ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿಕೆ ಶಿವಕುಮಾರ್ – Kannada News | CM DK Shivakumar Calls All Party Meeting On August 2 Over Cauvery water issue

ಬೆಂಗಳೂರು, (ಜುಲೈ 30): ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಮುಂದಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾನೂನು ಹಾಗೂ ರಾಜಕೀಯ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಸಿಎಂ ಡಿಕೆ ಶಿವಕುಮಾರ್ ಅವರು ಸರ್ವಪಕ್ಷಗಳ ಸಭೆ (All-Party Meeting) ಕರೆದಿದ್ದಾರೆ. ಆಗಸ್ಟ್ 2ರ ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸರ್ವಪಕ್ಷ ಸಭೆ ಕರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯುವಕರ ಕಲ್ಯಾಣಕ್ಕೆ ಸರ್ಕಾರ ಬದ್ಧ: ರಾಜ್ಯಸಭೆಯಲ್ಲೂ ಮಂಡನೆಯಾಯ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ – Kannada News | Rajya Sabha Debates Exam Fraud Bill 2026: New Law to End Paper Leaks and Protect Youth

ನವದೆಹಲಿ, ಜುಲೈ 30: ಲೋಕಸಭೆಯಲ್ಲಿ ಅಂಗೀಕಾರಗೊಂಡ ಬೆನ್ನಲ್ಲೇ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆ(Rajya Sabha)ಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ಅನ್ನು ಮಂಡಿಸಿದ್ದಾರೆ. ಈ ಕಠಿಣ ಶಾಸನವು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ಹಾಗೂ ಯುವಜನರ ಹಿತಾಸಕ್ತಿ ಮತ್ತು ಭವಿಷ್ಯವನ್ನು ಕಾಯುವಲ್ಲಿ ಸರ್ಕಾರದ ಅತ್ಯುನ್ನತ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಹಿರಿಯರ ಹಾಗೂ ಪ್ರಬುದ್ಧರ ಸದನವಾದ ರಾಜ್ಯಸಭೆಯು ಧ್ವನಿ ಎತ್ತುವ ಮೂಲಕ ಇದನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಲೋಕಸಭೆಯಲ್ಲಿ ಸುಮಾರು 10 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆ ಹಾಗೂ ಪ್ರತಿಪಕ್ಷಗಳ ಅಡೆತಡೆಗಳ ನಡುವೆಯೂ ಮಸೂದೆ ಅಂಗೀಕಾರಗೊಂಡಿರುವುದನ್ನು ಸಿಂಗ್ ಉಲ್ಲೇಖಿಸಿದರು. ಪರೀಕ್ಷಾ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳಿಗೆ ವಿಶ್ವಾಸ ಮೂಡಿಸಲು ಈ ಹೊಸ ಕಾನೂನು ಸಹಕಾರಿಯಾಗಲಿದೆ ಎಂದರು.

ಪರೀಕ್ಷಾ ವಂಚನೆ ಹಾಗೂ ಪೇಪರ್ ಸೋರಿಕೆಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡ ವಿಧಿಸಲಾಗುವುದು. ಸಂಘಟಿತ ಪರೀಕ್ಷಾ ಮಾಫಿಯಾ ಅಥವಾ ಗ್ಯಾಂಗ್‌ಗಳಿಗೆ ಕನಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ.ವರೆಗೆ ಭಾರಿ ದಂಡ ವಿಧಿಸಲು ತಿದ್ದುಪಡಿಯಲ್ಲಿ ಅವಕಾಶವಿದೆ. ಪೇಪರ್ ಸೋರಿಕೆ ತನಿಖೆಯನ್ನು ಕೇವಲ 2 ತಿಂಗಳೊಳಗೆ ಪೂರ್ಣಗೊಳಿಸಬೇಕು.

ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ

ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ದಿನನಿತ್ಯದ ಆಧಾರದಲ್ಲಿ ವಿಚಾರಣೆ ಮುಗಿಸಿ ತೀರ್ಪು ನೀಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ತನಿಖೆಗಾಗಿ ಕೇಂದ್ರ ಸರ್ಕಾರವೇ ಪ್ರತ್ಯೇಕ ‘ವಿಶೇಷ ಕಾರ್ಯಪಡೆ’ (STF) ರಚಿಸಬಹುದಾಗಿದೆ. ಜುಲೈ 20 ರಂದು ಜಂತರ್ ಮಂತರ್ ಬಳಿ ‘ಸಂಸತ್ ಚಲೋ’ ನಡೆಸಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪೆಲೆಟ್ ಗನ್ ಬಳಸಲು ಆದೇಶಿಸಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಭಾರಿ ಗದ್ದಲ ಏರ್ಪಟ್ಟಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮದರ್ ಪ್ರಾಮಿಸ್’ ಬಳಿಕ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ರಿಲೀಸ್​​ಗೆ ರೆಡಿ ಆದ ಡಾಲಿ ಧನಂಜಯ್ – Kannada News | Dhananjaya Starrer Anna From Mexico To Release On December 24; Badava Rascal Combo Is Back

ನಟ ಡಾಲಿ ಧನಂಜಯ್ (Daali Dhananjay) ನಟಿಸಿ, ನಿರ್ಮಿಸಿರೋ ‘ಮದರ್ ಪ್ರಾಮಿಸ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಈ ಚಿತ್ರದ ಗೆಲುವಿನ ಬಳಿಕ ಅವರು ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ಬಿಡುಗಡೆಗೆ ರೆಡಿ ಆಗಿದ್ದಾರೆ. ಈ ಚಿತ್ರದ ದಿನಾಂಕ ಅಧಿಕೃತವಾಗಿ ಹೊರಬಿದ್ದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಾಲು ಸಾಲು ರಜಾದಿನಗಳ ಲಾಭ ಪಡೆಯಲು ಈ ಸಿನಿಮಾ ಡಿಸೆಂಬರ್ 24ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ. ವರ್ಷಾಂತ್ಯಕ್ಕೆ ಭರ್ಜರಿ ಮನರಂಜನೆಯ ಧಮಾಕಾ ನೀಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮತ್ತೆ ಒಂದಾಯಿತು ‘ಬಡವ ರಾಸ್ಕಲ್’ ಕಾಂಬಿನೇಷನ್

‘ಅಣ್ಣ ಫ್ರಮ್‌ ಮೆಕ್ಸಿಕೋ’ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. 2021ರ ಡಿಸೆಂಬರ್‌ನಲ್ಲಿ ‘ಬಡವ ರಾಸ್ಕಲ್’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಸೂಪರ್ ಹಿಟ್ ಆಗಿತ್ತು. ಧನಂಜಯ್ ಅವರಿಗೆ ನಿರ್ಮಾಪಕರಾಗಿ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು ಈ ಸಿನಿಮಾ. ಈ ಚಿತ್ರದ ಡೈರೆಕ್ಟರ್ ಶಂಕರ್ ಗುರು, ಈಗ ಎರಡನೇ ಬಾರಿಗೆ ಡಾಲಿಗೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ಡಿಸೆಂಬರ್ ತಿಂಗಳ ಸೆಂಟಿಮೆಂಟ್‌ನೊಂದಿಗೆ ಈ ಹಿಟ್ ಜೋಡಿ ಕಂಬ್ಯಾಕ್ ಮಾಡುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ

ಪಕ್ಕಾ ಕಮರ್ಷಿಯಲ್ ಮತ್ತು ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧನಂಜಯ್ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಮೊದಲಾದವರು ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಲೂಸ್ ಮಾದ ಯೋಗಿ ಅವರು ಈ ಚಿತ್ರದಲ್ಲಿ ಅತ್ಯಂತ ವಿಶೇಷ ಹಾಗೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್ ಹೀಗೆ ಹೇಳಿದ್ದೇಕೆ?

ವಾಸುಕಿ ವೈಭವ್ ಮ್ಯೂಸಿಕ್ ಮ್ಯಾಜಿಕ್

ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್‌ನಡಿ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೇಲೆ ಈಗಾಗಲೇ ಭಾರಿ ಹೈಪ್ ಸೃಷ್ಟಿಯಾಗಿದೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ಅಜಯ್ ಅವರ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಡಿಸೆಂಬರ್ 24ರ ಗ್ರ್ಯಾಂಡ್ ರಿಲೀಸ್‌ಗೆ ಕೌಂಟ್‌ಡೌನ್ ಶುರು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ: 6 ಜನರ ವಿರುದ್ಧ FIR – Kannada News | Attack Attempt on Bovi Community Seer by Community Leaders; FIR Registered Against Six

ಚಿಕ್ಕಮಗಳೂರು, ಜುಲೈ 30: ಜಿಲ್ಲೆಯ ಕಡೂರು ಪಟ್ಟಣದ ಐಬಿಯಲ್ಲಿ ನಡೆದ ಗಲಾಟೆ ವೇಳೆ ಬೋವಿ ಸಮುದಾಯದ ಗಂಗಾಧರ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯ ಅವಧೂತ ಮಠದ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ಸಂಬಂಧ ಬೋವಿ ಸಮಾಜದ ಅಧ್ಯಕ್ಷ ಸೇರಿದಂತೆ 6 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಸ್ವಾಮೀಜಿ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮ ನಿಮಿತ್ತ ಕಡೂರಿಗೆ ಬಂದಿದ್ದರು ಎನ್ನಲಾಗಿದೆ. ಗಂಗಾಧರ್ ಸ್ವಾಮೀಜಿ ಕಡೂರು ಪಟ್ಟಣದ ಐಬಿಯಲ್ಲಿ ಇದ್ದಾಗ ಗಲಾಟೆ ನಡೆದಿದ್ದು, ಬೋವಿ ಸಮಾಜದ ಅಧ್ಯಕ್ಷ ಕೊಲ್ಲಾಬೋವಿ, ನಾಗರಾಜ್, ತಿಮ್ಮಪ್ಪ, ಅಶೋಕ್, ರಮೇಶ್ ಸೇರಿದಂತೆ 6 ಜನರ ವಿರುದ್ಧ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Nitin Gadkari on E20 Fuel: ಇ20 ಪೆಟ್ರೋಲ್ ಹಳೆಯ BS-III ವಾಹನಗಳ ರಬ್ಬರ್ ಭಾಗಗಳಿಗೆ ಹಾನಿ ಮಾಡಬಹುದು:ನಿತಿನ್ ಗಡ್ಕರಿ – Kannada News | Gadkari Clarifies E20 Impact, Says Older BS III Vehicles May Need Minor Rubber Part Replacement

ನವದೆಹಲಿ, ಜುಲೈ 30: 2016ಕ್ಕಿಂತ ಮೊದಲು ತಯಾರಾದ ಹಳೆಯ ಬಿಎಸ್-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಇ20 ಪೆಟ್ರೋಲ್‌(E20 Petrol)ನಲ್ಲಿ ಚಲಾಯಿಸುವಾಗ ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಏಪ್ರಿಲ್ 1, 2005 ರಿಂದ ಜಾರಿಗೆ ಬಂದು, 2016 ಕ್ಕಿಂತ ಮೊದಲು ತಯಾರಾದ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಇ20 ಇಂಧನ ಬಳಸುವಾಗ, ಅವುಗಳ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.

ಜಂಟಿ ಸಂಶೋಧನೆ ಮತ್ತು ಸರ್ಕಾರದ ಸಮರ್ಥನೆ
IOCL, IIP ಡೆಹ್ರಾಡೂನ್, SIAM ಮತ್ತು ARAI ಸಂಸ್ಥೆಗಳು ಜಂಟಿಯಾಗಿ ನಡೆಸಿದ ಪರೀಕ್ಷೆಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಂಜಿನ್ ಬದಲಾಯಿಸುವ ಅಗತ್ಯ ಕಂಡುಬಂದಿಲ್ಲ. ಮೈಲೇಜ್ ಕೇವಲ ಇಂಧನವನ್ನು ಮಾತ್ರವೇ ಆಧರಿಸಿಲ್ಲ, ಬದಲಿಗೆ ವಾಹನದ ನಿರ್ವಹಣೆ, ರಸ್ತೆಯ ಸ್ಥಿತಿ ಮತ್ತು ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ ಎಂದು ಆಟೋಮೊಬೈಲ್ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಗಡ್ಕರಿ ತಿಳಿಸಿದ್ದಾರೆ. BS-III ವಾಹನಗಳ ರಬ್ಬರ್ ಗ್ಯಾಸ್ಕೆಟ್‌ಗಳನ್ನು ಸಾಮಾನ್ಯ ವಾಹನ ಸರ್ವೀಸ್ ವೇಳೆ ಸುಲಭವಾಗಿ ಬದಲಾಯಿಸಬಹುದು ಎಂದು ಸಚಿವರು ವಿವರಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಭಾರಿ ಆರೋಪ
ಇ20 ಪೆಟ್ರೋಲ್ ಜಾರಿಯನ್ನು ತೀವ್ರವಾಗಿ ವಿರೋಧಿಸಿರುವ ಆಮ್ ಆದ್ಮಿ ಪಾರ್ಟಿ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರ ಮತ್ತು ವಾಹನ ತಯಾರಕರ ವಿರುದ್ಧ ಸಮರ ಸಾರಿದ್ದಾರೆ. 2023 ಕ್ಕಿಂತ ಮೊದಲು ತಯಾರಾದ ವಾಹನಗಳಲ್ಲಿ E20 ಬಳಸುವುದು ಸುರಕ್ಷಿತವೇ ಎಂದು ಸ್ಪಷ್ಟಪಡಿಸುವಂತೆ 29 ವಾಹನ ತಯಾರಕ ಕಂಪನಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಕೇಜ್ರಿವಾಲ್, ಕೇಂದ್ರದ ಒತ್ತಡದಿಂದಾಗಿ ಯಾವುದೇ ಕಂಪನಿ ಲಿಖಿತ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.

2023ಕ್ಕಿಂತ ಮುಂಚಿನ ಸುಮಾರು 22 ಕೋಟಿ ಬೈಕ್‌ಗಳು ಹಾಗೂ ೮ ಕೋಟಿ ಕಾರುಗಳು ಸೇರಿದಂತೆ ಒಟ್ಟು 30 ಕೋಟಿ ವಾಹನಗಳ ಎಂಜಿನ್ ಹಾಗೂ ಮೈಲೇಜ್ ಮೇಲೆ E20 ಪರಿಣಾಮ ಬೀರಲಿದೆ ಎಂದು 9 ಕಂಪನಿಗಳ ಅಧಿಕಾರಿಗಳು ಫೋನ್ ಮೂಲಕ ತಮಗೆ ಒಪ್ಪಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುತ್ತಿದ್ದು, ವಾಹನ ಹಾಳಾದರೆ ಗ್ರಾಹಕರಿಗೆ ಪರಿಹಾರ ನೀಡಲು ಕಂಪನಿಗಳು ನಿರಾಕರಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕಚ್ಚಾ ತೈಲ ಆಮದು ವೆಚ್ಚ ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ.

ಮತ್ತಷ್ಟು ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ

ಆದರೆ, ಹಳೆಯ ವಾಹನ ಮಾಲೀಕರಿಗೆ ಜಾಗೃತಿ ಮತ್ತು ಸೂಕ್ತ ತಾಂತ್ರಿಕ ಬೆಂಬಲ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಏಪ್ರಿಲ್ 1, 2005 ರಿಂದ ಪರಿಚಯಿಸಲ್ಪಟ್ಟ ಮತ್ತು 2016 ಕ್ಕಿಂತ ಮೊದಲು ತಯಾರಿಸಲಾದ BS-III ವಾಹನಗಳಲ್ಲಿ ಪರೀಕ್ಷೆಯನ್ನು ನಡೆಸಿದಾಗ ಮಾತ್ರ, ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯವಿರಬಹುದು, ಇದನ್ನು ವಾಹನದ ನಿಯಮಿತ ಸೇವಾ ಆಡಳಿತದ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಭಾರತದ ಇ20 ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಸುತ್ತಲಿನ ತಪ್ಪು ಮಾಹಿತಿ ಎಂದು ಕರೆದಿದ್ದಕ್ಕೆ ಸರ್ಕಾರವು ತಿರುಗೇಟು ನೀಡಿದ್ದು, ಎಂಜಿನ್ ಹಾನಿ, ನೀರಿನ ಬಳಕೆ, ವಾಹನ ಖಾತರಿಗಳು, ಇಂಧನ ದಕ್ಷತೆ ಮತ್ತು ಪರಿಸರದ ಮೇಲಿನ ಪರಿಣಾಮದ ಬಗ್ಗೆ ವಿವರವಾದ 10 ಅಂಶಗಳ ಸ್ಪಷ್ಟೀಕರಣವನ್ನು ನೀಡಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಛೀ, ನಾಚಿಕೆಗೇಡು’: ಕಂಗನಾ ಹೇಳಿಕೆಗೆ ಸೋನು ಸೂದ್ ತಿರುಗೇಟು – Kannada News | Sonu Sood criticized Kangana Ranaut’s statement about Gen Z

ಕಂಗನಾ ರನೌತ್ (Kangana Ranaut), ಮೊದಲಿನಿಂದಲೂ ಬಿಜೆಪಿಯನ್ನು ಕೇಂದ್ರ ಸರ್ಕಾರವನ್ನು ಯಾವುದೇ ವಿಷಯದಲ್ಲಾಗಲಿ ಬೆಂಬಲಿಸುತ್ತಲೇ ಬಂದಿದ್ದಾರೆ. ಹಿಂದೆ ರೈತ ಹೋರಾಟ ನಡೆದಾಗ, ಸರ್ಕಾರದ ವಿರುದ್ಧ ಹೋರಾಡಿದ ರೈತರನ್ನು ಭಯೋತ್ಪಾದಕರು ಎಂದಿದ್ದರು, ವೃದ್ಧ ರೈತ ಮಹಿಳೆಯನ್ನು ವೇಶ್ಯಗೆ ಸಹ ಹೋಲಿಸಿ ಟ್ವೀಟ್ ಮಾಡಿದ್ದರು. ಆ ಸಮಯದಲ್ಲಿ ಕಂಗನಾ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಈಗ ಜೆನ್-ಜಿಗಳು ಸರ್ಕಾರದ ವಿರುದ್ಧ ಬೀದಿಗಿಳಿದಾಗಲೂ ಸಹ ಕಂಗನಾ ಮತ್ತೊಮ್ಮೆ ತಮ್ಮ ಹರಿತವಾದ ನಾಲಗೆ ಹರಿಬಿಟ್ಟಿದ್ದು, ‘ಜೆನ್-ಜಿ’ ಅನ್ನು ‘ಜನರೇಷನ್ ಗಟರ್’ ಎಂದಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕವಾಗಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿದೆ. ಇದೀಗ, ನಟ, ಸಮಾಜ ಸೇವಕ ಸೋನು ಸೂದ್, ಕಂಗನಾರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಸೋನು ಸೂದ್, ‘ನಾನು ಅವರ ಹೇಳಿಕೆಯನ್ನು ಕೇಳಿಲ್ಲ. ಆದರೆ ಈ ಯುವಕರೇ ನಟರನ್ನು ಸೃಷ್ಟಿಸುವವರು ಮತ್ತು ನೀವಿರುವ ಸ್ಥಾನಕ್ಕೆ ತಲುಪಲು ಸಹಾಯ ಮಾಡುವವರು ಅವರೇ. ಅವರು ನಿಮ್ಮ ಬೆಂಬಲಕ್ಕೆ ನಿಂತಿರುವವರೆಗೆ ನೀವು ಅಭಿವೃದ್ಧಿ ಹೊಂದುತ್ತೀರಿ. ಅವರು ನಿಮ್ಮೊಂದಿಗೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಎಲ್ಲರನ್ನೂ ಜತೆಗೂಡಿಸಿಕೊಂಡು ಹೋಗಬೇಕು’ ಎಂದಿದ್ದಾರೆ.

ಕಂಗನಾ ಅವರು ಜೆನ್-ಜಿ ಅನ್ನು ‘ಜನರೇಷನ್ ಗಟರ್’ ಎಂದು ಕರೆದಿರುವ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ, ಸೋನು, ಅವರು ಹಾಗೆ ಹೇಳಿದ್ದರೆ, ಅದು ತುಂಬಾ ಅವಮಾನಕರ ಎಂದು ನಾನು ಭಾವಿಸುತ್ತೇನೆ. ಅದನ್ನು ಹೇಳಬಾರದಿತ್ತು, ಮಾತನಾಡುವ ಮೊದಲು ನಿಮ್ಮ ಪದಗಳನ್ನು ತೂಗಿಕೊಳ್ಳಿ ಎಂಬ ಮಾತಿದೆ. ಸಾರ್ವಜನಿಕರು ದೇವರ ಮತ್ತೊಂದು ರೂಪವಾಗಿರುವುದರಿಂದ ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ. ಈ ಹೇಳಿಕೆ ನಾಚಿಕೆಗೇಡಿನ ಸಂಗತಿ’ ಎಂದರು.

ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

ಅಂದಹಾಗೆ ಸೋನು ಸೂದ್ ಮತ್ತು ಕಂಗನಾ ರನೌತ್ ನಡುವೆ ಹಲವು ವರ್ಷಗಳಿಂದಲೂ ಮುನಿಸು ಚಾಲ್ತಿಯಲ್ಲಿದೆ. ಸೋನು ಸೂದ್ ಅವರು ಕಂಗನಾ ನಟನೆಯ ‘ಮಣಿಕರ್ಣಿಕಾ’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಸೋನು ಸೂದ್ ಜೊತೆ ವಿನಾಕಾರಣ ವಿವಾದ ಮಾಡಿಕೊಂಡಿದ್ದ ಕಂಗನಾ, ಸೋನು ಸೂದ್​​ರನ್ನು ಹೇಳದೆ ಕೇಳದೆ ಸಿನಿಮಾದಿಂದ ತೆಗೆದಿದ್ದು ಮಾತ್ರವಲ್ಲದೆ, ಅವರು ನಟಿಸಿದ್ದ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಿದರು. ಮಾಧ್ಯಮಗಳ ಮುಂದೆ ಸಹ ಸೋನು ಸೂದ್ ಬಗ್ಗೆ ಕೆಟ್ಟದಾಗಿ, ಅವಮಾನಕರ ರೀತಿಯಲ್ಲಿ ಮಾತನಾಡಿದ್ದರು. ಆಗಿನಿಂದ ಈ ಇಬ್ಬರೂ ಒಟ್ಟಿಗೆ ಕೆಲಸ ಮಾಡಿಲ್ಲ.

ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಯುವಕರನ್ನು ಟೀಕೆ ಮಾಡಿದ್ದ ಕಂಗನಾ, ಅವರನ್ನು ‘ಜನರೇಷನ್ ಗಟರ್’ ಎಂದು ಕರೆದಿದ್ದರು, ಈ ಜನರೇಷನ ಪೋಷಕರ ಆರ್ಥಿಕತೆಯ ಮೇಲೆ ಅವಲಂಬಿತರಾಗಿರುತ್ತಾರೆ, ಮಾದಕದ್ರವ್ಯ, ಪಾನೀಯಗಳು ಅಥವಾ ಲೈಂಗಿಕತೆ ಇಷ್ಟೇ ಅವರಿಗೆ ಬೇಕಾಗಿರುವುದು’ ಎಂದು ಕೀಳಾಗಿ ಮಾತನಾಡಿದ್ದರು. ಇದೀಗ ಕಂಗನಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಬಸ್ ಮಾಜಿ ಚಾಲಕನ ಮಾಜಿ ಮನೆಯಲ್ಲಿನ ಖಜಾನೆ ಕಂಡು ಅಧಿಕಾರಿಗಳಿಗೆ ದಿಗ್ಭ್ರಮೆ: ಸಿಕ್ಕಿದ್ದು 28 ಕೋಟಿ ನಗದು, 15 ಕೆಜಿ ಚಿನ್ನ! – Kannada News | Massive Haul: Ex Bus Drivers Residence in Birbhum Yields Rs 28 Crore Cash and 15 kg Gold

ಕೋಲ್ಕತ್ತಾ, ಜುಲೈ 30: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಅಧಿಕಾರಿಗಳು 28 ಕೋಟಿ ರೂಪಾಯಿ ನಗದು ಮತ್ತು 21 ಕೋಟಿ ರೂಪಾಯಿ ಮೌಲ್ಯದ 15 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಗದು ಹಣ ಎಣಿಸಲು ಬಳಸಿದ ಐದು ಯಂತ್ರಗಳು ಕೆಟ್ಟುಹೋದವು ಎಂದು ವರದಿಯಾಗಿದೆ. ಈ ಹಣವನ್ನು 33 ಬ್ಯಾಗ್‌ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಈ ದಾಳಿ ಮತ್ತು ಎಣಿಕೆ ಪ್ರಕ್ರಿಯೆ ಕಳೆದ ಮಧ್ಯರಾತ್ರಿಯಿಂದ ಶುರುವಾಗಿತ್ತು. ಆರಂಭಿಕವಾಗಿ 5.5 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ತನಿಖೆ ಮುಂದುವರೆದಂತೆ ಸಂಪೂರ್ಣ 28 ಕೋಟಿ ರೂಪಾಯಿ ನಗದು ದೊರೆತಿದೆ ಎನ್ನಲಾಗಿದೆ. ಬಸ್ ಚಾಲಕನಾಗಿದ್ದ ಮಿನಾರ್ ಮಂಡಲ್ ನಂತರ ಕಲ್ಲು ಕ್ವಾರಿ ವ್ಯವಹಾರಿಯಾಗಿ ಬದಲಾಗಿದ್ದು, ಈ ಅಕ್ರಮ ಸಂಪತ್ತು ಕಲ್ಲು ಕ್ವಾರಿ ಮಾಲೀಕ ಟುಲು ಮಂಡಲ್ ಅವರಿಗೆ ಸೇರಿದ್ದಾಗಿರುವುದಾಗಿ ಮಿನಾರ್ ಮಂಡಲ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಟುಲು ಮಂಡಲ್ ಅವರು ಟಿಎಂಸಿ ನಾಯಕ ಅನಬ್ರತಾ ಮಂಡಲ್ ಅವರ ಆಪ್ತರಾಗಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

60 ವಿಕೆಟ್ ಪಡೆದಿದ್ದಾರೆ, ಕನಿಷ್ಠ ಪಕ್ಷ ಯಾಕೆ ಆಯ್ಕೆ ಮಾಡಿಲ್ಲ ಅಂತಾದ್ರು ಹೇಳಿ! – Kannada News | 60 Ranji Wickets, Still No Reason for Omission: Irfan Pathan Slams Selectors

ಭಾರತ ಮತ್ತು ಶ್ರೀಲಂಕಾ ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ, ಈ ತಂಡದಲ್ಲಿ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿಗೆ ಸ್ಥಾನ ನೀಡಲಾಗಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ನಬಿ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಶ್ನೆಗಳೆನ್ನೆತ್ತಿದ್ದಾರೆ.

ಇರ್ಫಾನ್ ಪಠಾಣ್ ಅಸಮಾಧಾನ:

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ನಿರ್ಧಾರದ ವಿರುದ್ಧ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್‌ಸ್ಟಾರ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶಿ ಕ್ರಿಕೆಟ್‌ನ ಪ್ರತಿಭೆಗಳನ್ನು ನಡೆಸಿಕೊಳ್ಳುವ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಆಖಿಬ್ ನಬಿ ಅವರನ್ನು ಆಯ್ಕೆ ಮಾಡದಿರುವುದಕ್ಕೆ ನನ್ನ ಬಳಿ ಯಾವುದೇ ತಾರ್ಕಿಕ ಉತ್ತರವಿಲ್ಲ. ಜನರು ಕೇವಲ ವೇಗದ ಬಗ್ಗೆ ಮಾತನಾಡುತ್ತಾರೆ, ಆದರೆ ಬೌಲರ್ ಹೇಗೆ ಬ್ಯಾಟರ್‌ಗಳನ್ನು ಕಂಗಾಲು ಮಾಡುತ್ತಿದ್ದಾನೆ ಎಂಬುದನ್ನು ನೋಡಬೇಕು. ದೇಶಿ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್‌ಗಳಿಗೆ ಅವರು ಸತತವಾಗಿ ಕಾಟ ನೀಡಿದ್ದಾರೆ.

ಅದರಲ್ಲೂ ಕಳೆದ ರಣಜಿ ಸೀಸನ್​ನಲ್ಲಿ ಬರೋಬ್ಬರಿ 60 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಆಖಿಬ್ ನಬಿ ಅವರನ್ನು ಆಯ್ಕೆ ಮಾಡಿಲ್ಲ. ಕನಿಷ್ಠ ಪಕ್ಷ ಯಾಕೆ ಆಯ್ಕೆ ಮಾಡಿಲ್ಲ ಅಂತಾದ್ರು ಹೇಳಿ ಎಂದು ಆಯ್ಕೆ ಸಮಿತಿ ವಿರುದ್ಧ ಇರ್ಫಾನ್ ಪಠಾಣ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಆಖಿಬ್ ನಬಿ ಯಾಕೆ ಆಯ್ಕೆಯಾಗಬೇಕಿತ್ತು?

  • ರಣಜಿ ಟೂರ್ನಿಯಲ್ಲಿ ಮಿಂಚಿಂಗ್: ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆಡುತ್ತಿರುವ ನಬಿ, ಕೇವಲ 10 ಪಂದ್ಯಗಳಲ್ಲಿ ಬರೋಬ್ಬರಿ 60 ವಿಕೆಟ್ ಪಡೆಯುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
  • 104 ವಿಕೆಟ್​ಗಳು: ಆಖಿಬ್ ನಬಿ ಕಳೆದ ಎರಡು ರಣಜಿ ಸೀಸನ್​ಗಳಲ್ಲಿ 18 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಪಡೆದಿರುವುದು ಬರೋಬ್ಬರಿ 104 ವಿಕೆಟ್​ಗಳು ಎಂದರೆ ನಂಬಲೇಬೇಕು.
  • ಫೈನಲ್ ಗೆಲುವಿನ ರೂವಾರಿ: ಜಮ್ಮು ಮತ್ತು ಕಾಶ್ಮೀರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಮುಕುಟ ಮುಡಿಗೇರಿಸಿಕೊಳ್ಳುವಲ್ಲಿ ನಬಿ ಮಹತ್ತರ ಪಾತ್ರ ವಹಿಸಿದ್ದರು. ಅದರಲ್ಲೂ ಕರ್ನಾಟಕ ವಿರುದ್ಧ ಫೈನಲ್​ನಲ್ಲಿ 6 ವಿಕೆಟ್ ಉರುಳಿಸಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಆಖಿಬ್ ನಬಿ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬೇಕೆಂದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ದಿಲೀಪ್ ವೆಂಗ್​ಸರ್ಕಾರ್, ಸಂಜಯ್ ಮಂಜ್ರೇಕರ್ ಸೇರಿದಂತೆ ಹಲವು ಮಾಜಿ ಆಟಗಾರರು ಆಗ್ರಹಿಸಿದ್ದರು. ಇದಾಗ್ಯೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ನಬಿಗೆ ಸ್ಥಾನ ನೀಡಲಾಗಿಲ್ಲ.

ಆಯ್ಕೆ ಸಮಿತಿಯ ದ್ವಂದ್ವ ನೀತಿ!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಬ್ರಾರ್ ಆಯ್ಕೆಗೆ ಮಾನದಂಡವೇನು ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ. ಏಕೆಂದರೆ ಕಳೆದ ರಣಜಿ ಸೀಸನ್​ನಲ್ಲಿ ಗುರ್ನೂರ್ ಬ್ರಾರ್ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಕೇವಲ 26 ಮಾತ್ರ.

ಅಂದರೆ ಇಲ್ಲಿ 60 ವಿಕೆಟ್ ಕಬಳಿಸಿದ ಆಖಿಬ್ ನಬಿ ಅವರನ್ನು ಕೈ ಬಿಟ್ಟು 26 ವಿಕೆಟ್ ಪಡೆದಿರುವ ಗುರ್ನೂರ್ ಬ್ರಾರ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಇದನ್ನೇ ಈಗ ಇರ್ಫಾನ್ ಪಠಾಣ್ ಸೇರಿದಂತೆ ಹಲವು ಕ್ರಿಕೆಟ್ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: 40 ವಿಕೆಟ್​​ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

Source link

ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ

ಮೈಸೂರು, ಜುಲೈ 30: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ವಿವೇಕ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನಕ್ಕೆ ಬರಲಿದ್ದಾರೆ. ಇದಕ್ಕಾಗಿ ಮೂರು ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದ್ದು, ಹೆಲಿಕಾಪ್ಟರ್ ಇಳಿಯುವಿಕೆಯ ಟ್ರಯಲ್ ರನ್‌ಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಎಸ್ಪಿಜಿ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರೊಂದಿಗೆ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಧಾನಿ ಸಂಚರಿಸುವ ಎಲ್ಲಾ ರಸ್ತೆಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಅಪ್ಪನಿಗೆ ನೀರು ಕೊಟ್ಟು ಹೋದ ಮಗಳು ಮಣ್ಣು ಪಾಲಾದಳು”: ನೆಲಮಂಗಲದಲ್ಲಿ ಮಗಳನ್ನು ಕಳೆದುಕೊಂಡ ತಂದೆಯ ಆಕ್ರಂದನ – Kannada News | Father Sreekanths Heart Wrenching Account After Daughter Likithas Death

ಬೆಂಗಳೂರು, ಜು.30: ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕಿ ಲಿಖಿತಾ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಲಿಖಿತಾ, ಪ್ರತಿದಿನದಂತೆ ತನ್ನ ದೊಡ್ಡಮ್ಮನ ಜೊತೆ ಶಾಲೆಗೆ ತೆರಳುತ್ತಿದ್ದಳು. ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಮಾರುತಿ ಶಿಫ್ಟ್ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ನೆಲಮಂಗಲದಿಂದ ಕುಣಿಗಲ್ ಕಡೆ ಸಾಗುತ್ತಿದ್ದ ಈ ಕಾರು ಅತಿ ವೇಗದಲ್ಲಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗಳು ಲಿಖಿತಾಳನ್ನು ಕಳೆದುಕೊಂಡ ಆಘಾತದಲ್ಲಿರುವ ತಂದೆ ಶ್ರೀಕಾಂತ್ ಅವರ ಆಳವಾದ ದುಃಖ ಮಾಧ್ಯಮದವರೊಂದಿಗೆ ಹಂಚಿಕೊಂಡಾಗ ಎಲ್ಲರ ಮನ ಕರಗಿದೆ. ಗಾರೆ ಕೆಲಸ ಮಾಡುವ ಶ್ರೀಕಾಂತ್, ತನ್ನ ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಯಾರ ಸಹಾಯವೂ ಇಲ್ಲದೆ, ಒಬ್ಬರ ಹತ್ತಿರ ಒಂದು ರೂಪಾಯಿ ಪಡೆಯದೆ ಅವರನ್ನು ಬೆಳೆಸಿದ್ದೇನೆ” ಎಂದು ಹೇಳಿದ್ದಾರೆ. ಇದರ ಜೊತೆಗೆ, ಶ್ರೀಕಾಂತ್ ಅವರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರ ಆರೈಕೆಯ ಜವಾಬ್ದಾರಿಯೂ ಶ್ರೀಕಾಂತ್ ಮೇಲಿದೆ. “ನಾನು ನನ್ನ ಅಮ್ಮನನ್ನು ನೋಡಿಕೊಳ್ಳಲು ವಾರಕ್ಕೆ ಒಂದೆರಡು ಬಾರಿ ಬರುತ್ತಿದ್ದೆ. ನನ್ನ ಮಕ್ಕಳನ್ನು ನೋಡಲು ಭಾನುವಾರ ಬಂದಿದ್ದೆ” ಎಂದು ಹೇಳಿದ್ದಾರೆ.ಶ್ರೀಕಾಂತ್ ತಮ್ಮ ಮಗಳೊಂದಿಗಿನ ಕೊನೆಯ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ.

ವರದಿ: ಮಂಜುನಾಥ್​​​​​​​​ ನೆಲಮಂಗಲ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version