ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ – Kannada News | India has to become product nation for economic growth, says industrialist Baba Kalyani
ಪುಣೆ, ಜನವರಿ 13: ಭಾರತದ ಆರ್ಥಿಕ ಬೆಳವಣಿಗೆಗೆ ಉತ್ಪಾದನಾ ಕ್ಷೇತ್ರದ (Manufacturing sector) ಕೊಡುಗೆ ಬಹಳ ಮುಖ್ಯ. ಭಾರತವು ಸೇವಾ ಕ್ಷೇತ್ರದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉತ್ಪಾದನಾ ಕ್ಷೇತ್ರಕ್ಕೆ ಗಮನ ಕೊಡಬೇಕು. ಭಾರತವು ಸೇವಾ ಮನೋಭಾವ ಬಿಟ್ಟು ಉತ್ಪಾದಕ ಮನೋಭಾವ ತಳೆಯಬೇಕು ಎಂದು ಭಾರತ್ ಫೋರ್ಜ್ ಕಂಪನಿಯ ಛೇರ್ಮನ್ ಮತ್ತು ಎಂಡಿಯಾದ ಬಾಬಾ ಕಲ್ಯಾಣಿ (Baba Kalyani) ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಪಬ್ಲಿಕ್ ಪಾಲಿಸಿ ಫೆಸ್ಟಿವಲ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬಾ…