ಯಶ್ ಎಂದಿಗೂ ಮಾತಿಗೆ ತಪ್ಪಿದವರಲ್ಲ; ಹೊಗಳಿದ ನಿರ್ಮಾಪಕ ಜಯಣ್ಣ – Kannada News | Rocking Star Yash and Producer Jayanna Bonding: The Unheard Story Behind Jaanu

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಜಯಣ್ಣ ಅವರ ನಡುವಿನ ಬಾಂಡಿಂಗ್ ಇವತ್ತಿನದಲ್ಲ. ಜಯಣ್ಣ-ಭೋಗೇಂದ್ರ ಪ್ರೊಡಕ್ಷನ್‌ನಲ್ಲಿ ಮೂಡಿಬಂದ ಯಶ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಜಯಣ್ಣ, ಯಶ್ ಅವರ ವೃತ್ತಿಜೀವನದ ಆರಂಭಿಕ ದಿನಗಳ ‘ಜಾನು’ ಸಿನಿಮಾ ಸೃಷ್ಟಿಯಾದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ಪ್ರೀತಂ ಗುಬ್ಬಿ ಅವರು ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಜಯಣ್ಣ ಅವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ‘ಜಾನು’ ಸಿನಿಮಾದ ಜರ್ನಿ ಆರಂಭವಾಯಿತು. ಮೊದಲು ಈ ಚಿತ್ರಕ್ಕಾಗಿ ಬೇರೊಬ್ಬ ನಟನನ್ನು ಸಂಪರ್ಕಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಆ ಪ್ರಾಜೆಕ್ಟ್ ಕ್ಯಾನ್ಸಲ್ ಆಯಿತು.

ಕಿರಾತಕ ಬಳಿಕ ಬದಲಾದ ಪ್ಲಾನ್

ಅದೇ ಸಮಯದಲ್ಲಿ ಯಶ್ ನಟನೆಯ ‘ಮೊದಲಸಲ’ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿತ್ತು. ಆ ಚಿತ್ರದಲ್ಲಿ ಯಶ್ ನಟನೆ ಜಯಣ್ಣ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಇದಾದ ಬೆನ್ನಲ್ಲೇ ‘ಕಿರಾತಕ’ ಸಿನಿಮಾ ಕೂಡ ತೆರೆಕಂಡಿತು. ಈ ಎರಡು ಸಿನಿಮಾಗಳ ಯಶಸ್ಸಿನ ನಂತರ ಯಶ್ ಅವರಲ್ಲಿ ಒಬ್ಬ ಭರವಸೆಯ ನಟನನ್ನು ಕಂಡ ಜಯಣ್ಣ, ಪ್ರೀತಂ ಗುಬ್ಬಿ ಅವರ ಬಳಿ ಈ ಚಿತ್ರವನ್ನು ಯಶ್ ಅವರೊಂದಿಗೆ ಮಾಡಲು ನಿರ್ಧರಿಸಿದರು.

ಮಾತಿಗೆ ತಪ್ಪದ ರಾಕಿ ಭಾಯ್

ಜಯಣ್ಣ ಅವರು ಯಶ್‌ಗೆ ಫೋನ್ ಮಾಡಿ ಮಾತನಾಡಿದಾಗ, ಮೊದಲ ಭೇಟಿಯಲ್ಲೇ ಸಿನಿಮಾ ಮಾಡಲು ಎಲ್ಲವೂ ಓಕೆ ಆಯಿತು. ಆದರೆ ಯಶ್ ಅವರು ಅಡ್ವಾನ್ಸ್ ಪಡೆದುಕೊಳ್ಳಲು 5 ದಿನಗಳ ಕಾಲಾವಕಾಶ ಕೇಳಿದ್ದರು. ಅದಕ್ಕೆ ಕಾರಣ, ಅವರು ಈಗಾಗಲೇ ಬೇರೊಬ್ಬರ ಬಳಿ ಒಂದು ಸಣ್ಣ ಅಡ್ವಾನ್ಸ್ ಪಡೆದುಕೊಂಡಿದ್ದರು. ಅವರಿಂದ ಪರ್ಮಿಷನ್ ಪಡೆದುಕೊಂಡ ಬಳಿಕವೇ ಮುಂದಿನ ಹೆಜ್ಜೆ ಇಡುವುದಾಗಿ ಯಶ್ ತಿಳಿಸಿದ್ದರು. ಅಂದು ಕೂಡ ಯಶ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದನ್ನು ಜಯಣ್ಣ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್ ನೋಡಿದವರು ವಾಟ್​ ದ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’; ಯಶ್

ನಂತರ ಆ ಪ್ರಾಜೆಕ್ಟ್ ಅಂತಿಮಗೊಳ್ಳದ ಕಾರಣ, ಯಶ್ ಅವರು ಜಯಣ್ಣ ಅವರ ಆಫೀಸ್‌ಗೆ ಬಂದು ಕಥೆ ಕೇಳಿ ಅಡ್ವಾನ್ಸ್ ಪಡೆದುಕೊಂಡರು. ಹೀಗೆ ‘ಜಾನು’ ಸಿನಿಮಾ ಸೆಟ್ಟೇರಿತು.

ಫಸ್ಟ್ ಪಿಕ್ಚರ್‌ನಲ್ಲೇ ಇನ್ವಾಲ್ವ್‌ಮೆಂಟ್

‘ಯಶ್ ಅವರಿಗೆ ಸಿನಿಮಾದ ಬಗ್ಗೆ ಮೊದಲಿನಿಂದಲೂ ಅಪಾರ ಕಾಳಜಿ ಇತ್ತು. ಮೊದಲ ಚಿತ್ರದಲ್ಲೇ ಸ್ಕ್ರಿಪ್ಟ್ ಮತ್ತು ಮೇಕಿಂಗ್‌ನಲ್ಲಿ ಸಾಕಷ್ಟು ಇನ್ವಾಲ್ವ್ ಆಗುತ್ತಿದ್ದರು. ಆದರೆ ಆ ಸಮಯದಲ್ಲಿ ಸಿನಿಮಾ ತಂಡದವರು ಅವರ ಮಾತುಗಳನ್ನು ಹೆಚ್ಚಾಗಿ ಕೇಳುತ್ತಿರಲಿಲ್ಲ. ಆದರೆ ನಂತರದ ಸಿನಿಮಾಗಳಲ್ಲಿ ಅವರ ಮಾತನ್ನು ಕೇಳಿದರು’ ಎಂದು ಜಯಣ್ಣ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೇಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ‘ಕಬ್ಬಡ್ಡಿ ಆಟಗಾರ್ತಿ’! – Kannada News | From Kabaddi to CWG Glory: Harjinder Kaur Bags Silver in Glasgow 2026

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟು 227 ಕೆಜಿ (ಸ್ನ್ಯಾಚ್‌ನಲ್ಲಿ 101 ಕೆಜಿ + ಕ್ಲೀನ್ ಅಂಡ್ ಜರ್ಕ್‌ನಲ್ಲಿ 126 ಕೆಜಿ) ಭಾರ ಎತ್ತುವ ಮೂಲಕ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದಾರೆ. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದಿದ್ದ ಹರ್ಜಿಂದರ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಬಡ್ಡಿ ಆಟಗಾರ್ತಿಯಾಗಿ ಕ್ರೀಡಾ ಜೀವನ ಆರಂಭಿಸಿ, ಇಂದು ಅಂತರರಾಷ್ಟ್ರೀಯ ಮಟ್ಟದ ವೇಟ್‌ಲಿಫ್ಟರ್ ಆಗಿ ಮಿಂಚುತ್ತಿರುವ ಹರ್ಜಿಂದರ್ ಕೌರ್ ಅವರ ಸ್ಫೂರ್ತಿದಾಯಕ ಹಾದಿಯ ಕಥೆ ಇಲ್ಲಿದೆ:

ಕಬಡ್ಡಿಯಿಂದ ತೋಳ್ಬಲ:

ಹರ್ಜಿಂದರ್ ಕೌರ್ ಮೊದಲು ಶಾಲಾ ದಿನಗಳಲ್ಲಿ ಕಬಡ್ಡಿ ರೈಡರ್ ಆಗಿ ಆಟ ಆರಂಭಿಸಿದ್ದರು. ಅಭ್ಯಾಸಕ್ಕಾಗಿ ಪ್ರತಿದಿನ 5 ಕಿಲೋಮೀಟರ್ ಸೈಕಲ್ ತುಳಿದು ಹೋಗುತ್ತಿದ್ದರು. ಅಲ್ಲದೆ ಕಬ್ಬಡ್ಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಟ್ಟಿಕೊಂಡಿದ್ದರು.

2016ರಲ್ಲಿ ಪಟಿಯಾಲದ ಪಂಜಾಬಿ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ, ಅವರ ದೈಹಿಕ ಸಾಮರ್ಥ್ಯವನ್ನು ಗಮನಿಸಿದ ಕೋಚ್ ಪರಮಜೀತ್ ಶರ್ಮಾ ಅವರು ವೇಟ್‌ಲಿಫ್ಟಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಇದೇ ಅವರ ಜೀವನದ ತಿರುವಾಗಿ ಪರಿಣಮಿಸಿತು.

ಬಡತನದ ವಿರುದ್ಧ ಗೆದ್ದ ರೈತನ ಮಗಳು!

ಹರ್ಜಿಂದರ್ ಕೌರ್ ಪಂಜಾಬ್‌ನ ನಾಭಾ ಬಳಿಯ ಮೈಹಾಸ್ ಎಂಬ ಸಣ್ಣ ಹಳ್ಳಿಯ ಸಾಧಾರಣ ಕೃಷಿ ಕುಟುಂಬದಿಂದ ಬಂದವರು. ಅವರ ತಂದೆ ಸಾಹಿಬ್ ಸಿಂಗ್ ಕೇವಲ ಕೆಲವೇ ಎಕರೆ ಜಮೀನು ಹೊಂದಿದ್ದರು. ಹೀಗಾಗಿ ಮಗಳ ಕ್ರೀಡಾ ವೆಚ್ಚ ಮತ್ತು ಆಹಾರದ ಅಗತ್ಯಗಳನ್ನು ಪೂರೈಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಮಾಡಬೇಕಾಯಿತು.

ಈ ಸಾಲಗಳನ್ನು ತೀರಿಸಲು ಹರ್ಜಿಂದರ್ ಕೌರ್ ಮುಂದಿದದ್ದು ಅಂತರರಾಷ್ಟ್ರೀಯ ಮಟ್ಟದ ಸಾಧನೆಯೊಂದೇ. ಇದಕ್ಕಾಗಿ ಹಗಲಿರಳು ಪರಿಶ್ರಮಿಸಿದರು. ಈ ಪರಿಶ್ರಮದೊಂದಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು.

ತೋಳಿನ ಬಲಕ್ಕೆ ‘ಟೋಕಾ’:

ಹರ್ಜಿಂದರ್ ಅವರ ಮಣಿಕಟ್ಟು ಮತ್ತು ಹೆಗಲಿನ ಅಸಾಧಾರಣ ಶಕ್ತಿಯ ಹಿಂದೆ ಹಳ್ಳಿಯ ಕಠಿಣ ಶ್ರಮ ಅಡಗಿದೆ. ಬಾಲ್ಯದಲ್ಲಿ ಅವರು ತಮ್ಮ ಮನೆಯ ಹೆಮ್ಮುಗಳಿಗೆ ಹೊಲದಿಂದ ಹುಲ್ಲು ತಂದು, ದಿನಗಟ್ಟಲೆ ‘ಟೋಕಾ’ (ಕೈಯಿಂದ ತಿರುಗಿಸುವ ಹುಲ್ಲು ಕತ್ತರಿಸುವ ಯಂತ್ರ) ಬಳಸುತ್ತಿದ್ದರು. ಈ ಕಠಿಣ ದೇಸಿ ಶ್ರಮವೇ ಅರಿಯದಂತೆ ಅವರ ತೋಳುಗಳನ್ನು ಬಲಪಡಿಸಿತು, ಇದು ಮುಂದೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರೀ ತೂಕ ಎತ್ತಲು ಅವರಿಗೆ ಸಹಕಾರಿಯಾಯಿತು.

ಹೀಗೆ ತೋಳ್ಬಲ ಹೆಚ್ಚಿಸಿಕೊಂಡ ಹರ್ಜಿಂದರ್ ಕೌರ್ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲಾರಂಭಿಸಿದರು. ಅಲ್ಲಿಂದ ಹಿಂತಿರುಗಿ ನೋಡಿಲ್ಲ ಎಂದೇ ಹೇಳಬಹುದು. ಏಕೆಂದರೆ ಹರ್ಜಿಂದರ್ ಈಗಾಗಲೇ 1 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಹರ್ಜಿಂದರ್ ಅಂತರರಾಷ್ಟ್ರೀಯ ಸಾಧನೆಗಳು:

  • ಕಾಮನ್‌ವೆಲ್ತ್ ಗೇಮ್ಸ್ 2026: 69 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ.
  • ಕಾಮನ್‌ವೆಲ್ತ್ ಗೇಮ್ಸ್ 2022: 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ 2025: 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ.
  • ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2026: ಸ್ನ್ಯಾಚ್ ವಿಭಾಗದಲ್ಲಿ ಕಂಚಿನ ಪದಕ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್!

ಬಡತನ, ಸೌಲಭ್ಯಗಳ ಕೊರತೆ ಹಾಗೂ ಸಮಾಜದ ಸವಾಲುಗಳನ್ನು ಮೆಟ್ಟಿ ನಿಂತು ಗ್ಲ್ಯಾಸ್ಗೋದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದ ಹರ್ಜಿಂದರ್ ಕೌರ್ ಅವರ ಸಾಧನೆ ಕೋಟ್ಯಂತರ ಗ್ರಾಮೀಣ ಪ್ರತಿಭೆಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.

Source link

TTD: ‘ಪ್ಲಾಟ್ ಖರೀದಿಸಿ, VIP ದರ್ಶನ ಪಡೆಯಿರಿ’ ಜಾಹೀರಾತು ವಿವಾದ; ಟಿಟಿಡಿ ಸ್ಪಷ್ಟನೆ – Kannada News | ‘Buy a Plot, Get Lifetime VIP Darshan’: TTD Rejects Real Estate Firm’s Claim

ತಿರುಮಲ ಶ್ರೀವಾರಿ ದರ್ಶನದ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯಲು ರಿಯಲ್ ಎಸ್ಟೇಟ್ ಕಂಪನಿಯೊಂದು ನಡೆಸಿದ ಪ್ರಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಸಮೀಪದ ತಮ್ಮ ಯೋಜನೆಯಲ್ಲಿ ನಿವೇಶನ ಖರೀದಿಸಿದವರಿಗೆ ಜೀವಿತಾವಧಿಯವರೆಗೆ ತಿರುಮಲ ಶ್ರೀವರಿಯ VIP ಬ್ರೇಕ್ ದರ್ಶನ ಒದಗಿಸಲಾಗುತ್ತದೆ ಎಂದು ಎಸ್‌ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿತ್ತು. ಈ ಜಾಹೀರಾತು ವೈರಲ್ ಆಗುತ್ತಿದ್ದಂತೆಯೇ ತೀವ್ರ ಚರ್ಚೆಗೆ ಕಾರಣವಾಗಿದೆ.

ಜಾಹೀರಾತಿನಲ್ಲಿ ಏನಿತ್ತು?

ಎಸ್‌ಸಿಪಿ ಡೆವಲಪರ್ಸ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ, ತಮ್ಮ ಯೋಜನೆಯಲ್ಲಿ ನಿವೇಶನ ಖರೀದಿಸಿದವರಿಗೆ ಶ್ರೀವಾರಿಯ ಜೀವಿತಾವಧಿಯ VIP ದರ್ಶನದ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿತ್ತು. ಈ ದರ್ಶನವನ್ನು ಹೇಗೆ ಒದಗಿಸಲಾಗುತ್ತದೆ ಎಂಬ ಮಾಹಿತಿಗಾಗಿ ಕಂಪನಿಯನ್ನು ಸಂಪರ್ಕಿಸುವಂತೆ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು. ದೇವರ ದರ್ಶನವನ್ನು ವ್ಯಾಪಾರಿಕ ಆಮಿಷವಾಗಿ ಬಳಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ಸ್ಪಷ್ಟನೆ ನೀಡಿದ ಟಿಟಿಡಿ :

ಈ ವಿವಾದ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಗಮನಕ್ಕೆ ಬಂದಿದ್ದು, ತಕ್ಷಣವೇ ಸಂಸ್ಥೆ ಸ್ಪಷ್ಟನೆ ನೀಡಿದೆ. ಯಾವುದೇ ಖಾಸಗಿ ಕಂಪನಿ ಅಥವಾ ವ್ಯಕ್ತಿಗೆ ಶ್ರೀವಾರಿಯ VIP ಬ್ರೇಕ್ ದರ್ಶನದ ಖಾತರಿ ನೀಡುವ ಅಧಿಕಾರವಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಎಸ್‌ಸಿಪಿ ಡೆವಲಪರ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಟಿಟಿಡಿ ಪೊಲೀಸರಿಗೆ ಸೂಚನೆ ನೀಡಿದೆ. ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ರಕ್ಷಾ ಬಂಧನದಂದೇ ಚಂದ್ರಗ್ರಹಣ; ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ!

ದರ್ಶನ ವ್ಯವಸ್ಥೆ ಟಿಟಿಡಿ ನಿಯಮಗಳ ಪ್ರಕಾರವೇ?

ಶ್ರೀವಾರಿಯ ದರ್ಶನ, VIP ಬ್ರೇಕ್ ದರ್ಶನ ಸೇರಿದಂತೆ ಎಲ್ಲಾ ಸೇವೆಗಳು ಮತ್ತು ಟಿಕೆಟ್‌ಗಳನ್ನು ಟಿಟಿಡಿಯ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಮಾತ್ರ ನೀಡಲಾಗುತ್ತದೆ. ಯಾವುದೇ ಖಾಸಗಿ ಸಂಸ್ಥೆ ಅಥವಾ ಮಧ್ಯವರ್ತಿಗಳು ದರ್ಶನದ ಭರವಸೆ ನೀಡಲು ಅಧಿಕಾರ ಹೊಂದಿಲ್ಲ ಎಂದು ಟಿಟಿಡಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಶ್ರೀವಾರಿ ದರ್ಶನದ ಹೆಸರಿನಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ನೀಡುವ ಭರವಸೆ ಅಥವಾ ಆಮಿಷಗಳಿಗೆ ಸಾರ್ವಜನಿಕರು ಮರುಳಾಗಬಾರದು ಎಂದು ಟಿಟಿಡಿ ಮನವಿ ಮಾಡಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೈದ್ಯರ ಕುಟುಂಬಕ್ಕೆ ಮನೆಕೆಲಸದವರಿಂದಲೇ ದೋಖಾ: ಪೀಕಿದ್ದು ಬರೋಬ್ಬರಿ 4.5 ಕೋಟಿ ಹಣ! – Kannada News | Breach of Trust: Maids and Accomplices Rob Prominent Doctor’s Family of 4.5 Crore in Punjab’s Pathankot

ವೈದ್ಯರ ಕುಟುಂಬಕ್ಕೆ ಮನೆಕೆಲಸದವರಿಂದಲೇ ದೋಖಾ

ಪಠಾಣ್‌ಕೋಟ್ , ಜುಲೈ 29: ಪಂಜಾಬ್‌ನ ಪಠಾಣ್‌ಕೋಟ್​​ನಲ್ಲಿ ಖ್ಯಾತ ಅಸ್ಥಿ ತಜ್ಞ (ಆರ್ಥೋಪೆಡಿಕ್) ವೈದ್ಯರ ಮನೆಯಲ್ಲಿ ಸುಮಾರು 4.5 ಕೋಟಿ ಮೌಲ್ಯದ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯರ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದರಿಯರು, ಅವರ ಪತಿಯಂದಿರು ಹಾಗೂ ಇತರ ಸಹಚರರು ಕುಟುಂಬದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಹಣ, ಚಿನ್ನಾಭರಣ ಕಳವು

ಮಾಹಿತಿಯ ಪ್ರಕಾರ, ಈ ಇಬ್ಬರು ಮಹಿಳೆಯರು ದೀರ್ಘಕಾಲದಿಂದ ವೈದ್ಯರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಕುಟುಂಬದವರು ಅವರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಇದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿಗಳು ವೈದ್ಯರ ಪತ್ನಿಯನ್ನು ವಂಚಿಸಿ, ಅವರ ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಪೀಕಿದ್ದಾರೆ. ಇದಷ್ಟೇ ಅಲ್ಲದೆ, ಮನೆಯಲ್ಲಿ ಇಟ್ಟಿದ್ದ ದೊಡ್ಡ ಮೊತ್ತದ ನಗದು ಹಾಗೂ ಸುಮಾರು 600 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ವೈದ್ಯರ ಕುಟುಂಬಕ್ಕೆ ಸುಮಾರು 4.5 ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಇದನ್ನೂ ಓದಿ:  ಫೇಸ್​​ಬುಕ್​​ ಗೆಳೆಯನ ವಂಚನೆ ಜಾಲಕ್ಕೆ ಸಿಲುಕಿ 1.7 ಕೋಟಿ ರೂಪಾಯಿ ಕಳೆದುಕೊಂಡ ವಿಚ್ಛೇದಿತ ಮಹಿಳೆ

ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ

ವಂಚನೆ ನಡೆದಿರುವುದು ತಿಳಿದ ತಕ್ಷಣ ಕುಟುಂಬದವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ವಹಿವಾಟಿನ ವಿವರಗಳು, ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅವರು ತಲೆಮರೆಸಿಕೊಂಡಿರುವ ಸಾಧ್ಯತೆಯಿರುವ ಸ್ಥಳಗಳಲ್ಲಿ ನಿರಂತರ ದಾಳಿ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ, ಈ ವಂಚನೆ ಹಾಗೂ ಕಳ್ಳತನದ ಸಂಪೂರ್ಣ ಜಾಲವನ್ನು ಬಯಲಿಗೆಳೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:39 pm, Wed, 29 July 26

Source link

ನನ್ನ ಆರೋಗ್ಯದ ಸೀಕ್ರೆಟ್ ‘ನಾಭಿ ಪೂರಣ’ ಎಂದ ದಿಲ್ಜಿತ್, ಏನದು ಕ್ರಿಯೆ? – Kannada News | Diljit Dosanjh’s belly button oil ritual is trending, will it help

ದಿಲ್ಜಿತ್ ದೋಸ್ಸಾಂಜ್ (diljit dosanjh), ಖ್ಯಾತ ಗಾಯಕ ಮತ್ತು ನಟ. ಇವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಗಳ ಲೆಕ್ಕದಲ್ಲಿ ಜನ ಬರುತ್ತಾರೆ. ಲೈವ್ ಶೋ ಟಿಕೆಟ್ ಬೆಲೆ ಸಹ ಲಕ್ಷಗಳಲ್ಲಿ ಇರುತ್ತದೆ. ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜಿತ್ ದೊಸ್ಸಾಂಜ್. ವಯಸ್ಸು 42 ಆಗಿದ್ದರೂ ಈಗಲೂ 25ರ ಯುವಕನಂತೆ ಕಾಣುವ ದಿಲ್ಜಿತ್ ದೊಸ್ಸಾಂಜ್, ಸಾಕಷ್ಟು ಡಯಟ್ ಮತ್ತು ವ್ಯಾಯಾಮಗಳನ್ನು ಮಾಡುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ದಿಲ್ಜೀತ್ ದೊಸ್ಸಾಂಜ್, ತಾವು ವರ್ಷಗಳಿಂದಲೂ ‘ನಾಭಿ ಪೂರಣ’ ಹೆಸರಿನ ಆಯುರ್ವೇಧ ಪ್ರಕ್ರಿಯೆಯೊಂದನ್ನು ಮಾಡಿಕೊಂಡು ಬರುತ್ತಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಏನದು ನಾಭಿ ಪೂರಣ?

ನಾಭಿ ಪೂರಣ ಎಂದರೆ ಹೊಕ್ಕಳಿಗೆ ಎಣ್ಣೆ ಹಾಕುವುದು. ಆಯುರ್ವೇಧದಲ್ಲಿ ಈ ಕ್ರಿಯೆ ಮಾಡಲಾಗುತ್ತದೆ. ಇದನ್ನು ಗಾಯಕ ದಿಲ್ಜೀತ್ ಬಹಳ ವರ್ಷಗಳಿಂದಲೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರಂತೆ. ಅವರು ಬೇವಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಬೆರೆಸಿ, ಮಲಗುವ ಮುನ್ನ ಕೆಲವು ಹನಿಗಳನ್ನು ತಮ್ಮ ಹೊಕ್ಕುಳಿಗೆ ಹಾಕಿ, ಸುಮಾರು 30 ನಿಮಿಷಗಳ ಕಾಲ ಮುಖ ಮೇಲೆ ಮಾಡಿ ಅಂಗಾತ ಮಲಗಿಕೊಳ್ಳುತ್ತಾರಂತೆ ನಂತರ ಹೊಕ್ಕಳಿನ ಸುತ್ತ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾರಂತೆ. ಇದರಿಂದ ತಮ್ಮ ಆರೋಗ್ಯಕ್ಕೆ ಬಹಳ ಸಹಾಯಕವಾಗಿ ಎಂದು ಅವರು ನಂಬುತ್ತಾರೆ.

ಇದನ್ನೂ ಓದಿ:ಮಕ್ಕಳ ಆರೋಗ್ಯ ಕಾಪಾಡಲು ಡಯಟ್‌ನಲ್ಲಿ ಇರಬೇಕಾದ ಪ್ರಮುಖ ಆಹಾರಗಳು

ಈ ನಾಭಿ ಪೂರಣದಿಂದ ಜೀರ್ಣಕ್ರಿಯೆ, ರಕ್ತ ಪರಿಚಲನೆ ಮತ್ತು ದೇಹದಲ್ಲಿನ ಒಟ್ಟಾರೆ ಸಮತೋಲನ ಉತ್ತಮ ಗೊಳ್ಳುತ್ತದೆ, ದೇಹದ ಉಷ್ಣತೆ ಕಡಿಮೆ ಆಗುತ್ತದೆ. ಒಳ್ಳೆಯ ನಿದ್ದೆ ಬರುತ್ತದೆ ಎಂದು ಆಯುರ್ವೇಧ ವೈದ್ಯರು ಹೇಳುತ್ತಾರೆ. ವಿಭಿನ್ನ ಎಣ್ಣೆಗಳು ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತವೆ ಎಂದು ನಂಬಲಾಗಿದೆ. ಆದರೆ ವಿಜ್ಞಾನವು ಬೇರೆಯದ್ದನ್ನೇ ಹೇಳುತ್ತದೆ. ಈ ನಾಭಿ ಪೂರಣ ಕ್ರಿಯೆಯಿಂದ ದೇಹಕ್ಕೆ ಯಾವುದೇ ಉಪಯೋಗ ಆಗುವುದಿಲ್ಲ. ದೇಹದ ಚರ್ಚಮದ ಮೂಲಕ ಎಣ್ಣೆ ದೇಹದ ಒಳಗೆ ಇಳಿಯುವುದೇ ಇಲ್ಲ. ಇಳಿದರೂ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ಎಣ್ಣೆ ಹಾಕಿದಾಗ ಮಾಡುವ ಮಸಾಜ್ ಇಂದಾಗಿ ತುಸು ವಿಶ್ರಾಂತಿ ಎನಿಸಬಹುದು ಎನ್ನುತ್ತಾರೆ.

ದಿಲ್ಜಿತ್ ದೊಸ್ಸಾಂಜ್ ಈಗ ನಾಭಿ ಪೂರಣದ ಬಗ್ಗೆ ಹೇಳಿರುವ ಕಾರಣ, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಆಯುರ್ವೇಧ ನಂಬುವರು ಈ ಕ್ರಿಯೆಯನ್ನು ಕೊಂಡಾಡುತ್ತಿದ್ದರು, ವಿಜ್ಞಾನ ನಂಬುವರು ಇದು ನಿಶ್ಪ್ರಯೋಜಕ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ – Kannada News | Bengaluru Fake Beggar Exposed: UP Man Faked Disability, Stole Mobiles in Byatarayanapura

ಬೆಂಗಳೂರು, ಜುಲೈ 29: ನಗರದ ಬೈಯತರಾಯನಪುರ ಬಳಿಯ ಐಟಿಐ ಲೇಔಟ್‌ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಮುಕೇಶ್ ಎಂಬಾತ ನಗರದಲ್ಲಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಅಂಗವಿಕಲನಂತೆ ನಟಿಸಿ ಜನರನ್ನು ವಂಚಿಸುತ್ತಿದ್ದ. ಕರುಣೆ ಬರುವಂತೆ ಕುಂಟುತ್ತಾ ನಡೆದು ಜನರ ಸಹಾನುಭೂತಿ ಗಳಿಸುತ್ತಿದ್ದ ಈತ, ಭಿಕ್ಷೆ ಬೇಡುವ ಸೋಗಿನಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದಾನೆ.

ಸ್ಥಳೀಯರು ಈತನ ನಡವಳಿಕೆ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ, ಮುಕೇಶ್‌ನ ಕಳ್ಳಾಟ ಬಯಲಾಗಿದೆ. ಕೈಕಾಲು ನೆಟ್ಟಗಿದ್ದರೂ ಕೂಡ ಶೋಕಿ ಜೀವನಕ್ಕಾಗಿ ಭಿಕ್ಷೆ ಬೇಡುತ್ತಾ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಸ್ಥಳೀಯರ ಎದುರು ಸಿಕ್ಕಿಬಿದ್ದಾಗ ಆತ ನೆಟ್ಟಗೆ ನಿಂತು ಕೈಜೋಡಿಸಿ ಕ್ಷಮೆಯಾಚಿಸಿದ್ದಾನೆ. ಬಳಿಕ, ಸಾರ್ವಜನಿಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಭಿಕ್ಷಾಟನೆಯನ್ನೇ ವ್ಯಾಪಾರ ಮಾಡಿಕೊಂಡಿದ್ದ ಈತನ ಕೃತ್ಯ ಸದ್ಯ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈತನ ಕಳ್ಳಾಟದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನ ವಿಶ್ವಕಪ್​ಗೆ ಪ್ಲೇಯಿಂಗ್ 11 ಹೆಸರಿಸಿದ ವಾಸಿಂ ಜಾಫರ್! – Kannada News | Wasim Jaffer’s India XI for the 2027 World Cup

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ ಹೇಗಿರಬೇಕೆಂದು ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ತಿಳಿಸಿದ್ದಾರೆ. ಜಾಫರ್ ಹೆಸರಿಸಿರುವ ಈ 11 ಆಟಗಾರರ ಪಟ್ಟಿಯಲ್ಲಿ ಅನುಭವಿ ಹಾಗೂ ಯುವ ಆಟಗಾರರ ಬಲಿಷ್ಠ ದಂಡೇ ಇದ್ದು, ಈ ಆಡುವ ಬಳಗದೊಂದಿಗೆ ಭಾರತ ತಂಡ ಕಣಕ್ಕಿಳಿದರೆ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್-ವಿರಾಟ್ ಜೋಡಿಗೆ ಜೈ:

2027ರ ವೇಳೆಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಯಸ್ಸಿನ ಸವಾಲಿರಲಿದೆ. ಆದರೂ ಆಫ್ರಿಕಾದ ಪಿಚ್‌ಗಳಲ್ಲಿ ಇವರ ಅನುಭವ ತಂಡಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯ ತಂದುಕೊಡಲಿದೆ ಎಂದು ಜಾಫರ್ ನಂಬಿದ್ದಾರೆ.

ಶಮಿ ಮೇಲೆ ಭರವಸೆ:

ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರ ಮಾರಕ ಲಯವನ್ನು ಕಡೆಗಣಿಸುವಂತಿಲ್ಲ. ಬುಮ್ರಾ ಮತ್ತು ಸಿರಾಜ್ ಜೊತೆಗೆ ಶಮಿ ಅವರ ತ್ರಿವಳಿ ವೇಗದ ದಾಳಿ ಆಫ್ರಿಕನ್ ಪಿಚ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಮೊಹಮ್ಮದ್ ಶಮಿ ಕೂಡ ಆಡುವ ಬಳಗದಲ್ಲಿ ಇರಬೇಕೆಂದು ಜಾಫರ್ ಆಗ್ರಹಿಸಿದ್ದಾರೆ.

ಜಡೇಜಾ, ಸೂರ್ಯಕುಮಾರ್‌ಗೆ ಕೊಕ್:

2023ರ ವಿಶ್ವಕಪ್ ತಂಡದಲ್ಲಿದ್ದ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಹಾಗೂ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ವಾಸಿಂ ಜಾಫರ್ ಮಣೆ ಹಾಕಿದ್ದಾರೆ.

ರಿಷಭ್ ಪಂತ್‌ಗೆ ಸ್ಥಾನವಿಲ್ಲ:

ಅಪಘಾತದ ಬಳಿಕ ರಿಷಭ್ ಪಂತ್ ಭರ್ಜರಿ ಕಂಬ್ಯಾಕ್ ಮಾಡಿದ್ದರೂ, ಏಕದಿನ ಮಾದರಿಯಲ್ಲಿ ರಾಹುಲ್ ಮತ್ತು ಇಶಾನ್ ಕಿಶನ್ ಅವರನ್ನೇ ವಾಸಿಂ ಜಾಫರ್ ವಿಕೆಟ್ ಕೀಪರ್​ಗಳಾಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!

ಅದರಂತೆ 2027ರ ಏಕದಿನ ವಿಶ್ವಕಪ್​ಗೆ ವಾಸಿಂ ಜಾಫರ್ ಹೆಸರಿಸಿದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.

ಬ್ಯಾಟಿಂಗ್ ಕ್ರಮಾಂಕ ಆಟಗಾರನ ಹೆಸರು ಪ್ರಮುಖ ಪಾತ್ರ
1 ರೋಹಿತ್ ಶರ್ಮಾ ಆರಂಭಿಕ ಆಟಗಾರ
2 ಶುಭ್‌ಮನ್ ಗಿಲ್ ಆರಂಭಿಕ ಆಟಗಾರ ಹಾಗೂ ನಾಯಕ
3 ವಿರಾಟ್ ಕೊಹ್ಲಿ ಒನ್ ಡೌನ್ ಬ್ಯಾಟರ್
4 ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್
5 ಕೆ.ಎಲ್. ರಾಹುಲ್ ವಿಕೆಟ್ ಕೀಪರ್ / ಬ್ಯಾಟರ್
6 ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಲ್‌ರೌಂಡರ್
7 ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ ಆಲ್‌ರೌಂಡರ್
8 ಕುಲ್ದೀಪ್ ಯಾದವ್ ಪ್ರಮುಖ ಸ್ಪಿನ್ನರ್
9 ಜಸ್​ಪ್ರೀರ್  ಬುಮ್ರಾ ಮುಖ್ಯ ವೇಗದ ಬೌಲರ್
10 ಮೊಹಮ್ಮದ್ ಶಮಿ ಹಿರಿಯ ವೇಗದ ಬೌಲರ್
11 ಮೊಹಮ್ಮದ್ ಸಿರಾಜ್ ವೇಗದ ಬೌಲರ್
12ನೇ ಆಟಗಾರ ಇಶಾನ್ ಕಿಶನ್ ಬ್ಯಾಕಪ್ ವಿಕೆಟ್ ಕೀಪರ್

ಒಟ್ಟಾರೆಯಾಗಿ ಹೇಳುವುದಾದರೆ, ವಾಸಿಂ ಜಾಫರ್ ಆರಿಸಿರುವ ಈ ತಂಡವು 2027ರ ವಿಶ್ವಕಪ್‌ಗಾಗಿ ಅನುಭವ ಮತ್ತು ಯುವ ಪ್ರತಿಭೆಗಳ ಸಮ್ಮಿಶ್ರಣವಾಗಿದ್ದು, ಸೌತ್ ಆಫ್ರಿಕಾದ ವೇಗದ ಪಿಚ್‌ಗಳಲ್ಲಿ ಭಾರತದ ಮೂರನೇ ಏಕದಿನ ವಿಶ್ವಕಪ್ ಗೆಲುವಿನ ಕನಸನ್ನು ನನಸಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನಬಹುದು.

Source link

RRB Technician Recruitment 2026: ರೈಲ್ವೆಯಲ್ಲಿ ಬಂಪರ್​​​ ನೇಮಕಾತಿ; ಅರ್ಜಿ ಸಲ್ಲಿಸಲು ಕೊನೆಯ 2 ದಿನಗಳು ಮಾತ್ರ ಬಾಕಿ! – Kannada News | RRB Technician Recruitment 2026: Apply Online for 6,557 Posts Before July 31 – Check Eligibility and Salary Details

ರೈಲ್ವೆಯಲ್ಲಿ ನೇಮಕಾತಿImage Credit source: Getty Images

ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಇರುವ ತನ್ನ ವಿವಿಧ ವಲಯಗಳಲ್ಲಿ ಖಾಲಿ ಇರುವ ಬೃಹತ್ ಸಂಖ್ಯೆಯ ತಂತ್ರಜ್ಞ (Technician) ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಪ್ರಸ್ತುತ ಚಾಲ್ತಿಯಲ್ಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದ್ದು, ಆಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಖಾಲಿ ಹುದ್ದೆಗಳ ವರ್ಗೀಕರಣ ಮತ್ತು ವಿಭಾಗಗಳು:

ಈ ನೇಮಕಾತಿ ಅಭಿಯಾನದ ಮೂಲಕ ದೇಶಾದ್ಯಂತ ಒಟ್ಟು 6,557 ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 323 ತಂತ್ರಜ್ಞ ಗ್ರೇಡ್ 1 (ಸಿಗ್ನಲ್) ಹುದ್ದೆಗಳು ಮತ್ತು 6,234 ತಂತ್ರಜ್ಞ ಗ್ರೇಡ್ 3 ಹುದ್ದೆಗಳಿವೆ. ಈ ಹುದ್ದೆಗಳನ್ನು ಟ್ರ್ಯಾಕ್ ಮೆಷಿನ್, ಬ್ರಿಡ್ಜ್, ಡೀಸೆಲ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, TRS, EMU, ಫಿಟ್ಟರ್, ವೆಲ್ಡರ್, ಕಾರ್ಪೆಂಟರ್ ಸೇರಿದಂತೆ ಹಲವು ಪ್ರಮುಖ ತಾಂತ್ರಿಕ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಗಳು ಲಭ್ಯವಿರುವ ಪ್ರಮುಖ ವಲಯಗಳು:

ಸಿಕಂದರಾಬಾದ್ ಹಾಗೂ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಹಮದಾಬಾದ್, ಅಜ್ಮೀರ್, ಭೋಪಾಲ್, ಭುವನೇಶ್ವರ, ಬಿಲಾಸ್‌ಪುರ್, ಚಂಡೀಗಢ, ಚೆನ್ನೈ, ಗುವಾಹಟಿ, ಜಮ್ಮು-ಶ್ರೀನಗರ, ಕೋಲ್ಕತ್ತಾ, ಮಾಲ್ಡಾ, ಮುಂಬೈ, ಮುಜಾಫರ್‌ಪುರ, ಪಾಟ್ನಾ, ಪ್ರಯಾಗರಾಜ್, ರಾಂಚಿ, ಸಿಲಿಗುರಿ, ತಿರುವನಂತಪುರಂ ಮತ್ತು ಗೋರಖ್‌ಪುರ ಪ್ರದೇಶಗಳಲ್ಲಿ ಈ ಖಾಲಿ ಹುದ್ದೆಗಳು ಲಭ್ಯವಿವೆ.

ಶೈಕ್ಷಣಿಕ ಅರ್ಹತೆಯ ವಿವರಗಳು:

ತಂತ್ರಜ್ಞ ಗ್ರೇಡ್ 3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ (SSLC/Matriculation) ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ITI ಅಥವಾ ACT ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು. ತಂತ್ರಜ್ಞ ಗ್ರೇಡ್ 1 (ಸಿಗ್ನಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ (B.Sc) ಅಥವಾ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ ಮತ್ತು ಸಡಿಲಿಕೆ:

ಅಭ್ಯರ್ಥಿಗಳ ವಯಸ್ಸಿನ ಮಿತಿಯನ್ನು ಗ್ರೇಡ್-I ಹುದ್ದೆಗಳಿಗೆ 18 ರಿಂದ 33 ವರ್ಷಗಳು ಹಾಗೂ ಗ್ರೇಡ್-III ಹುದ್ದೆಗಳಿಗೆ 18 ರಿಂದ 30 ವರ್ಷಗಳು ಎಂದು ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ ಮತ್ತು ಶುಲ್ಕ ಮರುಪಾವತಿ:

ಸಾಮಾನ್ಯ, ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500 ಆಗಿರುತ್ತದೆ. ಎಸ್‌ಸಿ, ಎಸ್‌ಟಿ, ಮಹಿಳೆಯರು, ಮಾಜಿ ಸೈನಿಕರು, ಪಿಡಬ್ಲ್ಯೂಬಿಡಿ, ಟ್ರಾನ್ಸ್‌ಜೆಂಡರ್ ಮತ್ತು ಇಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 250 ನಿಗದಿಪಡಿಸಲಾಗಿದೆ. CBT ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಬ್ಯಾಂಕ್ ಶುಲ್ಕಗಳನ್ನು ಹೊರತುಪಡಿಸಿ ರೂ. 400 ರವರೆಗೆ ಶುಲ್ಕವನ್ನು ವಾಪಸ್ (Refund) ಮಾಡಲಾಗುತ್ತದೆ. ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ:

ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ (Medical Exam) ಆಧಾರದ ಮೇಲೆ ನಡೆಸಲಾಗುತ್ತದೆ. CBT ಪರೀಕ್ಷೆಯನ್ನು ಒಟ್ಟು 100 ಪ್ರಶ್ನೆಗಳಿಗೆ 90 ನಿಮಿಷಗಳ ಕಾಲ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇದ್ದು, ಪ್ರತಿ ತಪ್ಪು ಉತ್ತರಕ್ಕೂ 1/3 ಅಂಕಗಳನ್ನು ಕಳೆಯಲಾಗುತ್ತದೆ.

ವೇತನ ಶ್ರೇಣಿಯ ವಿವರಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ತಂತ್ರಜ್ಞ ಗ್ರೇಡ್-I ಹುದ್ದೆಗಳಿಗೆ ಮಾಸಿಕ ಆರಂಭಿಕ ಮೂಲ ವೇತನ ರೂ. 29,200 ದೊರೆಯಲಿದೆ. ತಂತ್ರಜ್ಞ ಗ್ರೇಡ್-III ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ಮೂಲ ವೇತನ ರೂ. 19,900 ರೊಂದಿಗೆ ನಿಯಮಾನುಸಾರ ಇತರ ಕೇಂದ್ರ ಸರ್ಕಾರಿ ಭತ್ಯೆಗಳನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ತಿದ್ದುಪಡಿ:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ರ ರಾತ್ರಿ 11.59 ರವರೆಗೆ ಅವಕಾಶವಿರುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ಯಾವುದೇ ತಿದ್ದುಪಡಿಗಳು ಅಥವಾ ಪರಿಷ್ಕರಣೆಗಳನ್ನು ಮಾಡಬೇಕಿದ್ದರೆ, ಆಗಸ್ಟ್ 1 ರಿಂದ ಆಗಸ್ಟ್ 10 ರವರೆಗೆ ತಿದ್ದುಪಡಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

97ನೇ ವಯಸ್ಸಿನಲ್ಲೂ ಓಟದ ಹುಮ್ಮಸ್ಸು: ಬೆಂಗಳೂರಿನ ‘ಮ್ಯಾರಥಾನ್ ತಾತ’ ಎನ್.ಎಸ್. ದತ್ತಾತ್ರೇಯ ಸ್ಫೂರ್ತಿದಾಯಕ ಕಥೆ! – Kannada News | Bengaluru: 97 Year Old Marathon Runner NS Dattatreya Proves Age Is Just A Number

ಎನ್.ಎಸ್. ದತ್ತಾತ್ರೇಯ

ಬೆಂಗಳೂರು, ಜುಲೈ 29: ಸಾಮಾನ್ಯವಾಗಿ 90 ವರ್ಷ ದಾಟಿದ ಮೇಲೆ ಹೆಚ್ಚಿನವರು ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಬೆಂಗಳೂರಿನ 97 ವರ್ಷದ ವೃದ್ಧ ಎನ್.ಎಸ್. ದತ್ತಾತ್ರೇಯ (N S Dattatreya) ಅವರಿಗೆ ಓಟದ ಅಂಗಳದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ತಮ್ಮ 90ನೇ ವಯಸ್ಸಿನಲ್ಲಿ ಓಟ ಆರಂಭಿಸಿದ ಈ ‘ಮ್ಯಾರಥಾನ್ ತಾತ’, ಇಂದು ದೇಶಾದ್ಯಂತ ಸಾವಿರಾರು ಯುವಕರಿಗೆ ದೈಹಿಕ ಫಿಟ್‌ನೆಸ್‌ಗೆ ದಾರಿದೀಪವಾಗಿದ್ದಾರೆ.

90ನೇ ವಯಸ್ಸಿನಲ್ಲಿ ಆರಂಭವಾದ ಅದ್ಭುತ ಪಯಣ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBM) ಮಾಜಿ ಮ್ಯಾನೇಜರ್ ಆಗಿರುವ ದತ್ತಾತ್ರೇಯ ಅವರು 1989ರಲ್ಲಿ ನಿವೃತ್ತರಾಗಿದ್ದರು. 2019ರ ಜನವರಿಯಲ್ಲಿ ನಡೆದ ‘ನಮೋಥಾನ್’ ಓಟದಲ್ಲಿ ಪಾಲ್ಗೊಂಡು ಸನ್ಮಾನಿತರಾದ ನಂತರ, 90ನೇ ವಯಸ್ಸಿನಲ್ಲಿ ಓಡಲು ಸಾಧ್ಯವಾದರೆ ಸುಮ್ಮನೆ ಏಕೆ ಕುಳಿತುಕೊಳ್ಳಬೇಕು? ಎಂಬ ಆಲೋಚನೆ ಅವರಲ್ಲಿ ಮೂಡಿತು. ಅಲ್ಲಿಂದ ಪ್ರಾರಂಭವಾದ ಅವರ ಎರಡನೇ ಇನಿಂಗ್ಸ್‌ನಲ್ಲಿ ಈವರೆಗೆ 300ಕ್ಕೂ ಹೆಚ್ಚು ಮ್ಯಾರಥಾನ್, ವಾಕಥಾನ್ ಮತ್ತು ಫಿಟ್‌ನೆಸ್ ಸ್ಪರ್ಧೆಗಳನ್ನು ಪೂರ್ಣಗೊಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಣ ಪದಕಗಳ ಸಾಧನೆ

ಕೇವಲ ಸ್ಥಳೀಯ ಓಟಗಳಲ್ಲದೆ, ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 2019ರ ಮಲೇಷ್ಯಾ ಕೂಟದಲ್ಲಿ 5 ಚಿನ್ನದ ಪದಕ ಹಾಗೂ 2025ರ ಚೆನ್ನೈ ಕೂಟದಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 28ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಆರೋಗ್ಯವೇ ಭಾಗ್ಯ’ – ಯುವಜನತೆಗೆ ನೀಡಿದ ಸಂದೇಶ

ದಿನವೂ ವಾಕಿಂಗ್, ರನ್ನಿಂಗ್, ಟ್ರೆಡ್‌ಮಿಲ್ ಮತ್ತು ಸೈಕ್ಲಿಂಗ್ ಮಾಡುವ ದತ್ತಾತ್ರೇಯ ಅವರು ಶುದ್ಧ ಸಸ್ಯಾಹಾರಿ. “ಆರೋಗ್ಯವೇ ನಿಜವಾದ ಸಂಪತ್ತು. ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಶ್ರೇಷ್ಠ ಕೊಡುಗೆ ಎಂದರೆ ಉತ್ತಮ ಶಿಕ್ಷಣ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಮೇಲೆ ಹೊರೆಯಾಗದಂತೆ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು” ಎಂದು ಅವರು ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟ ಆಂಧ್ರದ ಯುವಕ: ಕಾರಣ ನಿಗೂಢ – Kannada News | Horrific Incident: Andhra Youth Dies Under Moving Train in Bengaluru; Severed Head Found 400m Away

ಬೆಂಗಳೂರು, ಜುಲೈ 29: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೃತನನ್ನು ಆಂಧ್ರ ಮೂಲದ ವಿಶ್ವನಾಥ್(28) ಎಂದು ಗುರುತಿಸಲಾಗಿದ್ದು, ತಲೆಯಿಲ್ಲದ ದೇಹ ಮಾತ್ರ ನಿನ್ನೆ ಪತ್ತೆಯಾಗಿತ್ತು. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ರೈಲ್ವೇ ಪೊಲೀಸರು ಘಟನೆ ಸಂಬಂಧ ಯುಡಿಆರ್​​ ದಾಖಲಿಸಿಕೊಂಡಿದ್ದರು. ಆದರೆ ಇಂದು ರುಂಡವೂ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಸ್ಪಷ್ಟತೆ ಸಿಕ್ಕಿದೆ.

ರುಂಡವನ್ನು ಎಳೆದು ತಂದಿದ್ದ ನಾಯಿಗಳು

ರೈಲಿಗೆ ತಲೆಕೊಟ್ಟು ವಿಶ್ವನಾಥ್​​ ಆತ್ಮಹತ್ಯೆಯ ವೇಳೆ ರುಂಡ ಮತ್ತು ದೇಹ ಎರಡೂ ಬೇರೆ ಬೇರೆ ಆಗಿತ್ತು. 400 ಮೀಟರ್​ನಷ್ಟು ದೂರಕ್ಕೆ ತಲೆಯನ್ನು ನಾಯಿಗಳು ಎಳಲೆದು ತಂದಿದ್ದು, ಇಂದು ಮೈದಾನದಲ್ಲಿ ಅದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ. ಸಿಕ್ಕಿರುವ ರುಂಡವನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ಕರೆ

ಇನ್ನು ಆತ್ಮಹತ್ಯೆಗೂ ಮುನ್ನ ಗರ್ಲ್​ಫ್ರೆಂಡ್​ಗೆ ವಿಶ್ವನಾಥ್ ಕರೆ ಮಾಡಿದ್ದರು ಎಂಬ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ. ಪ್ರೇಯಸಿ ಜೊತೆ ಮಾತನಾಡಿದ ಬಳಿಕವೇ ಅವರು ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:02 pm, Wed, 29 July 26

Source link

Exit mobile version