ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ – Kannada News | Air India AI 171 crash probe nears Final Stage no fault found in fuel switch Government tells Parliament Session

ನವದೆಹಲಿ, ಜುಲೈ 29: ಕಳೆದ ವರ್ಷ ಭೀಕರವಾಗಿ ಪತನಗೊಂಡು 260 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಏರ್ ಇಂಡಿಯಾ ಎಐ-171 (Air India Crash) ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ದೋಷ ಅಥವಾ ಅಸಹಜತೆ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸಂಸತ್​​ಗೆ ತಿಳಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರ, ಏರ್ ಇಂಡಿಯಾ ಡ್ರೀಮ್​ಲೈನರ್ ವಿಮಾನದ ಮೂಲ ಉಪಕರಣ ತಯಾರಕರು ನಡೆಸಿದ ಸುಧಾರಿತ ತಾಂತ್ರಿಕ ತಪಾಸಣೆಯ ನಂತರ ಈ ವಿಷಯ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಅಮೆರಿಕದ ಸಿಯಾಟಲ್‌ನಲ್ಲಿ ಈ ವಿಮಾನದ ಸಂಪೂರ್ಣ ಥ್ರಸ್ಟ್ ನಿಯಂತ್ರಣ ಮಾಡ್ಯೂಲ್‌ನ ತಪಾಸಣೆ ನಡೆಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರದಿಂದ ಈ ಹೇಳಿಕೆ ಬಂದಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆಯು ತನ್ನ ಅಂತಿಮ ವರದಿ ನೀಡುವಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಬೃಹತ್ ವಿಮಾನ ಅಪಘಾತಗಳ ತನಿಖೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಎಐ-171 ವಿಮಾನದ ತನಿಖೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ, ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ, ಪೈಲಟ್ ತಂದೆಗೆ ಸುಪ್ರೀಂ ಸಾಂತ್ವನ

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೋಹೋಲ್, ಈ ವರ್ಷದ ಫೆಬ್ರವರಿಯಲ್ಲಿ ಈ ಮಾದರಿಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ ನಂತರ, ವಿಮಾನದ ಹಾರಾಟ ಯೋಗ್ಯತಾ ತಪಾಸಣೆಯ ಭಾಗವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ ಪರೀಕ್ಷೆಗಳಿಗೆ ಆದೇಶಿಸಿತ್ತು ಎಂದು ಹೇಳಿದರು.

ವಿಮಾನ ಪ್ರಯಾಣದ ವೇಳೆ ಇಂಧನ ಪೂರೈಕೆ ಅಥವಾ ನಿಯಂತ್ರಣ ಸ್ವಿಚ್‌ಗೆ ಸಂಬಂಧಿಸಿದಂತೆ ಎದುರಾಗಿದ್ದ ಶಂಕಿತ ತಾಂತ್ರಿಕ ಸಮಸ್ಯೆಯ ಕುರಿತು ಕೂಲಂಕುಷ ತನಿಖೆ ನಡೆಸಲಾಗಿತ್ತು. ಆದರೆ, ವಿಮಾನದ ಕಾಕ್‌ಪಿಟ್‌ನಲ್ಲಿರುವ ಈ ಸ್ವಿಚ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ವಿಮಾನದ ಬ್ಲ್ಯಾಕ್ ಬಾಕ್ಸ್, ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಡೇಟಾವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ವ್ಯವಸ್ಥೆಯ ವಿನ್ಯಾಸ ಅಥವಾ ಸ್ವಿಚ್‌ನ ಯಾಂತ್ರಿಕ ಕಾರ್ಯಾಚರಣೆಯಲ್ಲಿ ಯಾವುದೇ ದೋಷವಿಲ್ಲದಿರುವುದು ಸ್ಪಷ್ಟವಾಗಿದೆ. ತನಿಖೆಯ ಅಂತಿಮ ವರದಿಯನ್ನು ಶೀಘ್ರದಲ್ಲೇ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ

ಅಂತಿಮ ವರದಿ ಶೀಘ್ರದಲ್ಲೇ ಬಿಡುಗಡೆ:

260 ಜನರ ಸಾವಿಗೆ ಕಾರಣವಾಗಿದ್ದ 2025ರ ಜೂನ್​ನಲ್ಲಿ ನಡೆದ ಅಹಮದಾಬಾದ್ ಏರ್ ಇಂಡಿಯಾ ಎಐ-171 ವಿಮಾನ ಪತನದ ತನಿಖೆಯ ಅಂತಿಮ ವರದಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಈ ಮೊದಲು ತಿಳಿಸಿದ್ದರು. ಸರ್ಕಾರವು ತನಿಖಾ ಸಂಸ್ಥೆಗೆ (AAIB) ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಕೊಯಮತ್ತೂರು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ರಾಮ್ ಚರಣ್ ಭೇಟಿ – Kannada News | Peddi Movie actor Ram Charan visits Coimbatore Ayyappa Temple after Wrist Surgery

‘ಪೆದ್ದಿ’ (Peddi) ಸಿನಿಮಾದ ಚಿತ್ರೀಕರಣದ ವೇಳೆ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ಮಣಿಕಟ್ಟಿನ ಗಾಯ ಆಗಿತ್ತು. ಅದಕ್ಕಾಗಿ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆ (Wrist Surgery) ಮಾಡಿಸಿಕೊಂಡರು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಪತ್ನಿ ಉಪಾಸನಾ ಕೊನಿಡೇಲ ಅವರೊಂದಿಗೆ ಕೊಯಮತ್ತೂರಿನ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಕೈಗೆ ಸ್ಲಿಂಗ್ ಧರಿಸಿಕೊಂಡೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ರಾಮ್ ಚರಣ್ (Ram Charan) ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬುಧವಾರ (ಜುಲೈ 29) ವೈರಲ್ ಆದ ಫೋಟೋಗಳಲ್ಲಿ, ರಾಮ್ ಚರಣ್ ಕಪ್ಪು ಶರ್ಟ್, ಪಂಚೆ ಹಾಗೂ ಅಯ್ಯಪ್ಪ ಮಾಲೆಯನ್ನು ಧರಿಸಿ ದೇವರ ದರ್ಶನ ಪಡೆಯುತ್ತಿರುವುದು ಕಂಡುಬಂದಿದೆ. ಅವರ ಪತ್ನಿ ಉಪಾಸನಾ ನೀಲಿ ಬಣ್ಣದ ಕುರ್ತಾ ಧರಿಸಿದ್ದು, ದೇವಾಲಯದ ಗೋಶಾಲೆಯಲ್ಲಿ ಹಸುಗಳಿಗೆ ಮೇವು ನೀಡುತ್ತಿರುವುದು ಕಂಡುಬಂದಿದೆ. ದೇವಾಲಯದ ಪ್ರಾಂಗಣದಲ್ಲಿ ರಾಮ್ ಚರಣ್ ಅವರನ್ನು ಕಂಡ ಅಭಿಮಾನಿಗಳು ಹಾಗೂ ಭಕ್ತರು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಇದೇ ವೇಳೆ ರಾಮ್ ಚರಣ್ ಅವರು ದೇವಾಲಯದ ಅರ್ಚಕರು ಮತ್ತು ಆಡಳಿತ ಮಂಡಳಿ ಜೊತೆ ಸೌಹಾರ್ದಯುತವಾಗಿ ಸಂವಾದ ನಡೆಸಿದರು.

ಆಸ್ಪತ್ರೆಯಿಂದಲೇ ಗೆಲುವಿನ ನಗೆ:

ಇದಕ್ಕೂ ಮುನ್ನ, ಆಸ್ಪತ್ರೆಯ ಮಂಚದ ಮೇಲೆ ಕೈಗೆ ಬ್ಯಾಂಡೇಜ್ ಹಾಕಿಕೊಂಡು ರಾಮ್ ಚರಣ್ ನಗೆಬೀರುತ್ತಿರುವ ಫೋಟೋವನ್ನು ನಿರ್ಮಾಪಕ ಬನ್ನಿ ವಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ‘ನಮ್ಮ ಪ್ರೀತಿಯ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ನಮ್ಮ ಪ್ರಾರ್ಥನೆಗಳು ನಿಮ್ಮೊಂದಿಗಿವೆ. ಬೇಗ ಗುಣಮುಖರಾಗಿ ಮತ್ತೆ ಆ್ಯಕ್ಷನ್‌ಗೆ ಮರಳಿ’ ಎಂದು ಬರೆದುಕೊಂಡಿದ್ದರು.

‘ಪೆದ್ದಿ’ ಚಿತ್ರತಂಡದ ಶ್ಲಾಘನೆ:

ರಾಮ್ ಚರಣ್ ಅವರ ಆರೋಗ್ಯದ ಕುರಿತು ‘ಪೆದ್ದಿ’ ಚಿತ್ರದ ನಿರ್ಮಾಣ ಸಂಸ್ಥೆಯಾದ ‘ವೃದ್ಧಿ ಸಿನಿಮಾಸ್’ ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಪೆದ್ದಿ ಚಿತ್ರೀಕರಣದ ವೇಳೆ ಮಣಿಕಟ್ಟಿಗೆ ಗಾಯವಾಗಿದ್ದರೂ, ತೀವ್ರ ನೋವಿನ ನಡುವೆಯೂ ರಾಮ್ ಚರಣ್ ಅವರು ಅದ್ಭುತ ಸಮರ್ಪಣಾ ಮನೋಭಾವದಿಂದ ಚಿತ್ರದ ಪ್ರಮುಖ ದೃಶ್ಯಗಳ ಶೂಟಿಂಗ್ ಪೂರ್ಣಗೊಳಿಸಿದ್ದರು. ಅವರ ಈ ವೃತ್ತಿಪರತೆ ಇಡೀ ತಂಡಕ್ಕೆ ಪ್ರೇರಣೆಯಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಶೀಘ್ರದಲ್ಲೇ ಪೂರ್ಣ ಆರೋಗ್ಯದೊಂದಿಗೆ ಮರಳಲಿದ್ದಾರೆ’ ಎಂದು ತಿಳಿಸಿದೆ.

ಇದನ್ನೂ ಓದಿ: ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; 8 ವಾರ ವಿಶ್ರಾಂತಿ ಕಡ್ಡಾಯ

ತಜ್ಞ ವೈದ್ಯರಿಂದ ಶಸ್ತ್ರಚಿಕಿತ್ಸೆ:

ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ರಾಮ್ ಚರಣ್ ಅವರ ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ನಡೆದಿದೆ. ಗಾಯದ ಗಂಭೀರತೆಯನ್ನು ಪರಿಗಣಿಸಿ, ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ಎಸ್. ರಾಜಶೇಖರನ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಯಿತು. ಅಮೆರಿಕದ ಮಿಯಾಮಿಯಿಂದ ಆಗಮಿಸಿದ್ದ ತಜ್ಞ ವೈದ್ಯ ಡಾ. ಅಲೆಜಾಂಡ್ರೊ ಬ್ಯಾಡಿಯಾ ಕೂಡ ಈ ಶಸ್ತ್ರಚಿಕಿತ್ಸಾ ತಂಡದಲ್ಲಿ ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು? – Kannada News | Hair Virus Scam: Women Tricked into Shaving Heads for Fake Government Funds in Salem

ಸೇಲಂ, ಜುಲೈ 29: ಹೊಸ ಸಾಂಕ್ರಾಮಿಕ ರೋಗವೊಂದರ ತಪ್ಪು ಮಾಹಿತಿ ನೀಡಿ, ಸರ್ಕಾರದ ಉಚಿತ ಯೋಜನೆಯ ನೆಪದಲ್ಲಿ ಮಹಿಳೆಯರಿಗೆ ತಲೆ ಬೋಳಿಸಿಕೊಳ್ಳುವಂತೆ ಮಾಡಿ ವಂಚಿಸಿರುವ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಉಚಿತ ಹಣ ಮತ್ತು ಲ್ಯಾಪ್‌ಟಾಪ್ ಆಮಿಷ ಒಡ್ಡಿ ಈ ವಿಚಿತ್ರ ವಂಚನೆ ಎಸಗಿದ್ದಾನೆ.

ಗ್ರಾಮದ ಮಹಿಳೆಯೊಬ್ಬರಿಗೆ ಫೋನ್ ಮಾಡಿದ ವಂಚಕ, ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಕುಟುಂಬದ ವಿವರಗಳನ್ನು ಸರಿಯಾಗಿ ಹೇಳುವ ಮೂಲಕ ಅವರ ನಂಬಿಕೆ ಗಳಿಸಿದ್ದಾನೆ. ಕೋವಿಡ್-19 ರಂತೆಯೇ ಮಾನವನ ಕೂದಲಿನ ಮೂಲಕ ಹೊಸ ಅಪಾಯಕಾರಿ ರೋಗ ಹರಡುತ್ತಿದೆ. ಇದನ್ನು ತಡೆಯಲು ವಿದೇಶಗಳಲ್ಲಿಯೂ ಜನರು ತಲೆ ಬೋಳಿಸಿಕೊಳ್ಳುತ್ತಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಅಷ್ಟೇ ಅಲ್ಲದೆ ತಲೆ ಬೋಳಿಸಿಕೊಂಡ ಮಹಿಳೆಯರಿಗೆ 15 ಸಾವಿರ ರೂ., ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್​ಟಾಪ್ ಜತೆಗೆ 45 ಸಾವಿರ ರೂ. ಪುಟುಷರಿಗೆ 6 ಸಾವಿರ ರೂ. ನೀಡಲಾಗುವುದು ಎಂದು ನಂಬಿಸಿದ್ದಾನೆ.ಮರುದಿನ ಮಧ್ಯಾಹ್ನದೊಳಗೆ ಉಚಿತ ಹಣ ವಿತರಿಸಲು ಅಧಿಕಾರಿಗಳು ಬರಲಿದ್ದಾರೆ, ಅದಕ್ಕೂ ಮುನ್ನವೇ ತಲೆ ಬೋಳಿಸಿಕೊಂಡವರಿಗೆ ಮಾತ್ರ ಹಣ ಸಿಗಲಿದೆ ಎಂದು ಅವಸರಗೊಳಿಸಿದ್ದಾನೆ.

ಮತ್ತಷ್ಟು ಓದಿ: ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ, MLC ಸ್ಥಾನ ಕೊಡಿಸ್ತೇನೆಂದವನಿಗೆ ₹1.50 ಕೋಟಿ ಕೊಟ್ಟು ಕೈಸುಟ್ಟುಕೊಂಡ ಮಹಿಳೆ!

ವಂಚಕನ ಮಾತನ್ನು ನಂಬಿದ ಗ್ರಾಮದ ಸುಮಾರು 20 ಜನರು ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಮೂವರು ಮಹಿಳೆಯರು ತಕ್ಷಣವೇ ಮುಂಚೂಣಿಗೆ ಬಂದು ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ.

ಬಳಿಕ ಹಣದ ಪಾವತಿಗಾಗಿ ಕರೆ ಮಾಡಿದಾಗ ವಂಚಕನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಅರಿವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ತಲೆ ಬೋಳಿಸಿಕೊಳ್ಳಲು ಕಾಯುತ್ತಿದ್ದ ಇತರ ಗ್ರಾಮಸ್ಥರು ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಸದ್ಯ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಂಚಕರು ಕೇವಲ ಬ್ಯಾಂಕ್ ಓಟಿಪಿ (OTP) ಕೇಳುವುದು ಮಾತ್ರವಲ್ಲದೆ, ಇಂತಹ ಭಯ ಹುಟ್ಟಿಸುವ ಸುಳ್ಳು ಸುದ್ದಿಗಳು ಹಾಗೂ ‘ಡಿಜಿಟಲ್ ಅರೆಸ್ಟ್’ ನಂತಹ ಹೊಸ ತಂತ್ರಗಳನ್ನು ಬಳಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳು ಅಥವಾ ಆರೋಗ್ಯ ಇಲಾಖೆಯ ಯಾವುದೇ ತುರ್ತು ಆದೇಶಗಳು ಯಾವಾಗಲೂ ಅಧಿಕೃತ ಪತ್ರಿಕಾ ಪ್ರಕಟಣೆ, ಆಶಾ ಕಾರ್ಯಕರ್ತೆಯರು ಅಥವಾ ಸ್ಥಳೀಯ ಪಂಚಾಯಿತಿಗಳ ಮೂಲಕ ಜಾರಿಗೆ ಬರುತ್ತವೆ. ಅಜ್ಞಾತ ಫೋನ್ ಕರೆಗಳ ಆಧಾರದ ಮೇಲೆ ಯಾವುದೇ ನಿರ್ಧಾರ ತಳೆಯದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನ ಮೀನು ಪ್ರಿಯರಿಗೆ ಆಘಾತ: ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ, ಬೆಲೆ ಏರಿಕೆ! – Kannada News | Seafood Crunch: Fish Supply Drops by 70 Percent in Bengaluru Amid Fishing Ban; Prices Shoot Up by 50 Percent

ಬೆಂಗಳೂರಿನ ಮೀನು ಪ್ರಿಯರಿಗೆ ಆಘಾತImage Credit source: Tv9 Kannada

ಬೆಂಗಳೂರು, ಜುಲೈ 29: ನಗರದಲ್ಲಿ ಕಳೆದ ಒಂದು ತಿಂಗಳಿಂದ ಮೀನು ಪ್ರಿಯರಿಗೆ ಭಾರೀ ನಿರಾಶೆ ಎದುರಾಗಿದೆ. ಮೀನು ಮಾರುಕಟ್ಟೆಗಳಿಗೆ ಪೂರೈಕೆಯಲ್ಲಿ ಶೇ.70ರಷ್ಟು ಇಳಿಕೆ ಕಂಡಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಹತಾಶೆಯಲ್ಲಿದ್ದಾರೆ. ಮೀನುಗಳ ಸಂತಾನೋತ್ಪತ್ತಿ ಕಾರಣ, ಕರಾವಳಿಯಲ್ಲಿ ಮೀನುಗಾರಿಕೆಯನ್ನ ನಿಷೇಧಿಸಲಾಗಿದೆ. ಹೀಗಾಗಿ ಮಾರುಕಟ್ಟೆಗಳಿಗೆ ಬರುತ್ತಿದ್ದ ಮೀನುಗಳ ಪೂರೈಕೆಯಲ್ಲಿ ದೊಡ್ಡ ವ್ಯತ್ಯವಾಗಿದೆ. ಪರಿಣಾಮ ಮೀನುಗಳ ಬೆಲೆಯಲ್ಲಿ ಶೇ. 50ರಷ್ಟು ಏರಿಕೆಯಾಗಿದೆ.

ಸಮುದ್ರ ಮೀನಿನ ಬೆಲೆಯಲ್ಲಿ ಏರಿಕೆ

ವಿಧ ಹಳೆಯ ದರ (ಕೆಜಿಗೆ) ಪ್ರಸ್ತುತ ದರ (ಕೆಜಿಗೆ)
ಅಂಜಲ್ 1500 1800
ಸೀ ಬಾಸ್ 650 750
ಬ್ಲಾಕ್ ಪ್ಯಾಂಪ್ಲೆಟ್ 1100 1200
ಶೀಲಾ 550 650
ಅರ್ನಾ 280 350
ಶಂಕರ 350 450
ಶಾಫಿ 450 550
ವೈಟ್ ಟೋನ್​​ 350 458
ಬ್ಲೂ ಕ್ರಾಬ್ 550 750
ಫ್ರಾನ್ಸ್​​ 350 450
ಬಟರ್ ಫಿಶ್ 450 550
ಬಾಂಗ್ಡಾ 200 300

ಇದನ್ನೂ ಓದಿ: ಕಾವೇರಿ ಜಲ ವಿವಾದ; CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ನಿರ್ಧಾರ

ಆಗಸ್ಟ್ 15ರ ಬಳಿಕ ಸಮಸ್ಯೆ ಸರಿಹೋಗುವ ಸಾಧ್ಯತೆ

ಇನ್ನು ಸಾಮಾನ್ಯವಾಗಿ ಮೀನು ಖರೀದಿ ಮಾಡುತ್ತಿದ್ದ ಗ್ರಾಹಕರು ವಿಪರೀತವಾಗಿ ಬೆಲೆ ಹೆಚ್ಚಳವಾಗಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪೂರೈಕೆಯಲ್ಲಿನ ವ್ಯತ್ಯಯ ಜುಲೈ 1ರಿಂದಲೇ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೀನು ಮಾರಾಟಗಾರರು ಮಾತ್ರವಲ್ಲದೆ, ಮೀನು ಪ್ರಿಯರು ಹಾಗೂ ಹೋಟಲ್ ಮತ್ತು ರೆಸ್ಟೋರೆಂಟ್​ಗಳಿಗೂ ಇದರಿಂದ ಸಮಸ್ಯೆಯಾಗಿದೆ. ಆಗಸ್ಟ್ 15ರ ಬಳಿಕ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:49 pm, Wed, 29 July 26

Source link

ಆಸ್ಪತ್ರೆಯಲ್ಲಿ ನವಜಾತ ಶಿಶು ಬಿಟ್ಟು ಎಸ್ಕೇಪ್: ತನಿಖೆಯಲ್ಲಿ ತಾಯಿ ಅವಿವಾಹಿತೆ ಎನ್ನುವುದು ಪತ್ತೆ – Kannada News | Newborn Abandoned at Hospital; investigation reveals mother is unmarried

ಪ್ರಾತಿನಿಧಿಕ ಚಿತ್ರImage Credit source: tv9 kannada

ಚಿಕ್ಕಬಳ್ಳಾಪುರ, ಜುಲೈ 29: ಆಸ್ಪತ್ರೆಯಲ್ಲಿ ನವಜಾತ ಶಿಶು (Newborn baby) ಬಿಟ್ಟು ಎಸ್ಕೇಪ್​ ಆಗಿದ್ದ ತಾಯಿ ಅವಿವಾಹಿತೆ ಎನ್ನುವುದು ಇದೀಗ ತನಿಖೆಯಲ್ಲಿ ಪತ್ತೆ ಆಗಿದೆ. ಮಗು ಬಿಟ್ಟು ಹೋಗಿದ್ದ ತಾಯಿ ಇದೀಗ ಚಿಕ್ಕಬಳ್ಳಾಪುರ (chikkaballapur) ಮಕ್ಕಳ ರಕ್ಷಣಾಧಿಕಾರಿ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಇನ್ನೊಂದೆಡರ ತಾಯಿ ಮಗು ಬಿಟ್ಟು ಹೋದ ದಿನ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ ದೇವನಹಳ್ಳಿಯ ನಕ್ಷತ್ರಾ ಖಾಸಗಿ ಆಸ್ಪತ್ರೆ ವೈದ್ಯರಿಂದ ಲೂ ಎಡವಟ್ಟಾಗಿದೆ.

ಈಗಲೂ ಮಗು ಬೇಡ ಎನ್ನುತ್ತಿರುವ ತಾಯಿ

ಹಾವೇರಿ ಮೂಲದ 21 ವರ್ಷದ ಈ ಯುವತಿ ತಾನು ಅವಿವಾಹಿತೆಯಾಗಿದ್ದು, ಮಗು ಬೇಡವೆಂದು ದೇವನಹಳ್ಳಿಯ ನಕ್ಷತ್ರ ಖಾಸಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ಶುಕ್ರವಾರ ಈ ಗಂಡು ಶಿಶು ಜನಿಸಿದ್ದು, ಆಸ್ಪತ್ರೆಯ ಸಂಪೂರ್ಣ ಬಿಲ್ ಪಾವತಿಸಿದ ನಂತರವೇ ತಾನು ಮಗುವನ್ನು ಬಿಟ್ಟು ತೆರಳಿದ್ದಾಗಿ ಯುವತಿ ಹೇಳಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಪದಾಧಿಕಾರಿಗಳು ಯುವತಿಗೆ ಆಪ್ತ ಸಮಾಲೋಚನೆ ನಡೆಸಿದ್ದು, ಆಕೆ ಈಗಲೂ ಮಗು ತನಗೆ ಬೇಡ ಎಂದೇ ಹೇಳಿದ್ದಾರೆ.

ದೇವನಹಳ್ಳಿಯ ನಕ್ಷತ್ರಾ ಖಾಸಗಿ ಆಸ್ಪತ್ರೆ ವೈದ್ಯರಿಂದ ಎಡವಟ್ಟು

ಇನ್ನು ಪ್ರಕರಣದ ಆರಂಭದಲ್ಲಿ ದೇವನಹಳ್ಳಿಯ ನಕ್ಷತ್ರಾ ಖಾಸಗಿ ಆಸ್ಪತ್ರೆಯ ವೈದ್ಯರಿಂದ ದೊಡ್ಡ ಎಡವಟ್ಟಾಗಿರುವುದು ಕಂಡುಬಂದಿದೆ. ಯುವತಿ ಮಗುವನ್ನು ಬಿಟ್ಟು ಹೋದ ತಕ್ಷಣವೇ ಈ ಬಗ್ಗೆ ಪೊಲೀಸರಿಗಾಗಲಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಸಿದ್ದರಬೆಟ್ಟದಲ್ಲಿ ಎಣ್ಣೆ ಪಾರ್ಟಿ: ಒಂದೇ ಬಾರಿಗೆ 6 ಪಿಡಿಒ, ಇಬ್ಬರು ಕಾರ್ಯದರ್ಶಿಗಳು ಸಸ್ಪೆಂಡ್

ತದನಂತರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಗುವನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಗಂಡು ಶಿಶುವನ್ನು ಚಿಕ್ಕಬಳ್ಳಾಪುರದ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಪ್ರಕರಣ ಹಿನ್ನೆಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಕ್ಷತ್ರ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ ಹಾವೇರಿ ಮೂಲದ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಕಡಿಮೆ ತೂಕ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಜೊತೆ ಕೇರ್‌ಟೇಕರ್ ಬಂದಿದ್ದರೂ, ಮಗುವಿನ ತಾಯಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ಮಾಹಿತಿ ವೈದ್ಯರಿಗೆ ಅನುಮಾನ ಹುಟ್ಟಿಸಿತ್ತು.

ತಾಯಿ ಕಾಣಿಸದ ಹಿನ್ನೆಲೆ ಆಸ್ಪತ್ರೆಯ ವೈದ್ಯರು ತಕ್ಷಣವೇ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.

ಇದನ್ನೂ ಓದಿ: ಲೋಕಾಪುರ ಡಿಸಿಸಿ ಬ್ಯಾಂಕ್​​ನಲ್ಲಿ ಗೋಲ್​ಮಾಲ್: ಪರ್ಸನಲ್ ಖಾತೆಗೆ ಹಣ ಹಾಕಿಸಿಕೊಂಡು ಮ್ಯಾನೇಜರ್ ಎಸ್ಕೇಪ್

ಇನ್ನು ಆಸ್ಪತ್ರೆಯಲ್ಲಿ ಯುವತಿ ನೀಡಿದ್ದ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಆಕೆ ಹಾವೇರಿ ಜಿಲ್ಲೆ ಮೂಲದವಳು ಎಂಬುದು ತಿಳಿದುಬಂದಿತ್ತು. ಯುವತಿಗೆ ವಿವಾಹವಾಗಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊದಲ ದಿನ ದಾಖಲೆ ಬರೆಯಲು ಸಜ್ಜಾದ ‘ಸ್ಪೈಡರ್ ಮ್ಯಾನ್’ – Kannada News | Spider Man movie ready to create box office record in India

‘ಸ್ಪೈಡರ್ ಮ್ಯಾನ್’ ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದೆ. ಭಾರತದಲ್ಲಿ ಈ ಸಿನಿಮಾ ನಾಳೆ (ಜುಲೈ 30) ಬಿಡುಗಡೆ ಆಗಲಿದೆ. ಇತರೆ ರಾಷ್ಟ್ರಗಳಲ್ಲಿ ಜುಲೈ 31ಕ್ಕೆ ರಿಲೀಸ್ ಆಗಲಿದೆ. ‘ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆದಿದೆ. ಕೆಲ ಭಾರತೀಯ ಸೂಪರ್ ಸ್ಟಾರ್​ ನಟರ ಸಿನಿಮಾಗಳು ಸಹ ಮಾಡದಷ್ಟು ಮುಂಗಡ ಕಲೆಕ್ಷನ್ ಅನ್ನು ಈ ಸಿನಿಮಾ ಈಗಾಗಲೇ ಮಾಡಿದೆ. ಮೊದಲ ದಿನದ ಗಳಿಕೆಯಂತೂ ದಾಖಲೆ ಬರೆಯುವುದು ಖಾತ್ರಿ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ವಿಶ್ಲೇಷಕರು.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಅಡ್ವಾನ್ಸ್ ಬುಕಿಂಗ್​ ನಿಂದಲೇ ಈಗಾಗಲೇ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗಲೇ 35 ಕೋಟಿ ಗಳಿಕೆ ಆಗಿದ್ದು, ಸಿನಿಮಾ ಬಿಡುಗಡೆಗೆ ವೇಳೆಗೆ ಈ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗುವುದು ಖಾತ್ರಿ. ಇನ್ನು ಈ ಸಿನಿಮಾ ರಿಲೀಸ್ ದಿನ ಭಾರತದ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುವುದು ಖಾತ್ರಿ ಎನ್ನಲಾಗಿದೆ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಮೊದಲ ದಿನ ಭಾರತದಲ್ಲಿ ಸುಮಾರು 50 ರಿಂದ 60 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಈಗಾಗಲೇ ಅಂದಾಜು ಮಾಡಿದ್ದಾರೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅದ್ಧೂರಿಯಾಗಿ ಆಗಿದ್ದು, ಅದರ ಆಧಾರದ ಮೇಲೆ ಸಿನಿಮಾದ ಮೊದಲ ದಿನದ ಕಲೆಕ್ಷನ್ 50 ರಿಂದ 60 ಕೋಟಿ ಆಗಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಸಹ ಮೊದಲ ದಿನ ಭಾರತದಲ್ಲಿ ಸುಮಾರು 41 ಕೋಟಿ ಗಳಿಕೆ ಮಾಡಿತ್ತು. ಅಲ್ಲಿಗೆ ‘ಸ್ಪೈಡರ್ ಮ್ಯಾನ್’ ಸಿನಿಮಾ ಅದಕ್ಕೂ ಹೆಚ್ಚಿನ ಮೊತ್ತ ಗಳಿಕೆ ಮಾಡುವ ಸಾಧ್ಯತೆ ಇದೆ.

ಈಗ ಬಿಡುಗಡೆ ಆಗುತ್ತಿರುವ ‘ಸ್ಪೈಡರ್ ಮ್ಯಾನ್’ ಸಿನಿಮಾ ಈ ಸರಣಿಯ ಒಂಬತ್ತನೇ ಸಿನಿಮಾ ಆಗಿದೆ. ಮೊದಲ ಮೂರು ಸಿನಿಮಾಗಳಲ್ಲಿ ಟೋಬಿ ಮೆಗ್​​ವೇಯರ್ ‘ಸ್ಪೈಡರ್ ಮ್ಯಾನ್’ ಆಗಿ ನಟಿಸಿದ್ದರೆ ಎರಡರಲ್ಲಿ ಆಂಡ್ರ್ಯೂ ಗ್ಯಾರಿಫೀಲ್ಡ್ ಆ ಬಳಿಕ ಮೂರರಲ್ಲಿ ಟಾಮ್ ಹಾಲೆಂಡ್ ನಟಿಸಿದ್ದರು. ಈಗ ಬಿಡುಗಡೆ ಆಗುತ್ತಿರುವುದು ಟಾಮ್ ಹಾಲೆಂಡ್ ನಟಿಸುತ್ತಿರುವ ನಾಲ್ಕನೇ ‘ಸ್ಪೈಡರ್ ಮ್ಯಾನ್’ ಸಿನಿಮಾ ಆಗಿದೆ. ಈಗ ಬಿಡುಗಡೆ ಆಗಿರುವ ಟ್ರೈಲರ್ ಪ್ರಕಾರ, ‘ಸ್ಪೈಡರ್ ಮ್ಯಾನ್’ ಅನ್ನು ಜಗತ್ತು ಮರೆತು ಹೋಗಿದೆ. ಪೀಟರ್ ಪಾರ್ಕರ್ ಅನ್ನು ಸಹ. ಈಗ ಸ್ಪೈಡರ್ ಮ್ಯಾನ್​​ಗೆ ಗೆಳೆಯರಿಲ್ಲ, ಗರ್ಲ್​​ಫ್ರೆಂಡ್ ಸಹ ಇಲ್ಲ. ಆದರೆ ಅವೇಂಜರ್ಸ್ ಗುಂಪಿನಲ್ಲಿ ಜೊತೆಗೇ ಇರುವ ಹಲ್ಕ್ ಸೇರಿದಂತೆ ಹಲವು ವೈರಿಗಳು ಹುಟ್ಟಿಕೊಂಡಿದ್ದಾರೆ. ಈ ಬಾರಿ ದುಷ್ಟರನ್ನು ಸ್ಪೈಡರ್ ಮ್ಯಾನ್ ಹೇಗೆ ಸೆದೆ ಬಡಿಯುತ್ತಾನೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ಸುಲಭವಾಗಿ ಬೆಳೆಸ್ಬೋದು ತಾಜಾ ಕೊತ್ತಂಬರಿ ಸೊಪ್ಪು; ನಿಮಗಾಗಿ ಇಲ್ಲಿದೆ ಸಲಹೆ – Kannada News | Grow coriander at home with these simple tips

ಅಡುಗೆಯ ಘಮ ಮತ್ತು ರುಚಿಯನ್ನು ಹೆಚ್ಚಿಸುವಲ್ಲಿ ಕೊತ್ತಂಬರಿ ಸೊಪ್ಪು (Coriander leaves) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಇದು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಆರೋಗ್ಯ ಪ್ರಯೋಜನ ಮತ್ತು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುವ ಕಾರಣ ಬಹುತೇಕ ಎಲ್ಲರೂ ಸಾಂಬಾರ್‌, ರಸಂ, ಚಟ್ನಿ, ಪಲ್ಯ ಇತ್ಯಾದಿ ಅಡುಗೆಗಳಿಗೆ ಕೊತ್ತಂಬರಿ ಸೊಪ್ಪನ್ನು ಸೇರಿಸುತ್ತಾರೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಫ್ರೆಶ್‌ ಆಗಿ ಮನೆಯಲ್ಲಿಯೇ ಬೆಳೆಯಬಹುದು. ಹೌದು ಈ ಕೆಲವೊಂದು ಟಿಪ್ಸ್‌ಗಳ ಸಹಾಯದಿಂದ ಪಾಟ್‌ನಲ್ಲಿಯೂ ಸುಲಭವಾಗಿ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು.

ಮನೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಈ ಹಂತಗಳನ್ನು ಪಾಲಿಸಿ:

ಪಾಟ್‌ ಆಯ್ಕೆ: ಸ್ವಂತ ಮನೆಯಲ್ಲಿರುವವರು ಮನೆಯಂಗಳ, ಹಿತ್ತಲಿನಲ್ಲಿ ಬೆಳೆಯಬಹುದು. ಫ್ಲ್ಯಾಟ್‌ಗಳಲ್ಲಿ ಇರುವವರೂ ಸಹ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು. ಕೊತ್ತಂಬರಿ ಸೊಪ್ಪು ಬೆಳೆಯಲು, ಮೊದಲು ಕನಿಷ್ಠ 6 ರಿಂದ 8 ಇಂಚು ಆಳವಿರುವ ಪಾಟ್‌ ಅಥವಾ ಪಾತ್ರೆಯನ್ನು ಆರಿಸಿ. ಪಾಟ್‌ ಅಗಲವಾಗಿರುವಂತೆ ನೋಡಿಕೊಳ್ಳಿ.

ಮಣ್ಣಿನ ಆಯ್ಕೆ: ಮಣ್ಣಿನ ಆಯ್ಕೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಕೊತ್ತಂಬರಿ ಸೊಪ್ಪು ಬೆಳೆಯಲು, ಮಣ್ಣು ಸಡಿಲವಾಗಿರಬೇಕು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು. ಇದಕ್ಕಾಗಿ ತೋಟದ ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸುವ ಹಸುವಿನ ಗೊಬ್ಬರ ಅಥವಾ ವರ್ಮಿಕಾಂಪೋಸ್ಟ್  ಮರಳು ಅಥವಾ ಕೊಕೊಪೀಟ್ ಬೆರೆಸಿ ಪಾಟ್‌ನಲ್ಲಿ ಹಾಕಿಡಿ.

ಕೊತ್ತಂಬರಿ ಬೀಜಗಳ ಆಯ್ಕೆ: ಮಾರುಕಟ್ಟೆಯಿಂದ ಉತ್ತಮ ಗುಣಮಟ್ಟದ ಕೊತ್ತಂಬರಿ ಬೀಜಗಳನ್ನು ಖರೀದಿಸಿ ಮತ್ತು ಆ ಬೀಜಗಳು ಮುರಿದು ಹೋಗಿಲ್ಲ ಅಥವಾ ಯಾವುದೇ ಹಾನಿಗೊಳಗಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಬೀಜಗಳನ್ನೇ ಆಯ್ಕೆ ಮಾಡಿ. ಈ ಕೊತ್ತಂಬರಿ ಬೀಜಗಳನ್ನು ಅವುಗಳನ್ನು ಸಮತಟ್ಟಾದ ಮೇಲ್ಮೈನಲ್ಲಿ ಇರಿಸಿ ಬೀಜ ಎರಡು ಭಾಗಗಳಾಗುವಂತೆ ಲಘುವಾಗಿ ಪುಡಿಮಾಡಿ.

ಇದನ್ನೂ ಓದಿ: ಜಸ್ಟ್‌ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ

ಬೀಜ ಬಿತ್ತುವ ಪ್ರಕ್ರಿಯೆ: ಎರಡು ಭಾಗಗಳನ್ನಾಗಿ ವಿಂಗಡಿಸಿದ ಬಳಿಕ ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಇದು ಸಿಪ್ಪೆಯನ್ನು ಮೃದುಗೊಳಿಸುತ್ತದೆ ಮತ್ತು ಅವು ವೇಗವಾಗಿ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಮರುದಿನ ಬೆಳಿಗ್ಗೆ, ಬೀಜಗಳನ್ನು ನೀರಿನಿಂದ ಸೋಸಿ ಮೊದಲೇ ಪಾಟ್‌ನಲ್ಲಿ ಹಾಕಿಟ್ಟ ಮಣ್ಣಿನ ಮೇಲೆ ಹರಡಿ. ಪರ್ಯಾಯವಾಗಿ, ನೀವು ನಿಮ್ಮ ಬೆರಳಿನಿಂದ ಮಣ್ಣಿನಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಬೀಜಗಳನ್ನು ಅವುಗಳೊಳಗೆ ಇಡಬಹುದು.  ನಂತರ, ಮಣ್ಣನ್ನು ತೇವಗೊಳಿಸಲು ಸ್ಪ್ರೇ ಬಾಟಲಿಯಿಂದ ಸ್ವಲ್ಪ ನೀರನ್ನು ಸಿಂಪಡಿಸಿ

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಲಘುವಾಗಿ ನೀರು ಹಾಕಿ ಮತ್ತು ಮಧ್ಯಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಪಾಟ್‌ ಇರಿಸಿ. ಸರಿಯಾಗಿ ಅರೈಕೆ ಮಾಡಿದರೆ 10 ರಿಂದ 15 ದಿನಗಳಲ್ಲಿ ಬೀಜಗಳಿಂದ ಗಿಡ ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಗಿಡ ಬೆಳೆದು  ಸುಮಾರು 3 ವಾರಗಳಲ್ಲಿ, ನೀವು ಫ್ರೆಶ್‌ ಮತ್ತು ಆರ್ಗಾನಿಕ್ ಕೊತ್ತಂಬರಿ ಸೊಪ್ಪನ್ನು ಕೊಯ್ಲು ಮಾಡಲು ಪ್ರಾರಂಭಿಸಬಹುದು. ಹೀಗೆ ಮನೆಯಲ್ಲಿ ಕೊತ್ತಂಬರಿ ಬೆಳೆಯುವುದು ತುಂಬಾನೇ ಸುಲಭ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯು ಮಾತ್ರ ಬಳಸಲಾಗಿದೆ’; ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರ ಸ್ಪಷ್ಟನೆ – Kannada News | No Shots Fired Only Tear Gas was Used; Minister Jitendra Singh Rejects Rahul Gandhi’s Shooting Claim

ನವದೆಹಲಿ, ಜುಲೈ 29: ಜುಲೈ 20ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಹೋರಾಟದ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಯಾವುದೇ ಗುಂಡಿನ ದಾಳಿ ನಡೆಸಲಾಗಿಲ್ಲ, ಕೇವಲ ಅಶ್ರುವಾಯುವನ್ನು ಮಾತ್ರ ಬಳಸಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಲೋಕಸಭೆಗೆ ತಿಳಿಸಿದೆ. ಪರೀಕ್ಷಾ ಅಕ್ರಮ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮೋದನೆ ನೀಡಿದ್ದಾರೆ ಎಂಬ ರಾಹುಲ್ ಗಾಂಧಿಯ (Rahul Gandhi) ಆರೋಪಗಳನ್ನು ನಿರಾಕರಿಸಿದರು. ಇಂತಹ ಆದೇಶವನ್ನು ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗೆ ಇರುತ್ತದೆಯೇ ಹೊರತು ಸಚಿವರಿಗಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

“ಪ್ರತಿಭಟನಾಕಾರರ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ, ಅಶ್ರುವಾಯುವನ್ನು ಬಳಸಲಾಗಿದೆ ಎಂದು ಪದೇ ಪದೇ ಸ್ಪಷ್ಟಪಡಿಸಲಾಗಿದೆ. ಗುಂಡಿನ ದಾಳಿಯೇ ನಡೆಯದಿರುವಾಗ, ಆದೇಶ ಹೊರಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಂತಹ ಆದೇಶವನ್ನು ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗೆ ಇರುತ್ತದೆಯೇ ಹೊರತು ಸಚಿವರಿಗಲ್ಲ” ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026ರ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಳಸಿದ ಅಸಂಸದೀಯ ಭಾಷೆಯನ್ನು ಕೂಡ ಸಚಿವ ಜಿತೇಂದ್ರ ಸಿಂಗ್ ತೀವ್ರವಾಗಿ ಖಂಡಿಸಿದರು. “ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಇಂತಹ ಅಸಂಸದೀಯ ಭಾಷೆಯನ್ನು ಬಳಸಿರುವುದನ್ನು ಕಂಡು ನಿಜಕ್ಕೂ ಆಘಾತವಾಗಿದೆ. ಈ ದೇಶದ ಯುವಜನತೆಯನ್ನು ಮೂರ್ಖರು (Idiots) ಎಂದು ಕರೆಯುವುದಕ್ಕಿಂತ ದುರದೃಷ್ಟಕರ ಸಂಗತಿ ಇನ್ನೇನಿರಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:22 pm, Wed, 29 July 26

Source link

Important Days in August 2026: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ – Kannada News | Important Days in August 2026: Important days celebrated in the month of August

ಇನ್ನೇನೂ ವರ್ಷದ ಎಂಟನೇ ತಿಂಗಳಾದ ಆಗಸ್ಟ್‌ (August)  ಬರುತ್ತಿದೆ. ಧಾರ್ಮಿಕ ಹಬ್ಬಗಳಿಂದ ಕೂಡಿದ ಈ ತಿಂಗಳಲ್ಲಿ ನಾಗರಪಂಚಮಿ, ಓಣಂ, ರಕ್ಷಾಬಂಧನ ಸೇರಿದಂತೆ ಒಂದಷ್ಟು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ತಿಂಗಳು ಐತಿಹಾಸಿಕ, ಜಾಗೃತಿ ದಿನಗಳನ್ನು ಸಹ ಆಚರಿಸಲಾಗುತ್ತದೆ. ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಎಲ್ಲಾ ಕಾರ್ಯಕ್ರಮ್ಳನ್ನು ಆಚರಿಸಲಾಗುತ್ತದೆ. ಸ್ನೇಹ ದಿನ, ಸ್ವಾತಂತ್ರ್ಯ ದಿನ, ಸಿಂಹ ದಿನ, ಆನೆ ದಿನದಿಂದ ಹಿಡಿದು ರಾಷ್ಟ್ರೀಯ ಕೈಮಗ್ಗ ದಿನದವರೆಗೆ ಆಗಸ್ಟ್‌ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ:

  • ಆಗಸ್ಟ್‌ 1-7- ವಿಶ್ವ ಸ್ತನ್ಯಪಾನ ವಾರ
  • ಆಗಸ್ಟ್‌ 2 – ಸ್ನೇಹ ದಿನ
  • ಆಗಸ್ಟ್ 3 – ರಾಷ್ಟ್ರೀಯ ಕಲ್ಲಂಗಡಿ ದಿನ
  • ಆಗಸ್ಟ್ 6 – ಹಿರೋಷಿಮಾ ದಿನ
  • ಆಗಸ್ಟ್ 7 – ರಾಷ್ಟ್ರೀಯ ಕೈಮಗ್ಗ ದಿನ
  • ಆಗಸ್ಟ್ 8 – ಭಾರತ ಬಿಟ್ಟು ತೊಲಗಿ ಚಳುವಳಿ ದಿನ
  • ಆಗಸ್ಟ್‌ 8 – ಅಂತಾರಾಷ್ಟ್ರೀಯ ಬೆಕ್ಕು ದಿನ
  • ಆಗಸ್ಟ್‌ 10 – ವಿಶ್ವ ಜೈವಿಕ ಇಂಧನ ದಿನ
  • ಆಗಸ್ಟ್‌ 10 – ವಿಶ್ವ ಸಿಂಹ ದಿನ
  • ಆಗಸ್ಟ್ 12 – ಅಂತಾರಾಷ್ಟ್ರೀಯ ಯುವ ದಿನ
  • ಆಗಸ್ಟ್‌ 12 – ವಿಶ್ವ ಆನೆ ದಿನ
  • ಆಗಸ್ಟ್‌ 13 – ವಿಶ್ವ ಎಡಗೈ ಜನರ ದಿನ
  • ಆಗಸ್ಟ್‌ 13 – ವಿಶ್ವ ಅಂಗಾಂಗ ದಾನ ದಿನ
  • ಆಗಸ್ಟ್ 15 – ಸ್ವಾತಂತ್ರ್ಯ ದಿನ
  • ಆಗಸ್ಟ್‌ 19 – ವಿಶ್ವ ಛಾಯಾಗ್ರಹಣ ದಿನ
  • ಆಗಸ್ಟ್‌ 19 – ವಿಶ್ವ ಮಾನವೀಯ ದಿನ
  • ಆಗಸ್ಟ್‌ 20 – ವಿಶ್ವ ಸೊಳ್ಳೆ ದಿನ
  • ಆಗಸ್ಟ್‌ 21 – ವಿಶ್ವ ಹಿರಿಯ ನಾಗರಿಕರ ದಿನ
  • ಆಗಸ್ಟ್‌ 21 – ವಿಶ್ವ ಉದ್ಯಮಿಗಳ ದಿನ
  • ಆಗಸ್ಟ್ 26 – ಮಹಿಳಾ ಸಮಾನತೆ ದಿನ
  • ಆಗಸ್ಟ್‌ 27 – ವಿಶ್ವ ಸರೋವರ ದಿನ
  • ಆಗಸ್ಟ್‌ 28 – ವಿಶ್ವ ಸಂಸ್ಕೃತ ದಿನ
  • ಆಗಸ್ಟ್ 29 – ರಾಷ್ಟ್ರೀಯ ಕ್ರೀಡಾ ದಿನ
  • ಆಗಸ್ಟ್‌ 29 – ಅಂತರರಾಷ್ಟ್ರೀಯ ಪರಮಾಣು ಪರೀಕ್ಷೆಗಳ ವಿರೋಧಿ ದಿನ
  • ಆಗಸ್ಟ್‌ 30 – ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಸಿಬಿ ವೇಗಿ ಯಶ್ ದಯಾಳ್​ಗೆ ಬಿಗ್ ರಿಲೀಫ್ ನೀಡಿದ ಅಲಹಾಬಾದ್ ಹೈಕೋರ್ಟ್

Source link

Exit mobile version