುಗಳು, ಸಾಬುದಾನ ಅಂದರೆ ಸಬ್ಬಕ್ಕಿ ಕಿಚಡಿಯಂತಹ ಸಾತ್ವಿಕ ಆಹಾರವನ್ನು ಸೇವನೆ ಮಾಡುತ್ತಾರೆ. ಸಾಬುದಾನ ಕಿಚಡಿ ಜನಪ್ರಿಯ ಉಪವಾಸದ ಆಹಾರವಾಗಿದೆ. ಕಿಚಡಿ ಮಾತ್ರವಲ್ಲ ಸಾಬುದಾನದಿಂದ ಈ ಎಲ್ಲಾ ಆರೋಗ್ಯಕರ ರೆಸಿಪಿಗಳನ್ನು ತಯಾರಿಸಬಹುದು. ಈ ಸಾಬುದಾನ ಭಕ್ಷ್ಯಗಳು ಬಹಳ ಹೊತ್ತಿನವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ, ಸುಸ್ತಾಗುವುದನ್ನು ತಡೆಗಟ್ಟಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಇದು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಈ ಬಾರಿ ಶ್ರಾವಣ ಮಾಸದಲ್ಲಿ ನೀವು ಉಪವಾಸ ವ್ರತಾಚರಣೆ ಮಾಡುತ್ತಿದ್ದರೆ, ಸಾಬುದಾನದ ಈ ಭಕ್ಷ್ಯಗಳನ್ನು ಸವಿಯಿರಿ.

ಶ್ರಾವಣ ಉಪವಾಸ ಮಾಡುವವರು ತಿನ್ನಬಹುದಾದ ಸಾಬುದಾನ ಖಾದ್ಯಗಳು:

ಸಬುದಾನ ದೋಸೆ: ಶ್ರಾವಣ ಉಪವಾಸ ವ್ರತಾಚರಣೆಯನ್ನು ಮಾಡುತ್ತಿದ್ದರೆ ನೀವು ಉಪವಾಸಕ್ಕೂ ಮುನ್ನ ಸಾಬುದಾನ ದೋಸೆಯನ್ನು ತಿನ್ನಬಹುದು. ಈ ದೋಸೆಯನ್ನು ತಯಾರಿಸಲು ನೆನೆಸಿದ ಸಾಬುದಾನ, ಊದಲು ಅಕ್ಕಿ, ಮೊಸರು ಬೇಕಾಗುತ್ತದೆ. ಈ ಮೂರು ಪದಾರ್ಥವನ್ನು ನಯವಾಗಿ ರುಬ್ಬಿ ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ. ನಂತರ ತೆಳುವಾದ ದೋಸೆಯನ್ನು ಮಾಡಿ, ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ. ಈ ದೋಸೆ ಹಗುರವಾದ ಆಹಾರವಾಗಿದ್ದು, ಹೆಚ್ಚು ಹೊತ್ತು ಹಸಿವಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಸಬುದಾನ ಇಡ್ಲಿ: ಮೃದುವಾದ ಸಾಬುದಾನ ಇಡ್ಲಿಯು ಉತ್ತಮ ಉಪವಾಸ ಆಹಾರವಾಗಿದೆ. ಸಾಬುದಾನ ದೋಸೆಗೆ ಹಿಟ್ಟನ್ನು ತಯಾರಿಸುವಂತೆ ನೆನೆಸಿದ ಸಾಬುದಾನ, ಊದಲು ಅಕ್ಕಿ ಮತ್ತು ಮೊಸರನ್ನು ಹಾಕಿ ಹಿಟ್ಟನ್ನು ತಯಾರಿಸಿ, ಈ ಹಿಟ್ಟನ್ನು ಇಡ್ಲಿ ಪಾತ್ರೆಗಳಿಗೆ ಹಾಕಿ ಬೇಯಿಸಿಕೊಳ್ಳಿ. ಈ ಆರೋಗ್ಯಕರ ಇಡ್ಲಿ  ಜೀರ್ಣಿಸಿಕೊಳ್ಳಲು ಸುಲಭ ಮತ್ತು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಸಾಬುದಾನಾ ಖಿಚಡಿ: ಉಪವಾಸದ ಸಮಯದಲ್ಲಿ ಸಾಬುದಾನ ಕಿಚಡಿ ಇರಲೇಬೇಕು. ಇದು ಜನಪ್ರಿಯ ಉಪವಾಸ ಭಕ್ಷ್ಯವಾಗಿದೆ. ರಾತ್ರಿಯಿಡಿ ನೆನೆಸಿದ ಸಾಬುದಾನ, ಹುರಿದ ಕಡಲೆಕಾಯಿ, ಜೀರಿಗೆ, ಹಸಿ ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ ಮತ್ತು ಸೌಮ್ಯ ಮಸಾಲೆಗಳನ್ನೆಲ್ಲಾ ಬೇಯಿಸಿ ಈ ಕಿಚಡಿಯನ್ನು ತಯಾರಿಸಲಾಗುತ್ತದೆ. ಪೌಷ್ಟಿದಾಯಕವಾದ ಮತ್ತು ಹಗುರವಾದ ಈ ಭಕ್ಷ್ಯ ಪರಿಪೂರ್ಣ ಉಪವಾಸ ಊಟವಾಗಿದೆ.

ಸಾಬುದಾನ ವಡೆ: ಶ್ರಾವಣ ಉಪವಾಸ ಮಾಡುವವರು ಸಾಬುದಾನ ವಡೆಯನ್ನು ಸಹ ಸವಿಯಬಹುದು. ನೆನೆಸಿದ ಸಾಬುದಾನವನ್ನು, ಬೇಯಿಸಿದ ಆಲೂಗಡ್ಡೆ, ಕಡ್ಲೆ ಹಿಟ್ಟು, ವಿವಿಧ ಮಸಾಲೆಗಳೊಂದಿಗೆ ಬೆರೆಸಿ ನಂತರ ಕೈಯಲ್ಲಿ ವಡೆ ಆಕಾರಕ್ಕೆ ತಟ್ಟಿ, ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಇದನ್ನೂ ಓದಿ: ಬಂದೇ ಬಿಟ್ಟಿದೆ ಆಷಾಢ; ಮಾಸದಲ್ಲಿ ನವ ವಧುವನ್ನು ತವರು ಮನೆಗೆ ಕಳುಹಿಸುವುದೇಕೆ ಗೊತ್ತಾ?

ಸಾಬುದಾನ ಖೀರ್: ಸಿಹಿ ತಿನ್ನಲು ಬಯಸುವವರಿಗೆ ಸಾಬುದಾನ ಖೀರ್  ಉತ್ತಮ, ಆರೋಗ್ಯಕರ ಆಯ್ಕೆಯಾಗಿದೆ. ನೆನೆಸಿದ ಸಬ್ಬಕ್ಕಿಯನ್ನು ಹಾಲು ಮತ್ತು ಸಕ್ಕರೆ ಅಥವಾ ಬೆಲ್ಲದೊಂದಿಗೆ ಬೇಯಿಸಿ, ಅದಕ್ಕೆ ಏಲಕ್ಕಿ ಪುಡಿ ಮತ್ತು ಡ್ರೈ ನಟ್ಸ್‌ ಮತ್ತು ಕೇಸರಿ ದಳವನ್ನು ಸೇರಿಸಿದರೆ ಸಾಬುದಾನ ಖೀರ್‌ ರೆಡಿ. ಇದು ಜನಪ್ರಿಯ ಉಪವಾಸ ಸಿಹಿಖಾದ್ಯವಾಗಿದೆ.

ಸಾಬುದಾನ ಭೇಲ್: ಉಪವಾಸದ ದಿನ ನೀವು ಸಾಬುದಾನ ಭೇಲ್‌ ಕೂಡ ತಿನ್ನಬಹುದು. ಇದಕ್ಕಾಗಿ ಸಾಬುದಾನವನ್ನು ಹುರಿದಿಟ್ಟುಕೊಂಡು ಅದಕ್ಕೆ ಬೇಯಿಸಿದ ಆಲೂಗಡ್ಡೆ, ಹುಡಿದ ಕಡಲೆಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ರಸ, ರಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾಬುದಾನ ಭೇಲ್‌ ಸಿದ್ದವಾಗುತ್ತದೆ. ಈ ಹಗುವಾದ ಖಾದ್ಯ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆಶಿ ವೈಯಕ್ತಿಕ ಸಹಾಯಕ ಎಂದು ಸುಳ್ಳು ಹೇಳಿ 15 ಲಕ್ಷ ರೂ. ವಂಚನೆ: ಆರೋಪಿ ಅರೆಸ್ಟ್​​ – Kannada News | Impersonation Fraud: Man Arrested in Shivamogga for Cheating 15 Lakh Posing as CM DK Shivakumar’s PA

ಶಿವಮೊಗ್ಗ, ಜುಲೈ 30: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿಎ) ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಪರವಾನಗಿ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಆರೋಪದಡಿ ತುಂಗಾನಗರ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಕೆಎಚ್‌ಬಿ ಕಾಲೊನಿಯ ರೈತ ಮಂಜುನಾಥ್ ಹಂಜಿ ನೀಡಿದ ದೂರಿನ ಮೇರೆಗೆ, ತುಂಗಾನಗರ ಪೊಲೀಸರು ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ಹೇಮಂತ್ ಕುಮಾರ್ ತಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿಎ ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಪರವಾನಗಿ ಪಡೆಸಿಕೊಡುವುದಾಗಿ ಭರವಸೆ ನೀಡಿದ್ದ. ಈ ನೆಪದಲ್ಲಿ ಫೋನ್‌ಪೇ ಮೂಲಕ ಹಾಗೂ ಶಿವಮೊಗ್ಗದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ವಡ್ಡಿನಕೊಪ್ಪ ಪ್ರದೇಶದಲ್ಲಿ ನಗದು ರೂಪದಲ್ಲಿ ಒಟ್ಟು 15 ಲಕ್ಷ ಹಣವನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೆ ಲಕ್ಷಾಂತರ ರೂ. ವಂಚನೆ: ಕಿಂಗ್‌ಪಿನ್ ರಾಹುಲ್ ಅರೆಸ್ಟ್!

ಆರೋಪಿಗೆ ನ್ಯಾಯಾಂಗ ಬಂಧನ

ಹಣ ಪಡೆದ ಬಳಿಕ ಪರವಾನಗಿ ಕೊಡಿಸದೇ, ಹಣವನ್ನೂ ಹಿಂತಿರುಗಿಸದೇ ಆರೋಪಿ ತಲೆಮರೆಸಿಕೊಂಡಿದ್ದನು.ಈ ಹಿನ್ನೆಲೆ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತುಂಗಾನಗರ ಪೊಲೀಸರು ಆರೋಪಿ ಹೇಮಂತ್ ಕುಮಾರ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾತನಾಡಿ, ಇದೇ ರೀತಿಯ ವಿಧಾನ ಬಳಸಿ ಆರೋಪಿ ಇನ್ನೂ ಯಾರಿಗಾದರೂ ವಂಚನೆ ಮಾಡಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿರೋದಾಗಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಜಯ್ ಜತೆ ‘ಜನ ನಾಯಗನ್’ ಚಿತ್ರದಲ್ಲಿ ನಟಿಸಿದ ಖುಷಿಯಲ್ಲಿ ಕನ್ನಡಿಗ ವಜ್ರಾಂಗ್ ಶೆಟ್ಟಿ

Source link

‘ಕ್ಷಮೆಯಾಚಿಸಿ ರಾಜೀನಾಮೆ ನೀಡಿ’; ಪ್ರತಿಭಟನಾಕಾರರ ಮೇಲಿನ ಹಲ್ಲೆ ಕುರಿತು ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ – Kannada News | Mallikarjun Kharge says Amit Shah should be dragged out of his office and hand over to public

ನವದೆಹಲಿ, ಜುಲೈ 30: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ವೇಳೆ ನಡೆದ ಪೊಲೀಸರ ಹಲ್ಲೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಹಿಸಿರುವ ಮೌನವನ್ನು ಕಾಂಗ್ರೆಸ್ ಮುಖ್ಯಸ್ಥ ರಾಗೂ ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಪರೀಕ್ಷಾ ಅಕ್ರಮ ತಡೆ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಂಸತ್ತಿನ ಕಲಾಪಕ್ಕೆ ಗೈರುಹಾಜರಾಗಿರುವುದಕ್ಕೆ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಪಷ್ಟನೆ ಕೋರಿದರು. ಕಚೇರಿಯೊಳಗೆ ಅಡಗಿ ಕುಳಿತಿರುವ ಅಮಿತ್ ಶಾ ಅವರನ್ನು ಎಳೆದುಕೊಂಡು ಬಂದು ಜನರಿಗೆ ಒಪ್ಪಿಸಬೇಕು ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

ಇಂದು ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿದ ನಂತರ ಮಾತನಾಡಿದ ರಾಜ್ಯಸಭಾ ಹಿರಿಯ ಸಂಸದ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, “ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ವಿರುದ್ಧ ನಡೆದ ಹಿಂಸಾಚಾರದ ಕುರಿತು ಸರ್ಕಾರ ಸತ್ಯವನ್ನು ಹೊರಹಾಕಬೇಕು. ಅಮಿತ್ ಶಾ ಅವರು ಮುಚ್ಚಿದ ಬಾಗಿಲ ಹಿಂದೆ ಅಡಗಿರಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಬಾಯಿ ಹೊಲಿದಿದ್ದಾರಾ?:

ಸದನವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಜುಲೈ 20ರಂದು ಸಿಜೆಪಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ವಿರುದ್ಧ ನಡೆದ ಭದ್ರತಾ ಪಡೆಗಳ ಕ್ರಮದ ಕುರಿತು ಗೃಹ ಸಚಿವರು ಮೌನ ವಹಿಸಿರುವುದನ್ನು ಕಂಡು “ಯಾರಾದರೂ ನಿಮ್ಮ ಬಾಯಿಯನ್ನು ಹೊಲಿದಿದ್ದಾರೆಯೇ?” ಎಂದು ಪ್ರಶ್ನಿಸಿದರು. “ನೀವು ದೇಶದ ಗೃಹ ಸಚಿವರು. ಈ ಘಟನೆ ನಡೆದಿದ್ದು ದೆಹಲಿಯಲ್ಲಿ. ಇಷ್ಟೆಲ್ಲಾ ನಡೆಯುತ್ತಿದ್ದರೂ ನೀವು ಬಾಯಿ ಬಿಡುತ್ತಿಲ್ಲ. ಯಾರಾದರೂ ನಿಮ್ಮ ಬಾಯಿಯನ್ನು ಹೊಲಿದಿದ್ದಾರೆಯೇ?” ಎಂದು ಖರ್ಗೆ ಕೇಳಿದರು.

ಇದನ್ನೂ ಓದಿ: ‘ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯು ಮಾತ್ರ ಬಳಸಲಾಗಿದೆ’; ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರ ಸ್ಪಷ್ಟನೆ

“ಹಳ್ಳಿಗಳಿಂದ ಮತ್ತು ಇತರ ರಾಜ್ಯಗಳಿಂದ ಬಂದ ಮಕ್ಕಳ ಮೇಲೆ ಅವರು ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸುತ್ತಿದ್ದಾರೆ. ಒಬ್ಬರು ಕಣ್ಣು ಕಳೆದುಕೊಂಡಿದ್ದಾರೆ, ಇನ್ನೊಬ್ಬರು ಕಿವಿ ಕಳೆದುಕೊಂಡಿದ್ದಾರೆ, ಮತ್ತೊಬ್ಬರು ಕೈ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ? ಗೃಹ ಸಚಿವರೇ ಇದಕ್ಕೆ ಹೊಣೆ. ಅಮಿತ್ ಶಾ ಮುಚ್ಚಿದ ಬಾಗಿಲಿನ ಹಿಂದಿನಿಂದ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರಬಹುದು. ಅವರು ಸದಾ ಮುಚ್ಚಿದ ಕೋಣೆಯಲ್ಲೇ ಅಡಗಿರಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ನಾವು ನಿಮ್ಮನ್ನು ಹೊರಗೆಳೆಯುತ್ತೇವೆ” ಎಂದು ಖರ್ಗೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಖರ್ಗೆ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಮೋದಿ ಸರ್ಕಾರ ಮಾತನಾಡದಿದ್ದರೆ, ಯುವಜನತೆ ಮತ್ತು ವಿದ್ಯಾರ್ಥಿಗಳು ಅವರಿಗೆ ಮತ್ತೊಮ್ಮೆ ತಕ್ಕ ಪಾಠ ಕಲಿಸಬೇಕು” ಎಂದು ಕರೆ ನೀಡಿದರು.

ಇದನ್ನೂ ಓದಿ: ‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್

“ಈ ವಿಧೇಯಕದಲ್ಲಿ ಕೇವಲ ಅಂಕಿ-ಅಂಶಗಳನ್ನು ಬದಲಾಯಿಸುತ್ತಾ ಬರಲಾಗಿದೆ. ಇದರಿಂದ ಏನೂ ಆಗುವುದಿಲ್ಲ. ಹೆಚ್ಚಿನ ದಂಡ, ಕಠಿಣ ಶಿಕ್ಷೆ, ವಿಶೇಷ ಕಾರ್ಯಪಡೆ (STF), ಶೀಘ್ರ ಗತಿ ನ್ಯಾಯಾಲಯಗಳಂತಹ ನಿಬಂಧನೆಗಳನ್ನು ನೀವು ಸೇರಿಸಿದ್ದೀರಿ. ಆದರೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ನೀವು ಪರೀಕ್ಷೆಯನ್ನು ಹೇಗೆ ನಡೆಸುತ್ತೀರಿ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಬದಲಾವಣೆ ನಿರ್ಧಾರವಾಗುತ್ತದೆ. ಇಂತಹ ಕಠಿಣ ಕಾನೂನನ್ನು ತರಲು ನಾವು 2024ರಲ್ಲೇ ಆಗ್ರಹಿಸಿದ್ದೆವು. ಆದರೆ ಆಗ ನೀವು ನಮ್ಮ ಮಾತನ್ನು ಒಪ್ಪಿಕೊಳ್ಳಲಿಲ್ಲ” ಎಂದು ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ಮೇಲಿನ ಚರ್ಚೆಯ ವೇಳೆ ಖರ್ಗೆ ಹೇಳಿದರು.

ಇಡೀ ದೇಶಾದ್ಯಂತ ಇರುವ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆ ಗುರುತಿಸಿಕೊಂಡಿರುವ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದ ಖರ್ಗೆ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ಇದು ಮೇಲ್ಮನೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತಲ್ಲದೆ, ಬಿಜೆಪಿ ಸಂಸದರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್‌ ಟೆಸ್ಟ್ ತಂಡಕ್ಕೆ ಜೋ ರೂಟ್ ನಾಯಕ, ಸ್ಟೀಫನ್ ಫ್ಲೆಮಿಂಗ್ ಹೆಡ್ ಕೋಚ್

Source link

ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ – Kannada News | New Home: If you are planning to build a house, apply for a license.

ಸಾಂದರ್ಭಿಕ ಚಿತ್ರImage Credit source: DEV IMAGES/Moment/Getty Images

ಮನೆ (home) ಕಟ್ಟುವುದು ಎಲ್ಲರ ಕನಸು. ಆದರೆ ಖರೀದಿ ಮಾಡಿದ ಜಾಗ ಅಥವಾ ಸ್ವಂತ ಜಾಗ ಇದೆ ಎಂದು  ಮನೆ ಕಟ್ಟಲು ಸಾಧ್ಯವಿಲ್ಲ. ನೀವು ಮನೆ ಕಟ್ಟಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಒಂದು ಕೆಲಸವನ್ನು ತಪ್ಪದೇ ಮಾಡ್ಲೇ ಬೇಕು. ಹೌದು, ಕರ್ನಾಟಕದಲ್ಲಿ ಮನೆ ನಿರ್ಮಾಣಕ್ಕೆ ಕಟ್ಟಡ ಪರವಾನಗಿ (license) ಪಡೆಯುವುದು ಮುಖ್ಯ. ನೀವು ಸ್ಥಳೀಯ ಪ್ರಾಧಿಕಾರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಲೈಸನ್ಸ್ ಪಡೆಯಬಹುದು. ಅರ್ಜಿ ಸಲ್ಲಿಸಲು ನಿಮ್ಮ ಬಳಿ ಅಗತ್ಯ ದಾಖಲೆಗಳು ಇರುವುದು ಕಡ್ಡಾಯ.

ಕಟ್ಟಡ ಪರವಾನಗಿಗೆ ಬೇಕಾಗುವ ದಾಖಲೆಗಳಾವುವು?

  • ಸೇಲ್ ಡೀಡ್ (ಖರೀದಿ ಪತ್ರ)
  • ಇಂಟರ್ಫೆರೆನ್ಸ್ ಅಥವಾ ಹಕ್ಕುಪತ್ರ.
  • ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಮೂಲಕ ತಯಾರಿಸಿದ ಕಟ್ಟಡದ ನೀಲನಕ್ಷೆ
  • ಆಸ್ತಿ ತೆರಿಗೆ ರಸೀದಿ
  •   ಆಧಾರ್ ಕಾರ್ಡ್
  •  ಪ್ಯಾನ್ ಕಾರ್ಡ್
  •  ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ನಿಮ್ಮ ಆಸ್ತಿಯು ಗ್ರಾಮ ಪಂಚಾಯತಿ, ನಗರಸಭೆ, ಅಥವಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಗೆ ಬರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

ಹಂತ 2: ನಗರ ಪ್ರದೇಶಗಳಾದರೆ ಆಯಾ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪೋರ್ಟಲ್ ಮೂಲಕ, ಗ್ರಾಮಾಂತರ ಪ್ರದೇಶಗಳಾದರೆ ಗ್ರಾಮ ಪಂಚಾಯತಿ ಕಚೇರಿ ಅಥವಾ ಬಾಪೂಜಿ ಸೇವಾ ಕೇಂದ್ರ ಮೂಲಕ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹಂತ 3: ಅಧಿಕಾರಿಗಳು ಅಥವಾ ಪಿಡಿಓಗಳು (PDO/Engineer) ಸ್ಥಳ ಪರಿಶೀಲನೆ ನಡೆಸಿ ನಿಯಮಗಳ ಅನುಸಾರ ನಕ್ಷೆಯನ್ನು ಪರಿಶೀಲಿಸುತ್ತಾರೆ.

ಹಂತ 4: ತದನಂತರ ಸರ್ಕಾರ ನಿಗದಿಪಡಿಸಿದ ಪರವಾನಗಿ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿ.

ಹಂತ 5: ಅನುಮೋದನೆ ದೊರೆತ ನಂತರ ಡಿಜಿಟಲ್ ಸಹಿಯುಳ್ಳ ಕಟ್ಟಡ ಪರವಾನಗಿ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.

ಇದನ್ನೂ ಓದಿ: ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಹೊಸ ಮನೆಗೆ ಡೋರ್ ನಂಬರ್ ಪಡೆಯೋದು ಸುಲಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಮನೆ ನಿರ್ಮಾಣಕ್ಕೆ ಲೈಸನ್ಸ್‌ ಪಡೆಯುವುದು ಮುಖ್ಯವೇ?

ಉತ್ತರ: ನೀವು ಮನೆ ಕಟ್ಟುವ ಜಾಗವು ಯಾವ ವ್ಯಾಪ್ತಿಗೆ ಒಳಪಡುತ್ತದೆ (ಗ್ರಾಮ ಪಂಚಾಯತ್, ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ) ಎಂದು ತಿಳಿದುಕೊಂಡು ಪರವಾನಗಿಗೆ ಅರ್ಜಿ ಸಲ್ಲಿಸಿ

ಪ್ರಶ್ನೆ: ಕಟ್ಟಡ ಪರವಾನಗಿಗೆ ಬೇಕಾಗುವ ಅಗತ್ಯ ದಾಖಲೆಗಳಾವುವು?

ಉತ್ತರ: ಕಟ್ಟಡ ಪರವಾನಗಿ ಪಡೆಯಲು ಸೇಲ್ ಡೀಡ್, ಇಂಟರ್ಫೆರೆನ್ಸ್ ಅಥವಾ ಹಕ್ಕುಪತ್ರ, ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ಮೂಲಕ ತಯಾರಿಸಿದ ಕಟ್ಟಡದ ನೀಲನಕ್ಷೆ, ಆಸ್ತಿ ತೆರಿಗೆ ರಸೀದಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋ ಈ ದಾಖಲೆಗಳು ಅಗತ್ಯವಾಗಿ ಬೇಕು.

ಪ್ರಶ್ನೆ: ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಉತ್ತರ: ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ನಗರ ಪ್ರದೇಶಗಳಾದರೆ ಆಯಾ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪೋರ್ಟಲ್ ಮೂಲಕ ಅಥವಾ ಗ್ರಾಮಾಂತರ ಪ್ರದೇಶಗಳಾದರೆ ಗ್ರಾಮ ಪಂಚಾಯತಿ ಕಚೇರಿ ಅಥವಾ ಬಾಪೂಜಿ ಸೇವಾ ಕೇಂದ್ರ ಮೂಲಕ ಆನ್‌ಲೈನ್/ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾವೇರಿ: 2.30 ಕೋಟಿ ಮೌಲ್ಯದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸಿದ ಪೊಲೀಸ್​; ಮೊಬೈಲ್ ಕಳ್ಳತನ ಪತ್ತೆ ಹಚ್ಚುವಲ್ಲಿ ಸಾಧನೆ – Kannada News | Haveri Police Return 2.3 Crore Worth of Stolen Property; Mobile Recovery Drive Wins Praise

ಹಾವೇರಿ ಜಿಲ್ಲಾ ಪೊಲೀಸರಿಂದ ಪ್ರಾಪರ್ಟಿ ಪರೇಡ್
Image Credit source: tv9 kannada

ಹಾವೇರಿ, ಜುಲೈ 30: ಮನೆ ಕಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ಅಂಗಡಿ ಮುಂದೆ ನಿಲ್ಲಿಸಿದ ಬೈಕಗಳ ಕಳ್ಳತನಕ್ಕೆ ಹಾವೇರಿ ಜನರು ಬೆಚ್ಚಿಬಿದ್ದಿದ್ದರು. ಇದೀಗ ಹಾವೇರಿ (haveri) ಜಿಲ್ಲಾ ಪೊಲೀಸರು ಕಳ್ಳರು ಹಾಗೂ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಕೋಟ್ಯಂತರ ರೂ ಮೌಲ್ಯದ ಆಸ್ತಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಎಸ್‌ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ (Police property parade) ಹಣ, ಚಿನ್ನ, ಬೆಳ್ಳಿ, ಮೊಬೈಲ್‌ ಹಾಗೂ ವಾಹನಗಳನ್ನು ಹಸ್ತಾಂತರಿಸಲಾಗಿದೆ.

2 ಕೋಟಿ 30 ಲಕ್ಷ ರೂ. ಮೌಲ್ಯದ ವಸ್ತುಗಳು ಮಾಲೀಕರಿಗೆ ಹಸ್ತಾಂತರ

ಹಾವೇರಿಯಲ್ಲಿ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಬರೋಬ್ಬರಿ 2 ಕೋಟಿ 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಆಯಾ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 46 ಪ್ರಕರಣಗಳಿಗೆ ಸಂಬಂಧಿಸಿದ ಹಣ, ಚಿನ್ನ, ಬೆಳ್ಳಿ, ಮೊಬೈಲ್, ಕಾರು, ಜೀಪ್​​ ಸೇರಿದಂತೆ ಹಲವು ವಾಹನಗಳನ್ನು ಮಾಲೀಕರಿಗೆ ಮರಳಿಸಲಾಗಿದೆ.

ಮೊಬೈಲ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಹಾವೇರಿ ಪೊಲೀಸರ ವಿಶೇಷ ಸಾಧನೆ

ಮೊಬೈಲ್ ಕಳ್ಳತನ ಪ್ರಕರಣಗಳ ಪತ್ತೆಯಲ್ಲಿ ಹಾವೇರಿ ಪೊಲೀಸರು ವಿಶೇಷ ಸಾಧನೆ ಮಾಡಿದ್ದು, ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಖ್ಯೆಯ ಮೊಬೈಲ್‌ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳ್ಳತನವಾಗಿದ್ದ 2527 ಮೊಬೈಲ್‌ಗಳನ್ನು ಪೊಲೀಸರು ಬ್ಲಾಕ್ ಮಾಡಿದ್ದು, ಇದುವರೆಗೆ 2014 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ 539 ಮೊಬೈಲ್‌ಗಳನ್ನು ಈಗಾಗಲೇ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳ್ಳತನವಾಗಿದ್ದ 16 ವಾಹನಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿನ ಖಜಾನೆ ಕಂಡು ಅಧಿಕಾರಿಗಳಿಗೆ ದಿಗ್ಭ್ರಮೆ: ಸಿಕ್ಕಿದ್ದು 28 ಕೋಟಿ ನಗದು, 15 ಕೆಜಿ ಚಿನ್ನ!

ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ 1 ಕೋಟಿ 19 ಲಕ್ಷ ರೂ. ಮೌಲ್ಯದ 1088 ಗ್ರಾಂ ಚಿನ್ನವನ್ನೂ ಮಾಲೀಕರಿಗೆ ಮರಳಿಸಲಾಗಿದೆ. ಜೊತೆಗೆ ಸುಮಾರು 35 ಲಕ್ಷ ರೂ ಮೌಲ್ಯದ ಬೆಳ್ಳಿಯನ್ನೂ ಹಸ್ತಾಂತರಿಸಲಾಗಿದೆ. ಕಳ್ಳತನ ಪ್ರಕರಣಗಳ ಶೀಘ್ರ ಪತ್ತೆ, ಕಳೆದುಹೋದ ವಸ್ತುಗಳ ಮರುಪಡೆಯುವಿಕೆ ಹಾಗೂ ಸಾರ್ವಜನಿಕರ ಆಸ್ತಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಹಾವೇರಿ ಜಿಲ್ಲಾ ಪೊಲೀಸರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್ – Kannada News | Pratham says Vijay should not try to take Cauvery water by force

ಕಾವೇರಿ (Cauvery) ಪ್ರಾಧಿಕಾರವು, ತಮಿಳುನಾಡಿಗೆ ನೀರು ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ಅದರ ಬೆನ್ನಲ್ಲೆ ಕಾವೇರಿ ವಿವಾದ ಭುಗಿಲೆದ್ದಿದೆ. ರಾಜ್ಯದ ಕೆಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಚಿತ್ರರಂಗದವರು ಇಂದು (ಜುಲೈ 30) ಸಭೆ ಸೇರಿದ್ದು ಇದೇ ವಿಷಯವಾಗಿ ಚರ್ಚೆ ನಡೆಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಕೆಲವೆಡೆ ಈಗಾಗಲೇ ಬೀದಿಗಿಳಿದಿವೆ. ಮಂಡ್ಯದಲ್ಲಿ ತಮಿಳು ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. ‘ಜನ ನಾಯಗನ್’ ಶೋ ರದ್ದು ಮಾಡಲಾಗಿದೆ. ಇದೀಗ ನಟ, ಬಿಗ್​​ಬಾಸ್ ಮಾಜಿ ವಿನ್ನರ್ ಪ್ರಥಮ್, ಈ ವಿಷಯವಾಗಿ ಮಾತನಾಡಿದ್ದು, ‘ವಿಜಯ್ ಅವರು ಬಲವಂತದಿಂದ ನೀರು ಪಡೆಯುವ ಪ್ರಯತ್ನ ಮಾಡಬಾರದು’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

SIR ಪಟ್ಟಿಗೆ ‘ಬಾಂಗ್ಲಾದೇಶಿ, ಪಾಕಿಸ್ತಾನಿಯರ’ ಹೆಸರು ಸೇರಿಸಲ್ಲವೆಂದ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ: ಬಿಜೆಪಿ ಆರೋಪ – Kannada News | BJP Alleges Government Official Assaulted in Bengaluru For Refusing to Enroll Illegal Immigrants

ಬೆಂಗಳೂರು, 30: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ತೊಡಗಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ  ಬೆಂಗಳೂರಿನ (Bengaluru) ಪುಲಿಕೇಶಿನಗರದಲ್ಲಿ ಸುಮಾರು ಎಂಟು ಮಂದಿ ಸೇರಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪ್ರಜೆಗಳೆಂದು ಹೇಳಲಾದವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯ ಗೃಹ ಸಚಿವರ ರಾಜೀನಾಮೆಗೆ ಆಗ್ರಹ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಎಸ್. ಹರೀಶ್, ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಸರ್ಕಾರಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಅವರು ದೂರಿದ್ದಾರೆ. ಪುಲಿಕೇಶಿನಗರ ಕ್ಷೇತ್ರದ 10 ಮತಗಟ್ಟೆಗಳಲ್ಲಿ ಎಸ್‌ಐಆರ್ ಕಾರ್ಯದ ಮೇಲ್ವಿಚಾರಣೆ ಮಾಡುತ್ತಿದ್ದ ಸೂಪರಿಂಟೆಂಡೆಂಟ್ ಹುದ್ದೆಯ ಅಧಿಕಾರಿ ಫಕೀರಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದರೂ, ಹಲ್ಲೆಯಲ್ಲಿ ಭಾಗಿಯಾಗಿದ್ದ ಇನ್ನೂ ಹಲವರನ್ನು ಬಂಧಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ, ಬಾಂಗ್ಲಾದೇಶದಿಂದ ಬಂದವರ ಪೋಷಣೆ: ಕುಮಾರಸ್ವಾಮಿ ಗಂಭೀರ ಆರೋಪ

ಫಕೀರಪ್ಪ ಅವರನ್ನು ರಸ್ತೆಯಲ್ಲಿ ಎಳೆದಾಡಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪ್ರಜೆಗಳೆಂದು ಹೇಳಲಾದವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಒತ್ತಡ ಹೇರಲಾಗಿತ್ತು. ಆದರೆ, ಅವರು ಇವರು ಅಕ್ರಮ ನುಸುಳುಕೋರರು. ಅಗತ್ಯ ದಾಖಲೆಗಳಿಲ್ಲದ ಕಾರಣ ಹೆಸರು ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರಿಂದಲೇ ಸುಮಾರು ಏಳು-ಎಂಟು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಫಕೀರಪ್ಪ ಅವರ ಹಲ್ಲುಗಳಿಗೆ ಹಾನಿಯಾಗಿದ್ದು, ತುಟಿಗಳಿಗೆ ಗಾಯಗಳಾಗಿವೆ. ಅವರು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಬಗ್ಗೆ ಮಾತನಾಡಲೂ ಹೆದರುತ್ತಿದ್ದಾರೆ ಎಂದು ಅವರು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:41 pm, Thu, 30 July 26

Source link

Exit mobile version